1947ರ ವಜ್ರಮಹೋತ್ಸವದಲ್ಲಿ ನಮ್ಮ ಆರ್ಥಿಕ ಸ್ವಾತಂತ್ರ್ಯ ಹೇಗಿದೆ..?

ಇದೇ 2021ರ ಆಗಸ್ಟ್ 15 ರಿಂದ ಒಂದು ವರ್ಷಗಳವರೆಗೆ ನಾವು 1947ರ ಸ್ವಾತಂತ್ರ್ಯದಿನದ ವಜ್ರಮಹೋತ್ಸವವನ್ನು ಆಚರಿಸಲಿದ್ದೇವೆ. ದೇಶಾದ್ಯಂತ ಸಭೆ, ಸಮಾರಂಭ, ಗೋಷ್ಠಿ, ಉತ್ಸವಗಳಲ್ಲಿ ಸ್ವಾತಂತ್ರ್ಯೋತ್ಸವದ ಗುಣಗಾನ ಮಾಡಲಿದ್ದೇವೆ. ಕೆಲವರು ಈ ಸಂದರ್ಭದಲ್ಲಿ ನಮ್ಮ ರಾಜಕೀಯ ಸ್ವಾತಂತ್ರ್ಯದ ವಿಷಯಗಳಾದ ಪ್ರಜಾಪ್ರಭುತ್ವ, ಮಾನವೀಯ ಹಕ್ಕುಗಳು, ವಾಕ್ ಸ್ವಾತಂತ್ರ್ಯ ಭ್ರಷ್ಟಾಚಾರ ರಹಿತ ಚುನಾವಣೆ ಮತ್ತಿತರ ವಿಷಯಗಳನ್ನು ಚರ್ಚಿಸಬಹುದು. ಈ ಸಂದರ್ಭದಲ್ಲಿ ನಿಮ್ಮ ಸಮಾಜಮುಖಿ ಪತ್ರಿಕೆ ಭಾರತೀಯರ ಆರ್ಥಿಕ ಸ್ವಾತಂತ್ರ್ಯದ ಪರಿಶೀಲನೆ ಕೈಗೆತ್ತಿಕೊಳ್ಳುತ್ತಿದೆ. ಕಳೆದ 75 ವರ್ಷಗಳಲ್ಲಿ ನಾವು ಸಾಧಿಸಿರುವ/ಸಾಧಿಸಲಾಗದ ಊಟ–ವಸತಿ–ಉದ್ಯೋಗದ ವಿವೇಚನೆಗಳನ್ನು […]

1947 ರ ವಜ್ರಮಹೋತ್ಸವ: ದೇಶದ ಆರ್ಥಿಕತೆಯೆಲ್ಲೆಡೆ ಸಾಗಿದೆ..?

-ಮೋಹನದಾಸ್

1947 ರ ವಜ್ರಮಹೋತ್ಸವ: ದೇಶದ ಆರ್ಥಿಕತೆಯೆಲ್ಲೆಡೆ ಸಾಗಿದೆ..?
-ಮೋಹನದಾಸ್

–ಮೋಹನದಾಸ್ ಒಕ್ಕೂಟ ಸರ್ಕಾರದ ಸ್ವದೇಶಿ ನೀತಿ, ಆತ್ಮನಿರ್ಭರ್ ನೀತಿ, ಆಮದು ಪರ್ಯಾಯ ಹುಡುಕುವ ನೀತಿ ಹಾಗೂ ಹಣಕಾಸು ನೀತಿಗಳು 1991 ರಿಂದ ಇಲ್ಲಿಯವರೆಗೆ ನಡೆದುಬಂದ ಆರ್ಥಿಕ ಸುಧಾರಣೆಯ ಹಾದಿಗೆ ವಿರುದ್ಧವಾಗಿವೆ. ಆದರೆ ನರೇಂದ್ರ ಮೋದಿ ಸರ್ಕಾರಕ್ಕೆ ತನ್ನ ತಪ್ಪುಗಳನ್ನು ಅರಿಯುವ ಸಾಮಥ್ರ್ಯವಿದೆ. ತಪ್ಪುಗಳನ್ನು ತಿದ್ದಿಕೊಳ್ಳುವ ಸಾಮಥ್ರ್ಯವೂ ಇದೆ. ಆದಕಾರಣ ಮುಂದಿನ ಮೂರು ವರ್ಷಗಳಲ್ಲಿ ಆರ್ಥಿಕ ಸುಧಾರಣೆಯ ಮತ್ತು ಮುಕ್ತ ಸ್ಪರ್ಧಾತ್ಮಕ ಆರ್ಥಿಕತೆಯ ರಾಜಹಾದಿಗೆ ಮರಳುವ ಸಾಧ್ಯತೆಯಲ್ಲಿ ದೇಶದ ಪ್ರಗತಿ ನಿರ್ಭರವಾಗಲಿದೆ. 1700 ನೇ ಇಸವಿಯಲ್ಲಿ ವಿಶ್ವದ ಒಟ್ಟು […]

ಅರ್ಥಸ್ವಾತಂತ್ರ್ಯ@75 ಹೀಗೊಂದು ಹಿನ್ನೋಟ

-ಎ.ನಾರಾಯಣ

ಅರ್ಥಸ್ವಾತಂತ್ರ್ಯ@75  ಹೀಗೊಂದು ಹಿನ್ನೋಟ
-ಎ.ನಾರಾಯಣ

–ಎ.ನಾರಾಯಣ 1991ರಿಂದೀಚೆಗೆ ಭಾರತ ಒಂದು ಹೊಸ ಶ್ರೀಮಂತಿಕೆ ಮತ್ತು ಅದೇ ಹಳೆಯ ಬಡತನ ಇವೆರಡನ್ನೂ ಒಟ್ಟೊಟ್ಟಿಗೆ ನಿಭಾಯಿಸುತ್ತಿದೆ. ಬಡತನವನ್ನು ಭಾರತೀಯರಷ್ಟು ಪ್ರಬುದ್ಧವಾಗಿ, ಭಾರತೀಯರಷ್ಟು ಸಹನಶೀಲರಾಗಿ ನಿಭಾಯಿಸಿದ ಇನ್ನೊಂದು ಸಮಾಜ ಬಹುಶಃ ಇರಲಾರದು. ಆದರೆ ಹೊಸ ಶ್ರೀಮಂತಿಕೆಯ ವಿಷಯದಲ್ಲಿ ಹೀಗೆಲ್ಲಾ ಹೇಳಲು ಸಾಧ್ಯವಿಲ್ಲ. ಆಯಾ ಕಾಲದ ಆರ್ಥಿಕ ಅಗತ್ಯಗಳಿಗೆ ಅಧಿಕಾರದಲ್ಲಿರುವವರು ಯಾವ ರೀತಿಯಲ್ಲಿ ಪ್ರತಿಸ್ಪಂದಿಸುತ್ತಾರೆ ಎನ್ನುವುದರ ಮೇಲೆ ದೇಶವೊಂದರ ಆರ್ಥಿಕ ಚರಿತ್ರೆ ನಿರ್ಮಾಣವಾಗುತ್ತಾ ಹೋಗುತ್ತದೆ. ಕೊನೆಗೂ 1947ರಲ್ಲಿ ಸ್ವಾತಂತ್ರ್ಯ ಬಂದಾಗ ಅವಿರತ ಹೋರಾಟದಿಂದ ಪಡೆದ ಆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು […]

ಸಂವಿಧಾನದ ಅರ್ಥಿಕ ಸ್ವಾತಂತ್ರ್ಯದ ಆಶಯಗಳು

-ಡಾ.ವೆಂಕಟಾಚಲ ಹೆಗಡೆ

ಸಂವಿಧಾನದ ಅರ್ಥಿಕ ಸ್ವಾತಂತ್ರ್ಯದ ಆಶಯಗಳು
-ಡಾ.ವೆಂಕಟಾಚಲ ಹೆಗಡೆ

–ಡಾ.ವೆಂಕಟಾಚಲ ಹೆಗಡೆ ಸಂವಿಧಾನದ ಒಡಲಲ್ಲಿ ಸಾಕಷ್ಟು ಜನಪರ ಆಶಯಗಳು ಅಡಕವಾಗಿವೆ. ಆದರೆ, ಅವುಗಳನ್ನು ಗಂಭೀರವಾಗಿ, ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಪ್ರಯತ್ನಗಳು ಆಗಬೇಕಾಗಿದೆ. ಸಂವಿಧಾನ ನೀಡಬಯಸುವ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯದ ಅರ್ಥಪೂರ್ಣತೆ ಇರುವುದು ಅವುಗಳ ಸಾರ್ಥಕವಾದ ಅನುಷ್ಠಾನದಲ್ಲಿ. ನಮ್ಮ ದೇಶ ತನ್ನ ಎಪ್ಪತ್ತೈದನೆಯ ಸ್ವಾತಂತ್ರ್ಯೋತ್ಸವದ ಆಚರಣೆಯ ಸಂಭ್ರಮದಲ್ಲಿದೆ. ನಮ್ಮ ಹಿರಿಯರು ಏಳು ದಶಕಗಳ ಹಿಂದೆ ಸಮಾನತೆಯ ಮತ್ತು ಆರ್ಥಿಕ ಬೆಳವಣಿಗೆಯ ಆಶಯಗಳ ನೆಲೆಯಲ್ಲಿ ತಮ್ಮ ಸ್ವತಂತ್ರವಾದ ಬದುಕನ್ನು ಕಟ್ಟಿಕೊಳ್ಳಲು ಅಣಿಯಾಗಿ ನಿಂತ ಕಾಲವದು. ಅದಕ್ಕಾಗಿ ತಮ್ಮ ಎಲ್ಲ ವೈಯಕ್ತಿಕ […]

ಭಾರತದ ಆರ್ಥಿಕತೆ ಏಳು ನಕಾಶೆಗಳಲ್ಲಿ ಮೋದಿಯವರ ಏಳು ವರ್ಷಗಳು

-ನಿಖಿಲ್ ಇನಾಂದಾರ್

ಭಾರತದ ಆರ್ಥಿಕತೆ ಏಳು ನಕಾಶೆಗಳಲ್ಲಿ  ಮೋದಿಯವರ  ಏಳು ವರ್ಷಗಳು
-ನಿಖಿಲ್ ಇನಾಂದಾರ್

–ನಿಖಿಲ್ ಇನಾಂದಾರ್ ಅಪರ್ಣಾ ಅಲ್ಲುರಿ, ಬಿಬಿಸಿ ಅನುವಾದ: ಎಂ.ಕೆ.ಆನಂದರಾಜೇ ಅರಸ್ ಹೆಚ್ಚು ಉದ್ಯೋಗಗಳ ಸೃಷ್ಟಿ, ಅಭಿವೃದ್ಧಿ ಹಾಗೂ ವಿಧಾನ ವಿಳಂಬವನ್ನು ಕಡಿತಗೊಳಿಸುವ ಅದ್ಧೂರಿ ಭರವಸೆಗಳೊಂದಿಗೆ ನರೇಂದ್ರ ಮೋದಿ ಭಾರತ ರಾಜಕೀಯದ ಪ್ರಧಾನ ರಂಗಕ್ಕೆ 2014ರಲ್ಲಿ ಬಿರುಗಾಳಿಯಂತೆ ಪ್ರವೇಶಿಸಿದರು. 2014 ಹಾಗೂ 2019ರ ಲೋಕಸಭಾ ಚುನಾವಣೆಗಳಲ್ಲಿ ಅವರಿಗೆ ದೊರಕಿದ ಸ್ಪಷ್ಟ ಬಹುಮತ ದೊಡ್ಡ ಸುಧಾರಣೆಗಳ ಆಶಯವನ್ನು ಹೆಚ್ಚಿಸಿತು. ಆದರೆ ಪ್ರಧಾನ ಮಂತ್ರಿಯಾಗಿ ಅವರ ಅಧಿಕಾರವಧಿಯಲ್ಲಿ ಭಾರತದ ಆರ್ಥಿಕ ಸಾಧನೆ ನೀರಸವಾಗಿದೆ. ಈಗಾಗಲೇ ಸಪ್ಪೆಯಾಗಿದ್ದ ಅವರ ಕಾರ್ಯಕ್ಷಮತೆಯನ್ನು ಕೋವಿಡ್ ಪಿಡುಗು […]

ನಮ್ಮ ಸಾಧನೆಗಳು – ಸೋಲುಗಳು

ಡಾ.ಟಿ.ಆರ್.ಚಂದ್ರಶೇಖರ

ನಮ್ಮ ಸಾಧನೆಗಳು – ಸೋಲುಗಳು
ಡಾ.ಟಿ.ಆರ್.ಚಂದ್ರಶೇಖರ

ಡಾ.ಟಿ.ಆರ್.ಚಂದ್ರಶೇಖರ ಜಿಡಿಪಿ ಮತ್ತು ತಲಾ ಜಿಡಿಪಿಗಳು ಅಭಿವೃದ್ಧಿಯ ಸೂಚಕವಾದರೆ ನೆರೆಹೊರೆಯ ದೇಶಗಳ ನಡುವೆಯಾದರೂ ತೌಲನಿಕವಾಗಿ ನಾವು ಪ್ರಗತಿ ಸಾಧಿಸಿದ್ದೇವೆಯೇ? ಮೊದಲನೆಯದಾಗಿ ಜಿಡಿಪಿ/ತಲಾ ಜಿಡಿಪಿಗಳನ್ನು ಅಭಿವೃದ್ಧಿಯ ಮಾಪಕಗಳಾಗಿ ಬಳಸುವ ಕ್ರಮವನ್ನು 1990ರಲ್ಲಿಯೇ ತಿರಸ್ಕರಿಸಲಾಗಿದೆ. ಯುನೈಟೆಡ್ ನೇಷನ್ಸ್ ಡೆವಲಪ್‍ಮೆಂಟ್ ಪ್ರೋಗ್ರಾಮ್ (ಯುಎನ್‍ಡಿಪಿ) 1990ರಲ್ಲಿ ಮೆಹಬೂಬ್ ಉಲ್ ಹಕ್ ಅವರ ನೇತೃತ್ವ್ವದಲ್ಲಿ ಪ್ರಕಟಿಸಿದ ಮೊಟ್ಟಮೊದಲ ಮಾನವ ಅಭಿವೃದ್ಧಿ ವರದಿಯಲ್ಲಿ ‘ವರಮಾನವು ಜನರ ಬದುಕಿನ ಒಟ್ಟು ಮೊತ್ತವಲ್ಲ’ ಎಂದು ಘೋಷಿಸಿದ್ದರು. ಅಭಿವೃದ್ಧಿಯನ್ನು ವರಮಾನದ ಜೊತೆಗೆ ಸಾಕ್ಷರತೆ/ಶಿಕ್ಷಣ ಮತ್ತು ಆರೋಗ್ಯಗಳ ಆಧಾರದಲ್ಲಿ ಮಾಪನ ಮಾಡುವ […]

ಸರ್ಕಾರದ ತಪ್ಪು ನೀತಿನಿಲುವು ಸಂಕಟಸ್ಥಿತಿಯ ಮೂಲ

-ಟಿ.ಎಸ್.ವೇಣುಗೋಪಾಲ್

ಸರ್ಕಾರದ ತಪ್ಪು ನೀತಿನಿಲುವು ಸಂಕಟಸ್ಥಿತಿಯ ಮೂಲ
-ಟಿ.ಎಸ್.ವೇಣುಗೋಪಾಲ್

–ಟಿ.ಎಸ್.ವೇಣುಗೋಪಾಲ್ ಮೊದಲಿಗೆ ನಾವು ತಪ್ಪಿದ್ದೇವೆ ಎಂಬುದನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ ಬೇಕು. ಆಮೇಲೆ ಎಲ್ಲಿ ತಪ್ಪಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ಅದಕ್ಕೆ ಪ್ರಾಮಾಣಿಕ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ತಪ್ಪು ಮಾಡುತ್ತಲೇ ಇರುತ್ತೇವೆ. ಒಂದು ದೇಶದ ಅಥವಾ ಜಗತ್ತಿನ ಆರ್ಥಿಕತೆಯ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಹಲವು ಅಳತೆಗೋಲುಗಳು ಸಾಧ್ಯ. ಸಾಮಾನ್ಯವಾಗಿ ಜಿಡಿಪಿಯನ್ನು ಅಳತೆಗೋಳಾಗಿ ಬಳಸಲಾಗುತ್ತಿದೆ. ಅಷ್ಟೇ ಅಲ್ಲ ವಿತ್ತೀಯ ಕೊರತೆ ಇರಬಹುದು ಅಥವಾ ಇನ್ಯಾವುದೇ ಇರಬಹುದು, ಆರ್ಥಿಕತೆಯ ಪ್ರತಿಯೊಂದು ಅಂಶವನ್ನು ಜಿಡಿಪಿಯ ಶೇಕಡವಾರು ಪ್ರಮಾಣದಲ್ಲೇ ಲೆಕ್ಕ ಹಾಕುವುದು ರೂಢಿ. ಆದರೆ ಅದು ಒಂದು […]

ಕೋವಿಡ್ ಎಂಬ ಕನ್ನಡಿ

ಕೋವಿಡ್ ಎಂಬ ಕ್ಷುದ್ರ ಜೀವಿ ನಮ್ಮ ನರನಾಡಿಗಳನ್ನು ಹಿಂಡಿಹಿಚುಕಿ ನಿತ್ರಾಣಗೊಳಿಸಿದೆ. ಅಂಕೆಗೆ ನಿಲುಕದ ಸಾವು ನೋವುಗಳ ಲೆಕ್ಕಾಚಾರದಲ್ಲಿ ನಮ್ಮ ಕೆಲವು ನಂಬಿಕೆ, ವಿಶ್ವಾಸ ಮತ್ತು ಇದೇ ಸತ್ಯ ಇದೇ ನಿತ್ಯ ಎಂಬ ಮಾನಸಿಕತೆಗಳನ್ನೂ ಬುಡಮೇಲಾಗಿಸಿದೆ. ಇದರ ಜೊತೆಗೆ ನಮ್ಮ ರಾಷ್ಟ್ರ, ಸರ್ಕಾರಗಳು, ಪಕ್ಷಗಳು ಮತ್ತು ಸಂಸ್ಥೆಗಳ ಹಲವು ಗಂಭೀರ ನ್ಯೂನತೆಗಳನ್ನು ಬಯಲಿಗೆಳೆದು ನಮ್ಮ ಸಮಾಜದ ಕುರೂಪಕ್ಕೆ ಕನ್ನಡಿ ಹಿಡಿದಿದೆ. ವಿಶ್ವದ ಅತ್ಯುತ್ತಮ ರಾಷ್ಟ್ರಗಳಲ್ಲಿ ನಮ್ಮದೂ ಒಂದೆಂದು ಬೀಗುತ್ತಿದ್ದ ನಮಗೆ ಇನ್ನೂ ಎಷ್ಟು ಹಿಂದುಳಿದಿದ್ದೇವೆ ಎಂದು ತೋರಿದೆ. 56 […]

ಕೋವಿಡ್ ತಂದ ಅವಕಾಶದಲ್ಲಿ ಕರ್ನಾಟಕದ ಆರೋಗ್ಯ ವ್ಯವಸ್ಥೆ ಹೇಗೆ ಸುಧಾರಿಸಬಹುದು..?

-ಮೋಹನದಾಸ್

ಕೋವಿಡ್ ಸಮಯದಲ್ಲಿ ನಮ್ಮ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಪ್ರಾಮುಖ್ಯ ಮತ್ತೊಮ್ಮೆ ನಮಗೆ ಗೋಚರವಾಗಿದೆ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಮಯದಲ್ಲಿ ನಾವು ಸರ್ಕಾರಿ ಸೌಲಭ್ಯಗಳ ಮೇಲೆಯೇ ಅವಲಂಬಿತವಾಗಬೇಕೆನ್ನುವುದು ನಮಗೆ ಮನದಟ್ಟಾಗಿದೆ. ಈ ಎರಡನೆಯ ಅಲೆಯ ಸಂದರ್ಭದಲ್ಲಿಯಂತೂ ಖಾಸಗಿ ಆಸ್ಪತ್ರೆಗಳು ಸುಲಿಗೆ ಕೇಂದ್ರಗಳಾದರೆ ಸರ್ಕಾರಿ ಆರೋಗ್ಯ ಸೇವಾ ಪದ್ಧತಿ ಬಡ ರೋಗಿಗಳಿಗೆ ಸಂಜೀವಿನಿಯಾಗಿದೆ. ಕೋವಿಡ್ ಈ ವಿಷಯದಲ್ಲಾದರೂ ನಮ್ಮ ಕಣ್ಣು ತೆರೆಸಿದೆ ಹಾಗೂ ನಮಗೆ ಕನ್ನಡಿ ಹಿಡಿದಿದೆ. –ಮೋಹನದಾಸ್ –ಪೃಥ್ವಿದತ್ತ ಚಂದ್ರಶೋಭಿ ಕೋವಿಡ್ ಎಂಬ […]

ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ ದಾರಿ ಸಾಗುವುದೆಂತೋ ನೋಡಬೇಕು!

-ರಾಜೇಂದ್ರ ಚೆನ್ನಿ

ಕೊರೋನಾ ಪಿಡುಗು ಮನುಷ್ಯ ಕುಲದ ಮೂಲಭೂತ ದ್ವಂದ್ವವನ್ನು ಮತ್ತೆ ಮುನ್ನೆಲೆಗೆ ತಂದಿದೆ. ನಾವು ಕಟ್ಟಿಕೊಳ್ಳುವ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆಗಳು ನಿಂತಿರುವುದು ಸ್ವಾರ್ಥ ಹಾಗೂ ಕ್ರೌರ್ಯದ ಮೇಲೆಯೇ ಆಗಿದ್ದರೆ ಮನುಷ್ಯರೊಳಗೆ ಇರುವ ಕರುಣೆ, ವಿಶ್ವಾಸ, ದಯೆ ನಮ್ಮ ಅಸ್ತಿತ್ವದ ಆಧಾರವಾಗುವುದು ಎಂದಿಗೂ ಸಾಧ್ಯವೇ ಇಲ್ಲವೆ? -ರಾಜೇಂದ್ರ ಚೆನ್ನಿ ಇತ್ತೀಚೆಗೆ ‘ದಿ ಪ್ರಿಂಟ್’ ಪತ್ರಿಕೆಯಲ್ಲಿ ಕೊರೋನಾ ಪಿಡುಗಿನಿಂದ ಭಾರತದಲ್ಲಿ ಸತ್ತವರ ಸಂಖ್ಯೆ ವಾಸ್ತವವಾಗಿ ಎಷ್ಟಿರಬಹುದು ಎನ್ನುವುದರ ಬಗ್ಗೆ ಯೋಗೇಂದ್ರ ಯಾದವ್ ಅವರ ಲೇಖನವನ್ನು ನೋಡಿದೆ. ವಿಷಯ ಹೊಸದೇನಲ್ಲದಿರಬಹುದು. ಕೊರೋನಾದ […]

ಬಟಾ ಬಯಲಾಯಿತು ‘ಉಕ್ಕಿನ ಮನುಷ್ಯ’ನ ನಿಜ ಬಣ್ಣ!

-ಡಿ.ಉಮಾಪತಿ

ಇತಿಹಾಸ ಕಂಡಿರುವ ಮಹಾನ್ ಆತ್ಮಪ್ರಶಂಸಕರ ಸಾಲಿಗೆ ಈಗಾಗಲೆ ಸೇರಿ ಹೋಗಿದ್ದಾರೆ ನಮ್ಮ ಪ್ರಚಂಡ ನಾಯಕಮಣಿ. ರೋಮ್ ನಗರ ಹೊತ್ತಿ ಉರಿಯುತ್ತಿದ್ದಾಗ ಪಿಟೀಲು ಬಾರಿಸುತ್ತಿದ್ದ ನೀರೋ ಕಾಲ ಕಾಲಕ್ಕೆ ಇತಿಹಾಸದ ಪುಟಗಳಿಂದ ಎದ್ದು ಬರುತ್ತಲೇ ಇರುತ್ತಾನೆ. ಇದೀಗ ಭಾರತವೇ ಅವನ ಕಾರ್ಯಕ್ಷೇತ್ರ. -ಡಿ.ಉಮಾಪತಿ ಕರೋನಾವನ್ನು ಮಣಿಸಲು ವೈಜ್ಞಾನಿಕ ಮನೋಭಾವ, ನಿರಂತರ ಎಚ್ಚರ, ಅಪಾರ ಪೂರ್ವಸಿದ್ಧತೆ ಅತ್ಯಗತ್ಯ. ಅಜ್ಞಾನ, ಅಂಧಶ್ರದ್ಧೆ, ಅಪ್ರಾಮಾಣಿಕತೆ, ನಿರ್ಲಕ್ಷ್ಯದ ಧೋರಣೆ ಅದರ ಮುಂದೆ ನಡೆಯುವುದಿಲ್ಲ. ಉಡಾಫೆಯ ಆಟ ನಡೆಯದು ಎಂಬುದು ರುಜುವಾತಾಗಿ ಹೋಗಿದೆ.  ಬಂಗಾಳದ ಅಧಿಕಾರ […]

ಪರಕ್ಕಳ ಪ್ರಭಾಕರ ಅವರ ಪ್ರಶ್ನೆಗಳು ಹುಟ್ಟುಹಾಕುವ ಕಠೋರ ಸತ್ಯಗಳು

-ಡಾ.ಪರಕ್ಕಳ ಪ್ರಭಾಕರ

“ನಾನೀಗ ಒಂದು ವರದಿಯನ್ನು ಓದುತ್ತೇನೆ” ಎಂದು ತೀರ ಸರಳವಾಗಿ ಪರಕ್ಕಳ ಪ್ರಭಾಕರ ತಮ್ಮ ವಾರದ ಪ್ರಸ್ತುತಿಯನ್ನು ಆರಂಭಿಸುತ್ತಾರೆ. ಡಾ.ಪರಕ್ಕಳ ಪ್ರಭಾಕರ ಅವರು ನಮ್ಮ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ನರ ಗಂಡ. ಮೋದಿ ಸರಕಾರದ ನಿಲುವುಗಳನ್ನು, ನಡೆಗಳನ್ನು ಹರಿತವಾಗಿ, ಖಂಡತುಂಡಾಗಿ ವಿಮರ್ಶಿಸುವ ಚಿಂತಕ. ಅವರ ಜೂನ್ ಎರಡರ ವಿಡಿಯೊ ಅಂಕಣವನ್ನು ನಾಗೇಶ ಹೆಗಡೆ ಇಲ್ಲಿ ಅನುವಾದಿಸಿ ಕೊಟ್ಟಿದ್ದಾರೆ. ಇದು ಪದಶಃ ಅನುವಾದ ಅಲ್ಲ. -ಡಾ.ಪರಕ್ಕಳ ಪ್ರಭಾಕರ “ಕೊರೊನಾ ವೈರಸ್ಸಿನಿಂದಾದ ಎಲ್ಲ ಭಾನಗಡಿಗಳನ್ನು ಪರಿಶೀಲಿಸುವ ಸ್ವತಂತ್ರ ತನಿಖಾ ಸಮಿತಿಯೊಂದು ಇನ್ನೇನು […]

ವೈದ್ಯರನ್ನು ಅಸಹಾಯಕರನ್ನಾಗಿಸಿದ ಸನ್ನಿವೇಶ

-ಡಾ.ವಿವೇಕ್ ಜಿ.

ಈ ಬಾರಿ ಸಾವಿನ ಪ್ರಮಾಣ ಮೊದಲನೆಯ ಅಲೆಗಿಂತ ಹೆಚ್ಚಾಗಿದ್ದಕ್ಕೆ ಸೋಂಕಿನ ಅಗಾಧತೆ, ಆಸ್ಪತ್ರೆಗೆ ಹೋಗಲು ತಡ ಮಾಡಿದ್ದು ಸೋಂಕಿತರು ವೈದ್ಯಕೀಯ ತಪಾಸಣೆಯನ್ನು ನಿಧಾನಿಸಿದ್ದು, ಆಸ್ಪತ್ರೆಯಲ್ಲಿ ಹಾಸಿಗೆ ದೊರೆಯದಿದ್ದುದು ಹೀಗೆ ಹಲವು ಕಾರಣಗಳಿವೆ. -ಡಾ.ವಿವೇಕ್ ಜಿ. ಭಾರತದಲ್ಲಿ 2020ರ ಪ್ರಾರಂಭದಲ್ಲಿ ಕೋವಿದ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗ ಬೇರೆ ದೇಶಗಳಲ್ಲಿ ಆಗಾಗಲೇ ಸಂಭವಿಸಿದ್ದ ಸಾವು ನೋವುಗಳನ್ನು ಕಂಡು ಎಲ್ಲರೂ ಹೆದರಿದ್ದರು. ಆರೋಗ್ಯ ಸೇವಾ ಸೌಕರ್ಯಗಳನ್ನು ಸಜ್ಜುಗೊಳಿಸಲು ಕಾರ್ಯತತ್ಪರವಾದ ಸರ್ಕಾರ ಸಾಧ್ಯವಾದಷ್ಟು ಬೇಗ ದೇಶದ ಚಟುವಟಿಕೆಗಳಿಗೆ ಬೀಗಮುದ್ರೆ ಘೋಷಿಸಿತ್ತು; ಆರೋಗ್ಯ ಸೌಕರ್ಯಗಳನ್ನು […]

ಕೋವಿಡ್ ತೆರೆದಿಟ್ಟ ಆರೋಗ್ಯ ವ್ಯವಸ್ಥೆ

-ಡಾ.ಕೆ.ಎಸ್.ಪವಿತ್ರ

ಕಾಯಿಲೆ ಏನು, ಅದರ ಔಷಧಿ ಯಾವುದು ಎಂಬ ಬಗ್ಗೆ ಕೇಂದ್ರೀಕರಿಸಬೇಕಾದ ವೈದ್ಯಕೀಯ ಜಗತ್ತು ಕೊರೋನಾ ಅವಧಿಯ ಅರ್ಧದಷ್ಟು ಸಮಯವನ್ನು ಆಡಳಿತದ ಅಡ್ಡಿ–ಆತಂಕ ನಿವಾರಿಕೊಳ್ಳಲು ಕಳೆಯಬೇಕಾದುದು ವಿಪರ್ಯಾಸಕರ. -ಡಾ.ಕೆ.ಎಸ್.ಪವಿತ್ರ ಇಲ್ಲಿಯವರೆಗೆ ಜೀವನ ಒಂದು ದಾರಿಯಲ್ಲಿ, ಒಂದು ರೀತಿಯಲ್ಲಿ ಸಾಗುತ್ತಿತ್ತು. ಕೋವಿಡ್ ಹಠಾತ್ತನೆ ತಂದ ಬದಲಾವಣೆ ಅಗಾಧ, ತೀವ್ರ ಎಂಬ ರೀತಿಯಲ್ಲಿ ಈ ದಾರಿ-ರೀತಿಗಳನ್ನು ಬದಲಿಸಿಬಿಟ್ಟಿತು. ವ್ಯವಸ್ಥೆಯೊಂದರ ಸಾಫಲ್ಯ-ವೈಫಲ್ಯಗಳು ಪರೀಕ್ಷೆಗೆ ಒಳಗಾಗುವ ಸಮಯವೇ ಇದು ಎನಿಸುವಷ್ಟರ ಮಟ್ಟಿಗೆ ಕೋವಿಡ್ ನಮ್ಮನ್ನು ಚಿಂತನೆಗೆ ಹಚ್ಚಿದೆ. ಆರೋಗ್ಯ ವ್ಯವಸ್ಥೆಯಲ್ಲಿ ಭಾರತ ಹಿಂದೆ-ಮುಂದೆ ಎನ್ನುವ […]

ಅಭಿವೃದ್ಧಿಯ ‘ಭ್ರಮೆ’ ಬಿಡಿಸಿದ ಕೋವಿಡ್

-ಡಾ.ಕಿರಣ್ ಎಂ. ಗಾಜನೂರು

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಮ್ಮದೂ ಒಂದು ಎಂದು ಬೀಗುತ್ತಿದ್ದ ನಮಗೆ ಕೋವಿಡ್ ಕಾಯಿಲೆ ನಾವು ಒಂದು ರಾಜಕೀಯ ವ್ಯವಸ್ಥೆಯಾಗಿ ನಮ್ಮದೇ ಅಂತರಿಕ ಸಂಗತಿಗಳಾದ ಆಹಾರ/ಆರೋಗ್ಯ/ಶಿಕ್ಷಣದಂತಹ ಮೂಲ ಅಗತ್ಯಗಳ ವಿಷಯದಲ್ಲಿ ಎಷ್ಟು ಸಾವಾಲುಗಳನ್ನು ಹೊಂದಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದೆ. -ಡಾ.ಕಿರಣ್ ಎಂ. ಗಾಜನೂರು ನಾವು ‘ಅಭಿವೃದ್ಧಿ’ ಎನ್ನುವ ಪರಿಭಾಷೆಗೆ ಯಾವ ವ್ಯಾಖ್ಯಾನ ನೀಡುತ್ತೇವೆ ಎಂಬುದು ಬಹಳ ಮುಖ್ಯ. ಹಾಗೆ ನೋಡುವುದಾದರೆ ಅಭಿವೃದ್ಧಿ ಎಂದರೆ ಏನು? ಎಂಬ ಪ್ರಶ್ನೆಯನ್ನು ವ್ಯಾಖ್ಯಾನಿಸಿದ ನೂರಾರು ಚಿಂತಕರಿದ್ದಾರೆ. ಆದರೆ ಆ ಎಲ್ಲಾ ಚಿಂತಕರ ಸಾಲಿನಲ್ಲಿ ಭಾರತದವರೇ ಆದ […]

ಸೋಂಕು ಹರಡಿಸದ ಸಮಾಧಾನ!

ಸ್ವತಃ ಕೋವಿಡ್ ಸೊಂಕಿಗೆ ತುತ್ತಾದಾಗ ಆಗದ ಭಯ, ಆಪ್ತರ ಅಗಲಿಕೆಯ ಸುದ್ದಿ ಕೇಳಿದಾಗ ಎದೆ ನಡುಗಿಸಿತು. -ವಿದ್ಯಾಶ್ರೀ ಭಗವಂತಗೌಡ್ರ ಅಂದು ಏಪ್ರಿಲ್ 17, ಪತ್ರಿಕೋದ್ಯಮ ವಿಷಯದ ಪರೀಕ್ಷೆ ಮುಗಿಸಿಕೊಂಡು ಬಂದಿದ್ದೆ. ಇನ್ನು ಒಂದು ಪೇಪರ್ ಆದರೆ ಎಕ್ಸಾಮ್ ಮುಗಿಯಿತು ಎನ್ನುವ ಖುಷಿಯಲ್ಲಿ ಬೇಗನೆ ನಿದ್ರೆಗೆ ಜಾರಿದ್ದೆ. ಅಂದು ರಾತ್ರಿ ಪಿಜಿ ಯ ಡ್ರೈವರ್ ಅಣ್ಣನ ಕರೆ ಬಂದಾಗ ರಾತ್ರಿ 11 ಗಂಟೆ. ಕರೆ ಸ್ವೀಕರಿಸಿದಾಗ “ಕೋವಿಡ್ ಪಾಸಿಟಿವ್ ಬಂದಿದೆ ಪುಟ್ಟ, ಬೆಳಗ್ಗೆ ನಾ ಬರುವವರೆಗೂ ರೂಮಿನಿಂದ ಹೊರಬರಬೇಡ, […]

ಸ್ವತಂತ್ರ ನಿರ್ಭೀತ ಪತ್ರಿಕೋದ್ಯಮವಿಲ್ಲದೆ ದೇಶದ ಪ್ರಜಾಪ್ರಭುತ್ವ ಉಳಿದೀತೇ..?

ನಿರ್ಭೀತ ಮತ್ತು ಸ್ವತಂತ್ರ ಪತ್ರಿಕೋದ್ಯಮ ದೇಶವೊಂದರ ಪ್ರಜಾಪ್ರಭುತ್ವದ ಆರೋಗ್ಯದ ಪ್ರತೀಕವೆಂದು ಹೇಳಲಾಗುತ್ತದೆ. ಹೊಗಳುಭಟ್ಟ ಮತ್ತು ಆತಂಕಿತ ಮಾಧ್ಯಮ ನಾಗರಿಕರ ಮಾನವೀಯ ಹಕ್ಕುಗಳನ್ನು ರಕ್ಷಿಸಲಾಗದೆಂಬುದು ಎಲ್ಲರೂ ಒಪ್ಪುವ ವಿಷಯವೇ ಆಗಿದೆ. ಇಂದಿನ ನಮ್ಮ ಪತ್ರಿಕೋದ್ಯಮ ರಾಜಕೀಯ ಶಕ್ತಿಗಳ ಮುಂದೆ ಮಂಡಿಯೂರಿದಂತೆ ಗೋಚರಿಸುತ್ತಿದೆ. ಬಗ್ಗಿ ನಡೆಯೆಂದರೆ ತೆವಳಲು ಸಿದ್ಧವಾದಂತಿದೆ. ಪತ್ರಿಕಾ ಸ್ವಾತಂತ್ರ್ಯದ ಎಲ್ಲಾ ಆದರ್ಶಗಳನ್ನು ಗಾಳಿಗೆ ತೂರಿ ಸರ್ಕಾರಿ ಎಂಜಲು ತಿನ್ನಲು ಹಾತೊರೆಯುವಂತಿದೆ. ಇದಕ್ಕೆ ಪತ್ರಿಕೋದ್ಯಮಿಗಳು ಹಾಗೂ ಪತ್ರಕರ್ತರೇ ಕಾರಣವಿರಬಹುದು. ಆದರೆ ಇವರನ್ನು ಬಗ್ಗುಬಡಿದು ಮಣಿಸಿ ಸಾಕುನಾಯಿಗಳಂತೆ ಕಾಣುತ್ತಿರುವ ರಾಜಕೀಯ […]

ಕಳಚಿಬಿದ್ದ ಮಾಧ್ಯಮರಂಗದ ಬದ್ಧತೆ

ಕಳಚಿಬಿದ್ದ ಮಾಧ್ಯಮರಂಗದ ಬದ್ಧತೆ

ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಪತ್ರಿಕೋದ್ಯಮ ಎರಡೂ ದಾರಿ ತಪ್ಪಿದ, ಧ್ಯೇಯವನ್ನು ಮರೆತುಹೋದ ಮನುಷ್ಯರಂತೆ ಬಳಲುತ್ತಿವೆ. ಎರಡನ್ನೂ ಸಮಾಜಘಾತುಕ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ವಿದ್ರೂಪಗೊಳಿಸುತ್ತಿವೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಹಾಗೂ ಹೊಸ ರಾಷ್ಟ್ರೀಯತೆಯ ಗಾಳಿ ಎಬ್ಬಿಸಿ ರಾಷ್ಟ್ರವನ್ನೇ ವಿಘಟಿಸುವ ಈ ಶಕ್ತಿಗಳು ಪ್ರಜಾಪ್ರಭುತ್ವದ ಉಚ್ಚ ಆದರ್ಶಗಳನ್ನು ಪಾಲಿಸಲು ಸಾಧ್ಯವೇ? ಅದೇ ರೀತಿ ಪತ್ರಿಕೋದ್ಯಮದ ಉದಾತ್ತ ತತ್ವಗಳಿಗೆ ಈ ಶಕ್ತಿಗಳು ಬದ್ಧವಾಗಿರಲು ಸಾಧ್ಯವೇ? -ಸುಧೀಂದ್ರ ಕುಲಕರ್ಣಿ ಒಂದು ಕಡೆ ಅಧಿಕಾರವನ್ನು ಗಳಿಸುವುದಕ್ಕಾಗಿ ಹಾಗೂ ಗಳಿಸಿದ ಅಧಿಕಾರವನ್ನು […]

ಸ್ವತಂತ್ರ ಪತ್ರಿಕೋದ್ಯಮ ಸಸ್ತಾ ಸಿಗುವುದಿಲ್ಲ

-ಪದ್ಮರಾಜ ದಂಡಾವತಿ

ಸ್ವತಂತ್ರ ಪತ್ರಿಕೋದ್ಯಮ ಸಸ್ತಾ ಸಿಗುವುದಿಲ್ಲ
-ಪದ್ಮರಾಜ ದಂಡಾವತಿ

ಪತ್ರಿಕೋದ್ಯಮದ ಮೊದಲ ಹಾಗೂ ಕೊನೆಯ ಉದ್ದೇಶ ಜನರ ಹಿತವನ್ನು ಕಾಯುವುದು. ತನ್ನ ಹಿತವನ್ನು ಕಾಯುವ ಪತ್ರಿಕಾ ಸ್ವಾತಂತ್ರ್ಯ ಪರಾಧೀನವಾಗದೇ ಉಳಿಯಬೇಕು ಎಂದರೆ ಜನರೂ ಅದಕ್ಕೆ ತಕ್ಕ ಬೆಲೆ ಕೊಡಲು ಕಲಿಯಬೇಕು. -ಪದ್ಮರಾಜ ದಂಡಾವತಿ ಇದೇನು ಇಂದು ನಿನ್ನೆಯ ಕಥೆಯಲ್ಲ. ಇತಿಹಾಸವನ್ನು ಒಂದು ಸಾರಿ ತಿರುವಿ ಹಾಕಿದರೆ ಪ್ರಭುತ್ವದ ಅಸಹನೆಯನ್ನು ಪತ್ರಿಕೋದ್ಯಮ ಎದುರಿಸಿಕೊಂಡು ಬಂದಿರುವುದು ಪುಟ ಪುಟಗಳಲ್ಲಿಯೂ ಕಾಣುತ್ತದೆ. ಆ ಸಂಘರ್ಷದ ಕಾರಣವಾಗಿಯೇ ಪತ್ರಿಕೋದ್ಯಮ ವೃತ್ತಿಗೆ ಘನತೆ ಮತ್ತು ಗ್ಲಾಮರ್ ಎರಡೂ ಇವೆ. ಆಗಸ್ಟಸ್ ಹಿಕಿ ತನ್ನ ಪತ್ರಿಕೆಯನ್ನು […]

ಉಪಕೃತ ಮನಃಸ್ಥಿತಿಯಲ್ಲಿ ಮಾಧ್ಯಮ ಸ್ವಾತಂತ್ರ್ಯ ಹೇಗೆ ಸಾಧ್ಯ?

-ಸಿ.ಜಿ.ಮಂಜುಳಾ

ಹಲವು ಮಾಧ್ಯಮ ಸಂಸ್ಥೆಗಳು, ಸೈದ್ಧಾಂತಿಕ ನೆಲೆಯಲ್ಲಿ ಅಪಹೃತಗೊಂಡಿರುವುದು ದೃಗ್ಗೋಚರ. ಅವು ಪ್ರಸಾರ ಮಾಡುವುದು ಅಥವಾ ಪ್ರಚಾರ ಮಾಡುವುದು, ಏಕದಿಕ್ಕಿನ ಚಿಂತನಾ ಪ್ರಕ್ರಿಯೆ. ಚಿಂತನಾ ವೈವಿಧ್ಯವನ್ನು ಅವು ತಿರಸ್ಕರಿಸುತ್ತವೆ. ತಮ್ಮ ಹಿತಾಸಕ್ತಿ ಬೆಳೆಸಲು ಭಾವನೆಗಳನ್ನು ಉದ್ದೀಪಿಸಿ ಪ್ರಭಾವಿಸುತ್ತವೆ. -ಸಿ.ಜಿ.ಮಂಜುಳಾ ಅಭಿಪ್ರಾಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಕುರಿತು ವಿಶ್ವಸಂಸ್ಥೆಯ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯ (ಯುಡಿಎಚ್‍ಆರ್) ಆರ್ಟಿಕಲ್ 19 ಹೀಗೆ ಹೇಳುತ್ತದೆ: “ಪ್ರತಿಯೊಬ್ಬರಿಗೂ ಅಭಿಪ್ರಾಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ; ಯಾವುದೇ ಹಸ್ತಕ್ಷೇಪವಿಲ್ಲದೆ ಅಭಿಪ್ರಾಯಗಳನ್ನು ಹೊಂದುವ ಸ್ವಾತಂತ್ರ್ಯವನ್ನು ಈ […]