ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ಭಾರತ-ನೇಪಾಳ ಮಧ್ಯೆ ‘ಕಾಲಾಪಾನಿ’ ಬಿಕ್ಕಟ್ಟು 1950ರ ಸಮಯದಲ್ಲಿ ಅಂದಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಲಡಾಖ್‌ನ ಗಡಿ ಪ್ರದೇಶದ ಬಗ್ಗೆ ‘ಹುಲ್ಲುಕಡ್ಡಿಯೂ ಬೆಳೆಯದ ಪ್ರದೇಶ’ವೆಂದು ಬಣ್ಣನೆ ಮಾಡಿದ್ದರು. ಈ ವಿವರಣೆಯು ಅಂದಿನ ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ಚರ್ಚೆಯಲ್ಲಿ ಭಾರಿ ವಿವಾದಕ್ಕೆ ಒಳಗಾಗಿತ್ತು. ಇದೀಗ ಅದೇ ತೆರನಾದ ‘ಹುಲ್ಲುಕಡ್ಡಿಯೊಂದು ಬೆಳೆಯದ’ ಕಾಲಾಪಾನಿ ಪ್ರದೇಶವೊಂದು ಭಾರತ ನೇಪಾಳ ಮಧ್ಯೆ ಬಿಕ್ಕಟ್ಟು ತಂದಿಟ್ಟಿದೆ. ಈ ಕಾಲಾಪಾನಿ ಪ್ರದೇಶ ಉತ್ತರಾಖಂಡದ ಉತ್ತರ-ಪೂರ್ವದಲ್ಲಿರುವ ಪಿತ್ತೋರ್‌ಗಢ್ ಜಿಲ್ಲೆಯಲ್ಲಿ ಟಿಬೆಟ್ ಹಾಗೂ ನೇಪಾಳಗಳಿಗೆ ಹೊಂದಿಕೊಂಡಂತೆ ಇದೆ […]

ಬಳಕೆದಾರ, ಬಂಡವಾಳಗಾರರ ಸಂಬಂಧ ಬುಡಮೇಲು ಆಗಲಿದೆಯೇ…?

-ಪಿಲಿಪ್ ಕೋಟ್ಲರ್

ಬಳಕೆದಾರ, ಬಂಡವಾಳಗಾರರ ಸಂಬಂಧ ಬುಡಮೇಲು ಆಗಲಿದೆಯೇ…?
-ಪಿಲಿಪ್ ಕೋಟ್ಲರ್

ಪಿಲಿಪ್ ಕೋಟ್ಲರ್ ಅವರನ್ನು ವಿಶ್ವಾದ್ಯಂತ ಆಧುನಿಕ ಮಾರುಕಟ್ಟೆ ವ್ಯವಸ್ಥೆಯ ಪಿತಾಮಹ ಎಂದು ಕರೆಯಲಾಗುತ್ತದೆ. ಅವರು ಜಗತ್ತಿನ ಬಹುಮುಖ್ಯ ಮಾರುಕಟ್ಟೆ ತಂತ್ರಜ್ಞಾನದ ಮಹಾನ್ ಪರಿಣತ ಎಂಬ ಮನ್ನಣೆ ಗಳಿಸಿಕೊಂಡಿದ್ದಾರೆ. ಅಮೆರಿಕನ್ ಮಾರ್ಕೆಟಿಂಗ್ ಅಸೋಸಿಯೇಶನ್ ಇವನನ್ನು ‘ಮಾರುಕಟ್ಟೆ ಚಿಂತನೆಯ ನಾಯಕ’ ಎಂದು ಮತದಾನದ ಮೂಲ ಆಯ್ಕೆ ಮಾಡಿದೆ ಮತ್ತು ‘ಹ್ಯಾಂಡ್ ಬುಕ್ ಆಫ್ ಮೇನೇಜ್‌ಮೆಂಟ್ ಥಿಂಕಿಂಗ್’ ಕೃತಿಯಲ್ಲಿ ಇವನನ್ನು ‘ಆಧುನಿಕ ಮಾರ್ಕೆಟ್‌ಂಗ್ ನಿರ್ವಹಣೆಯ ಸಂಸ್ಥಾಪಕ’ ಎಂದು ಉಲ್ಲೇಖಿಸಿದೆ. ಕೋವಿಡ್ 19 ಬಗ್ಗೆ ಸಾರಸೋಟ ಇನ್‌ಸ್ಟಿಟ್ಯೂಟ್ 04.06.2020ರಂದು ನಡೆಸಿದ ಸರಣಿ ವಿಚಾರ […]

ಅಲ್ ಗೋರ್: ನೊಬೆಲ್ ಪ್ರಶಸ್ತಿ ಸ್ವೀಕಾರ ಭಾಷಣ

ಅನುವಾದ: ಡಾ.ಜ್ಯೋತಿ

ಅಲ್ ಗೋರ್:  ನೊಬೆಲ್ ಪ್ರಶಸ್ತಿ ಸ್ವೀಕಾರ ಭಾಷಣ
ಅನುವಾದ: ಡಾ.ಜ್ಯೋತಿ

ಮಾನವನ ಸ್ವಾರ್ಥ ಮತ್ತು ದುಷ್ಟತನದಿಂದ ನಿರ್ಮಾಣವಾಗಿರುವ ಪರಿಸರ ವೈಪರೀತ್ಯ ಕುರಿತು ಜಗತ್ತಿಗೆ ಅರಿವು ಮೂಡಿಸಲು ಹೆಣಗಿದ ಅಪರೂಪದ ವ್ಯಕ್ತಿಯ ಹೆಸರು ಅಲ್ ಗೋರ್. ಅಮೆರಿಕದ ಈ ರಾಜಕಾರಣಿ ಒಬ್ಬ ಪರಿಸರ ತಜ್ಞರಾಗಿಯೂ ಗುರುತಿಸಿಕೊಂಡಿದ್ದರು; 1993ರಿಂದ 2001ರವರೆಗೆ ಅಮೆರಿಕೆಯ ಉಪಾಧ್ಯಕ್ಷ ಹುದ್ದೆ ಅಲಂಕರಿಸಿದ್ದರು. ಗೋರ್ ಅವರು ಮಾನವ ನಿರ್ಮಿತ ಪರಿಸರ ಅಸಮತೋಲನ ಸರಿಪಡಿಸಲು ಕೈಗೊಂಡ ಕ್ರಮಗಳು ಅವರನ್ನು ನೊಬೆಲ್ ಪ್ರಶಸ್ತಿ ತನಕ ಕೈಹಿಡಿದು ನಡೆಸಿದವು. ಈ ಸಂಚಿಕೆಯ ‘ಕರ್ನಾಟಕದ ಪರಿಸರ ಸಮತೋಲನ’ ಕುರಿತ ಮುಖ್ಯಚರ್ಚೆಗೆ ಪೂರಕವಾಗಿ ಅಲ್ ಗೋರ್ […]

ಪರಿಸರ ಕಾಳಜಿಯ ತರುಣಿ ಗ್ರೇತಾ ಥನ್ ಬರ್ಗ್ ಭಾಷಣ

ನಾಗೇಶ ಹೆಗಡೆ

ಸ್ವೀಡನ್‌ನ ಮೂಲದ ಹದಿನಾರು ವರ್ಷದ ಹುಡುಗಿ ಗ್ರೇತಾ ಥನ್‌ಬರ್ಗ್ 2019 ಸಪ್ಟೆಂಬರ್ 23ರಂದು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣ ಇಡೀ ಜಗತ್ತನ್ನೇ ತಟ್ಟಿ ಎಬ್ಬಿಸಿತ್ತು. ವಿಶ್ವನಾಯಕರನ್ನು ಉದ್ದೇಶಿಸಿ ‘ನಿಮಗೆಷ್ಟು ಧೈರ್ಯ?’ ಎಂದು ಪ್ರಶ್ನಿಸುತ್ತ ಜಾಗತಿಕ ತಾಪಮಾನದ ಎಚ್ಚರವನ್ನು, ನಾಳೆಯ ಆತಂಕವನ್ನು ಅವರ ಮುಂದಿಟ್ಟಿದ್ದಳು. ಗ್ರೇತಾ ಭಾಷಣದ ಭಾವಾನುವಾದ ಇಲ್ಲಿದೆ. ಇದ್ಯಾವುದೂ ನನಗೆ ಸರಿಕಾಣುತ್ತಿಲ್ಲ. ನಾನು ಇಲ್ಲಿಗೆ ಬರಲೇಬಾರದಾಗಿತ್ತು. ನಾನು ಈ ಮಹಾಸಾಗರದ ಆಚೆ ಮಗ್ಗುಲಲ್ಲಿ ಒಂದು ಶಾಲೆಯಲ್ಲಿ ಪಾಠ ಕೇಳುತ್ತ ಕೂತಿರಬೇಕಾಗಿತ್ತು. ನಮ್ಮ ಬಾಯಿಂದ ದೇಶಭಕ್ತಿಯ ಹಾಡು ಹಾಡಿಸುತ್ತೀರಿ. […]

ಕೊರೋನಾ ಬಿಕ್ಕಟ್ಟು ಪರಿಹಾರದ ನಾಲ್ಕು ಮಾರ್ಗ!

-ಪ್ರೊ.ದೇವಿ ಶ್ರೀಧರ್

ಕೊರೋನಾ ಬಿಕ್ಕಟ್ಟು  ಪರಿಹಾರದ ನಾಲ್ಕು ಮಾರ್ಗ!
-ಪ್ರೊ.ದೇವಿ ಶ್ರೀಧರ್

ಕೋವಿದ್-19 ಎದುರಿಸಲು ಸುಲಭ ಪರಿಹಾರ ಮಾರ್ಗಗಳಿಲ್ಲ. ಮುಂದಿನ ಕೆಲವು ತಿಂಗಳುಗಳ ಕಾಲ ಸರ್ಕಾರಗಳು ಸಾರ್ವಜನಿಕ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಹಿತಾಸಕ್ತಿ ಎಲ್ಲವನ್ನೂ ಕಾಪಾಡುವ ನಿಟ್ಟಿನಲ್ಲಿ ಪರಸ್ಪರ ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಚೀನಾದಲ್ಲಿ ಒಂದು ಹೊಸ ವೈರಾಣು ಉಗಮಿಸುತ್ತದೆ. ಚೀನಾ ಈ ರೋಗವಾಹಕವನ್ನು ಶೀಘ್ರವಾಗಿ ಗುರುತಿಸಿ ತನ್ನ ಗಡಿಗಳನ್ನು ಬಂದ್ ಮಾಡುತ್ತದೆ. ವೈರಾಣುವನ್ನು ಹೋಗಲಾಡಿಸಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತದೆ. ಕಠಿಣ ಕ್ರಮಗಳ ಮೂಲಕ ಅತಿ ಕಡಿಮೆ ಸಂಖ್ಯೆಯ ಜನರು ಚೀನಾದಿಂದ ಹೊರಹೋಗುತ್ತಾರೆ. ಏತನ್ಮಧ್ಯೆ ಇತರ ದೇಶಗಳಲ್ಲೂ ವೈರಾಣು ದಾಳಿ […]

ಕೋವಿಡ್-19 ಚಿಕಿತ್ಸೆ ಮತ್ತು ಲಸಿಕೆ ಕುರಿತ ಜಾಗತಿಕ ಸಂಶೋಧನೆಗಳು

-ಡಾ.ಶ್ರೀನಿವಾಸ ಕಕ್ಕಿಲ್ಲಾಯ

ಕೋವಿಡ್-19  ಚಿಕಿತ್ಸೆ ಮತ್ತು ಲಸಿಕೆ ಕುರಿತ ಜಾಗತಿಕ ಸಂಶೋಧನೆಗಳು
-ಡಾ.ಶ್ರೀನಿವಾಸ ಕಕ್ಕಿಲ್ಲಾಯ

ಕೊರೊನಾ ಸೋಂಕು ತಡೆಗೆ ಹೊಸ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯ ಜಗತ್ತಿನೆಲ್ಲೆಡೆ ಭರದಿಂದ ಸಾಗಿದೆ. ಕೋವಿಡ್-19 ರೋಗ ಪೀಡಿತರಿಗೆ ಚಿಕಿತ್ಸೆ ನೀಡುವ ವಿಧಾನಗಳ ಬಗೆಗೂ ವ್ಯಾಪಕ ಸಂಶೋಧನೆ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಈವರೆಗೆ ಆಗಿರುವ ಪ್ರಗತಿ ಮತ್ತು ಪ್ರಯೋಗಾಲಯಗಳ ಫಲಿತಾಂಶಗಳನ್ನು ಕನ್ನಡದಲ್ಲಿ ವಿಶ್ಲೇಷಿಸುವ ಗಂಭೀರ ಪ್ರಯತ್ನ ಇಲ್ಲಿದೆ.     ಕಳೆದೆರಡು ತಿಂಗಳಿನಿಂದ ಇಡೀ ವಿಶ್ವದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ, ಮನದಲ್ಲಿ ಸುತ್ತುತ್ತಿರುವ ಒಂದೇ ಒಂದು ವಿಷಯವೆಂದರೆ ಹೊಸ ಕೊರೊನಾ ಸೋಂಕು. ಈ ಹೊಸ ವೈರಾಣುವನ್ನು ತಡೆಯುವುದಕ್ಕೆಂದು ಭಾರತವೂ ಸೇರಿದಂತೆ ಹಲವು ದೇಶಗಳು […]

ಅಪ್ರತಿಮ ಕಾರ್ಪೊರೇಟ್ ಆಡಳಿತಗಾರ ಜ್ಯಾಕ್ ವೆಲ್ಚ್

-ರವಿ ಹಂಜ್

ಅಪ್ರತಿಮ ಕಾರ್ಪೊರೇಟ್ ಆಡಳಿತಗಾರ ಜ್ಯಾಕ್ ವೆಲ್ಚ್
-ರವಿ ಹಂಜ್

ಷೇರುದಾರರ ಹಿತಕಾಯಲು ಕಟಿಬದ್ಧವಾಗಿದ್ದ ಇವರನ್ನು ಬಂಡವಾಳಶಾಹಿಯ ರಾಯಭಾರಿ ಎಂದು ಸಮಾಜವಾದಿಗಳು ಹೀಗಳೆದರೆ, ಕೆಲವರು ಕಮ್ಯುನಿಸ್ಟ್ ಸರ್ವಾಧಿಕಾರಿಯಂತೆ ವರ್ತಿಸುತ್ತಾನೆ ಎಂದೂ ಮೂದಲಿಸಿದ್ದರು. ಒಟ್ಟಾರೆ ತನ್ನ ವೃತ್ತಿಗೆ ಬದ್ಧನಾಗಿ ಅನ್ನ ಕೊಟ್ಟವರ ಹಿತಕಾಯುವುದು ತನ್ನ ಪರಮೋಚ್ಚ ಗುರಿ ಎಂದುಕೊಂಡಿದ್ದ ಈ ಆಡಳಿತಗಾರ ಒಬ್ಬ ರೈಲ್ವೆ ಕಂಡಕ್ಟರನ ಮಗ! ‘ಶತಮಾನದ ಆಡಳಿತದ ಗುರು’, ’ಶೇರುದಾರರ ರಕ್ಷಕ’ ಎಂದೆಲ್ಲಾ ಖ್ಯಾತರಾಗಿದ್ದ ಜಿಇ ಸಂಸ್ಥೆಯ ಮಾಜಿ ಮುಖ್ಯಸ್ಥ ಜ್ಯಾಕ್ ವೆಲ್ಚ್ ಇಂದು ಕುಸಿಯುತ್ತಿರುವ ಶೇರು ಮಾರುಕಟ್ಟೆ ಮತ್ತು ದಿಕ್ಕುತಪ್ಪಿದ ಜಾಗತಿಕ ಆಡಳಿತ ಯಂತ್ರಗಳ ದುರಿತ […]

ವಿಶ್ವ ವಿದ್ಯಮಾನ

ಪುರುಷೋತ್ತಮ ಆಲದಹಳ್ಳಿ

ಆಫ್ಘಾನಿಸ್ತಾನದಲ್ಲಿ ಮುಂದುವರೆದ ಅಶ್ರಫ್ ಘನಿ ಸರ್ಕಾರ ನೆರೆಯ ಆಫ್ಘಾನಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಅಶ್ರಫ್ ಘನಿಯವರು ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷ ಘನಿಯವರಿಗೆ ಶೇಕಡಾ 50.64 ಮತಗಳು ಬಂದಿದ್ದರೆ ಅವರ ಸಮೀಪ ಸ್ಪರ್ಧಿ ಅಬ್ದುಲ್ಲಾ ಅಬ್ದುಲ್ಲಾ ಅವರಿಗೆ ಶೇಕಡಾ 39.52 ಮತಗಳು ಬಂದಿವೆ. ಆಫ್ಘಾನಿಸ್ತಾನದ ಸ್ವತಂತ್ರ ಚುನಾವಣಾ ಆಯೋಗ ನಡೆಸಿದ ಈ ಚುನಾವಣೆಯಲ್ಲಿ ದೇಶದ 25% ಕ್ಕೂ ಹೆಚ್ಚು ಜನರು ಆತಂಕವಾದಿಗಳ ಬೆದರಿಕೆಯ ಮತ ನೀಡಿದ್ದರು. ಸ್ವತಂತ್ರ ಚುನಾವಣಾ ಆಯೋಗ ನೀಡಿದ ಫಲಿತಾಂಶವನ್ನು ಅಬ್ದುಲ್ಲಾ ಅಬ್ದುಲ್ಲಾ […]

ಅಜ್ಞಾನ ಒಪ್ಪಿಕೊಳ್ಳುವ ಗುಣವನ್ನು ಸಾಕ್ರೆಟಿಸ್‌ನಿಂದ ಕಲಿಯೋಣ

ಕ್ಯಾ ಜಿ.ಆರ್.ಗೋಪಿನಾಥ್

ಅಜ್ಞಾನ ಒಪ್ಪಿಕೊಳ್ಳುವ ಗುಣವನ್ನು ಸಾಕ್ರೆಟಿಸ್‌ನಿಂದ ಕಲಿಯೋಣ
ಕ್ಯಾ ಜಿ.ಆರ್.ಗೋಪಿನಾಥ್

ನಮ್ಮ ರಾಜಕೀಯ ನಾಯಕರು ತಮಗೆ ಗೊತ್ತಿಲ್ಲ ಅನ್ನುವುದನ್ನು ವಿನಯದಿಂದ ಒಪ್ಪಿಕೊಂಡರೆ, ಇನ್ನೂ ಹೆಚ್ಚು ಸಮಯವನ್ನು ವ್ಯರ್ಥಮಾಡದೆ, ಮುಂದಿನ ಹಾದಿಯನ್ನು ಕಂಡುಕೊಳ್ಳುವುದಕ್ಕೆ ಜಗತ್ತಿನ ಎಲ್ಲಾ ಕಡೆಯಿಂದ ಭಾರತದ ಅತ್ಯುತ್ತಮ ಮೇಧಾವಿಗಳನ್ನು ಒಟ್ಟಿಗೆ ಕಲೆಹಾಕಬೇಕು.   ಒಂದೆರಡು ದಿನಗಳ ಹಿಂದೆ ಪತ್ರಕರ್ತರೊಬ್ಬರು ಫೋನ್ ಮಾಡಿ ಒಂದು ಸಂದರ್ಶನ ನೀಡುವಂತೆ ಕೇಳಿಕೊಂಡರು. “ಈ ಕೊರೋನಾ ಮಹಾಮಾರಿಯ ಬಿಕ್ಕಟ್ಟಿನಲ್ಲಿ ವಾಯುಯಾನ ಕ್ಷೇತ್ರವು ಉಳಿದುಕೊಳ್ಳಬಹುದೇ,” ಎನ್ನುವುದು ಅವರ ಮುಖ್ಯ ಪ್ರಶ್ನೆಯಾಗಿತ್ತು. ಇದು ನನ್ನನ್ನು ಯೋಚಿಸಲು ಪ್ರೇರೇಪಿಸಿತು. ನನಗೆ ನಿಜವಾಗಿಯೂ ಈ ಪ್ರಶ್ನೆಯ ಉತ್ತರ ಗೊತ್ತಾ? […]

ಬೋಡೋ ಒಪ್ಪಂದದ ಆಶಯ ಕನಸಿನ ಸಾಕಾರದತ್ತ ಈಶಾನ್ಯ ಭಾರತ

- ಎಂ.ಕುಸುಮ ಹಾಸನ

ಪ್ರತ್ಯೇಕತಾವಾದ ಮತ್ತು ಉಗ್ರಗಾಮಿ ಮನಸ್ಥಿತಿಯನ್ನು ಪರಿವರ್ತಿಸಿ, ಭಾರತ ದೇಶದ ಅಖಂಡತೆಯೆಡೆಗೆ ಒಲವು ಮೂಡಿಸುವ ನಿಟ್ಟಿನಲ್ಲಿ ಈ ಒಪ್ಪಂದ ಯಶಸ್ವಿಯಾಗುವ ಲಕ್ಷಣಗಳು ತೋರುತ್ತಿವೆ. – ಎಂ.ಕುಸುಮ ಹಾಸನ ಸುಮಾರು ಐದು ದಶಕಗಳಿಂದ ಕುದಿಯುತ್ತಿದ್ದ ಅಸ್ಸಾಂ ಜನರ ಅಸಹನೆಯನ್ನು ಶಮನಗೊಳಿಸಲು ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು, ಬೋಡೋ ಒಪ್ಪಂದವು ತ್ರಿಪಕ್ಷೀಯವಾಗಿ ಜನವರಿ 27, 2020 ರಂದು ಅಂಗೀಕೃತವಾಯಿತು. ಕೇಂದ್ರ ಸರ್ಕಾರ, ಅಸ್ಸಾಂನ ರಾಜ್ಯ ಸರ್ಕಾರ ಮತ್ತು ಮೂರು ಬಂಡುಕೋರ ಸಂಘಟನೆಗಳಾದ ಎನ್‍ಡಿಎಫ್‍ಬಿ (ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್), […]

ಆಸ್ಕರ್: ಅತ್ಯುನ್ನತ ಸಿನಿಮಾ ಸಮ್ಮಾನ

- ಪ್ರೇಮಕುಮಾರ್ ಹರಿಯಬ್ಬೆ

ಆಸ್ಕರ್: ಅತ್ಯುನ್ನತ ಸಿನಿಮಾ ಸಮ್ಮಾನ
- ಪ್ರೇಮಕುಮಾರ್ ಹರಿಯಬ್ಬೆ

– ಪ್ರೇಮಕುಮಾರ್ ಹರಿಯಬ್ಬೆ ಸಿನಿಮಾಗಳ ಕಲಾತ್ಮಕತೆ ಹಾಗೂ ತಾಂತ್ರಿಕತೆಯನ್ನು ಪರಿಗಣಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯೇ ಆಸ್ಕರ್. ಇದು ಜಗತ್ತಿನ ಅತ್ಯಂತ ಹಳೆಯ ಸಿನಿಮಾ ಪ್ರಶಸ್ತಿ. ಆಸ್ಕರ್‍ಗಿಂತ ದೊಡ್ಡ ಪ್ರಶಸ್ತಿ ಇನ್ನೊಂದಿಲ್ಲ ಎಂಬ ಭಾವನೆ ಅನೇಕರಲ್ಲಿದೆ. ಧರ್ಮಯುದ್ಧದಲ್ಲಿ ಬಳಸುವ ಖಡ್ಗವನ್ನು ಕೆಳಮುಖವಾಗಿ ಹಿಡಿದು ಸಾವಧಾನ್‍ಭಂಗಿಯಲ್ಲಿ ನಿಂತ ಯೋಧನ 34.3 ಸೆ.ಮೀ. ಎತ್ತರ, 3.8 ಕಿಲೋಗ್ರಾಂ ತೂಕದ ಚಿನ್ನ ಲೇಪಿತ, ಮಿಶ್ರಲೋಹದ ಪುತ್ಥಳಿಯೇ ಈ ಆಸ್ಕರ್ ಟ್ರೋಫಿ. ಈ ಪುತ್ಥಳಿ ಸಿನಿಮಾಕ್ಕಾಗಿ ದುಡಿಯುವ ನಟರು, ನಿರ್ದೇಶಕರು, ನಿರ್ಮಾಪಕರು, […]

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ವಿಶ್ವ ವಿದ್ಯಮಾನ
-ಪುರುಷೋತ್ತಮ ಆಲದಹಳ್ಳಿ

-ಪುರುಷೋತ್ತಮ ಆಲದಹಳ್ಳಿ ಕೊರೊನಾ ವೈರಸ್‍ಗೆ ಚೀನಾ ತತ್ತರ ಚೀನಾ ಸರ್ಕಾರದ ಅಧಿಕೃತ ಮೂಲಗಳಂತೆಯೇ ಫೆಬ್ರವರಿ 24 ರವರೆಗೆ ಕೊರೊನಾ ವೈರಸ್ ಕಾರಣದಿಂದ 2,592 ಜನ ಸತ್ತು 77,000ಕ್ಕೂ ಹೆಚ್ಚು ಜನ ಸೋಂಕಿಗೆ ಗುರಿಯಾಗಿದ್ದಾರೆ. ಚೀನಾ ಮಧ್ಯಭಾಗದ ಹುಬೇ ಪ್ರಾಂತ್ಯದ ರಾಜಧಾನಿ ವುಹಾನ್‍ನಲ್ಲಿಯೇ ಬಹುತೇಕ ಜನ ಸೋಂಕಿಗೆ ಬಲಿಯಾಗಿದ್ದಾರೆ. ವುಹಾನ್ ನಗರ ಮತ್ತು ಹುಬೇ ಪ್ರಾಂತ್ಯದ ಎಲ್ಲೆಡೆ ಸಂಪೂರ್ಣ ಸಂಚಾರ ನಿಯಂತ್ರಣ ವಿಧಿಸಿ ಚೀನಾ ಸರ್ಕಾರವು ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಹರಸಾಹಸ ಮಾಡುತ್ತಿದೆ. 110 ಲಕ್ಷ ಜನರಿರುವ ವುಹಾನ್ […]

ಮೊಟ್ಟಮೊದಲ ಕಪ್ಪು ಸೆನೇಟರ್ ಹಿರಾಮ್ ರಿವೆಲ್ಸ್

ಮೊಟ್ಟಮೊದಲ ಕಪ್ಪು ಸೆನೇಟರ್ ಹಿರಾಮ್ ರಿವೆಲ್ಸ್

ಕೆಲ ದಿನಗಳ ಹಿಂದೆ ಹಿರಾಮ್ ರಿವೆಲ್ಸ್ ಅವರು ಅಮೆರಿಕೆಯ ಮೊದಲ ಕರಿಯ ಕಾಂಗ್ರೆಸ್ ಸದಸ್ಯರಾಗಿ ಚುನಾಯಿತರಾದ 150ನೆಯ ವರ್ಷಾಚರಣೆಯ ಅಂಗವಾಗಿ ಮುನ್ನೂರು ಮಂದಿ ಜಾಕ್ಸನ್ ನ ಓಲ್ಡ್ ಸ್ಟೇಟ್ ಕ್ಯಾಪಿಟೊಲ್ ನಲ್ಲಿ ಸೇರಿದರು. ಈ ವರ್ಷಾಚರಣೆಯ ಮಹತ್ವ ವಿವರಿಸುವ ಲೇಖನವಿದು. ಮೂಲ: ಎರಿಕ್ ಫೋನರ್  ಅನುವಾದ: ಕಾದಂಬಿನಿ ಎರಡು ಶತಮಾನಗಳಿಗೂ ಹೆಚ್ಚಿನ ಅವಧಿಯಲ್ಲಿ ಬರಾಕ್ ಒಬಾಮಾ ಅವರು ರಾಷ್ಟ್ರದಲ್ಲಿ ಏಕೈಕ ಕರಿಯ ಅಧ್ಯಕ್ಷರಾಗಿ ಹೊರಹೊಮ್ಮಿದ್ದು ಎಲ್ಲರಿಗೂ ತಿಳಿದಿದೆ. ಆದರೆ ಸೆನೆಟ್ ನಲ್ಲಿ ಸೇವೆ ಸಲ್ಲಿಸಿದ 2000 ಪುರುಷರು […]

ಇ-ಜ್ಞಾನ

ಟಿ.ಜಿ.ಶ್ರೀನಿಧಿ

ಟಿ.ಜಿ.ಶ್ರೀನಿಧಿ ವಿಶ್ವವ್ಯಾಪಿ ಜಾಲಕ್ಕೊಂದು ವಿಶೇಷ ದಿನ ವಿಶ್ವವ್ಯಾಪಿ ಜಾಲ, ಅಂದರೆ ವಲ್ರ್ಡ್‍ವೈಡ್ ವೆಬ್, ಆಧುನಿಕ ಜಗತ್ತಿನ ಅತ್ಯಂತ ಮಹತ್ವದ ಆವಿಷ್ಕಾರಗಳಲ್ಲೊಂದು. ಅಂತರಜಾಲದ (ಇಂಟರ್‍ನೆಟ್) ಮೂಲೆಮೂಲೆಗಳಲ್ಲಿರುವ ಮಾಹಿತಿಯನ್ನು ಸುಲಭವಾಗಿ ಹುಡುಕಲು ಹಾಗೂ ಪಡೆದುಕೊಳ್ಳಲು ಸಾಧ್ಯವಾಗಿಸಿದ್ದು ಇದೇ ವಿಶ್ವವ್ಯಾಪಿ ಜಾಲ. ವಿಶ್ವವ್ಯಾಪಿ ಜಾಲದ ಮೂಲ ಪರಿಕಲ್ಪನೆ ಟಿಮ್ ಬರ್ನರ್ಸ್-ಲೀ ಎಂಬ ವಿಜ್ಞಾನಿಯದ್ದು. ಸ್ವಿಟ್ಸರ್ಲೆಂಡಿನ ಸರ್ನ್ ಪ್ರಯೋಗಾಲಯದಲ್ಲಿ ಕೆಲಸಮಾಡುತ್ತಿದ್ದ ಅವಧಿಯಲ್ಲಿ ಅವರು ಈ ಪರಿಕಲ್ಪನೆಯನ್ನು ಒಂದು ಪ್ರಸ್ತಾವನೆಯ ರೂಪದಲ್ಲಿ ಸಲ್ಲಿಸಿದ್ದರು. 1989ನೇ ಇಸವಿಯಲ್ಲಿ ಅವರು ಆ ಪ್ರಸ್ತಾವನೆಯನ್ನು ತಮ್ಮ ಸಂಸ್ಥೆಗೆ ಸಲ್ಲಿಸಿದ […]

ಜೀನ್ ಎಡಿಟಿಂಗ್ ಅಪಾಯಕಾರಿ ಅನ್ವೇಷಣೆ!

ಎಲ್.ಪಿ.ಕುಲಕರ್ಣಿ ಬಾದಾಮಿ

ಮಾರಣಾಂತಿಕ ರೋಗಗಳಾದ ಕ್ಯಾನ್ಸರ್, ಏಡ್ಸ್ ಮುಂತಾದವುಗಳನ್ನು ನಿರ್ನಾಮ ಮಾಡಲು, ಆಯಾ ರೋಗಕ್ಕೆ ಕಾರಣವಾಗುವ ವರ್ಣತಂತುವಿನ ಭಾಗವನ್ನೇ ಕತ್ತರಿಸಿ ಹಾಕುವ ಮಟ್ಟಿಗೆ ಜೀನ್ ಎಡಿಟಿಂಗ್ ಮಾಡಲು ಒಪ್ಪಿಗೆ ನೀಡಬೇಕು ಎಂಬ ಅಭಿಪ್ರಾಯ ಬಹುಪಾಲು ಜೀವ ವಿಜ್ಞಾನಿಗಳು ಹಾಗೂ ವೈದ್ಯರದ್ದಾಗಿದೆ. ಎಲ್.ಪಿ.ಕುಲಕರ್ಣಿ ಬಾದಾಮಿ ಕೋಡುಗಳಿಲ್ಲದ ಹಸುಗಳು, ಬಲಿಯದ ಹಂದಿಗಳು (ಹಂದಿಗಳು ಬಲಿತರೆ ಅದರ ಮಾಂಸವು ದುರ್ವಾಸನೆಯಿಂದ ಕೂಡಿರುತ್ತದೆ), ಕೊಕ್ಕಿಲ್ಲದ, ಕಾಲುಗಳಲ್ಲಿ ಉಗುರುಗಳಿಲ್ಲದ ಕೋಳಿಗಳು, ಎಷ್ಟು ಉಷ್ಣತೆ ಬೇಕಾದರೂ ಅದನ್ನು ತಾಳಿಕೊಂಡು ಬದುಕುವ ಜೀವಿಗಳು (ಇತ್ತೀಚೆಗೆ ಬಿಹಾರದಲ್ಲಿ ಬಿಸಿಲಿನ ತಾಪ ತಾಳಲಾರದೆ 77 ಕ್ಕೂ […]

ವಿಶ್ವ ವಿದ್ಯಮಾನ

-ಪುರುಶೋತ್ತಮ ಆಲದಹಳ್ಳಿ

-ಪುರುಶೋತ್ತಮ ಆಲದಹಳ್ಳಿ ಇರಾನ್ ಯುದ್ಧಕ್ಕೆ ಕಾಲು ಕೆರೆದ ಡಾನಲ್ಡ್ ಟ್ರಂಪ್ ಇರಾನಿನ ಇಸ್ಲಾಮಿಕ್ ರೆವೆಲ್ಯೂಶನರಿ ಗಾಡ್ರ್ಸ್‍ನ ಮುಂಚೂಣಿ ಸೈನ್ಯ ‘ಖುದ್ಸ್’ನ ಜನರಲ್ ಖಾಸಿಮ್ ಸುಲೇಮಾನಿಯವರನ್ನು ಹಾಡುಹಗಲೇ ಸಂಹರಿಸಿ ಅಮೆರಿಕ ಇರಾನ್‍ನ ಮೇಲೆ ತಾನು ಯಾವುದೇ ಸಮಯದಲ್ಲಿ ಯುದ್ಧಕ್ಕೆ ತಯ್ಯಾರು ಎಂದು ಘೋಷಿಸಿಕೊಂಡಿದೆ. ಇರಾಖ್‍ನ ಬಾಗ್ದಾದ್ ಬಳಿಯಲ್ಲಿ ತನ್ನ ಅಂಗರಕ್ಷಕರ ಜೊತೆ ವಾಹನದಲ್ಲಿ ಸಂಚರಿಸುತ್ತಿದ್ದ ಸುಲೇಮಾನಿಯನ್ನು ಅಮೆರಿಕದ ಡ್ರೋನ್ ಕ್ಷಿಪಣಿ ಪಡೆ ದಾಳಿ ಮಾಡಿ ಹೊಡೆದುರುಳಿಸಿದೆ. ಹೊಸವರ್ಷದ ಜನವರಿ 3 ರಂದು ನಡೆದ ಈ ಘಟನೆಯು ಇಡೀ ಮಧ್ಯಪ್ರಾಚ್ಯ […]

ಕ್ರೌರ್ಯಕ್ಕೆ ಗಡಿಗಳ ಹಂಗಿಲ್ಲ

ಡಾ.ರವಿ ಎಂ.ಸಿದ್ಲಿಪುರ

ಕ್ರೌರ್ಯಕ್ಕೆ ಗಡಿಗಳ ಹಂಗಿಲ್ಲ
ಡಾ.ರವಿ ಎಂ.ಸಿದ್ಲಿಪುರ

ಡಾ.ರವಿ ಎಂ.ಸಿದ್ಲಿಪುರ ಪ್ರಭುತ್ವಗಳು ಚರಿತ್ರೆಯುದ್ದಕ್ಕೂ ಯುದ್ಧಗಳನ್ನು ಮಾಡಿವೆ. ಆದರೆ ಜಯವನ್ನು ಪಡೆದಿವೆಯೇ? ಎಂಬ ಪ್ರಶ್ನೆಗೆ ಭಾವನಾತ್ಮಕ ನೆಲೆಗಳ ಆಚೆಯಲ್ಲಿ ಉತ್ತರಿಸಿಕೊಳ್ಳಬೇಕಿದೆ. ಎರಡು ದೇಶಗಳ ನಡುವಿನ ಗಡಿಗಳಲ್ಲಿ ಯೋಧರ ಶವಗಳು ಯಾವ ಬದಿಗಿದ್ದರೂ, ಅವರ ಕೊಲೆಗೆ ಪ್ರಭುತ್ವ ನೇರ ಕಾರಣವಾಗಿರುತ್ತದೆ; ಆ ಎರಡು ದೇಶಗಳ ಜನತೆ ಕಾರಣವಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ. ಏಕೆಂದರೆ ಎರಡು ಪ್ರಭುತ್ವಗಳ ನಡುವೆ ಯುದ್ಧ ನಡೆದರೆ ವೈರಿಗಳು ಯಾರಾಗುತ್ತಾರೆ ಎನ್ನುವುದನ್ನು ನಿರ್ಧರಿಸುವುದು ಸುಲಭದ ಕೆಲಸವಲ್ಲ. ಯುದ್ಧ ಪ್ರಭುತ್ವದ ಮನಸ್ಥಿತಿಯಾಗಿರುವಂಥದ್ದು. ಅದು ಆಡಳಿತ ವ್ಯವಸ್ಥೆಯ ಭಾಗವಾಗಿಯೂ ಇರುತ್ತದೆ. […]

ಸ್ನೇಹ ಹೀಗೆ ಜ್ಞಾನವನ್ನು ಸೃಷ್ಟಿಸುತ್ತದೆ

ಅಮತ್ರ್ಯ ಸೇನ್

ಸ್ನೇಹ ಹೀಗೆ ಜ್ಞಾನವನ್ನು ಸೃಷ್ಟಿಸುತ್ತದೆ
ಅಮತ್ರ್ಯ ಸೇನ್

‘ಸ್ನೇಹ ಅನ್ನೋದು ನಮ್ಮ ಬೌದ್ಧಿಕ ಅನ್ವೇಷಣೆಯಲ್ಲಿ ತುಂಬಾ ಮುಖ್ಯ. ಸ್ನೇಹದಿಂದ ಬೇರೆಯ ಅನುಕೂಲಗಳೂ ಇವೆ. ಆದರೆ ವಿಜ್ಞಾನ ಮತ್ತು ಗಣಿತಶಾಸ್ತ್ರದ ಬೆಳವಣಿಗೆಯಲ್ಲಿ ಮತ್ತು ಸಾಮಾನ್ಯವಾಗಿ ಜ್ಞಾನದ ಬೆಳವಣಿಗೆಯಲ್ಲಿ ಸ್ನೇಹ ಉಂಟುಮಾಡುವ ಸುಂದರವಾದ ಪರಿಣಾಮ ಅವೆಲ್ಲಕ್ಕಿಂತ ತುಂಬಾ ಮಹತ್ವದ್ದು’ ಎನ್ನುತ್ತಾರೆ ಅಮತ್ರ್ಯ ಸೇನ್. ಅವರು ಇತ್ತೀಚೆಗೆ ಇನ್ಫೋಸಿಸ್ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾಡಿದ ದಿಕ್ಸೂಚಿ ಭಾಷಣದ ಸಂಗ್ರಹಾನುವಾದ ನಿಮ್ಮ ಗ್ರಹಿಕೆಗಾಗಿ. ಅಮತ್ರ್ಯ ಸೇನ್ ಜ್ಞಾನ ಅನ್ನುವುದು ತನ್ನಷ್ಟಕ್ಕೇ ತುಂಬಾ ಸುಂದರವಾದ ಸಂಗತಿ. ಜೊತೆಗೆ ಅದರಿಂದ ಬೇರೆ ಬೇರೆ ಲಾಭಗಳೂ […]

ಇ-ಜ್ಞಾನ

ಟಿ.ಜಿ.ಶ್ರೀನಿಧಿ

ಇ-ಜ್ಞಾನ
ಟಿ.ಜಿ.ಶ್ರೀನಿಧಿ

ಟಿ.ಜಿ.ಶ್ರೀನಿಧಿ ವ್ಯಾಲೆಂಟೈನ್ ವಿಶೇಷ ಫೆಬ್ರುವರಿ 14, ವ್ಯಾಲೆಂಟೈನ್ ದಿನ. ಆ ದಿನದ ವೈಶಿಷ್ಟ್ಯ ಇಷ್ಟಕ್ಕೇ ಮುಗಿಯುವುದಿಲ್ಲ ಎನ್ನುವುದು ವಿಶೇಷ. ಏಕೆಂದರೆ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಹಲವು ಪ್ರಮುಖ ಘಟನೆಗಳಿಗೂ ಈ ದಿನ ಸಾಕ್ಷಿಯಾಗಿದೆ. ಇತಿಹಾಸದ ಪ್ರಪ್ರಥಮ ಸಂಪೂರ್ಣ ಇಲೆಕ್ಟ್ರಾನಿಕ್ ಕಂಪ್ಯೂಟರ್ ಎಂದು ಹೆಸರಾಗಿರುವ ‘ಇನಿಯಾಕ್’ (ಇಲೆಕ್ಟ್ರಾನಿಕ್ ನ್ಯೂಮರಿಕಲ್ ಇಂಟಿಗ್ರೇಟರ್ ಆಂಡ್ ಕಂಪ್ಯೂಟರ್) ಅನಾವರಣವಾಗಿದ್ದು 1946ರ ಫೆಬ್ರವರಿ 14ರಂದು. ಯಾಂತ್ರಿಕ (ಮೆಕ್ಯಾನಿಕಲ್) ಕಂಪ್ಯೂಟರುಗಳಲ್ಲಿ ಬಳಕೆಯಾಗುತ್ತಿದ್ದ ಗಿಯರ್- ಲಿವರ್ ಇತ್ಯಾದಿಗಳ ಬದಲು ವ್ಯಾಕ್ಯೂಮ್ ಟ್ಯೂಬ್‍ನಂತಹ ವಿದ್ಯುನ್ಮಾನ ಸಾಧನಗಳನ್ನು ಬಳಸಿದ್ದು, ಟೆಕ್ ಜಗತ್ತಿನ […]

ಬಯೊ ಹ್ಯಾಕಿಂಗ್ ಮನುಷ್ಯ ಚಿರಾಯು ಆಗಬಹುದೇ?

-ಡಾ.ಬಿ.ಆರ್.ಮಂಜುನಾಥ್

ಕೆಲವರು ಬಯೋ ಹ್ಯಾಕಿಂಗ್ ಮೂಲಕ ಮನುಷ್ಯರ ಮಿದುಳು ಮತ್ತು ದೇಹವನ್ನು ಜೈವಿಕ ನಿಯಮಗಳಿಗೆ ವಿರುದ್ಧವಾಗಿ ಬದಲಿಸಲು ಹೊರಟಿದ್ದಾರೆ. ಬಯೊ ಹ್ಯಾಕಿಂಗ್ ಎಂದರೇನು, ಇದರಲ್ಲಿ ಯಾರೆಲ್ಲಾ ತೊಡಗಿಕೊಂಡಿದ್ದಾರೆ, ಇದಕ್ಕೆ ಕಾನೂನು ಸಮ್ಮತಿ ಇದೆಯೇ, ಇದರ ನಿಯಂತ್ರಣ ಸಾಧ್ಯವೇ, ಇದರ ಪರಿಣಾಮಗಳು ಏನು? ಈ ಬಗ್ಗೆ ನಾವೆಲ್ಲಾ ಇನ್ನಾದರೂ ಯೋಚಿಸಬೇಕಾದ ಅವಶ್ಯಕತೆ ಹೆಚ್ಚುತ್ತಿದೆ. ವೈಜ್ಞಾನಿಕ ಜಗತ್ತಿನಲ್ಲಿ ಮಾತ್ರವಲ್ಲ ದೈನಂದಿನ ಬದುಕಿನಲ್ಲೂ ಚಲಾವಣೆಗೆ ಬರುತ್ತಿರುವ ಒಂದು ಪದವೆಂದರೆ ಬಯೋ ಹ್ಯಾಕಿಂಗ್. ಇದರ ಹೆಸರನ್ನು ಕೇಳದಿದ್ದರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಇದನ್ನು […]