ಅಪಾಯದ ಏರುಗತಿ!

ಅಪಾಯದ ಏರುಗತಿ!

ಇತ್ತೀಚೆಗೆ ಕರ್ನಾಟಕದ ರಾಜಕಾರಣದಲ್ಲಿ ನಡೆದ ಬೆಳವಣಿಗೆಗಳು ಹಲವು ಸ್ವಾರಸ್ಯಕರ ‘ಪದಾರ್ಥ’ ಪ್ರಶ್ನೆಗಳನ್ನು ಮುಂದಿಟ್ಟಿವೆ. ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದ ಕೆಲವು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ‘ಅತೃಪ್ತರು’ ಎಂದು ಗುರುತಿಸಲಾಗಿದೆ. ಈ ಪದವನ್ನು ಎಲ್ಲಾ ಮಾಧ್ಯಮಗಳು, ರಾಜಕಾರಣಿಗಳು, ಜನಸಾಮಾನಾನ್ಯರು ಏಕಕಾಲಕ್ಕೆ ಸಾರ್ವತ್ರಿಕವಾಗಿ ಬಳಸತೊಡಗಿದ್ದು ವಿಶೇಷವೇ ಸರಿ. ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದು ಶಾಸಕರ ಕರ್ತವ್ಯ; ಇದಕ್ಕೆ ಸಮ್ಮಿಶ್ರ ಸರ್ಕಾರ ಸ್ಪಂದಿಸದಿರುವುದೇ ತಮ್ಮ ಅತೃಪ್ತಿಗೆ ಕಾರಣವೆಂದು ಈ ಶಾಸಕರು ಬಹಿರಂಗವಾಗಿ ಪ್ರತಿಪಾದಿಸುತ್ತಾರೆ. ಅವರ ಅಂತರಂಗದ ಅತೃಪ್ತಿಯ […]

ಗ್ರಾಮೀಣ ಗ್ರಂಥಾಲಯ ಓದುಗರಿಗೆ ನೀವೂ ಕೊಡುಗೆ ನೀಡಿ

ತಾಲೂಕಿಗೊಬ್ಬ ಹಿತೈಷಿ ನೆರವಿನಿಂದ ರಾಜ್ಯದ ಎಲ್ಲಾ 5700 ಗ್ರಾಮೀಣ ಗ್ರಂಥಾಲಯ ತಲುಪುವುದು ‘ಸಮಾಜಮುಖಿ’ಯ ಮಹಾದಾಸೆ. ಗ್ರಾಮಕ್ಕೆ ತಲುಪುವ ಪತ್ರಿಕೆಯ ಒಂದು ಪ್ರತಿ ನೂರಾರು ಓದುಗರ ದಾಹ ತಣಿಸುತ್ತದೆ ಎಂಬ ಕಾಳಜಿ, ಕಳಕಳಿ ನಮ್ಮದು. ಇಂತಹ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳಲು ನಿಮಗೂ ಅವಕಾಶವಿದೆ. ನಿಮ್ಮ ಆಯ್ಕೆಯ ಒಂದು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ (ಸುಮಾರು 20) ಗ್ರಂಥಾಲಯಗಳಿಗೆ ಪತ್ರಿಕೆಯನ್ನು ಪ್ರಾಯೋಜಿಸಬಹುದು. ಹತ್ತು ಸಾವಿರ ರೂಪಾಯಿ ನೀಡಿದರೆ ನಿಮ್ಮ ಹೆಸರಿನಲ್ಲಿ ಆಯಾ ಗ್ರಂಥಾಲಯಗಳಿಗೆ ಒಂದು ವರ್ಷ ಸಮಾಜಮುಖಿ ಮಾಸಪತ್ರಿಕೆ ಕಳಿಸುತ್ತೇವೆ. […]

ದಿಕ್ಕು ತಪ್ಪಿದ್ದು ನಾಯಕರು, ಚಳವಳಿಯಲ್ಲ!

ಹನುಮೇಶ್ ಗುಂಡೂರು

ಇತ್ತೀಚೆಗೆ ಎಲ್ಲಾ ದಲಿತ ಸಂಘಟನೆಗಳು ಒಂದೇ ಜಾತಿಯ ಕೈಗೆ ಸಿಕ್ಕಿವೆ. ದಲಿತ ಬ್ರಾಂಡ್ ಹೆಸರಿನಲ್ಲಿ ಒಂದು ಸಮುದಾಯ ಎಲ್ಲಾ ದಲಿತ ಸಂಘಟನೆಗಳ ಅಧ್ಯಕ್ಷಗಿರಿ ಕೈಗೆ ತೆಗೆದುಕೊಂಡಿದ್ದು ದಲಿತರು ಎಂದರೆ ತಾವು ಮಾತ್ರ ಎಂದು ಪದೇಪದೇ ಹೇಳುವುದು ಅಲ್ಲಲ್ಲಿ ಕಂಡುಬರುತ್ತದೆ. ದಲಿತರಿಗೆ ಶಾಸನಾತ್ಮಕ ರಕ್ಷಣೆ ದೊರತಿದೆ. ಆದರೆ ಆಚರಣೆಯಲ್ಲಿ ಪಾಲಿಸುತ್ತಿಲ್ಲ ಎನ್ನುವುದಕ್ಕೆ ಅನೇಕ ಘಟನೆಗಳು ಕಣ್ಣು ಎದುರುಇವೆ. ಜಾತಿಯತೆಯನ್ನು ನಂಬಿಕೊಂಡು ಬಂದ ನಾಗರಿಕ ಸಮಾಜ ತನ್ನ ಒಡಲೊಳಗೆ ಅಪಾರ ಅಸಮಾನತೆ ತುಂಬಿಕೊಂಡಿದೆ. ತಲತಲಾಂತರ ಅನಿಷ್ಟ ಪದ್ಧತಿಗಳ ಮೂಲಕ ಶೋಷಣೆ […]

ದಿಕ್ಕು ತಪ್ಪಿದ್ದರ ಹಿಂದಿನ ಪಕ್ಕಾ ಕಾರಣಗಳು

ಹೂಡಿ ವೆಂಕಟೇಶ

ಬಾಬಾಸಾಹೇಬರು ಅಸ್ತಂಗತರಾದ ನಂತರ ಪರಿವರ್ತನಾ ಚಳವಳಿಯ ರಥ ಹೇಗೆ ರಾಷ್ಟ್ರಮಟ್ಟದಲ್ಲಿ ಮುಗ್ಗರಿಸಿತೊ ಹಾಗೆ ಬಿ.ಕೃಷ್ಣಪ್ಪನವರ ಅಗಲಿಕೆಯ ನಂತರ ರಾಜ್ಯದಲ್ಲಿ ದಲಿತ ಚಳವಳಿಯೂ ದಿಕ್ಕೆಟ್ಟುಹೋಯಿತು. ಹಳ್ಳಿಗಾಡಿನಲ್ಲಿ ದಲಿತರ ಮೇಲೆ ನಡೆಯುತ್ತಿದ್ದ ದಮನ, ದಬ್ಬಾಳಿಕೆ, ದೌರ್ಜನ್ಯಗಳ ವಿರುದ್ಧದ ದ್ವನಿಯಾಗಿ 70ರ ದಶಕದಲ್ಲಿ ತಲೆಯೆತ್ತಿದ ಪ್ರೊ.ಬಿ.ಕೃಷ್ಣಪ್ಪರ ನೇತೃತ್ವದ ದಲಿತ ಚಳವಳಿ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್‍ನಿಂದ ಪ್ರಭಾವಕ್ಕೊಳಗಾಗಿ ಪಸರಿಸತೊಡಗಿತು. ಕ್ರಮೇಣ ಭೂ ಆಕ್ರಮಣಾ ಚಳವಳಿಗಳಿಗೆ ಹೆಚ್ಚು ಒತ್ತು ನೀಡುತ್ತ ಹೊಸ ಮನ್ವಂತರವೊಂದು ಘಟಿಸಿತು. 1970-83ರ ತನಕ ಅತ್ಯಂತ ಪರಿಣಾಮಕಾರಿಯಾಗಿ ಬೆಳೆಯತೊಡಗಿದ ಚಳವಳಿಯಲ್ಲಿ ಮೈಸೂರು […]

ಸಮಕಾಲೀನ ಕರ್ನಾಟಕ ದಲಿತ ಚಳವಳಿ

ಡಾ.ಬಿ.ಪಿ.ಮಹೇಶ ಚಂದ್ರ ಗುರು

ಅನೇಕ ದಲಿತ ಮುಖಂಡರು ತಮ್ಮ ಸ್ವಾರ್ಥ ಸಾಧನೆಗಾಗಿ ಪ್ರತ್ಯೇಕ ದಲಿತ ಸಂಘಟನೆಗಳನ್ನು ಕಟ್ಟಿಕೊಂಡು ಲೆಟರ್ ಹೆಡ್ ನಾಯಕರು ಮತ್ತು ರೋಲ್‍ಕಾಲ್ ನಾಯಕರುಗಳಾಗಿ ಪರಿವರ್ತನೆಗೊಂಡು ಅಂಬೇಡ್ಕರ್ ಮತ್ತು ದಲಿತ ಸಮುದಾಯಕ್ಕೆ ಘನಘೋರ ಅನ್ಯಾಯವೆಸಗಿರುವುದನ್ನು ಇತಿಹಾಸ ಕ್ಷಮಿಸುವುದಿಲ್ಲ. ಮೈಸೂರಿನಲ್ಲಿ 1973ರಲ್ಲಿ ಜರುಗಿದ ‘ಹೊಸ ಅಲೆ’ ಎಂಬ ವಿಚಾರ ಸಂಕಿರಣದಲ್ಲಿ ದಿವಂಗತ ಬಿ.ಬಸವಲಿಂಗಪ್ಪನವರು ಕನ್ನಡ ಸಾಹಿತ್ಯದಲ್ಲಿ ಬಹುಪಾಲು ಬೂಸಾ ಸಾಹಿತ್ಯವೇ ಇದೆಯೆಂಬ ಕುವೆಂಪುರವರ ಮಾತುಗಳನ್ನು ಸಂದರ್ಭೋಚಿತವಾಗಿ ಅನುಮೋದಿಸಿದರು. ಅಂದು ತಮ್ಮದಲ್ಲದ ತಪ್ಪಿಗೆ ಬಸವಲಿಂಗಪ್ಪನವರು ಜಾತಿವಾದಿಗಳ ಕುತಂತ್ರದಿಂದ ಮಂತ್ರಿಗಿರಿಗೆ ರಾಜೀನಾಮೆ ನೀಡಿ ಬಿ.ಕೃಷ್ಣಪ್ಪನವರ […]

ಭದ್ರಾವತಿಯಲ್ಲಿ ದಸಂಸ ಹುಟ್ಟಿದ ಸಂದರ್ಭ

ಡಾ.ಆನಂದಕುಮಾರ್ ಮೈಸೂರು

ಬಿ.ಕೆ. ಹಾಗೂ ಬೆರಳೆಣೆಕೆಯಷ್ಟು ಚಿಂತಕರು-ಹೋರಾಟಗಾರರು ಸಂಘಟನೆ, ಸಿದ್ಧಾಂತ, ಪ್ರಣಾಳಿಕೆ, ನೋಂದಣಿ ಮುಂತಾದ ವಿಷಯಗಳ ಮೇಲೆ ನಡೆಸಿದ ಸಂವಾದ ಒಂದರ್ಥದಲ್ಲಿ ಐತಿಹಾಸಿಕ ದಲಿತ ಚಳವಳಿಗೆ ನಾಂದಿಯಾಯಿತು. ಸ್ವತಂತ್ರ ಭಾರತದ ಮೂರು ದಶಕದ (ಮೊದಲ ತಲೆಮಾರಿನ) ರಾಜಕಾರಣ ಸ್ವಸಾಮಥ್ರ್ಯದ್ದಾಗಿದೆ. ಯಥಾಸ್ಥಿತಿ ವಿರುದ್ಧದ ಇವರ ತೀವ್ರ ಹೋರಾಟ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದು ಶೋಷಣೆ ತಡೆಯುವ ಮಾರ್ಗ ಹುಡುಕಾಟಕ್ಕೆ ಪ್ರೇರಣೆಯಾಯಿತು. ವಿದ್ಯಾವಂತ ದಲಿತರಿಗೆ ಪ್ರಜ್ಞೆ ಮೂಡಿಸಲು 1976ರಲ್ಲಿ ಭದ್ರಾವತಿಯಲ್ಲಿ ಪ್ರಥಮ ದಲಿತ ಲೇಖಕರ ಸಮ್ಮೇಳನ ಆಯೋಜಿಸಲಾಗಿತ್ತು. ಇಂತಹ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ […]

ಸಮಾಜಮುಖಿ ಪ್ರಕಾಶನದ ‘ಪ್ರಕಓ’ ಪುಸ್ತಕಮಾಲೆ

ಕನ್ನಡ ಪರಿಸರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ಕನ್ನಡಿಗರಿಗೆ ಉಪಯುಕ್ತವಾಗುವ ‘ರೀಡರ್’ ಮಾದರಿಯ ಪುಸ್ತಕಗಳ ಕೊರತೆಯಿದೆ. ಈ ಕೊರತೆಯನ್ನು ಪೂರೈಸಲು ಹಾಗೂ ‘ಪ್ರತಿಯೊಬ್ಬ ಕನ್ನಡಿಗನು ಓದಲೇಬೇಕಾದ’ (ಪ್ರಕಓ) ಪುಸ್ತಕಗಳನ್ನು ಹೊರತರಲು ಸಮಾಜಮುಖಿ ಪ್ರಕಾಶನ ಬಯಸಿದೆ. ರೀಡರ್ ಎಂದರೇನು..? ಯಾವುದಾದರೊಂದು ವಿಷಯದ ಬಗ್ಗೆ ಅಂದಿನವರೆಗೆ ಪ್ರಕಾಶಿತ ಪಠ್ಯಗಳ ಜ್ಞಾನಪ್ರಪಂಚವನ್ನು ಒಳಗೊಂಡು ಹಾಗೂ ಸಾಮಾನ್ಯವಾಗಿ ಅವಿವಾದಿತವಾದ ವಿಷಯ ವಸ್ತುಗಳೊಡನೆ ಸಮಗ್ರ ಚಿತ್ರಣ ನೀಡುವ ಹೊತ್ತಿಗೆಯನ್ನು ‘ರೀಡರ್’ ಎಂದು ವರ್ಗೀಕರಿಸಲಾಗಿದೆ. ಈ ರೀಡರ್‍ಗಳು ಸರಳ ಭಾಷಯಲ್ಲಿ ತನ್ನ ಆಯ್ಕೆಯ ವಿಷಯಗಳ […]

ಜನತಂತ್ರ ಶಿಕ್ಷಣದ ಅಗತ್ಯ

ರಾಜೀವ್ ಭಾರ್ಗವ

 ಜನತಂತ್ರ  ಶಿಕ್ಷಣದ ಅಗತ್ಯ <p><sub>  ರಾಜೀವ್ ಭಾರ್ಗವ </sub></p>

ಈಗಿನ ಪರಿಸ್ಥಿತಿಯು ಪ್ರಜಾಪ್ರಭುತ್ವದ ಬೆಳವಣಿಗೆಗೆ ಪೂರಕವಾಗಿಲ್ಲ. ಬದಲಾಗಿ ಮಾರಕವೇ ಆಗಿದೆ. ಇದನ್ನು ಬದಲಾಯಿಸಬೇಕೆಂದರೆ ಪ್ರಜಾಪ್ರಭುತ್ವ ಶಿಕ್ಷಣ ಜಾರಿಗೆ ಬರಬೇಕು. ಇದನ್ನು ನಮ್ಮ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕು. ಹೊಸ ಶಿಕ್ಷಣ ನೀತಿಯಲ್ಲಿ ಇದರ ಪ್ರಸ್ತಾಪವಿದೆಯೇ ಹೊರತು ಹೆಚ್ಚಿನ ಕ್ರಮ ಇಲ್ಲ ಕನ್ನಡಕ್ಕೆ: ವಸಂತ ನಾಡಿಗೇರ ಸೌಜನ್ಯ: ದಿ ಹಿಂದೂ ಜನರ ನಿರೀಕ್ಷೆಗಳನ್ನು ಪೂರೈಸಲು ನಮ್ಮ ಪ್ರಜಾಪ್ರಭುತ್ವವು ವಿಫಲವಾಗುತ್ತಿರುವುದಕ್ಕೆ ಸಾಕಷ್ಟು ಕಳವಳ ಉಂಟಾಗುತ್ತಿದೆ. ನಮಗೆ ಬೇಡವಾದ ಸಕಾರಗಳನ್ನು ಕಿತ್ತೆಸೆಯಲು ಚುನಾವಣೆಯು ಒಂದು ಅಸ್ತ್ರವಾಗಿದ್ದರೂ ಅದು ಬರಬರುತ್ತ ಕೇವಲ ‘ಕಾಗದದ ಕಲ್ಲಿನಂತೆ’ ಆಗಿಬಿಟ್ಟಿದೆ. […]

ಜಲಕ್ಷಾಮ: ಕೊಳವೆಬಾವಿ ಕಾರಣವೇ?

ರವಿ ಹಂಜ್

 ಜಲಕ್ಷಾಮ: ಕೊಳವೆಬಾವಿ ಕಾರಣವೇ? <p><sub>  ರವಿ ಹಂಜ್ </sub></p>

ಹರಿಯುವ ನೀರಿನ ಮೇಲಾಧಾರಿತವಾದ ಪರಿಸರ ಇಂಗಿ, ಕೆರೆಗಳು ಮಾಯವಾಗಿ, ನದಿಗಳು ಮಾಯವಾಗುತ್ತಿವೆ. ಈಗೇನಿದ್ದರೂ ನದಿಗಳು ಅತಿವೃಷ್ಟಿಯಲ್ಲಿ ನೀರನ್ನು ಹರಿಸುವ ಕಾಲುವೆಗಳಾಗಿ, ಮಳೆ ನಿಂತ ಬಳಿಕ ಒಣಗಿದ ಚರಂಡಿಗಳಾಗಿ ಮಾರ್ಪಾಟಾಗಿವೆ. ಇದಕ್ಕೆ ಕಾರಣಗಳೇನು? ಕಾರಣರಾರು? ಮೂವತ್ತೈದು ವರ್ಷಗಳ ಹಿಂದೆ ಬೇಸಿಗೆ ರಜೆಗೆ ಬಸ್ಸು ಹತ್ತಿ ದಾವಣಗೆರೆಯಿಂದ ಶಿವಮೊಗ್ಗ ಕಡೆ ಹೊರಟರೆ ದಾರಿಯಲ್ಲಿ ಸಿಗುವ ಕೆರೆಗಳಲ್ಲಿ ನೀರಿರುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿನ ಕಾಲುವೆಗಳಲ್ಲಿ ಮತ್ತು ಗುಂಡಿಗಳಲ್ಲಿ ನೀರು ಕಾಣುತ್ತಿತ್ತು. ಪ್ರಾಯಶಃ ಗದ್ದೆಗಳ ನೀರು ಬಸಿದು ಈ ಕಾಲುವೆಗಳಲ್ಲಿ ನೀರಿರುತ್ತಿತ್ತೇನೋ! ತುಂಗೆಯಲ್ಲಿ ನೀರು […]

ಕನ್ನಡಿಗರ ಕಣ್ಣು ತೆರೆಸಿದ ಮಹಿಳೆ

ಬಸವರಾಜ ಭೂಸಾರೆ

 ಕನ್ನಡಿಗರ ಕಣ್ಣು ತೆರೆಸಿದ ಮಹಿಳೆ <p><sub>  ಬಸವರಾಜ ಭೂಸಾರೆ </sub></p>

ಅವಕಾಶ ವಂಚಿತ ಮಕ್ಕಳಿಗೆ ಅಂಚೆ ತೆರಪಿನ ಶಿಕ್ಷಣ ಕೊಡುವ ಕೇಂದ್ರ ಸರ್ಕಾರದ ಸಂಸ್ಥೆಯೊಂದು ಬೆಂಗಳೂರಿನಲ್ಲಿದೆ.ಇಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳನ್ನು ಕಳೆದ ಒಂಬತ್ತು ವರ್ಷಗಳಿಂದ ಕಡೆಗಣಿಸುತ್ತಿರುವ ಸಂಗತಿ ರಾಜ್ಯ ಸರಕಾರಕ್ಕಾಗಲಿ, ಕನ್ನಡಪರ ಸಂಘಟನೆಗಳಿಗಾಗಲಿ ಗೊತ್ತೇ ಇರಲಿಲ್ಲ! ಕನ್ನಡವೂ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಬರೆಯಲು ಅನುಮತಿ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಪ್ರಕಟಿಸಿದರು. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಕನ್ನಡಿಗರಿಗೆ, ಕನ್ನಡಪರ ಸಂಘಟನೆಗಳಿಗೆ ಖುಷಿಯಾಯಿತು. ಯಾಕೆಂದರೆ ಕನ್ನಡ ಮಾಧ್ಯಮದಲ್ಲ್ಲಿ […]

ಭೂತದ ಹೆಗಲೇರಿದ ಸರಕಾರ!

ಸಮೀವುಲ್ಲಾ ಬೆಲಗೂರು

 ಭೂತದ ಹೆಗಲೇರಿದ ಸರಕಾರ! <p><sub>  ಸಮೀವುಲ್ಲಾ ಬೆಲಗೂರು </sub></p>

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಕಾಲಕ್ಕೆ ಅವರ ವಿರುದ್ಧವೇ ಶಾಸಕರನ್ನು ಎತ್ತಿಕಟ್ಟಿ ಹೈದರಾಬಾದಿನ ಪಂಚತಾರಾ ಹೋಟೆಲಿನಲ್ಲಿ ಒತ್ತೆ ಇಟ್ಟುಕೊಂಡಿದ್ದು ಮೈನಿಂಗ್ ಮಾಫಿಯಾ. ಇಂದು ಅದೇ ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಆಗುವ ಹೊತ್ತಿಗೆ ಹೆಡೆಯೆತ್ತಿ ನಿಂತಿರುವುದು ಲ್ಯಾಂಡ್ ಮಾಫಿಯಾ. ಟೇಪ್ ಬಂತು ಟೇಪ್…! ಕಾದು ಕುಳಿತ ಪತ್ರಕರ್ತರಿಗೆ ಕೌತುಕ. ಅದು ತಿರುಗೇಟು ನೀಡುವ ಟೇಪ್. ಏಟು ಎದಿರೇಟಿನ ಟೇಪು. ಸರ್ಕಾರದ ಜುಟ್ಟು ಹಿಡಿದು ದರದರ ಎಳೆದಾಡುವಷ್ಟು ಶಕ್ತಿ ಇರುವ ಟೇಪ್. ‘ಈ ಕಡೆ ಬನ್ನಿ. ನಿಮ್ಮ […]

ಕೇಂದ್ರ ಸರ್ಕಾರದ ಬಜೆಟ್ ಪಿ.ಚಿದಂಬರಂ ವಿಶ್ಲೇಷಣೆ

ಪಿ.ಚಿದಂಬರಂ

ಹಿರಿಯ ರಾಜಕಾರಣಿ, ಮಾಜಿ ವಿತ್ತಮಂತ್ರಿ ಪಿ.ಚಿದಂಬರಂ ಅವರು ಪ್ರಸ್ತುತ ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2019-2020ನೆಯ ಸಾಲಿನ ಬಜೆಟ್ಟಿನ ಇತಿಮಿತಿಗಳನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್‍ನಲ್ಲಿ ಪ್ರಕಟಿಸಿರುವ ತಮ್ಮ ಎರಡು ಲೇಖನಗಳಲ್ಲಿ ಚರ್ಚೆ ಮಾಡಿದ್ದಾರೆ. ಅನೇಕ ಬಜೆಟ್ಟುಗಳನ್ನು ಮಂಡಿಸಿ ಹಣಕಾಸು ಸಚಿವಾಲಯವನ್ನು ಅನೇಕ ವರ್ಷಗಳ ಕಾಲ ನಿರ್ವಹಿಸಿ ಅನುಭವವಿರುವ ಪಿ.ಚಿದಂಬರಂ ಅವರು ಬಜೆಟ್ ಬಗ್ಗೆ ಅರ್ಥಪೂರ್ಣ ಟೀಕೆಗಳನ್ನು ಮಾಡಲು ಮತ್ತು ಕೊರತೆಗಳನ್ನು ಗುರುತಿಸಲು ಸಮರ್ಥರು. ಹಾಗಾಗಿ ನಮ್ಮ ಓದುಗರ ತಿಳಿವಳಿಕೆಗೆ ನೆರವಾಗಲೆಂದು ಚಿದಂಬರಂ […]

ಮುಖ್ಯಚರ್ಚೆಗೆ ಪ್ರವೇಶ

ಸಾಹಿತ್ಯ ಕೃತಿಯ ವಿಮರ್ಶೆಯಲ್ಲಿ ಸಾಹಿತಿಯ ಧೋರಣೆ ಪರಿಗಣಿಸಬೇಕೆ..? ನಾವು ಇದುವರೆಗೆ ಹೇಳಿದ್ದು ಏನೇ ಆದರೂ ಮಾಡಿದ್ದು ಮಾತ್ರ ಅದರ ವಿರುದ್ಧ ದಿಕ್ಕಿನಲ್ಲಿಯೇ ಇದೆ. ಕನ್ನಡ  ಸಾಹಿತ್ಯ ವಿಮರ್ಶೆಯ ಸೋಗಲಾಡಿತನದಲ್ಲಿ ವಿಮರ್ಶೆ ಪ್ರಾಕಾರ ಸೊರಗಿದೆ. ತಮ್ಮನ್ನು ಹೀಯಾಳಿಸಿದರೆಂದು ಶೂದ್ರರೆಲ್ಲಾ ಅಡಿಗರ ಕಾವ್ಯವನ್ನು ಬಹಿಷ್ಕರಿಸಿದ್ದಾರೆ. ಪ್ರಗತಿಪರರಿಗೆ ಭೈರಪ್ಪನವರ ಕಾದಂಬರಿಗಳಲ್ಲಿ ಕೇವಲ ವೈದಿಕಶಾಹಿಯ ವಿಜೃಂಭಣೆ ಹಾಗೂ ಧಾರ್ಮಿಕ ಮತಾಂಧತೆಯೇ ಕಾಣುತ್ತದೆ. ಕುವೆಂಪು ಸಾಹಿತ್ಯವನ್ನು ಮುಕ್ತಮನಸ್ಸಿನಿಂದ ಬ್ರಾಹ್ಮಣರು ಒಪ್ಪಿದಂತೆ ಕಾಣುವುದಿಲ್ಲ. ಹೆದರಿಕೆಯಿಂದಲೋ ಅಥವಾ ಹಿಂಜರಿಕೆಯಿಂದಲೋ ದೇವನೂರರ ಬರಹಗಳನ್ನು ತೀಕ್ಷ್ಣ ವಿಮರ್ಶೆಗೆ ಒಳಪಡಿಸಿದಂತೆ ಕಾಣುವುದಿಲ್ಲ. […]

ಕಾಲದೇಶ ಮೀರಿದ ಕಸುವನ್ನು ನಿರಾಕರಿಸಲಾಗದು

ಕೆ.ವಿ.ನಾರಾಯಣ

ಕನ್ನಡ ವಿಮರ್ಶೆಯು ಕಳೆದ ಕೆಲವು ದಶಕಗಳಲ್ಲಿ ಸಾಗಿರುವ ದಾರಿಯನ್ನು ನೋಡಿದರೆ ಎರಡು ಬಗೆಯ ಬೆಳವಣಿಗೆಗಳು ಕಾಣುತ್ತವೆ. ಒಂದು: ಬರೆಹದಿಂದ ಬರೆಹಗಾರರ ಕಡೆಗೆ ಚಲನೆ. ಎರಡು: ಬರಹದಿಂದ `ಸಂಸ್ಕೃತಿ’ಯ ಕಡೆಗೆ ಚಲನೆ. ಇವೆರಡೂ ಬೆಳವಣಿಗೆಗಳು ಎಲ್ಲೋ ಒಂದು ಕಡೆ ಒಂದನ್ನೊಂದು ಸೇರಿಕೊಂಡು ಚಲಿಸುವುದನ್ನೂ ನೋಡುತ್ತೇವೆ. 1. ಸಂವಾದಕ್ಕೆಂದು ಅಣಿಮಾಡಿರುವ ಕೇಳ್ವಿಗಳಲ್ಲೆ ನಮ್ಮ ಮಾತುಕತೆಗೆ ನೆರವಾಗುವ ಸಂಗತಿಗಳಿವೆ. ಬರೆದವರು ಮತ್ತು ಬರಹಗಳನ್ನು ಬೇರೆ ಬೇರೆಯಾಗಿ ಇರಿಸಬೇಕೇ, ಇಲ್ಲವೇ ಒಟ್ಟಾಗಿ ಇರಿಸಿ ನೋಡಬೇಕೆ ಎಂಬುದು ಕೇಳ್ವಿಯ ತಿರುಳು. ಅಲ್ಲದೆ ಹಾಗೆ ಒಟ್ಟಾಗಿ […]

ವಿಮರ್ಶೆ ವಸ್ತುನಿಷ್ಠವಾಗಿರಬೇಕೋ, ವ್ಯಕ್ತಿನಿಷ್ಠವಾಗಿರಬೇಕೋ?

ಎಸ್.ನಟರಾಜ ಬೂದಾಳು

ಕಲಾಕೃತಿಯೆನ್ನುವುದು ಒಂದು ಫಿನಿಶ್ಡ್ ಪ್ರೊಡಕ್ಟ್ ಅಲ್ಲ. ಅದು ಸದಾ ಆಗುತ್ತಲೇ ಇರುವ ಒಂದು ಪ್ರಕ್ರಿಯೆ ಮಾತ್ರ. ಇದು ವಿಮರ್ಶೆಗೂ ಅನ್ವಯಿಸುವ ಮಾತು. ಹಾಗಾಗಿ ವಿಮರ್ಶೆ ವಸ್ತುನಿಷ್ಠವೂ ಅಲ್ಲ; ವ್ಯಕ್ತಿನಿಷ್ಠವೂ ಅಲ್ಲ. ಅದು ಸದಾ ಲೋಕನಿಷ್ಠವಾಗಿರುವುದೇ ಸರಿಯಾದ ಮಾರ್ಗ. ಈ ಪ್ರಶ್ನೆ ಇನ್ನೊಂದಷ್ಟು ಪ್ರಶ್ನೆಗಳನ್ನು ಜೊತೆಯಲ್ಲಿಯೇ ತರುತ್ತದೆ. ಮೊದಲಿಗೆ ಇಂತಹ ವಿಭಜನೆ ಸಾಧ್ಯವೆ? ವಿಮರ್ಶೆ ವಸ್ತುನಿಷ್ಠವೆನ್ನುವ ಏಕಾಕಿ ನಿಲುವಿನಿಂದ ಸಂಭವಿಸುತ್ತದೆಯೆ? ಹೋಗಲಿ ಕೃತಿಯ ರಚನೆಯೆನ್ನುವುದಾದರೂ ಹಾಗೆ ಏಕಾಕಿ ಸಂಗತಿಯೆ? ಒಂದು ಕೃತಿಯ ಓದು ಸಂಭವಿಸುವುದು ಎಲ್ಲಿ, ಹೇಗೆ? ಒಂದು […]

ಅಳಿವಿನಂಚಿಗೆ ಸರಿಯುತ್ತಿರುವ ವಿಮರ್ಶೆ

ಡಾ.ಸುಭಾಷ್ ರಾಜಮಾನೆ

ಸಾಹಿತ್ಯ ವಿಮರ್ಶೆ ಎನ್ನುವುದು ಜಾತಿ, ಧರ್ಮ, ಸೈದ್ಧಾಂತಿಕ ಧೋರಣೆಗಳ ಹಿನ್ನೆಲೆಯಲ್ಲಿ ಪ್ರಬಲವಾದ ಸಂಸ್ಕೃತಿಕ ರಾಜಕಾರಣಗಳನ್ನು ಮಾಡುತ್ತಿರುತ್ತದೆ. ಅದು ಸ್ವಜನಪಕ್ಷಪಾತ ಮತ್ತು ಗುಂಪುಗಾರಿಕೆಗಳಿಂದಲೂ ಮುಕ್ತವಾಗಿಲ್ಲ. ಕನ್ನಡದಲ್ಲಿ ಸದ್ಯಕ್ಕೆ ಸಾಹಿತ್ಯ ವಿಮರ್ಶೆ ಎನ್ನುವುದು ಅಳಿವಿನ ಅಂಚಿಗೆ ಸರಿಯುತ್ತಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ವಿದ್ವತ್‍ಪೂರ್ಣವಾದ ಗಂಭೀರ ವಿಮರ್ಶೆಯ ಕಾಲವಂತೂ ಮುಗಿದೇಹೋಗಿದೆ ಎನ್ನುವಂತಾಗಿದೆ. ಹೊಸ ತಲೆಮಾರು ವಿಮರ್ಶಾ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ತೀರಾ ಕಡಿಮೆಯಾಗಿದೆ. ಆದ್ದರಿಂದ ಸಾಹಿತ್ಯದ ಬೇರೆ ಪ್ರಕಾರಗಳಿಗೆ ಹೋಲಿಸಿದರೆ ವಿಮರ್ಶಾಲೋಕ ಸೊರಗುತ್ತಿರುವುದು ನಿಜ. ಕನ್ನಡದ ಕೆಲವು ಮಾಸಿಕಗಳು ಮತ್ತು ದಿನಪತ್ರಿಕೆಗಳ ಸಾಪ್ತಾಹಿಕ […]

ಬದುಕಿಗೂ ಬೇಕಿದೆ ವಿಮರ್ಶೆ

ಓ.ಎಲ್.ನಾಗಭೂಷಣ ಸ್ವಾಮಿ

 ಬದುಕಿಗೂ ಬೇಕಿದೆ ವಿಮರ್ಶೆ <p><sub>  ಓ.ಎಲ್.ನಾಗಭೂಷಣ ಸ್ವಾಮಿ </sub></p>

ಯಾವುದೇ ಕಾಲದಲ್ಲಿ ಚಾಲ್ತಿಯಲ್ಲಿರುವ ಸಾಹಿತ್ಯವಿಮರ್ಶೆ ಎಂಬ ಬರವಣಿಗೆಯನ್ನು ತಲೆಮಾರಿಗೊಮ್ಮೆಯಾದರೂ ವಿಮರ್ಶೆಗೆ ಒಳಪಡಿಸುವುದು ಅಗತ್ಯ. ವಿಮರ್ಶೆಯೇ ವಿಮರ್ಶೆಯ ಸ್ವಾಸ್ಥ್ಯವನ್ನೂ ಸಾಹಿತ್ಯದ ಸ್ವಾಸ್ಥ್ಯವನ್ನೂ ಕಾಪಾಡುವ ಶಕ್ತಿ. `ಬದುಕಿಗೆ ವಿಮರ್ಶೆ ಅನ್ನುವುದು ಉಸಿರಾಟದಷ್ಟೇ ಅನಿವಾರ್ಯ’ ಎಂಬ ಮಾತಿದೆ. ಅನುಭವಗಳನ್ನು ಹೋಲಿಸಿ ನೋಡುವ, ಬೆಲೆ ಕಟ್ಟುವ ಕೆಲಸವಾಗಿ ವಿಮರ್ಶೆ ಎಂಬುದು ಮನುಷ್ಯನ ಪ್ರವೃತ್ತಿಯಲ್ಲೇ ಸೇರಿದೆ. ಸಾಹಿತ್ಯ ವಿಮರ್ಶೆ ಮನುಷ್ಯನಲ್ಲಿರುವ ಈ ಪ್ರವೃತ್ತಿ ವ್ಯಕ್ತವಾಗುವ ಒಂದು ಬಗೆ ಅಷ್ಟೇ. ನಮ್ಮ ಇತರ ಯಾವುದೇ ಪ್ರವೃತ್ತಿಗಳ ಹಾಗೆ ವಿಮರ್ಶೆಯ ಪ್ರವೃತ್ತಿಯನ್ನೂ ಎಚ್ಚರದಲ್ಲಿ ಬಳಸುತ್ತ ಪೋಷಿಸುವ ಜವಾಬ್ದಾರಿ […]

ಹೊಸ ಹಾದಿಯ ಹುಡುಕಾಟದಲ್ಲಿ…

ಎಸ್.ಆರ್.ವಿಜಯಶಂಕರ್

ಶಿವರಾಮ ಕಾರಂತರ ‘ಚೋಮನ ದುಡಿ’ಯಂತಹ ಅಭಿಜಾತ ಶಕ್ತಿಯ ಕೃತಿಗಳು ಎಂತಹ ವಿಮರ್ಶೆಯನ್ನೂ ತಾಳಿಕೊಳ್ಳಬಲ್ಲವು. ಆದ್ದರಿಂದ ಆಶಯ-ಆಕೃತಿಗಳಿಗೆ ಹೊಸ ವಿಮರ್ಶಾ ಕ್ರಮದ ಬಳಕೆಯಾಗಬೇಕಿದ್ದ ಒತ್ತಡಗಳನ್ನು ಅಂತಹ ಕೃತಿಗಳು ಉಂಟು ಮಾಡಲಾರವು. ಅಂತಹ ಶ್ರೇಷ್ಠ ಇನ್ನೊಂದು ಕೃತಿ ಆಶಯ ಪ್ರಧಾನ ನೆಲೆಯಲ್ಲಿ ಹುಟ್ಟಿದಾಗ ವಿಮರ್ಶೆಗೊಂದು ಹೊಸದಾರಿ ಕಂಡರೂ ಕಂಡೀತು. ಕೃತಿಯೊಂದು ಕೇವಲ ಪಠ್ಯಕ್ಕೆ ಸೀಮಿತವೇ? ಎಂಬ ಪ್ರಶ್ನೆಗೆ ಕನ್ನಡದಲ್ಲಿ ಸಂಸ್ಕೃತಿ ವಿಮರ್ಶೆ ಬೆಳೆದಿರುವ ಹಿನ್ನೆಲೆಯಲ್ಲಿ ತಾತ್ವಿಕ ಉತ್ತರವನ್ನೂ ಕಂಡುಕೊಳ್ಳಬೇಕಾಗುತ್ತದೆ. ಕನ್ನಡದಲ್ಲಿ ನವ್ಯದ ಅನುಭವನಿಷ್ಠ ವಿಮರ್ಶೆಯ ಮುಂದಿನ ಹಂತದಲ್ಲಿ ಸಂಸ್ಕೃತಿ ವಿಮರ್ಶೆಯು […]

ಪಕ್ವ ಓದು ವಿಮರ್ಶೆಯ ತಳಪಾಯ

ರಾಜೇಂದ್ರ ಚೆನ್ನಿ

ಕನ್ನಡದ ಹಿರಿಯ ಬರಹಗಾರರು ಅತ್ಯಂತ ಪ್ರಭಾವಿಗಳಾಗಿದ್ದಾರೆ. ಸರಕಾರದಿಂದ ದುಡ್ಡು, ಪ್ರಶಸ್ತಿಗಳನ್ನು ಕೊಡಿಸುವ ಶಕ್ತಿ ಹೊಂದಿದ್ದಾರೆ. ಹೀಗಾಗಿ ಥೇಟು ನಮ್ಮ ರಾಜಕೀಯ ಧುರೀಣರಂತೆ ವರ್ತಿಸುತ್ತಾರೆ. ಇವರಿಂದಾಗಿ ವಿಮರ್ಶೆಯ ಜೀವಾಳವೇ ಆಗಿರುವ ಸ್ವತಂತ್ರ ಯೋಚನೆ, ಮುಕ್ತ ಚಿಂತನೆ, ಕೃತಿ ನಿಷ್ಠತೆ, ಓದುವ ಪರಿಶ್ರಮ ಇವೆಲ್ಲವೂ ಅಪಾಯದಲ್ಲಿವೆ. ಮುಖ್ಯಚರ್ಚೆಯ ಟಿಪ್ಪಣಿಯಲ್ಲಿ ಎರಡು ಭಾಗಗಳಿವೆ. ಒಂದರಲ್ಲಿ, ಕೆಲವು ಮುಖ್ಯ ಸಾಹಿತಿಗಳನ್ನು ಜಾತಿ ಅಥವಾ ಸಿದ್ಧಾಂತಗಳ ಕಾರಣಕ್ಕಾಗಿ ಕೆಲವರು ಅಲಕ್ಷ್ಯ ಮಾಡಿದ್ದಾರೆ ಎನ್ನುವ ಮಾತುಗಳಿವೆ. ಎರಡನೇ ಭಾಗದಲ್ಲಿ ಎರಡು ಗಂಭೀರವಾದ ಪ್ರಶ್ನೆಗಳಿವೆ. ಮೊದಲನೇ ಭಾಗದ […]

ಸಾಹಿತ್ಯ ಮತ್ತು ವಿಮರ್ಶೆ ಅನುಸಂಧಾನದ ಭಿನ್ನ ಮಾರ್ಗಗಳು

ಆರ್.ತಾರಿಣಿ ಶುಭದಾಯಿನಿ

ನವೋದಯದಲ್ಲಿ ರಸವಿಮರ್ಶೆ ಪ್ರಾಧಾನ್ಯ ಪಡೆದರೆ ನವ್ಯದಲ್ಲಿ ಪಠ್ಯ ವಿಮರ್ಶೆ ಮೇಲುಗೈಯಾಯಿತು. ನಂತರ ಬಂದ ಬಂಡಾಯ ವಿಮರ್ಶೆಯು ಸಂಸ್ಕೃತಿ ವಿಮರ್ಶೆಯನ್ನು ಕಟ್ಟಿಕೊಳ್ಳತೊಡಗಿತು. ಇಂದು ಸಾಮಾಜಿಕ ಸಾಂಸ್ಕೃತಿಕ ವಿಶ್ಲೇಷಣೆ ಎಂಬಲ್ಲಿಗೆ ಬಂದು ನಿಂತಿದೆ. ವಿಮರ್ಶೆಯು ಸಾಹಿತ್ಯದ ಜೊತೆ ಜೊತೆಗೇ ಇರುವಂತಹದ್ದು. ಅದೇನು ಸಾಹಿತ್ಯದ ಸೃಜನೇತರ ವಿಭಾಗವಲ್ಲ. ವಾಸ್ತವವಾಗಿ ವಿಮರ್ಶೆಯು ಸೃಜನಶೀಲವಾದುದು. ವಿಮರ್ಶೆ ಎಂದರೆ ವಿದ್ವತ್ತು, ವಿಶ್ಲೇಷಿಸುವ ತಾಕತ್ತು ಎಂದು ಮಾತ್ರ ಭಾವಿಸಬಾರದು. ಅದೊಂದು ಸೃಜನಶೀಲ ಪ್ರಕ್ರಿಯೆ. ವಿಮರ್ಶೆಯಲ್ಲಿ ಸೃಜನಶೀಲತೆಯ ಗೈರುಹಾಜರಿ ಮಾಂತ್ರಿಕ ಸ್ಪರ್ಶ ಇಲ್ಲದ ಕವಿತೆಯ ಸಾಲುಗಳಂತೆಯೇ, ಒಣಗಿ ಜಡವಾಗಿರುತ್ತದೆ. […]