ಮುಖ್ಯಚರ್ಚೆಗೆ-ಪ್ರವೇಶ

ಸೋಂಕುರೋಗ ಪ್ರೇರೇಪಿಸಿದ ಆನ್‌ಲೈನ್ ಕ್ರಾಂತಿ ಶಾಶ್ವತವೇ..? ನಮ್ಮ ದೈನಂದಿನ ಆಗುಹೋಗುಗಳ ಭರಾಟೆಯನ್ನು ಸಂಪೂರ್ಣವಾಗಿ ಕದಡಿ ವ್ಯಾವಹಾರಿಕ ಸಮಾಜದ ಮೂಲಸ್ತಂಭಗಳನ್ನೇ ಅಲುಗಾಡಿಸಿರುವ ಕೋವಿಡ್-19 ಸಾಂಕ್ರಾಮಿಕ ರೋಗ ಕಳೆದ ಮೂರು ತಿಂಗಳುಗಳಲ್ಲಿ ನಮ್ಮ ಸಂವಹನದ ಗುಣಲಕ್ಷಣಗಳನ್ನೇ ಬದಲಾಯಿಸಿದೆ. ಆತ್ಮೀಯವಾಗಿ ಕೈಕುಲುಕಿ, ಪ್ರೀತಿ ಹೆಚ್ಚಾದರೆ ತಬ್ಬಿಕೊಂಡು, ಶಾಲೆ ಕಾಲೇಜು ಕಛೇರಿ ಸಭೆ ಸಮಾರಂಭಗಳಲ್ಲಿ ನಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಮುಕ್ತ ಪರಿಸರದ ಬದಲಿಗೆ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕವೇ ಆನ್‌ಲೈನ್ ಸಂವಹನ ಮಾಡುವ ಅನಿವಾರ್ಯತೆ ಎದುರಾಗಿದೆ.  ಕೊರೊನಾ ಪ್ರೇರೇಪಿಸಿದ ಈ ಆನ್‌ಲೈನ್ […]

ಸವಾಲಿಗೆ ತಾತ್ಕಾಲಿಕ ಜವಾಬು

-ಸುಧೀಂದ್ರ ಬುಧ್ಯ

ಸವಾಲಿಗೆ ತಾತ್ಕಾಲಿಕ ಜವಾಬು
-ಸುಧೀಂದ್ರ ಬುಧ್ಯ

ಸೋಂಕುರೋಗ ಪ್ರೇರೇಪಿಸಿದ ಆನ್ ಲೈನ್ ಕ್ರಾಂತಿ ಶಾಶ್ವತವೇ ಎಂಬ ಪ್ರಶ್ನೆಗೆ, ಅದಕ್ಕಿರುವ ತೊಡಕುಗಳನ್ನು ಪರಿಗಣಿಸಿ ಇಲ್ಲ ಎಂಬ ಒಂದು ಪದದ ಉತ್ತರ ಕೊಡಬಹುದು. ಆದರೆ ಬದಲಿ ಆಯ್ಕೆಯಾಗಿ ಆನ್ ಲೈನ್ ಕ್ರಾಂತಿ ಎನ್ನುವುದು ಸೋಂಕು ರೋಗ ಅನಿವಾರ್ಯವಾಗಿಸಿರುವ ಒಂದು ಬದಲಾವಣೆ. ಮನುಷ್ಯ ಮುಂದಿನ ಬದಲಾವಣೆಗೆ ಅಣಿಯಾಗುವವರೆಗೆ ಅದರ ಚಲಾವಣೆ. ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲಿಗೆ ಕೊರೊನಾ ಸೋಂಕು ಕಾಣಿಸಿಕೊಂಡು, ಇಡೀ ನಗರವನ್ನೇ ಅವರು ಸ್ಯಾನಿಟೈಸ್ ಮಾಡಿ, ಅಲ್ಲಿನ ಜನರೆಲ್ಲಾ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ಮನೆಯ ಬಾಲ್ಕನಿಯಿಂದ ಇಣುಕುತ್ತಿರುವುದನ್ನು […]

ಉಳಿಯಲಿರುವ ಬದಲಾವಣೆಗೆ ಸುರಕ್ಷತೆಯೇ ಸವಾಲು

-ಡಾ.ಉದಯ ಶಂಕರ ಪುರಾಣಿಕ

ಉಳಿಯಲಿರುವ ಬದಲಾವಣೆಗೆ  ಸುರಕ್ಷತೆಯೇ ಸವಾಲು
-ಡಾ.ಉದಯ ಶಂಕರ ಪುರಾಣಿಕ

ಕೋವಿಡ್-19ರಿಂದಾಗಿ ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗ ನಷ್ಟವಾಗುತ್ತಿದೆ. ಆದರೆ ಆನ್‌ಲೈನ್, ಡಿಜಿಟಲ್ ಮತ್ತು ಸೈಬರ್ ಸುರಕ್ಷತೆ ಕ್ಷೇತ್ರಗಳಲ್ಲಿ ದೊರೆಯುತ್ತಿರುವ ಹೊಸ ಉದ್ಯೋಗಾವಕಾಶಗಳನ್ನು ಕನ್ನಡಿಗರು ಪಡೆಯಲು ಮುಂದಾಗಬೇಕಾಗಿದೆ. ಕೋವಿಡ್-19 ಕುರಿತು ಅಂತರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಜನವರಿ 30ರಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತು. ಅಂದಿನಿAದ ಇಂದಿನವರಗೆ ವಿಶ್ವಾದಂತ್ಯ ಆನ್‌ಲೈನ್ ಸೌಲಭ್ಯಗಳ ಬಳಕೆ ಸರಾಸರಿ ಶೇಕಡಾ 45ರಷ್ಟು ಹೆಚ್ಚಾಗುತ್ತಿದೆ. ಭಾರತದಲ್ಲಿ 504 ಮಿಲಿಯನ್ ಸಕ್ರಿಯ ಇಂಟರ್‌ನೆಟ್ ಬಳಕೆದಾರರು ಇದ್ದಾರೆ. ಇವರಲ್ಲಿ ಶೇಕಡಾ 14ರಷ್ಟು ಬಳಕೆದಾರರು, 5ರಿಂದ 11 ವರ್ಷದ ವಯೋಮಿತಿಯವರಾಗಿದ್ದಾರೆ. […]

ಕಾಲಿಗೆ ಬೀಗ ಹಾಕುವ ಆನ್‌ಲೈನ್ ಕ್ರಾಂತಿ

-ಓಂಶಿವಪ್ರಕಾಶ್ ಎಚ್.ಎಲ್.

ಕಾಲಿಗೆ ಬೀಗ ಹಾಕುವ ಆನ್‌ಲೈನ್ ಕ್ರಾಂತಿ
-ಓಂಶಿವಪ್ರಕಾಶ್ ಎಚ್.ಎಲ್.

ಗೋಡೆಯ ಕಿಂಡಿಯಿಂದ ಇಣುಕಿ ನೋಡುವ ಬೆಳಕು ಮತ್ತು ಮೊಬೈಲ್ ತರಂಗಗಳ ನಡುವೆ ಆಯ್ಕೆ ಎದುರಾದರೆ ನಾನಂತೂ ಬೆಳಕಿನತ್ತ ಚಲಿಸುವೆ! ವರ್ಕ್ ಫ್ರಂ ಹೋಮ್, ನೆಟ್‌ಫ್ಲಿಕ್ಸ್, ಪ್ರೆಮ್, ಆನ್‌ಲೈನ್ ಕ್ಲಾಸ್‌ರೂಮ್, ಟೆಕ್ನಾಲಜಿ, ಇ-ಪುಸ್ತಕಗಳು, ಇ-ಕನ್‌ಸಲ್ಟಿಂಗ್, ಇ-ಪೇಮೆಂಟ್… ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತದೆ. ಬಹುಶಃ ಮನುಷ್ಯ ವಿಶ್ವದಾದ್ಯಂತ ಬಳಸಿದ ಪದಗಳ ಪಟ್ಟಿಗಳಲ್ಲಿ ಇವು ಇತ್ತೀಚೆಗೆ ಅತಿ ಹೆಚ್ಚು ಬಳಕೆಯಾದಂತಹವು ಎಂದರೆ ಅತಿಶಯೋಕ್ತಿಯಾಗಲಾರದು. ಇದೀಗ ತಾನೇ ಶಾಲೆ ಮುಗಿಸಿ, ಬೇಸಿಗೆಯ ರಜೆಯಲ್ಲಿರಬೇಕಿದ್ದ ಮಗಳು ನಮ್ಮಿಬ್ಬರನ್ನೂ ದಿನವಿಡೀ ಮನೆಯಲ್ಲೇ ನೋಡಿ ಖುಷಿಪಟ್ಟಳು. ಶಾಲೆಯ ನಂತರ […]

ಸಿನಿಮಾರಂಗದ ಮೇಲೆ ಕೋವಿಡ್-19 ಪರಿಣಾಮ

-ಡಾ.ಕೆ.ಪುಟ್ಟಸ್ವಾಮಿ

ಸಿನಿಮಾರಂಗದ ಮೇಲೆ  ಕೋವಿಡ್-19 ಪರಿಣಾಮ
-ಡಾ.ಕೆ.ಪುಟ್ಟಸ್ವಾಮಿ

ಸಿನೆಮಾ ಅಭಿವ್ಯಕ್ತಿ ಕ್ರಮ ಅಥವಾ ಶೈಲಿಯ ಪಲ್ಲಟಕ್ಕೆ ಕೊರೋನಾ ಕಾರಣವಾಗಿದೆ. ಆದರೆ ಪ್ರೇಕ್ಷಕರು ಬದಲಾದ ಕಾಲಮಾನಕ್ಕೆ ತಕ್ಕಂತೆ ತಮ್ಮ ಅಭಿರುಚಿಗಳನ್ನು, ಸಿನಿಮಾ ನೋಡುವ ವಿಧಾನಗಳನ್ನೂ ಮಾರ್ಪಡಿಸಿಕೊಳ್ಳುತ್ತಿದ್ದಾರೆ. ಕೋವಿಡ್ ಹಾವಳಿಯು ಈ ಬದಲಾವಣೆಯನ್ನು ಹೆಚ್ಚು ಸ್ಥಿರಗೊಳಿಸಲು ತನ್ನ ಕಾಣಿಕೆಯನ್ನು ನೀಡುತ್ತಿದೆ. ಮಿಷು ಕಾಕು ಎಂಬ ಅಮೆರಿಕದ ಪ್ರಸಿದ್ಧ ಭೌತವಿಜ್ಞಾನಿಯು ಇಪ್ಪತ್ತೊಂದನೆಯ ಶತಮಾನದ ಜಗತ್ತಿನ ಮೇಲೆ ತಂತ್ರಜ್ಞಾನಗಳು ಬೀರಬಹುದಾದ ಪರಿಣಾಮಗಳನ್ನು ಕುರಿತ ‘ವಿಷನ್ಸ್’ ಎಂಬ ವಿಜ್ಞಾನ ಭವಿಷ್ಯದ್ದರ್ಶನದ ಪುಸ್ತಕವೊಂದನ್ನು ಬರೆದ. 1988 ರಲ್ಲಿ ಪ್ರಕಟವಾದ ಈ ಕೃತಿಯಲ್ಲಿ ವಿಜ್ಞಾನಿ ಕಾಕು, […]

ತಂತ್ರಜ್ಞಾನ, ಯಂತ್ರೋಪಕರಣ ಪರ್ಯಾಯವಲ್ಲ

ಡಾ.ಎಚ್.ಎಸ್.ಅನುಪಮಾ

ತಂತ್ರಜ್ಞಾನ, ಯಂತ್ರೋಪಕರಣ ಪರ್ಯಾಯವಲ್ಲ
ಡಾ.ಎಚ್.ಎಸ್.ಅನುಪಮಾ

ಮುಟ್ಟದಿರಿ, ಮುಟ್ಟಿದರೆ ಕೈತೊಳೆಯಿರಿ ಎನ್ನುವ ಕಾಯಿಲೆ ಕೋವಿಡ್‌ಗೆ ಆನ್‌ಲೈನ್ ವ್ಯವಹಾರ ಹೇಳಿಮಾಡಿಸಿದಂತಿದೆ ನಿಜ. ಆದರೆ ಭವಿಷ್ಯದಲ್ಲೂ ಇದು ಬೇಕೇ? ಎಲ್ಲಿ, ಎಷ್ಟು ಬೇಕು? ವೈದ್ಯಕೀಯ ರಂಗದಲ್ಲಿ ಆನ್‌ಲೈನ್ ಸಾಧ್ಯತೆಗಳೇನು? ನಿಸ್ತಂತು ಮಾಧ್ಯಮ ಜನಸಂಪರ್ಕ ಸಾಧನವಾಗಿ ಬಳಕೆಯಾಗತೊಡಗಿದ್ದೇ ಬಂಡವಾಳ ಹೂಡುವವರು ಅದರ ವ್ಯಾಪಾರಿ ಸಾಧ್ಯತೆಗಳನ್ನು ಶೋಧಿಸಿದಾಗ. ಈ ವಿಷಯದಲ್ಲಿ ಆರೋಗ್ಯ ಕ್ಷೇತ್ರದ ಬಂಡವಾಳಿಗರು ಮುಂದಿದ್ದಾರೆ. ಕೋವಿಡ್ ಬರುವ ಮೊದಲೇ ವೈದ್ಯಕೀಯವು ಆನ್‌ಲೈನ್ ಆಗಿದೆ. ಪ್ರತಿವರ್ಷ ವೈದ್ಯಕೀಯ ವೃತ್ತಿಗೆ ಇಳಿಯುವ ಸಾವಿರಾರು ಹೊಸ ತಲೆಮಾರಿನ ಡಾಕ್ಟರುಗಳು ತಮ್ಮೊಡನೆ ಹೊಸ ಆಲೋಚನೆಗಳು, […]

ಶಿಕ್ಷಣ ಕ್ಷೇತ್ರದಲ್ಲಿ ಸಜೀವ ತರಗತಿಗಳೇ ಉಳಿಯಲಿ!

-ಪ್ರೊ.ಎಮ್.ಅಬ್ದುಲ್ ರೆಹಮಾನ್ ಪಾಷ

ಶಿಕ್ಷಣ ಕ್ಷೇತ್ರದಲ್ಲಿ  ಸಜೀವ ತರಗತಿಗಳೇ ಉಳಿಯಲಿ!
-ಪ್ರೊ.ಎಮ್.ಅಬ್ದುಲ್ ರೆಹಮಾನ್ ಪಾಷ

‘ಶಿಕ್ಷಣ ಎಂದರೆ, ಶಾಲೆಗಳಲ್ಲಿ ಕಲಿತಿದ್ದನ್ನು ಮರೆತ ನಂತರ ನಮ್ಮೊಂದಿಗೆ ಉಳಿಯುವಂಥಾದ್ದು’ ಎನ್ನುತ್ತಾರೆ ಅಲ್ಬರ್ಟ್ ಐನ್‌ಸ್ಟೈನ್. ಎಂದರೆ ಶಿಕ್ಷಣದ ಹೆಸರಿನಲ್ಲಿ ನಮ್ಮ ತಲೆಗಳಲ್ಲಿ ತುಂಬಿರುವುದಕ್ಕಿಂತ ಮುಂದೆ ನಮ್ಮ ಬದುಕಿಗೆ ಜೊತೆಯಾಗುವುದು ಶಾಲಾ ವ್ಯವಸ್ಥೆಯಲ್ಲಿ ನಾವು ರೂಢಿಸಿಕೊಂಡಿರುವ ಸಮಗ್ರ ವ್ಯಕ್ತಿತ್ವ. ಆದರೆ ಇಂದಿನ ಆನ್‌ಲೈನ್ ಶಿಕ್ಷಣವೇ ಶಾಶ್ವತವಾಗಿ ಮುಂದುವರಿದರೆ ಕೊನೆಗೆ ನಮ್ಮೊಂದಿಗೆ ಉಳಿಯುವುದು ಶೂನ್ಯ ಮಾತ್ರ! ‘ಶಿಕ್ಷಣ ಎಂದರೆ, ಮಾಹಿತಿ, ಅರಿವು, ಜ್ಞಾನ, ಜೀವನ ಕೌಶಲಗಳನ್ನು ನೀಡಿ, ಮೌಲ್ಯಗಳು, ನಂಬಿಕೆಗಳು ಮತ್ತು ಕರ್ತವ್ಯ ಪ್ರಜ್ಞೆಯನ್ನು ಬೆಳೆಸಿಕೊಂಡು ಅದಕ್ಕೆ ತಕ್ಕ ವರ್ತನೆಗಳನ್ನು […]

ನ್ಯಾಯಾಲಯಗಳ ಕಲಾಪಗಳನ್ನು ವಿಡಿಯೋ ಪ್ರಸಾರ ಮಾಡಲು ತಡವೇತಕೆ?

ಕೆ.ವಿ.ಧನಂಜಯ

ನ್ಯಾಯಾಲಯಗಳ ಕಲಾಪಗಳನ್ನು  ವಿಡಿಯೋ ಪ್ರಸಾರ ಮಾಡಲು ತಡವೇತಕೆ?
ಕೆ.ವಿ.ಧನಂಜಯ

ಸದ್ಯದ ಕೋವಿಡ್ ಪರಿಸ್ಥಿತಿಯಲ್ಲಿ ಭಾರತೀಯ ನ್ಯಾಯಾಂಗವು ಈವರೆಗೆ ಸತತವಾಗಿ ನಿರ್ಲಕ್ಷಿಸುತ್ತಾ ಬಂದಿರುವ ಕಲಾಪಗಳ ವಿಡಿಯೋ ಚಿತ್ರೀಕರಣ ಮತ್ತು ಸಾರ್ವಜನಿಕ ಪ್ರಸಾರವನ್ನು ಕಾರ್ಯಗತಗೊಳಿಸುವ ಅಗತ್ಯವಿದೆ. ನಾನು 2008ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಲಿಖಿತ ಮನವಿಯೊಂದನ್ನು ಮಾಡಿದ್ದೆ. ಅದು ಬಹಳ ಸರಳ ಮತ್ತು ಸಾಧಾರಣ ಮನವಿ. ಕೆಲವು ಪತ್ರಿಕೆಗಳಲ್ಲೂ ಆ ಮನವಿಯ ಬಗ್ಗೆ ವರದಿ ಮಾಡಲಾಯಿತು. ಅದೇ ವರ್ಷ ದೆಹಲಿಯ ಉಚ್ಚ ನ್ಯಾಯಾಲಯಕ್ಕೆ ಅಂತಹುದೇ ಮನವಿಯನ್ನು ಮಾಡಿದೆ. ಸುಮಾರು 12 ವರ್ಷಗಳ ನಂತರವೂ ಆ ಮನವಿ ಕೇವಲ ಕಡತದಲ್ಲೇ ಉಳಿದಿದೆ. […]

ರಾಜಕಾರಣಿಗಳು ಏನಂತಾರೇ…?

ಸಂದರ್ಶನ: ರವಿ ಮಾಳೇನಹಳ್ಳಿ

ರಾಜಕಾರಣಿಗಳು ಏನಂತಾರೇ…?
ಸಂದರ್ಶನ: ರವಿ ಮಾಳೇನಹಳ್ಳಿ

ವೇಗ ಇರಲಿ -ಎಚ್.ಕೆ.ಪಾಟೀಲ್, ಮಾಜಿ ಸಚಿವರು. ಆನ್ ಲೈನ್ ವ್ಯವಸ್ಥೆಯು ಜನರಿಗೆ ಹೊಸ ದಾರಿಯತ್ತ ನಡೆಯಲು ಒಂದು ಅಡಿಪಾಯವನ್ನು ಹಾಕಿದೆ. ಇದು ಉಜ್ವಲ ಭವಿಷ್ಯಕ್ಕೆ ಪೂರಕವಾಗಿರುತ್ತದೆ. ಆದರೆ, ತಂತ್ರಜ್ಞಾನವನ್ನು ಸಂಪೂರ್ಣವಾಗಿ ಮತ್ತು ಪಾರದರ್ಶಕವಾಗಿ ಅಳವಡಿಸಿಕೊಂಡಾಗ ಮಾತ್ರ ಇದು ಪರಿಪೂರ್ಣವಾಗಿರಲು ಸಾಧ್ಯವಾಗುತ್ತದೆ. ನಮ್ಮ ಅಪೇಕ್ಷೆ ಏನಿತ್ತೆಂದರೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಪಾರದರ್ಶಕತೆ ಇರಬೇಕು, ಯಾರಿಗೂ ತಾರತಮ್ಯ ಇರಬಾರದು, ಎಲ್ಲಾ ಕೆಲಸಗಳು ವಿಳಂಬವಿಲ್ಲದೇ ಸಕಾಲದಲ್ಲಿ ನಡೆಯಬೇಕೆಂಬುದಾಗಿತ್ತು. ಆಗ ಮಾತ್ರ ಜನಸಾಮಾನ್ಯರಿಗೆ ಅನುಕೂಲ ಆಗಿ ಅವರು ಅಭಿವೃದ್ಧಿ ಹೊಂದುತ್ತಾರೆ. ಜನರು ಅಭಿವೃದ್ಧಿ […]

ಇ-ಲರ್ನಿಂಗ್ ಏಕೆ ಸುಸ್ಥಿರ ಪರಿಹಾರವಲ್ಲ?

-ಪ್ರವೀಣ್ ಸುದೇವನ್

ಇ-ಲರ್ನಿಂಗ್ ಏಕೆ ಸುಸ್ಥಿರ ಪರಿಹಾರವಲ್ಲ?
-ಪ್ರವೀಣ್ ಸುದೇವನ್

ಕೋವಿಡ್19 ಹರಡುವಿಕೆಯ ಭೀತಿಯಿಂದಾಗಿ ಶಾಲೆ ಮುಚ್ಚುವ ಹಂತಕ್ಕೆ ಬರುವ ಮೊದಲು ಕೊಯಮತ್ತೂರಿನ ಹನ್ನೆರಡನೇ ತರಗತಿ ವಿದ್ಯಾರ್ಥಿನಿ ಶ್ರುತಿ ಶ್ರೀಲಕ್ಷ್ಮಿ ಕೊನೆಯದಾಗಿ ಶಾಲೆಗೆ ಹೋಗಿದ್ದು ಮಾರ್ಚ್ 16 ರಂದು. ಅಂದಿನಿAದ ಅವರು ವಾಟ್ಸಾಪ್ ಮೂಲಕವೇ ಕಲಿಯುತ್ತಿದ್ದಾಳೆ. ಟಿಪ್ಪಣಿಗಳು ಮತ್ತು ಕಾರ್ಯಯೋಜನೆಗಳನ್ನು ಅವರ ತರಗತಿಯ ವಾಟ್ಸಾಪ್ ಗುಂಪಿನಲ್ಲಿ ಪೋಸ್ಟ್ ಮಾಡಲಾಗುತ್ತದೆ. ಗೊಂದಲಗಳನ್ನು ಪರಿಹರಿಸಲು ಶಿಕ್ಷಕರಿಗೆ ಕರೆ ಮಾಡುತ್ತಾರೆ. ಆದರೆ ಈ ವ್ಯವಸ್ಥೆಯನ್ನು ಆಕೆ ಉತ್ತಮ ಎಂದು ಒಪ್ಪಿಕೊಳ್ಳಲು ನಿರಾಕರಿಸುತ್ತಾಳೆ. “ನಾನು ಕ್ಲಾಸ್‌ರೂಂನಲ್ಲಿ ಕಲಿಯಲು ಬಯಸುತ್ತೇನೆ. ಈಗ, ನಾನು ವಾಟ್ಸಾಪ್‌ನಲ್ಲಿ ಎಲ್ಲವನ್ನೂ […]

ದೀರ್ಘಾವಧಿಯಲ್ಲೂ ಖರೀದಿಗೆ ಪೂರಕ ಇ-ಕಾಮರ್ಸ್

-ಎಂ.ಕೆ.ಆನಂದರಾಜೇ ಅರಸ್

ದೀರ್ಘಾವಧಿಯಲ್ಲೂ ಖರೀದಿಗೆ ಪೂರಕ  ಇ-ಕಾಮರ್ಸ್
-ಎಂ.ಕೆ.ಆನಂದರಾಜೇ ಅರಸ್

ಇ-ಕಾಮರ್ಸ್ ಈಗಾಗಲೇ ನಮ್ಮ ಮೂಲ ಅಗತ್ಯವಾಗಿದೆ. ದಿನಗಳೆದಂತೆ ಇ-ಕಾಮರ್ಸ್ ಇಡೀ ಸಾಂಪ್ರಾದಾಯಿಕ ಮಾರಾಟ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತ, ನಮ್ಮ ಮುಂದೆ ಹೊಸ ಹೊಸ ಪ್ರಪಂಚಗಳನ್ನು ತೆರೆಯುತ್ತ ತನ್ನ ದಂಡಯಾತ್ರೆಯನ್ನು ಮುಂದುವರೆಸಲಿದೆ.     ಜ್ಯಾಕ್ ಮಾ ಹೇಳಿದ್ದು 1995ರಲ್ಲಿ ಅಮೆeಜಾನ್ ಪ್ರಾರಂಭವಾದಾಗ ಅದರ ಮೊದಲ ಮಾರಾಟ ಒಂದು ಪುಸ್ತಕವಾಗಿತ್ತು. ಕಳೆದ 25 ವರ್ಷಗಳಲ್ಲಿ ಇ-ಕಾಮರ್ಸ್ ಯಾವ ಪರಿ ಬೆಳೆದಿದೆಯೆಂದರೇ, ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರಗಳನ್ನು ಈಗ ಆನ್‌ಲೈನ್‌ನಲ್ಲಿ ಖರೀದಿಸಬಹುದು. ಆಲಿಬಾಬಾ ಇ-ಕಾಮರ್ಸ್ ಸಂಸ್ಥೆಯ ಸಹ ಸಂಸ್ಥಾಪಕ ಜ್ಯಾಕ್ […]

ಸ್ವಾವಲಂಬನೆ ಬೇಕೆ..? ಜಾಗತೀಕರಣ ಸಾಕೆ..?

ಆಗಸ್ಟ್ ಸಂಚಿಕೆಯ ಮುಖ್ಯ ಚರ್ಚೆ:    ಸಾಂಕ್ರಾಮಿಕ ರೋಗಗಳಿಂದ ಗ್ರಸ್ತವಾಗಿರುವ ಭಾರತದ ಆರ್ಥಿಕತೆಯ ಪುನಶ್ಚೇತನಕ್ಕೆ ರೂ.20 ಲಕ್ಷ ಕೋಟಿಗಳ ‘ಪ್ಯಾಕೇಜ್’ ಘೋಷಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವು ಆತ್ಮನಿರ್ಭರತೆಯ (ಸ್ವಾವಲಂಬನೆಯ) ಹಾದಿಯಲ್ಲಿ ಸಾಗಬೇಕೆಂದು ಕರೆಕೊಟ್ಟಿದ್ದಾರೆ. ಈ ಕರೆಯ ಬಗ್ಗೆ ದೇಶ-ವಿದೇಶಗಳಲ್ಲಿ ವ್ಯಾಪಕ ಚರ್ಚೆ ಹಾಗೂ ವಿವಾದಗಳು ಸೃಷ್ಟಿಯಾಗಿವೆ. 1950ರ ದಶಕದಿಂದಲೇ ಜವಾಹರಲಾಲ್ ನೆಹರೂ ಮುಂದಾಳತ್ವದಲ್ಲಿ ದೇಶವು ಸ್ವಾವಲಂಬನೆಯ ಹಾದಿ ಹಿಡಿದಿದೆ. ಇದರಲ್ಲಿ ಸಾಕಷ್ಟು ಯಶಸ್ಸನ್ನೂ ಕಂಡಿರುವುದರ ಜೊತೆಗೆ ಯಾವ ಉತ್ಪಾದನೆ ಹಾಗೂ ಯಾವ ಸೇವೆಗಳಲ್ಲಿ ನಾವು ಇನ್ನೂ […]

ಕನ್ನಡ ಸಾಹಿತ್ಯ ಲೋಕ ಸಾಂಕ್ರಾಮಿಕ ರೋಗಗಳನ್ನು ಹೇಗೆ ಕಂಡಿದೆ..?

ಸಾಂಕ್ರಾಮಿಕ ರೋಗಗಳು ಕೇವಲ ಇಂದು ನಿನ್ನೆಯವಲ್ಲ. ಹದಿನಾರನೆಯ ಶತಮಾನದಲ್ಲಿ ಐರೋಪ್ಯ ರಾಷ್ಟçಗಳ ಜನರು ಬಂದಾಗಿನಿಂದಲೂ ಒಂದಲ್ಲಾ ಒಂದು ಸಾಂಕ್ರಾಮಿಕ ರೋಗ ಭಾರತೀಯರನ್ನು ಕಾಡಿದೆ. ಪ್ಲೇಗು, ಕಾಲರಾ, ಇನ್‌ಫ್ಲುಯೆಂಜಾ, ಮಲೇರಿಯಾ ಹಾಗೂ ಹತ್ತುಹಲವು ಬ್ಯಾಕ್ಟೀರಿಯಾ ಮತ್ತು ವೈರಸ್‌ಯುಕ್ತ ಸಾಂಕ್ರಾಮಿಕ ಕಾಯಿಲೆಗಳು ಕನ್ನಡ ನಾಡನ್ನೂ ಕಾಡಿವೆ. ಸಾಂಕ್ರಾಮಿಕ ರೋಗಗಳಿಂದ ಘಟಿಸಿದ ಸಾವು ನೋವುಗಳು ಕನ್ನಡ ಬರಹ ಮತ್ತು ಸಾಹಿತ್ಯದಲ್ಲಿ ದಾಖಲಾಗಿವೆ. ರೋಗಗಳಿಂದ ಬದುಕುಳಿಯಲು ಹಳ್ಳಿಹಳ್ಳಿಗಳೇ ಗುಳೇ ಎದ್ದು ಹೋದದ್ದು ಕೂಡಾ ಅಲ್ಲಲ್ಲಿ ಬಿಂಬಿತವಾಗಿದೆ. ಅಂದಿನ ಗ್ರಾಮೀಣ ಸಾಮಾಜಿಕತೆಯ ಮೇಲೆ ಆದ […]

ಬಿಡಿ ಘಟನೆಯಾಗಿ ಉಳಿಯುವ ಪಿಡುಗು!

-ರಾಜೇಂದ್ರ ಚೆನ್ನಿ

ಬಿಡಿ ಘಟನೆಯಾಗಿ ಉಳಿಯುವ ಪಿಡುಗು!
-ರಾಜೇಂದ್ರ ಚೆನ್ನಿ

ಒಂದು ಅನುಭವವು ಗಂಭೀರ ಸಾಹಿತ್ಯದಲ್ಲಿ ವಸ್ತುವಾಗಿ ಬರಬೇಕಾದರೆ ಅದು ನಮ್ಮನ್ನು ತೀವ್ರವಾಗಿ ಕದಕಿರಬೇಕು. ನಮ್ಮ ಪ್ರಜ್ಞೆಯ ಎಲ್ಲಾ ಪಾತÀಳಿಗಳನ್ನು ಅದು ಹೊಕ್ಕಿರಬೇಕು. ಹಾಗೆ ಆಗಲು ಸೂಕ್ಷ್ಮವಾದ ಸಂವೇದನೆ ಬೇಕು. ಸಾಮಾಜಿಕ ನೈತಿಕ ಪ್ರಜ್ಞೆ ಬೇಕು. ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ ಕಾದಂಬರಿಯಲ್ಲಿ ಊರಿಗೆ ಪ್ಲೇಗ್ ಬಂದ ಹೊಸತರಲ್ಲಿ ಜನರ ಪ್ರತಿಕ್ರಿಯೆ ಹೀಗಿರುತ್ತದೆ. “ಇದೇನು ಬಿಡು ದಸರೇ, ದೀಪಾವಳಿ ಹಬ್ಬದ ಹಂಗೆ ವರಷಾ ಬರೂದ”. ಈ ತಾತ್ಸಾರಕ್ಕೆ ಕಾರಣವನ್ನು ನಿರೂಪಕರು ಹೀಗೆ ಕೊಡುತ್ತಾರೆ: “ಆವಾಗ ಕೆಲವು ವರ್ಷ […]

ರಾವಬಹದ್ದೂರರ ‘ಗ್ರಾಮಾಯಣ’ದಲ್ಲಿ ಕಾಲರಾ ಕಲಿಸುವ ಪಾಠ

-ಡಾ.ಎಂ.ಎಸ್.ಆಶಾದೇವಿ

ರಾವಬಹದ್ದೂರರ ‘ಗ್ರಾಮಾಯಣ’ದಲ್ಲಿ  ಕಾಲರಾ ಕಲಿಸುವ ಪಾಠ
-ಡಾ.ಎಂ.ಎಸ್.ಆಶಾದೇವಿ

‘ಗ್ರಾಮಾಯಣ’ದಲ್ಲಿ ಕಾಣಿಸಿಕೊಳ್ಳುವ ಕಾಲರಾ, ಈ ಕಾದಂಬರಿಯ ಪ್ರಮುಖ ಪಾತ್ರಗಳಲ್ಲಿ ಒಂದು. ಈ ಸಾಂಕ್ರಾಮಿಕ ರೋಗ ಕಾದಂಬರಿಗೆ ನಾಟಕೀಯ ತಿರುವು ಕೊಡುವುದೂ ಸೇರಿದಂತೆ ಅನೇಕ ಘಟಿತಗಳಿಗೆ ಕಾರಣವಾಗುತ್ತದೆ. ಇಂಗ್ಲಿಷಿನಲ್ಲಿ ‘ಡೆಥ್ ಈಜ್ ದ ಲೆವೆಲ್ಲರ್’ ಎಂಬ ಮಾತೊಂದಿದೆ. ಇದು ಯಾವ ಸಮಾನತೆಗಾಗಿ ಬದುಕಿಡೀ ಕನವರಿಸಿ, ಹೋರಾಡಿ, ಏನೆಲ್ಲ ಪಾಡು ಪಟ್ಟರೂ ಸಿಗದ ಸಮಾನತೆಯನ್ನು ಸಾವು ತನ್ನ ನಿರ್ಜೀವತೆಯಲ್ಲಾದರೂ ಸರಿ, ಸಾಧಿಸಿಬಿಡುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಈ ಮಾತು ಕೊನೆಗೂ ಮನುಷ್ಯನ ಅಸಹಾಯಕತೆಯನ್ನು ಹೇಳುತ್ತದೋ, ಮನುಷ್ಯನ ಮಿತಿಯನ್ನು ಹೇಳುತ್ತದೋ, ಸಾವಿನ ಅಸಾಮಾನ್ಯ […]

ಕುವೆಂಪು ಸ್ವತಃ ಕಂಡುಂಡ ಸಾಂಕ್ರಾಮಿಕ ರೋಗಗಳು

ಕುವೆಂಪು

ಕುವೆಂಪು ಸ್ವತಃ ಕಂಡುಂಡ  ಸಾಂಕ್ರಾಮಿಕ ರೋಗಗಳು
ಕುವೆಂಪು

ಕುವೆಂಪು ಅವರು ತಮ್ಮ ಸುತ್ತಲಿನ ಪರಿಸರದಲ್ಲಿ ಹಬ್ಬುತ್ತಿದ್ದ ಸಾಂಕ್ರಾಮಿಕ ರೋಗಗಳ ಹಾವಳಿಯನ್ನು ಬಹಳ ಹತ್ತಿರದಿಂದ ನೋಡುತ್ತಾ ಬಾಲ್ಯ ಕಳೆದವರು; ಸ್ವತಃ ವಿಷಮಶೀತ ಜ್ವರಕ್ಕೆ ತುತ್ತಾಗಿ ಸಾವು ಜಯಿಸಿ ಬಂದವರು. ಅವರ ಸಾಂಕ್ರಾಮಿಕ ರೋಗಗಳೊಂದಿಗಿನ ಮುಖಾಮುಖಿ ಅನುಭವಗಳು, ವಿವರಗಳು ಅವರ ಆತ್ಮ ಚರಿತ್ರೆ ‘ನೆನಪಿನ ದೋಣಿಯಲ್ಲಿ’ ದಾಖಲಾಗಿವೆ. ಈ ಕೃತಿಯಿಂದ ಆಯ್ದ ಕೆಲವು ಭಾಗಗಳು, ಸಮಾಜಮುಖಿ ಓದುಗರಿಗಾಗಿ. ಮೊದಲನೆಯ ಮಹಾಯುದ್ಧದ ಭಯಂಕರತೆ ಆಟಗುಳಿಗಳಾಗಿದ್ದ ತೀರ್ಥಹಳ್ಳಿಯ ಶಾಲಾಬಾಲಕರಿಗೆ ವಾರ್ತಾರೂಪದ ವಿನೋದದ ವಿಷಯವಾಗಿತ್ತಷ್ಟೆ! ಆದರೆ ಆ ಯುದ್ಧ ಮುಗಿಯುವ ಹೊತ್ತಿಗೆ ಅದರ […]

ಪ್ರಾಚೀನ ಕನ್ನಡ ವೈದ್ಯಗ್ರಂಥಗಳು ಪ್ರಸ್ತಾಪಿಸದ ಸಾಂಕ್ರಾಮಿಕ ರೋಗಗಳು

-ಕೃಷ್ಣಮೂರ್ತಿ ಹನೂರು

ಪ್ರಾಚೀನ ಕನ್ನಡ ವೈದ್ಯಗ್ರಂಥಗಳು ಪ್ರಸ್ತಾಪಿಸದ ಸಾಂಕ್ರಾಮಿಕ ರೋಗಗಳು
-ಕೃಷ್ಣಮೂರ್ತಿ ಹನೂರು

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವೈದ್ಯಗ್ರಂಥಗಳೂ, ಜೋತಿಷ್ಯ ಗ್ರಂಥಗಳೂ ಅಪಾರ ಸಂಖ್ಯೆಯಲ್ಲಿವೆ. ಆದರೆ ಸಮುದಾಯಗಳನ್ನೇ ನಾಶ ಮಾಡುತ್ತಿದ್ದ ಸಾಂಕ್ರಾಮಿಕ ರೋಗಗಳ ಪ್ರಸ್ತಾಪ ಇವುಗಳಲ್ಲಿರುವುದಿಲ್ಲ. ಪ್ರಾಚೀನ ಕನ್ನಡ ಕೃತಿಗಳಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಹೆಚ್ಚು ಪ್ರಸ್ತಾಪವಿರುವುದಿಲ್ಲ. ಆದರೆ ಹೆಚ್ಚು ಸಾಂಕ್ರಾಮಿಕವಲ್ಲದ ಕುಷ್ಠ ಹಾಗೂ ತೊನ್ನು ರೋಗಗಳ ವಿವರಗಳಿವೆ. ಕನ್ನಡದ ಆದಿ ಗದ್ಯ ಗ್ರಂಥ ವಡ್ಡಾರಾಧನೆಯ ‘ವಿದ್ಯುಚ್ಚೋರನೆಂಬ ರಿಸಿಯ ಕಥೆ’ಯಲ್ಲಿ ತೊನ್ನು ರೋಗವುಳ್ಳ ಪಾತ್ರ ಸಂಗತಿಯ ಕಥನವಿದೆ. ಆದರೆ ಶಿವಕೋಟ್ಯಾಚಾರ‍್ಯನು ಆ ತೊನ್ನು ರೋಗದ ವಿದ್ಯುತ್‌ಚೋರ ಕಳ್ಳನ ವಿವರ ಕೊಡುವ ಕ್ರಮ […]

ಅಬ್ಬಾ… ಮರೆಯಲಾಗದ ಆ ದಿನಗಳು!

ಡಾ.ಜಾಜಿ ದೇವೇಂದ್ರಪ್ಪ

-ಜಿ.ಕೆ.ಕಾಡಪ್ಪ (85ವರ್ಷ), ಹಿರೇಹೆಗಡೆಹಾಳು, ಬಳ್ಳಾರಿ ಜಿಲ್ಲೆ. ಆ ಕಾಲದಲ್ಲಿ ಭಯಾನಕ ರೋಗರುಜಿನಗಳು ಬರುತ್ತಿದ್ದವು. ಮನೆಯಲ್ಲಿ ಮಲಗಿದಾಗ ಜಂತೆಯಿಂದ ಇಲಿಗಳು ಸತ್ತುಸತ್ತು ಬೀಳುತ್ತಿದ್ದವು. ಆ ಇಲಿಗಳ ಕಳೇಬರ ಹಚ್ಚಹಸರೇರಿರುತ್ತಿತ್ತು. ಇದೇ ರೋಗದ ತೀವ್ರತೆಯೆಂದು ಮನೆ-ಮಾರು ಬಿಟ್ಟು ಎಲ್ಲರೂ ಊರಿಂದ ತುಂಬ ದೂರ ಹೋಗಿ ವಾಸಮಾಡುತ್ತಿದ್ದರು. ಹೀಗೆ ಒಮ್ಮೆ ಕಾಲರಾ ಬಂತು. ಊರಿಗೆಊರೇ ವಾಂತಿಬೇಧಿಯಿಂದ ನರಳುತ್ತಿತ್ತು. ಆಗ ದವಸಧಾನ್ಯ ಎಲ್ಲ ಕಟ್ಟಿಕೊಂಡು ಜೊತೆಗೆ ಬೀಸುವಕಲ್ಲೂ ಹೊತ್ತುಕೊಂಡು ನೀರು ಇದ್ದ ಕಡೆ ಅಡವಿಯಲ್ಲಿ ಠಾಣೆ ಹೂಡಿಕೊಂಡು ಇರುತ್ತಿದ್ದೆವು. ವಾಂತಿ ಬೇಧಿಯಿಂದ ನರಳುತ್ತಿದ್ದವರನ್ನು […]

ಅಬ್ಬಾ… ಮರೆಯಲಾಗದ ಆ ದಿನಗಳು!

ಕೆ.ಶಿವು ಲಕ್ಕಣ್ಣವರ, ಹಾವೇರಿ.

ಮಾದರ ಮರಿಯಪ್ಪ ಈತನ ಹೆಸರು ಮಾದರ ಮರಿಯಪ್ಪ; ನಮ್ಮ ಮನೆಯ ಒಕ್ಕಲು ಮಾದ. ಈಗ ಸರಿಸುಮಾರಾಗಿ 89 ವರ್ಷ ವಯಸ್ಸಾಗಿರಬಹುದು. ಆತನನ್ನು ಮಾತನಾಡಿಸಿದಾಗ… ಅಯ್ಯೋ ಮಾರಾಯ ಆಗಿನ ಪಡಿಪಾಟಲೇನು ಕೇಳುತ್ತೀಯಾ. ಆಗ ಒಂದೂ ದಾವಾಖಾನೆ ಇರಲಿಲ್ಲ. ನಮ್ಮೂರ ಪಂಡಿತರು ಗಿಡಮೂಲಿಕೆಗಳಿಂದ ತಯಾರಿಸಿದ ಗಾವುಟಿ ಔಷಧವೇ ನಮಗೆ ಗತಿಯಾಗಿತ್ತು. ಈ ಔಷಧದಿಂದ ರೋಗ ಗುಣವಾದರೆ ಗುಣ, ಇಲ್ಲದಿದ್ದರೆ ಇಲ್ಲ. ಅಂತೂ ಅದ್ಹೇಗೋ ಆ ಕಾಲದಲ್ಲಿ ಸಾಕಷ್ಟು ರೋಗ ರುಜಿನಗಳನ್ನು ಮೆಟ್ಟಿ ಬದುಕುಳಿದೆವು. ಇಂತಹ ಸಂದರ್ಭದಲ್ಲಿ ಊರಿಗೆ ಪ್ಲೇಗ್ ಬಂದಿತು […]

ಅಬ್ಬಾ… ಮರೆಯಲಾಗದ ಆ ದಿನಗಳು!

-ಮಾಲತಿ ಪಟ್ಟಣಶೆಟ್ಟಿ, ಧಾರವಾಡ.

ಅಜ್ಜಿ ಹೇಳಿದ ಪ್ಲೇಗಿನ ಕತೆ ನನ್ನ ಭಾಗ್ಯದಲ್ಲೊಬ್ಬ ಅಜ್ಜಿ ಇದ್ದಳು. ಈ ಅಜ್ಜಿಯು ನನ್ನ ಅಜ್ಜಿಯ ತಂಗಿ. ನನ್ನ ತಾಯಿಯು ಬೇಗನೆ ತೀರಿಕೊಂಡಾಗ ಹಾಲೂಡಿದವಳು ಇದೇ ನನ್ನ ಅಜ್ಜಿ, ಇವಳನ್ನು ನಾನು ಯಾವಾಗಲು ‘ಅವ್ವ’ ಎಂದು ಕರೆದದ್ದು. ಆಕೆ ತನ್ನ ಬಾಳ ಭಗವದ್ಗೀತೆಯ ನೂರಾರು ಕತೆಗಳನ್ನು ಪ್ರತಿ ರಾತ್ರಿ ಕಂದೀಲಿನ ಬೆಳಕಿನಲ್ಲಿ ಹೇಳುತ್ತಿದ್ದಾಗ ನಾನು ಅವಳ ಹಚ್ಚಡದಲ್ಲಿ ಬೆಚ್ಚಗೆ ಮಲಗಿರುತ್ತಿದ್ದೆ ಅವಳ ಆ ಕತೆಗಳನ್ನು ಇಂದಿಗೂ ಪ್ರೀತಿಯಿಂದ ನೆನೆಯುತ್ತೇನೆ.   ‘20ನೇ ಶತಮಾನದ ಮೊದಲ ದಶಕದ ಭಾರತದಲ್ಲಿ ಪ್ಲೇಗಿನ […]

1 2 3 10