ಸಮನ್ವಯ ಸಾಧ್ಯವೇ?

ಸಮನ್ವಯ ಸಾಧ್ಯವೇ?

ಸಂಪಾದಕ ಆ ತಾಯಿ ನಗರದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಮಗನನ್ನು ನೋಡಲು ತವಕಿಸುತ್ತಿದ್ದಳು. ಮಗ ಮೊದಲ ಬಾರಿ ತಂದೆತಾಯಿ ಬಿಟ್ಟು ಹೊರಗೆ ಹೋಗಿದ್ದ. ಪ್ರತಿಯೊಂದಕ್ಕೂ ತಾಯಿಯನ್ನೇ ಅವಲಂಬಿಸಿದ್ದ, ಮೀಸೆ ಮೂಡಿದರೂ ಅಮ್ಮನ ಸೆರಗು ಬಿಡದ, ಮೃದು ಸ್ವಭಾವದ ಮಗ ಅಪರಿಚಿತ ಊರು-ಜನರ ಜೊತೆ ಹೇಗೆ ಹೊಂದಿಕೊಳ್ಳುವನೋ ಎಂಬ ಆತಂಕ ಆಕೆಯದು. ಆತ ಆಗಾಗ ದೂರವಾಣಿ ಕರೆ ಮಾಡಿ ಅಮ್ಮನಿಗೆ ಧೈರ್ಯ ತುಂಬುತ್ತಾನಾದರೂ ಅಮ್ಮನ ಅಳುಕು ತುಳುಕುತ್ತಲೇ ಇತ್ತು; ಅವಳ ಅಂತರಂಗದಲ್ಲಿ ಅಂಕೆಗೆ ಸಿಗದ ಆತಂಕ, ಅದುಮಿಡಲು ಆಗದ ದುಗುಡ. […]

ಬೆಂಗಳೂರಿನಲ್ಲಿ ತೊಗಲುಬೊಂಬೆ ಪ್ರದರ್ಶನ

ಬೆಂಗಳೂರಿನಲ್ಲಿ ತೊಗಲುಬೊಂಬೆ ಪ್ರದರ್ಶನ

ಸಮಾಜಮುಖಿ ಮಾಸಪತ್ರಿಕೆ ಬಳಗ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದ ಸಹಯೋಗದಲ್ಲಿ ಜನೆವರಿ 17 ರಂದು ಬೆಂಗಳೂರಿನಲ್ಲಿ ‘ಪಂಚವಟಿ ಪ್ರಸಂಗ’ ತೊಗಲುಬೊಂಬೆ ಪ್ರದರ್ಶನ ಏರ್ಪಡಿಸಲಾಗಿತ್ತು. ಅಂತರರಾಷ್ಟ್ರೀಯ ಖ್ಯಾತಿಯ ಹಾಸನದ ಕಲಾವಿದ ಗುಂಡುರಾಜು ಅವರ ತಂಡ ಈ ಪ್ರದರ್ಶನ ನಡೆಸಿಕೊಟ್ಟಿತು. ಜಯರಾಮ್ ರಾಯಪುರ ಅವರ ‘ಹತ್ತು ಪತ್ರಗಳು ಮತ್ತು ನಮ್ಮ ಕನಸಿನ ಗೋರಿ’ ನಾಟಕ ಕೃತಿಯನ್ನು ರಂಗ ಚಿಂತಕ ಎಚ್.ಎಸ್.ಉಮೇಶ್ ಮೈಸೂರಿನಲ್ಲಿ ಲೋಕಾರ್ಪಣೆ ಮಾಡಿದರು. ಚಿತ್ರಗಳು: ಎಸ್.ಅನಿಕೇತನ         ಚಿತ್ರಕೂಟದಿಂದ ಪಂಚವಟಿಗೆ ಬರುವ ರಾಮ, ಲಕ್ಷ್ಮಣ […]

ಬೆಂಗಳೂರಿನ ಸಂಚಾರದಟ್ಟಣೆಗೆ ಶಾಶ್ವತ ಪರಿಹಾರ ಸುಹೈಲ್ ಯೂಸುಫ್ ಕನಸುಗಳು

ಬೆಂಗಳೂರಿನ ಬ್ರಿಗೇಡ್ ರೋಡ್‍ನಲ್ಲಿ ಪಾರ್ಕಿಂಗ್ ಮಾಫಿಯಾ ಕೊನೆಗೊಳಿಸುವಲ್ಲಿ ಸುಹೈಲ್ ಯೂಸುಫ್ ಪಾತ್ರ ಗಮನಾರ್ಹ. ಬಹುತೇಕ ಬೆಂಗಳೂರು ನಗರದ ಸಂಚಾರ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಯೋಜನೆಗಳು ಯೂಸುಫ್ ಅವರಲ್ಲಿವೆ. ಸಂಚಾರದಟ್ಟಣೆ, ಸಂಚಾರದ ಸಮಸ್ಯೆಗಳನ್ನು ಗಮನಿಸುವುದು ಕುತೂಹಲದ ಸಂಗತಿಯೂ ಅಲ್ಲ, ಅಷ್ತ್ತೊಂದು ಆಸಕ್ತಿಕರವಾದ ಕ್ಷೇತ್ರವೂ ಅದಲ್ಲ. ಹಾಗಂತ ನಿರ್ಲಕ್ಷ್ಯಿಸುವ ಕ್ಷೇತ್ರವೂ ಅಲ್ಲ. ಆದರೆ ಅವು ನಗರಬದುಕಿನ ನಿತ್ಯ ಅಗತ್ಯವಾಗಿರುವುದಿರಂದ ಅಂತಹ ಗಂಭೀರ ವಿಷಯಗಳತ್ತ ಗಮನ ನೀಡುವ, ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಗಳಿಗೆ ಕೈ ಹಾಕುವ ವಿರಳ ವ್ಯಕ್ತಿಗಳಾದರೂ ಇರುವುದು ನಮ್ಮ ಅದೃಷ್ಟ. […]

ಸಂಚಾರ ದಟ್ಟಣೆಯ ‘ಬೆಂಗಳೂರು’ ಕಾರಣರಾರು?

ಗುರುಪ್ರಸಾದ ಕುರ್ತಕೋಟಿ

…ಹೀಗಾದರೆ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಆಗೇ ಆಗುತ್ತದೆ, ಮೆಟ್ರೋಗಳಲ್ಲಿ ಕೂಡಲು ಜಾಗ ಸಿಗುತ್ತದೆ, ಮನೆಗಳ ಬಾಡಿಗೆಯೂ ಕಮ್ಮಿಯಾಗುತ್ತದೆ; ರೈತರನ್ನು ಅವರ ಊರಿನಲ್ಲೇ ಉಳಿಸಿದರೆ ಈರುಳ್ಳಿಯ ಬೆಲೆಯೂ ಇಳಿಯುತ್ತದೆ! ಗುರುಪ್ರಸಾದ ಕುರ್ತಕೋಟಿ ಬೆಂಗಳೂರಿನ ಈ ಗೋಳಿಗೆ ಕಾರಣ ಯಾರು ಅಂತ ಹುಡುಕುತ್ತ ಹೊರಟರೆ ಮೊಟ್ಟಮೊದಲನೆಯದಾಗಿ ಸಿಗೋದು `ಎಲ್ಲಾ ಈ ಸಾಫ್ಟ್ವೇರ್ ನವರಿಂದಲೇ ಆಗಿದ್ದು’ ಅನ್ನುವ ಮೂದಲಿಕೆ. ಈ ಸಾಫ್ಟ್ವೇರ್ ನವರನ್ನು ಯಾವುದೋ ಅನ್ಯಗ್ರಹದ ಜೀವಿಗಳನ್ನು ನೋಡುವ ಹಾಗೆ ಜನ ನೋಡುತ್ತಾರೆ. ಅವರಿಂದಲೇ ಎಲ್ಲ ಸಮಸ್ಯೆಗಳು ಅನ್ನೋದು ತುಂಬಾ […]

ಮೆಟ್ರೊಪಾಲಿಟನ್ ನಗರಗಳಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಸುಸ್ಥಿರ ಕ್ರಮಗಳು

-ಡಾ.ಎಂ.ಎ.ಸಲೀಂ

ನಗರಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಸಂಚಾರದಟ್ಟಣೆಗೆ ಹೆಚ್ಚು ಹೆಚ್ಚು ಸವಾಲಾಗಿ ಪರಿಣಮಿಸುತ್ತಿದೆ. ವಾಹನ ನಿಲುಗಡೆಯ ಅವ್ಯವಸ್ಥಿತ ಕ್ರಮಗಳ ನಡುವೆ, ಸುಗಮ ಸಂಚಾರದ ಕನಸು ಬೆಂಗಳೂರಿನ ಪ್ರಯಾಣಿಕರಿಗೆ ಕನಸಾಗಿಯೇ ಉಳಿದಿದೆ. ಇಲ್ಲಿನ ಸಂಚಾರ ದಟ್ಟಣೆ ನಿರ್ವಹಣೆಯ ಸುಸ್ಥಿರ ಕ್ರಮಗಳು ಸಂಚಾರದ ಬಹಳಷ್ಟು ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಬಲ್ಲವು. -ಡಾ.ಎಂ.ಎ.ಸಲೀಂ ಮೋಟಾರು ವಾಹನಗಳ ಅಸಾಧಾರಣ ಬೆಳವಣಿಗೆ ಮತ್ತು ಮೆಟ್ರೋಪಾಲಿಟನ್ ನಗರಗಳಲ್ಲಿ ಹೆಚ್ಚುತ್ತಿರುವ ನಗರೀಕರಣದ ಪ್ರಮಾಣದಿಂದಾಗಿ, ನಗರ ಯೋಜನೆ ಅಧಿಕಾರಿಗಳು ಮತ್ತು ಟ್ರಾಫಿಕ್ ಪೊಲೀಸ್ರಿಗೆ ಸವಾಲೊಡ್ಡುವ ಬಹಳಷ್ಟು ಸಮಸ್ಯೆಗಳು ಹುಟ್ಟಿಕೊಂಡಿವೆ. […]

ಎನ್.ಡಿ.ಎ. ಆಕ್ರಮಣಶೀಲತೆ ತಿರುಗುಬಾಣ ಆಗಲಿದೆಯೇ?

ಎಂ.ಕೆ.ಆನಂದರಾಜೇ ಅರಸ್

ಎನ್.ಡಿ.ಎ. ಆಕ್ರಮಣಶೀಲತೆ ತಿರುಗುಬಾಣ ಆಗಲಿದೆಯೇ?
ಎಂ.ಕೆ.ಆನಂದರಾಜೇ ಅರಸ್

ಸತತವಾಗಿ ಅಧಿಕಾರಕ್ಕೆ ಬಂದಿರುವ ಎರಡನೇ ಅವಧಿಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಹೆಚ್ಚು ಆಕ್ರಮಣಶೀಲತೆಯನ್ನು ತೋರುತ್ತಿದೆ. ಸರ್ಕಾರದ ಕೆಲವು ವಿವಾದಾತ್ಮಕ ನಿರ್ಧಾರಗಳು ಅಲ್ಪಸಂಖ್ಯಾತರಲ್ಲಿ ಅಭದ್ರತೆ ಸೃಷ್ಟಿಸಿವೆ. ಅಭಿವೃದ್ಧಿ ಸರ್ಕಾರದ ಆದ್ಯತೆಯಾಗಿದೆಯೇ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಎಂ.ಕೆ.ಆನಂದರಾಜೇ ಅರಸ್ ಇಂಡಿಯಾ ಟುಡೆ ಕಾನ್‍ಕ್ಲೇವ್(2019) ಸಂವಾದದಲ್ಲಿ ರಾಹುಲ್ ಕನ್ವಲ್ ಕೇಂದ್ರ ಗೃಹ ಮಂತ್ರಿ ಅಮಿತ್ ಷಾರನ್ನು ಇಷ್ಟು ಆತುರಾತುರವಾಗಿ ಎಲ್ಲವನ್ನೂ ಏಕೆ ಮಾಡುತ್ತಿದ್ದೀರಾ ಎಂದು ಕೇಳುತ್ತಾರೆ. ಅದೊಂದು ಸಹಜ ಪ್ರಶ್ನೆಯಾಗಿತ್ತು. ಎನ್‍ಡಿಎ ಸತತವಾಗಿ ಎರಡನೆ ಬಾರಿ ಅಧಿಕಾರಕ್ಕೆ ಬಂದ ಕೇವಲ […]

ಈರುಳ್ಳಿ ಗ್ರಾಹಕರು ಮತ್ತು ರೈತರನ್ನು ಕಾಪಾಡಲು ಏನು ಮಾಡಬೇಕು?

ಅಶೋಕ್ ಗುಲಾತಿ, ಹರ್ಷ ವರ್ಧನ್

ಈರುಳ್ಳಿ ಗ್ರಾಹಕರು ಮತ್ತು ರೈತರನ್ನು ಕಾಪಾಡಲು ಏನು ಮಾಡಬೇಕು?
ಅಶೋಕ್ ಗುಲಾತಿ, ಹರ್ಷ ವರ್ಧನ್

ಇನ್ನಾದರೂ ಈರುಳ್ಳಿ ದುಸ್ವಪ್ನದಿಂದ ಎಚ್ಚರಗೊಂಡು ಬಾಳಿಕೆಯ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ಒಳ್ಳೆಯದು. ಅಶೋಕ್ ಗುಲಾತಿ, ಹರ್ಷ ವರ್ಧನ್ ಈರುಳ್ಳಿ ಬೆಲೆ ಏರುವುದನ್ನು ತಪ್ಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದು ಒಂದು ದೊಡ್ಡ ದುಸ್ವಪ್ನವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಹಿಂದೆ ಯುಪಿಎ ಸರ್ಕಾರವನ್ನು ಇದೇ ಕಾರಣಕ್ಕಾಗಿ ಟೀಕಿಸಿದ್ದ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಪ್ರಧಾನ ಮಂತ್ರಿಯವರು “ಈಗ ನಾವು ಈರುಳ್ಳಿಗಾಗಿಯೂ ಒಂದು ಲಾಕರ್ ತೆರೆಯಬೇಕು. ಅದರಲ್ಲಿ ಈರುಳ್ಳಿಯನ್ನು ಬೀಗ ಹಾಕಿ […]

ಭಾರತ ಎಂಬ ಕಲ್ಪನೆಯನ್ನು ರಕ್ಷಿಸೋಣ

ಕೌಶಿಕ್ ಬಸು, ನಿರ್ವಿಕಾರ್ ಸಿಂಗ್

ಸಾಮಾಜಿಕ ನಂಬಿಕೆ ಮತ್ತು ನಾನು ನನ್ನದು ಎಂಬ ಬಾಂಧವ್ಯ ಆರ್ಥಿಕತೆಯನ್ನು ಸುಧಾರಿಸುತ್ತದೆ, ಆರ್ಥಿಕ ಪ್ರಗತಿಯೂ ಸಾಧ್ಯವಾಗುತ್ತದೆ. ಇದರ ಮಹತ್ವ ಯಾರಿಗೂ ಅರ್ಥವಾಗಿಲ್ಲ. ಇದಕ್ಕೆ ಹೇರಳವಾದ ಪುರಾವೆಗಳಿದ್ದರೂ ಇದು ಯಾರಿಗೂ ಮನವರಿಕೆಯಾಗಿಲ್ಲ. ಕೌಶಿಕ್ ಬಸು, ನಿರ್ವಿಕಾರ್ ಸಿಂಗ್ ಕೇಡಿನ ಕಾರ್ಮೋಡ ಭಾರತವನ್ನು ಆವರಿಸಿಕೊಂಡಿದೆ. ವಿಭಜನೆ ಹಾಗೂ ದ್ವೇಷದ ನೆರಳು ಕವಿದುಕೊಂಡಿದೆ. ನಾಗರಿಕ ಸಮಾಜವನ್ನೇ ಆತಂಕಕ್ಕೆ ಒಡ್ಡಿದೆ. ಆರ್ಥಿಕ ಪ್ರಗತಿಯನ್ನು ಸ್ಥಗಿತಗೊಳಿಸುವ ಅಥವಾ ಹಿಂದಕ್ಕೆ ಒಯ್ಯುವ ಗಾಬರಿ ಕಾಡುತ್ತಿದೆ. ಒಂದು ದೊಡ್ಡ ಪ್ರಪಾತದ ಕಡೆಗೆ ಹೋಗುತ್ತಿದ್ದೇವೆ. ಮತ್ತೆ ಹಿಂತಿರುಗಿ ಬರಲಾಗದೆ […]

ಹೃದಯ ನಿವೇದನೆಯ ಕವಿ: ಜ್ಞಾನಪೀಠ ಪುರಸ್ಕೃತ ಅಕ್ಕಿತ್ತಂ

ಡಾ.ಮೋಹನ ಕುಂಟಾರ್

ಹೃದಯ ನಿವೇದನೆಯ ಕವಿ: ಜ್ಞಾನಪೀಠ ಪುರಸ್ಕೃತ ಅಕ್ಕಿತ್ತಂ
ಡಾ.ಮೋಹನ ಕುಂಟಾರ್

ಅಕ್ಕಿತ್ತಂರನ್ನು ಸಾಮಾನ್ಯವಾಗಿ ಸಾಹಿತ್ಯಾಸ್ವಾದಕರು ಕಾಣುವುದು ಮಲಯಾಳಂ ಕಾವ್ಯದ ಪಿತಾಮಹನಾಗಿ. ವಯಸ್ಸಿನಿಂದಲೂ ಪಿತಾಮಹನೇ ಹೌದು. ಆದರೆ ಇದೇ ಅಕ್ಕಿತ್ತಂ ಮಲಯಾಳಂನ ಅತ್ಯಂತ ಆಧುನಿಕ ಕವಿ ಎಂಬುದೂ ವಾಸ್ತವವೇ! ಡಾ.ಮೋಹನ ಕುಂಟಾರ್ `ಇತರರಿಗಾಗಿ ಕಣ್ಣಿಂದ ಹನಿಯೊಂದ ನಾನುದುರಿಸಲು ನನ್ನಂತರಾಳದಲ್ಲುದಿಸುವುದು ಸಾವಿರ ಸೌರಮಂಡಲ ಇತರರಿಗಾಗಿ ನಾನೊಂದು ನಸುನಗೆಯ ಬೀರಲು ನನ್ನ ಹೃದಯದಲ್ಲಲೆಯುವುದು ನಿತ್ಯ ನಿರ್ಮಲ ಪೌರ್ಣಮಿ’ ಇತರರಿಗಾಗಿ ಮನಮಿಡಿಯುವ ಹೃದಯ ನಿವೇದನೆಯನ್ನು ಅಕ್ಷರರೂಪದಲ್ಲಿ ಮೂಡಿಸಿದ ಮಲಯಾಳಂ ಕವಿ ಅಕ್ಕಿತ್ತಂ ಅಚ್ಯುತನ್ ನಂಬೂದಿರಿಗೆ ಐವತ್ತೈದನೆಯ ಜ್ಞಾನಪೀಠ ಪುರಸ್ಕಾರ ಸಂದಿದೆ. ಮಲಯಾಳಂಗೆ ಆರನೆಯ ಜ್ಞಾನಪೀಠವಿದು. […]

ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿ ಸಿಎಎ ನ್ಯಾಯಾಂಗದ ಸವಾಲುಗಳು

ಡಾ.ವೆಂಕಟಾಚಲ ಹೆಗಡೆ

ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿ ಸಿಎಎ  ನ್ಯಾಯಾಂಗದ ಸವಾಲುಗಳು
ಡಾ.ವೆಂಕಟಾಚಲ ಹೆಗಡೆ

ಭಾರತದಂತಹ ಅತಿ ದೊಡ್ಡ ಗಣತಂತ್ರ ರಾಷ್ಟ್ರ ತನ್ನ ಪೌರತ್ವ ಕಾನೂನನ್ನು ಹೇಗೆ ರೂಪಿಸುತ್ತದೆ, ನಿರ್ವಹಿಸುತ್ತದೆ ಎಂಬುದನ್ನು ಇಡೀ ಜಗತ್ತು ಕುತೂಹಲದಿಂದ ನೋಡುತ್ತಿದೆ. ಇಂತಹ ವಿಷಯದಲ್ಲಿ ನ್ಯಾಯಾಂಗ ಯಾವ ರೀತಿಯಲ್ಲಿ ಮತ್ತು ಎಷ್ಟರ ಮಟ್ಟಿಗೆ ಸ್ಪಂದಿಸಬೇಕೆಂಬುದರ ಬಗೆಗೂ ವಿವೇಚನೆಯ ಅಗತ್ಯವಿದೆ. ಡಾ.ವೆಂಕಟಾಚಲ ಹೆಗಡೆ ದೇಶದ ಉದ್ದಗಲಕ್ಕೂ ಪ್ರತಿಭಟನೆಯ ಅಲೆಗಳನ್ನು ಹುಟ್ಟು ಹಾಕಿದ ಪೌರತ್ವ ತಿದ್ದುಪಡಿ ಕಾಯಿದೆ-2019ರ ಸಂವಿಧಾನಾತ್ಮಕ ಬದ್ಧತೆಯನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲದಲ್ಲಿ ಹಾಕಲ್ಪಟ್ಟ 143 ಅಹವಾಲುಗಳನ್ನು ಕಳೆದ ಜನವರಿ 22 ರಂದು ವಿಚಾರಣೆಗೆ ತೆಗೆದುಕೂಳ್ಳಲಾಯಿತು. ಅಂದು ನ್ಯಾಯಾಲದಲ್ಲಿ […]

ಜನಪ್ರತಿನಿಧಿಗಳ ಅಶಿಸ್ತು ಮತ್ತು ಅತಿರೇಕ ಬಾರಾ ಖೂನ್ ಮಾಫ್

-ರಮಾನಂದ ಶರ್ಮಾ

-ರಮಾನಂದ ಶರ್ಮಾ ಸುಮಾರು ಎರಡು ವರ್ಷಗಳ ಹಿಂದೆ, ಒಬ್ಬ ಸಂಸದ ವೃತ್ತಿನಿರತ ವೈದ್ಯರು ತಮ್ಮವರಿಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲವೆಂದು ಅವರ ಮೇಲೆ ಹಲ್ಲೆ ನಡೆಸಿದರು. ಶಾಸಕರೊಬ್ಬರು ಇದೇ ರೀತಿ, ವೈದ್ಯರು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಅವರ ಮೇಲೆ ಹಲ್ಲೆ ನಡೆಸಿದರು. ಇನ್ನೊಬ್ಬ ಜನಪ್ರತಿನಿಧಿ ಸಾರ್ವಜನಿಕರೆದುರು ಸರ್ಕಾರಿ ನೌಕರನೊಬ್ಬನಿಗೆ 50 ಬೈಟಕ್ ಮಾಡುವ ಶಿಕ್ಷೆ ನೀಡಿ ಅಟ್ಟಹಾಸಗೈದರು. ಉತ್ತರ ಪ್ರದೇಶದಲ್ಲಿ ಟೋಲ್ ನಾಕಾದಲ್ಲಿ ಟೋಲ್ ಕೇಳಿದ್ದಕ್ಕಾಗಿ ಟೋಲ್ ಸಿಬ್ಬಂದಿಗಳ ಮೇಲೆ ಜನಪ್ರತಿನಿಧಿಯೊಬ್ಬರು ಹಲ್ಲೆ ಮಾಡಿದರು. ಮಧ್ಯಪ್ರದೇಶದಲ್ಲಿ ಆಕಾಶ ವರ್ಗಿಯಾ […]

ಮುಖ್ಯಚರ್ಚೆಗೆ ಪ್ರವೇಶ

ರಾಷ್ಟ್ರೀಯತೆ ಮತ್ತು ಪೌರತ್ವದ ಹೊಸ ವ್ಯಾಖ್ಯೆಯ ಅಗತ್ಯವಿದೆಯೇ..? ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿಪಟ್ಟಿಯ ವಿಷಯಗಳು ದೇಶಾದ್ಯಂತ ತೀಕ್ಷ್ಣ ಚರ್ಚೆಗೆ ಗ್ರಾಸವಾಗಿವೆ. 371ನೇ ಸಾಂವಿಧಾನಿಕ ವಿಧಿಯನ್ನು ಸಾರಾಸಗಟಾಗಿ ಹಿಂದೆಗೆದು ಕಾಶ್ಮೀರವನ್ನು ವಿಭಜನೆ ಮಾಡಿದ್ದು, ಅಸ್ಸಾಮಿನಲ್ಲಿ ಎನ್‍ಆರ್‍ಸಿ ಪ್ರಕ್ರಿಯೆ ಮುಂದುವರೆಸಿದ್ದು, ಸುಪ್ರೀಮ್ ಕೋರ್ಟಿನಲ್ಲಿ ಅಯೋಧ್ಯೆ ವಿವಾದದ ತೀರ್ಪು ಬಹುಸಂಖ್ಯಾತರ ಪರವಾಗಿದ್ದು ಹಾಗೂ ಇದೀಗ ಪೌರತ್ವ ತಿದ್ದುಪಡಿ ಕರಡನ್ನು ದೇಶದ ಸಂಸತ್ತು ಒಂದೇ ದಿನದ ಚರ್ಚೆಯ ನಂತರ ಅಂಗೀಕರಿಸಿದ್ದು ಮೊದಲಾದ ಘಟನೆಗಳು ಕಾವೇರಿದ ಆರೋಪ- ಪ್ರತ್ಯಾರೋಪಗಳಿಗೆ ಎಡೆಮಾಡಿಕೊಟ್ಟಿವೆ. […]

ರಾಷ್ಟ್ರೀಯತೆ ಮತ್ತು ಪೌರತ್ವದ ಹೊಸ ವ್ಯಾಖ್ಯೆಯ ಅಗತ್ಯವಿದೆಯೇ..?

ಪೃಥ್ವಿದತ್ತ ಚಂದ್ರಶೋಭಿ

ಪೌರತ್ವ (ತಿದ್ದುಪಡಿ) ಕಾಯಿದೆ 2019 ಎತ್ತಿರುವ ನಾಲ್ಕು ಮುಖ್ಯ ವಿಷಯಗಳ ಬಗ್ಗೆ ತಣ್ಣಗೆ ಯೋಚಿಸುವ ಪ್ರಯತ್ನವನ್ನು ಮಾಡಬಯಸುತ್ತೇನೆ. ಇದಕ್ಕೆ ಕಾರಣವಿಷ್ಠೆ; ಬಿಸಿಚರ್ಚೆ, ವಿವಾದಾತ್ಮಕ ಮಾತುಗಳ ನಡುವೆ ಗಂಭೀರ ವಿಚಾರಗಳು ಪರದೆಯಿಂದಾಚೆಗೆ ಸರಿಯುತ್ತಿವೆ. ಪೃಥ್ವಿದತ್ತ ಚಂದ್ರಶೋಭಿ 17ನೆಯ ಲೋಕಸಭಾ ಚುನಾವಣೆಯ ಫಲಿತಾಂಶಗಳ ಗುಂಗಿನಲ್ಲಿಯೆ ಇದ್ದ ಭಾರತಕ್ಕೆ ಪೌರತ್ವ (ತಿದ್ದುಪಡಿ) ಕಾಯಿದೆ, 2019, ಹೊಸದೊಂದು ರಾಜಕೀಯ ವಾತಾವರಣವನ್ನು ಸೃಷ್ಟಿಸಿದೆ. ಒಂದೆಡೆ ಭಾರತೀಯ ಜನತಾ ಪಕ್ಷವು ರಾಷ್ಟ್ರ ರಾಜಕಾರಣದ ಮೇಲೆ ತನ್ನ ಹಿಡಿತವನ್ನು ಗಟ್ಟಿಗೊಳಿಸಿಕೊಂಡದ್ದು ಸ್ಪಷ್ಟವಾದರೆ, ಇನ್ನೊಂದೆಡೆ ಕಳೆದ ಐದೂವರೆ ವರ್ಷಗಳಿಂದ ಅಧಿಕಾರದಲ್ಲಿದ್ದರೂ ನರೇಂದ್ರ ಮೋದಿ ಸರ್ಕಾರವು ಭಾರತದ ಅರ್ಥವ್ಯವಸ್ಥೆಯ ಮೇಲೆ ತನ್ನ […]

ಭಾರತದ ರಾಜಕೀಯ ಚರಿತ್ರೆ ಬದಲಿಸಿದ ವಿವಾದ!

ರಾಜೇಂದ್ರ ಚೆನ್ನಿ

ಈ ಸಂಕಷ್ಟದ ಅತ್ಯಂತ ಆಶಾದಾಯಕ ಸಂಗತಿಯೆಂದರೆ; ನಮ್ಮ ವಿದ್ಯಾರ್ಥಿಗಳು ಪ್ರಜಾಪ್ರಭುತ್ವವನ್ನು ನಮಗೆ ತಿಳಿಹೇಳಿಕೊಡುತ್ತಿರುವುದು, ಅಂಂ ವಿರೋಧಿಸುವ ಮುಸ್ಲಿಮ್‍ರು ದೇಶಭಕ್ತಿ ಹಾಗೂ ಸೌಹಾರ್ದದ ಪರವಾಗಿ ಗಟ್ಟಿಯಾದ ನಿಲುವನ್ನು ತೆಗೆದುಕೊಂಡಿರುವುದು ಮತ್ತು ಭಾರತೀಯ ಮಹಿಳೆಯರು ಚಳವಳಿಯ ಮುಂಚೂಣಿಯಲ್ಲಿರುವುದು. ರಾಜೇಂದ್ರ ಚೆನ್ನಿ ಚರ್ಚೆಗೆ ಹಿನ್ನೆಲೆಯಾಗಿ ಒಂದಿಷ್ಟು ಹಿಂದೆ ಹೋಗಿ ವಸಾಹತುಶಾಹಿ ಕಾಲದಲ್ಲಿ ರಾಷ್ಟ್ರೀಯತೆ ಹಾಗೂ ನಾಗರಿಕತ್ವದ ವಿವಿಧ ಮಾದರಿಗಳ ಚರ್ಚೆಯನ್ನು ಹಾಗೂ ಆ ಮಾದರಿಗಳ ಹಿಂದೆ ಇದ್ದ ರಾಜಕೀಯ ಚಿಂತನೆಗಳನ್ನು ಅವಲೋಕಿಸಬೇಕಾಗಿದೆ. ದೇಶ, ನಾಡು ಸಾಮ್ರಾಜ್ಯ ಇವುಗಳ ಪರಿಕಲ್ಪನೆಗಳು ಮೊದಲಿನಿಂದಲೇ ಇದ್ದರೂ ರಾಷ್ಟ್ರದ ಕಲ್ಪನೆ ಇತಿಹಾಸದಲ್ಲಿ ಹೊಸದು. ಪಶ್ಚಿಮದಲ್ಲಿ […]

ಸಿಎಎ: ಕಲ್ಪಿತ ಗುಮ್ಮನ ಕರೆಯುವುದೇಕೆ?

ಸುಧೀಂದ್ರ ಬುಧ್ಯ

ಈ ವಿಷಯದ ಕುರಿತಾದ ಚರ್ಚೆಯನ್ನು, ಪೌರತ್ವದ ಹೊಸ ವ್ಯಾಖ್ಯೆಯ ಅಗತ್ಯ ಪ್ರಸ್ತುತ ಸಂದರ್ಭದಲ್ಲಿ ಇತ್ತೇ? ಎಂಬ ಪ್ರಶ್ನೆಯೊಂದಿಗೇ ಆರಂಭಿಸಬೇಕಾಗುತ್ತದೆ. ಪೌರತ್ವದ ವ್ಯಾಖ್ಯಾನ ವಲಸೆ ಸಮಸ್ಯೆಯ ಜೊತೆ ಬೆಸೆದುಕೊಂಡಿದೆ. ವಲಸೆ ಸಮಸ್ಯೆಗೆ ಸಾಂಸ್ಕೃತಿಕ, ಆರ್ಥಿಕ ಮತ್ತು ಭದ್ರತೆಯ ಆಯಾಮ ಇದೆ. ಸುಧೀಂದ್ರ ಬುಧ್ಯ ಇತ್ತೀಚೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ‘ಪೌರತ್ವ ತಿದ್ದುಪಡಿ ಕಾಯ್ದೆ 2019’, ದೇಶವ್ಯಾಪಿ ಸಂಚಲನ ಉಂಟುಮಾಡಿದೆ. 1955ರ ಪೌರತ್ವ ಕಾಯಿದೆಗೆ ತಂದ ಈ ತಿದ್ದುಪಡಿ ಬೌದ್ಧಿಕ ವಲಯದಲ್ಲಿ ಪರ ಹಾಗೂ […]

ಒಂದಷ್ಟು ಭಾರ ಹೊತ್ತರೆ ತಪ್ಪೇನು?

ಅಭಿಜಿತ್ ಬ್ಯಾನರ್ಜಿ ಎಸ್ತರ್ ಡಫ್ಲೋ

ಪೌರತ್ವದಂಥ ಮೂಲಭೂತ ವಿಷಯದಲ್ಲಿ ಅಧಿಕಾರಶಾಹಿಯ ಅನಗತ್ಯ ಹಸ್ತಕ್ಷೇಪಕ್ಕೆ ಸಿಎಎ ಮತ್ತು ಎನ್‍ಆರ್‍ಸಿ ದಾರಿಮಾಡಿಕೊಟ್ಟಿದೆ. ಪ್ರಜಾಸತ್ತಾತ್ಮಕ, ಮುಕ್ತ, ಸಹನಶೀಲ ಹಾಗೂ ಎಲ್ಲರನ್ನೂ ಒಳಗೊಳ್ಳುವಂಥ ರೀತಿಯಲ್ಲಿ ಈ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲವೆ? ಹಾಗೆ ಮಾಡಿದರೆ ಇದೊಂದು ರಾಷ್ಟ್ರೀಯ ಮಿಷನ್ ಎಂದು ಭಾವಿಸಿ ಎಲ್ಲರೂ ಸಹಿ ಹಾಕುತ್ತಾರೆ. ಅಭಿಜಿತ್ ಬ್ಯಾನರ್ಜಿ ಎಸ್ತರ್ ಡಫ್ಲೋ ಇದು 2014ರ ಮಾತು. ಆಗ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು, ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂಬ ಪರಿಕಲ್ಪನೆಯ ಘೋಷವಾಕ್ಯವನ್ನು ತೇಲಿಬಿಟ್ಟಿದ್ದರು. ‘ಭಾರತ ಸರ್ಕಾರ ತಮ್ಮ […]

ಪೌರತ್ವದ ಪೂರ್ವಾಪರ

ಎ.ಪಿ.ಅಶ್ವಿನ್ ಕುಮಾರ್

ಜರೂರು ಸಮಸ್ಯೆಗಳ ಆಚೆಗೆ, ಒಂದು ವಿಶಾಲ ಚಾರಿತ್ರಿಕ ನೋಟವನ್ನು ನೀಡುವುದು ಈ ಲೇಖನದ ಉದ್ದೇಶ. ಎ.ಪಿ.ಅಶ್ವಿನ್ ಕುಮಾರ್ ಪೌರತ್ವ ಕುರಿತ ಈತ್ತೀಚೆಗಿನ ವಿದ್ಯಮಾನಗಳು ಹಲವು ಪ್ರಮುಖ ಸೈದ್ಧಾಂತಿಕ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿವೆ. ನಿರ್ದಿಷ್ಟ ಕಾಯ್ದೆಗಳು, ಕಾನೂನುಗಳ ಅಗತ್ಯ ಅಥವಾ ಅನಗತ್ಯಗಳ ಬಗ್ಗೆ ಹಲವು ರೀತಿಯ ಚರ್ಚೆಗಳು ಈಗಾಗಲೇ ನಡೆದಿವೆ. ಆ ಚರ್ಚೆಗೆ ಇನ್ನೊಂದು ಅಭಿಪ್ರಾಯವನ್ನು ಜೋಡಿಸುವುದು ಈ ಲೇಖನದ ಉದ್ದೇಶವಲ್ಲ. ಅದರ ಬದಲು, ಈ ಇಡೀ ಚರ್ಚೆ ಯಾವ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಡೆದಿದೆ ಎಂದು ಪರೀಕ್ಷಿಸುವುದು ನನ್ನ […]

ರಾಜಕೀಯ ಪಕ್ಷಗಳ ನಿಲುವು-ಒಲವು

ರಾಜಕೀಯ ಪಕ್ಷಗಳ ನಿಲುವು-ಒಲವು

ಪೌರತ್ವ (ತಿದ್ದುಪಡಿ) ಕಾಯಿದೆಯ ಕುರಿತ ‘ಮುಖ್ಯಚರ್ಚೆ’ಯ ವಿಷಯಕ್ಕೆ ಸಂಬಂಧಿಸಿ ಹಲವು ಪ್ರಮುಖ ಚಿಂತಕರ ಬರಹಗಳ ಜತೆಗೆ, ಕಾಯಿದೆಯನ್ನು ವಿರೋಧಿಸಿದ, ಬೆಂಬಲಿಸಿದ ಪ್ರಮುಖ ಪಕ್ಷಗಳ ರಾಜಕೀಯ ನಾಯಕರು ಒಟ್ಟಾರೆಯಾಗಿ ಈ ಕಾಯಿದೆಯ ಪರಿಣಾಮಗಳನ್ನು ಗ್ರಹಿಸಿದ ರೀತಿ ಹಾಗೂ ಕಾಯಿದೆ ಕುರಿತ ಅವರಭಿನ್ನ ಅಭಿಪ್ರಾಯಗಳನ್ನು ಓದುಗರ ಮುಂದಿರಿಸುವ ಉದ್ದೇಶ ನಮ್ಮದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್, ಬಿಜೆಪಿ ಮುಖಂಡ ಗೋ ಮಧುಸೂದನ ಹಾಗೂ ಜೆಡಿಎಸ್ ನಾಯಕ ವೈ.ಎಸ್.ವಿ.ದತ್ತಾ ಅವರ ಸಂದರ್ಶನ ಇಲ್ಲಿವೆ. ಸಂದರ್ಶನ: ಜಯಾತನಯ, ಶಿಶುನಾಳಾಧೀಶ ದೇಶದೆಲ್ಲೆಡೆ ಸಿಎಎ […]

ಇದು ಕಾಂಗ್ರೆಸ್ಸಿನವರೇ ಮಾಡಿದ ಕಾಯ್ದೆ!

-ಗೋ.ಮಧುಸೂದನ್

ಇದು ಕಾಂಗ್ರೆಸ್ಸಿನವರೇ ಮಾಡಿದ ಕಾಯ್ದೆ!
-ಗೋ.ಮಧುಸೂದನ್

-ಗೋ.ಮಧುಸೂದನ್ ಸಂದರ್ಶನ: ಜಯಾತನಯ ದೇಶದೆಲ್ಲೆಡೆ ಸಿಎಎ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ನೀವು ಹೇಗೆ ಗ್ರಹಿಸುತ್ತೀರಿ..? ಸಿಎಎ ಬಗ್ಗೆ ಏನೂ ಗೊತ್ತಿಲ್ಲದವರು ಮಾತಾಡುತ್ತಿದ್ದಾರೆ, ಸಿಎಎ ಬಗ್ಗೆ ಗೊತ್ತಿರುವವರು ಒಂದಷ್ಟು ಜನ ದಾರಿ ತಪ್ಪಿಸುತ್ತಿದ್ದಾರೆ. ಇವರು ರಾಜಕೀಯ ಕಾರಣಗಳಿಗಾಗಿ ದಾರಿ ತಪ್ಪಿಸುತ್ತಿದ್ದಾರೆ. 1955ರಲ್ಲಿ ಕಾಂಗ್ರೆಸ್ ನವರೇ ಜಾರಿಗೆ ತಂದಂತಹ ಕಾಯ್ದೆ ಇದು. ಕಾಂಗ್ರೆಸ್ ನವರು 12 ವರ್ಷಕ್ಕೆ ಅಂತ ಮಾಡಿದ್ದರು, ನಾವು ಆರು ವರ್ಷಕ್ಕೆ ಇಳಿಸಿದ್ದೇವೆ ಅಷ್ಠೆ. ಅದನ್ನು ಬಿಟ್ಟರೆ ಬೇರೆ ಏನೂ ಇಲ್ಲ. ಆವಾಗಲೂ ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು […]

ಪೌರಪ್ರಜ್ಞೆ ಇಲ್ಲದ ಪೌರತ್ವದಿಂದ ಏನು ಪ್ರಯೋಜನ?

ಶಿವಶಂಕರ ಹಿರೇಮಠ

ಪೌರಪ್ರಜ್ಞೆ ಇಲ್ಲದ ಪೌರತ್ವದಿಂದ ಏನು ಪ್ರಯೋಜನ?
ಶಿವಶಂಕರ ಹಿರೇಮಠ

ಲೋಕಸಭೆಯಲ್ಲಿ ಸಕಾಲದಲ್ಲಿ ತಿದ್ದುಪಡಿಗಳನ್ನು ಮಂಡಿಸದೆ, ಮತದಾನಕ್ಕೆ ಗೈರುಹಾಜರಾಗಿ ಈಗ ಬೀದಿಯಲ್ಲಿ ಈ ಮಸೂದೆ ಕುರಿತು ರಂಪಾಟ ಮಾಡುತ್ತಿರುವ ರಾಜಕಾರಣಿಗಳಿಂದ ಏನು ಸಾಧಿಸಲು ಆದೀತು? ಶಿವಶಂಕರ ಹಿರೇಮಠ ಭಾರತ ಗಣರಾಜ್ಯದ ಏನೆಲ್ಲ ಸಮಸ್ಯೆಗಳನ್ನು ನಾವು ಸ್ವೀಕೃತ ಭಾರತ ಸಂವಿಧಾನದ ಪರಿಭಾಷೆಯ ಕಕ್ಷೆಯೊಳಗೆ ಚರ್ಚಿಸುವುದೇ ಸೂಕ್ತ. ಸ್ಥಾನಿಕ, ಪ್ರಾದೇಶಿಕ, ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳನ್ನು ರಾಷ್ಟ್ರದ ಹಿತಾಸಕ್ತಿಗಳಿಗೆ ಪೂರಕವಾಗುವಂತೆ ಪರಿವರ್ತಿಸಿಕೊಂಡು ವಿಶ್ಲೇಷಿಸುವುದು ಇಂದಿನ ಅಗತ್ಯವಾಗಿದೆ. ಯುಎಸ್‍ಎ ಕಟ್ಟುತ್ತಿರುವ ಮೆಕ್ಸಿಕೋ ಗೋಡೆ, ಯುಕೆ ರಾಷ್ಟ್ರ ಯುರೋಪಿಯನ್ ಒಕ್ಕೂಟದಿಂದ ಹೊರಬರುವಿಕೆ, ಯುಎಸ್‍ಎಸ್‍ಆರ್ ವಿಭಜಿತಗೊಂಡು […]

1 2 3 14