ನೆರೆಹೊರೆಯ ಹಿಂದೂ ನಿರಾಶ್ರಿತರಿಗೆ ಹಿಂಬಾಗಿಲು ತೆರೆಯಬಯಸಿದ ಪೌರತ್ವ ಮಸೂದೆ

-ಮಾಧವ ಶೆಣೈ.

 ನೆರೆಹೊರೆಯ ಹಿಂದೂ ನಿರಾಶ್ರಿತರಿಗೆ ಹಿಂಬಾಗಿಲು ತೆರೆಯಬಯಸಿದ  ಪೌರತ್ವ ಮಸೂದೆ <p><sub> -ಮಾಧವ ಶೆಣೈ. </sub></p>

ದೇಶದ ಕಾನೂನಿನ ಮುಂದೆ ಎಲ್ಲಾ ಧರ್ಮೀಯರನ್ನು ಸರಿಸಮಾನವಾಗಿ ನೋಡುವ ನಿಯಮವಿದೆ. ಆದರೆ ಇದೀಗ ಮೊಟ್ಟಮೊದಲ ಬಾರಿಗೆ ಹಿಂದೂ ನಿರಾಶ್ರಿತರಿಗೆ ಭಾರತವೇ ಕಟ್ಟಕಡೆಯ ತಾಣವೆಂದು ಹೇಳಿಕೊಂಡು ಭಾರತದ ಲೋಕಸಭೆಯು ತನ್ನ ಹಿಂದೂ ರಾಷ್ಟ್ರೀಯತೆಯನ್ನು ಒಪ್ಪಿಕೊಂಡಿದೆ. ಲೋಕಸಭೆಯಲ್ಲಿ ಪಾರಿತವಾಗಿದ್ದ ತ್ರಿವಳಿ ತಲಾಖ್ ನಿಷೇಧ ಮಸೂದೆ ಹಾಗೂ ಪೌರತ್ವ (ತಿದ್ದುಪಡಿ) ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ಎತ್ತಿಕೊಳ್ಳದಂತೆ ಮಾಡುವಲ್ಲಿ ವಿಪಕ್ಷಗಳು ಜಯಗಳಿಸಿವೆ. ಭಾರತೀಯ ಜನತಾ ಪಕ್ಷದ ಗರಿಮೆಯ ಈ ಎರಡೂ ಕಾನೂನು ತಿದ್ದುಪಡಿಗಳನ್ನು ಚರ್ಚೆಗೆ ಹಾಗೂ ನಿರ್ಣಯಕ್ಕೆ ಎತ್ತಿಕೊಳ್ಳದಂತೆ ಅಡೆತಡೆಯೊಡ್ಡಿ ಕಾಂಗ್ರೆಸ್ ಮತ್ತಿತರ […]

ಆರ್ ಬಿಐ ‘ಅನ್-ರಿಸರ್ವಡ್’ ಆಗಬೇಕು

- ಪುರುಷೋತ್ತಮ

 ಆರ್ ಬಿಐ  ‘ಅನ್-ರಿಸರ್ವಡ್’ ಆಗಬೇಕು <p><sub>  - ಪುರುಷೋತ್ತಮ </sub></p>

ಸದ್ಯಕ್ಕೆ ಆರ್ಬಿಐ ಕೇಂದ್ರ ಸರ್ಕಾರಕ್ಕೆ ಮಣಿದಂತೆ ಕಾಣುತ್ತಿದೆಯಾದರೂ ಮುಂದಿನ ದಿನಗಳಲ್ಲಿ ಆರ್ಬಿಐ ತೆಗೆದುಕೊಳ್ಳುವ ನಿರ್ಧಾರಗಳಿಂದ ಈ ಸಮಸ್ಯೆ ಬಗೆಹರಿದಿದೆಯೋ ಇಲ್ಲವೋ ಎಂದು ತಿಳಿಯಬೇಕಿದೆ. ಕೇಂದ್ರ ಸರ್ಕಾರಕ್ಕೆ ಎಲ್ಲ ಸ್ವಾಯತ್ತ ಸಂಸ್ಥೆಗಳೊಡನೆ ಒಂದಲ್ಲಾ ಒಂದು ತೊಂದರೆಯಿರುವಂತಿದೆ. ತೊಂದರೆಯಿರುವುದು ತನ್ನಿಂದ ತಾನೇ ಒಳ್ಳೆಯದೂ ಅಲ್ಲ ಕೆಟ್ಟದೂ ಅಲ್ಲ. ಕೆಲವೊಮ್ಮೆ ಯಾವುದು ಸರಿಯೋ ಅದಕ್ಕೆ ಪಟ್ಟುಹಿಡಿದು ಕುಳಿತು ಅಥವಾ ಕಾಲುಕೆರೆದು ಜಗಳ ಮಾಡಬೇಕಾಗುತ್ತದೆ. ಇಂತಹ ಸನ್ನವೇಶದಲ್ಲಿಯೇ ಯಾವುದು ಸರಿ, ಯಾವುದು ಸತ್ಯ ಹಾಗೂ ಯಾವುದು ಸೂಕ್ತ ಎಂದು ನಿರ್ಧಾರವಾಗುತ್ತದೆ. ಕೇಂದ್ರ ಸರ್ಕಾರದ […]

ಸ್ಕೂಲ್ ಬ್ಯಾಗುಗಳ ಹೊರೆ

-ಡಾ.ಎಸ್.ಬಿ.ಜೋಗುರ

ಶಾಲಾಮಕ್ಕಳ ಹೆಗಲಿಗೇರುವ ಈ ಭಾರದ ಬ್ಯಾಗುಗಳ ಬಗ್ಗೆ ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಅಧ್ಯಯನಗಳು ನಡೆದಿವೆ. 1997ರ ಸಂದರ್ಭದಲ್ಲಿ ಐರ್ಲೆಂಡ್ ದೇಶದ ಶಿಕ್ಷಣ ಮಂತ್ರಿ ಮೈಕಲ್ ಮಾರ್ಟಿನ್ ಟಿ.ಡಿ. ಎನ್ನುವವರು ಈ ಮಕ್ಕಳ ಶಾಲಾ ಬ್ಯಾಗ್‍ಗಳ ಹೊರೆಯ ಬಗ್ಗೆ ಅಧ್ಯಯನ ಮಾಡಲು ಒಂದು ವರ್ಕಿಂಗ್ ಗ್ರುಪ್ ಅನ್ನು ನೇಮಿಸಿದರು. ಆ ಬಾಲಕಿ ತೀರಾ ನಾಜೂಕು. ಆಕೆ ಓದುತ್ತಿರುವುದು ಒಂದನೆಯ ತರಗತಿ. ಆಕೆಯ ತೂಕ ಸುಮಾರು ಹದಿನೈದು ಕಿಲೊ. ಆಕೆಯ ಸ್ಕೂಲುಬ್ಯಾಗ್ ಆಕೆಗಿಂತಲೂ ಭಾರ. ಶಾಲೆಗೆ ಹೋಗುವಾಗ ಮತ್ತು ಬರುವಾಗ […]

ಇ-ಜ್ಞಾನ

- ಟಿ.ಜಿ.ಶ್ರೀನಿದಿ

 ಇ-ಜ್ಞಾನ <p><sub> - ಟಿ.ಜಿ.ಶ್ರೀನಿದಿ </sub></p>

ಟೆಕ್ ಸುದಿ ಹೊಸ ಮೊಬೈಲ್ ಫೋನುಗಳಲ್ಲಿ ನೂರೆಂಟು ಸೌಲಭ್ಯಗಳಿರುವುದು ಹಳೆಯ ವಿಷಯ. ಪೇಪರ್ ಓದಿದ ಮೇಲೆ ಅದನ್ನು ಮಡಚಿ ಎತ್ತಿಡುವಂತೆ ಮೊಬೈಲ್ ಫೋನನ್ನೂ ಮಡಚಿಡುವ ಸೌಲಭ್ಯ ಸದ್ಯದಲ್ಲೇ ಬರಲಿದೆಯಂತೆ. ಹೀಗೆ ಮಡಚಬಹುದಾದ (ಫೋಲ್ಡಬಲ್) ಫೋನಿನ ವಿನ್ಯಾಸವೊಂದನ್ನು ಮೊಬೈಲ್ ಫೋನ್ ನಿರ್ಮಾತೃ ಸಂಸ್ಥೆ ಸ್ಯಾಮ್‍ಸಂಗ್ ಪ್ರದರ್ಶಿಸಿದೆ. ಟ್ಯಾಬ್ಲೆಟ್ ಗಾತ್ರದ ಸಾಧನವೊಂದನ್ನು ಎರಡು ಬಾರಿ ಮಡಚಿ ಮೊಬೈಲ್ ಫೋನಿನ ಗಾತ್ರಕ್ಕೆ ಬದಲಿಸುವುದು ಈ ವಿನ್ಯಾಸದ ಹೆಗ್ಗಳಿಕೆ. ಬಹಳ ಸಮಯದಿಂದ ಸುದ್ದಿಮಾಡುತ್ತಿದ್ದ ಈ ಪರಿಕಲ್ಪನೆ ಮಾರುಕಟ್ಟೆ ಪ್ರವೇಶಿಸುವ ಸಮಯ ಇದೀಗ ಸನ್ನಿಹಿತವಾಗಿದೆ […]

ಇಂದಿಗೂ ಕನ್ನಡವಾಗಿದ್ದೇವೆ!

-ಡಾ.ಉಮಾ ವೆಂಕಟೇಶ್

 ಇಂದಿಗೂ ಕನ್ನಡವಾಗಿದ್ದೇವೆ! <p><sub> -ಡಾ.ಉಮಾ ವೆಂಕಟೇಶ್ </sub></p>

ಒಳನಾಡ ಕನ್ನಡಿಗರಲ್ಲಿ ಉದ್ಯಮಶೀಲತೆ ಬೆಳೆಸಲು, ಹೊರನಾಡ ಕನ್ನಡಿಗರ ಆರ್ಥಿಕ ಸಂಪನ್ನತೆ ಮತ್ತು ಸೃಜನಶೀಲತೆಗಳ ಸದುಪಯೋಗ ಪಡೆದುಕೊಳ್ಳುವ ಮಾರ್ಗಗಳನ್ನು ಸರ್ಕಾರ ಹುಡುಕಬೇಕು. ನಮ್ಮ ಸರ್ಕಾರಿ ಅಧಿಕಾರಿಗಳು, ಹೊರನಾಡ ಕನ್ನಡ ಸಂಘಗಳ ಸಮಾರಂಭಗಳು ಕೇವಲ ತಮ್ಮ ಐಷಾರಾಮಿ ವಿದೇಶಿ ಯಾತ್ರೆಗೆ ಒಂದು ಅವಕಾಶವೆಂದು ಬಗೆಯಬಾರದು; ಇಂತಹ ಸಮ್ಮೇಳನಗಳು ಒಳನಾಡಿನ ಕನ್ನಡಿಗರ ಹಿತಾಸಕ್ತಿಗಳನ್ನು, ಅನಿವಾಸಿ ಕನ್ನಡಿಗರೊಂದಿಗೆ ಬೆಸೆಯುವ ಸುವರ್ಣಾವಕಾಶಗಳೆಂದು ಭಾವಿಸಬೇಕು. ಉತ್ತಮ ಭವಿಷ್ಯವನ್ನರಸುತ್ತಾ ತಾಯ್ನಾಡನ್ನು ತೊರೆದು ವಲಸೆ ಹೋಗುವ ಪ್ರವೃತ್ತಿ 6-7 ದಶಕಗಳಿಂದ ನಡೆಯುತ್ತಲೇ ಇದೆ. 60-70ರ ದಶಕದಲ್ಲಿ ಅಮೆರಿಕ, ಮಧ್ಯಪ್ರಾಚ್ಯ […]

ಸಾಹಿತ್ಯದಲ್ಲಿ ಅಸಂಗತತೆ

- ಕಾದಂಬಿನಿ

ಅಸಂಗತ ಆಲೋಚನೆಗಳನ್ನು ಸಾಹಿತ್ಯದಲ್ಲಿ ಅಳವಡಿಸುವ ಪ್ರಕ್ರಿಯೆಯು ಪಾಶ್ಚಾತ್ಯರಲ್ಲಿ ಕಳೆದ ಶತಮಾನದ ಆದಿಯಲ್ಲಿಯೇ ಆರಂಭಗೊಂಡಿತು. ಅಸಂಗತತೆಯನ್ನು ಸಾಹಿತ್ಯದಲ್ಲಿ ಎರಡು ರೀತಿಯಲ್ಲಿ ತರಲಾಯಿತು. ಉದ್ದೇಶಪೂರ್ವಕವಾಗಿ ಹಾಸ್ಯಾಸ್ಪದ, ವಿಲಕ್ಷಣ ಮತ್ತು ಅಸಂಗತತೆಯನ್ನು ಮಿಳಿತಗೊಳಿಸುವುದು ಒಂದಾದರೆ ಮಾನವನ ಸಾಮಾಜಿಕ ಅಸ್ತಿತ್ವಕ್ಕಿಂತ ಆಂತರಿಕ ಅಸ್ತಿತ್ವವೇ ಮುಖ್ಯ ಎಂಬ ನಂಬಿಕೆಯಿಂದ ಅಸಂಗತತೆಯನ್ನು ಪ್ರತಿಪಾದಿಸುವುದು ಇನ್ನೊಂದು. ಯೂರೋಪಿನಲ್ಲಿ ಕಲಾತ್ಮಕ ಮತ್ತು ಸಾಹಿತ್ಯಿಕ ಪರಿಸರದ ಸಾಂಪ್ರದಾಯಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಶಿಷ್ಟ ಹಾಗೂ ಅಸಂಬದ್ಧತೆಯಿಂದ ಅಪಹಾಸ್ಯ ಮಾಡುವ ಮೂಲಕ ಗುಡಿಸಿ ಹಾಕುವ ಉದ್ದೇಶದಿಂದ ಸ್ವಿಟ್ಜರ್ಲೆಂಡಿನ ಜ್ಯೂರಿಚ್ ಎಂಬಲ್ಲಿ […]

1 4 5 6