ಪುಟ್ಟನಾಡು ಸ್ಲೊವೆನಿಯಾ

-ರಹಮತ್ ತರೀಕೆರೆ

 ಪುಟ್ಟನಾಡು ಸ್ಲೊವೆನಿಯಾ <p><sub> -ರಹಮತ್ ತರೀಕೆರೆ </sub></p>

ಯೂರೋಪಿನಲ್ಲಿ ನೂರಿನ್ನೂರು ಕಿಮೀ ಹಾದರೆ ಇನ್ನೊಂದು ದೇಶವೇ ಸಿಗುತ್ತದೆಯಷ್ಟೆ. ಸ್ಲೊವೇನಿಯಾ ತನ್ನ ಚರಿತ್ರೆಯುದ್ದಕ್ಕೂ ಬೇರೆಬೇರೆ ಶಕ್ತಿಗಳಿಂದ ಆಳಿಸಿಕೊಂಡ ದೇಶ. ಹೀಗಾಗಿಯೇ ಇಲ್ಲಿ ವಿವಿಧ ಭಾಷಿಕರ ಮತ್ತು ಜನಾಂಗಗಳ ವಲಸೆ ನಿರಂತರ ನಡೆದಿದೆ. ಯೂರೋಪಿನಲ್ಲಿ ನಮಗೆ ಪ್ರಿಯವಾಗಿದ್ದು ಅಷ್ಟೇನೂ ಖ್ಯಾತವಲ್ಲದ ಪುಟ್ಟದೇಶ ಸ್ಲೊವೆನಿಯಾ. ಬಿಗಿಹುಬ್ಬಿನ ಅತಿಶಿಸ್ತಿನ ಜರ್ಮನಿಯಲ್ಲಿದ್ದು ಹೋದ ಕಾರಣವಿದ್ದೀತು, ಅಲ್ಲಿ ನಿರಾಳತೆ ಅನುಭವಿಸಿದೆವು. ಸ್ಲೊವೆನಿಯನರು ಭಾರತೀಯರಂತೆ ಅತಿಯಾದ ಖಾಸಗಿತನ ಪ್ರಜ್ಞೆಯಿಲ್ಲದೆ ಎದೆತೆರೆದು ಮಾತಾಡುವರು. ಇಟಲಿ ಆಸ್ಟ್ರಿಯಾ ಹಂಗೇರಿಗಳ ನಡುವೆ ಅದು ಇರುಕಿಕೊಂಡಿದೆ. ಮಹಾಯುದ್ಧಗಳ ಕಾಲದಲ್ಲಿ ಯುಗೊಸ್ಲಾವಿಯಾ ದೇಶದೊಳಗೆ […]