ಅಳುವಾ ಭೋಗಿಯ ನೋಡಿಲ್ಲಿ…!

-ಸಂಪಾದಕ

ಅಳುವಾ ಭೋಗಿಯ ನೋಡಿಲ್ಲಿ…!
-ಸಂಪಾದಕ

-ಸಂಪಾದಕ ಈ ಸಂಚಿಕೆ ಮುದ್ರಣಕ್ಕೆ ಹೋಗುವ ಅಂತಿಮ ಕ್ಷಣಗಳಲ್ಲಿ ನಾಟಕೀಯ ಬೆಳವಣಿಗೆಗಳು ನಡೆದು ರಾಜ್ಯ ರಾಜಕೀಯ ಹೊಸ ತಿರುವು ಪಡೆದುಕೊಂಡಿದೆ. ಕೊನೆಗೂ ಬಿ.ಎಸ್.ಯಡಿಯೂರಪ್ಪ ಕಣ್ಣೀರು ಸುರಿಸುತ್ತಾ ಗದ್ಗದಿತರಾಗಿ ‘ಸಂತೋಷ’ದಿಂದಲೇ ರಾಜಿನಾಮೆ ಕೊಟ್ಟಿದ್ದಾರೆ! ಅವರು ತಮ್ಮ ಸರ್ಕಾರದ ಆಡಳಿತಾವಧಿಯ 2ನೇ ವರ್ಷಾಚರಣೆ ಸಂದರ್ಭದಲ್ಲಿ ಮಾಡಿದ ಭಾಷಣ, ಘೋಷಣೆ ಅಸಂಗತ ನಾಟಕದ ಒಂದು ಅಂಕದಂತೆ ಕಂಡರೆ ಅಚ್ಚರಿಯಿಲ್ಲ. ಅವರ ರಾಜಿನಾಮೆಯ ನೈಜ ಕಾರಣ ಮಾತ್ರ ಕಣ್ಣಿಗೆ ಕಾಣದ ಕೊರೊನಾ ವೈರಾಣು ಇದ್ದಂತೆ. ಆಡಳಿತದಲ್ಲಿನ ಮಿತಿಮೀರಿದ ಭ್ರಷ್ಟಾಚಾರ, ಮಗನ ಸೂಪರ್ ಸಿಎಂ […]

ನಿಜ ಆದ ಅನುಮಾನ!

ನಿಜ ಆದ ಅನುಮಾನ!

ಕೊರೊನೋತ್ತರ ಅವಧಿಯಲ್ಲಿ ಜನರ ಜೀವನದೃಷ್ಟಿ ಮತ್ತು ಜೀವನಶೈಲಿಯಲ್ಲಿ ಗಮನಾರ್ಹ ಸ್ಥಿತ್ಯಂತರ ಆಗಬಹುದೆಂದು ಅನೇಕರು ಕನಸು ಕಂಡಿದ್ದೆವು. ಹಾಗಾಗದಿರಲೂ ಸಾಧ್ಯ ಎಂಬ ಸಣ್ಣ ಶಂಕೆ ಮತ್ತು ವಾಸ್ತವ ಪ್ರಜ್ಞೆಯೂ ಜೊತೆಗಿತ್ತು. ಆದರೆ ಫಲಿತಾಂಶಕ್ಕಾಗಿ ಕೊರೊನಾ ಅವಧಿ ಮುಗಿಯುವವರೆಗೂ ಕಾಯುವ ಅಗತ್ಯ ಕೂಡಾ ಇಲ್ಲದಂತಾಗಿದೆ. ಈಗಾಗಲೇ ಜನಸಾಮಾನ್ಯರ ವ್ಯಕ್ತಿಗತ ಸ್ವಾರ್ಥ ಮತ್ತು ಅಧಿಕಾರಸ್ಥರ ಹಣದಾಹ ಪ್ರಖರವಾಗಿ ಪ್ರಕಟಗೊಂಡಿದೆ. ನಮ್ಮೊಳಗಿನ ಅನುಮಾನವೇ ನಿಜ ಆಗಿ, ಆಶಯ ಘಾಸಿಗೊಂಡಿದ್ದಕ್ಕೆ ಪುರಾವೆಗಳ ಕೊರತೆಯಿಲ್ಲ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಬಿಜೆಪಿ ಸರ್ಕಾರ ಕೊರೊನಾ ಸಂದರ್ಭದಲ್ಲಿ ಆರಂಭದಿಂದ […]

ವಿಶೇಷ ಸಂದರ್ಭದ ವಿಶಿಷ್ಟ ಶಿಶು!

-ಡಾ.ಬಿ.ಎಲ್.ಶಂಕರ್

ವಿಶೇಷ ಸಂದರ್ಭದ ವಿಶಿಷ್ಟ ಶಿಶು!
-ಡಾ.ಬಿ.ಎಲ್.ಶಂಕರ್

‘ಬದಲಾವಣೆಯೇ ಶಾಶ್ವತ’ –ಇದು ರೂಢಿಗತ ನುಡಿ. ಜೊತೆಗೆ, ಸತ್ಯವೂ ಕೂಡಾ. ಈಗಂತೂ ವೈಜ್ಞಾನಿಕ ಸಂಶೋಧನೆಗಳ ಫಲರೂಪವಾದ ವಿಪರೀತ ಆಯ್ಕೆಗಳು ಬೇರೆ. ಪರಿಸ್ಥಿತಿ ಹೀಗಿರುವಾಗ ‘ಶಾಶ್ವತ’ ಪದಕ್ಕೆ ನೆಲೆಯೆಲ್ಲಿ? ‘ಅಕ್ಷರ’ ಎಂದರೆ ಶಾಶ್ವತ ಎಂದರ್ಥ. ಅಕ್ಷರ ಜ್ಞಾನವೇ ಶಿಕ್ಷಣ. ಅಕ್ಷರವೇ ಶಾಶ್ವತವಾಗಿರಬೇಕೇ ವಿನಾ ಶಿಕ್ಷಣ ವಿಧಾನ ಶಾಶ್ವತವಾಗಿರಬಾರದು. ಹಿಂದಿನ ವಿಧಾನಕ್ಕಿಂತ ಶ್ರೇಷ್ಠ ವಿಧಾನದ ಅನ್ವೇಷಣೆಯಾಗಬೇಕಲ್ಲದೆ, ಸಂಪೂರ್ಣ ರೂಪಾಂತರ ಉಚಿತವಲ್ಲ. ಭಾರತೀಯ ಶಿಕ್ಷಣಪದ್ಧತಿ ವಿಶ್ವದಲ್ಲೇ ಹೆಸರುವಾಸಿಯಾಗಿತ್ತು. ಮಕ್ಕಳ ಬೌದ್ಧಿಕ, ಮಾನಸಿಕ, ಅಧ್ಯಾತ್ಮಿಕ ವಿಕಾಸಕ್ಕೆ ಪೂರಕವಾದ ಶಿಕ್ಷಣ ಪದ್ಧತಿ ಆಚರಣೆಯಲ್ಲಿತ್ತು. ಮಕ್ಕಳ […]

ಕ್ರಾಂತಿಯೇ ಅಲ್ಲದ ಆನ್ ಲೈನ್ ಕ್ರಾಂತಿ!

-ರಾಜೇಂದ್ರ ಚೆನ್ನಿ

ಕ್ರಾಂತಿಯೇ ಅಲ್ಲದ ಆನ್ ಲೈನ್ ಕ್ರಾಂತಿ!
-ರಾಜೇಂದ್ರ ಚೆನ್ನಿ

ಕೊರೊನಾ ವೈರಾಣು ಆಗಲೇ ಮಾರುಕಟ್ಟೆ ಹಾಗೂ ರಾಜಕೀಯ ಶಕ್ತಿಯ ಬೆಂಬಲ ಪಡೆದಿದ್ದ online ಶಿಕ್ಷಣಕ್ಕೆ ಅಪಾರ ವೇಗವನ್ನು ಹಾಗೂ ವಿಸ್ತಾರವನ್ನು ಸೃಷ್ಟಿಸಿದೆಯೇ ಹೊರತು ಅದು ಈ ಪಿಡುಗಿನಿಂದಾಗಿ ಅನಿವಾರ್ಯವಾಗಿ ಹುಟ್ಟಿಕೊಂಡ ಹೊಸ ವಿದ್ಯಮಾನ ಖಂಡಿತ ಅಲ್ಲ. ಒಂದು ಕುತೂಹಲದ ಅಂಶವೆAದರೆ ಅಂತರ್‌ಜಾಲವು ಭಾರತವನ್ನು ಪ್ರವೇಶ ಮಾಡಿದ್ದು ಶಿಕ್ಷಣ ಹಾಗೂ ಸಂಶೋಧನೆಯ ಶಿಕ್ಷಣ ಸಂಸ್ಥೆಗಳ ಮೂಲಕವೆ.  1986ರಲ್ಲಿ Educational Research Network (ERNET) ತಂತ್ರಜ್ಞಾನವನ್ನು ಭಾರತೀಯ ವಿಜ್ಞಾನ ಸಂಸ್ಥೆ, ಐ.ಐ.ಟಿ.ಗಳು ಸಂಶೋಧನೆಗಾಗಿ ಬಳಸಿಕೊಳ್ಳತೊಡಗಿದವು. ಅಲ್ಲಿಂದ 9 ವರ್ಷಗಳ ನಂತರ […]

ನ್ಯಾಯಾಲಯದಲ್ಲಿ ಆನ್‌ಲೈನ್ ಕಲಾಪ ಸಾಧ್ಯವೇ?

-ಶಿವಯೋಗಿ ಸಾಲಿಮಠ

ನ್ಯಾಯಾಲಯದಲ್ಲಿ ಆನ್‌ಲೈನ್ ಕಲಾಪ ಸಾಧ್ಯವೇ?
-ಶಿವಯೋಗಿ ಸಾಲಿಮಠ

ಆನ್‌ಲೈನ್ ಮೂಲಕ ನ್ಯಾಯಾಲಯದ ಕಾರ್ಯಕಲಾಪ ನಡೆಸಿದಲ್ಲಿ ಅವಸರದ ಪ್ರಕ್ರಿಯೆಯಿಂದ ವ್ಯಾಜ್ಯದಾರರಿಗೆ ಹಾನಿಯಾಗುವುದೇ ಹೆಚ್ಚು. ನ್ಯಾಯಾಲಯದ ಕಾರ್ಯಕಲಾಪಗಳನ್ನು ಆನ್‌ಲೈನ್‌ನಲ್ಲಿ ಯಶಸ್ವಿಯಾಗಿ ನಡೆಸಲು ಸಾಧ್ಯವೇ? ಈಗಿರುವ ಯಾರೂ ನಿರೀಕ್ಷಿಸದ ಅನಿವಾರ್ಯ ಸಂದರ್ಭದಲ್ಲಿ ಈ ಪ್ರಶ್ನೆ ಅಮುಖ್ಯವೆನಿಸಲಾರದು. ಕಳೆದ 38 ವರ್ಷಗಳಿಂದ ವಕೀಲನಾಗಿ ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿರುವ ನನ್ನಂಥವರು ನ್ಯಾಯಾಂಗದಲ್ಲಿ ಸಾಕಷ್ಟು ಬದಲಾವಣೆ, ಸುಧಾರಣೆ, ಅನುಕೂಲತೆ, ಅನಾನುಕೂಲತೆ, ಅನಿವಾರ್ಯತೆ ನೋಡುತ್ತಲೇ ಬಂದಿದ್ದೇವೆ. ನಮ್ಮ ವೃತ್ತಿಯ ಪ್ರಾರಂಭದ ದಿನಗಳಲ್ಲಿ ಇದ್ದ ವ್ಯವಸ್ಥೆಗೂ ಇತ್ತೀಚಿನ ದಿನಗಳಲ್ಲಿಯ ಕಾರ್ಯಕಲಾಪಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಅಂದಿನ ದಿನಗಳಲ್ಲಿ ವಾಜ್ಯಗಳು ಪ್ರಾರಂಭವಾಗಿ […]

ಕೊರೊನಾ ಕಾಲದಲ್ಲಿ ಉನ್ನತ ಶಿಕ್ಷಣ

-ಡಾ.ಎನ್.ಎಸ್.ಗುಂಡೂರ

ಕೊರೊನಾ ಕಾಲದಲ್ಲಿ ಉನ್ನತ ಶಿಕ್ಷಣ
-ಡಾ.ಎನ್.ಎಸ್.ಗುಂಡೂರ

ಶಿಕ್ಷಣ ವಲಯದಲ್ಲಿ, ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ಮರುಹೊಂದಾಣಿಕೆ ಹೇಗೆ ರೂಪುಗೊಳ್ಳುತ್ತದೆಂದು ಅವಲೋಕಿಸುತ್ತ, ಇಲ್ಲಿ ಉಂಟಾಗುತ್ತಿರುವ ಸಮಸ್ಯೆ ಹಾಗೂ ಸವಾಲುಗಳ ಕುರಿತು ಆಲೋಚಿಸುವುದು ಈ ಲೇಖನದ ಮುಖ್ಯ ಆಶಯ. ಮನುಕುಲದ ಇತಿಹಾಸದಲ್ಲಿ ಆಗಿಹೋದ ಬೇರೆಲ್ಲ ಸೋಂಕು ರೋಗಗಳಿಗೆ ಹೋಲಿಸಿ ನೋಡಿದರೆ, ಕೊರೊನಾದಿಂದ ಉಂಟಾಗುತ್ತಿರುವ ಸಾವು-ನೋವುಗಳ ಪ್ರಮಾಣ ಕಡಿಮೆ ಎಂದೇ ಹೇಳಬಹುದು. ಆದರೆ ಜಗತ್ತಿನಾದ್ಯಂತ ಏಕಕಾಲಕ್ಕೆ ಕೊರೊನಾ ಉಂಟು ಮಾಡಿರುವ ಪರಿಣಾಮ ಮತ್ತು ಬಿಕ್ಕಟ್ಟು ಇನ್ನುಳಿದ ಯಾವ ವಿದ್ಯಮಾನವು ಮಾಡಿರಲಿಕ್ಕಿಲ್ಲ! ಇಡೀ ಜಗತ್ತನ್ನೇ ಒಂದು ಬಾರಿ ಮೂಗುಹಿಡಿದು ನಿಲ್ಲಿಸಿದಂತಾಗಿದೆ. ಆದಾಗ್ಯೂ […]

ಆನ್‌ಲೈನ್ ಶಿಕ್ಷಣ: ವರವೋ? ಶಾಪವೋ?

-ವೆಂಕಟೇಶ್ ಎಸ್.

ಆನ್‌ಲೈನ್ ಶಿಕ್ಷಣ: ವರವೋ? ಶಾಪವೋ?
-ವೆಂಕಟೇಶ್ ಎಸ್.

ಕೇಳುಗರಿಗೆ ಉಪಕರಣಗಳು ಬೇಕು, ಹೇಳುವವರಿಗೆ ಪ್ರೋತ್ಸಾಹವೂ ಬೇಕು! ತಂತ್ರಜ್ಞಾನವು ಜಗತ್ತನ್ನು ಒಂದು ಪುಟ್ಟ ಗ್ರಾಮವನ್ನಾಗಿಸುತ್ತಿದೆ. ಇದರಿಂದ ಜಗತ್ತು ಬೆರಳಿನ ತುದಿಯಲ್ಲಿದೆ. ಸಂಶೋಧನಾತ್ಮಕವಾಗಿ ಹೇಳುವುದಾದರೆ ಬಹಳ ಹಿಂದಿನಿಂದ ಸಂಪಾದಿಸಿದ ಜ್ಞಾನಕ್ಕೆ ಹೋಲಿಸಿದರೆ 1700ರಲ್ಲಿ ಜ್ಞಾನ ದ್ವಿಗುಣವಾಯಿತು. 1900ರಲ್ಲಿ ಹಿಂದೆ ಇರುವ ಜ್ಞಾನಕ್ಕೆ ಹೋಲಿಕೆ ಮಾಡಿದರೆ ಮತ್ತೆ ದ್ವಿಗುಣವಾಯಿತು. ಹೊಸ ಅನ್ವೇಷಣೆಯ ಮೂಲಕ 1950ರಲ್ಲಿ ಮತ್ತೆ ಹಿಂದಿನ ಎಲ್ಲಾ ಜ್ಞಾನ ದ್ವಿಗುಣವಾಯಿತು. ಇದು ಮುಂದುವರೆಯುತ್ತಾ ಮುಂದೆ 20 ಅಥವಾ 15 ವರ್ಷಗಳಿಗೊಮ್ಮೆ ಹಿಂದಿನ ಜ್ಞಾನ ದ್ವಿಗುಣಗೊಳ್ಳುತ್ತಾ ಬಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು […]

ಅಶಾಶ್ವತದ ಕಡೆಗೆ ಸಾಗಲಿ ಕ್ರಾಂತಿ!

-ಡಾ.ಚಂದ್ರಕಲಾ ಹೆಚ್. ಆರ್.

ಅಶಾಶ್ವತದ ಕಡೆಗೆ ಸಾಗಲಿ ಕ್ರಾಂತಿ!
-ಡಾ.ಚಂದ್ರಕಲಾ ಹೆಚ್. ಆರ್.

ಸೋಂಕುರೋಗದ ಪೂರ್ವಸ್ಥಿತಿಗೆ, ಸ್ನೇಹ, ಪ್ರೀತಿಯ ಪರಿಸರಕ್ಕೆ, ಎಲ್ಲ ಬಗೆಯ ಸುಂದರಪರಿಸರಕ್ಕೆ ಹಿಮ್ಮರಳುವ ಸುಸಂದರ್ಭ ಒದಗಿಬರುವಂತಾಗಲಿ. ಕೊರೊನಾ ಮಹಾಮಾರಿಗೆ ವಿಶ್ವವೇ ತಲ್ಲಣಿಸುತ್ತಿದ್ದು ಜನಜೀವನದ ಸಮಗ್ರ ಪರಿವರ್ತನೆಗೆ ಕಾರಣವಾಗಿದೆ. ಮುಟ್ಟುವ, ತಟ್ಟುವ, ಕೂಡುವ, ಕಲೆಯುವ, ಸ್ಪರ್ಶನೀತಿಗಳೆಲ್ಲ ಅಂತರದ ಪರಿಧಿಯೊಳಗೆ ನಲುಗಿವೆ. ಈ ಅಂತರವು ಆರೋಗ್ಯ, ಸ್ವಚ್ಛತೆ, ಶಿಸ್ತಿನ ಪಾಠವನ್ನೆ ಕಲಿಸಿದ್ದರೂ, ಪ್ರತಿ ಸಂಬಂಧವನ್ನು ಅಪನಂಬಿಕೆಯ, ಎಚ್ಚರಿಕೆಯ ನೆಲೆಗಳಲ್ಲಿ ಪರಿಭಾವಿಸಿ ಆತ್ಮೀಯತೆಗೆ ಬರಗಾಲ ಬಂದಂತಿದೆ. ಈ ಸಂದರ್ಭವು ಎರಡು ಪ್ರಶ್ನೆಗಳೊಂದಿಗೆ ತೂಗುತ್ತದೆ. ಮುಂಬರುವ ದಿನಗಳೂ ಅಂತರದ ಪರಿಧಿಯೊಳಗೆ ಬದುಕುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆಯೇ? […]

ಬದಲಾವಣೆ ನಿಸರ್ಗದ ನಿಯಮ

-ಬಿ.ಬಿ.ನಾಗನೂರ

ಕೊರೊನಾ ನಂತರದ ಯುಗದಲ್ಲಿ ಅತ್ಯಗತ್ಯ ಸನ್ನಿವೇಶಗಳು ಒದಗಿ ಬಂದಾಗ ಮಾತ್ರ ಆನ್‌ಲೈನ್ ವ್ಯವಸ್ಥೆಯನ್ನು ಉಪಯೋಗಿಸಬೇಕಾಗುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗ ಕಳೆದ ನವೆಂಬರ್ 2019ರಿಂದಲೂ ಪ್ರಪಂಚದ ತುಂಬೆಲ್ಲಾ ನಿಧಾನವಾಗಿ ಹರಡಿ ಕಳೆದ ಮೂರು ತಿಂಗಳಲ್ಲಿ ಸ್ಫೋಟಗೊಳ್ಳುತ್ತಿದ್ದು, ನಮ್ಮ ಸಂವಹನದ ಗುಣಲಕ್ಷಣಗಳಲ್ಲಿ ಬದಲಾವಣೆಯನ್ನುಂಟು ಮಾಡಿದೆ. ನಮ್ಮ ಪಾರಂಪರಿಕ ಪದ್ಧತಿಗಳಲ್ಲಿ ಪರಿವರ್ತನೆ ತಂದು ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕವೇ ಆನ್‌ಲೈನ್ ಸಂವಹನ ಮಾಡುವ ಅನಿವಾರ್ಯತೆ ಉಂಟಾಗಿದೆ. ಈ ಆನ್‌ಲೈನ್ ಕ್ರಾಂತಿ ಆನ್‌ಲೈನ್ ಶಿಕ್ಷಣ, ವರ್ಕ್ ಫ್ರಮ್ ಹೋಂ, ಜೂಮ್ ಮೀಟಿಂಗ್‌ಗಳು, ವೆಬ್‌ಕಾಸ್ಟ್, […]

ಸಾಂಕ್ರಾಮಿಕ ಸೋಂಕಿನ ಸ್ವಾನುಭವ ಕಥನ

-ಸತ್ಯನಾರಾಯಣರಾವ್ ಅಣತಿ

ಸಾಂಕ್ರಾಮಿಕ ಸೋಂಕಿನ ಸ್ವಾನುಭವ ಕಥನ
-ಸತ್ಯನಾರಾಯಣರಾವ್ ಅಣತಿ

ನನ್ನ ದೀರ್ಘ ಜೀವನಯಾನದಲ್ಲಿ ಪ್ರಕೃತಿ ವಿಕೋಪದ, ವೈರಸ್ಸುಗಳ ಉಪಟಳವನ್ನು ದಾಟಿ ಮುನ್ನೆಡೆಯುತ್ತಿರುವುದು ಒಂದು ಪವಾಡದಂತೆ ಕಾಣಬಹುದು!   ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ ಸಮುದ್ರದ ತಡಿಯಲ್ಲಿ ಮನೆಯಮಾಡಿ ನೆರೆತೆರೆಗಂಜಿದಡೆಂತಯ್ಯಾ ಸಂತೆಯಲೊಂದು ಮನೆಯ ಮಾಡಿ ಶಬ್ದಕೆ ನಾಚಿದಡೆಂತಯ್ಯ ಬುವಿಯಮೇಲೆ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದಡೆ ಕೋಪವತಾಳದೆ ಸಮಾಧಾನಿಯಾಗಿರಬೇಕು ಚೆನ್ನಮಲ್ಲಿಕಾರ್ಜುನಯ್ಯಾ ನೀ ಕೇಳಯ್ಯಾ. ಅಕ್ಕನ ಈ ವಚನ ಏನನ್ನು ತಿಳಿಯಹೇಳುತ್ತದೆ: ವಿಶ್ವಮಾರುಕಟ್ಟೆಗೆ ಮಾರುಹೋಗಿ/ ಕೊರೋನಾಗಂಜಿದಡೆಂತಯ್ಯಾ ಎಂಬುದನ್ನು ತಾನೆ? ಮೀಡಿಯಾಗಳ ಬೊಬ್ಬೆಗೆ, ಮಾಧ್ಯಮಗಳ ಅರಚಾಟಕ್ಕೆ ಸರ್ಕಾರಗಳ ಗುರಿಯಿಲ್ಲದ ಪರದಾಟಕ್ಕೆ […]

ಯುಗಾಂತ್ಯ ಕಲ್ಪನೆ ಕಟ್ಟಿಕೊಟ್ಟ ಕಾದಂಬರಿ ದ ಸ್ಕಾರ್ಲೆಟ್ ಪ್ಲೇಗ್

-ಮಂಜುನಾಥ ಡಿ.ಎಸ್.

ಯುಗಾಂತ್ಯ ಕಲ್ಪನೆ ಕಟ್ಟಿಕೊಟ್ಟ ಕಾದಂಬರಿ ದ ಸ್ಕಾರ್ಲೆಟ್ ಪ್ಲೇಗ್
-ಮಂಜುನಾಥ ಡಿ.ಎಸ್.

ಒಂದು ಶತಮಾನಕ್ಕೂ ಹಿಂದೆ ರಚಿತಗೊಂಡ ಈ ಹೊತ್ತಿಗೆಯಲ್ಲಿ ಮುನ್ನೆಲೆಗೆ ಬಂದಿರುವ ಹಲವಾರು ಚಿಂತನೆಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ‘ವಿಶ್ವ ಸಾಹಿತ್ಯದಲ್ಲಿ ಸಾಂಕ್ರಾಮಿಕ ಪಿಡುಗುಗಳು’ ಸರಣಿಯಲ್ಲಿ ಅಮೆರಿಕದ ಸಾಹಿತಿ ಹಾಗು ಪತ್ರಕರ್ತ ಜಾಕ್ ಲಂಡನ್ ವಿರಚಿತ ‘ದ ಸ್ಕಾರ್ಲೆಟ್ ಪ್ಲೇಗ್’ ಶೀರ್ಷಿಕೆಯ ವಿಶಿಷ್ಟ ಕಾದಂಬರಿಯನ್ನು ಸಹ ಸೇರಿಸಿಕೊಳ್ಳಬಹುದು. ಈ ಕಾಲ್ಪನಿಕ ಕೃತಿ ಮೊದಲು ಪ್ರಕಟಗೊಂಡಿದ್ದು 1912ರಲ್ಲಿ. 2013ರಲ್ಲಿ ಹರಡಿದ ‘ರೆಡ್ ಡೆತ್’ ಹೆಸರಿನ ಕಾಲ್ಪನಿಕ ಪಿಡುಗು ಹೆಚ್ಚೂಕಡಿಮೆ ಇಡೀ ವಿಶ್ವವನ್ನೇ ವಿನಾಶದ ಅಂಚಿಗೆ ದೂಡುತ್ತದೆ. ಇದಾದ 60 ವರ್ಷಗಳ […]

ಅನಿಸಿಕೆಗಳು

ವಲಸಿಗರಿಗೆ ನಗರವೇ ಗತಿ ಪ್ರೊ.ಎಂ.ಎಸ್.ಶ್ರೀರಾಮ್ ಅವರು ವಲಸೆ ಕಾರ್ಮಿಕರ ಸಮಸ್ಯೆಗಳ ಕುರಿತು ಬರೆದಿರುವ ಲೇಖನ ಇಷ್ಟವಾಯಿತು. ಲೇಖಕರು ‘ಸಾಮಾಜಿಕ ಸುರಕ್ಷತೆ’ಯ ಮೇಲೆ ಹೆಚ್ಚು ಒತ್ತು ನೀಡಿದ್ದಾರೆ. ಹಳ್ಳಿಗಳಿಂದ ನಗರಗಳಿಗೆ ಅಥವಾ ನಗರಗಳಿಂದ ಹಳ್ಳಿಗಳಿಗೆ ಕಾರ್ಮಿಕರು ವಲಸೆ ಹೋಗುವುದಕ್ಕೆ ಈ ‘ಸಾಮಾಜಿಕ ಸುರಕ್ಷತೆ’ಯ ಪಾತ್ರ ದೊಡ್ಡದು ಎಂದು ಹೇಳಿದ್ದಾರೆ. ಮುಂದುವರಿದು ‘ಗ್ರಾಮೀಣ ಪ್ರದೇಶದಲ್ಲಿ ಊಟವಿಲ್ಲದಿದ್ದರೂ, ಬಡತನವಿದ್ದರೂ, ಸಾಮಾಜಿಕವಾಗಿ ಜನ ತಮ್ಮನ್ನು ನೋಡಿಕೊಳ್ಳುತ್ತಾರೆ ಎನ್ನುವ ಭರವಸೆಯಿಂದ ಜನ ಸ್ವಂತ ಊರುಗಳಿಗೆ ಮರಳುತ್ತಾರೆ’ ಎಂದು ಗುರುತಿಸಿದ್ದಾರೆ. ಆದರೆ ಈ ‘ಸಾಮಾಜಿಕ ಭರವಸೆ’ […]

ಕಮಿಷನ್ ದಂಧೆ ಅಧಿಕಾರಸ್ಥರ ಲೂಟಿಗೆ ಅಧಿಕೃತ ಮುದ್ರೆ!

-ನೀರಕಲ್ಲು ಶಿವಕುಮಾರ್

ಕಮಿಷನ್ ದಂಧೆ ಅಧಿಕಾರಸ್ಥರ ಲೂಟಿಗೆ ಅಧಿಕೃತ ಮುದ್ರೆ!
-ನೀರಕಲ್ಲು ಶಿವಕುಮಾರ್

ರಾಜ್ಯದಲ್ಲಿ ಯಾವುದೇ ಸರ್ಕಾರ ಬರಲಿ, ಯಾರೇ ಮುಖ್ಯಮಂತ್ರಿ ಆಗಲಿ, ಯಾವುದೇ ಅಧಿಕಾರಿಯಿರಲಿ; ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರ ಸಂಹಿತೆಯಂತೆ ಪಾಲಿಸಲ್ಪಡುವ ಕಮಿಷನ್ ದಂಧೆ ನಿರಾತಂಕವಾಗಿ ಸಾಗುತ್ತದೆ. ಕರ್ನಾಟಕ ರಾಜ್ಯವನ್ನು 34 ತಿಂಗಳ ಕಾಲ ಆಳ್ವಿಕೆ ಮಾಡಿದ ಮಾಜಿ ಮುಖ್ಯಮಂತ್ರಿಯೊಬ್ಬರು ತುಂಬಿದ ವಿಧಾನಸಭೆಯಲ್ಲಿ ಅನೇಕ ಸಲ ಸರ್ಕಾರದ ಮಟ್ಟದಲ್ಲಿ ನಡೆಯುವ ಕಮಿಷನ್ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟು, ರಾಜಕಾರಣಿಗಳ ಆತ್ಮಸಾಕ್ಷಿಯನ್ನು ಪ್ರಶ್ನಿಸಿದ ಮತ್ತು ಕಮಿಷನ್ ಹೆಸರಿನ ವ್ಯವಸ್ಥಿತ ಭ್ರಷ್ಟಾಚಾರದಲ್ಲಿ ಸಾರ್ವಜನಿಕರ ತೆರಿಗೆ ಹಣ ಲೂಟಿಯಾಗಿ ಅದು ಎಲ್ಲೆಲ್ಲಿಗೆ ಹರಿದು ಕೊನೆಗೆ ಯಾವ […]

ಜಾದೂಗಾರ ಮೋದಿ ಸರ್ಕಾರ ವೈಫಲ್ಯಗಳ ಆಗರ

-ಎಂ.ಕೆ.ಆನಂದರಾಜೇ ಅರಸ್

ಜಾದೂಗಾರ ಮೋದಿ ಸರ್ಕಾರ ವೈಫಲ್ಯಗಳ ಆಗರ
-ಎಂ.ಕೆ.ಆನಂದರಾಜೇ ಅರಸ್

ಮೋದಿಯವರಿಗೆ ಸಮಾಲೋಚನೆಗಳಲ್ಲಿ ನಂಬಿಕೆಯಿಲ್ಲ. ಎಲ್ಲದಕ್ಕೂ ತಲೆಯಾಡಿಸುವ ಕೆಲವು ಜನರಿಂದ ಸರ್ಕಾರ ನಡೆಯುತ್ತಿದೆ. ಮೋದಿಯವರು ಇದ್ದಕ್ಕಿದ್ದಂತೆ ಟೋಪಿಯಿಂದ ಮೊಲ ತೆಗೆದು ಚಮಾತ್ಕಾರ ಮಾಡುವ ಜಾದೂಗಾರರಂತೆ ಕಾಣಿಸಿಕೊಳ್ಳಲು ಬಯಸುತ್ತಾರೆ! ಜುಲೈ 17 ರಂದು ಯುನೈಟೆಡ್ ನೇಷನ್ಸ್ನ ಆರ್ಥಿಕ ಹಾಗೂ ಸಾಮಾಜಿಕ ಸಮಿತಿ ಅಧಿವೇಶನದಲ್ಲಿ ಮಾತನಾಡುತ್ತ ಭಾರತದಲ್ಲಿ ಕ್ಷಯರೋಗವನ್ನು (ಟಿಬಿ) 2025ರೊಳಗೆ ನಿರ್ಮೂಲನೆ ಮಾಡುವ ಗುರಿಯಿದ್ದು ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂದು ಮೋದಿಯವರು ಹೆಮ್ಮೆಯಿಂದ ಹೇಳಿದರು. ವಾಸ್ತವಕ್ಕೆ ಬಂದರೆ ಸದ್ಯ ಭಾರತದಲ್ಲಿ ಟಿಬಿ ವಾರ್ಷಿಕವಾಗಿ ಸುಮಾರು ಶೇಕಡ 2ರ ಮಟ್ಟದಲ್ಲಿ ಕಡಿಮೆಯಾಗುತ್ತಿದೆ. […]

ಲಾಭ-ನಷ್ಟ ಮತ್ತು ಸಂಕಷ್ಟದ ಭೂಸುಧಾರಣೆ

-ಚಂದ್ರಶೇಖರ ದಾಮ್ಲೆ

ಲಾಭ-ನಷ್ಟ ಮತ್ತು ಸಂಕಷ್ಟದ ಭೂಸುಧಾರಣೆ
-ಚಂದ್ರಶೇಖರ ದಾಮ್ಲೆ

ಪ್ರಸ್ತುತ ಭೂಸುಧಾರಣೆಯ ಶಾಸನ 1974ರ ತಿದ್ದುಪಡಿಯಲ್ಲಿ ಯಾರೇ ವ್ಯಕ್ತಿ ಯಾವುದೇ ಉದ್ಯಮದಲ್ಲಿದ್ದವನಾದರೂ ಆದಾಯ ಮಿತಿಯ ಯಾವುದೇ ತಗಾದೆ ಇಲ್ಲದೆ ಕೃಷಿ ಭೂಮಿಯನ್ನು ಖರೀದಿಸಬಹುದು! ಇದರ ಪರಿಣಾಮಗಳೇನು? ಭೂ ಸುಧಾರಣೆ ಎಂಬ ಶಾಸನದ ಅಂತಿಮ ಗುರಿ ಪ್ರತಿಯೊಬ್ಬರನ್ನು ‘ಭೂ ಸಹಿತರನ್ನಾಗಿ’ ಮಾಡುವುದಾಗಿರಬೇಕು. ‘ಭೂ ರಹಿತರನ್ನಾಗಿ’ ಮಾಡುವ ಪರಿಣಾಮ ಅದರಲ್ಲಿದ್ದರೆ ಅಂತಹ ಶಾಸನವನ್ನು ಸುಧಾರಣೆಯ ಹೆಸರಿನಲ್ಲಿ ಮಾಡಬಾರದು. ಕೃಷಿಕರ ಕೈಯಲ್ಲಿ ಇರುವ ಭೂಮಿಯನ್ನು ಮಾರಾಟಕ್ಕೆ ಇಡುವ ಪ್ರೇರಣೆ ಅದರಲ್ಲಿರಬಾರದು. ಅಂತಹದ್ದಿದ್ದರೆ ಅದರಿಂದ ಸರಕಾರಕ್ಕೆ ತತ್ಕಾಲೀನ ಪ್ರಯೋಜನವಾಗುತ್ತದೆ. ಬಂಡವಾಳಶಾಹಿಗಳಿಗೆ ಶಾಶ್ವತ ಪ್ರಯೋಜನವಾಗುತ್ತದೆ. […]

ಕುರಿ ಕಾಮೇಗೌಡ ಕಟ್ಟೆ ಕಟ್ಟಿ ಕೆಟ್ಟರೇ..?

-ಡಾ.ಟಿ.ಗೋವಿಂದರಾಜು

ಕುರಿ ಕಾಮೇಗೌಡ  ಕಟ್ಟೆ ಕಟ್ಟಿ ಕೆಟ್ಟರೇ..?
-ಡಾ.ಟಿ.ಗೋವಿಂದರಾಜು

ಕುಂದನಿ ಬೆಟ್ಟ ಒಂದು ಪರಿಸರ ಪಾಠಶಾಲೆ ಇದ್ದಂತೆ. ಅಲ್ಲಿ ಹೋಗಿಯೇ ಕಾಮೇಗೌಡರ ಜೀವ-ಪರಿಸರ ಕಾಳಜಿಯ ಮಹತ್ವ ತಿಳಿಯಬೇಕು. ಮಂಡ್ಯ ಜಿಲ್ಲೆ ದಾಸನಕೊಪ್ಪಲಿನ ಕಲ್ಲುಗುಡ್ಡದಲ್ಲಿ ಮೂಕಜೀವಿಗಳ ದಾಹ ತಣಿಸಲೆಂದು ಕಟ್ಟೆಗಳನ್ನು ತೋಡಿಸಿದ ಕಾಮೇಗೌಡ ಎಂಬ ಸಾಧಾರಣ ಕುರಿಯಜ್ಜನ ಬಗೆಗೆ ಅದೇ ಊರಿನ ‘ಉದಾರಿ’ ಹಿತಾಸಕ್ತರು ದೊಡ್ಡ ರಾದ್ಧಾಂತ ಮಾಡಿ ರಾಜ್ಯ ಮಟ್ಟದಲ್ಲಿ ಹೆಸರಾಗ ಹೊರಟಿದ್ದಾರೆ. ಚಾನಲ್ ಒಂದರಲ್ಲಿ ಜೋರು ದನಿಯಲ್ಲಿ ದೂರಿದ ಊರಿನ ಕೆಲ ಮಹನೀಯರು ಹಾಗೂ ಮಹಿಳೆಯರು ಕಾಮೇಗೌಡರ ಮೇಲೆ ಹೊರೆಸಿದ ಆರೋಪಗಳು:   ಅವನು ಕಟ್ಟೆಗೇಂತ […]

ಮುಖ್ಯಚರ್ಚೆಗೆ-ಪ್ರವೇಶ

ಸ್ವಾವಲಂಬನೆ ಬೇಕೆ..? ಜಾಗತೀಕರಣ ಸಾಕೆ..? ಸಾಂಕ್ರಾಮಿಕ ರೋಗಗಳಿಂದ ಗ್ರಸ್ತವಾಗಿರುವ ಭಾರತದ ಆರ್ಥಿಕತೆಯ ಪುನಶ್ಚೇತನಕ್ಕೆ ರೂ.20 ಲಕ್ಷ ಕೋಟಿಗಳ ‘ಪ್ಯಾಕೇಜ್’ ಘೋಷಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವು ಆತ್ಮನಿರ್ಭರತೆಯ (ಸ್ವಾವಲಂಬನೆಯ) ಹಾದಿಯಲ್ಲಿ ಸಾಗಬೇಕೆಂದು ಕರೆಕೊಟ್ಟಿದ್ದಾರೆ. 1950ರ ದಶಕದಿಂದಲೇ ಜವಾಹರಲಾಲ್ ನೆಹರೂ ಮುಂದಾಳತ್ವದಲ್ಲಿ ದೇಶವು ಸ್ವಾವಲಂಬನೆಯ ಹಾದಿ ಹಿಡಿದಿದೆ. ಇದರಲ್ಲಿ ಸಾಕಷ್ಟು ಯಶಸ್ಸನ್ನೂ ಕಂಡಿರುವುದರ ಜೊತೆಗೆ ಯಾವ ಉತ್ಪಾದನೆ ಹಾಗೂ ಯಾವ ಸೇವೆಗಳಲ್ಲಿ ನಾವು ಇನ್ನೂ ಪರಾವಲಂಬಿಗಳಾಗಿದ್ದೇವೆ ಎಂಬುದರ ವಿಮರ್ಶೆಯೂ ನಡೆದಿದೆ. ಸಾಂಕ್ರಾಮಿಕ ರೋಗದ ಕಾರಣದಿಂದ ಜಾಗತೀಕರಣಕ್ಕೆ ಆಗಿರುವ […]

ಜಾಗತೀಕರಣವೇ ಬಡತನಕ್ಕೆ ಮದ್ದು ನಿರುದ್ಯೋಗಕ್ಕೆ ಗುದ್ದು

-ಮೋಹನದಾಸ್

ಸೂಕ್ತ ರೀತಿಯಲ್ಲಿ ಹಾಗೂ ವಿಶದವಾಗಿ ಹೇಳದೇ ಹೋದರೂ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ತಾತ್ಪರ್ಯವು ಮುಂದಿನ ಆರ್ಥಿಕ ಬೆಳವಣಿಗೆಗಳಿಗೆ ಕಾರಣವಾಗುತ್ತದೆ. ಆದ ಕಾರಣ ಆತ್ಮನಿರ್ಭರತೆಯ ಈ ಹೊಸನೀತಿಯನ್ನು ನಾವು ತಾರ್ಕಿಕ ಹಾಗೂ ಆರ್ಥಿಕ ವಿಶ್ಲೇಷಣೆಗೆ ಒಳಪಡಿಸಲೇ ಬೇಕಾಗುತ್ತದೆ. 2020ರ ಮೇ 12 ರಂದು ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣದಲ್ಲಿ ‘ಆತ್ಮನಿರ್ಭರತೆ’ಯೇ (ಸ್ವಾವಲಂಬನೆ) ಮುಂದಿನ ದಿನಗಳಲ್ಲಿ ನಮ್ಮ ಆರ್ಥಿಕತೆಗೆ ಸರಿದಾರಿಯೆಂದು ಹೇಳಿದರು. ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ದೇಶಗಳು ತಮ್ಮ ಗಡಿಗಳನ್ನು ಮುಚ್ಚಿ ಸರಕು-ಸೇವೆಗಳಿಗೆ ತಡೆಯೊಡ್ಡಿದ ಹಿನ್ನೆಲೆಯಲ್ಲಿ […]

ಜಾಗತೀಕರಣದ ಒಳ್ಳೆಯ ಅರ್ಥದ ಹುಡುಕಾಟ

-ನಿತ್ಯಾನಂದ ಬಿ ಶೆಟ್ಟಿ

ಜಾಗತೀಕರಣದ ಒಳ್ಳೆಯ ಅರ್ಥದ ಹುಡುಕಾಟ
-ನಿತ್ಯಾನಂದ ಬಿ ಶೆಟ್ಟಿ

ಒಂದು ದಿನ ‘ಆತ್ಮನಿರ್ಭರ ಭಾರತ’ ಎಂದು ಕರೆಕೊಟ್ಟು ಇನ್ನೊಂದು ದಿನ ‘ಕೋವಿಡೋತ್ತರ ದಿನಗಳು ಭಾರತದಲ್ಲಿ ಹೂಡಿಕೆಯ ಅವಕಾಶವನ್ನು ಹೆಚ್ಚಿಸುತ್ತವೆ, ಕೋಟ್ಯಾಂತರ ಬಂಡವಾಳತೊಡಗಿಸಿ’ ಎಂಬ ಆಹ್ವಾನ ನೀಡಲಾಗುತ್ತಿದೆ. ಆದರೆ ಇವೆರಡೂ ಪರಸ್ಪರ ವಿರೋಧಾಭಾಸದ ಮತ್ತು ಮಹಾ ಸಾಂಕ್ರಾಮಿಕದಿಂದ ಯಾವ ಪಾಠವನ್ನೂ ಕಲಿಯದ ಮಾತುಗಳು. ಮೊದಲಿಗೆ ವಸ್ತುಸ್ಥಿತಿ ಹೇಗಿದೆ ಎಂಬುದನ್ನು ನೋಡೋಣ. ಸ್ಥಳೀಯ ನಿದರ್ಶನವೊಂದರ ಮೂಲಕವೇ ಇದನ್ನು ಆರಂಭಿಸೋಣ. ಲಾಕ್‌ಡೌನ್ ಕಾಲದಲ್ಲಿ ನಡೆದ ಒಂದು ಸಣ್ಣ ಘಟನೆ ಇದು. ತುಮಕೂರು ಪೇಟೆಯ ಹೊರವಲಯದ ಹಳ್ಳಿಯೊಂದರಲ್ಲಿ ವಾಸಿಸುತ್ತಿರುವ ನನ್ನ ಪಕ್ಕದ ಮನೆಯಲ್ಲಿ […]

ಸ್ವಾವಲಂಬನೆ, ಜಾಗತೀಕರಣ ಮತ್ತು ಕೊರೊನ ಸಹಕಾರ-ಸಹಬಾಳ್ವೆಯೇ ಪರಿಹಾರ

-ಟಿ.ಎಸ್.ವೇಣುಗೋಪಾಲ್

ಸ್ವಾವಲಂಬನೆ, ಜಾಗತೀಕರಣ ಮತ್ತು ಕೊರೊನ ಸಹಕಾರ-ಸಹಬಾಳ್ವೆಯೇ ಪರಿಹಾರ
-ಟಿ.ಎಸ್.ವೇಣುಗೋಪಾಲ್

ಜಾಗತೀಕರಣವೋ ಅಥವಾ ರಾಷ್ಟ್ರೀಯತೆಯೋ ಅನ್ನುವುದು ಪ್ರಶ್ನೆಯಲ್ಲ. ಅದು ಆಯ್ಕೆಯ ವಿಷಯವಲ್ಲ. ಕೆಲವನ್ನು ಜಾಗತಿಕ ಮಟ್ಟದಲ್ಲಿ ಪರಿಹರಿಸಿಕೊಳ್ಳಬೇಕು. ಕೆಲವಕ್ಕೆ ರಾಷ್ಟ್ರ ಮಟ್ಟದಲ್ಲಿ ತಯಾರಿ ಬೇಕು. ಕೊರೊನ ಜಗತ್ತನ್ನು ಬಹಳವಾಗಿ ಬದಲಿಸಿದೆ. ನಮ್ಮ ಯೋಚನೆ, ಬದುಕುವ ವಿಧಾನ ಎಲ್ಲವನ್ನು ಪ್ರಭಾವಿಸಿದೆ. ಮತ್ತೆ ಹಳೆಯ ಜಗತ್ತಿಗೆ ಮರಳುತ್ತೇವಾ ಅನ್ನುವ ಅನುಮಾನವನ್ನೂ ಮೂಡಿಸಿದೆ. ಮರೆಯಲ್ಲಿ ಅವಿತಿದ್ದ ನಮ್ಮ ಎಷ್ಟೋ ಕರಾಳ ಮುಖವನ್ನು ತೆರೆದಿಟ್ಟಿದೆ. ಆರ್ಥಿಕವಾಗಿ, ಆರೋಗ್ಯದ ದೃಷ್ಟಿಯಿಂದ ಜಗತ್ತು ಬಳಲಿದೆ. ಆರು ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದರ ನೂರು ಪಟ್ಟು […]