ಇಂದಿಗೂ ಕನ್ನಡವಾಗಿದ್ದೇವೆ!

-ಡಾ.ಉಮಾ ವೆಂಕಟೇಶ್

 ಇಂದಿಗೂ ಕನ್ನಡವಾಗಿದ್ದೇವೆ! <p><sub> -ಡಾ.ಉಮಾ ವೆಂಕಟೇಶ್ </sub></p>

ಒಳನಾಡ ಕನ್ನಡಿಗರಲ್ಲಿ ಉದ್ಯಮಶೀಲತೆ ಬೆಳೆಸಲು, ಹೊರನಾಡ ಕನ್ನಡಿಗರ ಆರ್ಥಿಕ ಸಂಪನ್ನತೆ ಮತ್ತು ಸೃಜನಶೀಲತೆಗಳ ಸದುಪಯೋಗ ಪಡೆದುಕೊಳ್ಳುವ ಮಾರ್ಗಗಳನ್ನು ಸರ್ಕಾರ ಹುಡುಕಬೇಕು. ನಮ್ಮ ಸರ್ಕಾರಿ ಅಧಿಕಾರಿಗಳು, ಹೊರನಾಡ ಕನ್ನಡ ಸಂಘಗಳ ಸಮಾರಂಭಗಳು ಕೇವಲ ತಮ್ಮ ಐಷಾರಾಮಿ ವಿದೇಶಿ ಯಾತ್ರೆಗೆ ಒಂದು ಅವಕಾಶವೆಂದು ಬಗೆಯಬಾರದು; ಇಂತಹ ಸಮ್ಮೇಳನಗಳು ಒಳನಾಡಿನ ಕನ್ನಡಿಗರ ಹಿತಾಸಕ್ತಿಗಳನ್ನು, ಅನಿವಾಸಿ ಕನ್ನಡಿಗರೊಂದಿಗೆ ಬೆಸೆಯುವ ಸುವರ್ಣಾವಕಾಶಗಳೆಂದು ಭಾವಿಸಬೇಕು. ಉತ್ತಮ ಭವಿಷ್ಯವನ್ನರಸುತ್ತಾ ತಾಯ್ನಾಡನ್ನು ತೊರೆದು ವಲಸೆ ಹೋಗುವ ಪ್ರವೃತ್ತಿ 6-7 ದಶಕಗಳಿಂದ ನಡೆಯುತ್ತಲೇ ಇದೆ. 60-70ರ ದಶಕದಲ್ಲಿ ಅಮೆರಿಕ, ಮಧ್ಯಪ್ರಾಚ್ಯ […]

ಸಾಹಿತ್ಯದಲ್ಲಿ ಅಸಂಗತತೆ

- ಕಾದಂಬಿನಿ

ಅಸಂಗತ ಆಲೋಚನೆಗಳನ್ನು ಸಾಹಿತ್ಯದಲ್ಲಿ ಅಳವಡಿಸುವ ಪ್ರಕ್ರಿಯೆಯು ಪಾಶ್ಚಾತ್ಯರಲ್ಲಿ ಕಳೆದ ಶತಮಾನದ ಆದಿಯಲ್ಲಿಯೇ ಆರಂಭಗೊಂಡಿತು. ಅಸಂಗತತೆಯನ್ನು ಸಾಹಿತ್ಯದಲ್ಲಿ ಎರಡು ರೀತಿಯಲ್ಲಿ ತರಲಾಯಿತು. ಉದ್ದೇಶಪೂರ್ವಕವಾಗಿ ಹಾಸ್ಯಾಸ್ಪದ, ವಿಲಕ್ಷಣ ಮತ್ತು ಅಸಂಗತತೆಯನ್ನು ಮಿಳಿತಗೊಳಿಸುವುದು ಒಂದಾದರೆ ಮಾನವನ ಸಾಮಾಜಿಕ ಅಸ್ತಿತ್ವಕ್ಕಿಂತ ಆಂತರಿಕ ಅಸ್ತಿತ್ವವೇ ಮುಖ್ಯ ಎಂಬ ನಂಬಿಕೆಯಿಂದ ಅಸಂಗತತೆಯನ್ನು ಪ್ರತಿಪಾದಿಸುವುದು ಇನ್ನೊಂದು. ಯೂರೋಪಿನಲ್ಲಿ ಕಲಾತ್ಮಕ ಮತ್ತು ಸಾಹಿತ್ಯಿಕ ಪರಿಸರದ ಸಾಂಪ್ರದಾಯಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಶಿಷ್ಟ ಹಾಗೂ ಅಸಂಬದ್ಧತೆಯಿಂದ ಅಪಹಾಸ್ಯ ಮಾಡುವ ಮೂಲಕ ಗುಡಿಸಿ ಹಾಕುವ ಉದ್ದೇಶದಿಂದ ಸ್ವಿಟ್ಜರ್ಲೆಂಡಿನ ಜ್ಯೂರಿಚ್ ಎಂಬಲ್ಲಿ […]

ಹಣ ಹಂಚಿಕೆ ಕಾನೂನುಬದ್ಧ ಮಾಡಬಾರದೇಕೆ?

ಚುನಾವಣೆಗಳಲ್ಲಿ ಮತದಾರರಿಗೆ ಹಣ ಹಂಚಿಕೆ ಕಾನೂನುಬದ್ಧ ಮಾಡಬಾರದೇಕೆ? ಚುನಾವಣೆ ಬಂದಾಗ ಅಭ್ಯರ್ಥಿಗಳ ಗೋಳು ನೋಡಲಾಗುವುದಿಲ್ಲ. ಮನೆ-ಮಠ ಮಾರಿ ಹಾಗೂ ಸಾಲ-ಸೋಲ ಮಾಡಿಯಾದರೂ ಚುನಾವಣೆಯಲ್ಲಿ ವಿತರಣೆ ಮಾಡಬೇಕಾದ ಹಣ ಹೊಂಚಲೇಬೇಕು. ರಾಜ್ಯಾದ್ಯಂತ ವೋಟಿಗೆ ರೂ.500ಗಳು ಅತ್ಯಂತ ಕಡಿಮೆಯ ದರವಾದರೆ, ಕೆಲವು ಕ್ಷೇತ್ರಗಳ ಆಯ್ದ ಭಾಗಗಳಲ್ಲಿ ವೋಟಿಗೆ ರೂ.2,000 ದಿಂದ ರೂ.5,000 ವರೆಗೂ ಕೊಡಬೇಕಾಗುತ್ತದೆ. ಅಭ್ಯರ್ಥಿಯು ವೋಟು ಖರೀದಿಸಲು ಹಣ ನೀಡುವುದಿಲ್ಲ ಎಂದೇನಾದರೂ ಪ್ರಚಾರವಾದರೆ ಅವನ ಮನೆಯ ಬಳಿ ನಾಯಿ-ನರಿಗಳೂ ಸುಳಿಯದ ಪರಿಸ್ಥಿತಿಯಿದೆ. ಸಮಸ್ಯೆ ಅದಲ್ಲ. ಸಮಸ್ಯೆ ಹಣ ವಿತರಣೆಗೆ […]

ಕನ್ನಡ ಚಿತ್ರರಂಗದ ಕೊನೆಯ ಸೂಪರ್ ಸ್ಟಾರ್

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ ನನ್ನ ತಮ್ಮಾ… ಮಂಕು ತಿಮ್ಮಾ ತೂಕಡಿಸಿ ತೂಕಡಿಸಿ ಬಿದ್ದರೋ ನನ್ನಜ್ಜ ನಿನ್ನಜ್ಜ ಮುತ್ತಜ್ಜ ಎಂದು ಕನ್ನಡಿಗರನ್ನು ತನ್ನ ಶೈಲಿಯಲ್ಲಿಯೇ ಬಡಿದೇಳಿಸಿದ್ದ ಅಂಬರೀಶ್ ಇದೇ ನವೆಂಬರ್ 24ರಂದು ಚಿರನಿದ್ರೆಗೆ ಜಾರಿದ್ದಾರೆ. ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆ ತನ್ನ ಅಪಾರ ಅಭಿಮಾನಿಗಳ ಬಳಗವನ್ನು ತೊರೆದು “ಏ ಹೋಗ್ರೊಲೋ ಹೋಗ್ರೋ..” ಎಂದು ಹೇಳುತ್ತಾ ತಾವೇ ಜೀವನದ ಬೆಳ್ಳಿಪರದೆಯಿಂದ ಸರಿದಿದ್ದಾರೆ. ನಾಗರಹಾವಿನ ಜಲೀಲನ ಪಾತ್ರದಿಂದ ಹಿಡಿದು ಇತ್ತೀಚೆಗಿನ ‘ಅಂಬಿ ನಿಂಗೆ ವಯಸ್ಸಾಯ್ತೋ’ವರೆಗೆ ಅಂಬರೀಶ್ ನೂರಾರು ಪಾತ್ರಗಳಲ್ಲಿ ಪ್ರೇಕ್ಷಕರೊಡನೆ […]

ಒಬ್ಬರ ಸಾವು ಇನ್ನೊಬ್ಬರ ಅವಕಾಶ?

-ರಮಾನಂದ ಶರ್ಮಾ

ಇತ್ತೀಚೆಗೆ ಕೇಂದ್ರಮಂತ್ರಿ ಅನಂತಕುಮಾರ್ ನಿಧನರಾದಾಗ, ಅವರ ಪಾರ್ಥಿವ ಶರೀರ ಚಿತೆ ಏರುವ, ಅಂತ್ಯ ಸಂಸ್ಕಾರ ಮುಗಿಯುವ ಮೊದಲೇ ಅವರ ಉತ್ತರಾಧಿಕಾರಿಯ ಬಗೆಗೆ, ಅವರ ಪತ್ನಿ ತೇಜಸ್ವಿನಿಯವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಿಲ್ಲಿಸುವ ಬಗೆಗೆ ಮಾಧ್ಯಮದಲ್ಲಿ ಚರ್ಚೆ ಆರಂಭವಾಗಿತ್ತು! ಅಯ್ಯೋ ಪಾಪ ಹೋಗಿಬಿಟ್ರಾ, ಇನ್ನು ಕೆಲಕಾಲ ಬದುಕಬಹುದಿತ್ತು, ಸಾಯುವ ವಯಸ್ಸಲ್ಲ, ಮುಂದೇನು? ಅಂತಿಮ ಸಂಸ್ಕಾರ ಹೇಗೆ? ಅವರ ಕುಟುಂಬಕ್ಕೆ ಆಸರೆ ಏನು? -ಹಿಂದೆ ಯಾರಾದರೂ ನಿಧನರಾದಾಗ ಸಾಮಾನ್ಯವಾಗಿ ಇಂಥ ಪ್ರತಿಕ್ರಿಯೆ ಕೇಳಿಬರುತ್ತಿತ್ತು. ನಿಧನರಾದವರು ಯಾರೇ […]

ಕಲ್ಯಾಣ ಯೋಜನೆಗಳ ಬಗ್ಗೆ ಅಸಹನೆ ಏಕೆ?

- ಕು.ಸ.ಮಧುಸೂದನ

ರಾಜಕೀಯ ಪಕ್ಷಗಳಿಗೆ ಕಲ್ಯಾಣರಾಜ್ಯದ ‘ಉಚಿತ’ಗಳನ್ನು ನೀಡುವಲ್ಲಿ ಇರುವ ಆಸಕ್ತಿ ಆ ಉಚಿತಗಳ ಅಗತ್ಯವೇ ಇರದಂತೆ ಮಾಡಲು ಹಾಕಿಕೊಳ್ಳಬೇಕಾದ ಯೋಜನೆಗಳ ಬಗ್ಗೆ ಇಲ್ಲವಾಗಿದೆ. ನಾವು ಕಟ್ಟುವ ತೆರಿಗೆ ಹಣವನ್ನು ಹೀಗೆ ಪೋಲು ಮಾಡುವುದು ಎಷ್ಟರ ಮಟ್ಟಿಗೆ ಸರಿ? ಜನರಿಗೆ ಸೋಮಾರಿಗಳಾಗುವುದನ್ನು ಸರಕಾರವೇ ಕಲಿಸಿಕೊಡುತ್ತಿದೆ. ಹಸಿದವರಿಗೆ ಮೀನು ಹಿಡಿಯುವುದನ್ನು ಕಲಿಸಬೇಕೇ ಹೊರತು ಸಿದ್ಧಪಡಿಸಿದ ಮೀನೂಟ ನೀಡುವುದಲ್ಲ! ಪ್ರತಿ ವರ್ಷವೂ ಬರದ ಹೆಸರಿನಲ್ಲಿ, ಅತಿವೃಷ್ಟಿಯ ಹೆಸರಿನಲ್ಲಿ ರೈತರ ಸಾಲಮನ್ನಾ ಮಾಡುತ್ತಾ ಹೋದರೆ ಖಾಲಿಯಾಗುವ ಸರಕಾರದ ಬೊಕ್ಕಸ ತುಂಬಲು ನಾವೇಕೆ ತೆರಿಗೆ ನೀಡಬೇಕು? […]

ನೆಹರೂ ರಾಜಕೀಯ ತತ್ವಜ್ಞಾನ

- ರಾಜಾರಾಮ ತೋಳ್ಪಾಡಿ

 ನೆಹರೂ ರಾಜಕೀಯ ತತ್ವಜ್ಞಾನ <p><sub> - ರಾಜಾರಾಮ ತೋಳ್ಪಾಡಿ </sub></p>

   ನಿತ್ಯಾನಂದ ಬಿ. ಶೆಟ್ಟಿ ಪಂಡಿತ್ ಜವಾಹರಲಾಲ್ ನೆಹರೂ ಈ ದೇಶದ ಮಹಾನ್ ನಾಯಕರಲ್ಲೊಬ್ಬರು. ಸ್ವಾತಂತ್ರ್ಯ ಹೋರಾಟದ ಅಸಾಧಾರಣ ನಾಯಕತ್ವ, ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರದ ಜೊತೆಗೆ ನೆಹರೂ; ಸ್ವಾತಂತ್ರ್ಯೋತ್ತರ ಭಾರತದ ಮೊದಲ ಪ್ರಧಾನಿಯಾಗಿ ದೇಶವನ್ನು ಆಧುನಿಕತೆ ಮತ್ತು ಅಭಿವೃಧ್ಧಿಯ ಪಥದಲ್ಲಿ ಮುನ್ನಡೆಸಿದ್ದು ನಮಗೆಲ್ಲರಿಗೂ ತಿಳಿದಿದೆ. ಆದರೆ ಅವರ ಚಿಂತನೆ ಹಾಗೂ ಕ್ರಿಯಾಚರಣೆಗಳ ವೈಶಿಷ್ಟ್ಯ ಮತ್ತು ಇತಿಮಿತಿಗಳೇನು? ಎನ್ನುವುದರ ಕುರಿತು ವಿದ್ವಾಂಸರ ಸಣ್ಣ ಗುಂಪನ್ನು ಹೊರತುಪಡಿಸಿದರೆ ಉಳಿದವರು ಅಷ್ಟಾಗಿ ಚಿಂತನೆ ನಡೆಸಿದಂತಿಲ್ಲ. ನೆಹರೂರವರ ಕುರಿತು ಕಟ್ಟುಕಥೆದಂತಕಥೆ […]

ಚಿಂತನೆಗಳಿಗೆ ಸಂಕೇತವಾಗದ ಪ್ರತಿಮೆಗಳು

- ನಾ ದಿವಾಕರ

 ಚಿಂತನೆಗಳಿಗೆ ಸಂಕೇತವಾಗದ ಪ್ರತಿಮೆಗಳು <p><sub> - ನಾ  ದಿವಾಕರ </sub></p>

ಬಹುತೇಕ ಸಾಂಪ್ರದಾಯಿಕ ಸಮಾಜಗಳಲ್ಲಿ ಪ್ರತಿಮೆಗಳು ಚಿಂತನೆಗಳ ಸಂಕೇತವಾಗುವ ಬದಲು ಆರಾಧನೆಯ ಕೇಂದ್ರಗಳಾಗಿ ರೂಪುಗೊಂಡು ಒಂದು ಹಂತದಲ್ಲಿ ಸಂಸ್ಕೃತಿಕ ಅಧಿಪತ್ಯದ ಸಂಕೇತಗಳಾಗಿಬಿಡುತ್ತವೆ. ಇತ್ತೀಚೆಗೆ ನಿರ್ಮಿಸಲಾಗಿರುವ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನೂ ಇದೇ ಚೌಕಟ್ಟಿನಲ್ಲಿ ನೋಡಬೇಕಾಗುತ್ತದೆ. ಪ್ರತಿಮೆ ಮತ್ತು ಸ್ಮಾರಕಗಳ ಮೂಲಕ ಗತಕಾಲದ ಮಹನೀಯರನ್ನು ನೆನೆಯುವ ಪರಂಪರೆ ಸಾರ್ವತ್ರಿಕವಾದದ್ದು ಮತ್ತು ಪ್ರಾಚೀನವಾದದ್ದು ಸಹ. ಬಹುಶಃ ಪ್ರಪಂಚದ ಯಾವುದೇ ದೇಶವೂ ಈ ಪರಂಪರೆಯಿಂದ ಹೊರತಾಗಿಲ್ಲ. ಪ್ರತಿಮೆ ಮತ್ತು ಸ್ಮಾರಕಗಳನ್ನು ಎರಡು ಮಜಲುಗಳಲ್ಲಿ ನೋಡಬಹುದು. ಮೊದಲನೆಯದಾಗಿ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶ ಅಥ […]

ರಾಜಕೀಯದಲ್ಲಿ ಉದಾಸೀನ ಪರ್ವ

- ಎ.ನಾರಾಯಣ

 ರಾಜಕೀಯದಲ್ಲಿ ಉದಾಸೀನ ಪರ್ವ <p><sub> - ಎ.ನಾರಾಯಣ </sub></p>

ಮೂರು ಲೋಕಸಭಾ ಸ್ಥಾನಗಳಿಗೆ ಮತ್ತು ಎರಡು ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಗಳ ಫಲಿತಾಂಶದ ಆಧಾರದಲ್ಲಿ ಹೇಳುವುದಾದರೆ ರಾಜ್ಯದ ರಾಜಕೀಯ ಪರಿಸ್ಥಿತಿ ವಿಧಾನಸಭಾ ಚುನಾವಣೆಯ ಕಾಲದಲ್ಲಿದ್ದ ಹಾಗೆ ಈಗಲೂ ಇದೆ. ವಿಶೇಷವಾಗಿ ಏನೂ ಬದಲಾದಂತೆ ಕಾಣುತ್ತಿಲ್ಲ. ಬದಲಿಸುವ ಉತ್ಸಾಹ ಮೂರು ಪಕ್ಷಗಳಿಗೂ ಇದ್ದಂತೆ ಕಾಣುವುದಿಲ್ಲ. ಕರ್ನಾಟಕ ರಾಜ್ಯ ರಾಜಕಾರಣ 20018ರ ವಿಧಾನಸಭಾ ಚುನಾವಣೆ ಕಳೆದ ನಂತರ ಒಂದು ವಿಚಿತ್ರವಾದ ಸ್ಥಗಿತ ಸ್ಥಿತಿಯನ್ನು ಪ್ರವೇಶಿಸಿದಂತಿದೆ. ಜೆಡಿ ಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿ ಸರಕಾರ ಒಂಥರಾ ತಾತ್ಕಾಲಿಕ ನೌಕರಿ ನಡೆಯುವಂತೆ […]

ಅವನತಿಗೆ ಇನ್ನಷ್ಟು ಕಾರಣಗಳು…

- ಪದ್ಮರಾಜ ದಂಡಾವತಿ

ಕನ್ನಡ ಸಾಹಿತಿಗಳು ಹಾಗೂ ಚಳವಳಿಗಾರರು ಅಪ್ಪಟ ಅಪ್ರಾಮಾಣಿಕರು. ಅವರು ಬರೆದ ಪುಸ್ತಕವನ್ನು ಅವರ ಮಕ್ಕಳು ಓದುತ್ತಾರೆಯೇ ಎಂದು ನೀವು ಕೇಳಿ ನೋಡಿ. ಖಂಡಿತ ಓದುವುದಿಲ್ಲ. ನಾನು ಪದವಿ ವರೆಗೆ ಹಟ ಹಿಡಿದು ಓದಿದ್ದು ಕನ್ನಡ ಮಾಧ್ಯಮದಲ್ಲಿ. ಹಾಗೆ ನಾನು ಕನ್ನಡ ಮಾಧ್ಯಮದಲ್ಲಿ ಹಟ ಹಿಡಿದು ಓದಲು ಕುವೆಂಪು, ದೇಜಗೌ ಮತ್ತು ಹಾ.ಮಾ.ನಾಯಕರು ಕಾರಣ. ಆದರೆ, ನಾನು 60ರ ದಶಕದಲ್ಲಿ ಓದಿದ ನಮ್ಮ ಊರಿನ ಕನ್ನಡ ಪ್ರಾಥಮಿಕ ಶಾಲೆ ಈಗಲೂ ಅದೇ ಹಳೆಯ ಕಟ್ಟಡದಲ್ಲಿ ನಡೆಯುತ್ತಿದೆ. ಅಲ್ಲಿ ಓದುವ […]

ಕನ್ನಡದ ಹೊಸ ತೋಂಡಿತನ

- ರಂಗನಾಥ ಕಂಟನಕುಂಟೆ

ಕನ್ನಡ ಸಮುದಾಯ ಮತ್ತೆ ಅಕ್ಶರದಿಂದ ನವಮೌಖಿಕತೆಯ ಕಡೆಗೆ ಚಲಿಸತೊಡಗಿದೆ ಎನ್ನಿಸುತ್ತದೆ. ಕನ್ನಡದ ಓದು, ಬರೆಹ ಮತ್ತು ಕನ್ನಡದ ಬಳಕೆಗಳು ಕೆಲವರಿಗೆ ಮಾತ್ರ ಎನ್ನುವಂತಾಗಿದೆ. ತಂತ್ರಜ್ಞಾನ ಮತ್ತು ಹೊಸ ದೃಶ್ಯಮಾಧ್ಯಮಗಳು ಬಹುಸಂಖ್ಯಾತ ಕನ್ನಡಿಗರನ್ನು ಮತ್ತೆ ‘ಅನಕ್ಶರತೆ’ಯ ಕಡೆಗೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಇದು ಕನ್ನಡವನ್ನು ನಮ್ಮ ‘ನಾಳೆ’ಗಳಿಗೂ ಉಳಿಸಿಕೊಳ್ಳಲು ಬಯಸುವವರ ಎದುರು ಹೊಸ ಸವಾಲನ್ನು ಮುಂದಿಟ್ಟಿದೆ. ಕಳೆದ ಕೆಲವು ದಶಕಗಳ ಹಿಂದೆ ಶಿಕ್ಶಣದ ಮುಖ್ಯ ಉದ್ದೇಶಗಳಲ್ಲಿ ‘ಅಕ್ಶರ’ ಕಲಿಯುವುದು ಮತ್ತು ‘ಓದಿನ’ ಕಸುವನ್ನು ಪಡೆಯುವುದು ಮುಖ್ಯ ಗುರಿಯಾಗಿತ್ತು. ಓದು ಮತ್ತು […]

ತೆಲುಗನ್ನಡಿಗರ ನಿರೀಕ್ಷೆಗಳು

- ಎಂ.ಗಿರಿಜಾಪತಿ

63ನೇ ರಾಜ್ಯೋತ್ಸವದ ಸಂದರ್ಭದಲ್ಲಿಯೂ ನೆರೆರಾಜ್ಯ ಆಂಧ್ರಪ್ರದೇಶದೊಳಗಿನ ಕನ್ನಡ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅನಾಥ ಪ್ರಜ್ಞೆ ಅನುಭವಿಸುವ ಸ್ಥಿತಿ ಇದೆ. ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರ ಕರ್ನಾಟಕ ಆಂಧ್ರದ ಎರಡೂ ಗಡಿಗಳಲ್ಲಿ ತೆಲುಗನ್ನಡಿಗರು ಸಹಜವಾಗಿಯೇ ಇದ್ದಾರೆ. ಇವರಲ್ಲಿ ಅನೇಕರು ಕನ್ನಡ ಮೂಲದವರೇ ಆಗಿದ್ದು ಕನ್ನಡವನ್ನು ಅಪ್ಪಟವಾಗಿ ಪ್ರೀತಿಸುವವರಾಗಿದ್ದಾರೆ. ಇವರಲ್ಲಿ ಕನ್ನಡ ಭಾಷೆ ಮಾತ್ರವಲ್ಲ ಆಚಾರ-ವಿಚಾರ, ಸಂಸ್ಕೃತಿಯೂ ನೆಲೆನಿಂತಿದೆ. ಇವರು ಅತ್ಯಂತ ಆಪ್ತತೆಯಿಂದ ತಮ್ಮ ಮಕ್ಕಳನ್ನು ಈ ಭಾಗದ ಕನ್ನಡ ಶಾಲೆಗಳಿಗೆ ಸೇರಿಸುತ್ತಾರೆ. ಆಂಧ್ರಪ್ರದೇಶ ಇಬ್ಭಾಗಕ್ಕಿಂತ ಮುಂಚಿತ ಗಡಿ ಜಿಲ್ಲೆಗಳಾದ […]

ಬಾಂಗ್ಲಾ ಮಾದರಿ ಆಗಬಾರದೇಕೇ?

- ಹುರುಕಡ್ಲಿ ಶಿವಕುಮಾರ

ಪಾಕಿಸ್ತಾನ ತನ್ನ ಧಾರ್ಮಿಕ ಹಿನ್ನೆಲೆಯಲ್ಲಿ ಪೂರ್ವ ಪಾಕಿಸ್ತಾನದ ಮೇಲೆ ಉರ್ದು ಭಾಷೆಯನ್ನು ಹೇರಲು ಹೊರಟಾಗ ಆ ದೇಶದ ಜನ ತಮಗೆ ಧರ್ಮಕ್ಕಿಂತ ಭಾಷೆ ಮುಖ್ಯವೆಂದು ಹೋರಾಡಿ ಸ್ವತಂತ್ರ ಬಾಂಗ್ಲಾದೇಶ ಕಟ್ಟಿಕೊಂಡರು. ಇದು ವಿಶ್ವಕ್ಕೇ ಮಾದರಿ. ಪ್ರಾಥಮಿಕ ಶಿಕ್ಷಣದ ಬಗ್ಗೆ ಚರ್ಚಿಸಿರುವುದು ತುಂಬ ಸರಿಯಾಗಿದೆ. ನನ್ನ ದೃಷ್ಟಿಯಲ್ಲಿ ಇದು ರೈತರ ಆತ್ಮಹತ್ಯೆ ಕುರಿತಾದ ಚಿಂತನೆಯಷ್ಟೇ ಗಂಭೀರ ಮತ್ತು ಮುಖ್ಯ. ಏಕೆಂದರೆ ‘ಯಾವುದೇ ಸಂಸ್ಕೃತಿಯನ್ನು ನಾಶಮಾಡಬೇಕೆಂದಿದ್ದರೆ ಅದಕ್ಕಾಗಿ ಯುದ್ಧ ಮಾಡಬೇಕಿಲ್ಲ; ಬದಲಾಗಿ ಆ ಜನಸಮುದಾಯ ಮಾತನಾಡುವ ಭಾಷೆಯನ್ನು ನಾಶಗೊಳಿಸಿದರೆ ಸಾಕು’ […]

1 28 29 30