ಅಪ್ರಸ್ತುತತೆಯ ಹಾದಿಯಲ್ಲಿ ಸಿಸಿಪಿ

-ಶೇಷಾದ್ರಿ ಚಾರಿ

ಅಪ್ರಸ್ತುತತೆಯ ಹಾದಿಯಲ್ಲಿ ಸಿಸಿಪಿ
-ಶೇಷಾದ್ರಿ ಚಾರಿ

–ಶೇಷಾದ್ರಿ ಚಾರಿ ಅನುವಾದ: ಹರ್ಷವರ್ಧನ ವಿ.ಶೀಲವಂತ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ಆರ್‍ಎಸ್‍ಎಸ್‍ನ್ನು ತಮ್ಮ ವಿಶಿಷ್ಟ ದೃಷ್ಟಿಕೋನದಲ್ಲಿ ಗ್ರಹಿಸಿ, ಒಳಾರ್ಥ ವಿಶ್ಲೇಷಿಸಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳಿಗೆ ಸಮೀಕರಿಸಿ ಬರೆಯುತ್ತಾರೆ ಶೇಷಾದ್ರಿ ಚಾರಿ. ರಾಷ್ಟ್ರಗಳು ಕಳೆಗುಂದಿ ಸರಿದು ಹೋಗುತ್ತವೆ, ಎಂಬುದು ಕಾರ್ಲ್ ಮಾಕ್ರ್ಸ್ ಘೋಷಿಸಿದ ತುಂಬ ಪ್ರಸಿದ್ಧ ಮಾತು. ಆದರೆ, ಕಣ್ಮರೆಯಾದದ್ದು ಕಮ್ಯುನಿಸ್ಟ್ ಪಕ್ಷಗಳು ಅಥವಾ ಅವು ಈ ಪ್ರಕ್ರಿಯೆಯಲ್ಲಿವೆ. ಕಮ್ಯುನಿಸ್ಟ್ ಆಡಳಿತವನ್ನು ವಿಶ್ವ ಮಟ್ಟದಲ್ಲಿ ಸ್ಥಾಪಿಸಿ, ತನ್ಮೂಲಕ ಜಾಗತಿಕವಾಗಿ ಕಮ್ಯುನಿಸ್ಟ್ ಕ್ರಾಂತಿಯನ್ನು ದೈದೀಪ್ಯಮಾನವಾಗಿಸುವ ಧ್ಯೇಯೋದ್ದೇಶ ಹಾಗೂ […]

ನೂರರ ಸಂಭ್ರಮದಲ್ಲಿನ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೆ ಸಂಕೀರ್ಣ ಸೈದ್ಧಾಂತಿಕ ಸವಾಲುಗಳು

-ಡಾ.ಬಿ.ಆರ್.ಮಂಜುನಾಥ್

ನೂರರ ಸಂಭ್ರಮದಲ್ಲಿನ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೆ ಸಂಕೀರ್ಣ ಸೈದ್ಧಾಂತಿಕ ಸವಾಲುಗಳು
-ಡಾ.ಬಿ.ಆರ್.ಮಂಜುನಾಥ್

–ಡಾ.ಬಿ.ಆರ್.ಮಂಜುನಾಥ್ ಚೀನಾದ ಕಮ್ಯುನಿಸ್ಟ್ ಪಕ್ಷಕ್ಕೆ ಇದೀಗ ನೂರು ವರ್ಷ ತುಂಬಿದೆ. ಒಂದು ರಾಜಕೀಯ ಪಕ್ಷದ ಶತಮಾನೋತ್ಸವ ನಿಜಕ್ಕೂ ಅಷ್ಟು ದೊಡ್ಡ ಸುದ್ದಿಯಾಗಬೇಕೇ, ಅದೂ ಯಾವುದೋ ದೇಶದ್ದು? ಹೌದು, ಇದಕ್ಕೆ ಸಕಾರಣವಿದೆ. ಚೀನಾದ ಸಂದರ್ಭದಲ್ಲಿ ಅಲ್ಲಿನ ಆಡಳಿತ ಪಕ್ಷ ಬೇರೆಯಲ್ಲ ಅಲ್ಲಿನ ವ್ಯವಸ್ಥೆ ಬೇರೆಯಲ್ಲ ಮತ್ತು ಇದೀಗ ಚೀನಾ ವಿಶ್ವದ ಎರಡನೇ ಅತಿದೊಡ್ಡ ಬಲಿಷ್ಠ ಆರ್ಥಿಕ ಶಕ್ತಿಯಾಗಿದೆ. ಪ್ರಬಲ ಮಿಲಿಟರಿ ಅಲ್ಲಿದೆ. ಅನೇಕ ಕ್ಷೇತ್ರಗಳಲ್ಲಿ ಅಮೆರಿಕಾವನ್ನು ಹಿಂದಿಕ್ಕಿದೆ. ಚೀನೀಯರು ಈಗ ಎದೆಯುಬ್ಬಿಸಿ ಈ ಶತಮಾನ ನಮಗೆ ಸೇರಿದ್ದು ಎನ್ನಲಾರಂಭಿಸಿದ್ದಾರೆ. […]

ಇತಿಹಾಸದ ಪುನರ್ ರಚನೆಯಲ್ಲಿ ನೂರು ವರ್ಷ ಪೂರೈಸಿದ ಚೀನಾ ಕಮ್ಯುನಿಸ್ಟ್ ಪಕ್ಷ

-ರಾಣಾ ಮಿಟ್ಟರ್

ಇತಿಹಾಸದ ಪುನರ್ ರಚನೆಯಲ್ಲಿ ನೂರು ವರ್ಷ ಪೂರೈಸಿದ ಚೀನಾ ಕಮ್ಯುನಿಸ್ಟ್ ಪಕ್ಷ
-ರಾಣಾ ಮಿಟ್ಟರ್

–ರಾಣಾ ಮಿಟ್ಟರ್ ಅನುವಾದ: ನಾ.ದಿವಾಕರ ಚೀನಾ ಕಮ್ಯುನಿಸ್ಟ್ ಪಕ್ಷ ನೂರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಪಕ್ಷದ ಇತಿಹಾಸವನ್ನು ಸಾರುವ ಹೊಸ ಮ್ಯೂಸಿಯಂ ಒಂದನ್ನು ಬೀಜಿಂಗ್‍ನಲ್ಲಿ ತೆರೆಯಲಾಗಿದೆ. ಆನ್‍ಲೈನ್‍ನಲ್ಲಿ ಲಭ್ಯವಿರುವ ಚಿತ್ರಗಳ ಪೈಕಿ 1921ರ ಪಕ್ಷದ ಸಂಸ್ಥಾಪನಾ ದಿನದಂದು ನೆರೆದಿದ್ದ 12 ಯುವಕರ ಕಪ್ಪುಬಿಳುಪಿನ ಭಾವಚಿತ್ರ ಮನಸೆಳೆಯುತ್ತದೆ. ಈ ಕಾರ್ಯಕರ್ತರ ಪೈಕಿ ಒಬ್ಬ, ಗ್ರಂಥಾಲಯ ಸಹಾಯಕನಾಗಿದ್ದ ಮಾವೊ ತ್ಸೆ ತುಂಗ್ ಬಹುಶಃ 2021ರ ಚೀನಾವನ್ನು ಗುರುತಿಸಲೂ ಕಷ್ಟಪಡಬಹುದು. ಒಂದು ಪ್ರಬಲವಾದ, ವಿಶ್ವದಲ್ಲೇ ಅತ್ಯಂತ ದೀರ್ಘ ಕಾಲದಲ್ಲಿರುವ ಕಮ್ಯುನಿಸ್ಟ್ ಪಕ್ಷ […]

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ವಿಶ್ವ ವಿದ್ಯಮಾನ
-ಪುರುಷೋತ್ತಮ ಆಲದಹಳ್ಳಿ

ಕಡೆಗೂ ಶುರುವಾದ ಓಲಿಂಪಿಕ್ಸ್ 2020 ರ ಜುಲೈನಲ್ಲಿ ಶುರುವಾಗಬೇಕಿದ್ದ ಜಪಾನ್ ಓಲಿಂಪಿಕ್ಸ್ ಕಡೆಗೂ 2021 ರ ಜುಲೈ 23 ರಂದು ಟೋಕಿಯೋದಲ್ಲಿ ಪ್ರಾರಂಭವಾಗಿದೆ. ಜಪಾನಿನ ಟೆನಿಸ್ ಆಟಗಾರ್ತಿ ನಯೋಮಿ ಓಸಾಕ ಓಲಿಂಪಿಕ್ಸ್ ಜ್ಯೋತಿಯನ್ನು ಬೆಳಗುವುದರೊಂದಿಗೆ ಹಾಗೂ ಜಪಾನಿನ ದೊರೆ ನರುಹಿತೊ ಕ್ರೀಡಾಕೂಟ ಉದ್ಘಾಟಿಸುವುದರೊಂದಿಗೆ ಈ ಓಲಿಂಪಿಕ್ಸ್ ಮೊಟ್ಟಮೊದಲಿಗೆ ಪ್ರೇಕ್ಷಕರಿಲ್ಲದೆ ನಡೆಯಬೇಕಾಗಿದೆ. ಭಾರತೀಯ ಮಹಿಳಾ ಬಾಕ್ಸರ್ ಮೇರಿ ಕೋಮ್ ಮತ್ತು ಭಾರತೀಯ ಹಾಕಿ ತಂಡದ ನಾಯಕ ಮನ್‍ಪ್ರೀತ್ ಸಿಂಗ್ ದೇಶದ ಬಾವುಟವನ್ನು ಹಿಡಿದು ಪಥಸಂಚಲನದಲ್ಲಿ ಪಾಲ್ಗೊಳ್ಳುವುದರೊಂದಿಗೆ ಈ ಕೂಟದಲ್ಲಿ […]

ಎಲ್ಲಾ ಕೊರೊನಾ ವೈರಸ್ಗಳಿಗೆ ಒಂದೇ ಸಾರ್ವತ್ರಿಕ ಲಸಿಕೆ…?

ನ್ಯೂಸ್‍ವೀಕ್ ನಿಯತಕಾಲಿಕ

ವಿವಿಧ ರೂಪಾಂತರಿ ವೈರಾಣುಗಳ ವಿರುದ್ಧ ಲಸಿಕೆಗಳ ಪ್ರಾಬಲ್ಯವನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ. ಆದರೆ, ದೀರ್ಘಾವಧಿಯಲ್ಲಿ ಹೊಸ ರೂಪಾಂತರಗಳಿಂದ ರಕ್ಷಣೆ ಪಡೆಯಲು ಸಾರ್ವತ್ರಿಕ ಲಸಿಕೆ ಉತ್ತಮ ಮಾರ್ಗವಾಗಲಿದೆ. ಮೂಲ: ನ್ಯೂಸ್‍ವೀಕ್ ನಿಯತಕಾಲಿಕ ಅನುವಾದ: ಎಂ.ಕೆ.ಆನಂದರಾಜೇ ಅರಸ್ ವಿವಿಧ ರೂಪಾಂತರಗಳಿಂದ ತಲೆನೋವಾಗಿ ಪರಿಣಮಿಸುತ್ತಿರುವ ನಾವೆಲ್ ಕೊರೋನಾ ವೈರಸ್‍ಗೆ ಹಾಗೂ ಕೊರೋನಾ ವೈರಸ್ ಕುಟುಂಬದ ವಿವಿಧ ವೈರಾಣುಗಳು ಹಾಗೂ ಅವುಗಳ ವಿವಿಧ ರೂಪಾಂತರಗಳೆಲ್ಲದರಿಂದ ರಕ್ಷಣೆಯನ್ನೊದಗಿಸುವ ಸಾರ್ವತ್ರಿಕ ಲಸಿಕೆ ಸಿದ್ಧಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಸಂಶೋಧಕರ ಪೈಕಿ ಯು.ಎಸ್.ಎ.ನ ನ್ಯಾಷನಲ್ […]

ಕೋವಿಡ್ ಸಂಕಷ್ಟದಲ್ಲಿ ಹೆಚ್ಚಾಗುತ್ತಿದೆ ಸೈಬರ್ ಭಯೋತ್ಪಾದನೆ

ಸೈಬರ್ ಸುರಕ್ಷತೆ ಮತ್ತು ಸೈಬರ್ ವಿಧಿವಿಜ್ಞಾನ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿವೆ. ಕೋವಿಡ್-19ರ ದುಸ್ತರ ಪರಿಸ್ಥಿತಿಯಲ್ಲಿ ಕೂಡಾ ವಿಶ್ವಾದಂತ್ಯ ಸುಮಾರು 50 ಲಕ್ಷ ಉದ್ಯೋಗಾವಕಾಶಗಳು, ಸೂಕ್ತ ಅಭ್ಯರ್ಥಿ ದೊರೆಯದ ಕಾರಣ ಖಾಲಿ ಉಳಿದಿವೆ. -ಡಾ.ಉದಯ ಶಂಕರ ಪುರಾಣಿಕ ಕೋವಿಡ್ ಲಸಿಕೆ ಪಡೆದಿರುವುದಾಗಿ ಹೇಳುವ ನಕಲಿ ಸರ್ಟಿಫಿಕೇಟ್‍ಗಳನ್ನು ಸೈಬರ್ ಭಯೋತ್ಪಾದಕರು ಸೃಷ್ಟಿಸಿ, ಮಾರಾಟ ಮಾಡುತ್ತಿದ್ದಾರೆ. ಉದಾಹರಣೆಗೆ, ಕೋವಿಡ್-19 ಲಸಿಕೆ ಪಡೆದಿರುವವರಿಗೆ ಜರ್ಮನಿಯಲ್ಲಿ ನೀಡಲಾಗುವ ಸರ್ಟಿಫಿಕೇಟ್‍ನಂತೆ ಇರುವ ನಕಲಿ ಸರ್ಟಿಫಿಕೇಟ್‍ಗೆ ತಲಾ 25 ಡಾಲರ್ ನಂತೆ ಮಾರಾಟ […]

ಜಿ7 ಒಕ್ಕೂಟಕ್ಕೆ ಬೈಡೆನ್ ನಾಯಕತ್ವ

ಎರಡು ವರ್ಷಗಳ ನಂತರ ನಡೆದ ಜಿ7 ಶೃಂಗಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮತ್ತೆ ಅಮೆರಿಕದ ನಾಯಕತ್ವ ಸ್ಥಾಪನೆ ಮಾಡಿದ್ದಾರೆ. ಬ್ರಿಟನ್ನಿನ ಕಾರ್ನ್‍ವಾಲ್‍ನಲ್ಲಿ 2021 ರ ಜೂನ್ ಎರಡನೇ ವಾರದಲ್ಲಿ ನಡೆದ ಈ ಸಭೆಯಲ್ಲಿ ಕೋವಿಡ್ ನಂತರದ ಹಾಗೂ ಟ್ರಂಪ್ ನಿರ್ಗಮನದ ನಂತರದ ಸಂದರ್ಭದಲ್ಲಿ ವಿಶ್ವದ ಏಳು ಬಲಾಢ್ಯ ಪ್ರಜಾಪ್ರಭುತ್ವದ ರಾಷ್ಟ್ರಗಳಿಗೆ ಮತ್ತೆ ಅಮೆರಿಕದ ಮುಂದಾಳತ್ವ ದೊರಕಿದೆ. ರಷ್ಯಾ ಮತ್ತು ಚೀನಾಗಳ ವಿರುದ್ಧ ಈ ಶೃಂಗಸಭೆ ಅತ್ಯಂತ ಸ್ಪಷ್ಟ ಮತ್ತು ಕಠಿಣ ನಿರ್ಣಯಗಳನ್ನು ಕೈಗೊಂಡು ವಿಶ್ವÀಕ್ಕೆ ಡೆಮಾಕ್ರೆಟಿಕ್ […]

ಪಾರ್ಲಿಮೆಂಟಲ್ಲಿ ಪ್ರಕೃತಿಗೂ ಜಾಗ!

-ದೀಪಕ್ ಭಟ್ ದುಂಡಿ

ನಮ್ಮ ದೇಶದಲ್ಲಿ ನದಿ ಜೋಡಣೆ, ಗಣಿಗಾರಿಕೆಯಂತಹ ಅಭಿವೃದ್ಧಿಯೋಜನೆಗಳ ಬಗ್ಗೆ ನಡೆಯುತ್ತಿರುವ ಸಂವಾದಗಳು ಇನ್ನೂ ಆರ್ಥಿಕ ಲಾಭನಷ್ಟಗಳ ಸುತ್ತ ಗಿರಕಿ ಹೊಡೆಯುತ್ತಿವೆ. ಆದರೆ ಜಗತ್ತಿನಾದ್ಯಂತ ಕೆಲವು ಚಿಂತಕರು, ವಿಜ್ಞಾನಿಗಳು ಮತ್ತು ಮೂಲನಿವಾಸಿಗಳು ಮನುಷ್ಯರ ಆರ್ಥಿಕ ಲಾಭನಷ್ಟಗಳಿಗಷ್ಟೇ ಚರ್ಚೆಯನ್ನ ಸೀಮಿತಗೊಳಿಸದೆ ಪ್ರಕೃತಿಗಿರುವ ಮೂಲಭೂತ ಹಕ್ಕನ್ನೂ ನಾವು ಪರಿಗಣಿಸಬೇಕು ಎನ್ನುತ್ತಿದ್ದಾರೆ. -ದೀಪಕ್ ಭಟ್ ದುಂಡಿ ಮಲೆನಾಡಿನಲ್ಲಿ ಗುಡ್ಡಕುಸಿತ, ದೇಶದ ಒಂದುಕಡೆ ಪ್ರವಾಹ ಇನ್ನೊಂದು ಕಡೆ ಬರ, ನೀರಿನ ಬವಣೆ, ಹಿಮಾಲಯದಲ್ಲಿ ಹಿಮನದಿಗಳ ಆಸ್ಫೋಟ, ಉಗ್ರಸ್ವರೂಪಿ ಚಂಡಮಾರುತಗಳು ಮತ್ತು ಜಗತ್ತಿನ ತುಂಬೆಲ್ಲ ವ್ಯಾಪಿಸುತ್ತಿರುವ […]

ಡಿಜಿಟಲ್ ಯುಗದಲ್ಲಿ ಡೇಟಾ ಬಂಗಾರ

-ಡಾ.ಉದಯ ಶಂಕರ ಪುರಾಣಿಕ

ಡಿಜಿಟಲ್ ಯುಗದಲ್ಲಿ ಡೇಟಾ ಬಂಗಾರ
-ಡಾ.ಉದಯ ಶಂಕರ ಪುರಾಣಿಕ

ಕೋವಿಡ್-19 ಉಂಟು ಮಾಡಿರುವ ಸಮಸ್ಯೆಗಳಂತೆ, ಹಲವು ಹೊಸ ಅವಕಾಶಗಳು ಕೂಡಾ ಸೃಷ್ಟಿಯಾಗುತ್ತಿವೆ. ಇದರಿಂದಾಗಿ ಸಾವಿರಾರು ಹೊಸ ಉದ್ಯೋಗವಕಾಶಗಳು ದೇಶ-ವಿದೇಶಗಳಲ್ಲಿ ಸೃಷ್ಟಿಯಾಗುತ್ತಿವೆ. ಇಂತಹ ಹೊಸ ಉದ್ಯೋಗವಕಾಶಗಳನ್ನು ಬಳಸಿಕೊಳ್ಳಲು ಆಸಕ್ತ ಕನ್ನಡಿಗರು ಮುಂದಾಗಬೇಕು. -ಡಾ.ಉದಯ ಶಂಕರ ಪುರಾಣಿಕ 2020ರಿಂದ ವಿಶ್ವ ಎದುರಿಸುತ್ತಿರುವ ಕೋವಿಡ್-19ರ ಸಂಕಷ್ಟದಿಂದಾಗಿ ಉದ್ಯೋಗ ಮತ್ತು ವಾಣಿಜ್ಯ ಕ್ಷೇತ್ರಗಳ ಮೇಲೆ ಹೆಚ್ಚಿನ ಪರಿಣಾಮವಾಗುತ್ತಿದೆ. ಬದುಕು ಕಟ್ಟಿಕೊಳ್ಳಲು ನಡೆದಿರುವ ಪ್ರಯತ್ನಗಳ ನಡುವೆ, ಇತ್ತೀಚೆಗೆ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಯಾವ ಉದ್ಯೋಗ ದೊರೆಯುತ್ತದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಕೋವಿಡ್-19 ಉಂಟು ಮಾಡಿರುವ […]

ಹೊಸ ಭರವಸೆ ಹುಟ್ಟಿಸಿರುವ ಸಾಮಾನ್ಯ ರಾಜಕಾರಣಿ ಬೈಡೆನ್

ಪೃಥ್ವಿದತ್ತ ಚಂದ್ರಶೋಭಿ

ಬೈಡೆನ್ ಕೆಲಸ ಮಾಡುತ್ತಿರುವ ರೀತಿಯು ಒಬ್ಬ ಸಾಮಾನ್ಯ ತಿಳಿವಳಿಕೆಯ, ವಿಜ್ಞಾನದಲ್ಲಿ ನಂಬಿಕೆಯಿರುವ ಆಡಳಿತಗಾರನ ಶೈಲಿಗೆ ಸಮೀಪವಾಗಿದೆ. ನಿಜವಾಗಿ ಬೈಡೆನ್ ಕಳೆದ ಐದು ತಿಂಗಳುಗಳಲ್ಲಿ ತೋರಿಸಿರುವುದು ಅವರ ಐದು ದಶಕಗಳ ರಾಜಕೀಯ ಜೀವನದಲ್ಲಿ ಕಾಣದ ಪ್ರಗತಿಪರ ಗುಣ ಮತ್ತು ಮಹತ್ವಾಕಾಂಕ್ಷೆಯನ್ನು. ಇದರಿಂದ ಅಮೆರಿಕಾದ ಪುನಶ್ಚೇತನಕ್ಕೆ ಅನುಕೂಲವಾಗಿದೆ. -ಪೃಥ್ವಿದತ್ತ ಚಂದ್ರಶೋಭಿ ಈ ಲೇಖನವನ್ನು ಬರೆಯುತ್ತಿರುವ ಮೇ ತಿಂಗಳ ಕಡೆಯ ವಾರಾಂತ್ಯವು ಅಮೆರಿಕಾದಲ್ಲಿ ಮೆಮೊರಿಯಲ್ (ಸ್ಮರಣೆಯ) ದಿನವನ್ನು ಆಚರಿಸಲಾಗುತ್ತಿದೆ. ಇದು 1861-65ರ ನಡುವಿನ ಅಂತರ್ಯುದ್ಧದ ಸಂದರ್ಭದಿಂದಲೂ ಸೈನ್ಯದಲ್ಲಿ ಸೇವೆ ಸಲ್ಲಿಸುವಾಗ ತಮ್ಮ […]

ಹಮಾಸ್ – ಇಸ್ರೇಲ್ ಕದನ

ಹಮಾಸ್ – ಇಸ್ರೇಲ್ ಕದನ

ಕಳೆದ 70 ವರ್ಷಗಳಿಂದ ನಡೆಯುತ್ತಿರುವ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಕದನ 2021 ರಲ್ಲಿ ಮತ್ತೊಮ್ಮೆ ಉಲ್ಬಣಗೊಂಡಿದೆ. ಇಸ್ರೇಲ್ ದಕ್ಷಿಣದ ಸಮುದ್ರ ತಟದಲ್ಲಿರುವ ಗಾಜಾಪಟ್ಟಿಯ ‘ಹಮಾಸ್’ ಬಂಡುಕೋರ ಸಂಸ್ಥೆ ಇಸ್ರೇಲಿನ ನಗರಗಳ ಮೇಲೆ 4200ಕ್ಕೂ ಹೆಚ್ಚು ರಾಕೆಟ್‍ಗಳನ್ನು ಸಿಡಿಸಿದೆ. ಹನ್ನೊಂದು ದಿನ ನಡೆದ ಈ ಕಲಹದಲ್ಲಿ ಇಸ್ರೇಲ್ ಕೂಡಾ ಹಮಾಸ್‍ನ ‘ಭಯೋತ್ಪಾದಕ ನೆಲೆ’ಗಳ ಮೇಲೆ ಸರ್ಜಿಕಲ್ ಕ್ಷಿಪಣಿ ದಾಳಿ ನಡೆಸಿದೆ. ಒಟ್ಟು 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಈ ಕದನದಲ್ಲಿ ಸತ್ತ ಬಹುತೇಕರು ನಿರ್ದೋಷಿ ಪ್ಯಾಲೆಸ್ಟೀನ್ ನಾಗರಿಕರಾಗಿದ್ದಾರೆ. […]

ಮಾಧ್ಯಮ ಸ್ವಾತಂತ್ರ್ಯ ಮಂಜಿನ ಪರದೆಯ ಹಿಂದೆ

-ನಾ ದಿವಾಕರ

ಇತ್ತೀಚೆಗೆ ರಿಪೋರ್ಟರ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್ (ಆರ್ ಸ್‍ ಎಫ್) ಸಂಸ್ಥೆ ಬಿಡುಗಡೆ ಮಾಡಿದ 2020ರ ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಪೈಕಿ 142ನೆಯ ಸ್ಥಾನ ಗಳಿಸಿದೆ! ಇದು ದೇಶದಲ್ಲಿನ ಮಾಧ್ಯಮ ಸ್ವಾತಂತ್ರ್ಯದ ಸ್ಥಿತಿಗತಿಗೆ ದ್ಯೋತಕ ಮತ್ತು ಮಹತ್ವದ ಮಾಪಕ. -ನಾ ದಿವಾಕರ 2021ರ ಏಪ್ರಿಲ್ ಕೊನೆಯ ವಾರದಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಆಂತರಿಕವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಕಷ್ಟು ಮುಜುಗರವನ್ನು ಎದುರಿಸಬೇಕಾಗಿತ್ತು. ಕೋವಿಡ್-19 ಎರಡನೆಯ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಕೇಂದ್ರ ಸರ್ಕಾರದ […]

ಮಾಧ್ಯಮಗಳು ಮತ್ತು ಸಾಮಾಜಿಕ ನ್ಯಾಯವೆಂಬ ಭ್ರಮೆ

-ರಂಗನಾಥ ಕಂಟನಕುಂಟೆ

ಮಾಧ್ಯಮಗಳ ವಿರುದ್ಧ ಇತ್ತೀಚೆಗೆ ಪ್ರತಿರೋಧದ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣಗಳು ಅನೇಕ. ಈಚಿನ ದಿನಗಳಲ್ಲಿ ಮಾಧ್ಯಮಗಳು ಸಮಾಕಾಲೀನ ರಾಜಕೀಯ, ಆರ್ಥಿಕ ಮತ್ತು ಧಾರ್ಮಿಕ ವಿದ್ಯಮಾನಗಳ ಬಗೆಗೆ ತಳೆಯುತ್ತಿರುವ ‘ಚರ್ಚಾರ್ಹ ನಿಲುವು’ಗಳು ಇದಕ್ಕೆ ಕಾರಣವಾಗಿವೆ. ಅಲ್ಲದೆ ಅವುಗಳ ಮಾಲೀಕತ್ವದ ಸ್ವರೂಪ ಹಾಗೂ ಅವುಗಳಲ್ಲಿ ತೊಡಗಿಸುತ್ತಿರುವ ಬಂಡವಾಳವು ಇದಕ್ಕೆ ಕಾರಣವಾಗಿದೆ. ಸಮೂಹ ಮಾಧ್ಯಮಗಳು ವಸ್ತುನಿಷ್ಠತೆಯನ್ನು ಕಾಪಾಡಿಕೊಳ್ಳಬೇಕು; ಸಾಮಾಜಿಕ ಬದ್ಧತೆಯನ್ನಿಟ್ಟುಕೊಂಡು ‘ಜನಪರ’ವಾಗಿ ಕೆಲಸ ಮಾಡಬೇಕೆಂಬ ಬಯಕೆ ಇರುವುದು ಇಂತಹ ಪ್ರತಿರೋಧಕ್ಕೆ ಕಾರಣ. ಹಾಗೂ ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಇದುವರೆಗೂ ನಂಬಿಕೊಂಡು […]

ಭಾರತದಲ್ಲಿ ಕೋವಿಡ್ ನಿರ್ವಹಣೆ ಅಸಹಾಯಕತೆಯೇ ಸಮರ್ಥನೆಯಾದಾಗ…

-ಎಂ.ಕೆ.ಆನಂದರಾಜೇ ಅರಸ್

ಸರ್ಕಾರದ ಕೈಗಳಿಗೆ ರಕ್ತ ಅಂಟಿಕೊಂಡಿದೆ. ಲೇಡಿ ಮ್ಯಾಕ್‍ಬೆತ್‍ಳ ಮಾತುಗಳು ನೆನಪಿಗೆ ಬರುತ್ತವೆ, “ಇಲ್ಲಿ ರಕ್ತದ ವಾಸನೆ ಇನ್ನೂ ಇದೆ. ಅರೇಬಿಯಾದ ಎಲ್ಲಾ ಸುಗಂಧ ದ್ರವ್ಯಗಳು ಈ ಪುಟ್ಟ ಕೈಯನ್ನು ಶುದ್ಧಗೊಳಿಸುವುದಿಲ್ಲ.” –ಎಂ.ಕೆ.ಆನಂದರಾಜೇ ಅರಸ್ ಏಪ್ರಿಲ್ 23-24, ಶುಕ್ರವಾರ ರಾತ್ರಿ ದೆಹಲಿಯ ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿ 20 ಕೋವಿಡ್ ರೋಗಿಗಳು ವಿಧಿವಶರಾಗುತ್ತಾರೆ. ಕೆಲವರು ಆಮ್ಲಜನಕದ ಅಭಾವದಿಂದ ಮೃತಪಟ್ಟರೆ, ಕೆಲವರ ಸಾವು ಬೇರೆ ಆರೋಗ್ಯ ತೊಡಕುಗಳಿಂದಾಗಿರುತ್ತದೆ. ಹಾಗೇ ಅವರು ಮೃತರಾಗುವಾಗ ಅವರ ಸಂಬಂಧಿಗಳು, ಹಿತೈಷಿಗಳು ಹಾಗೂ ಆಸ್ಪತ್ರೆಯ ವೈದ್ಯರು, ಅರೆವೈದ್ಯಕೀಯ […]

ಕೊರೊನ ಎರಡನೆಯ ಅಲೆ ಉಸಿರುಗಟ್ಟಿದ ಭಾರತ

-ಡಾ.ಬಿ.ಆರ್.ಮಂಜುನಾಥ್

ಇನ್ನು ಸತ್ಯವನ್ನು ನಿರಾಕರಿಸಿ ಉಪಯೋಗವಿಲ್ಲ. ನಮ್ಮ ಸರ್ಕಾರಗಳು ಭಾರೀ ಎಡವಟ್ಟು ಮಾಡಿಕೊಂಡಿವೆ. ಈಗ ಆಗಿರುವ ಪ್ರಮಾದಗಳಿಗೆ ಭಾರೀ ಅಪರಾಧದ, ನರಮೇಧದ ಆಯಾಮವೇ ಇದೆ. -ಡಾ.ಬಿ.ಆರ್.ಮಂಜುನಾಥ್ ಈ ಲೇಖನ ಅಚ್ಚಿಗೆ ಹೋಗುವ ವೇಳೆಗೆ ಭಾರತದಲ್ಲಿ ಒಂದು ದಿನದ ಕೊರೊನ ಸಾವಿನ ಸಂಖ್ಯೆ 3700 ಮುಟ್ಟಿದೆ. ಆದರೆ ಇದಕ್ಕಿಂತ ಗಾಬರಿ ಹುಟ್ಟಿಸುವ ಸಂಗತಿ ಎಂದರೆ ಅನೇಕ ರಾಜ್ಯಗಳಲ್ಲಿ ಸಾವಿನ ಸಂಖ್ಯೆಯನ್ನು ಸರಿಯಾಗಿ ಬಹಿರಂಗಪಡಿಸುತ್ತಿಲ್ಲ. ಉತ್ತರ ಪ್ರದೇಶವು ಎಂದಿನಂತೆ ವಾಸ್ತವವನ್ನು ನಿರಾಕರಿಸುವ ಕುಯುಕ್ತಿ, ಕುತಂತ್ರಗಳಲ್ಲಿ ಅಗ್ರಸ್ಥಾನದಲ್ಲಿದೆ. ಗುಜರಾತ್‍ನಲ್ಲಿ ಅಲ್ಲಿನ ಹೈಕೋರ್ಟ್ ದಂತಗೋಪುರದಿಂದ […]

ಓಟಾರ – ಶ್ರೀಲಂಕೆಯ ಯಶಸ್ವೀ ಮಹಿಳಾ ಉದ್ಯಮಿ

-ರಂಗಸ್ವಾಮಿ ಮೂಕನಹಳ್ಳಿ

ಓಟಾರ ಗುಣೆವರ್ದೇನೆ ಶ್ರೀಲಂಕಾ ಮೂಲದ ಮಹಿಳಾ ಉದ್ಯಮಿ; ತನ್ನ ಸಂಸ್ಥೆಯನ್ನ ಪಬ್ಲಿಕ್ ಇಶ್ಯೂ ಗೆ ತೆರೆದಿಟ್ಟ ಪ್ರಥಮ ಶ್ರೀಲಂಕನ್ ಮಹಿಳೆ ಎನ್ನುವ ಹೆಗ್ಗಳಿಕೆ ಇವರದು. –ರಂಗಸ್ವಾಮಿ ಮೂಕನಹಳ್ಳಿ ಶ್ರೀಲಂಕಾದ ಕೊಲಂಬೊದಲ್ಲಿ 30 ಆಗಸ್ಟ್ 1964ರಲ್ಲಿ ಜನಿಸಿದ ಇವರು ಅಮೆರಿಕಾದ ಓಹಿಯೋ ದಲ್ಲಿ ವೆಟರ್ನರಿ ಸೈನ್ಸ್ ನಲ್ಲಿ ಪದವಿಯನ್ನ ಪಡೆಯುತ್ತಾರೆ. ಇವರಿಗೆ ಪ್ರಾಣಿಗಳ ಸೇವೆಯನ್ನ ಮಾಡಿಕೊಂಡು ಜೀವನವನ್ನ ಕಳೆಯಬೇಕು ಎನ್ನುವ ಆಸೆ ಇರುತ್ತದೆ. ಆದರೆ ಬದುಕು ಇವರಿಗೆ ಬೇರೆಯ ದಾರಿಯನ್ನ ಆಯ್ದು ಕೊಂಡಿರುತ್ತದೆ. ಬಿಡುವಿನ ಸಮಯದಲ್ಲಿ ಅಮೆರಿಕಾದಲ್ಲಿ ಮಾಡೆಲ್ಲಿಂಗ್ […]

ಜೋ ಬೈಡೆನ್ ಮೊದಲ ೧೦೦ ಕನಸಿನ ದಿನಗಳು

ಅಧಿಕಾರಕ್ಕೆ ಬಂದ ಯಾವುದೇ ಪ್ರಧಾನಿ ಅಥವಾ ಅಧ್ಯಕ್ಷನ ಮೊದಲ 100 ದಿನಗಳು ಅತ್ಯಂತ ನಿರೀಕ್ಷೆಯ ದಿನಗಳಾಗಿರುತ್ತವೆ. ಈ ದಿನಗಳಲ್ಲಿ ಮಾಡಿದ ಶುರುವಾತು ಮುಂದಿನ ನಾಲ್ಕೈದು ವರ್ಷಗಳ ಆಡಳಿತಕ್ಕೆ ಮುನ್ಸೂಚನೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‍ರವರ ಮೊದಲ 100 ದಿನಗಳು ಅತ್ಯಂತ ಯಶಸ್ವಿ, ಕ್ರಾಂತಿಕಾರಕ ಹಾಗೂ ಆಶಾದಾಯಕರ ಆಗಿವೆ. ಹಿಂದಿನ ಅಧ್ಯಕ್ಷನ ಹೋಲಿಕೆಯಲ್ಲಿ ಈ ಮೊದಲ 100 ದಿನಗಳು ಬಿರುಬೇಸಿಗೆಯ ನಂತರ ತಂಪೆರೆದ ಮೊದಲ ಮಳೆಯಂತೆ ಅಮೆರಿಕದ ಜನರ ಬದುಕಿನಲ್ಲಿ ನೆಮ್ಮದಿ ಮತ್ತು ಭರವಸೆಯ ಬೆಳಕನ್ನು […]

ಹಲವು ಅನುಮಾನಗಳನ್ನು ಬಿಟ್ಟುಹೋದ ಮುಖ್ಯ ನ್ಯಾಯಾಧೀಶ ಬೊಬ್ಡೆ

-ರೇಖಾ ಶರ್ಮಾ

ಹಲವು ಅನುಮಾನಗಳನ್ನು ಬಿಟ್ಟುಹೋದ ಮುಖ್ಯ ನ್ಯಾಯಾಧೀಶ ಬೊಬ್ಡೆ
-ರೇಖಾ ಶರ್ಮಾ

ಭಾರತದ ಮುಖ್ಯ ನ್ಯಾಯಾಧೀಶ ಎಸ್.ಎ.ಬೊಬ್ಡೆಯವರ ಅಧಿಕಾರವಧಿಯಲ್ಲಿ ಪ್ರಮುಖವಾಗಿ ಗುರುತಿಸಬಹುದಾದ ಅಂಶವೆಂದರೆ, ಅವರಿಗೆ ಜನಸಾಮಾನ್ಯರ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಪರಿಣಾಮ ಬೀರುವ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಇಷ್ಟವಿರಲಿಲ್ಲ! -ರೇಖಾ ಶರ್ಮಾ ಎಸ್.ಎ.ಬೊಬ್ಡೆಯವರು ತನ್ನ 17 ತಿಂಗಳ ಕಾರ್ಯಾವಧಿಯನ್ನು ಪೂರ್ಣಗೊಳಿಸಿ, ಏಪ್ರಿಲ್ 23 ರಂದು ಮುಖ್ಯ ನ್ಯಾಯಾಧೀಶ ಪದವಿಯಿಂದ ನಿರ್ಗಮಿಸಿದರು. ಅವರು, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಂದ ಅಧಿಕಾರ ವಹಿಸಿಕೊಂಡಾಗ, ಜನಸಾಮಾನ್ಯರ ಮನಸ್ಸಿನಲ್ಲಿ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಕುಸಿದು ಹೋಗುತ್ತಿರುವ ಸುಪ್ರೀಂ ಕೋರ್ಟ್‍ನ ಚಿತ್ರಣವು ಬಹುತೇಕ ಅಧೋಗತಿ ತಲುಪಿತ್ತು.  […]

ಭಾರತದ ಪ್ರಜಾತಂತ್ರ ಎತ್ತ ಸಾಗುತ್ತಿದೆ?

ಆಂತರಿಕ ಟೀಕೆ ಅಥವಾ ವಿಮರ್ಶೆಯನ್ನು ಹೇಗೆ ಪರಿಗಣಿಸಬೇಕು? ಪ್ರಸಕ್ತ ಅಸ್ತಿತ್ವದಲ್ಲಿರುವ ಪ್ರಭುತ್ವವು ಪ್ರಜಾತಂತ್ರವನ್ನು ಭಾರತದಲ್ಲಿ ಹೇಗೆ ನಾಶಮಾಡಿದೆ? ಸುಹಾಸ ಪಾಲಸಿಕಾರ್ ಮೂಲ: ದ ಇಂಡಿಯನ್ ಎಕ್ಸ್ ಪ್ರೆಸ್ ಭಾರತದಲ್ಲಿ ಅತಿ ಗರಿಷ್ಠ ಜನತಂತ್ರವೆಂಬ ವಿವಾದವನ್ನು ನಾವೀಗ ಹಿಂದೆ ಬಿಟ್ಟು ಹೊಸ ಹಂತಕ್ಕೆ ಬಂದು ನಿಂತಿದ್ದೇವೆ. ಅತಿ ಕನಿಷ್ಠ ಜನತಂತ್ರವೆಂಬ ವಿವಾದ ಇದೀಗ ಪ್ರಾರಂಭವಾಗಿದೆ. ಭಾರತದ ಜನತಂತ್ರವನ್ನು ಅಂತರರಾಷ್ಟ್ರೀಯವಾಗಿ ನಕಾರಾತ್ಮಕವಾಗಿ ಅಂದಾಜು ಮಾಡಲಾಗಿದೆ. ಅಂತಹ ವಿಮರ್ಶೆಗಳಿಗೆ ಅತ್ಯಂತ ಸ್ಫೂರ್ತಿದಾಯಕವಾಗಿ ಪ್ರತಿಕ್ರಿಯೆ ನೀಡಿದ ನಮ್ಮ ವಿದೇಶಾಂಗ ಸಚಿವ ಎಸ್.ಜೈಶಂಕರ್‍ರವರ ಚತುರೋಕ್ತಿಗಳನ್ನು […]

ಅಮೆಜ಼ಾನ್-ಪ್ಯೂಚರ್ ಗುಂಪಿನ ವಿವಾದ ಭಾರತದ ಚಿಲ್ಲರೆ ಮಾರುಕಟ್ಟೆಗಾಗಿ ದೈತ್ಯರ ಕಾಳಗ

-ಎಂ.ಕೆ.ಆನಂದರಾಜೇ ಅರಸ್

ಇದು ಅಮೆಜ಼ಾನ್ ಹಾಗೂ ಮುಖೇಶ್ ಅಂಬಾನಿಯ ನಡುವೆ ಮುಂದೊಂದು ದಿನ ಭಾರತದ ಚಿಲ್ಲರೆ ಮಾರುಕಟ್ಟೆಗೆ ಹಾಗೂ ವಿದ್ಯುನ್ಮಾನ ವಾಣಿಜ್ಯಕ್ಕೆ ಯಾರು ಅಧಿಪತಿಯಾಗುತ್ತಾರೆ ಎಂಬುದನ್ನು ನಿರ್ಧರಿಸುವ ಯುದ್ಧ. ಈ ಕಾರಣದಿಂದಲೇ ಅಮೆಜ಼ಾನ್ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ನೆಲಕಚ್ಚಿ ಹೋರಾಟ ಮಾಡುತ್ತಿದೆ. -ಎಂ.ಕೆ.ಆನಂದರಾಜೇ ಅರಸ್ ಭಾರತದ ಗ್ರಾಹಕ ಚಿಲ್ಲರೆ ಮಾರುಕಟ್ಟೆಗೆ ಹೊಸ ಮುನ್ನುಡಿ ಬರೆದ ಪ್ಯೂಚರ್ ಗುಂಪಿನ ಮುಖ್ಯಸ್ಥ ಕಿಶೋರ್ ಬಿಯಾನಿ ಹಾಗೂ ಪ್ರಪಂಚದ ವಿದ್ಯುನ್ಮಾನ ವಾಣಿಜ್ಯದ ಚಕ್ರವರ್ತಿ ಜೆಫರಿ ಪ್ರೆಸ್ಟನ್ ಬೆಜೊಸ್ ಒಡೆತನದ ಸಂಸ್ಥೆಗಳ ನಡುವೆ ನಡೆಯುತ್ತಿರುವ ಕಾನೂನು […]

1 2 3 8