ಪೆಗಸಸ್: ಭಾರತದ ವಾಟರ್ ಗೇಟ್ ಪ್ರಕರಣ ಮೋದಿಯವರಿಗೆ ಮುಳುವಾಗಲಿದೆಯೇ?

-ಡಿ.ಉಮಾಪತಿ

ಪೆಗಸಸ್: ಭಾರತದ ವಾಟರ್ ಗೇಟ್ ಪ್ರಕರಣ ಮೋದಿಯವರಿಗೆ ಮುಳುವಾಗಲಿದೆಯೇ?
-ಡಿ.ಉಮಾಪತಿ

–ಡಿ.ಉಮಾಪತಿ ಇಸ್ರೇಲಿ ಮೂಲದ ಎನ್.ಎಸ್.ಒ. ಸಂಸ್ಥೆಯ ಉತ್ಪನ್ನ ಈ ಪೆಗಸಸ್. ಅತ್ಯಾಧುನಿಕ ಬೇಹುಗಾರಿಕೆಯ ಈ ತಂತ್ರಾಂಶವನ್ನು ಶಸ್ತ್ರಾಸ್ತ್ರ ಎಂದು ಖುದ್ದು ಇಸ್ರೇಲ್ ಸರ್ಕಾರವೇ ಕರೆದಿದೆ. ಭಾರತದಲ್ಲಿ ಪೆಗಸಸ್ ದಾಳಿ ಈ ಹಿಂದೆ 2019ರ ನವೆಂಬರ್ ನಲ್ಲಿ ಸುದ್ದಿಗೆ ಬಂದಿತ್ತು. ಈ ತಂತ್ರಾಂಶವನ್ನು ತಾನು ಖರೀದಿ ಮಾಡಿಯೇ ಇಲ್ಲ ಎಂದು ಮೋದಿ ಸರ್ಕಾರ ಅಂದು ಗಟ್ಟಿಯಾಗಿ ನಿರಾಕರಿಸಿರಲಿಲ್ಲ. ಇಂದು ಕೂಡ ಅಲ್ಲಗಳೆದಿಲ್ಲ! ಮೋದಿ ಸರ್ಕಾರ ಮತ್ತು ಗೋದಿ ಮೀಡಿಯಾ ಒಟ್ಟಾಗಿ ಕೆಳಕ್ಕೆ ತುಳಿದಷ್ಟೂ ಮೇಲೆ ಚಿಮ್ಮಿತೊಡಗಿದೆ ಪೆಗಸಸ್ ಬೇಹುಗಾರಿಕೆ […]

ಬದುಕು ಮುಗಿಸಿದ ಕನ್ನಡದ ಮೊದಲ ಬಾಂಡ್‍ಗರ್ಲ್ ಜಯಂತಿ

-ಎನ್.ಎಸ್.ಶ್ರೀಧರ ಮೂರ್ತಿ

ಬದುಕು ಮುಗಿಸಿದ ಕನ್ನಡದ ಮೊದಲ ಬಾಂಡ್‍ಗರ್ಲ್ ಜಯಂತಿ
-ಎನ್.ಎಸ್.ಶ್ರೀಧರ ಮೂರ್ತಿ

–ಎನ್.ಎಸ್.ಶ್ರೀಧರ ಮೂರ್ತಿ ಜಯಂತಿ ಎಂದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬರೀ ಕಲಾವಿದೆ ಮಾತ್ರವಲ್ಲ, ಒಂದು ಅಧ್ಯಾಯವೇ ಸರಿ. ರಾಜ್‍ಕುಮಾರ್ ಅವರನ್ನು ಜಯಂತಿಯವರೊಬ್ಬರೇ ‘ರಾಜ್’ ಅಂತ ಕರೆಯುತ್ತಾ ಇದ್ದಿದ್ದು. ಈಗ ಈ ಅಧ್ಯಾಯ ಮುಗಿದಿದೆ. ಜಯಂತಿಯವರನ್ನು ನೋಡಿದರೆ ಯಾರಿಗೂ ದೊಡ್ಡ ಸ್ಟಾರ್ ಎನ್ನಿಸುತ್ತಲೇ ಇರಲಿಲ್ಲ. ಮಾತು ತೀರಾ ಸರಳ, ಸ್ವಭಾವವನ್ನು ಬೇಕಿದ್ದರೆ ಮುಗ್ಧ ಎಂದೇ ಕರೆಯ ಬಹುದು. ಮನಸ್ಸಿನಲ್ಲಿ ಏನೂ ಮುಚ್ಚಿಟ್ಟು ಕೊಳ್ಳೋದು ಅವರ ಸ್ವಭಾವದಲ್ಲಿಯೇ ಇರಲಿಲ್ಲ. ನಾನು ಅವರನ್ನು ಪ್ರತಿ ಸಲ ಭೇಟಿ ಮಾಡಿದಾಗಲೂ ಬಡಬಡನೇ ಮಾತನಾಡುತ್ತಿದ್ದರು. […]

ಯಡಿಯೂರಪ್ಪ ಎಂಬ ಜನನಾಯಕನ ಪತನ ಪರ್ವ!

-ಎನ್.ರವಿಕುಮಾರ್ ಟೆಲೆಕ್ಸ್

ಯಡಿಯೂರಪ್ಪ ಎಂಬ ಜನನಾಯಕನ ಪತನ ಪರ್ವ!
-ಎನ್.ರವಿಕುಮಾರ್ ಟೆಲೆಕ್ಸ್

–ಎನ್.ರವಿಕುಮಾರ್ ಟೆಲೆಕ್ಸ್ ಕುಟುಂಬ ವ್ಯಾಮೋಹ, ಭ್ರಷ್ಟಾಚಾರದ ಆರೋಪಗಳಿಗೆ ತುತ್ತಾಗದೆ ಹೋಗಿದ್ದಿದ್ದರೆ ಯಡಿಯೂರಪ್ಪನವರು ಈ ರಾಜ್ಯ ಕಂಡ ಧೀಮಂತ ನಾಯಕರ ಸಾಲಿನಲ್ಲಿ ಕಂಗೊಳಿಸುತ್ತಿದ್ದರು. ತಾವೊಬ್ಬ ಮಾಸ್ ಲೀಡರ್ ಎಂಬ ಹೆಗ್ಗಳಿಕೆಗೆ ಚಿನ್ನದ ಗರಿ ಮೂಡಿರುತ್ತಿತ್ತು. ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದರು. ಸುದೀರ್ಘಕಾಲ ವಿರೋಧಪಕ್ಷದಲ್ಲಿದ್ದು ಹೋರಾಡಿಕೊಂಡು ಬಂದಿದ್ದ ಯಡಿಯೂರಪ್ಪನವರಿಗೆ ಮೊದಲ ಬಾರಿಗೆ ಅಧಿಕಾರ ದಕ್ಕಿದ ಸಂದರ್ಭವದು. ಆಂಗ್ಲ ದಿನಪತ್ರಿಕೆಯ ವರದಿಗಾರರೊಬ್ಬರು ಅವರ ಸಂದರ್ಶನ ನಡೆಸಿದ್ದರು. ಸಂದರ್ಶನದ ಭಾಗವಾಗಿ ವರದಿಗಾರ ಹಿಂದೂತ್ವ ಮತ್ತು ರಾಮಮಂದಿರ ಸಂಬಂಧಿತ ಪ್ರಶ್ನೆಯನ್ನು ಕೇಳಿದರು. ಪ್ರಶ್ನೆ ಮುಗಿಯುವುದರೊಳಗೆ ಅದನ್ನು ತುಂಡರಿಸಿದ […]

ಅಫ್ಗಾನಿಸ್ತಾನ: ತಾಲಿಬಾನ್ ತೆಕ್ಕೆಗೆ ಮರಳುವುದೇ?

ಸುಧೀಂದ್ರ ಬುಧ್ಯ

ಅಫ್ಗಾನಿಸ್ತಾನ:  ತಾಲಿಬಾನ್ ತೆಕ್ಕೆಗೆ  ಮರಳುವುದೇ?
ಸುಧೀಂದ್ರ ಬುಧ್ಯ

ಸುಧೀಂದ್ರ ಬುಧ್ಯ ಅಫ್ಗಾನಿಸ್ತಾನದಲ್ಲಿ ಸಂಘರ್ಷ ಹೊಸ ವಿದ್ಯಮಾನವೇನಲ್ಲ. ಅರಾಜಕತೆ ಮತ್ತು ಅಸ್ಥಿರತೆ ಆ ದೇಶದ ಮುಖ್ಯ ಚಹರೆ. ಅದಕ್ಕೆ ಕಾರಣಗಳು ಹಲವು. ಅಫ್ಗಾನಿಸ್ತಾನ ಮತ್ತೊಮ್ಮೆ ಪ್ರಮುಖ ತಿರುವಿನ ಎದುರು ನಿಂತಿದೆ. ಆ ರಾಷ್ಟ್ರದ ಭವಿಷ್ಯ ಹೇಗಿದ್ದೀತು ಎಂಬ ಪ್ರಶ್ನೆಗೆ ನಾಲ್ಕಾರು ಉತ್ತರಗಳು ಕೇಳಿ ಬರುತ್ತಿವೆ. ಆ ಕುರಿತು ಅಲ್ಲಿನ ಸ್ಥಳೀಯರಿಗೂ ಸ್ಪಷ್ಟತೆಯಿಲ್ಲ. ಹಿರಿಯಣ್ಣ ಅಮೆರಿಕಕ್ಕೆ ತಾನು ಅಲ್ಲಿಂದ ಕಾಲ್ತೆಗೆದರೆ ಸಾಕಾಗಿದೆ. ನೆರೆಹೊರೆಯ ರಾಷ್ಟ್ರಗಳು ಗೊಂದಲಕ್ಕೀಡಾಗಿವೆ. ದಿನೇ ದಿನೇ ಸಂಘರ್ಷಗಳು ಹೆಚ್ಚುತ್ತಿವೆ. ಅಮೆರಿಕದ ಸೇನೆ ತೆರವು ಮಾಡಿದ ಸ್ಥಳಗಳಲ್ಲಿ […]

ಸಮಾಜದಲ್ಲಿ ಶೂನ್ಯ ಸೃಷ್ಟಿಸಿದ ಎಚ್.ಎಸ್.ದೊರೆಸ್ವಾಮಿ ಸಾವು!

-ಎ.ಟಿ.ರಾಮಸ್ವಾಮಿ

ಅವರ ಜ್ಞಾಪಕಶಕ್ತಿ, ದೀರ್ಘಾಯುಷ್ಯ ಮತ್ತು ಆರೋಗ್ಯದ ಬಗ್ಗೆ ನನಗೆ ಸದಾ ಕುತೂಹಲ ವಿತ್ತು. ಹಲವು ಬಾರಿ ಕೇಳಿದ್ದೂ ಇದೆ. ಅದಕ್ಕವರು ನಕ್ಕು ಸುಮ್ಮನಾಗು ತ್ತಿದ್ದರು. ಆದರೆ ನಾನು ಬಿಡದೆ ಒತ್ತಾಯಿಸಿದಾಗ, `ನನ್ನ ಆರೋಗ್ಯದ ಗುಟ್ಟು ಬಡತನ ಮತ್ತು ಹಸಿವು‘ ಎಂದಿದ್ದರು! -ಎ.ಟಿ.ರಾಮಸ್ವಾಮಿ ಅಪ್ಪಟ ದೇಶಪ್ರೇಮಿಯಾಗಿದ್ದ ಶತಾಯುಷಿ ಡಾ.ಹೆಚ್.ಎಸ್.ದೊರೆಸ್ವಾಮಿ ಅವರಂತಹವರು ನಾಡಿನಲ್ಲಿ ಮತ್ತೊಬ್ಬ ಹುಟ್ಟಿಬರುವುದು ಅನುಮಾನ. ಸ್ವಾರ್ಥರಹಿತ, ಸದಾ ಶೋಷಿತರ ಬಗ್ಗೆ ಮಿಡಿವಮನ, ಸಮಾಜದ ಸಮಸ್ಯೆಗಳತ್ತವೇ ಸದಾ ಚಿಂತನೆ. ಇಳಿವಯಸ್ಸಿನಲ್ಲಿಯೂ ಅಚ್ಚಳಿಯದ ಹೋರಾಟಕ್ಕೆ ಸ್ಫೂರ್ತಿ. ಸರ್ವರಿಗೂ ಅವರು ಮಾರ್ಗದರ್ಶಕರು. […]

ಗುಡುಗಿ ಹಾಡಿದ ಕವಿ ಸಿದ್ಧಲಿಂಗಯ್ಯ

-ಅಗ್ರಹಾರ ಕೃಷ್ಣಮೂರ್ತಿ

ಕೊಳೆಗೇರಿಯಲ್ಲಿ ಬೆಳೆದು ಪಕ್ಕದಲ್ಲೇ ಸ್ಮಶಾನದೊಳಗಿದ್ದ ಲೈಟ್ ಕಂಬದ ಬೆಳಕಿನಲ್ಲಿ ಯಾರದ್ದೋ ಗೋರಿಯ ಮೇಲೆ ಕುಳಿತು ತನ್ನ ಶಾಲೆಯ ಪಾಠಗಳನ್ನು ಓದಿಕೊಳ್ಳುತ್ತಿದ್ದ ಅಸ್ಪøಶ್ಯ ಜಾತಿಯ ಹುಡುಗನೊಬ್ಬ ತೀರಿಕೊಂಡು ನಗರದ ಅತ್ಯಂತ ಪ್ರತಿಷ್ಠಿತ ಸ್ಮಶಾನದೊಳಕ್ಕೆ ಪ್ರವೇಶ ಪಡೆದದ್ದು ಒಂದು ರೋಚಕ ಇತಿಹಾಸ. ಈ ಇತಿಹಾಸ ಪುರುಷ ಕವಿ ಸಿದ್ದಲಿಂಗಯ್ಯ. -ಅಗ್ರಹಾರ ಕೃಷ್ಣಮೂರ್ತಿ ಒಮ್ಮೆ ಕಾಳೇಗೌಡ ನಾಗವಾರರ ಜೊತೆ ನಾವಿಬ್ಬರು ರಿಪ್ಪನ್ ಪೇಟೆ ಬಳಿಯ ಹುಂಚದ ಜೈನ ಬಸದಿಯ ಒಳಕ್ಕೆ ಪ್ರವೇಶಿಸುವಾಗ ಸಿದ್ದಲಿಂಗಯ್ಯ ಇದ್ದಕ್ಕಿದ್ದಂತೆ ಅಲ್ಲಿದ್ದ ವ್ಯಕ್ತಿಯ ಬಳಿ, “ನೋಡಿ ನಮ್ಮಲ್ಲಿ […]

ಕೋವಿಡ್ ಮೂರನೇ ಅಲೆ ಅಪಾಯ ಎದುರಿಸಲು ಏಳು ಉಪಾಯ!

-ಡಾ.ದೇವಿಪ್ರಸಾದ್ ಶೆಟ್ಟಿ

ಲಸಿಕೆ ನೀಡುವ ಮೂಲಕ ಈ ಮಹಾಮಾರಿಯ ಭೀಕರತೆಯನ್ನು ಕೇವಲ ಸಾಮಾನ್ಯ ಶೀತವಾಗಿ ಪರಿವರ್ತಿಸುವ ಅವಕಾಶವೊಂದು ನಮ್ಮ ಬಳಿ ಇದೆ. ಇದು ಮುಂಬರುವ ಕೋವಿಡ್ ಮೂರನೇ ಅಲೆಯ ಅಪಾಯವನ್ನು ಎದುರಿಸುವ ಉಪಾಯ. -ಡಾ.ದೇವಿಪ್ರಸಾದ್ ಶೆಟ್ಟಿ ಕೋವಿಡ್ ಲಸಿಕೆ ಪಡೆದ ಕೊರೋನಾ ರೋಗಿಗಳಲ್ಲಿ ಸಾಮಾನ್ಯ ಶೀತಕ್ಕಿಂತಲೂ ತುಸು ಹೆಚ್ಚಿನ ರೋಗಲಕ್ಷಣಗಳು ಕಂಡುಬರುತ್ತವೆ ಹೊರತು ಅವರು ತೀವ್ರ ನಿಗಾ ಘಟಕ ಸೇರುವ ಪ್ರಮೇಯವಿರುವುದಿಲ್ಲ. ಹಾಗಾಗಿಯೇ ಈಗಾಗಲೇ ಕೆಲವು ರಾಷ್ಟ್ರಗಳಲ್ಲಿ ಮೂರನೆಯ ಅಲೆಯು ಎರಡನೆಯ ಅಲೆಗಿಂತಲೂ ಭೀಕರವಾಗಿದ್ದರೂ, ಲಸಿಕೆಯು ರಕ್ಷಣೆ ಒದಗಿಸುತ್ತದೆ ಎಂಬುದು […]

ಅಧಿಕಾರಿಗಳ ರಂಪಾಟ ಹಳ್ಳ ಹಿಡಿದ ಆಡಳಿತ!

-ಪದ್ಮರಾಜ ದಂಡಾವತಿ

ಸರ್ಕಾರದಲ್ಲಿ ಇದ್ದವರ ಮರ್ಜಿಯಂತೆ ನಡೆಯುವವರಿಗೆ ಎಲ್ಲಿಗೆ ಬೇಕೋ ಅಲ್ಲಿಗೆ ‘ಪೋಸ್ಟಿಂಗ್’ ಸಿಗುತ್ತದೆ. ಯಾರು ಕರ್ತವ್ಯ ನಿಷ್ಠರಾಗಿರುತ್ತಾರೋ ಅಂಥವರನ್ನು ಕೆಲಸಕ್ಕೆ ಬಾರದ ಹುದ್ದೆಗಳಲ್ಲಿ ‘ಪಾರ್ಕಿಂಗ್’ ಮಾಡಲಾಗುತ್ತದೆ! ಹೀಗಿರುವಾಗ ಉತ್ತಮ ಆಡಳಿತ ನಿರೀಕ್ಷಿಸುವುದು ಹೇಗೆ? ಯಾರಿಂದ? -ಪದ್ಮರಾಜ ದಂಡಾವತಿ ಇದು ಮೊದಲ ಸಲವಲ್ಲ. ಇವರು ಯಾವುದೋ ಕೆಳಹಂತದ ಅಧಿಕಾರಿಗಳೂ ಅಲ್ಲ. ಒಬ್ಬರು ಒಂದು ಜಿಲ್ಲೆಯ ಮುಖ್ಯಸ್ಥರು. ಇನ್ನೊಬ್ಬರು ಒಂದು ಸ್ಥಳೀಯ ಆಡಳಿತ ಸಂಸ್ಥೆಯ ಮುಖ್ಯಸ್ಥರು. ಇಬ್ಬರೂ ಭಾರತೀಯ ಆಡಳಿತ ಸೇವೆಗೆ ಸೇರಿದವರು, ಇಬ್ಬರೂ ಬೀದಿಗೆ ಬಂದು ಜಗಳವಾಡುತ್ತಾರೆ. ಪರಸ್ಪರರ ವಿರುದ್ಧ […]

ಕೋವಿದ್ ಸಂದರ್ಭದಲ್ಲಿ ಸಿಖ್ ಸಮುದಾಯದ ಸೇವಾ ಮನೋಭಾವ

ಸಿಖ್ ಧರ್ಮದಲ್ಲಿ ಜನಸೇವೆಯಲ್ಲಿ ತೊಡಗುವವರು ಸನ್ಯಾಸಿಗಳಲ್ಲ, ಮಹಾ ಸಂತರೂ ಅಲ್ಲ; ಆದರೆ ಜನಸಾಮಾನ್ಯರ ನಡುವೆ ಬದುಕುವ ಶ್ರೀಸಾಮಾನ್ಯರೇ ಈ ಸೇವೆಯಲ್ಲಿ ತೊಡಗಿರುತ್ತಾರೆ. ಗುರುವಿನ ಸೇವೆ ಸಲ್ಲಿಸುವುದಕ್ಕಾಗಿ ಸಿಖ್ ಧರ್ಮದಲ್ಲಿ ವಿಶೇಷ ಸ್ಥಾನಮಾನಗಳೇನೂ ಇರುವುದಿಲ್ಲ. ಸಾಮಾನ್ಯ ಜನರಿಗೆ, ಅನ್ಯ ಧರ್ಮದವರಿಗೂ ಸಹ ಸಲ್ಲಿಸುವ ಸೇವೆಯ ಉನ್ನತ ಹಂತವನ್ನು ಗುರುಸೇವೆಯಲ್ಲಿ ಕಾಣಲಾಗುತ್ತದೆ. -ದೀಪಂಕರ್ ಗುಪ್ತಾ ಅನುವಾದ: ನಾ.ದಿವಾಕರ ಸಿಖ್ಖರನ್ನು ನೆನೆದ ಕೂಡಲೇ ನಮಗೆ ನೆನಪಾಗುವುದು ಹಾಸ್ಯದ ಹೊನಲಿನ ಕ್ಷಣಗಳು, ಎದೆಯ ಮೇಲೆ ಮಿಂಚುವ ಶೌರ್ಯ ಪದಕಗಳು ಅಥವಾ ಒಂದು ಬಾರ್. […]

ಅಳತೆಗೆ ಸಿಗದ ಅಲೆ ಮತ್ತು ತಲೆಯ ಲೆಕ್ಕ!

-ರಾಜಾರಾಂ ತಲ್ಲೂರು

ಇನ್ನೊಂದು ಕೊವಿಡ್ ಅಲೆಗೆ ತಯಾರಿ ಎಂದರೆ ಅದಕ್ಕೆ ಸರ್ಕಾರಿ ವ್ಯವಸ್ಥೆ ಸಡಗರದಿಂದಲೇ ಸಜ್ಜುಗೊಳ್ಳುತ್ತದೆ. ತಯಾರಿ ಎಂದರೆ ಖರೀದಿಗಳೆಂಬುದು ಈ ಸಡಗರಕ್ಕೆ ಕಾರಣ. ಅದಕ್ಕಾಗಿ ಕಾದುಕೊಂಡಿರುವವರಿಗೆ ಇಂತಹ ಅವಕಾಶ ಒಂದು ಹಬ್ಬ! ಆದರೆ ನಿಜಕ್ಕೂ ಈ ಅಲೆಗಳು ಅಸ್ತಿತ್ವದಲ್ಲಿ ಇವೆಯೇ? -ರಾಜಾರಾಂ ತಲ್ಲೂರು ಕುಂದಾಪುರದ ಕಡೆ ಒಂದು ಮಾತಿದೆ. `ಲೆಕ್ಕ ಪಕ್ಕ, ಪಡಾವಿಗೆ ಸಿಕ್ಕ’ ಹೊರನೋಟಕ್ಕೆ ಭಾರೀ ಲೆಕ್ಕಾಚಾರ ಎಂದು ತೋರಿಬಂದರೂ, ವಾಸ್ತವದಲ್ಲಿ ಟೊಳ್ಳಾಗಿರುವ ಲೆಕ್ಕಾಚಾರಕ್ಕೆ ವ್ಯಂಗ್ಯವಾಗಿ ಹೇಳುವ ಮಾತಿದು. ಕೊರೊನಾ ಜಗನ್ಮಾರಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಲೆಕ್ಕಾಚಾರಗಳು […]

ಹಳೆಯ ಕಪ್ಪು ಫಂಗಸ್ಗೆ ಹೊಸ ಕೋವಿಡ್ ಸಂಗ!

-ಡಾ.ವಸುಂಧರಾ ಭೂಪತಿ

ಬ್ಲಾಕ್ ಫಂಗಸ್ ಅತೀ ವಿರಳ ಶಿಲೀಂಧ್ರ ಸೋಂಕು. ಕಾರಣಾತರಗಳಿಂದ ನಮ್ಮ ದೇಹದಲ್ಲಿ ಸೇರಿ ದೇಹದ ರಕ್ಷಣಾ ವ್ಯವಸ್ಥೆ ಕುಸಿದಾಗ ಇದು ಸೈನಸ್, ಶ್ವಾಸಕೋಶ, ಮೆದುಳುಗಳಲ್ಲಿ ಮಾರಣಾಂತಿಕ ಸೋಂಕು ಉಂಟು ಮಾಡುತ್ತದೆ. ಇದು ಹೊಸದಾಗಿ ಕಾಣಿಸಿಕೊಂಡ ಸೋಂಕಲ್ಲ. ಹಿಂದೆಲ್ಲಾ ವರ್ಷಕ್ಕೆ ಕೆಲವೇ ಕೆಲವು ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದವು. ಈಗ ಕೋವಿಡ್ ಕಾರಣದಿಂದ ಹೆಚ್ಚು ಬಾಧಿಸತೊಡಗಿದೆ. -ಡಾ.ವಸುಂಧರಾ ಭೂಪತಿ ಈಗ ದೇಶದಲ್ಲಿ ಕಂಡುಬಂದಿರುವ ಕೊರೊನಾ ವೈರಸ್ಸಿನ ಎರಡನೇ ಅಲೆಯು ಕಳೆದ ವರ್ಷದ ಮೊದಲನೆಯ ಅಲೆಗಿಂತ ಹೆಚ್ಚಿನ ಹಾನಿಯನ್ನುಂಟುಮಾಡಿದೆ. ಎರಡನೇ ಅಲೆಯಲ್ಲಿ ರೂಪಾಂತರಿ […]

ಕೋವಿಡ್ ಎರಡನೇ ಅಲೆಯ ಪಾಠಗಳು

-ಡಾ.ಬಿ.ಆರ್.ಮಂಜುನಾಥ್

ಎರಡು ಅಥವಾ ಮೂರನೇ ಅಲೆಗೆ ಸರಿಯಾಗಿ ತಯಾರಾಗಬೇಕೆಂದರೆ ಆಡಳಿತ ಸಂಪೂರ್ಣ ಪಾರದರ್ಶಕವಾಗಿರಬೇಕು. ನಾಣ್ಣುಡಿಯ ಉಷ್ಟ್ರಪಕ್ಷಿಯಂತೆ ಮರಳಿನಲ್ಲಿ ತಲೆ ಹುದುಗಿಸಿಕೊಂಡರೆ ವಾಸ್ತವ ಪರಿಸ್ಥಿತಿ ಮಾಯವಾಗುವುದಿಲ್ಲ. -ಡಾ.ಬಿ.ಆರ್.ಮಂಜುನಾಥ್ ಭಾರತದಾದ್ಯಂತ ಕೊರೊನಾದ ಎರಡನೆಯ ಅಲೆ ತೀವ್ರವಾಗಿದೆ. ಸಾವಿನ ಬೀಭತ್ಸ ನರ್ತನ ಬಿಡುವಿಲ್ಲದೆ ನಡೆಯುತ್ತಿದೆ. ಆತಂಕ ಹೆಚ್ಚುತ್ತಿದೆ. ಕುಟುಂಬದವರನ್ನು, ಮಿತ್ರರನ್ನು ಕಳೆದುಕೊಳ್ಳಬಾರದು, ಏನಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ತಹತಹಿಕೆಯಲ್ಲಿ ಎಲ್ಲರೂ ಇದ್ದಾರೆ. ಅನೇಕ ಹಿರಿಯರಿಗೆ ನಾನು ಈ ಅಲೆಯನ್ನು ಮೀರಿ ಬದುಕುಳಿಯುತ್ತೇನೆಯೇ ಎಂಬ ಭಯ ಕಾಡುತ್ತಿದೆ. ಇದರ ಜೊತೆಗೇ ಬಹುತೇಕ ಬಡ ಹಾಗೂ […]

ಬಾಬಾಗೌಡ ಎಂಬ ಹೋರಾಟಗಾರನ ದ್ವಂದ್ವಗಳು

-ಪದ್ಮರಾಜ ದಂಡಾವತಿ

ಬಾಬಾಗೌಡ ಎಂಬ ಹೋರಾಟಗಾರನ ದ್ವಂದ್ವಗಳು
-ಪದ್ಮರಾಜ ದಂಡಾವತಿ

ಬೆಳಗಾವಿ ಜಿಲ್ಲೆಯ ಚಿಕ್ಕಬಾಗೇವಾಡಿ ಹೆಸರಿಗೆ ತಕ್ಕಂತೆ ಚಿಕ್ಕ ಊರು. ಅಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ದೊಡ್ಡ ಹೋರಾಟಗಾರನಾಗಿ ಬೆಳೆದು ಒಮ್ಮೆ ವಿಧಾನಸಭೆಯನ್ನು ಮತ್ತು ಒಮ್ಮೆ ಲೋಕಸಭೆಯನ್ನು ಪ್ರವೇಶಿಸಿದ್ದು ಹಾಗೂ ಆ ಒಮ್ಮೆ ಲೋಕಸಭೆ ಪ್ರವೇಶಿಸಿದಾಗಲೇ ಕೇಂದ್ರದಲ್ಲಿ ಸ್ವತಂತ್ರ ಖಾತೆಯ ಸಚಿವರೂ ಆದುದು ಸಣ್ಣ ಹೆಮ್ಮೆಯಲ್ಲ. ಈ ಹೆಮ್ಮೆಗೆ ಭಾಜನರಾದವರು ಮೊನ್ನೆ ನಿಧನರಾದ ಬಾಬಾಗೌಡ ರುದ್ರಗೌಡ ಪಾಟೀಲ (77). -ಪದ್ಮರಾಜ ದಂಡಾವತಿ 1980 ರ ಜುಲೈನಲ್ಲಿ ತಮ್ಮ ಬೇಡಿಕೆಗಳನ್ನು ಆಗ್ರಹಿಸಿ ಆಂದೋಲನ ಮಾಡುತ್ತಿದ್ದ ನರಗುಂದದ ರೈತರ ಮೇಲೆ ಗುಂಡೂರಾವ್ ಸರ್ಕಾರ […]

ಕೊರೊನ ಕಾಲದಲ್ಲಿ ಕಲಾವಿದರ ಬವಣೆ

-ಶಶಿಧರ ಭಾರಿಘಾಟ್

ಕೊರೊನ ಮೊದಲ ಅಲೆಯನ್ನು ಸಾಂಸ್ಕøತಿಕವಾಗಿಯೇ ಎದುರಿಸಿದ ಕಲಾವಿದರು, 2ನೇ ಅಲೆಯ ಆಘಾತವನ್ನು ಎದುರಿಸಲು ಮಾನಸಿಕವಾಗಿ ಸಿದ್ಧಗೊಂಡಿರಲಿಲ್ಲ. ಮೊದಲ ಅಲೆ ಕಲಾವಿದರ ಸಾಮಾಜಿಕ, ಆರ್ಥಿಕ ಬದುಕನ್ನು ಕಂಗೆಡಿಸಿದರೆ, ಎರಡನೇ ಅಲೆ ಕಲಾವಿದರ ಸಂಸಾರಕ್ಕೆ ಕೊಳ್ಳಿ ಇಟ್ಟಿದೆ. -ಶಶಿಧರ ಭಾರಿಘಾಟ್ “ಒಳಿತು ಮಾಡು ಮನುಷ…..” ಎಂಬ ತತ್ವಪದದ ಮೊದಲ ಸಾಲನ್ನು ಶೀರ್ಷಿಕೆಯಾಗಿಸಿಕೊಂಡು ನಮ್ಮ ತಂಡ “ಕಾಯಕ ಜೀವಿಗಳಿಗೆ ಶರಣು” ಎಂದು ಹೇಳುತ್ತಾ ಬೀದಿ ನಾಟಕವನ್ನು ಕಳೆದ ನವೆಂಬರ್ ತಿಂಗಳಲ್ಲಿ ಅಭಿನಯಿಸಿತು. ಕೊರೊನ ಸಾಂಕ್ರಾಮಿಕ ರೋಗದ ಪರಿಣಾಮ ಘೋಷಿತವಾದ ಲಾಕ್‍ಡೌನ್‍ನಲ್ಲಿ ಉಂಟಾದ […]

ಕೃಷಿ ನೀತಿಯ ಗುರಿ ನೈಜ ಕೃಷಿಕರ ಪರ ಇರಬೇಕು

-ಹರೀಶ್ ದಾಮೋದರನ್

ಕೃಷಿ ನೀತಿಯ ಗುರಿ ನೈಜ ಕೃಷಿಕರ ಪರ ಇರಬೇಕು
-ಹರೀಶ್ ದಾಮೋದರನ್

ಸರ್ಕಾರದ ಬಹುತೇಕ ಜನಕಲ್ಯಾಣ ಯೋಜನೆಗಳು ಬಡತನ ನಿರ್ಮೂಲನೆ ಮತ್ತು ತಳಮಟ್ಟದ ಜನರನ್ನು ಸಬಲೀಕರಿಸುವ ಉದ್ದೇಶದಿಂದಲೇ ರೂಪಿಸಲ್ಪಟ್ಟಿವೆ. ಇಲ್ಲಿ ಮಧ್ಯದಲ್ಲಿರುವವರು ತಳಮಟ್ಟಕ್ಕೆ ಜಾರುವ ಅಪಾಯವೂ ಇದ್ದು ಇದರ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿಲ್ಲ. -ಹರೀಶ್ ದಾಮೋದರನ್ ಭಾರತದಲ್ಲಿರುವ ರೈತರ ಸಂಖ್ಯೆ ಎಷ್ಟು? 2016-17ರ ಕೇಂದ್ರ ಕೃಷಿ ಸಚಿವಾಲಯದ ಆಂತರಿಕ ಸಮೀಕ್ಷೆಯ ಅನುಸಾರ ಭಾರತದಲ್ಲಿ ಒಟ್ಟು 146.19 ದಶಲಕ್ಷ ಜನರು ವ್ಯವಸಾಯದಲ್ಲಿ ತೊಡಗಿದ್ದಾರೆ.  ನಬಾರ್ಡ್ ಸಂಸ್ಥೆಯ ಅಖಿಲ ಭಾರತ ಗ್ರಾಮೀಣ ಹಣಕಾಸು ಒಳಗೊಳ್ಳುವಿಕೆ ಸಮೀಕ್ಷೆಯ (2016-17) ಅನುಸಾರ ಭಾರತದಲ್ಲಿ ಕೃಷಿಯನ್ನು […]

ಲಸಿಕೆಯೆಂಬ ಉನ್ಮಾದ ಕೊರೊನಾ ಎಂಬ ವಾಸ್ತವ

-ರಾಜಾರಾಂ ತಲ್ಲೂರು

ಲಸಿಕೆ ಪಡೆದು `ಅಮರ’ ಆಗುವ ಹಾಗೂ ಲಸಿಕೆ ಕೊಟ್ಟು `ಕೀರ್ತಿ’ ಪಡೆಯುವ ಉನ್ಮಾದ ದೇಶದಲ್ಲಿ ಹಬ್ಬಿದಂತಿದೆ. ಸರಳವಾಗಿ ಹೇಳಬೇಕೆಂದರೆ ಇದು `ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ’. -ರಾಜಾರಾಂ ತಲ್ಲೂರು ಕಳೆದ ಅಕ್ಟೋಬರ್ ಕೊನೆಯ ವೇಳೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ಸಾರ್ವಜನಿಕವಾಗಿ, “ದೇಶದ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ನೀಡಲಾಗುವುದು; ಯಾರನ್ನೂ ಅದರಿಂದ ವಂಚಿತಗೊಳಿಸುವುದಿಲ್ಲ” ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅಂತಹ ಒಂದು ಖಚಿತ ಸಂದರ್ಭ ಎಂದರೆ, ಅಕ್ಟೋಬರ್ 31ರಂದು ಪ್ರಕಟಗೊಂಡ ಅವರ ಎಕನಾಮಿಕ್ ಟೈಮ್ಸ್ […]

ನಗರಗಳಲ್ಲಿ ಉದ್ಯೋಗಕ್ಕಾಗಿ ‘ಡ್ಯುಯೆಟ್’ ಯೋಜನೆ

ಇದು ನಗರ ನಿರುದ್ಯೋಗಿಗಳಿಗೆ ನೆರವಾಗುವುದರ ಜೊತೆಗೆ ಲಾಕ್ ಡೌನ್ ನಂತರದ ಅವಧಿಯಲ್ಲಿ ಆರ್ಥಿಕ ಉತ್ತೇಜಕವಾಗಿ ಕೆಲಸ ಮಾಡುತ್ತದೆ. ಭಾರತದ ಒಟ್ಟು ದೇಶೀಯ ಉತ್ಪನ್ನದ 2020-21ರ ಮೊದಲ ತ್ರೈಮಾಸಿಕ ಆವಧಿಯ ಅಂದಾಜು ಬಿಡುಗಡೆಯಾಗುತ್ತಿದ್ದಂತೆ ಆತಂಕ ವ್ಯಕ್ತವಾಗಿದೆ. ಈ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳು ತೀವ್ರವಾಗಿ ಕುಸಿದಿದ್ದವು. ಇದನ್ನು ಹಲವು ಕೌಟುಂಬಿಕ ಸಮೀಕ್ಷೆಗಳು ಸ್ಪಷ್ಟವಾಗಿ ತಿಳಿಸಿವೆ. ನಿರುದ್ಯೋಗ, ಬಡತನ, ಮತ್ತು ಹಸಿವು ಇವೆಲ್ಲಾ ವ್ಯಾಪಕವಾಗಿದ್ದಾಗ ಆರ್ಥಿಕತೆ ಒಳ್ಳೆಯ ಸ್ಥಿತಿಯಲ್ಲಿರುವ ಸಾಧ್ಯತೆಗಳು ಕಡಿಮೆ. ಇತ್ತೀಚೆಗೆ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‍ನ ಆರ್ಥಿಕ ಪರಿಸ್ಥಿತಿಯ […]

ಹನುಮನ ಜನ್ಮಸ್ಥಳ ‘ನವೋದ್ಯಮ’ ಆಗಿದೆಯೇ?

-ಡಾ.ಟಿ.ಗೋವಿಂದರಾಜು

ರಾಮ ಜನ್ಮಭೂಮಿಯ ವಿವಾದ ಮುಗಿಯಿತು ಎನ್ನುತ್ತಿರುವಾಗಲೇ ಹನುಮ ಜನ್ಮಭೂಮಿಯ ತಗಾದೆ ಶುರುವಾಗಿದ್ದು ಆಕಸ್ಮಿಕವಿದ್ದಿರಲಾರದು. ತಿರುಪತಿ ಹಾಗೂ ಆನೆಗೊಂದಿಯ ಹಿತಾಸಕ್ತ ಭಕ್ತರು ‘ಪಿತ್ರಾರ್ಜಿತ ಆಸ್ತಿ’ಗೆಂಬಂತೆ ಸಮರ ಘೋಷಣೆ ಮಾಡಿಕೊಂಡಿದ್ದಾರೆ! ಜನಸಾಮಾನ್ಯರನ್ನು ಮುಂದಿಟ್ಟುಕೊಂಡು ತಮ್ಮ ಪ್ರಾಬಲ್ಯವರ್ಧನೆಯ ಬಿಜಿನೆಸ್‍ಗೆ ಹಾತೊರೆವ ಹಿತಾಸಕ್ತಿಗಳು ಸದಾ ಹೊಸ ಹೊಸ ಸ್ಥಳ, ಸಂಗತಿಗಳನ್ನು ಹುಡುಕುತ್ತಿರುತ್ತವೆ. ಅಂತಹವಕ್ಕೆ ಸರಕಾರಗಳೂ ಬೆಂಬಲವಾಗಿ ನಿಂತರೆ ಪರಿಣಾಮ ಏನಾಗಬಹುದು ಎಂಬುದಕ್ಕೆ ಈಗ ಹನುಮ ಜನ್ಮಭೂಮಿ ಮತ್ತೊಂದು ಪಾಠವಾದೀತು. -ಡಾ.ಟಿ.ಗೋವಿಂದರಾಜು ಸರಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಆಗುತ್ತದೆ ಎಂಬುದಕ್ಕೆ ಅಯೋಧ್ಯಾ ರಾಮನ […]

ಪಂಚರಾಜ್ಯ ಚುನಾವಣೆಗಳು: ರಾಷ್ಟ್ರ ರಾಜಕಾರಣ ಪ್ರಭಾವಿಸಬಹುದೇ?

-ಡಿ.ಉಮಾಪತಿ

ಭಾರತೀಯ ಜನತಾ ಪಾರ್ಟಿ ಅಸ್ಸಾಮಿನಲ್ಲಿ ಅಧಿಕಾರ ಉಳಿಸಿಕೊಂಡು, ಬಂಗಾಳವನ್ನು ಗೆಲ್ಲಲು ಬಯಸುತ್ತದೆ. ಇನ್ನು ತಮಿಳುನಾಡಿನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿದ್ದರೆ ಸಾಕು. ಪುದುಚೆರಿಯಲ್ಲಿ ಆಳುವ ಪಕ್ಷಗಳ ಪೈಕಿ ಒಂದೆನಿಸಿಕೊಂಡರೆ ತೃಪ್ತ. ಕೇರಳದಲ್ಲಿ ತನ್ನ ಇರುವನ್ನು ಇನ್ನಷ್ಟು ಹರವಿಕೊಂಡರೆ ಅದೂ ಸಾಧನೆಯೇ. ಬಂಗಾಳವನ್ನು ಗೆದ್ದರೆ ಅದು ಬಲು ದೊಡ್ಡ ಪಾರಿತೋಷಕ. –ಡಿ.ಉಮಾಪತಿ ದೇಶ ಮತ್ತೊಂದು ಆಘೋಷಿತ ದೀರ್ಘಾವಧಿ ಸರ್ವಾಧಿಕಾರದ ಅಂಚಿಗೆ ಬಂದು ನಿಂತಿರುವ ಸಂದೇಹಗಳಿವೆ. ಜನತಂತ್ರ ಮತ್ತು ವ್ಯಕ್ತಿಸ್ವಾತಂತ್ರ್ಯಗಳು ಇಳಿಜಾರಿನ ಹಾದಿ ಹಿಡಿದಿವೆ. ಮುಂಬರುವ ದಿನಗಳು ಇನ್ನಷ್ಟು ದುರ್ಭರವಾಗುವ ಸೂಚನೆಗಳು ಗೋಚರಿಸಿವೆ. […]

‘ನಾವು ಸಂಕೀರ್ಣ ಕಾಲದಲ್ಲಿ ವಾಸಿಸುತ್ತಿದ್ದೇವೆ’

ಪ್ರತಾಪ್ ಭಾನು ಮೆಹ್ತಾ

ಹರಿಯಾಣದ ಅಶೋಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರತಾಪ್ ಭಾನು ಮೆಹ್ತಾ ಅವರು ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಅವರ ನಿರ್ಗಮನದ ಸಂದರ್ಭ ಮತ್ತು ಕಾರಣಗಳು ದೇಶದ ಉನ್ನತ ಶಿಕ್ಷಣ ವಲಯದ ಆಗುಹೋಗುಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿವೆ. ಪ್ರಭುತ್ವದ ಕಟು ಟೀಕಾಕಾರರಾದ ಮೆಹ್ತಾ ತಮ್ಮ ವಿದ್ಯಾರ್ಥಿಗಳು ಮತ್ತು ಅಧ್ಯಾಪಕಮಿತ್ರರಿಗೆ ಬರೆದ ಪತ್ರಗಳಲ್ಲಿ ಶಿಕ್ಷಣ ಕ್ಷೇತ್ರದ ವರ್ತಮಾನದ ಬಿಕ್ಕಟ್ಟು ಮತ್ತು ಭವಿಷ್ಯದ ಆಶಾವಾದ ಎರಡನ್ನೂ ಗುರುತಿಸಬಹುದು. ಪ್ರತಾಪ್ ಭಾನು ಮೆಹ್ತಾ ನಲ್ಮೆಯ ಸೂಪರ್ ಹೀರೋಗಳೇ, ನಾನು ಈ […]

1 2 3 8