ಕ್ಷಮಿಸು ಏಕಲವ್ಯ

-ಡಾ.ಜ್ಯೋತಿ

 ಕ್ಷಮಿಸು ಏಕಲವ್ಯ <p><sub> -ಡಾ.ಜ್ಯೋತಿ </sub></p>

–ಡಾ.ಜ್ಯೋತಿ ಇದು, ಏಕಲವ್ಯ ಮತ್ತು ದ್ರೋಣಾಚಾರ್ಯರ ನಡುವಿನ ಮುಖಾಮುಖಿ ಹಾಗೂ ಅವರ ಗುರು–ಶಿಷ್ಯ ಸಂಬಂಧದ ಮರುವ್ಯಾಖ್ಯಾನದ ಪ್ರಯತ್ನ. `ಆಚಾರ್ಯ, ನಿಮ್ಮ ಕೈ ಯಾಕೆ ಹೀಗೆ ನಡುಗುತ್ತಿದೆ? ಹೆಬ್ಬೆರಳ ಕತ್ತರಿಸಿಕೊಂಡು ನೋವು ಅನುಭವಿಸುತ್ತಿರುವವನು ನಾನು. ಆದರೆ, ನಿಮ್ಮ ಕಣ್ಣಲ್ಲಿ ನೀರು! ಯಾಕೆ, ಈ ಕಂಪನ? ನಿಮ್ಮ ಅಂಗೈಯಲ್ಲಿ ನನ್ನ ಹೆಬ್ಬೆರಳು ಸುರಿಸುತ್ತಿರುವ ರಕ್ತವನ್ನು ನಿಮ್ಮ ಕಣ್ಣೀರು ತೊಯ್ಯುತ್ತಿದೆ. ಸುಧಾರಿಸಿಕೊಳ್ಳಿ. ನನಗೇನು ಬೇಸರವಾಗಿಲ್ಲ. ನಿಮಗೆ ಸಲ್ಲಬೇಕಾದ ಗುರುದಕ್ಷಿಣೆ ಕೊಡುವುದು ಬಾಕಿಯಾಗಿಯೇ ಉಳಿದಿತ್ತು. ಅದನ್ನು ತೀರಿಸಿದ ಮೇಲಷ್ಟೇ, ನಾನು ನಿಮ್ಮ ಸ್ಫೂರ್ತಿಯಿಂದ […]

ಮುಟ್ಟು…

-ಕ್ಷಿತಿಜ್ ಬೀದರ್

ಈ ಪ್ರೀತಿ ಕೇವಲ ನಾಟಕೀಯ, ಹೃದಯಪೂರ್ವಕವಾದುದಲ್ಲ ಎಂದೆನಿಸಿತು. ಪ್ರೀತಿ ತೋರಿದಾಗ ಸಂತೋಷವಾಗುತ್ತಿರಲಿಲ್ಲ. ಬೇರೆಯವರ ಜೊತೆ ಕೂಡಿದಾಗ ದುಃಖವೂ ಆಗುತ್ತಿರಲಿಲ್ಲ. ಕೇವಲ ಯಾಂತ್ರಿಕ ಗೊಂಬೆಯಾದೆ. ನನ್ನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲದಂತಾಗಿತ್ತು. ಶಬರಿಮಲೆ ದೇವರ ಪಾದಗಳಿಗೆ ಮುಟ್ಟಿ ಕೃತಾರ್ಥಳಾಗುವುದು ಯಾವಾಗ…? -ಕ್ಷಿತಿಜ್ ಬೀದರ್ ಸದಾ ಚಿಂತಿತಳಾಗಿರುವ ಕಲಾ ತನ್ನ ಸಹೊದ್ಯೋಗಿಗಳೊಂದಿಗೆ ನಗುತ್ತಾ ಕಾಲ ಕಳೆಯುತ್ತಿದ್ದಳಷ್ಟೆ. ಮನದ ನೋವು ಮಾತ್ರ ಯಾರಲ್ಲಿಯೂ ಹಂಚಿಕೊಂಡವಳಲ್ಲಾ. ಇತ್ತೀಚೆಗೆ ಬಹು ಚರ್ಚಿತವಾಗಿರುವ ಶಬರಿ ಮಲೆ ಪ್ರವೇಶವು ಅವಳಲ್ಲಿ ಚೂರು ಆಶಾಭಾವನೆ ಮೂಡಿಸಿದರೂ, ಅದು ತನ್ನ ಬದುಕಿನಲ್ಲಿ […]

ಅಲಿಖಿತ

-ಡಾ.ಕೊಳ್ಚಪ್ಪೆ ಗೋವಿಂದ ಭಟ್

ಓದುಗರ ಮತ್ತು ಕತೆಗಾರರ ಬಹುಕಾಲದ ಬೇಡಿಕೆಯಂತೆ ಸಮಾಜಮುಖಿ ಪ್ರತೀ ತಿಂಗಳು ಒಂದು ಸಣ್ಣಕತೆ ಹೊತ್ತು ತರಲಿದೆ. ಹೆಸರಾಂತರ ಜೊತೆಗೆ ಉದಯೋನ್ಮುಖ ಕತೆಗಾರರಿಗೂ ಸಮಾನ ಅವಕಾಶ. ಯಾವ ಮಾಧ್ಯಮದಲ್ಲೂ ಪ್ರಕಟವಾಗದ 2000 ಪದಮಿತಿಯ ಕತೆಗಳನ್ನು ನೀವೂ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ, ಕಿರುಪರಿಚಯ ಇರಲಿ. samajamukhi2017@gmail.com -ಡಾ.ಕೊಳ್ಚಪ್ಪೆ ಗೋವಿಂದ ಭಟ್ ಗುಂಡಣ್ಣ ಶಿವಮೊಗ್ಗದಿಂದ ಬಸ್ ಸ್ಟೇಂಡಿಗೆ ಬಂದಾಗ ಹತ್ತು ಗಂಟೆಯಾಗಿತ್ತು. ಭಾನುವಾರವಾದ್ದರಿಂದ ಬಸ್ಸುಗಳೆಲ್ಲ ಭರ್ತಿಯಾಗಿದ್ದುವು. ಗುಂಡಣ್ಣ ಸೀಟು ಕಾದಿರಿಸಿರಲಿಲ್ಲ. ಅವರಿಗೆ ಅಂತಹ ಅಭ್ಯಾಸವೂ ಇರಲಿಲ್ಲ. ಹಾಗೆಂದು ಅವರು ಆಗಾಗ […]

ಹೊರೆ

ಓದುಗರ ಮತ್ತು ಕತೆಗಾರರ ಬಹುಕಾಲದ ಬೇಡಿಕೆಯಂತೆ ಸಮಾಜಮುಖಿ ಪ್ರತೀ ತಿಂಗಳು ಒಂದು ಸಣ್ಣಕತೆ ಹೊತ್ತು ತರಲಿದೆ. ಈ ಸಂಚಿಕೆಯಿಂದಲೇ ಪ್ರಕಟಣೆ ಪ್ರಾರಂಭ. ಹೆಸರಾಂತರ ಜೊತೆಗೆ ಉದಯೋನ್ಮುಖ ಕತೆಗಾರರಿಗೂ ಸಮಾನ ಅವಕಾಶ. ಯಾವ ಮಾಧ್ಯಮದಲ್ಲೂ ಪ್ರಕಟವಾಗದ 2000 ಪದಮಿತಿಯ ಕತೆಗಳನ್ನು ನೀವೂ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ, ಕಿರುಪರಿಚಯ ಇರಲಿ. ಸಂದೀಪನ ಬೆರಳುಗಳು ಲ್ಯಾಪ್‍ಟಾಪಿನ ಕೀಬೋರ್ಡಿನ ಮೇಲೆ ಕುಣಿದಾಡುತ್ತಲೇ ಇದ್ದವು. ಅವುಗಳಲ್ಲಿ ಅನೇಕ ಬಾರಿ ಬೆರಳು ಡಿಲೀಟ್ ಬಟನ್ ಕಡೆಗೊ ಅಥವಾ ಬ್ಯಾಕ್‍ಸ್ಪೇಸ್‍ನ ಕಡೆಗೊ ಜೋಲಿ ಹೊಡೆದು ಮತ್ತೆ […]