-ಸ್ಮಿತಾ ಅಮೃತರಾಜ್ ಉಯ್ಯಾಲೆ ಆಡುತ್ತಿದ್ದ ಸಮಯದಲ್ಲಿ ಎರಡು ಹಗ್ಗವನ್ನು ಬಲವಾಗಿ ಹಿಡಿದುಕೊಂಡು, ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡು, ಅದೆಷ್ಟು ರಭಸದಲ್ಲಿ ತೂಗಿಸಿಕೊಳ್ಳುತ್ತಿದ್ದೆವೆಂದರೆ ಮುಗಿಲಿಗೆ ಕಾಲು ತಾಕಲು ಸ್ವಲ್ಪವೇ ಕಡಿಮೆ ಅಂತ ನಿರಾಶೆಯಾಗಿ ಮತ್ತಷ್ಟು ರಭಸದಲಿ ಒಯ್ದು ಕಾಲನ್ನು ಮತ್ತಷ್ಟು ಏರಿಸಲು ಪ್ರಯತ್ನಿಸುತ್ತಿದ್ದೆವು ನಮ್ಮ ತೋಟದಲ್ಲಿ ಮಂಗಗಳ ಕಾಟ ಜಾಸ್ತಿ. ಲೆಕ್ಕ ಹಾಕೋಕೆ ಸಾಧ್ಯವಾಗಿದ್ದರೆ ಬಹುಶಃ; ನಮ್ಮೂರಿನ ಜನಸಂಖ್ಯೆಗಿಂತ ಮಂಗಗಳ ಸಂಖ್ಯೆಗಳೇ ಜಾಸ್ತಿ ಸಿಗಬಹುದು ಅಂದುಕೊಂಡಿರುವೆ. ಮಂಗಗಳು ಎಷ್ಟಾದರೂ ಸಂಖ್ಯೆ ಏರಿಸಿಕೊಳ್ಳಲಿ, ಅದಕ್ಕೆ ನಮ್ಮ ತಕರಾರುಗಳೇನೂ ಇಲ್ಲ. ಆದರೆ ಅದರ […]
-ಪ್ರೊ.ಜಿ.ಎಚ್.ಹನ್ನೆರಡುಮಠ ಆ ಫಾರೆಸ್ಟ್ ಆಫೀಸರು ಜಿಲ್ಲಾ ಪಕ್ಷಿಸರ್ಜನ್ ಮತ್ತು ಗಾರ್ಡುಗಳೊಂದಿಗೆ ಬಂದ. ಅದರ ಮೆಡಿಕಲ್ ಟೆಸ್ಟ್ ಆತು. ಆ ಸರ್ಜನ್ ದಿಲ್ಲಿಗೆ ಅದನ್ನು ಸಾಗಿಸಲು ಯಸ್ ರಿಪೋರ್ಟು ಕೊಟ್ಟ. ಕಡೆಗೆ ಆ ಪಕ್ಷಿಯನ್ನು ದರ್ಗಾ ಕಮೀಟಿಯವರು ಫಾರೆಸ್ಟ್ ಆಫೀಸರರಿಗೆ ಹ್ಯಾಂಡ್ ಓವರ್ ಮಾಡುವಾಗ ಎಲ್ಲರ ಕಣ್ಣುಗಳು ಒದ್ದೆಯಾದವು. ನಮ್ಮೂರಿನ ಗುಡ್ಡಗಳು ಕಥೆ ಹೇಳುತ್ತವೆ… ಕಾಡುಗಳು ಇತಿಹಾಸ ಬಚ್ಚಿಟ್ಟಿವೆ… ಎರೆಮಣ್ಣಿನ ಕನ್ನಡದ ಹೊಳೆ, ಹಳ್ಳ, ಹಳ್ಳಿ, ಹಳುವು, ಕಣಿವೆ, ಕೊನ್ನಾರುಗಳು ಅಸಂಖ್ಯ ರಹಸ್ಯ ಮುಚ್ಚಿಟ್ಟಿವೆ! ಈ ಸತ್ಯ […]
-ವೆಂಕಟೇಶ ಮಾಚಕನೂರ ಆಂಗ್ಲ ಭಾಷೆಯ ಕೋಶಗಳಿಗೆ ಲೆಕ್ಕವಿಲ್ಲ. ಒಂದೊಂದು ಅಕ್ಷರಗಳಿಗೆ ಒಂದು ಕೋಶ ಇವೆ. ಇತರ ಅನೇಕ ಭಾಷೆಗಳಲ್ಲೂ ಇವೆ. ಹೀಗೆ ವಿಷಯವಾರು ನಿಘಂಟುಗಳಿರುವಾಗ ರಾಜಕೀಯ ಪಾರಿಭಾಷಿಕ ಶಬ್ದಕೋಶ ಈವರೆಗೆ ರಚನೆಗೊಳ್ಳದಿರುವುದು ಒಂದು ಲೋಪವೇ ಸರಿ! ರಾಜಕೀಯ ನಂಟು ಅನ್ನುವ ಶಬ್ದವನ್ನು ತಾವು ಕೇಳಿಯೇ ಕೇಳಿರುತ್ತೀರಿ, ಅಥವಾ ದಿನಾಲು ವೃತ್ತ ಪತ್ರಿಕೆಗಳ ಮೇಲೆ ಕಣ್ಣಾಡಿಸುವಾಗ ರಾಜಕೀಯ ನಂಟಿನ ಒಂದೆರಡಾದರು ಸುದ್ದಿ ಸಮಾಚಾರಗಳು ತಮ್ಮ […]
-ಟಿ.ಕೆ.ಗಂಗಾಧರ ಪತ್ತಾರ ‘ಕಣ್ಣಡಕ’ ಎಂಬುದು ‘ಕನ್ನಡಕ’ ಎಂದಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ‘ಕಣ್ಣಡಕ’ಕ್ಕೆ ಅರ್ಥವಿದೆ; ‘ಕಣ್ಣು’ಗಳಿಗೆ ಅಡಕವಾದದ್ದು ಕಣ್ಣಡಕ. ಹಾಗಾದರೆ ‘ಕನ್ನಡಕ’ ಪದಕ್ಕೆ ಏನರ್ಥ? ಸಾಮಾನ್ಯವಾಗಿ ನರ-ನಾರಿಯರ ವಯಸ್ಸು 40 ವರ್ಷ ತುಂಬಿದಾಗ ಸಮೀಪ ದೃಷ್ಟಿಯಲ್ಲೋ, ದೂರ ದೃಷ್ಟಿಯಲ್ಲೋ ವ್ಯತ್ಯಯವಾಗುವುದು ಸಹಜ. ಕಣ್ಣಿನ ದೃಷ್ಟಿ ಮಂದವಾಗುವುದು, ಎದುರಿನ ಆಕೃತಿ ಎರಡಾಗಿ ನಾಲ್ಕಾಗಿ ಕಾಣುವುದು, ಮಂಜು-ಮOಜಾಗಿ ಗೋಚರಿಸುವುದು, ಏನನ್ನಾದರೂ ದಿಟ್ಟಿಸಿ ನೋಡಿದಾಗ ಕಣ್ಣಲ್ಲಿ ನೀರು ತುಂಬುವುದು, ಕಂಬನಿ ಉದುರುವುದು, ನರ-ನಾಡಿಗಳು ಸೆಳೆದಂತಹ-ಜಗ್ಗಿದOತಹ ಅನುಭವವಾಗುವುದು, ಲಘುವಾಗಿ ತಲೆನೋವು ಬರುವುದು-ಇವೆಲ್ಲಾ ಸರ್ವೇಸಾಮಾನ್ಯ. ಆಗ […]
-ಡಾ.ವಸುಂಧರಾ ಭೂಪತಿ ಜಗತ್ತಿನ ಓಟದ ಜೊತೆಗೆ ನನ್ನ ಅತ್ತೆಯವರ ನಡಿಗೆಯೂ ಇದೆ. ಅವರು ಆಧುನಿಕತೆಗೆ ತೆರೆÀದುಕೊಳ್ಳುವ ಮನೋಭಾವದವರು; ಸ್ತ್ರೀವಾದವನ್ನು ಓದದೆಯೇ ಸ್ತ್ರೀವಾದಿಯಾಗಿರುವವರು. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿಯವರನ್ನು ಓದದಿದ್ದರೂ ಅವರ ವಿಚಾರಗಳನ್ನು ಬದುಕಾಗಿಸಿಕೊಂಡವರು. ಒಂದು ಕುಟುಂಬದಲ್ಲಿ ಅತ್ತೆ ಸೊಸೆ ಅನ್ಯೋನ್ಯವಾಗಿದ್ದರು. ಒಮ್ಮೆ ಮನೆಗೆ ನೆಂಟರು ಬಂದಿರುತ್ತಾರೆ. ಅವರು ಮಾತಾಡ್ತಾ ಅತ್ತೆಗೆ ಸೊಸೆಯ ಬಗ್ಗೆ ಕೇಳ್ತಾರೆ. ಆಗ ಅತ್ತೆ, ‘ಮಗಳು ಸಕ್ಕರೆ ಇದ್ದಂತೆ, ಸೊಸೆ ಉಪ್ಪು ಇದ್ದಂತೆ’ ಎನ್ನುತ್ತಾರೆ. ಸೊಸೆಯ ಕಿವಿಗೆ ಆ ಮಾತು ಬಿದ್ದು ತುಂಬ ದುಃಖವೆನಿಸುತ್ತದೆ, […]
ಮುಂಜಾನೆ-ಸಂಜೆಯ ಈ ಎಡತಾಕುವಿಕೆಗೆ ಕನ್ನಡದಲ್ಲಿ ವಾಯು ವಿಹಾರ, ತಿರುಗಾಟ ಎನ್ನುವ ಸುಂದರ ಪ್ರಯೋಗಗಳಿರುವಾಗ ವಾಕಿಂಗ್ ಎನ್ನುವ ಆಂಗ್ಲ ವ್ಯಾಮೊಹ ಏಕೆ? ಎನ್ನುವುದು ನನ್ನ ತಕರಾರು. `ವಾಕಿಂಗ್’ನಲ್ಲಿ `ಕಿಂಗ್’ ಅಡಗಿ ಕುಳಿತಿರುವುದೇ ಎಲ್ಲರೂ ಈ ವಾಕಿಂಗ್ನ ಆಕರ್ಷಣೆಗೊಳಗಾಗಿರುವುದಕ್ಕೆ ಕಾರಣವಿರಬಹುದು ಎಂದು ನನ್ನ ಗುಮಾನಿ. – ಜಿ.ಎನ್.ರಂಗನಾಥ ರಾವ್ ಹೊರಗೆ ಶುಭ್ರ ನೀಲ ಆಕಾಶ. ಹೊತ್ತು ಕಂತುವ ಸಮಯ. ಸೂರ್ಯನಿಗೆ ಇಳಿ ಪ್ರಾಯದ ಪ್ರಖರತೆ. ಗೇಟು ತೆಗೆದು ಇನ್ನೇನು ಬೀದಿಗಿಳಿಯ ಬೇಕು. ಮನೆ ಎದುರಿನ ಮ್ಯಾನ್ ಹೋಲ್ ಉಕ್ಕಿ ಹರಿದು […]
ಪ್ರಸ್ತುತ ಕೊರೊನಾ ಪಿಡುಗಿನಿಂದ ನಾವು ದೂರ ಉಳಿಯಬೇಕಾದರೆ ಪುನಃ ಅಜ್ಜಿ ಮಾಡುತ್ತಿದ್ದ ಅಡುಗೆ ಪದ್ಧತಿಗೆ, ಗಾಂಧಿಯ ಮಾದರಿಗೆ ಮರು ಪಯಣ ಮಾಡುವುದು ಅನಿವಾರ್ಯ. – ಪ್ರೊ.ಶಿವರಾಮಯ್ಯ ಎಂಬತ್ತು ವರ್ಷ ದಾಟಿದ ನಮ್ಮಂತಹವರಿಗೆ ಆರೋಗ್ಯ ಭಾಗ್ಯ ಇನ್ನೂ ಉಳಿದಿರುವುದಕ್ಕೆ ನಾವು ಚಿಕ್ಕಂದಿನಲ್ಲಿ ತಿಂದ ಆಹಾರ ವಿಹಾರವೇ ಇರಬೇಕೆಂದು ನನ್ನ ಊಹೆ. ಯಾರಾದರೂ `ಅಜ್ಜ ನಿಮ್ಮ ಆರೋಗ್ಯದ ಗುಟ್ಟೇನು’ ಎಂದು ಕೇಳಿದರೆ `ಕೋಳಿ ತಿಂದಂಗೆ ತಿನ್ನೋದು ನಾಯಿ ಸುತ್ತಿದಂತೆ ಸುತ್ತೋದು’ ಎಂದು ನಾನು ಜೋಕು ಮಾಡಿದ್ದು ನಮ್ಮ ಎಳೆಯರ ಬಳಗದಲ್ಲಿ […]
ಚಟ ಚಕ್ರವರ್ತಿಗಳು ತಮ್ಮದೇ ಆದ ಕಾರಣಗಳನ್ನು ಕೊಟ್ಟುಕೊಂಡು ತಮ್ಮ ಚಟಾದಿಗಳನ್ನು ತಮ್ಮ ಅಂತ್ಯದವರೆಗೆ ಕಾದಿರಿಸಿಕೊಳ್ಳುತ್ತಾರೆ. ಕೆಲವರದು ಸುಖಾಂತವಾದರೆ, ಇನ್ನೂ ಎಷ್ಟೋ ದುಃಖಾಂತಗಳು! ಯಾರಾದರೂ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡಾಗ ಉಳಿದವರಲ್ಲಿ (ಬದುಕುಳಿದವರು?) ಸಾಮಾನ್ಯವಾಗಿ ಏಳುವ ಪ್ರಶ್ನೆ ಎಂದರೆ “ಅವನಿಗೆ ಏನಾದರೂ ಚಟ ಇತ್ತೋ ಏನೋ?” ಅಂತ. ಇಷ್ಟು ಸಣ್ಣ ವಯಸ್ಸಿನಲ್ಲೇ ಸಾವಿಗೆ ದೂಡಿರಬಹುದಾದ ಒಂದು ದೌರ್ಬಲ್ಯ ಅವನಲ್ಲಿ ಏನಿತ್ತು? ಅನ್ನುವ ಕುತೂಹಲ ಮನುಷ್ಯನ ಸಹಜ ಗುಣ. ಆ ಒಂದು ದೌರ್ಬಲ್ಯವನ್ನು ಚಟ ಅಂತ ಕರೆಯುವುದಾದರೆ, ಹಾಗೆ ಕೇಳುವುದೂ ಕೂಡ […]
ಇಡೀ ಕ್ಲಾಸುರೂಂಗೆ ಕಮಟು ವಾಸನೆ ಬೀರುತ್ತಿದ್ದ ಅಂಗೈ ತುಂಬುವ ರಬ್ಬರ್ ಇಡ್ಲಿಯನ್ನು ಎತ್ತಿ ಎತ್ತಿ ಶಾಂತಣ್ಣ ಕಾಗದದ ಮೇಲಿನ ಅಕ್ಷರಗಳನ್ನು ಉಜ್ಜುವಾಗ ಆನಂದ ಮೇಷ್ಟ್ರ ಕೈಗೆ ಸಿಕ್ಕಿ ಹಾಕಿಕೊಂಡ. ಸೋಂಪ ಎಷ್ಟೇ ಪ್ರಯತ್ನಿಸಿ ಹೇಳಿದ್ರು ಅಂಥ ಒಂದು ರಬ್ಬರ್ ಮರದಿಂದ ಸಿಗುತ್ತದೆ, ಅದು ಗಿಡಗಳಲ್ಲಿ ಸುರಿಯುತ್ತದೆ, ಆ ಇಡ್ಲಿ ಕರಗಿ ಮುಂದೆ ಏನೇನೋ ಆಗುತ್ತದೆ ಎಂಬುದು ಮೇಷ್ಟ್ರಿಗೂ ಅರ್ಥವಾಗಲಿಲ್ಲ! ನಮ್ಮದೇ ಮನೆ ಹಿಂದಿನ ಬೃಹತ್ ಕಾಡು ಸವರಿ ಬೋಳಾಗಿಸಿ ಅಲ್ಲೆಲ್ಲಾ ಲಕ್ಷಾಂತರ ರಬ್ಬರ್ ಗಿಡಗಳನ್ನು ಒಮ್ಮೆಲೇ ನೆಟ್ಟಾಗ […]
ಅಡ ಇಡುವುದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವೇ ಆಗಿದೆ. ಆದರೆ ‘ಇಂದಿನ ಆನ್ ಲೈನ್ ರೇಟಿಗೆ ಚಿನ್ನವನ್ನು ಮಾರಬೇಕೆ… ನಮ್ಮಲ್ಲಿಗೆ ಬನ್ನಿ’ ಎಂದು ಉಲಿಯುತ್ತ, ನಮ್ಮ ಕಷ್ಟ ಪರಿಹಾರಾರ್ಥವಾಗಿ ತಮ್ಮಲ್ಲಿಗೆ ಬರಲು ನೀಡುವ ಆಹ್ವಾನಗಳನ್ನು ಕುರಿತ ನನ್ನ ಸಂಕಟ ಹಂಚಿಕೊಳ್ಳಲು ಈ ಪ್ರಬಂಧ! ಟಿವಿ ಕುರಿತು ಕುಟುಂಬದ ಸದಸ್ಯರಲ್ಲಿ ಒಂದು ಅಲಿಖಿತ ಒಪ್ಪಂದ ಇರುತ್ತದೆ. ಅದು ಅವರವರ ನೆಚ್ಚಿನ ಕಾರ್ಯಕ್ರಮಗಳಿದ್ದಾಗ ಇತರರು ಕಿರಿಕಿರಿ ಮಾಡುವಂತಿಲ್ಲ ಎಂದು. ನಮ್ಮ ಮನೆಯಲ್ಲಿ ನನ್ನವಳ ಮೆಚ್ಚಿನ ಕೆಲ ಧಾರಾವಾಹಿಗಳ ವೇಳೆ ಬಿಟ್ಟು […]
ಎಷ್ಟೋ ಸಂದರ್ಭಗಳಲ್ಲಿ ಅಪ್ರಿಯವಾದ ಸತ್ಯವನ್ನು ಆಡಲು ಇಷ್ಟಪಡದೆ ಆತ್ಮಸಾಕ್ಷಿಗೆ ವಿರುದ್ಧವಾಗಿ ಸುಳ್ಳು ಹೇಳುವವರ ಸಂಖ್ಯೆ ದೊಡ್ಡದು. ಅಂತಹವರಲ್ಲಿ ನೀವೂ ಒಬ್ಬರಾ…?! ಪ.ರಾಮಕೃಷ್ಣ ಶಾಸ್ತ್ರಿ ಒಂದು ದೊಡ್ಡ ಸಮಾರಂಭಕ್ಕೆ ಹೋಗಿದ್ದೀರಿ. ನಿಮ್ಮ ಹತ್ತಿರ ಕುಳಿತವರು ಭೈರಿಗೆಯ ಹಾಗೆ ಏನಾದರೊಂದು ಮಾತನಾಡುತ್ತ ನಿಮ್ಮ ಕಿವಿಯನ್ನು ಕೊರೆಯುವರು. ಮಾತನಾಡುತ್ತಾರೆ, ಮಾರನಾಡುತ್ತಾರೆ, ಮಾತನಾಡುತ್ತಾರೆ. ನಿಮ್ಮನ್ನು ತುಟಿ ತೆರೆಯಲು ಬಿಡದೆ ಮಾತನಾಡುತ್ತಾರೆ. ಹಳಿ ತಪ್ಪುತ್ತಿರುವ ಸಂಸ್ಕತಿಯ ಬಗೆಗೆ, ಇಂದಿನ ಹುಡುಗಿಯರ ಲಂಗ ಮೊಣಕಾಲು ದಾಟಿ ಮೇಲೇರುತ್ತಿರುವ ಬಗೆಗೆ, ಯುವಕರು ದಾರಿ ತಿಳಿಯದೆ ಪೇಚಾಡುತ್ತಿರುವ ಬಗೆಗೆ, […]
ಎಲ್ಲರೂ ಮೊಬೈಲ್ ಫೋಟೋಗ್ರಾಫರುಗಳೇ! ಅದರಲ್ಲೂ ಸೆಲ್ಫೀ ಕ್ರೇಜಿಗಳೇ! ಬಟ್ಟೆ ಹಾಕಿಕೊಂಡು ತಯಾರಾಗುತ್ತಿದ್ದಂತೆ ಒಂದು ಫೋಟೋ ಅಥವಾ ಸೆಲ್ಫೀ ಕ್ಲಿಕ್ಕಾಗಲೇಬೇಕು. ಪ್ರತಿಯೊಂದು ಕ್ಷಣವನ್ನೂ ಸೆರೆ ಹಿಡಿಯುತ್ತಾ, ಅವುಗಳನ್ನು ಜಾಲತಾಣಗಳಿಗೆ ಅಪ್ಲೋಡ್ ಮಾಡುತ್ತಾ, ಲೈಕು, ಕಮೆಂಟಿಗಾಗಿ ಕಾಯುತ್ತಾ ಕುಳಿತುಕೊಳ್ಳುವ ಸಂಭ್ರಮ. ನಳಿನಿ ಟಿ. ಭೀಮಪ್ಪ ಮೊಬೈಲು ಬಂತೂ ಬಂತೂ ಒಳ್ಳೆ ಬೆಂಬಿಡದ ಬೇತಾಳ ಹೆಗಲಿಗೇರಿದಂತಾಯ್ತು ನೋಡಿ. ಪಾಪ ಯಾರಿಗೂ ಯಾರನ್ನು ಮಾತನಾಡಿಸಲೂ ಪುರುಸೊತ್ತಿಲ್ಲ, ಯಾರಿಗೆ ಯಾರೂ ಬೇಕಾಗಿಲ್ಲ, ಆದರೂ ಎಲ್ಲರೂ ಮೊಬೈಲಿನಲ್ಲಿ ಮಾತನಾಡುತ್ತಲೇ ಇರುತ್ತಾರೆ. ಅವರವರ ಲೋಕದಲ್ಲೇ ಮಗ್ನ. ಹತ್ತು […]
ಹೆಚ್ಚಿನ ಬೇಕುಗಳಿಲ್ಲದ, ಬೇಡದ್ದರ ಬಗೆಗೂ ಕುತೂಹಲಿಯಾಗಿ ಕಣ್ಣರಳಿಸಿ ನಿಲ್ಲುವ ಆ ವಯಸ್ಸು ಆ ಮನಸ್ಸು ಇಂದು ಎಲ್ಲೋ ಮರೆಯಾಯಿತಲ್ಲಾ… ಏಕೆ, ಹೇಗೆ ಎಂಬ ಮರುಕ ಮನೆಮಾಡುತ್ತದೆ. ಇದು ಏನು? ಇದು ಹೇಗೆ? ಯಾಕೆ ಹಾಗೆ? ಇದು ಇಲ್ಲೇ ಯಾಕೆ ಇದೆ? ಇವರು ಯಾರು? ಏನು ಸಂಬಂಧ? ಇತ್ಯಾದಿ ಪ್ರಶ್ನೆಗಳನ್ನು ಕೇಳುವುದು, ಮಕ್ಕಳ ಕುತೂಹಲದ ಅಭಿವ್ಯಕ್ತಿಯ ಒಂದು ಭಾಗ. ಅಂತೆಯೇ ದೊಡ್ಡವರನ್ನು ಅನುಕರಿಸುವುದು ಅವರ ಕಲಿಕೆಯ ಒಂದು ಭಾಗ. ಅಂತಹ ಅನುಕರಣೆ ಸಾಧ್ಯವಾದಷ್ಟು ಅವರ ಆಟ-ಪಾಠದಲ್ಲಿ ಬೆರೆತುಹೋಗಿರುತ್ತದೆ. ತಾವು […]
ಅನಾಥರಿಗೆ, ಮಕ್ಕಳಿಂದ ಪರಿತ್ಯಕ್ತರಾದ ವೃದ್ಧರಿಗೆ, ವಿಧವೆಯರಿಗೆ ಕೊಡಲೇಬೇಕಾದ ಒಂದು ಸಾವಿರ ರೂಪಾಯಿ ಮಾಸಿಕ ವೇತನ ಈಗ ಸುಳ್ಳು ಘೋಷಣೆ ಮಾಡಿ ಕೈಯೊಡ್ಡುವವರಿಗೂ ಸಿಗುತ್ತದೆ. ಉಚಿತವಾಗಿ ಸಿಗುತ್ತದೆಂಬಾಗ ಜನರೂ ಕೂಡ ಪ್ರಾಮಾಣಿಕತೆಗೆ ಗುಡ್ಬೈ ಹೇಳುತ್ತಿದ್ದಾರೆ. ರಿಕ್ಷಾ ಚಾಲಕ ಅತ್ಯಂತ ತಿರಸ್ಕಾರದ ಮುಖಭಾವದಲ್ಲಿ ಹೇಳಿದ, “ಥತ್! ಹಿಂದಿನ ಸರಕಾರದವರು ಒಬ್ಬ ಸೂಳೆಗೆ ಐದು ಸಾವಿರ ಕೊಡುತ್ತಿದ್ರು, ಲೆಕ್ಕ ಕೇಳದೆ ಎದ್ದು ಹೋಗ್ತಿದ್ರು. ಆದ್ರೆ ಇಂದಿನವರು, ಐನೂರು ಕೊಡ್ತಾರೆ. ಮಲಗಿ ಏಳುವಾಗ ತೆರಿಗೆ ಹೆಸ್ರಿನಲ್ಲಿ ಎಲ್ಲವನ್ನೂ ಕೊತ್ಕೊಂಡು ಮಲಗಿದೋಳ ಸೀರೆ ಕೂಡ […]
ಹೆಂಡತಿ ಮತ್ತು ಹರಕಲು ಬನಿಯನ್ ಎರಡರಲ್ಲಿ ಒಂದನ್ನು ಆರಿಸಿಕೊ ಎಂದರೆ ನಾನು ನಿಶ್ಚಯವಾಗಿಯೂ ಹರಕಲು ಬನಿಯನ್ ಆರಿಸಿಕೊಳ್ಳುವವನೇ. ಏಕೆಂದರೆ, ಅದು ಹೆಂಡತಿ ಬರುವುದಕ್ಕೂ ಮುಂಚಿನಿಂದಲೂ ನನ್ನ ಹೃದಯಕ್ಕೆ ಹತ್ತಿರವಾಗಿದೆ! ನನಗೆ ಈ `ಈ ಮೇಲ್’ ಮತ್ತು `ಫೀ-ಮೇಲ್’ಗಳ ಬಗ್ಗೆ ತುಂಬ ಕಿರಿಕಿರಿ. ಕಿರಿಕಿರಿಯಾದರೂ ಕಾಳಜಿ ಮಾಡಲೇಬೇಕು ಅನ್ನುವಂಥ ಜರೂರಿನೊಂದಿಗೆ ಅವು ವಕ್ಕರಿಸುತ್ತವೆ. ಅಂಚೆಯವನು ತಂದುಕೊಡುವ ಮೈಲ್ ಇದೆಯಲ್ಲ, ಅದು ಹಾಗಲ್ಲ. ಸಾವಧಾನವಾಗಿ ಪರೀಶಿಲಿಸುವಂಥಾದ್ದು. ಬೇಡವಾದ್ದನ್ನು, ನಮ್ಮ ವರಕವಿ ಬೇಂದ್ರೆಯವರು ಬೇಡವಾದ ಅತಿಥಿಗಳನ್ನು `ಸಕ್ಕರಿ ಕೊಟ್ಟು ಕಳಿಸು’ ಅಂಬೋ […]
ವಿದೇಶಕ್ಕೆ ಹೋಗಬೇಕಾದರೆ ಆ ದೇಶದ ವೀಸಾ ಬೇಕೇಬೇಕು. ಕಳೆದ ವರ್ಷ ಲೇಖಕರ ಸಮಾವೇಶದಲ್ಲಿ ಭಾಗವಹಿಸಲು ಫಿಲಿಪೈನ್ಸ್ನ ರಾಜಧಾನಿ ಮನೀಲಾಗೆ ಹೋಗಬೇಕಾಗಿ ಬಂತು. ‘ವಿಮಾನ, ವಸತಿ, ಸಮಾವೇಶದ ಖರ್ಚು ನಮ್ಮದೇ. ವೀಸಾ ವೆಚ್ಚವನ್ನೂ ನಂತರದಲ್ಲಿ ಭರಿಸುತ್ತೇವೆ. ಅದನ್ನೆಲ್ಲ ಸಿದ್ಧಪಡಿಸುವ ಹೊಣೆ ನಿಮ್ಮದು’ ಅಂದಿದ್ದರು ಸಂಘಟಕರು. ನಾನು ಮಾತ್ರ ವೀಸಾ ಗಿಟ್ಟಿಸುವ ನಿಟ್ಟಿನಲ್ಲಿ ಸೋತು ಹೈರಾಣಾದೆ. ಆದರೂ ಆ ದೇಶ ಕಂಡುಬಂದೆ! ಈ ವೀಸಾ ನಿಯಮಗಳು ದೇಶದಿಂದ ದೇಶಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗ್ತಾನೇ ಇರ್ತವೆ. ಅದರಲ್ಲೂ ಭಯೋತ್ಪಾದಕರ ದಾಳಿ, ಮಾರಕ […]
ಈ ಕನ್ನಡ ಕುಲಪುತ್ರರು ಒಂದು ಕಾಲಕ್ಕೆ ಕಳ್ಳೀಸಾಲಿನ ಹಳ್ಳೀ ಮನೆಯಲ್ಲಿ ಹುಟ್ಟಿ ರೊಟ್ಟಿ-ಖಾರಬ್ಯಾಳಿ ಉಂಡು ಬಂದವರೇ. ಆದರೆ ನನ್ನ ಎದೆ ಭುಗುಲ್ ಅನ್ನುವ ಸುದ್ದಿ ಗೊತ್ತಾಯಿತು. ಇವರಿಗೆ ಈಗ ಕನ್ನಡವೇ ಕುತ್ತು! ಇಂಗ್ಲಿಷೆ ಸಂಪತ್ತು! ಇವರ ಮನೆಗೆ ಬರುವ ಇಂಗ್ಲಿಷ್ ಪತ್ರಿಕೆಗಳ ಗುಂಪಿನಲ್ಲಿ ನೆಂಚಿಕೊಳ್ಳಲು ಕೂಡ ಒಂದೂ ಕನ್ನಡ ಪತ್ರಿಕೆ ಇಲ್ಲ! ಅದೊಂದು ಸುಂದರ ನಂದನವನ. ಇಂದ್ರ ಬಯಸುವ ಚದುರಂಗ ಚಂದನವನ. ಬಣ್ಣ ಬೆಡಗು ಬಂಗಾರ ಸಿಂಗಾರ ತುಂಬಿದ ಭಾಗ್ಯವಂತರ ಬೃಂದಾವನ! ಹೌದು! ಜೀವನದಲ್ಲಿ ಇಂಥ ಪ್ರೊಟೆಕ್ಟೆಡ್ ಮೆಟ್ರೋಟೆಕ್ ಕಾಲನಿಯಲ್ಲಿ […]
ಅವಳು ಕೊಟ್ಟ ಹೂ ಮಾಲೆ ಮುಡಿದು ಸ್ಕೂಟಿಯ ಮೇಲೆ ತಂಗಾಳಿಗೆ ಇನಿಯನ ನೆನಪಿಸಿಕೊಳ್ಳುತ್ತ ಹಿಂದೆ ಹೂ ಹಾರಾಡುವ ಅನುಭೂತಿಯನ್ನು ಮೈ ತುಂಬಿಕೊಂಡು, ಮನದುಂಬಿಕೊಂಡು ಸಣ್ಣಗೆ ಹಾಡು ಗುನುಗುತ್ತ ಹೊರಟ ಹೆಣ್ಮಕ್ಕಳ ಚೆಂದವನ್ನೋ… ಬೈಕ್ನ ಮುಂದಿನ ಪಾಕೆಟ್ನಲ್ಲಿ ಹೊಸ ಹೆಂಡತಿಗಾಗಿ ರಾಕಿ ಕೊಟ್ಟ ಮಲ್ಲಿಗೆ ಜಡೆಯನ್ನು ಬಾರಿ ಬಾರಿ ಮುಟ್ಟುತ್ತ ಹೊರಟ ಹೊಸಪೋರನನ್ನೋ ನೋಡಬೇಕೆಂದರೆ ನೀವು ಶಾಲ್ಮಲೆಯ ತಟದ ನಮ್ಮೂರು ಅಂಕೋಲೆಗೇ ಬರಬೇಕು. ಬಾಲಾಜಿ ಅಂಗಡಿಯ ಬಾಗಿಲಲ್ಲಿ ಚಿಕ್ಕ ಹೂವಿನ ಚೆಬ್ಬೆಯೊಳಗೆ ಸದಾ ಹಸಿಹಸಿಯಾಗಿರುವ ಹಸಿರು ಬಾಳೆಯೆಲೆಯ ತುಂಡುಗಳನ್ನಿಟ್ಟು […]
ಉಪ್ಪು ತಿಂದವ ನೀರು ಕುಡಿಯಲೇಬೇಕು, ಹಾಗೆಯೇ ತಂಬಾಕು ತಿನ್ನುವವ ಉಗುಳಲೇಬೇಕು. ತಂಬಾಕು ಸೇವನೆಯಿಂದ ದೇಹಕ್ಕೆ ಹಾನಿ, ಕ್ಯಾನ್ಸರ್ ರೋಗಕ್ಕೆ ಆಹ್ವಾನ. ಅದು ನಿಮ್ಮನ್ನು ಕೊಲ್ಲುತ್ತದೆ. ಹೀಗೆಂದು ನಮ್ಮ ಘನ ಸರಕಾರ ಪ್ರಸಾರ ಮಾಧ್ಯಮಗಳಿಂದ ಎಷ್ಟೊಂದು ಪ್ರಚಾರ ಮಾಡುತ್ತಿದೆ. ಅದಕ್ಕಾಗಿ ನೂರೆಂಟು ಕೋಟಿ ಖರ್ಚು ಮಾಡುತ್ತ್ತಿದೆ. ಅದೆಲ್ಲ ಸರಿ. ಆದರೆ ಅದೇ ವೇಳೆಗೆ ನಮ್ಮ ರಾಜ್ಯದ ಉತ್ತರ ಗಡಿಭಾಗದಲ್ಲಿ ತಂಬಾಕಿನ ಸಮೃಧ್ಧಫಸಲು ಹಾಗು ಇದನ್ನು ಬೆಳೆಯುವ ರೈತರು ಎಂಟೂ ಬೆರಳುಗಳಿಗೆ ಚಿನ್ನದ ಉಂಗುರ ಹಾಕಿಕೊಂಡು, ಬುಲ್ಲೆಟ್ ಮೋಟಾರು ಸೈಕಲ್ […]
ಬಾಲ್ಯವನ್ನು ವರ್ಣರಂಜಿತಗೊಳಿಸಿದ ಟಾಕೀಸುಗಳನ್ನು ಈಚೆಗೆ ಊರಿಗೆ ಹೋದಾಗ ನೋಡಿದೆ. ಮತಾಪು ಉರಿದ ದೀಪಾವಳಿ ಹೂಕುಂಡಗಳಂತೆ, ಮಂತ್ರಶಕ್ತಿ ಕಳೆದುಕೊಂಡ ದಂಡಗಳಂತೆ ಕಂಡವು. ನಮ್ಮೂರಿನಲ್ಲಿ ಅದರ ಕಣ್ಣುಗಳಂತೆ ಎರಡು ಸಿನಿಮಾ ಟಾಕೀಸುಗಳಿವೆ ‘ಭಾರತ’-‘ವಿನಾಯಕ’. ಹಳಬರು ಇವನ್ನು ಸ್ಥಾಪನ ಚರಿತ್ರೆಯ ಆಧಾರದಲ್ಲಿ ಹಳೇಟಾಕೀಸ್ ಹೊಸಟಾಕೀಸ್ ಎನ್ನುವರು. ಇವೆರಡೂ ಊರೆದೆಯ ಮೇಲೆ ಹಾದುಹೋಗಿರುವ ಬೆಂಗಳೂರು-ಹೊನ್ನಾವರ ರಸ್ತೆಯ ಎರಡು ದಿಕ್ಕಿನಲ್ಲಿವೆ. `ಭಾರತ’ದಲ್ಲಿ ಸಮಸ್ತ ಭಾರತೀಯ ಭಾಷಾ ಚಿತ್ರಗಳು; `ವಿನಾಯಕ’ದಲ್ಲಿ ಹೆಚ್ಚಾಗಿ ಕನ್ನಡ ಸಿನಿಮಾ. ಇವು ಜನರ ಅಭಿರುಚಿಗೆ ಅನುಸಾರ ಸಿನಿಮಾ ಹಾಕುತ್ತಿದ್ದವೊ, ಜನರ ಅಭಿರುಚಿಯನ್ನೂ […]