ಅಗ್ಗದ ಸರಕಿಗೆ ಕೆಂಪುಗಂಬಳಿ ಹಾಸುವ ಸಂಸ್ಕೃತಿ

-ಎಂ.ಕೆ.ಆನಂದರಾಜೇ ಅರಸ್

ಉನ್ನತ ಗುಣಮಟ್ಟದ ಅಥವಾ ಮಾನದಂಡದ ಪ್ರಶ್ನೆಯನ್ನು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ, ಅದರಲ್ಲಿಯೂ ವಿಮರ್ಶೆಗೆ ಸಂಬಂಧಿಸಿದಂತೆ ಎತ್ತಬೇಕಾದ ತುರ್ತು ಅಗತ್ಯವಿದೆ. ಎಲ್ಲಿ ಉತ್ಕೃಷ್ಟತೆಯ ಅಭಾವವಿರುತ್ತದೋ, ಅಲ್ಲಿ ಭಟ್ಟಂಗಿತನ ಹಾಗೂ ಮಾರುಕಟ್ಟೆಯ ಪ್ರಭಾವಗಳ ಅಬ್ಬರ ಹೆಚ್ಚಾಗುತ್ತದೆ. –ಎಂ.ಕೆ.ಆನಂದರಾಜೇ ಅರಸ್ ಸುಜಾತ ಕೇಶವನ್ ಹೆಸರು ಎಲ್ಲೆಡೆ ಪರಿಚಿತವಿಲ್ಲ. ಅವರ ಪತಿ ಇತಿಹಾಸಕಾರ ರಾಮಚಂದ್ರ ಗುಹಾ ಸಾಮಾನ್ಯವಾಗಿ ಎಲ್ಲರೂ ಕೇಳಿರುವ ಹೆಸರು. ಆದರೆ ಸುಜಾತ ಕೇಶವನ್ ಅವರದು ಬ್ರ್ಯಾಂಡಿಂಗ್ ಹಾಗೂ ಗ್ರಾಫಿಕ್ ಡಿಸೈನ್ ಉದ್ಯಮದಲ್ಲಿ ದೊಡ್ಡ ಹೆಸರು. ರೇ ಅಂಡ್ ಕೇಶವನ್ ಸಂಸ್ಥೆಯ […]

ಜನಪದ ಆಟಗಳಲ್ಲಿ ಹೆಣ್ಣಿಗೆ ಪಾಠಗಳು

- ಮಂಜುಳಾ ಶೆಟ್ಟಿ

ಜನಪದ ಆಟಗಳಲ್ಲಿ ಹೆಣ್ಣಿಗೆ ಪಾಠಗಳು
- ಮಂಜುಳಾ ಶೆಟ್ಟಿ

ಸಾಮಾನ್ಯವಾಗಿ ಒಳಾಂಗಣ ಆಟಗಳನ್ನು ಹೆಣ್ಣುಮಕ್ಕಳು, ಹೊರಾಂಗಣ ಆಟಗಳನ್ನು ಗಂಡುಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಹೆಣ್ಣು ಮನೆಯ ಒಳಗಿದ್ದು ಕುಟುಂಬದ ಗೋಡೆಗಳನ್ನು ಭದ್ರಪಡಿಸಿಕೊಳ್ಳಬೇಕಾದ, ಗಂಡು ಮನೆಯ ಹೊರಗೆ ಹೋಗಿ ಯಶಸ್ಸು ಸಾಧಿಸಿ ಹಣ ಗಳಿಸಬೇಕಾದ ನಮ್ಮ ಸಾಮಾಜಿಕ ಸಂರಚನೆಯನ್ನು ಇದು ಸಂಕೇತಿಸುತ್ತದೆ. – ಮಂಜುಳಾ ಶೆಟ್ಟಿ ಆಟವೆಂಬುದು ಸೃಷ್ಟಿಯ ಸಕಲ ಜೀವಗಳ ಜನ್ಮದತ್ತ ಪ್ರವೃತ್ತಿ. ಆಟವೆಂದರೆ ಅನುಭವದ ಒಳನೋಟ. ಸಮಯದ ಸದುಪಯೋಗ, ಮನರಂಜನೆ, ಬಾಂಧವ್ಯದ ಬೆಸುಗೆ, ಸಾಹಸಪರೀಕ್ಷೆ, ಸಹಬಾಳ್ವೆ, ಏಕತೆ, ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ವರ್ಧಿಸುವುದಕ್ಕೆ ಸಹಕಾರಿ. ಹೀಗೆ […]

ಮಾತಲ್ಲೂ ಗೂಗ್ಲಿ ಎಸೆದ ಸುನಿಲ್ ಜೋಶಿ! ಹುಬ್ಬಳ್ಳಿಯಾಂವ ಈಗ ಪ್ರತಿಭೆ ಶೋಧಕ!

-ಕೆ.ವಿ.ಪರಮೇಶ್

ಮಾತಲ್ಲೂ ಗೂಗ್ಲಿ ಎಸೆದ ಸುನಿಲ್ ಜೋಶಿ! ಹುಬ್ಬಳ್ಳಿಯಾಂವ ಈಗ ಪ್ರತಿಭೆ ಶೋಧಕ!
-ಕೆ.ವಿ.ಪರಮೇಶ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ, ಹುಬ್ಬಳ್ಳಿಯಾಂವ, ಸುನಿಲ್ ಜೋಶಿ ಅವರನ್ನು ಆಯ್ಕೆ ಮಾಡಿದೆ. ಬಹಳ ವರ್ಷಗಳ ಬಳಿಕ ಮತ್ತೊಮ್ಮೆ ಕನ್ನಡಿಗರೊಬ್ಬರಿಗೆ ಆಯಕಟ್ಟಿನ ಹುದ್ದೆ ಸಿಕ್ಕಿದೆ. ಇದು ಕನ್ನಡದ ಉದಯೋನ್ಮುಖ ಪ್ರತಿಭೆಗಳು ದೇಶದ ಪರ ಆಡಲು ಅನುಕೂಲ ಆಗಬಹುದು ಎಂಬ ಮಹದಾಸೆ ಚಿಗುರಿಸಿದೆ. ಆದರೆ ಸೀಮಿತ ಚೌಕಟ್ಟು, ಪ್ರಭಾವ, ಲಾಬಿ ಇದಕ್ಕೆ ಅವಕಾಶ ಮಾಡಿಕೊಡಲಿದೆಯಾ ಎನ್ನುವುದು ಯಕ್ಷಪ್ರಶ್ನೆ. ಈ ಸಂಬಂಧ ಜೋಶಿ ಅವರನ್ನು ‘ಸಮಾಜಮುಖಿ’ ಪರವಾಗಿ ಮಾತಿಗೆಳೆದಾಗ ಅವರು ತಮ್ಮ […]

ಕಂಬಳ ಎಂಬ ಕಲರ್‍ಫುಲ್ ಕ್ರೀಡೆ

ಕೆ.ವಿ.ಪರಮೇಶ್

ಕಂಬಳ ಎಂಬ ಕಲರ್‍ಫುಲ್ ಕ್ರೀಡೆ
ಕೆ.ವಿ.ಪರಮೇಶ್

ಶರವೇಗದಿಂದ ಓಡಿ ದಾಖಲೆ ಸೃಷ್ಟಿಸಿರುವ ತುಳುನಾಡಿನ ಶ್ರೀನಿವಾಸಗೌಡ ಮತ್ತು ನಿಶಾಂತ್ ಶೆಟ್ಟಿ ಭಾರತದ ಉಸೇನ್ ಬೋಲ್ಟ್ ಎನ್ನಿಸಿಕೊಂಡಿದ್ದಾರೆ! ಅವರ ಸಾಧನೆಯ ಸಂದರ್ಭದಲ್ಲಿ ಕಂಬಳ ಕ್ರೀಡೆ ಕುರಿತ ಕುತೂಹಲಕಾರಿ ಲೇಖನ. ಕೆ.ವಿ.ಪರಮೇಶ್ ಐತಿಹಾಸಿಕ ಹಿನ್ನೆಲೆಯುಳ್ಳ ಕರಾವಳಿ ನಾಡಿನ ಈ ಸಾಂಪ್ರದಾಯಿಕ ಕಂಬಳ ಒಂದಿಲ್ಲೊಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರುತ್ತದೆ. ಇದನ್ನು ಸಂಪ್ರದಾಯ, ಆಚರಣೆ, ಕ್ರೀಡೆ, ಜಾನಪದ ಹೀಗೆ ಹತ್ತು ಹಲವು ಬಗೆಯಲ್ಲಿ ವ್ಯಾಖ್ಯಾನಿಸಬಹುದು. ಯಾವ ನೆಲೆಗಟ್ಟಿನಲ್ಲಿ ಅವಲೋಕಿಸಿದರೂ ಅದಕ್ಕೆ ಅದರದ್ದೇ ಆದ ಐತಿಹಾಸಿಕ ಹಿನ್ನೆಲೆಯಿದೆ, ಸಂಪ್ರದಾಯಕ್ಕೆ ತನ್ನದೇ ಅರ್ಥವಿದೆ, ಆಚರಣೆಗೂ […]

ಮುಳುಗುತ್ತಿರುವ ಧೋನಿ! ಬದಲಿ ಅಂಬಿಗನ ಶೋಧ

ಕೆ.ವಿ.ಪರಮೇಶ್

ಮುಳುಗುತ್ತಿರುವ ಧೋನಿ! ಬದಲಿ ಅಂಬಿಗನ ಶೋಧ
ಕೆ.ವಿ.ಪರಮೇಶ್

ಸದ್ಯದ ಮಟ್ಟಿಗೆ ಬಿಸಿಸಿಐಗೆ ಎಂ.ಎಸ್.ಧೋನಿ ಸೇವೆ ಸಾಕು ಎನಿಸಿರಬಹುದು. ಆದರೆ, ಮಾಜಿ ನಾಯಕ ಸೀಮಿತ ಓವರ್ ಪಂದ್ಯಗಳಲ್ಲಿ ನಿರ್ವಹಿಸಬೇಕಾದ ಹಲವು ಜವಾಬ್ದಾರಿಗಳು ಇನ್ನೂ ಬಾಕಿ ಇರುವ ಹಿನ್ನೆಲೆಯಲ್ಲಿ ಅವರ ಅಗತ್ಯ ಭಾರತಕ್ಕೆ ಇದೆ. ಕೆ.ವಿ.ಪರಮೇಶ್ ಭಾರತ ಕ್ರಿಕೆಟ್ ತಂಡಕ್ಕೆ ಆಗಾಗ್ಗೆ ಕಾಡುವ ದೊಡ್ಡ ಸಮಸ್ಯೆ ವಿಕೆಟ್ ಕೀಪರ್ ಅರ್ಥಾತ್ ಗೂಟರಕ್ಷಕ. ದಶಕಕ್ಕೂ ಮೀರಿ ಕ್ರಿಕೆಟ್ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಮಹೇಂದ್ರಸಿಂಗ್ ಧೋನಿ ಇದೀಗ ನಿವೃತ್ತಿಯ ಅಂಚಿನಲ್ಲಿದ್ದಾರೆ. ಹಾಗಾಗಿ ಇವರಿಗೆ ಪರ್ಯಾಯ ಯಾರು ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ. ಭಾರತ […]

‘ಗಲ್ಲಿ ಪ್ರತಿಭೆಗಳು ದಿಲ್ಲಿ ಆಳಬೇಕು…’

-ಕೆ.ವಿ.ಪರಮೇಶ್

‘ಗಲ್ಲಿ ಪ್ರತಿಭೆಗಳು ದಿಲ್ಲಿ ಆಳಬೇಕು…’
-ಕೆ.ವಿ.ಪರಮೇಶ್

ಸೌರವ್ ಗಂಗೂಲಿ ‘ಬಂಗಾಳದ ಮಹಾರಾಜ’ ಎಂದು ಖ್ಯಾತರಾದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ನೂತನ ಆಧ್ಯಕ್ಷ. ಹೊಸ ವರ್ಷದ ಮೊದಲ ಸಂಚಿಕೆಯಲ್ಲಿ ಅವರ ಸಂದರ್ಶನ ಪ್ರಕಟಿಸಬೇಕೆಂಬ ನಿಟ್ಟಿನಲ್ಲಿ ನಡೆಸಿದ ಸತತ ಸಂಪರ್ಕ ಕೊನೆಗೂ ಕೈಗೂಡಿದೆ. ಸಮಾಜಮುಖಿ ಓದುಗರ ಪರವಾಗಿ ಕೇಳಿದ ಹತ್ತು ಪ್ರಶ್ನೆಗಳಿಗೆ ಅಷ್ಟೇ ಮುಕ್ತವಾಗಿ ಮುತ್ತಿನಂತಹ ಉತ್ತರ ಕೊಟ್ಟಿದ್ದಾರೆ ಗಂಗೂಲಿ. ಬಿಸಿಸಿಐ ಅಂದ್ರೆ ಹಣದ ಥೈಲಿ ಸುಖದ ಸುಪ್ಪತ್ತಿಗೆ ಅನ್ನೋ ಮಾತಿದೆ, ಹೌದಾ? ವಿಶ್ವದ ಸಿರಿವಂತ ಕ್ರಿಕೆಟ್ ಸಂಸ್ಥೆ ಅನ್ನೋದನ್ನು […]

ಅಧಿಕಾರ ಗಿಟ್ಟಿಸಲು ಕ್ರೀಡಾ ಕೀರ್ತಿಯ ಮೆಟ್ಟಿಲು

ಕೆ.ವಿ.ಪರಮೇಶ್

ಅಧಿಕಾರ ಗಿಟ್ಟಿಸಲು ಕ್ರೀಡಾ ಕೀರ್ತಿಯ ಮೆಟ್ಟಿಲು
ಕೆ.ವಿ.ಪರಮೇಶ್

ಒಂದು ಕ್ಷೇತ್ರದಲ್ಲಿ ಸಂಪಾದಿಸಿದ ಯಶಸ್ಸು ಅಥವಾ ಕೀರ್ತಿ ಮತ್ತೊಂದು ಕ್ಷೇತ್ರದ ಏಣಿ ಹತ್ತಲು ಪೂರಕವಾಗುವುದು ಅಪರೂಪದ ಸಂಗತಿ. ಹೀಗೆ ಕ್ರೀಡಾರಂಗದಲ್ಲಿ ಎತ್ತರಕ್ಕೇರಿ ಮಗದೊಂದು ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದವರ ಕುರಿತ ಮಾಹಿತಿ ಇಲ್ಲಿದೆ. ಕ್ರೀಡಾಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ ಬಹಳಷ್ಟು ಮಂದಿ ಸಕ್ರಿಯವಾಗಿರುವಾಗಲೇ ಅಥವಾ ನಿವೃತ್ತಿ ಘೋಷಿಸಿದ ಬಳಿಕ ಮತ್ತೊಂದು ಕ್ಷೇತ್ರ ಆರಿಸಿಕೊಳ್ಳುವ ಪ್ರಕರಣಗಳು ಸಾಕಷ್ಟಿವೆ. ಅದರಲ್ಲೂ ಕ್ರೀಡಾಪಟುಗಳನ್ನು ಹೆಚ್ಚಾಗಿ ಆಕರ್ಷಿಸುತ್ತಿರುವುದು ರಾಜಕಾರಣ. ಈ ಕ್ಷೇತ್ರ ಪ್ರವೇಶಿಸಿ ಗಟ್ಟಿಯಾಗಿ ನೆಲೆಯೂರಿದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಕಾರಣ ಹಲವಿರಬಹುದು. ಆದರೆ […]

ವೀಕ್ಷಕವಿವರಣೆ: ಕ್ರೀಡಾಲೋಕದಲ್ಲಿ ಕನ್ನಡ ನುಡಿನಡಿಗೆ

-ಕೆ.ವಿ.ಪರಮೇಶ್

ವೀಕ್ಷಕವಿವರಣೆ:  ಕ್ರೀಡಾಲೋಕದಲ್ಲಿ ಕನ್ನಡ ನುಡಿನಡಿಗೆ
-ಕೆ.ವಿ.ಪರಮೇಶ್

ಈವರೆಗೆ ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಪ್ರಸಾರವಾಗುವ ವೀಕ್ಷಕವಿವರಣೆಗೆ ಕನ್ನಡದ ಪ್ರೇಕ್ಷಕ ಹೊಂದಿಕೊಂಡಿದ್ದ. ಇದೀಗ ಕ್ರೀಡಾ ಜಗತ್ತಿನ ಪ್ರಮುಖ ಚಾನೆಲ್, ‘ಸ್ಟಾರ್ ಸ್ಪೋಟ್ರ್ಸ್’, ಪ್ರಾದೇಶಿಕ ಭಾಷೆಗಳಲ್ಲಿ ಕ್ರೀಡೆಯ ವೀಕ್ಷಕವಿವರಣೆ ನೀಡಲು ಶುರುಮಾಡಿದೆ. ಇದು ಹೊಸಕಾಲದ ತಾಂತ್ರಿಕ ಬೆಳವಣಿಗೆಯೊಂದಿಗೆ ಕನ್ನಡ ನುಡಿಯ ನಡಿಗೆ. ಕ್ರಿಕೆಟ್ ವೀಕ್ಷಕವಿವರಣೆ ಕೇಳಲು ರೇಡಿಯೋಗೆ ಕಿವಿಯಾದ ಅನುಭವ ಹಳೆಯ ತಲೆಮಾರಿನ ಎಲ್ಲರಿಗೂ ಇರುತ್ತದೆ. ಪಂದ್ಯಾವಳಿ ವಿದೇಶಗಳಲ್ಲಿ ನಡೆದಾಗ ಭಾರತದ ಸಮಯ ವ್ಯತಿರಿಕ್ತವಾಗಿರುತ್ತದೆ. ಆದರೂ ಕೇಳುವ ಉತ್ಸಾಹ ಭಂಗವಾಗಲಾರದು. ಕಾಮೆಂಟರಿ ಅರ್ಥಾತ್ ವೀಕ್ಷಕವಿವರಣೆ ಆಲಿಸುವುದು ಕ್ರೀಡೆ ಬಗ್ಗೆ […]

ಕ್ರೀಡೆ ಸಂಭಾವನೆ ತಾರತಮ್ಯ

ಕೆ.ವಿ.ಪರಮೇಶ್

ಕ್ರೀಡೆ  ಸಂಭಾವನೆ  ತಾರತಮ್ಯ
ಕೆ.ವಿ.ಪರಮೇಶ್

ಪ್ರತಿಷ್ಠೆ, ಪ್ರಭಾವ, ಲಾಬಿ, ಹಸ್ತಕ್ಷೇಪ, ತಾರತಮ್ಯ ಇವು ಪ್ರಸ್ತುತ ಎಲ್ಲ ಕ್ಷೇತ್ರಗಳ ಅವಿಭಾಜ್ಯ ಅಂಗ ಎಂದರೆ ಅತಿಶಯೋಕ್ತಿಯಾಗಲಾರದು. ಅದರಲ್ಲಿಯೂ ಕ್ರೀಡಾಕ್ಷೇತ್ರದಲ್ಲಿ ಇದು ದೊಡ್ಡ ಮಟ್ಟದಲ್ಲೇ ತಾಂಡವವಾಡುತ್ತಿದೆ. `ಸಂ’ಭಾವನೆ ವಿಷಯದಲ್ಲಿ ಇದರ ಪ್ರಮಾಣ ತುಸು ಹೆಚ್ಚು. ಈ ವಿಚಾರದ ಆಸುಪಾಸಿನ ಸಂಗತಿಗಳು ಹೀಗಿವೆ. ಪ್ರತಿಯೊಬ್ಬ ಕ್ರೀಡಾಪಟು ಅಥವಾ ಕೋಚ್ ಈ ಸಂಭಾವನೆ ವಿಚಾರದಲ್ಲಿ ಭಾರೀ ಚ್ಯೂಸಿ ಮತ್ತು ಚೌಕಾಸಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಒಬ್ಬ ಕೋಚ್ ಇಲ್ಲದೇ ರಾಜ್ಯ-ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಸ್ಥಿರತೆ ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ. ಆದ್ರೆ […]

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ವಿಶೇಷ ಸಂದರ್ಶನ

ಕೆ.ವಿ.ಪರಮೇಶ್

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು  ವಿಶೇಷ ಸಂದರ್ಶನ
ಕೆ.ವಿ.ಪರಮೇಶ್

‘ಕ್ರೀಡಾಪಟುಗಳಿಗೆ ಅಗತ್ಯವಾದ ತರಬೇತಿ ಮತ್ತು ಮೂಲಸೌಲಭ್ಯ ಒದಗಿಸುವುದು ನನ್ನ ಮೊದಲ ಆದ್ಯತೆ. ಆಯ್ಕೆ ವೇಳೆ ಶಿಫಾರಸು ಮತ್ತು ಲಾಬಿ ಗಳಿಂದ ವ್ಯವಸ್ಥೆಯನ್ನು ಮುಕ್ತಗೊಳಿಸುವುದು ನಮ್ಮ ಸರ್ಕಾರದ ಧ್ಯೇಯ. ಐದು ವರ್ಷ ಗಳಲ್ಲಿ ಭಾರತದ ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಹೆಸರು ಮಾಡಿ ಪದಕಕ್ಕೆ ಮುತ್ತಿಡಬೇಕೆಂಬುದು ನನ್ನ ಗುರಿ. ಈ ನಿಟ್ಟಿನಲ್ಲಿ ದೇಶದ ಕ್ರೀಡಾನೀತಿಯಲ್ಲೇ ಆಮೂಲಾಗ್ರ ಸುಧಾರಣೆ ತರಲಾಗುವುದು’ ಕ್ರೀಡೆ ಹಿನ್ನೆಲೆ ಇರೋರಿಗೆ ಸಚಿವ ಸ್ಥಾನ ಸಿಗಬೇಕು ಅನ್ನೋ ಮಾತಿದೆ. ಇದಕ್ಕೆ ನೀವು ವ್ಯತಿರಿಕ್ತ ಅಲ್ವಾ? ನನ್ನ ಪ್ರಕಾರ ಹಾಗೆ ವಿಶ್ಲೇಷಣೆ […]

ಕೊಡಗಿನ ಕೌಟುಂಬಿಕ ಹಾಕಿಹಬ್ಬ

ಕೆ.ವಿ.ಪರಮೇಶ್

ಕೊಡಗಿನ  ಕೌಟುಂಬಿಕ ಹಾಕಿಹಬ್ಬ
ಕೆ.ವಿ.ಪರಮೇಶ್

ಸಾವಿರಾರು ಕ್ರೀಡಾಭಿಮಾನಿಗಳು ಪಂದ್ಯಾಟ ವೀಕ್ಷಣೆಗೆ ಜಿಲ್ಲೆಯ ಮೂಲೆಮೂಲೆಯಿಂದ ಬರುವುದಿದೆ. ಅಷ್ಟೇ ಅಲ್ಲ ಜಿಲ್ಲೆಯ ಹೊರಗಿನ ಹಾಕಿಪ್ರೇಮಿಗಳ ಆಕರ್ಷಣೆಯೂ ಇಲ್ಲಿದೆ. ತಿಂಗಳ ಕಾಲ ಜರುಗುವ ಕ್ರೀಡೋತ್ಸವದ ಸ್ಥಳ ಕ್ರೀಡೆಯೊಂದಿಗೆ ಪರಂಪರೆ-ಸಂಸ್ಕೃತಿ ಮೇಳೈಸಿ ಹಬ್ಬದ ಸಂಭ್ರಮ ಸೃಷ್ಟಿಸುತ್ತದೆ. ಪ್ರಕೃತಿಯ ಮಡಿಲು, ಕರ್ನಾಟಕದ ಸ್ವಿಟ್ಜರ್ಲೆಂಡ್ ಎನಿಸಿಕೊಂಡಿರುವ ಪುಟ್ಟ ನಾಡು ಕೊಡಗು ದಿಟ್ಟೆದೆಯ ಜನರ ನೆಲವೂ ಹೌದು. ಮನೆಗೊಂದು ಬಂದೂಕು ಹೊಂದಿರುವಂತೆಯೇ ಇಲ್ಲಿ ಪುಟಾಣಿಗಳಿಂದ ವಯೋವೃದ್ಧರವರೆಗೂ ಎಲ್ಲರ ಕೈಯ್ಯಲ್ಲೂ ಕಾಣಸಿಗುವುದು ಹಾಕಿ ಸ್ಟಿಕ್. ಅಷ್ಟರಮಟ್ಟಿಗೆ ಹಾಕಿ ಕ್ರೀಡೆ ಇಲ್ಲಿ ಹಾಸುಹೊಕ್ಕಾಗಿದೆ. ಕ್ರೀಡೆ ಜತೆ […]

ಮೇಘಸಂದೇಶ ವಾಹಕ ಪಾರಿವಾಳ

ಕೆ.ವಿ.ಪರಮೇಶ್

ಮೇಘಸಂದೇಶ ವಾಹಕ ಪಾರಿವಾಳ
ಕೆ.ವಿ.ಪರಮೇಶ್

ಬಯಲು ಸೀಮೆಯ ಆಟ ಎಂದೇ ಹೆಸರಾಗಿರುವ ಈ ಪಾರಿವಾಳ ಪಂದ್ಯ ಈಗೀಗ ಎಲ್ಲೆಡೆಯೂ ಕಾಣಸಿಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡೆಗಳಿಗೇನೂ ಕೊರತೆಯಿಲ್ಲ. ಕೆಲವು ಪುರಾತನ ಕಾಲದಿಂದ ನಡೆಸಿಕೊಂಡು ಬರುತ್ತಿದ್ದರೆ ಮತ್ತೆ ಕೆಲವು ಸ್ವಯಂ ನಮ್ಮವರಿಂದಲೇ ಹುಟ್ಟಿಕೊಂಡ ಆಟಗಳು. ಅದರಲ್ಲೂ ಸಾಕು ಪ್ರಾಣಿಗಳ ಮೇಲೆ ಪ್ರಯೋಗ ಮಾಡುವ ಕ್ರೀಡೆಗಳು ಹೆಚ್ಚು. ಇವು ಅತ್ಯಂತ ಹೆಚ್ಚಿನ ಮನರಂಜನೆಯೊಂದಿಗೆ ಕಡಿಮೆ ಖರ್ಚಿನ ಆಟಗಳು ಎನ್ನುವುದು ವಿಶೇಷ. ನಮ್ಮಲ್ಲಿರುವ ಎತ್ತು, ಕುರಿ, ಕೋಳಿ, ದನಗಳು ಅಷ್ಟೇ ಏಕೆ? ಪಕ್ಷಿಗಳ ಮೇಲೆಯೂ ಪಂದ್ಯಾಟ ನಡೆಸುವ ಖಯಾಲಿ […]

ಕಬಡ್ಡಿ ಎಂಬ ದೈಹಿಕ ಕಸರತ್ತಿನ ಆಟ

ಕೆ.ವಿ.ಪರಮೇಶ್

ಕಬಡ್ಡಿ ಎಂಬ ದೈಹಿಕ ಕಸರತ್ತಿನ ಆಟ
ಕೆ.ವಿ.ಪರಮೇಶ್

ಕಬಡ್ಡಿ ಪ್ರಸಕ್ತ ವಿಶ್ವಕಪ್ ಮಟ್ಟದಲ್ಲಿ ನಡೆಯುವಷ್ಟರಮಟ್ಟಿಗೆ ಖ್ಯಾತಿ ಪಡೆದಿದೆ. ಏಷ್ಯಾಕಪ್ ಜೊತೆಗೆ ವಿಶ್ವಕಪ್‍ನಲ್ಲಿಯೂ ಭಾರತವೇ ಫೇವರೇಟ್ ಎನ್ನುವುದು ನಮ್ಮವರ ಪ್ರಬಲತೆಗೆ ಹಿಡಿದ ಕೈಗನ್ನಡಿ. ಹೌದು ಕಬಡ್ಡಿ ನಿಜಕ್ಕೂ ದೈಹಿಕ ಕಸರತ್ತಿನ ಗೇಮ್. ಯಾವ ವಯಸ್ಸಿನವರು ಬೇಕಿದ್ದರೂ ಆಡಬಹುದಾದ ಈ ಆಟ ಅಪ್ಪಟ ಗ್ರಾಮೀಣ ಕ್ರೀಡೆ ಎನ್ನುವುದು ನಿಸ್ಸಂಶಯ. ಈವತ್ತಿಗೆ ಈ ಕ್ರೀಡೆ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ ಎಂದರೆ ಅದು ಭಾರತೀಯರ ಹೆಮ್ಮೆ. ಇತ್ತೀಚೆಗೆ ಹೊನಲುಬೆಳಕಿನಲ್ಲಿ ಆಡುವ ಕಬಡ್ಡಿ ಮತ್ತಷ್ಟು ಪ್ರಖ್ಯಾತಿ ಪಡೆದಿದೆ. ಇದು ಎಷ್ಟು ರೋಚಕವೋ ಅಷ್ಟೇ […]

ಲಗೋರಿ ಎಂಬ ಲವ್ಲಿ ಗೇಮ್

-ಕೆ.ವಿ.ಪರಮೇಶ್.

ಲಗೋರಿ ಎಂಬ ಲವ್ಲಿ ಗೇಮ್
-ಕೆ.ವಿ.ಪರಮೇಶ್.

ಅಪರೂಪದ ಹಾಗೂ ಅಷ್ಟೇ ಉಲ್ಲಾಸಕರ ಆಟ ‘ಲಗೋರಿ’. ಈ ಹೆಸರು ಪುಟಾಣಿಗಳಲ್ಲಷ್ಟೇ ಅಲ್ಲ, ಯುವಕರು ಹಾಗೂ ಹಿರಿಯರಲ್ಲೂ ಉತ್ಸಾಹದ ಚಿಲುಮೆ ಮೂಡಿಸುವಂತಹದ್ದು. ಜನಪದ ಅಥವಾ ಸಾಂಪ್ರದಾಯಿಕ ಕ್ರೀಡೆಗಳು ಮನರಂಜನೆಯೊಂದಿಗೆ, ದೈಹಿಕ ಕಸರತ್ತು ಮತ್ತು ಒಗ್ಗಟ್ಟನ್ನು ಕಾಪಾಡುವ ಮೂಲ ಉದ್ದೇಶ ಹೊಂದಿವೆ ಎನ್ನುವುದು ಅನೇಕ ಸಂದರ್ಭಗಳಲ್ಲಿ ಇತಿಹಾಸಕಾರರಿಂದಲೇ ಉಲ್ಲೇಖಿಸಲ್ಪಟ್ಟಿವೆ. ಈ ಆಟಗಳಿಗೆ ಸರಳವಾಗಿ ಎಲ್ಲೆಡೆ ಲಭ್ಯವಾಗುವ ಕ್ರೀಡಾ ಸಾಮಗ್ರಿಗಳನ್ನು ಬಳಸುವುದು ಮತ್ತೊಂದು ಧನಾತ್ಮಕ ಅಂಶ. ಇಂತಹ ಅಪರೂಪದ ಹಾಗೂ ಅಷ್ಟೇ ಉಲ್ಲಾಸಕರ ಆಟ ‘ಲಗೋರಿ’. ಈ ಹೆಸರು ಪುಟಾಣಿಗಳಲ್ಲಷ್ಟೇ […]

ಲೆಕ್ಕಾಚಾರದ ಆಟ ಎಂಬ ಚೌಕಾಬಾರ

-ಕೆ.ವಿ.ಪರಮೇಶ್.

ನಮ್ಮ ಗ್ರಾಮೀಣ ಕ್ರೀಡೆಗಳ ಹಿಂದೆ ನಿಖರವಾದ ಉದ್ದೇಶವಿತ್ತು ಎನ್ನುವುದು ನಿಸ್ಸಂಶಯ. ಏಕೆಂದರೆ ಇಂದಿಗೂ ಕೆಲವು ಆಟಗಳು ಜೀವಂತಿಕೆ ಹೊಂದಿವೆ ಎನ್ನುವುದಕ್ಕೆ ಮನುಕುಲದ ಅನುಕೂಲಕ್ಕೆ ಅವುಗಳನ್ನು ಬಳಸಿಕೊಂಡಿರುವುದೇ ಸಾಕ್ಷಿ. ಈಗ ಪರಿಚಯಿಸಲು ಹೊರಟಿರುವ ಆಟವನ್ನು ನಾವು ಬಾಲ್ಯದಲ್ಲಿ ಎಂದಾದರೊಮ್ಮೆ ಆಡಿರುತ್ತೇವೆ. ಹಬ್ಬಹರಿದಿನಗಳಲ್ಲಿ, ಬಿಡುವಿನ ವೇಳೆಯಲ್ಲಿ ಮೊದಲಿಗೆ ನೆನಪಿಗೆ ಬರುವ ಆಟವೇ ‘ಚೌಕಾಬಾರ’ ಅಥವಾ ಪಟ್ಟೆಮನೆ (ಕಟ್ಟೆಮನೆ). ವಿವಿಧ ಪ್ರದೇಶಗಳಲ್ಲಿ ಇದಕ್ಕೆ ಭಿನ್ನ ಹೆಸರುಗಳಿವೆ. ಆಟದಲ್ಲಿಯೂ ಕೊಂಚ ಭಿನ್ನತೆ ಇದೆ. ಬಳಸುವ ಕಾಯಿ ಹಾಗೂ ಆಡುವ ಲಟ್ಟುಗಳಕಲ್ಲೂ ವ್ಯತ್ಯಾಸವಿದೆ. ಇದಕ್ಕೆ […]

ವಿಶಿಷ್ಟ ಆಚರಣೆಯ ಜನಪದ ಕ್ರೀಡೆಗಳು

-ಕೆ.ವಿ.ಪರಮೇಶ್.

ವಿಶಿಷ್ಟ ಆಚರಣೆಯ  ಜನಪದ ಕ್ರೀಡೆಗಳು
-ಕೆ.ವಿ.ಪರಮೇಶ್.

ಗ್ರಾಮೀಣ ಕ್ರೀಡೆಗಳಲ್ಲಿ ಹಲವು ವಿಶಿಷ್ಟ ಮತ್ತು ವಿಚಿತ್ರ ಆಟಗಳಿವೆ. ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರ ಕಂಡುಬರುವಂತಹ ಆಟಗಳು. ಅವುಗಳಿಗೆ ಗ್ರಾಮಮಟ್ಟವೇ ದೊಡ್ಡ ವೇದಿಕೆ. ಇವುಗಳಿಗೆ ಬೇರೆಲ್ಲೂ ಹೇಳಿಕೊಳ್ಳುವಂತಹ ಹೆಸರಿಲ್ಲ. ಹಾಗಾಗಿ ಹುಟ್ಟಿದ ಜಾಗದಲ್ಲೇ ಅಸ್ತಿತ್ವ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇವುಗಳಿಗಿದೆ. ಇಂತಹ ಕ್ರೀಡೆಗಳ ಪಟ್ಟಿಯಲ್ಲಿ ಕಪ್ಪೆಗುಪ್ಪಾಟ, ಟೊಪ್ಪಿಯಾಟ, ಗೋಣಿಚೀಲ ಓಟ, ನಿಂಬೆಹಣ್ಣಿನ ಓಟ ಮತ್ತಿತರ ಆಟಗಳಿವೆ.   ಕಪ್ಪೆಗುಪ್ಪಾಟ ಈ ಬಗೆಯ ಆಟಗಳಿಗೆ ಪ್ರಾಚೀನ ಹಿನ್ನೆಲೆ ಇದ್ದರೂ ಹೇಳಿಕೊಳ್ಳುವಂತಹ ಮನ್ನಣೆ ಸಿಗಲಿಲ್ಲ. ಹಾಗಾಗಿ ಆಯಾ ಊರು ಅಥವಾ ಸೀಮಿತ […]

ಪ್ರೇರಣೆಯಾದ ಚಿನ್ನಿ-ದಾಂಡು

- ಕೆ.ವಿ.ಪರಮೇಶ್

ಪ್ರೇರಣೆಯಾದ ಚಿನ್ನಿ-ದಾಂಡು
- ಕೆ.ವಿ.ಪರಮೇಶ್

ಚಿನ್ನಿ-ದಾಂಡು ಆಟದಲ್ಲಿ ಆಟಗಾರರಿಗೆ ದೈಹಿಕ ಸಾಮಥ್ರ್ಯದೊಂದಿಗೆ ಅಳತೆ ಮೂಲಕ ಅಂಕಿಸಂಖ್ಯೆಯ ಕಲಿಕೆಯೂ ಸಾಧ್ಯ. ಜೊತೆಗೆ ಹೋರಾಟದ ಮನೋಭಾವವೂ ಲಭ್ಯ. ಹಾಗಾಗಿಯೇ ನಮ್ಮ ಪೂರ್ವಿಕರು ಗ್ರಾಮೀಣ ಭಾಗದಲ್ಲಿ ಇಂತಹ ಮಹತ್ವಪೂರ್ಣ ಆಟವನ್ನು ಯುವಕರಿಗೆ ಪರಿಚಯಿಸಿದ್ದಾರೆ. ಪ್ರಸ್ತುತ ಜನಪ್ರಿಯ ಎನಿಸಿರುವ ಹಲವು ಕ್ರೀಡೆಗಳಿಗೆ ನಮ್ಮ ಜನಪದ ಕ್ರೀಡೆಗಳೇ ಪ್ರೇರಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಕಾಲಕ್ರಮೇಣ ಜನಪದ ಕ್ರೀಡೆಗಳ ರೂಪಾಂತರವೇ ಆಧುನಿಕ ಕ್ರೀಡೆ ಎಂದರೂ ಅತಿಶಯೋಕ್ತಿಯಲ್ಲ. ಈ ನಿಟ್ಟಿನಲ್ಲಿ ಪ್ರಧಾನ ಸ್ಥಾನದಲ್ಲಿ ನಿಲ್ಲುವುದು ಚಿನ್ನಿ-ದಾಂಡು. ಯಾವುದೇ ದುಬಾರಿ ವೆಚ್ಚದ ಪರಿಕರಗಳಿಲ್ಲದೆ […]