ಕನ್ನಡದ ಕಾವ್ಯಋಷಿ ಕೃಷ್ಣಶೆಟ್ಟರು ಕಣ್ಮರೆಯಾದರು

-ಶಿವಶಂಕರ ಹಿರೇಮಠ

ಕನ್ನಡದ ಕಾವ್ಯಋಷಿ ಕೃಷ್ಣಶೆಟ್ಟರು ಕಣ್ಮರೆಯಾದರು
-ಶಿವಶಂಕರ ಹಿರೇಮಠ

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದ (1980) ಕವಿ ಕೃಷ್ಣಶೆಟ್ಟರು ನಮ್ಮನ್ನಗಲಿದ್ದಾರೆ. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಇವರು ನೇರ ಆಯ್ಕೆಯಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳೆಂದು ನಿಯಮಕಗೊಂಡಿದ್ದರು (1961). ಪ್ರಾಮಾಣಿಕ, ದಕ್ಷ, ಅಭಿವೃದ್ಧಿಪರವಾದ ಬಿಡುವಿಲ್ಲದ ಆಡಳಿತದಲ್ಲಿಯೇ ತಲ್ಲೀನರಾಗಿದ್ದ ಕೃಷ್ಣಶೆಟ್ಟರು ನಿವೃತ್ತಿಯ ನಂತರ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡರು. ನಡುಗನ್ನಡ ಕಾಲದ ಷಟ್ಪದಿ ಕಾವ್ಯಪ್ರಕಾರದಲ್ಲಿ ದಾರ್ಶನಿಕ ವ್ಯಕ್ತಿಗಳಾದ ರಾಮಕೃಷ್ಣ ಪರಮಹಂಸರು, ಅರವಿಂದ ರಮಣ ಮಹರ್ಷಿಗಳು ಮತ್ತು ಮಹಾತ್ಮಾ ಗಾಂಧೀಜಿ ಕುರಿತಾದ ಇವರ ಮಹಾಕಾವ್ಯಗಳು ಅಪರೂಪದ ಪ್ರಯೋಗಗಳಾಗಿವೆ. ಭಾರತದ ಪ್ರಾಚೀನ ಪರಂಪರೆ, ಆಧ್ಯಾತ್ಮಕ […]

ಹೊಸಪುಸ್ತಕ

ಸಮಾಜ ಸಂಸ್ಕೃತಿ ಪ್ರಭುತ್ವ ಸಮಾಜಸಂಸ್ಕೃತಿಪ್ರಭುತ್ವ ಪ್ರಾಚೀನ ಭಾರತದ ಚರಿತ್ರೆಯ ಇಣುಕುನೋಟ ಬಾರ್ಕೂರು ಉದಯ ಪುಟ: 100, ಬೆಲೆ: ರೂ.250 ಪ್ರೊಡಿಜಿ ಪ್ರಿಂಟಿಂಗ್, ತಳ ಅಂತಸ್ತು, ಕೆನರಾ ಟವರ್, ಮಿಷನ್ ಆಸ್ಪತ್ರೆ ರಸ್ತೆ, ಉಡುಪಿ-576101 ಪ್ರಥಮ ಮುದ್ರಣ: 2019 ಪ್ರಾಚೀನ ಭಾರತದ ಇತಿಹಾಸದ ಕಡೆಗೆ ಒಳನೋಟ ಬೀರುವ ಕೃತಿಯಿದು. ಈ ಕೃತಿಯಲ್ಲಿ ಪ್ರಾಚೀನ ಉತ್ತರ ಹಾಗೂ ದಕ್ಷಿಣ ಭಾರತದ ಚಿತ್ರಣವನ್ನು ಸಂಕ್ಷಿಪ್ತವಾಗಿ ಒದಗಿಸಲಾಗಿದೆ. ಲೇಖಕರೇ ಹೇಳುವಂತೆ, ಹರಪ್ಪ ಕಾಲದಿಂದ ಗುಪ್ತ ಸಾಮ್ರಾಜ್ಯದ ಕಾಲದವರೆಗೆ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ […]

ರತ್ನಾಕರವರ್ಣಿಯ ಮಹಾಕಾವ್ಯ ‘ಭರತೇಶವೈಭವ’

-ಡಾ.ಮಾಧವ ಎಂ.ಕೆ.

ರತ್ನಾಕರವರ್ಣಿಯ ಮಹಾಕಾವ್ಯ ‘ಭರತೇಶವೈಭವ’
-ಡಾ.ಮಾಧವ ಎಂ.ಕೆ.

ಹಳಗನ್ನಡ ಕಾವ್ಯಗಳ ಸಾಲಿನಲ್ಲಿ ಈ ಕೃತಿಯನ್ನು ಗುರುತಿಸಿದರೂ ಈ ಕೃತಿಯಲ್ಲಿ ಬಳಸಿರುವ ಕನ್ನಡವು ಹಳಗನ್ನಡದ ಪ್ರಭಾವದಿಂದ ಮುಕ್ತವಾಗಿದ್ದು ಹೊಸಗನ್ನಡಕ್ಕೆ ಹತ್ತಿರದಲ್ಲಿದೆ. ಇದನ್ನು ನಡುಗನ್ನಡದ ಕೃತಿಯೆಂದು ಪರಿಗಣಿಸಲಾಗಿದೆ. ಈ ಮಹಾಕಾವ್ಯವು ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಗುಜರಾತಿ ಭಾಷೆಗಳಿಗೆ ಅನುವಾದಗೊಂಡಿರುವುದು ಕೃತಿಯ ಲೋಕಪ್ರಿಯತೆಗೆ ಸಾಕ್ಷಿ. ಜೈನ ಮಹಾಕವಿ ರತ್ನಾಕರವರ್ಣಿಯಿಂದ ರಚಿಸಲ್ಪಟ್ಟಿರುವ ಅದ್ಭುತ ಕೃತಿ ‘ಭರತೇಶವೈಭವ’. ಲೌಕಿಕ ಹಾಗೂ ಆಧ್ಯಾತ್ಮಿಕ ವಿಚಾರಗಳ ಸಮನ್ವಯದ ಕೃತಿಯಾಗಿ ಇದು ಹೊರಹೊಮ್ಮಿದೆ. ತ್ಯಾಗ-ಭೋಗ ಸಮನ್ವಯದ ಕೃತಿಯಾಗಿಯೂ ‘ಭರತೇಶವೈಭವ’ ವಿಜೃಂಭಿಸುತ್ತದೆ ಎಂದರೂ ಅದು ಯಾವುದೇ ವೈಭವೀಕರಣದ […]

ತೆರೆದ ಮನಸ್ಸು, ಸತ್ಕಾರದ ಹುಮ್ಮಸ್ಸು!

ಅಬ್ದುಲ್ ಹೈ, ತೋರಣಗಲ್ಲು.

ತೆರೆದ ಮನಸ್ಸು, ಸತ್ಕಾರದ ಹುಮ್ಮಸ್ಸು!
ಅಬ್ದುಲ್ ಹೈ, ತೋರಣಗಲ್ಲು.

ಎಲ್ಲಿಂದಲೋ ಬಂದ ಗಡ್ಡಧಾರಿ ಶೇರವಾನಿಯೊಬ್ಬ, ‘ಕಾಫೀರರ ರಿವಾಜುಗಳನ್ನು ಆಚರಿಸಬೇಡಿ, ಅದು ಧರ್ಮ ವಿರೋಧಿ, ನಿಮಗೆ ಜನ್ನತ್ತಿನಲ್ಲಿ ಜಾಗ ಸಿಗೋಲ್ಲ…’ ಎಂದು ಅರ್ಥವಾಗದ ಪರಲೋಕ ಪಾಠ ಹೇಳಿ ಇಲ್ಲದ್ದನ್ನು ಬಿತ್ತಿದ. ಜನಿವಾರದ ಜುಟ್ಟೊಂದು, ‘ನಮ್ಮದು ಸನಾತನ ಧರ್ಮ, ನಮ್ಮದೇ ಶ್ರೇಷ್ಠ, ಇತರರದು ಕನಿಷ್ಠ, ಮುಸಲರು ಪರಕೀಯರು, ದೇಗುಲ ಪ್ರವೇಶದಿಂದ ದೂರವಿಡಿ, ಧರ್ಮಭ್ರಷ್ಟರಾದೀರಿ ಹುಷಾರ್…’ ಎಂದು ಭಾವನೆಗಳನ್ನು ಕೆರಳಿಸತೊಡಗಿತು. ಇಬ್ಬರನ್ನೂ ತಿರಸ್ಕರಿಸಿ ಸೌಹಾರ್ದ ಮೆರೆಯಿತು ನನ್ನೂರು! ಊರು ಅಂದರೆ ಬರೀ ಮನೆಗಳ ಸಾಲುಗಳಲ್ಲ; ಮನುಷ್ಯರ, ಮನಸ್ಸುಗಳ ಇರುವಿಕೆ… ಪ್ರಕೃತಿ ಸೊಬಗಿನ […]

ಪಕ್ಷಾಂತರಿ-ಲಕ್ಷಾಂತರಿ

ಎಂ.ಎಸ್.ನರಸಿಂಹಮೂರ್ತಿ

ಪಕ್ಷಾಂತರಿ-ಲಕ್ಷಾಂತರಿ
ಎಂ.ಎಸ್.ನರಸಿಂಹಮೂರ್ತಿ

ನಮ್ಮ ಟಿ.ಈ.ನುಂಗಣ್ಣನವರ್ ಎಂ.ಎಲ್.ಎ. ಎಲೆಕ್ಷನ್‌ಗೆ ಸುಮ್ನೆ ನಿಂತ್ರು. ಅವರ ಪೂರ್ಣ ಹೆಸರು ತಿನ್ನಪ್ಪ ಈಟಪ್ಪ ನುಂಗಣ್ಣನವರ್! ವಿಧಾನಸೌಧಕ್ಕೆ ಹೇಳಿ ಮಾಡಿಸಿದ ವ್ಯಕ್ತಿತ್ವ! ಅದೃಷ್ಟ ಅಂಬೋದು ಯಾವ ಬಾಗಿಲಿಂದ ಹೆಂಗ್ ಬರುತ್ತೋ ಗೊತ್ತಾಗೋದಿಲ್ಲ. ಅದೃಷ್ಟಶಾಲಿಯ ಹುಂಜವೂ ಮೊಟ್ಟೆ ಇಡುತ್ತಂತೆ..! ಅದೃಷ್ಟ ಹಣೆಯ ಗೆರೆಗಳ ಮೇಲಿದೆ. ಕುದುರೆಗಾಡಿಯಲ್ಲಿ ನಾವು ಕೂತಿರುವುದು. ಲಗಾಮು ದೇವರ ಕೈಲಿ. ಯಾವ ಹುಡುಗಿ ಯಾರ ಮನೇಲಿ ಸೆಟಲ್ ಆಗ್ತಾಳೋ ಗೊತ್ತಿಲ್ಲ. ಯಾವ ರಾಜಕಾರಣಿ ಯಾವ ಕುರ್ಚಿಯಲ್ಲಿ ಕೂರುವನೋ ತಿಳಿಯದು. ಹಾಗಂತ ಜನ ಮಾತಾಡ್ತಾರೆ. ಹಿಂದಿನ ಕಾಲದಲ್ಲಿ […]

ಮಾತಲ್ಲೂ ಗೂಗ್ಲಿ ಎಸೆದ ಸುನಿಲ್ ಜೋಶಿ! ಹುಬ್ಬಳ್ಳಿಯಾಂವ ಈಗ ಪ್ರತಿಭೆ ಶೋಧಕ!

-ಕೆ.ವಿ.ಪರಮೇಶ್

ಮಾತಲ್ಲೂ ಗೂಗ್ಲಿ ಎಸೆದ ಸುನಿಲ್ ಜೋಶಿ! ಹುಬ್ಬಳ್ಳಿಯಾಂವ ಈಗ ಪ್ರತಿಭೆ ಶೋಧಕ!
-ಕೆ.ವಿ.ಪರಮೇಶ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ, ಹುಬ್ಬಳ್ಳಿಯಾಂವ, ಸುನಿಲ್ ಜೋಶಿ ಅವರನ್ನು ಆಯ್ಕೆ ಮಾಡಿದೆ. ಬಹಳ ವರ್ಷಗಳ ಬಳಿಕ ಮತ್ತೊಮ್ಮೆ ಕನ್ನಡಿಗರೊಬ್ಬರಿಗೆ ಆಯಕಟ್ಟಿನ ಹುದ್ದೆ ಸಿಕ್ಕಿದೆ. ಇದು ಕನ್ನಡದ ಉದಯೋನ್ಮುಖ ಪ್ರತಿಭೆಗಳು ದೇಶದ ಪರ ಆಡಲು ಅನುಕೂಲ ಆಗಬಹುದು ಎಂಬ ಮಹದಾಸೆ ಚಿಗುರಿಸಿದೆ. ಆದರೆ ಸೀಮಿತ ಚೌಕಟ್ಟು, ಪ್ರಭಾವ, ಲಾಬಿ ಇದಕ್ಕೆ ಅವಕಾಶ ಮಾಡಿಕೊಡಲಿದೆಯಾ ಎನ್ನುವುದು ಯಕ್ಷಪ್ರಶ್ನೆ. ಈ ಸಂಬಂಧ ಜೋಶಿ ಅವರನ್ನು ‘ಸಮಾಜಮುಖಿ’ ಪರವಾಗಿ ಮಾತಿಗೆಳೆದಾಗ ಅವರು ತಮ್ಮ […]

ವೈಲ್ಡ್ ಕರ್ನಾಟಕ ರಾಜ್ಯದ ವನ್ಯಜೀವಿ ವೈವಿಧ್ಯದ ವಿಹಂಗಮ ನೋಟ

ಎಂ.ಕೆ.ಆನಂದರಾಜೇ ಅರಸ್

ವೈಲ್ಡ್ ಕರ್ನಾಟಕ ರಾಜ್ಯದ ವನ್ಯಜೀವಿ ವೈವಿಧ್ಯದ ವಿಹಂಗಮ ನೋಟ
ಎಂ.ಕೆ.ಆನಂದರಾಜೇ ಅರಸ್

ನಿರ್ಮಾಪಕರೇ ನೀಡಿರುವ ಮಾಹಿತಿಯ ಪ್ರಕಾರ 52 ನಿಮಿಷಗಳ ಅವಧಿಯ ಈ ಸಾಕ್ಷ್ಯಚಿತ್ರದ ನಿರ್ಮಾಣಕ್ಕೆ 1500 ದಿನಗಳನ್ನು ವ್ಯಯಿಸಲಾಗಿದೆ, 15,000 ಗಂಟೆಗಳನ್ನು ಕಾಡಿನಲ್ಲಿ ಕಳೆಯಲಾಗಿದೆ, 2,400 ನಿಮಿಷಗಳಷ್ಟು ಅವಧಿಯ ಚಿತ್ರೀಕರಣ ಮಾಡಲಾಗಿದೆ ಹಾಗೂ 20 ಕ್ಯಾಮೆರಾಗಳನ್ನುಬಳಸಲಾಗಿದೆ. ‘ವೈಲ್ಡ್ ಕರ್ನಾಟಕ’ ಸಾಕ್ಷ್ಯಚಿತ್ರವನ್ನು ಭಾರತದ ಮೊದಲ ಬ್ಲೂಚಿಪ್ ನೈಸರ್ಗಿಕ ಇತಿಹಾಸ ಸಾಕ್ಷ್ಯಚಿತ್ರವೆಂದು ಬಿಂಬಿಸಲಾಗಿದೆ. ಇಂಗ್ಲಿಷ್‌ನ ಬ್ಲೂಚಿಪ್ ಪದಕ್ಕೆ ಅತ್ಯುತ್ತಮ ಗುಣಮಟ್ಟದ್ದು ಎಂಬ ಅರ್ಥವಿದೆ. ಅಂತಾರಾಷ್ಟ್ರೀಯ ನೈಸರ್ಗಿಕ ಇತಿಹಾಸ ಆಧಾರಿತ ವಾಹಿನಿಗಳಲ್ಲಿ ಪ್ರಸಾರವಾಗುವ ಸಾಕ್ಷ್ಯಚಿತ್ರಗಳನ್ನು ಇಂತಹ ಗುಣಮಟ್ಟದೊಂದಿಗೆ ಗುರುತಿಸಬಹುದು. ಅನುಭವ-ಪ್ರತಿಭೆ, ಬದ್ಧತೆ-ಶ್ರಮ ಹಾಗೂ […]

ಕೊರೊನಾ ನೆನಪಿಸಿದ ಎರಡು ಚಿತ್ರಗಳು ಕಂಟೇಜಿಯನ್ ಮತ್ತು ವೈರಸ್

ಶರೀಫ್ ಕಾಡುಮಠ

ಕೊರೊನಾ ನೆನಪಿಸಿದ ಎರಡು ಚಿತ್ರಗಳು ಕಂಟೇಜಿಯನ್ ಮತ್ತು ವೈರಸ್
ಶರೀಫ್ ಕಾಡುಮಠ

ಇಂಗ್ಲಿಷ್ ಭಾಷೆಯ ‘ಕಂಟೇಜಿಯನ್’ ಚಿತ್ರ ಸೋಂಕು ಹರಡುವ ಸಾಧ್ಯತೆಗಳನ್ನು ಬಹಳ ಸೂಕ್ಷ್ಮವಾಗಿ ಬಿಡಿಸಿಟ್ಟರೆ, ಮಲೆಯಾಳಂ ಸಿನಿಮಾ ‘ವೈರಸ್’ ಜನರ ಭೀತಿ-ಆತಂಕವನ್ನು ಆರ್ದ್ರವಾಗಿ ಕಟ್ಟಿಕೊಡುತ್ತದೆ. ಕೊರೊನಾ ಪೀಡನೆಯ ಪ್ರಸ್ತುತ ಸಂದರ್ಭದಲ್ಲಿ ಇವೆರಡೂ ಪ್ರಯೋಗಗಳು ತೀವ್ರ ಕುತೂಹಲ ಹುಟ್ಟಿಸಿವೆ; ಹಲವಾರು ವಿಚಾರಗಳನ್ನು ಅರಿಯಲು ಸಹಕಾರಿಯಾಗಿವೆ.     ಕಂಟೇಜಿಯನ್ ಕೊರೊನಾ ವೈರಸ್‌ನ ಹರಡುವಿಕೆಯ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಮತ್ತೆ ಸುದ್ದಿಗೆ ಬಂದ ಇಂಗ್ಲಿಷ್ ಸಿನಿಮಾ ‘ಕಂಟೇಜಿಯನ್’. 2011ರಲ್ಲಿ ಬಿಡುಗಡೆಯಾದ ಈ ಸಿನಿಮಾ ಅಂದಿಗಿಂತ ಹೆಚ್ಚು ಈಗ ಪ್ರಸ್ತುತವೆನಿಸಿದೆ. ಅಮೆರಿಕದ ಹೆಸರಾಂತ ನಿರ್ದೇಶಕ […]

ಕವಿತೆ

ಕವಿತೆ

ಪ್ರೀತಿಯ ರಾದ್ಧಾಂತಗಳು   ನಿದ್ದೆ ಬಾರದ ರಾತ್ರಿಗಳು ಸದ್ದೆ ಇರದ ಜಾತ್ರೆಗಳು ತುಂಬಿದ ಕೆರೆಗಳು ಖಾಲಿ ಬಿದ್ದ ಕೊಡಗಳು   ಜಮಾವಣೆಯಾಗದ ಖಾತೆಗಳು ಬಟವಾಡೆಯಾಗದ ರಸೀತಿಗಳು ಜನಜಂಗುಳಿಯ ಮಾರುಕಟ್ಟೆಗಳು ತೂತು ಬಿದ್ದ ಜೇಬುಗಳು   ನುಡಿಸದೆ ಹೋದ ವಾದ್ಯಗಳು ಬಡಿಸದೆ ಇದ್ದ ಖಾದ್ಯಗಳು ಚೆಂದದ ಜಡೆಗಳು ಮುಡಿಗೇರದ ಹೂಗಳು   ಕೇಳದೆ ಬರುವ ಖಾಯಿಲೆಗಳು ಹೇಳದೆ ಹೋದ ಕಾರಣಗಳು ಸುಂದರ ಕಲಾಕೃತಿಗಳು ಪಾಳುಬಿದ್ದ ದೇಗುಲಗಳು   ವಯಸುಗಳು ಹೂ ಮನಸುಗಳು ಜಾತಿಗಳು, ಜಟಾಪಟಿಗಳು ಕೊನೆಯಿರದ ಪಯಣಗಳು ಆಕಸ್ಮಿಕ […]