ಸಂಪಾದಕೀಯ

ಸಂಪಾದಕೀಯ

ಈ ನಾಯಕರು ಹೀಗೆಯೇ ಕೊನೆಗಾಣಬೇಕೇ?   ಈ ಸಂಚಿಕೆಯ ಮುಖ್ಯಚರ್ಚೆಗಾಗಿ ಯಡಿಯೂರಪ್ಪ ಸರ್ಕಾರದ ಕಾರ್ಯನಿರ್ವಹಣೆಯನ್ನು ಪರಾಮರ್ಶಿಸಲು ತೊಡಗಿದ ಸಂದರ್ಭದಲ್ಲೇ ಕಾಕತಾಳೀಯ ಎನ್ನುವಂತೆ ಈ ಸರ್ಕಾರ ರಚನೆಗೆ ಕಾರಣರಾದ ಕೆಲವು ಸಚಿವರು ಸಾರ್ವಜನಿಕರ ನಾಲಗೆಗೆ ಆಹಾರವಾಗಿದ್ದಾರೆ. ಒಬ್ಬರ ಅನೈತಿಕ ಚಟುವಟಿಕೆಯ ಅಶ್ಲೀಲ ವಿಡಿಯೋ ಬಹಿರಂಗಗೊಂಡಿದೆ; ಇನ್ನೂ ಆರು ಮಂತ್ರಿಗಳು ತಮ್ಮ ವಿಡಿಯೋ ಪ್ರಸಾರದ ಭಯದಿಂದ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದು ಈ ರಾಜ್ಯ ಹಿಂದೆಂದೂ ಕಾಣದ ಬೆಳೆವಣಿಗೆಗೆ ಸಾಕ್ಷಿಯಾಗಿದೆ. ಒಂದೇ ಬಯಲು ರಂಗಮಂದಿರ; ಏಕಕಾಲಕ್ಕೆ ಹಲವು ನಾಟಕಗಳ ಪ್ರದರ್ಶನ. […]

ಮಾರ್ಚ್ ಸಂಚಿಕೆಯ ಮುಖ್ಯಚರ್ಚೆ ವೈಚಾರಿಕ ಪ್ರಾಮಾಣಿಕತೆಯ ಪರೀಕ್ಷೆ

ಆರೆಸ್ಸೆಸ್ ಮಾಡುತ್ತಿರುವ ತಪ್ಪುಗಳೇನು ಎಂದು ಸಮಾಜಮುಖಿ ಪತ್ರಿಕೆಯು ಮುಖ್ಯಚರ್ಚೆ ಘೋಷಿಸಿದಾಗ ಬಹುತೇಕರು ಈ ಚರ್ಚೆ ಆರೆಸ್ಸೆಸ್ಸಿನ ಮೂಲಸಿದ್ಧಾಂತಗಳನ್ನು ಟೀಕಿಸುವ-ಹೀಯಾಳಿಸುವ ಚರ್ಚೆಯೆಂದೇ ಭಾವಿಸಿದ್ದಿರಬೇಕು. ಆರೆಸ್ಸೆಸ್ ಒಂದು ದೇಶ ವಿಭಜಕ ಮತೀಯ ಶಕ್ತಿ ಹಾಗೂ ಮನುವಾದಿ-ಬ್ರಾಹ್ಮಣವಾದಿ ಸಂಘಟನೆಯೆಂದು ಜರಿಯುವ ಚರ್ಚೆಯೆಂದು ಅಂದುಕೊಂಡಿದ್ದಿರಬೇಕು. ಆದರೆ ಈ ಚರ್ಚೆಯಲ್ಲಿ ಆರೆಸ್ಸೆಸ್ಸಿನ ತತ್ವ-ಸಿದ್ಧಾಂತಗಳನ್ನು ಚರ್ಚಿಸುವುದು ಪತ್ರಿಕೆಯ ಉದ್ದೇಶವಾಗಿರಲಿಲ್ಲ. ಇದನ್ನು ಮಾಡುವ ಚರ್ಚೆಗಳು ಈಗಾಗಲೇ ಬಹಳಷ್ಟು ನಡೆಯುತ್ತಲೇ ಇವೆ. ಈ ಚರ್ಚೆಗಳನ್ನು ಕುರಿತು ಬೇಕು-ಬೇಡವೆಂದು ಹೇಳುವ ಪ್ರಯತ್ನವೂ ಇದಲ್ಲ. ಪ್ರತಿಯೊಂದು ಸಂಘಟನೆಗೂ ತನ್ನ ನಂಬಿಕೆಯನ್ನು ಪ್ರಚುರಪಡಿಸುವ […]

ಆರ್ ಎಸ್ ಎಸ್ ಎಂಬ ಸಂಸ್ಥೆ ಅಸ್ತಿತ್ವದಲ್ಲಿ ಇರುವುದೇ ತಪ್ಪು!

-ಡಾ.ಟಿ.ಆರ್.ಚಂದ್ರಶೇಖರ

ಅಸಮಾನತೆಯ, ಶ್ರೇಣೀಕರಣದ ಪ್ರಣಾಳಿಕೆಯ ಪ್ರತಿನಿಧಿಯಾಗಿ ಆರ್ ಎಸ್ ಎಸ್ ಸಂಸ್ಥೆಯ ಇರುವಿಕೆಯೇ ತಪ್ಪು. ಈ ವ್ಯವಸ್ಥೆಯ ಅಮಾನವೀಯ, ರೂಕ್ಷತನವನ್ನು ಪ್ರತಿನಿಧಿಸುವ ಸಂಸ್ಥೆಯನ್ನು ‘ಸಂಸ್ಥೆ ಸರಿಯಿದೆ, ಆದರೆ ಅದರ ಕಾರ್ಯಾಚರಣೆ ತಪ್ಪಾಗಿದೆ’ ಎಂದು ಹೇಳುವುದು ಹೇಗೆ? -ಡಾ.ಟಿ.ಆರ್.ಚಂದ್ರಶೇಖರ ಆರ್ ಎಸ್ ಎಸ್ ಮಾಡಿರುವ ತಪ್ಪುಗಳೇನು ಎಂಬ ವಿಷಯವನ್ನು ಚರ್ಚೆಗೆ ಇಟ್ಟಿದ್ದೀರಿ. ನಿಮ್ಮ ಪ್ರಶ್ನೆಯನ್ನು ಸೂಕ್ಷ್ಮವಾಗಿ ಕೆದಕಿದರೆ ‘ಆರ್‍ಎಸ್‍ಎಸ್ ಸರಿ, ಆದರೆ ಅದರ ಕಾರ್ಯಸೂಚಿ ಮತ್ತು ಕಾರ್ಯಾಚರಣೆ ತಪ್ಪು’ ಎಂಬ ಅದರ ಒಳಾರ್ಥ ತಿಳಿಯುತ್ತದೆ. ಆರ್ ಎಸ್ ಎಸ್ ಎಂಬ […]

ಆರೆಸ್ಸೆಸ್ ಮತ್ತು ಸ್ವವಿಮರ್ಶೆ

-ವೆಂಕಟೇಶ ಮಾಚಕನೂರ

 ಆರೆಸ್ಸೆಸ್ ಮತ್ತು ಸ್ವವಿಮರ್ಶೆ <p><sub> -ವೆಂಕಟೇಶ ಮಾಚಕನೂರ </sub></p>

ದೇಶದ ಜನ ಇತರ ಪಕ್ಷಗಳು ಎಸಗುತ್ತ ಬಂದ ಪ್ರಮಾದಗಳನ್ನು ನೋಡಿ, ಬೇಸತ್ತು, ಆರೆಸ್ಸೆಸ್–ಭಾಜಪದ ತಪ್ಪುಗಳ ಕುರಿತು ಉಪೇಕ್ಷೆ ತಾಳಿದ್ದರೆ ಅಚ್ಚರಿಯಿಲ್ಲ. ಕೆಲವು ವಿಷಯಗಳಲ್ಲಾದರೂ ಭಾಜಪ ಜನರಲ್ಲಿ ವಿಶ್ವಾಸ ಮೂಡಿಸಿದ್ದು ನಿಜ. ಆದ್ದರಿಂದ ಆತ್ಮಾವಲೋಕನದ ತುರ್ತು ಅವಶ್ಯಕತೆ ಇರುವುದು ಆರೆಸ್ಸೆಸ್–ಭಾಜಪದ ವಿರೋಧಿಗಳಿಗೆ! -ವೆಂಕಟೇಶ ಮಾಚಕನೂರ ಆರೆಸ್ಸೆಸ್ ಕುರಿತು ದಿಟ್ಟ ಲೇಖನಗಳನ್ನು ಪ್ರಕಟಿಸುವ ಸಾಹಸಕ್ಕೆ ಕೈಹಾಕಿ ಸಮಾಜಮುಖಿ ಸ್ತುತ್ಯ ಕಾರ್ಯವನ್ನೇ ಮಾಡಿದೆ. ಈ ಕುರಿತು ಚರ್ಚೆಗೆ ವಿದ್ವತ್ಪೂರ್ಣ ಲೇಖನಗಳೂ ಬಂದದ್ದು, ಆ ಲೇಖನಗಳನ್ನು ಆಧರಿಸಿ ತನ್ನ ತಪ್ಪುತಡೆ, ಓರೆಕೋರೆಗಳನ್ನು ತಿದ್ದಿಕೊಳ್ಳುವುದು, […]

ನನ್ನ ಲೇಖನ ಅನರ್ಹವಾಗಿತ್ತೇ…?

-ಡಾ.ಟಿ.ಆರ್.ಚಂದ್ರಶೇಖರ, ಬೆಂಗಳೂರು.

–ಡಾ.ಟಿ.ಆರ್.ಚಂದ್ರಶೇಖರ, ಬೆಂಗಳೂರು. ‘ಸಮಾಜಮುಖಿ’ ಪತ್ರಿಕೆಯ ಮಾರ್ಚ್ ಸಂಚಿಕೆಯನ್ನು ಇಂದು ಓದಿದೆ. ಇದರಲ್ಲಿನ ಲೇಖನಗಳು ಉತ್ಕೃಷ್ಟ ವಾಗಿವೆ. ದಂಡಾವತಿ ಅವರ ಲೇಖನ ಮೀಸಲಾತಿ ಬಗ್ಗೆ ಚಾರಿತ್ರಿಕ ನೋಟವನ್ನು ಹಾಗೂ ಪ್ರಸ್ತುತ ಗೊಂದಲದ ಚಿತ್ರವನ್ನು ನೀಡುತ್ತದೆ. ಇದೇ ರೀತಿಯಲ್ಲಿ ಆರ್.ಎಸ್.ಎಸ್. ಬಗೆಗಿನ ಪ್ರತಿಕ್ರಿಯೆಗಳು ಸೃಜನಶೀಲವಾಗಿವೆ, ಚಿಂತನಾ ಪ್ರಧಾನವಾಗಿವೆ. ಇದರ ಬಗ್ಗೆ ನಾನೂ ನನ್ನ ಪ್ರತಿಕ್ರಿಯೆ ಕಳುಹಿಸಿದ್ದೆ (ಐ ಟೂ ರ್ಯಾನ್ ಎಂದಂತೆ). ಅದು ಪ್ರಕಟವಾಗಿಲ್ಲ. ಸಂಪಾದಕರ ಆಯ್ಕೆಯ ಸ್ವಾತಂತ್ರ್ಯವನ್ನು ನಾನು ಪ್ರಶ್ನೆ ಮಾಡುವುದಿಲ್ಲ. ಆದರೆ ಇದಕ್ಕೆ ತಮ್ಮ ಸಂಪಾದಕೀಯ ನಿಯಮದಲ್ಲಿ […]

ಬತ್ತಲಾಗದೆ ಬಯಲು ಸಿಕ್ಕದಿಲ್ಲಿ

-ಎನ್.ಬೋರಲಿಂಗಯ್ಯ

ಸುಧಾರಣೆ ಅನಿವಾರ್ಯವಾಗಿರುವ ಈಗಿನ ಕಾಲಮಾನದ ನಮ್ಮ ಪ್ರಸ್ತುತ ಬದುಕನ್ನು ಕುರಿತ ಕೆಲವು ಟಿಪ್ಪಣಿಗಳನ್ನು ಇಲ್ಲಿ ಮಂಡಿಸಬಯಸಿದ್ದೇನೆ. -ಎನ್.ಬೋರಲಿಂಗಯ್ಯ ನಮ್ಮ ಆಲೋಚನೆಗಳು ನಮ್ಮ ಬದುಕನ್ನು ರೂಪಿಸುತ್ತವೆಯೋ? ಅಥವಾ ನಮ್ಮ ಬದುಕು ನಮ್ಮ ಆಲೋಚನೆಗಳನ್ನು ರೂಪಿಸುತ್ತದೋ? ಈ ಇಂಥ ಅಷ್ಟೇನೂ ಸುಗಮ ಚಕ್ರವ್ಯೂಹವಲ್ಲದ ಸಂಕೀರ್ಣ ಪ್ರಶ್ನೆಗಳ ವಿಶ್ಲೇಷಣೆಗೆ ಈಗ ಕೈ ಹಚ್ಚದೆ ಇಲ್ಲಿಯ ಮೊದಲ -ನಮ್ಮ ಆಲೋಚನೆಗಳು ನಮ್ಮ ಬದುಕನ್ನು ರೂಪಿಸುತ್ತವೆ- ವಿಚಾರದ ಪಕ್ಷಪಾತಿಯಾಗಿ ಸುಧಾರಣೆ ಅನಿವಾರ್ಯವಾಗಿರುವ ಈಗಿನ ಕಾಲಮಾನದ ನಮ್ಮ ಪ್ರಸ್ತುತ ಬದುಕನ್ನು ಕುರಿತ ಕೆಲವು ಟಿಪ್ಪಣಿಗಳನ್ನು ಇಲ್ಲಿ […]

ಸ್ಪಷ್ಟೀಕರಣ ನೀಡಬಾರದೇಕೆ?

-ಎಚ್.ಎಸ್.ದೊರೆಸ್ವಾಮಿ, ಬೆಂಗಳೂರು.

–ಎಚ್.ಎಸ್.ದೊರೆಸ್ವಾಮಿ, ಬೆಂಗಳೂರು. ರಾಷ್ಟ್ರೀಯ ಸ್ವಯಂಸೇವಕ ಸಂಘ ರಿಜಿಸ್ಟರ್ಡ್ ಸಂಸ್ಥೆ ಅಲ್ಲ. ವಾರ್ಷಿಕ ಆಡಿಟ್ ಆದ ಲೆಕ್ಕವನ್ನು ಅದರ ಸ್ಥಾಪನೆಯಾದಂದಿನಿಂದ ಇಂದಿನವರೆಗೂ ಸಾರ್ವಜನಿಕರ ಮುಂದೆ ಇಟ್ಟಿಲ್ಲ. ಈ ಸಂಸ್ಥೆ ಲೆಕ್ಕವಿಲ್ಲದಷ್ಟು ಹಣವನ್ನು ಸಾರ್ವಜನಿಕರಿಂದ ವರ್ಷವರ್ಷವೂ ಬೇರೆ ಬೇರೆ ಹೆಸರಿನಲ್ಲಿ ಸಂಗ್ರಹ ಮಾಡುತ್ತದೆ. ಆರ್‍ಎಸ್‍ಎಸ್‍ಗೆ ಸೇರಿದ ಕಾರುಗಳು, ಮನೆಗಳು, ದ್ವಿಚಕ್ರವಾಹನಗಳು, ಸ್ಥಿರಾಸ್ತಿಗಳು ಬೇರೆ ಬೇರೆ ಖಾಸಗಿಯವರ ಹೆಸರಿನಲ್ಲಿವೆ ಎಂದು ಹಿಂದೆ ಅನೇಕ ವರ್ಷಗಳ ಕಾಲ ಆರ್‍ಎಸ್‍ಎಸ್‍ನಲ್ಲಿದ್ದು ಹೊರಬಂದು ನಮ್ಮ ಚಳವಳಿಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿರುವ ಸ್ನೇಹಿತರೊಬ್ಬರು ಬಹಿರಂಗ ಪತ್ರ ಹೊರಡಿಸಿದ್ದಾರೆ. ಇನ್ನೂ […]

ಆರೆಸ್ಸೆಸ್ ಬದಲಾಗಿಲ್ಲ, ಬಲವಾಗಿದೆ!

-ಎಚ್.ವಿ.ನಟರಾಜ, ಬೆಂಗಳೂರು.

–ಎಚ್.ವಿ.ನಟರಾಜ, ಬೆಂಗಳೂರು. ಹಿಂದುತ್ವ ಸಿದ್ಧಾಂತವನ್ನು ಮುಜುಗರವಾಗಲೀ ಮುಲಾಜಾಗಲೀ ಇಲ್ಲದೆ ಆಡಳಿತ ಪಕ್ಷವೇ ಮೊದಲುಗೊಂಡು ಅದರ ಅಧೀನ ಸಂಘಟನೆಗಳೆಲ್ಲ ದೊಡ್ಡ ಗಂಟಲಲ್ಲಿ ಬೊಬ್ಬೆಯಿಡುತ್ತಿರುವ ಸನ್ನಿವೇಶ ಇಂದಿನದು. ಹೀಗಾಗಿ ಅದರ ಮೂಲ ಪ್ರೇರಣೆಯಾದ ಆರೆಸ್ಸಸ್ ಹಿಂದುತ್ವವನ್ನು ಮೀರಿದ ಧಾರ್ಮಿಕ ಐಕ್ಯತೆಯ ಪ್ರತಿಪಾದನೆಯನ್ನು ಇನ್ನೂ ತನ್ನ ಉದ್ದೇಶದಲ್ಲಿ ಇರಿಸಿಕೊಂಡಿರುವ ಬಗ್ಗೆಯೇ ಸಂದೇಹಗಳಿವೆ. ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೊಂದಿದೆ. ಹಿಂದೊಂದು ಕಾಲದಲ್ಲಿ ಆರೆಸೆಸ್ಸನ್ನು ಒಂದು ಸಾಂಸ್ಕೃತಿಕ ಸಂಘಟನೆಯಾಗಿ ನೋಡಬೇಕು ಎಂತಲೂ, ಯಾವುದೇ ರಾಜಕೀಯ ಪಕ್ಷಕ್ಕೂ ಅದು ನೇರ ಸಂಬಂಧ ಹೊಂದಿಲ್ಲವೆಂದೂ ಬಲವಾಗಿ […]

ಕಣ್ತೆರೆಸುವ ಮೀಸಲಾತಿ ವಿಶ್ಲೇಷಣೆ

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ ಸಮಾಜಮುಖಿ ಮಾರ್ಚ್ ಸಂಚಿಕೆ ತುಂಬ ಸರಿಯಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡುತ್ತಿರುವ ತಪ್ಪುಗಳೇನು? ಕುರಿತ ಎಲ್ಲ ಲೇಖನಗಳಲ್ಲೂ ಅರ್ಥಪೂರ್ಣ ಚರ್ಚೆ ನಡೆದಿದೆ. ಆದರೆ ಡಾ.ಬಿ.ವಿ.ವಸಂತಕುಮಾರ್ ಅವರ ವಾದವನ್ನು ಮಾತ್ರ ಒಪ್ಪಲಾಗಲಿಲ್ಲ. ಇವರು ಸಮಾಜಮುಖಿಯ ಪ್ರಶ್ನೆಯನ್ನೇ ಆರೆಸ್ಸೆಸ್ ಸಮರ್ಥನೆಗೆ ಬಳಸಿಕೊಳ್ಳಲು ಯತ್ನಿಸಿ ಎಡವಿ ಬಿದ್ದಿದ್ದಾರೆ. ಹೀಗಾಗಿ ಇವರು ಉಳಿದ ಲೇಖನಗಳ ಚರ್ಚೆಗೆ ಉತ್ತರಿಸುವ ಯತ್ನ ಮಾಡಲಿ ಎಂದು ಮಾತ್ರ ನಾವು ಆಶಿಸೋಣ. ಈ ಮುಖ್ಯ ಚರ್ಚೆಗಿಂತಲೂ ‘ಸಮಕಾಲೀನ’ ವಿಭಾಗದಲ್ಲಿ ನಡೆದ ಮೀಸಲಾತಿ ಹೋರಾಟದ […]

ನೇರ ಮತ್ತು ದಿಟ್ಟ ನುಡಿಗಳು

-ಸಿ.ಚಿಕ್ಕತಿಮ್ಮಯ್ಯ, ಹಂದನಕೆರೆ

-ಸಿ.ಚಿಕ್ಕತಿಮ್ಮಯ್ಯ, ಹಂದನಕೆರೆ ಮಾರ್ಚ್ ತಿಂಗಳ ‘ಸಮಾಜಮುಖಿ’ಯಲ್ಲಿ ಪ್ರಕಟವಾಗಿರುವ ಬಹುತೇಕ ಲೇಖನಗಳು ತುಂಬಾ ಸೊಗಸಾಗಿ ಮೂಡಿಬಂದಿವೆ. ಅದರಲ್ಲೂ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ‘ಮಠ-ಮೀಸಲಾತಿ-ರಾಜಕಾರಣ’ ಲೇಖನ ಹಾಗೂ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಕುರಿತ ಲೇಖನಗಳು ನೇರ ಮತ್ತು ದಿಟ್ಟವಾಗಿ ವಿಷಯವನ್ನು ಪ್ರತಿಪಾದಿಸಿರುವುದರಿಂದ ಇನ್ನೂ ಹೆಚ್ಚು ಸೊಗಸಾಗಿವೆ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಮ್ಮ ಲೇಖನದಲ್ಲಿ ಸಾಮಾನ್ಯರು ಹೇಳಲು ಹಿಂಜರಿಯುವ ವಿಷಯಗಳನ್ನು ಯಾವ ಮತ್ತು ಯಾರ ಮುಲಾಜು ಇಲ್ಲದೆ ನೇರವಾಗಿ ಹೇಳಿದ್ದಾರೆ. ಆ ಮೂಲಕ ಮಠಗಳ, ಸ್ವಾಮಿಗಳ ಕರ್ತವ್ಯವನ್ನು ಜ್ಞಾಪಿಸಿದ್ದಾರೆ. […]

ಜಾತ್ಯತೀತ ಸರಿಯಾದ ಪದ

ಕಳೆದ ಸಂಚಿಕೆಯಲ್ಲಿ ಟಿ.ಆರ್.ಅನಂತರಾಮು ಅವರ ‘ಜಾತ್ಯಾತೀತ’ ಅಲ್ಲ -ಅದು ‘ಜಾತ್ಯತೀತ’ ಎಂಬ ವಿನಯಪೂರ್ವಕ ಸೂಚನೆ ಗಮನಿಸಿದೆ. `ಜಾತ್ಯಾತೀತ’ ಎಂಬುದೇ ಸರಿಯಾದ ಬಳಕೆ ಎಂಬುದು ನನ್ನ ಅನಿಸಿಕೆ.  ಜಾತಿ + ಅತೀತ = ಜಾತ್ಯಾತೀತ -> ಆಗಮ ಸಂಧಿ. ಇದು ನನ್ನ ಅನಿಸಿಕೆಯಷ್ಟೇ. ಪ್ರಾಜ್ಞರು ತಿಳಿಸಿದರೆ, ತಪ್ಪಿದ್ದರೆ ಸರಿಪಡಿಸಿಕೊಳ್ಳುತ್ತೇನೆ. –ಎ.ವಿ.ಮುರಳೀಧರ, ಬೆಂಗಳೂರು. ನನ್ನ ಈ ಹಿಂದಿನ `ಜಾತ್ಯಾತೀತ’ ದ ಬಗೆಗಿನ ಪತ್ರದ ಮುಂದುವರಿಕೆ: ಇತ್ತೀಚೆಗೆ ಎಲ್.ಎಸ್.ಶೇಷಗಿರಿರಾಯರ ಒಂದು ಬರಹ ಓದಿದಾಗ `ಜಾತ್ಯತೀತ’ ಪದ ಬಳಕೆಯೇ ಸಮಂಜಸ ಎಂದು ನನಗೀಗ […]

‘ನಾವು ಸಂಕೀರ್ಣ ಕಾಲದಲ್ಲಿ ವಾಸಿಸುತ್ತಿದ್ದೇವೆ’

ಪ್ರತಾಪ್ ಭಾನು ಮೆಹ್ತಾ

ಹರಿಯಾಣದ ಅಶೋಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರತಾಪ್ ಭಾನು ಮೆಹ್ತಾ ಅವರು ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಅವರ ನಿರ್ಗಮನದ ಸಂದರ್ಭ ಮತ್ತು ಕಾರಣಗಳು ದೇಶದ ಉನ್ನತ ಶಿಕ್ಷಣ ವಲಯದ ಆಗುಹೋಗುಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿವೆ. ಪ್ರಭುತ್ವದ ಕಟು ಟೀಕಾಕಾರರಾದ ಮೆಹ್ತಾ ತಮ್ಮ ವಿದ್ಯಾರ್ಥಿಗಳು ಮತ್ತು ಅಧ್ಯಾಪಕಮಿತ್ರರಿಗೆ ಬರೆದ ಪತ್ರಗಳಲ್ಲಿ ಶಿಕ್ಷಣ ಕ್ಷೇತ್ರದ ವರ್ತಮಾನದ ಬಿಕ್ಕಟ್ಟು ಮತ್ತು ಭವಿಷ್ಯದ ಆಶಾವಾದ ಎರಡನ್ನೂ ಗುರುತಿಸಬಹುದು. ಪ್ರತಾಪ್ ಭಾನು ಮೆಹ್ತಾ ನಲ್ಮೆಯ ಸೂಪರ್ ಹೀರೋಗಳೇ, ನಾನು ಈ […]

ಪಂಚರಾಜ್ಯ ಚುನಾವಣೆಗಳು: ರಾಷ್ಟ್ರ ರಾಜಕಾರಣ ಪ್ರಭಾವಿಸಬಹುದೇ?

-ಡಿ.ಉಮಾಪತಿ

ಭಾರತೀಯ ಜನತಾ ಪಾರ್ಟಿ ಅಸ್ಸಾಮಿನಲ್ಲಿ ಅಧಿಕಾರ ಉಳಿಸಿಕೊಂಡು, ಬಂಗಾಳವನ್ನು ಗೆಲ್ಲಲು ಬಯಸುತ್ತದೆ. ಇನ್ನು ತಮಿಳುನಾಡಿನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿದ್ದರೆ ಸಾಕು. ಪುದುಚೆರಿಯಲ್ಲಿ ಆಳುವ ಪಕ್ಷಗಳ ಪೈಕಿ ಒಂದೆನಿಸಿಕೊಂಡರೆ ತೃಪ್ತ. ಕೇರಳದಲ್ಲಿ ತನ್ನ ಇರುವನ್ನು ಇನ್ನಷ್ಟು ಹರವಿಕೊಂಡರೆ ಅದೂ ಸಾಧನೆಯೇ. ಬಂಗಾಳವನ್ನು ಗೆದ್ದರೆ ಅದು ಬಲು ದೊಡ್ಡ ಪಾರಿತೋಷಕ. –ಡಿ.ಉಮಾಪತಿ ದೇಶ ಮತ್ತೊಂದು ಆಘೋಷಿತ ದೀರ್ಘಾವಧಿ ಸರ್ವಾಧಿಕಾರದ ಅಂಚಿಗೆ ಬಂದು ನಿಂತಿರುವ ಸಂದೇಹಗಳಿವೆ. ಜನತಂತ್ರ ಮತ್ತು ವ್ಯಕ್ತಿಸ್ವಾತಂತ್ರ್ಯಗಳು ಇಳಿಜಾರಿನ ಹಾದಿ ಹಿಡಿದಿವೆ. ಮುಂಬರುವ ದಿನಗಳು ಇನ್ನಷ್ಟು ದುರ್ಭರವಾಗುವ ಸೂಚನೆಗಳು ಗೋಚರಿಸಿವೆ. […]

ಉದ್ಯಮಿಗಳ ಹಿತಕಾಯುವ ಸರ್ಕಾರಕ್ಕೆ ರೈತರ ಏಳಿಗೆ ಬೇಕಿಲ್ಲ!

-ಎನ್.ರವಿಕುಮಾರ್

 ಉದ್ಯಮಿಗಳ ಹಿತಕಾಯುವ ಸರ್ಕಾರಕ್ಕೆ  ರೈತರ ಏಳಿಗೆ ಬೇಕಿಲ್ಲ! <p><sub> -ಎನ್.ರವಿಕುಮಾರ್ </sub></p>

ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯುದ್ಧವೀರ್ ಸಿಂಗ್ ಅವರು ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ರೈತಮಹಾಪಂಚಾಯತ್ ಸಮಾವೇಶಕ್ಕೆ ಆಗಮಿಸಿದ್ದರು. ಆಗ ಪತ್ರಕರ್ತ ಎನ್.ರವಿಕುಮಾರ್ ಸಮಾಜಮುಖಿಗಾಗಿ ನಡೆಸಿದ ಅವರ ವಿಶೇಷ ಸಂದರ್ಶನ ಇಲ್ಲಿದೆ. -ಎನ್.ರವಿಕುಮಾರ್ ಕರ್ನಾಟಕದ ಪ್ರವಾಸದಲ್ಲಿರುವ ನಿಮಗೆ ರಾಜ್ಯದಲ್ಲಿನ ರೈತರ ಸ್ಥಿತಿಗತಿ ಮತ್ತು ಇಲ್ಲಿನ ಸರ್ಕಾರದ ಆಡಳಿತದ ಬಗ್ಗೆ ಅರಿವಿಗೆ ಬಂದ ಸಂಗತಿಗಳೇನು? ಇಡೀ ದೇಶದಲ್ಲಿ ರೈತರ ಸಮಸ್ಯೆ ಒಂದೇ ತೆರನಾಗಿವೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಇದ್ದು ಒಕ್ಕೂಟ ಸರ್ಕಾರದ ಆದೇಶಗಳನ್ನೆ ಪಾಲನೆ ಮಾಡುತ್ತಾ ರೈತರ […]

ಕೋವಿಡ್ ಲಸಿಕೆಯ ಮಹತ್ವ ಸರ್ಕಾರದ ಪಾತ್ರ

-ಡಾ.ಕಿರಣ್ ವಿ.ಎಸ್.

ಕೋವಿಡ್-19 ನಿಯಂತ್ರಣದಲ್ಲಿ ಲಸಿಕೆ ಕೇವಲ ಒಂದು ಹಂತ ಮಾತ್ರ ಎಂಬುದು ತಿಳಿದಿರಬೇಕು. ಈ ಕಾಯಿಲೆಯ ನಿರ್ಮೂಲನದಲ್ಲಿ ಕ್ರಮಿಸಬೇಕಾದ ದಾರಿ ಇನ್ನೂ ಸಾಕಷ್ಟಿದೆ. -ಡಾ.ಕಿರಣ್ ವಿ.ಎಸ್. ಸದ್ಯಕ್ಕೆ ಭಾರತ ಕೋವಿಡ್-19 ಲಸಿಕಾಕರಣದ ಮೊದಲ ಹಂತವನ್ನು ನಿರ್ವಹಿಸುತ್ತಿದೆ. ಆರೋಗ್ಯ ಕಾರ್ಯಕರ್ತರು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು, ಖಾಸಗಿ ವೈದ್ಯರು – ಇವರನ್ನೆಲ್ಲಾ ಗುರುತಿಸಿ, ಎರಡು ಸುತ್ತಿನ ಲಸಿಕೆ ನೀಡುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಪ್ರಸ್ತುತ 60 ವರ್ಷ ವಯಸ್ಸು ದಾಟಿದವರಿಗೆ ಮತ್ತು 45 ವರ್ಷಗಳ ವಯಸ್ಸು ದಾಟಿದ, ಕೆಲವು ನಿರ್ದಿಷ್ಟ ಆರೋಗ್ಯ […]

ಯಡಿಯೂರಪ್ಪನವರ ಎರಡನೇ ಇನ್ನಿಂಗ್ಸ್ ಮಾಡಿದ್ದೇನು..? ಬಿಟ್ಟಿದ್ದೇನು..?

-ಪೃಥ್ವಿದತ್ತ ಚಂದ್ರಶೋಭಿ

‘ಯಡಿಯೂರಪ್ಪನವರ ಸಾಧನೆ’ ಎಂಬುದು ಅಸಂಗತ ನಾಟಕದ ವಿಷಯವಸ್ತು ಮತ್ತು ಚರ್ಚೆಗೆ ಅನರ್ಹ ವಿಷಯವೆಂದು ನೀವು ಹೇಳಬಹುದು. ನಿಮ್ಮ ಮಾತಿನಲ್ಲಿ ಸಾಕಷ್ಟು ಸತ್ಯವೂ ಇರಬಹುದು. ಆದರೆ ಕರ್ನಾಟಕದ ಯಾವುದೇ ಮುಖ್ಯಮಂತ್ರಿಗೆ ವರ್ಷಕ್ಕೆ ಒಂದು ಸಾರಿಯಾದರೂ ನಿಮ್ಮ ಸಾಧನೆಯೇನು ಎಂದು ನಾವು ಕೇಳಬೇಕಾದ ಅನಿವಾರ್ಯ ಅಗತ್ಯವಿದೆ. ನಮ್ಮನ್ನು ಆಳುವವರ ಬಗ್ಗೆ ನಾವು ಅಲಕ್ಷ್ಯ, ಅಸಡ್ಡೆ ಅಥವಾ ಅನಾಸಕ್ತಿ ತೋರುವಂತಿಲ್ಲ. ಅಧಿಕಾರದಲ್ಲಿರುವವರನ್ನು ನಾವು ಪದೇಪದೇ ಲೆಕ್ಕ–ಬಾಕಿ ಕೇಳಲೇಬೇಕು. ಇವರು ಸಾಧಿಸಿದ್ದೇನು, ಕಳೆದಿದ್ದೇನು ಎಂದು ಪ್ರಶ್ನಿಸಲೇಬೇಕು. ಇವರ ಕೆಲಸ–ನೀತಿ–ಯೋಜನೆ–ಬಜೆಟ್ ಇತ್ಯಾದಿಗಳನ್ನು ಅಂಕಿಅಂಶದ ಹಾಗೂ […]

ಅಣತಿಯ ಆಡಳಿತ ಎರವಲು ಸಾಧನೆ!

ಈ ಸರ್ಕಾರದಿಂದ ಭಿನ್ನವಾದದ್ದನ್ನು ನಿರೀಕ್ಷಿಸುವ ಹಾಗಿಲ್ಲ. ಯಾಕೆಂದರೆ ಇದು ಸಂಪೂರ್ಣ ಚುನಾಯಿತ ಸರ್ಕಾರವಲ್ಲ; ಅರ್ಧ ಚುನಾಯಿತ–ಅರ್ಧ ಖರೀದಿತ ಸರಕಾರ. ಇಂತಹದ್ದೊಂದು ಸರಕಾರಕ್ಕೆ ಅದರದ್ದೇ ಆದ ಮಿತಿಗಳಿರುತ್ತವೆ. -ಎ.ನಾರಾಯಣ ಕರ್ನಾಟಕದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಈ ತನಕ ನೀಡಿದ ಆಡಳಿತವನ್ನು ಹೇಗೆ ಮೌಲ್ಯಮಾಪನ ಮಾಡುವುದು? ಈ ಸರಕಾರ ಅಂತ ಅಲ್ಲ. ಯಾವುದೇ ಸರಕಾರದ ಸಾಧನೆಯನ್ನು ತೂಗಿ-ಅಳೆಯುದು ತುಂಬಾ ಕ್ಲಿಷ್ಟಕರ ಕೆಲಸ. ಸಾಮಾನ್ಯವಾಗಿ ಮಾಧ್ಯಮಗಳು ಸರ್ಕಾರವೊಂದರ ಸಾಧನೆಯ ಬಗ್ಗೆ ಅಥವಾ ವೈಫಲ್ಯಗಳ ಬಗ್ಗೆ ನೀಡುವ ಬೀಸು ಹೇಳಿಕೆಗಳಲ್ಲಿ […]

ಯಡಿಯೂರಪ್ಪನವರ ಮುಂಗಡಪತ್ರಗಳು

-ಮೋಹನದಾಸ್

ಯಡಿಯೂರಪ್ಪನವರು ರಕ್ಷಣಾತ್ಮಕವಾಗಿ ಆಡುವ ಮನಸ್ಥಿತಿಗೆ ಬಂದಿದ್ದಾರೆ. ಹೇಗಾದರೂ ಮಾಡಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ‘ಆಡ್‍ಹಾಕ್ – ಡೇ ಟು ಡೇ’ ಆಟವಾಡುತ್ತಿದ್ದಾರೆ. ರಾಜ್ಯಕ್ಕೆ ಬೇಕಾದ ದೂರದೃಷ್ಟಿ ನಾಯಕತ್ವದ ಬದಲಿಗೆ ವ್ಯಾವಹಾರಿಕ ಮುಂದಾಳತ್ವದ ಆಡಳಿತ ನೀಡುತ್ತಿದ್ದಾರೆ. –ಮೋಹನದಾಸ್ ಕೋವಿಡ್ ನಂತರದ ದಿನಗಳಲ್ಲಿ ಆರ್ಥಿಕ ಹಿಂಜರಿತದ ಕಾರಣದಿಂದ ರಾಜ್ಯದ ಸಂಪನ್ಮೂಲ ಕ್ರೋಢೀಕರಣಕ್ಕೆ ಗುರುತರ ಹಿಂದೇಟು ಆಗಿರುವುದನ್ನು ನಿಮಗೆ ತಿಳಿಹೇಳಲು ಯಾವುದೇ ಅರ್ಥಶಾಸ್ತ್ರಜ್ಞನ ಅಗತ್ಯವಿಲ್ಲ. ಅದೇ ರೀತಿಯಲ್ಲಿ ಕೋವಿಡ್ ನಿರ್ಧಾರಿತ ವೈದ್ಯಕೀಯ ವೆಚ್ಚಗಳು ಮತ್ತು ಅತಿವೃಷ್ಟಿ ಸಂಬಂಧಿತ ಖರ್ಚುಗಳು ರಾಜ್ಯದ ಮುಂಗಡಪತ್ರದ […]

ಎರಡು ವರ್ಷ: ಒಂದು ವಿಮರ್ಶೆ

-ಡಾ.ಬಿ.ಎಲ್.ಶಂಕರ್

ಒಂದು ಸರ್ಕಾರದ ವಿಮರ್ಶೆಗೆ ಎರಡು ವರ್ಷಗಳ ಅವಧಿ ಕಡಿಮೆಯೇ. ಅದರಲ್ಲೂ ಅತಿವೃಷ್ಟಿ, ಅನಾವೃಷ್ಟಿ, ಕೊರೊನೋತ್ತರ ಸಂಕಷ್ಟ ಕಾಲದ ಯಡಿಯೂರಪ್ಪ ಸರ್ಕಾರದ ಸಾಧನೆಯ ಅವಲೋಕನ ತಂತಿಮೇಲಿನ ನಡಿಗೆಯೇ! ಆದರೂ ಸರ್ಕಾರದ ಗುರಿಸಾಧನೆಯ ಪಥ ಗುರುತಿಸುವುದು ಅಗತ್ಯ. -ಡಾ.ಬಿ.ಎಲ್.ಶಂಕರ್ ಪರಿಣಾಮ ಬೀರಿದ ಅಂಶಗಳು ಮುಖ್ಯವಾಗಿ; ಕಪ್ಪುಹಣ ನಿಯಂತ್ರಣಕ್ಕಾಗಿ 2016ರಲ್ಲಿ ಒಕ್ಕೂಟ ಸರ್ಕಾರ ಜಾರಿಗೆ ತಂದ ನೋಟು ಅಮಾನ್ಯೀಕರಣ ಎಷ್ಟರಮಟ್ಟಿಗೆ ಉದ್ದೇಶವನ್ನು ಸಾಧಿಸುವಲ್ಲಿ ಸಫಲವಾಗಿದೆ ಎಂಬುದಕ್ಕೆ ಇಂದಿಗೂ ಸ್ಪಷ್ಟತೆಯಿಲ್ಲ. ಈ ದಿಢೀರ್ ನಿರ್ಧಾರ ಕೈಗೊಳ್ಳುವಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ನೆಲೆಯಲ್ಲಿ […]

ಕರ್ನಾಟಕ ಕಂಡ ನಿಷ್ಕ್ರಿಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

-ಡಾ.ಎನ್.ಜಗದೀಶ್ ಕೊಪ್ಪ

ಬಿ.ಎಸ್.ಯಡಿಯೂರಪ್ಪನವರ 78ನೇ ವರ್ಷದ ಜನ್ಮದಿನಾಚರಣೆಯ ಅಂಗವಾಗಿ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಪೂರ್ಣಪುಟದ ಜಾಹೀರಾತಿನಲ್ಲಿ ‘ಅಭಿವೃದ್ಧಿಯನ್ನು ಧÀರೆಗಿಳಿಸಿದ ಧೀಮಂತ ನಾಯಕ’ ಎಂದು ಹಾಡಿಹೊಗಳಿದ ವಾಕ್ಯ ಈ ಶತಮಾನದ ಕ್ರೂರ ವ್ಯಂಗ್ಯ ಮತ್ತು ಹಾಸ್ಯದಂತೆ ನನಗೆ ಭಾಸವಾಯಿತು! -ಡಾ.ಎನ್.ಜಗದೀಶ್ ಕೊಪ್ಪ ಕರ್ನಾಟಕ ರಾಜ್ಯವು 1956ರಲ್ಲಿ ಉದಯವಾದ ನಂತರ ಅನೇಕ ಮುಖ್ಯಮಂತ್ರಿಗಳನ್ನು ಕಂಡಿದೆ. ಆದರೆ, ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಂತವರರು ಡಿ.ದೇವರಾಜರಾಜ ಅರಸು ಮಾತ್ರ. ಉಳಿದವರಲ್ಲಿ ನೆನಪಾಗುವವರು ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪಗಪ್ಪ ಜೆ.ಹೆಚ್.ಪಟೇಲ್ ಮತ್ತು ರಾಮಕೃಷ್ಣ ಹೆಗಡೆ, ಎಸ್.ಎಂ.ಕೃಷ್ಣ, ಹೆಚ್.ಡಿ.ದೇವೇಗೌಡ. ಮತ್ತು ಸಿದ್ಧರಾಮಯ್ಯ. […]