ಎಲ್ಲರನ್ನೂ ಸಂಪ್ರೀತಿಗೊಳಿಸಿದ ಕೇಂದ್ರದ ಅರೆ-ಬಜೆಟ್

-ಮೋಹನದಾಸ್.

ಎಲ್ಲರನ್ನೂ ಸಂಪ್ರೀತಿಗೊಳಿಸಿದ  ಕೇಂದ್ರದ ಅರೆ-ಬಜೆಟ್
-ಮೋಹನದಾಸ್.

ಪೂರ್ಣ ಪ್ರಮಾನದ ಕೇಂದ್ರ ಬಜೆಟ್ ಮಂಡನೆಯನ್ನು ವಿರೋಧ ಪಕ್ಷಗಳು ಅಡ್ಡಿಪಡಿಸಿದ ಕಾರಣದಿಂದ ಕೇಂದ್ರದ ಮೋದಿ ಸರ್ಕಾರ “ರೋಗಿ ಬಯಸಿದ್ದೂ ಹಾಲುಅನ್ನ, ವೈದ್ಯ ಹೇಳಿದ್ದೂ ಹಾಲುಅನ್ನ” ಎನ್ನುವಂತೆ ಲಾಭ ಪಡೆದುಕೊಂಡಿದೆ. ಪೂರ್ಣ ಬಜೆಟ್‍ನಲ್ಲಿ ನೀಡಬೇಕಿರುವ ಕಹಿಗುಳಿಗೆಯನ್ನು ಸದ್ಯಕ್ಕೆ ಮುಂದೂಡಿ, ಚುನಾವಣೆಗೆ ತಕ್ಕಷ್ಟು ಸಿಹಿಗುಳಿಗೆ ನೀಡುವ ಪ್ರಯತ್ನದಲ್ಲಿ ಸಫಲವಾಗಿದೆ. ಅನಾರೋಗ್ಯ ಕಾರಣ ವಿತ್ತಮಂತ್ರಿ ಅರುಣ್ ಜೈಟ್ಲಿಯವರ ಅನುಪಸ್ಥಿತಿಯಲ್ಲಿ ಪೀಯುಷ್ ಗೋಯಲ್ ಕೇಂದ್ರಸರ್ಕಾರದ ಇಂಟೆರಿಮ್ ಬಜೆಟ್ ಮಂಡಿಸಿ ಎಲ್ಲರ ಮನ ಗೆದ್ದಿದ್ದಾರೆ. ಮುಖ್ಯವಾಗಿ ರೂ.5,00,000 ಗಳವರೆಗೆ ಆದಾಯ ತೆರಿಗೆಯಿಲ್ಲ. ಸಂಬಳದಾರರಿಗೆ ಸ್ಟಾಂಡರ್ಡ್ […]

ಕನ್ನಡ ಮಾಧ್ಯಮದ ಐಎಎಸ್ ಅಧಿಕಾರಿ ಉಷಾ ಪಾಡಿ

-ಶಶಿಧರ ಎಸ್.ಎಂ.

ಕನ್ನಡ ಮಾಧ್ಯಮದ ಐಎಎಸ್ ಅಧಿಕಾರಿ ಉಷಾ ಪಾಡಿ
-ಶಶಿಧರ ಎಸ್.ಎಂ.

ಬಳ್ಳಾರಿ ಜಿಲ್ಲೆ ಹೊಸಪೇಟೆಯ ಉಷಾ ಪಾಡಿ ಕನ್ನಡ ಮಾಧ್ಯಮದಲ್ಲಿ ಓದಿ ಐಎಎಸ್ ಮಾಡಿದ್ದಾರೆ. ಈಗ ಕೇಂದ್ರ ವಿಮಾನಯಾನ ಇಲಾಖೆಯ ಜಂಟಿಕಾರ್ಯದರ್ಶಿ. ಜನಸಾಮಾನ್ಯರೂ ವಿಮಾನದಲ್ಲಿ ಸಂಚರಿಸುವಂತಾಗಬೇಕೆಂದು ಇವರು ರೂಪಿಸಿದ `ಉಡಾನ್’ ಯೋಜನೆ ಕೇಂದ್ರ ಸರಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ತಾಂತ್ರಿಕ ವಿದ್ಯಾರ್ಥಿಗಳಿಗೆ ನಾಗರಿಕ ಸೇವೆಯಲ್ಲಿ ಅವಕಾಶಗಳು’ ಕುರಿತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉಷಾ ಪಾಡಿ ಅವರು ಆಡಿದ ಮಾತುಗಳು ಸ್ಪರ್ಧಾರ್ಥಿಗಳಿಗೆ ದಾರಿದೀಪದಂತಿವೆ. ಐಎಎಸ್ ಪರೀಕ್ಷೆಗೆ ಯಾವ ವಿಷಯ ಆಯ್ದುಕೊಳ್ಳಬೇಕು? […]

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ.

ತುರ್ತು ಪರಿಸ್ಥಿತಿ ಘೋಷಿಸಿದ ಡಾನಲ್ಡ್ ಟ್ರಂಪ್ ಅಮೆರಿಕೆಯ ಅಧ್ಯಕ್ಷ ಡಾನಲ್ಡ್ ಟ್ರಂಪ್ ಮತ್ತು ಅಮೆರಿಕ ಶಾಸಕಾಂಗದ ಕೆಳಮನೆ ‘ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್’ ನಡುವಿನ ಕಾಳಗ ತಾರಕಕ್ಕೇರಿದೆ. 2018ರ ನವೆಂಬರ್ ಚುನಾವಣೆಯವರೆಗೆ ಇದೇ ಕೆಳಮನೆಯಲ್ಲಿ ಟ್ರಂಪ್‍ರವರ ರಿಪಬ್ಲಿಕನ್ ಪಕ್ಷದ ಬಹುಮತವಿತ್ತು. ಆದರೆ ಎರಡು ವರ್ಷಕ್ಕೊಮ್ಮೆ ಮೂರನೇ ಒಂದರಷ್ಟು ಸದಸ್ಯರು ಚುನಾಯಿತರಾಗುವ ಈ ಸದನದಲ್ಲಿ ರಿಪಬ್ಲಿಕನ್ ಪಕ್ಷ ಬಹುಮತ ಕಳೆದುಕೊಂಡಿತ್ತು. 2019-21ರ ಎರಡು ವರ್ಷಗಳ ಅವಧಿಯಲ್ಲಿ ಡೆಮಾಕ್ರೆಟಿಕ್ ಪಕ್ಷ 235ಕ್ಕೆ 199ರ ಬಹುಮತ ಸಾಬೀತು ಪಡಿಸಿ ಸದನದ ಮೇಲೆ ತನ್ನ […]

ಇ-ಜ್ಞಾನ

-ಟಿ.ಜಿ.ಶ್ರೀನಿಧಿ.

ಟೆಕ್ ಸುದ್ದಿ ಮೊಬೈಲಿನಲ್ಲಿರಲಿ, ಕಂಪ್ಯೂಟರಿನಲ್ಲಿರಲಿ, ಯಾವುದೇ ಜಾಲತಾಣ -ಅಂದರೆ ವೆಬ್‍ಸೈಟ್- ಅನ್ನು ತೆರೆಯಲು ಬ್ರೌಸರ್ ತಂತ್ರಾಂಶ ಬೇಕೇಬೇಕು. ಒಂದು ಕಾಲದಲ್ಲಿ ಕಂಪ್ಯೂಟರ್ ಬಳಕೆದಾರರು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದ ಬ್ರೌಸರ್ ಮೈಕ್ರೋಸಾಫ್ಟ್ ಸಂಸ್ಥೆಯ ಇಂಟರ್‍ನೆಟ್ ಎಕ್ಸ್‍ಪ್ಲೋರರ್. 2003ರ ವೇಳೆಗೆ ಪ್ರಪಂಚದ ಬ್ರೌಸರ್ ಮಾರುಕಟ್ಟೆಯ ಶೇ.95 ಪಾಲು ಇಂಟರ್‍ನೆಟ್ ಎಕ್ಸ್‍ಪ್ಲೋರರ್ ಹಿಡಿತದಲ್ಲಿತ್ತು. ಆನಂತರ ಗೂಗಲ್ ಕ್ರೋಮ್ ಹಾಗೂ ಮೊಜಿಲ್ಲಾ ಫೈರ್‍ಫಾಕ್ಸ್‍ನಂತಹ ಹೊಸ ತಂತ್ರಾಂಶಗಳ ಎದುರು ಹಿನ್ನೆಡೆ ಕಂಡ ಈ ಬ್ರೌಸರ್‍ಗೆ ಬೆಂಬಲ ನೀಡುವುದನ್ನು ನಾಲ್ಕು ವರ್ಷಗಳ ಹಿಂದೆ ನಿಲ್ಲಿಸಲಾಗಿತ್ತು. […]

ನೆರೆಹೊರೆಯ ಹಿಂದೂ ನಿರಾಶ್ರಿತರಿಗೆ ಹಿಂಬಾಗಿಲು ತೆರೆಯಬಯಸಿದ ಪೌರತ್ವ ಮಸೂದೆ

-ಮಾಧವ ಶೆಣೈ.

ನೆರೆಹೊರೆಯ ಹಿಂದೂ ನಿರಾಶ್ರಿತರಿಗೆ ಹಿಂಬಾಗಿಲು ತೆರೆಯಬಯಸಿದ  ಪೌರತ್ವ ಮಸೂದೆ
-ಮಾಧವ ಶೆಣೈ.

ದೇಶದ ಕಾನೂನಿನ ಮುಂದೆ ಎಲ್ಲಾ ಧರ್ಮೀಯರನ್ನು ಸರಿಸಮಾನವಾಗಿ ನೋಡುವ ನಿಯಮವಿದೆ. ಆದರೆ ಇದೀಗ ಮೊಟ್ಟಮೊದಲ ಬಾರಿಗೆ ಹಿಂದೂ ನಿರಾಶ್ರಿತರಿಗೆ ಭಾರತವೇ ಕಟ್ಟಕಡೆಯ ತಾಣವೆಂದು ಹೇಳಿಕೊಂಡು ಭಾರತದ ಲೋಕಸಭೆಯು ತನ್ನ ಹಿಂದೂ ರಾಷ್ಟ್ರೀಯತೆಯನ್ನು ಒಪ್ಪಿಕೊಂಡಿದೆ. ಲೋಕಸಭೆಯಲ್ಲಿ ಪಾರಿತವಾಗಿದ್ದ ತ್ರಿವಳಿ ತಲಾಖ್ ನಿಷೇಧ ಮಸೂದೆ ಹಾಗೂ ಪೌರತ್ವ (ತಿದ್ದುಪಡಿ) ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ಎತ್ತಿಕೊಳ್ಳದಂತೆ ಮಾಡುವಲ್ಲಿ ವಿಪಕ್ಷಗಳು ಜಯಗಳಿಸಿವೆ. ಭಾರತೀಯ ಜನತಾ ಪಕ್ಷದ ಗರಿಮೆಯ ಈ ಎರಡೂ ಕಾನೂನು ತಿದ್ದುಪಡಿಗಳನ್ನು ಚರ್ಚೆಗೆ ಹಾಗೂ ನಿರ್ಣಯಕ್ಕೆ ಎತ್ತಿಕೊಳ್ಳದಂತೆ ಅಡೆತಡೆಯೊಡ್ಡಿ ಕಾಂಗ್ರೆಸ್ ಮತ್ತಿತರ […]

ಅದೆಲ್ಲಿ ಮಾಯವಾಗಿದ್ದೀರಿ, ಬನ್ನಿ ನ್ಯಾಯ ಕೊಡಿಸೋಣ

-ವಿರುಪಾಕ್ಷಿ ಕಡ್ಲೆ, ಕಲ್ಲುಕಂಬ

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರಸ್ತೆಯ ಬದಿಯಲ್ಲಿ ಕೈಹೊತ್ತು ಕುಳಿತ ಮಣ್ಣಿನ ಮಕ್ಕಳ ಆಕ್ರಂದನದ ಕೂಗಿದು. ಕಣ್ಣಿದ್ದು ಕುರುಡಾದ ರೈತ ಸಂಘಟನೆಗಳ ಕಥೆ ಇದು. ಈ ಮಣ್ಣಿನಲ್ಲಿ ಹೋರಾಟಗಳಿಗೆ ಎಷ್ಟು ಮಹತ್ವ ಇದೆ ಎನ್ನುವುದಕ್ಕೆ ಗಾಂಧಿ ಉದಾಹರಣೆಯಾಗಿ ನಿಲ್ಲುತ್ತಾರೆ. ಇದರ ಮುಂದುವರಿದ ಭಾಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಶಿಕ್ಷಣ, ಸಂಘಟನೆ, ಹೋರಾಟ ನಮಗೆ ಅಸ್ತ್ರವೆಂದು ಹೇಳಿದ್ದರು. ಇಂತಹ ಅನೇಕರ ಚಿಂತನೆಗಳಿಂದ ಉತ್ತೇಜನಗೊಂಡು ಹುಟ್ಟಿಕೊಂಡ ಅನೇಕ ಸಂಘಟನೆಗಳಲ್ಲಿ ರೈತ ಸಂಘಟನೆ ಕೂಡ ಒಂದು. ಪ್ರಸ್ತುತ ದೇಶವ್ಯಾಪಿ ಚಾಪನ್ನು ಮೂಡಿಸಿರುವ […]

ಮಳೆಯಾಶ್ರಿತ ರೈತನ ಬದುಕು

-ಗುರುಮೂರ್ತಿ ಯರಗಂಬಳಿಮಠ

ಮಳೆಯಾಶ್ರಿತ ರೈತನ ಬದುಕು
-ಗುರುಮೂರ್ತಿ ಯರಗಂಬಳಿಮಠ

ಧಾರವಾಡ ತಾಲೂಕು ಅಮ್ಮಿನಬಾವಿ ಗ್ರಾಮದ ಕುರುಬರ ಓಣಿಯ ಈರಪ್ಪ ಬಸಪ್ಪ ಕುರಿ ಕುಟುಂಬ ಸಂಪೂರ್ಣ ಕೃಷಿಯನ್ನೇ ಅವಲಂಬಿಸಿದೆ. ಈರಪ್ಪನೂ ಒಳಗೊಂಡಂತೆ ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿ ಕುಟುಂಬದಲ್ಲಿ ಒಟ್ಟು 4 ಜನರಿದ್ದಾರೆ. ಈರಪ್ಪನ ತಂದೆ ಹೆಸರು: ಬಸಪ್ಪ, ತಾಯಿ: ಹನುಮವ್ವ. ತಂದೆ-ತಾಯಿ ಇಬ್ಬರೂ ತೀರಿಕೊಂಡಿದ್ದಾರೆ. ಈ ಕುಟುಂಬವು ಕುರುಬರ (ಹಾಲುಮತ)ದ ಸಮುದಾಯಕ್ಕೆ ಸೇರಿದೆ. ಕುಟುಂಬ ಮುಖ್ಯಸ್ಥನಾಗಿರುವ ಈರಪ್ಪ (36 ವರ್ಷ), ಹೆಂಡತಿ ನೀಲಮ್ಮ (30 ವರ್ಷ), ಮಗ ಮಹಾಂತೇಶ (10 ವರ್ಷ) ಹಾಗೂ ಮಗಳು ಶ್ರೀದೇವಿ […]

ಇದು ನಿಜವಾದ ಹಕೀಕತ್ತು

-ಹುರುಕಡ್ಲಿ ಶಿವಕುಮಾರ

ರೈತ ಹೋರಾಟ ಇಂದು ನಿನ್ನೆಯದಲ್ಲ; ಹತ್ತನೇ ಶತಮಾನದಲ್ಲೇ ರೈತರ ಬಂಡಾಯ ದಾಖಲಾಗಿದೆ. ಇಷ್ಟು ದೀರ್ಘಕಾಲವೂ ಹೋರಾಟದಿಂದ ನ್ಯಾಯ ಪಡೆಯದ ವರ್ಗವೆಂದರೆ ಅದು ರೈತ ವರ್ಗವೇ ಆಗಿದೆ. ಗುಂಡುಸೂಜಿ, ಚಪ್ಪಲಿಯಿಂದ ಹಿಡಿದು ವಿಮಾನದವರೆಗೆ ಅದನ್ನು ತಯಾರು ಮಾಡಿದ ಕಾರ್ಖಾನೆಯ ಮಾಲೀಕರಿಗೆ ಅದರ ಬೆಲೆ ನಿಗದಿ ಮಾಡುವ ಹಕ್ಕು ಅಧಿಕಾರವಿದೆ. ಆದರೆ ಜೋಳ, ನವಣೆ ಬೆಳೆದುಕೊಡುವ ರೈತನಿಗೆ ಮಾತ್ರ ಅದರ ಬೆಲೆ ನಿಗದಿಮಾಡುವ ಹಕ್ಕು ಅಧಿಕಾರ ಏಕೆ ಇಲ್ಲ? ಇದು ಕಳೆದ ಐವತ್ತು ವರ್ಷಗಳಿಂದ ರೈತ ಹೋರಾಟಗಾರರು ಕೇಳುತ್ತಿರುವ ಪ್ರಶ್ನೆ. […]

ಊರಿಗೆ ಹೋಗುವ ಆಶಯದ ರಾಮಪ್ಪ

-ಟಿ.ಗೋವಿಂದರಾಜು

ಊರಿಗೆ ಹೋಗುವ ಆಶಯದ ರಾಮಪ್ಪ
-ಟಿ.ಗೋವಿಂದರಾಜು

ಉತ್ತರ ಕರ್ನಾಟಕದಿಂದ ವಲಸೆ ಬಂದ ಕೂಲಿಕಾರ್ಮಿಕ ಕುಟುಂಬಗಳ ಗುಡಿಸಲುಗಳನ್ನು ನಾನು ಒಬ್ಬ ಸಾಮಾಜಿಕ ಅಧ್ಯಯನಕಾರನಾಗಿ ಗಮನಿಸುತ್ತಾ ಬಂದಿದ್ದೇನೆ. ಮಕ್ಕಳನ್ನು ಶಾಲೆಗೆ ಸೇರಿಸುವುದು, ಗುಟ್ಕಾದಂತಹ ದುರಭ್ಯಾಸಗಳು ಹಾಗೂ ಬಯಲುಶೌಚದ ಅನಾರೋಗ್ಯದ ಬಗ್ಗೆ ನಾನಾಗಿ ತಿಳಿಹೇಳುವ ಕಾರಣದಿಂದಾಗಿ, ಅವರಲ್ಲಿ ಅನೇಕರ ಪರಿಚಯವೂ ನನಗಾಗಿದೆ.  ಅದೊಂದು ಸಣ್ಣ ಶೆಡ್ ಮಾದರಿ ವಸತಿ. ಅದಕ್ಕೆ ಇನ್ನೂ ವಿಳಾಸ ಬಂದಿಲ್ಲ. ಚಿಮನಿಹಿಲ್‍ನ ನೇವಿ ಬಡಾವಣೆಯ ಯಾರದೋ ಖಾಲಿ ಇದ್ದ ನಿವೇಶನದಲ್ಲಿ ಇವರು ಶೆಡ್ ಹಾಕಿಕೊಂಡಿದ್ದಾರೆ. ಇಲ್ಲಿ ವಿದ್ಯುತ್, ನೀರು, ಶೌಚಾಲಯ ವ್ಯವಸ್ಥೆಯೂ ಇಲ್ಲ. ಪಕ್ಕದ […]

ನಾಯಕರ ಮೆರವಣಿಗೆಯಲ್ಲಿ ಮರೆಯಾದ ರೈತ!

-ಬಾದಾಮಿ ಭಾಸ್ಕರ ನಾಯಕ

ಕರ್ನಾಟಕದಲ್ಲಿ ಮೊದಲಿಗಿಂತಲೂ ಹೆಚ್ಚು ರೈತಪರ ಸಂಘಟನೆಗಳು ಇವೆ. ಅತಿ ಹೆಚ್ಚು ಸಂಖ್ಯೆಯ ಕಾರ್ಯಕರ್ತರ ಪಡೆ ಇದೆ. ಆದರೂ ಈ ದಿನಮಾನಗಳಲ್ಲಿ ರೈತ ಚಳವಳಿ ತನ್ನ ಪ್ರಸ್ತುತತೆ ಕಳೆದುಕೊಳ್ಳಲು ಹಲವಾರು ಕಾರಣಗಳಿವೆ. ಸಮರ್ಥ ನಾಯಕತ್ವದ ಅಭಾವ ರೈತ ಚಳವಳಿ ತನ್ನ ಪ್ರಸ್ತುತತೆ ಕಳೆದುಕೊಳ್ಳಲು ಮುಖ್ಯ ಕಾರಣ ಸಮರ್ಥ ನಾಯಕತ್ವದ ಕೊರತೆ. ಇಂದಿನ ರೈತ ಸಂಘಟನೆಗಳ ಜಿಲ್ಲಾಧ್ಯಕ್ಷರು ಕರ್ದರ್ ಅಂಗಿ ತೊಟ್ಟು, ಭುಜದ ಮೇಲೆ ಹಸಿರು ಶಾಲು ಹಾಕಿಕೊಂಡು ವಿಐಪಿ ಕುರ್ಚಿಗಳಲ್ಲಿ ಕುಳಿತುಕೊಳ್ಳಲು ಬಯಸುತ್ತಾರೆ. ಅಲ್ಲದೆ ಇವರು ರೈತರ ಸಮಸ್ಯೆಗಳನ್ನು […]

ನರೇಂದ್ರ ಮೋದಿ ಅನಿವಾರ್ಯವೇ..? ಅನಗತ್ಯವೇ..?

ನರೇಂದ್ರ ಮೋದಿ ಅನಿವಾರ್ಯವೇ..? ಅನಗತ್ಯವೇ..? ನಾವು ಬೇಕು-ಬೇಡವೆಂದರೂ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅಧ್ಯಕ್ಷೀಯ ಮಾದರಿಯ ಆಯ್ಕೆಗೆ ವೇದಿಕೆ ಸಜ್ಜಾಗಿದೆ. 2014ರಿಂದ 2019ರವರೆಗಿನ ಎನ್‍ಡಿಎ ಸರ್ಕಾರದ ಸಫಲತೆ-ವಿಫಲತೆಗಳನ್ನು ಅಳೆಯುವ ಮತ್ತು ಮುಂದಿನ ಐದು ವರ್ಷಗಳಲ್ಲಿ ನಮಗೆ ಯಾವ ಕೇಂದ್ರ ಸರ್ಕಾರ ಬೇಕೆನ್ನುವ ಚರ್ಚೆಗಿಂತಲೂ, ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೋ ಬೇಡವೋ ಎಂಬುದೇ ಚುನಾವಣೆಯ ವಿಷಯವಸ್ತುವಾಗಿದೆ. 2019ರ ಚುನಾವಣೆಯನ್ನು ವ್ಯಕ್ತಿ ಕೇಂದ್ರಿತ ಸ್ಪರ್ಧೆಯಾಗಿ ಮಾಡುವಲ್ಲಿಯೇ ಆಡಳಿತ ಪಕ್ಷ ತನ್ನ ಸಫಲತೆಯನ್ನು ಕಾಣಬಯಸಿದರೆ, ಮೋದಿ ವಿರೋಧಿ ಒಕ್ಕೂಟ ರಚನೆಯಲ್ಲಿ ವಿರೋಧ ಪಕ್ಷಗಳು […]

ದೊಡ್ಡ ಕುಟುಂಬದ ಒಡೆಯ ಘೋರ್ಪಡೆ

-ಪ್ರೊ.ಭಾರ್ಗವ ಎಚ್.ಕೆ.

ದೊಡ್ಡ ಕುಟುಂಬದ ಒಡೆಯ ಘೋರ್ಪಡೆ
-ಪ್ರೊ.ಭಾರ್ಗವ ಎಚ್.ಕೆ.

ಈ ಕುಟುಂಬದ ಚರಾಸ್ತಿ ಹಾಗೂ ಸ್ಥಿರಾಸ್ತಿ ಎಂದರೆ 3 ಬೈಕುಗಳು, ಒಂದು ಹಮಾಲರ ಆಶ್ರಯ ಮನೆ. ಗದಗ ಪಟ್ಟಣದ ಹಮಾಲರ ಕಾಲೊನಿಯಲ್ಲಿ ವಾಸವಾಗಿರುವ 70 ವರ್ಷದ ಹನುಮಂತಪ್ಪ ರಾಮಪ್ಪ ಆರ್ಯೇರ ಉರ್ಫು ಘೋರ್ಪಡೆ ಅವರದು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಹೊಂದಿರುವ ದೊಡ್ಡ ಕುಟುಂಬ. ಹಿಂದೂ ಮರಾಠ ಸಮುದಾಯದ ಇವರ ಮೂಲ ಊರು ಕುಷ್ಟಗಿ ತಾಲೂಕ ತಾವರಗೆರೆ ಹೋಬಳಿಯ ಉಮಳಿ ರಾಂಪುರ. ಸದ್ಯ ಇವರ ಕುಟುಂಬ ಹಮಾಲರ ಕಾಲನಿ, ಮನೆ ನಂಬರ್ 380, ಹಾತಲಗೇರಿ ರಸ್ತೆ, ಗದಗ-582101 ಇಲ್ಲಿ […]

ಆರ್ಥಿಕ ಹೊರೆ ಇಲ್ಲದ ರಫಿ

-ಎಚ್.ಎಸ್.ಸಚ್ಚಿತ್

ಆರ್ಥಿಕ ಹೊರೆ ಇಲ್ಲದ ರಫಿ
-ಎಚ್.ಎಸ್.ಸಚ್ಚಿತ್

ಮಹಮದ್ ರಫಿ ಯಾವುದೇ ಬ್ಯಾಕಿನಿಂದ ಸಾಲ ಅಥವಾ ಕೈಸಾಲ, ಮೀಟರ್ ಬಡ್ಡಿ ಸಾಲದ ಸಹವಾಸವಿಲ್ಲದೆ ವ್ಯವಹರಿಸುತ್ತಿದ್ದಾರೆ. ಹುಣಸೂರು ಪಟ್ಟಣದ ಹಣ್ಣಿನ ವ್ಯಾಪಾರಿ ಮಹಮದ್ ರಫಿ (38) ಕಳೆದ 20 ವರ್ಷದಿಂದಲೂ ಫುಟ್ ಪಾತಿನಲ್ಲಿ ಹಣ್ಣು ವ್ಯಾಪಾರ ಕಾಯಕದಲ್ಲಿ ಸಂಪಾದಿಸಿ ಬದುಕು ಕಟ್ಟಿಕೊಳ್ಳುವ ದಿಕ್ಕಿನಲ್ಲಿ ಸಾಗುತ್ತಿರುವ ಮಧ್ಯ ವಯಸ್ಸಿಗ. ಈತ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾನೆ. 7ನೇ ತರಗತಿಗೆ ವ್ಯಾಸಂಗ ಮೊಟಕುಗೊಳಿಸಿಕೊಂಡ ರಫಿ, ತನ್ನ ಮಕ್ಕಳನ್ನು ಓದಿಸಬೇಕು ಎಂಬ ಹಂಬಲದಲ್ಲಿದ್ದಾನೆ. ಪುತ್ರ ಮಹಮದ್ ತೋಫಿಕರ್ ಸರ್ಕಾರಿ […]

ಮಗನ ಶಿಕ್ಷಣಕ್ಕೆ ಹಣದ ಕೊರತೆ

-ಆರ್.ಲಾವಣ್ಯ

ತಂದೆಯ ಆಸ್ಪತ್ರೆಯ ಖರ್ಚಿಗೆ ಉಳಿತಾಯದ ಹಣ ಸಾಲದೇ ಕೆಲ ಚರಾಸ್ತಿಗಳನ್ನು ಮಾರಾಟ ಮಾಡಬೇಕಾಯಿತು. ಇಷ್ಟು ಹಣ ವೆಚ್ಚ ಮಾಡಿದರೂ ತಂದೆ ಉಳಿಯಲಿಲ್ಲ. ಮಧುಗಿರಿಯ 44 ವರ್ಷದ ಎಂ.ಎಸ್.ರಘುನಾಥ್ ಈ ಮನೆಯ ಯಜಮಾನ. ಇವರ ತಂದೆ 68 ವರ್ಷದ ಎಂ.ಸತ್ಯನಾರಾಯಣ ಶೆಟ್ಟಿ ಇತ್ತೀಚೆಗಷ್ಟೇ ಅನಾರೋಗ್ಯದಿಂದ ನಿಧನರಾಗಿದ್ದಾರೆ. ತಾಯಿ 60 ವರ್ಷದ ವಿಶಾಲಾಕ್ಷಮ್ಮ, ಪತ್ನಿ 38 ವರ್ಷದ ಎಂ.ಆರ್.ಗಾಯಿತ್ರಿ, 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗ ಅಂಕಿತ್ ಅವರನ್ನು ಒಳಗೊಂಡ ಕುಟುಂಬ ಇವರದು. ಮಧುಗಿರಿಯೇ ಇವರ ಮೂಲಸ್ಥಾನವಾಗಿದೆ. ಹಿಂದೂ ಧರ್ಮದವರಾದ […]

ಚಪ್ಪರದ ಮನೆಯಲ್ಲಿ ಹೈನುಗಾರಿಕೆ

-ಮಾಲತೇಶ ಅಂಗೂರ

ಎಮ್ಮೆ-ಮೇಕೆ ಸಾಕಾಣಿಕೆಯಲ್ಲಿ ಬದುಕು ಕಟ್ಟಿಕೊಂಡ ಹಾಎಮ್ಮೆ-ಮೇಕೆ ಸಾಕಾಣಿಕೆಯಲ್ಲಿ ಬದುಕು ಕಟ್ಟಿಕೊಂಡ ಹಾವೇರಿಯ ಚಿಕ್ಕ ಕುಟುಂಬದ ವಿವರ ಇಲ್ಲಿದೆ.ವೇರಿಯ ಚಿಕ್ಕ ಕುಟುಂಬದ ವಿವರ ಇಲ್ಲಿದೆ. ಅತ್ತ ದೊಡ್ಡ ಶಹರವು ಅಲ್ಲದ, ಇತ್ತ ದೊಡ್ಡ ಹಳ್ಳಿಯು ಅಲ್ಲದ ಜಿಲ್ಲಾ ಕೇಂದ್ರ ಸ್ಥಳವಾಗಿರುವ ಹಾವೇರಿ ನಗರದ ನಾಗೇಂದ್ರನಮಟ್ಟಿಯ ಸ್ಲಂ ಪ್ರದೇಶ ನಾನಾ ಸ್ತರದ ಹತ್ತಾರು ಸಾವಿರ ಜನತೆಗೆ ಆಶ್ರಯ ನೀಡಿದೆ. ಈ ಪ್ರದೇಶದಲ್ಲಿ ಕಳೆದ ಎರಡು ದಶಕಗಳ ಹಿಂದೆ ರಮೇಶ ಹ್ಯಾಡ್ಲ, ಶಶಿಕಲಾ ಹ್ಯಾಡ್ಲ್ ದಂಪತಿ ತಮಗೆ ಸಿಕ್ಕ ಆಶ್ರಯ ನಿವೇಶನದಲ್ಲಿ […]

ಡಿಲ್ಲಿಗೆ ಹೋದರೂ ಡೊಳ್ಳಿಗದೇ ಪೆಟ್ಟು!

-ಚಂಸು ಪಾಟೀಲ

ಅಪ್ಪನ ಕೃಷಿಯ ಹೊರತಾಗಿಯೂ ನಾವು ಮೂವರೂ ಕೃಷಿಕಾರ್ಮಿಕರಾಗಿದ್ದೇವೆ. ಆದಾಗ್ಯೂ ಇದು ನಮ್ಮ ಪರಿಸ್ಥಿತಿ; ಇಷ್ಟರಲ್ಲೆ ಆರಾಮವಿದ್ದೇವೆ. ಮಕ್ಕಳ ಓದು, ಉದ್ಯೋಗ, ಮನೆ.. ಭವಿಷ್ಯ ಎಂತೇನೋ ಗೊತ್ತಿಲ್ಲ. ಅವನ ಹೆಸರು ಮಂಜುನಾಥ. ಆತ ಹೇಳಿದ್ದು: ‘ಪಿಯುಸಿ ನಂತರ ಮುಂದೆ ಓದುವ ಆಸೆಯೇನೋ ಇತ್ತು. ಆದರೆ, ಓದಲಾಗಲಿಲ್ಲ. ಬದುಕಿನ ಬಗ್ಗೆ ಏನೆಲ್ಲ ಕನಸುಗಳಿದ್ದವು. ಅವು ಕನಸಾಗಿಯೇ ಉಳಿದವು. ಯಾವುದೋ ಒಂದು ಅವಕಾಶ ಅನಿರೀಕ್ಷಿತ ಬದಲಾವಣೆ ತಂದೀತು ಎಂಬ ನಿರೀಕ್ಷೆಯೂ ಹುಸಿಯಾಯಿತು’. ಇಂಥ ಮಾತು ಆಡುವಾಗಲೂ ಅವನಲ್ಲಿ, ದುಃಖವಾಗಲಿ, ಬೇಸರವಾಗಲಿ ಇರಲಿಲ್ಲ. […]

ಚಿಕ್ಕ ಚೊಕ್ಕ ಕುಟುಂಬ

-ವಿದ್ಯಾ ವೆಂಕಟೇಶ್

ಈ ಕುಟುಂಬ ಯಾವುದೇ ಅಪೇಕ್ಷೆಗಳನ್ನು ಹೊಂದಿಲ್ಲ. ಕುಟುಂಬದವರೆಲ್ಲ ಆರೋಗ್ಯವಂತರಾಗಿರಬೇಕೆಂಬುದು ಇವರ ಆಶಯ. ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕು, ಹುಲಿಕೆರೆ ಗ್ರಾಮದ 54 ವರ್ಷದ ಪ್ರಸಾದ್ ಕುಟುಂಬದ ಯಜಮಾನ. ಹೆಂಡತಿ 40 ವರ್ಷದ ಶಿವಮ್ಮ ಹಾಗೂ ಇಬ್ಬರು ಗಂಡು ಮಕ್ಕಳ ಚಿಕ್ಕ ಕುಟುಂಬ ಇವರದು. ಹಿರಿಯ ಮಗ ಯಶವಂತ 13 ವರ್ಷದವನಾಗಿದ್ದು, 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ಎರಡನೆಯ ಮಗ ಪ್ರವೀಣ 11 ವರ್ಷದವನಿದ್ದು 6ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇವರಿಗೆ ಯಾರೂ ಅವಲಂಬಿತರಿಲ್ಲ; ಚಿಕ್ಕ-ಚೊಕ್ಕ ಕುಟುಂಬ. ಪ್ರಸಾದ್ ರೂ.2000 ಮನೆ […]

ಗಿಡ್ಡ ಕಂಬಳಿ ಕಾಲಿಗೆಳೆದರೆ ತಲೆಗಿಲ್ಲ!

-ಪ.ರಾಮಕೃಷ್ಣ ಶಾಸ್ತ್ರಿ

ಗಿಡ್ಡ ಕಂಬಳಿ ಕಾಲಿಗೆಳೆದರೆ ತಲೆಗಿಲ್ಲ!
-ಪ.ರಾಮಕೃಷ್ಣ ಶಾಸ್ತ್ರಿ

ಕೊರತೆಗಳ ಎಲ್ಲ ದುಃಖವನ್ನೂ ಮರೆಸುವ ನಿರಂತರ ನಗುವೇ ಜಿನ್ನಪ್ಪ ಪೂಜಾರಿಯವರ ಆಸ್ತಿಯಾಗಿದ್ದರೂ ಅದನ್ನು ಮೀರಿಸಿದ ನೋವಿನ ಹೊಳಹು ನಗೆಯ ನಡುವೆ ಚಿಮ್ಮುತ್ತದೆ. ಇವರು ಜಿನ್ನಪ್ಪ ಪೂಜಾರಿ. ಅರುವತ್ನಾಲ್ಕರ ಹರಯ. ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಗಾಂಧಿನಗರದಲ್ಲಿ ಅವರ ವಾಸ. ಒಂದು ಕಾಲದಲ್ಲಿ ತಾಳೆಮರವೇರಿ ಕಳ್ಳು ಇಳಿಸಿ ಬದುಕುತ್ತಿದ್ದ ಬಿಲ್ಲವ ಜನಾಂಗ ಅವರದು. ಸರಕಾರದ ನೀತಿಯಿಂದಾಗಿ ಈ ಗ್ರಾಮೀಣ ಕಸುಬನ್ನು ಹಲವು ಕಾನೂನು ಕಟ್ಟಳೆಗಳು ಪೀಡಿಸಿದ ಪರಿಣಾಮ ವೃತ್ತಿ ಅಳಿವಿನಂಚು ಸೇರಿತು. ಮುಕ್ತವಾದ ಸೇಂದಿ ಮಾರಾಟಕ್ಕೂ ಕಾಯಿದೆಯ ಕಬಂಧ […]

ಸಂಪಾದಕೀಯ

ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳೀಮನೆಯ ಬಾಗಿಲಿಗೆ ‘ನಾಳೆ ಬಾ’ ಎಂದು ಸುಣ್ಣದ ಕಲ್ಲಿನಲ್ಲೋ, ಕರಕಲು ಇದ್ದಿಲಿನಿಂದಲೋ ಗೀಚುತ್ತಿದ್ದೆವು. ನಡುರಾತ್ರಿ ಬಂದು ಕದ ತಟ್ಟುವ ದೆವ್ವ ಈ ಸಂದೇಶವನ್ನು ಓದಿ ಹಿಂದಿರುಗಿ ಹೋಗಲಿ, ಹೋಗುತ್ತದೆ ಎಂಬ ನಂಬಿಕೆ ಈ ಕ್ರಿಯೆಯ ಹಿಂದಿತ್ತು. ಕೇಡುಗಳಿಂದ ತಪ್ಪಿಸಿಕೊಳ್ಳಲು ಹಳ್ಳಿಗರು ತಮ್ಮದೇ ಆದ ರೀತಿಯಲ್ಲಿ ಅತಿಯಾದ ಮುಗ್ಧತೆ, ತುಸು ಬುದ್ಧಿ ಬೆರೆಸಿ ಹೂಡುವ ಸರಳ ತಂತ್ರಗಳಿಗೆ ಇದೊಂದು ನಿದರ್ಶನ. ದೆವ್ವ ಇದೆಯೇ, ಅದು ಅಕ್ಷರಜ್ಞಾನ ಹೊಂದಿದೆಯೇ, ಅದಕ್ಕೆ ಕನ್ನಡ ಬರುತ್ತದೆಯೇ ಎಂಬ ಪ್ರಶ್ನೆಗಳಿಗೆ […]