ಕೊರೊನಾ ಕಾಲದ ಸಂಕಟಗಳು

ಕೊರೊನಾ ಕಾಲದ ಸಂಕಟಗಳು

ಇಂತಹ ಆಕಸ್ಮಿಕಗಳು ಎದುರಾದಾಗಲೇ ಪ್ರಭುತ್ವದ ಶಕ್ತಿಯನ್ನು ಅಳೆಯಲು ಸಾಧ್ಯ. ಭಾರತದ ಸಂದರ್ಭದಲ್ಲಿ ಸೋಲುಮುಖವೇ ಢಾಳಾಗಿ ಕಾಣಿಸುತ್ತಿರುವುದು ವಿಷಾದನೀಯ.\ ಕೊರೊನಾ ಸಾಂಕ್ರಾಮಿಕ ನಮಗೆ ಹೊಸ ಹೊಸ ಪಾಠಗಳನ್ನು ಕಲಿಸಿದೆ. ಮನುಷ್ಯ ಸಂಬಂಧಗಳನ್ನು ಕುರಿತು ಮರುಚಿಂತನೆ ಮಾಡುವ ಹಾಗೆ ಮಾಡಿದೆ. ನಮ್ಮ ಧರ್ಮ ಮತ್ತು ಸಂಸ್ಕತಿಗಳನ್ನು ಮರುವಿಮರ್ಶೆಗೆ ಒಳಪಡಿಸಬೇಕಾಗಿದೆ. ನನ್ನನ್ನು ಚಿಂತನೆಗೆ ಹಚ್ಚಿದ ಕೆಲವು ಘಟನೆಗಳು ಹೀಗೆ ಯೋಚಿಸುವಂತೆ ಮಾಡಿವೆ. ಉತ್ತರ ಪ್ರದೇಶದಲ್ಲಿ ಕೊರೊನಾದಿಂದ ವೃದ್ಧರೊಬ್ಬರು ಮೃತಪಟ್ಟರು. ನ್ಯಾಯಾಧೀಶರಾಗಿದ್ದ ಅವರ ಮಗ ತಂದೆಯ ಶವವನ್ನು ಪಡೆಯಲು ಆಸ್ಪತ್ರೆಗೆ ಹೋಗಲು ಹಿಂಜರಿದರು. […]

ಅಫ್ಗಾನಿಸ್ತಾನ: ತಾಲಿಬಾನ್ ತೆಕ್ಕೆಗೆ ಮರಳುವುದೇ?

ಸುಧೀಂದ್ರ ಬುಧ್ಯ

ಅಫ್ಗಾನಿಸ್ತಾನ:  ತಾಲಿಬಾನ್ ತೆಕ್ಕೆಗೆ  ಮರಳುವುದೇ?
ಸುಧೀಂದ್ರ ಬುಧ್ಯ

ಸುಧೀಂದ್ರ ಬುಧ್ಯ ಅಫ್ಗಾನಿಸ್ತಾನದಲ್ಲಿ ಸಂಘರ್ಷ ಹೊಸ ವಿದ್ಯಮಾನವೇನಲ್ಲ. ಅರಾಜಕತೆ ಮತ್ತು ಅಸ್ಥಿರತೆ ಆ ದೇಶದ ಮುಖ್ಯ ಚಹರೆ. ಅದಕ್ಕೆ ಕಾರಣಗಳು ಹಲವು. ಅಫ್ಗಾನಿಸ್ತಾನ ಮತ್ತೊಮ್ಮೆ ಪ್ರಮುಖ ತಿರುವಿನ ಎದುರು ನಿಂತಿದೆ. ಆ ರಾಷ್ಟ್ರದ ಭವಿಷ್ಯ ಹೇಗಿದ್ದೀತು ಎಂಬ ಪ್ರಶ್ನೆಗೆ ನಾಲ್ಕಾರು ಉತ್ತರಗಳು ಕೇಳಿ ಬರುತ್ತಿವೆ. ಆ ಕುರಿತು ಅಲ್ಲಿನ ಸ್ಥಳೀಯರಿಗೂ ಸ್ಪಷ್ಟತೆಯಿಲ್ಲ. ಹಿರಿಯಣ್ಣ ಅಮೆರಿಕಕ್ಕೆ ತಾನು ಅಲ್ಲಿಂದ ಕಾಲ್ತೆಗೆದರೆ ಸಾಕಾಗಿದೆ. ನೆರೆಹೊರೆಯ ರಾಷ್ಟ್ರಗಳು ಗೊಂದಲಕ್ಕೀಡಾಗಿವೆ. ದಿನೇ ದಿನೇ ಸಂಘರ್ಷಗಳು ಹೆಚ್ಚುತ್ತಿವೆ. ಅಮೆರಿಕದ ಸೇನೆ ತೆರವು ಮಾಡಿದ ಸ್ಥಳಗಳಲ್ಲಿ […]

ನಮ್ಮ ಸಾಧನೆಗಳು – ಸೋಲುಗಳು

ಡಾ.ಟಿ.ಆರ್.ಚಂದ್ರಶೇಖರ

ನಮ್ಮ ಸಾಧನೆಗಳು – ಸೋಲುಗಳು
ಡಾ.ಟಿ.ಆರ್.ಚಂದ್ರಶೇಖರ

ಡಾ.ಟಿ.ಆರ್.ಚಂದ್ರಶೇಖರ ಜಿಡಿಪಿ ಮತ್ತು ತಲಾ ಜಿಡಿಪಿಗಳು ಅಭಿವೃದ್ಧಿಯ ಸೂಚಕವಾದರೆ ನೆರೆಹೊರೆಯ ದೇಶಗಳ ನಡುವೆಯಾದರೂ ತೌಲನಿಕವಾಗಿ ನಾವು ಪ್ರಗತಿ ಸಾಧಿಸಿದ್ದೇವೆಯೇ? ಮೊದಲನೆಯದಾಗಿ ಜಿಡಿಪಿ/ತಲಾ ಜಿಡಿಪಿಗಳನ್ನು ಅಭಿವೃದ್ಧಿಯ ಮಾಪಕಗಳಾಗಿ ಬಳಸುವ ಕ್ರಮವನ್ನು 1990ರಲ್ಲಿಯೇ ತಿರಸ್ಕರಿಸಲಾಗಿದೆ. ಯುನೈಟೆಡ್ ನೇಷನ್ಸ್ ಡೆವಲಪ್‍ಮೆಂಟ್ ಪ್ರೋಗ್ರಾಮ್ (ಯುಎನ್‍ಡಿಪಿ) 1990ರಲ್ಲಿ ಮೆಹಬೂಬ್ ಉಲ್ ಹಕ್ ಅವರ ನೇತೃತ್ವ್ವದಲ್ಲಿ ಪ್ರಕಟಿಸಿದ ಮೊಟ್ಟಮೊದಲ ಮಾನವ ಅಭಿವೃದ್ಧಿ ವರದಿಯಲ್ಲಿ ‘ವರಮಾನವು ಜನರ ಬದುಕಿನ ಒಟ್ಟು ಮೊತ್ತವಲ್ಲ’ ಎಂದು ಘೋಷಿಸಿದ್ದರು. ಅಭಿವೃದ್ಧಿಯನ್ನು ವರಮಾನದ ಜೊತೆಗೆ ಸಾಕ್ಷರತೆ/ಶಿಕ್ಷಣ ಮತ್ತು ಆರೋಗ್ಯಗಳ ಆಧಾರದಲ್ಲಿ ಮಾಪನ ಮಾಡುವ […]

ಅಪ್ರಸ್ತುತತೆಯ ಹಾದಿಯಲ್ಲಿ ಸಿಸಿಪಿ

-ಶೇಷಾದ್ರಿ ಚಾರಿ

ಅಪ್ರಸ್ತುತತೆಯ ಹಾದಿಯಲ್ಲಿ ಸಿಸಿಪಿ
-ಶೇಷಾದ್ರಿ ಚಾರಿ

–ಶೇಷಾದ್ರಿ ಚಾರಿ ಅನುವಾದ: ಹರ್ಷವರ್ಧನ ವಿ.ಶೀಲವಂತ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ಆರ್‍ಎಸ್‍ಎಸ್‍ನ್ನು ತಮ್ಮ ವಿಶಿಷ್ಟ ದೃಷ್ಟಿಕೋನದಲ್ಲಿ ಗ್ರಹಿಸಿ, ಒಳಾರ್ಥ ವಿಶ್ಲೇಷಿಸಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳಿಗೆ ಸಮೀಕರಿಸಿ ಬರೆಯುತ್ತಾರೆ ಶೇಷಾದ್ರಿ ಚಾರಿ. ರಾಷ್ಟ್ರಗಳು ಕಳೆಗುಂದಿ ಸರಿದು ಹೋಗುತ್ತವೆ, ಎಂಬುದು ಕಾರ್ಲ್ ಮಾಕ್ರ್ಸ್ ಘೋಷಿಸಿದ ತುಂಬ ಪ್ರಸಿದ್ಧ ಮಾತು. ಆದರೆ, ಕಣ್ಮರೆಯಾದದ್ದು ಕಮ್ಯುನಿಸ್ಟ್ ಪಕ್ಷಗಳು ಅಥವಾ ಅವು ಈ ಪ್ರಕ್ರಿಯೆಯಲ್ಲಿವೆ. ಕಮ್ಯುನಿಸ್ಟ್ ಆಡಳಿತವನ್ನು ವಿಶ್ವ ಮಟ್ಟದಲ್ಲಿ ಸ್ಥಾಪಿಸಿ, ತನ್ಮೂಲಕ ಜಾಗತಿಕವಾಗಿ ಕಮ್ಯುನಿಸ್ಟ್ ಕ್ರಾಂತಿಯನ್ನು ದೈದೀಪ್ಯಮಾನವಾಗಿಸುವ ಧ್ಯೇಯೋದ್ದೇಶ ಹಾಗೂ […]

ಕಳಚಿಬಿದ್ದ ಮಾಧ್ಯಮರಂಗದ ಬದ್ಧತೆ

ಕಳಚಿಬಿದ್ದ ಮಾಧ್ಯಮರಂಗದ ಬದ್ಧತೆ

ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಪತ್ರಿಕೋದ್ಯಮ ಎರಡೂ ದಾರಿ ತಪ್ಪಿದ, ಧ್ಯೇಯವನ್ನು ಮರೆತುಹೋದ ಮನುಷ್ಯರಂತೆ ಬಳಲುತ್ತಿವೆ. ಎರಡನ್ನೂ ಸಮಾಜಘಾತುಕ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ವಿದ್ರೂಪಗೊಳಿಸುತ್ತಿವೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಹಾಗೂ ಹೊಸ ರಾಷ್ಟ್ರೀಯತೆಯ ಗಾಳಿ ಎಬ್ಬಿಸಿ ರಾಷ್ಟ್ರವನ್ನೇ ವಿಘಟಿಸುವ ಈ ಶಕ್ತಿಗಳು ಪ್ರಜಾಪ್ರಭುತ್ವದ ಉಚ್ಚ ಆದರ್ಶಗಳನ್ನು ಪಾಲಿಸಲು ಸಾಧ್ಯವೇ? ಅದೇ ರೀತಿ ಪತ್ರಿಕೋದ್ಯಮದ ಉದಾತ್ತ ತತ್ವಗಳಿಗೆ ಈ ಶಕ್ತಿಗಳು ಬದ್ಧವಾಗಿರಲು ಸಾಧ್ಯವೇ? -ಸುಧೀಂದ್ರ ಕುಲಕರ್ಣಿ ಒಂದು ಕಡೆ ಅಧಿಕಾರವನ್ನು ಗಳಿಸುವುದಕ್ಕಾಗಿ ಹಾಗೂ ಗಳಿಸಿದ ಅಧಿಕಾರವನ್ನು […]

ಸ್ವತಂತ್ರ ಪತ್ರಿಕೋದ್ಯಮ ಸಸ್ತಾ ಸಿಗುವುದಿಲ್ಲ

-ಪದ್ಮರಾಜ ದಂಡಾವತಿ

ಸ್ವತಂತ್ರ ಪತ್ರಿಕೋದ್ಯಮ ಸಸ್ತಾ ಸಿಗುವುದಿಲ್ಲ
-ಪದ್ಮರಾಜ ದಂಡಾವತಿ

ಪತ್ರಿಕೋದ್ಯಮದ ಮೊದಲ ಹಾಗೂ ಕೊನೆಯ ಉದ್ದೇಶ ಜನರ ಹಿತವನ್ನು ಕಾಯುವುದು. ತನ್ನ ಹಿತವನ್ನು ಕಾಯುವ ಪತ್ರಿಕಾ ಸ್ವಾತಂತ್ರ್ಯ ಪರಾಧೀನವಾಗದೇ ಉಳಿಯಬೇಕು ಎಂದರೆ ಜನರೂ ಅದಕ್ಕೆ ತಕ್ಕ ಬೆಲೆ ಕೊಡಲು ಕಲಿಯಬೇಕು. -ಪದ್ಮರಾಜ ದಂಡಾವತಿ ಇದೇನು ಇಂದು ನಿನ್ನೆಯ ಕಥೆಯಲ್ಲ. ಇತಿಹಾಸವನ್ನು ಒಂದು ಸಾರಿ ತಿರುವಿ ಹಾಕಿದರೆ ಪ್ರಭುತ್ವದ ಅಸಹನೆಯನ್ನು ಪತ್ರಿಕೋದ್ಯಮ ಎದುರಿಸಿಕೊಂಡು ಬಂದಿರುವುದು ಪುಟ ಪುಟಗಳಲ್ಲಿಯೂ ಕಾಣುತ್ತದೆ. ಆ ಸಂಘರ್ಷದ ಕಾರಣವಾಗಿಯೇ ಪತ್ರಿಕೋದ್ಯಮ ವೃತ್ತಿಗೆ ಘನತೆ ಮತ್ತು ಗ್ಲಾಮರ್ ಎರಡೂ ಇವೆ. ಆಗಸ್ಟಸ್ ಹಿಕಿ ತನ್ನ ಪತ್ರಿಕೆಯನ್ನು […]

ಕಾಯುವ ನಾಯಿ ಬೊಗಳುವುದು ಮರೆತರೇ…!

-ಎಂ.ಕೆ.ಆನಂದರಾಜೇ ಅರಸ್

ಕಾಯುವ ನಾಯಿ  ಬೊಗಳುವುದು ಮರೆತರೇ…!
-ಎಂ.ಕೆ.ಆನಂದರಾಜೇ ಅರಸ್

ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸ್ವತಂತ್ರ ಮಾಧ್ಯಮಕ್ಕೆ ಹಾಗೂ ಆ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚಿನ ಹೊಡೆತ ಬಿದ್ದಿದೆ. ಈ ಬಗ್ಗೆ ಅನೇಕ ನಿದರ್ಶನಗಳಿವೆ. -ಎಂ.ಕೆ.ಆನಂದರಾಜೇ ಅರಸ್ ಕೋವಿಡ್ ಎರಡನೆಯ ಅಲೆ ದೇಶದಲ್ಲಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಭಾರತ ಸರ್ಕಾರದ ನಾಯಕತ್ವವನ್ನು ಅತ್ಯಂತ ಮೊನಚಾಗಿ ಟೀಕಿಸುವ ವರದಿಗಳು ಮೊದಲು ವಿದೇಶಿ ಮಾಧ್ಯಮಗಳಲ್ಲಿ ಪ್ರಕಟಗೊಂಡವು. ಪಾಶ್ಚಿಮಾತ್ಯ ಉದಾರವಾದಿ ಲೇಖಕರಿಗೆ ಮೋದಿಯವರನ್ನು ಟೀಕಿಸುವುದೇ ಒಂದು ಅಭ್ಯಾಸ, ರಾಣಾ ಅಯೂಬ್, ಸ್ವಾತಿ ಚತುರ್ವೇದಿಯಂತಹ ಲೇಖಕರು ಮೋದಿಯ ಮೇಲೆ ಹೊರ […]

ಯಾವ ಕಾಲಕ್ಕೂ ಮಾಧ್ಯಮಕ್ಕೆ ಸಾವಿಲ್ಲ!

-ಜೆ ಸು ನಾ

ಯಾವ ಕಾಲಕ್ಕೂ ಮಾಧ್ಯಮಕ್ಕೆ ಸಾವಿಲ್ಲ!
-ಜೆ ಸು ನಾ

ಅಶ್ಚರ್ಯ ಮತ್ತು ಸಂತಸದ ವಿಷಯವೆಂದರೆ; ದೇಶದಲ್ಲಿನ ಕೆಲವೇ ಬರಳೆಣಿಕೆಯ ಪತ್ರಿಕೆ ಮತ್ತು ವಾಹಿನಿಗಳು ಪ್ರತಿಪಕ್ಷದ ಕೆಲಸವನ್ನು ಸಮರ್ಥವಾಗಿ ಮಾಡುತ್ತಿರುವುದು. ಅಂಥವುಗಳ ಸಂಖ್ಯೆ ಜಾಸ್ತಿ ಆಗಬೇಕಿದೆ. -ಜೆ ಸು ನಾ ಭಾರತದ ರಾಜಕಾರಣದ ಗತಿ ಮತ್ತು ವೇಗ ಪಡೆದುಕೊಂಡಿದ್ದೇ 1975ರ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಘೋಷಣೆಯೊಂದಿಗೆ. ಆಗ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಅವರ ಅಧಿಕಾರಕ್ಕೇ ಚ್ಯುತಿ ಬರುವ ಅಪಾಯದ ಸೂಚನೆಗಳು ಸಿಗುತ್ತಿದ್ದಂತೆಯೇ ದೇಶದಲ್ಲಿ “ಆಂತರಿಕ ವಿಧ್ವಂಸಕ ಕೃತ್ಯಗಳ” ನೆಪ ಒಡ್ಡಿ ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೆ […]

ಸೂರ್ಯ ಚಂದ್ರ ಇರೋತನಕ ಜಾತಿ!

-ರಮಾನಂದ ಶರ್ಮಾ

ಸೂರ್ಯ ಚಂದ್ರ ಇರೋತನಕ ಜಾತಿ!
-ರಮಾನಂದ ಶರ್ಮಾ

-ರಮಾನಂದ ಶರ್ಮಾ ಜಾತಿ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಇವು ಒಟ್ಟಿಗೇ ಇರುತ್ತವೆ.   ಯಾರು ಏನೇ ಹೇಳಿದರೂ ನಮ್ಮ ಸಮಾಜದ ಅಸ್ತಿತ್ವ ಇರುವುದೇ `ನಾವು ಮತ್ತು ನಮ್ಮವರು’ ಎನ್ನುವ ಲಾಗಾಯ್ತನಿಂದ ಅಳವಡಿಸಿ ಪೋಷಿಸಿಕೊಂಡು ಬಂದಿರುವ ಸಿದ್ಧಾಂತದ ಮೇಲೆ. ಈ ಸಿದ್ಧಾಂತದಲ್ಲಿ ಕುಟುಂಬ ರಾಜಕಾರಣದ ನಂತರ ಅನಾವರಣಗೊಳ್ಳುವುದೇ ‘ಜಾತಿ ರಾಜಕಾರಣ’. ಜಾತ್ಯತೀತತೆ ಎನ್ನುವುದು ವೇದಿಕೆಗೆ, ಚರ್ಚಾ ಗೋಷ್ಟಿಗೆ ಮತ್ತು ಸೆಮಿನಾರಿಗೆ ಸೀಮಿತವಾದ ನಿಲುವು ಎನ್ನುವುದನ್ನು ಪ್ರಜ್ಞಾವಂತರೇಕೆ, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯ ಎಬಿಸಿಡಿ ತಿಳಿಯದವರೂ […]

`ಮೀ ಟೂ’ ಪ್ರಕರಣ ಮಹಿಳೆಯ ಘನತೆ ಎತ್ತಿಹಿಡಿದ ನ್ಯಾಯಾಲಯ

-ಮಾಲತಿ ಭಟ್

`ಮೀ ಟೂ’ ಪ್ರಕರಣ ಮಹಿಳೆಯ ಘನತೆ ಎತ್ತಿಹಿಡಿದ ನ್ಯಾಯಾಲಯ
-ಮಾಲತಿ ಭಟ್

-ಮಾಲತಿ ಭಟ್ `ಮೀ ಟೂ’ ಪ್ರಕರಣದಲ್ಲಿ ತಮ್ಮನ್ನು ಹೆಸರಿಸಿದ್ದಕ್ಕಾಗಿ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್ ದಾಖಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಪ್ರಿಯಾ ಅವರನ್ನು ಖುಲಾಸೆಗೊಳಿಸಿ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಮಹಿಳಾ ಸಬಲೀಕರಣಕ್ಕೆ, ಮಹಿಳಾ ಚಳವಳಿಗೆ ದೊಡ್ಡ ಶಕ್ತಿ ಒದಗಿಸಿವೆ. ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್ ವರ್ಸಸ್ ಪತ್ರಕರ್ತೆ ಪ್ರಿಯಾ ರಮಣಿ ಪ್ರಕರಣದಲ್ಲಿ ಫೆಬ್ರುವರಿ 17ರಂದು ದೆಹಲಿಯ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಲಯ ನೀಡಿದ ಆದೇಶ, ಮಾರನೇ ದಿನ ಬಹುತೇಕ […]

ಆರ್.ಎಸ್.ಎಸ್. ಹುಟ್ಟು ಮತ್ತು ಬೆಳವಣಿಗೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕೇಶವ್ ಬಲಿರಾಂ ಹೆಡ್ಗೆವಾರ್ ಎಂಬ ನಾಗಪುರದ ವೈದ್ಯರು ಬ್ರಿಟಿಷ್ ಆಳ್ವಿಕೆಗೊಳಪಟ್ಟಿದ್ದ ಅಂದಿನ ಭಾರತದಲ್ಲಿ ಸ್ಥಾಪಿಸಿದರು. ವೈದ್ಯಕೀಯ ಶಿಕ್ಷಣ ಪಡೆಯಲು ಕೊಲ್ಕತ್ತಕ್ಕೆ ಹೋಗಿದ್ದ ಹೆಡ್ಗೆವಾರ್ ಅನುಶೀಲನ ಸಮಿತಿ ಎಂಬ ಬ್ರಿಟಿಷ್ ವಿರೋಧಿ ಗುಂಪಿನ ಸದಸ್ಯರಾಗಿ ಗುರುತಿಸಿಕೊಡಿದ್ದರು. ನಾಗಪುರಕ್ಕೆ ಹಿಂದಿರುಗಿದ ಬಳಿಕ 1923ರಲ್ಲಿ ಪ್ರಕಟಗೊಂಡ ಸಾವರ್ಕರ್‍ರವರ “ಹಿಂದುತ್ವ” ಎಂಬ ಪುಸ್ತಕದಿಂದ ಹೆಡ್ಗೆವಾರ್ ಪ್ರಭಾವಿತರಾಗಿದ್ದು, 1925 ರಲ್ಲಿ ರತ್ನಗಿರಿ ಸೆರೆಮನೆಯಲ್ಲಿ ಅವರನ್ನು ಭೇಟಿ ಮಾಡಿದ್ದರು. ಹಿಂದೂ ಸಮಾಜವನ್ನು ಬಲಪಡಿಸುವ ಉದ್ದೇಶದಿಂದ ಹೆಡ್ಗೆವಾರ್‍ರವರು, ಆರ್. ಎಸ್. ಎಸ್ […]

ಸಾಮಾಜಿಕ ಮಾಧ್ಯಮಕ್ಕೆ ಜವಾಬ್ದಾರಿ ಏಕಿಲ್ಲ? ಬೇಕಿಲ್ಲವೇ?

-ಎಂ.ಕೆ.ಆನಂದರಾಜೇ ಅರಸ್

ಸಾಮಾಜಿಕ ಮಾಧ್ಯಮಕ್ಕೆ ಜವಾಬ್ದಾರಿ ಏಕಿಲ್ಲ? ಬೇಕಿಲ್ಲವೇ?
-ಎಂ.ಕೆ.ಆನಂದರಾಜೇ ಅರಸ್

-ಎಂ.ಕೆ.ಆನಂದರಾಜೇ ಅರಸ್ ಸಾಮಾಜಿಕ ಮಾಧ್ಯಮಗಳ ಶಕ್ತಿ ಜಗತ್ತನ್ನೇ ಅಲುಗಾಡಿಸುತ್ತಿದೆ. ಇದು ಸಕಾರಾತ್ಮಕದ್ದಾದರೆ ಮನುಷ್ಯ ಈವರೆಗೆ ಕಂಡುಹಿಡಿದಿರುವ ಅತ್ಯಂತ ಪ್ರಭಾವಿ ಮಾಧ್ಯಮವಾಗಿ ಉಳಿದುಬಿಡುತ್ತದೆ. ಒಂದು ಪಕ್ಷ ಇದರ ಋಣಾತ್ಮಕ ಗುಣಗಳು ಹೆಚ್ಚಾದಲ್ಲಿ, ಜಗತ್ತು ಈ ಮಾಧ್ಯಮಗಳಿಂದ ಉದ್ಭವಿಸಬಹುದಾದ ಜಟಿಲ ಸಮಸ್ಯೆಗಳನ್ನು ಬಗೆಹರಿಸುವುದರಲ್ಲೇ ಮುಳುಗಬೇಕಾಗುತ್ತದೆ. ಗ್ರೀssಸ್ ಪುರಾಣದಲ್ಲಿ ಪ್ರಾಚೀನ ಗ್ರೀಸ್ ಕವಿ ಹೆಸಿಯಾಡ್‍ನ ಪ್ರಕಾರ ಪ್ರಮೀತಿಯಸ್ ಸ್ವರ್ಗದಿಂದ ಬೆಂಕಿ ಕದ್ದಾಗ, ಗ್ರೀಸರ ದೇವತೆಗಳ ರಾಜ ಜಿûೀಯಸ್ ಪ್ರಮೀತಿಯಸ್‍ನ ಸಹೋದರ ಎಪಿಮೆಥಿಯಸ್‍ಗೆ ಪ್ಯಾಂಡೋರಳನ್ನು ಉಡುಗೆಯಾಗಿ ನೀಡಿ ಸೇಡು ತೀರಿಸಿಕೊಳ್ಳುತ್ತಾನೆ. ಪ್ಯಾಂಡೋರ, ಅಗ್ನಿ, […]

ಸಾಹಿತ್ಯ ಮತ್ತು ಸಾಮಾನ್ಯ ಜ್ಞಾನ

-ಎನ್.ಬೋರಲಿಂಗಯ್ಯ

ಸಾಹಿತ್ಯ ಮತ್ತು ಸಾಮಾನ್ಯ ಜ್ಞಾನ
-ಎನ್.ಬೋರಲಿಂಗಯ್ಯ

-ಎನ್.ಬೋರಲಿಂಗಯ್ಯ ರಾಮಾಯಣ ಮಹಾಭಾರತಗಳು ಅವುಗಳ ಅನುಯಾಯಿಗಳಿಗೆ ಭಜನೆ ಮಾಡುವುದನ್ನು ಹೇಳಿಕೊಟ್ಟಿವೆ ಹೊರತು ಆ ಕೃತಿಗಳ ವೈಚಾರಿಕ ಆಕೃತಿಗಳು ಜನಸಮೂಹದಲ್ಲಿ ಹಾಸುಹೊಕ್ಕಾಗುವಂತೆ ನೋಡಿಕೊಳ್ಳಲಿಲ್ಲ. ಈ ಮಾತು ಕುವೆಂಪು ತೇಜಸ್ವಿ ಕಾರಂತರಾದಿ ಆಧುನಿಕ ಸೃಜನಶೀಲ ಲೇಖಕರಿಗೂ ಅನ್ವಯಿಸುತ್ತದೆ. ಸಮಾಜಮುಖಿ ಜನೆವರಿ ಸಂಚಿಕೆಯಲ್ಲಿ ಸಾಹಿತ್ಯ ವಿಮರ್ಶೆಯನ್ನೂ ಗಂಭೀರವಾಗಿ ಗಣಿಸಿ “ವಿಮರ್ಶೆಗೆ ತಕ್ಕ ವಾತಾವರಣ ಏಕಿಲ್ಲ?” ಎಂಬ ಒಂದು ಒಳ್ಳೆಯ ಪ್ರಶ್ನೆಯೊಂದಿಗೆ ಒಳ್ಳೆಯ ಲೇಖನವೊಂದನ್ನು ಪ್ರಕಟಿಸಲಾಗಿದೆ. ಚರ್ಚೆಯನ್ನು ಆರಂಭಿಸಿರುವ ಓ.ಎಲ್.ನಾಗಭೂಷಣಸ್ವಾಮಿ ನಮ್ಮ ನಡುವಿನ ಒಬ್ಬ ಸಹೃದಯ ವಿಮರ್ಶಕ ಎನ್ನುವುದರಲ್ಲಿ ಅನುಮಾನವಿಲ್ಲ. ಶತಮಾನಗಳಷ್ಟು ಹಳೆಯ […]

ಮೊದಲು ನಾವು ಬದಲಾಗಬೇಕು

-ಡಾ.ಜ್ಯೋತಿ

ಮೊದಲು ನಾವು ಬದಲಾಗಬೇಕು
-ಡಾ.ಜ್ಯೋತಿ

-ಡಾ.ಜ್ಯೋತಿ ಬಹುಶಃ ವರ್ತಮಾನದ ಕಾಲಘಟ್ಟದಲ್ಲಿ ಕೊರೊನಾ ವೈರಾಣು ತಂದಿಟ್ಟ ಆಕಸ್ಮಿಕ ಮತ್ತು ಆಘಾತಕಾರಿ ಬದಲಾವಣೆಗಳು ಜನಸಾಮಾನ್ಯರ ದೈನಂದಿನ ಬದುಕಿನಲ್ಲಿ ಎಂದೂ ಮರೆಯಲಾಗದ ಸ್ಮöÈತಿಯಾಗಿ ಉಳಿಯಲಿವೆ. 2020ರಲ್ಲಿ, ವರ್ಷವಿಡೀ ನಮ್ಮ ಮನಸ್ಸನ್ನು ಆವರಿಸಿದ್ದ ಈ ಕೊರೊನಾ ಸಂಬAಧಿತ ಪರಿಕರಗಳು, ಸರಕಾರ ಜಾರಿಗೊಳಿಸಿದ ವಿನೂತನ ಮಾರ್ಗಸೂಚಿಗಳು, ಕೊರೊನಾ ಅಲೆಗಳು, ಆರ್ಥಿಕ ಸಂಕಷ್ಟಗಳು, ಭಯ ಉತ್ಪಾದಿಸಿದ ಸುದ್ದಿಮಾಧ್ಯಮಗಳು, ಎಲ್ಲಾ ಐಷಾರಾಮಗಳಿದ್ದೂ ಅನಾಥವಾದ ಹೆಣಗಳು, ಇತ್ಯಾದಿಗಳಿಂದ ಒಮ್ಮೆ ಹೊರಬಂದು ಸೂಕ್ಷ÷್ಮವಾಗಿ ಆಲೋಚಿಸಿದರೆ, ಜಗತ್ತನ್ನೆ ತಲ್ಲಣಗೊಳಿಸಿದ ಈ ಮಹಾನ್ ಪಲ್ಲಟದಿಂದ ಪ್ರಾಯಶಃ, ಮನುಷ್ಯ ಸಕಾರಾತ್ಮಕ […]

ಯಾರು ಹಿತವರು ಈ ಮೂವರೊಳಗೆ…?

-ಪದ್ಮರಾಜ ದಂಡಾವತಿ

ಯಾರು ಹಿತವರು ಈ ಮೂವರೊಳಗೆ…?
-ಪದ್ಮರಾಜ ದಂಡಾವತಿ

-ಪದ್ಮರಾಜ ದಂಡಾವತಿ ಪರ್ಯಾಯ ನಾಯಕತ್ವ ಕಾಣದ ಬಿಜೆಪಿ ಇಷ್ಟೆಲ್ಲ ಆಂತರಿಕ ತಿಕ್ಕಾಟ ಇರುವ, ಹಾದಿಬೀದಿಯಲ್ಲಿ ಮುಖ್ಯಮಂತ್ರಿ ವಿರುದ್ಧವೇ ಅವರ ಪಕ್ಷದ ನಾಯಕರೇ ಎಲ್ಲ ಬಗೆಯ ಆರೋಪ ಮಾಡುತ್ತಿರುವಾಗ ಜನರು ಮತ್ತೆ ಅದೇ ಪಕ್ಷಕ್ಕೆ, ನಾಯಕತ್ವಕ್ಕೆ ಜನಾದೇಶ ಕೊಡುತ್ತಾರೆಯೇ? ಮುಂದಿನ ಚುನಾವಣೆಯ ನಾಯಕತ್ವವನ್ನು ಲಿಂಗಾಯತರ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪ ವಹಿಸುವುದಿಲ್ಲ! ವರ್ತಮಾನದಲ್ಲಿ ಮತ್ತು ಇತಿಹಾಸದಲ್ಲಿ ಕರ್ನಾಟಕದ ಮೂರೂ ರಾಜಕೀಯ ಪಕ್ಷಗಳಿಗೆ ಅನೇಕ ಪಾಠಗಳು ಇವೆ. ವರ್ತಮಾನದಿಂದಲೇ ಪಾಠ ಕಲಿಯದವರು ಇತಿಹಾಸದಿಂದ ಕಲಿಯುತ್ತಾರೆಯೇ? ಒಬ್ಬ ನಾಯಕ ಒಂದು ಪಕ್ಷಕ್ಕೆ ಬೇಕಾಗಿರುವುದು […]

ಭಾರತದಲ್ಲಿ ಲಾಕ್ಡೌನ್ ಅಗತ್ಯವಿತ್ತೇ..?

ಸುರ್ಜಿತ್ ಎಸ್. ಭಲ್ಲಾ

ಭಾರತದಲ್ಲಿ ಲಾಕ್ಡೌನ್ ಅಗತ್ಯವಿತ್ತೇ..?
ಸುರ್ಜಿತ್ ಎಸ್. ಭಲ್ಲಾ

ಸುರ್ಜಿತ್ ಎಸ್. ಭಲ್ಲಾ ಕರನ್ ಭಾಸಿನ್ ಕೋವಿಡ್ ವಿರುದ್ಧದ ಹೋರಾಟದ ಯಶಸ್ಸಿನಲ್ಲಿ ಲಾಕ್‌ಡೌನ್ ಕಡ್ಡಾಯವಾಗಿ ಅತ್ಯಗತ್ಯವಾದ ಕ್ರಮವೇನಲ್ಲ ಎಂಬುದು ಲಭ್ಯವಿರುವ ಸಂಗತಿಗಳಿOದ ತಿಳಿಯುತ್ತದೆ. ನೂರಕ್ಕೂ ಹೆಚ್ಚು ರಾಷ್ಟçಗಳು ಲಾಕ್‌ಡೌನ್ ವಿಧಿಸಿದರೂ ಕೆಲವು ಮಾತ್ರ ಯಶಸ್ಸು ಕಂಡವು. ಚೀನಾದಿಂದ ಹೊರಗೆ ಕೋವಿಡ್-19 ವೈರಾಣು ಕಾಲಿಟ್ಟು ಒಂದು ವರುಷವೇ ಕಳೆದಿದೆ. ಈ ವೈರಸ್ ಕೊನೆಯಾಗುವ ಬಗ್ಗೆ ಹಲವಾರು ಊಹಾಪೋಹಗಳು ಇದ್ದರೂ, ಅದರ ಉಪಟಳ ಸದ್ಯಕ್ಕೆ ಇನ್ನೂ ಮುಂದುವರೆದಿದೆ. ಜುಲೈ 2020ರ ನಂತರ, ವಿಶ್ವದ ಹಲವೆಡೆ ಕಾಣಿಸಿಕೊಂಡಿರುವ ಎರಡನೇ ಅಲೆಯು ಮೊದಲಿಗಿಂತಲೂ […]

ಆರೆಸೆಸ್ ಸೋಲಿಸಲು ಕಾಂಗ್ರೆಸ್ ಅನಿವಾರ್ಯ

-ಡಾ.ಟಿ.ಆರ್.ಚಂದ್ರಶೇಖರ

ಆರೆಸೆಸ್ ಸೋಲಿಸಲು ಕಾಂಗ್ರೆಸ್ ಅನಿವಾರ್ಯ
-ಡಾ.ಟಿ.ಆರ್.ಚಂದ್ರಶೇಖರ

-ಡಾ.ಟಿ.ಆರ್.ಚಂದ್ರಶೇಖರ ಕಾಂಗ್ರೆಸ್ ಮುಕ್ತ ಭಾರತ ಎಂಬುದು ದುರಹಂಕಾರದ ಪರಾಕಾಷ್ಠೆಯ ಮತ್ತು ಜನತಂತ್ರ ವಿರೋಧಿ ನುಡಿಗÀಟ್ಟು. ಈ ನುಡಿಗಟ್ಟನ್ನು ಸುಮ್ಮನೆ ನೋಡಿದರೆ ಸಾಕು, ಅದರ ಮೂಲದಲ್ಲಿರುವ ಸರ್ವಾಧಿಕಾರಿ ಧೋರಣೆ ಅರ್ಥವಾದೀತು. ಈ ನುಡಿಗಟ್ಟಿನ ಮೂಲದಲ್ಲಿರುವ ದುಷ್ಟತನದ ಭಾವನೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಇತ್ತೀಚೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬಿಡನ್ ಅವರ ಗೆಲುವಿನ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ‘ಪ್ರಗತಿಯನ್ನು ಸಾಧಿಸಬೇಕಾದರೆ ನಾವು ನಮ್ಮ ವಿರೋಧಿಗಳನ್ನು ಶತ್ರುಗಳೆಂದು ಭಾವಿಸುವುದನ್ನು ನಿಲ್ಲಿಸಬೇಕು’ ಎಂಬ ಬಿಡನ್ ಮಾತು ಶಾಂತಿದೂತನೊಬ್ಬನ ಸಂದೇಶದಂತಿದೆ. ಡೊನಾನ್ಡ್ ಟ್ರಂಪ್‍ಗೆ ಮತ ನೀಡಿದ […]

ಮಡದಿ ಕಳೆದುಕೊಂಡು ನಾನು ಉಳಿದೆ!

-ಡಾ.ತ್ರಿಯಂಬಕ ತಾಪಸ

ಮಡದಿ ಕಳೆದುಕೊಂಡು ನಾನು ಉಳಿದೆ!
-ಡಾ.ತ್ರಿಯಂಬಕ ತಾಪಸ

-ಡಾ.ತ್ರಿಯಂಬಕ ತಾಪಸ ವಾಹಿನಿಗಳಲ್ಲಿ ವಾರ್ತೆಯಾಗಿ, ಸೋಂಕಿತರ-ಸತ್ತವರ ಸಂಖ್ಯೆಯಾಗಿ ಗೋಚರಿಸುತ್ತಿದ್ದ ಕೋವಿಡ್ ಒಂದು ದಿನ ನಮ್ಮ ಮನೆಯ ಬಾಗಿಲನ್ನೂ ತಟ್ಟಿ ಜೀವನ ಸಂಗಾತಿಯನ್ನು ಕರೆದೊಯ್ದಾಗ…! ನಾನು ನನ್ನ ಹೆಂಡತಿಯೊಡನೆ ಉತ್ತರ ಕರ್ನಾಟಕದ ಬಿಸಿಲು ಹವೆಯಿಂದ ತಂಪು ಹವೆಯ ಬೆಂಗಳೂರಿಗೆ ಸಾಂದರ್ಭಿಕ ಅನಿವಾರ್ಯತೆಯಿಂದ ಬಂದು ನೆಲೆಸಿ ಹತ್ತು ವರ್ಷಗಳಾದವು. ಅಲ್ಲಿನ ಸಿಡಿಲು-ಗುಡುಗುಗಳ ಮಳೆಯ ನೆನಪು ಇಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ವಿರಳ. ಆದರೆ ಈ ಜುಲೈ ತಿಂಗಳಿನಲ್ಲಿ ನಮ್ಮ ಮನೆಗೆ ಹೊಸ ರೂಪದ ಸಿಡಿಲೊಂದು ಬಡಿಯಿತು. ಸಿಡಿಲಿನ ಬಡಿತ ಎಷ್ಟು ಆಕಸ್ಮಿಕವೋ, […]

ಬದಲಾವಣೆ-ಅವಕಾಶಗಳ ವರ್ಷ

-ಡಾ.ಉದಯ ಶಂಕರ ಪುರಾಣಿಕ

ಬದಲಾವಣೆ-ಅವಕಾಶಗಳ ವರ್ಷ
-ಡಾ.ಉದಯ ಶಂಕರ ಪುರಾಣಿಕ

-ಡಾ.ಉದಯ ಶಂಕರ ಪುರಾಣಿಕ ಕೋವಿಡ್-19ನಿಂದಾಗಿ ವಿಶ್ವಾದ್ಯಂತ ಉಂಟಾಗುತ್ತಿರುವ ಬದಲಾವಣೆಗಳ ಪರಿಣಾಮವನ್ನು ಗಮನಿಸಿದಾಗ, 2021 ಹೇಗಿರಬಹುದು ಎನ್ನುವ ಪ್ರಶ್ನೆ ಸಹಜ. ಕೋವಿಡ್-19 ಸೋಂಕು ತಗುಲದಂತೆ ಅಥವಾ ಸೋಂಕಿತರು ಗುಣವಾಗುವಂತೆ ಮಾಡುವ ಲಸಿಕೆಗಳು 2021ರಲ್ಲಿ ಲಭ್ಯವಾಗಬಹುದು ಎನ್ನುವ ನಿರೀಕ್ಷೆ ಇದೆ. ಆದರೆ ಇಂತಹ ಲಸಿಕೆಯನ್ನು ನೂರಾರು ಕೋಟಿ ಸಂಖ್ಯೆಯಲ್ಲಿ ಉತ್ಪಾದಿಸುವುದು, ಅಗತ್ಯ ತಾಪಮಾನದಲ್ಲಿ ಸಂಗ್ರಹಿಸಿಡುವುದು ಮತ್ತು ವಿವಿಧ ದೇಶಗಳಿಗೆ ವಿತರಿಸುವುದು ಹಾಗೂ ನೂರಾರು ಕೋಟಿ ಜನರಿಗೆ ನೀಡುವುದು-ಇದಕ್ಕೆ ಬೇಕಾಗುವ ಹಣ ಮತ್ತು ಸಮಯವನ್ನು ಪರಿಗಣಿಸಿದರೆ, 2021ರಲ್ಲಿ ಎಲ್ಲರಿಗೂ ಈ ಲಸಿಕೆ […]

ಆಧುನಿಕ ಸಂವಹನ ವಿಧಾನಗಳು

-ಡಾ.ವಿಷ್ಣು ಎಂ. ಶಿಂದೆ

ಆಧುನಿಕ ಸಂವಹನ ವಿಧಾನಗಳು
-ಡಾ.ವಿಷ್ಣು ಎಂ. ಶಿಂದೆ

-ಡಾ.ವಿಷ್ಣು ಎಂ. ಶಿಂದೆ ಸಾಂಪ್ರದಾಯಿಕ ಸಂವಹನದಲ್ಲಿ ಸಂದೇಶಕಾರ, ಸಂದೇಶ ಹಾಗೂ ಸ್ವೀಕರಿಸುವವರ ನಡುವೆ ಸಂವಹನ ಪ್ರಕ್ರಿಯೆ ನಡೆಯುತ್ತಿತ್ತು. ಇಂದು ಹಾಗಲ್ಲ, ಸಂವಹನದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಬಂದಿವೆ. ಸಂವಹನವು ಒಂದು ಕಲೆ; ಅಭ್ಯಾಸದಿಂದ ಬರುತ್ತದೆ, ಅದು ಕೇವಲ ಹೇಳುವಿಕೆಯಲ್ಲ, ಒಂದು ಅರ್ಥವಲ್ಲ. ಸಂವಹನವು ನಿರೂಪಿಸುವ, ಅರ್ಥೈಸುವ, ತಿಳಿಸುವ ಒಟ್ಟು ಪ್ರಕ್ರಿಯೆ. ನಮ್ಮ ಮೆದುಳು ಏಕಕಾಲದಲ್ಲಿ ಅನೇಕ ಮನೋಕ್ರಿಯೆಗಳನ್ನು ಸಂಘಟಿಸುತ್ತದೆ. ಸಂವಹನವೆನ್ನುವುದು ಮಾತನಾಡುವುದಲ್ಲ. ಇದು ಹೇಳುವ, ವಿಷಯ ಸಂಘಟಿಸುವ ಮತ್ತು ಎದುರಿಗಿರುವ ವ್ಯಕ್ತಿಗೆ ಆ ವಿಷಯವನ್ನು ಸಾಗಿಸುವ ಸಮಗ್ರ ಕ್ರಿಯೆಯಾಗಿದೆ. […]

1 2 3 6