ಡಮರುಗದ ನಾದಮುಂ ಢಣಢಣಮ್ ಎನುತ್ತಿರಲ್…

-ಕಾವ್ಯಶ್ರೀ ಎಚ್.

ಡಮರುಗದ ನಾದಮುಂ ಢಣಢಣಮ್ ಎನುತ್ತಿರಲ್…
-ಕಾವ್ಯಶ್ರೀ ಎಚ್.

ಹರಿಹರ ಕವಿಯ ಬಗ್ಗೆಯೇ ಅನೇಕ ಪವಾಡಗಳು ಕೇಳಿಬಂದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಅವನನ್ನು ಗುರುತಿಸುವುದು ಅವನ ಪ್ರತಿಭಟನೆ, ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಗುಣಗಳಿಗಾಗಿ. ಅದರೊಂದಿಗೆ ರಾಜನಿಷ್ಠೆಯನ್ನು ನಿರಾಕರಿಸಿ ಶಿವಭಕ್ತಿನಿಷ್ಠೆಯನ್ನು ಪಾಲಿಸಿದ್ದಕ್ಕಾಗಿ. ಹರಿಹರನ ರಗಳೆಯನ್ನು ಓದುತ್ತಿದ್ದರೆ ನಿಮ್ಮ ಎದೆಯೊಳಗೊಂದು ಡಮರು ನಿನಾದ ಚಿಮ್ಮಿ ಹೊಮ್ಮುತ್ತಲಿರುತ್ತದೆ ಎಂದರೆ ಉತ್ಪ್ರೇಕ್ಷೆಯಾಗದು. ಅವನ ಭಾಷೆ, ಲಯ, ಭಕ್ತಿಯ ತೀವ್ರತೆ ಅಂತಹದು. ಅವನ ಹೆಸರಿನಲ್ಲೇ ಶಿವನನ್ನು ಹೊತ್ತವನು. ಪೆರೆಯಾಳದೇವ- ಹೆರೆಯಾಳದೇವ-ಹರಿಹರದೇವ ಎಂಬುದು ಹರಿಹರನ ಹೆಸರಿನ ಮೂಲವಾಗಿರಬಹುದೆಂದು ಡಾ.ಕಲಬುರ್ಗಿಯವರು ಹೇಳುತ್ತಾರೆ. ಇದರರ್ಥ ಅರ್ಧಚಂದ್ರನನ್ನು ಧರಿಸಿದವ ಎಂದು. […]

ಕತ್ತಿನಾಚೆ ಈಚೆ ಭುಜಗಳೇ ಇಲ್ಲ…

- ಸುರೇಶ ಎಲ್. ರಾಜಮಾನೆ

ಕತ್ತಿನಾಚೆ ಈಚೆ ಭುಜಗಳೇ ಇಲ್ಲ…
-  ಸುರೇಶ ಎಲ್. ರಾಜಮಾನೆ

ಮೊಂಡಾದ ಕಡ್ಡಿಗಳ ಕಸಬರಿಗೆಯ ಮುಂದೆ ಅವಳು ತನ್ನೆಲ್ಲ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾಳೆ ಮಕ್ರ್ಯೂರಿ ಲೈಟಿನ ಕೆಳಗೆ ಮೈ ಉರಿಯ ತಣ್ಣಗಾಗಿಸಿಕೊಳ್ಳಲು ಪರಿತಪಿಸುತ್ತಿದ್ದಾಳೆ ಬೆವರನ್ನು ಬೆಚ್ಚಗಾಗಿಸಿಕೊಂಡು ಒಂದೇ ಸವನೆ ಒಳಕೋಣೆಯಲಿ ಒದ್ದಾಡುತ್ತಿದ್ದಾಳೆ… ದಿನಸಿ ಅಂಗಡಿಗೆ ಹೋಗಿ ದಿವಸಕ್ಕಾಗುವಷ್ಟು ಅಕ್ಕಿ ಕಾಳುಗಳ ಮೂಟೆ ಹೊತ್ತು ತಂದಳು ಒಲೆಯಲಿ ಕೆಂಡ ನಗುತ್ತಿರುವುದನ್ನು ಗಮನಿಸಿ ಒಂದೆರಡು ದೀರ್ಘ ಉಸಿರನ್ನು ಹೊರಹಾಕಿದಳು ಸಮಾಧಾನದ ಸಾರಿಗೆ ಹಸಿಬಿಸಿ ಅನ್ನ ಬೆರೆತುಕೊಂಡು ಬಾಯಿಗಿಳಿಯಿತು ಭಾರವಾದ ಎದೆಯಲಿ ಬಾಗಿಲಿಗೆ ಚಿಲಕ ಬಿದ್ದಿತು. ಚುಚ್ಚಿದ ಮುಳ್ಳುಗಳು ಅವಳ ಪರವಾಗಿ ಧರಣಿ ಕುಳಿತಿವೆ […]

ಪ್ರೇರಣೆಯಾದ ಚಿನ್ನಿ-ದಾಂಡು

- ಕೆ.ವಿ.ಪರಮೇಶ್

ಪ್ರೇರಣೆಯಾದ ಚಿನ್ನಿ-ದಾಂಡು
- ಕೆ.ವಿ.ಪರಮೇಶ್

ಚಿನ್ನಿ-ದಾಂಡು ಆಟದಲ್ಲಿ ಆಟಗಾರರಿಗೆ ದೈಹಿಕ ಸಾಮಥ್ರ್ಯದೊಂದಿಗೆ ಅಳತೆ ಮೂಲಕ ಅಂಕಿಸಂಖ್ಯೆಯ ಕಲಿಕೆಯೂ ಸಾಧ್ಯ. ಜೊತೆಗೆ ಹೋರಾಟದ ಮನೋಭಾವವೂ ಲಭ್ಯ. ಹಾಗಾಗಿಯೇ ನಮ್ಮ ಪೂರ್ವಿಕರು ಗ್ರಾಮೀಣ ಭಾಗದಲ್ಲಿ ಇಂತಹ ಮಹತ್ವಪೂರ್ಣ ಆಟವನ್ನು ಯುವಕರಿಗೆ ಪರಿಚಯಿಸಿದ್ದಾರೆ. ಪ್ರಸ್ತುತ ಜನಪ್ರಿಯ ಎನಿಸಿರುವ ಹಲವು ಕ್ರೀಡೆಗಳಿಗೆ ನಮ್ಮ ಜನಪದ ಕ್ರೀಡೆಗಳೇ ಪ್ರೇರಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಕಾಲಕ್ರಮೇಣ ಜನಪದ ಕ್ರೀಡೆಗಳ ರೂಪಾಂತರವೇ ಆಧುನಿಕ ಕ್ರೀಡೆ ಎಂದರೂ ಅತಿಶಯೋಕ್ತಿಯಲ್ಲ. ಈ ನಿಟ್ಟಿನಲ್ಲಿ ಪ್ರಧಾನ ಸ್ಥಾನದಲ್ಲಿ ನಿಲ್ಲುವುದು ಚಿನ್ನಿ-ದಾಂಡು. ಯಾವುದೇ ದುಬಾರಿ ವೆಚ್ಚದ ಪರಿಕರಗಳಿಲ್ಲದೆ […]

ಶರೀಫರ ಗೀತೆಗಳಲ್ಲಿ ಸಾಮಾಜಿಕ ತುಡಿತ

- ಡಾ.ಸಂಗಮೇಶ ತಮ್ಮನಗೌಡ್ರ

ಶರೀಫರು ಸಂತರಲ್ಲಿ ಸಂತನಾಗಿ ಮದವನ್ನು ಮೆಟ್ಟಿ ನಿಲ್ಲುವ ಹಾಗೆ ಗುಟ್ಟಿನ ಕಿವಿ ಮಾತುಗಳಂತೆ ತತ್ತ್ವಪದಗಳನ್ನು ರಚಿಸಿದರು. ಆ ಪದಗಳ ಸಾಲುಗಳಲ್ಲಿನ ಸಾಮಾಜಿಕ ತುಡಿತಗಳನ್ನು ಹೆಕ್ಕುವ ಪ್ರಯತ್ನ ಇಲ್ಲಿದೆ. ಬಹುಧರ್ಮ ಬಹುಜನರ ನೆಲೆಯಾದ ಸಮಾಜವು ಸಾಮರಸ್ಯವಿಲ್ಲದೆ ನೆಮ್ಮದಿಯನ್ನು ಕಾಣದು. ನಿತ್ಯ ಬದುಕಿನಲ್ಲಿ ವ್ಯಕ್ತಿ, ವ್ಯಕ್ತಿಗಳ ಹೊಂದಾಣಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ನಡೆಯಬಾರದ್ದೆಲ್ಲಾ ನಡೆದು ಬಿಡುತ್ತವೆ. ಸೂಕ್ಷ್ಮಮತಿತ್ವದಲ್ಲಿ ಆಧ್ಯಾತ್ಮದ ಲೇಪ ಬೆರೆಸಿ ಶಿಶುನಾಳ ಶರೀಫರು ತಮ್ಮ ಗೀತೆಗಳನ್ನು ಹೊಸೆದರು. ಡಾಂಭಿಕಭಕ್ತಿಯ ವಿಡಂಬನೆ ವಿಡಂಬನೆಯು ಒಂದು ಶುದ್ಧ ಸಮಾಜ ನಿರ್ಮಾಣಕ್ಕೆ ಅಸ್ತ್ರವಿದ್ದಂತೆ. ‘ಬೈದು […]

ರಿಷಬ್ ಶೆಟ್ಟಿ

ಸಂದರ್ಶನ: ಎಂ.ಡಿ.ಕವಿತಾ ಗುಣೋದಯ

ರಿಷಬ್ ಶೆಟ್ಟಿ
ಸಂದರ್ಶನ:  ಎಂ.ಡಿ.ಕವಿತಾ ಗುಣೋದಯ

‘ನಿಗೂಢತೆ ತೋರಿಸಿ ಅವಾರ್ಡ್ ಪಡೆವ ಬಯಕೆ ನನಗಿಲ್ಲ!’  -ರಿಷಭ್ ಶೆಟ್ಟಿ ‘ಸರಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ರಾಮಣ್ಣರೈ ಕೊಡುಗೆ’ ಹಲವು ಕಾರಣಗಳಿಂದಾಗಿ ಗಾಂಧೀನಗರದಲ್ಲಿ ಸದ್ದು ಮಾಡುತ್ತಿರುವ ಕನ್ನಡ ಸಿನಿಮಾ. ವಿಜಯದ ಸಿದ್ಧಸೂತ್ರಗಳ ಬೆನ್ನುಹತ್ತಿ ಹೊರಡುವ ಸಿನಿಮಾಮಂದಿಗಿಂತ ಈ ಸಿನಿಮಾ ಭಿನ್ನ. ಕನ್ನಡ ಭಾಷೆ, ಸಂಸ್ಕೃತಿ, ವಿಶೇಷವಾಗಿ ಶಿಕ್ಷಣರಂಗ ಹಾಗೂ ಕನ್ನಡ ಸರಕಾರಿ ಶಾಲೆಯ ದುರಂತಾವಸ್ಥೆಯನ್ನು ವಿಭಿನ್ನ ನೆಲೆಯಲ್ಲಿ ಅನಾವರಣಗೊಳಿಸಿರುವುದು ಈ ಚಿತ್ರದ ವೈಶಿಷ್ಟ್ಯ. ಪರ-ವಿರೋಧ ಅಂಶಗಳ ಕುರಿತು ಚಿತ್ರದ ನಿರ್ದೇಶಕ ರಿಷಭ್ ಶೆಟ್ಟಿ ಅವರು ‘ಸಮಾಜಮುಖಿ’ ಜೊತೆಗೆ ಮುಕ್ತವಾಗಿ […]

ಬದುಕು ಕಟ್ಟಿಕೊಂಡ ರೇವತಿ

-  ತಾರಾನಾಥ್ ಮೇಸ್ತ ಶಿರೂರ

ರೇವತಿ ಅಕ್ಕ ಶ್ರೀದುರ್ಗಾ ಹೆಸರಿನಿಂದ ತಯಾರಿಸುವ ರೊಟ್ಟಿ ಉತ್ಪನ್ನವು ಕರಾವಳಿ ಭಾಗದಲ್ಲಿ ರುಚಿಕರ, ಉತ್ತಮ ಗುಣಮಟ್ಟದ ಕಾರಣದಿಂದ ಮನೆಮಾತಾಗಿದೆ. ಮಹಿಳೆಯೋರ್ವಳು ಮನೆಯಲ್ಲಿಯೇ ಕೋರಿರೊಟ್ಟಿ ತಯಾರಿಸುವ ಕುಟೀರ ಸ್ಥಾಪಿಸಿ, ಸಂಸಾರರಥ ಸಾಗಿಸಲು ಅರ್ಥ ವ್ಯವಸ್ಥೆಯನ್ನು ಗಟ್ಟಿಗೊಳಿಸಿಕೊಂಡು ಸ್ವಾವಲಂಬನೆಯ ಬದುಕು ಸಾಗಿಸುತ್ತ ನಾಗರಿಕ ಸಮಾಜದಲ್ಲಿ ಸ್ಥಿತಿವಂತರಾಗಿ ನೆಲೆಕಂಡಿದ್ದಾರೆ, ಆ ದಿಟ್ಟ ಮಾದರಿ ಮಹಿಳೆಯ ಹೆಸರು ರೇವತಿ ಪೂಜಾರಿ, ಉಡುಪಿ ನಗರದ ಮಠದಬೆಟ್ಟು ವಾರ್ಡಿನಲ್ಲಿ ವಾಸವಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ರೊಟ್ಟಿ ಗೃಹೋದ್ಯಮ ಸ್ಥಾಪಿಸಿ ಸ್ವಉದ್ಯೋಗದಲ್ಲಿ ಯಶಸ್ಸು ಕಂಡಿದ್ದಾರೆ. ‘ಮಹಿಳೆ ಅಬಲೆ […]

ಗಾಂಧಿ ಕರಾಪ್

-  ಬಸವಣ್ಣೆಪ್ಪಕಂಬಾರ

ಗಾಂಧಿ ಕರಾಪ್
-  ಬಸವಣ್ಣೆಪ್ಪಕಂಬಾರ

ಗಾಂಧಿಕರಾಪು ಸುತ್ತಲಿನ ಏಳೆಂಟು ಹಳ್ಳಿಗಳಿಗೆಲ್ಲ ಪ್ರಸಿದ್ಧಿ ಪಡೆದದ್ದು ಮುದುಕಪ್ಪಜ್ಜನ ಪೂರ್ವಜರಿಂದಲೇ.ಯಾಕೆಂದರೆಒಮ್ಮೆ ಬೆಳಗಾವಿಗೆ ಗಾಂಧೀಜಿ ಬರುತ್ತಿರುವ ಸುದ್ದಿ ಗೊತ್ತಾದಕೂಡಲೆ ನಮ್ಮೂರಿನ ಗಾಂಧೀವಾದಿಗಳು, ಸ್ವಾತಂತ್ರ್ಯ ಹೋರಾಟಗಾರರುಅವರನ್ನು ನೋಡಲೆಂದು ಬೆಳಗಾವಿಗೆ ಹೊರಟು ನಿಂತಾಗ ಮುದುಕಪ್ಪಜ್ಜನ ತಾತನೇ ಅಷ್ಟೂ ಜನರಿಗೆಗಾಂಧಿಕರಾಪು ಮಾಡಿತನ್ನದೇಶಸೇವೆ ಮೆರೆದಿದ್ದ. ನಾವು ಸಣ್ಣವರಿದ್ದಾಗ ನಮ್ಮ ಶಾಲೆ ಸೂಟಿ ಬಿಟ್ಟಿತು ಅಂದರೆ, ಮನೆಯ ಹಿರಿಯರು ನಮ್ಮನ್ನ ಬೆಳ್ಳಂ ಬೆಳಿಗ್ಗೆ ಹಿಡಿದುಕೊಂಡು ಹೋಗೊದೇ ಕಟಿಂಗ್ ಶಾಪಿಗೆ. ನಮ್ಮ ತಂದೆಯ ವಾರಿಗೆಯವನು, ನಮ್ಮಪ್ಪನ ಜಿಗರಿ ದೋಸ್ತನು ಹಾಗೂ ಗಾಂಧೀ ಪ್ರೇಮಿಯು ಆಗಿದ್ದ ಮುದುಕಪ್ಪಜ್ಜನಿಗೆ ನಮ್ಮ […]

ನಾನಿರುವೆ… ಕೆಂಪಿರುವೆ !

- ಸಿದ್ಧರಾಮ ಹಿರೇಮಠ

ನಾನಿರುವೆ… ಕೆಂಪಿರುವೆ !
- ಸಿದ್ಧರಾಮ ಹಿರೇಮಠ

ಇತ್ತೀಚೆಗೆ ಮನೆಯಲ್ಲಿ ಸಣ್ಣ ಕೆಂಪಿರುವೆಗಳ ಹಾವಳಿ ಜಾಸ್ತಿಯಾಗಿತ್ತು. ಎಲ್ಲಿ ಸ್ವಲ್ಪ ಆಹಾರ ಪದಾರ್ಥ ಚೆಲ್ಲಿದರೂ ಯಾವ ಮಾಯೆಯೆಂದಲೋ ಕರೆಯದೇ ಬರುವ ಅತಿಥಿಗಳಂತೆ ಹಾಜರಾಗಿಬಿಡುತ್ತಿದ್ದವು. ತಮ್ಮ ಪಾಡಿಗೆ ತಾವು ಆಹಾರ ತಿಂದುಕೊಂಡು ಹೋದರೆ ಸರಿ, ಆದರೆ ಕೆಲವೊಮ್ಮೆ ಉರಿಯುವ ರೀತಿಯಲ್ಲಿ  ಚೊಟ್ ಎಂದು ಕಚ್ಚಿ ತಮ್ಮ ಶೌರ್ಯ ತೋರಿಸಿಬಿಡುತ್ತಿದ್ದವು. ಕಂಪೌಂಡಿನಲ್ಲಿಯೇ ಪುಟ್ಟ ಗಿಡಗಳಿರುವುದರಿಂದಲೂ, ಮಣ್ಣಿನೊಳಗೆ ಇವು ಸೇರಿಕೊಂಡಿರುವುದರಿಂದಲೂ ಇವುಗಳ ಸಂಖ್ಯೆ ಹೆಚ್ಚಾಗಿಬಿಟ್ಟಿದೆಯೇನೋ ಅನಿಸುತ್ತಿದೆ. ನಾನು ಹೊರಗೆ ಮೆಟ್ಟಿಲಿಳಿದು ಸ್ವಲ್ಪ ಹೊತ್ತು ನಿಂತರೆ ಸಾಕು ಅದೆಲ್ಲಿಂದಲೋ ಪಾದವನ್ನೇರಿ ನಾನಿರುವೆ ಎಂಬಂತೆ […]

ಮತ್ತೆ ಬಾರದ ಆ ದಿನಗಳು…

- ಶಿ.ಕಾ.ಬಡಿಗೇರ

ಮತ್ತೆ ಬಾರದ ಆ ದಿನಗಳು…
- ಶಿ.ಕಾ.ಬಡಿಗೇರ

‘ಐರಾವಣಮಹಿರಾವಣ’ ಎಂಬಬಯಲಾಟನನ್ನಮನದಆಳದಲ್ಲಿಇಂದಿಗೂಬೇರೂರಿದೆ. ಅದರಲ್ಲಿಯಒಂದುಪಾತ್ರಹನುಮಂತ. ಆಪಾತ್ರಧಾರಿ ಹುಲುಗಪ್ಪ ಆಟದಲ್ಲಿ ಮಂಗವೇ ಆಗಿಬಿಡುತ್ತಿದ್ದ. ಅವನಬಾಲ, ಮರದಲ್ಲಿನಹಣ್ಣು ಕಿತ್ತುವಪರಿ   ಹಾಗೂ ಜಿಗಿಯುವರೀತಿ ನನ್ನೊಳಗೆ ಸಂಚಲನ ಮೂಡಿಸುತ್ತಿತ್ತು.  ನಮ್ಮೂರು ಕೊಪ್ಪಳ ನಗರದ ವಾಯವ್ಯ ದಿಕ್ಕಿಗೆ ಕೂಗಳತೆಯ ಅಂತರದಲ್ಲಿದೆ. ಮೊದಮೊದಲು ಎತ್ತಿನಹಟ್ಟಿ, ಯತ್ತಿನಹಟ್ಟಿ ಎಂದೇ ಜನಜನಿತ. ಈಗೀಗ ಎಲ್ಲರ       ಬಾಯಲ್ಲೂ ‘ಯತ್ನಟ್ಟಿ ‘ ಎಂಬ ಸಂಬೋಧನೆ.  ಆರಕ್ಷರಗಳಿಂದ ಮೂರಕ್ಷರಕ್ಕೆ ತಂದ ಕೀರ್ತಿ ಈಗಿನ ಹೊಸ ಪೀಳಿಗೆಯದು. ಪ್ರಾಚೀನತೆಯ ಕುರುಹು ಊರ ಮುಂದಿನ ಹನುಮಪ್ಪನ ಗುಡಿ ಈಗಲೂ ಸುಭದ್ರವಾಗಿದೆ. ನನ್ನ ಬಾಲ್ಯದ ದಿನಗಳಲ್ಲಿ […]

ಜೈಮಿನಿ ಭಾರತದಲ್ಲಿ ರಾಮಾಯಣ

- ಆರ್.ತಾರಿಣಿ ಶುಭದಾಯಿನಿ

ಜೈಮಿನಿ ಭಾರತದಲ್ಲಿ ರಾಮಾಯಣ
- ಆರ್.ತಾರಿಣಿ ಶುಭದಾಯಿನಿ

ಮರದೊಳಗೊಂದು ಮರಹುಟ್ಟುವರೀತಿಮಹಾಭಾರತದೊಳಗೆ ರಾಮಾಯಣ ಹುಟ್ಟುವುದು ಲಕ್ಷ್ಮೀಶನಜೈಮಿನಿ ಭಾರತದಲ್ಲಿ. ಜೈಮಿನಿ ಭಾರತಮಧ್ಯಕಾಲದಒಂದುಜನಪ್ರಿಯಕೃತಿ. ‘ಕೇಳುವ’ಪರಂಪರೆಯಲ್ಲಿಬಂದಕಾವ್ಯಇದು. ಹಾಗಾಗಿ ಇದಕ್ಕೆಜನಮನ್ನಣೆ. ಕಥೆಗಳ ಮಹಾಸರಿತ್ಸಾಗರದಂತೆಇರುವಇದರಲ್ಲಿನ ಕಥೆಗಳನ್ನು ಎಷ್ಟು ಓದಿದರೂ, ಎಷ್ಟು ಕೇಳಿದರೂ ತಾಜಾತನ ಮಾಸದೇ ಉಳಿದಿರುವುದಕ್ಕೆ ಅದರೊಳಗಿನ ಜನಪರ ಮೌಲ್ಯಗಳೇ ಕಾರಣಎನ್ನಬಹುದು. ಈ ಕೃತಿಯಲ್ಲಿ ಬರೀ ಯುದ್ಧಗಳೇ! ಆದರೆ ಅವು ಮನುಷ್ಯನಅರಿವನ್ನು ಕಂಡುಕೊಳ್ಳಲು ಮಾಡುವ ಯತ್ನಗಳು. ಇದಕ್ಕೆ ಮೀರಿದೈವವು ಮನುಷ್ಯ ಪ್ರಯತ್ನಕ್ಕೆಜೊತೆ ನೀಡದಿದ್ದರೆಎಲ್ಲವೂ ವ್ಯರ್ಥಎನ್ನುವ ಭಕ್ತಿಯ ನಂಬಿಕೆ ಇದೆ. ಜನಪದರುತಮ್ಮಕಥೆ, ಹಾಡುಗಳಲ್ಲಿ ಯುದ್ಧವನ್ನುಇಷ್ಟಪಡುವುದಿಲ್ಲ. ಜೀವಕಾರುಣ್ಯವಿರುವ ಸಂಗತಿಗಳೇ ಅವರಿಗೆ ಪ್ರೀತಿ. ಹಾಗೆಂದೇಜೈಮಿನಿ ಜನಪದರಿಗೆಇಷ್ಟದಕಾವ್ಯ ಎನಿಸಿರಲಿಕ್ಕೆ ಸಾಕು. […]

1 6 7 8