ಕೊರೊನಾ ಕಾಲದ ಸಂಕಟಗಳು

ಕೊರೊನಾ ಕಾಲದ ಸಂಕಟಗಳು

ಇಂತಹ ಆಕಸ್ಮಿಕಗಳು ಎದುರಾದಾಗಲೇ ಪ್ರಭುತ್ವದ ಶಕ್ತಿಯನ್ನು ಅಳೆಯಲು ಸಾಧ್ಯ. ಭಾರತದ ಸಂದರ್ಭದಲ್ಲಿ ಸೋಲುಮುಖವೇ ಢಾಳಾಗಿ ಕಾಣಿಸುತ್ತಿರುವುದು ವಿಷಾದನೀಯ.\ ಕೊರೊನಾ ಸಾಂಕ್ರಾಮಿಕ ನಮಗೆ ಹೊಸ ಹೊಸ ಪಾಠಗಳನ್ನು ಕಲಿಸಿದೆ. ಮನುಷ್ಯ ಸಂಬಂಧಗಳನ್ನು ಕುರಿತು ಮರುಚಿಂತನೆ ಮಾಡುವ ಹಾಗೆ ಮಾಡಿದೆ. ನಮ್ಮ ಧರ್ಮ ಮತ್ತು ಸಂಸ್ಕತಿಗಳನ್ನು ಮರುವಿಮರ್ಶೆಗೆ ಒಳಪಡಿಸಬೇಕಾಗಿದೆ. ನನ್ನನ್ನು ಚಿಂತನೆಗೆ ಹಚ್ಚಿದ ಕೆಲವು ಘಟನೆಗಳು ಹೀಗೆ ಯೋಚಿಸುವಂತೆ ಮಾಡಿವೆ. ಉತ್ತರ ಪ್ರದೇಶದಲ್ಲಿ ಕೊರೊನಾದಿಂದ ವೃದ್ಧರೊಬ್ಬರು ಮೃತಪಟ್ಟರು. ನ್ಯಾಯಾಧೀಶರಾಗಿದ್ದ ಅವರ ಮಗ ತಂದೆಯ ಶವವನ್ನು ಪಡೆಯಲು ಆಸ್ಪತ್ರೆಗೆ ಹೋಗಲು ಹಿಂಜರಿದರು. […]

ಹೀಗಿದೆ ನಮ್ಮೂರ ಆರೋಗ್ಯ ಸೌಲಭ್ಯ!

-ಶ್ರೀಶೈಲ ಆಲದಹಳ್ಳಿ

ಹೀಗಿದೆ ನಮ್ಮೂರ ಆರೋಗ್ಯ ಸೌಲಭ್ಯ!
-ಶ್ರೀಶೈಲ ಆಲದಹಳ್ಳಿ

ಇದು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಸರ್ಕಾರಿ ಆರೋಗ್ಯ ವ್ಯವಸ್ಥೆ ಕುರಿತ ಒಂದು ಯಥಾಸ್ಥಿತಿ ವರದಿ. ಬಹುಶಃ ಸಂಡೂರು ಬದಲು ರಾಜ್ಯದ ಯಾವುದೇ ತಾಲೂಕಿನ ಹೆಸರು ಸೇರಿಸಿಕೊಂಡು ಓದಿದರೂ ಈ ವರದಿ ಹೆಚ್ಚೇನೂ ವ್ಯತ್ಯಾಸವಿಲ್ಲದೆ ಅನ್ವಯವಾಗುವುದು ಕಳವಳಕಾರಿ ವಾಸ್ತವ! ಕೊರೊನಾ ಸೋಂಕಿನ ಆಚೆಗೂ ನಮ್ಮ ಆರೋಗ್ಯ ಕ್ಷೇತ್ರದ ಕಾರ್ಯಕ್ಷಮತೆ ಮತ್ತದರ ಸೌಲಭ್ಯಗಳನ್ನು ನೋಡಿದರೆ ಮೊದಲು ಚಿಕಿತ್ಸೆ ಬೇಕಾಗಿರುವುದು ನಮ್ಮ ಗ್ರಾಮೀಣ ಭಾಗದ ಅರೋಗ್ಯ ಕೇಂದ್ರಗಳಿಗೆ ಎಂಬುದು ಸುಸ್ಪಷ್ಟ. ಸಾವಿರಾರು ಕೋಟಿಯ ಗಣಿ ವ್ಯವಹಾರ ನಡೆಯುವ ಬಳ್ಳಾರಿ ಜಿಲ್ಲೆಯಲ್ಲಿ […]

ಪಲ್ಲಟಗೊಳ್ಳುತ್ತಿರುವ ಪತ್ರಿಕೋದ್ಯಮ:ಉಳಿವಿಗೆ ಹೊಸ ಮಾರ್ಗಗಳು

-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಪಲ್ಲಟಗೊಳ್ಳುತ್ತಿರುವ ಪತ್ರಿಕೋದ್ಯಮ:ಉಳಿವಿಗೆ ಹೊಸ ಮಾರ್ಗಗಳು
-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

–ಡಾ.ಎ.ಎಸ್.ಬಾಲಸುಬ್ರಹ್ಮಣ್ಯ ಹೊಸದಾಗಿ ಚಾಲ್ತಿಗೆ ಬರುತ್ತಿರುವ ಪತ್ರಿಕೆಗಳ ಆದಾಯ ಮಾದರಿಗಳು ಹೀಗಿವೆ: ಸಾರ್ವಜನಿಕರಿಂದ ನೇರವಾಗಿ ಸಹಾಯಧನ ಸ್ವೀಕರಿಸುವುದು; ದಾನ, ದತ್ತಿ ಸಂಸ್ಥೆಗಳಿಂದ ನೆರವು ಪಡೆಯುವುದು, ಪತ್ರಕರ್ತರ ಸೇವೆಯನ್ನು ಉಚಿತವಾಗಿ ಪಡೆಯುವುದು, ಪತ್ರಿಕಾ ಪ್ರಕಟಣಾ ಸಂಸ್ಥೆಯನ್ನು ಲಾಭ–ರಹಿತ ಉದ್ದಿಮೆಯಾಗಿ ಪರಿವರ್ತಿಸಿ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆಯುವುದು ಮತ್ತು ಇತರೆ ಪತ್ರಿಕೆಗಳ ಜತೆ ಸುದ್ದಿ ವಿನಿಮಯ ಮಾಡಿಕೊಂಡು ವೆಚ್ಚ ತಗ್ಗಿಸುವುದು. ಸ್ವರೂಪಗಳು ಕಾಲಕಾಲಕ್ಕೆ ಬದಲಾಗುತ್ತವೆ. ತಂತ್ರಜ್ಞಾನ ಪ್ರಭಾವಗಳೇ ಇದಕ್ಕೆ ಪ್ರಮುಖ ಕಾರಣ. ಪತ್ರಿಕೋದ್ಯಮವೂ ಇದಕ್ಕೆ ಹೊರತಾಗಿಲ್ಲ. ಮುಂದುವರಿದ ಅಮೆರಿಕಾ ಮತ್ತು ಯೂರೋಪಿನಲ್ಲಿ […]

ತುರ್ತುಪರಿಸ್ಥಿತಿ ಬೆಂಬಲಿಸಿದ ಪತ್ರಕರ್ತರು, ಕಲಾವಿದರು!

-ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ

ತುರ್ತುಪರಿಸ್ಥಿತಿ ಬೆಂಬಲಿಸಿದ ಪತ್ರಕರ್ತರು, ಕಲಾವಿದರು!
-ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ

–ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ ಈ ಹೊತ್ತಿನ ಅಘೋಷಿತ ತುರ್ತುಪರಿಸ್ಥಿತಿಯಲ್ಲಿ ಮಾಧ್ಯಮಗಳು ‘ಸತ್ಯ’ಕ್ಕೆ ನಿಷ್ಠರಾಗದೇ, ‘ವ್ಯವಸ್ಥೆ’ಗೆ ಅಥವಾ ‘ಪ್ರಭುತ್ವ’ಕ್ಕೆ ನಿಷ್ಠರಾಗಲು ಕಾರಣ; ಅವುಗಳ ವ್ಯಾವಹಾರಿಕ ‘ಸತ್ಯ’ದ ಮನಃಸ್ಥಿತಿ. ‘ಸಮಾಜಮುಖಿ’ ಪತ್ರಿಕೆಯಲ್ಲಿ ‘ಸ್ವತಂತ್ರ ಪತ್ರಿಕೋದ್ಯಮ’ದ ಕುರಿತ ಮುಂದುವರಿದ ಚರ್ಚೆಯಲ್ಲಿ ವಿದ್ವಾಂಸರು ತಮ್ಮ ವಿಚಾರಗಳನ್ನು ಸೂಕ್ತ ನಿದರ್ಶನಗಳೊಂದಿಗೆ ಮಂಡಿಸುತ್ತಿರುವುದರಿಂದ ಸ್ವತಂತ್ರಪೂರ್ವ ಮತ್ತು ಸ್ವತಂತ್ರೋತ್ತರ ಕಾಲಘಟ್ಟಗಳಲ್ಲಿ ಮಾಧ್ಯಮಗಳು ತಮ್ಮ ಅಸ್ತಿತ್ವ, ಅಸ್ಮಿತೆಗಾಗಿ ಬಣ್ಣ ಬದಲಿಸಿಕೊಳ್ಳುತ್ತಿರುವುದು ಬಯಲಾಗುತ್ತಿದೆ. ದೇಶದ ಮಾಧ್ಯಮ ಚರಿತ್ರೆಯ ಅರಿವಿಗಾಗಿ ಇಂತಹ ಚರ್ಚೆಯು ‘ಪ್ರಭುತ್ವ’ ಆಶ್ರಿತ ಮಾಧ್ಯಮಗಳಲ್ಲಿ ನಡೆಯದಿದ್ದರೂ, ಇಲ್ಲ್ಲಿ ನಡೆಯುತ್ತಿರುವ ಮಹತ್ವದ […]

ಸ್ವತಂತ್ರ ಪತ್ರಿಕೋದ್ಯಮ ಸಮಾಜದ ಹೊಣೆ

-ಮಾಲತಿ ಭಟ್

`ಸಮಾಜಮುಖಿ‘ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಹುಡುಕುವಾಗ ಭಾರತದಲ್ಲಿ ಮಾಧ್ಯಮದ ಹುಟ್ಟು, ಸ್ವಾತಂತ್ರ್ಯಪೂರ್ವದ ಮಾಧ್ಯಮಗಳು, ಸ್ವಾತಂತ್ರ್ಯಾನಂತರ ಇಲ್ಲಿ ಮಾಧ್ಯಮಗಳು ಬೆಳೆದ ಪರಿ, ನಮ್ಮ ಸಮಾಜ ಅದಕ್ಕೆ ಸ್ಪಂದಿಸಿದ ಬಗೆ ಎಲ್ಲವನ್ನೂ ಭೂತಗನ್ನಡಿ ಹಿಡಿದು ನೋಡಬೇಕಾಗುತ್ತದೆ. -ಮಾಲತಿ ಭಟ್ ಯಾವುದೇ ದೇಶ ತಾನು ಪ್ರಜಾಪ್ರಭುತ್ವವಾದಿ ಎಂದು ಹೇಳಿಕೊಳ್ಳಬೇಕಾದರೆ ಆ ದೇಶದ ರಾಜಕೀಯ ನಾಯಕರು ಪಾರದರ್ಶಕವಾಗಿ ಆಡಳಿತ ನಡೆಸಬೇಕು. ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಕಟ್ಟಕಡೆಯ ಮನುಷ್ಯನಿಗೂ ಸರ್ಕಾರದ ಸೌಲಭ್ಯಗಳು ಸಿಗಲು ಕೆಲಸಮಾಡಬೇಕು. ಅಂತಹ ಆರ್ಥಿಕ ವ್ಯವಸ್ಥೆ ರೂಪಿಸಬೇಕು. ಅದಕ್ಕಿಂತ ಮುಖ್ಯವಾಗಿ ಅಲ್ಲಿ ಸರ್ಕಾರದ […]

ಮಾಧ್ಯಮ ಸ್ವಾತಂತ್ರ್ಯ ಕಸಿದುಕೊಂಡವರಾರು?

-ಡಾ.ಜ್ಯೋತಿ

ವ್ಯವಸ್ಥೆಗೆ ಮತ್ತು ಮಾಧ್ಯಮಕ್ಕೆ ನಂಟು ಹೆಚ್ಚಾಗುತ್ತಿದ್ದು, ಮಾಧ್ಯಮದ ಪಾರದರ್ಶಕತೆ ಕಡಿಮೆಯಾಗುತ್ತಿದೆ. ಇದರ ಪರಿಣಾಮವಾಗಿ, ಸಾಹಿತಿ ಮಾರ್ಕ್ ಟ್ವೈನ್ ಹೇಳಿದಂತೆ, `ಇಂದು ಪತ್ರಿಕೆಗಳನ್ನು ಓದದವರು ಮಾಹಿತಿ ವಂಚಿತರಾದರೆ, ಓದುವವರು ತಪ್ಪು ಮಾಹಿತಿ ಮಾತ್ರ ಪಡೆಯುತ್ತಾರೆ.’ -ಡಾ.ಜ್ಯೋತಿ ಪ್ರಾಸ್ತಾವಿಕವಾಗಿ, ಅಮೆರಿಕಾದ ಮಾಜಿ ಅಧ್ಯಕ್ಷ ಮತ್ತು ತತ್ವಶಾಸ್ತ್ರಜ್ಞ ಥಾಮಸ್ ಜೆಫರ್ಸನ್ ಹಿಂದೊಮ್ಮೆ ಹೇಳಿದ ಮಾತು- `ನಾನು ಪತ್ರಿಕೆಗಳನ್ನು ಬಿಟ್ಟು ಪುಸ್ತಕಗಳನ್ನು ಓದುವುದನ್ನು ಆರಂಭಿಸಿದಂದಿನಿಂದ ಹೆಚ್ಚು ಸಂತೋಷವಾಗಿದ್ದೇನೆ’, ಬಹುಶಃ, ವರ್ತಮಾನದ ಮಾಧ್ಯಮಗಳಿಗೆ ಹೆಚ್ಚು ಅನ್ವಯಿಸಬಹುದೆಂದು ಕಾಣಿಸುತ್ತದೆ. ಯಾಕೆಂದರೆ, ಇಂದಿನ ಬಹುತೇಕ ಸುದ್ದಿ ಮಾಧ್ಯಮಗಳು […]

ಮಾಧ್ಯಮ ಎಂಬ ರಾಜನರ್ತಕಿ!

-ಎನ್.ಎಸ್.ಶಂಕರ್

ಮೋದಿ ಆಡಳಿತದ ಪ್ರಮುಖ ಲಕ್ಷಣವೆಂದರೆ ಜನತಾಂತ್ರಿಕ ಜೀವಕೋಶಗಳನ್ನು ಉಸಿರುಗಟ್ಟಿಸಿದ್ದು. ಇದಕ್ಕಿಂತಲೂ ಭಯಾನಕವಾದದ್ದೆಂದರೆ ಜನಸ್ತೋಮಕ್ಕೆ ಅದು ಆತಂಕದ ವಿಷಯವೇ ಅಲ್ಲ! ಅಂದರೆ ಜನ ಸ್ವತಃ ತಾವೇ ಪ್ರಜಾಪ್ರಭುತ್ವದ ಹೆಡೆಮುರಿ ಕಟ್ಟಿ ಮೋದಿಯ ಪದತಲಕ್ಕೆ ಸಮರ್ಪಣೆ ಮಾಡುತ್ತಿದ್ದಾರೆ! -ಎನ್.ಎಸ್.ಶಂಕರ್ ‘ದೇಶದಲ್ಲಿ ಆಕ್ಸಿಜನ್‍ಗಾಗಿ ಹಾಹಾಕಾರ ಎದ್ದಿದ್ದಾಗ ಪ್ರಧಾನಿ ಮೋದಿಯವರು ಬಂಗಾಳದಲ್ಲಿ ದೀದಿ ಓ ದೀದಿ ಅಂತ ಹಾಡುತ್ತ ಅಡ್ಡಾಡುತ್ತಿದ್ದರು. ಈಗ ಗಂಗಾ ನದಿಯಲ್ಲಿ ಹೆಣಗಳು ತೇಲಿ ಬರುತ್ತಿರುವಾಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ’ ಎಂದು ನಮ್ಮ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಹಾಕಿದ […]

ಬ್ಲ್ಯಾಕ್  ಪಂಗಸ್ ಜನ್ಮ ತಾಳಿದ್ದು ಹೇಗೆ?

ಕರೋನಾ ವೈರಸ್ ಪೀಡಿತರಿಗೆ ಬ್ಲ್ಯಾಕ್ ಪಂಗಸ್ ಬಾಧಿಸತೊಡಗಿತು. ಜೊತೆಗೆ ವೈಟ್, ಯಲ್ಲೊ ಪಂಗಸ್ ಹೆಸರುಗಳು ಸೇರಿಕೊಂಡವು. ಈ ಪಂಗಸ್ ಗಳಿಗೆ ಅತಿಯಾದ ಸ್ಟಿರೈಡ ಬಳಕೆ ಕಾರಣ ಎಂದು ವೈದ್ಯಲೋಕ ಹೇಳಿತು. ಆದರೆ ಪಂಗಸ್ ಗೆ ಇನ್ನೂ ಹಲವು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ: ಹಾಸ್ಪಿಟಲ್ ಇನ್ ಪೆಕ್ಷನ್, ಬೆಡ್‍ಗಳ ಅಶುಚಿತ್ವ, ಇಂಡಸ್ಟ್ರಿಯಲ್ ಆಕ್ಸಿಜನ್ ಸಿಲೆಂಡರ್ ಬಳಕೆ, ಆಕ್ಸಿಜನ್ ಮಾಸ್ಕ್‍ನ ಅಶುಚಿತ್ವ, ಯುಮಿಡಿಪಯರ್ ಗೆ ಡಿಸ್ಟಿಲ್ ವಾಟರ್ ಬದಲಿಗೆ ಸಾಧಾರಣ ನೀರಿನ ಬಳಕೆ, ವಾಟರ್ ಕೂಲರ ಬಳಕೆ, ಐ.ಸಿ.ಯು.ನ ಅಸ್ವಚ್ಛತೆ, […]

ಕರ್ನಾಟಕದಲ್ಲಿ ಸಹನೆ ಕಳೆದುಕೊಂಡ ಸಂಗೀತ

-ಡಾ.ಹರೀಶ ಹೆಗಡೆ

ಕರ್ನಾಟಕದಲ್ಲಿ ಸಹನೆ ಕಳೆದುಕೊಂಡ ಸಂಗೀತ
-ಡಾ.ಹರೀಶ ಹೆಗಡೆ

ಸಂಗೀತದಲ್ಲಿ ಮಹೋನ್ನತ ಕಲಾವಿದರು ಇಂದು ಕಾಣದೇ ಇರುವುದಕ್ಕೆ ಮುಖ್ಯ ಕಾರಣವೇ ಗುರು-ಶಿಷ್ಯ ಪರಂಪರೆಯ ಶಿಥಿಲತೆ. -ಡಾ.ಹರೀಶ ಹೆಗಡೆ ಜಗತ್ತಿನ ಬೇರಾವ ದೇಶದಲ್ಲಿಯೂ ಭಾರತೀಯ ಸಂಗೀತದಷ್ಟು ವೈವಿಧ್ಯಮಯ ಸಂಗೀತ ಕಂಡುಬರುವುದಿಲ್ಲ. ಅಂತೆಯೇ ಒಂದೇ ದೇಶದಲ್ಲಿ ಎರಡು ಶಾಸ್ತ್ರೀಯ ಸಂಗೀತಗಳಿರುವುದು ಅತಿ ವಿರಳವೇ. ಭಾರತೀಯ ಸಂಗೀತವು ಸುಮಾರು 13ನೇ ಶತಮಾನದಿಂದ ಶಾಸ್ತ್ರೀಯ ಸಂಗೀತದ ಎರಡು ಕವಲುಗಳಾಗಿ ಬೆಳೆದುಬಂದಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ, ಉತ್ತರ ಭಾರತದಲ್ಲಿ ಹಿಂದುಸ್ಥಾನಿ ಸಂಗೀತ ಎಂದು ಪ್ರಾದೇಶಿಕವಾಗಿ ವಿಭಜನೆಗೊಂಡರೂ, ಕರ್ನಾಟಕದಲ್ಲಿ ಮಾತ್ರ ಇವೆರಡೂ ಸಮಾನ ಸ್ಥಾನಮಾನಗಳನ್ನು […]

ಮಿತಿ ಮೀರಿದ ವ್ಯಾಪಾರೀಕರಣವೇ ಕಾರಣ!

-ಬಿ.ವಿ.ಶ್ರೀನಿವಾಸ್

ಸಂಗೀತದ ಸ್ವರಗಳನ್ನು, ರಾಗಗಳನ್ನು, ಮಟ್ಟುಗಳನ್ನು ಮೂಟೆಯಲ್ಲಿ ಕಟ್ಟಿ ತಮ್ಮ ಸ್ಟೋರ್ ರೂಮಲ್ಲಿ ಬಂಧಿಸಿಡುವ ಗುರುಪರಂಪರೆ ಈಗಿನದು. -ಬಿ.ವಿ.ಶ್ರೀನಿವಾಸ್ ನಮ್ಮಲ್ಲಿ ಹಿಂದೆ ಪಂ.ಭೀಮಸೇನ ಜೋಷಿ, ಡಾ.ಬಾಲಮುರಳಿ ಕೃಷ್ಣ, ವಿದೂಷಿ ಎಂ.ಎಸ್.ಸುಬ್ಬಲಕ್ಷ್ಮೀ… ಹೀಗೆ ಮಹಾನ್ ಸಾಧಕರ ದಂಡು ನಮ್ಮ ಸಂಗೀತವನ್ನು ಜನರ ಹೃದಯ ಹೃದಯದಲ್ಲೂ ಬಿತ್ತಿ ಮುಗಿಲೆತ್ತರದ ಸ್ಥಾನದಲ್ಲಿ ಕೂಡಿಸಿದ್ದರು. ನಮ್ಮಲ್ಲಿ ಇತ್ತೀಚಿನ ದಿನಗಳಲ್ಲಿ ಆ ಥರದ ದೈವದತ್ತವಾದ ಸಾಧಕರು ಏಕೇ ಬರ್ತಿಲ್ಲ! ಅದಕ್ಕೆ ಏನು ಕೊರತೆ? ಅದಕ್ಕೆ ಕಾರಣ ಸಂಗೀತದ ಮಿತಿಮೀರಿದ ವ್ಯಾಪಾರೀಕರಣ. ನೀ ಕೊಟ್ಟಷ್ಟು ದುಡ್ಡಿಗೆ ಸಂಗೀತ […]

‘ಶಾಸ್ತ್ರೀಯ ಸಂಗೀತದ ಸ್ವಂತಿಕೆ-ಶ್ರೀಮಂತಿಕೆ ಉಳಿಯಬೇಕು’

ರಂಗಸ್ವಾಮಿ ಮೂಕನಹಳ್ಳಿ

‘ಶಾಸ್ತ್ರೀಯ ಸಂಗೀತದ  ಸ್ವಂತಿಕೆ-ಶ್ರೀಮಂತಿಕೆ ಉಳಿಯಬೇಕು’
ರಂಗಸ್ವಾಮಿ ಮೂಕನಹಳ್ಳಿ

ಮೈಸೂರಿನ ಕೊಳಲುವಾದಕ ಚಂದನ್ ಕುಮಾರ್ ಪ್ರಖ್ಯಾತ ಸಂಗೀತ ಪರಂಪರೆಯ ಕುಟುಂಬಕ್ಕೆ ಸೇರಿದವರು; ಪಿಟೀಲು ವಾದನದ ದಂತಕತೆ ಎನ್ನಿಸಿದ ಸಂಗೀತ ರತ್ನ ಟಿ.ಚೌಡಯ್ಯ ಅವರ ಮರಿಮೊಮ್ಮಗ. ಹಾಗಾಗಿ ಬಾಲ್ಯದಿಂದಲೇ ಸಂಗೀತದ ವಾತಾವರಣದಲ್ಲಿ ಬೆಳೆದ ಚಂದನ್ ಕುಮಾರ್ ಅವರದು ಕೊಳಲು ನುಡಿಸುವಿಕೆಯ ಹೊಸ ಸಾಧ್ಯತೆಗಳತ್ತ ಸದಾ ತುಡಿಯುವ ಸೃಜನಶೀಲ ಮನಸ್ಸು. ಹಾಗಾಗಿ ಅವರ ಪ್ರತಿಯೊಂದು ಸಂಗೀತ ಕಛೇರಿ ತಾಜಾತನದಿಂದ ಕೂಡಿರುತ್ತದೆ. ಮೈಸೂರು ವಿವಿಯಿಂದ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಂಗೀತ ಕ್ಷೇತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುವುದು ಚಂದನ್ ಅವರ ಇನ್ನೊಂದು ವಿಶೇಷ. […]

ದಿಢೀರ್ ದುಡ್ಡು ಈಗಿನ ಟ್ರೆಂಡ್!

-ಮನೋಜವಂ ಆತ್ರೇಯ

ಸಂಗೀತ ಕ್ಷೇತ್ರ ಬದಲಾಗಬೇಕಂದ್ರೆ ಸಂಗೀತ ಬದಲಾಗಬೇಕಿಲ್ಲ, ಕೇಳುಗರು ಬದಲಾಗಬೇಕಿಲ್ಲ; ಆದರೆ ಕೇಳುಗರ, ಹಾಡುವವರ ಮನಃಸ್ಥಿತಿ ಬದಲಾಗಬೇಕು. -ಮನೋಜವಂ ಆತ್ರೇಯ ಈಗಿನ ಕಾಲದಲ್ಲಿ ಸಂಗೀತಕ್ಕಿಂತ ಸೌಂಡ್‍ಗೆ ಹೆಚ್ಚು ಬೆಲೆ ಸಿಗ್ತಾ ಇದೆ. ಅಂದ್ರೆ ಹೀಗೆ ಕೇಳಿಸ್ಬೇಕು, ಇಷ್ಟು ಚೆನ್ನಾಗಿ ಕೇಳಿಸಬೇಕು, 5.1ನಲ್ಲಿ ಕೇಳಿಸಬೇಕು, ಸ್ಟೀರಿಯೋ ಹಿಂಗಿರಬೇಕು. ಹೀಗಾಗಿ ಈಗ ತಾಂತ್ರಿಕತೆಗೆ ಹೆಚ್ಚಿನ ಆದ್ಯತೆ ಇದೆ. ಸಂಗೀತಕ್ಕೆ ಹಿಂದೆ ಇದ್ದ ಒತ್ತು ಕಡಿಮೆಯಾಗಿದೆ. ಲಿರಿಕ್ಸ್ ಸರಿಯಾಗಿ ಕೇಳ್ಸೋದಿಲ್ಲ, ಲಿರಿಕ್ಸ್‍ಗೆ ಇಂಥದೇ ಆದ ಅರ್ಥ ಇರೋಲ್ಲ. ಈಗ ಎಲ್ಲವನ್ನೂ ನೇರವಾಗಿ ಹೇಳುವ […]

ಆರಕ್ಕೇಳದ ಮೂರಕ್ಕಿಳಿಯದ ಸರ್ಕಾರ ಕಾಣದ ಅಡಿಗಲ್ಲು-ರಿಬನ್ ಕಟ್!

-ರಮಾನಂದ ಶರ್ಮಾ

ಆರಕ್ಕೇಳದ ಮೂರಕ್ಕಿಳಿಯದ ಸರ್ಕಾರ ಕಾಣದ ಅಡಿಗಲ್ಲು-ರಿಬನ್ ಕಟ್!
-ರಮಾನಂದ ಶರ್ಮಾ

ಯಡಿಯೂರಪ್ಪನವರ ಸಾಧನೆ ಕಳಪೆ ಏನಲ್ಲ. ಆದರೆ, ಉತ್ತಮ ಎಂದು ಎದೆ ತಟ್ಟಿ ಹೇಳುವಂತಿಲ್ಲ. ಭಿನ್ನಮತೀಯರು ಮತ್ತು ಪಕ್ಷಾಂತರಿಗಳನ್ನು ನಿಭಾಯಿಸಿ ಕಾಲದೂಡುವುದು ಹೇಗೆನ್ನುವ ನಿಟ್ಟಿನಲ್ಲಿ ಅವರ ಸಾಧನೆ ರಾಜಕೀಯ ಶಾಸ್ತದ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅಧ್ಯಾಯ! -ರಮಾನಂದ ಶರ್ಮಾ ಅತಿವೃಷ್ಟಿ, ಭಿನ್ನಮತ ಮತ್ತು ಕೋವಿಡ್ ಮಧ್ಯೆ ಗದ್ದುಗೆ ಏರಿದ ಯಡಿಯೂರಪ್ಪನವರಿಗೆ ಸಿಂಹಾಸನ ಮುಳ್ಳಿನ ಹಾಸಿಗೆ ಆಗಿದೆಯೇ ವಿನಾ, ಒಂದೇ ಒಂದು ದಿನ ಹೂವಿನ ಹಾಸಿಗೆಯಾಗಲಿಲ್ಲ. ವಿಪರ್ಯಾಸವೋ ಅಥವಾ ವಿಚಿತ್ರವೋ, ಅಧಿಕಾರ ಸ್ವೀಕರಿಸಿದ ದಿನದಿಂದ ‘ಮುಖ್ಯಮಂತ್ರಿ ಬದಲಾವಣೆ’ ಎನ್ನುವ ವದಂತಿಗಳ […]

ಮಲೆನಾಡ ಮಡಿಲಲ್ಲಿ ಸಮಾಜಮುಖಿ ನಡಿಗೆ

ವಿಜಯಲಕ್ಷ್ಮಿ ಡಿ. ‘ಸಮಾಜಮುಖಿ’ಯ ಸಾಗರ ನಡಿಗೆಯ ನೆನಪಿನ್ನೂ ಗರಿಗರಿಯಾಗಿದೆ. ಆಗಲೇ ಓಡೋಡಿ ಬಂತು ತರೀಕೆರೆಗೆ ಸಮಾಜಮುಖಿ ನಡಿಗೆ ಬಳಗ! ಏಪ್ರಿಲ್ 9, 10 ಮತ್ತು 11ರ ನಡಿಗೆಗೆ ತಂಡದವರೆಲ್ಲ ಕೆಮ್ಮಣ್ಣುಗುಂಡಿಯ ಪದತಲದ ವಸತಿ ಸ್ಥಳಕ್ಕೆ ಮೊದಲ ದಿನ ಬೆಳಗ್ಗೆಯೇ ಬಂದು ಸೇರಿದ್ದರು. ಈ ಬಾರಿಯ ವಿಶೇಷವೆಂದರೆ ಕುಟುಂಬದ ಸದಸ್ಯರು, ಯುವಕರ ದಂಡು ಅದರಲ್ಲೂ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು. ಸಹ್ಯಾದ್ರಿಯ ಗಿರಿಶ್ರೇಣಿ ಮಡಿಲ ನಮ್ಮ ತಂಗುದಾಣದ ಪರಿಸರ, ಅದಕ್ಕೆ ಮೆರುಗು ನೀಡುವಂತಿದ್ದ ನಡಿಗೆಯ ಸ್ನೇಹಿತರ ನಲಿವು, ಆಯೋಜಕರ ಹುಮ್ಮಸ್ಸು […]

ಬರಹಗಾರನ ಮನೋಧರ್ಮ ಬಿಂಬಿಸುವ ಕೃತಿ

ವಸುಧೇಂದ್ರ ‘ಕೆಂಪು ಗಿಣಿ’ಯಂತಹ ಕತೆಗಳನ್ನು ಬರೆದು, ಜಾಗತೀಕರಣದ ಕೇಡಿಗತವನ್ನು, ಅದರ ರೂಕ್ಷ ಕ್ರೌರ್ಯವನ್ನು ಈಗಲೂ ಓದುಗರು ಕೆಂಧೂಳು ಒದರಿಕೊಳ್ಳುವಂತೆ ಸಂವೇದನೆ ಉಂಟು ಮಾಡಿದ್ದಾರೆ. ಆದರೆ, ನಿಮ್ಮ ನಿಕಟ ಓದಿನ ಗ್ರಹಿಕೆಯಂತೆ ‘ತೇಜೋ ತುಂಗಭದ್ರ’ ಕಾದಂಬರಿಯಲ್ಲಿ ವಸುಧೇಂದ್ರ ಸನಾತನ ಮೌಲ್ಯಗಳನ್ನು ಮನ್ನಿಸುವಂತಿದ್ದರೆ, ನಿಜಕ್ಕೂ ಪ್ರತಿಗಾಮಿ ನಡೆಯೇ ಸರಿ. ಆದರೆ ಕೃತಿಯ ವಸ್ತು ಮಧ್ಯಕಾಲೀನ ಕಾಲಘಟ್ಟವೇ ಆಗಿ ಆಯ್ಕೆಗೊಂಡಿರುವುದು ಯಾಕೆ? ಗತಮುಖಿಯಾದ ವಸ್ತು ಸಹಜವಾಗಿ ಮೇಲ್ವರ್ಗದ ನೆಲೆಯ ನಿರೂಪಣೆ ಆಗಿರಬಹುದೆ? ಕಾದಂಬರಿಕಾರನ ವಸ್ತು ಆಯ್ಕೆಯು ಕೂಡ ಆತನ ಮನೋಧರ್ಮವನ್ನು ಎತ್ತಿಹಿಡಿಯುತ್ತದೆ […]

ಮಾರ್ಚ್ ಸಂಚಿಕೆಯ ಮುಖ್ಯಚರ್ಚೆ ವೈಚಾರಿಕ ಪ್ರಾಮಾಣಿಕತೆಯ ಪರೀಕ್ಷೆ

ಆರೆಸ್ಸೆಸ್ ಮಾಡುತ್ತಿರುವ ತಪ್ಪುಗಳೇನು ಎಂದು ಸಮಾಜಮುಖಿ ಪತ್ರಿಕೆಯು ಮುಖ್ಯಚರ್ಚೆ ಘೋಷಿಸಿದಾಗ ಬಹುತೇಕರು ಈ ಚರ್ಚೆ ಆರೆಸ್ಸೆಸ್ಸಿನ ಮೂಲಸಿದ್ಧಾಂತಗಳನ್ನು ಟೀಕಿಸುವ-ಹೀಯಾಳಿಸುವ ಚರ್ಚೆಯೆಂದೇ ಭಾವಿಸಿದ್ದಿರಬೇಕು. ಆರೆಸ್ಸೆಸ್ ಒಂದು ದೇಶ ವಿಭಜಕ ಮತೀಯ ಶಕ್ತಿ ಹಾಗೂ ಮನುವಾದಿ-ಬ್ರಾಹ್ಮಣವಾದಿ ಸಂಘಟನೆಯೆಂದು ಜರಿಯುವ ಚರ್ಚೆಯೆಂದು ಅಂದುಕೊಂಡಿದ್ದಿರಬೇಕು. ಆದರೆ ಈ ಚರ್ಚೆಯಲ್ಲಿ ಆರೆಸ್ಸೆಸ್ಸಿನ ತತ್ವ-ಸಿದ್ಧಾಂತಗಳನ್ನು ಚರ್ಚಿಸುವುದು ಪತ್ರಿಕೆಯ ಉದ್ದೇಶವಾಗಿರಲಿಲ್ಲ. ಇದನ್ನು ಮಾಡುವ ಚರ್ಚೆಗಳು ಈಗಾಗಲೇ ಬಹಳಷ್ಟು ನಡೆಯುತ್ತಲೇ ಇವೆ. ಈ ಚರ್ಚೆಗಳನ್ನು ಕುರಿತು ಬೇಕು-ಬೇಡವೆಂದು ಹೇಳುವ ಪ್ರಯತ್ನವೂ ಇದಲ್ಲ. ಪ್ರತಿಯೊಂದು ಸಂಘಟನೆಗೂ ತನ್ನ ನಂಬಿಕೆಯನ್ನು ಪ್ರಚುರಪಡಿಸುವ […]

ಆರ್ ಎಸ್ ಎಸ್ ಎಂಬ ಸಂಸ್ಥೆ ಅಸ್ತಿತ್ವದಲ್ಲಿ ಇರುವುದೇ ತಪ್ಪು!

-ಡಾ.ಟಿ.ಆರ್.ಚಂದ್ರಶೇಖರ

ಅಸಮಾನತೆಯ, ಶ್ರೇಣೀಕರಣದ ಪ್ರಣಾಳಿಕೆಯ ಪ್ರತಿನಿಧಿಯಾಗಿ ಆರ್ ಎಸ್ ಎಸ್ ಸಂಸ್ಥೆಯ ಇರುವಿಕೆಯೇ ತಪ್ಪು. ಈ ವ್ಯವಸ್ಥೆಯ ಅಮಾನವೀಯ, ರೂಕ್ಷತನವನ್ನು ಪ್ರತಿನಿಧಿಸುವ ಸಂಸ್ಥೆಯನ್ನು ‘ಸಂಸ್ಥೆ ಸರಿಯಿದೆ, ಆದರೆ ಅದರ ಕಾರ್ಯಾಚರಣೆ ತಪ್ಪಾಗಿದೆ’ ಎಂದು ಹೇಳುವುದು ಹೇಗೆ? -ಡಾ.ಟಿ.ಆರ್.ಚಂದ್ರಶೇಖರ ಆರ್ ಎಸ್ ಎಸ್ ಮಾಡಿರುವ ತಪ್ಪುಗಳೇನು ಎಂಬ ವಿಷಯವನ್ನು ಚರ್ಚೆಗೆ ಇಟ್ಟಿದ್ದೀರಿ. ನಿಮ್ಮ ಪ್ರಶ್ನೆಯನ್ನು ಸೂಕ್ಷ್ಮವಾಗಿ ಕೆದಕಿದರೆ ‘ಆರ್‍ಎಸ್‍ಎಸ್ ಸರಿ, ಆದರೆ ಅದರ ಕಾರ್ಯಸೂಚಿ ಮತ್ತು ಕಾರ್ಯಾಚರಣೆ ತಪ್ಪು’ ಎಂಬ ಅದರ ಒಳಾರ್ಥ ತಿಳಿಯುತ್ತದೆ. ಆರ್ ಎಸ್ ಎಸ್ ಎಂಬ […]

ಆರೆಸ್ಸೆಸ್ ಮತ್ತು ಸ್ವವಿಮರ್ಶೆ

-ವೆಂಕಟೇಶ ಮಾಚಕನೂರ

ಆರೆಸ್ಸೆಸ್ ಮತ್ತು ಸ್ವವಿಮರ್ಶೆ
-ವೆಂಕಟೇಶ ಮಾಚಕನೂರ

ದೇಶದ ಜನ ಇತರ ಪಕ್ಷಗಳು ಎಸಗುತ್ತ ಬಂದ ಪ್ರಮಾದಗಳನ್ನು ನೋಡಿ, ಬೇಸತ್ತು, ಆರೆಸ್ಸೆಸ್–ಭಾಜಪದ ತಪ್ಪುಗಳ ಕುರಿತು ಉಪೇಕ್ಷೆ ತಾಳಿದ್ದರೆ ಅಚ್ಚರಿಯಿಲ್ಲ. ಕೆಲವು ವಿಷಯಗಳಲ್ಲಾದರೂ ಭಾಜಪ ಜನರಲ್ಲಿ ವಿಶ್ವಾಸ ಮೂಡಿಸಿದ್ದು ನಿಜ. ಆದ್ದರಿಂದ ಆತ್ಮಾವಲೋಕನದ ತುರ್ತು ಅವಶ್ಯಕತೆ ಇರುವುದು ಆರೆಸ್ಸೆಸ್–ಭಾಜಪದ ವಿರೋಧಿಗಳಿಗೆ! -ವೆಂಕಟೇಶ ಮಾಚಕನೂರ ಆರೆಸ್ಸೆಸ್ ಕುರಿತು ದಿಟ್ಟ ಲೇಖನಗಳನ್ನು ಪ್ರಕಟಿಸುವ ಸಾಹಸಕ್ಕೆ ಕೈಹಾಕಿ ಸಮಾಜಮುಖಿ ಸ್ತುತ್ಯ ಕಾರ್ಯವನ್ನೇ ಮಾಡಿದೆ. ಈ ಕುರಿತು ಚರ್ಚೆಗೆ ವಿದ್ವತ್ಪೂರ್ಣ ಲೇಖನಗಳೂ ಬಂದದ್ದು, ಆ ಲೇಖನಗಳನ್ನು ಆಧರಿಸಿ ತನ್ನ ತಪ್ಪುತಡೆ, ಓರೆಕೋರೆಗಳನ್ನು ತಿದ್ದಿಕೊಳ್ಳುವುದು, […]

ನನ್ನ ಲೇಖನ ಅನರ್ಹವಾಗಿತ್ತೇ…?

-ಡಾ.ಟಿ.ಆರ್.ಚಂದ್ರಶೇಖರ, ಬೆಂಗಳೂರು.

–ಡಾ.ಟಿ.ಆರ್.ಚಂದ್ರಶೇಖರ, ಬೆಂಗಳೂರು. ‘ಸಮಾಜಮುಖಿ’ ಪತ್ರಿಕೆಯ ಮಾರ್ಚ್ ಸಂಚಿಕೆಯನ್ನು ಇಂದು ಓದಿದೆ. ಇದರಲ್ಲಿನ ಲೇಖನಗಳು ಉತ್ಕೃಷ್ಟ ವಾಗಿವೆ. ದಂಡಾವತಿ ಅವರ ಲೇಖನ ಮೀಸಲಾತಿ ಬಗ್ಗೆ ಚಾರಿತ್ರಿಕ ನೋಟವನ್ನು ಹಾಗೂ ಪ್ರಸ್ತುತ ಗೊಂದಲದ ಚಿತ್ರವನ್ನು ನೀಡುತ್ತದೆ. ಇದೇ ರೀತಿಯಲ್ಲಿ ಆರ್.ಎಸ್.ಎಸ್. ಬಗೆಗಿನ ಪ್ರತಿಕ್ರಿಯೆಗಳು ಸೃಜನಶೀಲವಾಗಿವೆ, ಚಿಂತನಾ ಪ್ರಧಾನವಾಗಿವೆ. ಇದರ ಬಗ್ಗೆ ನಾನೂ ನನ್ನ ಪ್ರತಿಕ್ರಿಯೆ ಕಳುಹಿಸಿದ್ದೆ (ಐ ಟೂ ರ್ಯಾನ್ ಎಂದಂತೆ). ಅದು ಪ್ರಕಟವಾಗಿಲ್ಲ. ಸಂಪಾದಕರ ಆಯ್ಕೆಯ ಸ್ವಾತಂತ್ರ್ಯವನ್ನು ನಾನು ಪ್ರಶ್ನೆ ಮಾಡುವುದಿಲ್ಲ. ಆದರೆ ಇದಕ್ಕೆ ತಮ್ಮ ಸಂಪಾದಕೀಯ ನಿಯಮದಲ್ಲಿ […]

ಬತ್ತಲಾಗದೆ ಬಯಲು ಸಿಕ್ಕದಿಲ್ಲಿ

-ಎನ್.ಬೋರಲಿಂಗಯ್ಯ

ಸುಧಾರಣೆ ಅನಿವಾರ್ಯವಾಗಿರುವ ಈಗಿನ ಕಾಲಮಾನದ ನಮ್ಮ ಪ್ರಸ್ತುತ ಬದುಕನ್ನು ಕುರಿತ ಕೆಲವು ಟಿಪ್ಪಣಿಗಳನ್ನು ಇಲ್ಲಿ ಮಂಡಿಸಬಯಸಿದ್ದೇನೆ. -ಎನ್.ಬೋರಲಿಂಗಯ್ಯ ನಮ್ಮ ಆಲೋಚನೆಗಳು ನಮ್ಮ ಬದುಕನ್ನು ರೂಪಿಸುತ್ತವೆಯೋ? ಅಥವಾ ನಮ್ಮ ಬದುಕು ನಮ್ಮ ಆಲೋಚನೆಗಳನ್ನು ರೂಪಿಸುತ್ತದೋ? ಈ ಇಂಥ ಅಷ್ಟೇನೂ ಸುಗಮ ಚಕ್ರವ್ಯೂಹವಲ್ಲದ ಸಂಕೀರ್ಣ ಪ್ರಶ್ನೆಗಳ ವಿಶ್ಲೇಷಣೆಗೆ ಈಗ ಕೈ ಹಚ್ಚದೆ ಇಲ್ಲಿಯ ಮೊದಲ -ನಮ್ಮ ಆಲೋಚನೆಗಳು ನಮ್ಮ ಬದುಕನ್ನು ರೂಪಿಸುತ್ತವೆ- ವಿಚಾರದ ಪಕ್ಷಪಾತಿಯಾಗಿ ಸುಧಾರಣೆ ಅನಿವಾರ್ಯವಾಗಿರುವ ಈಗಿನ ಕಾಲಮಾನದ ನಮ್ಮ ಪ್ರಸ್ತುತ ಬದುಕನ್ನು ಕುರಿತ ಕೆಲವು ಟಿಪ್ಪಣಿಗಳನ್ನು ಇಲ್ಲಿ […]

1 2 3 10