ಕೆಲ ದಿನಗಳ ಹಿಂದೆ ಹಿರಾಮ್ ರಿವೆಲ್ಸ್ ಅವರು ಅಮೆರಿಕೆಯ ಮೊದಲ ಕರಿಯ ಕಾಂಗ್ರೆಸ್ ಸದಸ್ಯರಾಗಿ ಚುನಾಯಿತರಾದ 150ನೆಯ ವರ್ಷಾಚರಣೆಯ ಅಂಗವಾಗಿ ಮುನ್ನೂರು ಮಂದಿ ಜಾಕ್ಸನ್ ನ ಓಲ್ಡ್ ಸ್ಟೇಟ್ ಕ್ಯಾಪಿಟೊಲ್ ನಲ್ಲಿ ಸೇರಿದರು. ಈ ವರ್ಷಾಚರಣೆಯ ಮಹತ್ವ ವಿವರಿಸುವ ಲೇಖನವಿದು. ಮೂಲ: ಎರಿಕ್ ಫೋನರ್ ಅನುವಾದ: ಕಾದಂಬಿನಿ ಎರಡು ಶತಮಾನಗಳಿಗೂ ಹೆಚ್ಚಿನ ಅವಧಿಯಲ್ಲಿ ಬರಾಕ್ ಒಬಾಮಾ ಅವರು ರಾಷ್ಟ್ರದಲ್ಲಿ ಏಕೈಕ ಕರಿಯ ಅಧ್ಯಕ್ಷರಾಗಿ ಹೊರಹೊಮ್ಮಿದ್ದು ಎಲ್ಲರಿಗೂ ತಿಳಿದಿದೆ. ಆದರೆ ಸೆನೆಟ್ ನಲ್ಲಿ ಸೇವೆ ಸಲ್ಲಿಸಿದ 2000 ಪುರುಷರು […]
ಟಿ.ಜಿ.ಶ್ರೀನಿಧಿ ವಿಶ್ವವ್ಯಾಪಿ ಜಾಲಕ್ಕೊಂದು ವಿಶೇಷ ದಿನ ವಿಶ್ವವ್ಯಾಪಿ ಜಾಲ, ಅಂದರೆ ವಲ್ರ್ಡ್ವೈಡ್ ವೆಬ್, ಆಧುನಿಕ ಜಗತ್ತಿನ ಅತ್ಯಂತ ಮಹತ್ವದ ಆವಿಷ್ಕಾರಗಳಲ್ಲೊಂದು. ಅಂತರಜಾಲದ (ಇಂಟರ್ನೆಟ್) ಮೂಲೆಮೂಲೆಗಳಲ್ಲಿರುವ ಮಾಹಿತಿಯನ್ನು ಸುಲಭವಾಗಿ ಹುಡುಕಲು ಹಾಗೂ ಪಡೆದುಕೊಳ್ಳಲು ಸಾಧ್ಯವಾಗಿಸಿದ್ದು ಇದೇ ವಿಶ್ವವ್ಯಾಪಿ ಜಾಲ. ವಿಶ್ವವ್ಯಾಪಿ ಜಾಲದ ಮೂಲ ಪರಿಕಲ್ಪನೆ ಟಿಮ್ ಬರ್ನರ್ಸ್-ಲೀ ಎಂಬ ವಿಜ್ಞಾನಿಯದ್ದು. ಸ್ವಿಟ್ಸರ್ಲೆಂಡಿನ ಸರ್ನ್ ಪ್ರಯೋಗಾಲಯದಲ್ಲಿ ಕೆಲಸಮಾಡುತ್ತಿದ್ದ ಅವಧಿಯಲ್ಲಿ ಅವರು ಈ ಪರಿಕಲ್ಪನೆಯನ್ನು ಒಂದು ಪ್ರಸ್ತಾವನೆಯ ರೂಪದಲ್ಲಿ ಸಲ್ಲಿಸಿದ್ದರು. 1989ನೇ ಇಸವಿಯಲ್ಲಿ ಅವರು ಆ ಪ್ರಸ್ತಾವನೆಯನ್ನು ತಮ್ಮ ಸಂಸ್ಥೆಗೆ ಸಲ್ಲಿಸಿದ […]
ಮಾರಣಾಂತಿಕ ರೋಗಗಳಾದ ಕ್ಯಾನ್ಸರ್, ಏಡ್ಸ್ ಮುಂತಾದವುಗಳನ್ನು ನಿರ್ನಾಮ ಮಾಡಲು, ಆಯಾ ರೋಗಕ್ಕೆ ಕಾರಣವಾಗುವ ವರ್ಣತಂತುವಿನ ಭಾಗವನ್ನೇ ಕತ್ತರಿಸಿ ಹಾಕುವ ಮಟ್ಟಿಗೆ ಜೀನ್ ಎಡಿಟಿಂಗ್ ಮಾಡಲು ಒಪ್ಪಿಗೆ ನೀಡಬೇಕು ಎಂಬ ಅಭಿಪ್ರಾಯ ಬಹುಪಾಲು ಜೀವ ವಿಜ್ಞಾನಿಗಳು ಹಾಗೂ ವೈದ್ಯರದ್ದಾಗಿದೆ. ಎಲ್.ಪಿ.ಕುಲಕರ್ಣಿ ಬಾದಾಮಿ ಕೋಡುಗಳಿಲ್ಲದ ಹಸುಗಳು, ಬಲಿಯದ ಹಂದಿಗಳು (ಹಂದಿಗಳು ಬಲಿತರೆ ಅದರ ಮಾಂಸವು ದುರ್ವಾಸನೆಯಿಂದ ಕೂಡಿರುತ್ತದೆ), ಕೊಕ್ಕಿಲ್ಲದ, ಕಾಲುಗಳಲ್ಲಿ ಉಗುರುಗಳಿಲ್ಲದ ಕೋಳಿಗಳು, ಎಷ್ಟು ಉಷ್ಣತೆ ಬೇಕಾದರೂ ಅದನ್ನು ತಾಳಿಕೊಂಡು ಬದುಕುವ ಜೀವಿಗಳು (ಇತ್ತೀಚೆಗೆ ಬಿಹಾರದಲ್ಲಿ ಬಿಸಿಲಿನ ತಾಪ ತಾಳಲಾರದೆ 77 ಕ್ಕೂ […]
-ಪುರುಶೋತ್ತಮ ಆಲದಹಳ್ಳಿ ಇರಾನ್ ಯುದ್ಧಕ್ಕೆ ಕಾಲು ಕೆರೆದ ಡಾನಲ್ಡ್ ಟ್ರಂಪ್ ಇರಾನಿನ ಇಸ್ಲಾಮಿಕ್ ರೆವೆಲ್ಯೂಶನರಿ ಗಾಡ್ರ್ಸ್ನ ಮುಂಚೂಣಿ ಸೈನ್ಯ ‘ಖುದ್ಸ್’ನ ಜನರಲ್ ಖಾಸಿಮ್ ಸುಲೇಮಾನಿಯವರನ್ನು ಹಾಡುಹಗಲೇ ಸಂಹರಿಸಿ ಅಮೆರಿಕ ಇರಾನ್ನ ಮೇಲೆ ತಾನು ಯಾವುದೇ ಸಮಯದಲ್ಲಿ ಯುದ್ಧಕ್ಕೆ ತಯ್ಯಾರು ಎಂದು ಘೋಷಿಸಿಕೊಂಡಿದೆ. ಇರಾಖ್ನ ಬಾಗ್ದಾದ್ ಬಳಿಯಲ್ಲಿ ತನ್ನ ಅಂಗರಕ್ಷಕರ ಜೊತೆ ವಾಹನದಲ್ಲಿ ಸಂಚರಿಸುತ್ತಿದ್ದ ಸುಲೇಮಾನಿಯನ್ನು ಅಮೆರಿಕದ ಡ್ರೋನ್ ಕ್ಷಿಪಣಿ ಪಡೆ ದಾಳಿ ಮಾಡಿ ಹೊಡೆದುರುಳಿಸಿದೆ. ಹೊಸವರ್ಷದ ಜನವರಿ 3 ರಂದು ನಡೆದ ಈ ಘಟನೆಯು ಇಡೀ ಮಧ್ಯಪ್ರಾಚ್ಯ […]
ಡಾ.ರವಿ ಎಂ.ಸಿದ್ಲಿಪುರ ಪ್ರಭುತ್ವಗಳು ಚರಿತ್ರೆಯುದ್ದಕ್ಕೂ ಯುದ್ಧಗಳನ್ನು ಮಾಡಿವೆ. ಆದರೆ ಜಯವನ್ನು ಪಡೆದಿವೆಯೇ? ಎಂಬ ಪ್ರಶ್ನೆಗೆ ಭಾವನಾತ್ಮಕ ನೆಲೆಗಳ ಆಚೆಯಲ್ಲಿ ಉತ್ತರಿಸಿಕೊಳ್ಳಬೇಕಿದೆ. ಎರಡು ದೇಶಗಳ ನಡುವಿನ ಗಡಿಗಳಲ್ಲಿ ಯೋಧರ ಶವಗಳು ಯಾವ ಬದಿಗಿದ್ದರೂ, ಅವರ ಕೊಲೆಗೆ ಪ್ರಭುತ್ವ ನೇರ ಕಾರಣವಾಗಿರುತ್ತದೆ; ಆ ಎರಡು ದೇಶಗಳ ಜನತೆ ಕಾರಣವಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ. ಏಕೆಂದರೆ ಎರಡು ಪ್ರಭುತ್ವಗಳ ನಡುವೆ ಯುದ್ಧ ನಡೆದರೆ ವೈರಿಗಳು ಯಾರಾಗುತ್ತಾರೆ ಎನ್ನುವುದನ್ನು ನಿರ್ಧರಿಸುವುದು ಸುಲಭದ ಕೆಲಸವಲ್ಲ. ಯುದ್ಧ ಪ್ರಭುತ್ವದ ಮನಸ್ಥಿತಿಯಾಗಿರುವಂಥದ್ದು. ಅದು ಆಡಳಿತ ವ್ಯವಸ್ಥೆಯ ಭಾಗವಾಗಿಯೂ ಇರುತ್ತದೆ. […]
‘ಸ್ನೇಹ ಅನ್ನೋದು ನಮ್ಮ ಬೌದ್ಧಿಕ ಅನ್ವೇಷಣೆಯಲ್ಲಿ ತುಂಬಾ ಮುಖ್ಯ. ಸ್ನೇಹದಿಂದ ಬೇರೆಯ ಅನುಕೂಲಗಳೂ ಇವೆ. ಆದರೆ ವಿಜ್ಞಾನ ಮತ್ತು ಗಣಿತಶಾಸ್ತ್ರದ ಬೆಳವಣಿಗೆಯಲ್ಲಿ ಮತ್ತು ಸಾಮಾನ್ಯವಾಗಿ ಜ್ಞಾನದ ಬೆಳವಣಿಗೆಯಲ್ಲಿ ಸ್ನೇಹ ಉಂಟುಮಾಡುವ ಸುಂದರವಾದ ಪರಿಣಾಮ ಅವೆಲ್ಲಕ್ಕಿಂತ ತುಂಬಾ ಮಹತ್ವದ್ದು’ ಎನ್ನುತ್ತಾರೆ ಅಮತ್ರ್ಯ ಸೇನ್. ಅವರು ಇತ್ತೀಚೆಗೆ ಇನ್ಫೋಸಿಸ್ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾಡಿದ ದಿಕ್ಸೂಚಿ ಭಾಷಣದ ಸಂಗ್ರಹಾನುವಾದ ನಿಮ್ಮ ಗ್ರಹಿಕೆಗಾಗಿ. ಅಮತ್ರ್ಯ ಸೇನ್ ಜ್ಞಾನ ಅನ್ನುವುದು ತನ್ನಷ್ಟಕ್ಕೇ ತುಂಬಾ ಸುಂದರವಾದ ಸಂಗತಿ. ಜೊತೆಗೆ ಅದರಿಂದ ಬೇರೆ ಬೇರೆ ಲಾಭಗಳೂ […]
ಟಿ.ಜಿ.ಶ್ರೀನಿಧಿ ವ್ಯಾಲೆಂಟೈನ್ ವಿಶೇಷ ಫೆಬ್ರುವರಿ 14, ವ್ಯಾಲೆಂಟೈನ್ ದಿನ. ಆ ದಿನದ ವೈಶಿಷ್ಟ್ಯ ಇಷ್ಟಕ್ಕೇ ಮುಗಿಯುವುದಿಲ್ಲ ಎನ್ನುವುದು ವಿಶೇಷ. ಏಕೆಂದರೆ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಹಲವು ಪ್ರಮುಖ ಘಟನೆಗಳಿಗೂ ಈ ದಿನ ಸಾಕ್ಷಿಯಾಗಿದೆ. ಇತಿಹಾಸದ ಪ್ರಪ್ರಥಮ ಸಂಪೂರ್ಣ ಇಲೆಕ್ಟ್ರಾನಿಕ್ ಕಂಪ್ಯೂಟರ್ ಎಂದು ಹೆಸರಾಗಿರುವ ‘ಇನಿಯಾಕ್’ (ಇಲೆಕ್ಟ್ರಾನಿಕ್ ನ್ಯೂಮರಿಕಲ್ ಇಂಟಿಗ್ರೇಟರ್ ಆಂಡ್ ಕಂಪ್ಯೂಟರ್) ಅನಾವರಣವಾಗಿದ್ದು 1946ರ ಫೆಬ್ರವರಿ 14ರಂದು. ಯಾಂತ್ರಿಕ (ಮೆಕ್ಯಾನಿಕಲ್) ಕಂಪ್ಯೂಟರುಗಳಲ್ಲಿ ಬಳಕೆಯಾಗುತ್ತಿದ್ದ ಗಿಯರ್- ಲಿವರ್ ಇತ್ಯಾದಿಗಳ ಬದಲು ವ್ಯಾಕ್ಯೂಮ್ ಟ್ಯೂಬ್ನಂತಹ ವಿದ್ಯುನ್ಮಾನ ಸಾಧನಗಳನ್ನು ಬಳಸಿದ್ದು, ಟೆಕ್ ಜಗತ್ತಿನ […]
ಕೆಲವರು ಬಯೋ ಹ್ಯಾಕಿಂಗ್ ಮೂಲಕ ಮನುಷ್ಯರ ಮಿದುಳು ಮತ್ತು ದೇಹವನ್ನು ಜೈವಿಕ ನಿಯಮಗಳಿಗೆ ವಿರುದ್ಧವಾಗಿ ಬದಲಿಸಲು ಹೊರಟಿದ್ದಾರೆ. ಬಯೊ ಹ್ಯಾಕಿಂಗ್ ಎಂದರೇನು, ಇದರಲ್ಲಿ ಯಾರೆಲ್ಲಾ ತೊಡಗಿಕೊಂಡಿದ್ದಾರೆ, ಇದಕ್ಕೆ ಕಾನೂನು ಸಮ್ಮತಿ ಇದೆಯೇ, ಇದರ ನಿಯಂತ್ರಣ ಸಾಧ್ಯವೇ, ಇದರ ಪರಿಣಾಮಗಳು ಏನು? ಈ ಬಗ್ಗೆ ನಾವೆಲ್ಲಾ ಇನ್ನಾದರೂ ಯೋಚಿಸಬೇಕಾದ ಅವಶ್ಯಕತೆ ಹೆಚ್ಚುತ್ತಿದೆ. ವೈಜ್ಞಾನಿಕ ಜಗತ್ತಿನಲ್ಲಿ ಮಾತ್ರವಲ್ಲ ದೈನಂದಿನ ಬದುಕಿನಲ್ಲೂ ಚಲಾವಣೆಗೆ ಬರುತ್ತಿರುವ ಒಂದು ಪದವೆಂದರೆ ಬಯೋ ಹ್ಯಾಕಿಂಗ್. ಇದರ ಹೆಸರನ್ನು ಕೇಳದಿದ್ದರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಇದನ್ನು […]
ಒಂದು ದಶಕದ ಕಾಲ ತಮ್ಮ ಪ್ರಜಾತಾಂತ್ರಿಕ ಮೌಲ್ಯ ಮತ್ತು ನಿಲುಮೆಗಳ ಬಗ್ಗೆ ಬೆನ್ನುತಟ್ಟಿಕೊಳ್ಳುತ್ತಿದ್ದ ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಟ್ವಿಟರ್ ಮತ್ತು ಗೂಗಲ್ ಪ್ರಜಾತಂತ್ರಕ್ಕೆ ಮಾರಕವಾಗಿ ಪರಿಣಮಿಸಲಿವೆ! ಬ್ರಿಟನ್ನಿನಲ್ಲಿ ಡಿಸೆಂಬರ್ 2019ರ ಚುನಾವಣೆಗಳ ನಂತರ ಅಮೆರಿಕದಲ್ಲಿ ನವಂಬರ್ 2020ರಲ್ಲಿ ನಡೆಯಲಿರುವ ಚುನಾವಣೆಗಳ ನಡುವೆ, ಈ ಪ್ರಮುಖ ಜಾಗತಿಕ ತಂತ್ರಜ್ಞಾನ ವೇದಿಕೆಗಳು ತಮ್ಮ ಮೇಲಿನ ವಿಧಿಸಲಾಗಬಹುದಾದ ನಿರ್ಬಂಧಗಳನ್ನು ಸಡಿಲಗೊಳಿಸುವಂತೆ ಮೊರೆ ಹೋಗಲು ಸಜ್ಜಾಗಿವೆ. ಸ್ವನಿಯಂತ್ರಣದ ನೆಪ ಹೂಡಿ ಫೇಸ್ಬುಕ್, ಟ್ವಿಟರ್ ಮತ್ತು ಗೂಗಲ್ ಸಂಸ್ಥೆಗಳು ಜವಾಬ್ದಾರಿಯುತವಾಗಿ ವರ್ತಿಸಲು ಬೇಕಾದ ಮಾರ್ಗಗಳಿಗಾಗಿ […]
ಆಂಗ್ಸಾನ್ ಸೂಚಿಯ ಮೇಲೆ ಮಾನವಹಕ್ಕು ರಕ್ಷಕರ ಕಣ್ಣು ನೊಬೆಲ್ ಶಾಂತಿ ಪುರಸ್ಕಾರ ವಿಜೇತೆ ಮ್ಯಾನ್ಮಾರ್ನ ಆಂಗ್ಸಾನ್ ಸೂಚಿಯವರು ರೊಹಿಂಗ್ಯಾ ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆಂದು ವಿಶ್ವದೆಲ್ಲೆಡೆ ಪ್ರತಿಭಟನೆಗಳು ವ್ಯಕ್ತವಾಗಿವೆ. ಮ್ಯಾನ್ಮಾರ್ ಸರ್ಕಾರದ ಮೇಲೆ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಈಗಾಗಲೇ ಮೊಕದ್ದಮೆ ನಡೆಸುತ್ತಿದ್ದು ಈ ಪ್ರಕರಣ ವಿರುದ್ಧವಾದರೆ ಸೂಚಿ ಇನ್ನಷ್ಟು ಟೀಕೆಗೆ ಒಳಗಾಗಬೇಕಾಗುತ್ತದೆ. ಸೂಚಿಯವರು ಮ್ಯಾನ್ಮಾರ್ (ಅಂದಿನ ಬರ್ಮಾ) ದೇಶದ ಸ್ವಾತಂತ್ರ್ಯ ಸೇನಾನಿ ಆಂಗ್ಸಾನ್ರವರ ಪುತ್ರಿ. ತಾವು ಎರಡು ವರ್ಷದವರಿದ್ದಾಗಲೇ 1949ರಲ್ಲಿ ತಂದೆಯನ್ನು ಕಳೆದುಕೊಂಡ ಸೂಚಿ ದೆಹಲಿ […]
ಭಾರತದ ಸಂದರ್ಭದಲ್ಲಿ ಎಡಪಂಥೀಯ ರಾಜಕಾರಣವನ್ನು ಕಟು ವಿಮರ್ಶೆಗೆ ಒಡ್ಡುವ ಮೂಲಕ ರಾಜಾರಾಮ ತೋಳ್ಪಾಡಿ ಮತ್ತು ನಿತ್ಯಾನಂದ ಶೆಟ್ಟಿ ಅವರು ಸೈದ್ಧಾಂತಿಕ ಸಂವಾದವನ್ನು ಹುಟ್ಟುಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಹಿರಿಯ ಎಡಪಂಥೀಯ ಸಿದ್ಧಾಂತಿ ಜಿ.ರಾಮಕೃಷ್ಣ ಅವರು ತಮ್ಮ ಸಶಕ್ತ ಸಮರ್ಥನೆಯನ್ನು ಮಂಡಿಸಿದ್ದಾರೆ. ಎಂದಿನಂತೆ ಆರೋಗ್ಯಪೂರ್ಣವಾದ ಮುಕ್ತ ಚರ್ಚೆಗೆ ಸಮಾಜಮುಖಿ ವೇದಿಕೆಯಾಗಿದೆ. ಯಾವುದೇ ವಾದ ಅಥವಾ ವಿಚಾರಪಂಥ ನಿರ್ವಿವಾದವಾಗಿ ಇರಲು ಸಾಧ್ಯವಿಲ್ಲ. ಆದುದರಿಂದಲೇ, ಅವುಗಳನ್ನು ನಾವು ವಾದಗಳು ಎಂದು ಕರೆಯುವುದು. ವಾದಕ್ಕೆ ಒಂದು ಪ್ರತಿವಾದ ಇದ್ದೇ ಇರುತ್ತದೆ. ಪ್ರತಿವಾದದ ಜೊತೆಗೆ ಸಂವಾದಿಸದೆ […]
ಪ್ರಾಧ್ಯಾಪಕರಾದ ರಾಜಾರಾಮ ತೋಳ್ಪಾಡಿ ಸೂಚಿಸಿರುವಂತೆ ಇಂದಿನ ಅಗತ್ಯವು ಸಿದ್ಧಾಂತದ ಪರಿಷ್ಕರಣೆಯಲ್ಲ, ಬದಲಾಗಿ ಪ್ರಸ್ತುತ ಸಂದರ್ಭದ ಕಾರ್ಯವಿಧಾನದಲ್ಲಿ ಅಳವಡಿಸಿಕೊಳ್ಳಬೇಕಾದ ಒಳಗೊಳ್ಳುವಿಕೆ. ಆ ದೃಷ್ಟಿಯಿಂದ ಪ್ರಜಾಪ್ರಭುತ್ವಾತ್ಮಕ ಚರ್ಚೆಗಳು ಸ್ವಾಗತಾರ್ಹ. ಯಾವುದೇ ಜೀವಂತ ವಾದದಂತೆ ಮಾಕ್ರ್ಸ್ವಾದವೂ ನಿರಂತರವಾಗಿ ವಿಕಾಸ ಹೊಂದುತ್ತಿರುತ್ತದೆ. ಹೊಸ ಸನ್ನಿವೇಶ, ಅನಿರೀಕ್ಷಿತ ಮುಗ್ಗಟ್ಟು, ಮಧ್ಯಪ್ರವೇಶದ ಸಾಧ್ಯತೆ ಅಥವಾ ಅದರ ಅಭಾವ, ಮುಂತಾದವು ವಿಕಾಸವನ್ನು ಮುನ್ನಡೆಸುತ್ತವೆ ಇಲ್ಲವೇ ಪ್ರತಿಬಂಧಿಸುತ್ತವೆ. ಅಂದಿನ ಆಂಟೋನಿಯೊ ಗ್ರಾಂಶಿಯಾಗಲಿ, ಇಂದಿನ ಇಸ್ತ್ವಾನ್ ಮೆಜೆರೋಸ್ ಆಗಲಿ, ಪ್ರಸ್ತುತವಾಗುವುದು ಆ ಹಿನ್ನೆಲೆಯಲ್ಲಿಯೇ. ಪರಂಪರೆಯನ್ನು ಮಾಕ್ರ್ಸ್ವಾದವು ಎಂದೂ ಪುರಸ್ಕರಿಸಿದೆಯೇ ಹೊರತು […]
ವಿಜ್ಞಾನ-ತಂತ್ರಜ್ಞಾನ ಜಗತ್ತಿನಲ್ಲಿ ಪ್ರತಿದಿನವೂ ಹೊಸತನದ ಹಬ್ಬ. ವರ್ಷದ ಹನ್ನೆರಡೂ ತಿಂಗಳು ಇಲ್ಲಿ ಏನಾದರೂ ನಡೆಯುತ್ತಲೇ ಇರುತ್ತದೆ. ಈ ತಿಂಗಳು ಇಲ್ಲೇನು ನಡೆಯುತ್ತಿದೆ, ಹಿಂದೆ ಇದೇ ಸಮಯದಲ್ಲಿ ಏನೆಲ್ಲ ನಡೆದಿತ್ತು? ಅದನ್ನೆಲ್ಲ ನಿಮಗೆ ಸಂಕ್ಷಿಪ್ತವಾಗಿ ಪರಿಚಯಿಸುವ ಪ್ರಯತ್ನ, ಈ ಅಂಕಣದಲ್ಲಿ ಈ ತಿಂಗಳಿನಿಂದ ಪ್ರಾರಂಭವಾಗುತ್ತಿದೆ. 20ನೇ ವರ್ಷಕ್ಕೆ ವಿಕಿಪೀಡಿಯ ಸರ್ಚ್ ಇಂಜಿನ್ನುಗಳಲ್ಲಿ ಯಾವ ವಿಷಯದ ಬಗ್ಗೆ ಮಾಹಿತಿ ಹುಡುಕಲು ಹೊರಟರೂ ವಿಕಿಪೀಡಿಯದ ಪುಟಗಳು ನಮ್ಮ ಕಣ್ಣಿಗೆ ಬೀಳುತ್ತವೆ. ತನ್ನನ್ನು ಒಂದು ಸ್ವತಂತ್ರ (‘ಫ್ರೀ’) ವಿಶ್ವಕೋಶವೆಂದು ಕರೆದುಕೊಳ್ಳುವ ಈ ತಾಣ […]
ಕ್ರಿಯಾಶೀಲತೆಗೆ, ಸೃಜನಶೀಲತೆಗೆ ಪ್ರಕೃತಿಯಿಂದ ಯಾವಾಗಲೂ ಪ್ರೇರಿತನಾಗುವ ಮಾನವನಿಗೆ ಫಿ ಅಥವಾ ಗೋಲ್ಡನ್ ರೇಶಿಯೋ ಒಂದು ವರದಾನವೇ ಸರಿ. ನಿಮ್ಮ ಸುತ್ತ ಇರುವ ವಸ್ತುಗಳಲ್ಲಿ ಫಿ ಹುಡುಕಲು ಇಲ್ಲಿದೆ ಮಾಹಿತಿ. ಇತ್ತೀಚೆಗೆ ನೋಡಿದ ಒಂದು ಸಿನಿಮಾದಲ್ಲಿ (ಸೂಪರ್ 30, ಹಿಂದಿ) ನಾಯಕಿ, ನಾಯಕನ ಕುರಿತು, ‘ನೀನೇಕೆ ನನ್ನನ್ನು ಅತಿಯಾಗಿ ಪ್ರೀತಿಸುತ್ತಿಲ್ಲ?’ ಎಂದು ಜಗಳ ಮಾಡುತ್ತಾಳೆ. ಉತ್ತರಿಸದೆ ಮುಗುಳುನಗುವ ಅವನನ್ನು ಮತ್ತಷ್ಟು ಕಾಡುತ್ತಾ, ‘ನಾನು ಸುಂದರವಾಗಿಲ್ಲವೇ?’ ಎಂದು ಕೇಳುತ್ತಾಳೆ. ಅದಕ್ಕವನು, ‘ಸುಂದರವಾಗೇನೋ ಇದ್ದೀಯ ಆದರೆ 75 ಪ್ರತಿಶತ ಮಾತ್ರ.’ ಎಂದು […]
ಉತ್ತರ ಅಮೆರಿಕಾದ ಗಡಿನಾಡಾಗಿರುವ ಅಲಾಸ್ಕಾ ವಿಷಮಸ್ಥಿತಿಯಲ್ಲಿರುವ ಜಾಗತಿಕ ತಾಪಮಾನದ ಅಸ್ಥಿರ ಚಿಹ್ನೆಗಳಿಗೆ ಸೂಚನೆಯಾಗಿದೆ. ಇತ್ತೀಚೆಗಿನ ಅಲಾಸ್ಕಾದ ಬೇಸಿಗೆಗಳು ಹಿಂದಿನ ಬೇಸಿಗೆಗಳ ಹಾಗಿಲ್ಲ. ಅಲ್ಲೀಗ ಬೇಸಿಗೆಯಲ್ಲಿ ಹೊಗೆಯಿಂದ ಮಸುಕಾದ ಆಕಾಶವನ್ನು ಹಾಗೂ ತೊಟ್ಟಿಕ್ಕುತ್ತಿರುವ ಹಿಮನದಿಗಳನ್ನು ನೋಡಬಹುದು. ಸತ್ತ ಸಲ್ಮನ್ ಮೀನುಗಳು ಹಾಗೂ ಹೊರತೆಗೆದ ವಾಲ್ರಸ್ಗಳನ್ನು ಕಾಣಬಹುದು. ವಿಜ್ಞಾನಿಗಳಿಗೆ ಈ ಬದಲಾವಣೆಗಳಿಗಿಂತ ಕಣ್ಣಿಗೆ ಕಾಣದ ಜಗತ್ತಿನ ಅಪಾಯ ಸ್ಥಿತಿಗೆ ಮುನ್ಸೂಚನೆ ನೀಡುವ ಇನ್ನೂ ಹಲವು ಬದಲಾವಣೆಗಳು ಅಲಾಸ್ಕಾದಲ್ಲಾಗುತ್ತಿರಬಹುದೆಂಬ ಚಿಂತೆಯಿದೆ. ವಿಷಪೂರಿತ ಪಾಚಿ ಹೂವುಗಳಿಂದ ಹಿಡಿದು ಉತ್ತರಕ್ಕೆ ಹೊಸ ರೋಗಗಳನ್ನು ತರುವ […]
ಆಧಾರ್ ಕಾರ್ಡು ಒಂದು ದೇಶಕ್ಕೆ ಸೀಮಿತವೇ? ಅಥವಾ ವಿಶ್ವವ್ಯಾಪಕವೇ? ಇಲ್ಲಿನ ತಾಂತ್ರಿಕತೆಯನ್ನು ಸದರಿ ಪ್ರಾಧಿಕಾರದವರಿಗೆ ಬಿಟ್ಟು (ಸುರಕ್ಷತೆ-ಗೌಪ್ಯತೆ ದೃಷ್ಟಿಯಿಂದ) ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಬಹುದೇ? ಬಳ್ಳಾರಿಯಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಪ್ರಯಾಣಿಸಬೇಕು. ನಿಮ್ಮ ಆಧಾರ ಕಾರ್ಡನ್ನು ಬಸ್ ಪ್ರವೇಶ ದ್ವಾರದಲ್ಲಿನ ಕಿಂಡಿಯಲ್ಲಿ ತೂರಿಸಿದರೆ ಸಾಕು. ತಕ್ಷಣ ಅದರಲ್ಲಿನ ಪರದೆಮೇಲೆ ಮುಂದಿನ ಊರುಗಳ ಹೆಸರು, ಊರಿನ ಪ್ರಮುಖ ಗುರುತಿನ ಚಿಹ್ನೆ ಬರುತ್ತದೆ. ಅಂದರೆ ಅಕ್ಷರಸ್ಥ-ಅನಕ್ಷರಸ್ಥರಿಬ್ಬರಿಗೂ ಅನುಕೂಲವಾಗುವಂತೆ ಅಕ್ಷರ ಮತ್ತು ಚಿಹ್ನೆ(ಚಿತ್ರ)ಗಳು ಇರುತ್ತವೆ. ಉದಾ: ಹಿರಿಯೂರಿಗೆ-ವಾಣಿವಿಲಾಸ, ತುಮಕೂರಿಗೆ-ಸಿದ್ಧಗಂಗಾಮಠ; ಬೆಂಗಳೂರಿಗೆ-ಕೆಂಪೇಗೌಡ ಗೋಪುರ ಇತ್ಯಾದಿ. ಜತೆಗೆ […]
ಶ್ರೀಲಂಕಾದಲ್ಲಿ ಅಧಿಕಾರಕ್ಕೆ ಮರಳಿದ ರಾಜಪಕ್ಷ ಕುಟುಂಬ ಶ್ರೀಲಂಕಾದಲ್ಲಿ ಬಲಪಂಥೀಯ ಸಿಂಹಳವಾದಿ ರಾಜಕಾರಣಿ ಕುಟುಂಬ ಮತ್ತೆ ಅಧಿಕಾರಕ್ಕೆ ಏರಿದೆ. ಎಲ್ಟಿಟಿಇ ತಮಿಳು ಬಂಡುಕೋರರನ್ನು ಬಗ್ಗುಬಡಿಯುವ ಸಮಯದಲ್ಲಿ ಶ್ರೀಲಂಕಾದ ರಕ್ಷಣಾ ಮಂತ್ರಿಯಾಗಿದ್ದ ಗೊಟಬಯ ರಾಜಪಕ್ಷ ಈಗ ದೇಶದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಹಿಂದೆ ಅಧ್ಯಕ್ಷರಾಗಿದ್ದ ಮಹಿಂದ ರಾಜಪಕ್ಷ ಈಗ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ಇದುವರೆಗೆ ಅಧ್ಯಕ್ಷರಾಗಿದ್ದ ಮೈತ್ರಿಪಾಲ ಸಿರಿಸೇನ ಈ ಚುನಾವಣೆಯಲ್ಲಿ ಭಾಗವಹಿಸಿರಲಿಲ್ಲ. ಸ್ಪರ್ಧೆಯು ಎಸ್ಎಲ್ಪಿಪಿ ಪಕ್ಷದ ಗೊಟಬಯ ರಾಜಪಕ್ಷ ಮತ್ತು ಯುಎನ್ಪಿ ಪಕ್ಷದ ಸಜಿತ್ ಪ್ರೇಮದಾಸರವರೊಡನೆ ಏರ್ಪಟ್ಟಿತ್ತು. ಗೊಟಬಯ 52.25% ಮತ […]
ಭಾರತದ ಜನಸಂಖ್ಯೆ 2061 ರ ವೇಳೆಗೆ 165 ಕೋಟಿ ತಲುಪಲಿದ್ದು ಅನಂತರ ಜನಸಂಖ್ಯಾ ಬೆಳವಣಿಗೆಯ ಪ್ರಮಾಣ ಇಳಿಮುಖವಾಗಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗವು ಅಂದಾಜು ಮಾಡಿದೆ. ಫಲವತ್ತತೆ ಸೂಚ್ಯಂಕವು ಇದಕ್ಕೆ ಕಾರಣ! ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಜನಸಂಖ್ಯಾ ಸ್ಫೋಟದ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಇದು ಜನಸಂಖ್ಯಾ ಬೆಳವಣಿಗೆ ಹಾಗೂ ಕುಟುಂಬ ಯೋಜನೆ ಕುರಿತ ಚರ್ಚೆಗೆ ಹೊಸ ದಿಕ್ಕು ಮತ್ತು ಹೊಳಹು ನೀಡಿದೆ. ಈ ಭಾಷಣಕ್ಕೆ ಬಂದಿರುವ ಪ್ರತಿಕ್ರಿಯೆ ಬೇರೆ ಬೇರೆ ತೆರನಾಗಿದೆ. […]
ಇನ್ನು ಮುಂದೆ ಮನುಷ್ಯರಿಗಾಗಿ ಉದ್ಯೋಗ ಸೃಷ್ಟಿಯಾಗುವುದಿಲ್ಲ; ತದ್ವಿರುದ್ಧವಾಗಿ, ಯಂತ್ರಗಳಿಗಾಗಿ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಅಂದರೆ, ಯಂತ್ರಗಳನ್ನು ಸೃಷ್ಟಿಮಾಡಿ ನಾವು ನಿರುದ್ಯೋಗಿಗಳಾಗುತ್ತಿದ್ದೇವೆ! ಪಾರ್ಲೆ-ಜಿ ಕಂಪನಿ ಹತ್ತು ಸಾವಿರ ನೌಕರರನ್ನು ವಜಾಗೊಳಿಸಿದ ಬೆನ್ನಲ್ಲೇ, ಪ್ರವಾಹದ್ವಾರ ತೆರೆದಂತೆ, ಒಂದೊಂದೇ ಕಂಪನಿಗಳು ಆರ್ಥಿಕ ಹಿನ್ನಡೆಯ ನೆವದಲ್ಲಿ ನೌಕರರನ್ನು ವಜಾಗೊಳಿಸುತ್ತಿದ್ದಾರೆ. ಇದರೊಂದಿಗೆ, ದೇಶದ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿ ವಿವಿಧ ವೇದಿಕೆಗಳಲ್ಲಿ ಸದ್ಯದ ಚರ್ಚಾವಿಷಯವಾಗಿದೆ. ಆರಂಭದಲ್ಲಿ ಇದನ್ನು ಒಪ್ಪಿಕೊಳ್ಳದ ‘ಅಚ್ಛೇ ದಿನ್’ ಕನಸು ಕೊಟ್ಟ ನಮ್ಮ ಕೇಂದ್ರ ಸರಕಾರ ಕೊನೆಗೂ ಎಚ್ಚೆತ್ತು, ಶಸ್ತ್ರಚಿಕಿತ್ಸೆ ಅಗತ್ಯವಿರುವ ಕಾಯಿಲೆಗೆ ಬ್ಯಾಂಡೇಜ್ […]
ಟೆಕ್ ಸುದ್ದಿ ತಂತ್ರಾಂಶಗಳನ್ನು ನಮ್ಮ ಕಂಪ್ಯೂಟರಿನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವ ಬದಲು ಅಂತರಜಾಲದ ಮೂಲಕವೇ ಬಳಸುವ ಕ್ಲೌಡ್ ಕಂಪ್ಯೂಟಿಂಗ್ ಪರಿಕಲ್ಪನೆ ಸಾಕಷ್ಟು ಹಳೆಯದು. ಇದನ್ನು ಮನರಂಜನೆಗೂ ಬಳಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಕಂಪ್ಯೂಟರ್ ಗೇಮ್ಗಳನ್ನು ಕ್ಲೌಡ್ ಮೂಲಕ ಲಭ್ಯವಾಗಿಸುವ, ಯಾವುದೇ ಕಂಪ್ಯೂಟರ್ ಅಥವಾ ಮೊಬೈಲ್ ಬಳಸಿ ಅವನ್ನು ಸುಲಲಿತವಾಗಿ ಬಳಸುವಂತೆ ಮಾಡುವ ಇಂತಹ ಪ್ರಯತ್ನಗಳ ಜೊತೆಗೆ ಗೂಗಲ್ ಕೂಡ ಕೈಜೋಡಿಸಿರುವುದು ವಿಶೇಷ. ‘ಸ್ಟೇಡಿಯಾ’ ಎಂಬ ಹೆಸರಿನ ಹೊಸ ಗೇಮ್ ಸ್ಟ್ರೀಮಿಂಗ್ ಸೇವೆಯನ್ನು ಅದು ಈಗಷ್ಟೇ ಪರಿಚಯಿಸಿದೆ. ಟೆಕ್ ಪದ ಸಾಫ್ಟ್ವೇರ್ನಿಂದ […]