ಮಾಸ್ತಿ -ಮೆಂಡೆಗಾರ-ಕಾರ್ನಾಡ ನಾಟಕಗಳು

-ಮಹೇಶ ತಿಪ್ಪಶೆಟ್ಟಿ

ಮಾಸ್ತಿ -ಮೆಂಡೆಗಾರ-ಕಾರ್ನಾಡ ನಾಟಕಗಳು
-ಮಹೇಶ ತಿಪ್ಪಶೆಟ್ಟಿ

-ಮಹೇಶ ತಿಪ್ಪಶೆಟ್ಟಿ ವಿಜಯನಗರ ಸಾಮ್ರಾಜ್ಯದ ವಿರುದ್ಧ ನಡೆದ ಐತಿಹಾಸಿಕ ಕದನವನ್ನು ಕುರಿತು ಮಾಸ್ತಿ, ಮೆಂಡೆಗಾರ ಮತ್ತು ಕಾರ್ನಾಡರು ವಿವಿಧ ಕಾಲಘಟ್ಟಗಳಲ್ಲಿ ರಚಿಸಿದ ಮೂರು ನಾಟಕಗಳನ್ನು ತೌಲನಿಕವಾಗಿ ನೋಡುವ ಪ್ರಯತ್ನ ಇಲ್ಲಿದೆ.   ವಿಜಯನಗರ ಸಮರ ಕುರಿತ ಮೂರು ನಾಟಕಗಳು ವಿಜಯನಗರ ಕನ್ನಡಿಗರ ಅಭಿಮಾನದ ಸಾಮ್ರಾಜ್ಯ. ಇಲ್ಲಿ ನಡೆದ ಕದನ ತಾಳಿಕೋಟೆ ಅಥವಾ ರಕ್ಕಸಗಿ ತಂಗಡಗಿ ಯುದ್ಧ ಎಂದೇ ಇತಿಹಾಸದಲ್ಲಿ ದಾಖಲಾಗಿದೆ. ಈ ಯುದ್ಧ ಹಲವು ಸೃಜನಶೀಲ ಮನಸ್ಸುಗಳನ್ನು ಆಕರ್ಷಿಸಿದೆ. ಎಚ್ಚಮನಾಯಕ ನಾಟಕ, ವಿಜಯ ನಗರದ ವೀರಪುತ್ರ ಚಲನಚಿತ್ರ ವಿಶೇಷ […]

‘ನೋವು ತುಂಬಿದ ಬದುಕು’ ಕಲಿಕೆಯ ಸರಕು

-ಡಿ.ಯಶೋದಾ

‘ನೋವು ತುಂಬಿದ ಬದುಕು’ ಕಲಿಕೆಯ ಸರಕು
-ಡಿ.ಯಶೋದಾ

-ಡಿ.ಯಶೋದಾ ಬಂಗಾಳಿ ಮೂಲದ ಈ ಪುಸ್ತಕ ಸಣ್ಣಸಣ್ಣ ವಿಷಯಕ್ಕೆ ಹತಾಶರಾಗುವ ಮಹಿಳೆಯರಿಗೆ ಜೀವನೋತ್ಸಾಹ ತುಂಬುತ್ತದೆ. ಹಾಗೆಯೇ ಪುರುಷರಿಗೆ ಮಹಿಳೆಯರ ಕಷ್ಟದ ಬದುಕಿನ ಅರಿವು ಮೂಡಿಸುತ್ತದೆ.   ನೋವು ತುಂಬಿದ ಬದುಕು ಬಂಗಾಳಿ ಮೂಲ: ಬೇಬಿ ಹಾಲ್ದಾರ್ ಕನ್ನಡಾನುವಾದ: ಕುಮಾರಪ್ಪ ಜಿ. ಪುಟ: 148 ಬೆಲೆ: ರೂ.90 ನವಕರ್ನಾಟಕ ಪಬ್ಲಿಕೇಷನ್ಸ್ ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560001 ಯಾವುದೋ ಪ್ರದೇಶದ ಕುತೂಹಲಕರ ಘಟನೆ, ವ್ಯಕ್ತಿಯ ಸ್ವಾರಸ್ಯಕರ ಕಥೆ ಒಳಗೊಂಡಿರುವ ಪುಸ್ತಕ ಇನ್ಯಾರಿಗೋ ಮಾದರಿ, ಸ್ಫೂರ್ತಿ ಅಥವಾ ಪಾಠವಾಗಬಹುದು. ಅಂತಹ […]

ಹೊಸ ಪುಸ್ತಕ

ಬಯಲೆಂಬೊ ಬಯಲು ಬಯೋಪಿಕ್ ಕಾದಂಬರಿ ಪ್ರೊ. ಎಚ್.ಟಿ. ಪೋತೆ ಪುಟ: 214   ಬೆಲೆ: ರೂ.200 ಪ್ರಥಮ ಮುದ್ರಣ: 2020 ಪ್ರಕಾಶನ: ಕುಟುಂಬ ಪ್ರಕಾಶನ, ಪ್ಲಾಟ್ ನಂ. 140, ಪೂಜಾ ಕಾಲೋನಿ, ಕುಸುನೂರ ರಸ್ತೆ, ಕಲಬುರಗಿ-585106 ದಮನಕ್ಕೊಳಗಾದ ತಳವರ್ಗದ ಜೀವನವನ್ನು ಚಿತ್ರಿಸುತ್ತದೆ ಈ ಕಾದಂಬರಿ. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ ರಾಮಪ್ಪ, ಸ್ವಾತಂತ್ರ್ಯ ಸಂದರ್ಭದಲ್ಲಿ ಹುಟ್ಟಿದ ತಿಪ್ಪಣ್ಣ ಮತ್ತು ಸ್ವಾತಂತ್ರ್ಯ ಬಂದ ನಂತರ 60ರ ದಶಕದಲ್ಲಿ ಹುಟ್ಟಿದ ಹನುಮಂತ ಅವರ ಈ ಕಾದಂಬರಿಯ ನಾಯಕರು. ಕಳೆದ 80 ವರ್ಷಗಳಲ್ಲಿ ಈ […]

ಕುಮಾರವ್ಯಾಸನ ವಿರಾಟಪರ್ವ

ಮಹೇಶ್ವರಿ ಯು

ಕುಮಾರವ್ಯಾಸನ ವಿರಾಟಪರ್ವ
ಮಹೇಶ್ವರಿ ಯು

-ಮಹೇಶ್ವರಿ ಯು ಕನ್ನಡ ಭಾಷೆ ಇರುವವರೆಗೆ ನೆನೆಯಬೇಕಾದ ಕವಿ ಕುಮಾರವ್ಯಾಸ. ಅವನ ಶಬ್ದ ಸಂಪತ್ತೊ, ಅವನ ನಿರರ್ಗಳತೆಯೊ, ಅವನ ದೇಸೀ ಪ್ರಿಯತೆಯೊ- ಯಾವುದನ್ನು ಹೇಳೋಣ? ಕನ್ನಡಕ್ಕೆ ಅವನ ಋಣ ಬಹಳ ದೊಡ್ಡದು. ಕನ್ನಡ ಮನಸ್ಸು ಈ ಕವಿಯನ್ನು ಸ್ವೀಕರಿಸಿದ ಬಗೆಯನ್ನು ನಾವಿಲ್ಲಿ ನೆನೆದುಕೊಳ್ಳಬೇಕು. ಕುಮಾರವ್ಯಾಸ ಭಾರತ, ಗದುಗಿನ ಭಾರತ, ಕನ್ನಡ ಭಾರತ, ಕರ್ಣಾಟ ಭಾರತ ಕಥಾ ಮಂಜರಿ ಎಂಬೆಲ್ಲ ಹೆಸರುಗಳಿಂದ ಗುರುತಿಸಲ್ಪಡುವ ಅವನ ಕೃತಿಯು ತನ್ನ ದೇಸಿ ನಡೆಯಿಂದಾಗಿ ಪಂಡಿತರಿಗೆ ಮಾತ್ರವಲ್ಲದೆ ಪಾಮರರಿಗೂ ಪ್ರಿಯವಾಗಿ ಜನಮಾನಸದಲ್ಲಿ ಹಿಂದಿನಿಂದಲೇ […]

ರಾಜಕೀಯ ನಿಘಂಟು

-ವೆಂಕಟೇಶ ಮಾಚಕನೂರ

ರಾಜಕೀಯ ನಿಘಂಟು
-ವೆಂಕಟೇಶ ಮಾಚಕನೂರ

-ವೆಂಕಟೇಶ ಮಾಚಕನೂರ ಆಂಗ್ಲ ಭಾಷೆಯ ಕೋಶಗಳಿಗೆ ಲೆಕ್ಕವಿಲ್ಲ. ಒಂದೊಂದು ಅಕ್ಷರಗಳಿಗೆ ಒಂದು ಕೋಶ ಇವೆ. ಇತರ ಅನೇಕ ಭಾಷೆಗಳಲ್ಲೂ ಇವೆ. ಹೀಗೆ ವಿಷಯವಾರು ನಿಘಂಟುಗಳಿರುವಾಗ ರಾಜಕೀಯ ಪಾರಿಭಾಷಿಕ ಶಬ್ದಕೋಶ ಈವರೆಗೆ ರಚನೆಗೊಳ್ಳದಿರುವುದು ಒಂದು ಲೋಪವೇ ಸರಿ!                     ರಾಜಕೀಯ ನಂಟು ಅನ್ನುವ ಶಬ್ದವನ್ನು ತಾವು ಕೇಳಿಯೇ ಕೇಳಿರುತ್ತೀರಿ, ಅಥವಾ ದಿನಾಲು ವೃತ್ತ ಪತ್ರಿಕೆಗಳ ಮೇಲೆ ಕಣ್ಣಾಡಿಸುವಾಗ ರಾಜಕೀಯ ನಂಟಿನ ಒಂದೆರಡಾದರು ಸುದ್ದಿ ಸಮಾಚಾರಗಳು ತಮ್ಮ […]

ಜ್ಯೋತಿಷಿಗಳು ಬಿಚ್ಚಿಟ್ಟ ರಹಸ್ಯಗಳು ಬೆಚ್ಚಿಬಿದ್ದ ಟಿವಿ ವೀಕ್ಷಕರು!

-ಬಾಲಚಂದ್ರ ಬಿ.ಎನ್.

ಜ್ಯೋತಿಷಿಗಳು ಬಿಚ್ಚಿಟ್ಟ ರಹಸ್ಯಗಳು ಬೆಚ್ಚಿಬಿದ್ದ ಟಿವಿ ವೀಕ್ಷಕರು!
-ಬಾಲಚಂದ್ರ ಬಿ.ಎನ್.

-ಬಾಲಚಂದ್ರ ಬಿ.ಎನ್. ನಾಡಿನ ಜನರ ನಾಡಿಮಿಡಿತ, ಹೃದಯಬಡಿತ ಹಾಗೂ ವೀಕ್ಷಕರ ಮನೋಗತವನ್ನು ಇಡೀಯಾಗಿ ಅರಿತ ವಾಹಿನಿಯೊಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಲ್ಲಿ ಭಾಗವಹಿಸಿದ ಮೂವರು ಜ್ಯೋತಿಷಿಗಳು ಬಯಲು ಮಾಡಿದ ರಹಸ್ಯಗಳನ್ನು ಕೇಳಿದರೆ ನೀವೂ ಬೆಚ್ಚಿಬೀಳುತ್ತೀರಿ! ನಮಸ್ಕಾರ ಪ್ರಿಯ ವೀಕ್ಷಕರೇ, ಕಸ-ವಿಷ ವಿಶೇಷ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಸ್ವಾಗತ. ಕನ್ನಡಿಗರ ಸಾಕ್ಷಿ ಪ್ರಜ್ಞೆಯಾಗಿ, ದೇಶದ ಆಗುಹೋಗುಗಳನ್ನು ನಿಮ್ಮೆದುರಿಗಿಡುವ ಮಹತ್ತರ ಕರ್ತವ್ಯ ಹೊತ್ತು, ಅತ್ಯಂತ ಜವಾಬ್ದಾರಿಯುತವಾದ ನಮ್ಮ ಚಾನಲ್ ಈ ಕಾರ್ಯಕ್ರಮವನ್ನು ಮಾಡ್ತಾ ಇದೆ. ಮೂರು ಜನ ಜ್ಯೋತಿಷಿಗಳು ನಮ್ಮ ದೇಶದ, […]

ಮನರಂಜನೆ ಉದ್ಯಮದಲ್ಲಿ ದತ್ತಾಂಶದ ಪರ್ವ

-ಎಂ.ಕೆ.ಆನಂದರಾಜೇ ಅರಸ್

ಮನರಂಜನೆ ಉದ್ಯಮದಲ್ಲಿ ದತ್ತಾಂಶದ ಪರ್ವ
-ಎಂ.ಕೆ.ಆನಂದರಾಜೇ ಅರಸ್

-ಎಂ.ಕೆ.ಆನಂದರಾಜೇ ಅರಸ್ ದತ್ತಾಂಶದ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ದೇಶದ ಮನರಂಜನೆ ಉದ್ಯಮದಲ್ಲಿ ಸಹ ಹೆಚ್ಚಾಗಲಿದ್ದು, ಮುಂಬರುವ ದಿನಗಳಲ್ಲಿ ಈ ಉದ್ಯಮದ ಸ್ವರೂಪ ಬೃಹತ್ ಮಟ್ಟದಲ್ಲಿ ಬದಲಾಗಲಿದೆ. ಪ್ರಖ್ಯಾತ ಮಾರ್ಕೆಟಿಂಗ್ ಗುರು ಫಿಲಿಪ್ ಕೊಟ್ಲರ್ 2014ರಲ್ಲಿ ಬೆಂಗಳೂರಿಗೆ ಬಂದಿದ್ದರು. ಅವರ `ಪ್ರಿನ್ಸಿಪಲ್ಸ್ ಆಫ್ ಮಾರ್ಕೆಟಿಂಗ್’ ಪುಸ್ತಕವನ್ನು ಈಗಲೂ ಎಂಬಿಎ ವಿದ್ಯಾರ್ಥಿಗಳು ಹಾಗೂ ಮಾರ್ಕೆಟಿಂಗ್ ವೃತ್ತಿಪರರು ಮಾರ್ಕೆಟಿಂಗ್ ಬೈಬಲ್ ಎಂದೇ ಪರಿಗಣಿಸುತ್ತಾರೆ. ಸಂವಾದವೊಂದರಲ್ಲಿ ಅವರ ಮುಂದೆ `ಮಾರ್ಕೆಟಿಂಗ್’ ಎಂದರೇನು ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. `ವರ್ತನೆಯ ವಿಜ್ಞಾನದ ಅಧ್ಯಯನ’ ಎಂದು […]

ಹುಡುಕಾಟ

-ಆರ್.ಬಿ.ದಿವಾಕರ್

ಹುಡುಕಾಟ
-ಆರ್.ಬಿ.ದಿವಾಕರ್

-ಆರ್.ಬಿ.ದಿವಾಕರ್ 1 ಕೃಷ್ಣನ ಹುಡುಕುತ್ತಾ ಹೋದೆ ಯಮುನೆಯ ತೀರದಲಿ ಕೃಷ್ಣನೂ ಇಲ್ಲ ಕೊಳಲ ನಿನಾದವೂ ಇಲ್ಲ 2 ದ್ವಾರಕೆಗೆ ಹೋದೆ ಸಮುದ್ರದಲೆಗಳ ಸಪ್ಪಳ ಮಾತುಗಳೇ ಇಲ್ಲ ಮೌನ… ನಿಶ್ಶಬ್ದ 3 ರಾಧೆ ನಿನಗಾದರು ಕಂಡನೇನೆ? ಯಮುನೆ ನೀನಾದರೂ ನೋಡಿದೆಯೇನೆ ಎಂದರೆ ಹುಸಿಕೋಪ ಮುಸಿನಗು ಮುಖದಲ್ಲಿ 4 ಹುಡುಕುತ್ತಾ ಹೋದೆ ಬಿಲ್ಲನೆದೆಗೇರಿಸಿ ಜಂಯ್‍ಗುಡಿಸುವ ಯುದ್ಧ ವೀರನ ಕಂಡೆ ಕೃಷ್ಣನಿಲ್ಲ 5 ಹುಡುಕುತ್ತಾ ಹೋದೆ ಕೃಷ್ಣನ ಸ್ತುತಿಸುತ್ತಾ ಶರಮಂಚದಲಿ ಪಿತಾಮಹನ ಕಂಡೆ ಕೃಷ್ಣನೆಲ್ಲಿಯೆಂದೆ? ನನಗೂ ಕಾಣನು ಮಾತು… ಮೌನ 6 […]

ಪ್ರಜಾಸತ್ತೆ ‘ಕಾಯು’ತ್ತಿದೆ!

ಪ್ರಜಾಸತ್ತೆ ‘ಕಾಯು’ತ್ತಿದೆ!

ಹಿಂದೆ ಹಳ್ಳಿಗಳಲ್ಲಿ ಹಲವಾರು ಕಾಂಗ್ರೆಸ್ ಮನೆತನಗಳನ್ನು ಕಾಣಬಹುದಿತ್ತು. ಈ ಕುಟುಂಬಗಳ ಸದಸ್ಯರಿಗೆ ಕಾಂಗ್ರೆಸ್ ಜೊತೆಗೆ ತಲೆಮಾರುಗಳ ಅಚಲ ನಂಟು, ನಿಷ್ಠೆ. ಅವರ ಪಾಲಿಗೆ ಸ್ವಾತಂತ್ರ‍್ಯ, ದೇಶಪ್ರೇಮ ಮತ್ತು ಕಾಂಗ್ರೆಸ್ ಒಲವು ಬೇರೆಬೇರೆ ಆಗಿರಲಿಲ್ಲ. ನಮ್ಮೂರಲ್ಲಿ ನಮ್ಮದೂ ಅಂತಹದೇ ಮನೆತನ. ಆಗ ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಗಳಲ್ಲಿ ಎಂ.ವೈ.ಘರ‍್ಪಡೆ ಅವರೇ ಖಾಯಂ ಹುರಿಯಾಳು, ಗೆಲುವು ಅವರಿಗೇ ಮುಡುಪು. ಸಂಡೂರು ಸಂಸ್ಥಾನದ ಮಾಜಿ ಅರಸು, ಪ್ರಜಾತಂತ್ರ ವ್ಯವಸ್ಥೆಯ ಪ್ರತಿನಿಧಿ ಘರ‍್ಪಡೆ ತಮ್ಮ ತಂಡದೊಂದಿಗೆ ನಮ್ಮ ಮನೆಗೆ ಬಂದರೆ ಅವರಿಗೆ ಉಪ್ಪಿಟ್ಟು […]

ಓದುಗರ ಪ್ರತಕ್ರಿಯೆಗಳು

ಓದುಗರ ಪ್ರತಕ್ರಿಯೆಗಳು

ಕಾಪಿರೈಟ್ ಪ್ರಶ್ನೆ ಅಲ್ಲ! -ಎಚ್.ಎಸ್.ದೊರೆಸ್ವಾಮಿ, ಬೆಂಗಳೂರು. ಬಹುರಾಷ್ಟಿಯ ಕಂಪನಿಗಳನ್ನು ಭಾರತಕ್ಕೆ ಬರಮಾಡಿಕೊಂಡ ದಿನದಿಂದ ನಾನು ಅವುಗಳ ವಿರುದ್ಧ ಮತ್ತು ಸರ್ಕಾರದ ನೀತಿಯ ವಿರುದ್ಧ ಬರೆದಿದ್ದೇನೆ, ಚಳವಳಿಗಳನ್ನು ಮಾಡಿದ್ದೇನೆ. ಗ್ಯಾಟ್ ಒಪ್ಪಂದಕ್ಕೆ ಪಾರ್ಲಿಮೆಂಟ್ ಒಪ್ಪಿಗೆ ಪಡೆಯದೆ ಪಿ.ವಿ.ನರಸಿಂಹರಾಯರು ಸಹಿ ಹಾಕಿ ಬಂದದ್ದನ್ನು ಕುರಿತು ಟೀಕೆ ಮಾಡಿದ್ದೇನೆ. ರೈತರು ಬಿತ್ತನೆ ಬೀಜ ತಯಾರಿಸಬಾರದು; ಬಹುರಾಷ್ಟಿಯ ಕಂಪೆನಿ ಕೊಟ್ಟ ಬೀಜವನ್ನೇ ಬಿತ್ತನೆಗೆ ಬಳಸಬೇಕು, ಬಿತ್ತನೆ ಬೀಜವನ್ನು ರೈತ ಮಾಡಿಕೊಂಡರೆ ಆತನಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಆದೇಶ ಇತ್ತು. ಈ ಬಿತ್ತನೆ ಬೀಜ […]

ಸಾಮಾಜಿಕ ಸಂಶೋಧನೆ: ವರ್ತಮಾನ ಮತ್ತು ಭವಿಷ್ಯ

-ಡಾ.ಪ್ರವೀಣ ಟಿ.ಎಲ್.

ಸಾಮಾಜಿಕ ಸಂಶೋಧನೆ: ವರ್ತಮಾನ ಮತ್ತು ಭವಿಷ್ಯ
-ಡಾ.ಪ್ರವೀಣ ಟಿ.ಎಲ್.

-ಡಾ.ಪ್ರವೀಣ ಟಿ.ಎಲ್. ಸಾಮಾಜಿಕ ಸಂಶೋಧನೆಗಳ ಚಿಂತಾಜನಕ ಸ್ಥಿತಿಗೆ ಇರಬಹುದಾದ ಕಾರಣಗಳನ್ನು ಗುರುತಿಸುವುದು ನಮ್ಮ ಪ್ರಾಥಮಿಕ ಜವಾಬ್ದಾರಿ. ಪ್ರಸ್ತುತ ಬರಹವು ಸಾಮಾಜಿಕ ಸಂಶೋಧನೆಗಳ ವರ್ತಮಾನ ಮತ್ತು ಭವಿಷ್ಯದ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ. ಭಾರತೀಯ ಸಾಮಾಜಿಕ ಸಂಶೋಧನೆಯ ಸ್ಥಿತಿಗತಿ ಕುರಿತು ಚರ್ಚೆ ಬಹಳ ಹಿಂದಿನಿದಲೂ ನಡೆಯುತ್ತಲೇ ಬಂದಿದೆ. ಸಂಶೋಧನೆಯ ಗುಣಮಟ್ಟ ಕುಸಿಯುತ್ತಿದೆ ಎಂದು ಅನೇಕ ವಿದ್ವಾಂಸರು, ಸಮಿತಿಗಳು ಅಭಿಪ್ರಾಯ ಪಡುತ್ತಲೇ ಬಂದಿವೆ. ಹಾಗೆಯೇ ಒಂದಷ್ಟು ಕಾರಣಗಳನ್ನು ಗುರುತಿಸಲು ಈ ಹಿಂದೆಯೇ ಪ್ರಯತ್ನಿಸಿವೆ ಕೂಡ: ಮೇಲ್ವಿಚಾರಕರ ಸಮಸ್ಯೆ; ಸಂಶೋಧಕರ […]

ಮೈಸೂರು ವಿಶ್ವವಿದ್ಯಾಲಯ ಗುಣಮಟ್ಟಕ್ಕೆ ಮಾದರಿಯಾಗಿತ್ತು

-ಡಾ.ಎಂ.ಜಿ.ಬಸವರಾಜ

ಮೈಸೂರು ವಿಶ್ವವಿದ್ಯಾಲಯ  ಗುಣಮಟ್ಟಕ್ಕೆ ಮಾದರಿಯಾಗಿತ್ತು
-ಡಾ.ಎಂ.ಜಿ.ಬಸವರಾಜ

-ಡಾ.ಎಂ.ಜಿ.ಬಸವರಾಜ ಸರ್ಕಾರಿ ವಿಶ್ವವಿದ್ಯಾಲಯಗಳ ಸಂಶೋಧನೆಗಳಲ್ಲಿ ಉತ್ಕೃಷ್ಟತೆ ತರಲು ಸಾಧ್ಯವಿದೆ. ಪ್ರತಿಭಾವಂತರು ಎಲ್ಲ ಜಾತಿಗಳಲ್ಲೂ ಇದ್ದಾರೆ. ಉನ್ನತ ಶೈಕ್ಷಣಿಕ ಪ್ರತಿಭೆಯ ಪ್ರಾಧ್ಯಾಪಕರನ್ನು ಮಾತ್ರ ವಿಶ್ವ ವಿದ್ಯಾಲಯಗಳು ಆಯ್ಕೆ ಮಾಡಿಕೊಳ್ಳಬೇಕು. ಶೈಕ್ಷಣಿಕ ಪ್ರಗತಿ/ಪ್ರತಿಭೆ ಆಧಾರಗಳ ಮೇಲೆ ಸಂಶೋಧನಾ ಮಾರ್ಗದರ್ಶಕರನ್ನು ಆಯ್ಕೆ ಮಾಡಬೇಕು. ಸಂಶೋಧನಾ ವಿದ್ಯಾರ್ಥಿಗಳ ಆಯ್ಕೆಯಲ್ಲೂ ಇದನ್ನು ಅನುಸರಿಸಬೇಕು. ಸಂಶೋಧನಾ ಉತ್ಕೃಷ್ಟತೆಯಲ್ಲಿ ವಿಫಲರಾದವರನ್ನು ಖಾಲಿ ಮಾಡಿಸಬೇಕು. ಕರ್ನಾಟಕ ಕುರಿತ ಜ್ಞಾನ ಸೃಷ್ಟಿಯ ಸಂಶೋಧನೆಗಳಲ್ಲಿ ಉತ್ಕೃಷ್ಟತೆ ತರುವುದು ಹೇಗೆ? ಎಂಬ ಚರ್ಚೆಯ ವಿಷಯ ಸಮಕಾಲೀನ ಪ್ರಸ್ತುತತೆಯನ್ನು ಹೊಂದಿದೆ. ಕಾರಣ ಸ್ಪಷ್ಟ. ಇಂದಿನ […]

ಪಿ.ಎಚ್.ಡಿ. ಪದವಿಯ ಅವಸ್ಥೆ ಸರಿಯಾಗಬೇಕಿದೆ ವ್ಯವಸ್ಥೆ

-ದೇವನೂರು ನಂದೀಶ

ಪಿ.ಎಚ್.ಡಿ. ಪದವಿಯ ಅವಸ್ಥೆ ಸರಿಯಾಗಬೇಕಿದೆ ವ್ಯವಸ್ಥೆ
-ದೇವನೂರು ನಂದೀಶ

-ದೇವನೂರು ನಂದೀಶ ಪಿ.ಎಚ್.ಡಿ. ಅಧ್ಯಯನ ಮಾಡುವವರಿಗೆ ನಾಮಕಾವಸ್ಥೆ ಮಾರ್ಗದರ್ಶಕರನ್ನು ಒದಗಿಸುವ ಬದಲು ಸಂಶೋಧನಾ ಅಭ್ಯರ್ಥಿಯ ಅರ್ಹತೆ, ಅನುಭವ ಮತ್ತು ಬೇಡಿಕೆಗಳಿಗುಣವಾಗಿ ಮಾರ್ಗದರ್ಶಕರ ಹಸ್ತಕ್ಷೇಪಗಳಿಲ್ಲದ ಸ್ವತಂತ್ರ ಸಂಶೋಧನಾ ಪಿಎಚ್.ಡಿ. ಕೋರ್ಸ್ ಒಂದಕ್ಕೆ ಆದ್ಯತೆ ನೀಡಬೇಕು. ಪಶ್ಚಿಮದ ದೇಶಗಳಲ್ಲಿ ಇಂತಹ ಮಾದರಿಗಳು ಈಗಾಗಲೇ ಜಾರಿಯಲ್ಲಿವೆ. ಇಂದು ಎಷ್ಟೋ ಸಂಶೋಧಕರು ಯು.ಜಿ.ಸಿ. ಕೊಡಮಾಡುವ ವಿವಿಧ ಧನ ಸಹಾಯ ಪಡೆದು ಆ ಸಂಶೋಧನಾ ವೇತನಗಳ ಅರ್ಹತೆಯ ಆಧಾರದ ಮೇರೆಗೆ ವಿಶ್ವವಿದ್ಯಾಲಯಗಳಲ್ಲಿ ಗೊತ್ತುಮಾಡಿದ ಮಾರ್ಗದರ್ಶಕರ ಬಳಿ ಮುಗಿಬೀಳುತ್ತಿದ್ದಾರೆ. ಇದಕ್ಕೆ ಬಹುಮುಖ್ಯ ಕಾರಣ ಯು.ಜಿ.ಸಿ.ಯ ಸಂಶೋಧನಾ […]

ವಿಶ್ವವಿದ್ಯಾಲಯಗಳು ಅನುಭವ ಮಂಟಪಗಳಾಗಲಿ

-ಎಂ.ಕುಸುಮ

ವಿಶ್ವವಿದ್ಯಾಲಯಗಳು ಅನುಭವ ಮಂಟಪಗಳಾಗಲಿ
-ಎಂ.ಕುಸುಮ

-ಎಂ.ಕುಸುಮ ನಮ್ಮ ವಿಶ್ವವಿದ್ಯಾಲಯಗಳ ‘ಸಾಪ್ಟ್ವೇರ್’ಗಳು ಸರಿಯಾಗಿಯೇ ಇವೆ; ಆಡಳಿತಾತ್ಮಕ ‘ಹಾರ್ಡ್ವೇರ್’ ಸರಿಯಾಗಿಡುವುದು ಸರ್ಕಾರದ ಜವಾಬ್ದಾರಿ! ರೋಗ ನಿವಾರಣೆಗೆ, ರೋಗಮೂಲವನ್ನು ಪತ್ತೆ ಹಚ್ಚಿ, ಪರಿಹಾರವನ್ನು ಕಂಡುಕೊಳ್ಳುವುದು ಎಷ್ಟು ಮುಖ್ಯವೋ ಹಾಗೆ, ವಿಶ್ವವಿದ್ಯಾಲಯಗಳ ಪಿ.ಹೆಚ್.ಡಿ ಮಟ್ಟವನ್ನು ಉನ್ನತೀಕರಿಸಲು ಶಾಲಾ-ಕಾಲೇಜು ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ದೃಷ್ಟಿಕೋನವನ್ನು ಬೆಳೆಸುವುದು ಅಷ್ಟೇ ಮುಖ್ಯ. ಶಾಲಾ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ, ಸರಿ-ತಪ್ಪುಗಳನ್ನು ಅವಲೋಕಿಸುವ ಸ್ಥೈರ್ಯವನ್ನು ತುಂಬಬೇಕಿದೆ. ನಮ್ಮ ರಾಜ್ಯ, ಜಿಲ್ಲೆ, ಊರಿನ ವಿಶೇಷತೆ, ಅಲ್ಲಿನ ನದಿ, ಅಣೆಕಕಟ್ಟು, ಕಾರ್ಖಾನೆ, ಸ್ಮಾರಕ ಇತ್ಯಾದಿಗಳ ಕುರಿತು ಯುವಜನರಿಗೆ […]

ಸತ್ತಂತಿಹರನು ಸಾಯಲು ಬಿಡಬಾರದೇಕೆ..?

-ಮೋಹನದಾಸ್

-ಮೋಹನದಾಸ್ ಸತ್ತಂತಿಹರನು ಬಡಿದೆಚ್ಚರಿಸುವುದಕ್ಕಿಂತಲೂ ಹೊಸದಾದ ಪರ್ಯಾಯವೊಂದನ್ನು ಸೃಷ್ಟಿಮಾಡುವ ಅವಕಾಶವೇ ನಮಗೆ ಆಕರ್ಷಕವಾಗಿ ಕಾಣಬಹುದು. ನವೆಂಬರ್ ಸಂಚಿಕೆಯಲ್ಲಿ ಜ್ಞಾನಸೃಷ್ಟಿಯ ಸಂಶೋಧನೆಗಳಲ್ಲಿ ಉತ್ಕೃಷ್ಟತೆ ತರುವುದು ಹೇಗೆ ಎಂಬ ಕುರಿತು ಪ್ರಕಟವಾಗಿರುವ ಎಲ್ಲ ಬರಹಗಳೂ ಪಾಂಡಿತ್ಯಪೂರ್ಣವಾಗಿವೆ. ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಪಿಹೆಚ್‌ಡಿ ಸಂಶೋಧನೆಗಳ ಗುಣಮಟ್ಟದ ಅವನತಿಯ ಬಗ್ಗೆ ಎಲ್ಲ ಲೇಖಕರೂ ಒಕ್ಕೊರಲಿನಿಂದ ದನಿಗೂಡಿಸಿದ್ದಾರೆ. ‘ಸತ್ತಂತಿಹರನು ಬಡಿದೆಚ್ಚರಿಸು’ ಎಂಬ ಶೀರ್ಷಿಕೆಗೆ ಅನ್ವರ್ಥವಾಗುವಂತೆ ‘ಬೀಟಿಂಗ್ ಎ ಡೆಡ್ ಹಾರ್ಸ್’ ಎಂಬ ಪದಪುಂಜದ ಬಳಕೆಯಲ್ಲಿ ವಿವಿಗಳಲ್ಲಿ ಸಂಶೋ ಧನೆಯ ಸ್ಥಿತಿಗತಿ ಎಲ್ಲರಿಗೂ ಮನವರಿಕೆಯಾಗುತ್ತಿದೆ. ನಾವು ಆಡುಬಳಕೆಯ ಮಾತಿನಲ್ಲಿ […]

ಬಿಹಾರ ಚುನಾವಣೆ: ಸೋತು ಗೆದ್ದ ತೇಜಸ್ವಿ

-ಡಿ.ಉಮಾಪತಿ

ಬಿಹಾರ ಚುನಾವಣೆ: ಸೋತು ಗೆದ್ದ ತೇಜಸ್ವಿ
-ಡಿ.ಉಮಾಪತಿ

-ಡಿ.ಉಮಾಪತಿ ತೇಜಸ್ವಿ ಯಾದವ್ ಮುಂಬರುವ ದಿನಗಳ ರಾಜಕಾರಣದಲ್ಲಿ ಗಮನಿಸಬೇಕಾದ ಪ್ರತಿಭೆ ಎಂಬುದನ್ನು ರುಜುವಾತು ಮಾಡಿ ತೋರಿದ್ದಾರೆ. ಗೆಲುವಿನ ಗೆರೆಯ ಬಳಿ ಸಾರಿ ಕಾಲು ಸೋತ ಸಾರಥಿ ತೇಜಸ್ವಿ. ಚುನಾವಣಾ ಸಮೀಕ್ಷೆಗಳು ಮತ್ತು ಮತಗಟ್ಟೆ ಸಮೀಕ್ಷೆಗಳನ್ನು ಸುಳ್ಳು ಮಾಡಿರುವ ಬಿಹಾರ ವಿಧಾನಸಭಾ ಚುನಾವಣೆ ಪ್ರತಿಸ್ಪರ್ಧಿಗಳನ್ನು ಸೋಲು ಗೆಲುವುಗಳ ನಡುವೆ ತೂಗುಯ್ಯಾಲೆ ಆಡಿಸಿತು. ಆರಂಭದಲ್ಲಿ ಎನ್.ಡಿ.ಎ.ಗೆ ಭಾರೀ ಗೆಲುವಿನ ಭವಿಷ್ಯ ನುಡಿದು, ಮತಗಟ್ಟೆ ಸಮೀಕ್ಷೆಗಳಲ್ಲಿ ಮಹಾಮೈತ್ರಿಗೆ ವಿಜಯಮಾಲೆ ಹಾಕಿದ್ದ ಸಮೀಕ್ಷೆಗಳು ಹುಸಿಯಾದವು. ಸೋಲು ಗೆಲುವುಗಳು ಕೂದಲೆಳೆಯ ಅಂತರದಿAದ ತೀರ್ಮಾನವಾದವು. ಒಂದೆಡೆ […]

ನ್ಯಾಯಾಂಗ ಬರ್ಬರತೆಯತ್ತ ಜಾರುತ್ತಿದೆಯೇ ಸುಪ್ರೀಂ ಕೋರ್ಟು?

-ಪ್ರತಾಪ್ ಭಾನು ಮೆಹ್ತಾ

ನ್ಯಾಯಾಂಗ ಬರ್ಬರತೆಯತ್ತ	 ಜಾರುತ್ತಿದೆಯೇ ಸುಪ್ರೀಂ ಕೋರ್ಟು?
-ಪ್ರತಾಪ್ ಭಾನು ಮೆಹ್ತಾ

-ಪ್ರತಾಪ್ ಭಾನು ಮೆಹ್ತಾ ಅನುವಾದ: ನಾ ದಿವಾಕರ ಪ್ರಜಾತಾಂತ್ರಿಕ ಬರ್ಬರತೆಯ ವಾತಾವರಣದಲ್ಲಿ ಪ್ರತಿಯೊಂದು ವಿಚಾರವನ್ನೂ ಪಕ್ಷಪಾತೀಯ ನೆಲೆಯಲ್ಲಿ ನೋಡಲಾಗುವುದೇ ಹೊರತು ತರ್ಕಬದ್ಧತೆಯಿಂದಲ್ಲ. ನ್ಯಾಯಾಂಗವು ಈ ಧೋರಣೆಯನ್ನು ಮೀರಿ ನಿಂತಿದೆ ಎಂದು ತೋರಿಸಿಕೊಳ್ಳಲೂ ವಿಫಲವಾಗಿರುವುದರಿಂದ ನ್ಯಾಯಾಂಗದ ನಿಷ್ಕರ್ಷೆಯೂ ಇದಕ್ಕೆ ಪೂರಕವಾಗಿಯೇ ಕಂಡುಬರುತ್ತಿದೆ. ರಾಜ್ಯಶಾಸ್ತ್ರದ ಸಾಹಿತ್ಯದಲ್ಲಿ ಸಾಮಾನ್ಯವಾಗಿ ಪ್ರಜಾಪ್ರಭುತ್ವದ ಬರ್ಬರತೆ ಎಂಬ ಪದವನ್ನು ಬಳಸಲಾಗುತ್ತದೆ. ಈ ಪ್ರಜಾಪ್ರಭುತ್ವದ ಬರ್ಬರತೆಯನ್ನು ನ್ಯಾಯಿಕ ಬರ್ಬರತೆಯು ಕಾಪಾಡಿಕೊಂಡುಬರುತ್ತದೆ. ಬರ್ಬರತೆಗೆ ಹಲವಾರು ಆಯಾಮಗಳಿವೆ. ಮೊದಲನೆಯದಾಗಿ ನ್ಯಾಯಾಂಗದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ, ತೀರ್ಪು ನೀಡುವಾಗ ನಿರಂಕುಶತೆ ಮೇಲುಗೈ ಸಾಧಿಸುತ್ತದೆ. […]

ಅಣ್ಣಾ ವಿವಿ ಸೂರಪ್ಪ ಪ್ರಕರಣ: ಉತ್ಕೃಷ್ಟತೆ ಉತ್ಸಾಹಕ್ಕೆ ತಣ್ಣೀರು!

-ಪೃಥ್ವಿದತ್ತ ಚಂದ್ರಶೋಭಿ

ಅಣ್ಣಾ ವಿವಿ ಸೂರಪ್ಪ ಪ್ರಕರಣ: ಉತ್ಕೃಷ್ಟತೆ ಉತ್ಸಾಹಕ್ಕೆ ತಣ್ಣೀರು!
-ಪೃಥ್ವಿದತ್ತ ಚಂದ್ರಶೋಭಿ

-ಪೃಥ್ವಿದತ್ತ ಚಂದ್ರಶೋಭಿ ನೆರೆಯ ತಮಿಳುನಾಡಿನ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿಚಿತ್ರ ವಿವಾದ ಉದ್ಭವಿಸಿದೆ. ಅದರ ಕೇಂದ್ರದಲ್ಲಿ ಇರುವವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕರಾದ ಪ್ರೊ.ಎಂ.ಕೆ.ಸೂರಪ್ಪನವರು. ಅವರೀಗ ಚೆನ್ನೈನಲ್ಲಿರುವ ಪ್ರತಿಷ್ಠಿತ ಅಣ್ಣಾ ವಿಶ್ವವಿದ್ಯಾನಿಲಯದ ಕುಲಪತಿಗಳು. ಈ ವಿಶ್ವವಿದ್ಯಾನಿಲಯಕ್ಕೆ ಉತ್ಕೃಷ್ಟ ಸಂಸ್ಥೆ ಸ್ಥಾನ ದೊರಕಿರುವುದೆ ವಿವಾದದ ಮೂಲ. ಪಳನಿಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಸೂರಪ್ಪನವರ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿ, ನ್ಯಾಯಾಂಗ ತನಿಖೆ ನಡೆಸಲು ಆದೇಶಿಸಿದೆ.   ಜ್ಞಾನ ಸೃಷ್ಟಿ ಮತ್ತು ಪ್ರಸರಣಗಳೆರಡರಲ್ಲಿಯೂ ಸೋಲುತ್ತಿರುವ ಉನ್ನತ ಶಿಕ್ಷಣ […]

ತಂತ್ರಜ್ಞಾನ ‘ಟೀಚಿಂಗ್ ಏಡ್’ಮಾತ್ರವಾಗಲಿ

-ರಂಗನಾಥ ಕಂಟನಕು0ಟೆ

ತಂತ್ರಜ್ಞಾನ ‘ಟೀಚಿಂಗ್ ಏಡ್’ಮಾತ್ರವಾಗಲಿ
-ರಂಗನಾಥ ಕಂಟನಕು0ಟೆ

-ರಂಗನಾಥ ಕಂಟನಕು0ಟೆ ಹೊಸ ವಿಚಾರಗಳನ್ನು ಯೋಜನೆಗಳನ್ನು ರೂಪಿಸಿ ಹೊಸ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಅದರ ಭಾಗವಾಗಿ ಕೊರೊನೋತ್ತರ ಕಾಲದಲ್ಲಿ ಶಿಕ್ಷಣ ವ್ಯವಸ್ಥೆಯನ್ನೂ ಮುರಿದು ಕಟ್ಟಿ ಮುಂದಿನ ಜನಾಂಗಕ್ಕೆ ಸಜ್ಜುಗೊಳಿಸಿಕೊಡಬೇಕಿದೆ. ಕೊರೋನ ವೈರಾಣು ರೋಗ ಹಬ್ಬುವುದನ್ನು ನಿಯಂತ್ರಿಸಲು ಕಳೆದ ಮಾರ್ಚ್ ತಿಂಗಳಿನಲ್ಲಿ ಶಾಲಾ ಕಾಲೇಜುಗಳಿಗೆ ದಿಢೀರ್ ಆಗಿ ಮತ್ತು ಅನಿರ್ದಿಷ್ಟ ಕಾಲದವರೆಗೆ ಸರ್ಕಾರ ರಜೆ ಘೋಷಣೆ ಮಾಡಿತು. ನಂತರ ಉನ್ನತ ಶಿಕ್ಷಣ ಇಲಾಖೆ ಆನ್‌ಲೈನ್ ಮೂಲಕ ಬೋಧಿಸುವಂತೆ ಆದೇಶ ಹೊರಡಿಸಿತು. ಆ ಮೂಲಕ ಅಪೂರ್ಣವಾಗಿದ್ದ ಪಠ್ಯಗಳನ್ನು ಮುಗಿಸಲು ಆನ್‌ಲೈನ್ ಮೊರೆ […]