-ಶರೀಫ್ ಕಾಡುಮಠ ಲಾಕ್ ಡೌನ್ ಬಳಿಕ ಥಿಯೇಟರಿನಲ್ಲಿ ಬಿಡುಗಡೆಗೊಂಡ ಮೊತ್ತಮೊದಲ ಚಿತ್ರ ಎಂಬ ಹೆಗ್ಗಳಿಕೆ ಹೊಂದಿದೆ ಆಕ್ಟ್-1978. ಇದು ಸಾಮಾಜಿಕ ವ್ಯವಸ್ಥೆಗೆ, ಅದನ್ನು ಹಾಳುಗೆಡವಿದ ಅಧಿಕಾರಿಗಳ, ರಾಜಕೀಯ ನಾಯಕರ ಮುಖಕ್ಕೆ ಕನ್ನಡಿ ಹಿಡಿಯುತ್ತದೆ. ದೇಹಕ್ಕೆ ಕಟ್ಟಿಕೊಂಡ ಆತ್ಮಾಹುತಿ ಬಾಂಬ್, ಒಂದು ಕೈಯಲ್ಲಿ ಪಿಸ್ತೂಲ್, ಇನ್ನೊಂದು ಕೈಯಲ್ಲಿ ವಾಕಿಟಾಕಿ ಹಿಡಿದು ಕುರ್ಚಿಯಲ್ಲಿ ಕೂತ ಆಕೆಯ ಮುಂದೆ ನೆಲದಲ್ಲಿ ಅಲುಗದೆ ಮುದುಡಿ ಕೂತವರೆಲ್ಲ ಸರ್ಕಾರಿ ಕಚೇರಿ ಉದ್ಯೋಗಿಗಳು… ಕ್ಷಣಕ್ಷಣವೂ ಕೌತುಕ, ಆತಂಕ, ಈಗೇನಾಗುತ್ತದೋ ಏನೋ ಎಂಬ ಅಸಾಧ್ಯ ಕುತೂಹಲ… ಎದೆಬಡಿತ […]
-ಎಂ.ಕೆ.ಆನಂದರಾಜೇ ಅರಸ್ ದತ್ತಾಂಶದ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ದೇಶದ ಮನರಂಜನೆ ಉದ್ಯಮದಲ್ಲಿ ಸಹ ಹೆಚ್ಚಾಗಲಿದ್ದು, ಮುಂಬರುವ ದಿನಗಳಲ್ಲಿ ಈ ಉದ್ಯಮದ ಸ್ವರೂಪ ಬೃಹತ್ ಮಟ್ಟದಲ್ಲಿ ಬದಲಾಗಲಿದೆ. ಪ್ರಖ್ಯಾತ ಮಾರ್ಕೆಟಿಂಗ್ ಗುರು ಫಿಲಿಪ್ ಕೊಟ್ಲರ್ 2014ರಲ್ಲಿ ಬೆಂಗಳೂರಿಗೆ ಬಂದಿದ್ದರು. ಅವರ `ಪ್ರಿನ್ಸಿಪಲ್ಸ್ ಆಫ್ ಮಾರ್ಕೆಟಿಂಗ್’ ಪುಸ್ತಕವನ್ನು ಈಗಲೂ ಎಂಬಿಎ ವಿದ್ಯಾರ್ಥಿಗಳು ಹಾಗೂ ಮಾರ್ಕೆಟಿಂಗ್ ವೃತ್ತಿಪರರು ಮಾರ್ಕೆಟಿಂಗ್ ಬೈಬಲ್ ಎಂದೇ ಪರಿಗಣಿಸುತ್ತಾರೆ. ಸಂವಾದವೊಂದರಲ್ಲಿ ಅವರ ಮುಂದೆ `ಮಾರ್ಕೆಟಿಂಗ್’ ಎಂದರೇನು ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. `ವರ್ತನೆಯ ವಿಜ್ಞಾನದ ಅಧ್ಯಯನ’ ಎಂದು […]
-ರೇವು ಸೂರ್ಯ ನಿರ್ದೇಶಕಿಯ ಜಾಣ್ಮೆಯೊಂದು ನಮ್ಮನ್ನು ಆಕರ್ಷಿಸುತ್ತದೆ. ಮಾರ ಮತ್ತು ಸುಂದರಿಯ ಆತ್ಮಗೌರವದ ಮದುವೆ ‘ಮಂತ್ರ ಮಾಂಗಲ್ಯ’ ಮಾದರಿಯಲ್ಲಿ ಆಗುತ್ತದೆ. ಮದುವೆಯ ಬ್ಯಾನರ್ ನಲ್ಲಿ ತಮಿಳು ವರ್ಷನ್ ನಲ್ಲಿ ಪೆರಿಯಾರ್ ಫೋಟೋ ಬಳಸಿದ್ದರೆ, ಕನ್ನಡ ಡಬ್ನಲ್ಲಿ ಕುವೆಂಪು ಫೋಟೋ ಬಳಸಿರುವುದು ಕನ್ನಡಿಗರಿಗೆ ಮೆಚ್ಚುಗೆಯಾಗಿದೆ. ಒಟಿಟಿ ವೇದಿಕೆಯು ಚಿತ್ರಮಂದಿರ ನೀಡುವ ಸುಖವನ್ನು ನೀಡುವುದಿಲ್ಲ ಎಂಬ ಕೊರಗಿನ ನಡುವೆಯೇ ಅದೇ ವೇದಿಕೆಗಳಲ್ಲಿ ಜನ ಹೆಚ್ಚೆಚ್ಚು ಸಿನಿಮಾಗಳನ್ನು ನೋಡಬೇಕಾದ, ಒಟಿಟಿಗಳಲ್ಲೇ ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡಬೇಕಾದ ಕೊರೊನಾ ಕಾಲಘಟ್ಟದ ಅಂತಿಮ ಹಂತದಲ್ಲಿದ್ದೇವೆ. […]
-ಯತಿರಾಜ್ ಬ್ಯಾಲಹಳ್ಳಿ ಸಿನಿಮಾ ಎಂಬ ಜನಪ್ರಿಯ ಮಾಧ್ಯಮ ದೇಶ, ಭಾಷೆಗಳಾಚೆ ಚಲಿಸುವ ಗುಣವನ್ನು ಮಲಯಾಳಂ ಚಿತ್ರರಂಗ ಅಳವಡಿಸಿಕೊಂಡಿದೆ. ಒಂದು ಕಾಲದಲ್ಲಿ ‘ಎ’ ಸರ್ಟಿಫಿಕೇಟ್ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದ ಮಲಯಾಳಂ ಈಗ ಬ್ರಿಡ್ಜ್ ಸಿನಿಮಾಗಳನ್ನು ಬೆಳೆಯುವ ಭೂಮಿಯಾಗಿದ್ದು ಹೇಗೆ? “ಮತ್ತೆ ಮತ್ತೆ ನೀವ್ಯಾಕೆ ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳತ್ತ ಬೆಟ್ಟು ತೋರಿಸುತ್ತಾ, ಕನ್ನಡ ಚಿತ್ರರಂಗವನ್ನು ದ್ವಿತೀಯ ದರ್ಜೆಯಲ್ಲಿ ನೋಡುತ್ತೀರಿ? ಕನ್ನಡದಲ್ಲಿ ಪ್ರತಿಭಾವಂತರು ಇಲ್ಲವಾ? ನೀವು ಕನ್ನಡ ವಿರೋಧಿಗಳು” ಎನ್ನುವ ಕನ್ನಡ ಸಿನಿಮಾ ಪ್ರೇಮಿಗಳಿಗೇನೂ ಕೊರತೆ ಇಲ್ಲ. ಕನ್ನಡ ಸಿನಿಮಾಗಳ ಮೇಲಿನ […]
ಚಲನಚಿತ್ರಗಳ ಬಗ್ಗೆ ಹಾಗೂ ಮೆಚ್ಚಿನ ತಾರೆಯರ ಮೇಲೆ ಅಭಿಮಾನಿಗಳಿಗಿರುವ ಹುಚ್ಚು ಕಡಿಮೆಯಾಗಿಲ್ಲ. ಆದರೆ ಚಲನಚಿತ್ರಗಳು, ಕಿರುಚಿತ್ರಗಳು, ಧಾರಾವಾಹಿಗಳು ಹಾಗೂ ಸಾಕ್ಷ್ಯ ಚಿತ್ರಗಳು ನಮ್ಮನ್ನು ತಲುಪುವ ಬಗೆ ಬದಲಾಗಿದೆ. – ಶುಭಾನಂದ ತೊಂಬತ್ತರ ದಶಕದಲ್ಲಿ ಅವಿಭಾಜ್ಯ ಆಂಧ್ರ ಪ್ರದೇಶದ ಜನರ ಸಿನಿಮಾ ಹುಚ್ಚಿನ ಬಗ್ಗೆ ಹೀಗೊಂದು ಕಥೆ ಹರಿದಾಡುತಿತ್ತು. ಇದು ಎಷ್ಟು ನಿಜವೋ ಗೊತ್ತಿಲ್ಲ. ಚಿರಂಜೀವಿ ತೆಲುಗು ಚಲನಚಿತ್ರೋದ್ಯಮದ ಚಕ್ರವರ್ತಿಯಾಗಿ ಮೆರೆಯುತಿದ್ದ ಕಾಲವದು. ಆಗೆಲ್ಲಾ ಅಲ್ಲಿನ ಕೆಲವು ಜನಪ್ರಿಯ ತಾರೆಯರ ಚಲನಚಿತ್ರಗಳ ಮೊದಲ ಶೋ ಬೆಳಿಗ್ಗೆ ಐದಕ್ಕೆ, ಆರಕ್ಕೆ […]
ಬಿಡುಗಡೆ ಆಗದ, ಒಟಿಟಿಗೂ ಬಾರದ ಸಿನಿಮಾಗಳು ಹೇಗಿವೆ ಎಂಬ ಕುತೂಹಲ ನನ್ನಂತೆ ಅನೇಕರಿಗೆ ಇರಬಹುದು. ಅಂಥದೊಂದು ಸಿನಿಮಾ ನೋಡುವ ಅವಕಾಶ ಇತ್ತೀಚೆಗೆ ಸಿಕ್ಕಿತು. – ಪ್ರೇಮಕುಮಾರ್ ಹರಿಯಬ್ಬೆ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾಗಳ ನಿರ್ಮಾಣ ಹೆಚ್ಚಾಗಿದೆ. ಕಳೆದ ವರ್ಷವೊಂದರಲ್ಲೇ 190 ಸಿನಿಮಾಗಳು ಬಿಡುಗಡೆ ಆಗಿವೆ. ಈ ಸಿನಿಮಾಗಳನ್ನು ಎಷ್ಟು ಜನ ನೋಡಿದರು? ಅವಕ್ಕೆ ಹಾಕಿದ್ದ ಬಂಡವಾಳ ಹಿಂದಕ್ಕೆ ಬಂತೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಯಾರಲ್ಲೂ ಇಲ್ಲ. ಬಿಡುಗಡೆಯೇ ಆಗದ ಸಿನಿಮಾಗಳೂ ಇವೆ. ಅವು […]
ಇತ್ತೀಚೆಗೆ ಅಗಲಿದ ಸುಭದ್ರಮ್ಮ ಮನ್ಸೂರು ಬದುಕಿನುದ್ದಕ್ಕೂ ಲವಲವಿಕೆಯಿಂದ ನಟಿಸುತ್ತಿದ್ದರು, ಹಾಡುತ್ತಿದ್ದರು. ಅವರ ಆ ಉತ್ಸಾಹ ಕೊನೆಯವರೆಗೂ ಕುಂದಲಿಲ್ಲ ಎಂಬುದೇ ಒಂದು ಸಂತಸದ ಸೋಜಿಗ! ಸಂಗೀತದಲ್ಲಿ ಸಾಧನೆಯ ಸಿದ್ಧಿ ಕಂಡವರಿರಬಹುದು; ಅಭಿನಯದಲ್ಲಿ ಪರಿಪೂರ್ಣತೆ ಸಾಧಿಸಿದವರಿರಬಹುದು. ಸಂಗೀತ ಹಾಗೂ ಅಭಿನಯ ಎರಡರಲ್ಲೂ ಸಾಧನೆಯ ಶಿಖರವೇರಿದ ಸುಭದ್ರಮ್ಮ ಮನ್ಸೂರು ಕನ್ನಡ ರಂಗಭೂಮಿಯ ಅಪ್ರತಿಮ ಕಲಾವಿದೆ. ಅಸ್ಖಲಿತ ಮಾತುಗಾರಿಕೆ, ಅಮೋಘ ಅಭಿನಯ, ಸುಮಧುರ ಕಂಠದ ಹಾಡುಗಾರಿಕೆಗೆ ಮತ್ತೊಂದು ಹೆಸರೇ ಸುಭದ್ರಮ್ಮ ಮನ್ಸೂರು. ಅಂತೆಯೇ ಅವರು ಗಾನಕೋಗಿಲೆಯೂ ಹೌದು, ಅಭಿನೇತ್ರಿಯೂ ಹೌದು. ಏಳು […]
ವಾಸ್ತವದಲ್ಲಿ ಫಿಲ್ಮ್ ಮೇಕರ್ಸ್ ಯುನೈಟೆಡ್ ಕ್ಲಬ್ ಮೂಲಕ ಪವನ್ಕುಮಾರ್ ಕೇವಲ ಕನ್ನಡ ಚಿತ್ರರಂಗವನ್ನು ಬದಲಾಯಿಸಲು ಹೊರಟಂತೆ ಕಾಣುತ್ತಿಲ್ಲ, ಹೊರತಾಗಿ ಇಡೀ ಭಾರತೀಯ ಚಿತ್ರರಂಗವನ್ನೇ ಇದು ಪ್ರಭಾವಿಸುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಕನ್ನಡ ಚಿತ್ರರಂಗ ಎನ್ನುವಾಗ ನಮ್ಮ ಮನಸ್ಸಿಗೆ ಹಲವು ನಿರ್ದೇಶಕರ ಹೆಸರು ಒಂದೇ ಉಸಿರಿನಲ್ಲಿ ಬಂದುಬಿಡಬಹುದು. ಆದರೆ ಏಕೋ ಏನೊ, ಥಟ್ಟೆಂದು ಹೇಳಲು ನೆನಪಾಗದೆ ಉಳಿಯುವ ಹೆಸರು ಪ್ರತಿಭಾವಂತ, ಸೃಜನಶೀಲ ನಿರ್ದೇಶಕ ಪವನ್ಕುಮಾರ್ ಅವರದು. ಪವನ್ ನಿರ್ದೇಶನದ ಚಿತ್ರಗಳು ಮೂರು ಅಷ್ಟೆ. ಆದರೆ ಆ ಮೂರು ಸಿನಿಮಾಗಳೂ […]
ಈ ಚಲನಚಿತ್ರ ಮುಸ್ಲಿಂ ಮಹಿಳೆಯರ ಅಸಹಾಯಕತೆ ಮತ್ತು ಅತಂತ್ರ ಬದುಕಿನ ಕರಾಳ ಮುಖಗಳನ್ನು ಬಿಚ್ಚಿಡುತ್ತ ಪ್ರೇಕ್ಷಕರಲ್ಲಿ ಗಾಢ ವಿಷಾದ ಭಾವವನ್ನು ಹುಟ್ಟಿಸಿಬಿಡುತ್ತದೆ. ಇದು ದೇಶದ ಇನ್ಯಾವುದೇ ಭಾರತೀಯ ಭಾಷೆಯಲ್ಲಿ ನಿರ್ಮಾಣವಾಗಿದ್ದರೂ ಅದು ದೊಡ್ಡ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತಿತ್ತು! ಭಯೋತ್ಪಾದನೆ, ತ್ರಿವಳಿ ತಲಾಖ್ನಂತಹ ಸಮಸ್ಯೆಗಳು ಮುಸ್ಲಿಂ ಮಹಿಳೆಯರ ಅಸ್ತಿತ್ವವನ್ನೇ ಅಲುಗಾಡಿಸುತ್ತಿವೆ. ಈ ಕಟು ವಾಸ್ತವವನ್ನು ಹೇಳಲು ಸಿನಿಮಾಕ್ಕಿಂತ ಪ್ರಭಾವಶಾಲಿ ಮಾಧ್ಯಮ ಇನ್ನೊಂದಿಲ್ಲ. ಸಾಹಿತ್ಯಕ್ಕೆ ಈ ಶಕ್ತಿ ಇದೆಯಾದರೂ ಅದಕ್ಕೆ ದೇಶ, ಖಂಡಗಳ ಗಡಿ ದಾಟುವ ಶಕ್ತಿ ಇಲ್ಲ. ಏಕಕಾಲಕ್ಕೆ ಅಸಂಖ್ಯ […]
ನಿರ್ಮಾಪಕರೇ ನೀಡಿರುವ ಮಾಹಿತಿಯ ಪ್ರಕಾರ 52 ನಿಮಿಷಗಳ ಅವಧಿಯ ಈ ಸಾಕ್ಷ್ಯಚಿತ್ರದ ನಿರ್ಮಾಣಕ್ಕೆ 1500 ದಿನಗಳನ್ನು ವ್ಯಯಿಸಲಾಗಿದೆ, 15,000 ಗಂಟೆಗಳನ್ನು ಕಾಡಿನಲ್ಲಿ ಕಳೆಯಲಾಗಿದೆ, 2,400 ನಿಮಿಷಗಳಷ್ಟು ಅವಧಿಯ ಚಿತ್ರೀಕರಣ ಮಾಡಲಾಗಿದೆ ಹಾಗೂ 20 ಕ್ಯಾಮೆರಾಗಳನ್ನುಬಳಸಲಾಗಿದೆ. ‘ವೈಲ್ಡ್ ಕರ್ನಾಟಕ’ ಸಾಕ್ಷ್ಯಚಿತ್ರವನ್ನು ಭಾರತದ ಮೊದಲ ಬ್ಲೂಚಿಪ್ ನೈಸರ್ಗಿಕ ಇತಿಹಾಸ ಸಾಕ್ಷ್ಯಚಿತ್ರವೆಂದು ಬಿಂಬಿಸಲಾಗಿದೆ. ಇಂಗ್ಲಿಷ್ನ ಬ್ಲೂಚಿಪ್ ಪದಕ್ಕೆ ಅತ್ಯುತ್ತಮ ಗುಣಮಟ್ಟದ್ದು ಎಂಬ ಅರ್ಥವಿದೆ. ಅಂತಾರಾಷ್ಟ್ರೀಯ ನೈಸರ್ಗಿಕ ಇತಿಹಾಸ ಆಧಾರಿತ ವಾಹಿನಿಗಳಲ್ಲಿ ಪ್ರಸಾರವಾಗುವ ಸಾಕ್ಷ್ಯಚಿತ್ರಗಳನ್ನು ಇಂತಹ ಗುಣಮಟ್ಟದೊಂದಿಗೆ ಗುರುತಿಸಬಹುದು. ಅನುಭವ-ಪ್ರತಿಭೆ, ಬದ್ಧತೆ-ಶ್ರಮ ಹಾಗೂ […]
ಇಂಗ್ಲಿಷ್ ಭಾಷೆಯ ‘ಕಂಟೇಜಿಯನ್’ ಚಿತ್ರ ಸೋಂಕು ಹರಡುವ ಸಾಧ್ಯತೆಗಳನ್ನು ಬಹಳ ಸೂಕ್ಷ್ಮವಾಗಿ ಬಿಡಿಸಿಟ್ಟರೆ, ಮಲೆಯಾಳಂ ಸಿನಿಮಾ ‘ವೈರಸ್’ ಜನರ ಭೀತಿ-ಆತಂಕವನ್ನು ಆರ್ದ್ರವಾಗಿ ಕಟ್ಟಿಕೊಡುತ್ತದೆ. ಕೊರೊನಾ ಪೀಡನೆಯ ಪ್ರಸ್ತುತ ಸಂದರ್ಭದಲ್ಲಿ ಇವೆರಡೂ ಪ್ರಯೋಗಗಳು ತೀವ್ರ ಕುತೂಹಲ ಹುಟ್ಟಿಸಿವೆ; ಹಲವಾರು ವಿಚಾರಗಳನ್ನು ಅರಿಯಲು ಸಹಕಾರಿಯಾಗಿವೆ. ಕಂಟೇಜಿಯನ್ ಕೊರೊನಾ ವೈರಸ್ನ ಹರಡುವಿಕೆಯ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಮತ್ತೆ ಸುದ್ದಿಗೆ ಬಂದ ಇಂಗ್ಲಿಷ್ ಸಿನಿಮಾ ‘ಕಂಟೇಜಿಯನ್’. 2011ರಲ್ಲಿ ಬಿಡುಗಡೆಯಾದ ಈ ಸಿನಿಮಾ ಅಂದಿಗಿಂತ ಹೆಚ್ಚು ಈಗ ಪ್ರಸ್ತುತವೆನಿಸಿದೆ. ಅಮೆರಿಕದ ಹೆಸರಾಂತ ನಿರ್ದೇಶಕ […]
ನಿರ್ದೇಶಕರಾಗಿ ಮಾರಿ ಸೆಲ್ವರಾಜ್ ತಮ್ಮ ಚೊಚ್ಚಲ ಚಲನಚಿತ್ರದಲ್ಲಿ ಶೋಷಿತರು ಜಾಗೃತರಾಗುವಲ್ಲಿ ಶಿಕ್ಷಣಕ್ಕಿರುವ ಮಹತ್ವದ ಪಾತ್ರವನ್ನು ಪ್ರಬಲವಾಗಿ ದಾಟಿಸಿದ್ದಾರೆ. ಮ ಶ್ರೀ ಮುರಳಿ ಕೃಷ್ಣ ಜಾತಿ ಮತ್ತು ಮತ ಮಾನವತೆಯ ವಿರೋಧಿ ಎಂಬ ಸಾಲು ಮಾರಿ ಸೆಲ್ವರಾಜ್ ನಿರ್ದೇಶನದ ‘ಪರಿಯೇರುಂ ಪೆರುಮಾಳ್’ (ಕುದುರೆಯ ಮೇಲಿನ ದೇವರು ಎಂದರ್ಥ) ಚಲನಚಿತ್ರದ ಪ್ರಾರಂಭದಲ್ಲೇ ವೀಕ್ಷಕರ ಗಮನವನ್ನು ಸೆಳೆಯುತ್ತದೆ. ಹೀಗಾಗಿ ಇದೊಂದು ಜಾತಿ/ಮತದ ಸುತ್ತ ಗಿರಕಿ ಹೊಡೆಯುವ ಚಲನಚಿತ್ರ ಎಂಬ ಸುಳಿವು ವೀಕ್ಷಕರ ಮನಸ್ಸಿನಲ್ಲಿ ಮೂಡಬಹುದು. ಅಂತ್ಯದಲ್ಲಿ ಇದು ಬರೀ ಜಾತಿಯ ಬಗೆಗೆ […]
ಸಿನಿಮಾಗಳಲ್ಲಿ ಸಾಮಾಜಿಕ ವಸ್ತು ವಿಷಯಗಳನ್ನು ತರುವುದಕ್ಕೂ, ಚಿತ್ರರಂಗವೊಂದು ಸಮಾಜಕ್ಕೆ ತೆರೆದುಕೊಳ್ಳುವುದಕ್ಕೂ ವ್ಯತ್ಯಾಸಗಳಿವೆ. ಕೇರಳದ ಘಟನೆಗಳಿಗೆ ಅಲ್ಲಿನ ನಟರು, ನಿರ್ದೇಶಕರು ಸ್ಪಂದಿಸುವ ರೀತಿ, ಸಮಾಜಕ್ಕೂ ಸಿನಿಮಾರಂಗಕ್ಕೂ ಸಂಬಂಧವಿಲ್ಲ ಎಂದು ಭಾವಿಸಿ ದೂರ ನಿಲ್ಲುವ ಇತರ ಸಿನಿಮಾರಂಗದ ಕಲಾವಿದರಿಗೆ ಮಾದರಿಯೆನಿಸಬೇಕು. ಶರೀಫ್ ಕಾಡುಮಠ ಭಾರತೀಯ ಸಿನಿಮಾ ಜಗತ್ತಿನಲ್ಲಿ ಪ್ರತಿ ಬಾರಿಯೂ ಹೊಸ ಪ್ರಯೋಗಗಳಿಗೆ ಕೈ ಹಾಕಿ ಯಶಸ್ಸು ಕಾಣುವ ಚಿತ್ರರಂಗವಿದ್ದರೆ ಅದು ಮಲಯಾಳಂ ಚಿತ್ರರಂಗ ಎಂಬುದು ನಿಸ್ಸಂಶಯ. ಮಲಯಾಳಂ ಚಿತ್ರರಂಗಕ್ಕೆ ಕಾಲಿಡುವ ಬಹುತೇಕ ನಟ-ನಟಿಯರಿಗೆ ಸಹಜ ನಟನೆ ಎನ್ನುವುದು ಮಣ್ಣಿನ […]
ಕೊರತೆಗಳ ನಡುವೆಯೂ ಭರವಸೆಯ ಒರತೆ ಇತ್ತೀಚೆಗೆ ಗೋವಾದಲ್ಲಿ ನಡೆದ 50 ಕೋಟಿ ರೂಪಾಯಿ ವ್ಯಚ್ಚದ, 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಅನ್ಯಾನ್ಯ ಕಾರಣಗಳಿಂದ ಸುದ್ದಿಯಲ್ಲಿತ್ತು. ಫೆಸ್ಟಿವಲ್ ಡೈರಕ್ಟರ್ ಮತ್ತಾತನ ನೌಕರಶಾಹೀ ಕೂಟ ಕೆಲವೇ ವರ್ಷಗಳಲ್ಲಿ ಇಫ್ಫಿಯನ್ನು ಸಾಂಸ್ಕೃತಿಕವಾಗಿ ಆಪೋಶನ ತೆಗೆದುಕೊಂಡರೂ ಅಚ್ಚರಿಯಿಲ್ಲ. ಇದೆಲ್ಲದರ ನಡುವೆ ನಾನು ಸಾಕಷ್ಟು ಶ್ರಮವಹಿಸಿದ ಕಾರಣ ಕೆಲವು ಅಮೂಲ್ಯ ಸಿನಿಮಾಗಳನ್ನು ನೋಡಲು ಸಾಧ್ಯವಾಯ್ತು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಮೂಲಭೂತವಾಗಿ ಇರುವಂತದ್ದು ಬೇರೆಬೇರೆ ದೇಶ, ಭಾಷೆಯ ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರಗಳನ್ನು ನೋಡಿ ಅನುಭವಿಸಲು. ಆದರೆ ಚಿತ್ರೋತ್ಸವದ ಮೊದಲ […]
ಕನ್ನಡ ಚಲನಚಿತ್ರ ಚರಿತ್ರೆಯಲ್ಲಿ ಸಾಹಿತ್ಯಕ್ಕೆ ವಿಶೇಷ ಸ್ಥಾನಮಾನವಿದೆ; ಆರಂಭದ ದಿನಗಳಿಂದ ಇಂದಿನವರೆಗೆ ಚಿತ್ರಸಾಹಿತ್ಯದಲ್ಲಿ ಕಾಲದಿಂದ ಕಾಲಕ್ಕೆ ಭಾವ, ಭಾಷೆ, ಅಭಿರುಚಿ, ಅಭಿವ್ಯಕ್ತಿಗಳು ಬದಲಾಗಿವೆ. ಆದರೆ ಹೊಸತಿನ ಹೊಳಪಿನಲ್ಲಿ ಹಳತು ಮಸುಕಾಗಿಲ್ಲವೆಂಬುದೇ ವಿಶೇಷ. ಕನ್ನಡ ನಾಡು, ನುಡಿ, ಸಂಸ್ಕತಿಯನ್ನು ಆಯಾ ಕಾಲಘಟ್ಟದಲ್ಲಿ ಕನ್ನಡ ಚಲನಚಿತ್ರ ಸಾಹಿತ್ಯ ಎದುರುಗೊಂಡ ಬಗೆ ಇಲ್ಲಿದೆ. ಎಂಬತ್ತೈದು ವರ್ಷಗಳಷ್ಟು ಸದ್ಯದ ಇತಿಹಾಸವನ್ನು ಹೊಂದಿರುವ ಕನ್ನಡ ಚಲನಚಿತ್ರ ಪರಂಪರೆಯ ಪ್ರಮುಖ ಘಟಕವಾದ ಸಾಹಿತ್ಯವನ್ನು ಕುರಿತು ಚರ್ಚಿಸುವಾಗ ಮೊದಲಿಗೇ ಹೇಳಬೇಕಾದ ಮುಖ್ಯವಾದ ಮಾತೆಂದರೆ, ಕನ್ನಡ ಚಲನಚಿತ್ರ ಸಾಹಿತ್ಯವನ್ನು […]
ಋತ್ವಿಕ್ ಘಟಕ್ ಅವರ ಏಳು ಪ್ರಮುಖ ಚಲನಚಿತ್ರಗಳಲ್ಲಿ 1960ರಲ್ಲಿ ತಯಾರಾದ ‘ಮೇಘೆ ಢಾಕಾ ತಾರಾ’ (ಮೋಡ ಮುಚ್ಚಿದ ನಕ್ಷತ್ರ) ಬಹಳ ಮಹತ್ವದ್ದು. ಈ ವರ್ಷ ಈ ಸಿನಿಮಾಕ್ಕೆ 60 ವರ್ಷ ತುಂಬುವ ಕಾರಣದಿಂದ ಅದರ ಚರ್ಚೆ ಮಹತ್ವದ್ದು ಮತ್ತು ಪ್ರಸ್ತುತ. ಭಾರತೀಯ ಸಿನಿಮಾ ಸಂದರ್ಭದಲ್ಲಿ, ವಿಶೇಷವಾಗಿ ಸಿನಿಮಾ ಚರಿತ್ರೆಯ ಬಗೆಗೆ ಯಾವಾಗಲೂ ಕೆಲವು ತಾತ್ವಿಕ ತಕರಾರು ತೆಗೆಯುವ ಕೆಲವು ವಿದ್ವಾಂಸರು (ಆಶೀಷ್ ರಾಜ್ಯಾಧ್ಯಕ್ಷ, ಮದನ್ ಗೋಪಾಲ್ ಸಿಂಗ್ ಮತ್ತು ಇರಾ ಭಾಸ್ಕರ್) ಸಿನಿಮಾ ಚರಿತ್ರೆಯನ್ನು ಸತ್ಯಜಿತ್ ರೇ […]
ದ್ವಂದ್ವಾರ್ಥದ ಸಂಭಾಷಣೆಗಳನ್ನು ಹಾಸ್ಯದ ರೂಪದಲ್ಲಿ ಉಣಬಡಿಸುವ ಸೃಜನ್ ಲೋಕೇಶ್ ಮತ್ತು ತಂಡದವರು ಕನ್ನಡಿಗರಿಗೆ ನೀಡುತ್ತಿರುವುದಾದರೂ ಏನನ್ನು? ಮನರಂಜನೆಯನ್ನೋ ಅಥವಾ ವೀಕ್ಷಕರಿಗೆ ಮುಜುಗರ ಉಂಟು ಮಾಡುವ ನಕಲು ಮಾಡಿದ ಹಳಸಲು ಪ್ರಸಂಗಗಳನ್ನೋ? ಹಾಸ್ಯ ಮಾನವನ ಬದುಕಿನ ಅವಿಭಾಜ್ಯ ಅಂಗ. ಬಹುಶಃ ಹಾಸ್ಯ ಪ್ರಜ್ಞೆ ಇಲ್ಲದೆ ಹೋಗಿದ್ದರೆ ಮನುಕುಲ ವೇದನೆಗಳಲ್ಲೇ ಸೊರಗಿಹೋಗುತ್ತಿತ್ತೇನೋ ಎನಿಸುತ್ತದೆ. ಆದರೆ ಹಾಸ್ಯ ಎನ್ನುವುದು ಅಷ್ಟೇ ಸಾಪೇಕ್ಷ ವಿದ್ಯಮಾನ. ಸಾರ್ವತ್ರಿಕ ಎನ್ನಬಹುದಾದ ಹಾಸ್ಯ ಇಲ್ಲವೇನೋ ಎನ್ನುವಂತೆ ಕೆಲವರು ಹಾಸ್ಯ ಸನ್ನಿವೇಶಗಳಲ್ಲಿ ಗುಮ್ಮನೆ ಕುಳಿತಿರುವುದನ್ನು, ಅಪರೂಪವಾಗಿಯಾದರೂ, ಕಂಡಿರಲು ಸಾಧ್ಯ. […]
ಈ ಕಾಲದ ಜಾತಿ ಸಂಕಥನವಾಗಿ, ಕಹಿ ಸತ್ಯಗಳನ್ನು ಮುಂದಿಡುತ್ತಾ, ಕೆಲವು ಪ್ರಶ್ನೆಗಳಿಗೆ ಉತ್ತರಿಸುತ್ತಲೇ, ಉತ್ತರವಿಲ್ಲದ ಪ್ರಶ್ನೆಗಳನ್ನು ಮತ್ತೆ ಮುನ್ನೆಲೆಗೆ ತರುವ ಈ ಸಿನಿಮಾ ಸಂವೇದನಾಶೀಲ ಮನಸ್ಸುಗಳನ್ನು ಗಾಢವಾಗಿ ತಟ್ಟುತ್ತದೆ. ಕಳೆದ ಒಂದು ದಶಕದಲ್ಲಿ ದೇಶದಲ್ಲಿ ದಲಿತರ ಮೇಲೆ ನಡೆದಿರುವ ಜಾತಿ ದೌರ್ಜನ್ಯಗಳು, ದಲಿತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಗಳು, ದಲಿತ ನಾಯಕರ ರಾಜೀ ಕಬೂಲಿಗಳು, ಎಚ್ಚೆತ್ತ ದಲಿತ ಯುವಜನರ ನಿರ್ಭೀತ ಸಂಘರ್ಷಮಯ ದಾರಿ, ಜಾತಿಗ್ರಸ್ತ ವ್ಯವಸ್ಥೆಯೊಳಗಿನ ಸಿಕ್ಕುಗಳು, ಇವೆಲ್ಲವನ್ನೂ ಒಂದು ಕಥೆಯಾಗಿ ಹೆಣೆದು ಇಡೀ ಭಾರತದ ಆತ್ಮವನ್ನು […]
ಇತ್ತೀಚೆಗೆ ನೆಟ್ಫ್ಲಿಕ್ಸ್ನಲ್ಲಿ ನೋಡಿದ ‘ದಿ ಬ್ಯಾಟಲ್ ಆಫ್ ಚೋಸಿನ್ ರಿಸರ್ವಾಯರ್’ ಸಾಕ್ಷ್ಯಚಿತ್ರವೇ ಈ ಲೇಖನಕ್ಕೆ ಪ್ರೇರಣೆ. ಎಲ್ಲಾ ಯುದ್ಧಗಳು ಭೀಕರವೇ. ಆದರೆ ಕೊರಿಯಾ ಯುದ್ಧ ಸಂದರ್ಭದ ಈ ಹಂತ ಭೀಭತ್ಸವಾದದ್ದು; ಯು.ಎಸ್. ಮರೀನ್ ಪಡೆ ತನ್ನ ಇತಿಹಾಸದ ಪುಟಗಳಲ್ಲಿ ದಪ್ಪ ಅಕ್ಷರಗಳಲ್ಲಿ ದಾಖಲಿಸುವಂತಹದ್ದು. ಕಳೆದ ವರ್ಷ ನಾವು ಮಾಧ್ಯಮಗಳಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಕೈಮಿಲಾಯಿಸಿ ತಮ್ಮೆರಡೂ ದೇಶಗಳ ನಡುವಿನ ಶಾಂತಿಗೆ ಮುನ್ನುಡಿ ಬರೆದಿರುವುದನ್ನು ನೋಡಿರುತ್ತೇವೆ ಈ […]
ವರ್ಷಕ್ಕೆ 250 ರಿಂದ 300 ಕನ್ನಡ ಚಿತ್ರಗಳು ರಿಲೀಸ್ ಆಗುತ್ತವೆ. ಇದರಲ್ಲಿ 50 ರಿಂದ 60 ಚಿತ್ರಗಳು ಬೇರೆಬೇರೆ ಕಾರಣಕ್ಕೆ ಬಿಡುಗಡೆ ಆಗೋದೇ ಇಲ್ಲ. ಪರವಾಗಿಲ್ಲ ಅಂತ ಹೇಳುವ ಚಿತ್ರಗಳ ಸಂಖ್ಯೆ 10 ರಿಂದ 20 ಮಾತ್ರ. ಇದರಲ್ಲೂ ಇಣುಕಿ ನೋಡಿದಾಗ 10 ರಿಂದ 15 ಸಿನಿಮಾ ಕತೆಗಳು ಅನ್ಯಭಾಷೆಯವಾಗಿರುತ್ತವೆ. ಶೇ.3 ರಷ್ಟು ಚಿತ್ರಗಳು ಮಾತ್ರ ಪಾಸಾಗುತ್ತವೆ. ಬಾಕಿ ಚಿತ್ರಗಳೆಲ್ಲಾ ತೋಪು. ಒಂದು ಕಾಲಕ್ಕೆ ಇಡೀ ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರರಂಗ ಹೆಸರುವಾಸಿ. ಇಲ್ಲಿ ರಿಲೀಸ್ ಆದ […]