ಪ್ರಿಯ ಓದುಗ ಬಂಧು,

ಸಂಪಾದಕೀಯ

ಪ್ರಿಯ ಓದುಗ ಬಂಧು,
ಸಂಪಾದಕೀಯ

ನಿಮ್ಮ ನೆಚ್ಚಿನ ‘ಸಮಾಜಮುಖಿ’ ಇನ್ನೆರಡು ತಿಂಗಳಲ್ಲಿ ನಿರಂತರ ಪ್ರಕಟಣೆಯ ಮೂರನೇ ವರುಷ ಪೂರೈಸಲಿದೆ. ಈ ಸಂದರ್ಭದಲ್ಲಿ ಪತ್ರಿಕೆ ಪ್ರಕಟಣೆಯ ಕಷ್ಟ-ಸುಖಕ್ಕೆ ಸಂಬಂಧಿಸಿದ ಒಂದೆರಡು ಅಂತರಂಗದ ಮಾತುಗಳು… ಬೌದ್ಧಿಕ ನೆಲೆಯಲ್ಲಿ ಅದೆಷ್ಟೇ ಆದರ್ಶ, ಪಾವಿತ್ರ್ಯ, ಪಾತೀರ್ವತ್ಯದ ಅಡಿಪಾಯದಲ್ಲಿ ಪ್ರತಿಷ್ಠಾಪನೆಗೊಂಡಿದ್ದರೂ ಅಂತಿಮವಾಗಿ ಪತ್ರಿಕೆಯೊಂದು ಮಾರುಕಟ್ಟೆಯ ‘ಸರಕು’ ಎಂಬುದು ಕಹಿಸತ್ಯ. ಸರಕು ಎಂದಾಕ್ಷಣ ಲಾಭನಷ್ಟದ ಲೆಕ್ಕಾಚಾರ ರಂಗ ಪ್ರವೇಶಿಸುತ್ತದೆ. ನಿಮಗೆಲ್ಲಾ ಗೊತ್ತಿರುವಂತೆ ಭಾರತದಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುವ ಎರಡು ವಸ್ತುಗಳೆಂದರೆ, ರೈತರ ಉತ್ಪನ್ನ ಮತ್ತು ಪತ್ರಿಕೆ. ಸಮಾಜಮುಖಿ ಮಾಸಿಕದ […]

ಕರ್ನಾಟಕದ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯದ ತುರ್ತು ಅಧ್ಯಯನ ಅಗತ್ಯವಿದೆಯೇ?

-ಮೋಹನದಾಸ್.

ಕರ್ನಾಟಕದ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯದ ತುರ್ತು ಅಧ್ಯಯನ ಅಗತ್ಯವಿದೆಯೇ?
-ಮೋಹನದಾಸ್.

ನಾವು ಚಾಪೆಯ ಕೆಳಗೆ ತಳ್ಳಿ ಗಡದ್ದಾಗಿ ನಿದ್ರೆ ಮಾಡುತ್ತಾ ನಿರ್ಲಕ್ಷಿಸಿರುವ ಹಲವು ವಿಷಯಗಳಲ್ಲಿ ಈ ಮುಖ್ಯವಿಷಯವೂ ಒಂದಾಗಿದೆ. ತಂದೆ-ತಾಯಿ-ಪೋಷಕರಾಗಲಿ ಅಥವಾ ವಾರಸುದಾರರಾಗಲಿ ಇರದ ಈ ಸಮಸ್ಯೆಯನ್ನು ನಾವು ಎತ್ತಿ ಹೇಳಲೇಬೇಕಾಗಿತ್ತು. ಏಕೆಂದರೆ ಈ ವಿಷಯ ಕಾಡಂಚಿನಲ್ಲಿ ವಾಸಮಾಡುತ್ತಿರುವ ನಿವಾಸಿಗಳ ಹಾಗೂ ಸಾಮಾನ್ಯ ರೈತರ ಬದುಕನ್ನು ಮೂರಾಪಾಲಾಗಿ ಮಾಡಹೊರಟಿದೆ. -ಮೋಹನದಾಸ್. ನಮ್ಮ ದೇಶದ ಹಲವು ಹೋಲಿ ಕೌ (ಪವಿತ್ರ ಅಸ್ಪೃಶ್ಯತೆ) ವಿಷಯಗಳಲ್ಲಿ ಅರಣ್ಯಗಳು ಹಾಗೂ ಅಲ್ಲಿನ ವನ್ಯಜೀವಿಗಳು ಕೂಡಾ ಸೇರಿವೆ. ಈ ತೆರನಾದ ವಿಷಯಗಳಲ್ಲಿನ ನಮ್ಮ ದ್ವಂದ್ವ ನಡವಳಿಕೆ […]

ನೆಲ-ಜಲ ಬಳಕೆಗೊಂದು ನೀತಿ ಇರಬೇಕಲ್ಲವೇ?

- ಡಾ.ಕೇಶವ ಎಚ್. ಕೊರ್ಸೆ

ನೆಲ-ಜಲ ಬಳಕೆಗೊಂದು  ನೀತಿ ಇರಬೇಕಲ್ಲವೇ?
- ಡಾ.ಕೇಶವ ಎಚ್. ಕೊರ್ಸೆ

ವನ್ಯಜೀವಿ ದಾಳಿ ಸಮಸ್ಯೆಗಳೆಲ್ಲವನ್ನೂ ಒಂದೇ `ರಾಮಬಾಣ’ದಿಂದ ಪರಿಹರಿಸಲಾಗದು. ಆಯಾ ಪ್ರದೇಶಕ್ಕನುಗುಣವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ರೈತರಿಗೆ ನಿಜಕ್ಕೂ ಬೇಕಾದದ್ದು, ಸಶಕ್ತ ಹಾಗೂ ಜನಸಹಭಾಗಿತ್ವದ ಅರಣ್ಯ ಸಂರಕ್ಷಣಾ ನೀತಿ. ದೂರಗಾಮಿ ದೃಷ್ಟಿಕೋನವುಳ್ಳ ವಿವೇಕಪೂರ್ಣ ನೀತಿಯೊಂದಕ್ಕಾಗಿ ನಾವು ಪ್ರಯತ್ನಿಸಬೇಕಿದೆ. – ಡಾ.ಕೇಶವ ಎಚ್. ಕೊರ್ಸೆ   ವನ್ಯಜೀವಿ-ಮಾನವ ಸಂಘರ್ಷ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವುದರಲ್ಲಿ ಸರ್ಕಾರ ಹಾಗೂ ಜನರೂ ಕೂಡ ಹೊಣೆಗಾರರೇ? ಸರ್ಕಾರದ ಜವಾಬ್ದಾರಿ ಇದ್ದೇ ಇದೆ. ನಾಡಿನ ಜಲಮೂಲವಾದ ಪಶ್ಚಿಮಘಟ್ಟದಲ್ಲಿ ಅದೆಷ್ಟು ಅರಣ್ಯ ಛಿದ್ರವಾಗುತ್ತಿದೆಯೆಂದರೆ, ಅಭಯಾರಣ್ಯಗಳ ಹೊರಗೆ ಒಂದೆರಡು ಚ.ಕಿ.ಮಿ. […]

ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಬೇಕು..

- ಆರ್.ಕೆ.ಮಧು

ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಬೇಕು..
- ಆರ್.ಕೆ.ಮಧು

ನಮ್ಮ ಜೀವನ ವನ್ಯಜೀವಿಗಳೊಂದಿಗೆ, ಪರಿಸರದೊಂದಿಗೆ ಇರಬೇಕು. ಇಲ್ಲಿ ಎಲ್ಲರಿಗೂ ಜೀವಿಸಲು ಹಕ್ಕಿದೆ. ಮುಖ್ಯವಾಗಿ ವನ್ಯಜೀವಿಗಳಿಗೆ. ಏಕೆಂದರೆ ಅವುಗಳಿಲ್ಲದಿದ್ದರೆ ನಾವಿಲ್ಲ. ಆದರೆ ನಾವಿಲ್ಲದಿದ್ದರೆ ಅವು ಸಂತಸದಿಂದ ಬದುಕುತ್ತವೆ! – ಆರ್.ಕೆ.ಮಧು    ಚಾಮರಾಜನಗರ ಜಿಲ್ಲೆ ವಿಸ್ತಾರವಾದ ಜೀವವೈವಿಧ್ಯಗಳ ನೆಲೆಯ ಹೊಂದಿರುವ ಅಭೇದ್ಯ, ಅದ್ಭುತ ಅರಣ್ಯಗಳ ಆಗರ. ಅಂತರ ರಾಜ್ಯಗಳೊಂದಿಗೆ ಹುಲಿ ಪ್ರದೇಶಗಳನ್ನು ಹೊಂದಿದ್ದು ಮಹದೇಶ್ವರ ಬೆಟ್ಟದಿಂದ ಬಂಡೀಪುರದವರೆಗೆ ವನ್ಯಜೀವಿಗಳ ನೆಮ್ಮದಿಗೆ ಬಹಳ ಹಿಂದಿನಿಂದಲೂ ನೆಲೆ ಒದಗಿಸಿತ್ತು. ಆದರೆ ಇಂದು ವನ್ಯಜೀವಿಗಳ ನೆಮ್ಮದಿಗೆ ಭಂಗಬಂದಿದೆ. ಅವೂ ಸಂಘರ್ಷ ನಡೆಸಬೇಕಿದೆ. ನೆಮ್ಮದಿಯ […]

ಮಾನವ-ವನ್ಯಜೀವಿ ಸಂಘರ್ಷ ಜಾಗತಿಕ ನೋಟ

- ಎಂ.ಕೆ.ಆನಂದರಾಜೇ ಅರಸ್

ಮಾನವ-ವನ್ಯಜೀವಿ ಸಂಘರ್ಷ ಜಾಗತಿಕ ನೋಟ
- ಎಂ.ಕೆ.ಆನಂದರಾಜೇ ಅರಸ್

ಮಾನವ-ವನ್ಯಜೀವಿ ಸಂಘರ್ಷ ಮನುಷ್ಯನ ನಾಗರಿಕತೆಯಷ್ಟೇ ಹಳೆಯದಾದದ್ದು. ಇಂದು ಅಭಿವೃದ್ಧಿಶೀಲ ಪ್ರದೇಶಗಳಾದ ದಕ್ಷಿಣ ಏಷಿಯಾ ಹಾಗೂ ಆಗ್ನೇಯ ಏಷಿಯಾದಲ್ಲಿರುವ ಕೆಲವು ದೇಶಗಳಲ್ಲಿ ಈ ಸಮಸ್ಯೆ ಉಲ್ಬಣವಾಗುತ್ತಿದೆ. – ಎಂ.ಕೆ.ಆನಂದರಾಜೇ ಅರಸ್ ವರ್ಲ್ಡ್ ವೈಲ್ಡ್ ಲೈಫ್ ಸಂಸ್ಥೆಯ ಒಂದು ಜಾಹೀರಾತು ಹೀಗಿದೆ. ವಿನ್ಯಾಸದಲ್ಲಿ ಎರಡು ಆಯತಗಳಿದ್ದು, ಒಂದು ಆಯತದಲ್ಲಿ ಹಾವನ್ನು ತೋರಿಸಿ ಅದರ ಕೆಳಗೆ ಟೆರಿಫೈಯಿಂಗ್ (ಹೆದರಿಕೆ ಹುಟ್ಟಿಸುವಂತಹದ್ದು) ಎಂಬ ಶೀರ್ಷಿಕೆಯನ್ನು ನೀಡಿದ್ದರೆ, ಇನ್ನೊಂದು ಆಯತವನ್ನು ಸಂಪೂರ್ಣ ಖಾಲಿ ಬಿಟ್ಟು ಅದರ ಕೆಳಗೆ ಮೋರ್ ಟೆರಿಫೈಯಿಂಗ್ (ಇನ್ನೂ ಹೆಚ್ಚು ಭಯ […]

ನರೇಗಾ ಯೋಜನೆಯ ಪಿತಾಮಹ ರಘುವಂಶ ಪ್ರಸಾದ್ ಸಿಂಗ್

ಸೌಭದ್ರ ಚಟಜಿ೯

ನರೇಗಾ ಯೋಜನೆಯ ಪಿತಾಮಹ ರಘುವಂಶ ಪ್ರಸಾದ್ ಸಿಂಗ್
ಸೌಭದ್ರ ಚಟಜಿ೯

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕೇಂದ್ರ ಸಚಿವ ರಘುವಂಶಬಾಬು ಇತ್ತೀಚೆಗೆ ನಿಧನರಾದರು. ಅವರ ಅಗಲಿಕೆಯಿಂದ ರಾಷ್ಟ್ರದ ರಾಜಕೀಯ ರಂಗ ಅಪರೂಪದ ಪ್ರತಿಭೆಯೊಂದನ್ನು ಕಳೆದುಕೊಂಡಂತಾಗಿದೆ. ಅವರ ವರ್ತನೆ, ಕಾಳಜಿ, ಚಿಂತನೆ, ಯೋಜನೆಗಳನ್ನು ನೆನೆಯುವ ಪ್ರಯತ್ನವಿದು.. – ಸೌಭದ್ರ ಚಟಜಿ೯ ಮಾಜಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ರಘುವಂಶ ಪ್ರಸಾದ್ ಸಿಂಗ್ ಸಂಸತ್ ಕಲಾಪವನ್ನು ಮುಗಿಸಿಕೊಂಡು ತಮ್ಮ ಕಾರಿನಲ್ಲಿ ಹೊರಬಂದ ಕೂಡಲೇ ಅಲ್ಲಿ ನೆರೆದಿರುತ್ತಿದ್ದ ಪತ್ರಕರ್ತರೊಡನೆ ಕೆಲಹೊತ್ತು ಮಾತನಾಡುತ್ತಿದ್ದರು. ಇಂತಹ ಪ್ರತಿಯೊಂದು ಸಂದರ್ಭದಲ್ಲೂ ಅವರ ಕಚೇರಿಯ ಅಧಿಕಾರಿಗಳಲ್ಲಿ […]