ಕ್ಷೌರದ ಕನ್ನಡಿಯಲ್ಲಿ ಕಂಡ ಮುಖ್ಯಮಂತ್ರಿ ಮುಖವಾಡ!

ನಸುನಗುತ್ತಿದ್ದ ಮುಖ್ಯಮಂತ್ರಿಗಳ ಮುಖ ಒಂದು ಕ್ಷಣ ಗಂಭೀರವಾಯ್ತು. ಆದರೆ ಆ ಗಾಂಭೀರ್ಯ ಹೆಚ್ಚು ಹೊತ್ತು ಉಳಿಯಲಿಲ್ಲ. ಈ ಬಾರಿ ನಸುನಗೆ, ಕಿರುನಗೆಯಾಗಿ ಕ್ಷಣಾರ್ಧದಲ್ಲೇ ಅಟ್ಟಹಾಸವಾಗಿ ಬದಲಾಯ್ತು. ಕರಟಕ ದಮನಕರಿಬ್ಬರೂ ನಿಮ್ಹಾನ್ಸ್‍ಗೆ ಕರೆ ಮಾಡುವುದೋ, ಇಲ್ಲಾ ಜಯದೇವಕ್ಕೆ ಕರೆ ಮಾಡುವುದೋ ಎಂಬ ಗೊಂದಲದಲ್ಲಿ ಬಿದ್ದರು! -ಬಾಲಚಂದ್ರ ಬಿ.ಎನ್. ಮುಖ್ಯಮಂತ್ರಿಗಳ ಮೃದುವಾದ ಕೆನ್ನೆಗೆ ಸೇವಕ ದುಬಾರಿ ನೊರೆಯನ್ನು ಉಜ್ಜಿ ಮುಖ ಕ್ಷೌರ ಮಾಡುತ್ತಿದ್ದ. ಅವರ ಮುಖದುದ್ದಗಲಕ್ಕೂ ಕ್ಷೌರಿಕ ಹರಿತವಾದ ಕತ್ತಿ ಲೀಲಾಜಾಲವಾಗಿ ಹರಿದಾಡುತ್ತಿತ್ತು. ಸಿಎಂ ಸಾಹೇಬರು ಬಿಸಿ ನೀರಿನ ಹಿತವಾದ […]

ಸಿಡಿಯೂರಪ್ಪ ಸಾಧನೆ ಮೇಯಾವ್ರ್ ಖಾತೆಗೆ!

“ಸಿಡಿಯೂರಪ್ಪನವರ ಸರಕಾರ ಸಿ.ಡಿ.ಗಳಲ್ಲಿ ಮುಳುಗಿ ಏಳಾಕಹತ್ತೈತಿ. ಇನ್ನೂ ಎಷ್ಟು ಸಿ.ಡಿ.ಗಳು ಸಿಡಿತಾವೋ ಏನೋ ಅಂತ ಮಿಡಿ ಮಂತ್ರಿಗೋಳ ಜೀವ ಬಿಟ್ಟುಬಿಟ್ಟು ಹಿಡಿಯಾಕ್ಹತ್ತೈತಿ…’’ ಶಿಷ್ಯನ ಈ ಮಾತಿನಲ್ಲಿ ಮೇಯವ್ರ್ ಸಿದ್ಧಲಿಂಗಪ್ಪ ಹೊಸ ಬೆಳಕು ಕಂಡರು! –ಎಸ್. ಮೆಣಸಿನಕಾಯಿ “ಸಿದ್ಧಲಿಂಗಪ್ಪನವರಿಗೆ ನಮಸ್ಕಾರ…” ಎಣ್ಣಾಳಿ ಎಲ್ಲಾಚಾರ್ಯನ ಬೆಳಗಿನ ವಿಶ್ ಕೇಳಿ ಸಾರಾಯಿ ವಾಸನೆ ಬಡಿದಂತಾಯ್ತು ಮೇಯರ್ ಸಿದ್ಧಲಿಂಗಪ್ಪನವರಿಗೆ. “ಬಾರಲೇ ಎಲ್ಲಾಚಾರ್ಯ… ಮತ್ತ ಯಾವ ಗಟಾರದಾಗ ದೋಣಿ ಓಡಿಸಾಕ ಹೋಗಿದ್ದಿ?” ಸಿದ್ಧಲಿಂಗಪ್ಪನವರ ಪ್ರಶ್ನೆಗೆ ತಲೆ ಕೆರೆದುಕೊಳ್ಳುತ್ತ, “ಸಾಹೇಬರ… ಈ ಸಲ ಚೊಲೊ ದೋಣಿನ […]

ಮೀಸಲಾತಿ ಮತ್ತು ಮುಖ್ಯಮಂತ್ರಿ

-ಬಾಲಚಂದ್ರ ಬಿ.ಎನ್.

ಮೀಸಲಾತಿ ಮತ್ತು ಮುಖ್ಯಮಂತ್ರಿ
-ಬಾಲಚಂದ್ರ ಬಿ.ಎನ್.

-ಬಾಲಚಂದ್ರ ಬಿ.ಎನ್. ಮೀಸಲಾತಿಗಾಗಿ ಹೋರಾಡುವವರ ಹಿಂಡಿನ ನಡುವೆ ತೂರಿಕೊಂಡು ಬಂದ ತಂಡ ಮುಖ್ಯಮಂತ್ರಿಗೆ ವಿಚಿತ್ರ ಮನವಿ ಸಲ್ಲಿಸಿತು. ಆ ಮನವಿ ಕೇಳಿದ ಮುಖ್ಯಮಂತ್ರಿ ಮತ್ತು ಅವರ ಸುಪುತ್ರ ಆಘಾತಕ್ಕೊಳಗಾದರು! ಮುಖ್ಯಮಂತ್ರಿಗಳು ತೂಕಡಿಸುತ್ತಾ ಕುಳಿತಿರುವಾಗ ಇದ್ದಕ್ಕಿದ್ದಂತೆಯೇ ಸುಪುತ್ರ ಬಂದು ಎಬ್ಬಿಸಿದ. ಕಣ್ಣೊರೆಸಿಕೊಂಡು ಎದ್ದ ಮುಖ್ಯಮಂತ್ರಿಗಳು ಕಣ್ಣ ಮುಂದಿದ್ದ ಫೈಲುಗಳ ರಾಶಿಯತ್ತೊಮ್ಮೆ ದುರಾಶಾಪೂರಿತ ದೃಷ್ಟಿಯನ್ನು ಹಾಯಿಸಿ, ‘ಯಾವ ಏರಿಯಾ ಮಗನೇ?’ ಎಂದು ಪ್ರಶ್ನಿಸಿದರು. ‘ಏರಿಯಾ? ಅಪ್ಪಾ ಇನ್ನೂ ಎಲ್ಲಿದ್ದೀರಾ?’ ಎಂದು ಮಗ ಕರುಣಾಜನಕವಾಗಿ ಪ್ರಶ್ನಿಸಿದ. ಇತ್ತೀಚಿಗೆ ಅರಳುಮರುಳಾಗಿ ವರ್ತಿಸುತ್ತಿದ್ದ ಮುಖ್ಯಮಂತ್ರಿಗಳೊಮ್ಮೆ […]

ಬುಸ್ಬುಸ್ ಗೌಡರ ಪಂಚಾಯಿತಿ ಪುರಾಣ

-ಎಸ್. ಮೆಣಸಿನಕಾಯಿ

-ಎಸ್. ಮೆಣಸಿನಕಾಯಿ ಕೊನೆಯ ಮೇಜಿನಲ್ಲಿ `ಸಭೆ’ ನಡೆಸುತ್ತಿದ್ದ ಸಿಟ್ರಾಮ, ಡಿಕ್ಕೇಶಿ, ಪರಮೇಶಿ, ಕುಮಾರರಾಮ, ಉರಳುಹೊಳಿ ಇದೇ ಅವಕಾಶ ಬಳಸಿಕೊಂಡು, “ಏನಪಾ ಮಂಜಣ್ಣ, ನಿನ್ನ ನಾಟಕಕ್ಕ ಡೈರೆಕ್ಟರ್ ಯಾರೋ?” ಅಂತ ಕೇಳಿ, ಕಿಡಿ ಹೊತ್ತಿಸಿದರು! “ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ… ಪ್ರಖ್ಯಾತ ನಟ ಸಿಡಿಯೂರಪ್ಪ ನಾಯಕನ ಪಾತ್ರದಲ್ಲಿ ಅಭಿನಯಿಸಿರುವ ಹೊಚ್ಚ ಹೊಸ ನಾಟಕ `ಮುನಿಗಳ ಕಾಟ’ ಅರ್ಥಾತ್ `ಮಾಡಿದ್ದುಣ್ಣೋ ಮಹಾರಾಯ’, ಇಂದು ರಾತ್ರಿ 10 ಗಂಟೆಗೆ ನಾಟಕ ಪ್ರಾರಂಭ…” ಕೈಯಲ್ಲೊಂದು ಸಣ್ಣ ಲೌಡ್‌ಸ್ಪೀಕರ್ ಹಿಡಿದುಕೊಂಡು ಕೂಗುತ್ತ ಬಂದ ಮಂಜಣ್ಣ. […]

ಜ್ಯೋತಿಷಿಗಳು ಬಿಚ್ಚಿಟ್ಟ ರಹಸ್ಯಗಳು ಬೆಚ್ಚಿಬಿದ್ದ ಟಿವಿ ವೀಕ್ಷಕರು!

-ಬಾಲಚಂದ್ರ ಬಿ.ಎನ್.

ಜ್ಯೋತಿಷಿಗಳು ಬಿಚ್ಚಿಟ್ಟ ರಹಸ್ಯಗಳು ಬೆಚ್ಚಿಬಿದ್ದ ಟಿವಿ ವೀಕ್ಷಕರು!
-ಬಾಲಚಂದ್ರ ಬಿ.ಎನ್.

-ಬಾಲಚಂದ್ರ ಬಿ.ಎನ್. ನಾಡಿನ ಜನರ ನಾಡಿಮಿಡಿತ, ಹೃದಯಬಡಿತ ಹಾಗೂ ವೀಕ್ಷಕರ ಮನೋಗತವನ್ನು ಇಡೀಯಾಗಿ ಅರಿತ ವಾಹಿನಿಯೊಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಲ್ಲಿ ಭಾಗವಹಿಸಿದ ಮೂವರು ಜ್ಯೋತಿಷಿಗಳು ಬಯಲು ಮಾಡಿದ ರಹಸ್ಯಗಳನ್ನು ಕೇಳಿದರೆ ನೀವೂ ಬೆಚ್ಚಿಬೀಳುತ್ತೀರಿ! ನಮಸ್ಕಾರ ಪ್ರಿಯ ವೀಕ್ಷಕರೇ, ಕಸ-ವಿಷ ವಿಶೇಷ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಸ್ವಾಗತ. ಕನ್ನಡಿಗರ ಸಾಕ್ಷಿ ಪ್ರಜ್ಞೆಯಾಗಿ, ದೇಶದ ಆಗುಹೋಗುಗಳನ್ನು ನಿಮ್ಮೆದುರಿಗಿಡುವ ಮಹತ್ತರ ಕರ್ತವ್ಯ ಹೊತ್ತು, ಅತ್ಯಂತ ಜವಾಬ್ದಾರಿಯುತವಾದ ನಮ್ಮ ಚಾನಲ್ ಈ ಕಾರ್ಯಕ್ರಮವನ್ನು ಮಾಡ್ತಾ ಇದೆ. ಮೂರು ಜನ ಜ್ಯೋತಿಷಿಗಳು ನಮ್ಮ ದೇಶದ, […]

ಮ್ಯಾನೇಜರ್ ನೇಣೇಸ್ಕುನ್ನಾಡಪೋ!

-ಎಸ್.ಎನ್.ಲಕ್ಷ್ಮೀನಾರಾಯಣ

ಮ್ಯಾನೇಜರ್ ನೇಣೇಸ್ಕುನ್ನಾಡಪೋ!
-ಎಸ್.ಎನ್.ಲಕ್ಷ್ಮೀನಾರಾಯಣ

-ಎಸ್.ಎನ್.ಲಕ್ಷ್ಮೀನಾರಾಯಣ ಚಾವಣಿಯಲ್ಲಿ ಶೇಂಗಾ ಒಣಹಾಕುತ್ತಿದ್ದ ಕೂಲಿ ಆಳುಗಳಲ್ಲಿ ಒಬ್ಬ ನನ್ನ ಅವತಾರವನ್ನು ನೋಡಿದವನೇ, ಗಾಬರಿಯಿಂದ ”ಬ್ಯಾಂಕ್ ಮ್ಯಾನೇಜರ್ ನೇಣೇಸ್ಕುನ್ನಾಡಪೋ” ಅಂಥ ಅರಚಿಕೊಂಡಿದ್ದಾನೆ. ಉಳಿದವರೂ ನೋಡಿ, ಗಾಬರಿಯಾಗಿ ಶ್ಯಾನುಭೋಗರಿಗೆ ಹೇಳಿದ್ದಾರೆ. ಎಲ್ಲಾ ಧಡಧಡ ಓಡ್ಕಂಡು ನಮ್ಮನೆಯತ್ತ ಧಾವಿಸಿದ್ದಾರೆ. ಮುಂದೆ…?! “ಪ್ರಭು, ನಿನ್ ಕಾಲರ್ ಸ್ವಲ್ಪ ದಿನ ಕೊಟ್ಟಿರು. ಆಮೇಲ್ ವಾಪಸ್ ಕೊಡ್ತೀನಿ” ಅಂದ ನನ್ ಕಸಿನ್ನು. ಬೆಳಿಗ್ಗೆ ಎಂಟು ಗಂಟೆಗೇ ಮನೇ ಹತ್ರ ಬಂದಿದ್ದ. ಆರ್ವಿಸಿಇ ಬ್ರಾಂಚ್ನಲ್ಲಿ ಕೆಲಸ ಮಾಡುತ್ತಿದ್ದ ನಾನಾಗ, ನವರಂಗ್ ಥಿಯೇಟರ್ ಸರ್ಕಲ್ ಹತ್ರ ಇದ್ದ […]

ಓವರ್ ಹೆಡ್ ಟ್ಯಾಂಕು ಓವರ್ ವೇಟ್ ಓನರು!

-ಎಚ್.ಗೋಪಾಲಕೃಷ್ಣ

ಓವರ್ ಹೆಡ್ ಟ್ಯಾಂಕು ಓವರ್ ವೇಟ್ ಓನರು!
-ಎಚ್.ಗೋಪಾಲಕೃಷ್ಣ

-ಎಚ್.ಗೋಪಾಲಕೃಷ್ಣ ಸರ್ವತಂತ್ರ ಸ್ವಾತಂತ್ರ್ಯ ಅನುಭವಿಸಬೇಕು ಅನ್ನುವ ಆಸೆ ಯಾರುಯಾರಿಗೆ ಇದೆಯೋ ಅವರಿಗೆ ನನ್ನ ಪುಕ್ಕಟೆ ಸಲಹೆ ಅಂದರೆ ಓವರ್ ಹೆಡ್ ಟ್ಯಾಂಕು ನೀವೇ ಸ್ವತಃ ಕ್ಲೀನ್ ಮಾಡಿ! ಓವರ್ ಹೆಡ್ ಟ್ಯಾಂಕಿನಲ್ಲಿ ಎಷ್ಟು ನೀರಿದೆ ನೋಡಿ, ನಾಳೆ ನೀರು ಬರೋದು ಅಂತ ಆದೇಶ ಬಂತು. ಆದೇಶ ಯಾರಿಂದ ಬಂತು ಎಂದು ವಿಚಾರಿಸದೇ ಓವರ್ ಹೆಡ್ ಟ್ಯಾಂಕು ತಲಾಷಿಸಲು ಉದ್ಯುಕ್ತನಾದೆ. ಅದಕ್ಕೆ ಮೊದಲು ನಿಮಗೆ ನಮ್ಮ ಮನೆಯ ಟೋಪೋಗ್ರಾಫಿ ವಿವರಿಸಬೇಕು. ಮೊದಲು ನಲವತ್ತು ವರ್ಷ ಹಿಂದೆ ಮನೆಕಟ್ಟಿದಾಗ ಓವರ್ […]

ದೇವಲೋಕದಲ್ಲಿ ಗುಂಡಣ್ಣ- ಮಂಗಮ್ಮ!

- ಎಲ್.ಚಿನ್ನಪ್ಪ

ದೇವಲೋಕದಲ್ಲಿ ಗುಂಡಣ್ಣ- ಮಂಗಮ್ಮ!
- ಎಲ್.ಚಿನ್ನಪ್ಪ

ದೇವರು ಅಲಾಟ್ ಮಾಡಿದ್ದ ನರಕದಿಂದ ಗಂಡ ಗುಂಡಣ್ಣನನ್ನು ಬಿಡಿಸಿಕೊಂಡು ಸ್ವರ್ಗಕ್ಕೆ ಕರೆದೊಯ್ದಳು ಮಂಗಮ್ಮ. ಸತ್ತರೂ ಹೆಂಡತಿ ಗಂಗಮ್ಮನಿಂದ ಬಿಡುಗಡೆ ಸಿಗದ ಬೇಸರದಲ್ಲಿ ಹಿಂಬಾಲಿಸಿದ ಗುಂಡಣ್ಣ! – ಎಲ್.ಚಿನ್ನಪ್ಪ ಮೇಲಣ ಸ್ವರ್ಗಲೋಕವು ಸಕಲ ವೈಭೋಗ ಹಾಗೂ ವಿಭಿನ್ನತೆಯಿಂದ ಕೂಡಿತ್ತು. ಬೃಹತ್ ದೈವ ಭವನದಲ್ಲಿ ರತ್ನಖಚಿತ ಸಿಂಹಾಸನದಲ್ಲಿ ದೇವರು ಆಸೀನರಾಗಿದ್ದರು. ಅವರ ಮುಂದೆ ಮಾನವ ಪ್ರೇತಾತ್ಮಗಳ ಉದ್ದನೆಯ ಸಾಲು. ಸರತಿ ಸಾಲಿನಲ್ಲಿ ಸಾಗಿ ಬರುತ್ತಿದ್ದ ಪ್ರತಿಯೊಬ್ಬ ಜೀವಿಯ ನೊಸಲನ್ನು ಮುಟ್ಟಿ ನೋಡುತ್ತಿದ್ದ ದೇವರು, ಪಾಪ-ಪುಣ್ಯಗಳ ಲೆಕ್ಕವನ್ನು ಅಲ್ಲೇ ತಾಳೆ ಮಾಡಿ […]

ಅವನೌವ್ನ ಏನ ಸಿಂಗಾಪುರಾ…!

- ಚೂಟಿ ಚಿದಾನಂದ

ಅವನೌವ್ನ ಏನ ಸಿಂಗಾಪುರಾ…!
- ಚೂಟಿ ಚಿದಾನಂದ

‘ಎಪ್ಪಾ ಲೇ, ಎಪ್ಪಾ ಲೇ, ಎಲ್ಲೆದಿಯೋ…?’ ಮಗನ ಕೂಗಿಗೆ ಅಪ್ಪನ ಉತ್ತರ, ‘ಲೇ ಮಂಗಸೂಳೀ ಮಗನಾ, ಡ್ಯಾಡೀ ಅನ್ನಲೇ ಭೋಸುಡ್ಕೆ..!’  – ಚೂಟಿ ಚಿದಾನಂದ   ನಮ್ಮ ಸಂಗ್ಯಾ ಹಳ್ಳಿ ಊರಾಗ ರೈತನ ಮಗ. ಮನೀ ತುಂಬ ಜನ್ರಿಗಿಂತ ದನಗಳು ತುಂಬಿದ್ವು. ಸಂಗ್ಯಾ ಸಣ್ಣವನಿದ್ದಾಗಿಂದ ಸಗಣ್ಯಾಗ ಬಿದ್ದು ಒದ್ದಾಡಿ ಬೆಳದಾವ. ಅವ್ರವ್ವ ನನ ಮಗ ಸಾಲಿ ಕಲೀಲಿ ಅಂತಾ ಸಾಲೀಗೆ ಕಳ್ಸತಿದ್ಲು. ಅವ್ರಪ್ಪ ಬ್ಯಾಡಲೆ ಮಗನಾ ಹೊಲಕ್ಕ ನಡೀ, ಕುಂಟೀ ಹೊಡಿ ಅಂತಿದ್ದ. ಅವ್ರವ್ವ ಹಟಮಾರಿ ಅಂದ್ರ […]

ಅಡಿಗ ಮತ್ತು ಅನಂತಮೂರ್ತಿ ಹಬ್ಬಿಸಿದ ಸಾಂಸ್ಕೃತಿಕ ಮಂಪರು!

- ವಸಂತ ಬನ್ನಾಡಿ

ಅಡಿಗ ಮತ್ತು ಅನಂತಮೂರ್ತಿ ಹಬ್ಬಿಸಿದ ಸಾಂಸ್ಕೃತಿಕ ಮಂಪರು!
- ವಸಂತ ಬನ್ನಾಡಿ

ಸನಾತನಿಯಾದರೂ ಎಂ.ಗೋಪಾಲಕೃಷ್ಣ ಅಡಿಗರನ್ನು ನವ್ಯದ ನೇತಾರ ಎಂದು ಪ್ರತಿಷ್ಠಾಪಿಸುವುದರಲ್ಲಿ ವಿಮರ್ಶೆ ಹೆಸರಿನ ಒಂದು ದೊಡ್ಡ ಕಾರ್ಯಾಚರಣೆಯೇ ನಡೆಯಿತು. ಉದ್ದಕ್ಕೂ ಅಡಿಗರ ಜೊತೆ ನಿಂತು ಅವರ ಪೌರೋಹಿತ್ಯ ವಹಿಸಿದವರು ಅವರ ಪರಮ ಮಿತ್ರ ಯು.ಆರ್.ಅನಂತಮೂರ್ತಿ. ಇತ್ತೀಚೆಗೆ, ಅಂದರೆ ಕಳೆದ ಎರಡು ವರ್ಷಗಳ ಕಾಲ, ಕವಿ ಎಂ.ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದಿ ಆಚರಣೆ ನಡೆಯಿತು. ಈ ಹಿನ್ನೆಲೆಯಲ್ಲಿ ಅನೇಕರು ಅವರ ಕಾವ್ಯದ ಬಗ್ಗೆ ಮಾತನಾಡಿದರು. ಹೀಗೆ ಕನ್ನಡ ಕವಿಯೊಬ್ಬರಿಗೆ ನೂರು ವರ್ಷ ತುಂಬಿದ್ದನ್ನು ನೆನಸಿಕೊಂಡದ್ದು ಸಹಜ ವಿದ್ಯಮಾನವೇ ಆಗಿತ್ತು. ಹಾಗೆ ಅಡಿಗರ […]

ಎಮ್ಮೆಯ ನಾಡಿನ ಕೆಲವು (ಅಧಿಕ) ಪ್ರಸಂಗಗಳು

-ಪ್ರೊ.ಎಂ.ಕೃಷ್ಣೇಗೌಡ, ಮೈಸೂರು

ಎಮ್ಮೆಯ ನಾಡಿನ  ಕೆಲವು (ಅಧಿಕ) ಪ್ರಸಂಗಗಳು
-ಪ್ರೊ.ಎಂ.ಕೃಷ್ಣೇಗೌಡ, ಮೈಸೂರು

‘ಎಮ್ಮೆಗಳ ನಾಡು’ ಅಂತ ಕರೆಸಿಕೊಂಡ ನಾಡಿನಲ್ಲಿ ಎಮ್ಮೆಗಳ ಸಂಖ್ಯೆ ಕಡಿಮೆಯಾಗಿದ್ದನ್ನು ಮನಗಂಡ  ನಮ್ಮ ಮೈಸೂರಿನ ದೊರೆಗಳಾಗಿದ್ದ ಶ್ರೀ ಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸನ್ ಒಂದು ಸಾವಿರದ ಒಂಭೈನೂರ ಹದಿನೈದನೇ ಇಸವಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡಿದರು.  ಎತ್ತಣ ಮಾಮರ ಎತ್ತಣ ಕೋಗಿಲೆ? ಅಂತ ಕೇಳಬೇಡಿ! ಆದಾಗಿ ನಮ್ಮ ಮೈಸೂರು ಪ್ರಾಂತವನ್ನು ಹಿಂದಾನೊಂದು ಕಾಲದಲ್ಲಿ ‘ಮಹಿಷ ಮಂಡಲ’ ಅಂತ ಕರೆಯುತ್ತಿದ್ದರಂತೆ. ಮಹಿಷ ಮಂಡಲ ಅಂದರೆ ‘ಆಹಾ! ಎಂಥ ಚಂದವಾದ ಹೆಸರು!’ ಅಂತ ನಿಮಗನ್ನಿಸಬಹುದು. ಎಷ್ಟಾದರೂ ಅದು […]

ಭೂಲೋಕದಿಂದ ಗುಳೆ ಹೊರಟ ದೇವತೆಗಳು!

-ಬಾಲಚಂದ್ರ ಬಿ.ಎನ್.

ಭೂಲೋಕದಿಂದ ಗುಳೆ ಹೊರಟ ದೇವತೆಗಳು!
-ಬಾಲಚಂದ್ರ ಬಿ.ಎನ್.

ದೀರ್ಘ ಕಾಲದ ಬಳಿಕ ಮೌನ ಮುರಿದ ಭಗವಂತನು ಬಾಯ್ಬಿಟ್ಟು… ದೇವಾನುದೇವತೆಗಳ ಜೊತೆಗೆ ಗೊಳೋ ಎಂದು ಅಳಲು ಶುರು ಮಾಡಿದ! ಹಾಗಾದರೆ ದೇವಲೋಕದಲ್ಲಿ ಆಗಿದ್ದಾದರೂ ಏನು? ಜಗನ್ನಿಯಾಮಕನು ಒಮ್ಮೆ ಸ್ವರ್ಗದಲ್ಲಿ ಮೀಟಿಂಗ್ ಏರ್ಪಡಿಸಿದ. ಎಲ್ಲ ಅಲ್ಪಸಂಖ್ಯಾತ ದೇವರು, ಗ್ರಾಮೀಣ ದೇವರು ಹಾಗೂ ಬುಡಕಟ್ಟು ದೇವರುಗಳಿಗೂ ಕಡ್ಡಾಯ ಹಾಜರಿರಬೇಕೆಂದು ಬುಲಾವ್ ಕಳಿಸಲಾಗಿತ್ತು. ಇಡೀ ಸ್ವರ್ಗದಲ್ಲಿ ಪಾರಿಜಾತದ ಪರಿಮಳವನ್ನೂ ಮೀರಿಸುತ್ತಿದ್ದ ಸ್ಯಾನಿಟೈಜರ್‌ನ ಆಲ್ಕೋಹಾಲ್ ವಾಸನೆಯಿಂದಾಗಿ ಈ ಸಭೆ ಕೊರೊನಾ ಕುರಿತಾದ್ದು ಎಂದು ದೇವತೆಗಳು ಸುಲಭವಾಗಿ ಊಹಿಸಬಹುದಾಗಿತ್ತು. ಕಾಫೀ, ಟೀ, ಲಿಂಬೂಸೋಡ, ಅಮೃತಗಳ […]

ಪಕ್ಷಾಂತರಿ-ಲಕ್ಷಾಂತರಿ

ಎಂ.ಎಸ್.ನರಸಿಂಹಮೂರ್ತಿ

ಪಕ್ಷಾಂತರಿ-ಲಕ್ಷಾಂತರಿ
ಎಂ.ಎಸ್.ನರಸಿಂಹಮೂರ್ತಿ

ನಮ್ಮ ಟಿ.ಈ.ನುಂಗಣ್ಣನವರ್ ಎಂ.ಎಲ್.ಎ. ಎಲೆಕ್ಷನ್‌ಗೆ ಸುಮ್ನೆ ನಿಂತ್ರು. ಅವರ ಪೂರ್ಣ ಹೆಸರು ತಿನ್ನಪ್ಪ ಈಟಪ್ಪ ನುಂಗಣ್ಣನವರ್! ವಿಧಾನಸೌಧಕ್ಕೆ ಹೇಳಿ ಮಾಡಿಸಿದ ವ್ಯಕ್ತಿತ್ವ! ಅದೃಷ್ಟ ಅಂಬೋದು ಯಾವ ಬಾಗಿಲಿಂದ ಹೆಂಗ್ ಬರುತ್ತೋ ಗೊತ್ತಾಗೋದಿಲ್ಲ. ಅದೃಷ್ಟಶಾಲಿಯ ಹುಂಜವೂ ಮೊಟ್ಟೆ ಇಡುತ್ತಂತೆ..! ಅದೃಷ್ಟ ಹಣೆಯ ಗೆರೆಗಳ ಮೇಲಿದೆ. ಕುದುರೆಗಾಡಿಯಲ್ಲಿ ನಾವು ಕೂತಿರುವುದು. ಲಗಾಮು ದೇವರ ಕೈಲಿ. ಯಾವ ಹುಡುಗಿ ಯಾರ ಮನೇಲಿ ಸೆಟಲ್ ಆಗ್ತಾಳೋ ಗೊತ್ತಿಲ್ಲ. ಯಾವ ರಾಜಕಾರಣಿ ಯಾವ ಕುರ್ಚಿಯಲ್ಲಿ ಕೂರುವನೋ ತಿಳಿಯದು. ಹಾಗಂತ ಜನ ಮಾತಾಡ್ತಾರೆ. ಹಿಂದಿನ ಕಾಲದಲ್ಲಿ […]

ಎಲ್ಲಿಂದಲೋ ಬಂದವರು!

ಬಾಲಚಂದ್ರ ಬಿ.ಎನ್.

ಎಲ್ಲಿಂದಲೋ ಬಂದವರು!
ಬಾಲಚಂದ್ರ ಬಿ.ಎನ್.

‘ಎಲ್ಲಿಂದಲೋ ಬಂದವರು’ ತಮಟೆ ಬಾರಿಸುತ್ತಾ, ‘ಎಲ್ಲಿದ್ರೀ ಇಲ್ಲೀ ತಂಕಾ? ಎಲ್ಲಿಂದ ಬಂದ್ರಣ್ಣಾ’ ಎಂದು ಹಾಡತೊಡಗಿದರು. ಮತ್ತೊಬ್ಬ ಪ್ರಶ್ನಿಸಿದವರ ಮುಖಕಮಲ ವರ್ಣವನ್ನು ವೀಕ್ಷಿಸುತ್ತಾ, ‘ಕೆಂಪಾದವೋ ಎಲ್ಲಾ ಕೆಂಪಾದವೋ…’ ಎಂದು ಕೆಂಬಾವುಟ ಹಾರಿಸಿದ! ಬಾಲಚಂದ್ರ ಬಿ.ಎನ್. ‘ನೀನು ಎಲ್ಲಿಂದ ಬಂದೆ?’ ಥಟ್ಟನೆ ತೂರಿ ಬಂದ ಪ್ರಶ್ನೆಗೆ ರಸ್ತೆ ಬದಿಯಲ್ಲಿ ಮಲಗಿ ಉತ್ತಮ ದಿನಗಳ ಕನಸು ಕಾಣುತ್ತಿದ್ದ ಜನ ಬೆಚ್ಚಿ ಬಿದ್ದರು. ಎದ್ದು ಕಣ್ಣೊರೆಸಿಕೊಂಡು ನೋಡಿದಾಗ ಒಬ್ಬ ದಾಡೀವಾಲ ಮತ್ತೊಬ್ಬ ದಡೂತಿವಾಲ ಕೈಯಲ್ಲಿ ರಾಜದಂಡವನ್ನು ಮತ್ತು ಪಟ್ಟಾಭಿಷಿಕ್ತ ಖಡ್ಗವನ್ನು ಹಿಡಿದು ನಿಂತಿದ್ದರು. […]

ಪಾಪ… ಸಂಪಾದಕರ ಪಾಡು!

-ಬಾಲಚಂದ್ರ ಬಿ.ಎನ್.

ಪಾಪ… ಸಂಪಾದಕರ ಪಾಡು!
-ಬಾಲಚಂದ್ರ ಬಿ.ಎನ್.

ಪತ್ರಿಕೋದ್ಯಮದ ಗೊತ್ತು ಗುರಿಯಿಲ್ಲದೇ, ನೆತ್ತಿಯ ಮೇಲೆ ಕಣ್ಣಿಟ್ಟುಕೊಂಡು ಕಾಲಿಡುವ ಉಡಾಳರನ್ನು ತಿದ್ದುತ್ತಾ… ಸೋಮಾರಿ ಲೇಖಕರನ್ನೂ ಪ್ರೋತ್ಸಾಹಿಸುತ್ತಾ, ಮೂರ್ಖರನ್ನು ಸಹಿಸಿಕೊಳ್ಳುತ್ತಾ, ನಿಂದೆಪ್ರಶಂಸೆಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತಾ ಪ್ರತೀ ಪತ್ರಿಕಾ ಬಳಗದಲ್ಲೂ ಇರಬಹುದಾದ ಇಂಥಾ ಕರುಣಾಜನಕ ಸಂಪಾದಕರಿಗೆ ಶರಣು. ಸಂಪಾದಕರ ಸಂತತಿ ಸಾವಿರವಾಗಲಿ; ಆದರೆ ಈ ರೀತಿಯ ಉಪಸಂಪಾದಕರ, ಅಂಕಣಕಾರರ ಸಂತತಿ ಹೆಚ್ಚದಿರಲಿ! ಬಾಲು… ಬಾಲೂ… ಏ… ಬಾ…ಲೂ ಏನ್ಸಾರ್? ಟೀವಿ ನೋಡಿದ್ಯಾ? ಸಾರ್, ಎರಡು ವರ್ಷವಾಯ್ತು! ನೀನೆಂಥಾ ಪತ್ರಕರ್ತನೋ ಮಾರಾಯಾ? ಕಣ್ಮುಂದೆ 24 ಗಂಟೆ ನಾಲ್ಕು ಟೀವಿ ಓಡ್ತಾ ಇದ್ರೂ […]

ಮುನಿಸ್ವಾಮಿಯ ದಶಾವತಾರಗಳು

-ಬಾಲಚಂದ್ರ ಬಿ.ಎನ್.

ಮುನಿಸ್ವಾಮಿಯ ದಶಾವತಾರಗಳು
-ಬಾಲಚಂದ್ರ ಬಿ.ಎನ್.

‘ಸತ್ಯ ಹರಿಶ್ಚಂದ್ರನಂತೆ ತನ್ನನ್ನು ತಾನೇ ಮಾರಿಕೊಂಡ ಶಾಸಕ, ಅವನ್ನ ಎಳಕೊಂಡು ಸೇರಿಸಿಕೊಂಡ ಪಕ್ಷ, ನಿಯತ್ತು ಸತ್ತಿರೋ ವಿರೋಧ ಪಕ್ಷ -ಇವರಲ್ಲಿ ಯಾರು ಅತೀ ಭ್ರಷ್ಟರು?’ ಮುನಿಸ್ವಾಮಿ ಯಕ್ಷಪ್ರಶ್ನೆ ಎದುರಿಗಿಟ್ಟ. ಶಿಷ್ಯ ತಲೆಕೆರೆದುಕೊಳ್ಳುತ್ತಾ ‘ಮತದಾರ’ ಅಲ್ವೇನಣ್ಣಾ ಎಂದ. ಭಾಗ 1 ಮುನಿಸ್ವಾಮಿ ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚಿನ ಮುಂದೆ ನಿಂಬೆಹಣ್ಣು, ಹಾರ, ತುರಾಯಿ, ಮೈಸೂರು ಪೇಟ, ಒಂದು ಬೆಳ್ಳಿ ರೇಖಿನ ಖಡ್ಗ, ಒಂದು ಅಲ್ಯೂಮಿನಿಯಂ ಗದೆ ಹಿಡಿದುಕೊಂಡು ನಿಂತಿದ್ದ. ಶಿಷ್ಯೋತ್ತಮ ಬಂದು, ‘ಅಣ್ಣೋ! ಯಾರಿಗಾಗಿ ಇಲ್ಲಿ ಕಾಯ್ಕೊಂಡು ನಿಂತೆ?’ ಅಂತ […]

ಸ್ವರ್ಗವಾಸಿ ಸಾಹಿತಿಗಳ ರಾಜ್ಯೋತ್ಸವ ಸಿದ್ಧತೆ!

ಬಾಲಚಂದ್ರ ಬಿ.ಎನ್.

ಇಂದ್ರನು ಆತ್ಮಹತ್ಯೆ ಮಾಡಿಕೊಂಡು ಸಾಯಲಾರದ ತನ್ನ ಅಮರತ್ವಕ್ಕೆ ಶಾಪ ಹಾಕುತ್ತಾ ಗೊಳೋ ಎಂದು ಅಳತೊಡಗಿದ. ಕನ್ನಡದ ಹಿತರಕ್ಷಣೆಗಾಗಿ ನೀವೆಲ್ಲಾ ಮತ್ತೆ ಕರುನಾಡಿನಲ್ಲಿ ಜನ್ಮತಳೆಯಬೇಕು ಎಂದು ಬೇಡಿಕೊಂಡ. ಸ್ವರ್ಗವಾಸಿ ಸಾಹಿತಿಗಳೆಲ್ಲರೂ ತುಂಬು ಸಂತೋಷದಿಂದ ಸಮ್ಮತಿ ಸೂಚಿಸಿದರು! ಸನ್ ಎರಡ್ಸಾವಿರದ ಹತ್ತೊಂಬತ್ತನೇ ಇಸ್ವಿ ಅಕ್ಟೋಬರ್ ವೀಕೆಂಡಿನಲ್ಲಿ ಸಹಸ್ರಾಕ್ಷನಾದ ಇಂದ್ರನು ಸ್ವರ್ಗದಲ್ಲೊಂದು ಮೀಟಿಂಗ್ ಕರೆದ. ಈ ಮೀಟಿಂಗ್ ವಿಶೇಷ ಏನಪಾ ಅಂದ್ರೆ ಇದು ಕನ್ನಡದ ಸಾಹಿತಿಗಳಿಗೆ, ಕರುನಾಡಿಗಾಗಿ ಜೀವತೇಯ್ದ ಹೃದಯವಂತರಿಗೆ ಮಾತ್ರ ಮೀಸಲಾಗಿತ್ತು. ಇದನ್ನು ನವೆಂಬರ್ ಒಂದನೇ ತಾರೀಖು ಕನ್ನಡ ರಾಜ್ಯೋತ್ಸವದ […]