ಬಾಬಾಗೌಡ ಎಂಬ ಹೋರಾಟಗಾರನ ದ್ವಂದ್ವಗಳು

-ಪದ್ಮರಾಜ ದಂಡಾವತಿ

 ಬಾಬಾಗೌಡ ಎಂಬ ಹೋರಾಟಗಾರನ ದ್ವಂದ್ವಗಳು <p><sub> -ಪದ್ಮರಾಜ ದಂಡಾವತಿ </sub></p>

ಬೆಳಗಾವಿ ಜಿಲ್ಲೆಯ ಚಿಕ್ಕಬಾಗೇವಾಡಿ ಹೆಸರಿಗೆ ತಕ್ಕಂತೆ ಚಿಕ್ಕ ಊರು. ಅಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ದೊಡ್ಡ ಹೋರಾಟಗಾರನಾಗಿ ಬೆಳೆದು ಒಮ್ಮೆ ವಿಧಾನಸಭೆಯನ್ನು ಮತ್ತು ಒಮ್ಮೆ ಲೋಕಸಭೆಯನ್ನು ಪ್ರವೇಶಿಸಿದ್ದು ಹಾಗೂ ಆ ಒಮ್ಮೆ ಲೋಕಸಭೆ ಪ್ರವೇಶಿಸಿದಾಗಲೇ ಕೇಂದ್ರದಲ್ಲಿ ಸ್ವತಂತ್ರ ಖಾತೆಯ ಸಚಿವರೂ ಆದುದು ಸಣ್ಣ ಹೆಮ್ಮೆಯಲ್ಲ. ಈ ಹೆಮ್ಮೆಗೆ ಭಾಜನರಾದವರು ಮೊನ್ನೆ ನಿಧನರಾದ ಬಾಬಾಗೌಡ ರುದ್ರಗೌಡ ಪಾಟೀಲ (77). -ಪದ್ಮರಾಜ ದಂಡಾವತಿ 1980 ರ ಜುಲೈನಲ್ಲಿ ತಮ್ಮ ಬೇಡಿಕೆಗಳನ್ನು ಆಗ್ರಹಿಸಿ ಆಂದೋಲನ ಮಾಡುತ್ತಿದ್ದ ನರಗುಂದದ ರೈತರ ಮೇಲೆ ಗುಂಡೂರಾವ್ ಸರ್ಕಾರ […]

ವಿಶ್ವದ ಮೊಟ್ಟಮೊದಲ ಮಹಿಳಾ ಕ್ರಿಕೆಟ್ ಕಾಮೆಂಟೇಟರ್ ಚಂದ್ರಾ ನಾಯಿಡು

ವಿಶ್ವ ಕ್ರಿಕೆಟ್ ರಂಗದಲ್ಲಿ ಮೊಟ್ಟಮೊದಲ ಮಹಿಳಾ ಕ್ರಿಕೆಟ್ ವೀಕ್ಷಕ ವಿವರಣೆಕಾರರಾದ ಚಂದ್ರಾ ನಾಯಿಡು ಕಳೆದ ತಿಂಗಳು ತಮ್ಮ 88ನೇ ವಯಸ್ಸಿನಲ್ಲಿ ಇಂದೋರ್‍ನ ತಮ್ಮ ನಿವಾಸದಲ್ಲಿ ನಿಧನರಾದರು. ಇದರಿಂದ ಭಾರತಿಯ ಕ್ರಿಕೆಟ್ ರಂಗ ಒಬ್ಬ ತಾರೆಯನ್ನು ಕಳೆದುಕೊಂಡಂತಾಗಿದೆ. -ಚಂದ್ರಮೌಳಿ ಕಣವಿ ಭಾರತೀಯ ಕ್ರಿಕೆಟ್ ರಂಗದ ದಂತಕತೆ, 1932 ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಮೊಟ್ಟಮೊದಲ ನಾಯಕ, ತಮ್ಮ ಬಿರುಸಿನ ಹೊಡೆತಗಳಿಗೆ, ನೇರ ಮಾತು, ನೇರ ನಿಲುವಿಗೆ ಜನಪ್ರಿಯರಾದ ಕರ್ನಲ್ ಸಿ.ಕೆ. ನಾಯಿಡು ಅವರ ಪುತ್ರಿ ಚಂದ್ರಾ ನಾಯಿಡು. 1972 […]

ಗಾನಕೋಗಿಲೆ, ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು

-ಗುಡಿಹಳ್ಳಿ ನಾಗರಾಜ

 ಗಾನಕೋಗಿಲೆ, ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು <p><sub> -ಗುಡಿಹಳ್ಳಿ ನಾಗರಾಜ </sub></p>

ಇತ್ತೀಚೆಗೆ ಅಗಲಿದ ಸುಭದ್ರಮ್ಮ ಮನ್ಸೂರು ಬದುಕಿನುದ್ದಕ್ಕೂ ಲವಲವಿಕೆಯಿಂದ ನಟಿಸುತ್ತಿದ್ದರು, ಹಾಡುತ್ತಿದ್ದರು. ಅವರ ಆ ಉತ್ಸಾಹ ಕೊನೆಯವರೆಗೂ ಕುಂದಲಿಲ್ಲ ಎಂಬುದೇ ಒಂದು ಸಂತಸದ ಸೋಜಿಗ!   ಸಂಗೀತದಲ್ಲಿ ಸಾಧನೆಯ ಸಿದ್ಧಿ ಕಂಡವರಿರಬಹುದು; ಅಭಿನಯದಲ್ಲಿ ಪರಿಪೂರ್ಣತೆ ಸಾಧಿಸಿದವರಿರಬಹುದು. ಸಂಗೀತ ಹಾಗೂ ಅಭಿನಯ ಎರಡರಲ್ಲೂ ಸಾಧನೆಯ ಶಿಖರವೇರಿದ ಸುಭದ್ರಮ್ಮ ಮನ್ಸೂರು ಕನ್ನಡ ರಂಗಭೂಮಿಯ ಅಪ್ರತಿಮ ಕಲಾವಿದೆ. ಅಸ್ಖಲಿತ ಮಾತುಗಾರಿಕೆ, ಅಮೋಘ ಅಭಿನಯ, ಸುಮಧುರ ಕಂಠದ ಹಾಡುಗಾರಿಕೆಗೆ ಮತ್ತೊಂದು ಹೆಸರೇ ಸುಭದ್ರಮ್ಮ ಮನ್ಸೂರು. ಅಂತೆಯೇ ಅವರು ಗಾನಕೋಗಿಲೆಯೂ ಹೌದು, ಅಭಿನೇತ್ರಿಯೂ ಹೌದು. ಏಳು […]

ಅಪ್ಪನಿಲ್ಲದ ಅನಾಥೆ!

-ಸಂಕಮ್ಮ ಸಂಕಣ್ಣನವರ ಬ್ಯಾಡಗಿ

 ಅಪ್ಪನಿಲ್ಲದ ಅನಾಥೆ! <p><sub> -ಸಂಕಮ್ಮ ಸಂಕಣ್ಣನವರ ಬ್ಯಾಡಗಿ </sub></p>

ಡಾ.ಪಾಟೀಲ ಪುಟ್ಟಪ್ಪ ಅವರ ‘ಮಾನಸಪುತ್ರಿ’ ಎಂದೇ ಗುರುತಿಸಲ್ಪಟ್ಟ ಲೇಖಕಿಯ ಮನದಾಳದ ನೋವು, ಮುಗಿಯದ ನೆನಪು ಇಲ್ಲಿ ಸುರುಳಿ ಬಿಚ್ಚಿದೆ.  ಸದಾ ಮಾತು, ಚರ್ಚೆಗಳಲ್ಲಿ ಮುಳುಗಿರುತ್ತಿದ್ದ ನಮ್ಮ ನೆಲದ ಚೇತನ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಮೌನಕ್ಕೆ ಶರಣಾಗಿದ್ದಾರೆ. ಏಕಕಾಲದಲ್ಲಿ ಪಂಚಪತ್ರಿಕೆಗಳನ್ನು ಸಂಪಾದಿಸಿದ ರಾಷ್ಟ್ರದಾಖಲೆ ಅವರದ್ದು. ತೊಟ್ಟಿದ್ದು ಖಾದಿ, ತುಳಿದದ್ದು ಗಾಂಧೀ-ಹಾದಿ. ಅವರ ಬೌದ್ಧಿಕ ನಾಯಕತ್ವ ರಾಜ್ಯ ಪರಿಧಿಯೊಳಗಷ್ಟೇ ಅಲ್ಲ, ರಾಷ್ಟ್ರಾದ್ಯಂತ ಪ್ರಸಿದ್ಧ. ಹಾವೇರಿಯ ಕುರುಬಗೊಂಡ ಅವರ ತಾಯಿ ಮನೆ, ಹಲಗೇರಿ ತಂದೆಯ ಮನೆ. ಓದಿದ್ದು ಬ್ಯಾಡಗಿ ಮತ್ತು ಹಾವೇರಿಯಲ್ಲಿ. […]

 ನನ್ನ ಅರಿವು ಚಿಗುರಿಸಿದ ಗುರು ಚಿಮೂ

ಡಾ.ಟಿ.ಗೋವಿಂದರಾಜು

  ನನ್ನ ಅರಿವು ಚಿಗುರಿಸಿದ ಗುರು ಚಿಮೂ <p><sub> ಡಾ.ಟಿ.ಗೋವಿಂದರಾಜು </sub></p>

ನಾಡಿನ ಹಿರಿಯ ಸಂಶೋಧಕ ಪ್ರೊ.ಎಂ.ಚಿದಾನಂದಮೂರ್ತಿ ನನ್ನ ಭಾಗಕ್ಕೆ, ಬದುಕಿಗೆ ಕೇವಲ ಮಾಷ್ಟರಾಗಿದ್ದವರಲ್ಲ; ನನ್ನ ಸಂಶೋಧನೆಯ ಮೂಲ ಸ್ವರಗಳನ್ನು, ಸಾಂಸ್ಕೃತಿಕ ಅರಿವಿನ ವೈಚಾರಿಕತೆಯ ಮೂಲಾಕ್ಷರಗಳನ್ನು ನನ್ನ ಮಸ್ತಕದಕನ್ನೆ ನೆಲದಲ್ಲಿ ಬಿತ್ತಿ, ಸಕಲಜೀವಾತ್ಮರಿಗೆ ನೆರಳನ್ನೋ, ಫಲವನ್ನೋ ನೀಡುವ ಮರವಾಗುವ ಜೀವವಾಗಿಸಿದವರು. ಡಾ.ಟಿ.ಗೋವಿಂದರಾಜು ಬೆಂಗಳೂರಿನ ಕಲಾ ಕಾಲೇಜಿನಲ್ಲಿ ಬಿಎ ಪದವಿ ಬಳಿಕ, ಅದಾಗ ಜ್ಞಾನಭಾರತಿಯಲ್ಲಿ ತಲೆ ಎತ್ತಿದ್ದ ಕನ್ನಡ ಅಧ್ಯಯನ ಕೇಂದ್ರಕ್ಕೆ ಬಂದು ಸೇರಿದೆ. ಛಾಯಾಗ್ರಹಣವೋ, ವೈದ್ಯವೋ, ತೋಟಗಾರಿಕೆಯೋ ಕೊನೆಗೆ ವಿಜ್ಞಾನವೋ ಕಲಿಯಬೇಕಾದ ನಾನು ಕೊನೆಗೆ ಎಲ್ಲಿಯೂ ಸಲ್ಲದಹಳ್ಳೀಮುಕ್ಕನಾಗಿ ಕನ್ನಡಕ್ಕೆ ಬಂದದ್ದೇ […]