-ಸುಧೀಂದ್ರ ಕುಲಕರ್ಣಿ ಈ ಮತ್ರ್ಯಲೋಕದಲ್ಲಿ ಸಕಲವೂ ನಾಶವಾಗುತ್ತವೆ. ಆದರೆ ಚಿಂತನೆಗಳು ಮತ್ತು ಕನಸುಗಳು ನಾಶವಾಗುವುದಿಲ್ಲ. ಈ ಜಗತ್ತಿನಲ್ಲಿ ಯಾವ ಚಿಂತನೆಯೂ ನೋವಿನ ಮತ್ತು ತ್ಯಾಗದ ಸತ್ವಪರೀಕ್ಷೆಯನ್ನು ದಾಟದೆ ಪರಿಪೂರ್ಣವಾಗಿಲ್ಲ ನೇತಾಜಿ ಸುಭಾಷ್ ಚಂದ್ರ ಬೋಸ್ ಇದೀಗ ಮತ್ತೆ ಚಾಲ್ತಿಗೆ ಬಂದಿದ್ದಾರೆ. ಇದು ಅವರ 125ನೇ ಹುಟ್ಟುಹಬ್ಬದ ಸಂದರ್ಭ. ವಿವಿಧ ರಾಜಕೀಯ ಪಕ್ಷಗಳು ನೇತಾಜಿ ಸ್ಮರಣೆಯ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿವೆ. ಈ ಪಕ್ಷಗಳಿಗೆ ಕಾಲದ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಗಾಂಧಿ, ಪಟೇಲ್, ನೇತಾಜಿ […]
-ರಾಜೇಂದ್ರ ಚೆನ್ನಿ ಸಮಕಾಲೀನ ಜಗತ್ತಿನ ಬಹು ಭಾಗಗಳು, ರಾಷ್ಟ್ರಗಳು ಹಿಂಸೆ ಹಾಗೂ ಆತ್ಮವಿನಾಶದ ದಾರಿಯಲ್ಲಿ ಅತಿ ಉತ್ಸಾಹದಿಂದ ಸಾಗುತ್ತಿರುವ ಈ ಕಾಲದಲ್ಲಿ ಅಶ್ವತ್ಥಾಮನೂ ನಮ್ಮ ಸಮಕಾಲೀನನಾಗಿ ಕಾಣವುದು ನಾಟಕದ ಶಕ್ತಿಯೂ ಹೌದು. ನಮ್ಮ ಚರಿತ್ರೆಯ ದೌರ್ಭಾಗ್ಯವೂ ಹೌದು. ಸಹಗಮನ ಮತ್ತು ಸಾಯುವನೇ ಚಿರಂಜೀವಿ (ಎರಡು ನಾಟಕಗಳು) ಶಶಿಧರ ಭಾರಿಘಾಟ್ ಮುದ್ರಣ: 2021 ಪುಟ: 112 ಬೆಲೆ: ರೂ.90 ಅಂಕುರ ಪ್ರಕಾಶನ ನಂ.656, 2ನೇ ಮೇನ್, 11ನೇ ಬ್ಲಾಕ್ ನಾಗರಬಾವಿ 2ನೇ ಹಂತ, ಬೆಂಗಳೂರು-560072 ಶಶಿಧರ ಭಾರಿಘಾಟ್ ಅವರು […]
-ಮಂಜುನಾಥ ಡಿ.ಡೊಳ್ಳಿನ ಹಳ್ಳಿಗಾಡಿನ ಬಡ ಪ್ರತಿಭೆಯೊಂದು ಸೌಲಭ್ಯ, ಪೆÇ್ರೀತ್ಸಾಹಗಳ ಕೊರತೆಯ ಮಧ್ಯೆಯೂ ತನ್ನ ಅಂತರಾಳದಲ್ಲಿದ್ದ ಛಲವೊಂದರಿಂದಲೇ ಸಾಧನೆಯ ಹಾದಿಯನ್ನು ಕ್ರಮಿಸಿ, ಗಮ್ಯ ತಲುಪಿದ ಬಗೆಯನ್ನು ಈ ಕೃತಿ ದಾಖಲಿಸಿದೆ. ಇದು ಭವಿಷ್ಯತ್ತನ್ನು ಕಟ್ಟಿಕೊಳ್ಳಲು ಕಾತರರಾಗಿರುವ ಯುವ ಮನಸ್ಸುಗಳಿಗೆ ಕೈ ದೀವಿಗೆಯಂತಿದೆ. ಹಾದಿಗಲ್ಲು ಆತ್ಮವೃತ್ತಾಂತದ ಮೊದಲ ಚರಣ ಕೆ.ಎ.ದಯಾನಂದ ಮುದ್ರಣ: 2020 ಪುಟ: 292 ಬೆಲೆ: ರೂ.250 ಸಮನ್ವಿತ ಪ್ರಕಾಶನ ಮೊ: 9844192952 ಹಿರಿಯ ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಅವರ ಆತ್ಮವೃತ್ತಾಂತದ ಮೊದಲ ಚರಣ “ಹಾದಿಗಲ್ಲು”. ಮುದ್ರಣಗೊಂಡ ಕೆಲವೇ […]
-ಡಾ. ಬಸು ಬೇವಿನಗಿಡದ ಈ ಸಂಕಲನದ ವೈಶಿಷ್ಟವೆಂದರೆ ಇದರೊಳಗೆ ಹುದುಗಿರುವ ಭಾವ ಸಾಂದ್ರತೆ, ಕುತೂಹಲಕಾರಿ ನಿರೂಪಣೆ ಹಾಗೂ ಜೀವಪರವಾಗಿರುವ ಹೆಣ್ಣಿನ ದೃಷ್ಟಿಕೋನವೊಂದು ಎಲ್ಲ ಪ್ರಬಂಧಗಳಲ್ಲಿ ಅಡಗಿ ಕುಳಿತಿರುವುದು. ಬಗೆದಷ್ಟು ಜೀವಜಲ ಪ್ರಬಂಧಗಳು ಮಾಲತಿ ಪಟ್ಟಣಶೆಟ್ಟಿ ಪುಟ: 156 ಬೆಲೆ: ರೂ. 120 ಪ್ರಥಮ ಮುದ್ರಣ: ನವೆಂಬರ್ 2020 ಪ್ರಕಾಶನ: ಸಪ್ನಾ ಬುಕ್ ಹೌಸ್ ಸಂಪರ್ಕ: 94801 99214 ಒಳ್ಳೆಯ ಗದ್ಯದಲ್ಲಿ ಹೇಳಿದ್ದನ್ನು ತೀರ ಸಾಮಾನ್ಯವೆನಿಸುವ ಪದ್ಯದಲ್ಲಿ ಹೇಳಬೇಡ ಎಂಬುದು ಪ್ರಸಿದ್ಧ ಇಂಗ್ಲಿಷ್ ಕವಿ ಎಜ್ರಾ ಪೌಂಡ್ ಅವರ […]
ಇಂತಿ ನಮಸ್ಕಾರಗಳು ಕವನ ಸಂಕಲನ ಪ್ರಕಾಶ್ ಕೊಡಗನೂರ್ ಪುಟ: 128 ಬೆಲೆ: ರೂ.150 ಪ್ರಥಮ ಮುದ್ರಣ: 2019 ಪ್ರಕೃತಿ ಪ್ರಕಾಶನ, ರೈಲ್ವೇ ನಿಲ್ದಾಣ ಹತ್ತಿರ, ಕೊಡಗನೂರು, ದಾವಣಗೆರೆ-577534 ಭಲೇ ಭಾರತ, ನಿವೇದನೆ ಮಹಾಸಂಗಮ, ಅಮರ, ಅರುಣೋದಯ, ಮಹಾಪತನ, ನಮ್ಮೂರ ಬಾಷ, ಇತರ 40 ಕವನಗಳು ಈ ಸಂಕಲನದಲ್ಲಿವೆ. ಬಂಡಾಯದ ನಡುವೆ ಮಾನವೀಯತೆಯ ಪದರು ಹೊದ್ದಿರುವ ಕವನಗಳಿವು. ಸಂಗೀತಗಾರರು ಹಾಸ್ಯ ಪ್ರಸಂಗಗಳು ಎಸ್.ಶಶಿಧರ್ ಪುಟ: 115 ಬೆಲೆ: ರೂ.120 ಪ್ರಥಮ ಮುದ್ರಣ: 2015 ಎಸ್.ಶಶಿಧರ್, 43/220, ಈಸ್ಟ್ಪಾರ್ಕ್ ರಸ್ತೆ, […]
ಇಸಾಬೆಲ್ ವಿಲ್ಕರ್ಸನ್ ಇಸಾಬೆಲ್ ವಿಲ್ಕರ್ಸನ್ ಅವರು ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಗಳಿಸಿರುವ ಪತ್ರಕರ್ತೆ ಮತ್ತು ಬರಹಗಾರ್ತಿ. ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಅಮೆರಿಕಾದ ಹಲವಾರು ಪ್ರಮುಖ ವೃತ್ತಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಇಸಾಬೆಲ್ ಎಮೊರಿ, ಪ್ರಿನ್ಸಟನ್ ಮತ್ತು ಷಿಕಾಗೊ ನಗರದ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾನಿಲಯಗಳಲ್ಲಿ ಪತ್ರಿಕೋದ್ಯಮದ ಪ್ರಾಧ್ಯಾಪಕರಾಗಿ ಸಹ ಕಾರ್ಯ ನಿರ್ವಹಿಸಿದ್ದಾರೆ. ಈ ಲೇಖಕಿ 2020ರಲ್ಲಿ ಪ್ರಕಟಿಸಿದ ‘ಜಾತಿ: ನಮ್ಮ ಅಸಮಾಧಾನದ ಮೂಲಗಳು’ ಪುಸ್ತಕದಲ್ಲಿ, ಅಮೆರಿಕದ ವರ್ಣಭೇದ ನೀತಿಯನ್ನು ಒಂದು ಹೊಸ ದೃಷ್ಟಿಕೋನದಲ್ಲಿ ಅದ್ಭುತವಾಗಿ ಓದುಗರಿಗೆ ನೀಡುತ್ತಾರೆ. […]
-ಶಂಕರಗೌಡ ವೈ ಪಾಟೀಲ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣ ಪ್ರಧಾನ ಸಂಪಾದಕರು: ಟಿ.ಎಸ್.ನಾಗಾಭರಣ ಸಂಪಾದಕರು: ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ ಪ್ರಥಮ ಮುದ್ರಣ: 2020 ಪುಟ: 142 ಬೆಲೆ: ರೂ.100 ಪ್ರಕಾಶನ: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು. ‘ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣ-ಕೈಪಿಡಿ’ ಪುಸ್ತಕವು ಕನ್ನಡದಲ್ಲಿ ವೈಜ್ಞಾನಿಕ ಬರಹಗಳನ್ನು ಬರೆಯಬೇಕೆನ್ನುವ, ಬರೆಯುತ್ತಿರುವ ವಿದ್ಯಾರ್ಥಿಗಳಿಗೆ, ಲೇಖಕರಿಗೆ ಮತ್ತು ಸಂಶೋಧಕರಿಗೆ ಒಂದು ಅತ್ಯುತ್ತಮ ಕೈದೀವಿಗೆಯಾಗಿದೆ. ಈಗಾಗಲೇ ಕನ್ನಡದಲ್ಲಿ ವಿಪುಲವಾಗಿ ವೈಜ್ಞಾನಿಕ ಲೇಖನ ಮತ್ತು ವಿಜ್ಞಾನ ಪುಸ್ತಕಗಳನ್ನು ಬರೆದು ಪಕ್ವವಾಗಿರುವ ಲೇಖಕರು ಈ […]
-ಸುಭಾಷ್ ರಾಜಮಾನೆ ಈ ಕೃತಿಯಲ್ಲಿ ಬುದ್ಧ ಜೀವವಿರೋಧಿ ವೈದಿಕ ಆಚರಣೆಗಳನ್ನು ವಿರೋಧಿಸಿದ್ದರ ಬಗ್ಗೆ ಅಪ್ಪಿತಪ್ಪಿಯೂ ಒಂದು ಸಾಲು ಸಿಗುವುದಿಲ್ಲ. ಇವುಗಳ ಸತ್ಯಾಸತ್ಯತೆ ಕವಿಗಳಿಗೆ ಗೊತ್ತಿಲ್ಲ ಎಂದರ್ಥವಲ್ಲ. ತಮ್ಮ ಕಾವ್ಯವನ್ನು ಹಾಡಿಹೊಗಳುವ ವರ್ಗದ ಕೆಂಗಣ್ಣಿಗೆ ಗುರಿಯಾಗುವ ಆತಂಕ ಮತ್ತು ತಮ್ಮ ಜಾತಿಯ ಓದುಗ ವಲಯದ ವಿರೋಧ ಕಟ್ಟಿಕೊಳ್ಳಬೇಕಾದೀತು ಎಂಬ ಆಂತರಿಕ ಭಯ ಕವಿಯನ್ನು ಆವರಿಸಿದಂತಿದೆ! ಆಡಂಬರ-ಆತ್ಮವOಚನೆಯೇ ಹೂರಣ! ಹಿರಿಯ ಕವಿಗಳಾದ ಎಚ್.ಎಸ್.ವೆಂಕಟೇಶಮೂರ್ತಿಯವರ ಇತ್ತೀಚಿನ ಕೃತಿ ‘ಬುದ್ಧಚರಣ’ವು ಬುದ್ಧನ ಜೀವನ ಹಾಗೂ ತತ್ವವನ್ನು ಕಾವ್ಯರೂಪದಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದೆ. ಎಂಟು ಕಾಂಡಗಳಲ್ಲಿ […]
ಒಡಲಾಳದ ಧ್ವನಿ ಕವನ ಸಂಕಲನ ಉತ್ತಮ ಎ.ದೊಡ್ಮನಿ ಪುಟ: 60 ಬೆಲೆ: ರೂ.75 ಪ್ರಥಮ ಮುದ್ರಣ: 2020 ಬುದ್ಧಾಂಕುರ ಪ್ರಕಾಶನ, ಮು: ರಾಮನಗರ, ಪೋ: ಕಪನೂರ, ಕೇಂದ್ರಿಯ ಅಬಕಾರಿ ಕಚೇರಿ ವಸತಿಗೃಹ ಹತ್ತಿರ, ಹುಮನಾಬಾದ್ ರಿಂಗ್ ರಸ್ತೆ, ಕಲಬುರಗಿ- 585104 36 ಕವನಪುಷ್ಪಗಳಿಂದ ಹೆಣೆದ ಮಾಲೆ ಈ ಕೃತಿ; ಉತ್ತಮ ದೊಡ್ಮನಿ ಅವರ ಮೊದಲ ಕವನಸಂಕಲನ. ದಲಿತ ಪ್ರಜ್ಞೆ, ಯುವ ವಯಸ್ಸಿನ ಬಿಸಿ-ಬಂಡಾಯದ ಗುಣ ಇಲ್ಲಿನ ಕವನಗಳಲ್ಲಿವೆ. ಈ ಯುವ ಕವಿ ಇನ್ನಷ್ಟು ಮಾಗಿದರೆ, ಅನುಭವ ಸಂಪನ್ನನಾದರೆ […]
–ಚೂಟಿ ಚಿದಾನಂದ ಕಳೆದ ಮೂವತ್ತೇಳು ವರ್ಷಗಳಿಂದ ಸಚಿವರ ಆಪ್ತ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿರುವ ಚೂಟಿ ಚಿದಾನಂದ ಅವರು ಈಗ 24ನೇ ಸಚಿವರ ಬಳಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾನ್ಯವಾಗಿ ಸಚಿವರು ತಮ್ಮ ಆಪ್ತ ಶಾಖೆಗೆ ಅತ್ಯಂತ ನಂಬಿಗಸ್ಥರು ಮತ್ತು ದಕ್ಷರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವಿಶಿಷ್ಟ ಹೊಣೆಗಾರಿಕೆಯ ಕಾರ್ಯನಿರ್ವಹಣೆಯಲ್ಲಿ ಪಳಗಿರುವ ಕಾರಣದಿಂದಾಗಿಯೇ ಚಿದಾನಂದ ಅವರು ಎಲ್ಲಾ ಸರ್ಕಾರಗಳಲ್ಲಿಯೂ ಸಚಿವರ ಬಹು ಬೇಡಿಕೆಯ ಆಪ್ತ ಸಹಾಯಕರು. ತೀಕ್ಷ್ಣ ಹಾಸ್ಯಪ್ರಜ್ಞೆ ಮತ್ತು ಸೂಕ್ಷ್ಮ ಗ್ರಹಿಕೆ ಹೊಂದಿರುವ ಅವರು ತಮ್ಮೆದುರು ನಡೆದ ಪ್ರಸಂಗಗಳನ್ನು ‘ಸಚಿವರೊಂದಿಗೆ […]
-ಓ.ಎಲ್.ನಾಗಭೂಷಣ ಸ್ವಾಮಿ ಕನ್ನಡದ ವಿಮರ್ಶಾ ಬರಹಗಳು ನಿಜಕ್ಕೂ ಕೃತಿಗಳಿಗೆ, ಕೃತಿಕಾರರಿಗೆ ನ್ಯಾಯ ಒದಗಿಸುತ್ತಿವೆಯೇ? ಪುಸ್ತಕಗಳ ಪರಿಚಯ, ಅವಲೋಕನ, ಬೆನ್ನುಡಿ, ಮುನ್ನುಡಿಗಳ ಹೆಸರಿನಲ್ಲಿ ಪ್ರಕಟವಾಗುವ ಏಕಮುಖೀ ಹೊಗಳಿಕೆ-ತೆಗಳಿಕೆಗಳು ವಸ್ತುನಿಷ್ಠ ವಿಮರ್ಶೆಯನ್ನು ನುಂಗಿಹಾಕುತ್ತಿವೆಯೇ? ಈ ಕುರಿತ ಆರೋಗ್ಯಪೂರ್ಣ ಸಂವಾದಕ್ಕೆ, ಕೃತಿಗಳ ನಿಷ್ಪಕ್ಷಪಾತ ವಿಮರ್ಶೆಗೆ ವೇದಿಕೆಯಾಗಬೇಕೆಂಬುದು ಸಮಾಜಮುಖಿಯ ಆಶಯ. ವಿಮರ್ಶೆಯನ್ನು ಕುರಿತು ಮಾತಾಡಲು ಹೊರಟರೆ, `ಹೊನ್ನ ತೂಗಿದ ತ್ರಾಸು ಕಟ್ಟಳೆ ಹೊನ್ನಿಂಗೆ ಸಮನಪ್ಪುದೇ,’ ಎಂದು ಅಲ್ಲಮ ಕೇಳಿದ ಪ್ರಶ್ನೆ ನೆನಪಾಗುತ್ತದೆ. ಚಿನ್ನವನ್ನು ತೂಗುವ ತಕ್ಕಡಿ ಚಿನ್ನಕ್ಕೆ ಸಮವೇ ಅನ್ನುವ ಪ್ರಶ್ನೆಯಲ್ಲೇ `ಖಂಡಿತ […]
-ಮೋಹನದಾಸ್ ಲೇಖಕಿ ಅಮೃತಾ ಶಾರವರ ಈ ಹೊತ್ತಿಗೆ ಅತ್ಯಂತ ಸಮರ್ಥವಾಗಿ ವಿಕ್ರಮ್ ಸಾರಾಭಾಯಿಯೆಂಬ ಈ ಪರಮ ಸಾಧಕನ ಜೀವನವನ್ನು ಬಿಚ್ಚಿಟ್ಟಿದೆ. ಹಲವು ಮಜಲುಗಳ ಸಾಧನೆಯ ಮತ್ತು ಹಲವು ಆಯಾಮಗಳ ವ್ಯಕ್ತಿತ್ವ ವಿಶ್ಲೇಷಣೆಯ ಈ ಜೀವನಚರಿತ್ರೆ ನಿಜಕ್ಕೂ ಮಹನೀಯನೊಬ್ಬನ ಜೀವನವನ್ನು ಅರ್ಥೈಸುವ ರೀತಿಯ ಮಾದರಿಯಾಗಿದೆ. ದಕ್ಷಿಣ ಭಾರತದಲ್ಲಿ ಮತ್ತು ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ನಾವು ಸರ್ ಎಂ.ವಿಶ್ವೇಶ್ವರಯ್ಯನವರ ಅನನ್ಯ ಕೊಡುಗೆಯನ್ನು ಸ್ಮರಿಸುತ್ತೇವೆ. ಭದ್ರಾವತಿ ಉಕ್ಕಿನ ಕಾರ್ಖಾನೆ, ಮೈಸೂರು ಪೇಪರ್ ಮಿಲ್ಸ್, ಕನ್ನಂಬಾಡಿ ಕಟ್ಟೆ, ಶಿಂಷಾ ವಿದ್ಯುತ್ ಸ್ಥಾವರ, ಇನ್ಸ್ಟಿಟ್ಯೂಶನ್ […]
-ಮಹೇಶ ತಿಪ್ಪಶೆಟ್ಟಿ ವಿಜಯನಗರ ಸಾಮ್ರಾಜ್ಯದ ವಿರುದ್ಧ ನಡೆದ ಐತಿಹಾಸಿಕ ಕದನವನ್ನು ಕುರಿತು ಮಾಸ್ತಿ, ಮೆಂಡೆಗಾರ ಮತ್ತು ಕಾರ್ನಾಡರು ವಿವಿಧ ಕಾಲಘಟ್ಟಗಳಲ್ಲಿ ರಚಿಸಿದ ಮೂರು ನಾಟಕಗಳನ್ನು ತೌಲನಿಕವಾಗಿ ನೋಡುವ ಪ್ರಯತ್ನ ಇಲ್ಲಿದೆ. ವಿಜಯನಗರ ಸಮರ ಕುರಿತ ಮೂರು ನಾಟಕಗಳು ವಿಜಯನಗರ ಕನ್ನಡಿಗರ ಅಭಿಮಾನದ ಸಾಮ್ರಾಜ್ಯ. ಇಲ್ಲಿ ನಡೆದ ಕದನ ತಾಳಿಕೋಟೆ ಅಥವಾ ರಕ್ಕಸಗಿ ತಂಗಡಗಿ ಯುದ್ಧ ಎಂದೇ ಇತಿಹಾಸದಲ್ಲಿ ದಾಖಲಾಗಿದೆ. ಈ ಯುದ್ಧ ಹಲವು ಸೃಜನಶೀಲ ಮನಸ್ಸುಗಳನ್ನು ಆಕರ್ಷಿಸಿದೆ. ಎಚ್ಚಮನಾಯಕ ನಾಟಕ, ವಿಜಯ ನಗರದ ವೀರಪುತ್ರ ಚಲನಚಿತ್ರ ವಿಶೇಷ […]
-ಡಿ.ಯಶೋದಾ ಬಂಗಾಳಿ ಮೂಲದ ಈ ಪುಸ್ತಕ ಸಣ್ಣಸಣ್ಣ ವಿಷಯಕ್ಕೆ ಹತಾಶರಾಗುವ ಮಹಿಳೆಯರಿಗೆ ಜೀವನೋತ್ಸಾಹ ತುಂಬುತ್ತದೆ. ಹಾಗೆಯೇ ಪುರುಷರಿಗೆ ಮಹಿಳೆಯರ ಕಷ್ಟದ ಬದುಕಿನ ಅರಿವು ಮೂಡಿಸುತ್ತದೆ. ನೋವು ತುಂಬಿದ ಬದುಕು ಬಂಗಾಳಿ ಮೂಲ: ಬೇಬಿ ಹಾಲ್ದಾರ್ ಕನ್ನಡಾನುವಾದ: ಕುಮಾರಪ್ಪ ಜಿ. ಪುಟ: 148 ಬೆಲೆ: ರೂ.90 ನವಕರ್ನಾಟಕ ಪಬ್ಲಿಕೇಷನ್ಸ್ ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560001 ಯಾವುದೋ ಪ್ರದೇಶದ ಕುತೂಹಲಕರ ಘಟನೆ, ವ್ಯಕ್ತಿಯ ಸ್ವಾರಸ್ಯಕರ ಕಥೆ ಒಳಗೊಂಡಿರುವ ಪುಸ್ತಕ ಇನ್ಯಾರಿಗೋ ಮಾದರಿ, ಸ್ಫೂರ್ತಿ ಅಥವಾ ಪಾಠವಾಗಬಹುದು. ಅಂತಹ […]
ಬಯಲೆಂಬೊ ಬಯಲು ಬಯೋಪಿಕ್ ಕಾದಂಬರಿ ಪ್ರೊ. ಎಚ್.ಟಿ. ಪೋತೆ ಪುಟ: 214 ಬೆಲೆ: ರೂ.200 ಪ್ರಥಮ ಮುದ್ರಣ: 2020 ಪ್ರಕಾಶನ: ಕುಟುಂಬ ಪ್ರಕಾಶನ, ಪ್ಲಾಟ್ ನಂ. 140, ಪೂಜಾ ಕಾಲೋನಿ, ಕುಸುನೂರ ರಸ್ತೆ, ಕಲಬುರಗಿ-585106 ದಮನಕ್ಕೊಳಗಾದ ತಳವರ್ಗದ ಜೀವನವನ್ನು ಚಿತ್ರಿಸುತ್ತದೆ ಈ ಕಾದಂಬರಿ. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ ರಾಮಪ್ಪ, ಸ್ವಾತಂತ್ರ್ಯ ಸಂದರ್ಭದಲ್ಲಿ ಹುಟ್ಟಿದ ತಿಪ್ಪಣ್ಣ ಮತ್ತು ಸ್ವಾತಂತ್ರ್ಯ ಬಂದ ನಂತರ 60ರ ದಶಕದಲ್ಲಿ ಹುಟ್ಟಿದ ಹನುಮಂತ ಅವರ ಈ ಕಾದಂಬರಿಯ ನಾಯಕರು. ಕಳೆದ 80 ವರ್ಷಗಳಲ್ಲಿ ಈ […]
ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ಬಸವರಾಜು ಮೇಗಲಕೇರಿ ಈಗ ‘ವಾರ್ತಾಭಾರತಿ’ ಪತ್ರಿಕೆಯ ಬೆಂಗಳೂರು ಕಚೇರಿಯ ಸ್ಥಾನಿಕ ಸಂಪಾದಕರು. ವಾರ್ತಾಭಾರತಿಗೆ ಬರೆದ ಲೇಖನಮಾಲೆಯ ಸಂಗ್ರಹವನ್ನು ‘ನಮ್ಮ ಅರಸು’ ಶೀರ್ಷಿಕೆಯಲ್ಲಿ ಹೊರತರಲಾಗಿದೆ. ಅರಸು ವ್ಯಕ್ತಿತ್ವದ ಒಂದೊOದು ಮಗ್ಗುಲನ್ನು ಒಬ್ಬೊಬ್ಬರು ಅನಾವರಣಗೊಳಿಸುತ್ತಾ ಹೋಗುವ ಈ ಪುಸ್ತಕ ನಿಧಾನವಾಗಿ ಎಲ್ಲ ಮಗ್ಗುಲುಗಳನ್ನೂ ತೆರೆದು ಹೇಳುವ ಚರಿತ್ರೆಯಾಗಿದೆ. ಇದು ಅರಸುಅವರ ಸಾಧನೆಗಳ ಜೊತೆಗೆ ಅವರ ಇತಿಮಿತಿ, ದರ್ಪ, ತಪ್ಪುಗಳು ಹಾಗೂ ದೌರ್ಬಲ್ಯಗಳನ್ನೂ ಹೇಳುವ ಪುಸ್ತಕವಾಗಿದೆ. ಸಮಾಜಮುಖಿಯ ಈ ಸಂಚಿಕೆಯ ಮುಖ್ಯಚರ್ಚೆಗೆ ಪೂರಕವಾಗಿ ಅರಸು […]
-ಪದ್ಮರಾಜ ದಂಡಾವತಿ ನಮ್ಮಲ್ಲಿ ಅನೇಕ ಉದ್ಯಮಿಗಳು ತಮ್ಮ ಸಂಸ್ಥೆಯ ಹಣವನ್ನು ಸಾರ್ವಜನಿಕ ಉದ್ದೇಶಕ್ಕೆ (ಸಿ.ಎಸ್.ಆರ್.) ದಾನ ಮಾಡಿ ಹೆಸರು ಮಾಡಿದವರು. ಪ್ರೇಮ್ಜಿ ಮಾತ್ರ ತಮ್ಮ ವೈಯಕ್ತಿಕ ಸಂಪತ್ತನ್ನು ಸಮಾಜಕ್ಕೆ ಧಾರೆ ಎರೆದವರು! ಇವರೊಬ್ಬ ಜಿಪುಣ, ಕೆಲವೊಮ್ಮೆ ಜಿಪುಣಾಗ್ರೇಸರ; ಸಿಕ್ಕ ಸಿಕ್ಕ ಹಾಗೆ ಹಣ ಖರ್ಚು ಮಾಡಿದವರಲ್ಲ. ಮಾಡುವವರನ್ನು ಕಂಡರೆ ಇಷ್ಟಪಟ್ಟವರೂ ಅಲ್ಲ. ಆಗರ್ಭ ಶ್ರೀಮಂತ. ಬೆಳೆಯುತ್ತ ದೇಶದ ಕೆಲವೇ ಕೆಲವು ದೊಡ್ಡ ಶ್ರೀಮಂತರಲ್ಲಿ ಒಬ್ಬರು ಎಂದು ಹೆಸರು ಮಾಡಿದವರು. ಹಾಗೆ ಶ್ರೀಮಂತರಾದವರು ಅನೇಕ ಮಂದಿ ಇದ್ದಾರೆ. ಆದರೆ, […]
-ಎಂ.ಎಸ್.ಆಶಾದೇವಿ ರವಿ ಹಂಜ್ ಅವರ ಈ ಕೃತಿ ಚೈನಾ ಮತ್ತು ಭಾರತಗಳನ್ನು `ಕ್ರಿಟಿಕಲ್ ಇನ್ಸೈಡರ್’ ಆಗಿ ನೋಡಲು ಹಂಬಲಿಸುತ್ತದೆ. `ಅನ್ಯ’ವನ್ನು ಕುರಿತ ಅಪನಂಬಿಕೆ ಮತ್ತು `ಸ್ವ’ವನ್ನು ಕುರಿತ ಅತಿ ನಂಬಿಕೆ ಈ ಎರಡನ್ನೂ ಕಷ್ಟದಿಂದಲೇ ಬಿಟ್ಟುಕೊಟ್ಟು `ನಿಜ’ವನ್ನು ಕಾಣಲು ಹವಣಿಸುತ್ತದೆ. ಇತಿಹಾಸ, ಕಥನ, ಪ್ರವಾಸ ಸಾಹಿತ್ಯದ ಪ್ರಕಾರಗಳನ್ನೆಲ್ಲ ಒಳಗೊಂಡೂ ಅದು ಯಾವುದೂ ಅಲ್ಲದ ವಿಶಿಷ್ಟ ಪ್ರಕಾರವೊಂದನ್ನು ಈ ಕೃತಿ ಉದ್ದೇಶಿಸಿದೆ. ಮನುಷ್ಯ ಬದುಕುವುದು ಯಾವ ಕಾಲದಲ್ಲಿ ಎನ್ನುವುದರ ಬಗ್ಗೆ ಅನೇಕ ಕುತೂಹಲಕಾರಿಯಾದ ಚರ್ಚೆಗಳು ನಡೆಯುತ್ತಲೇ ಇವೆ. ತ್ರಿಕಾಲಗಳು […]
ಮಧುಬನಿ ಹನಿಗವನ ಸಂತೋಷಕುಮಾರ ಕರಹರಿ ಪುಟ: 84 ಬೆಲೆ: ರೂ.80 ಪ್ರಥಮ ಮುದ್ರಣ: 2020 ಪ್ರಕಾಶನ: ಬುದ್ಧಾಂಕುರ ಪ್ರಕಾಶನ, ಕಲಬುರಗಿ. ಮು: ರಾಮನಗರ, ಪೋ: ಕಪನೂರ, ಕೇಂದ್ರೀಯ ಅಬಕಾರಿ ಕಚೇರಿ ವಸತಿಗೃಹ ಹತ್ತಿರ, ಹುಮನಾಬಾದ ರಿಂಗ್ ರಸ್ತೆ, ಕಲಬುರಗಿ-585104 ಪುಟ್ಟ ಪುಟ್ಟ ಕವನಗಳ ಸಂಕಲನವಿದು. ಕೆಲವೊಮ್ಮೆ ಒಂದು ಸಾಲು ಪ್ರತಿನಿಧಿಸುತ್ತವೆ. ಇನ್ನೂ ವಿಸ್ತರಣೆಯಾದರೆ ಉತ್ತಮ. ಅನುಭವ ಮತ್ತು ಪಕ್ವತೆಗೆ ಹೆಜ್ಜೆಯಾಗಿದೆ ಈ ಕವನ ಸಂಕಲನ. ನೀರು ಮತ್ತು ಪ್ರೀತಿ ಕಾದಂಬರಿ ಅಗ್ರಹಾರ ಕೃಷ್ಣಮೂರ್ತಿ ಪುಟ: 108 ಬೆಲೆ: […]
ವಿಭಿನ್ನ ಇತಿಹಾಸಕಾರ ಮತ್ತು ಬರಹಗಾರರಾದ ಪ್ರೊ.ಷ.ಶೆಟ್ಟರ್ರವರಿಗೆ ಶ್ರದ್ಧಾಂಜಲಿ ಅರ್ಪಿಸುವುದೆಂದರೆ ಅವರು ಒಬ್ಬ ಬರಹಗಾರರಾಗಿ ಮತ್ತು ದಕ್ಷಿಣ ಭಾರತದ ಕಲೆಯ ಇತಿಹಾಸ, ಅಭಿಜಾತ ಕನ್ನಡ ಭಾಷೆ ಮತ್ತು ಸಂಸ್ಕøತಿಯ ಸಂಶೋಧಕರಾಗಿ ರೂಪುಗೊಂಡ ಬಗೆಯನ್ನು ಪುನರ್ರಚಿಸುವುದೆಂದು ನಾವು ನಂಬುತ್ತೇವೆ. ಅವರ ಸಂಶೋಧನಾ ಆಸಕ್ತಿಯು ಚರಿತ್ರೆ, ಪ್ರಾಕ್ತನಶಾಸ್ತ್ರ, ಕಲೆಯ ಇತಿಹಾಸ, ದರ್ಶನ ಶಾಸ್ತ್ರ, ಜೈನ ಜೀವನ ಶೈಲಿ, ಶಾಸನಶಾಸ್ತ್ರ, ಅಭಿಜಾತ ಕನ್ನಡದಂತಹ ವಿವಿಧ ಕ್ಷೇತ್ರಗಳ ಹುಡುಕಾಟದಲ್ಲಿ ತೊಡಗಿತ್ತು. ಈಗಾಗಲೇ ಪ್ರಕಟಗೊಂಡ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಮತ್ತು ನೂರಕ್ಕೂ ಹೆಚ್ಚು ಸಂಶೋಧನಾ […]