ಗ್ರಾಮೀಣ ಗ್ರಂಥಾಲಯ ಓದುಗರಿಗೆ ಕೊಡುಗೆ

ಬದುಕು ಕಟ್ಟಿಕೊಳ್ಳಲು, ಬೌದ್ಧಿಕವಾಗಿ ಬೆಳೆಯಲು ಅಗತ್ಯವಾದ ಮಾಹಿತಿ, ವಿಶ್ಲೇಷಣೆ, ಸಿದ್ಧಾಂತಗಳನ್ನು ಮೀರಿದ ವೈಚಾರಿಕತೆ ಹೊತ್ತು ಬರುತ್ತಿರುವ ‘ಸಮಾಜಮುಖಿ’ ಮಾಸಿಕವನ್ನು ನೀವೆಲ್ಲಾ ಗಮನಿಸಿದ್ದೀರಿ. ಅಂತಃಸತ್ವ ಮತ್ತು ಬಾಹ್ಯ ಸ್ವರೂಪ ಎರಡರಲ್ಲೂ ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಂಡಿರುವ ಈ ಪತ್ರಿಕೆಯನ್ನು ನೀವು ಅಷ್ಟೇ ವಾತ್ಸಲ್ಯದಿಂದ ಬರಮಾಡಿಕೊಡಿರುವಿರಿ. ಸಮಾಜಮುಖಿಗೆ ವರ್ಷ ತುಂಬಿದ ಈ ಸಂದರ್ಭದಲ್ಲಿ ಓದುಗರ ಬಳಗವನ್ನು ವಿಸ್ತರಿಸಿಕೊಳ್ಳುವ ತವಕ ನಮ್ಮದು. ಈ ನಿಟ್ಟಿನಲ್ಲಿ ಹೀಗೊಂದು ಯೋಜನೆಯನ್ನು ನಿಮ್ಮೆದುರು ಮಂಡಿಸುತ್ತಿದ್ದೇವೆ. ಯೋಜನೆಯ ವಿವರ ತಾಲೂಕಿಗೊಬ್ಬ ಹಿತೈಷಿ ನೆರವಿನಿಂದ ರಾಜ್ಯದ ಎಲ್ಲಾ 5700 ಗ್ರಾಮೀಣ […]

‘ಬಡವ’ರಿಗೆ ಮೀಸಲಾತಿ: ಮೋದಿಯವರ ‘ಗರೀಬಿ ಹಠಾವೋ’ ಕಾರ್ಯಕ್ರಮ!

-ಡಿ.ಎಸ್.ನಾಗಭೂಷಣ

ಕಳೆದ ಸಂಚಿಕೆಯಲ್ಲಿ ಆರ್ಥಿಕತೆ ಆಧಾರದ ಮೀಸಲಾತಿಯ ಸಾಂವಿಧಾನಿಕ ಮಾನ್ಯತೆ ಕುರಿತು ಕಾನೂನು ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಸತೀಶ್‍ಗೌಡ ಅವರು ವಿಶ್ಲೇಷಿಸಿದ್ದರು. ಚರ್ಚೆಯ ಮುಂದುವರಿದ ಭಾಗವಾಗಿ ಹೆಸರಾಂತ ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ ಅವರು ಇಲ್ಲಿ ತಮ್ಮ ವಿಚಾರ ಮಂಡಿಸಿದ್ದಾರೆ. ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮೀಸಲಾತಿ ವ್ಯಾಪ್ತಿಗೆ ಸೇರದ (ಮೇಲ್ಜಾತಿಗಳ) ಬಡ ಎಂದು ಅದು ಹೇಳುವ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಮೀಸಲಾತಿ ಕಲ್ಪಿಸುವ ಅವಸರದ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಮುಂದಿನ ಲೋಕಸಭಾ ಚುನಾವಣೆಗಳ ಎರಡೂವರೆ ತಿಂಗಳ […]

ಮಿಲ್ಲರ್ ವರದಿಗೆ 100 ವರ್ಷ

-ಪ್ರೊ.ಜಿ.ಶರಣಪ್ಪ

ಇಂದು ಮುಂದೆ ಬಂದಿರುವ ಜನಾಂಗ, ತಮ್ಮವರ ಹಿಂದಿನ ದುರಂತಮಯ ಮಟ್ಟವನ್ನು ತಿಳಿದುಕೊಳ್ಳಲು ಸರ್ ಲೆಸ್ಲಿ ಮಿಲ್ಲರ್ ವರದಿಯನ್ನು ಓದುವುದು ಸೂಕ್ತ. ಹೀಗೆ ಓದುವುದರಿಂದ ತಮ್ಮ ಹಿಂದಿನ ಜನಾಂಗದ ಅವಸ್ಥೆ ಅರ್ಥವಾಗುತ್ತದೆ. ಕೊನೆಯ ಪಕ್ಷ ಇಂದು ಮೀಸಲಾತಿ ಇಲ್ಲದವರನ್ನು ಕಂಡಾಗ ಅವರ ಬಗ್ಗೆ ಇರಿಸಿಕೊಂಡಿರುವ ಧಿಮಾಕಿನ ಪ್ರಮಾಣ ಕಡಿಮೆ ಆದರೂ ಆಗುತ್ತದೆ. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿಂದುಳಿದವರ ಏಳ್ಗೆಗೆ ರಚಿಸಿದ್ದ ಜಸ್ಟೀಸ್ ಲೆಸ್ಲಿ ಮಿಲ್ಲರ್ ಸಮಿತಿ ವರದಿ ಸಲ್ಲಿಸಿ (1919) ನೂರು ವರ್ಷಗಳಾಗುತ್ತಿವೆ. ಮೈಸೂರು ಮಹಾರಾಜರು […]

ಕರ್ನಾಟಕ ಮತ್ತು ಮಹಾರಾಷ್ಟ್ರ ರೈತ ಚಳವಳಿಗಳ ವೈರುಧ್ಯಗಳು

-ಮುಜಾಫರ್ ಅಸ್ಸಾದಿ

ರೈತ ಚಳವಳಿಗಳ ಕಾಲ ಮುಗಿಯಿತೇ? ಅಥವಾ ಅವು ಸೋತುಹೋದವೇ? ಚಳವಳಿಗಳಿಗೆ ಕೆಲವು ಸಂದರ್ಭದಲ್ಲಿ ಹಿನ್ನಡೆಯಾದದ್ದು ಸತ್ಯ. ಅವು ರೈತರ ಆತ್ಮಹತ್ಯೆಯನ್ನು ತಡೆಯಲು ವಿಫಲವಾದದ್ದು ದಿಟ. ಆದರೆ ಚಳವಳಿಗಳ ಕಾಲ ಮುಗಿದಿಲ್ಲ. ರೈತ ಚಳವಳಿಗಳ ಬಗ್ಗೆ ಶಾಸ್ತ್ರೀಯ ಚರ್ಚೆಗಳು ಆರಂಭಗೊಂಡದ್ದು 1990ರ ದಶಕದಲ್ಲಿ. ಅಷ್ಟರ ತನಕ ಇದು ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿತ್ತು. ಈ ಚರ್ಚೆಗಳಲ್ಲಿ ಹೆಚ್ಚು ಒತ್ತು ಸಿಗುತ್ತಿದ್ದದ್ದು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ತಿಕಾಯತ್‍ರವರ ಚಳವಳಿಗಳಿಗೆ. ಕರ್ನಾಟಕ ಮತ್ತು ತಮಿಳುನಾಡು ಇದಕ್ಕೆ ಅಪವಾದಗಳಾಗಿದ್ದವು. ಮಹಾರಾಷ್ಟ್ರ ಚಳವಳಿ ಚರ್ಚೆಯ […]

ಭಾಷೆ ಬೇರ್ಪಡಿಸದಿರಲಿ

- ಸಾರಾ ಅಬೂಬಕ್ಕರ

ಬೆಸೆಯುವ ಭಾಷೆ ಬೇರ್ಪಡಿಸದಿರಲಿ ಕನ್ನಡವೆಂದರೆ ಅಸ್ಮಿತೆ, ಕನ್ನಡವೆಂದರೆ ಅನನ್ಯತೆ, ಕನ್ನಡವೆಂದರೆ ಆದ್ಯತೆ ಎಂದೆಲ್ಲಾ ಹೇಳಲಾಗುತ್ತದೆ. ಆದರೆ ಇಂದು ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಯುತ್ತದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಬೆಂಗಳೂರಿ ನಲ್ಲಿ ಕನ್ನಡ ಭಾಷೆಯನ್ನು ಹುಡುಕುವ ಪರಿಸ್ಥಿತಿ ಇದೆಯೆನ್ನಲಾಗುತ್ತಿದೆ. ಮಂಗಳೂರಿನಲ್ಲಿ ಪರಿಸ್ಥಿತಿ ಅಷ್ಟು ಕೆಟ್ಟಿಲ್ಲವಾದರೂ ಉತ್ತಮವಾಗಿಯೇನೂ ಇಲ್ಲ. ಲಿಪಿ ಇಲ್ಲದ ಕೆಲವು ಭಾಷೆಗಳು ಮಂಗಳೂರಿನಲ್ಲಿರುವುದರಿಂದ ಹಾಗೂ ಆ ಭಾಷೆಗಳಲ್ಲಿ ಸಾಹಿತ್ಯ ಅಕಾಡೆಮಿಗಳಿರುವುದರಿಂದ ಈ ಲಿಪಿಯನ್ನು ಜನರು ಮರೆಯಲಾರರು. ಆದರೆ ಕನ್ನಡ ಭಾಷೆಯ ಸಾಹಿತ್ಯದ ಕುರಿತು ಚಿಂತಿಸುವಾಗ ಈ […]

ಅವನತಿಗೆ ಇನ್ನಷ್ಟು ಕಾರಣಗಳು…

- ಪದ್ಮರಾಜ ದಂಡಾವತಿ

ಕನ್ನಡ ಸಾಹಿತಿಗಳು ಹಾಗೂ ಚಳವಳಿಗಾರರು ಅಪ್ಪಟ ಅಪ್ರಾಮಾಣಿಕರು. ಅವರು ಬರೆದ ಪುಸ್ತಕವನ್ನು ಅವರ ಮಕ್ಕಳು ಓದುತ್ತಾರೆಯೇ ಎಂದು ನೀವು ಕೇಳಿ ನೋಡಿ. ಖಂಡಿತ ಓದುವುದಿಲ್ಲ. ನಾನು ಪದವಿ ವರೆಗೆ ಹಟ ಹಿಡಿದು ಓದಿದ್ದು ಕನ್ನಡ ಮಾಧ್ಯಮದಲ್ಲಿ. ಹಾಗೆ ನಾನು ಕನ್ನಡ ಮಾಧ್ಯಮದಲ್ಲಿ ಹಟ ಹಿಡಿದು ಓದಲು ಕುವೆಂಪು, ದೇಜಗೌ ಮತ್ತು ಹಾ.ಮಾ.ನಾಯಕರು ಕಾರಣ. ಆದರೆ, ನಾನು 60ರ ದಶಕದಲ್ಲಿ ಓದಿದ ನಮ್ಮ ಊರಿನ ಕನ್ನಡ ಪ್ರಾಥಮಿಕ ಶಾಲೆ ಈಗಲೂ ಅದೇ ಹಳೆಯ ಕಟ್ಟಡದಲ್ಲಿ ನಡೆಯುತ್ತಿದೆ. ಅಲ್ಲಿ ಓದುವ […]

ಕನ್ನಡದ ಹೊಸ ತೋಂಡಿತನ

- ರಂಗನಾಥ ಕಂಟನಕುಂಟೆ

ಕನ್ನಡ ಸಮುದಾಯ ಮತ್ತೆ ಅಕ್ಶರದಿಂದ ನವಮೌಖಿಕತೆಯ ಕಡೆಗೆ ಚಲಿಸತೊಡಗಿದೆ ಎನ್ನಿಸುತ್ತದೆ. ಕನ್ನಡದ ಓದು, ಬರೆಹ ಮತ್ತು ಕನ್ನಡದ ಬಳಕೆಗಳು ಕೆಲವರಿಗೆ ಮಾತ್ರ ಎನ್ನುವಂತಾಗಿದೆ. ತಂತ್ರಜ್ಞಾನ ಮತ್ತು ಹೊಸ ದೃಶ್ಯಮಾಧ್ಯಮಗಳು ಬಹುಸಂಖ್ಯಾತ ಕನ್ನಡಿಗರನ್ನು ಮತ್ತೆ ‘ಅನಕ್ಶರತೆ’ಯ ಕಡೆಗೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಇದು ಕನ್ನಡವನ್ನು ನಮ್ಮ ‘ನಾಳೆ’ಗಳಿಗೂ ಉಳಿಸಿಕೊಳ್ಳಲು ಬಯಸುವವರ ಎದುರು ಹೊಸ ಸವಾಲನ್ನು ಮುಂದಿಟ್ಟಿದೆ. ಕಳೆದ ಕೆಲವು ದಶಕಗಳ ಹಿಂದೆ ಶಿಕ್ಶಣದ ಮುಖ್ಯ ಉದ್ದೇಶಗಳಲ್ಲಿ ‘ಅಕ್ಶರ’ ಕಲಿಯುವುದು ಮತ್ತು ‘ಓದಿನ’ ಕಸುವನ್ನು ಪಡೆಯುವುದು ಮುಖ್ಯ ಗುರಿಯಾಗಿತ್ತು. ಓದು ಮತ್ತು […]

ತೆಲುಗನ್ನಡಿಗರ ನಿರೀಕ್ಷೆಗಳು

- ಎಂ.ಗಿರಿಜಾಪತಿ

63ನೇ ರಾಜ್ಯೋತ್ಸವದ ಸಂದರ್ಭದಲ್ಲಿಯೂ ನೆರೆರಾಜ್ಯ ಆಂಧ್ರಪ್ರದೇಶದೊಳಗಿನ ಕನ್ನಡ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅನಾಥ ಪ್ರಜ್ಞೆ ಅನುಭವಿಸುವ ಸ್ಥಿತಿ ಇದೆ. ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರ ಕರ್ನಾಟಕ ಆಂಧ್ರದ ಎರಡೂ ಗಡಿಗಳಲ್ಲಿ ತೆಲುಗನ್ನಡಿಗರು ಸಹಜವಾಗಿಯೇ ಇದ್ದಾರೆ. ಇವರಲ್ಲಿ ಅನೇಕರು ಕನ್ನಡ ಮೂಲದವರೇ ಆಗಿದ್ದು ಕನ್ನಡವನ್ನು ಅಪ್ಪಟವಾಗಿ ಪ್ರೀತಿಸುವವರಾಗಿದ್ದಾರೆ. ಇವರಲ್ಲಿ ಕನ್ನಡ ಭಾಷೆ ಮಾತ್ರವಲ್ಲ ಆಚಾರ-ವಿಚಾರ, ಸಂಸ್ಕೃತಿಯೂ ನೆಲೆನಿಂತಿದೆ. ಇವರು ಅತ್ಯಂತ ಆಪ್ತತೆಯಿಂದ ತಮ್ಮ ಮಕ್ಕಳನ್ನು ಈ ಭಾಗದ ಕನ್ನಡ ಶಾಲೆಗಳಿಗೆ ಸೇರಿಸುತ್ತಾರೆ. ಆಂಧ್ರಪ್ರದೇಶ ಇಬ್ಭಾಗಕ್ಕಿಂತ ಮುಂಚಿತ ಗಡಿ ಜಿಲ್ಲೆಗಳಾದ […]

ಬಾಂಗ್ಲಾ ಮಾದರಿ ಆಗಬಾರದೇಕೇ?

- ಹುರುಕಡ್ಲಿ ಶಿವಕುಮಾರ

ಪಾಕಿಸ್ತಾನ ತನ್ನ ಧಾರ್ಮಿಕ ಹಿನ್ನೆಲೆಯಲ್ಲಿ ಪೂರ್ವ ಪಾಕಿಸ್ತಾನದ ಮೇಲೆ ಉರ್ದು ಭಾಷೆಯನ್ನು ಹೇರಲು ಹೊರಟಾಗ ಆ ದೇಶದ ಜನ ತಮಗೆ ಧರ್ಮಕ್ಕಿಂತ ಭಾಷೆ ಮುಖ್ಯವೆಂದು ಹೋರಾಡಿ ಸ್ವತಂತ್ರ ಬಾಂಗ್ಲಾದೇಶ ಕಟ್ಟಿಕೊಂಡರು. ಇದು ವಿಶ್ವಕ್ಕೇ ಮಾದರಿ. ಪ್ರಾಥಮಿಕ ಶಿಕ್ಷಣದ ಬಗ್ಗೆ ಚರ್ಚಿಸಿರುವುದು ತುಂಬ ಸರಿಯಾಗಿದೆ. ನನ್ನ ದೃಷ್ಟಿಯಲ್ಲಿ ಇದು ರೈತರ ಆತ್ಮಹತ್ಯೆ ಕುರಿತಾದ ಚಿಂತನೆಯಷ್ಟೇ ಗಂಭೀರ ಮತ್ತು ಮುಖ್ಯ. ಏಕೆಂದರೆ ‘ಯಾವುದೇ ಸಂಸ್ಕೃತಿಯನ್ನು ನಾಶಮಾಡಬೇಕೆಂದಿದ್ದರೆ ಅದಕ್ಕಾಗಿ ಯುದ್ಧ ಮಾಡಬೇಕಿಲ್ಲ; ಬದಲಾಗಿ ಆ ಜನಸಮುದಾಯ ಮಾತನಾಡುವ ಭಾಷೆಯನ್ನು ನಾಶಗೊಳಿಸಿದರೆ ಸಾಕು’ […]

1 5 6 7