ಪೌರಾಣಿಕ ಪ್ರತಿಮೆಗಳಿಗೂ ಗ್ಯಾಡ್ಜೆಟ್ಗಳೇ ಪ್ರೀತಿ!

-ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ

ಕಲಬುರಗಿಯ ಯುವ ಕಲಾವಿದ ಡಾ.ಷಾಹಿದ್ ಪಾಶಾ ಅವರ ಕಲಾಕೃತಿಗಳ ರಾಮಾಯಣ–ಮಹಾಭಾರತ ಕಥಾನಕಗಳು ಆಧುನಿಕ ಬದುಕಿನ ಹೊಸ ವಿನ್ಯಾಸಗಳಾಗಿವೆ. -ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ ರಾತ್ರಿ ಹೊತ್ನಲ್ಲಿ ಬಸವಣ್ಣ ದೇವರಗುಡಿಯ ಹಜಾರದಲ್ಲಿ ಅಪ್ಪಟ ಜನಪದ ಶೈಲಿಯ ಹಾಡು-ಮಾತುಕತೆಯ ಹಿನ್ನೆಲೆಯಲ್ಲಿ ಕಿಳ್ಳೇಕ್ಯಾತರು ಪ್ರದರ್ಶಿಸುತ್ತಿದ್ದ ತೊಗಲುಗೊಂಬೆಯಾಟಗಳು ಎಲ್ಲ ಧರ್ಮದ ಜನಪದರನ್ನು ಒಗ್ಗೂಡಿಸುತ್ತಿದ್ದವು. ರಾಮಾಯಣ-ಮಹಾಭಾರತ ದೃಶ್ಯ ಕಥಾನಕಗಳನ್ನು ತಲೆಯ ಮೇಲೆ ಹೊತ್ತುಕೊಂಡು ಊರೂರು ಅಲೆಯುವ ಕಿಳ್ಳೇಕ್ಯಾತರ ಅಭಿವ್ಯಕ್ತಿಯಲ್ಲಿ ಯಾವುದೇ ಮೈಲಿಗೆಯ ವಾಸನೆಯನ್ನು ಅಂದಿನ ಜನಪದರು ಗ್ರಹಿಸುತ್ತಿದ್ದಿಲ್ಲ ಎಂಬುದು ಮಾಸದ ನೆನಪು. ಆದರೆ ಇಂದು ಸೃಜನಶೀಲ ಅಭಿವ್ಯಕ್ತಿ ಸ್ವಾತಂತ್ರ್ಯದ […]