ತಗರ ಪವಾಡ

-ಡಾ.ಜಾಜಿ ದೇವೇಂದ್ರಪ್ಪ

ತಗರ ಪವಾಡ
-ಡಾ.ಜಾಜಿ ದೇವೇಂದ್ರಪ್ಪ

–ಡಾ.ಜಾಜಿ ದೇವೇಂದ್ರಪ್ಪ ಕನ್ನಡ ಮತ್ತು ತೆಲುಗಿನಲ್ಲಿ ಹದಿನೆಂಟನೆ ಶತಮಾನದವರೆಗೂ ಅನೇಕ ಕಾವ್ಯಗಳು ಬಸವಣ್ಣನವರನ್ನು ದಾಖಲಿಸಿಕೊಂಡು ಬಂದಿವೆ. ಅಂತಹ ಸಾಲಿಗೆ ಸೇರುವ ವಿಶಿಷ್ಟ ಕೃತಿ ತಗರ ಪವಾಡ. ಹನ್ನೆರಡನೆ ಶತಮಾನ ಸಮಾಜೋಸಾಹಿತ್ಯಿಕ ನೆಲೆಯಿಂದ ಕನ್ನಡ ನಾಡಿನಲ್ಲಿ ಕ್ರಾಂತಿಯ ಕಾಲ. ಈ ಪ್ರತಿರೋಧದ ಕಾಲದ ಪ್ರವರ್ತಕ ವಚನಕಾರ ಬಸವಣ್ಣನವರು. ವಚನ ಸಾಹಿತ್ಯಕಾಲ ಕೇವಲ ಸಾಂಸ್ಕøತಿಕ ಪಲ್ಲಟದ ಕಾಲ ಮಾತ್ರವಲ್ಲ, ಅದೊಂದು ರಾಜಕಾರಣದ, ಪ್ರಭುತ್ವದ ವಿರುದ್ಧ ಸಂಘರ್ಷಕ್ಕೆ ಇಳಿದ ಕಾಲ. ಈ ದೃಷ್ಟಿಯಿಂದ ವಚನ ಸಾಹಿತ್ಯ ಕಾಲವನ್ನು ರಾಜಕೀಯ, ಆರ್ಥಿಕ ನೆಲೆಯಿಂದ […]

ಕಂಠಶೋಷಣೆ

-ವೆಂಕಟೇಶ ಮಾಚಕನೂರ

ಕಂಠಶೋಷಣೆ
-ವೆಂಕಟೇಶ ಮಾಚಕನೂರ

–ವೆಂಕಟೇಶ ಮಾಚಕನೂರ ನಾನೀಗ ಕಂಠಶೋಷಣೆ ಕುರಿತು ಮಾತ್ರ ನಿಮ್ಮನ್ನು ಸ್ವಲ್ಪ ಶೋಷಣೆ ಮಾಡಲೆತ್ನಿಸುತ್ತೇನೆ. ಶೋಷಣೆ ಅನ್ನುವುದು ತುಳಿತ, ದಮನಿತ ಅನ್ನುವ ಅರ್ಥ ನೀಡಿದರೆ, ಕಂಠಶೋಷಣೆ ಅನ್ನುವುದು ಫಲವಿಲ್ಲದ ಮಾತನಾಡುವಿಕೆ ಎಂದರ್ಥ ನೀಡುತ್ತದೆ. ಕಂಠಶೋಷಣೆ ಎಂಬ ಶಬ್ದ ನನ್ನ ಕಿವಿಯ ಮೇಲೆ ಆಗಾಗ ಬೀಳತೊಡಗಿದ್ದು ಸುಮಾರು ಮೂರು ದಶಕಗಳ ಹಿಂದೆ. ನಾನಾಗ ಒಂದು ಸ್ಥಳೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಮಾಸಿಕ ಸಭೆಯಲ್ಲಿ ಚುನಾಯಿತ ವಿರೋಧಿ ಪಕ್ಷದ ಸದಸ್ಯರೊಬ್ಬರು ಮೇಲಿಂದಮೇಲೆ ಆ ಶಬ್ದ ಬಳಸುತ್ತಿದ್ದರು. ಅವರು ಸಭಾಧ್ಯಕ್ಷರನ್ನುದ್ದೇಶಿಸಿ “ಸ್ವಾಮಿ ನಾನು […]

ಕ್ಷಮಿಸು ಏಕಲವ್ಯ

-ಡಾ.ಜ್ಯೋತಿ

ಕ್ಷಮಿಸು ಏಕಲವ್ಯ
-ಡಾ.ಜ್ಯೋತಿ

–ಡಾ.ಜ್ಯೋತಿ ಇದು, ಏಕಲವ್ಯ ಮತ್ತು ದ್ರೋಣಾಚಾರ್ಯರ ನಡುವಿನ ಮುಖಾಮುಖಿ ಹಾಗೂ ಅವರ ಗುರು–ಶಿಷ್ಯ ಸಂಬಂಧದ ಮರುವ್ಯಾಖ್ಯಾನದ ಪ್ರಯತ್ನ. `ಆಚಾರ್ಯ, ನಿಮ್ಮ ಕೈ ಯಾಕೆ ಹೀಗೆ ನಡುಗುತ್ತಿದೆ? ಹೆಬ್ಬೆರಳ ಕತ್ತರಿಸಿಕೊಂಡು ನೋವು ಅನುಭವಿಸುತ್ತಿರುವವನು ನಾನು. ಆದರೆ, ನಿಮ್ಮ ಕಣ್ಣಲ್ಲಿ ನೀರು! ಯಾಕೆ, ಈ ಕಂಪನ? ನಿಮ್ಮ ಅಂಗೈಯಲ್ಲಿ ನನ್ನ ಹೆಬ್ಬೆರಳು ಸುರಿಸುತ್ತಿರುವ ರಕ್ತವನ್ನು ನಿಮ್ಮ ಕಣ್ಣೀರು ತೊಯ್ಯುತ್ತಿದೆ. ಸುಧಾರಿಸಿಕೊಳ್ಳಿ. ನನಗೇನು ಬೇಸರವಾಗಿಲ್ಲ. ನಿಮಗೆ ಸಲ್ಲಬೇಕಾದ ಗುರುದಕ್ಷಿಣೆ ಕೊಡುವುದು ಬಾಕಿಯಾಗಿಯೇ ಉಳಿದಿತ್ತು. ಅದನ್ನು ತೀರಿಸಿದ ಮೇಲಷ್ಟೇ, ನಾನು ನಿಮ್ಮ ಸ್ಫೂರ್ತಿಯಿಂದ […]

ನಲ್ಲಿ ನೀರು ಮತ್ತು ವಡೆ ಪ್ರಸಂಗ!

-ಬೇಲೂರು ರಾಮಮೂರ್ತಿ

ನಲ್ಲಿ ನೀರು ಮತ್ತು ವಡೆ ಪ್ರಸಂಗ!
-ಬೇಲೂರು ರಾಮಮೂರ್ತಿ

–ಬೇಲೂರು ರಾಮಮೂರ್ತಿ ಸೋಮುನ ಕಂಡೊಡನೇ ಶ್ರೀಮತಿ, “ಸೋಮು ಸರ್. ಹೌ ಸ್ವೀಟ್ ಆಫ್ ಯು, ಮುನಿಸಿಪಾಲಿಟಿಗೆ ಹೋಗಿ ನೀರು ತರಿಸಿದೀರಲ್ಲ. ನೀವು ಭಗೀರಥನಿಗಿಂತ ಏನೂ ಕಡಿಮೆಯಿಲ್ಲ, ನೀವು ನಮ್ಮ ಏರಿಯಾದ ಸೋಮುರಥ” ಅಂದಳು! ಮನೇಲಿ ಬೋರ್‍ವೆಲ್, ಬಾವಿ ಇದ್ದರೂ ಕುಡಿಯಲು ನಲ್ಲಿ ನೀರೇ ಬೇಕು ಎನ್ನುವುದು ಬಡಾವಣೆಯ ಮನೆಗಳ ನೀರೆಯರ ಬಯಕೆ. ಹೀಗಾಗಿ ಬೀದಿ ಕೊನೆಯಲ್ಲಿರುವ ಒಂದೇ ಒಂದು ಮುನಿಸಿಪಲ್ ನಲ್ಲಿಯ ಬಳಿ ಸದಾ ಜನ ಇರ್ತಾರೆ. ಎಷ್ಟಾದರೂ ಅದು ಮುನಿಸಿಪಲ್ ನಲಿ,್ಲ ಅದಕ್ಕೂ ಮುನಿಸಿಕೊಳ್ಳೊ ಹಕ್ಕಿದೆ. […]

ಸೈರೋಬನ ಕತ್ತರಿ ಮತ್ತು ಪುಟ್ಟನ ಕಿವಿ

-ತಮ್ಮಣ್ಣ ಬೀಗಾರ

ಸೈರೋಬನ ಕತ್ತರಿ ಮತ್ತು ಪುಟ್ಟನ ಕಿವಿ
-ತಮ್ಮಣ್ಣ ಬೀಗಾರ

–ತಮ್ಮಣ್ಣ ಬೀಗಾರ ಸೈರೋಬ ಒಂದು ಬೀಡಿ ಹಚ್ಚಿ ಬಾಯಿಯ ಒಂದು ಬದಿಯಲ್ಲಿ ಇಟ್ಟುಕೊಂಡು ಅದನ್ನು ಕೈಯಿಂದ ಮುಟ್ಟದೆ ಹಾಗೆಯೇ ಉಸಿರನ್ನು ಜಗ್ಗಿ ಜಗ್ಗಿ ಹೊಗೆ ಕುಡಿದು ಬಾಯಿಯ ಇನ್ನೊಂದು ಬದಿಯಿಂದ ಹೊಗೆಯನ್ನು ಬುಸ್ ಎಂದು ಬಿಡುತ್ತ ಕಣ್ಣಿನಲ್ಲಿಯೇ ನನ್ನನ್ನು ಹತ್ತಿರ ಕರೆದು ಕೂಡ್ರಿಸಿಕೊಂಡ. ಸೈರೋಬ ಬಂದ ಎಂದು ಅಪ್ಪಯ್ಯ ಹೇಳಿದ್ದು ಕೇಳಿತು. ನನ್ನ ತಲೆಯ ಕೂದಲ ನಡುವೆ ಬೆರಳು ತೂರಿ ಎತ್ತಿ ಎಷ್ಟು ಉದ್ದವಾಗಿದೆ ಎಂದು ಅಂದಾಜಿಸಿದೆ. ಕನ್ನಡಿಯಲ್ಲಿ ನೋಡೋಣವೆಂದರೆ ನಮ್ಮ ಮನೆಯಲ್ಲಿರುವ ಆ ಪುಟ್ಟ ಕನ್ನಡಿಯನ್ನು […]

ಧರ್ಮದ ಹೆಸರಿನ ಮೋಸ ಬಯಲುಮಾಡುವ ‘ಟ್ರ್ಯಾನ್ಸ್’

-ಎಲ್.ಚಿನ್ನಪ್ಪ ಬೆಂಗಳೂರು

ಧರ್ಮದ ಹೆಸರಿನ ಮೋಸ ಬಯಲುಮಾಡುವ ‘ಟ್ರ್ಯಾನ್ಸ್’
-ಎಲ್.ಚಿನ್ನಪ್ಪ ಬೆಂಗಳೂರು

–ಎಲ್.ಚಿನ್ನಪ್ಪ ಬೆಂಗಳೂರು ಹುಸಿ ಪವಾಡಗಳ ಮೂಲಕ ಭಕರನ್ನು ಮರುಳುಮಾಡಿ ಹಣ ಗಳಿಸುವ ಧಾರ್ಮಿಕ ಪಂಥವೊಂದರ ಕಾರ್ಯವೈಖರಿಯನ್ನು ಬಯಲು ಮಾಡುವ ಈ ವಿಶಿಷ್ಟ ಮಲಯಾಳಂ ಸಿನಿಮಾ ಯೂಟ್ಯೂಬ್ ನಲ್ಲಿ ಲಭ್ಯ. ಕೆಲವು ಶ್ರೀಮಂತ ಧರ್ಮನಿಷ್ಠರು ಧರ್ಮ ಪ್ರಚಾರಕ್ಕಾಗಿ ಧನ ಸಹಾಯ ಮಾಡಿ ತಾವು ಖರ್ಚುಮಾಡಿದ ದುಪ್ಪಟ್ಟು ಹಣವನ್ನು ಬಾಚಿಕೊಳ್ಳುವುದೇ ಅವರ ದಾನದ ಹಿನ್ನಲೆಯಲ್ಲಿ ಅಡಗಿರುವ ಮರ್ಮ. (ಮನಿ ಬ್ಯಾಕ್ ಪಾಲಿಸಿ) ‘ನನಗೆ ಇಷ್ಟು ಬಂದರೆ ಅದರಲ್ಲಿ ಇಷ್ಟು ಹಣ ನಿಮಗೆ ಕಾಣಿಕೆ ನೀಡುತ್ತೇನೆ’ ಎಂದು ದೇವರಿಗೇ ಆಮಿಷವೊಡ್ಡಿ ಹಣ […]

ಜೋರ್ಡಾನಿನ ಆಧುನಿಕ ಸಮಾಜ

-ರಹಮತ್ ತರೀಕೆರೆ

ಜೋರ್ಡಾನಿನ ಆಧುನಿಕ ಸಮಾಜ
-ರಹಮತ್ ತರೀಕೆರೆ

–ರಹಮತ್ ತರೀಕೆರೆ ಜೋರ್ಡಾನ್ ಒಂದು ಅರಬ್‍ದೇಶ. ಜೋರ್ದಾನ್ ನದಿಯಿಂದ ಅದಕ್ಕೀ ಹೆಸರು ಬಂದಿದೆ. ರೋಮನ್ ಸಾಮ್ರಾಜ್ಯದ ಸ್ಮಾರಕ ಮತ್ತು ಕ್ರೈಸ್ತ ಯಾತ್ರಾಸ್ಥಳಗಳನ್ನು ತನ್ನ ಪೂರ್ವಜರ ಹೆಮ್ಮೆಯಾಗಿ, ಜಗತ್ತಿನ ನಾಗರಿಕತೆಗೆ ಸೇರಿದ ಸ್ಮಾರಕಗಳಾಗಿ ಜೋರ್ಡಾನಿಗರು ಕಾಪಿಟ್ಟುಕೊಂಡಿದ್ದಾರೆ. ಬಮಿಯಾನದ ಬುದ್ಧನನ್ನು ಕೆಡವಿದ ತಾಲಿಬಾನಿಗಳು ಇಲ್ಲಿಲ್ಲ! ಜೋರ್ಡಾನಿನ ಅಮ್ಮಾನ್ ನಗರದಲ್ಲಿ ಇಳಿದಾಗ ಭೀಕರ ಮಳೆ ಸುರಿಯುತ್ತಿತ್ತು. ಇರಿಸಲು ಮತ್ತು ಗಾಳಿಗೆ ಏರ್‍ಪೋರ್ಟಿನ ಗಾಜುಬಾಗಿಲು ಲಡಲಡಿಸುತ್ತಿದ್ದವು. ಲಾಂಜಿನಲ್ಲಿದ್ದವರು ಗಾಬರಿಯಿಂದ ನಿಲ್ದಾಣದ ಒಳಭಾಗಕ್ಕೆ ಸರಿಯಬೇಕಾಯಿತು. ಮರುಭೂಮಿ ನಾಡುಗಳಲ್ಲಿ ಮಳೆ ಸುರಿವ ದೃಶ್ಯ ನನ್ನ ಪಾಲಿಗೆ […]

ಕವಿತೆ

-ಸಿಂಧುವಳ್ಳಿ ಸುಧೀರ

ಕವಿತೆ
-ಸಿಂಧುವಳ್ಳಿ ಸುಧೀರ

ಎಷ್ಟು ದ್ರೋಣರಿದ್ದಾರೆ? ಎಷ್ಟು ದ್ರೋಣರಿದ್ದಾರೆ? ಗುರುಕಾಣಿಕೆ ಕೇಳಲು ನಮ್ಮ ಬೆರಳ ಕತ್ತರಿಸಿ ಜಾತಿವಾದ ಮೆರೆಯಲು ಆಕಾಶವ ತೋರಿಸಿ ಆಸೆಗಣ್ಣ ತೆರೆಯಿಸಿ ಪಾತಾಳಕೆ ದೂಡಲು ಪಾಪಕೃತ್ಯ ಮೆರೆಯಲು ಅಲ್ಲಿ ಇಲ್ಲಿ ಅಲೆದಾಡಿಸಿ ನಮ್ಮ ಸಮಯ ಸಾಯಿಸಿ ವಿಚಾರ ಸಂಕಿರಣದಲ್ಲಿ ಪ್ರಚಾರ ಪಡೆವ ಪಂಡಿತರು ಪಾಠಪಠ್ಯ ಹೊರಗೆ ಇಟ್ಟು ಹೊಟೆಲ್‍ನಲ್ಲಿ ಕೂತುಬಿಟ್ಟು ಹರಟೆ ಹೊಡೆವ ಭೂಪರು ಬಲು ಜಂಭದ ಪ್ರೊಫೆಸರು ಕ್ಲಾಸಿನಲ್ಲಿ ತಮ್ಮ ಮನೆಯ ಕಥೆಯ ಹೇಳೋ ಮಾಸ್ಟರು ಸ್ಪೆಷಲ್ ಕ್ಲಾಸಿನಲ್ಲಿ ಪುಂಗಿ ಊದೊ ಪ್ರವೀಣರು ನೀತಿಗೀತಿ ಅನ್ನುತಾರೆ ತತ್ತ್ವಗಿತ್ವ […]

ಉಭಯ ಕವಿ ರನ್ನನ ಅಜಿತನಾಥ ಪುರಾಣಂ

ಇದು ರನ್ನನ ಧಾರ್ಮಿಕ ಕಾವ್ಯ. ಕ್ರಿ.ಶ. 993ರಲ್ಲಿ ಈ ಕೃತಿಯ ರಚನೆಯಾಗಿದೆ. ಇದು ಜೈನಧರ್ಮದ ತ್ರಿಷಷ್ಟಿ ಶಲಾಕ ಪುರುಷರಲ್ಲಿ ಒಬ್ಬನಾದ ಎರಡನೆಯ ತೀರ್ಥಂಕರ ಅಜಿತನಾಥನ ಕಥೆ ಹಾಗೂ ಎರಡನೆಯ ಚಕ್ರವರ್ತಿಯಾದ ಸಗರನ ಚರಿತೆಯ ಕಥೆಯನ್ನು ವಸ್ತುವಾಗಿ ಹೊಂದಿದೆ. ದಾನ ಚಿಂತಾಮಣಿ ಅತ್ತಿಮಬ್ಬೆ ರನ್ನನ ಪೋಷಕಳು. -ಡಾ.ಲಕ್ಷ್ಮೀಕಾಂತ ಸಿ. ಪಂಚಾಳ ಹಳಗನ್ನಡ ಸಾಹಿತ್ಯದ ಮಹತ್ವದ ಚಂಪೂ ಕವಿ ರನ್ನ. ಕನ್ನಡ ಸಾಹಿತ್ಯದಲ್ಲಿ ತನ್ನ ವಿಶಿಷ್ಟವಾದ ಕಾವ್ಯರಚನೆಯ ಶೈಲಿಯಿಂದ ‘ಶಕ್ತಿಕವಿ’ ಎಂದು ಗುರುತಿಸಲ್ಪಟ್ಟಿದ್ದಾನೆ. ಸಂಸ್ಕøತ ಮತ್ತು ಕನ್ನಡ ಎರಡು ಭಾಷೆಗಳಲ್ಲಿ […]

ಅಪ್ಪನೆಂಬ ಆಲ್ರೌಂಡ್ ಮೆಕ್ಯಾನಿಕ್

-ಹೇಮಂತ್ ಎಲ್

ಅಪ್ಪನೆಂಬ ಆಲ್ರೌಂಡ್ ಮೆಕ್ಯಾನಿಕ್
-ಹೇಮಂತ್ ಎಲ್

ಮನೆಯಲ್ಲಿ ಒಬ್ಬನೇ ಇದ್ದ ಬಾಲಕ ಆಲ್ರೌಂಡ್ ಅಪ್ಪನಿಂದ ಭೇಷ್ ಎನ್ನಿಸಿಕೊಳ್ಳುವ ಆಸೆ ನೀಗೀಸಿಕೊಳ್ಳಲು ಟಿವಿ ಕಾಂಪೆÇೀನೆಂಟುಗಳನ್ನು ತೆಗೆದ. ಹೀಟರ್ ಮಾಡಲು ಹೊರಟ. ಎಲ್ಲಾ ಜೋಡಿಸಿದ ಮೇಲೆ ಸ್ವಲ್ಪ ದೂರದಲ್ಲಿಯೇ ನಿಂತು ಸ್ವಿಚ್ಚು ಅದುಮಿದಾಗ “ಢಂ ಢಮಾರ್!” ಕಾಯಿಲ್ ಬ್ಲಾಸ್ಟ್ ಆಗಿ ಮನೆ ತುಂಬಾ ಹೊಗೆ! -ಹೇಮಂತ್ ಎಲ್ ನಾವು ಚಿಕ್ಕ ಮಕ್ಕಳಿದ್ದಾಗ ಅಪ್ಪ ಆಗಾಗ ತಮ್ಮ ಬಾಲ್ಯದ ಕಥೆಯನ್ನು ಹೇಳುತ್ತಿದ್ದರು. ಹತ್ತನೆಯ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು ಮಧುಗಿರಿ ಜಿಲ್ಲೆ, ತವಕದಹಳ್ಳಿಯ ಅಜ್ಜನ ಮನೆಯಲ್ಲಿ ಬೆಳೆದವರು. ಓದಿದ್ದು ಸಿದ್ಧಾರ್ಥ […]

ಮುಟ್ಟು…

-ಕ್ಷಿತಿಜ್ ಬೀದರ್

ಈ ಪ್ರೀತಿ ಕೇವಲ ನಾಟಕೀಯ, ಹೃದಯಪೂರ್ವಕವಾದುದಲ್ಲ ಎಂದೆನಿಸಿತು. ಪ್ರೀತಿ ತೋರಿದಾಗ ಸಂತೋಷವಾಗುತ್ತಿರಲಿಲ್ಲ. ಬೇರೆಯವರ ಜೊತೆ ಕೂಡಿದಾಗ ದುಃಖವೂ ಆಗುತ್ತಿರಲಿಲ್ಲ. ಕೇವಲ ಯಾಂತ್ರಿಕ ಗೊಂಬೆಯಾದೆ. ನನ್ನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲದಂತಾಗಿತ್ತು. ಶಬರಿಮಲೆ ದೇವರ ಪಾದಗಳಿಗೆ ಮುಟ್ಟಿ ಕೃತಾರ್ಥಳಾಗುವುದು ಯಾವಾಗ…? -ಕ್ಷಿತಿಜ್ ಬೀದರ್ ಸದಾ ಚಿಂತಿತಳಾಗಿರುವ ಕಲಾ ತನ್ನ ಸಹೊದ್ಯೋಗಿಗಳೊಂದಿಗೆ ನಗುತ್ತಾ ಕಾಲ ಕಳೆಯುತ್ತಿದ್ದಳಷ್ಟೆ. ಮನದ ನೋವು ಮಾತ್ರ ಯಾರಲ್ಲಿಯೂ ಹಂಚಿಕೊಂಡವಳಲ್ಲಾ. ಇತ್ತೀಚೆಗೆ ಬಹು ಚರ್ಚಿತವಾಗಿರುವ ಶಬರಿ ಮಲೆ ಪ್ರವೇಶವು ಅವಳಲ್ಲಿ ಚೂರು ಆಶಾಭಾವನೆ ಮೂಡಿಸಿದರೂ, ಅದು ತನ್ನ ಬದುಕಿನಲ್ಲಿ […]

ಕ್ಷೌರದ ಕನ್ನಡಿಯಲ್ಲಿ ಕಂಡ ಮುಖ್ಯಮಂತ್ರಿ ಮುಖವಾಡ!

ನಸುನಗುತ್ತಿದ್ದ ಮುಖ್ಯಮಂತ್ರಿಗಳ ಮುಖ ಒಂದು ಕ್ಷಣ ಗಂಭೀರವಾಯ್ತು. ಆದರೆ ಆ ಗಾಂಭೀರ್ಯ ಹೆಚ್ಚು ಹೊತ್ತು ಉಳಿಯಲಿಲ್ಲ. ಈ ಬಾರಿ ನಸುನಗೆ, ಕಿರುನಗೆಯಾಗಿ ಕ್ಷಣಾರ್ಧದಲ್ಲೇ ಅಟ್ಟಹಾಸವಾಗಿ ಬದಲಾಯ್ತು. ಕರಟಕ ದಮನಕರಿಬ್ಬರೂ ನಿಮ್ಹಾನ್ಸ್‍ಗೆ ಕರೆ ಮಾಡುವುದೋ, ಇಲ್ಲಾ ಜಯದೇವಕ್ಕೆ ಕರೆ ಮಾಡುವುದೋ ಎಂಬ ಗೊಂದಲದಲ್ಲಿ ಬಿದ್ದರು! -ಬಾಲಚಂದ್ರ ಬಿ.ಎನ್. ಮುಖ್ಯಮಂತ್ರಿಗಳ ಮೃದುವಾದ ಕೆನ್ನೆಗೆ ಸೇವಕ ದುಬಾರಿ ನೊರೆಯನ್ನು ಉಜ್ಜಿ ಮುಖ ಕ್ಷೌರ ಮಾಡುತ್ತಿದ್ದ. ಅವರ ಮುಖದುದ್ದಗಲಕ್ಕೂ ಕ್ಷೌರಿಕ ಹರಿತವಾದ ಕತ್ತಿ ಲೀಲಾಜಾಲವಾಗಿ ಹರಿದಾಡುತ್ತಿತ್ತು. ಸಿಎಂ ಸಾಹೇಬರು ಬಿಸಿ ನೀರಿನ ಹಿತವಾದ […]

ಕನ್ನಡ ಸೊಗಡಿನ ‘ಸಿನಿಮಾ ಬಂಡಿ’

-ಮುದ್ದುಪ್ರಿಯ

ಕನ್ನಡ ಸೊಗಡಿನ ‘ಸಿನಿಮಾ ಬಂಡಿ’
-ಮುದ್ದುಪ್ರಿಯ

ನೆಟ್‍ಪ್ಲಿಕ್ಸ್‍ನಲ್ಲಿ ಬಿಡುಗಡೆಯಾದ ‘ಸಿನಿಮಾ ಬಂಡಿ‘ (ತೆಲುಗು) ಎರಡು ಕಾರಣಕ್ಕೆ ಕನ್ನಡಿಗರಿಗೂ ಮೆಚ್ಚುಗೆಯಾಗಿದೆ. ಒಂದು: ಕನ್ನಡ ಪದಗಳು ಮಿಶ್ರಿತ ಕೋಲಾರ ಭಾಗದ ತೆಲುಗು ಭಾಷೆಯ ಬಳಕೆ. ಎರಡು: ಇಡೀ ಸಿನಿಮಾದಲ್ಲಿ ಆರಂಭದಿಂದ ಕೊನೆಯವರೆಗೆ ಹರಿದಿರುವ ಪಾತ್ರಗಳ ಮುಗ್ಧತೆ. –ಮುದ್ದುಪ್ರಿಯ ವರನಟ ಡಾ.ರಾಜ್‍ಕುಮಾರ್ ಅವರಲ್ಲಿಗೆ ಒಬ್ಬಾತ ಕಥೆ ಹೇಳಲು ಬಂದ ಪ್ರಸಂಗವನ್ನು ಸಿನಿಮಾ ಬರಹಗಾರರೊಬ್ಬರು ಹಿಂದೊಮ್ಮೆ ನೆನಪಿಸಿದುಂಟು. “ಕಥೆ ಹೇಳಲು ಬಂದವನ ಮಾತುಗಳನ್ನು ಕೊನೆಯವರೆಗೂ ತಾಳ್ಮೆಯಿಂದ ಕೇಳಿದ ಅಣ್ಣಾವ್ರು, ಈ ಕಥೆಯಲ್ಲಿ ಅಭಿನಯಿಸಲು ನನಗೆ ಆಗಲ್ಲ, ಈ ಕಥೆಗೆ ಸೂಕ್ತವಾದವರನ್ನು […]

ಪೌರಾಣಿಕ ಪ್ರತಿಮೆಗಳಿಗೂ ಗ್ಯಾಡ್ಜೆಟ್ಗಳೇ ಪ್ರೀತಿ!

-ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ

ಕಲಬುರಗಿಯ ಯುವ ಕಲಾವಿದ ಡಾ.ಷಾಹಿದ್ ಪಾಶಾ ಅವರ ಕಲಾಕೃತಿಗಳ ರಾಮಾಯಣ–ಮಹಾಭಾರತ ಕಥಾನಕಗಳು ಆಧುನಿಕ ಬದುಕಿನ ಹೊಸ ವಿನ್ಯಾಸಗಳಾಗಿವೆ. -ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ ರಾತ್ರಿ ಹೊತ್ನಲ್ಲಿ ಬಸವಣ್ಣ ದೇವರಗುಡಿಯ ಹಜಾರದಲ್ಲಿ ಅಪ್ಪಟ ಜನಪದ ಶೈಲಿಯ ಹಾಡು-ಮಾತುಕತೆಯ ಹಿನ್ನೆಲೆಯಲ್ಲಿ ಕಿಳ್ಳೇಕ್ಯಾತರು ಪ್ರದರ್ಶಿಸುತ್ತಿದ್ದ ತೊಗಲುಗೊಂಬೆಯಾಟಗಳು ಎಲ್ಲ ಧರ್ಮದ ಜನಪದರನ್ನು ಒಗ್ಗೂಡಿಸುತ್ತಿದ್ದವು. ರಾಮಾಯಣ-ಮಹಾಭಾರತ ದೃಶ್ಯ ಕಥಾನಕಗಳನ್ನು ತಲೆಯ ಮೇಲೆ ಹೊತ್ತುಕೊಂಡು ಊರೂರು ಅಲೆಯುವ ಕಿಳ್ಳೇಕ್ಯಾತರ ಅಭಿವ್ಯಕ್ತಿಯಲ್ಲಿ ಯಾವುದೇ ಮೈಲಿಗೆಯ ವಾಸನೆಯನ್ನು ಅಂದಿನ ಜನಪದರು ಗ್ರಹಿಸುತ್ತಿದ್ದಿಲ್ಲ ಎಂಬುದು ಮಾಸದ ನೆನಪು. ಆದರೆ ಇಂದು ಸೃಜನಶೀಲ ಅಭಿವ್ಯಕ್ತಿ ಸ್ವಾತಂತ್ರ್ಯದ […]

ಬೊಂಬೆ

-ಜಿ.ಪಿ.ಬಸವರಾಜು

ಬೊಂಬೆ
-ಜಿ.ಪಿ.ಬಸವರಾಜು

–ಜಿ.ಪಿ.ಬಸವರಾಜು 1 ಒಂದು ಬೊಂಬೆಯನ್ನು ಹೇಗೂ ಮಾಡಬಹುದು ಮೊದಲು ಕೈ ಕಾಲು ಬೇಡ ಬೆರಳಿಂದಲೂ ಆದೀತು, ಕಣ್ಣು ಕಿವಿ ಹೊಟ್ಟೆ ತುಟಿ ಹಲ್ಲು ಬೇಕಾದ್ದು ಬೇಕಾದಂತೆ ಮಾಡಿ ಜೋಡಿಸಬಹುದು ಆಕಾರಕ್ಕೆ ಮತ್ತೆ ಬಟ್ಟೆಯ ಮಾತು, ಬೊಂಬೆಯೇನೂ ಕೇಳುವುದಿಲ್ಲ, ಬಟ್ಟೆ, ಬೆತ್ತಲು ಎಲ್ಲ ನಿಮ್ಮ ನಿಮ್ಮ ಅರಿವಿನ ಪರಿಧಿ; ಬಟ್ಟೆ, ಆಕಾರ, ಬಣ್ಣ, ನಿಮ್ಮ ಕಣ್ಣಿನ ಬಿಂಬ ಬೊಂಬೆ ಯಾವುದನ್ನೂ ಆಚೆ ತಳ್ಳುವುದಿಲ್ಲ ಇಷ್ಟೆಲ್ಲ ಆದಮೇಲೂ ಬೊಂಬೆಗೆ ಜೀವ- ಬರುವುದು ಮಗು ಮಾತನಾಡಿದಾಗ ಮಗು ನಿಜಕ್ಕೂ ಮಾತನಾಡುತ್ತೆ, ಬೊಂಬೆಗೆ […]

ನಾನು ನಾನಾಗಿಯೇ

ನಂದವನಂ ಚಂದ್ರಶೇಖರನ್

ತಮಿಳು ಮೂಲ: ನಂದವನಂ ಚಂದ್ರಶೇಖರನ್ ಅನುವಾದ: ಮಲರ್ ವಿಳಿ ಕೆ ಒರಗಿಕೊಳ್ಳಲು ನನಗೆ ಒಂದು ತೋಳು ಬೇಕು ಆದರೆ ನಾನು ಯಾರನ್ನೂ ಅವಲಂಬಿಸುವವನಲ್ಲ ಕೈ ಕುಲುಕಿ ಹೊಗಳಲು ನನಗೆ ಒಳ್ಳೆಯ ಕರಗಳು ಬೇಕು ಆದರೆ ನಾನು ಯಾರಿಗೂ ಕೂಲಿಯಾಳಾಗಿರುವವನಲ್ಲ ಹಾರೈಸಲು ನನಗೆ ಒಳ್ಳೆಯ ನುಡಿಗಳು ಬೇಕು ಆದರೆ ನಾನು ಯಾರ ಹಾರೈಕೆಗಾಗಿಯೂ ಕಾದಿರುವವನಲ್ಲ ನನ್ನನ್ನಷ್ಟೇ ನಂಬಿ ನನ್ನ ಪಯಣವನ್ನು ತೊಡಗುವೆ ಆದರೆ ಯಾರ ಭಾವನೆಗಳಲ್ಲೂ ನಾನು ಕಳೆದು ಹೋಗುವವನಲ್ಲ ಸದಾ ನನ್ನಲ್ಲೇ ನನ್ನ ಅರಸುವೆನು ಯಥಾರ್ಥಗಳನ್ನು ಹೊರುತ್ತಲೇ… […]

ಪುಲಿಗೆರೆ ಸೋಮನಾಥನ ‘ಸೋಮೇಶ್ವರ ಶತಕ’

-ಡಾ.ತಿಪ್ಪೇರುದ್ರ ಸಂಡೂರು

ಪುಲಿಗೆರೆ ಸೋಮನಾಥನ ‘ಸೋಮೇಶ್ವರ ಶತಕ’
-ಡಾ.ತಿಪ್ಪೇರುದ್ರ ಸಂಡೂರು

ಮಾನವನ ಬಹಿರಂಗ ಜೀವನದ ನಡೆನುಡಿಯ ಏಳ್ಗೆಗಾಗಿ ಲೋಕ ನೀತಿಯನ್ನು ತಿಳಿಸುವ ಈ ಕೃತಿ ಜನಸಾಮಾನ್ಯರ ನೈತಿಕ ಬದುಕಿಗೆ ದಾರಿದೀಪವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ಜನಾನುರಾಗ ಪಡೆದಿದೆ. -ಡಾ.ತಿಪ್ಪೇರುದ್ರ ಸಂಡೂರು ಮಾನವನ ಜೀವನದ ನಿರ್ವಹಣೆಗೆ ನೀತಿಯ ಅಡಿಗಲ್ಲು ಮುಖ್ಯ. ನೀತಿಯೇ ಅವನ ಬಾಳಿಗೆ ಆಧಾರವಾಗಿದ್ದು, ಲೋಕ ವ್ಯವಹಾರವನ್ನು ನೀತಿಶಾಸ್ತ್ರದ ಮೂಲಕ ತಿಳಿಯಲು ಸಾಹಿತ್ಯವು ಸಹಾಯಕವಾಗಿದೆ. ಕನ್ನಡ ಸಾಹಿತ್ಯದ ವೈವಿಧ್ಯಮಯ ರೂಪಗಳಲ್ಲಿ ‘ಶತಕ’ ಸಾಹಿತ್ಯ ಪ್ರಕಾರವೂ ಒಂದು. ಜನಜೀವನಕ್ಕೆ ಪ್ರಯೋಜನಕಾರಿಯಾದ, ಬೋಧನೆಯೇ ಮುಖ್ಯ ಉದ್ದೇಶವಾಗಿರುವ ವೈಶಿಷ್ಟ್ಯಪೂರ್ಣವಾದ ಸಾಹಿತ್ಯ ಪ್ರಕಾರ ಇದಾಗಿದ್ದು, ಸಮಾಜಕ್ಕೆ […]

ಬರೆದಂತೆ ನಡೆಯಲು ಸಾಧ್ಯವಿಲ್ಲ!

-ಗೊರೂರು ಅನಂತರಾಜು

ಬರೆದಂತೆ ನಡೆಯಲು ಸಾಧ್ಯವಿಲ್ಲ!
-ಗೊರೂರು ಅನಂತರಾಜು

‘ಇಲ್ಲಮ್ಮ ನಾನು ಕಾಲೇಜಿನಲ್ಲಿ ಓದುವಾಗ ಯಾರಿಗೂ ಪ್ರೇಮಪತ್ರ ಬರೆಯಲಿಲ್ಲ. ಆದರೆ ಕಲ್ಪನೆಯ ಕಾಳಿದಾಸ ನಾನೇ. ಕಾವ್ಯ ಮಾತ್ರ ನನ್ನ ಹೆಂಡತಿ, ನಾನೀಗ ಅವಳ ದಾಸ’ ಎಂದೆ. ಮಂಗಳ ನಕ್ಕಳು, ಮಡದಿ ಶಕುಂತಲ ನಗಲಿಲ್ಲ! -ಗೊರೂರು ಅನಂತರಾಜು ‘ನೀವು ಸಾಹಿತಿಯಾಗಿ ಉದ್ದುದ್ದ ಭಾಷಣ ಬಿಗಿದು ಸಮಾಜ ಉದ್ದಾರ ಮಾಡಿದ್ದು ಸಾಕು. ಸಂಜೆ ಬೇಗನೇ ಮನೆಗೆ ಬಂದು ಮಗನಿಗೆ ಆನ್‍ಲೈನ್ ಪಾಠ ಹೇಳಿಕೊಟ್ಟು ಮನೆ ಉದ್ಧಾರ ಮಾಡಿ.,’ ಎಂದು ಮಡದಿ ಮನೋರಮೆ ಹುಕುಂ ಕೊಟ್ಟಳು. ನಾನು ಹೊರಗೆ ಇದ್ದರೂ ಫೋನ್ […]

ಅಲಿಖಿತ

-ಡಾ.ಕೊಳ್ಚಪ್ಪೆ ಗೋವಿಂದ ಭಟ್

ಓದುಗರ ಮತ್ತು ಕತೆಗಾರರ ಬಹುಕಾಲದ ಬೇಡಿಕೆಯಂತೆ ಸಮಾಜಮುಖಿ ಪ್ರತೀ ತಿಂಗಳು ಒಂದು ಸಣ್ಣಕತೆ ಹೊತ್ತು ತರಲಿದೆ. ಹೆಸರಾಂತರ ಜೊತೆಗೆ ಉದಯೋನ್ಮುಖ ಕತೆಗಾರರಿಗೂ ಸಮಾನ ಅವಕಾಶ. ಯಾವ ಮಾಧ್ಯಮದಲ್ಲೂ ಪ್ರಕಟವಾಗದ 2000 ಪದಮಿತಿಯ ಕತೆಗಳನ್ನು ನೀವೂ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ, ಕಿರುಪರಿಚಯ ಇರಲಿ. samajamukhi2017@gmail.com -ಡಾ.ಕೊಳ್ಚಪ್ಪೆ ಗೋವಿಂದ ಭಟ್ ಗುಂಡಣ್ಣ ಶಿವಮೊಗ್ಗದಿಂದ ಬಸ್ ಸ್ಟೇಂಡಿಗೆ ಬಂದಾಗ ಹತ್ತು ಗಂಟೆಯಾಗಿತ್ತು. ಭಾನುವಾರವಾದ್ದರಿಂದ ಬಸ್ಸುಗಳೆಲ್ಲ ಭರ್ತಿಯಾಗಿದ್ದುವು. ಗುಂಡಣ್ಣ ಸೀಟು ಕಾದಿರಿಸಿರಲಿಲ್ಲ. ಅವರಿಗೆ ಅಂತಹ ಅಭ್ಯಾಸವೂ ಇರಲಿಲ್ಲ. ಹಾಗೆಂದು ಅವರು ಆಗಾಗ […]

1 2 3 12