-ಸುಬ್ರಾಯ ಮತ್ತೀಹಳ್ಳಿ ಇತ್ತೀಚೆಗೆ ಶಿರಸಿಯಲ್ಲಿ ಡಾ.ಶ್ರೀಪಾದ ಭಟ್ ನಿರ್ದೇಶನದಲ್ಲಿ ‘ಯಶೋಧರಾ’ ನಾಟಕ ಪ್ರದರ್ಶನಗೊಂಡಿತು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ತೊಂಬತ್ತು ವರ್ಷಗಳ ಹಿಂದೆ ಬರೆದ, ಈವರೆಗೆ ರಂಗಪ್ರಯೋಗವೇ ಆಗಿರದ ಈ ನಾಟಕ ಹಳಗನ್ನಡ ಮತ್ತು ಹೊಸಗನ್ನಡದ ಮಿಶ್ರಣ. ‘ಕೇವಲ ದೈಹಿಕ ಚಿಕಿತ್ಸೆಯೊಂದೇ ಅಲ್ಲ, ಸಾಂಸ್ಕೃತಿಕ ಚಿಕಿತ್ಸೆಯೂ ಸಮುದಾಯಕ್ಕೆ ಅವಶ್ಯಕ’ ಎಂಬ ಅರ್ಥಪೂರ್ಣ ಸಂದೇಶವನ್ನು ಕಳೆದ ಒಂದು ದಶಕದಿಂದಲೇ ಉತ್ತರಕನ್ನಡದ ವೈದ್ಯಸಮುದಾಯ, ಜನಮಾನಸದಲ್ಲಿ ಬಿತ್ತುತ್ತಿದೆ. ಮೊನ್ನೆ ಶಿರಸಿಯಲ್ಲಿ ತಮ್ಮ ವೃತ್ತಿಯ ಹತ್ತುಹಲವು ಸವಾಲುಗಳ ನಡುವೆಯೂ ವೈದ್ಯಬಂಧುಗಳು, ‘ಯಶೋಧರೆ’ ನಾಟಕದ […]
-ಅನಿಲಕುಮಾರ್ ಎನ್. ಕರ್ಣಪಾರ್ಯನ ‘ನೇಮಿನಾಥಪುರಾಣ’ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜನಪ್ರಿಯವಾದ ನೇಮಿನಾಥ ತೀರ್ಥಂಕರನ ಕತೆಯನ್ನು ಆಧರಿಸಿ ರಚನೆಯಾದ ನೇಮಿನಾಥ ಪುರಾಣಗಳ ಉಲ್ಲೇಖ ಸಾಕಷ್ಟು ಇವೆ. ಅದರಲ್ಲಿ ಕರ್ಣಪಾರ್ಯನ ಈ ಕಾವ್ಯ ಐತಿಹಾಸಿಕವಾಗಿ ಮತ್ತು ಕಥನದ ದೃಷ್ಟಿಯಿಂದ ಬಹು ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಹಳಗನ್ನಡದ ಪ್ರಸಿದ್ಧ ಚಂಪೂ ಕವಿಗಳಲ್ಲಿ ಕರ್ಣಪಾರ್ಯನೂ ಒಬ್ಬ. ನಮಗೆ ಈ ಹೆಸರಿನ ಹಲವು ಕವಿಗಳಿದ್ದರೆಂದು ತಿಳಿದುಬರುತ್ತದೆ. ಕ್ರಿ.ಶ. 1040ಕ್ಕಿಂತಲೂ ಹಿಂದೆ, ಮಾಲತೀಮಾಧವವೆಂಬ ಕೃತಿಯನ್ನು ರಚಿಸಿದ್ದ, ಇನ್ನೊಬ್ಬ ಕರ್ಣಪಾರ್ಯನು ಇದ್ದನು. ಆತನನ್ನು ಒಂದನೆಯ ಕರ್ಣಪಾರ್ಯನೆಂದು ಭಾವಿಸಿದರೆ, […]
-ಮಹೇಶ್ವರಿ ಯು ಕನ್ನಡ ಭಾಷೆ ಇರುವವರೆಗೆ ನೆನೆಯಬೇಕಾದ ಕವಿ ಕುಮಾರವ್ಯಾಸ. ಅವನ ಶಬ್ದ ಸಂಪತ್ತೊ, ಅವನ ನಿರರ್ಗಳತೆಯೊ, ಅವನ ದೇಸೀ ಪ್ರಿಯತೆಯೊ- ಯಾವುದನ್ನು ಹೇಳೋಣ? ಕನ್ನಡಕ್ಕೆ ಅವನ ಋಣ ಬಹಳ ದೊಡ್ಡದು. ಕನ್ನಡ ಮನಸ್ಸು ಈ ಕವಿಯನ್ನು ಸ್ವೀಕರಿಸಿದ ಬಗೆಯನ್ನು ನಾವಿಲ್ಲಿ ನೆನೆದುಕೊಳ್ಳಬೇಕು. ಕುಮಾರವ್ಯಾಸ ಭಾರತ, ಗದುಗಿನ ಭಾರತ, ಕನ್ನಡ ಭಾರತ, ಕರ್ಣಾಟ ಭಾರತ ಕಥಾ ಮಂಜರಿ ಎಂಬೆಲ್ಲ ಹೆಸರುಗಳಿಂದ ಗುರುತಿಸಲ್ಪಡುವ ಅವನ ಕೃತಿಯು ತನ್ನ ದೇಸಿ ನಡೆಯಿಂದಾಗಿ ಪಂಡಿತರಿಗೆ ಮಾತ್ರವಲ್ಲದೆ ಪಾಮರರಿಗೂ ಪ್ರಿಯವಾಗಿ ಜನಮಾನಸದಲ್ಲಿ ಹಿಂದಿನಿಂದಲೇ […]
-ಡಾ.ತಿಪ್ಪೇರುದ್ರ ಸಂಡೂರು ಕನ್ನಡ ಸಾಹಿತ್ಯದ ಆರಂಭದ ಗದ್ಯಕೃತಿಗಳಲ್ಲಿ ಚಾವುಂಡರಾಯ ಪುರಾಣವು ಮಹತ್ವದ ಗ್ರಂಥವಾಗಿದ್ದು, ಜೈನ ಧರ್ಮದ ಪುರಾಣಗಳ ಸಮಸ್ತ ತೀರ್ಥಂಕರರ ವಿವರಗಳನ್ನು ನೀಡಿದ ಮೊದಲ ಕೃತಿ ಎನ್ನುವ ಹೆಗ್ಗಳಿಕೆ ಈ ಕೃತಿಗಿದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನೊಮ್ಮೆ ಅವಲೋಕಿಸಿದಾಗ ಹತ್ತನೆಯ ಶತಮಾನವನ್ನು ‘ಸುವರ್ಣಯುಗ’ ಎಂದು ಗುರುತಿಸಲಾಗಿದೆ. ಈ ಶತಮಾನದಲ್ಲಿ ರಚನೆಯಾದ ಕೃತಿಗಳಲ್ಲಿ ಗದ್ಯಕೃತಿಗಳು ವಿರಳವಾಗಿದ್ದು, ಅಂತಹ ಅಪರೂಪದ ಕೃತಿಗಳಲ್ಲಿ ಚಾವುಂಡರಾಯನು ರಚಿಸಿದ ‘ತ್ರಿಷಷ್ಠಿಲಕ್ಷಣಮಹಾಪುರಾಣ’ ಎಂಬ ಚಾವುಂಡರಾಯ ಪುರಾಣವು ಒಂದು ಮಹತ್ವದ ಗದ್ಯಗ್ರಂಥವಾಗಿದೆ. ಹಳಗನ್ನಡದಲ್ಲಿ ರಚಿತವಾದ ವೈಶಿಷ್ಟö್ಯಪೂರ್ಣ ಗದ್ಯಶೈಲಿಯಿಂದ […]
-ಡಾ.ಚಂದ್ರಕಲಾ ಹೆಚ್.ಆರ್. ಇದು ಶಾಸ್ತ್ರಗ್ರಂಥವಾಗಿದ್ದರೂ ಕಾವ್ಯಲಕ್ಷಣಗಳನ್ನು ಪ್ರತಿಧ್ವನಿಸುತ್ತದೆ. ಗಾದೆ, ಉಪಮೆಗಳು, ಒಗಟು ಯಥೇಚ್ಛವಾಗಿವೆ. ಜೈನ ಮತೀಯ ಗ್ರಂಥವಾದರೂ ಪರಮತ ಸಹಿಷ್ಣುತೆ, ವಿಶಾಲದೃಷ್ಟಿ ಕಂಡುಬರುತ್ತದೆ. ವೃತ್ತ, ಕಂದ, ಗದ್ಯ, ರಗಳೆ ರಚನೆಯಲ್ಲಿದೆ. ಗಾದೆಗಳು, ಪಡೆನುಡಿಗಳು ಬೆರೆತ ಕಾವ್ಯಶೈಲಿಯಿದೆ. ಹನ್ನೆರಡನೆಯ ಶತಮಾನವನ್ನು ಸುವರ್ಣ ಕಾಲಘಟ್ಟವೆಂದು ಪರಿಭಾವಿಸುವುದಕ್ಕೆ ಶಿವಶರಣರ ವಚನ ಸಾಹಿತ್ಯವು ಸಾಮಾಜಿಕ ಮತ್ತು ಸಾಂಸ್ಕøತಿಕ ಪಲ್ಲಟಗಳನ್ನು ಕನ್ನಡನಾಡಿನ ಬದುಕಿನಲ್ಲಿ ದಾಖಲಿಸಿದ ಕಾರಣ ಮತ್ತು ಧರ್ಮದ ಪರಿಕಲ್ಪನೆಗೆ ಹೊಸ ವ್ಯಾಖ್ಯಾನವನ್ನು ಬರೆದ ಕಾರಣವೂ ಆಗಿದೆ. ವೀರಶೈವಧರ್ಮ ಜನಸಾಮಾನ್ಯರನ್ನು ಎಲ್ಲಾ ತಾರತಮ್ಯಗಳಿಂದ ಬಿಡುಗಡೆಗೊಳಿಸಲು […]
ಇಂದಿಗೂ ಹಿರಿಯ ತಲೆಮಾರು ಸ್ತ್ರೀಯಿಂದ (ದ್ರೌಪದಿ) ಮಹಾಭಾರತವೆಂಬ ದೊಡ್ಡ ಯುದ್ಧ ನಡೆಯಿತು, ಸ್ತ್ರೀಯಿಂದ (ಸೀತೆ) ರಾಮಾಯಣದಲ್ಲಿ ಘೋರ ಯುದ್ಧ ಸಂಭವಿಸಿತು ಎಂದು ಹೇಳುತ್ತಾರೆ. ಹಾಗಾದರೆ ಪುರುಷನಿಂದ ಯಾವ ದೊಡ್ಡ ಯುದ್ಧವೂ ನಡೆದಿಲ್ಲವೇ? – ಶ್ರೀಧರ ಆರ್.ವಿ. ರಾಮಾಯಣ ಮತ್ತು ಮಹಾಭಾರತ ಕಾವ್ಯಗಳು ಭಾರತೀಯರ ಮನಸ್ಸನ್ನು ಸದಾ ಪ್ರಭಾವಿಸುತ್ತಿರುತ್ತವೆ. ಇವುಗಳ ಪ್ರೇರಣೆ ಮತ್ತು ಪ್ರಭಾವವನ್ನು ಕನ್ನಡ ಸಾಹಿತ್ಯ ಯಥೇಚ್ಛವಾಗಿ ಪಡೆದುಕೊಂಡಿದೆ. ಹಳಗನ್ನಡದ ಮಹತ್ವದ ಕವಿಯಾದ ಪಂಪ ಮತ್ತು ಮಧ್ಯಕಾಲೀನ ಕವಿಯಾದ ಕುಮಾರವ್ಯಾಸರು ತಮ್ಮ ಕವಿತಾಶಕ್ತಿಯಿಂದ ಮಹಾಭಾರತ ಕಾವ್ಯವನ್ನು ಹೊಸನೋಟಗಳ […]
ಕವಿರಾಜಮಾರ್ಗದಿಂದ ಅಂದಿನ ಸಮಕಾಲೀನ ಜೀವನ ಪರಿಣತಿಯ ಚಿತ್ರ ದೊರೆಯುವಂತೆಯೇ ಅದಕ್ಕಿಂತ ಹಿಂದಿನ ಸಾಹಿತ್ಯ ಪರಂಪರೆಯ ಸೂಚನೆಯೂ ಸಾಕಷ್ಟು ದೊರೆಯುತ್ತದೆ. ಹಾಗಾಗಿ ಇದು ಕನ್ನಡ ಸಾಹಿತ್ಯದ ಕತ್ತಲು ಯುಗದ ದಾರಿದೀಪವಾಗಿ ಮುಂದಿನ ಸಾಹಿತ್ಯದ ರಾಜಮಾರ್ಗವಾಗಿ ಕಾಣಿಸುತ್ತದೆ. – ಡಾ.ವಿ.ಸಿ.ಕಟ್ಟೆಪ್ಪನವರ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿರುವ ಕವಿರಾಜಮಾರ್ಗ ಕೃತಿಯು ಕನ್ನಡದ ಮೊಟ್ಟಮೊದಲ ಉಪಲಬ್ಧ ಕೃತಿಯಾಗಿದೆ. ಇದರ ಕಾಲ ಕ್ರಿ.ಶ. ಸು. 850. ಕೆ.ಬಿ.ಪಾಠಕರು ಕವಿರಾಜಮಾರ್ಗ ಕೃತಿಯನ್ನು ಕ್ರಿ.ಶ 1898ರಲ್ಲಿ ಸಂಪಾದಿಸಿದ್ದಾರೆ. ಕನ್ನಡ ಸಾಹಿತ್ಯದ ಕುರಿತು ಅಮೂಲ್ಯವಾದ ಸಂಗತಿಗಳನ್ನು […]
ಈ ಕಾವ್ಯ ಮೇಲ್ನೋಟಕ್ಕೆ ಸಾಂಪ್ರದಾಯಿಕ ಪುರಾಣದಂತಿದೆ. ಪುರಾಣಾಂಶ ಆ ಕಾಲದ ಕಾವ್ಯ ಶೈಲಿ. ಅದನ್ನು ಬಿಟ್ಟು ಒಳಾರ್ಥದಲ್ಲಿ ನಿಜಚರಿತ್ರೆಯನ್ನಷ್ಟೇ ಓದಿಕೊಂಡರೆ ಶರಣಯುಗದ ಆದರ್ಶಗಳ ಅನಾವರಣವಾಗುತ್ತದೆ. ಭುವನದ ಭಾಗ್ಯವೆಂಬಂತೆ ಕನ್ನಡ ನಾಡಿನಲ್ಲಿ ರೂಪುಪಡೆದ ವಚನ ಸಾಹಿತ್ಯ ಚಳವಳಿಯು ತನ್ನ ಪ್ರಗತಿಪರ ಧೋರಣೆಯಿಂದ ಹಲವು ವೃತ್ತಿಪರ ಕಾಯಕ ಜೀವಿಗಳ ಮಹಾ ಸಂಗಮವಾಗಿತ್ತೆಂಬುದು ವಿಶೇಷ. ಸಾಮಾಜಿಕ ಮತ್ತು ಸಾಹಿತ್ಯಿಕವಾಗಿ ನವೋದಯದ ಕಾಲವಾಗಿತ್ತು. ಧರ್ಮವೂ ಕೂಡ ಈ ಕಾಲಮಾನದಲ್ಲಿ ಬದುಕಿನ ಮಾನವೀಕರಣದ ಭಾಗವಾಗಿತ್ತು. ಈ ಎಲ್ಲ ವಿದ್ಯಮಾನಗಳ ಕೇಂದ್ರ ಕಲ್ಯಾಣ, ಕೇಂದ್ರದ ಶಕ್ತಿ […]
ಭಾಷೆಯ ನಿರಂತರ ಹರಿವನ್ನು ಅರಿತು ಅದಲ್ಲಿ ಮುಳುಗೆದ್ದು ಅದರ ಆಳ-ಅಂತರಾಳವನ್ನು ಬಿಚ್ಚಿಡುವುದು ವ್ಯಾಕರಣಕಾರನ ಕೆಲಸ. ಅದು ಅಷ್ಟು ಸುಲಭದ್ದಲ್ಲ. ಎಲ್ಲಾ ಭಾಷಿಕ ಜ್ಞಾನನ್ನು ಒಳಗೊಂಡಿರುವ ಕೇಶಿರಾಜನಿಂದ ರಚಿಸಲ್ಪಟ್ಟ ಶಬ್ದಮಣಿದರ್ಪಣವು ಅಂತಹ ಒಂದು ವಿದ್ವತ್ಪೂರ್ಣ ಕೃತಿ. ಬಾಷೆಯು ಬದುಕಿನ ಜೀವನಾಡಿ. ಅದು ಮಾನವನ ನಾಗರಿಕ ಬದುಕಿನ ಅವಿಭಾಜ್ಯ ಅಂಗ. ಅದರಲ್ಲಿ ನಾಡಿನ ಸಂಸ್ಕೃತಿ ಮತಿ ಎಲ್ಲವೂ ಅಡಗಿದೆ. ಹಾಗಾಗಿ ಭಾಷೆಯೊಂದರ ಹೊರತು ಭಾಷಿಕ ಸಮುದಾಯವನ್ನು ವಿವರಿಸುವುದು ಅಸಾಧ್ಯ. ಇಂತಹ ಭಾಷಿಕ ಘಟಕಗಳನ್ನು ಅದರ ಸ್ವರೂಪವನ್ನಾಧರಿಸಿ ನಿರ್ದಿಷ್ಟ ಕಾಲಘಟ್ಟದಲ್ಲಿ ಸೂತ್ರೀಕರಿಸುವ […]
ಕುಮಾರವ್ಯಾಸ ಎಂದ ಕೂಡಲೇ ಥಟ್ ಎಂದು ನೆನಪಾಗುವುದು ಅವನ ಕೃತಿ `ಕರ್ಣಾಟ ಭಾರತ ಕಥಾ ಮಂಜರಿ’. ಆದರೆ ಈತ `ಕರ್ಣಾಟ ಭಾರತ’ ಅಲ್ಲದೆ `ಐರಾವತ’ ಎಂಬ ಕೃತಿಯನ್ನು ರಚನೆ ಮಾಡಿದ್ದಾನೆಂದು ಕನ್ನಡ ಸಾಹಿತ್ಯ ಚರಿತ್ರಕಾರರು ಅಭಿಪ್ರಾಯ ಪಡುತ್ತಾರೆ. ಆರ್.ನರಸಿಂಹಾಚಾರ್ಯರು `ಕವಿಚರಿತೆ’ಯಲ್ಲಿ ಹೇಳುವಂತೆ, “ಕುಮಾರವ್ಯಾಸನು ‘ಐರಾವತ’ ಎಂಬ ಗ್ರಂಥವನ್ನು ಬರೆದಿರುವಂತೆ ತೋರುತ್ತದೆ’’, ಇವನ ಮುದ್ರಿತವಾದ ಭಾರತದಲ್ಲಿ ‘ಐರಾವತ’ಕ್ಕೆ ಸಂಬಂಧಿಸಿದ ಸಂಧಿಗಳಿಲ್ಲ ಎಂದು ಅಭಿಪ್ರಾಯಿಸಿದ್ದಾರೆ. ಆದರೆ ‘ಐರಾವತ’ ಕೃತಿ ಕುಮಾರವ್ಯಾಸ ಭಾರತದಷ್ಟು ಪ್ರಖ್ಯಾತಿಯನ್ನು ಪಡೆಯಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಬಹುಶಃ […]
ಹಳಗನ್ನಡ ಕಾವ್ಯಗಳ ಸಾಲಿನಲ್ಲಿ ಈ ಕೃತಿಯನ್ನು ಗುರುತಿಸಿದರೂ ಈ ಕೃತಿಯಲ್ಲಿ ಬಳಸಿರುವ ಕನ್ನಡವು ಹಳಗನ್ನಡದ ಪ್ರಭಾವದಿಂದ ಮುಕ್ತವಾಗಿದ್ದು ಹೊಸಗನ್ನಡಕ್ಕೆ ಹತ್ತಿರದಲ್ಲಿದೆ. ಇದನ್ನು ನಡುಗನ್ನಡದ ಕೃತಿಯೆಂದು ಪರಿಗಣಿಸಲಾಗಿದೆ. ಈ ಮಹಾಕಾವ್ಯವು ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಗುಜರಾತಿ ಭಾಷೆಗಳಿಗೆ ಅನುವಾದಗೊಂಡಿರುವುದು ಕೃತಿಯ ಲೋಕಪ್ರಿಯತೆಗೆ ಸಾಕ್ಷಿ. ಜೈನ ಮಹಾಕವಿ ರತ್ನಾಕರವರ್ಣಿಯಿಂದ ರಚಿಸಲ್ಪಟ್ಟಿರುವ ಅದ್ಭುತ ಕೃತಿ ‘ಭರತೇಶವೈಭವ’. ಲೌಕಿಕ ಹಾಗೂ ಆಧ್ಯಾತ್ಮಿಕ ವಿಚಾರಗಳ ಸಮನ್ವಯದ ಕೃತಿಯಾಗಿ ಇದು ಹೊರಹೊಮ್ಮಿದೆ. ತ್ಯಾಗ-ಭೋಗ ಸಮನ್ವಯದ ಕೃತಿಯಾಗಿಯೂ ‘ಭರತೇಶವೈಭವ’ ವಿಜೃಂಭಿಸುತ್ತದೆ ಎಂದರೂ ಅದು ಯಾವುದೇ ವೈಭವೀಕರಣದ […]
ಹರಿಹರ ಕವಿಯ ಪಂಪಾಶತಕ, ಪಂಪಾಕ್ಷೇತ್ರರಗಳೆ, ಹಿರಿಯೂರು ರಂಗಕವಿಯ ವಿರೂಪಾಕ್ಷಶತಕಗಳಂತೆ ಹಂಪಿಯ ವಿರೂಪಾಕ್ಷನನ್ನು, ಆ ಪರಿಸರದ ಭೌಗೋಳಿಕ ಪರಿಸರವನ್ನು ಕುರಿತು ಮಹತ್ವದ ಸಂಗತಿಗಳನ್ನು ಬಿಚ್ಚಿಡುವ ಕೃತಿಯಿದು. ಡಾ.ಕೆ.ರವೀಂದ್ರನಾಥ ಕನ್ನಡದಲ್ಲಿ ಸ್ಥಳನಾಮಗಳನ್ನು ಕುರಿತು ಅಧ್ಯಯನ ಮಾಡುವ ನಾಮವಿಜ್ಞಾನ ಇಂದು ಒಂದು ಶಾಸ್ತ್ರವಾಗಿ ಬೆಳೆದು ಬಂದಿದೆ. ಆದರೆ ಈ ಶಾಸ್ತ್ರ ಒಂದು ಕಾಲಕ್ಕೆ “ಸ್ಥಳ ಮಹಾತ್ಮೆಗಳು” ಎಂಬ ಹೆಸರಿನಿಂದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ಸಾಹಿತ್ಯ ಪ್ರಕಾರವಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಮೈಸೂರು ಅರಸರ ಕಾಲಘಟ್ಟದಲ್ಲಿ ತಲಕಾವೇರಿಮಾಹಾತ್ಮ್ಯೆ, ಕಕುದ್ಗಿರಿಮಾಹಾತ್ಮ್ಯೆ, ಶ್ರೀ ಪರ್ವತಮಾಹಾತ್ಮ್ಯೆ, ಬಿಳಿಗಿರಿ […]
ಇದು ಕನ್ನಡ ಸಾಹಿತ್ಯದ ಉತ್ತಮ ಚಂಪೂ ಕೃತಿ ಮಾತ್ರವಲ್ಲ; ಉತ್ತಮ ನೀತಿ ಪ್ರತಿಪಾದಕ ಕಾವ್ಯವಾಗಿದೆ. ಸಂಸ್ಕೃತ ಪಂಚತಂತ್ರದ ಒಂದು ಪರಂಪರೆಯನ್ನು ಕನ್ನಡದಲ್ಲಿ ಮೊದಲಬಾರಿಗೆ ಪರಿಚಯ ಮಾಡಿಕೊಟ್ಟ ಕೀರ್ತಿ ದುರ್ಗಸಿಂಹನಿಗೆ ಸಲ್ಲುತ್ತದೆ. ಡಾ.ತಿಪ್ಪೇರುದ್ರ ಸಂಡೂರು ಕನ್ನಡದ ಪ್ರಸಿದ್ಧ ಚಂಪೂ ಕವಿಗಳಲ್ಲಿ ದುರ್ಗಸಿಂಹನೂ ಒಬ್ಬ. ಬಹುಪಾಲು ಗದ್ಯವನ್ನೇ ಬಳಸಿಕೊಂಡು ವಿಶಿಷ್ಟ ಚಂಪೂ ಶೈಲಿಯನ್ನು ಕನ್ನಡ ಸಾಹಿತ್ಯ ಪರಂಪರೆಗೆ ನೀಡಿದ ಪ್ರಮುಖ ಕವಿ. ಹತ್ತನೇ ಶತಮಾನದಲ್ಲಿ ಲೌಕಿಕ ಮತ್ತು ಆಗಮಿಕ ಕಾವ್ಯಗಳ ಮಾರ್ಗವನ್ನು ತುಳಿಯದೇ ತನ್ನದೇ ಆದ ದಾರಿಯನ್ನು ಸೃಷ್ಟಿಸಿಕೊಂಡವನು ದುರ್ಗಸಿಂಹ. […]
ಓದುಗರು ಧರಿಸಿರುವ ಭಾವಗಳೇ ಪದ್ಯದ ಅರ್ಥವಾಗಿ ತೋರುವ ವಿಶಿಷ್ಟ ಪದ್ಯ ಇದು. ನೀವು ಕ್ರೋಧರಾಗಿ, ಈ ಪದ್ಯವನ್ನು ನೋಡಿರಿ. ಅದು ಸತ್ಯವತಿಯು ಶಂತನುವಿನ ಲಜ್ಜೆಗೇಡಿತನವನ್ನು, ಒಂಟಿ ಹೆಣ್ಣಿನ ಮೇಲಿನ ಗಂಡಿನ ದಾಷ್ಟ್ರ್ಯವನ್ನು ಕಂಡು ಅಸಹ್ಯವನ್ನೂ, ಕೋಪವನ್ನು ಪ್ರಕಟಿಸುವಂತೆ, ದಿಟ್ಟ ಹೆಣ್ಣೊಬ್ಬಳ ಪ್ರತಿಭಟನೆಯ ಸಾಂಕೇತಿಕ ಪದ್ಯವಾಗಿ ಕಾಣುತ್ತದೆ. ಸಾಹಿತ್ಯ ಪಠ್ಯವೊಂದು ತನ್ನ ಅರ್ಥವನ್ನು ದೇಶ-ಕಾಲಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳುತ್ತಲೇ ವರ್ತಮಾನಕ್ಕೆ ಮುಖಾಮುಖಿಯಾಗುತ್ತದೆ. ಪಂಪ ಹತ್ತನೇ ಶತಮಾನದಲ್ಲಿ ಆಗಿಹೋದ ಕವಿಯಾದರೂ ಆತನ ಅಭ್ಯಾಸದ ಅವಶ್ಯಕತೆ ಇಂದಿಗೂ ಇದೆ. ಈತನ ಎರಡನೇ ಕೃತಿಯಾದ […]
ಭೋಗದ ವರ್ಣನೆ, ಶೃಂಗಾರದ ವರ್ಣನೆ, ಪುರದ ವರ್ಣನೆ, ಊಟದ ವರ್ಣನೆ, ಮಾತೃವಾತ್ಸಲ್ಯದ ವರ್ಣನೆ, ವಿರಹದ ವರ್ಣನೆ, ಯುದ್ಧ ವರ್ಣನೆ ಹೀಗೆ ಎಲ್ಲವೂ ಕನಕದಾಸರ ಕಾವ್ಯದಲ್ಲಿ ವರ್ಣನಾ ವೈಭವವಾಗಿ ಮೆರೆದಿರುವುದನ್ನು ಕಾಣಬಹುದಾಗಿದೆ. ದಾಸಸಾಹಿತ್ಯದ ಅಪೂರ್ವ ರತ್ನ ಕನಕದಾಸರು ಕೇಶವನ ಆರಾಧಕನಾಗಿ, ಕವಿಯಾಗಿ, ಸಂತರಾಗಿ, ಧರ್ಮ ಸಮಾಜ ಸಂಸ್ಕೃತಿಯ ಹಿತಚಿಂತಕರಾಗಿ ಭಾರತೀಯ ಸಂಸ್ಕೃತಿಗೆ ನೀಡಿದ ಕಾಣಿಕೆ ಅತ್ಯಾದ್ಭುತವಾದದ್ದು. ನಡುಗನ್ನಡ ಕಾಲದ ಮಹತ್ವದ ಕವಿಯಾಗಿ ಅಪಾರ ಲೋಕಾನುಭವ ಹಾಗೂ ಅಸಾಧರಣ ಪ್ರತಿಭೆಯಿಂದ ಸಾಮಾಜಿಕ ಪರಿವರ್ತನೆಗೆ ಹಾಗೂ ಜಾತಿ ವರ್ಣಭೇದದ ತಲ್ಲಣಗಳಿಗೆ ತಕ್ಕ […]
ಕನ್ನಡವೆಂಬ ರತ್ನದ ಕನ್ನಡಿಯಲ್ಲಿ ನೋಡಿಕೊಂಡರೆ ದೋಷವೇನಾದರೂ ಬರುವುದೇ? -ಇದು ಕವಿ ಅಂಡಯ್ಯ ಬೀಸುವ ಚಾಟಿ ಏಟು! ಹಳಗನ್ನಡ ಪರಂಪರೆಯಲ್ಲಿ ‘ಕಬ್ಬಿಗರ ಕಾವ’ ಹೆಸರಿನ ಖಂಡಕಾವ್ಯಕ್ಕೆ ವಿಶೇಷವಾದ ಸ್ಥಾನವಿದೆ. ಇದನ್ನು ರಚಿಸಿದ ಕವಿ ಆಂಡಯ್ಯ. ಇವನ ಕಾಲ ಹನ್ನೊಂದನೆ ಶತಮಾನದ ಕೊನೆ, ಹನ್ನೆರಡನೆ ಶತಮಾನದ ಆರಂಭ. ಈ ಕಾಲಘಟ್ಟ ಕನ್ನಡ ಸೃಜನಶೀಲ ಪ್ರಯೋಗದ ಸಂಕೀರ್ಣ ಕಾಲ. ಆಂಡಯ್ಯ ಚಂಪೂ ಕಾವ್ಯದ ಯುಗದಲ್ಲಿ ಇದ್ದರೂ ಅದಕ್ಕೆ ಸವಾಲೆಸೆದು ಹೊಸನೆಲೆಯ ಕಾವ್ಯ ರಚನೆಗೆ ಮುಂದಾದದ್ದು ಕನ್ನಡದ ಮಟ್ಟಿಗೆ ಅಪರೂಪದ ಸಂಗತಿ. ಕನ್ನಡಕ್ಕೊಡೆಯನೋರ್ವನೆ […]
ಈ ಕೃತಿಯು ಜೀವಕ್ಕೆ ಒಳಿತನ್ನು ಮತ್ತು ಮಾನವಧರ್ಮವನ್ನು ಬೋಧಿಸುತ್ತಲೇ ಜೈನಧರ್ಮದ ತತ್ವಗಳನ್ನು ಅನುಸರಿಸಿ ಮೋಕ್ಷದ ಕಡೆಗೆ ಸಾಗಲು ಅನುವಾಗುವ ಅನೇಕ ಅಂಶಗಳನ್ನು ಉದಾಹರಣೆ ಸಹಿತವಾಗಿ ವಿವರಿಸುವ ಗ್ರಂಥವಾಗಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜೈನಸಾಹಿತ್ಯದ ಹರಹು ತುಂಬ ವಿಸ್ತಾರವಾದುದು. ಈ ಜೈನಸಾಹಿತ್ಯದಲ್ಲಿ ಕಾವ್ಯಕೃತಿಗಳ ಜೊತೆಗೆ ಲಕ್ಷಣ, ಅಲಂಕಾರ, ಛಂದಸ್ಸು, ಜ್ಯೋತಿಷ್ಯ, ವೈದ್ಯ… ಹೀಗೆ ಅನೇಕ ಬಗೆಯ ಶಾಸ್ತ್ರ ಕೃತಿಗಳನ್ನೂ ಕಾಣಬಹುದು. ಕಾವ್ಯಕೃತಿಗಳು ಲೌಕಿಕ, ಆಗಮಿಕ ಎಂಬ ಎರಡು ಕಾವ್ಯ ಮಾದರಿಗಳಲ್ಲಿ ಅಭಿವ್ಯಕ್ತಿಗೊಂಡಿದ್ದರೆ, ಇತ್ತ ಲೌಕಿಕವೂ ಧಾರ್ಮಿಕವೂ ಅಲ್ಲದ, ಅತ್ತ […]
ವಚನೋತ್ತರ ಯುಗದಲ್ಲಿ ಸೋಮನಾಥ, ಹರಿಹರ, ಭೀಮಕವಿ, ಗುಬ್ಬಿಮಲ್ಲಣ್ಣಾರ್ಯ ಮುಂತಾದ ಹಲವು ವೀರಶೈವ ಕವಿಗಳು ಚಾರಿತ್ರಿಕ ಶರಣರ ಘಟನೆಗಳನ್ನು ಪೌರಾಣೀಕೃತಗೊಳಿಸಿ ಹೇಳುವ ಪರಂಪರೆಗೆ ಈ ಕವಿಯೂ ಸೇರಿದ್ದಾನೆ. ಕನ್ನಡ ನಾಡಿನಲ್ಲಿ ನಡೆದ ವಚನ ಚಳವಳಿ ಎಲ್ಲಾ ಕಾಲದ ಸ್ವೀಕೃತ ಮೌಲ್ಯವನ್ನು ಹೊಂದಿದ ಚಲನಶೀಲ ವ್ಯವಸ್ಥೆ. ಶರಣರ ಅಭಿವ್ಯಕ್ತಿಯ ಮಾರ್ಗ ಅನೇಕ ಸೃಜನಶೀಲ ಬರಹಗಾರರಿಗೆ ಆದರ್ಶವಾಗಿದೆ. 12ನೇ ಶತಮಾನದ ಜಾತಿ, ವರ್ಗ, ವರ್ಣರಾಹಿತ್ಯ ಸಮಸಮಾಜವನ್ನು ನಿರ್ಮಿಸಹೊರಟ ಪ್ರಬುದ್ಧ ರಾಜಕೀಯ ನೇತಾರ ಬಸವಣ್ಣ. ಬಸವಣ್ಣನವರಿಗೆ ಹೆಗಲೆಣೆಯಾಗಿ ನಿಂತು ಹೋರಾಟದಲ್ಲಿ ಸಕ್ರಿಯರಾಗಿದ್ದ ಹಲವು […]
ಕವಿ ಸಾಂಪ್ರದಾಯಿಕವಾದ ಮತ್ತು ಚಿರಪರಿಚಿತವಾದ ವಸ್ತುವನ್ನು ಬಿಟ್ಟು ಅಪಾತ್ರ ಪ್ರಣಯದ ಎರಡು ದಿಕ್ಕುಗಳನ್ನು ನಿರೂಪಿಸಿ ಬದುಕಿನ ವಾಸ್ತವಿಕತೆಗೆ ಕನ್ನಡಿ ಹಿಡಿದಿದ್ದಾನೆ. ಅವನ ಪಾತ್ರಗಳು ಪೌರಾಣಿಕ ಅಥವಾ ಐತಿಹಾಸಿಕ ಎನಿಸಬಹುದು. ಆದರೆ ಅವುಗಳಲ್ಲಿರುವ ಸಮಸ್ಯೆ ಮಾತ್ರ ಸಾಮಾಜಿಕವಾದುದು, ನಿತ್ಯನೂತನವಾದುದು. ಹನ್ನೆರಡನೆಯ ಶತಮಾನದ ಉತ್ತರಾರ್ಧ ಮತ್ತು 13ನೆಯ ಶತಮಾನದ ಪೂವಾರ್ಧದಲ್ಲಿದ್ದ ಜನ್ನ ಕವಿಯ ಮೊದಲ ಕಾವ್ಯ ‘ಯಶೋಧರ ಚರಿತೆ’ಯು “ಅಭಯರುಚಿ ಕುಮಾರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದ ಶುಭಕಥನ”ವಾದರೆ, ಎರಡನೆಯ ಕಾವ್ಯ ‘ಅನಂತನಾಥ ಪುರಾಣ’ವು “ಅರಿದಿದು ಬಾಳ […]
ಇಡೀ ಕಾವ್ಯ ಕಾಡು-ನಾಡು, ಬಡವ-ಬಲ್ಲಿದ, ವಿನಯ ಅಹಂಕಾರ, ಭಕ್ತಿ-ದಾಷ್ಟ್ರ್ಯ ಮುಂತಾದ ಹಲವಾರು ವೈರುಧ್ಯ ಮತ್ತು ಸಮರಸದ ಕಥನವನ್ನು ಒಳಗೊಂಡಿದೆ. ಜಾತಿಸಂಕರ ಮಾಡಿ ಜಾತ್ಯತೀತರನ್ನು ಅಪ್ಪಿಕೊಳ್ಳುವ, ಕತ್ತಲನ್ನು ಕಳೆಯುವ, ಬಾಳಿನಲ್ಲಿ ಬೆಳಕನ್ನು ಬೀರುವ, ದ್ವೇಷವನ್ನು ಕಳೆದು ಪ್ರೀತಿಯನು ಬೆಳೆಸುವ ಪಾರ್ಥಲಿಂಗ ಮಹಿಮಾ ಪುರುಷ ನಾಗಿ ಚಿತ್ರಿತನಾಗಿದ್ದಾನೆ. ಜ್ಞಾನ-ಭಕ್ತಿ ಎರಡನ್ನೂ ಆಶಯವಾಗುಳ್ಳ ಈ ಕಾವ್ಯ ಭೂತ, ವರ್ತಮಾನ ಹಾಗೂ ಭವಿಷ್ಯತ್ತಿನ ತ್ರಿಕಾಲ ಸೂತ್ರದ ಹೆಣಿಗೆಯಲ್ಲಿ ರೂಪುಗೊಂಡಿದೆ. ರಾಮಾಯಣ ಮತ್ತು ಮಹಾಭಾರತಗಳು ನಮ್ಮದೇಶದ ಪರಿಸರ ಮತ್ತು ಸಮುದಾಯಗಳಿಗೆ ಆನೇಕ ರೀತಿಯ ಸೃಜನಶೀಲ […]