ಪ್ರಿಯ ಓದುಗ ಬಂಧು,

ಸಂಪಾದಕೀಯ

 ಪ್ರಿಯ ಓದುಗ ಬಂಧು, <p><sub> ಸಂಪಾದಕೀಯ </sub></p>

ನಿಮ್ಮ ನೆಚ್ಚಿನ ‘ಸಮಾಜಮುಖಿ’ ಇನ್ನೆರಡು ತಿಂಗಳಲ್ಲಿ ನಿರಂತರ ಪ್ರಕಟಣೆಯ ಮೂರನೇ ವರುಷ ಪೂರೈಸಲಿದೆ. ಈ ಸಂದರ್ಭದಲ್ಲಿ ಪತ್ರಿಕೆ ಪ್ರಕಟಣೆಯ ಕಷ್ಟ-ಸುಖಕ್ಕೆ ಸಂಬಂಧಿಸಿದ ಒಂದೆರಡು ಅಂತರಂಗದ ಮಾತುಗಳು… ಬೌದ್ಧಿಕ ನೆಲೆಯಲ್ಲಿ ಅದೆಷ್ಟೇ ಆದರ್ಶ, ಪಾವಿತ್ರ್ಯ, ಪಾತೀರ್ವತ್ಯದ ಅಡಿಪಾಯದಲ್ಲಿ ಪ್ರತಿಷ್ಠಾಪನೆಗೊಂಡಿದ್ದರೂ ಅಂತಿಮವಾಗಿ ಪತ್ರಿಕೆಯೊಂದು ಮಾರುಕಟ್ಟೆಯ ‘ಸರಕು’ ಎಂಬುದು ಕಹಿಸತ್ಯ. ಸರಕು ಎಂದಾಕ್ಷಣ ಲಾಭನಷ್ಟದ ಲೆಕ್ಕಾಚಾರ ರಂಗ ಪ್ರವೇಶಿಸುತ್ತದೆ. ನಿಮಗೆಲ್ಲಾ ಗೊತ್ತಿರುವಂತೆ ಭಾರತದಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುವ ಎರಡು ವಸ್ತುಗಳೆಂದರೆ, ರೈತರ ಉತ್ಪನ್ನ ಮತ್ತು ಪತ್ರಿಕೆ. ಸಮಾಜಮುಖಿ ಮಾಸಿಕದ […]

ನ್ಯೂ ನಾರ್ಮಲ್!

ನ್ಯೂ ನಾರ್ಮಲ್!

ಈ ಕೋವಿಡ್ ಸಂದರ್ಭದಲ್ಲಿ ದೈಹಿಕ ಆರೋಗ್ಯದ ಸಹಜ ಏರುಪೇರುಗಳು ಸಹ ಅನೇಕರಲ್ಲಿ ವಿಪರೀತ ಅನುಮಾನಗಳಿಗೆ ಕಾರಣವಾಗಿ ಭಯ ಹುಟ್ಟಿಸುತ್ತಿವೆ. ಕೆಲ ದಿನಗಳಿಂದ ನನಗೂ ಎದೆಯಲ್ಲಿ ಏನೋ ಅಸೌಖ್ಯ ಅನುಭವ ಉಂಟಾಗುತ್ತಿತ್ತು; ಅಸಿಡಿಟಿ ಇರಬಹುದೆಂದು ನಿರ್ಲಕ್ಷಿಸುತ್ತಲೇ ಬಂದಿದ್ದೆ. ಕೊನೆಗೆ ಯಾಕೋ ರಿಸ್ಕ್ ಬೇಡ ಎಂದೆನಿಸಿ ಪರಿಚಿತ ಹೃದಯತಜ್ಞ ಡಾ.ಮಹಾಂತೇಶ ಅವರನ್ನು ಸಂಪಕರ್ಿಸಿದೆ. ಸಕ್ಕರೆ ಪ್ರಮಾಣ, ರಕ್ತದೊತ್ತಡ, ಆಕ್ಸಿಜೆನ್ ಸ್ಯಾಚುರೇಷನ್, ಇಸಿಜಿ, ಎಕ್ಸರೇ… ಇತ್ಯಾದಿ ತಪಾಸಣೆ ಮಾಡಿ ಮುಗಿಸಿದ ವೈದ್ಯರು ಕೊನೆಗೆ, `ಎಲ್ಲಾ ನಾರ್ಮಲ್’ ಎಂದು ಘೋಷಿಸಿದರು. ಅದು ನನ್ನ […]

ನಿಜ ಆದ ಅನುಮಾನ!

ನಿಜ ಆದ ಅನುಮಾನ!

ಕೊರೊನೋತ್ತರ ಅವಧಿಯಲ್ಲಿ ಜನರ ಜೀವನದೃಷ್ಟಿ ಮತ್ತು ಜೀವನಶೈಲಿಯಲ್ಲಿ ಗಮನಾರ್ಹ ಸ್ಥಿತ್ಯಂತರ ಆಗಬಹುದೆಂದು ಅನೇಕರು ಕನಸು ಕಂಡಿದ್ದೆವು. ಹಾಗಾಗದಿರಲೂ ಸಾಧ್ಯ ಎಂಬ ಸಣ್ಣ ಶಂಕೆ ಮತ್ತು ವಾಸ್ತವ ಪ್ರಜ್ಞೆಯೂ ಜೊತೆಗಿತ್ತು. ಆದರೆ ಫಲಿತಾಂಶಕ್ಕಾಗಿ ಕೊರೊನಾ ಅವಧಿ ಮುಗಿಯುವವರೆಗೂ ಕಾಯುವ ಅಗತ್ಯ ಕೂಡಾ ಇಲ್ಲದಂತಾಗಿದೆ. ಈಗಾಗಲೇ ಜನಸಾಮಾನ್ಯರ ವ್ಯಕ್ತಿಗತ ಸ್ವಾರ್ಥ ಮತ್ತು ಅಧಿಕಾರಸ್ಥರ ಹಣದಾಹ ಪ್ರಖರವಾಗಿ ಪ್ರಕಟಗೊಂಡಿದೆ. ನಮ್ಮೊಳಗಿನ ಅನುಮಾನವೇ ನಿಜ ಆಗಿ, ಆಶಯ ಘಾಸಿಗೊಂಡಿದ್ದಕ್ಕೆ ಪುರಾವೆಗಳ ಕೊರತೆಯಿಲ್ಲ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಬಿಜೆಪಿ ಸರ್ಕಾರ ಕೊರೊನಾ ಸಂದರ್ಭದಲ್ಲಿ ಆರಂಭದಿಂದ […]

ಸತ್ವ ಪರೀಕ್ಷೆಯ ಕಾಲ

ಸತ್ವ ಪರೀಕ್ಷೆಯ ಕಾಲ

ಒಂದು ವ್ಯವಸ್ಥೆ ಮತ್ತು ಒಬ್ಬ ವ್ಯಕ್ತಿಯ ಸತ್ವ ಪರೀಕ್ಷೆ ಆಗುವುದು ತಲೆ ಹೋಗುವಂತಹ ತೀವ್ರ ಸಂಕಷ್ಟದ ಸನ್ನಿವೇಶದಲ್ಲಿಯೇ. ಕೊರೊನಾ ಕಾರಣದಿಂದ ಅಂತಹ ಸ್ಥಿತಿ ತಂತಾನೇ ನಿರ್ಮಾಣವಾಗಿದೆ. ಇದೀಗ ಸತ್ವ ಪರೀಕ್ಷೆಗೆ ಈಡಾಗಿರುವುದು ಇಡೀ ಪ್ರಪಂಚದ ಆರೋಗ್ಯ ಮತ್ತು ಆಡಳಿತ ವ್ಯವಸ್ಥೆಯಷ್ಟೇ ಅಲ್ಲ; ಪ್ರತಿಯೊಬ್ಬ ಮನುಷ್ಯ ಜೀವಿಯೂ ಹಲವು ಬಗೆಯ ಸಂದಿಗ್ಧ, ವೈರುಧ್ಯ, ಬೆರಗಿನಲ್ಲಿ ಸಿಲುಕಿದ್ದಾನೆ. ನಿರ್ದಿಷ್ಟ ಪಠ್ಯವಿಲ್ಲದ, ಬೋಧಕರಿಲ್ಲದ, ಸಿದ್ಧತೆಗೆ ಸಮಯವಿಲ್ಲದ ಈ ಪರೀಕ್ಷೆಯಲ್ಲಿ ಎಲ್ಲರಿಗೂ ಪಾಸಾಗುವ ಅವಕಾಶ ಅಥವಾ ನಪಾಸಾಗುವ ಅಪಾಯ ಸರಿಸಮಾನ. ವ್ಯಕ್ತಿಗಳ ವಿಷಯದಲ್ಲಿ […]

ಕನ್ನಡದ ಎರಡು ಮನಃಸ್ಥಿತಿ

ಕನ್ನಡದ ಎರಡು ಮನಃಸ್ಥಿತಿ

ಸಮಾಜಮುಖಿಯಂತಹ ಪತ್ರಿಕೆಯ ಪ್ರತಿಯೊಂದು ಸಂಚಿಕೆ ರೂಪಿಸುವುದು ಸಂಪಾದಕನಿಗೆ ಹೊಸ ಸವಾಲು ಒಡ್ಡುವ, ಅನುಭವ ದಕ್ಕಿಸುವ, ಒತ್ತಡದಲ್ಲಿ ಮುಳುಗಿಸುವ, ಸಂಕಟಕ್ಕೆ ಈಡು ಮಾಡುವ, ಸಂತೃಪ್ತಿ ಕೊಡುವ ಪ್ರಕ್ರಿಯೆ. ಅದನ್ನೆಲ್ಲಾ ಪ್ರತೀ ಬಾರಿ ಓದುಗರೆದುರು ತೋಡಿಕೊಳ್ಳಲಾಗದು; ಒಂದು ಬಗೆಯಲ್ಲಿ ಉಗುಳಲೂ, ನುಂಗಲೂ ಆಗದ ಸಂದಿಗ್ಧ ಸ್ಥಿತಿ. ಆದಾಗ್ಯೂ ನುಗ್ಗಿಬರುತ್ತಿರುವ ಒಳಗಿನ ತವಕ ತಡೆಯಲಾಗದೆ ಕೆಲವೊಮ್ಮೆ ಇಂತಹ ಅನುಭವದ ತುಣುಕುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ. ಆರೇಳು ತಿಂಗಳ ಹಿಂದೆ ಸಾಹಿತಿಯೊಬ್ಬರಿಗೆ ಒಂದು ಲೇಖನ ಬರೆದುಕೊಡಲು ಕೋರಿದಾಗ, ‘ಕಳೆದ ಮೂರು ತಿಂಗಳಿನಿಂದ ಸಾಹಿತ್ಯ ಮತ್ತು […]

ವೈರಾಣು ವೈರಾಗ್ಯ!

ವೈರಾಣು ವೈರಾಗ್ಯ!

ಹತ್ತಾರು ತಲೆಮಾರುಗಳ ತರುವಾಯ ಅನುಭವಕ್ಕೆ ಬರಬಹುದಾದ ವಿಪರೀತ ಪರಿಸ್ಥಿತಿಯೊಂದಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಜಗತ್ತಿನೆಲ್ಲೆಡೆ ಒಂಥರಾ ದುಗುಡ, ಅತಂತ್ರ, ಹತಾಶೆ, ಅಸ್ಪಷ್ಟತೆಯ ವಾತಾವರಣ. ಬದುಕಿನ ಯಾವುದೋ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬವನ್ನು ಆವರಿಸಬಹುದಾದ ಇಂತಹ ವಿಷಮ ಭಾವನೆಗಳು ಸಾರ್ವತ್ರಿಕವಾಗಿ ಇಡೀ ಮನುಕುಲವನ್ನೇ ವ್ಯಾಪಿಸಿದರೆ ಏನಾದೀತು? ಈಗ ಅದೇ ಆಗಿದೆ. ಅಂತರ್ಗತ ಆತಂಕವನ್ನು ಅದುಮಿಡುವ ಪ್ರಕ್ರಿಯೆಯ ಭಾಗವಾಗಿ ಮನುಷ್ಯ ಹಲವು ಬಗೆಯಲ್ಲಿ ಅನಾವರಣಗೊಳ್ಳುತ್ತಿದ್ದಾನೆ: ಒಂದು ವಿಷಯವನ್ನು ಎಷ್ಟು ದೀರ್ಘಕಾಲ ಅಗಿಯಲು ಸಾಧ್ಯ ಎಂಬುದನ್ನು ರುಜುವಾತುಪಡಿಸಲು ಜಿದ್ದಿಗೆ ಬಿದ್ದಿರುವ […]

ಸಂಪಾದಕೀಯ

ಸಂಪಾದಕೀಯ

ಏಕಮುಖೀ ಓಟ ಮತ್ತು ನೋಟ ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸಮಾಜದ ನೆಮ್ಮದಿಯನ್ನು ಕಲಕುತ್ತಿರುವುದಷ್ಟೇ ಅಲ್ಲ; ಇಲ್ಲಿ ಏನು ನಡೆಯುತ್ತಿದೆ, ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದು ಕಲ್ಪನೆಗೂ ನಿಲುಕುತ್ತಿಲ್ಲ.  ಅರಾಜಕತೆಯ ಅಪಾಯ ಅರಿವಿಲ್ಲದಂತೆಯೇ ಅಮರಿಕೊಳ್ಳುತ್ತಿರುವ ಸಂದರ್ಭ. ಓದುವ ಕವಿತೆ, ಕೂಗುವ ಘೋಷಣೆ, ತರುವ ಕಾನೂನು, ಮಾಡುವ ಭಾಷಣ, ನೀಡುವ ಹೇಳಿಕೆ, ಕೈಗೊಳ್ಳುವ ಕ್ರಮ… ಎಲ್ಲವೂ ಪರಸ್ಪರರ ಅಸ್ತ್ರಗಳು. ಯಾವುದರ ಸತ್ಯಾಸತ್ಯತೆಯನ್ನೂ ಪರಿಶೀಲಿಸುವ ವ್ಯವಧಾನವಾಗಲೀ, ಮುಕ್ತ ಮನಸ್ಸಾಗಲೀ ಯಾರಲ್ಲೂ ಇಲ್ಲ; ಎಲ್ಲರಿಗೂ ಯಾವ ಅಸ್ತ್ರ ಝಳಪಿಸಿ ಎದುರಾಳಿಯನ್ನು ಎಷ್ಟು ಹೆದರಿಸಲು, […]

ಸಮನ್ವಯ ಸಾಧ್ಯವೇ?

ಸಮನ್ವಯ ಸಾಧ್ಯವೇ?

ಸಂಪಾದಕ ಆ ತಾಯಿ ನಗರದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಮಗನನ್ನು ನೋಡಲು ತವಕಿಸುತ್ತಿದ್ದಳು. ಮಗ ಮೊದಲ ಬಾರಿ ತಂದೆತಾಯಿ ಬಿಟ್ಟು ಹೊರಗೆ ಹೋಗಿದ್ದ. ಪ್ರತಿಯೊಂದಕ್ಕೂ ತಾಯಿಯನ್ನೇ ಅವಲಂಬಿಸಿದ್ದ, ಮೀಸೆ ಮೂಡಿದರೂ ಅಮ್ಮನ ಸೆರಗು ಬಿಡದ, ಮೃದು ಸ್ವಭಾವದ ಮಗ ಅಪರಿಚಿತ ಊರು-ಜನರ ಜೊತೆ ಹೇಗೆ ಹೊಂದಿಕೊಳ್ಳುವನೋ ಎಂಬ ಆತಂಕ ಆಕೆಯದು. ಆತ ಆಗಾಗ ದೂರವಾಣಿ ಕರೆ ಮಾಡಿ ಅಮ್ಮನಿಗೆ ಧೈರ್ಯ ತುಂಬುತ್ತಾನಾದರೂ ಅಮ್ಮನ ಅಳುಕು ತುಳುಕುತ್ತಲೇ ಇತ್ತು; ಅವಳ ಅಂತರಂಗದಲ್ಲಿ ಅಂಕೆಗೆ ಸಿಗದ ಆತಂಕ, ಅದುಮಿಡಲು ಆಗದ ದುಗುಡ. […]

ನಾವೇನು ಮಾಡುತ್ತಿದ್ದೇವೆ..?

ನಾವೇನು ಮಾಡುತ್ತಿದ್ದೇವೆ..?

ನಿಮ್ಮ ಸಮಾಜಮುಖಿ ಪತ್ರಿಕೆಯು ಬೇರೆಲ್ಲಾ ನಿಯತಕಾಲಿಕಗಳಿಗಿಂತ ಭಿನ್ನವಾಗಿದೆ ಎಂದು ನಿಮಗೆ ಈಗಾಗಲೇ ಮನವರಿಕೆಯಾಗಿದೆಯೆಂದು ಭಾವಿಸಿದ್ದೇವೆ. ಕನ್ನಡದಲ್ಲಿ ವೈಚಾರಿಕ ಚರ್ಚೆಗೆ ಹಾಗೂ ಸೃಜನೇತರ ಬರವಣಿಗೆಗಳಿಗೆ ಆಸ್ಪದ ನೀಡಲೆಂದು ಶುರುವಾದ ನಿಮ್ಮ ಈ ಪತ್ರಿಕೆ ಅಸಾಂಪ್ರದಾಯಿಕವಾಗಿ ಕನ್ನಡಿಗರ ಚಿಂತನಶೀಲತೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡುತ್ತಿದೆಯೆಂದು ಸಹಾ ನೀವು ಗಮನಿಸಿರುತ್ತೀರಿ. ಪ್ರತಿತಿಂಗಳ ಸಂಚಿಕೆಯಲ್ಲಿ ನಾವು ಮುಖ್ಯಚರ್ಚೆಯೊಂದನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ. ಕನ್ನಡದ ಬೇರಾವುದೇ ವೃತ್ತಪತ್ರಿಕೆ-ನಿಯತಕಾಲಿಕಎಲೆಕ್ಟ್ರಾನಿಕ್ಮಾ ಧ್ಯಮಗಳು ‘ಮುಟ್ಟದ’ ಸಂಕೀರ್ಣ ವಿವಾದಗಳನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ. ‘ನಮ್ಮ ಕಾಲವನ್ನು ಗುರುತಿಸುವುದು ಹೇಗೆ’ ಎಂಬಂತಹ ಅಸ್ಪಷ್ಟ ವಿಷಯಗಳಿಂದ ಹಿಡಿದು ಸಂಚಾರ ದಟ್ಟಣೆಯಂತಹ ದೈನಂದಿನ […]

ತಲೆಮಾರುಗಳ ಅಂತರ

ತಲೆಮಾರುಗಳ ಅಂತರ

ತಲೆಮಾರುಗಳ ಅಂತರ ಹೊಸದೇನಲ್ಲ; ಕಾಲಾನುಸಾರ ಎಲ್ಲ ಪೀಳಿಗೆಗಳ ಅನುಭವಕ್ಕೂ ಬಂದಿರುತ್ತದೆ. ಈ ಅಂತರದ ದೆಸೆಯಿಂದ ಹೊಸ ಪೀಳಿಗೆಯಲ್ಲಿ ಒಂದು ಬಗೆಯ ಪುಳಕ ಉಂಟಾದರೆ, ಹಳೆಯ ತಲೆಮಾರು ಮತ್ತೊಂದು ರೀತಿಯ ಕಳವಳಕ್ಕೆ ಈಡಾಗುತ್ತದೆ. ಪ್ರತಿಯೊಂದು ತಲೆಮಾರು ಹೊಸ ಮತ್ತು ಹಳೆಯ ಪೀಳಿಗೆಯ -ಎರಡೂ ಬಗೆಯ ಅನುಕೂಲ, ಅನಾನುಕೂಲಗಳಿಗೆ ಒಡ್ಡಿಕೊಳ್ಳುವುದು ಅನಿವಾರ್ಯ; ಇಂದು ನಳನಳಿಸುವ ಕಿರಿಯ ಪೀಳಿಗೆಯೇ ನಾಳಿನ ಹಳಹಳಿಸುವ ಹಿರಿಯ ತಲೆಮಾರು! ಹಾಗಾದರೆ ಆಧುನಿಕ ತಂತ್ರಜ್ಞಾನದ ಪ್ರವಾಹದಲ್ಲಿ ತೇಲಾಡುತ್ತಿರುವ ಈ ಯುಗದ ವಿಶೇಷವೇನು? ವೇಗವೇ ಯುಗಧರ್ಮ, ಸ್ಥಿತ್ಯಂತರವೇ ಸ್ಥಿರ […]

ನವೆಂಬರ್ ಅಂದರೆ…

ನವೆಂಬರ್ ಅಂದರೆ…

ತೀರಾ ಕಟ್ಟುನಿಟ್ಟಾಗಿ ನೋಡುವುದಾದರೆ ನವೆಂಬರ್ ಅಂದರೆ ಪ್ರತೀ ವರ್ಷ ಕ್ಯಾಲೆಂಡರಿನಲ್ಲಿ ತೆರೆದುಕೊಳ್ಳುವ ಒಂದು ತಿಂಗಳು,  ಅಷ್ಠೆ ಆದರೆ ಕರ್ನಾಟಕದ ಮಟ್ಟಿಗೆ ಅದು ಅಷ್ಠೆ ಅಲ್ಲ; ಸರ್ಕಾರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸುವ ತವಕ, ಹೋರಾಟಗಾರರಿಗೆ ಹಣ ಸಂಗ್ರಹಣೆಯ ತರಾತುರಿ, ನೌಕರರಿಗೆ ರಜೆಯ ಸಂಭ್ರಮ, ಪತ್ರಿಕೆಗಳಿಗೆ ಸಾಂದರ್ಭಿಕ ಲೇಖನ-ಸಂದರ್ಶನ ಹೊಂದಿಸುವ ಹೊಣೆ, ಭಾಷಣಕಾರರಿಗೆ ಬಹುಬೇಡಿಕೆ, ಬಾವುಟ ಮಾರಾಟಗಾರರಿಗೆ ಹೊಟ್ಟೆಯ ಪಾಡು… ಹೀಗೆ ಕನ್ನಡ ರಾಜ್ಯೋತ್ಸವ ಅಂದರೆ, ನವೆಂಬರ್ ಬಂದರೆ ಕನ್ನಡದ ಮನಗಳು ನಾನಾ ನಮೂನೆಗಳಲ್ಲಿ ಗರಿಕೆದರಿ ನರ್ತಿಸುವ ನವಿಲು. ಆದರೆ ಅಬ್ಬರ, ಆಡಂಬರದ […]

ನಿರ್ಗಮನದ ಸಿದ್ಧತೆ

ನಿರ್ಗಮನದ ಸಿದ್ಧತೆ

ವ್ಯಕ್ತಿಯೊಬ್ಬ ಅಸುನೀಗಿದಾಗ ಸಂತಾಪದ ಸಾಲಿನಲ್ಲಿ ‘ತುಂಬಲಾಗದ ನಷ್ಟ’ಪದ ಸಲೀಸಾಗಿ, ಸಹಜವಾಗಿ ಸೇರಿರುತ್ತದೆ. ಅಗಲಿದ ವ್ಯಕ್ತಿಗೆ ಸಂಬಂಧಿಸಿದ ಕುಟುಂಬ, ಗೆಳೆಯರು, ರಾಜಕೀಯ ಪಕ್ಷ, ಸಂಸ್ಥೆ, ಸಮುದಾಯ, ಕಾರ್ಯಕ್ಷೇತ್ರ… ಹೀಗೆ ಒಂದೆಡೆ ನಷ್ಟ ಸಂಭವಿಸಿದೆ ಎಂದು ಭಾವಿಸಲಾಗುತ್ತದೆ. ಕೆಲವು ಸಾವುಗಳು ವಿಶ್ವ, ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕು, ಊರು, ಕೊನೆಗೆ ವಾಸಿಸುವ ಓಣಿಗಾದರೂ ನಷ್ಟ ಉಂಟು ಮಾಡಿರುತ್ತವೆ. ಇತ್ತೀಚೆಗೆ ‘ಮತ್ತೆ ಹುಟ್ಟಿ ಬಾ’ ಎಂಬ ಬೇಡಿಕೆಹೊತ್ತ ಸೋವಿ ಮುದ್ರಣದ ಫ್ಲೆಕ್ಸ್ ಪಟಗಳು ಗಲ್ಲಿಗಲ್ಲಿಗಳಲ್ಲಿ ರಾತ್ರೋರಾತ್ರಿ ಕಾಣಿಸಿಕೊಳ್ಳುತ್ತವೆ. ಮರುಹುಟ್ಟಿನ ಮೂಲಕವಾದರೂ ನಷ್ಟ ತುಂಬಿಸಿಕೊಳ್ಳುವ ಹತಾಶ […]

ಕಟಕಟೆಯಲ್ಲಿ ಶಿಕ್ಷಣ

ಕಟಕಟೆಯಲ್ಲಿ ಶಿಕ್ಷಣ

ಇತ್ತೀಚೆಗೆ ವಾಹಿನಿಯೊಂದರಲ್ಲಿ ‘ಕನ್ನಡದಲ್ಲಿ ಕೋಟ್ಯಧಿಪತಿ’ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಸ್ಪರ್ಧೆಯ ಹಲವು ಸುತ್ತುಗಳನ್ನು ದಾಟಿ ಅಂದು ಅಂತಿಮವಾಗಿ ಹಾಟ್‍ಸೀಟ್ ತಲುಪಿದ್ದವರು ಒಬ್ಬ ಮಹಿಳೆ. ಕಾರ್ಯಕ್ರಮವನ್ನು ಅತ್ಯಂತ ಆಪ್ತ ಧಾಟಿಯಲ್ಲಿ ನಡೆಸಿಕೊಡುವ ಪುನೀತ್ ರಾಜಕುಮಾರ್ ಆರಂಭಿಕ ಹಂತದ ಸಾಮಾನ್ಯ ಸರಳ ಪ್ರಶ್ನೆಗಳನ್ನು ಮಹಿಳೆಯ ಮುಂದಿಡುತ್ತಿದ್ದರು. ಆಗ ಕಂಪ್ಯೂಟರ್ ಪರದೆಯ ಮೇಲೆ ತೇಲಿಬಂದ ಪ್ರಶ್ನೆ: ‘ರಸಾಯನ ಶಾಸ್ತ್ರದಲ್ಲಿ ಬಳಸುವ ಆಮ್ಲಜನಕದ (ಆಕ್ಸಿಜನ್) ಸಂಕೇತಾಕ್ಷರ ಯಾವುದು?’ ಓಎಕ್ಸ್, ಓವೈ, ಓ ಇತ್ಯಾದಿ ಆಯ್ಕೆಗಳಿದ್ದವು. ಹಾಟ್ ಸೀಟಿನಲ್ಲಿ ಕುಳಿತಿದ್ದರೂ ಉತ್ತರ ಗೊತ್ತಿಲ್ಲದ ಮಹಿಳೆಯ ಉಮೇದು […]

ಅಪಾಯದ ಏರುಗತಿ!

ಅಪಾಯದ ಏರುಗತಿ!

ಇತ್ತೀಚೆಗೆ ಕರ್ನಾಟಕದ ರಾಜಕಾರಣದಲ್ಲಿ ನಡೆದ ಬೆಳವಣಿಗೆಗಳು ಹಲವು ಸ್ವಾರಸ್ಯಕರ ‘ಪದಾರ್ಥ’ ಪ್ರಶ್ನೆಗಳನ್ನು ಮುಂದಿಟ್ಟಿವೆ. ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದ ಕೆಲವು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ‘ಅತೃಪ್ತರು’ ಎಂದು ಗುರುತಿಸಲಾಗಿದೆ. ಈ ಪದವನ್ನು ಎಲ್ಲಾ ಮಾಧ್ಯಮಗಳು, ರಾಜಕಾರಣಿಗಳು, ಜನಸಾಮಾನಾನ್ಯರು ಏಕಕಾಲಕ್ಕೆ ಸಾರ್ವತ್ರಿಕವಾಗಿ ಬಳಸತೊಡಗಿದ್ದು ವಿಶೇಷವೇ ಸರಿ. ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದು ಶಾಸಕರ ಕರ್ತವ್ಯ; ಇದಕ್ಕೆ ಸಮ್ಮಿಶ್ರ ಸರ್ಕಾರ ಸ್ಪಂದಿಸದಿರುವುದೇ ತಮ್ಮ ಅತೃಪ್ತಿಗೆ ಕಾರಣವೆಂದು ಈ ಶಾಸಕರು ಬಹಿರಂಗವಾಗಿ ಪ್ರತಿಪಾದಿಸುತ್ತಾರೆ. ಅವರ ಅಂತರಂಗದ ಅತೃಪ್ತಿಯ […]

ಸಂಪಾದಕೀಯ ಜುಲೈ 2019

ಸಂಪಾದಕ

 ಸಂಪಾದಕೀಯ ಜುಲೈ 2019 <p><sub> ಸಂಪಾದಕ </sub></p>

ಈ ಕಾಲದ ಕಳವಳ! ಈ ಸಂಚಿಕೆಯ ಮುಖ್ಯಚರ್ಚೆಯ ವಿಷಯ ಕುರಿತು ಲೇಖನಗಳನ್ನು ಬರೆಯಿಸಲು ನಾನು ಸಹಜವಾಗಿಯೇ ದಲಿತ ಚಳವಳಿಗೆ ಸಂಬಂಧಪಟ್ಟ ಹಲವಾರು ಮಿತ್ರರನ್ನು ಸಂಪರ್ಕಿಸಿದೆ. ಬಹುಪಾಲು ಹೋರಾಟಗಾರರು, ಸಾಹಿತಿಗಳು, ಚಿಂತಕರು ಚರ್ಚೆಯ ಪ್ರಸ್ತುತತೆಯನ್ನು ಗುರುತಿಸಿದರು; ಕೆಲವರು ಪತ್ರಿಕೆಯ ಕಾರ್ಯವನ್ನು ಮೆಚ್ಚಿ ಮಾತನಾಡಿದರು, ಅನೇಕರು ‘ಇದೇಕೆ ಈಗ?’ ಎಂಬ ಅಪಸ್ವರ ತೆಗೆದರೆ ಒಂದಷ್ಟು ಜನ ಚಳವಳಿಯ ಕಾಲ ಮುಗಿದೇಹೋಗಿದೆ ಎಂಬಂತೆ ಸಿನಿಕತನ ತೋರ್ಪಡಿಸಿದರು. ಸಂಭಾಷಣೆಯಲ್ಲಿ ಸಂಘಟನೆಗೆ ಮತ್ತು ವಿಘಟನೆಗೆ ಕಾರಣವಾದ ತಾತ್ವಿಕ ವಿಚಾರಗಳು, ವ್ಯಕ್ತಿಗತ ಸ್ವಾರ್ಥಗಳು, ಸಾಂದರ್ಭಿಕ ತಪ್ಪುಗಳು, […]