‘ಕನ್ನಡ ಮಹಾಭಾರತ’ದಲ್ಲಿ ರಣರಂಗದ ವರ್ಣನೆ

-ರವಿ ಎಂ.ಸಿದ್ಲಿಪುರ.

ಸೈನಿಕರು ಕೇವಲ ಸರಕುಗಳಾಗಿ ಪೇಟೆಯಲ್ಲಿ ಮಾರಲ್ಪಡುವ ಸನ್ನಿವೇಶವೊಂದು ಮನುಷ್ಯ ಸಂಬಂಧಗಳ ಅವನತಿಯನ್ನು ಸೂಚಿಸುತ್ತದೆ. ಯುದ್ಧದಲ್ಲಿ ‘ಮನುಷ್ಯ’ ಮುಖ್ಯವಾಗುವುದಿಲ್ಲ. ಆತ ‘ಸರಕು’ ಮಾತ್ರವಾಗುತ್ತಾನೆಂಬ ಧ್ವನಿ ಹೊರಡಿಸುವ ಕುಮಾರವ್ಯಾಸನ ರೂಪಕ ಅನನ್ಯವಾದುದು. ಇದೇ ರೀತಿಯಾಗಿ ವರ್ತಮಾನದಲ್ಲಿ ಯುದ್ಧ ಬಹುದೊಡ್ಡ ವ್ಯಾಪಾರಕ್ಕೆ ಕಾರಣವಾಗಿದೆ. ಕುರುಕ್ಷೇತ್ರದ ಹೆಸರು ಕೇಳುತ್ತಿದ್ದಂತೆಯೇ ಮಹಾಭಾರತ ಯುದ್ಧದ ಕತೆ ನೆನಪಾಗುತ್ತದೆ. ಇಲ್ಲಿನ ಸಮಾನ ಹಿತಾಸಕ್ತಿಗಳನ್ನು ಹೊಂದಿದ ಕೌರವ-ಪಾಂಡವರೆಂಬ ಎರಡು ಪ್ರಬಲ ಗುಂಪುಗಳು ಮಾಡಿದ ಧರ್ಮಯುದ್ಧಕ್ಕೆ ರಣಕ್ಷೇತ್ರವಾಗಿದೆ. ಅಂದರೆ ಯುದ್ಧ ಸ್ವರೂಪಗಳನ್ನು ಆಧರಿಸಿ ‘ವಿಶಸನರಂಗ’ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ರೀತಿಯಾಗಿ […]

ಬಿಜೆಪಿ ವಿರೋಧಿ ಮಹಾಮೈತ್ರಿ

ಮೂಲ: ಅಕ್ಷಯ ಮುಕುಲ್ ಸಂಗ್ರಹಾನುವಾದ: ವಸಂತ ನಾಡಿಗೇರ ಸೌಜನ್ಯ: ದಿ ಕ್ಯಾರವಾನ್

ರಾಮ ಮನೋಹರ ಲೋಹಿಯಾ ಅವರಿಂದ ಕಲಿಯಬೇಕಾದ ಪಾಠವೇನು? ಭಾರತದ ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಪಕ್ಷಗಳ ಮೈತ್ರಿಯುಗ ಆರಂಭವಾದದ್ದು 1967ರಲ್ಲಿ; ನಂತರ 1977ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ರಾಮ ಮನೋಹರ ಲೋಹಿಯಾ ಅವರ ಚಿಂತನೆಯ ಹಾದಿಯಲ್ಲಿ ನಡೆಸಿದ ಪ್ರಯತ್ನ, ಪ್ರಯೋಗದ ಫಲವಾಗಿ ಜನತಾ ಪಕ್ಷ ಉದಯಿಸಿತು. ಆಗ ಏರ್ಪಟ್ಟ ಮೈತ್ರಿಯಲ್ಲಿ ಬಂಡಾಯ ಕಾಂಗ್ರೆಸ್ಸಿಗರು, ಸಮಾಜವಾದಿಗಳು, ಜಾತ್ಯಾತೀತ ಬಲಪಂಥೀಯರು ಮತ್ತು ಜನಸಂಘ ಸೇರಿದ್ದವು. ಅವರೆಲ್ಲರೂ ಒಗ್ಗೂಡಿದ್ದು ಕಾಂಗ್ರೆಸ್ಸಿನ ಅರ್ಥಾತ್ ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಧೋರಣೆ ವಿರೋಧಿಸಲು. ಇದೀಗ 2019ರ […]

ಪಂಡಿತರ ದಾರಿಯಲ್ಲಿ ಅನುಸಂಧಾನ

-ಡಾ. ರಾಜೇಗೌಡ ಹೂಸಹಳ್ಳಿ

ರಾಜಸೂಯ ಯಾಗಕ್ಕೆ ತಯಾರಿ ಮಾಡುವಾಗ ಹಿಮಾಲಯ ಬೆಟ್ಟ ಸಾಲಿನ ಕಣಿವೆ ಜಂಬೂ ನದಿ ತೀರದ ಬಂಗಾರದ ನಿಕ್ಷೇಪಗಳನ್ನು ಎತ್ತಿ ತಂದು ಬೆಟ್ಟದಂತೆ ರಾಶಿ ಮಾಡಿ ಘಟೋತ್ಕಜನ ಸೈನ್ಯದೊಂದಿಗೆ ಅರ್ಜುನ ಸಾಗಿಸುವುದನ್ನು ಪಂಪ ನಿಸರ್ಗ ಹರಣದ ನಮ್ಮ ವರ್ತಮಾನದ ಸೂಕ್ಷ್ಮಗಳನ್ನೆಲ್ಲ ಅಂದೇ ಹೇಳಿಬಿಟ್ಟಿದ್ದಾನೆ. ಇದು ಇಂದಿನ ಗಣಿ ಹಾಗೂ ಅರಣ್ಯ ಲೂಟಿಗೆ ಭವಿಷ್ಯ ನುಡಿದಂತಿದೆ. ಕನ್ನಡದ ಆದಿಮಹಾಕವಿ ಸ್ವಾಭಿಮಾನದಿಂದ ‘ಮುನ್ನಿನ ಕಬ್ಬ ಮನೆಲ್ಲಮಿಕ್ಕಿ ಮೆಟ್ಟಿದುವು ಸಮಸ್ತ ಭಾರತಮುಮಾದಿ ಪುರಾಣ ಮಹಾಪ್ರಬಂಧಮುಂ’ ಎಂಬ ಮಾತನ್ನು ಹಾಗೂ ತನ್ನ ಸ್ವವಿವರಗಳನ್ನು ತನ್ನ […]

ಹ್ಯೂಯೆನ್ ತ್ಸಾಂಗನ ಮಹಾಪಯಣ

-ಕೆ.ಪುಟ್ಟಸ್ವಾಮಿ

ಹುಯೆನ್ ತ್ಸಾಂಗ್‍ನ ಜೀವನವನ್ನು ಅರಿಯಲು ಆತನ ಬಗ್ಗೆ ಲಭ್ಯವಿರುವ ಸಂಶೋಧನೆಗಳು, ಪುಸ್ತಕಗಳನ್ನು ಬೆನ್ನುಹತ್ತುವ ಲೇಖಕರು ಕಡು ವ್ಯಾಮೋಹದಿಂದ ಅಧ್ಯಯನ ನಡೆಸಿದ ಫಲವೇ ಈ ಕೃತಿ. ತ್ಸಾಂಗನ ಬದುಕು, ಯಾತ್ರೆ ಮತ್ತು ಸಾಧನೆಗಳನ್ನು ದಾಖಲಿಸಿ ಆ ಮೂಲಕ ಭಾರತದ ಚರಿತ್ರೆ ಮತ್ತು ಚೀನಾ-ಭಾರತದ ನಡುವಿನ ಸಂಸ್ಕೃತಿಕ ಸಂಬಂಧಗಳನ್ನು ಈ ಕೃತಿ ಅನಾವರಣಗೊಳಿಸುತ್ತದೆ. ತನ್ನ ನೆಲೆಯಿಂದ ಆಚೆಗಿನ ಹುಡುಕಾಟ, ಸಾಹಸ ಸ್ವಭಾವ ನಾಗರಿಕ ಮನುಷ್ಯನಿಗೆ ಆರಂಭದಿಂದಲೂ ಸಹಜ ಹವ್ಯಾಸವಾಗಿತ್ತೆಂದು ಕಾಣುತ್ತದೆ, ತನ್ನ ಊರಿಂದ ಆಚೆಗೆ, ತನ್ನ ನದಿಯ ಆಚೆಗೆ, ತನ್ನ […]

ತೆರೆಗಳು

- ಪಿ. ಲಂಕೇಶ್

 ತೆರೆಗಳು <p><sub> - ಪಿ. ಲಂಕೇಶ್ </sub></p>

ಟಿಪ್ಪಣಿ ಈ ನಾಟಕದಲ್ಲಿ ಹೆಚ್ಚು ನಿರ್ದೇಶನಗಳನ್ನು ಸೂಚಿಸಿಲ್ಲ. ಯಾಕೆಂದರೆ ನಿರ್ದೇಶಕರು ಪಾತ್ರಗಳ, ಸಂಭಾಷಣೆಯ ಕಾವಿಗೆ ತಕ್ಕಂತೆ ತಮ್ಮ ಕ್ರಿಯಾಶಕ್ತಿಯನ್ನು ಉಪಯೋಗಿಸಿಕೊಳ್ಳಲು ಅವಕಾಶವಿರಬೇಕು. ಆದರೆ ಕೆಲವು ಸಾಮಾನ್ಯ ಸೂಚನೆಗಳನ್ನು ಕೊಡಬಹುದು. ತೆರೆಯೆದ್ದೊಡನೆ ರಂಗದ ಮೇಲೆ ಹೆಚ್ಚುಕಮ್ಮಿ ಏನೂ ಇರುವುದಿಲ್ಲ. “ವ್ಯಕ್ತಿ”ಯೊಬ್ಬ ಮಧ್ಯೆ ಇರುತ್ತಾನೆ. ಆತ ಓದುತ್ತಿರಬಹುದು, ಹಣ ಏಣಿಸುತ್ತಿರಬಹುದು. ಅವನ ಮೇಲೆ ಬೆಳಕಿರುತ್ತದೆ. ಇತರ ಸ್ಪಾಟ್‍ಗಳನ್ನು ಉಪಯೋಗಿಸತೊಡಗಿದಂತೆ “ಮೂವರು” ಗೋಚರಿಸುತ್ತಾರೆ. ಕ್ರಮೇಣ ಒಂದು ಟೇಬಲ್ ಮತ್ತು ಸ್ಟೂಲು (ಅವನ್ನೂ ಬಟ್ಟೆಯಲ್ಲಿ ಮುಚ್ಚಿ ನ್ಯೂಟ್ರಲ್ ಮಾಡಿದ್ದರೆ ವಾಸಿ) ಗಮನಕ್ಕೆ ಬರುತ್ತವೆ. […]

ಹೊಸ ಪುಸ್ತಕ

ಗಬ್ಬೂರ್ ಗಜಲ್ ರಮೇಶ ಗಬ್ಬೂರ್ ಪುಟಸಂಖ್ಯೆ: 78, ಬೆಲೆ: ರೂ.78 ಪ್ರಕಾಶನ: ಆಲ್ಪೈನ್ ಪಬ್ಲಿಕೇಷನ್ಸ್, ಕೇರಾಫ್ ದೀಪ್ ಸಮಾಜ ಸೇವಾ ಕೇಂದ್ರ, ಎಸ್. ತಿಮ್ಮಪ್ಪ ಸಿಂಗನಾಳ ಕಾಂಪ್ಲೆಕ್ಸ್, ಆರ್.ಜಿ.ರೋಡ, ಗಂಗಾವತಿ-583227 . ದೂ: 9164635655 ಹೈದ್ರಾಬಾದ್ ಕರ್ನಾ ಟಕ ಸಾಹಿತ್ಯದ ಒಂದು ವಿಶಿಷ್ಠ ಪ್ರಕಾರ ಗಜಲ್. ಕೊಪ್ಪಳ ಜಿಲ್ಲೆಯವರಾದ ಕವಿ ರಮೇಶ ಗಬ್ಬೂರ್ ಗಜಲ್‍ಗಳ ಮೂಲಕ ತಮ್ಮ ಸುತ್ತಲಿನ ಪ್ರಪಂಚವನ್ನು ತೆರೆದಿಡುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ‘ಮನುಜ ಪ್ರೀತಿಯ ಕೃತಕತೆ ತಿಳಿಯಲು ದುರ್ಬೀನಿನ ಸಹಾಯ ನನಗೆ ಬೇಕೆನಿಸಲಿಲ್ಲ. […]

1 4 5 6