-ಹುರುಕಡ್ಲಿ ಶಿವಕುಮಾರ ರಂಗಪ್ಪನ ಜಾತ್ರೆ ಮುಗಿಸಿ ಊರಿಗೆ ಬರುವಷ್ಟರಲ್ಲೇ ಕತ್ತಲಾಗಿಬಿಡುತ್ತಿತ್ತು. ಆದರೆ ಪೂರ್ವ ದಿಗಂತದಲ್ಲಿ ಹುಣ್ಣಿಮೆಯ ಚಂದಿರ ಬೆಳಕು ಚೆಲ್ಲುತ್ತಾ ಬಂದು ಕತ್ತಲೆಯನ್ನು ಓಡಿಸುತ್ತಿದ್ದ. ಮರುದಿನ ಬೆಳಿಗ್ಗೆ ಬಣ್ಣದೋಕುಳಿ ಆಡಲು ಸನ್ನದ್ಧರಾಗಿ ನಮ್ಮೂರೆಲ್ಲಾ ನಿದ್ರೆಗೆ ಜಾರುತ್ತಿತ್ತು. ಇದು ಈಗಲೂ ಮುಂದುವರೆದೇ ಇದೆ. ಆದರೆ… ಕರೋನಾ ಹಾವಳಿಯಲ್ಲಿ ಈ ವರ್ಷ ಕ್ಯಾ ಕರೋನಾ…? ತಂಬ್ರಹಳ್ಳಿ, ಬಾಚಿಗೊಂಡನಹಳ್ಳಿ, ಮುತ್ಕೂರು, ಕಿತ್ತನೂರು, ರಾಮೇಶ್ವರಬಂಡಿ, ತೆಲುಗೋಳಿ… ಹೀಗೆ ಹತ್ತಾರು ಹಳ್ಳಿಯ ರೈತಾಪಿ ಕುಟುಂಬಗಳಿಗೆ ಬಳ್ಳಾರಿ ಜಿಲ್ಲೆ ತಂಬ್ರಹಳ್ಳಿಯ ರಂಗಪ್ಪನ ಜಾತ್ರೆಯೆಂದರೆ ವರ್ಷಕ್ಕೊಮ್ಮೆ ಸಿಗುವ […]
-ಪ್ರೊ.ಪದ್ಮನಾಭ ರಾವ್ ಪ್ರತಿಯೊಂದು ಊರಿಗೂ ತನ್ನದೇ ಆದ ಕುರುಹುಗಳು ಇರುತ್ತವೆ. ಅವು ಆ ಊರಿನ ವ್ಯಕ್ತಿತ್ವದ ಭಾಗವೇ ಆಗಿರುತ್ತವೆ. ಈಗ ಮಹಾನಗರವಾಗಿ ಬೆಳೆದು ನಿಂತಿರುವ ಬೆಂಗಳೂರಿನ ಹಳೆಯ ಗುರುತುಗಳನ್ನು ಹುಡುಕುವ ಪ್ರಯತ್ನ ಇಲ್ಲಿದೆ. ಮಡ್ ಟ್ಯಾಂಕ್ ಈಗ ಕರ್ನಾಟಕ ರಾಜ್ಯ ಹಾಕಿ ಕ್ರೀಡಾಂಗಣ ಮತ್ತು ಅದರ ಪಕ್ಕದ ಕ್ರಿಕೆಟ್ ಪಿಚ್ ಇರುವ ಪ್ರದೇಶವು ಹಿಂದೊಮ್ಮೆ ಅಕ್ಕಿತಿಮ್ಮೇನಹಳ್ಳಿ ಕೆರೆ ಆಗಿತ್ತು. ಅದನ್ನು ನಂತರ ಬ್ರಿಟಿಷ್ ನಿವಾಸಿಗಳು ‘ಮಡ್ ಟ್ಯಾಂಕ್’ (ಮಣ್ಣಿನ ಕೆರೆ) ಎಂದು ಕರೆದರು. ಇದನ್ನು ಅಕ್ಕಿತಿಮ್ಮೇನಹಳ್ಳಿ (ಈಗ […]
ಸಾಮಾನ್ಯವಾಗಿ ಒಳಾಂಗಣ ಆಟಗಳನ್ನು ಹೆಣ್ಣುಮಕ್ಕಳು, ಹೊರಾಂಗಣ ಆಟಗಳನ್ನು ಗಂಡುಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಹೆಣ್ಣು ಮನೆಯ ಒಳಗಿದ್ದು ಕುಟುಂಬದ ಗೋಡೆಗಳನ್ನು ಭದ್ರಪಡಿಸಿಕೊಳ್ಳಬೇಕಾದ, ಗಂಡು ಮನೆಯ ಹೊರಗೆ ಹೋಗಿ ಯಶಸ್ಸು ಸಾಧಿಸಿ ಹಣ ಗಳಿಸಬೇಕಾದ ನಮ್ಮ ಸಾಮಾಜಿಕ ಸಂರಚನೆಯನ್ನು ಇದು ಸಂಕೇತಿಸುತ್ತದೆ. – ಮಂಜುಳಾ ಶೆಟ್ಟಿ ಆಟವೆಂಬುದು ಸೃಷ್ಟಿಯ ಸಕಲ ಜೀವಗಳ ಜನ್ಮದತ್ತ ಪ್ರವೃತ್ತಿ. ಆಟವೆಂದರೆ ಅನುಭವದ ಒಳನೋಟ. ಸಮಯದ ಸದುಪಯೋಗ, ಮನರಂಜನೆ, ಬಾಂಧವ್ಯದ ಬೆಸುಗೆ, ಸಾಹಸಪರೀಕ್ಷೆ, ಸಹಬಾಳ್ವೆ, ಏಕತೆ, ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ವರ್ಧಿಸುವುದಕ್ಕೆ ಸಹಕಾರಿ. ಹೀಗೆ […]
ಊರಿನ ಹಿಂದೂ ಮುಸಲ್ಮಾನರೆಲ್ಲರೂ ಒಂದಾಗಿ ಮೊಹರಂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಿದೆಯಲ್ಲ… ಅದು ನೀಡುವ ಸಂದೇಶವೇ ಬೇರೆ! – ಹುರುಕಡ್ಲಿ ಶಿವಕುಮಾರ ನಮ್ಮೂರು ಬಾಚಿಗೊಂಡನಹಳ್ಳಿಯ ಮೊಹರಂ ಹಬ್ಬದ ಕೊನೆಯ ದಿನವನ್ನು ನಾನು ಎಂದಿಗೂ ತಪ್ಪಿಸಿಕೊಳ್ಳಲಾರೆ. ಬೇರೆ ಯಾವ ಕೆಲಸವಿದ್ದರೂ ನಾನು ಆ ಕಡೆ ಗಮನ ಕೊಡದೇ ಅಂದು ಸಾಯಂಕಾಲದ ಮೊಹರಂ ಮೆರವಣಿಗೆಗೆ ತಪ್ಪದೇ ಹಾಜರಾಗಿಬಿಡುವೆ. ಸಾಹಿತಿಯೆಂದೂ, ಪತ್ರಕರ್ತನೆಂದೂ, ರೈತ ಹೋರಾಟಗಾರನೆಂದೂ ನಮ್ಮ ಊರಲ್ಲಿ ಹೆಸರಾದ ನಾನು ಈ ಮೊಹರಂ ಮೆರವಣಿಗೆಯ ಮುಂದೆ ನಿಂತು ತದೇಕ ಚಿತ್ತದಿಂದ ವೀಕ್ಷಿಸುವುದನ್ನು ಕಂಡು ನಮ್ಮೂರ […]
ಮೈಸೂರು-ಮಂಡ್ಯ ಕಡೆಯ ಹಳ್ಳಿಗಳಲ್ಲಿ ವರ್ಷಪೂರ್ತಿ ನೂರಾರು ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಟನ್ನುಗಟ್ಟಲೇ ಕಬ್ಬಿನ ರಾಶಿಗಳ ಆಲೇಮನೆಗಳು ನಡೆಯುತ್ತಿದ್ದರೂ ಅವು ತುಂಬ ಯಾಂತ್ರಿಕ ಹಾಗೂ ವ್ಯಾವಹಾರಿಕ. ಆದರೆ ಮಲೆನಾಡಿನಲ್ಲಿ ಹಾಗಲ್ಲ… ಶಿರಸಿಯ ಸಮೀಪದ ಹಳ್ಳಿಗೆ ನೆಂಟರ ಮನೆಯ ಸಮಾರಂಭಕ್ಕೆಂದು ಹೋಗಿದ್ದಾಗ ಹತ್ತಿರದ ಇನ್ನೊಂದು ಹಳ್ಳಿಯಲ್ಲಿ ಆಲೇಮನೆಯೊಂದು ನಡೆಯುತ್ತಿರುವ ಸುದ್ದಿ ತಿಳಿಯಿತು. ಅಡಿಕೆಸೋಗೆಯ ಚಪ್ಪರದ ತಣ್ಣನೆಯ ನೆರಳಿನಲ್ಲಿ, ನೆಂಟರಿಷ್ಟರೊಡನೆ ಕಥೆ ಹೊಡೆಯುತ್ತಾ ಕುಳಿತು ಚುಡುವಾ-ಅವಲಕ್ಕಿ ಮೆಲ್ಲುತ್ತ ಶುಂಠಿ-ಲಿಂಬು ಸೇರಿಸಿ ಅರೆದ ತಾಜಾ ಕಬ್ಬಿನ ಹಾಲನ್ನು ಚೊಂಬುಗಟ್ಟಲೆ ಹೊಟ್ಟೆಗಿಳಿಸುತ್ತಾ, ದೊನ್ನೆಯಾಕಾರದಲ್ಲಿ ಮಡಚಿದ […]
‘ಸ್ಮಾರ್ಟ್ ಸಿಟಿ’ ಆದರೆ ಸಾಲದು, ತುಮಕೂರಿನ ಯುವಜನ ಸ್ಮಾರ್ಟ್ ಆದ ಅಭಿರುಚಿ ಬೆಳೆಸಿಕೊಳ್ಳಬೇಕು! ನಾಟಕ ಆಡುವ ಸಾಮರ್ಥ್ಯ ಎಲ್ಲರಿಗೂ ಬರಲಿಕ್ಕಿಲ್ಲ, ಆದರೆ ನೋಡಲು ಅಡ್ಡಿಯೇನು? ಏನೋ ಬೇಸರ ಅಂತ ಆಗೊಮ್ಮೆ ಈಗೊಮ್ಮೆ ಸಿನೆಮಾ ಥಿಯೇಟರಿಗೆ ಹೋಗಿ ಕುಳಿತಾಗ ಆ ಜಾಹೀರಾತಿನಲ್ಲಿ ಬರುವ “ಏನಾಯಿತು ಈ ಪಟ್ಟಣಕ್ಕೆ?” ಎಂಬ ಪ್ರಶ್ನೆಯನ್ನು ನಮ್ಮ ಪಟ್ಟಣದ ಜನಕ್ಕೇ ಕೇಳುತ್ತಿದ್ದಾರೇನೋ ಎಂದೆನಿಸುತಿತ್ತು. ಆದರೆ ತಂಬಾಕಿನ ಕಾರಣಕಲ್ಲ ಎಂದಷ್ಟನ್ನೇ ಈ ಕ್ಷಣಕ್ಕೆ ಹೇಳಬಲ್ಲೆ. ಆಗೊಂದು ಕಾಲ ಇತ್ತು. ನನ್ನ ತಂದೆ ವೃತ್ತಪತ್ರಿಕೆಯನ್ನು ಓದಿ ಈ […]
ಎಲ್ಲಿಂದಲೋ ಬಂದ ಗಡ್ಡಧಾರಿ ಶೇರವಾನಿಯೊಬ್ಬ, ‘ಕಾಫೀರರ ರಿವಾಜುಗಳನ್ನು ಆಚರಿಸಬೇಡಿ, ಅದು ಧರ್ಮ ವಿರೋಧಿ, ನಿಮಗೆ ಜನ್ನತ್ತಿನಲ್ಲಿ ಜಾಗ ಸಿಗೋಲ್ಲ…’ ಎಂದು ಅರ್ಥವಾಗದ ಪರಲೋಕ ಪಾಠ ಹೇಳಿ ಇಲ್ಲದ್ದನ್ನು ಬಿತ್ತಿದ. ಜನಿವಾರದ ಜುಟ್ಟೊಂದು, ‘ನಮ್ಮದು ಸನಾತನ ಧರ್ಮ, ನಮ್ಮದೇ ಶ್ರೇಷ್ಠ, ಇತರರದು ಕನಿಷ್ಠ, ಮುಸಲರು ಪರಕೀಯರು, ದೇಗುಲ ಪ್ರವೇಶದಿಂದ ದೂರವಿಡಿ, ಧರ್ಮಭ್ರಷ್ಟರಾದೀರಿ ಹುಷಾರ್…’ ಎಂದು ಭಾವನೆಗಳನ್ನು ಕೆರಳಿಸತೊಡಗಿತು. ಇಬ್ಬರನ್ನೂ ತಿರಸ್ಕರಿಸಿ ಸೌಹಾರ್ದ ಮೆರೆಯಿತು ನನ್ನೂರು! ಊರು ಅಂದರೆ ಬರೀ ಮನೆಗಳ ಸಾಲುಗಳಲ್ಲ; ಮನುಷ್ಯರ, ಮನಸ್ಸುಗಳ ಇರುವಿಕೆ… ಪ್ರಕೃತಿ ಸೊಬಗಿನ […]
ಕಲಬುರಗಿ ಭಾಷೆ ಸಂಸ್ಕೃತಿ ಕಲಬುರಗಿ ಭಾಷೆಯ ಮೇಲೆ ಕಾಲಕಾಲಕ್ಕೆ ಅನ್ಯಭಾಷೆಗಳ ಪ್ರಭಾವ ಉಂಟಾಗಿದೆ. ಅದರಲ್ಲೂ ಉರ್ದುವಂತೂ ಕನ್ನಡಕ್ಕೆ ಕುತ್ತಾಗಿ ಬಂದರೂ ಇಲ್ಲಿನ ಕನ್ನಡಿಗರು ಕನ್ನಡವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದಾರೆ. ಧರ್ಮ ಮತ್ತು ಸಂಸ್ಕೃತಿಗಳೊಂದಿಗೆ ಭಾಷೆ ಎಷ್ಟು ಗಾಢವಾಗಿ ಹೊಂದಿಕೊಳ್ಳುತ್ತದೆ ಎಂಬುದಕ್ಕೆ ಇಲ್ಲಿಯ ಕನ್ನಡ ಭಾಷೆ, ಕನ್ನಡಿಗರೇ ಸಾಕ್ಷಿ. ಡಾ.ಮಲ್ಲಿನಾಥ ಶಿ.ತಳವಾರ ಮಾನವನು ಮೂಲತಃ ಸಮಾಜಜೀವಿ. ಒಂಟಿಯಾಗಿ ಇರಲು ಬಯಸದೆ ಸಾಮೂಹಿಕವಾಗಿ ಇರಬಯಸುತ್ತಾನೆ. ಅದರ ಫಲವೇ ಭಾವನೆಗಳ ಹಂಚಿಕೆ. ಈ ನೆಲೆಯಲ್ಲಿ ಮಾನವನಿಗೆ ಭಾಷೆಯು ಅನಿವಾರ್ಯವಾದ ಬಂಧವಾಗಿದೆ. ಈ ಭಾಷೆಯ […]
ಈ ಊರ ಜನ ಹೆಚ್ಚು ಮಾತನಾಡುವವರಲ್ಲ, ಮೌನಿಗಳು. ಸಹನೆ ಉಳ್ಳವರು. ಆದರೆ ಒಮ್ಮೆ ತುಟಿ ಬಿಚ್ಚಿದರೆ ಸಾಕು ಬೈಗುಳ ಸಮೇತ ಮುತ್ತಿನಂಥ ಮಾತಿನ ಮಳೆ ಸುರಿಸುತ್ತಾರೆ. ಇವರದು ಸ್ಪಷ್ಟ, ನೇರ, ದಿಟ್ಟ ಮಾತು. ಈ ಮಾತು ಎಷ್ಟು ಸ್ಪಷ್ಟ ಎಂದರೆ ಒಂದು ಹೊಡೆತ ಎರಡು ತುಂಡಿನಂತೆ ಖಡಾಖಂಡಿತ, ನಿರ್ಭೀತ! ನನ್ನೂರು ಧಾರವಾಡ… ನನ್ನದು ಎಂದರೆ ಭಾವನಾತ್ಮಕವಾಗಿ ನನಗೆ ಸಂಬಂಧಿಸಿದ ಊರು! ನಾನು ಕಂಡಂತೆ ಕಳೆದ ಏಳು ದಶಕಗಳಲ್ಲಿ ಇಲ್ಲಿ ಆಮೆಗತಿಯಲ್ಲಿ ಪರಿವರ್ತನೆಗಳಾಗಿವೆ. ಇವೆಲ್ಲವೂ ಕೇವಲ ಭೌತಿಕ ಪರಿವರ್ತನೆಗಳು […]
ಹಿಂದೆ ಬೇಸಾಯ ಬಹು ಶ್ರಮದ ಕೆಲಸ ಆಗಿದ್ದರೂ ಅದರಲ್ಲೊಂದು ಸುಖ ಇತ್ತು. ಈಗ ಎಲ್ಲಾ ಸುಲಭ; ಸುಖ ಮಾತ್ರ ಇಲ್ಲ! ನಾನು ವಿವಾಹವಾಗಿ ಊರು ಬಿಟ್ಟ ಮೇಲೂ ನಮ್ಮೂರ ಬೆಟ್ಟ ಬೈಲು ಹಸಿರಿನಿಂದ ನಳನಳಿಸುತ್ತಿತ್ತು. ಮಳೆಗಾಲದಲ್ಲಿ ಹುಲ್ಲು ಪೊದೆಗಳು ಸೊಕ್ಕಿ ಬೆಳೆಯುತ್ತಿದ್ದುವು. ಮಳೆಗಾಲದ ಸಾಗುವಳಿ ಕೆಲಸ ಮುಗಿದ ಮೇಲೆ ಕಾಡಿನ ಸೊಪ್ಪನ್ನು ಕಡಿದು ಕೊಟ್ಯದ ನೆಲಕ್ಕೆ ಹಾಸುತ್ತಿದ್ದರು. ಸೋಣ ತಿಂಗಳಲ್ಲಿ ಕೆಯ್ ಪಾಯಾಗು (ತೆನೆ ಬಿಡುವುದು)ತ್ತಿತ್ತು. ಸೋಣ ತಿಂಗಳ ಗೌರಿ ಹಬ್ಬ-ಚೌತಿಗೆ ಮನೆಗಳಿಗೆ ತೆನೆ ತುಂಬಿಸುತ್ತಿದ್ದರು. ಸೋಣ […]
ಕಾಡುಮೇಡುಗಳನ್ನು ನಿರ್ನಾಮ ಮಾಡಿ ಹೋಂ ಸ್ಟೇ, ರೆಸಾರ್ಟ್ಗಳನ್ನು ಮಾಡುವುದನ್ನು ವಿರೋಧಿಸಿ ಇಲ್ಲಿನ ಜನರು ಆಂದೋಲನ ಹಮ್ಮಿಕೊಳ್ಳಬೇಕು. ಅಂದಾಗ ಮಾತ್ರ ಸುಂದರ ಪ್ರಾಕೃತಿಕ ಕೊಡಗನ್ನು ನಾವು ಉಳಿಸಿಕೊಳ್ಳಬಹುದು. ಕೊಡಗಿನ ಮೂಲ ಹೆಸರು ‘ಕೊಡಿಮನೆ’. ಬ್ರಿಟಿಷರು ‘ಕೂರ್ಗ್’ ಎಂದು ಬದಲಿಸಿದರು. ಬಳಿಕ 1956ರಲ್ಲಿ ‘ಕೊಡಗು’ ಎಂದು ಮರುನಾಮಕರಣ ಮಾಡಿದರು. ಪ್ರಸ್ತುತ ಕೊಡಗು ಜಿಲ್ಲೆಯನ್ನು ‘ಮಡಿಕೇರಿ’, ‘ವಿರಾಜಪೇಟೆ’, ‘ಸೋಮವಾರಪೇಟೆ’ ಮೂರು ತಾಲ್ಲೂಕುಗಳಾಗಿ ವಿಂಗಡಿಸಲಾಗಿದೆ. ಹಾಗೆಯೇ, ‘ಕಾವೇರಿ’ ಮತ್ತು ‘ಪೊನ್ನಂಪೇಟೆ’ ಎಂಬ ಮತ್ತೆರೆಡು ತಾಲ್ಲೂಕು ಕೇಂದ್ರಗಳನ್ನು ಸೃಷ್ಟಿಸುವಂತೆ ಜನ ಹೋರಾಡುತ್ತಿದ್ದಾರೆ. ‘ತಡಿಯಂಡಮೋಳ್’(1744.68 ಮೀ.) […]
ಶಿರಸಿಯ ಪ್ರಮುಖ ರಂಗಕಲೆಗಳಲ್ಲಿ ಯಕ್ಷಗಾನ ಕೂಡ ಒಂದು. ನಮ್ಮೂರ ಜನರಿಗೆ ಯಕ್ಷಗಾನದ ಒಂದೊಂದು ಚಂಡೆಯ ತಾಳಗಳು ಮೈನವಿರೇಳಿಸುವಂತೆ ಮಾಡುತ್ತವೆ. ನನಗೋ ಬಿಸಿಲು ಅಂದರೆ ಆಜನ್ಮ ಶತ್ರು. ಅಂತೂ ಇಂತೂ ಪರೀಕ್ಷೆಗಳನ್ನು ಮುಗಿಸಿದ್ದಾಯಿತು. ಇನ್ನೇನು ಮಳೆಗಾಲ ಶುರುವಾಯಿತು. ಆದರೆ ಬಿಸಿಲುನಾಡಲ್ಲಿ ಮಳೆ ಎಲ್ಲಿ ಹೇಳಿ? ಆದರೆ ನನ್ನೂರಿಗೆ ಹೋಗುತ್ತೇನೆಂದು ಒಂದು ಕಡೆ ಖುಷಿ ಒಳಒಳೊಗೆ. ಆ ದಿನ ಬಂದಾಯ್ತು. ಹುಬ್ಬಳ್ಳಿ ಬರುವದರೊಳಗೆನೇ ಮಳೆರಾಯ ನನ್ನನ್ನು ಸ್ವಾಗತಿಸಿದ್ದ. ಮತ್ತೇ ಪುನಃ ಅಲ್ಲಿಂದ 3 ತಾಸು ನನ್ನ ಪ್ರಯಾಣ. ಪ್ರಯಾಣ ಮುಂದುವರೆಯಿತು. […]
ಇಂದು ಗ್ರಾಮಗಳು ನಾನು ಬಾಲ್ಯದಲ್ಲಿ ಕಂಡ ಸ್ಥಿತಿಯ ಲ್ಲಿಲ್ಲ. ಗ್ರಾಮಗಳನ್ನು ಮರು ವ್ಯಾಖ್ಯಾನಿಸುವ ತುರ್ತು ಈಗಿದೆ ಎನಿಸುತ್ತದೆ. ನಾನು ಹುಟ್ಟಿ ಬೆಳೆದ ಬಿಜಾಪುರ ಜಿಲ್ಲೆಯ ಸಿಂದಗಿ ನನ್ನ ಬಾಲ್ಯದಲ್ಲಿ ಒಂದು ದೊಡ್ಡ ಹಳ್ಳಿಯಂತಿತ್ತು. ಇದು ಕೇವಲ ನನ್ನ ಪಾಲಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ತಾಣ ಮಾತ್ರವಾಗಿರದೇ ಆಗಾಗ ಶಾಲೆ ತಪ್ಪಿಸಿ ಅಂಡಲೆಯುವ ನೆಲವೂ ಆಗಿತ್ತು. ಮನೆಯಲ್ಲಿ ಅಪ್ಪ-ಅವ್ವ ಹೇಳಿಕೊಟ್ಟ ಮೌಲ್ಯಗಳಿಗಿಂತಲೂ, ಶಾಲೆಯಲ್ಲಿ ಮೇಷ್ಟರು ಹೇಳಿಕೊಟ್ಟದ್ದಕ್ಕಿಂತಲೂ ಅಗಾಧವಾದುದನ್ನು ನನಗೆ ಈ ಊರು ಕಲಿಸಿಕೊಟ್ಟಿದೆ. ಹಾಗೆಯೇ ಇದರ ಸಹವಾಸದಲ್ಲಿರುವ […]
ನಮ್ಮ ಊರಿನ ಜನರೇ ವಿಚಿತ್ರ. ಅದು ಎಲ್ಲಿ ಮಾತು ಕಲಿತುಕೊಂಡು ಬಂದರೋ ಏನೋ ಸಂದರ್ಭಕ್ಕೆ ತಕ್ಕಂತಹ ಮಾತುಗಳನ್ನು ಆಡಿ ಕೇಳುಗರನ್ನು ಮೈಮರೆಯಿಸಿ ಬಾಯಿ ಮುಚ್ಚುವಂತೆ ಮಾಡಿಬಿಡುತ್ತಾರೆ. ಅವರ ಮಾತು ಸಂದರ್ಭಕ್ಕೆ ತಕ್ಕಂತೆ ಬಹಳ ಸೊಗಸಾಗಿರುತ್ತದೆ. ನನ್ನ ಊರು ಸೂರಗೊಂಡನಹಳ್ಳಿ, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನಲ್ಲಿದೆ. ಸುಮಾರು ಮೂರು ನೂರು ಮನೆಗಳಿರುವ ಈ ಗ್ರಾಮದಲ್ಲಿ, ಎಲ್ಲಾ ಜನಾಂಗದವರಿದ್ದಾರೆ. ಪ್ರತಿ ಒಂದು ಜನಾಂಗಕ್ಕೂ ಅವರದೇ ಆದ ದೇವರು. ಯಾವುದೇ ದೇವರ ಹಬ್ಬ-ಜಾತ್ರೆ ಆದರೂ ಅಲ್ಲಿಗೆ ಪ್ರತಿ ಒಂದು ಜಾತಿಯವರೂ ಕಲೆತು […]
ಊರ ಮುಂದೆ ಒಂದು ಬಾವಿ, ಬದಿಯಲ್ಲೇ ನೂರಾರು ವರ್ಷಗಳ ಹಳೆಯ ದೊಡ್ಡ ಅರಳಿಮರ. ಇದರ ಕೆಳಗೆ ಯಾರಿಗಾದರೂ ಜ್ಞಾನೋದಯ ಆಗಿದ್ದನ್ನು ಯಾರೂ ಕಂಡಿಲ್ಲ. ಆದರೆ ಮರದ ಕೆಳಗಿನ ಬಾವಿಯಲ್ಲಿ ಹಲವಾರು ಜನರ ಬದುಕು ಅಂತ್ಯವಾಗಿದ್ದು ಗೊತ್ತು. ಜಾತ್ರೆಗೆಂದು ನಮ್ಮೂರಿಗೆ ಹೋಗಿದ್ದೆ. ಊರು ಹೊಕ್ಕೊಡನೆ ನಮ್ಮೂರು ಹೌದೋ, ಅಲ್ಲವೋ ಎಂದೆನಿಸಿತು; ರಸ್ತೆ ಅಗಲೀಕರಣಕ್ಕಾಗಿ ಮನೆ-ಮಠ-ಮರಗಳನ್ನು ಒಡೆದು ಹಾಕಿದ್ದರು. ಅಳಿದುಳಿದ ಮನೆಗಳ ಅವಶೇಷಗಳನ್ನು ನೋಡಿದಾಗ, ನಮ್ಮೂರಿನ ಸಾಂಸ್ಕೃತಿಕ ಹೊಟ್ಟೆಯನ್ನೇ ಸೀಳಿದಂತೆ ಭಾಸವಾಯಿತು. ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಹಿರೇಹಡಗಲಿ ನನ್ನೂರು. […]
ಈಗ ನಮ್ಮೂರು ಬದಲಾಗಿರುವುದು ನಿಜ, ಹೊಸ ಪೀಳಿಗೆ ಬಂದಿರುವುದೂ ನಿಜ. ಆದರೆ, ಊರಿನ ಕುರಿತು ನನ್ನ ನೆನಪುಗಳು ಬದಲಾಗಿಲ್ಲ. ಊರಿನ ಬಗ್ಗೆ ಅದೇ ಪ್ರೀತಿ, ಅದೇ ವ್ಯಾಮೋಹ, ಅದೇ ಕಾಳಜಿ; ಸ್ವಲ್ಪವೂ ಮುಕ್ಕಾಗದೆ ಉಳಿದಿದೆ. ನಾನು ಹುಟ್ಟಿ ಬೆಳೆದ ಊರು ಹಂದನಕೆರೆ. ಈ ಊರನ್ನು ತೊರೆದು ಸುಮಾರು ನಲವತ್ತೆಂಟು ವರ್ಷಗಳಾಗಿವೆ. ಆದರೆ ನನ್ನೂರಿನ ಬಗೆಗಿನ ವ್ಯಾಮೋಹ, ಪ್ರೀತಿ, ಸೆಳೆತ ಸ್ವಲ್ಪವೂ ಕಡಿಮೆಯಾಗಿಲ್ಲ. ಈಗಲೂ ನಿವೃತ್ತಿ ಜೀವನವನ್ನು ಅಲ್ಲಿಯೇ ಕಳೆಯಬೇಕೆಂದು ಆಸೆ. ಆದರೆ ಡಾ.ರಹಮತ್ ತರೀಕೆರೆಯವರು ಒಂದು ಕಡೆ […]
ನಿನಗೆ ಲಾಭ ಬರದಿದ್ದರೂ ನನ್ನಿಂದ ಲಾಸ್ ಆಯ್ತು ಅನ್ನೋ ಮಾತು ಬ್ಯಾಡ ಅನ್ನೋರೆ ಜಾಸ್ತಿ ನಮ್ಮ ಹಳ್ಳೀಲಿ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಪೂರೀಗಾಲಿ ನನ್ನ ಊರು. ಊರ ಮುಂದೆ ಗೌತಮ ಬುದ್ಧನನ್ನು ನೆನೆಸುವ ದೊಡ್ಡ ಅರಳಿಮರವಿದೆ. ಯಾವ ಕಾಲದ್ದೋ, ಯಾರು ನೆಟ್ಟಿದ್ದೋ. ಭೀಷ್ಮನ ಛಾಯೆ ಆ ಮರಕ್ಕಿದೆ. ಅಲ್ಲೇ ಬದಿಗೆ ಸುತ್ತಮುತ್ತಲು ಗಡ್ಡ ಬಿಟ್ಟುಕೊಂಡು ಧ್ಯಾನಸ್ಥನಾಗಿರುವ ಮುನಿದೇವರ ಮರವೂ ಉಂಟು. ಊರಿನ ಮೊಗಸಾಲೆಯ ಬಯಲಿಗೊಂದು ದೊಡ್ಡ ಕೆರೆ. ಅಲ್ಲೇ ಊರಿಗೆ ಬೇಕಾದ ನೀರೆತ್ತುವ ಬಾವಿ, ಜತೆಗೆ […]