ಕವಿತೆ

-ಸಿಂಧುವಳ್ಳಿ ಸುಧೀರ

ಕವಿತೆ
-ಸಿಂಧುವಳ್ಳಿ ಸುಧೀರ

ಎಷ್ಟು ದ್ರೋಣರಿದ್ದಾರೆ? ಎಷ್ಟು ದ್ರೋಣರಿದ್ದಾರೆ? ಗುರುಕಾಣಿಕೆ ಕೇಳಲು ನಮ್ಮ ಬೆರಳ ಕತ್ತರಿಸಿ ಜಾತಿವಾದ ಮೆರೆಯಲು ಆಕಾಶವ ತೋರಿಸಿ ಆಸೆಗಣ್ಣ ತೆರೆಯಿಸಿ ಪಾತಾಳಕೆ ದೂಡಲು ಪಾಪಕೃತ್ಯ ಮೆರೆಯಲು ಅಲ್ಲಿ ಇಲ್ಲಿ ಅಲೆದಾಡಿಸಿ ನಮ್ಮ ಸಮಯ ಸಾಯಿಸಿ ವಿಚಾರ ಸಂಕಿರಣದಲ್ಲಿ ಪ್ರಚಾರ ಪಡೆವ ಪಂಡಿತರು ಪಾಠಪಠ್ಯ ಹೊರಗೆ ಇಟ್ಟು ಹೊಟೆಲ್‍ನಲ್ಲಿ ಕೂತುಬಿಟ್ಟು ಹರಟೆ ಹೊಡೆವ ಭೂಪರು ಬಲು ಜಂಭದ ಪ್ರೊಫೆಸರು ಕ್ಲಾಸಿನಲ್ಲಿ ತಮ್ಮ ಮನೆಯ ಕಥೆಯ ಹೇಳೋ ಮಾಸ್ಟರು ಸ್ಪೆಷಲ್ ಕ್ಲಾಸಿನಲ್ಲಿ ಪುಂಗಿ ಊದೊ ಪ್ರವೀಣರು ನೀತಿಗೀತಿ ಅನ್ನುತಾರೆ ತತ್ತ್ವಗಿತ್ವ […]

ಬೊಂಬೆ

-ಜಿ.ಪಿ.ಬಸವರಾಜು

ಬೊಂಬೆ
-ಜಿ.ಪಿ.ಬಸವರಾಜು

–ಜಿ.ಪಿ.ಬಸವರಾಜು 1 ಒಂದು ಬೊಂಬೆಯನ್ನು ಹೇಗೂ ಮಾಡಬಹುದು ಮೊದಲು ಕೈ ಕಾಲು ಬೇಡ ಬೆರಳಿಂದಲೂ ಆದೀತು, ಕಣ್ಣು ಕಿವಿ ಹೊಟ್ಟೆ ತುಟಿ ಹಲ್ಲು ಬೇಕಾದ್ದು ಬೇಕಾದಂತೆ ಮಾಡಿ ಜೋಡಿಸಬಹುದು ಆಕಾರಕ್ಕೆ ಮತ್ತೆ ಬಟ್ಟೆಯ ಮಾತು, ಬೊಂಬೆಯೇನೂ ಕೇಳುವುದಿಲ್ಲ, ಬಟ್ಟೆ, ಬೆತ್ತಲು ಎಲ್ಲ ನಿಮ್ಮ ನಿಮ್ಮ ಅರಿವಿನ ಪರಿಧಿ; ಬಟ್ಟೆ, ಆಕಾರ, ಬಣ್ಣ, ನಿಮ್ಮ ಕಣ್ಣಿನ ಬಿಂಬ ಬೊಂಬೆ ಯಾವುದನ್ನೂ ಆಚೆ ತಳ್ಳುವುದಿಲ್ಲ ಇಷ್ಟೆಲ್ಲ ಆದಮೇಲೂ ಬೊಂಬೆಗೆ ಜೀವ- ಬರುವುದು ಮಗು ಮಾತನಾಡಿದಾಗ ಮಗು ನಿಜಕ್ಕೂ ಮಾತನಾಡುತ್ತೆ, ಬೊಂಬೆಗೆ […]

ನಾನು ನಾನಾಗಿಯೇ

ನಂದವನಂ ಚಂದ್ರಶೇಖರನ್

ತಮಿಳು ಮೂಲ: ನಂದವನಂ ಚಂದ್ರಶೇಖರನ್ ಅನುವಾದ: ಮಲರ್ ವಿಳಿ ಕೆ ಒರಗಿಕೊಳ್ಳಲು ನನಗೆ ಒಂದು ತೋಳು ಬೇಕು ಆದರೆ ನಾನು ಯಾರನ್ನೂ ಅವಲಂಬಿಸುವವನಲ್ಲ ಕೈ ಕುಲುಕಿ ಹೊಗಳಲು ನನಗೆ ಒಳ್ಳೆಯ ಕರಗಳು ಬೇಕು ಆದರೆ ನಾನು ಯಾರಿಗೂ ಕೂಲಿಯಾಳಾಗಿರುವವನಲ್ಲ ಹಾರೈಸಲು ನನಗೆ ಒಳ್ಳೆಯ ನುಡಿಗಳು ಬೇಕು ಆದರೆ ನಾನು ಯಾರ ಹಾರೈಕೆಗಾಗಿಯೂ ಕಾದಿರುವವನಲ್ಲ ನನ್ನನ್ನಷ್ಟೇ ನಂಬಿ ನನ್ನ ಪಯಣವನ್ನು ತೊಡಗುವೆ ಆದರೆ ಯಾರ ಭಾವನೆಗಳಲ್ಲೂ ನಾನು ಕಳೆದು ಹೋಗುವವನಲ್ಲ ಸದಾ ನನ್ನಲ್ಲೇ ನನ್ನ ಅರಸುವೆನು ಯಥಾರ್ಥಗಳನ್ನು ಹೊರುತ್ತಲೇ… […]

ಸಾಲು ಸಾಲು…

-ಮಾಲತಿ ಪಟ್ಟಣಶೆಟ್ಟಿ

ಸಾಲು ಸಾಲು…
-ಮಾಲತಿ ಪಟ್ಟಣಶೆಟ್ಟಿ

-ಮಾಲತಿ ಪಟ್ಟಣಶೆಟ್ಟಿ           1. ಅಲ್ಲಿ ಬಾನ ತುಂಬಿವೆ ಬೆಳ್ಳಕ್ಕಿಯ ರೆಕ್ಕೆಗಳು, ವಿಸ್ಮಿತ ಕಣ್ಣು ಹಾರಿವೆ ಸಾಲು ಸಾಲು; ಅಲ್ಲಿ ಕಾಡನು ತುಂಬಿದೆ ಪಕ್ಷಿಗಾನದ ಹಾಡು, ಆಸೆಗಳು ಹೊರಟಿವೆ ಅಲ್ಲಿ ಸಾಲು ಸಾಲು; ಅಗೋ ಚೈತ್ರದ ಮಾಮರ ಕಿಕ್ಕಿರಿದು ಮಾವು ತೂಗುತಿವೆ, ನಾಲಗೆ ಚಪಲ ಹೊರಟಿವೆ ಸಾಲು ಸಾಲು; ಎಲ್ಲಿವೆಯೋ ಮಲ್ಲಿಗೆ ಕಂಟಿ ಇಲ್ಲಿ ಬಂದ ಪರಿಮಳಕೆ, ಮುದಗೊಂಡ ಮನವು ಹೊರಟಿವೆ ಸಾಲು ಸಾಲು. 2. ಇಲ್ಲಿ ಆಸ್ಪತ್ರೆಯ ಬಾಗಿಲಿಗೆ ಕಾಯ್ದು […]

ಗಜಲ್

-ಡಾ.ಬಸವರಾಜ ಸಾದರ       ಈಗಲಾದರೂ ದೂಡಬೇಡ ದೂರ, ಬಿಡು ನಿನ್ನ ಪಾದ ಮುಟ್ಟಲು ಕಲ್ಲಾಗಬೇಡ ಕರಗು, ಕಾರಣವಾಗದಿರು ಈ ಪಾಪಿಗೆ ಶಾಪ ತಟ್ಟಲು   ಬೇಡಿದ್ದನೀವ ಮಾತು ಹೇಳುತ್ತ ಬಂದೆ, ಕೊಟ್ಟದ್ದೇನು ಖಾಲಿ ತಟ್ಟೆ ಬಳಸಿಕೊಂಡೆ ಅರ್ಪಿಸಿದ್ದೆಲ್ಲ ಸುಂದರ ಸ್ಥಾವರ ಗೋಪುರ ಕಟ್ಟಲು    ಬೇಡ ದಯೆ-ಧರ್ಮಗಳ ಮಾತು, ನಡೆಯಲೀಗ ಪಕ್ಕಾ ವ್ಯವಹಾರ ಫಲವಿಲ್ಲ ನಿನ್ನ ಯಾಚಿಸಿ, ಸುರು ಮಾಡದಿರು ಮತ್ತೆ ತೌಡು ಕುಟ್ಟಲು   ಎಷ್ಟೆಂದು ತಂದು ನಿಲ್ಲಿಸಲಿ ಸಾಕ್ಷಿ, ನಂಬಲಿಲ್ಲ ಮಾರಿಬಿಟ್ಟೆ […]

ದಿನಚರಿಗೆ ಸಾಕ್ಷಿ

-ಕಿರಸೂರ ಗಿರಿಯಪ್ಪ       ಹೆಜ್ಜೆ ಊರಲು ಸಾಧ್ಯವಾಗದ ತಗ್ಗುದಿನ್ನೆಗಳ ನಡುವೆ ರಸ್ತೆಯ ಗುರುತೇ ಸಿಗದಷ್ಟು ತಿರುವುಗಳು ಕಾಲು ಮಡಚಿಕೊಂಡು ಬಿದ್ದ ಎಲೆಗಳ ದನಿಯೊಳಗೆ ನೆಲದ ಪಿಸುಮಾತಿನ ಸಂಚಾರ ದೀಪದ ಬುಡ್ಡೆಯಾಗಿ ಗೋಚರಿಸುವ ಚುಕ್ಕಿಗಳ ಹೊಕ್ಕಳೀಗ ಗತ್ತಿನಿಂದ ಸುರುಳಿ ಸುತ್ತಿದ ಮೋಡದ ಮಾಯಾ ಬಜಾರಿನ ಸೆಳೆತದಲಿ ಚಂದಿರನ ಜೋಗುಳದಲಿ ಕರಗಿ ಕಣ್ಣೀರಾದ ಮೋಡದ ತೆಕ್ಕೆಗಳಲ್ಲೀಗ ನಿದ್ದೆ ಬಾರದ ರೆಪ್ಪೆಗಳ ನಿಟ್ಟುಸಿರ ಧ್ಯಾನ ಮಿಂಚಿನ ನಡುವೆ ಮಣ್ಣಿನ ಗೋಡೆಯಲಿ ದಿಕ್ಕು ಕಾಣದ ದೀಪದ […]

ಅಪ್ಪನಿಗೆ ವಯಸ್ಸಾಗಲ್ಲ

–ಕೆ ಬಿ ವೀರೇಶ       ಕೆಸರು ಮೈಗೆ ಮೆತ್ತಿಕೊಂಡು ನೇಗಿಲ ಮೇಳಿ ಹಿಡಿದುಕೊಂಡು ಬೆವರ ಹನಿಯ ಭೂಮಿಗಿಳಿಸಿ ದಿನದ ಸೂರ್ಯನಂತೆ ಹೊಳೆದು ಹಗಲೆಲ್ಲಾ ದುಡಿಯುತ್ತಿದ್ದೆ ಕೆಸರ ಗದ್ದೆಯಲ್ಲಿ ಅಪ್ಪಾ ನೀನಂದು ನನಗದು ಅರಗುವುದರೊಳಗೆ ನೀ ಮುದುಕನಾಗಿದ್ದೆ ನಾ ಅಪ್ಪನಾಗಿದ್ದೆ ಅಪ್ಪನಿಗೆ ವಯಸ್ಸಾಗಲ್ಲವೆಂಬುದು ನನ್ನ ಹಣೆ ಬೆವರಿನಿಂದ ಇಂದು ನಾನದನರಿತಿದ್ದೆ ಹೊಂಡು ನೀರಿನಲಿ ಮುಖ ತೊಳೆದು ಹೊಲದ ಬದುವಿನಲಿ ಬಾಗಿ ಕುಳಿತು ರೊಟ್ಟಿ ಮುರಿಯಲು ನೀ ಕೈಚಾಚಿದಾಗ ನಿನ್ನ ಅಂಗೈ ಬೊಬ್ಬೆಗೆ […]

ವಿಪ್ರಲಂಭೆಯ ಸ್ವಗತ

-ಬಿ.ಶ್ರೀನಿವಾಸ

-ಬಿ.ಶ್ರೀನಿವಾಸ ಪಯಣದ ದಾರಿಯ ನೀರವ ಮೌನ ಅರ್ಥವಾದರೂ ಸಾಕಿತ್ತು ದಾರಿಯಲಿ ಕಂಡವರು ಹಲವರು ಅವರೊಬ್ಬರಲಿ ಕಂಡಿದ್ದರೂ ನನ್ನ ಬಿಂಬ ನಾನು ಹೀಗೆ ಎಚ್ಚರದಪ್ಪಿ ಮಲಗಿ ಕಳೆದುಕೊಳ್ಳುತ್ತಿರಲಿಲ್ಲ ಲೋಕಕೆ ಒಬ್ಬ ಬುದ್ಧ ಇದ್ದ ಮತ್ತೆ ಹುಟ್ಟಿ ಬಂದಾರು ಹತ್ತು  ಹಲವು ಬುದ್ಧರು ವಿಪ್ರಲಂಭೆ ಯಶೋಧರೆಗೆ ಒಬ್ಬನೇ ಒಬ್ಬ  ಸಿದ್ಧಾರ್ಥ ದಕ್ಕದೇ ಹೋದ ನಿಟ್ಟುಸಿರು ಹಾಗೇ ಉಳಿಯಿತು ಚರಿತ್ರೆಯಲಿ ಮರದ ಕೆಳಗೆ ಕುಳಿತಾಗ ಸಣ್ಣ ಕೊಂಬೆಯ ಚಿಗುರು ತಾಕಿದ್ದರೂ ಸಾಕಿತ್ತು ಎದೆಗೆ ಸಿದ್ಧಾರ್ಥ ದಕ್ಕುತ್ತಿದ್ದ ಚರಿತ್ರೆಯ ಪುಟದ ಮೂಲೆಯೊಂದರಲಿ ಕುಳಿತ […]

ವಿಧುರನ ಬದುಕು

–ಡಾ. ತ್ರಿಯಂಬಕ ತಾಪಸ       ಅಳಿಸಲು ಕುಂಕುಮವಿಲ್ಲ ಕಳಚಲು ಮಾಂಗಲ್ಯವಿಲ್ಲ ಬಿಚ್ಚಲು ಬಳೆಗಳಿಲ್ಲ ಇರಿಯುವ ಕತ್ತಲು ಬಿಗಿದಪ್ಪಿದ ಒಂಟಿತನ ಗುರಿ ತಪ್ಪಿಸುವ ದಾರಿ ಇದು ವಿಧುರನ ಬದುಕು ಮುಕ್ಕಾಲು ಸವೆದ ದಾರಿಯಲ್ಲಿ ಮುರಿದು ನಿಂತ ಏಕ ಚಕ್ರದ ಬಂಡಿ ಸುತ್ತಲೂ ಜಗದ ಗೌಜು ಇಣುಕಿಣುಕಿ ಓಡುವ ಜನ ಬೆಳಗು-ಬೈಗು, ಬೈಗು-ಬೆಳಗು ಹೆಪ್ಪುಗಟ್ಟಿದ ನೋವು ಇದು ವಿಧುರನ ಬದುಕು ಅವ್ವ ಕೆಲವರಿಗೆ ತಂಗಿ ಹಲವರಿಗೆ ಅಕ್ಕ ಮಿಕ್ಕವರಿಗೆ ಹೆಂಡತಿ ಒಬ್ಬನಿಗೆ ಎಲ್ಲ ಕಡಿದು ಕಳಿಸಿ […]

ಕವಿತೆ

-ಲಕ್ಷ್ಮಿಕಾಂತ ಮಿರಜಕರ

ಕವಿತೆ
-ಲಕ್ಷ್ಮಿಕಾಂತ ಮಿರಜಕರ

ನೆಲದ ಸೂತಕ ಆಕಾಶಕ್ಕೂ -ಲಕ್ಷ್ಮಿಕಾಂತ ಮಿರಜಕರ ಮಬ್ಬು ಕತ್ತಲು ಕವಿದು ಆಕಾಶದ ಬೋಗಣಿ ಖಾಲಿಯಾದಂತೆ ಮಳೆ ಸುರಿದು ಅಹೋರಾತ್ರಿ ನೆಲದ ಮೇಲೆಲ್ಲ ಜಲಪ್ರಳಯ   ನೀರದೇವಿ ಮಹಾಪೂರವಾಗಿ ಹರಿಯುತ್ತ ಉಧೋ ಉಧೋ ಎನ್ನುತ್ತ ಬೇನಾಮಿ ಅಲೆಗಳು ಕಳ್ಳಹೆಜ್ಜೆ ಇಟ್ಟುಕೊಂಡು ರಾತ್ರೋರಾತ್ರಿ ಬಂದು ಧುಮ್ಮುಕ್ಕಿ ದಾರಿ ಮಧ್ಯೆ ಸಿಕ್ಕ ಹಳ್ಳಿ, ಹೊಲ, ಮನೆಮಠ, ಆಸ್ತಿಪಾಸ್ತಿ ಜನಜಾನುವಾರು, ವಸ್ತು ಒಡವೆ ವಗೈರೆ ಎಲ್ಲವೂ ಜಲದೇವತೆಯ ಬಾಯಿಗೆ ಆಪೋಷಣ   ಸೂರ್ಯ ಉದಯದ ವೇಳೆಯ ರೊಟ್ಟಿ ಬಡಿಯುವ ಸದ್ದು ಅಂಗಳ ಕಸಗೂಡಿಸುವ […]

ಕವಿತೆ

-ಮೂಡ್ನಾಕೂಡು ಚಿನ್ನಸ್ವಾಮಿ

ಕವಿತೆ
-ಮೂಡ್ನಾಕೂಡು ಚಿನ್ನಸ್ವಾಮಿ

-ಮೂಡ್ನಾಕೂಡು ಚಿನ್ನಸ್ವಾಮಿ       ಇರುವೆಗಳಿಗೇಕೆ ಸಕ್ಕರೆ? ಬೆಳ್ಳಂಬೆಳಿಗ್ಗೆ ಬಚ್ಚಲ ಬದಿ ಸಾಗುವ ಸಾಲು ಇರುವೆಗಳಿಗೆ ಸಕ್ಕರೆ ಹಾಕುತ್ತಾರೆ ವಾಯುನಡಿಗೆಯಲ್ಲಿ ರಸ್ತೆ ಬದಿಯ ಬಿಡಾಡಿ ನಾಯಿಗಳಿಗೆ ಬಿಸ್ಕೆಟ್ ಹಾಕುತ್ತಾರೆ   ತಮ್ಮ ಹಿತ್ತಲ ಸಂಡಾಸು ತೊಳೆದು ದಣಿದವನಿಗೆ ನೀರು ಕೊಡಲು ನಿರಾಕರಿಸುತ್ತಾರೆ   ಪಾರಿವಾಳಗಳಿಗೆ ಕಾಳು ಹಾಕುತ್ತಾರೆ ಗೋವಿಗೆ ಹಣ್ಣು ಹಂಪಲು ನೀಡುತ್ತಾರೆ ವಿಷದ ಹಾವಿಗೂ ಹಾಲೆರೆಯುತ್ತಾರೆ   ಹಾವು ಗೋವು ಪವಿತ್ರವಾಗಿರುವ ಈ ನಾಡಲ್ಲಿ ಮನುಷ್ಯ ಮಾತ್ರ ಅಪವಿತ್ರನಾಗಿದ್ದಾನೆ ಮುಟ್ಟಿಸಿಕೊಳ್ಳದವನಾಗಿದ್ದಾನೆ     […]

ಹುಡುಕಾಟ

-ಆರ್.ಬಿ.ದಿವಾಕರ್

ಹುಡುಕಾಟ
-ಆರ್.ಬಿ.ದಿವಾಕರ್

-ಆರ್.ಬಿ.ದಿವಾಕರ್ 1 ಕೃಷ್ಣನ ಹುಡುಕುತ್ತಾ ಹೋದೆ ಯಮುನೆಯ ತೀರದಲಿ ಕೃಷ್ಣನೂ ಇಲ್ಲ ಕೊಳಲ ನಿನಾದವೂ ಇಲ್ಲ 2 ದ್ವಾರಕೆಗೆ ಹೋದೆ ಸಮುದ್ರದಲೆಗಳ ಸಪ್ಪಳ ಮಾತುಗಳೇ ಇಲ್ಲ ಮೌನ… ನಿಶ್ಶಬ್ದ 3 ರಾಧೆ ನಿನಗಾದರು ಕಂಡನೇನೆ? ಯಮುನೆ ನೀನಾದರೂ ನೋಡಿದೆಯೇನೆ ಎಂದರೆ ಹುಸಿಕೋಪ ಮುಸಿನಗು ಮುಖದಲ್ಲಿ 4 ಹುಡುಕುತ್ತಾ ಹೋದೆ ಬಿಲ್ಲನೆದೆಗೇರಿಸಿ ಜಂಯ್‍ಗುಡಿಸುವ ಯುದ್ಧ ವೀರನ ಕಂಡೆ ಕೃಷ್ಣನಿಲ್ಲ 5 ಹುಡುಕುತ್ತಾ ಹೋದೆ ಕೃಷ್ಣನ ಸ್ತುತಿಸುತ್ತಾ ಶರಮಂಚದಲಿ ಪಿತಾಮಹನ ಕಂಡೆ ಕೃಷ್ಣನೆಲ್ಲಿಯೆಂದೆ? ನನಗೂ ಕಾಣನು ಮಾತು… ಮೌನ 6 […]

ಆಸವ

-ಚನ್ನಪ್ಪ ಅಂಗಡಿ

ಆಸವ
-ಚನ್ನಪ್ಪ ಅಂಗಡಿ

-ಚನ್ನಪ್ಪ ಅಂಗಡಿ ಅಂಗಳದಲಿ ಆಡುವ ಮಗುವಿಗೆ ಮಣ್ಣು ಕಂಡು ಹಿಗ್ಗು ತೋರಬಹುದು ತೂರಬಹುದು ಬೆರಳಿನಿಂದ ಗೀರಬಹುದು ಉರುಳಿ ಬಿದ್ದರೆ ನೆಲದ ಮಣ್ಣು ಅರಳಿ ನಿಂತರೆ ಮಣ್ಣಿನ ಕಣ್ಣು ಬೆರಳು ಗೀಚಿದಂತೆ ಗೆರೆ ನಾಲಿಗೆ ಉಲಿದಂತೆ ಕರೆ ತಿರುಗಿ ಜರುಗಿ ಮನುಷ್ಯಾಕೃತಿ ತಪ್ಪೆಜ್ಜೆಯಲೂ ಒಪ್ಪಗೆರೆ ಗೀಚಲು ಬದ್ಧ ಸಡಿಲ ಗೆರೆಯ ನಗುವ ಮೊಗದ ಚಿತ್ರ ಸಿದ್ಧ – ಆತ ಬುದ್ಧ   ತಣ್ಣಗಿನ ದಿಟ್ಟಿಗೆ ಕಮಟು ಹತ್ತಿದ ಯಜ್ಞಜ್ವಾಲೆ ನಂದಿಸಿ ನಗುವ ಮುತ್ತಹನಿ ಸುರಿದು ಬೆಂಕಿ ಝಳವ ಕುಂದಿಸಿ […]

ಕವಿತೆ

ವಿ.ಹರಿನಾಥ ಬಾಬು ಸಿರುಗುಪ್ಪ

ಕವಿತೆ
ವಿ.ಹರಿನಾಥ ಬಾಬು ಸಿರುಗುಪ್ಪ

-ವಿ.ಹರಿನಾಥ ಬಾಬು ಸಿರುಗುಪ್ಪ ಹಾಯ್ಕುಗಳು 1 ಶರಾಬಿನ ಅಂಗಡಿಯಿಂದ ಅವನು ಈಗ ತಾನೆ ಹೊರಬಿದ್ದ ಜೋಲಿ ಹೊಡೆಯುತಿದೆ ರಸ್ತೆ 2 ಅವಳ ನೆನಪಾಗಿ ಕುಡಿದೆ ಎಂದುಸುರಿದ ಅವನು ಪಾಪ ರಸ್ತೆ ಕಣ್ಣೀರಾಯ್ತು 3 ಯಾವ ಹಾದಿ ತುಳಿದರೂ ಅದು ಅವಳ ಮನೆಗೆ ಕರೆದೊಯ್ಯುತ್ತದೆ ಅವಳ ಮನೆಯೀಗ ಪ್ರೇಮ ಸ್ಮಾರಕ! 4 ನಾವಂದು ನಡೆದಾಡಿದ ರಸ್ತೆಗಳು ಇಂದಿಗೂ ಹಾಗೇ ಇವೆ ನಮ್ಮ ನೆನಪು ಯುವ ಪ್ರೇಮಿಗಳ ಎದೆಯಾಳದಲ್ಲಿ 5 ಅವಳ ನೆನಪುಗಳ ನೆರಳು ಸುಡುವ ವಿರಹದ ತಲೆಯ ಕಾಯುತಿವೆ […]

ಕವಿತೆ

- ಎಸ್.ಎಸ್ ಅಲಿ ತೋರಣಗಲ್ಲು

ಕವಿತೆ
- ಎಸ್.ಎಸ್ ಅಲಿ ತೋರಣಗಲ್ಲು

ಋತುಸ್ರಾವ – ಎಸ್.ಎಸ್ ಅಲಿ ತೋರಣಗಲ್ಲು ನನ್ನ ಕವಿತೆಗೀಗ ಋತುಸ್ರಾವವಾಗಿದೆ ಜೊತೆಗೆ ಭಯವೂ ಅಡ್ಡ ಕಸುಬಿನವರೆಲ್ಲಾ ಉದ್ದುದ್ದಾ ದಿಟ್ಟಿಸುತ್ತಿದ್ದಾರೆ ಮಗು ನನ್ನದಲ್ಲವೇ ಅದಕ್ಕೂ ಕಟ್ಟಪ್ಪಣೆ ಕೊಟ್ಟಿದ್ದೇನೆ ಎಚ್ಚರ…! ಎಲ್ಲಿಯೂ ನಗುವ ಹಾಗಿಲ್ಲ   ಅವ್ವಳಿಗೆ ಗೊತ್ತಿಲ್ಲ ಮಗಳ ಭಾವನೆಗಳು ನೆರೆದಿದ್ದು ಹೇಳಿದರೆ ಮತ್ತೊಂದು ಠರಾವು ಹೊರಡಿಸುತ್ತಾಳೆ ಎದೆಯುಬ್ಬಿಸದೇ ತಲೆ ತಗ್ಗಿಸಿ ನಡೆಯೋದು ಮೈ ಮೇಲೊಂದು ದಾವಣಿ ಕಡ್ಡಾಯ   ಹಾಂ! ನನಗೀಗ ಭಯವೇ ಭಯ ಬದುಕಿನ ವಸಂತವನ್ನೇ  ದೋಚುವ ನೀಚರ ನಡುವೆ ನನ್ನೊಡಲ ಕುಡಿ ಅರಳುತ್ತಿರುವಾಗ ಬೆತ್ತಲ […]

ಹಸಿ ಮಣ್ಣ ಧ್ಯಾನ

-ಸ್ಮಿತಾ ಅಮೃತರಾಜ್, ಸಂಪಾಜೆ

ಹಸಿ ಮಣ್ಣ ಧ್ಯಾನ
-ಸ್ಮಿತಾ ಅಮೃತರಾಜ್, ಸಂಪಾಜೆ

ಬಿದ್ದಿದ್ದಾರೆ ಪೈಪೋಟಿಗೆ ಎಲ್ಲರೂ ದುರ್ಬೀನು ಧರಿಸಿ ಹಸಿ ಮಣ್ಣ ಅರಸಿ ಗುದ್ದಲಿ ಪೂಜೆ ನಡೆಸಿ ಲೇಪಿಸುತ್ತಿದ್ದಾರೆ ಡಾಂಬರು ಫೌಂಡೇಶನ್ ಕ್ರೀಂ ಹಚ್ಚುವಂತೆ.   ಸಂಕಟ ಸುಲಭಕ್ಕೆ ದಕ್ಕುವ ಸಂಗತಿಯಲ್ಲವೀಗ ಹಾರ ಬಯಸುವ ದೂಳ ಕಣಕಣದ ಚಡಪಡಿಕೆಗೆ ಎಷ್ಟು ಚೆಂದ ಮಿರುಗು ಬಣ್ಣದ ಲೇಪ?   ಏದುಸಿರು ಬಿಡುವಾಗ ಬಿರುಬಿಸಿಲಿನಲ್ಲಿ ರೂಪಾಂತರಗೊಂಡ ಪ್ರಾಣವಾಯು ಹೇಳಿಕೊಡಲಾಗುತ್ತಿದೆ ಇಲ್ಲಿ ಎಳೆಯರಿಗೆ ಚಿತ್ರಕ್ಕೆ ಬಣ್ಣ ತುಂಬುವ ಪಾಠ ಫ್ಯಾನಿನಡಿಯಲ್ಲಿ ಕುಳ್ಳಿರಿಸಿ.   ತಲೆಯೆತ್ತಿದೆ ವಿಶಾಲ ಸಭಾಂಗಣ ತೇವದ ಕುರುಹೇ ಸಿಗದಂತೆ ಕೆರೆಯ ಸಮಾಧಿಯ […]

ಕವಿತೆ

ಎಸ್. ದಿವಾಕರ್

ಕವಿತೆ
ಎಸ್. ದಿವಾಕರ್

ವಿಧಾನಸಭೆಯಲ್ಲೊಂದು ಹಕ್ಕಿ   ನಿಧಾನ ಎಚ್ಚರಗೊಂಡ ವಿಧಾನಸಭೆಯಲ್ಲಿ ದೀಪಗಳು ಧಗ್ಗೆಂದು ಹೊತ್ತಿ ಫ್ಯಾನುಗಳು ಗರಗರ ಸುತ್ತಿ ಖದ್ದರುಗಳೆಲ್ಲ ಸುಖಾಸನಗಳ ಹತ್ತಿ  ಶೋಭಾಯಮಾನವಾಗಿರುವಾಗ    ಕಣ್ಣುಕುಕ್ಕುವ ಷಾಂಡ್ಲರುಗಳ ಬೆಳಕಿಗೆ ಬೆಳುದಿಂಗಳು ಬಿದ್ದ ಸುನೇರಿಯ ಹಾಗೆ, ರಾಳದ ಬೆಳಕು ಮೀಯಿಸಿದ ಬೇಗಡೆಯ ಹಾಗೆ, ಮಿಡಿನಾಗರ ಮಿಡಿದ ಹಾಗೆ ಪ್ರತ್ಯಕ್ಷವಾಯಿತೊಂದು ಹಕ್ಕಿ ಎಲ್ಲರ ಕಣ್ಣು ಕುಕ್ಕುತ್ತ   ಉರುಳುಗಾಲಿಯ ಹಾಗೆ ಹೊರಳುತ್ತಿರುವ ಕಣ್ಣು ಚೂರಿಮೊನೆಯಷ್ಟು ಚೂಪಾದ ಕೊಕ್ಕು; ಗರಿಗಳ ಗಲಗಲವೆನ್ನಿಸುವ ರೆಕ್ಕೆ ತೆಳು ಗುಲಾಬಿಯ ಪೊರೆಯಿರುವ ಕೋಲು ಕಾಲು, ಬೂದುಬಣ್ಣದುಗುರುಗಳ ಪಾದ […]

ಕವಿತೆ

ಮೂಡ್ನಾಕೂಡು ಚಿನ್ನಸ್ವಾಮಿ

ಕವಿತೆ
ಮೂಡ್ನಾಕೂಡು ಚಿನ್ನಸ್ವಾಮಿ

ಬುರ್ಖಾ ಧರಿಸಿ             ಬುರ್ಖಾ ಧರಿಸಿ ನಾನು ಒಂದು ಪದವಿ ಪಡೆದೆ ಕಂಪ್ಯೂಟರನ್ನೂ ಕಲಿತೆ ಇತರರನ್ನು ಸಲೀಸಾಗಿ ಮೀರಿದೆ   ಅಮ್ಮಿ ಖುಷಿಯಾದಳು ಅಬ್ಬಾನು ಬಹಳ ಖುಷಿಪಟ್ಟ ನಾನು ಏಕಾಂಗಿಯಾಗಿ ಸಿನಾಯ್ ಪರ್ವತವನ್ನು ಎತ್ತಲಿಲ್ಲವೆ?   ಜಗತ್ತನ್ನು ಪಾದದಡಿಯಲ್ಲಿ ಹೊಸಕಿಹಾಕಬೇಕೆಂಬುದು ನನ್ನ ಹೃದಯದ ಬಯಕೆಯಾಗಿತ್ತು ಪ್ರತಿ ಉಸಿರು ಹೇಳಿತು ವಿಜಯಶಾಲಿಯಾಗು ಬುರ್ಖಾದೊಳಗಿನ ಅಲೆಗ್ಸಾಂಡರ್‌ನಂತೆ   ಮನರಂಜನೆಗೆಂದು ಹೊರಹೊರಟೆ ಸಿನಿಮಾ ಮಂದಿರದ ಬಳಿ ನೈತಿಕ ದಳ ತಡೆಯಿತು ನನ್ನನ್ನು ಕಬ್ಬಿಣದ ಸರಳ […]

ಕವಿತೆ

ಎಚ್ ಎಸ್ ಶಿವಪ್ರಕಾಶ

ಕವಿತೆ
ಎಚ್ ಎಸ್ ಶಿವಪ್ರಕಾಶ

ಎರಡು ಸೊನ್ನೆಗಳು ಯಮನಿಯಮ ಪ್ರಾಣಾಯಾಮವೆಂಬ ಅಷ್ಟಾಂಗಯೋಗದಲ್ಲಿಎರಡು ಯೋಗಗಳು: ಒಂದು ಅಳಿದು ಕೂಡುವ ಯೋಗ ಒಂದು ಅಳಿಯದೆ ಕೂಡುವ ಯೋಗ ಇವೆರಡರಲಿ ಅಳಿಯದೆ ಕೂಡುವ ಯೋಗವರಿದು ಕಾಣಾ ಗೊಗ್ಗೇಶ್ವರ – ಅಲ್ಲಮಪ್ರಭು ಎರಡು ಸೊನ್ನೆಗಳು ಎರಡು ಸನ್ನೆಗಳು ಎರಡು ನನ್ನಿಗಳು ಮೊದಲ ಸೊನ್ನೆ ಶಪಥ ಮಾಡಿತು: ಕೆಡುಕು, ಕೊಳಕುಗಳನ್ನೆಲ್ಲಾ ಕಳೆದುಕೊಳ್ಳುತ್ತೇನೆ ಒಂದೊಂದಾಗಿ ಕೆಡುಕುಗಳನ್ನು ಕಳಚಿಕೊಂಡಿತು ತೊಲಗೋ ಕಾಮತೊಲಗೋ ದ್ವೇಷ ಅಡಗಿರಿ ಅರಿಷಡ್ವರ್ಗಗಳೆ ಇತ್ಯಾದಿಯಾಗಿ ಜಪಿಸುತ್ತಾ ಮೇಲ್ಕಂಡ ಹೆಸರಿಸ ಬಹುದಾದ ಪಾಪಗಳ ಜೊತೆಗೆ […]

ಕವಿತೆ

ಕವಿತೆ

ಪ್ರೀತಿಯ ರಾದ್ಧಾಂತಗಳು   ನಿದ್ದೆ ಬಾರದ ರಾತ್ರಿಗಳು ಸದ್ದೆ ಇರದ ಜಾತ್ರೆಗಳು ತುಂಬಿದ ಕೆರೆಗಳು ಖಾಲಿ ಬಿದ್ದ ಕೊಡಗಳು   ಜಮಾವಣೆಯಾಗದ ಖಾತೆಗಳು ಬಟವಾಡೆಯಾಗದ ರಸೀತಿಗಳು ಜನಜಂಗುಳಿಯ ಮಾರುಕಟ್ಟೆಗಳು ತೂತು ಬಿದ್ದ ಜೇಬುಗಳು   ನುಡಿಸದೆ ಹೋದ ವಾದ್ಯಗಳು ಬಡಿಸದೆ ಇದ್ದ ಖಾದ್ಯಗಳು ಚೆಂದದ ಜಡೆಗಳು ಮುಡಿಗೇರದ ಹೂಗಳು   ಕೇಳದೆ ಬರುವ ಖಾಯಿಲೆಗಳು ಹೇಳದೆ ಹೋದ ಕಾರಣಗಳು ಸುಂದರ ಕಲಾಕೃತಿಗಳು ಪಾಳುಬಿದ್ದ ದೇಗುಲಗಳು   ವಯಸುಗಳು ಹೂ ಮನಸುಗಳು ಜಾತಿಗಳು, ಜಟಾಪಟಿಗಳು ಕೊನೆಯಿರದ ಪಯಣಗಳು ಆಕಸ್ಮಿಕ […]