ಕರ್ನಾಟಕದ ಪ್ರಸಕ್ತ ಆರ್ಥಿಕ ಸ್ಥಿತಿ ಭವಿಷ್ಯದ ದಾರಿ

-ಡಾ.ಎಸ್.ಆರ್.ಕೇಶವ

ಪ್ರತಿ ನಾಲ್ಕು ತಿಂಗಳಿಗೊಮ್ಮೆ ಜಿಎಸ್‍ಡಿಪಿ ದರವನ್ನು ಪ್ರಕಟಿಸುವ ಜೊತೆಗೆ ನಿಗದಿಯಾದ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಹಣ ಎಷ್ಟು? ಖರ್ಚಾದ ಹಣ ಎಷ್ಟು? ಹಾಗೂ ಅದರಿಂದ ಆದ ಪರಿಣಾಮ/ ಪಲಾನುಭವಿಗಳ ಸಂಖ್ಯೆ ಇತ್ಯಾದಿ ವಿವರಗಳನ್ನು ವಿಧಾನಸಭೆಯಲ್ಲಿ ಮಂಡಿಸಬೇಕು, ಚರ್ಚೆಯಾಗಬೇಕು. ಆಗ ಉತ್ತಮ ಅಂಶಗಳಿಂದ ಕೂಡಿದ ಕಾರ್ಯಕ್ರಮಗಳು ವಿಫಲವಾಗುವುದನ್ನು ತಪ್ಪಿಸಬಹುದು. -ಡಾ.ಎಸ್.ಆರ್.ಕೇಶವ ಗಾಂಧೀಜಿ ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಪ್ರಾಂತ್ಯದ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ನೋಡಿ ಅದನ್ನು ರಾಮರಾಜ್ಯವೆಂದು ಪ್ರಶಂಸಿದರು. ಸ್ವಾತಂತ್ರ್ಯಾನಂತರದ ಏಕೀಕರಣದ ಸಮಯದಲ್ಲಿ ಬಾಂಬೆ, ಮದ್ರಾಸ್, ಹೈದ್ರಾಬಾದ್ ಕರ್ನಾಟಕ ಹಾಗೂ ಕೊಡಗನ್ನು ಒಳಗೊಂಡ […]

ರಾಮನ ಆದರ್ಶ ಪಾಲಿಸಬಾರದೇಕೆ?

-ಡಾ.ಜ್ಯೋತಿ

78 ವರ್ಷದ ಯಡಿಯೂರಪ್ಪರವರಿಗೆ ಬಹುಶಃ ಇದು ಕೊನೆಯ ಅವಕಾಶ. ಆದುದರಿಂದ ಉಳಿದ ಆಡಳಿತ ಅವಧಿಯಲ್ಲಿ ಕರ್ನಾಟಕ ಜನತೆಗೆ ಸ್ಮರಣೀಯ ಆಡಳಿತ ನೀಡಲಿ. -ಡಾ.ಜ್ಯೋತಿ ಅಭೂತಪೂರ್ವ ಇಚ್ಛಾಶಕ್ತಿ ಹೊಂದಿರುವ ಯಡಿಯೂರಪ್ಪ ನೇತೃತ್ವದ ಸರಕಾರ 2 ವರುಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಅವರ ಆಡಳಿತದ ವಿಶಿಷ್ಟ ಮೈಲಿಗಲ್ಲುಗಳ ಹುಡುಕಾಟದ ಮುನ್ನ, ಅವರಿಗೆ ಸ್ವಲ್ಪ ಅಭಿನಂದನೆ ಸಲ್ಲಿಸಲೇಬೇಕು. ಯಾಕೆಂದರೆ, ಅಧಿಕಾರ ವಹಿಸಿಕೊಂಡ ತಕ್ಷಣ ಕರ್ನಾಟಕ ಇತ್ತೀಚಿನ ವರ್ಷಗಳಲ್ಲಿ ಕಂಡ ಭಾರಿ ಪ್ರವಾಹವನ್ನು ನಿರ್ವಹಿಸಬೇಕಾದ ಜವಾಬ್ದಾರಿ ಅವರ ಮೇಲಿತ್ತು. ತನ್ನ ಇಳಿವಯಸ್ಸನ್ನು ಲೆಕ್ಕಿಸದೆ, […]

ಭಾರತದ ಪ್ರಜಾತಂತ್ರ ಎತ್ತ ಸಾಗುತ್ತಿದೆ?

ಆಂತರಿಕ ಟೀಕೆ ಅಥವಾ ವಿಮರ್ಶೆಯನ್ನು ಹೇಗೆ ಪರಿಗಣಿಸಬೇಕು? ಪ್ರಸಕ್ತ ಅಸ್ತಿತ್ವದಲ್ಲಿರುವ ಪ್ರಭುತ್ವವು ಪ್ರಜಾತಂತ್ರವನ್ನು ಭಾರತದಲ್ಲಿ ಹೇಗೆ ನಾಶಮಾಡಿದೆ? ಸುಹಾಸ ಪಾಲಸಿಕಾರ್ ಮೂಲ: ದ ಇಂಡಿಯನ್ ಎಕ್ಸ್ ಪ್ರೆಸ್ ಭಾರತದಲ್ಲಿ ಅತಿ ಗರಿಷ್ಠ ಜನತಂತ್ರವೆಂಬ ವಿವಾದವನ್ನು ನಾವೀಗ ಹಿಂದೆ ಬಿಟ್ಟು ಹೊಸ ಹಂತಕ್ಕೆ ಬಂದು ನಿಂತಿದ್ದೇವೆ. ಅತಿ ಕನಿಷ್ಠ ಜನತಂತ್ರವೆಂಬ ವಿವಾದ ಇದೀಗ ಪ್ರಾರಂಭವಾಗಿದೆ. ಭಾರತದ ಜನತಂತ್ರವನ್ನು ಅಂತರರಾಷ್ಟ್ರೀಯವಾಗಿ ನಕಾರಾತ್ಮಕವಾಗಿ ಅಂದಾಜು ಮಾಡಲಾಗಿದೆ. ಅಂತಹ ವಿಮರ್ಶೆಗಳಿಗೆ ಅತ್ಯಂತ ಸ್ಫೂರ್ತಿದಾಯಕವಾಗಿ ಪ್ರತಿಕ್ರಿಯೆ ನೀಡಿದ ನಮ್ಮ ವಿದೇಶಾಂಗ ಸಚಿವ ಎಸ್.ಜೈಶಂಕರ್‍ರವರ ಚತುರೋಕ್ತಿಗಳನ್ನು […]

ಅಮೆಜ಼ಾನ್-ಪ್ಯೂಚರ್ ಗುಂಪಿನ ವಿವಾದ ಭಾರತದ ಚಿಲ್ಲರೆ ಮಾರುಕಟ್ಟೆಗಾಗಿ ದೈತ್ಯರ ಕಾಳಗ

-ಎಂ.ಕೆ.ಆನಂದರಾಜೇ ಅರಸ್

ಇದು ಅಮೆಜ಼ಾನ್ ಹಾಗೂ ಮುಖೇಶ್ ಅಂಬಾನಿಯ ನಡುವೆ ಮುಂದೊಂದು ದಿನ ಭಾರತದ ಚಿಲ್ಲರೆ ಮಾರುಕಟ್ಟೆಗೆ ಹಾಗೂ ವಿದ್ಯುನ್ಮಾನ ವಾಣಿಜ್ಯಕ್ಕೆ ಯಾರು ಅಧಿಪತಿಯಾಗುತ್ತಾರೆ ಎಂಬುದನ್ನು ನಿರ್ಧರಿಸುವ ಯುದ್ಧ. ಈ ಕಾರಣದಿಂದಲೇ ಅಮೆಜ಼ಾನ್ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ನೆಲಕಚ್ಚಿ ಹೋರಾಟ ಮಾಡುತ್ತಿದೆ. -ಎಂ.ಕೆ.ಆನಂದರಾಜೇ ಅರಸ್ ಭಾರತದ ಗ್ರಾಹಕ ಚಿಲ್ಲರೆ ಮಾರುಕಟ್ಟೆಗೆ ಹೊಸ ಮುನ್ನುಡಿ ಬರೆದ ಪ್ಯೂಚರ್ ಗುಂಪಿನ ಮುಖ್ಯಸ್ಥ ಕಿಶೋರ್ ಬಿಯಾನಿ ಹಾಗೂ ಪ್ರಪಂಚದ ವಿದ್ಯುನ್ಮಾನ ವಾಣಿಜ್ಯದ ಚಕ್ರವರ್ತಿ ಜೆಫರಿ ಪ್ರೆಸ್ಟನ್ ಬೆಜೊಸ್ ಒಡೆತನದ ಸಂಸ್ಥೆಗಳ ನಡುವೆ ನಡೆಯುತ್ತಿರುವ ಕಾನೂನು […]

ಇಸ್ರೇಲ್ ಚುನಾವಣೆಯಲ್ಲಿ ಹಿಂದೇಟು ಕಂಡ ನೆತನ್ಯಾಹು

2021 ರ ಮಾರ್ಚ್ ಅಂತ್ಯದಲ್ಲಿ ಇಸ್ರೇಲಿನ ಸಂಸತ್ತಿಗೆ ನಡೆದ ಚುನಾವಣೆಯ ಫಲಿತಾಂಶ ಬರಲಾರಂಭಿಸಿದ್ದು ಹಾಲಿ ಪ್ರಧಾನಮಂತ್ರಿ ಬೆನ್ಯಾಮಿನ್ ನೆತನ್ಯಾಹುರವರಿಗೆ ಹಿನ್ನಡೆಯಾದಂತೆ ಕಾಣುತ್ತಿದೆ. 120 ಸದಸ್ಯರ ಇಸ್ರೇಲಿ ಸಂಸತ್ ‘ನೆಸ್ಸೆಟ್’ಗೆ ನಡೆದ ಚುನಾವಣೆಯಲ್ಲಿ ನೆತನ್ಯಾಹು ಅವರ ಬಲಪಂಥೀಯ ಲಿಕುಡ್ ಪಕ್ಷ ಮತ್ತದರ ಬೆಂಬಲದ ಒಕ್ಕೂಟಕ್ಕೆ 52 ಸ್ಥಾನಗಳು ಮಾತ್ರ ದೊರಕಿವೆ. ನೆತನ್ಯಾಹು ವಿರೋಧಿಸಿ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದ ಒಕ್ಕೂಟಕ್ಕೆ 57 ಸ್ಥಾನಗಳು ಸಿಕ್ಕಿವೆ. ಯಾವ ಒಕ್ಕೂಟಕ್ಕೂ ಬಹುಮತ ಸಿಗದಿರುವ ಈ ಸನ್ನಿವೇಶದಲ್ಲಿ ನೆತನ್ಯಾಹು ವಿರೋಧಿ ‘ಯಾಮಿನ್’ ಪಕ್ಷಕ್ಕೆ 7 […]

ಅಜ್ಞಾತ ಮಾ ಯುನ್ ಜಾಕ್ ಮಾ ಆದ ಕಥೆ!

-ರಂಗಸ್ವಾಮಿ ಮೂಕನಹಳ್ಳಿ

ಜಗತ್ತಿನ ಗ್ರೇಟ್ ಟೆಕ್ನಾಲಜಿ ಕಂಪೆನಿಗಳ ಜನಕರಲ್ಲಿ ಒಬ್ಬ ಎಂದು ತನ್ನ ಹೆಸರನ್ನ ದಾಖಲಿಸಿಕೊಳ್ಳಲು ಜಾಕ್ ಮಾ ಸಿದ್ಧರಾಗಿದ್ದರು. ಆದರೆ ಇದ್ದಕ್ಕಿದ್ದಹಾಗೆ ಜಾಕ್ ಮಾ ತಮ್ಮ ಇನ್ನೊಂದು ಸಂಸ್ಥೆ ಅಂಟ್ ಮೂಲಕ ಎತ್ತಬೇಕಾಗಿದ್ದ ಹಣಕ್ಕೆ ಸರಕಾರ ಕತ್ತರಿ ಹಾಕುತ್ತದೆ. ಜಾಕ್ ಮಾ ಅದೃಶ್ಯರಾಗುತ್ತಾರೆ! –ರಂಗಸ್ವಾಮಿ ಮೂಕನಹಳ್ಳಿ ಇವತ್ತಿಗೆ ಜಾಕ್ ಮಾ ಎನ್ನುವ ಹೆಸರು ವಿಶ್ವಪ್ರಸಿದ್ಧ. ಆದರೆ ಜಾಕ್ ಮಾ ಆಗಿ ಪರಿವರ್ತನೆಗೊಳ್ಳುವುದಕ್ಕೆ ಮುಂಚೆ ಆತ ಮಾ ಯುನ್. 10ನೇ ಸೆಪ್ಟೆಂಬರ್ 1964 ರಂದು ಹ್ಯಾಂಗ್ಝೋ ಪ್ರದೇಶದಲ್ಲಿನ ಜ್ಹೆಜಿಯಾಂಗ್‍ನಲ್ಲಿ ಜನಿಸಿಸುತ್ತಾರೆ. […]

ಮನುಷ್ಯನ ವಿಕಾಸದ ಹಾದಿ ಎತ್ತ ಸಾಗಿದೆ?

-ಟಿ.ಆರ್.ಅನಂತರಾಮು

ಮನುಷ್ಯ ಇನ್ನೂ ವಿಕಾಸವಾಗುತ್ತಿದ್ದಾನೆಯೆ ಅಥವಾ ವಿಕಾಸ ಬಂದ್ ಆಗಿದೆಯೆ? ವಿಜ್ಞಾನ ವಲಯದಲ್ಲಿ, ಅದರಲ್ಲೂ ಜೀವಿವಿಜ್ಞಾನ ಕ್ಷೇತ್ರದಲ್ಲಿ ಬಹು ದೀರ್ಘಕಾಲ ಅಧ್ಯಯನ ಮಾಡಿ ಅಂಕಿ–ಅಂಶಗಳ ಮೂಲಕ ಪ್ರಸ್ತುತಪಡಿಸಬೇಕಾದ ವiಹಾ ಗೋಜಲಿನ ವಿಚಾರ ಇದು. ಹಾಗೆ ನೋಡಿದರೆ ಈ ಕಗ್ಗಂಟನ್ನು ಬಿಡಿಸುವಲ್ಲಿ ವಿಜ್ಞಾನಿಗಳು ಇನ್ನೂ ಹೋರಾಡುತ್ತಿದ್ದಾರೆ, ಒಂದರ್ಥದಲ್ಲಿ ಗೊಂದಲದಲ್ಲಿದ್ದಾರೆ. ಇಂಥ ವಿಷಯವನ್ನು ಕೈಗೆತ್ತಿಕೊಳ್ಳುವಾಗ ತಜ್ಞರು ಲಕ್ಷಾಂತರ ವರ್ಷಗಳ ಹಿಂದಿನ ಸಂಗತಿಗಳನ್ನು ಗಮನಿಸಬೇಕಾಗುತ್ತದೆ. ಅದೇ ಹೊತ್ತಿನಲ್ಲಿ ಆಧುನಿಕ ಬದುಕು ಕೊಟ್ಟಿರುವ ಸವಾಲುಗಳನ್ನು, ಸಮಸ್ಯೆಗಳನ್ನು ಅತ್ತ ಸರಿಸಿ ಮುಂದೆ ಹೋಗುವಂತಿಲ್ಲ. -ಟಿ.ಆರ್.ಅನಂತರಾಮು ಹೋಮೋಸೇಪಿಯನ್ […]

ಪುತ್ತೂರಿನಿಂದ ಟಿಂಬಕ್ಟೂಗೆ ಸೆಲ್ಫಿ ಇಲ್ಲದ ತಿರುಗಾಟ!

ನಾನು ಟಿಂಬಕ್ಟೂಗೆ ಹೋಗಿದ್ದೆ ಎಂದರೆ, “ಅರೇ, ಅಂತಹ ಊರೇ ಇಲ್ಲ, ಹೇಗೆ ಹೋಗಿಬಂದಿರಿ? ಯಾಕೆ ಹೋದಿರಿ?” ಎಂದು ಕೇಳುವವರೇ ಹೆಚ್ಚು. ಇದು ನನ್ನ ಜೀವನದಲ್ಲಿಯೇ ಅತ್ಯಂತ ಸ್ವಾರಸ್ಯಕರವಾದ ತಿರುಗಾಟ. ನಾನು ಅಲ್ಲಿಗೆ ಹೋಗಿದ್ದು 2009ರಲ್ಲಿ. ಅದರ ಬಗ್ಗೆ ಈಗ ಏಕೆ ಬರೆಯುತ್ತಿದ್ದೇನೆ ಎಂದು ನಿಮಗೆ ಅನಿಸಬಹುದು. ಮೊದಲ ಕಾರಣ, ನಾನು ನೋಡಿದ ಟಿಂಬಕ್ಟೂವನ್ನು ಈಗ ನಿಮಗೆ ನೋಡಲು ಅಸಾಧ್ಯ. ಟಿಂಬಕ್ಟೂವನ್ನು ಈಗ ಇಸ್ಲಾಮಿನ ಉಗ್ರಗಾಮಿಗಳು ಧ್ವಂಸಮಾಡುವ ಪ್ರಯತ್ನದಲ್ಲಿ ಇದ್ದಾರೆ. ಎರಡನೆಯದಾಗಿ, ಕೊರೊನದ ಗೃಹಬಂಧನದಿಂದಾಗಿ ನನ್ನ ಸತತ ತಿರುಗಾಟಗಳು […]

ವಸುಧೇಂದ್ರರ ‘ತೇಜೋ ತುಂಗಭದ್ರಾ’ ಸನಾತನವಾದದ ಸಮರ್ಥನೆಗೆ ಕಟಿಬದ್ಧ!

-ಸುಭಾಷ್ ರಾಜಮಾನೆ

ನೂರಾ ಇಪ್ಪತ್ತು ವರ್ಷಗಳ ಕನ್ನಡ ಕಾದಂಬರಿಗಳ ಚರಿತ್ರೆಯಲ್ಲಿ ತೀರ ಸವಕಲಾದ ದಾರಿಯಲ್ಲಿ ನಡೆಯುವ ಲೇಖಕರು ತಮ್ಮ ಪ್ರತಿಗಾಮಿ ನಿಲುವುಗಳನ್ನು ಉದ್ದೇಶಪೂರ್ವಕವಾಗಿ ಇದರಲ್ಲಿ ತುರುಕಿರುವುದರಿಂದ ಈ ಕೃತಿಗೆ ಯಾವುದೇ ಸಾಂಸ್ಕøತಿಕ ಮಹತ್ವವಿಲ್ಲ. -ಸುಭಾಷ್ ರಾಜಮಾನೆ ತೇಜೋ ತುಂಗಭದ್ರಾ (ಕಾದಂಬರಿ) ವಸುಧೇಂದ್ರ ಪ್ರಕಟನೆ: 2019, ಪು.464 ಬೆಲೆ: ರೂ.380 ಪ್ರಕಾಶನ: ಛಂದ ಪುಸ್ತಕ, ಬೆಂಗಳೂರು ವಸುಧೇಂದ್ರ ಅವರ ‘ತೇಜೋ ತುಂಗಭದ್ರಾ’ (2019) ಗತಕಾಲದ ಚರಿತ್ರೆಯ ಒಂದು ನಿರ್ದಿಷ್ಟ ಕಾಲಘಟ್ಟವನ್ನು ಆಧರಿಸಿ ರಚನೆಯಾದ ಕಾದಂಬರಿ. ಈ ಕೃತಿಯ ಕಥಾ ಚೌಕಟ್ಟಿಗೆ ಎರಡು […]

ಅಮೆರಿಕಾದ ದಾರ್ಶನಿಕ ಬರಹಗಾರ ಹೆನ್ರಿ ಡೇವಿಡ್ ಥೋರೋನ ಕೃತಿ ವಾಲ್ಡನ್

-ಸಿ.ಎನ್.ಶ್ರೀನಾಥ್

ನನ್ನ ಮೇಲೆ ಬಹಳ ಪ್ರಭಾವ ಬೀರಿದ ಅತಿ ಮುಖ್ಯ ಕೃತಿ ಎಂದರೆ ಹೆನ್ರಿ ಡೇವಿಡ್ ಥೋರೋನ ವಾಲ್ಡನ್. -ಸಿ.ಎನ್.ಶ್ರೀನಾಥ್ ಥೋರೋ 19ನೇ ಶತಮಾನದ ಅಮೆರಿಕಾದ ದಾರ್ಶನಿಕ, ಪ್ರಖ್ಯಾತ ಬರಹಗಾರ ಎಮರ್ಸನ್‍ನ ಶಿಷ್ಯ ಹಾಗೂ ಕಿರಿಯ ಮಿತ್ರ. ಇವರಿಬ್ಬರದೂ ಅಮೆರಿಕಾದ ಮೆಸ್ಯಾಚುಸೆಟ್ಟ್‍ನ ಪ್ರಾಂತ್ಯದಲ್ಲಿನ ಒಂದು ಸಣ್ಣ ಊರು ಕಾಂಕರ್ಡ್ ಎಂಬಲ್ಲಿ ವಾಸ. ಅದೇ ಕಾಂಕರ್ಡ್‍ನಿಂದ 5-6 ಮೈಲಿಗಳ ದೂರಕ್ಕೆ ಕಾಡು, ಕಾಡಿನ ಮಧ್ಯೆ ಒಂದು ದೊಡ್ಡ ಕೊಳ, ವಾಲ್ಡನ್, ಸಮುದ್ರದ ಹಾಗೆ ವಿಸ್ತಾರ, ನದಿಯ ಹಾಗೆ ಶುಭ್ರ ವರ್ಚಸ್ಸು. […]

ಅಜ್ಜೀನಾ ಬಜ್ಜಿ ಮಾಡಿ… ತಾತಂಗೆ ತಾಳಿ ಕಟ್ಟಿ…

-ನಳಿನಿ ಟಿ. ಭೀಮಪ್ಪ

ನಮ್ಮ ಅಜ್ಜೀಮನೆ ಎಂದರೆ ನಾಲ್ಕು ಜನ ಅಜ್ಜಂದಿರ ತುಂಬು ಕುಟುಂಬದ ಮನೆಯದು. ಕನಿಷ್ಠ ಮೂವತ್ತೈದು ಜನರ ವಾಸ. ಜೊತೆಗೆ ಮನೆಯಲ್ಲಿ ನಾಲ್ಕು ಜನ ಆಳುಗಳು. ಹತ್ತು, ಹದಿನೈದು ಕರೆಯುವ ಎಮ್ಮೆಗಳು, ನಾಲ್ಕಾರು ನಾಯಿಗಳು, ದೊಡ್ಡ ಮನೆ, ದೊಡ್ಡ ಅಂಗಳ ಒಟ್ಟಿನಲ್ಲಿ ಎಲ್ಲ ದೊಡ್ಡ ದೊಡ್ಡದೇ. -ನಳಿನಿ ಟಿ. ಭೀಮಪ್ಪ ಚಿಕ್ಕವಳಿದ್ದಾಗ ಜೊತೆಯಲ್ಲಿ ಆಡುತ್ತಿದ್ದ ಮಕ್ಕಳೆಲ್ಲರೂ ಅಜ್ಜೀಮನೆ ಎಂದರೆ ಕುಣಿಕುಣಿದುಕೊಂಡು ಹೋಗುವುದು ನೋಡಿ ನನಗೆ ಅಚ್ಚರಿಯಾಗುತ್ತಿತ್ತು. ನನಗೋ ಹಳ್ಳಿ ಎಂದರೆ ಅಲರ್ಜಿ. ಅದರಲ್ಲೂ ಅಪ್ಪನನ್ನು ಬಿಟ್ಟು ಇರಲು ನನಗೆ […]

ಆಧುನಿಕ ಯುಗದಲ್ಲಿ ಸಾಕಾರಗೊಂಡ ಹಳಗನ್ನಡ ಸಾಹಿತ್ಯ ಕಲ್ಪನೆಗಳು

-ಡಾ.ಜಿ.ಆಶಾ

ಇಂದಿನ ವಿಜ್ಞಾನ, ತಂತ್ರಜ್ಞಾನ, ಮನೋವಿಜ್ಞಾನ, ತತ್ವಶಾಸ್ತ್ರ, ರಾಜಕೀಯಶಾಸ್ತ್ರಗಳ ಎಳೆಗಳು ಹಳಗನ್ನಡ ಕಾವ್ಯಗಳಲ್ಲಿ ಕಲ್ಪನೆಗಳಾಗಿ ಪ್ರಕಟಗೊಂಡಿದ್ದವೇ…? –ಡಾ.ಜಿ.ಆಶಾ ರಾಮಾಯಣ ಹಾಗೂ ಮಹಾಭಾರತ ಪುರಾಣ ಕಥೆಗಳು, ಹಳಗನ್ನಡದ ಕಾವ್ಯರಚನೆಯ ಮೂಲ ಆಕರ ವಸ್ತುವಿಷಯಗಳಾಗಿವೆ. ಈ ಕಥೆಗಳು ನಮಗೆ ಮೇಲ್ನೋಟಕ್ಕೆ ದೈವಿಕವ್ಯಕ್ತಿಗಳ ಜೀವನ ಕಥೆಗಳಾಗಿ ತೋರಿದರೂ, ಸಾಮಾನ್ಯ ಮಾನವರೊಡನೆ, ಕೆಲವು ಸಂದರ್ಭಗಳಲ್ಲಿ ರಾಕ್ಷಸರೊಂದಿಗೆ ಬೆರೆತು, ಅಂದಂದಿನ ಮೌಲ್ಯಗಳನ್ನು, ರೀತಿನೀತಿ ಸಂಸ್ಕøತಿಗಳನ್ನು ಪರಿಚಯಿಸುವುದರ ಜೊತೆಗೆ, ಸರ್ವಕಾಲಕ್ಕೂ ಇಷ್ಟವೆನಿಸುವ ಒಳನೋಟಗಳನ್ನು ಬಿತ್ತರಿಸಿವೆ. ಇವು ರಾಜನೀತಿ, ತತ್ವಜ್ಞಾನ, ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯದ ವಿಶಿಷ್ಟ ಅಂಶಗಳನ್ನು ಲೌಕಿಕ, ಧಾರ್ಮಿಕ […]

ಇದು ಬರೀ ರುದ್ರಭೂಮಿ ಅಲ್ಲೋ ಅಣ್ಣಾ…!

ಇದು ಬರೀ ರುದ್ರಭೂಮಿ ಅಲ್ಲೋ ಅಣ್ಣಾ…!

ಮನುಷ್ಯನ ಬದುಕಿನ ಅಂತಿಮ ಧಾಮವಾಗಿರುವ ರುದ್ರಭೂಮಿಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಹಾರೂಗೇರಿ ಯುವಕರು ಕೈಗೊಂಡಿರುವ ಕಾರ್ಯ ಮಾದರಿಯಂತಿದೆ! -ಕಲ್ಲೇಶ್ ಕುಂಬಾರ್ ಶಿವನ ವಾಸಸ್ಥಾನ ಎನ್ನುವ ರುದ್ರಭೂಮಿಯ ಬಗ್ಗೆ ಅದೇಕೇನೋ ಎಲ್ಲರಿಗೂ ಒಂದು ರೀತಿಯ ಅಸಡ್ಡೆ. ಲೌಕಿಕ ಬದುಕಿನ ಬಗ್ಗೆ ಅತಿಯಾದ ವ್ಯಾಮೋಹವನ್ನು ಹೊಂದಿರುವ ಮನುಷ್ಯ, ತನ್ನ ಅಂತಿಮ ಧಾಮ ರುದ್ರಭೂಮಿಯೇ ಆಗಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲಾಗದ ಆತನ ಮನಸ್ಥಿತಿಯೇ ಇದಕ್ಕೆ ಕಾರಣವಾಗಿರಲೂಬಹುದು. ಹೀಗಾಗಿಯೇ ಈ ನಾಡಿನ ಬಹುತೇಕ ಊರುಗಳಲ್ಲಿನ ರುದ್ರಭೂಮಿಗಳ ಸ್ಥಿತಿ ದಯನೀಯವಾಗಿದೆ ಎನ್ನಬಹುದು. ಒಂದು ರೀತಿಯಲ್ಲಿ ಊರಾಚೆ […]

ಸಿಡಿಯೂರಪ್ಪ ಸಾಧನೆ ಮೇಯಾವ್ರ್ ಖಾತೆಗೆ!

“ಸಿಡಿಯೂರಪ್ಪನವರ ಸರಕಾರ ಸಿ.ಡಿ.ಗಳಲ್ಲಿ ಮುಳುಗಿ ಏಳಾಕಹತ್ತೈತಿ. ಇನ್ನೂ ಎಷ್ಟು ಸಿ.ಡಿ.ಗಳು ಸಿಡಿತಾವೋ ಏನೋ ಅಂತ ಮಿಡಿ ಮಂತ್ರಿಗೋಳ ಜೀವ ಬಿಟ್ಟುಬಿಟ್ಟು ಹಿಡಿಯಾಕ್ಹತ್ತೈತಿ…’’ ಶಿಷ್ಯನ ಈ ಮಾತಿನಲ್ಲಿ ಮೇಯವ್ರ್ ಸಿದ್ಧಲಿಂಗಪ್ಪ ಹೊಸ ಬೆಳಕು ಕಂಡರು! –ಎಸ್. ಮೆಣಸಿನಕಾಯಿ “ಸಿದ್ಧಲಿಂಗಪ್ಪನವರಿಗೆ ನಮಸ್ಕಾರ…” ಎಣ್ಣಾಳಿ ಎಲ್ಲಾಚಾರ್ಯನ ಬೆಳಗಿನ ವಿಶ್ ಕೇಳಿ ಸಾರಾಯಿ ವಾಸನೆ ಬಡಿದಂತಾಯ್ತು ಮೇಯರ್ ಸಿದ್ಧಲಿಂಗಪ್ಪನವರಿಗೆ. “ಬಾರಲೇ ಎಲ್ಲಾಚಾರ್ಯ… ಮತ್ತ ಯಾವ ಗಟಾರದಾಗ ದೋಣಿ ಓಡಿಸಾಕ ಹೋಗಿದ್ದಿ?” ಸಿದ್ಧಲಿಂಗಪ್ಪನವರ ಪ್ರಶ್ನೆಗೆ ತಲೆ ಕೆರೆದುಕೊಳ್ಳುತ್ತ, “ಸಾಹೇಬರ… ಈ ಸಲ ಚೊಲೊ ದೋಣಿನ […]

ಅಂಕಸಮುದ್ರವೆಂಬ ಪಕ್ಷಿಕಾಶಿ

-ಡಾ. ಎಸ್. ಶಿಶುಪಾಲ

ರಂಗನತಿಟ್ಟು ಪಕ್ಷಿಧಾಮಕ್ಕೆ ಸಿಗುತ್ತಿರುವ ಗಮನ, ಪ್ರಾಮುಖ್ಯ, ಅನುದಾನ, ಮತ್ತು ಹೆದ್ದಾರಿಯ ಆಕರ್ಷಣೆ ಇಲ್ಲದಿದ್ದರೂ ಅಂಕಸಮುದ್ರ ಪಕ್ಷಿತಜ್ಞರಿಗೆ, ವೀಕ್ಷಕರಿಗೆ ಮತ್ತು ಅಧ್ಯಯನಶೀಲರಿಗೆ ಅತ್ಯುತ್ತಮ ಸ್ಥಳ. -ಡಾ. ಎಸ್. ಶಿಶುಪಾಲ ಬಳ್ಳಾರಿ ಜಿಲ್ಲೆ ಬಿರುಬಿಸಿಲಿನ ಪ್ರದೇಶವೆಂದು ಹೆಸರುವಾಸಿ. ಬಹಳಷ್ಟು ವರ್ಷಗಳಿಂದ ಗಣಿ ಕೈಗಾರಿಕೆಗಾಗಿ ಖ್ಯಾತಿ/ಕುಖ್ಯಾತಿ ಪಡೆದಿದ್ದರೂ ತನ್ನದೇ ವಿಶಿಷ್ಟ ಪರಿಸರದಿಂದ ಹಲವಾರು ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನವಾಗಿದೆ. ಈ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನೂರಾರು ಗ್ರಾಮಗಳು ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ಹಿನ್ನೀರಿನಿಂದಾವೃತ. ಮಳೆಗಾಲದಲ್ಲಿ ಅಣೆಕಟ್ಟು ತುಂಬಿದರೆ ಸಾವಿರಾರು ಎಕರೆ ಪ್ರದೇಶವೆಲ್ಲಾ ನೀರಿನಲ್ಲಿ […]

ಸ್ಟಾರ್ ನಟರ ನಿಲ್ಲದ ‘ಪೊಗರು’ ಅಪ್‍ಡೇಟ್ ಆಗದ ‘ರಾಬರ್ಟ್’

-ಮುದ್ದುಪ್ರಿಯ

 ಸ್ಟಾರ್ ನಟರ ನಿಲ್ಲದ ‘ಪೊಗರು’ ಅಪ್‍ಡೇಟ್ ಆಗದ ‘ರಾಬರ್ಟ್’ <p><sub> -ಮುದ್ದುಪ್ರಿಯ </sub></p>

ಕೋವಿಡ್ ನಂತರ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ‘ಆಕ್ಟ್ 1978′ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಉತ್ತಮ ಆರಂಭವನ್ನೇ ನೀಡಿತು. ಆದರೆ ಈಗ ಬಿಡುಗಡೆಯಾಗಿರುವ ‘ಪೊಗರು‘ ಮತ್ತು ‘ರಾಬರ್ಟ್‘ ಸಿನಿಮಾಗಳು ಹುಟ್ಟಿಸಿದ ಬೇಸರ ಅಷ್ಟಿಷ್ಟಲ್ಲ. –ಮುದ್ದುಪ್ರಿಯ ಕನ್ನಡ ಚಿತ್ರರಂಗದ ಸ್ಟಾರ್ ನಟರಿಗೆ ಇರುವ ಅಭಿಮಾನಿ ವರ್ಗ ಯಾವುದೇ ಜನಪ್ರಿಯ ರಾಜಕಾರಣಿಯ ಅಭಿಮಾನಿ ವರ್ಗಕ್ಕೆ ಸಮವೆಂದರೂ ಅತಿಶಯವಾಗದು. ಆದರೆ ಇದನ್ನೇ ಸ್ಟಾರ್ ನಟರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೋ ಎಂಬ ಗುಮಾನಿ ಹುಟ್ಟುತ್ತಿದೆ. ಒಳ್ಳೆಯ ಸಿನಿಮಾ ಕೊಟ್ಟರೂ, ಕೆಟ್ಟ ಸಿನಿಮಾ ಕೊಟ್ಟರೂ ನೋಡುವ ಕನ್ನಡ […]

ವಿಪ್ರಲಂಭೆಯ ಸ್ವಗತ

-ಬಿ.ಶ್ರೀನಿವಾಸ

-ಬಿ.ಶ್ರೀನಿವಾಸ ಪಯಣದ ದಾರಿಯ ನೀರವ ಮೌನ ಅರ್ಥವಾದರೂ ಸಾಕಿತ್ತು ದಾರಿಯಲಿ ಕಂಡವರು ಹಲವರು ಅವರೊಬ್ಬರಲಿ ಕಂಡಿದ್ದರೂ ನನ್ನ ಬಿಂಬ ನಾನು ಹೀಗೆ ಎಚ್ಚರದಪ್ಪಿ ಮಲಗಿ ಕಳೆದುಕೊಳ್ಳುತ್ತಿರಲಿಲ್ಲ ಲೋಕಕೆ ಒಬ್ಬ ಬುದ್ಧ ಇದ್ದ ಮತ್ತೆ ಹುಟ್ಟಿ ಬಂದಾರು ಹತ್ತು  ಹಲವು ಬುದ್ಧರು ವಿಪ್ರಲಂಭೆ ಯಶೋಧರೆಗೆ ಒಬ್ಬನೇ ಒಬ್ಬ  ಸಿದ್ಧಾರ್ಥ ದಕ್ಕದೇ ಹೋದ ನಿಟ್ಟುಸಿರು ಹಾಗೇ ಉಳಿಯಿತು ಚರಿತ್ರೆಯಲಿ ಮರದ ಕೆಳಗೆ ಕುಳಿತಾಗ ಸಣ್ಣ ಕೊಂಬೆಯ ಚಿಗುರು ತಾಕಿದ್ದರೂ ಸಾಕಿತ್ತು ಎದೆಗೆ ಸಿದ್ಧಾರ್ಥ ದಕ್ಕುತ್ತಿದ್ದ ಚರಿತ್ರೆಯ ಪುಟದ ಮೂಲೆಯೊಂದರಲಿ ಕುಳಿತ […]

ವಿಧುರನ ಬದುಕು

  –ಡಾ. ತ್ರಿಯಂಬಕ ತಾಪಸ       ಅಳಿಸಲು ಕುಂಕುಮವಿಲ್ಲ ಕಳಚಲು ಮಾಂಗಲ್ಯವಿಲ್ಲ ಬಿಚ್ಚಲು ಬಳೆಗಳಿಲ್ಲ ಇರಿಯುವ ಕತ್ತಲು ಬಿಗಿದಪ್ಪಿದ ಒಂಟಿತನ ಗುರಿ ತಪ್ಪಿಸುವ ದಾರಿ ಇದು ವಿಧುರನ ಬದುಕು ಮುಕ್ಕಾಲು ಸವೆದ ದಾರಿಯಲ್ಲಿ ಮುರಿದು ನಿಂತ ಏಕ ಚಕ್ರದ ಬಂಡಿ ಸುತ್ತಲೂ ಜಗದ ಗೌಜು ಇಣುಕಿಣುಕಿ ಓಡುವ ಜನ ಬೆಳಗು-ಬೈಗು, ಬೈಗು-ಬೆಳಗು ಹೆಪ್ಪುಗಟ್ಟಿದ ನೋವು ಇದು ವಿಧುರನ ಬದುಕು ಅವ್ವ ಕೆಲವರಿಗೆ ತಂಗಿ ಹಲವರಿಗೆ ಅಕ್ಕ ಮಿಕ್ಕವರಿಗೆ ಹೆಂಡತಿ ಒಬ್ಬನಿಗೆ ಎಲ್ಲ ಕಡಿದು ಕಳಿಸಿ […]