ಆತ್ಮನಿರ್ಭರ ಮತ್ತು ವಿದೇಶಿ ವ್ಯಾಪಾರ

-ಉದಿತ್ ಮಿಶ್ರಾ

ಆತ್ಮನಿರ್ಭರ ಮತ್ತು ವಿದೇಶಿ ವ್ಯಾಪಾರ
-ಉದಿತ್ ಮಿಶ್ರಾ

ಮುಂಬರುವ ದಿನಗಳಲ್ಲಿ ‘ಆತ್ಮನಿರ್ಭರ ಭಾರತ ಅಭಿಯಾನ’ದ ಬಗ್ಗೆ ನಿರ್ದಿಷ್ಟವಾದ ನೀತಿಯನ್ನು ರೂಪಿಸುವುದಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಆಶಿಸೋಣ. ಅದಿಲ್ಲದಿದ್ದರೆ ಈ ಹಿಂದೆ ಅರಬೆಂದ ರೀತಿಯಲ್ಲಿ ನಿರ್ವಹಿಸಿದ ಮೇಕ್ ಇನ್ ಇಂಡಿಯಾ ನೀತಿಯ ಕಥೆಯಾಗುತ್ತದೆ! ಹಾ ಜೂನ್ ಚಾಂಗ್ ಅವರು ‘ಅರ್ಥಶಾಸ್ತç: ಬಳಕೆದಾರರ ಕೈಪಿಡಿ’ ಕೃತಿಯ ಅಂತಾರಾಷ್ಟ್ರೀಯ ವ್ಯಾಪಾರ ಅಧ್ಯಾಯವನ್ನು ಕ್ವಿನ್‌ಲಾಂಗ್ ಎಂಬ ಚೈನಾದ ಚಕ್ರವರ್ತಿಯ ಕಥೆಯ ವಿವರಣೆಯಿಂದ ಆರಂಭಿಸುತ್ತಾರೆ. ಬ್ರಿಟನ್‌ನ ಚಕ್ರವರ್ತಿ ಮೂರನೆಯ ಜಾರ್ಜ್ ಅವರು ಎರಡು ದೇಶಗಳ ನಡುವೆ ಮುಕ್ತ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ಮಾಡಿದÀ […]

ಚೀನಾದ ಆರ್ಥಿಕ ಪ್ರಾಬಲ್ಯ ಕೊನೆಗಾಣಿಸಲು ಭಾರತ ಏನು ಮಾಡಬೇಕು?

-ಡಾ.ಅಮಿತೆಂದು ಪಾಲಿಟ್

ಚೀನಾದ ಆರ್ಥಿಕ ಪ್ರಾಬಲ್ಯ ಕೊನೆಗಾಣಿಸಲು ಭಾರತ ಏನು ಮಾಡಬೇಕು?
-ಡಾ.ಅಮಿತೆಂದು ಪಾಲಿಟ್

ಭಾರತ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿದೆ. ಆದರೆ, ಇತರ ದೇಶಗಳು ಇನ್ನೂ ಹಾಗೆ ಮಾಡುತ್ತಿಲ್ಲ. ಇದರ ಫಲವಾಗಿ, ಚೀನಾದ ವಿರುದ್ಧ ಸಾಮೂಹಿಕ ಆರ್ಥಿಕ ಆಕ್ರಮಣವನ್ನು ಸಜ್ಜುಗೊಳಿಸಲು ಭಾರತಕ್ಕೆ ಕಷ್ಟವಾಗುತ್ತಿದೆ. ಚೀನಾ ಗಡಿ ವಿಚಾರದಲ್ಲಿ ಭಾರತದ ಇತ್ತೀಚಿನ ನಿಲುವು, ದೇಶದಲ್ಲಿ ಚೀನಾ ವಿರೋಧಿ ಭಾವನೆಗಳನ್ನು ಉಲ್ಬಣಗೊಳಿಸಿದೆ. ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ನಿರಂತರ ಸಂಘರ್ಷದ ಹೊರತಾಗಿಯೂ, ತನ್ನ ಆಕ್ರಮಣಕಾರಿ ನೆರೆದೇಶಕ್ಕೆ ಪರಿಣಾಮಕಾರಿ ಪ್ರತಿಕ್ರಿಯೆ ನೀಡಲು ಭಾರತ ಪರದಾಡುತ್ತಿದೆ. ಪ್ರಸ್ತುತ, ಭಾರತದಲ್ಲಿ ಚೀನಾದ ಉತ್ಪನ್ನಗಳನ್ನು ಬಹಿಷ್ಕಾರ ಮತ್ತು ಬಂಡವಾಳ ಹೂಡಿಕೆಯನ್ನು ನಿಯಂತ್ರಿಸುವುದರಿAದ, […]

ಸ್ವಾವಲಂಬಿ ಭಾರತದ ಜಾಗತಿಕ ದೃಷ್ಟಿಕೋನ

-ವಿಶ್ವನಾಥ್ ಭಟ್

‘ಆತ್ಮನಿರ್ಭರ ಭಾರತ್’ ತತ್ವದ ಅಡಿಯಲ್ಲಿ ದೇಶದಲ್ಲಾಗುತ್ತಿರುವ ಜಾಗತೀಕರಣದ ಪ್ರಗತಿ, ಭಾರತ ಅಭಿವೃದ್ಧಿಯತ್ತ ಇಟ್ಟ ದಿಟ್ಟ ದಾಪುಗಾಲು. ಮುಂದಿನ 5-6 ವರುಷಗಳಲ್ಲಿ ಈ ಯಶೋಗಾಥೆಯ ಫಲವನ್ನು ನಾವು ನೋಡಲಿದ್ದೇವೆ. 1956ರಲ್ಲಿ ಅಂಗಿಕಾರಗೊಂಡ ಅಂದಿನ ಪ್ರಧಾನಿ ಪಂಡಿತ್ ನೆಹರೂ ಅವರ ‘ಕೈಗಾರಿಕಾ ನೀತಿಯ ರೆಸಲೂಷನ್’ ಭಾರತದಲ್ಲಿ ‘ಸಮಾಜವಾದಿ ಮಾದರಿಯ ಸಮಾಜ’ದ ಸ್ಥಾಪನೆಗೆ ಒತ್ತು ನೀಡಿತ್ತು. ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಇಂದಿರಾಗಾಂಧಿಯವರ ‘ಉಳುವವನೇ ಭೂಮಿಯ ಒಡೆಯ’, ‘ಬ್ಯಾಂಕ್‌ಗಳ ರಾಷ್ಟ್ರೀಕರಣ’ ಮುಂತಾದ ಕ್ರಾಂತಿಕಾರಿ ಹಾಗೂ ವಿವಾದಾತ್ಮಕ ನೀತಿಗಳು ಕಾಂಗ್ರೆಸ್ ಪಕ್ಷಕ್ಕೆ 57 […]

ಜಾಗತೀಕರಣವೂ ಬೇಕು ಸ್ವಾವಲಂಬನೆಯೂ ಬೇಕು

-ರಂಗಸ್ವಾಮಿ ಮೂಕನಹಳ್ಳಿ

ಜಾಗತೀಕರಣವೂ ಬೇಕು ಸ್ವಾವಲಂಬನೆಯೂ ಬೇಕು
-ರಂಗಸ್ವಾಮಿ ಮೂಕನಹಳ್ಳಿ

ಇಂಗ್ಲೆಂಡ್, ಅಮೆರಿಕಾ ಗಲ್ಲಿ ಕ್ರಿಕೆಟ್ ಆಟದಲ್ಲಿ ಮೋಸ ಮಾಡುವ ಬಲಿಷ್ಠ ಹುಡುಗನಂತೆ. ಏನೇ ಆದರೂ ಬ್ಯಾಟಿಂಗ್ ಮಾತ್ರ ತಾನು ಮಾಡುತ್ತಿರಬೇಕು ಎಂಬ ದುರಾಸೆ. ಈ ದೇಶಗಳು ತಾವೇ ಶುರು ಮಾಡಿದ ಜಾಗತೀಕರಣ ಇಂದು ಜಗತ್ತಿನ ಆರ್ಥಿಕ ಸಂಕಷ್ಟದ ಮೂಲ ಎಂದು ತಮ್ಮ ಜನರನ್ನು ನಂಬಿಸಿವೆ. ತೊಂಬತ್ತರ ದಶಕದಲ್ಲಿ ಜಾಗತೀಕರಣ ಅರ್ಥಾತ್ ಗ್ಲೋಬಲೈಸಷನ್ ಹೆಚ್ಚು ಬಳಸಲ್ಪಟ್ಟ ಪದ. ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ ಸಿಂಗ್ ಅವರ ನೇತೃತ್ವದ್ದಲ್ಲಿ ಭಾರತದ ಬಾಗಿಲನ್ನು ವಿಶ್ವಕ್ಕೆ ತೆರೆದದ್ದು, ನಂತರದ ದಿನಗಳಲ್ಲಿ ಭಾರತದ ಆರ್ಥಿಕ ಪರಿಸ್ಥಿತಿ […]

ಸಾಂಕ್ರಾಮಿಕದ ಅಂತ್ಯ ಹೇಗೆ..? ಚಿಕಿತ್ಸೆಯೋ..? ಲಸಿಕೆಯೋ..? ಸಮೂಹ ಪ್ರತಿರಕ್ಷೆಯೋ..?ಸೆಪ್ಟೆಂಬರ್ ಸಂಚಿಕೆಯ ಮುಖ್ಯ ಚರ್ಚೆ:

ಸೆಪ್ಟೆಂಬರ್ ಸಂಚಿಕೆಯ ಮುಖ್ಯ ಚರ್ಚೆ:

ಸಾಂಕ್ರಾಮಿಕದ ಅಂತ್ಯ ಹೇಗೆ..? ಚಿಕಿತ್ಸೆಯೋ..? ಲಸಿಕೆಯೋ..? ಸಮೂಹ ಪ್ರತಿರಕ್ಷೆಯೋ..? ಕೋವಿಡ್-19 ವೈರಾಣು ಇನ್ನು ನಮ್ಮ ನಡುವೆಯೇ ಇರಲಿದೆ. ಮುಂದಿನ ವರ್ಷಗಳಲ್ಲಿ ಮಲೇರಿಯಾ, ಕಾಲರಾ, ಇನ್‌ಫ್ಲುಯೆಂಜಾ ರೋಗಗಳಂತೆ ವೈರಾಣು ಕಾರಣಿತ ಈ ರೋಗವೂ ನಮ್ಮ ಬದುಕಿನ ಭಾಗವೇ ಆಗಿ ಉಳಿಯುವಂತೆ ಕಾಣುತ್ತಿದೆ. ಆದರೆ ಈ ವೈರಾಣುವಿನಿಂದ ಹಬ್ಬಿದ ಸಾಂಕ್ರಾಮಿಕ ರೋಗ ಕೊನೆಗಾಣುವುದು ಹೇಗೆ ಎಂಬ ಚರ್ಚೆ ಇಂದು ಪ್ರಸ್ತುತವಾಗಲಿದೆ. ಯಾವ ದಾರಿಯಲ್ಲಿ ವೈರಾಣುವಿನಿಂದ ಪ್ರಾಣಭಯ ದೂರವಾಗುವುದೋ ಹಾಗೂ ಯಾವ ರೀತಿಯಲ್ಲಿ ವೈರಾಣುವಿನ ಹರಡುವಿಕೆ ತಪ್ಪುವುದೋ ಎಂಬುದು ಮುಂದಿನ ತಿಂಗಳುಗಳಲ್ಲಿ […]

ಸಂಧಾನವೆಂದರೆ ಶರಣಾಗತಿಯಲ್ಲ!

-ಸುಧೀಂದ್ರ ಕುಲಕರ್ಣಿ

ಸಂಧಾನವೆಂದರೆ ಶರಣಾಗತಿಯಲ್ಲ!
-ಸುಧೀಂದ್ರ ಕುಲಕರ್ಣಿ

ಚೀನಾ ಜೊತೆಯಲ್ಲಿ 1960ರಲ್ಲಿ ಗಡಿ ಸಮಸ್ಯೆ ಬಗೆಹರಿಸಲು ಒಪ್ಪಂದವಾಗಿದ್ದರೆ 1962ರಲ್ಲಿ ಯುದ್ಧವಾಗುತ್ತಿರಲಿಲ್ಲ ಹಾಗೂ 2020ರಲ್ಲಿ ಲಡಾಕ್‌ನಲ್ಲಿ ಕಲಹದ ಪ್ರಸಂಗ ಬರುತ್ತಿರಲಿಲ್ಲ. ಈಗ ಪ್ರಶ್ನೆ ಇರುವುದು: ಭಾರತ-ಚೀನಾ ಗಡಿ ಸಮಸ್ಯೆಗೆ ಪೂರ್ಣವಿರಾಮ ಕೊಡದೆಯೇ ನರೇಂದ್ರ ಮೋದಿಯವರು ತಮ್ಮ ಪ್ರಧಾನಮಂತ್ರಿ ಕಾಲವನ್ನು ಮುಗಿಸುವವರಿದ್ದಾರೆಯೇ? ಭಾರತ ಮತ್ತು ಚೀನಾ ದೇಶಗಳ ಸೈನಿಕರ ನಡುವೆ ಜೂನ್ 15 ರಂದು ನಡೆದ ಲಡಾಕ್‌ನ ಗಾಲವಾನ್ ಕಣಿವೆಯ ಬಳಿ ನಡೆದ ಹೊಡೆದಾಟ-ಬಡೆದಾಟ 1962ರ ಯುದ್ಧದ ನಂತರದ ಮಹಾಭಯಂಕರ ಕಲಹವೇ ಹೌದು. ಈ ತಿಕ್ಕಾಟದಲ್ಲಿ ಭಾರತದ 20 […]

ವಿಶ್ವ ವಿದ್ಯಮಾನ

ಪುರುಷೋತ್ತಮ ಆಲದಹಳ್ಳಿ

ವಿಶ್ವ ವಿದ್ಯಮಾನ
ಪುರುಷೋತ್ತಮ ಆಲದಹಳ್ಳಿ

ಹಾಂಗ್‌ಕಾಂಗ್‌ನಲ್ಲಿ ಸ್ವಾಯತ್ತತೆಯ ಕೊನೆಯ ಅಧ್ಯಾಯ ‘ಒಂದು ದೇಶ ಎರಡು ವ್ಯವಸ್ಥೆ’ ಎಂದು 1997ರಲ್ಲಿ ಶುರುವಾಗಿದ್ದ ಹಾಂಗ್‌ಕಾಂಗಿನ ಸ್ವಾಯತ್ತತೆಯ ಕೊನೆಯ ಅಧ್ಯಾಯ ಇದೀಗ ಪ್ರಾರಂಭವಾಗಿದೆ. ಬ್ರಿಟನ್ ಮತ್ತು ಚೀನಾ ಮಧ್ಯೆ ಆದ ಒಡಂಬಡಿಕೆಯಂತೆ 1997 ರಿಂದ 2047 ರವರೆಗೆ ಹಾಂಗ್‌ಕಾಂಗಿನಲ್ಲಿ ‘ಮೂಲಭೂತ ಕಾನೂನಿ’ನಂತೆ ಸ್ವಾಯತ್ತತೆ ಮತ್ತು ಪ್ರಜಾಪ್ರಭುತ್ವ ಇರಬೇಕಿತ್ತು. ಚೀನಾದ ಕಮ್ಯುನಿಸ್ಟ್ ಸರ್ಕಾರ ಸೈನ್ಯ, ವಿದೇಶಾಂಗ ನೀತಿ ಮತ್ತಿತರ ಕೆಲವೇ ವಿಷಯಗಳಲ್ಲಿ ತನ್ನ ಅಧಿಕಾರ ಚಲಾಯಿಸಿ ಸ್ಥಳೀಯ ಸರ್ಕಾರಕ್ಕೆ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಡಬೇಕಿತ್ತು. ಆದರೆ ಈ […]

ಕೋವಿಡ್-19 ವಿಶ್ವ ನಾಯಕರ ವಿಚಿತ್ರ ಸಲಹೆಗಳು!

-ಅವಂತಿಕಾ ಚೋಪ್ರಾ

ಕೋವಿಡ್-19 ವಿಶ್ವ ನಾಯಕರ ವಿಚಿತ್ರ ಸಲಹೆಗಳು!
-ಅವಂತಿಕಾ ಚೋಪ್ರಾ

ಸೋಂಕು ನಿವಾರಕ ಚುಚ್ಚುಮದ್ದು, ಸಾರಾಯಿ ಸೇವನೆ, ಗೋಮೂತ್ರ ಸೇವನೆ, ಗೊಬ್ಬರದ ಸೇವನೆ ಹೀಗೆ ತಮ್ಮದೇ ಆದ ವಿಭಿನ್ನ ಪರಿಹಾರ ಮಾರ್ಗಗಳನ್ನು ರಾಜಕೀಯ ನಾಯಕರು ಸೂಚಿಸುತ್ತಿದ್ದಾರೆ! ಕೋವಿದ್ 19 ವಿಶ್ವದಾದ್ಯಂತ ಪಸರಿಸುತ್ತಿರುವಂತೆಯೇ ಈ ರೋಗಾಣುವಿನ ವಿರುದ್ಧ ಹೋರಾಡಲು ಹೊಸ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳೂ ನಡೆಯುತ್ತಿವೆ. ಈ ಲಸಿಕೆ ಕಂಡುಹಿಡಿಯಲು ಇನ್ನೂ ಸಾಕಷ್ಟು ಸಮಯ ಬೇಕಾಗಬಹುದಾದರೂ, ಕೊರೋನಾ ವೈರಾಣು ನಿಯಂತ್ರಣಕ್ಕೆ, ವಿಶ್ವದಾದ್ಯಂತ ರಾಜಕೀಯ ನಾಯಕರು ತಮ್ಮದೇ ಆದ ಚಿತ್ರವಿಚಿತ್ರವಾದ ಚಿಕಿತ್ಸಾ ವಿಧಾನಗಳನ್ನು, ಔಷಧಿಗಳನ್ನು ಶಿಫಾರಸು ಮಾಡುತ್ತಿರುವುದು ಕಂಡುಬರುತ್ತಿದೆ. ಸೋಂಕು ನಿವಾರಕ […]

ಕೋವಿಡ್-19 ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಕಳಂಕ

-ಸಂಗಪ್ಪ ವಗ್ಗರ್ ದೆಹಲಿ

ಕೋವಿಡ್-19 ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಕಳಂಕ
-ಸಂಗಪ್ಪ ವಗ್ಗರ್ ದೆಹಲಿ

ಕೊರೊನ ಬಗ್ಗೆ ದಿನವಿಡೀ ನ್ಯೂಸ್ ನೋಡುವುದು, ಓದುವುದು ಮತ್ತು ಕೇಳುವುದು ಮಾಡದೆ ಇತರ ವಿಷಯಗಳ ಬಗ್ಗೆ ಗಮನ ಹರಿಸಿದರೆ ಒಳ್ಳೆಯದು. ಕೊರೊನ ವೈರಸ್ ದೇಹಕ್ಕೆ ಸಂಬಂಧ ಪಟ್ಟರೂ ಅದರ ಮೊದಲ ವೈರಿ ಮನಸ್ಸು. ಮನಸ್ಸು ಹಣಿದರೆ ದೇಹದ ಕುಸಿತ ಅತಿ ಸುಲಭ. ಕೊರೊನ ವೈರಸ್‌ನಿಂದ ಪ್ರಾಣ ಬಿಟ್ಟವರಿಗಿಂತ ಮಾನಸಿಕವಾಗಿ ಕಳಂಕ, ಭಯ, ಆತಂಕ, ಒತ್ತಡ ಮತ್ತು ಸುಸೈಡ್ ಬಗ್ಗೆ ಯೋಚಿಸಿದವರೆ ಅಧಿಕ. ಗುಣಮುಖರಾಗಿ ಬಂದ ಜನರ ಬಗ್ಗೆ ಪಾಸಿಟಿವ್ ಮಾತಾಡುವ ಜನ, ಸಮಾಜದಲ್ಲಿ ಅತೀ ವಿರಳ. ಆ […]

ಆಸೆಯೆಂಬ ಭ್ರಾಂತಿ

-ಮೈಕೇಲ್ ಪಿಲ್ಸ್ ಬರಿ

ಆಸೆಯೆಂಬ ಭ್ರಾಂತಿ
-ಮೈಕೇಲ್ ಪಿಲ್ಸ್ ಬರಿ

ಮೈಕೇಲ್ ಪಿಲ್ಸ್ ಬರಿಯವರು ಅಮೇರಿಕಾದ ಚೀನಾ ತಜ್ಞರಲ್ಲಿ ಉನ್ನತ ಸ್ಥಾನ ಗಳಿಸಿದವರು. 40 ಕ್ಕೂ ಅಧಿಕ ವರ್ಷಗಳನ್ನು ಅಮೇರಿಕಾದ ಸರ್ಕಾರದ ವಿವಿಧ ಹುದ್ದೆಗಳನ್ನುನಿರ್ವಹಿಸಿದ ಪಿಲ್ಸ್ ಬರಿಯವರು 2014 ರಿಂದ ವಾಶಿಂಗ್ ಟನ್ ನಲ್ಲಿರುವ ಹಡ್ಸನ್ ಇನ್ಸ್ಟಿಸ್ಟ್ಯೂಟ್ ನಲ್ಲಿ ಚೀನಾ ಪೀಠದ ಡೈರೆಕ್ಟರ್ ಆಗಿದ್ದಾರೆ. ಚೀನಾ ಬಗ್ಗೆ ಮೂರು ಪುಸ್ತಕ ಬರೆದಿದ್ದಾರೆ. ಅವರ ಇತ್ತೀಚಿನ ಪುಸ್ತಕ The Hundred Year Marathon ವಾಷಿಂಗ್ ಟನ್ ಪತ್ರಿಕೆಯ ’ಟಾಪ್ ಸೆಲ್ಲರ್’ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿತ್ತು. ಈ ಕೃತಿಯ ಪ್ರವೇಶಿಕೆಯ […]

ಕಿ.ರಂ.ನಾಗರಾಜ್ ಬಾಯಿಂದ ಬೇಂದ್ರೆ ಕಾವ್ಯವನ್ನು ಬಿಡುಗಡೆ ಮಾಡಬೇಕಿದೆ

-ಎನ್.ಬೋರಲಿಂಗಯ್ಯ

ಕಿ.ರಂ.ನಾಗರಾಜ್ ಬಾಯಿಂದ  ಬೇಂದ್ರೆ ಕಾವ್ಯವನ್ನು ಬಿಡುಗಡೆ ಮಾಡಬೇಕಿದೆ
-ಎನ್.ಬೋರಲಿಂಗಯ್ಯ

ಕಿ.ರಂ.ನಾಗರಾಜ್ ಅವರ ಕವನ ವಿಗ್ರಹ ಭಂಜನೆಯ ಪರಿಣಾಮವಾಗಿ ಬೇಂದ್ರೆ ತಮ್ಮ ಕವನಗಳಲ್ಲಿ ಕಟ್ಟಿಕೊಡುವ ಯಾವ ಸುಂದರ ನೈಜ ಚಿತ್ರವೂ ಪಡಿಮೂಡುವುದಿಲ್ಲ.   ‘ಮತ್ತೆ ಮತ್ತೆ ಬೇಂದ್ರೆ’ ಕಿ.ರಂ. ನಾಗರಾಜ್ ಅವರ ಒಂದು ಲೇಖನ ಮತ್ತು ನಾಲ್ಕು ಉಪನ್ಯಾಸಗಳು ಸಂಗ್ರಹಗೊಂಡಿರುವ ಒಂದು ಕಿರುಹೊತ್ತಿಗೆ. ಕೆ.ಅಕ್ಷತಾ ಕೃತಿಯ ಸಂಪಾದಕಿ. ಸಂಪಾದನೆ ಮತ್ತು ತಪ್ಪಿಲ್ಲದ ಮುದ್ರಣ ಚೆನ್ನಾಗಿದೆ. ಓ.ಎಲ್.ನಾಗಭೂಷಣಸ್ವಾಮಿ ಮುನ್ನುಡಿದಿದ್ದಾರೆ. ಕನ್ನಡದ ಬಹಳ ಮುಖ್ಯ ಕವಿಯಾದ ಬೇಂದ್ರೆಯವರ ನಲವತ್ತಕ್ಕಿಂತ ಹೆಚ್ಚು ಕವನಗಳು ಚರ್ಚೆಗೆ ಒಳಗಾಗಿವೆ. ಬೇಂದ್ರೆಯವರನ್ನು ಕುರಿತ ಕಿ.ರಂ. ಅವರ ಕಳಕಳಿ […]

ಅಡಿಗ ಮತ್ತು ಅನಂತಮೂರ್ತಿ ಹಬ್ಬಿಸಿದ ಸಾಂಸ್ಕೃತಿಕ ಮಂಪರು!

- ವಸಂತ ಬನ್ನಾಡಿ

ಅಡಿಗ ಮತ್ತು ಅನಂತಮೂರ್ತಿ ಹಬ್ಬಿಸಿದ ಸಾಂಸ್ಕೃತಿಕ ಮಂಪರು!
- ವಸಂತ ಬನ್ನಾಡಿ

ಸನಾತನಿಯಾದರೂ ಎಂ.ಗೋಪಾಲಕೃಷ್ಣ ಅಡಿಗರನ್ನು ನವ್ಯದ ನೇತಾರ ಎಂದು ಪ್ರತಿಷ್ಠಾಪಿಸುವುದರಲ್ಲಿ ವಿಮರ್ಶೆ ಹೆಸರಿನ ಒಂದು ದೊಡ್ಡ ಕಾರ್ಯಾಚರಣೆಯೇ ನಡೆಯಿತು. ಉದ್ದಕ್ಕೂ ಅಡಿಗರ ಜೊತೆ ನಿಂತು ಅವರ ಪೌರೋಹಿತ್ಯ ವಹಿಸಿದವರು ಅವರ ಪರಮ ಮಿತ್ರ ಯು.ಆರ್.ಅನಂತಮೂರ್ತಿ. ಇತ್ತೀಚೆಗೆ, ಅಂದರೆ ಕಳೆದ ಎರಡು ವರ್ಷಗಳ ಕಾಲ, ಕವಿ ಎಂ.ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದಿ ಆಚರಣೆ ನಡೆಯಿತು. ಈ ಹಿನ್ನೆಲೆಯಲ್ಲಿ ಅನೇಕರು ಅವರ ಕಾವ್ಯದ ಬಗ್ಗೆ ಮಾತನಾಡಿದರು. ಹೀಗೆ ಕನ್ನಡ ಕವಿಯೊಬ್ಬರಿಗೆ ನೂರು ವರ್ಷ ತುಂಬಿದ್ದನ್ನು ನೆನಸಿಕೊಂಡದ್ದು ಸಹಜ ವಿದ್ಯಮಾನವೇ ಆಗಿತ್ತು. ಹಾಗೆ ಅಡಿಗರ […]

ಹೊಸಪುಸ್ತಕ

ಬಹುಜನ ಭಾರತ ಡಾ.ವ್ಹಿ.ಮುನಿವೆಂಕಟಪ್ಪ ಪುಟ: 119, ಬೆಲೆ: ರೂ.110 ಪ್ರಥಮ ಮುದ್ರಣ: 2019 ವಿದ್ಯಾವಿಶಾರದ ಪ್ರಕಾಶನ, ಗದಗ ಇದು ವೈಚಾರಿಕ ಚಿಂತನೆಯ ಸಂಶೋಧನಾತ್ಮಕ ಬರಹಗಳ ಸಂಕಲನ. ಬುದ್ಧ, ಬಸವ, ಅಂಬೇಡ್ಕರ್, ಬಹುಜನ ಸಮಾಜ, ದಲಿತ ಚಳವಳಿ ಸಾಹಿತ್ಯ ಚಿಂತನೆಯ ವಸ್ತುಸ್ಥಿತಿಗಳ ಬಗ್ಗೆ ಇಲ್ಲಿ ವಿವರಿಸಿದ್ದಾರೆ. ಇಪ್ಪತ್ತೊಂದು ಲೇಖನಗಳಿರುವ ಈ ಕೃತಿ, ಇಲ್ಲಿನ ನಿಷ್ಟುರ ಚಿಂತನೆಗಳಿಗೆ, ಲೇಖಕರ ತೀಕ್ಷ್ಣ ಮಾತುಗಳಿಗಾಗಿ ಮುಖ್ಯವೆನಿಸುತ್ತದೆ. ದಸಂಸ ವಿಚಾರದಲ್ಲಿ ದೇವನೂರ ಮಹಾದೇವ ಹಾಗೂ ಸಿದ್ಧಲಿಂಗಯ್ಯ ಅವರನ್ನು ಇನ್ನೊಂದು ಆಯಾಮದಲ್ಲಿ ಓದುಗರ ಮುಂದಿಟ್ಟಿದ್ದಾರೆ. ಕೇಂದ್ರ […]

ನವವೀರ ಕವಿ ರಚಿಸಿದ ಕೋಡಗದ ಮಾರಯ್ಯನ ಚರಿತ್ರೆ

-ಡಾ.ಜಾಜಿ ದೇವೇಂದ್ರಪ್ಪ

ನವವೀರ ಕವಿ ರಚಿಸಿದ ಕೋಡಗದ ಮಾರಯ್ಯನ ಚರಿತ್ರೆ
-ಡಾ.ಜಾಜಿ ದೇವೇಂದ್ರಪ್ಪ

ಈ ಕಾವ್ಯ ಮೇಲ್ನೋಟಕ್ಕೆ ಸಾಂಪ್ರದಾಯಿಕ ಪುರಾಣದಂತಿದೆ. ಪುರಾಣಾಂಶ ಆ ಕಾಲದ ಕಾವ್ಯ ಶೈಲಿ. ಅದನ್ನು ಬಿಟ್ಟು ಒಳಾರ್ಥದಲ್ಲಿ ನಿಜಚರಿತ್ರೆಯನ್ನಷ್ಟೇ ಓದಿಕೊಂಡರೆ ಶರಣಯುಗದ ಆದರ್ಶಗಳ ಅನಾವರಣವಾಗುತ್ತದೆ. ಭುವನದ ಭಾಗ್ಯವೆಂಬಂತೆ ಕನ್ನಡ ನಾಡಿನಲ್ಲಿ ರೂಪುಪಡೆದ ವಚನ ಸಾಹಿತ್ಯ ಚಳವಳಿಯು ತನ್ನ ಪ್ರಗತಿಪರ ಧೋರಣೆಯಿಂದ ಹಲವು ವೃತ್ತಿಪರ ಕಾಯಕ ಜೀವಿಗಳ ಮಹಾ ಸಂಗಮವಾಗಿತ್ತೆಂಬುದು ವಿಶೇಷ. ಸಾಮಾಜಿಕ ಮತ್ತು ಸಾಹಿತ್ಯಿಕವಾಗಿ ನವೋದಯದ ಕಾಲವಾಗಿತ್ತು. ಧರ್ಮವೂ ಕೂಡ ಈ ಕಾಲಮಾನದಲ್ಲಿ ಬದುಕಿನ ಮಾನವೀಕರಣದ ಭಾಗವಾಗಿತ್ತು. ಈ ಎಲ್ಲ ವಿದ್ಯಮಾನಗಳ ಕೇಂದ್ರ ಕಲ್ಯಾಣ, ಕೇಂದ್ರದ ಶಕ್ತಿ […]

ಚಟ ಚಕ್ರವರ್ತಿಗಳ ದಿಟ ಚಿತ್ರಗಳು!

-ಗುರುಪ್ರಸಾದ ಕುರ್ತಕೋಟಿ

ಚಟ ಚಕ್ರವರ್ತಿಗಳ ದಿಟ ಚಿತ್ರಗಳು!
-ಗುರುಪ್ರಸಾದ ಕುರ್ತಕೋಟಿ

ಚಟ ಚಕ್ರವರ್ತಿಗಳು ತಮ್ಮದೇ ಆದ ಕಾರಣಗಳನ್ನು ಕೊಟ್ಟುಕೊಂಡು ತಮ್ಮ ಚಟಾದಿಗಳನ್ನು ತಮ್ಮ ಅಂತ್ಯದವರೆಗೆ ಕಾದಿರಿಸಿಕೊಳ್ಳುತ್ತಾರೆ. ಕೆಲವರದು ಸುಖಾಂತವಾದರೆ, ಇನ್ನೂ ಎಷ್ಟೋ ದುಃಖಾಂತಗಳು! ಯಾರಾದರೂ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡಾಗ ಉಳಿದವರಲ್ಲಿ (ಬದುಕುಳಿದವರು?) ಸಾಮಾನ್ಯವಾಗಿ ಏಳುವ ಪ್ರಶ್ನೆ ಎಂದರೆ “ಅವನಿಗೆ ಏನಾದರೂ ಚಟ ಇತ್ತೋ ಏನೋ?” ಅಂತ. ಇಷ್ಟು ಸಣ್ಣ ವಯಸ್ಸಿನಲ್ಲೇ ಸಾವಿಗೆ ದೂಡಿರಬಹುದಾದ ಒಂದು ದೌರ್ಬಲ್ಯ ಅವನಲ್ಲಿ ಏನಿತ್ತು? ಅನ್ನುವ ಕುತೂಹಲ ಮನುಷ್ಯನ ಸಹಜ ಗುಣ. ಆ ಒಂದು ದೌರ್ಬಲ್ಯವನ್ನು ಚಟ ಅಂತ ಕರೆಯುವುದಾದರೆ, ಹಾಗೆ ಕೇಳುವುದೂ ಕೂಡ […]

ಮಲೆನಾಡಿನ ಆಲೇಮನೆ ಗಮ್ಮತ್ತೇ ಬೇರೆ!

-ಅಮರಜಾ ಹೆಗಡೆ

ಮಲೆನಾಡಿನ ಆಲೇಮನೆ ಗಮ್ಮತ್ತೇ ಬೇರೆ!
-ಅಮರಜಾ ಹೆಗಡೆ

ಮೈಸೂರು-ಮಂಡ್ಯ ಕಡೆಯ ಹಳ್ಳಿಗಳಲ್ಲಿ ವರ್ಷಪೂರ್ತಿ ನೂರಾರು ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಟನ್ನುಗಟ್ಟಲೇ ಕಬ್ಬಿನ ರಾಶಿಗಳ ಆಲೇಮನೆಗಳು ನಡೆಯುತ್ತಿದ್ದರೂ ಅವು ತುಂಬ ಯಾಂತ್ರಿಕ ಹಾಗೂ ವ್ಯಾವಹಾರಿಕ. ಆದರೆ ಮಲೆನಾಡಿನಲ್ಲಿ ಹಾಗಲ್ಲ… ಶಿರಸಿಯ ಸಮೀಪದ ಹಳ್ಳಿಗೆ ನೆಂಟರ ಮನೆಯ ಸಮಾರಂಭಕ್ಕೆಂದು ಹೋಗಿದ್ದಾಗ ಹತ್ತಿರದ ಇನ್ನೊಂದು ಹಳ್ಳಿಯಲ್ಲಿ ಆಲೇಮನೆಯೊಂದು ನಡೆಯುತ್ತಿರುವ ಸುದ್ದಿ ತಿಳಿಯಿತು. ಅಡಿಕೆಸೋಗೆಯ ಚಪ್ಪರದ ತಣ್ಣನೆಯ ನೆರಳಿನಲ್ಲಿ, ನೆಂಟರಿಷ್ಟರೊಡನೆ ಕಥೆ ಹೊಡೆಯುತ್ತಾ ಕುಳಿತು ಚುಡುವಾ-ಅವಲಕ್ಕಿ ಮೆಲ್ಲುತ್ತ ಶುಂಠಿ-ಲಿಂಬು ಸೇರಿಸಿ ಅರೆದ ತಾಜಾ ಕಬ್ಬಿನ ಹಾಲನ್ನು ಚೊಂಬುಗಟ್ಟಲೆ ಹೊಟ್ಟೆಗಿಳಿಸುತ್ತಾ, ದೊನ್ನೆಯಾಕಾರದಲ್ಲಿ ಮಡಚಿದ […]

ಗಾನಕೋಗಿಲೆ, ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು

-ಗುಡಿಹಳ್ಳಿ ನಾಗರಾಜ

ಗಾನಕೋಗಿಲೆ, ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು
-ಗುಡಿಹಳ್ಳಿ ನಾಗರಾಜ

ಇತ್ತೀಚೆಗೆ ಅಗಲಿದ ಸುಭದ್ರಮ್ಮ ಮನ್ಸೂರು ಬದುಕಿನುದ್ದಕ್ಕೂ ಲವಲವಿಕೆಯಿಂದ ನಟಿಸುತ್ತಿದ್ದರು, ಹಾಡುತ್ತಿದ್ದರು. ಅವರ ಆ ಉತ್ಸಾಹ ಕೊನೆಯವರೆಗೂ ಕುಂದಲಿಲ್ಲ ಎಂಬುದೇ ಒಂದು ಸಂತಸದ ಸೋಜಿಗ!   ಸಂಗೀತದಲ್ಲಿ ಸಾಧನೆಯ ಸಿದ್ಧಿ ಕಂಡವರಿರಬಹುದು; ಅಭಿನಯದಲ್ಲಿ ಪರಿಪೂರ್ಣತೆ ಸಾಧಿಸಿದವರಿರಬಹುದು. ಸಂಗೀತ ಹಾಗೂ ಅಭಿನಯ ಎರಡರಲ್ಲೂ ಸಾಧನೆಯ ಶಿಖರವೇರಿದ ಸುಭದ್ರಮ್ಮ ಮನ್ಸೂರು ಕನ್ನಡ ರಂಗಭೂಮಿಯ ಅಪ್ರತಿಮ ಕಲಾವಿದೆ. ಅಸ್ಖಲಿತ ಮಾತುಗಾರಿಕೆ, ಅಮೋಘ ಅಭಿನಯ, ಸುಮಧುರ ಕಂಠದ ಹಾಡುಗಾರಿಕೆಗೆ ಮತ್ತೊಂದು ಹೆಸರೇ ಸುಭದ್ರಮ್ಮ ಮನ್ಸೂರು. ಅಂತೆಯೇ ಅವರು ಗಾನಕೋಗಿಲೆಯೂ ಹೌದು, ಅಭಿನೇತ್ರಿಯೂ ಹೌದು. ಏಳು […]

ಕವಿತೆ

ಎಸ್. ದಿವಾಕರ್

ಕವಿತೆ
ಎಸ್. ದಿವಾಕರ್

ವಿಧಾನಸಭೆಯಲ್ಲೊಂದು ಹಕ್ಕಿ   ನಿಧಾನ ಎಚ್ಚರಗೊಂಡ ವಿಧಾನಸಭೆಯಲ್ಲಿ ದೀಪಗಳು ಧಗ್ಗೆಂದು ಹೊತ್ತಿ ಫ್ಯಾನುಗಳು ಗರಗರ ಸುತ್ತಿ ಖದ್ದರುಗಳೆಲ್ಲ ಸುಖಾಸನಗಳ ಹತ್ತಿ  ಶೋಭಾಯಮಾನವಾಗಿರುವಾಗ    ಕಣ್ಣುಕುಕ್ಕುವ ಷಾಂಡ್ಲರುಗಳ ಬೆಳಕಿಗೆ ಬೆಳುದಿಂಗಳು ಬಿದ್ದ ಸುನೇರಿಯ ಹಾಗೆ, ರಾಳದ ಬೆಳಕು ಮೀಯಿಸಿದ ಬೇಗಡೆಯ ಹಾಗೆ, ಮಿಡಿನಾಗರ ಮಿಡಿದ ಹಾಗೆ ಪ್ರತ್ಯಕ್ಷವಾಯಿತೊಂದು ಹಕ್ಕಿ ಎಲ್ಲರ ಕಣ್ಣು ಕುಕ್ಕುತ್ತ   ಉರುಳುಗಾಲಿಯ ಹಾಗೆ ಹೊರಳುತ್ತಿರುವ ಕಣ್ಣು ಚೂರಿಮೊನೆಯಷ್ಟು ಚೂಪಾದ ಕೊಕ್ಕು; ಗರಿಗಳ ಗಲಗಲವೆನ್ನಿಸುವ ರೆಕ್ಕೆ ತೆಳು ಗುಲಾಬಿಯ ಪೊರೆಯಿರುವ ಕೋಲು ಕಾಲು, ಬೂದುಬಣ್ಣದುಗುರುಗಳ ಪಾದ […]