ಅನಿಸಿಕೆಗಳು

ವಲಸಿಗರಿಗೆ ನಗರವೇ ಗತಿ ಪ್ರೊ.ಎಂ.ಎಸ್.ಶ್ರೀರಾಮ್ ಅವರು ವಲಸೆ ಕಾರ್ಮಿಕರ ಸಮಸ್ಯೆಗಳ ಕುರಿತು ಬರೆದಿರುವ ಲೇಖನ ಇಷ್ಟವಾಯಿತು. ಲೇಖಕರು ‘ಸಾಮಾಜಿಕ ಸುರಕ್ಷತೆ’ಯ ಮೇಲೆ ಹೆಚ್ಚು ಒತ್ತು ನೀಡಿದ್ದಾರೆ. ಹಳ್ಳಿಗಳಿಂದ ನಗರಗಳಿಗೆ ಅಥವಾ ನಗರಗಳಿಂದ ಹಳ್ಳಿಗಳಿಗೆ ಕಾರ್ಮಿಕರು ವಲಸೆ ಹೋಗುವುದಕ್ಕೆ ಈ ‘ಸಾಮಾಜಿಕ ಸುರಕ್ಷತೆ’ಯ ಪಾತ್ರ ದೊಡ್ಡದು ಎಂದು ಹೇಳಿದ್ದಾರೆ. ಮುಂದುವರಿದು ‘ಗ್ರಾಮೀಣ ಪ್ರದೇಶದಲ್ಲಿ ಊಟವಿಲ್ಲದಿದ್ದರೂ, ಬಡತನವಿದ್ದರೂ, ಸಾಮಾಜಿಕವಾಗಿ ಜನ ತಮ್ಮನ್ನು ನೋಡಿಕೊಳ್ಳುತ್ತಾರೆ ಎನ್ನುವ ಭರವಸೆಯಿಂದ ಜನ ಸ್ವಂತ ಊರುಗಳಿಗೆ ಮರಳುತ್ತಾರೆ’ ಎಂದು ಗುರುತಿಸಿದ್ದಾರೆ. ಆದರೆ ಈ ‘ಸಾಮಾಜಿಕ ಭರವಸೆ’ […]

ಸಾಂಕ್ರಾಮಿಕ ರೋಗ ಸಂದರ್ಭದ ಸ್ಪಂದನೆ ಎಸ್.ಎಲ್.ಭೈರಪ್ಪ ಮಾದರಿ

-ಡಾ.ಬಿ.ವಿ.ವಸಂತಕುಮಾರ್

ಸಾಂಕ್ರಾಮಿಕ ರೋಗ ಸಂದರ್ಭದ ಸ್ಪಂದನೆ ಎಸ್.ಎಲ್.ಭೈರಪ್ಪ ಮಾದರಿ
-ಡಾ.ಬಿ.ವಿ.ವಸಂತಕುಮಾರ್

ಎಸ್.ಎಲ್.ಭೈರಪ್ಪ ಅವರನ್ನು ಕನ್ನಡ ಸಾಹಿತ್ಯಲೋಕ ಹೇಗೆ ಕಂಡಿದೆ ಎಂಬ ಚರ್ಚೆ ಸೈದ್ಧಾಂತಿಕವಾಗಿ ಮಹತ್ವದ್ದಾದರೂ ಇಲ್ಲಿ ಅದು ಅಪ್ರಸ್ತುತ. ಆದರೆ ಎಸ್.ಎಲ್.ಭೈರಪ್ಪನವರು ವ್ಯಕ್ತಿಯಾಗಿ ಸಾಹಿತಿಯಾಗಿ ಸಾಂಕ್ರಾಮಿಕ ರೋಗವನ್ನು ಕಂಡಿರುವುದು, ಕಾಣುವಂತೆ ಮಾಡಿರುವುದು ಗಮನಾರ್ಹ. ರೋಗ ವ್ಯಕ್ತಿ ಮತ್ತು ಕುಟುಂಬವನ್ನು ಸಂಕಷ್ಟಕ್ಕೀಡು ಮಾಡಿದರೆ, ಸಾಂಕ್ರಾಮಿಕ ರೋಗ ಇಡೀ ಹಳ್ಳಿ, ಸಮಾಜ, ದೇಶ, ವಿಶ್ವದ ಒಟ್ಟಾರೆಯ ಬದುಕನ್ನು ಸಂಕಟಕ್ಕೀಡು ಮಾಡುತ್ತದೆ. ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ. ಹಾಗೆ ವ್ಯವಸ್ಥೆ ಬುಡಮೇಲಾಗುವುದೆಂದರೆ ಪರೋಕ್ಷವಾಗಿ ವ್ಯಕ್ತಿ ಮತ್ತು ಕುಟುಂಬಗಳು ಬುಡಮೇಲಾಗುವುದು ಎಂದೇ ಅರ್ಥ. ಈ […]

ಸಾಂಕ್ರಾಮಿಕ ರೋಗ ಕನ್ನಡ ಸಾಹಿತ್ಯಕ್ಕೆ ಕೇಂದ್ರ ವಸ್ತುವಾಗಿ ಒದಗಿಲ್ಲ!

ಡಾ.ಬಾಳಾಸಾಹೇಬ ಲೋಕಾಪುರ

ಸಾಂಕ್ರಾಮಿಕ ರೋಗ ಕನ್ನಡ ಸಾಹಿತ್ಯಕ್ಕೆ ಕೇಂದ್ರ ವಸ್ತುವಾಗಿ ಒದಗಿಲ್ಲ!
ಡಾ.ಬಾಳಾಸಾಹೇಬ ಲೋಕಾಪುರ

ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಒಟ್ಟಾರೆಯಾಗಿ ನೋಡಿದರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಪೂರ್ಣ ಪ್ರಮಾಣದ ಚಿತ್ರಣವೇ ಕಾಣುವುದಿಲ್ಲ. ಇಂತಹ ಮಹತ್ವದ ಸಂಗತಿಯನ್ನು ಕನ್ನಡ ಲೇಖಕರು ತಮ್ಮ ಸಾಹಿತ್ಯದ ವಸ್ತುವನ್ನಾಗಿ ಏಕೆ ಮಾಡಿಕೊಂಡಿಲ್ಲ ಎನ್ನುವ ಕುತೂಹಲ ಮತ್ತು ಆಶ್ಚರ್ಯ ಹುಟ್ಟಿಸುವ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ. ಕಾದಂಬರಿ ಪ್ರಕಾರದ ಸಾಹಿತ್ಯ ಕನ್ನಡದಲ್ಲಿ ವಿಪುಲವಾಗಿ ಬಂದಿದೆ. ನವೋದಯ ಕಾಲಘಟ್ಟದಿಂದ ಮೊದಲ್ಗೊಂಡು ಈ ಕಾಲದ ಅನೇಕ ಲೇಖಕರು ಕಾದಂಬರಿ ಪ್ರಕಾರವನ್ನು ಗಂಭೀರವಾಗಿ ತೆಗೆದುಕೊಂಡು ಕೃಷಿ ಮಾಡುತ್ತಿದ್ದಾರೆ. ಕಾದಂಬರಿ ಏನು ಇತಿಹಾಸವಲ್ಲ. ಆದರೆ ಕಾದಂಬರಿ […]

ಜಾನಪದದಲ್ಲಿ ಸಾಂಕ್ರಾಮಿಕ ರೋಗಗಳು

ಡಾ.ವಿಜಯಲಕ್ಷ್ಮಿ ಮನಾಪುರ

ಜಾನಪದದಲ್ಲಿ ಸಾಂಕ್ರಾಮಿಕ ರೋಗಗಳು
ಡಾ.ವಿಜಯಲಕ್ಷ್ಮಿ ಮನಾಪುರ

ಯಾವುದೇ ತಂತ್ರಜ್ಞಾನ, ವೈಜ್ಞಾನಿಕತೆ ಆವಿಷ್ಕಾರಗೊಂಡಿಲ್ಲದ ಕಾಲಘಟ್ಟದಲ್ಲಿಯೇ ಜನಪದರು ತಮ್ಮ ಬದುಕಿಗೆ ಕಂಟಕಪ್ರಾಯವಾಗಿದ್ದ ಗಂಟು, ಪ್ಲೇಗು, ಸಿಡುಬು, ಕಾಲರಾ, ದಡಾರದಂತಹ ದೊಡ್ಡ ರೋಗಗಳಿಗೆ ಮುಖಾಮುಖಿಯಾಗಿದ್ದರು. ಜನಪದರು ರೋಗಗಳು ಬರುವ ಮುಂಚೆ ಹಾಗೂ ಬಂದನಂತರ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಸಹಜ ಜೀವನದಲ್ಲಿಯೇ ರೂಢಿಸಿಕೊಂಡಿದ್ದರು. ಅವುಗಳ ಮೌಖಿಕ ಜಾಡು ಹಿಡಿದು ಎಚ್ಚರಿಕೆಯಿಂದ ವಿಶ್ಲೇಷಿಸಿಕೊಳ್ಳುವುದು ಅತ್ಯಗತ್ಯ.  ಮನುಕುಲವನ್ನು ಕಾಡಿದ ಮಾರಕ ರೋಗಕ್ಕೆ ಜನಪದ ಮನಸ್ಸು ಮೌಖಿಕ ಪರಂಪರೆಯಲ್ಲಿ ಕಲ್ಪಿಸಿಕೊಂಡಿದ್ದ ವಿಧಾನ, ನಿದಾನ, ನಂಬಿಕೆ, ಆಚರಣೆ, ಐತಿಹ್ಯ, ಸಾಹಿತ್ಯ, ಬೈಗುಳ ಮುಂತಾದ ಮಾಹಿತಿಗಳು ಮುಖ್ಯ. […]

1904ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಕಂಡ ಕಪ್ಪು ಪ್ಲೇಗ್

ಸಂಗ್ರಹ: ಎಚ್.ಜೆ.ಸರಸ್ವತಿ

1904ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ  ಗಾಂಧೀಜಿ ಕಂಡ ಕಪ್ಪು ಪ್ಲೇಗ್
ಸಂಗ್ರಹ: ಎಚ್.ಜೆ.ಸರಸ್ವತಿ

ಅದು ಭಯಂಕರ ರಾತ್ರಿಯಾಗಿತ್ತು. ಗಾಂಧೀಜಿಗೆ ರೋಗಿಗಳ ಸೇವೆ ಹೊಸದಾಗಿರಲಿಲ್ಲ. ಆದರೆ ಕಪ್ಪು ಪ್ಲೇಗ್ ತಗಲಿದವರ ಶುಶ್ರೂಷೆ ಇದೇ ಮೊದಲಿನದಾಗಿತ್ತು… ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷ್ ವಸಾಹತುಶಾಹಿಗಳ ಕೃಷಿಭೂಮಿಯಲ್ಲಿ ಕೆಲಸ ಮಾಡಲು ಭಾರತದಿಂದ ಬಡ ಕೃಷಿಕಾರ್ಮಿಕರನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಇವರು ನಿರ್ದಿಷ್ಟ ಅವಧಿಯವರೆಗೆ ಬಿಳಿಯ ಯಜಮಾನರ ಕೈಕೆಳಗೆ ಕರಾರು ಕೂಲಿಗಳಾಗಿರುತ್ತಿದ್ದರು. ಆದ್ದರಿಂದ ಇವರನ್ನು ‘ಗಿರಿಮಿಟಿಯ’ ಗಳೆಂದು ಕರೆಯಲಾಗುತ್ತಿತ್ತು. ಬಿಹಾರಿಗಳು, ತೆಲುಗರು, ತಮಿಳರು, ಗುಜರಾತಿಗಳು ಈ ವಲಸೆ ಕಾರ್ಮಿಕರ ಗುಂಪಿನಲ್ಲಿದ್ದರು. ಇವರು ವಾಸಮಾಡುವ ಸ್ಥಳಗಳನ್ನು ‘ಕೂಲಿಲೊಕೇಷನ್’, ‘ಕೂಲಿಕೇರಿ’, ‘ಘೆಟ್ಟೊ’ ಎಂದು ಕರೆಯಲಾಗುತ್ತಿತ್ತು. […]

ಅನಿಸಿಕೆಗಳು

‘ಹಾಲಿವಾಣ’ದ ಎಲೆ ಮೇಲೆ ಗಣಿಯ ದೂಳು! ಜೂನ್ ಸಂಚಿಕೆ ಚೆನ್ನಾಗಿದೆ. ಅಂದಹಾಗೆ ‘ಹಣವಿದೆ, ಅರಣ್ಯ ಬೆಳೆಸುವವರಿಲ್ಲ!’ (ಶ್ರೀಶೈಲ ಆಲದಹಳ್ಳಿ) ಕಿರುಲೇಖನ ಓದಿದೆ. ಈ ಸರ್ಕಾರಿ ವ್ಯವಸ್ಥೆಯ ಬೇಜವಾಬ್ದಾರಿ ಕುರಿತು ಮೈ ಎಲ್ಲಾ ಉರಿದು ಹೋಯ್ತು. ಏಕೆಂದರೆ ಈ ಸಂಡೂರು ಮತ್ತು ಹೊಸಪೇಟೆಯ ಅರಣ್ಯದಲ್ಲಿ ನಡೆದ ಅಕ್ರಮ-ಮಿತಿಮೀರಿದ ಗಣಿಗಾರಿಕೆಯಿಂದ ನಮಗಾಗಿರೋದು ಬರೀ ಆರ್ಥಿಕ ನಷ್ಟವಷ್ಟೇ ಅಲ್ಲ, ಪಾರಿಸರಿಕ ಹಾಗು ಸಾಂಸ್ಕೃತಿಕ ನಷ್ಟಗಳೂ ಅನೇಕ. ‘ಹಾಲಿವಾಣ’ ಎಂಬುದು ಒಂದು ಮರದ ಹೆಸರು. ಅದು ಚಳಿಗಾಲದಲ್ಲಿ ಸುಂದರವಾದ ಹೂಗಳನ್ನು ಬಿಡುತ್ತದೆ. ಕುವೆಂಪು […]

ಭಗವಂತ ಕೊರೊನಾ ಅವತಾರ ಏಕೆ ಎತ್ತಿರಬಾರದು?

-ಎನ್.ಬೋರಲಿಂಗಯ್ಯ

ಭಗವಂತ ಕೊರೊನಾ ಅವತಾರ ಏಕೆ ಎತ್ತಿರಬಾರದು?
-ಎನ್.ಬೋರಲಿಂಗಯ್ಯ

ಕುವೆಂಪು 1935ರಷ್ಟು ಹಿಂದೆ ಯುವಕಯುವತಿಯರಿಗೆ ಕೊಟ್ಟಿದ್ದ ಕರೆ ಈಗ ನಿಜವಾಗುತ್ತಿದೆ. ಗುಡಿ ಚರ್ಚು ಮಸೀದಿಗಳ ಬಾಗಿಲು ಮುಚ್ಚುತ್ತಿವೆ. ಬರಿದಾಗುತ್ತಿದ್ದ ಹಳ್ಳಿಗಳು ಮತ್ತೆ ತುಂಬಿಕೊಂಡು ವ್ಯವಸಾಯ ಪುನಶ್ಚೇತನಗೊಳ್ಳುತ್ತಿದೆ. ದೇವರ, ಧರ್ಮದ ಹೆಸರಿನಲ್ಲಿ ಹರಡುತ್ತಿದ್ದ ಮೌಢ್ಯತೆಯ ಮಾರಿ ವಿಜ್ಞಾನ ದೀವಿಗೆಯ ಬೆಳಕಿನಲ್ಲಿ ಬಯಲಾಗುತ್ತಿದೆ. ಸಮಾಜಮುಖಿ ತನ್ನ ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳುಗಳ ಸಂಯುಕ್ತ ಮುಖ್ಯ ಚರ್ಚೆಯ ವಿಷಯಗಳಾಗಿ ಆಯ್ದುಕೊಂಡಿರುವ ‘ಕೊರೊನಾ ನಂತರದ ಯುಗದ ಗುಣಲಕ್ಷಣಗಳೇನು?’ ಮತ್ತು ‘ಕರ್ನಾಟಕದಲ್ಲಿ ಪರಿಸರ ಸಮತೋಲನ ಸಾಧಿಸುವಲ್ಲಿ ಯಶಸ್ವಿಯಾಗುತ್ತಿದ್ದೇವೆಯೇ?’ ಎಂಬ ಪರಸ್ಪರ ಪೂರಕ […]

ಸಾಮಾಜಿಕ ಜೀವನ ಕ್ರಮಗಳ ನೈತಿಕ ಶಕ್ತಿಯೇ ಸಾಂಕ್ರಾಮಿಕ ರೋಗಗಳಿಗೆ ಮದ್ದು

-ಡಾ.ಮೊಗಳ್ಳಿ ಗಣೇಶ್

ಸಾಮಾಜಿಕ ಜೀವನ ಕ್ರಮಗಳ ನೈತಿಕ ಶಕ್ತಿಯೇ ಸಾಂಕ್ರಾಮಿಕ ರೋಗಗಳಿಗೆ ಮದ್ದು
-ಡಾ.ಮೊಗಳ್ಳಿ ಗಣೇಶ್

ಬಚ್ಚಿಟ್ಟ ಬಯಕೆಗಳೇ ನಮ್ಮ ಕನಸುಗಳು, ಒತ್ತಡದ ಮಾನಸಿಕ ಹಿಂಸೆಗಳೇ ಮನೋರೋಗಗಳು ಎಂದು ಮನೋವಿಶ್ಲೇಷಣೆ ಮಾಡಿದ ಸಿಗ್ಮಂಡ್ ಫ್ರಾಯ್ಡ್ ಆ ಮೂಲಕ ಮನುಷ್ಯರ ಭಯ, ಆತಂಕ, ತಳಮಳದ ವರ್ತನೆಗಳು ಮತ್ತು ಸ್ವಪ್ನಗಳ ಸಿದ್ಧಾಂತ ಮಂಡಿಸಿದ. ಆ ರೀತಿಯಲ್ಲಿ ಈ ಕೊರೋನಾ ಕಾಲದ ಜಾಗತಿಕ ಮನೋವಿಶ್ಲೇಷಣೆ ಆಗಬೇಕು. ವಿಕಾಸದ ಹಾದಿಯಲ್ಲಿ ಮಾನವ ಸಾಕಷ್ಟು ಸಾಂಕ್ರಾಮಿಕ ರೋಗಬಾಧೆಗಳನ್ನು ಅನುಭವಿಸಿ ಬಂದಿದ್ದಾನೆ. ಕೊರೋನಾ ಈ ಕಾಲದ ಒಂದು ಎಚ್ಚರಿಕೆಯ ಗಂಟೆ. ಎಲ್ಲ ರೋಗಗಳಿಗೂ ನಿಸರ್ಗದಲ್ಲೆ, ಸಮಾಜಗಳಲ್ಲೆ ಔಷಧವಿದೆ. ಯಾವ ಜೀವಿಯೂ ನಿಸರ್ಗಕ್ಕೆ ವೈರಿ […]

ಜಗತ್ತಿನ ತುರ್ತು ಅಗತ್ಯ ದಾರ್ಶನಿಕ ನಾಯಕತ್ವ

-ಡಾ.ಜ್ಯೋತಿ

ಜಗತ್ತಿನ ತುರ್ತು ಅಗತ್ಯ ದಾರ್ಶನಿಕ ನಾಯಕತ್ವ
-ಡಾ.ಜ್ಯೋತಿ

ಕೋವಿಡ್-19 ವೈರಸಿನಿಂದ ಸದ್ಯ ಪಾರಾದರೂ, ಮುಂದಿನ ದಿನಗಳಲ್ಲಿ ಹೊಸ ವೈರಸುಗಳು ಮನುಷ್ಯನ ನಿದ್ದೆ ಕೆಡಿಸಲಿವೆ. ಹಾಗಾಗಿ, ಇದು ಭೂಮಿ ನಮಗೆ ಕೊಡುತ್ತಿರುವ ಕೊನೆಯ ಎಚ್ಚರಿಕೆಯ ಕರೆಗಂಟೆಯೆಂದೇ ಭಾವಿಸಬೇಕು. ಹೆಸರಾಂತ ಗ್ರೀಕ್ ತತ್ವಶಾಸ್ತ್ರಜ್ಞ ಪ್ಲೇಟೋ ಹೇಳಿದಂತೆ, ರಾಜಕೀಯ ನಾಯಕತ್ವ ದಾರ್ಶನಿಕರ ಕೈಯಲ್ಲಿರಬೇಕು. ಯಾಕೆಂದರೆ, ಒಬ್ಬ ಉತ್ತಮ ದಾರ್ಶನಿಕನಲ್ಲಿ ಜ್ಞಾನ, ಬುದ್ಧಿವಂತಿಕೆ, ದೂರದೃಷ್ಟಿ, ಜೊತೆಗೆ ಸಂಯಮ ಅಂತರ್ಗತವಾಗಿರುತ್ತದೆ. ಇವೆಲ್ಲಾ ರಾಷ್ಟ್ರನಾಯಕರಲ್ಲಿ ಅತ್ಯಗತ್ಯವಾಗಿರಬೇಕಾದ ಲಕ್ಷಣಗಳು. ಪ್ರಸ್ತುತ, ಕೊರೊನ ವೈರಸ್ ದಾಳಿಯಿಂದ ಇಡೀ ವಿಶ್ವವೇ ತತ್ತರಿಸುತ್ತಿರುವಾಗ, ನಮ್ಮೆಲ್ಲಾ ನಾಗರಿಕ ವ್ಯವಸ್ಥೆಗಳು ದುರ್ಬಲವಾಗಿ ಕಾಣಿಸುತ್ತಿರುವುದಕ್ಕೆ, […]

ಭಾಷಣ ಘೋಷಣೆಗಳಾಚೆ ಪಶ್ಚಿಮಘಟ್ಟದ ಕಾಡು-ಪಾಡು

-ದಿನೇಶ್ ಹೊಳ್ಳ

ಭಾಷಣ ಘೋಷಣೆಗಳಾಚೆ ಪಶ್ಚಿಮಘಟ್ಟದ ಕಾಡು-ಪಾಡು
-ದಿನೇಶ್ ಹೊಳ್ಳ

ಒಂದು ವಿಧಾನ ಸೌಧ ಅಥವಾ ಮೈಸೂರು ಅರಮನೆ ಬಿದ್ದುಹೋದರೆ ಅಂತಹ ನೂರಾರು ಸೌಧ, ಅರಮನೆಗಳನ್ನು ಅದಕ್ಕಿಂತ ಭವ್ಯವಾಗಿ ನಿರ್ಮಿಸಬಹುದು, ಆದರೆ ಒಂದು ನದೀಮೂಲ ಅಳಿದುಹೋದರೆ ಅದನ್ನು ಮರುಸ್ಥಾಪಿಸಲು ನಮ್ಮಲ್ಲಿ ಯಾವುದೇ ವಿಜ್ಞಾನ, ತಂತ್ರಗಾರಿಕೆ ಇಲ್ಲ. ದಕ್ಷಿಣ ಭಾರತದ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ ಅಂದರೆ ಅದು ಪಶ್ಚಿಮ ಘಟ್ಟ ಮತ್ತು ಅಲ್ಲಿನ ನದೀ ಮೂಲ, ಮಳೆಕಾಡು. ಪಶ್ಚಿಮ ಘಟ್ಟಕ್ಕೆ ಏನಾದರೂ ಸಮಸ್ಯೆ ಆದರೆ ಅದು ಇಡೀ ದಕ್ಷಿಣ ಭಾರತದ ಜನಜೀವನದ ಮೇಲೆ ದುಷ್ಪರಿಣಾಮ ಬೀರಬಹುದು. […]

ಸುಸ್ಥಿರ ಪ್ರಯತ್ನಗಳಿಗಳಿಗೆ ವೇಗ ಮತ್ತು ವಿಸ್ತಾರದ ಅಗತ್ಯವಿದೆ

-ಮಂಜುನಾಥ ಡಿ.ಎಸ್.

ಸುಸ್ಥಿರ ಪ್ರಯತ್ನಗಳಿಗಳಿಗೆ  ವೇಗ ಮತ್ತು ವಿಸ್ತಾರದ ಅಗತ್ಯವಿದೆ
-ಮಂಜುನಾಥ ಡಿ.ಎಸ್.

ದೇಶದ ಇತರೆಡೆಗಳಂತೆ ಕರ್ನಾಟಕದಲ್ಲಿಯೂ ಪರಿಸರ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅನೇಕ ಯೋಜನೆಗಳು ರೂಪುಗೊಂಡಿವೆ, ಅನುಷ್ಠಾನಗೊಂಡಿವೆ, ಹಾಗು ವಿವಿಧ ಪ್ರಮಾಣಗಳಲ್ಲಿ ಯಶಸ್ಸನ್ನೂ ಗಳಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಇಷ್ಟರಿಂದಲೇ ತೃಪ್ತರಾಗದೆ ಇನ್ನೂ ಹೆಚ್ಚಿನ ಕಾಳಜಿ, ಉತ್ಸಾಹಗಳಿಂದ ಮುನ್ನಡೆಯಬೇಕಾದ ಅನಿವಾರ್ಯತೆಯನ್ನೂ ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ನಮ್ಮ ಜೀವನದ ಅತ್ಯಾವಶ್ಯಕ ಧಾತುವಾದ ನೀರಿನ ಉದಾಹರಣೆಯೊಂದಿಗೆ ನನ್ನ ಅನಿಸಿಕೆಗಳನ್ನು ಪ್ರಸ್ತುತಪಡಿಸುತ್ತಿದ್ದೇನೆ. ಇವು ಬೃಹತ್ ಬೆಂಗಳೂರಿನ ಮಿತಿಯಲ್ಲಿ ನೀರಿನ ವಿಷಯಕ್ಕೆ ಸಂಬಂಧಿಸಿದ್ದಾಗಿವೆ.  1 ಜುಲೈ 2019ರ ನ್ಯೂಸ್-18 ವರದಿಯಂತೆ, ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ ನಗರದ ನೈಸರ್ಗಿಕ […]

ಪ್ರಕೃತಿ ಮತ್ತು ನಾನು

-ಡಾ.ಕೊಳ್ಚಪ್ಪೆ ಗೋವಿಂದ ಭಟ್

ಪ್ರಕೃತಿ ಮತ್ತು ನಾನು
-ಡಾ.ಕೊಳ್ಚಪ್ಪೆ ಗೋವಿಂದ ಭಟ್

ಮಾನವ ಕುಲದ ಉಳಿವಿಗೂ ಏಳಿಗೆಗೂ ಪ್ರಕೃತಿಯ ಮಹತ್ವವನ್ನು ತಿಳಿದುಕೊಂಡು ನಾವೆಲ್ಲರೂ ಸ್ವಪ್ರೇರಣೆಯಿಂದ ನಮ್ಮ ಕಿರು ಪ್ರಯತ್ನಗಳನ್ನು ಮಾಡಬೇಕು. ಅದು ನಮ್ಮೆಲ್ಲರ ಜೀವನಕ್ರಮವಾದರೆ ಮಾತ್ರ ಸಫಲತೆ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿರುವ ಲೇಖಕರು ತಮ್ಮ ಸ್ವಯಂ ಅನುಭವ ಮತ್ತು ಪ್ರಯೋಗಗಳನ್ನು ಹಂಚಿಕೊಂಡಿದ್ದಾರೆ; ಇತರರಿಗೆ ಮಾದರಿ ಒದಗಿಸಿದ್ದಾರೆ. ನಾನೊಬ್ಬ ಕೃಷಿ ಹಿನ್ನೆಲೆಯಿಂದ ಬಂದ ಆದರೆ ಕೃಷಿಯನ್ನು ಜೀವನಾಧಾರ ಮಾಡಿಕೊಳ್ಳದವನು ಎಂದು ಮೊದಲಿಗೇ ಹೇಳಿಕೊಂಡು ಮುಂದುವರಿಯುತ್ತೇನೆ. ಪ್ರಕೃತಿಯನ್ನು ನಾವು ಪರಿಭಾವಿಸುವ ರೀತಿಯನ್ನು ನಮ್ಮ ಹಿನ್ನೆಲೆ ಪ್ರಭಾವಿಸುತ್ತದೆ ಎಂದು […]

ಮಾತು ಮುಂದೆ, ಸಾಧನೆ ಹಿಂದೆ!

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ

ಮಾತು ಮುಂದೆ, ಸಾಧನೆ ಹಿಂದೆ!
-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ

ಕರ್ನಾಟಕದಲ್ಲಿ ಪರಿಸರ ಸಮತೋಲನ ಸಾಧಿಸುವಲ್ಲಿ ಯಶಸ್ವಿಯಾಗುತ್ತಿದ್ದೇವೆಯೇ? ಎಂಬ ಪ್ರಶ್ನೆಗೆ ನನ್ನ ಸ್ಪಷ್ಟ ಮತ್ತು ನೇರ ಉತ್ತರ ‘ಇಲ್ಲ’ ಎಂಬುದಾಗಿದೆ. ಈ ಲೇಖನ ತುಂಬಾ ದೀರ್ಘವಾಗಬಾರದು ಎಂಬ ಕಾರಣಕ್ಕೆ, ನಾಲ್ಕು ಅಂಶಗಳನ್ನು ಮಾತ್ರ ಇಟ್ಟುಕೊಂಡು ಚರ್ಚಿಸಿದ್ದೇನೆ. ಆ ನಾಲ್ಕು ಅಂಶಗಳೆಂದರೆ :       1. ವಾಯುಮಾಲಿನ್ಯ 2. ಜಲಮಾಲಿನ್ಯ 3. ಶಬ್ದಮಾಲಿನ್ಯ 4. ಪ್ಲಾಸ್ಟಿಕ್ ಕಲ್ಮಶ ವಾಯು ಮಾಲಿನ್ಯ ವಾಯು ಮಾಲಿನ್ಯವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಯೇ ಅಲ್ಲದೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿಯೂ ಗಣನೀಯವಾಗಿ ಕಂಡುಬರುತ್ತದೆ. ಕರ್ನಾಟಕದಲ್ಲಿ ಬೆಂಗಳೂರು […]

ಹಣವಿದೆ, ಅರಣ್ಯ ಬೆಳೆಸುವವರಿಲ್ಲ!

-ಶ್ರೀಶೈಲ ಆಲದಹಳ್ಳಿ, ಸಂಡೂರು.

ರಾಜ್ಯದಲ್ಲಿ ಪಶ್ಚಿಮ ಘಟ್ಟದ ಮಾದರಿಯನ್ನು ಹೊಂದಿರುವ, 35000 ಹೆಕ್ಟೇರ್ ಪ್ರದೇಶದಲ್ಲಿ ಹಬ್ಬಿರುವಕೊಂಡಿರುವ ನೈಸರ್ಗಿಕ ರಮಣೀಯ ತಾಣವೆ ಸಂಡೂರು. ಉತ್ಕöÈಷ್ಟವಾದ ಕಬ್ಬಿಣದ ಅದಿರನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವುದೇ ಈ ಅರಣ್ಯಕ್ಕೆ ಕಂಟಕವಾಗಿ ಪರಿಣಮಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯತನ, ರಾಜಕಾರಣಿಗಳ ಹಸ್ತಕ್ಷೇಪದಿಂದ ಸಂಡೂರಿನ ಬೆಟ್ಟಗಳಲ್ಲಿ ಅವ್ಯಾಹತ ಅಕ್ರಮ ಗಣಿಗಾರಿಕೆ ನಡೆದು ಲಕ್ಷಾಂತರ ಮರಗಳು, ವನ್ಯಜೀವಿಗಳು ಅಕ್ರಮ ಗಣಿಗಾರಿಕೆಗೆ ಬಲಿಯಾಗುವುದರ ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಹಣ ನಷ್ಟವಾಗಿರುವುದು ಒಂದೆಡೆಯಾದರೆ ಪರಿಸರದ ಮೇಲಾಗಿರುವ ನಷ್ಟವನ್ನು ಅಂದಾಜಿಸಲು ಅಸಾಧ್ಯ. ಘನ ಸುಪ್ರೀಂಕೋರ್ಟಿನ ಹಸಿರು […]

ಅನಿಸಿಕೆಗಳು

ಬದಲಾಗಲಿದೆ ಪ್ರಪಂಚ! ಈ ಬಾರಿಯ ಸಮಾಜಮುಖಿ ಪತ್ರಿಕೆ ಎಂದಿನಂತೆ ವಿವಿಧ ವಿಷಯಗಳನ್ನಾಧರಿತವಾದ ಲೇಖನಗಳನ್ನು ಹೊಂದಿದೆ. ಉತ್ತಮವಾದ ಲೇಖನಗಳು. ಕೋವಿಡ್ ವೈರಸ್ ವಿಷಯಗಳ ಸುತ್ತಮುತ್ತ ಬರೆದ ಲೇಖನಗಳು ನಿಜಕ್ಕೂ ಆಸಕ್ತಿಪೂರ್ಣವಾಗಿವೆ. ಇಡೀ ಪ್ರಪಂಚವನ್ನೇ ತನ್ನ ಕಪಿಮುಷ್ಟಿಯಲ್ಲಿ ಬಂಧಿಸಿ ಹಿಡಿಟ್ಟಿರುವ ಈ ಸೂಕ್ಷ್ಮಾಣು ಜೀವಿಯ ಬಗ್ಗೆ ಎಷ್ಟೇ ಬರೆದರೂ ಸಾಲದು. ಹಲವೇ ವಾರಗಳಲ್ಲಿ ಇಡೀ ಪ್ರಪಂಚದ ಜನಜೀವನವನ್ನು ಅಲ್ಲೋಕಲ್ಲೋಲ ಮಾಡಿ ಅಟ್ಟಹಾಸದಿಂದ ಮೆರೆಯುತ್ತಿರುವ ಈ ವೈರಸ್ ಮುಂದೆಯೂ ತನ್ನ ಪ್ರಭಾವವನ್ನು ಬೀರುತ್ತಲೇ ಇರುತ್ತದೆ ಎನ್ನುವ ವಿಜ್ಞಾನಿಗಳ ಎಚ್ಚರಿಕೆ ಸ್ವಲ್ಪ ಆತಂಕದ […]

ಗಾಂಧೀ ಅವರನ್ನೊಳಗೊಂಡ ಕುವೆಂಪು ಮಾರ್ಗವೇ ಪ್ರಸ್ತುತ

ಎನ್.ಬೋರಲಿಂಗಯ್ಯ

ನಮ್ಮ ಈ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈಪರೀತ್ಯಗಳನ್ನು ಆಧುನಿಕ ವೈಜ್ಞಾನಿಕ ಸಂದರ್ಭಕ್ಕೆ ವಿವರಿಸಿಕೊಳ್ಳುವುದು ಹೇಗೆ? ಈ ಯಥಾಸ್ಥಿತಿಯಿಂದ ಹೊರಬರಬೇಕಾದರೆ ಹೂವಿನಂತೆ ಅರಳುವ ಮೊದಲು ಅದೇ ಹೂವಿನ ಮೊಗ್ಗಿನಂತೆ ಮೊನಚಾಗಿರಬೇಕಲ್ಲವೇ? ತಮ್ಮ ಬದುಕಿನ ಸಾಧನೆಯ ಯಶಸ್ಸಿನ ರಹಸ್ಯವನ್ನು ಎನ್.ಆರ್.ನಾರಾಯಣಮೂರ್ತಿಗಳು ಇಗೋ ಹೀಗೆ ಸಾರ್ವತ್ರೀಕರಿಸಿಕೊಂಡಿದ್ದಾರೆ. ಯಾರೇ ಆಗಲಿ, ಏನನ್ನೇ ಆದರೂ ಸಾಧಿಸಬೇಕಾದರೆ ಅವರು ತಮ್ಮ ಅರ್ಹತೆಯನ್ನು ಪರೀಕ್ಷೆಗೊಡ್ಡಿಕೊಳ್ಳಬೇಕಾಗುತ್ತದೆ. ಅದು ಸಾಬೀತಾದ ಮೇಲೆ ಹಿಡಿದ ಕೆಲಸವನ್ನು ಸಾಧಿಸಲು ಬೇಕಾದ ಪ್ರಯತ್ನದ ಪ್ರಾಮಾಣಿಕತೆಯ ಸ್ವರೂಪವನ್ನು ಕುರಿತು ಚಿಂತಿಸಬೇಕಾಗುತ್ತದೆ ಮಾತ್ರವಲ್ಲ, ಪ್ರಾಮಾಣಿಕತೆಯ ಜತೆಯಲ್ಲಿ ಹೆಗಲು […]

ವಿಷಮ ಕಲ್ಪನೆಗಳ ಕಳಚಿ ಪ್ರತಿಸಂಸ್ಕೃತಿ ಕಟ್ಟುವ ಅಗತ್ಯ

-ಎಸ್.ಎಸ್.ಯರನಾಳ

ವಿಷಮ ಕಲ್ಪನೆಗಳ ಕಳಚಿ ಪ್ರತಿಸಂಸ್ಕೃತಿ ಕಟ್ಟುವ ಅಗತ್ಯ
-ಎಸ್.ಎಸ್.ಯರನಾಳ

ಮಹಾಭಾರತದ ಕರ್ಣನ ಪಾತ್ರ ಆಗಿರಬಹುದು ಅಥವಾ ಏಕಲವ್ಯನೇ ಆಗಿರಬಹುದು, ಅವರು ಸಾಮರ್ಥ್ಯವನ್ನು ಮುಂದಿಟ್ಟುಕೊಡು ಹೋರಾಡುವ ಸಂದರ್ಭಗಳು ಬಂದಾಗ ಅವರ ಸಾಮರ್ಥ್ಯಕ್ಕೆ ಕವಡೆಕಾಸು ಬೆಲೆ ಕೊಡದೆ ಅವರನ್ನು ದೂರವಿಟ್ಟಿದ್ದನ್ನು ಇತಿಹಾಸ ಸಾರಿ ಹೇಳುತ್ತದೆ. ಕನ್ನಡದ ದೈತ್ಯ ಸಾಫ್ಟ್ ವೇರ್ ಕಂಪನಿಯಾದ ಇನ್ಫೋಸಿಸ್ ಹೆಸರನ್ನು ಕೇಳಿದಾಕ್ಷಣ ಅದರ ಹಿಂದುಗಡೆ ಕೇಳಿಬರುವ ಇನ್ನೊಂದು ಶಬ್ಧವೆಂದರೆ ಅದುವೆ ಮೂರ್ತಿ. ಅದು ಸುಧಾ ಅಥವಾ ನಾರಾಯಣ ಆಗಿರಬಹುದು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದು, ಕೇವಲ ಹತ್ತು ಸಾವಿರ ರೂಪಾಯಿ ಬಂಡವಾಳ ಹೂಡಿಕೆಯೊಂದಿಗೆ ಸಂಸ್ಥೆಯನ್ನು ಕಟ್ಟಿ ಜಗತ್ತಿಗೆ ಪರಿಚಯಿಸಿದ […]

ಬಹುತ್ವ ಭಾರತ

-ಇಂದಿರಾ ಹೆಗ್ಗಡೆ

ಬಹುತ್ವ ಭಾರತ
-ಇಂದಿರಾ ಹೆಗ್ಗಡೆ

ಜನರನ್ನು ಮೇಲು ಕೀಳುಗಳೆಂದು ಪದರ ಪದರವಾಗಿ ವಿಂಗಡಿಸಿದ ಬಹುಪುರಾತನ ಸಮಾಜಪದ್ಧತಿಯ ದೇಶವಿದು. ಇಂತಹ ಸಮಾಜವನ್ನು ಸಮಾನವಾಗಿ ಕಾಣಬೇಕಾದರೆ ಮೊದಲು ಕೆಳಪದರದವರನ್ನು ಮೇಲೆ ತರುವ ಕೆಲಸ ಆಗಬೇಕು. ದೇಶವೊಂದರ ಪ್ರಗತಿಗೆ ಪೂರಕ ಯಾವುದು ಹಾಗೂ ದೇಶದ ಹಿಂದುಳಿಯುವಿಕೆಗೆ ಕಾರಣಗಳಾವುವು ಎಂಬುದರ ಕಡೆಗೆ ಬೊಟ್ಟು ಮಾಡಿವೆ ನಾರಾಯಣಮೂರ್ತಿಯವರ ಮಾತುಗಳು. ಆದರೆ ಈ ಚರ್ಚೆಯಲ್ಲಿ ಭಾರತವನ್ನು ಒಟ್ಟಾರೆಯಾಗಿ ಒಂದು ಪರಿಧಿಯೊಳಗಿಟ್ಟು ನೋಡಲು ಸಾಧ್ಯವಾಗಬಹುದೆಂದು ಅನಿಸುವುದಿಲ್ಲ. ಭಾರತೀಯ ಸಂಸ್ಕೃತಿ ಅಂದರೇನು ಎನ್ನುವುದೇ ಮೂಲಭೂತ ಪ್ರಶ್ನೆ. ಅರುಣಾಚಲ, ನಾಗಾಲ್ಯಾಂಡ್, ತ್ರಿಪುರಗಳ ಗಡಿರೇಖೆಗಳಿಂದ ತೊಡಗಿ ಪಶ್ಚಿಮದ […]

ಬದಲಾವಣೆ ಅಸಾಧ್ಯ

-ಮಂಜುನಾಥ ಡಿ.ಎಸ್., ಬೆಂಗಳೂರು.

ಸಂಸ್ಕೃತಿ ಎಂಬ ಪದವು ವಿಶಾಲವಾದ ಅರ್ಥವ್ಯಾಪ್ತಿಯನ್ನು ಹೊಂದಿದ್ದು ಸಾಮಾಜಿಕ ನಡವಳಿಕೆ ಮತ್ತು ಮಾನವ ಸಮಾಜದಲ್ಲಿ ಕಾಣಬಹುದಾದ ರೂಢಿಗತ ಮಾನಕಗಳನ್ನಲ್ಲದೆ ಆ ಸಮುದಾಯದ ವ್ಯಕ್ತಿಗಳ ಜ್ಞಾನ, ನಂಬಿಕೆ, ಕಲೆ, ಸಂಪ್ರದಾಯ, ಸಾಮರ್ಥ್ಯ, ಸ್ವಭಾವ, ಇತ್ಯಾದಿಗಳನ್ನೂ ಒಳಗೊಂಡಿರುತ್ತದೆ. ಕಲಿಕೆ ಮತ್ತು ಸಾಮಾಜೀಕರಣದಿಂದ ವ್ಯಕ್ತಿಯು ಸಂಸ್ಕೃತಿಯನ್ನು ತನ್ನದಾಗಿಸಿಕೊಳ್ಳುತ್ತಾನೆ. ಸಂಸ್ಕೃತಿಯ ಮಾನದಂಡವು ಸಮಾಜದಲ್ಲಿ ಒಪ್ಪಿಗೆಯಾಗುವ ನಡವಳಿಕೆಗಳನ್ನು ಕ್ರೋಡೀಕರಿಸುತ್ತದೆ. ಸಂಸ್ಕೃತಿ ಇರುವುದು ವ್ಯಕ್ತಿಯಲ್ಲೋ ಅಥವಾ ಸಮುದಾಯದಲ್ಲೋ ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಕೊಡುವುದು ಕಷ್ಟ. ಪ್ರಸ್ತುತ ಚರ್ಚೆಗಾಗಿ ಸಂಸ್ಕೃತಿಯನ್ನು ‘ಜೀವನ ವಿಧಾನ’ ಎಂದು ಸರಳವಾಗಿ […]

ನಮ್ಮನ್ನು ಬಿಟ್ಟರೆ ಇಲ್ಲ; ಧೋರಣೆ ಸರಿಯಲ್ಲ!

-ಉಮಾ ವೆಂಕಟೇಶ್. ಅಮೆರಿಕಾ

ಮಾರ್ಚ್ ಸಂಚಿಕೆಯಲ್ಲಿ ಪ್ರಕಟಿಸಿರುವ ಎಲ್ಲ ಲೇಖನಗಳು ಬಹಳ ಚಿಂತನಶೀಲವಾಗಿವೆ. ಈ ಲೇಖನಗಳ ವಸ್ತುವಿಷಯ ನಿಜಕ್ಕೂ ಗಂಭೀರವಾದವು ಹಾಗು ಬಹಳ ಪ್ರಸ್ತುತವಾದ ವಿಷಯಗಳು. ನಮ್ಮ ದೇಶದಲ್ಲಿ ಪ್ರಾರಂಭವಾಗಿರುವ ಹೊಸ ಸಮಸ್ಯೆಗಳು ಜಾತಿ ಧರ್ಮದ ಮೇಲೆ ಆಧಾರವಾಗಿರುವುದು ನಿಜಕ್ಕೂ ದುಃಖಕರ ಸಂಗತಿ. ನಾರಾಯಣಮೂರ್ತಿ ಅವರ ಭಾಷಣಗಳನ್ನು ಪ್ರಕಟಿಸಿದ್ದೀರಿ. ಇದು ಬಹಳ ಸಂತೋಷದ ವಿಷಯ. ಅವರ ಭಾಷಣಗಳÀ ವಿಷಯಗಳನ್ನು ನಮ್ಮ ತರುಣ ಪೀಳಿಗೆ ಬಹಳ ಗಂಭೀರವಾಗಿ ಯೋಚಿಸಬೇಕಾಗಿದೆ. ಅವರು ನಮ್ಮ ದೇಶವೇಕೆ ಪಾಶ್ಚಾ÷್ಯತ್ಯ ದೇಶಗಳ ಮಟ್ಟದಲ್ಲಿ ವಿಜ್ಞಾನಿಗಳನ್ನು ಹೊರತರುತ್ತಿಲ್ಲ ಎನ್ನುವುದರ ಬಗ್ಗೆ […]