ಬಳೆ ಬಳೆ ಎಂದು ಹೀಗಳಿಯದಿರಿ!

ಭುವನೇಶ್ವರಿ ಹೆಗಡೆ

 ಬಳೆ ಬಳೆ ಎಂದು ಹೀಗಳಿಯದಿರಿ! <p><sub> ಭುವನೇಶ್ವರಿ ಹೆಗಡೆ </sub></p>

‘ನಾನು ಹಾಕಿರುವುದು ಬಳೆಯಲ್ಲ, ಕಡಗ’ ಎಂದು ಟ್ವೀಟ್ ಮಾಡಿ ಪೌರುಷ ಮೆರೆಯುವವರು ಒಮ್ಮೆ ಈ ‘ಬಳೆ’ಯ ಕಹಳೆ ಕೇಳುವುದೊಳಿತು! ‘ಯಾರ್ತೊಟ್ಕೊಳ್ತಾರೆ ಬಿಡಮ್ಮ’ ಎಂದಳು ಮಗಳು. ಕೈಲಿದ್ದ ಬಳೆಯನ್ನು ಬಾಕ್ಸಿನಲ್ಲಿ ಇಟ್ಟೆ. ಮಗಳು ಹೊರಹೋದಳು. ನಾನು ಹಾಗೆಯೇ ಕುರ್ಚಿಯಲ್ಲಿ ಒರಗಿದೆ. ಬಾಕ್ಸಿನಿಂದ ಬಳೆ ಉರುಳುತ್ತಾ ಹೊರಬಂತು. ‘ನಮ್ಮ ಪರಂಪರೆಯನ್ನು ಮಗಳಿಗೇಕೆ ಹೇಳಲಿಲ್ಲ?’ ಎಂದು ಸವಾಲು ಎಸೆಯಿತು. ‘ಏನೆಂದು ಹೇಳಲಿ?’ ಎಂದೆ. ‘ನನ್ನನ್ನು ದಿಟ್ಟಿಸಿ ನೋಡು. ನನ್ನ ಆದಿ, ಅಂತ್ಯಗಳು ತಿಳಿಯುತ್ತವೇನು? ನಾನು ಅನಾದಿ, ಅನಂತ್ಯ. ವೃತ್ತಾಕಾರವಾಗಿ ಇರುವುದಕ್ಕೆ ಆದಿ, […]