ಬಳ್ಳಾರಿ ಜಿಲ್ಲೆ ಹೊಸಪೇಟೆಯ ಉಷಾ ಪಾಡಿ ಕನ್ನಡ ಮಾಧ್ಯಮದಲ್ಲಿ ಓದಿ ಐಎಎಸ್ ಮಾಡಿದ್ದಾರೆ. ಈಗ ಕೇಂದ್ರ ವಿಮಾನಯಾನ ಇಲಾಖೆಯ ಜಂಟಿಕಾರ್ಯದರ್ಶಿ. ಜನಸಾಮಾನ್ಯರೂ ವಿಮಾನದಲ್ಲಿ ಸಂಚರಿಸುವಂತಾಗಬೇಕೆಂದು ಇವರು ರೂಪಿಸಿದ `ಉಡಾನ್’ ಯೋಜನೆ ಕೇಂದ್ರ ಸರಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ತಾಂತ್ರಿಕ ವಿದ್ಯಾರ್ಥಿಗಳಿಗೆ ನಾಗರಿಕ ಸೇವೆಯಲ್ಲಿ ಅವಕಾಶಗಳು’ ಕುರಿತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉಷಾ ಪಾಡಿ ಅವರು ಆಡಿದ ಮಾತುಗಳು ಸ್ಪರ್ಧಾರ್ಥಿಗಳಿಗೆ ದಾರಿದೀಪದಂತಿವೆ. ಐಎಎಸ್ ಪರೀಕ್ಷೆಗೆ ಯಾವ ವಿಷಯ ಆಯ್ದುಕೊಳ್ಳಬೇಕು? […]
ಸದ್ಯಕ್ಕೆ ಆರ್ಬಿಐ ಕೇಂದ್ರ ಸರ್ಕಾರಕ್ಕೆ ಮಣಿದಂತೆ ಕಾಣುತ್ತಿದೆಯಾದರೂ ಮುಂದಿನ ದಿನಗಳಲ್ಲಿ ಆರ್ಬಿಐ ತೆಗೆದುಕೊಳ್ಳುವ ನಿರ್ಧಾರಗಳಿಂದ ಈ ಸಮಸ್ಯೆ ಬಗೆಹರಿದಿದೆಯೋ ಇಲ್ಲವೋ ಎಂದು ತಿಳಿಯಬೇಕಿದೆ. ಕೇಂದ್ರ ಸರ್ಕಾರಕ್ಕೆ ಎಲ್ಲ ಸ್ವಾಯತ್ತ ಸಂಸ್ಥೆಗಳೊಡನೆ ಒಂದಲ್ಲಾ ಒಂದು ತೊಂದರೆಯಿರುವಂತಿದೆ. ತೊಂದರೆಯಿರುವುದು ತನ್ನಿಂದ ತಾನೇ ಒಳ್ಳೆಯದೂ ಅಲ್ಲ ಕೆಟ್ಟದೂ ಅಲ್ಲ. ಕೆಲವೊಮ್ಮೆ ಯಾವುದು ಸರಿಯೋ ಅದಕ್ಕೆ ಪಟ್ಟುಹಿಡಿದು ಕುಳಿತು ಅಥವಾ ಕಾಲುಕೆರೆದು ಜಗಳ ಮಾಡಬೇಕಾಗುತ್ತದೆ. ಇಂತಹ ಸನ್ನವೇಶದಲ್ಲಿಯೇ ಯಾವುದು ಸರಿ, ಯಾವುದು ಸತ್ಯ ಹಾಗೂ ಯಾವುದು ಸೂಕ್ತ ಎಂದು ನಿರ್ಧಾರವಾಗುತ್ತದೆ. ಕೇಂದ್ರ ಸರ್ಕಾರದ […]
ಕಳೆದ ವರ್ಷದಿಂದ ಮಗಳಿಗೆ ಶಾಲೆ ಬಿಡಿಸಿಬಿಡಲೇ ಎಂಬ ಯೋಚನೆ ಬಲವಾಗಿ ಮೂಡತೊಡಗಿದೆ. ಅದಕ್ಕೆ ಕಾರಣಗಳು ಒಂದೇ ಎರಡೇ…? ಅಮೆರಿಕೆಯ ಶಾಲೆಯಲ್ಲಿ ಮಗಳು ಕಲಿಯುತ್ತಿದ್ದಾಗ ಯಾವಾಗಲೂ ಒಂದು ಆತಂಕವಿರುತ್ತಿತ್ತು. ಅವಳು ಅಲ್ಲಿ ಪಾಠಕ್ಕಿಂತ ಇನ್ನೂ ಏನೇನು ಕಲಿತುಬಿಡುವಳೋ ಅಂತ. ಅಲ್ಲಿನವರು ಬಳಸುವ ಕೆಟ್ಟ ಶಬ್ದಗಳು, ಅವರ ಸ್ವೇಚ್ಛೆ ನೋಡಿದ್ದೇ ಆ ಹೆದರಿಕೆಗೆ ಕಾರಣವಿದ್ದಿರಬಹುದು. ಅಲ್ಲಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಾಗ ನಿರಾಳನಾಗಿದ್ದೆ. ಇಲ್ಲಿ ಶಾಲೆ ಶುರುವಾಗಿ ನಿಧಾನವಾಗಿ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಮಗಳು ಹೊಂದಿಕೊಳ್ಳುವ ಪ್ರಯತ್ನದಲ್ಲಿದ್ದಳು. ಅಲ್ಲಿ ಪರೀಕ್ಷೆಗಳೇ ಇರಲಿಲ್ಲ, […]
‘ನಿಗೂಢತೆ ತೋರಿಸಿ ಅವಾರ್ಡ್ ಪಡೆವ ಬಯಕೆ ನನಗಿಲ್ಲ!’ -ರಿಷಭ್ ಶೆಟ್ಟಿ ‘ಸರಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ರಾಮಣ್ಣರೈ ಕೊಡುಗೆ’ ಹಲವು ಕಾರಣಗಳಿಂದಾಗಿ ಗಾಂಧೀನಗರದಲ್ಲಿ ಸದ್ದು ಮಾಡುತ್ತಿರುವ ಕನ್ನಡ ಸಿನಿಮಾ. ವಿಜಯದ ಸಿದ್ಧಸೂತ್ರಗಳ ಬೆನ್ನುಹತ್ತಿ ಹೊರಡುವ ಸಿನಿಮಾಮಂದಿಗಿಂತ ಈ ಸಿನಿಮಾ ಭಿನ್ನ. ಕನ್ನಡ ಭಾಷೆ, ಸಂಸ್ಕೃತಿ, ವಿಶೇಷವಾಗಿ ಶಿಕ್ಷಣರಂಗ ಹಾಗೂ ಕನ್ನಡ ಸರಕಾರಿ ಶಾಲೆಯ ದುರಂತಾವಸ್ಥೆಯನ್ನು ವಿಭಿನ್ನ ನೆಲೆಯಲ್ಲಿ ಅನಾವರಣಗೊಳಿಸಿರುವುದು ಈ ಚಿತ್ರದ ವೈಶಿಷ್ಟ್ಯ. ಪರ-ವಿರೋಧ ಅಂಶಗಳ ಕುರಿತು ಚಿತ್ರದ ನಿರ್ದೇಶಕ ರಿಷಭ್ ಶೆಟ್ಟಿ ಅವರು ‘ಸಮಾಜಮುಖಿ’ ಜೊತೆಗೆ ಮುಕ್ತವಾಗಿ […]