ಹತ್ತಾರು ತಲೆಮಾರುಗಳ ತರುವಾಯ ಅನುಭವಕ್ಕೆ ಬರಬಹುದಾದ ವಿಪರೀತ ಪರಿಸ್ಥಿತಿಯೊಂದಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಜಗತ್ತಿನೆಲ್ಲೆಡೆ ಒಂಥರಾ ದುಗುಡ, ಅತಂತ್ರ, ಹತಾಶೆ, ಅಸ್ಪಷ್ಟತೆಯ ವಾತಾವರಣ. ಬದುಕಿನ ಯಾವುದೋ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬವನ್ನು ಆವರಿಸಬಹುದಾದ ಇಂತಹ ವಿಷಮ ಭಾವನೆಗಳು ಸಾರ್ವತ್ರಿಕವಾಗಿ ಇಡೀ ಮನುಕುಲವನ್ನೇ ವ್ಯಾಪಿಸಿದರೆ ಏನಾದೀತು? ಈಗ ಅದೇ ಆಗಿದೆ. ಅಂತರ್ಗತ ಆತಂಕವನ್ನು ಅದುಮಿಡುವ ಪ್ರಕ್ರಿಯೆಯ ಭಾಗವಾಗಿ ಮನುಷ್ಯ ಹಲವು ಬಗೆಯಲ್ಲಿ ಅನಾವರಣಗೊಳ್ಳುತ್ತಿದ್ದಾನೆ: ಒಂದು ವಿಷಯವನ್ನು ಎಷ್ಟು ದೀರ್ಘಕಾಲ ಅಗಿಯಲು ಸಾಧ್ಯ ಎಂಬುದನ್ನು ರುಜುವಾತುಪಡಿಸಲು ಜಿದ್ದಿಗೆ ಬಿದ್ದಿರುವ […]
ನಮ್ಮ ಈ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈಪರೀತ್ಯಗಳನ್ನು ಆಧುನಿಕ ವೈಜ್ಞಾನಿಕ ಸಂದರ್ಭಕ್ಕೆ ವಿವರಿಸಿಕೊಳ್ಳುವುದು ಹೇಗೆ? ಈ ಯಥಾಸ್ಥಿತಿಯಿಂದ ಹೊರಬರಬೇಕಾದರೆ ಹೂವಿನಂತೆ ಅರಳುವ ಮೊದಲು ಅದೇ ಹೂವಿನ ಮೊಗ್ಗಿನಂತೆ ಮೊನಚಾಗಿರಬೇಕಲ್ಲವೇ? ತಮ್ಮ ಬದುಕಿನ ಸಾಧನೆಯ ಯಶಸ್ಸಿನ ರಹಸ್ಯವನ್ನು ಎನ್.ಆರ್.ನಾರಾಯಣಮೂರ್ತಿಗಳು ಇಗೋ ಹೀಗೆ ಸಾರ್ವತ್ರೀಕರಿಸಿಕೊಂಡಿದ್ದಾರೆ. ಯಾರೇ ಆಗಲಿ, ಏನನ್ನೇ ಆದರೂ ಸಾಧಿಸಬೇಕಾದರೆ ಅವರು ತಮ್ಮ ಅರ್ಹತೆಯನ್ನು ಪರೀಕ್ಷೆಗೊಡ್ಡಿಕೊಳ್ಳಬೇಕಾಗುತ್ತದೆ. ಅದು ಸಾಬೀತಾದ ಮೇಲೆ ಹಿಡಿದ ಕೆಲಸವನ್ನು ಸಾಧಿಸಲು ಬೇಕಾದ ಪ್ರಯತ್ನದ ಪ್ರಾಮಾಣಿಕತೆಯ ಸ್ವರೂಪವನ್ನು ಕುರಿತು ಚಿಂತಿಸಬೇಕಾಗುತ್ತದೆ ಮಾತ್ರವಲ್ಲ, ಪ್ರಾಮಾಣಿಕತೆಯ ಜತೆಯಲ್ಲಿ ಹೆಗಲು […]
ಮಹಾಭಾರತದ ಕರ್ಣನ ಪಾತ್ರ ಆಗಿರಬಹುದು ಅಥವಾ ಏಕಲವ್ಯನೇ ಆಗಿರಬಹುದು, ಅವರು ಸಾಮರ್ಥ್ಯವನ್ನು ಮುಂದಿಟ್ಟುಕೊಡು ಹೋರಾಡುವ ಸಂದರ್ಭಗಳು ಬಂದಾಗ ಅವರ ಸಾಮರ್ಥ್ಯಕ್ಕೆ ಕವಡೆಕಾಸು ಬೆಲೆ ಕೊಡದೆ ಅವರನ್ನು ದೂರವಿಟ್ಟಿದ್ದನ್ನು ಇತಿಹಾಸ ಸಾರಿ ಹೇಳುತ್ತದೆ. ಕನ್ನಡದ ದೈತ್ಯ ಸಾಫ್ಟ್ ವೇರ್ ಕಂಪನಿಯಾದ ಇನ್ಫೋಸಿಸ್ ಹೆಸರನ್ನು ಕೇಳಿದಾಕ್ಷಣ ಅದರ ಹಿಂದುಗಡೆ ಕೇಳಿಬರುವ ಇನ್ನೊಂದು ಶಬ್ಧವೆಂದರೆ ಅದುವೆ ಮೂರ್ತಿ. ಅದು ಸುಧಾ ಅಥವಾ ನಾರಾಯಣ ಆಗಿರಬಹುದು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದು, ಕೇವಲ ಹತ್ತು ಸಾವಿರ ರೂಪಾಯಿ ಬಂಡವಾಳ ಹೂಡಿಕೆಯೊಂದಿಗೆ ಸಂಸ್ಥೆಯನ್ನು ಕಟ್ಟಿ ಜಗತ್ತಿಗೆ ಪರಿಚಯಿಸಿದ […]
ಜನರನ್ನು ಮೇಲು ಕೀಳುಗಳೆಂದು ಪದರ ಪದರವಾಗಿ ವಿಂಗಡಿಸಿದ ಬಹುಪುರಾತನ ಸಮಾಜಪದ್ಧತಿಯ ದೇಶವಿದು. ಇಂತಹ ಸಮಾಜವನ್ನು ಸಮಾನವಾಗಿ ಕಾಣಬೇಕಾದರೆ ಮೊದಲು ಕೆಳಪದರದವರನ್ನು ಮೇಲೆ ತರುವ ಕೆಲಸ ಆಗಬೇಕು. ದೇಶವೊಂದರ ಪ್ರಗತಿಗೆ ಪೂರಕ ಯಾವುದು ಹಾಗೂ ದೇಶದ ಹಿಂದುಳಿಯುವಿಕೆಗೆ ಕಾರಣಗಳಾವುವು ಎಂಬುದರ ಕಡೆಗೆ ಬೊಟ್ಟು ಮಾಡಿವೆ ನಾರಾಯಣಮೂರ್ತಿಯವರ ಮಾತುಗಳು. ಆದರೆ ಈ ಚರ್ಚೆಯಲ್ಲಿ ಭಾರತವನ್ನು ಒಟ್ಟಾರೆಯಾಗಿ ಒಂದು ಪರಿಧಿಯೊಳಗಿಟ್ಟು ನೋಡಲು ಸಾಧ್ಯವಾಗಬಹುದೆಂದು ಅನಿಸುವುದಿಲ್ಲ. ಭಾರತೀಯ ಸಂಸ್ಕೃತಿ ಅಂದರೇನು ಎನ್ನುವುದೇ ಮೂಲಭೂತ ಪ್ರಶ್ನೆ. ಅರುಣಾಚಲ, ನಾಗಾಲ್ಯಾಂಡ್, ತ್ರಿಪುರಗಳ ಗಡಿರೇಖೆಗಳಿಂದ ತೊಡಗಿ ಪಶ್ಚಿಮದ […]
ಸಂಸ್ಕೃತಿ ಎಂಬ ಪದವು ವಿಶಾಲವಾದ ಅರ್ಥವ್ಯಾಪ್ತಿಯನ್ನು ಹೊಂದಿದ್ದು ಸಾಮಾಜಿಕ ನಡವಳಿಕೆ ಮತ್ತು ಮಾನವ ಸಮಾಜದಲ್ಲಿ ಕಾಣಬಹುದಾದ ರೂಢಿಗತ ಮಾನಕಗಳನ್ನಲ್ಲದೆ ಆ ಸಮುದಾಯದ ವ್ಯಕ್ತಿಗಳ ಜ್ಞಾನ, ನಂಬಿಕೆ, ಕಲೆ, ಸಂಪ್ರದಾಯ, ಸಾಮರ್ಥ್ಯ, ಸ್ವಭಾವ, ಇತ್ಯಾದಿಗಳನ್ನೂ ಒಳಗೊಂಡಿರುತ್ತದೆ. ಕಲಿಕೆ ಮತ್ತು ಸಾಮಾಜೀಕರಣದಿಂದ ವ್ಯಕ್ತಿಯು ಸಂಸ್ಕೃತಿಯನ್ನು ತನ್ನದಾಗಿಸಿಕೊಳ್ಳುತ್ತಾನೆ. ಸಂಸ್ಕೃತಿಯ ಮಾನದಂಡವು ಸಮಾಜದಲ್ಲಿ ಒಪ್ಪಿಗೆಯಾಗುವ ನಡವಳಿಕೆಗಳನ್ನು ಕ್ರೋಡೀಕರಿಸುತ್ತದೆ. ಸಂಸ್ಕೃತಿ ಇರುವುದು ವ್ಯಕ್ತಿಯಲ್ಲೋ ಅಥವಾ ಸಮುದಾಯದಲ್ಲೋ ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಕೊಡುವುದು ಕಷ್ಟ. ಪ್ರಸ್ತುತ ಚರ್ಚೆಗಾಗಿ ಸಂಸ್ಕೃತಿಯನ್ನು ‘ಜೀವನ ವಿಧಾನ’ ಎಂದು ಸರಳವಾಗಿ […]
ಮಾರ್ಚ್ ಸಂಚಿಕೆಯಲ್ಲಿ ಪ್ರಕಟಿಸಿರುವ ಎಲ್ಲ ಲೇಖನಗಳು ಬಹಳ ಚಿಂತನಶೀಲವಾಗಿವೆ. ಈ ಲೇಖನಗಳ ವಸ್ತುವಿಷಯ ನಿಜಕ್ಕೂ ಗಂಭೀರವಾದವು ಹಾಗು ಬಹಳ ಪ್ರಸ್ತುತವಾದ ವಿಷಯಗಳು. ನಮ್ಮ ದೇಶದಲ್ಲಿ ಪ್ರಾರಂಭವಾಗಿರುವ ಹೊಸ ಸಮಸ್ಯೆಗಳು ಜಾತಿ ಧರ್ಮದ ಮೇಲೆ ಆಧಾರವಾಗಿರುವುದು ನಿಜಕ್ಕೂ ದುಃಖಕರ ಸಂಗತಿ. ನಾರಾಯಣಮೂರ್ತಿ ಅವರ ಭಾಷಣಗಳನ್ನು ಪ್ರಕಟಿಸಿದ್ದೀರಿ. ಇದು ಬಹಳ ಸಂತೋಷದ ವಿಷಯ. ಅವರ ಭಾಷಣಗಳÀ ವಿಷಯಗಳನ್ನು ನಮ್ಮ ತರುಣ ಪೀಳಿಗೆ ಬಹಳ ಗಂಭೀರವಾಗಿ ಯೋಚಿಸಬೇಕಾಗಿದೆ. ಅವರು ನಮ್ಮ ದೇಶವೇಕೆ ಪಾಶ್ಚಾ÷್ಯತ್ಯ ದೇಶಗಳ ಮಟ್ಟದಲ್ಲಿ ವಿಜ್ಞಾನಿಗಳನ್ನು ಹೊರತರುತ್ತಿಲ್ಲ ಎನ್ನುವುದರ ಬಗ್ಗೆ […]
ಈ 2020-21ನೇ ವಿತ್ತವರ್ಷ ಕರ್ನಾಟಕದ ಪಾಲಿಗೆ ಅತ್ಯಂತ ಕಠಿಣ ವರ್ಷವಾಗಲಿದೆ. ಆರೋಗ್ಯ ಸೇವೆಯಲ್ಲಿ ಸರ್ಕಾರದ ಖರ್ಚು ಹೆಚ್ಚಾದರೆ ತೆರಿಗೆ ಸಂಗ್ರಹ ಗಣನೀಯವಾಗಿ ಕಡಿಮೆಯಾಗಲಿದೆ. ಈ ಆದಾಯ–ವೆಚ್ಚಗಳನ್ನು ಸರಿದೂಗಿಸಲು ಸರ್ಕಾರದ ಮುತ್ಸದ್ದಿತನ ಪ್ರದರ್ಶಿತವಾಗಬೇಕಿದೆ. ಈ ಲೇಖನದಲ್ಲಿ ಕರ್ನಾಟಕದ 2020-21 ನೇ ವರ್ಷದ ಬಜೆಟ್ ವಿಶ್ಲೇಷಣೆ ಮಾಡುವ ಇರಾದೆಯಿತ್ತು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾರ್ಚ್ ಮೊದಲ ವಾರದಲ್ಲಿ ಮಂಡಿಸಿದ ಆಯವ್ಯಯ ಪತ್ರ ಯಾವುದೇ ಹೊಸತನಕ್ಕೆ ಹೊರತಾಗಿ ಚರ್ವಿತಚರ್ವಣ ಅಂಶಗಳನ್ನೇ ಒಳಗೊಂಡಿರುವುದನ್ನು ಕಂಡು ಬಜೆಟ್ ಚರ್ಚೆಯನ್ನು ಮೊಟಕುಗೊಳಿಸಿ ಕೊರೊನಾ ನಂತರದ ಕರ್ನಾಟಕದ […]
ಈ ಪರಿಯಲ್ಲಿ ನೇಮಕಾತಿಯ ಭ್ರಶ್ಟಾಚಾರದಲ್ಲಿ ಮುಳುಗಿರುವ ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜುಗಳು ಹೇಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡಲು ಸಾಧ್ಯ? ಭ್ರಶ್ಟಾಚಾರದ ಕೂಪದಲ್ಲಿ ಬಿದ್ದಿರುವ ವಿಶ್ವವಿದ್ಯಾಲಯಗಳು ಮತ್ತು ‘ಭ್ರಶ್ಟ ಅಧ್ಯಾಪಕರು’ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಏನನ್ನು ಮತ್ತು ಹೇಗೆ ಕಲಿಸಬಹುದು? ಕಲ್ಬುರ್ಗಿಯಲ್ಲಿರುವ ರಾಜ್ಯದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 67 ಪ್ರಾಧ್ಯಾಪಕರ ನೇಮಕಾತಿಯ ‘ಭ್ರಶ್ಟಾಚಾರ’ ವರದಿಗಳನ್ನು ಪತ್ರಿಕೆಗಳು ಪ್ರಕಟಿಸಿವೆ. ಈ ಹಿಂದೆಯೂ ಅನೇಕ ವಿಶ್ವವಿದ್ಯಾಲಯಗಳ ನೇಮಕಾತಿಗಳಲ್ಲಿ ಅಕ್ರಮ ವ್ಯವಹಾರ ನಡೆದ ಆರೋಪಗಳು ಕೇಳಿ ಬಂದಿದ್ದವು. ಕೆಲವು ವಿಶ್ವವಿದ್ಯಾಲಯಗಳ ನೇಮಕಾತಿಗಳಲ್ಲಿನ ಅಕ್ರಮ […]
ಹಲವಾರು ಕಾರಣಗಳಿಂದಾಗಿ ‘ಅಖಿಲ ಭಾರತ ನ್ಯಾಯಾಂಗ ಸೇವೆ’ಯ ವಿಚಾರ ನೆನೆಗುದಿಗೆ ಬಿದ್ದಿದೆ. ಯಾಕೆ ಹೀಗಾಯಿತು? ನಮ್ಮ ದೇಶದ ಅಗಾಧವಾದ ಸಂಕೀರ್ಣ ವ್ಯವಸ್ಥೆಯಲ್ಲಿ ಈ ಬಗೆಯ ಕೇಂದ್ರಿತ ನ್ಯಾಯಾಂಗ ಸೇವೆಯ ಸಾಧಕ ಬಾಧಕಗಳೇನು? ಅದರ ರೂಪರೇಷೆಗಳು ಯಾವ ರೀತಿಯಲ್ಲಿರಬೇಕು? ಇತ್ತೀಚೆಗೆ ಕೇಂದ್ರ ಸರಕಾರ ‘ಅಖಿಲ ಭಾರತ ನ್ಯಾಯಾಂಗ ಸೇವೆ’ (ಎಐಜೆಎಸ್) ಯನ್ನು 2022ರ ಹೊತ್ತಿಗೆ ಊರ್ಜಿತಗೊಳಿಸುವ ಬಗ್ಗೆ ತನ್ನ ಆಶಯವನ್ನು ವ್ಯಕ್ತಪಡಿಸಿ, ಈ ಕುರಿತಾಗಿ ರಾಜ್ಯ ಸರಕಾರಗಳೊಂದಿಗೆ ಸಮಾಲೋಚನೆಯನ್ನು ಪ್ರಾರಂಭಿಸಿದೆ. ಹಾಗೆನೋಡಿದರೆ ಈ ವಿಚಾರ ಹೊಸದೇನಲ್ಲ. ನಮ್ಮ ದೇಶದ […]
ಕೆಲವೇ ವಾರಗಳ ಹಿಂದೆ ಕೊವಿಡ್-19 ರೋಗಿಗಳಿಂದ ತುಂಬಿ ತುಳುಕುತ್ತಿದ್ದ ಚೀನಾದ ಆಸ್ಪತ್ರೆಗಳಲ್ಲಿ ಈಗ ಹಾಸಿಗೆಗಳು ಖಾಲಿ ಇವೆ. ಅನೇಕ ಪ್ರಾಯೋಗಿಕ ಔಷಧಿಗಳ ಸಂಶೋಧನೆಗೆ ಅರ್ಹ ರೋಗಿಗಳು ದೊರಕುತ್ತಿಲ್ಲ. ಕಳೆದ ಕೆಲವು ವಾರಗಳಲ್ಲಿ ಪ್ರತಿದಿನ ದಾಖಲಾಗುತ್ತಿದ್ದ ರೋಗಿಗಳ ಹೊಸ ಪ್ರಕರಣಗಳ ಸಂಖ್ಯೆ ವೇಗವಾಗಿ ಕುಸಿದಿದೆ. ಇದು ಫೆಬ್ರವರಿ 28ರಂದು ಬಿಡುಗಡೆಯಾದ ವರದಿಯೊಂದರಲ್ಲಿ ಅಡಕವಾಗಿರುವ ಅತ್ಯಂತ ಸೋಜಿಗದ ಅಂಶ. ಇದನ್ನು ತಯಾರಿಸಿದ್ದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂö್ಯಎಚ್ಓ) ಮತ್ತು ಚೀನಾ ಸರ್ಕಾರ ಕೂಡಿ ರಚಿಸಿದ ಒಂದು ಜಂಟಿ ತಂಡ. ಇದರಲ್ಲಿ […]
ಇಂದಿನ ಕೊರೊನಾ ಸಂದರ್ಭದಲ್ಲಿ ಹರಿದಾಡಿದಷ್ಟು ಗಾಳಿಸುದ್ದಿಗಳು, ವದಂತಿಗಳು ಹಿಂದೆAದೂ ಜೀವ ಪಡೆದಿರಲಿಕ್ಕಿಲ್ಲ. ಅದಾಗ್ಯೂ ಈ ವದಂತಿಗಳ ಹುಟ್ಟು ಮತ್ತು ಹರಡುವಿಕೆಗೆ ಸುದೀರ್ಘ ಇತಿಹಾಸವೇ ಇದೆ. ಇವು ದಿಢೀರ್ ಎಂದು ಎಲ್ಲಿಂದ ಪುಟಿದು ಬರುತ್ತವೆ? ಯಾಕೆ ಬರುತ್ತವೆ? ಅಷ್ಟು ವೇಗವಾಗಿ ಅವು ಹೇಗೆ ಹರಡುತ್ತವೆ? ಒಂದು ಬಿಕ್ಕಟ್ಟಿನ ಹೊತ್ತಿನಲ್ಲೇ ಅವು ಏಕೆ ವರ್ಧಿಸುತ್ತವೆ ಮತ್ತು ಯಶಸ್ವಿಯಾಗುತ್ತವೆ? 1984ರಲ್ಲಿ ಸಿಖ್ವಿರೋಧಿ ಅಲೆ ಇಡೀ ದೆಹಲಿಯನ್ನು ಆವರಿಸಿಕೊಂಡಿತ್ತು. ದೆಹಲಿಯಲ್ಲಿ ಸರಬರಾಜಾಗುವ ಕುಡಿಯುವ ನೀರಿಗೆ ಸಿಖ್ಖರು ವಿಷ ಹಾಕಿಬಿಟ್ಟಿದ್ದಾರೆ ಎಂಬ ದಟ್ಟವಾದ ವದಂತಿ […]
‘ಕೊರೊನಾ ನಂತರ’ ಯುಗದ ಗುಣಲಕ್ಷಣಗಳೇನು..? ಇದುವರೆಗೆ ನಾವು ಬಲ್ಲೆವೆಂದು ತಿಳಿದಿದ್ದ ನಮ್ಮ ಪ್ರಪಂಚ ಅಚಾನಾಕ್ಕಾಗಿ ತಲೆಕೆಳಗಾಗಿದೆ. ವ್ಯವಸ್ಥೆ, ಸುರಕ್ಷತೆ ಹಾಗೂ ಆರೋಗ್ಯಗಳ ಬಗ್ಗೆ ನಮ್ಮ ಕಲ್ಪನೆ ನುಚ್ಚುನೂರಾದರೆ ವಾಣಿಜ್ಯ, ಉದ್ದಿಮೆ, ಹೂಡಿಕೆ ಮತ್ತು ಉದ್ಯೋಗಗಳ ಬಗೆಗಿನ ನಮ್ಮ ತಿಳಿವಳಿಕೆ ಬುಡಮೇಲಾಗಿದೆ. ಜಾಗತೀಕರಣ ಹಾಗೂ ವ್ಯಕ್ತಿವಾದಗಳು ಬೆದರಿವೆ. ತಂತ್ರಜ್ಞಾನ ಮತ್ತು ಉದ್ಯೋಗೀಕರಣಗಳಿಗೆ ಹಿನ್ನೆಡೆಯಾದರೂ ಅದೇ ವಿಜ್ಞಾನ ಮತ್ತು ಡಿಜಿಟಲೀಕರಣಗಳು ನಮ್ಮ ರಕ್ಷಣೆಗೆ ಬರಬೇಕೆನ್ನುವ ಅರಿವೂ ಆಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಚೀನಾದ ಮಧ್ಯಭಾಗದ ಪ್ರಾಂತ್ಯವೊಂದರಲ್ಲಿ ಮ್ಯುಟೇಷನ್ಗೆ ಒಳಗಾಗಿ ಪ್ರವಾಸ ಹೊರಟ […]
ಭವಿಷ್ಯವನ್ನು ಕುರಿತು ಮುನ್ನೋಟವನ್ನು ವ್ಯಕ್ತಪಡಿಸುವಾಗ ಇರುವ ಸವಾಲೆಂದರೆ, ನೀವು ಹೇಳಿದ್ದು ಸರಿಯಾದರೆ ನಿಮ್ಮನ್ನು ಮಹಾನ್ ಮೇಧಾವಿ ಎಂದು ಕರೆಯುತ್ತಾರೆ. ತಪ್ಪಾದರೆ ಮುಠ್ಠಾಳ ಎನ್ನುತ್ತಾರೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ, ಈ ಅಪಾಯವನ್ನು ಅರಿತೇ ಈ ಲೇಖನ ಬರೆಯುತ್ತಿದ್ದೇನೆ. ಒಂದು ಮುನ್ನೋಟದ ಪರಿಕಲ್ಪನೆಯನ್ನು ಜನರ ಮುಂದಿಡುವುದು ಮುಖ್ಯ ಎನ್ನುವುದನ್ನು ಅರಿತು ಬರೆಯುತ್ತಿದ್ದೇನೆ. ಇಲ್ಲಿ ಸರಿ ತಪ್ಪುಗಳ ನಡುವೆ ವಾಗ್ವಾದ ಅಗತ್ಯವಿಲ್ಲ. ಆದರೆ ಎರಡು ಸರಿಯಾದ ಪ್ರತಿಪಾದನೆಗಳ ನಡುವೆ ಇದೆ. ಈ ದೃಷ್ಟಿಯಿಂದ ಓದುಗರು ನನ್ನ ಪ್ರತಿಪಾದನೆಯನ್ನು ಒಂದು ದೃಷ್ಟಿಕೋನದ ಅಭಿಪ್ರಾಯ […]
ಯಾವುದೇ ಸಮಯದಲ್ಲಿ ಯಾವುದೇ ಕಾರಣಕ್ಕೆ ಅಡಚಣೆಗೆ ಒಳಪಡಬಲ್ಲ ಜಾಗತೀಕರಣ ಹಾಗೂ ರಾಷ್ಟ್ರೀಯತೆ ಆಧಾರದ ಅರ್ಥ ವ್ಯವಸ್ಥೆಯ ಬದಲಿಗೆ ಸ್ಥಳೀಯ ಹಾಗೂ ಸ್ವಾವಲಂಬಿ ಆಧಾರದ ಮೇಲೆ ಕಟ್ಟಿಕೊಳ್ಳುವ ಆರ್ಥಿಕತೆ ನಮಗೆ ಇಂದು ಪರ್ಯಾಯವಾಗಿ ಗೋಚರವಾಗುತ್ತಿದೆ. ಕೊರೊನಾ ಪಿಡುಗು ನಾವು ಇಲ್ಲಿಯವರೆಗೆ ಬೆಳೆಸಿಕೊಂಡು ಬಂದ ಪರಸ್ಪರ ಸಂಬಂಧಗಳಿಗೆ ಮಾರಣಾಂತಿಕ ಕೊಡಲಿ ಪೆಟ್ಟು ನೀಡಿದೆ. ದೇಶಗಳ ನಡುವೆ, ರಾಜ್ಯಗಳ ನಡುವೆ, ಜನ ಸಮುದಾಯಗಳ ನಡುವೆ ಮತ್ತು ಜನಸಾಮಾನ್ಯರ ನಡುವೆಯ ಸಂಬಂಧಗಳು ಪರಸ್ಪರ ಶಂಕೆ ಮತ್ತು ಅಪನಂಬಿಕೆಗಳ ನಡುವೆ ಮುರಿದುಬಿದ್ದಿವೆ. ಸಭ್ಯ ಸಮಾಜದ […]
ಲಸಿಕೆ ಬಂದು ಕೊರೋನ ಗುಣಪಡಿಸಬಹುದಾದ ಖಾಯಿಲೆ ಎಂದಾದ ಮೇಲೆ ಆಯ್ಯಪ್ಪನ ಭಕ್ತರ ಸ್ಥಿತಿ ನಿರ್ಮಾಣವಾಗಬಹುದು. ಕುಡಿತ, ಸಿಗರೇಟ್ ಮತ್ತು ಇತರ ಚಟ ಇರುವ ಕೆಲವರು ಇವುಗಳಿಂದ ಮುಕ್ತಿ ಪಡೆಯಲು ಆಯ್ಯಪ್ಪನ ಮಾಲೆ ಧರಿಸಿ ಕೆಲವು ದಿನ ಶಿಸ್ತಿನಲ್ಲಿರುತ್ತಾರೆ. ಆಯ್ಯಪ್ಪನ ದರ್ಶನ ಮಾಡಿ ಬಂದ ನಂತರ…?! ಕೊರೋನ ಸಮಸ್ಯೆ ಅಂತ್ಯಗೊಂಡ ನಂತರ ಏನು? ಎನ್ನುವ ಚರ್ಚೆ ನಡೆಯುತ್ತಿದೆ. ಬಹುತೇಕ ಚರ್ಚೆಗಳು ಆರ್ಥಿಕ ಕುಸಿತವನ್ನು, ರಾಜಕೀಯ ಬದಲಾವಣೆಗಳನ್ನು, ಸಾಮಾಜಿಕ ಹಾಗು ಸಾಂಸ್ಕೃತಿಕ ಪರಿವರ್ತನೆಗಳನ್ನು ನಿರೀಕ್ಷಿಸುತ್ತಿವೆ. ಮುಂದಿನ ದಿನಗಳಲ್ಲಿ ನಮ್ಮ ಖಾಸಗಿ […]
ಕೋವಿದ್-19 ಪಿಡುಗು ನಮ್ಮನ್ನು ವ್ಯಕ್ತಿಗಳಾಗಿ ಮತ್ತು ಒಂದು ಸಮಾಜವಾಗಿ ಬದಲಿಸುತ್ತಿದೆ. ಇದರ ಪರಿಣಾಮ ಗಾಢವಾಗಿರುತ್ತದೆ. ಕೆಲವು ಪರಿಣಾಮಗಳು ಈಗ ನಮ್ಮ ಊಹೆಗೂ ನಿಲುಕುವುದಿಲ್ಲ. ಆದರೆ ಕಳೆದ ಕೆಲವು ದಿನಗಳಲ್ಲಿ ನಾವು ಅನುಸರಿಸುತ್ತಿರುವ ಕೆಲವು ಆಚರಣೆಗಳು ಅಥವಾ ಕೈಬಿಟ್ಟಿರುವ ಕೆಲವು ಆಚರಣೆಗಳು ಕೊರೋನಾ ನಂತರದ ಜೀವನದ ಒಂದು ಭಾಗವಾಗಿಬಿಡುತ್ತವೆ. ನಮ್ಮ ನಿತ್ಯ ಜೀವನದಲ್ಲಿನ ಹತ್ತು ಉದಾಹರಣೆಗಳನ್ನು ಗಮನಿಸಬಹುದು. ನನ್ನ ಗ್ರಹಿಕೆ ಮತ್ತು ತಕ್ಷಣದ ಭರವಸೆಗಳು ಈ ಹತ್ತು ನಿದರ್ಶನಗಳನ್ನು ಹೊರಹಾಕಿದೆ. 1. ಸಾರ್ವಜನಿಕ ನೈರ್ಮಲ್ಯ ಉತ್ತಮವಾಗುತ್ತದೆ. […]
ಅಚ್ಚರಿಯೇ ಆಗಬಾರದ ಸಂಗತಿ ಏನು ಗೊತ್ತೆ? ಜಗದ ವ್ಯಾಪಾರ ಹಿಂದಿನಂತೆಯೇ ನಾಳೆಯೂ ಮುಂದುವರೆಯಲಿದೆ… ನೋಡುತ್ತಿರಿ. ಮನೆಯಿಂದ ಆಚೆ ಹೊರಟು ಇಡೀ ಜಗತ್ತನ್ನೇ ಗೆಲ್ಲುತ್ತೇನೆಂದು ಬೀಗುತ್ತ ಸಾಗುತ್ತಿದ್ದ ಮನುಷ್ಯ ಈಗ ಕೊರೊನಾ ಸುಂಟರಗಾಳಿಗೆ ಬೆದರಿ ಮನೆಗೆ ಮರಳಿ ಅವಿತು ಕೂತಿದ್ದಾನೆ. ಕೂತಲ್ಲೇ ಸುತ್ತಲಿನ ಅಚ್ಚರಿಗಳನ್ನು ನೋಡುತ್ತಿದ್ದಾನೆ. ನದಿ ಚೊಕ್ಕಟವಾಯ್ತು, ಗಾಳಿ ಚೊಕ್ಕಟವಾಯ್ತು, ವಾಹನಗಳ ಸದ್ದಡಗಿತು, ಪಕ್ಷಿಗಳ ಇಂಚರ ಕೇಳುವಂತಾಯ್ತು. ರಾತ್ರಿಯ ವೇಳೆಗೆ ನಗರದ ಆಕಾಶದಲ್ಲಿ ತಾರೆಗಳನ್ನೂ ನೋಡುವಂತಾಯ್ತು. ಜಲಂಧರದಿಂದ ಇನ್ನೂರು ಕಿಲೊಮೀಟರ್ದೂರದಲ್ಲಿರುವ ಹಿಮಪರ್ವತವೂ ಕಾಣುವಂತಾಯ್ತು. ಮನುಕುಲಕ್ಕೆ ಮತ್ತೊಮ್ಮೆ ದೂರದೃಷ್ಟಿ […]
ಇಂಡೋನೇಷ್ಯಾದ ಸಚಿವ ಲುಹುತ್ ಪಾಂಡ್ ಜೈತಾನ್ಸಾ ಹೇಳುವಂತೆ ‘ಸಾಮಾಜಿಕ ಭದ್ರತೆ ಹೊಂದದ ರಾಷ್ಟçಗಳಲ್ಲಿ, ಪೂರ್ಣ ಪ್ರಮಾಣದ ಲಾಕ್ಡೌನ್ ಹೆಚ್ಚಿನ ಹಸಿವು ಮತ್ತು ಸಾವಿಗೆ ಕಾರಣವಾಗುತ್ತದೆ’. ಅನೇಕ ಶ್ರೀಮಂತ ರಾಷ್ಟಗಳು ಕೊರೊನ ವೈರಸ್ ಹರಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೆ ತಂದರೂ, ಕೆಲವು ಅಭಿವೃದ್ಧಿಶೀಲ ದೇಶಗಳಿಗೆ ಇದನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಸ್ವಿಜರ್ಲ್ಯಾಂಡಿನ ಯುಬಿಎಸ್ ಬ್ಯಾಂಕ್ ನಡೆಸಿದ ಅಧ್ಯಯನ ವರದಿಯ ಪ್ರಕಾರ, ಅಭಿವೃದ್ಧಿಶೀಲ ರಾಷ್ಟçಗಳಲ್ಲಿ, ಹೆಚ್ಚಿನವು ‘ಮಧ್ಯಮ’ ಲಾಕ್ಡೌನ್ ಹಾಗು ಬೆರಳೆಣಿಕೆಯ ದೇಶಗಳು ಮಾತ್ರ ‘ತೀವ್ರ’ ಲಾಕ್ಡೌನ್ ಅಳವಡಿಸಿಕೊಂಡಿವೆ. […]
ಭವಿಷ್ಯದ ಸಮಾಜದ ಮೇಲೆ ಕೊರೋನಾ ಬೀರುವ ಪ್ರಭಾವಗಳು ಅಲ್ಪಾವಧಿ, ದೀರ್ಘಾವಧಿ ಅಥವಾ ಶಾಶ್ವತ ಸ್ವರೂಪದವಾಗಿರುವ ಸಾಧ್ಯತೆ ಇದೆ. ಸಾಂಕ್ರಾಮಿಕ ರೋಗವೊಂದು ಯಾರೂ ಊಹಿಸದ ರೀತಿಯಲ್ಲಿ ಮನುಷ್ಯಕುಲವನ್ನೇ ಹೆದರಿಸಿ ಮನೆಯೊಳಗೆ ಸೇರಿಕೊಳ್ಳುವಂತೆ ಮಾಡಿರುವ ಈ ಐತಿಹಾಸಿಕ ಕಾಲಘಟ್ಟವು ಮುಂದಿನ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳಲ್ಲಿ ಉಂಟುಮಾಡಬಹುದಾದ ದೂರಗಾಮಿ ಪರಿಣಾಮಗಳ ಬಗೆಗೆ ಖಚಿತವಾಗಿ ಊಹಿಸಲು ಈಗಲೇ ಸಾಧ್ಯವಾಗಲಿಕ್ಕಿಲ್ಲ. ಆದರೆ ಈಗ ಬಂದಿರುವ ಮತ್ತು ಮುಂದೆ ಬರಬಹುದಾದ ಸಾಂಕ್ರಾಮಿಕ ಪಿಡುಗುಗಳು ಮನುಷ್ಯನ ವರ್ತನೆಗಳನ್ನು, ಅಭ್ಯಾಸಗಳನ್ನು, ಕಲಿಯುವ, ಚಿಂತಿಸುವ ಮತ್ತು […]
ಇತ್ತೀಚೆಗೆ ನಡೆದ ಸರ್ವೇಕ್ಷಣೆಯೊಂದರಲ್ಲಿ ‘ಕೊರೊನೋತ್ತರ ಬದುಕು ಸುಧಾರಿಸಬಲ್ಲದೇ’ ಎಂಬ ಪ್ರಶ್ನೆಗೆ ಸುಮಾರು 83% ಜನರು ‘ಹೌದು’ ಎಂದು ಉತ್ತರಿಸಿದ್ದಾರೆ! ಕೊರೊನಾ ತರಹದ ಕರಾಳ ದಿನಗಳು ಪ್ರತಿ ನೂರು ವರ್ಷಕ್ಕೊಮ್ಮೆ ಮರುಕಳಿಸುತ್ತಿವೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. 1720ರಲ್ಲಿ ಜರುಗಿದ ಸಿಡುಬು ರೋಗ, 1820ರಲ್ಲಿ ಬಂದು ಹೋದ ವಾಂತಿ-ಬೇಧಿ ರೋಗ (ಮಾರಿ ರೋಗವೆಂತಲೂ ಕರೆಯುತ್ತಾರೆ), 1920ರಲ್ಲಿ ಸಂಭವಿಸಿದ ಸ್ಪಾನಿಷ್ ಫ್ಲೂ, ಈಗ 2020ರಲ್ಲಿ ಒಮ್ಮಲೇ ಅಪ್ಪಳಿಸಿರುವ ಕೊರೊನಾ ಪಿಡುಗು. ಇಂಥ ಸಂಕಷ್ಟ ಕಾಲ ನಿಭಾಯಿಸಲು ಸಾಕಷ್ಟು ಪ್ರಮಾಣದಲ್ಲಿ ಸಂಪನ್ಮೂಲಗಳು ಬೇಕಾಗುತ್ತವೆ. […]