ಶಿಕ್ಷಕರನ್ನು ಗುರುತಿಸದ ದೇಶಕ್ಕೆ ತಿಳಿವಳಿಕೆ ನೀಡುವುದು ಹೇಗೆ..?

ಸೆಪ್ಟೆಂಬರ್ ಸಂಚಿಕೆಯ ಮುಖ್ಯ ಚರ್ಚೆ: ನಿಮಗಿದು ಗೊತ್ತಿದೆ. ದೇಶದ ಯಾವುದೇ ಶಾಲೆಯ ಯಾವುದೇ ತರಗತಿಯೊಂದರ ವಿದ್ಯಾರ್ಥಿಗಳನ್ನು ‘ನೀವು ಮುಂದೇನಾಗಬೇಕೆಂದು ಎಣಿಸಿದ್ದೀರಾ?’ ಎಂದು ಕೇಳಿ. ಡಾಕ್ಟರ್, ಎಂಜಿನಿಯರ್, ಚಾರ್ಟ್‍ರ್ಡ್ ಅಕೌಂಟೆಂಟ್, ಐಎಎಸ್, ವಕೀಲ ಮುಂತಾದ ಹಲವಾರು ಉದ್ಯೋಗ-ವೃತ್ತಿಗಳ ಆಯ್ಕೆಗಳನ್ನು ನೀವು ಕೇಳಿಸಿಕೊಳ್ಳುತ್ತೀರಿ. ಆದರೆ ಯಾವುದೇ ಶಾಲೆಯ ಯಾವುದೇ ವಿದ್ಯಾರ್ಥಿಯೂ ತಾನು ಶಿಕ್ಷಕನಾಗುತ್ತೇನೆಂದು ಹೇಳುವುದಿಲ್ಲ. ಈ ಸಣ್ಣ ಪರೀಕ್ಷೆಯಲ್ಲಿ ನಿಮಗೆ ದೊರೆತ ಫಲಿತಾಂಶ ದೇಶದ ಸಾಮಾಜಿಕ-ಶೈಕ್ಷಣಿಕ ದುರಂತವೊಂದನ್ನು ನಿಮ್ಮ ಮುಂದೆ ತೆರೆದಿಡುತ್ತದೆ. 130 ಕೋಟಿ ಜನರ ದೇಶದಲ್ಲಿ ಯಾರೊಬ್ಬರೂ ಸ್ವಯಂಪ್ರೇರಿತವಾಗಿ […]

ಬದುಕಿನ ಪಥ ಬದಲಿಸುವ ಹತ್ತು ತಂತ್ರಜ್ಞಾನ ಶೋಧನೆಗಳು

ಪೂರ್ಣಿಮಾ ಮಾಳಗಿಮನಿ

ಬದುಕಿನ ಪಥ ಬದಲಿಸುವ  ಹತ್ತು ತಂತ್ರಜ್ಞಾನ ಶೋಧನೆಗಳು
ಪೂರ್ಣಿಮಾ ಮಾಳಗಿಮನಿ

ಮನುಷ್ಯಕುಲವೇ ಆತಂಕ ಬೆರೆತ ಕುತೂಹಲದಿಂದ ಕಾಯುವಂತೆ ಮಾಡಿರುವ ಕೆಲವು ವಿಸ್ಮಯಕಾರಿ ಸಂಶೋಧನೆಗಳು, ಬೆಳವಣಿಗೆಗಳು 2019ರಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದಿವೆ. ಈ ಸಂಶೋಧನೆಗಳು ವಿಶ್ವದಾದ್ಯಂತ ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವಷ್ಟು ಶಕ್ತ! ಅವು ಯಾವ ಸಂಶೋಧನೆಗಳು? ಸದ್ಯಕ್ಕೆ ಯಾವ ಹಂತದಲ್ಲಿವೆ? 1. ಕೃತಕ ಬುದ್ಧಿಮತ್ತೆ (ಎಐ) ಮತ್ತು ವರ್ಚುಯಲ್ ರಿಯಾಲಿಟಿ ಗಣಕಯಂತ್ರದ ಮೂಲಭೂತ ಮಾದರಿಯನ್ನು 1940ರಲ್ಲೇ ವಿಜ್ಞಾನಿಗಳು ಕಂಡುಹಿಡಿದಿದ್ದರು. ಗಣಕಯಂತ್ರದ ಕಾರ್ಯವೈಖರಿಯಿಂದ ಪ್ರೇರಿತರಾಗಿ ಕೆಲವು ವಿಜ್ಞಾನಿಗಳು ಆಗಲೇ electronic brain ಸೃಷ್ಟಿಸುವ ಬಗ್ಗೆ ಯೋಚನೆ ಮಾಡಿದ್ದರೂ, ಈ ವಿಷಯದಲ್ಲಿ […]

ಇ-ಜ್ಞಾನ

ಟಿ.ಜಿ.ಶ್ರೀನಿಧಿ

ಟೆಕ್ ಸುದ್ದಿ ನಮ್ಮ ದೇಶದಲ್ಲಿ ಅಂತರಜಾಲ ಬಳಕೆದಾರರು ಜಾಸ್ತಿಯಾಗಿದ್ದರೂ, ಆ ಪೈಕಿ ಮಹಿಳೆಯರ ಸಂಖ್ಯೆ ಕಡಿಮೆಯಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಈ ಪರಿಸ್ಥಿತಿಯನ್ನು ಬದಲಾಯಿಸಿ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಲು ಹಲವು ಸಂಸ್ಥೆಗಳು ಕೆಲಸಮಾಡುತ್ತಿವೆ. ಮೊಬೈಲ್ ಜಗತ್ತಿನ ಜಾಗತಿಕ ಸಂಸ್ಥೆ ಜಿಎಸ್‍ಎಂ ಅಸೋಸಿಯೇಶನ್ ಜೊತೆಗೆ ಕೈಜೋಡಿಸಿರುವ ಜಿಯೋ ‘ಕನೆಕ್ಟೆಡ್ ವಿಮೆನ್’ ಕಾರ್ಯಕ್ರಮವನ್ನು ಭಾರತಕ್ಕೂ ತಂದಿದೆ. ಇದೇ ರೀತಿ ಗೂಗಲ್ ಸಂಸ್ಥೆ ಟಾಟಾ ಟ್ರಸ್ಟ್‍ಗಳ ಸಹಯೋಗದಲ್ಲಿ ನಡೆಸುವ ‘ಇಂಟರ್‍ನೆಟ್ ಸಾಥಿ’ ಕಾರ್ಯಕ್ರಮದ ಮೂಲಕ ಗ್ರಾಮೀಣ ಮಹಿಳೆಯರನ್ನು ಅಂತರಜಾಲದ ಲೋಕಕ್ಕೆ ಪರಿಚಯಿಸುತ್ತಿದೆ. […]

‘ಕೊನೆಗೆ ಗೆಲ್ಲುವುದು, ನಿಲ್ಲುವುದು ಸತ್ಯವೇ!’

ಸವಿತಾ ಶ್ರೀನಿವಾಸ್

‘ಕೊನೆಗೆ ಗೆಲ್ಲುವುದು, ನಿಲ್ಲುವುದು ಸತ್ಯವೇ!’
ಸವಿತಾ ಶ್ರೀನಿವಾಸ್

ಐಪಿಎಸ್ ಅಧಿಕಾರಿ ಸವಿತಾ ಶ್ರೀನಿವಾಸ್ ಅವರು ಪ್ರಸ್ತುತ ಐಜಿಪಿ ಕಚೇರಿಯಲ್ಲಿ ಅಸಿಸ್ಟೆಂಟ್ ಇನ್ಸ್‍ಪೆಕ್ಟರ್ ಆಫ್ ಪೊಲೀಸ್ (ಏಐಜಿಪಿ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾದಂಬರಿ, ಕಥಾ ಸಂಕಲನ, ವೈಜ್ಞಾನಿಕ ಕೃತಿ, ಅನುವಾದಗಳನ್ನೊಳಗೊಂಡಂತೆ ಸುಮಾರು 15 ಕೃತಿಗಳನ್ನು ರಚಿಸಿದ್ದಾರೆ. ಅವರ ಸ್ಫೂರ್ತಿದಾಯಕ ಸಂದರ್ಶನ ಇಲ್ಲಿದೆ. ನಾಗರಿಕ ಸೇವಾ ಪರೀಕ್ಷೆ ಬರೆಯುವ ಯೋಚನೆ ಹೇಗೆ ಬಂತು? ಪ್ರೇರಣೆ ಏನು? ಆರಂಭದಿಂದಲೂ ನನ್ನ ಪ್ರವೃತ್ತಿ ಬರವಣಿಗೆ. ಮೊದಲಿನಿಂದಲೂ ಏನಾದರೂ ಸಾಧಿಸಬೇಕು ಅನ್ನುವ ಹಂಬಲ, ಅದಕ್ಕಾಗಿ ಶ್ರಮವಹಿಸುವುದು ನನಗೆ ತುಂಬಾ ಇಷ್ಟ. ನನ್ನ ತಂದೆಗೂ […]

ವಿಶ್ವ ವಿದ್ಯಮಾನ

ಪುರುಷೋತ್ತಮ ಆಲದಹಳ್ಳಿ

ವಿಶ್ವ ವಿದ್ಯಮಾನ
ಪುರುಷೋತ್ತಮ ಆಲದಹಳ್ಳಿ

ದಲೈ ಲಾಮಾ ಉತ್ತರಾಧಿಕಾರಿ ಆಯ್ಕೆ ಮಾಡಬಯಸಿದ ಚೀನಾ ಟಿಬೆಟಿನ ಬೌದ್ಧರ ಧರ್ಮಗುರು ದಲೈ ಲಾಮಾರವರ ಉತ್ತರಾಧಿಕಾರಿಯ ನಿಯುಕ್ತಿಯು ತನ್ನ ಅನುಮೋದನೆಯಿಲ್ಲದೆ ನಡೆಯಲಾಗದೆಂದು ಚೀನಾದ ಆಡಳಿತ ಪ್ರತಿಪಾದಿಸಿದೆ. ಉತ್ತರಾಧಿಕಾರಿಯ ಆಯ್ಕೆ ಲಾಸಾದಲ್ಲಿ ಚಿನ್ನದ ಕರಂಡಿಕೆಯಲ್ಲಿ ಚೀಟಿ ಹಾಕಿ ಎತ್ತುವ ಮೂಲಕ ಆಗಬೇಕು ಹಾಗೂ ಈ ಆಯ್ಕೆ ಪ್ರಕ್ರಿಯೆಯನ್ನು ತಾನು ಅನುಮೋದಿಸಿದರೆ ಮಾತ್ರ ಅದು ನ್ಯಾಯಸಮ್ಮತವೆಂದು ಚೀನಾದ ಆಡಳಿತ ಹೇಳಿಕೊಂಡಿದೆ. 1950ರಿಂದ ಭಾರತದಲ್ಲಿ ರಾಜಕೀಯ ನಿರಾಶ್ರಿತರಾಗಿರುವ ದಲೈ ಲಾಮಾರವರು ಇದೀಗ 84 ವರ್ಷದವರಾಗಿದ್ದಾರೆ. ನಿಧನದ ನಂತರದಲ್ಲಿ ಇವರು ಟಿಬೆಟನ್ ಕುಟುಂಬವೊಂದರಲ್ಲಿ […]

ಚಂದ್ರನ ಮೇಲೆ ಕಾಲಿಟ್ಟ ಘಳಿಗೆಗೆ ಸುವರ್ಣ ಸಂಭ್ರಮ!

ಎಲ್.ಪಿ.ಕುಲಕರ್ಣಿ

ಚಂದ್ರನ ಮೇಲೆ ಕಾಲಿಟ್ಟ ಘಳಿಗೆಗೆ  ಸುವರ್ಣ ಸಂಭ್ರಮ!
ಎಲ್.ಪಿ.ಕುಲಕರ್ಣಿ

ತಾಯಿ ತೋರಿಸಿದ ಚಂದಮಾಮನನ್ನು ಹಿಡಿಯಲು ಹಾಲುಹಲ್ಲಿನ ಮಗು ಶತಮಾನಗಳಿಂದ ಕೈಚಾಚುತ್ತಲೇ ಇತ್ತು. ಕೊನೆಗೂ ನಿಲುಕಿಯೇಬಿಟ್ಟ ಚಂದ್ರಮ! 20ನೇ ಜುಲೈ 1969 ರಂದು ಮಾನವ ಮೊಟ್ಟಮೊದಲ ಬಾರಿಗೆ ಚಂದ್ರನನ್ನು ಮುಟ್ಟಿದ; ಅದಾಗಿ ಬರೋಬ್ಬರಿ 50 ವರ್ಷಗಳಾದವು. ಭಾರತದ ಚಂದ್ರಯಾನ-2ರ ಸಂಭ್ರಮದ ಸನ್ನಿವೇಶದಲ್ಲಿ ಅಪೋಲೋ-11 ಯಾತ್ರೆಯ ಹಿನ್ನೋಟ ಇಲ್ಲಿದೆ. ಐವತ್ತು ವರ್ಷಗಳ ಹಿಂದೆ ಅಮೆರಿಕದ ಮೂವರು ಸಾಹಸಿ ಖಗೋಳಯಾತ್ರಿಗಳನ್ನು ಹೊತ್ತ ‘ಅಪೊಲೊ-11’ ನೌಕೆಯು ಚಂದ್ರನೆಡೆಗೆ ಯಾತ್ರೆ ಬೆಳೆಸಿತು. ಇಂತಹ ಅದ್ಭುತ ಯಾತ್ರೆಯಲ್ಲಿ ಪಾಲ್ಗೊಂಡವರು; ಅಮೆರಿಕದ ಕಮ್ಯಾಂಡರ್ ನೀಲ್ ಆರ್ಮ್ ಸ್ಟ್ರಾಂಗ್, […]

ಗೆಲ್ಲುವ ಕುದುರೆ

ಡಿ.ಎಚ್.ಲಾರೆನ್ಸ್

ಗೆಲ್ಲುವ ಕುದುರೆ
ಡಿ.ಎಚ್.ಲಾರೆನ್ಸ್

ಪ್ರಖ್ಯಾತ ಇಂಗ್ಲಿಷ್ ಲೇಖಕ ಡಿ.ಎಚ್.ಲಾರೆನ್ಸ್‍ನ ಕತೆ, ಕಾದಂಬರಿಗಳು ಆಧುನಿಕತೆಯು ಮನುಷ್ಯನ ಮೇಲೆ ತಂದು ಹಾಕಿರುವ ಒತ್ತಡ, ಯಾಂತ್ರಿಕತೆ, ಅಮಾನವೀಯ ಗುಣಗಳನ್ನು ಚರ್ಚಿಸುತ್ತವೆ. ಅವನ ಕೃತಿಗಳನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಓದಿದಾಗ ಅವು ಹೆಚ್ಚಿನ ಅರ್ಥ ಪಡೆದುಕೊಳ್ಳುತ್ತವೆ. ಇಲ್ಲಿ ಪ್ರಕಟವಾಗಿರುವ ಅವನ ಈ ‘ಗೆಲ್ಲುವ ಕುದುರೆ’ ಕತೆ ಕೂಡ ಸಾವಧಾನದ ಓದು ಮತ್ತು ಮನೋವೈಜ್ಞಾನಿಕ ಅನುಸಂಧಾನವನ್ನು ಬಯಸುತ್ತದೆ. ತಾಯಿ ಮತ್ತು ಮಗನ ನಡುವೆ ಹೆಣೆಯಲ್ಪಟ್ಟಿರುವ ಭಾವನಾತ್ಮಕ ಸಂಬಂಧಗಳನ್ನು ಅದು ಅನಾವರಣಗೊಳಿಸುತ್ತದೆ. ಹೆಸ್ಟರ್ ಹೆಸರಿನ ಹೆಂಗಸಿಗೆ ಅಂದ, ಚೆಂದ, ಸೊಬಗು-ಸೌಂದರ್ಯಗಳ ಜೊತೆಗ […]

ಕನ್ನಡ ಸಾಹಿತ್ಯ ವಿಮರ್ಶೆ ಇತ್ತೀಚೆಗಿನ ಪ್ರವೃತ್ತಿಗಳು

ಡಾ.ಬಿ.ಎಂ.ಪುಟ್ಟಯ್ಯ

“ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಇತ್ತೀಚೆಗಿನ ಪ್ರವೃತ್ತಿಗಳು” ಎಂಬುವು ಇವೆಯೇ? ಇದ್ದರೆ ಅವು ಯಾವುವು? ಅದರ ತಾತ್ವಿಕ ಸ್ವರೂಪ ಯಾವುದು? ಅವನ್ನು ಗುರುತಿಸುವ ಹಾಗೂ ಚರ್ಚಿಸುವ ಮಾನದಂಡಗಳು ಯಾವುವು? ಇತ್ತೀಚೆಗಿನ ಕೆಲವು ವರ್ಷಗಳಲ್ಲಿ “ಕನ್ನಡ ಸಾಹಿತ್ಯದ ಇತ್ತೀಚೆಗಿನ ಒಲವುಗಳು”, “ಕನ್ನಡ ಸಾಹಿತ್ಯದ ಇತ್ತೀಚೆಗಿನ ಪ್ರವೃತ್ತಿಗಳು” ಎಂಬ ಶೀರ್ಷಿಕೆಗಳಲ್ಲಿ ವಿಚಾರ ಸಂಕಿರಣಗಳು ನಡೆಯುತ್ತಿವೆ. ವಿಷಯಗಳ ನಿರ್ದಿಷ್ಟತೆಯ ಚೌಕಟ್ಟಿಗೆ ಬಂದಾಗ, “ಕಾದಂಬರಿಗಳಲ್ಲಿ ಇತ್ತೀಚೆಗಿನ ಒಲವುಗಳು/ ಪ್ರವೃತ್ತಿಗಳು” ಎಂತಲೋ, “ಕನ್ನಡ ಸಣ್ಣ ಕಥೆಗಳಲ್ಲಿ ಇತ್ತೀಚೆಗಿನ ಒಲವುಗಳು/ ಪ್ರವೃತ್ತಿಗಳು” ಎಂತಲೋ ಶೀರ್ಷಿಕೆಗಳನ್ನು ರೂಪಿಸಲಾಗಿರುತ್ತದೆ. ಮುಂದುವರಿದು […]

ದಿ ಲಾಸ್ಟ್ ಡಿಕೇಡ್: 2008-18

ಮೋಹನದಾಸ್

ಒಟ್ಟಾರೆ ದೇಶದಲ್ಲಿ ಆರ್ಥಿಕ ವಿಶ್ಲೇಷಕರ ಕೊರತೆಯಿದೆ. ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುವವರ ಅನುಭವ ಹಾಗೂ ಮಾಹಿತಿ ಮೂಲಗಳ ಕೊರತೆ ಎದ್ದು ಕಾಣುತ್ತಿದೆ. ಖಾಸಗಿ ವಲಯದಲ್ಲಿ ಮುಖ್ಯ ಹಣಕಾಸು ಅಧಿಕಾರಿಗಳಾಗಿರುವ ಕೆಲವರು ಸಮರ್ಥರಿದ್ದರೂ ದಶಕಗಳ ಕಾಲದ ಅವರ ‘ಲಾಭಗುಳಿತನ’ ಸಮಷ್ಟಿ ಚಿತ್ರಣದ ಸಾಧ್ಯತೆಯನ್ನೇ ಮುಸುಕಾಗಿಸಿದೆ. ಇನ್ನುಳಿದ ಕೆಲವಾರು ಪರಿಣತರು ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತಿಲ್ಲ. ಉಳಿದ ಕೆಲವಾರು ಪರಿಣತರು ದೈನಂದಿನ ವೃತ್ತಪತ್ರಿಕೆ ಕಛೇರಿಗಳಲ್ಲಿ ಕೆಲಸ ಮಾಡುತ್ತಾ ಗಂಭೀರ ಚಿಂತನೆಗೆ ಬೇಕಿರುವ ಸಮಯದ ಕೊರತೆಯಿಂದ ಬಳಲುತ್ತಾರೆ. ಹಾಗಾಗಿ […]

ಸ್ತ್ರೀ ಸಂವೇದನೆಗೆ ಶಕ್ತಿ ತುಂಬುವ ‘ಮೊದಲ ಪತ್ನಿಯ ದುಗುಡ’

ಡಾ.ಶುಭಶ್ರೀ ಪ್ರಸಾದ್

ಪುರುಷ ಕಣ್ಣಿನಿಂದ ಹೊರಬಂದ ಸಿನಿಮಾಗಳಲ್ಲಿ ಹೆಣ್ಣುಗಳನ್ನು ನೋಡುವ ಕ್ರಮ, ಚಿತ್ರಿಸಿರುವ ರೀತಿ, ಹೆಣ್ಣುಗಳ ಇತಿಮಿತಿ, ಪಾತ್ರಮಿತಿ, ಆದರ್ಶದ ಲೇಪದಲ್ಲಿ ಆಕೆ ಹೀಗೆಯೇ ಇರಬೇಕೆಂದು ನಿರ್ದೇಶಿಸುವ ಸಮಾಜದ ಪ್ರತಿನಿಧಿಯಾಗಿ ಸಿನಿಮಾ ಬಳಕೆಯಾಗಿರುವ ಕುರಿತು ಈ ಕೃತಿ ಚರ್ಚಿಸುತ್ತದೆ. ಬಣ್ಣದ ಬದುಕು ನೋಡುಗರ ಕಣ್ಣಿಗೆ ಎಂದೂ ಆಕರ್ಷಣೆಯ ಕೇಂದ್ರ. ಅದರಲ್ಲೂ ಸಿನಿಮಾ ಎಂಬುದು ಪ್ರೇಕ್ಷಕನ ಕನಸಿನ ಸಾಕಾರವೆಂಬಂತೆಯೇ ತೋರಿದೆ. ಕಾಲಕಾಲಕ್ಕೆ ಸಮಾಜದಲ್ಲಿ ಆಗುವ ಬದಲಾವಣೆಯೇ ಸಿನಿಮಾಗಳ ಆಕರ. ಪ್ರೀತಿ ಪ್ರೇಮ ದ್ವೇಷ ಅಸೂಯೆ ಅನಾಚಾರ ಆದರ್ಶಗಳನ್ನೊಳಗೊಂಡ ದಿನನಿತ್ಯದ ಬದುಕೇ ಮತ್ತಷ್ಟು […]

ಹೊಸ ಪುಸ್ತಕ

ಟರ್ನಿಂಗ್ ಪಾಯಿಂಟ್ ಪಂಪಾಪತಿ ಟಿ.ಎಂ. ಪುಟ: 92, ಬೆಲೆ: ರೂ.80 ಪ್ರಕಾಶಕರು: ಅಂಶೀ ಪ್ರಕಾಶನ, ಕೈಲಾಸ 2000, 1 ನೇ ಅಡ್ಡರಸ್ತೆ, ಬೀಚಿ ನಗರ, ಕಪ್ಪಗಲ್ಲು ರಸ್ತೆ, ಬಳ್ಳಾರಿ. ದೂ: 8050200959. ಸ್ನೇಹಿತರು, ಗುರುಗಳು, ಹಿತೈಷಿಗಳ ಸ್ಫೂರ್ತಿಯ ಮಾತುಗಳ ಪ್ರೇರೇಪಣೆಯಿಂದ ಜೀವನದ ದಿಕ್ಕು ಬದಲಾದ ಪ್ರಸಂಗಗಳು, ನಿಂದನೆಯಿಂದ ಹತಾಶೆಗೊಳಗಾಗದೇ ಛಲವುಳ್ಳವರಾಗಿ ಸ್ವಂತ ಕಾಲ ಮೇಲೆ ನಿಂತ ಘಟನೆಗಳನ್ನು ಸರಳವಾಗಿ ಪುಸ್ತಕದಲ್ಲಿ ನಿರೂಪಿಸಲಾಗಿದೆ. ಹೊಸತನ್ನು ಕಲಿಯಬೇಕೆನ್ನುವವರಿಗೆ ಮತ್ತು ಹತಾಶೆಯಿಂದ ಹೊರಬಂದು ಏನನ್ನಾದರೂ ಸಾಧಿಸಬೇಕೆನ್ನುವವರಿಗೆ ಖಂಡಿತವಾಗಿಯೂ ಆತ್ಮವಿಶ್ವಾಸ ತುಂಬಬಲ್ಲ ಕೃತಿ. […]

ಜನ್ನನ ಅನಂತನಾಥ ಪುರಾಣ ಇತಿಹಾಸದ ಬೆಳಕಿಂಡಿ

ಡಾ. ಶಶಿಕಲಾ ಎಂ.ಮೊರಬದ

ಜನ್ನನ ಅನಂತನಾಥ ಪುರಾಣ ಇತಿಹಾಸದ ಬೆಳಕಿಂಡಿ
ಡಾ. ಶಶಿಕಲಾ  ಎಂ.ಮೊರಬದ

ಕವಿ ಸಾಂಪ್ರದಾಯಿಕವಾದ ಮತ್ತು ಚಿರಪರಿಚಿತವಾದ ವಸ್ತುವನ್ನು ಬಿಟ್ಟು ಅಪಾತ್ರ ಪ್ರಣಯದ ಎರಡು ದಿಕ್ಕುಗಳನ್ನು ನಿರೂಪಿಸಿ ಬದುಕಿನ ವಾಸ್ತವಿಕತೆಗೆ ಕನ್ನಡಿ ಹಿಡಿದಿದ್ದಾನೆ. ಅವನ ಪಾತ್ರಗಳು ಪೌರಾಣಿಕ ಅಥವಾ ಐತಿಹಾಸಿಕ ಎನಿಸಬಹುದು. ಆದರೆ ಅವುಗಳಲ್ಲಿರುವ ಸಮಸ್ಯೆ ಮಾತ್ರ ಸಾಮಾಜಿಕವಾದುದು, ನಿತ್ಯನೂತನವಾದುದು. ಹನ್ನೆರಡನೆಯ ಶತಮಾನದ ಉತ್ತರಾರ್ಧ ಮತ್ತು 13ನೆಯ ಶತಮಾನದ ಪೂವಾರ್ಧದಲ್ಲಿದ್ದ ಜನ್ನ ಕವಿಯ ಮೊದಲ ಕಾವ್ಯ ‘ಯಶೋಧರ ಚರಿತೆ’ಯು “ಅಭಯರುಚಿ ಕುಮಾರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದ ಶುಭಕಥನ”ವಾದರೆ, ಎರಡನೆಯ ಕಾವ್ಯ ‘ಅನಂತನಾಥ ಪುರಾಣ’ವು “ಅರಿದಿದು ಬಾಳ […]

ನನ್ನ ಕ್ಲಿಕ್

ನೂರ್ ಅಹಮದ್ ಅಬ್ಬಲಗೆರೆ

ಚಿತ್ರಗಳಾಚೆಯ ಸಾಧ್ಯತೆಗಳತ್ತ ಚಲಿಸುವ ಈ ಛಾಯಾಚಿತ್ರಗಳಲ್ಲಿ ವರ್ಣಚಿತ್ರಗಾರನ ನಿಪುಣತೆ ಇದೆ. ಕಲಾವಿದನ ಕುಂಚದಲ್ಲಿ ಮೂಡಿದಂತಿರುವ ಬಿಗಿಯಾದ ವರ್ಣ ಸಂಯೋಜನೆಯುಳ್ಳ ಈ ಚಿತ್ರಗಳನ್ನು ಪೇಂಟೋಗ್ರಫಿ (Paintography) ಎನ್ನಬಹುದು. ಛಾಯಾಚಿತ್ರಗಾರಿಕೆಯಲ್ಲಿ ಸ್ಥಿರತೆಗೆ ಪ್ರಾಧಾನ್ಯವಿರುತ್ತದೆ. ಈ ನಿಯಮಕ್ಕೆ ವಿರುದ್ಧವಾಗಿ ಇಲ್ಲಿ ಇಮೇಜುಗಳು ನೃತ್ಯ ಮಾಡುತ್ತಿವೆ; ಬಣ್ಣ, ವಸ್ತು ಸಂಯೋಜನೆ ಗಳೆಲ್ಲವೂ ನಲಿಯುತ್ತಿವೆ. ಹಾಗಾಗಿ ಚಿತ್ರಗಳು ನೋಡುಗನ ಮನದಲ್ಲಿ ಕಾವ್ಯವಾಗಿ, ಭಿನ್ನ ಗ್ರಹಿಕೆಯ ಆಲೋಚನಾ ಕ್ರಮದಲ್ಲಿ ಅಭಿವ್ಯಕ್ತಿ ಪಡೆಯುತ್ತವೆ.

ಅಬ್ಬಲಿಗೆ ಮಾಲೆ

ರೇಣುಕಾ ರಮಾನಂದ

ಅಬ್ಬಲಿಗೆ ಮಾಲೆ
ರೇಣುಕಾ ರಮಾನಂದ

ಅವಳು ಕೊಟ್ಟ ಹೂ ಮಾಲೆ ಮುಡಿದು ಸ್ಕೂಟಿಯ ಮೇಲೆ ತಂಗಾಳಿಗೆ ಇನಿಯನ ನೆನಪಿಸಿಕೊಳ್ಳುತ್ತ ಹಿಂದೆ ಹೂ ಹಾರಾಡುವ ಅನುಭೂತಿಯನ್ನು ಮೈ ತುಂಬಿಕೊಂಡು, ಮನದುಂಬಿಕೊಂಡು ಸಣ್ಣಗೆ ಹಾಡು ಗುನುಗುತ್ತ ಹೊರಟ ಹೆಣ್ಮಕ್ಕಳ ಚೆಂದವನ್ನೋ… ಬೈಕ್‍ನ ಮುಂದಿನ ಪಾಕೆಟ್‍ನಲ್ಲಿ ಹೊಸ ಹೆಂಡತಿಗಾಗಿ ರಾಕಿ ಕೊಟ್ಟ ಮಲ್ಲಿಗೆ ಜಡೆಯನ್ನು ಬಾರಿ ಬಾರಿ ಮುಟ್ಟುತ್ತ ಹೊರಟ ಹೊಸಪೋರನನ್ನೋ ನೋಡಬೇಕೆಂದರೆ ನೀವು ಶಾಲ್ಮಲೆಯ ತಟದ ನಮ್ಮೂರು ಅಂಕೋಲೆಗೇ ಬರಬೇಕು. ಬಾಲಾಜಿ ಅಂಗಡಿಯ ಬಾಗಿಲಲ್ಲಿ ಚಿಕ್ಕ ಹೂವಿನ ಚೆಬ್ಬೆಯೊಳಗೆ ಸದಾ ಹಸಿಹಸಿಯಾಗಿರುವ ಹಸಿರು ಬಾಳೆಯೆಲೆಯ ತುಂಡುಗಳನ್ನಿಟ್ಟು […]

ಹಲವು ಸಂಸ್ಕೃತಿಗಳ ತವರು

ಯಶಸ್ವಿ ದೇವಾಡಿಗ

ಹಲವು ಸಂಸ್ಕೃತಿಗಳ ತವರು
ಯಶಸ್ವಿ ದೇವಾಡಿಗ

ಶಿರಸಿಯ ಪ್ರಮುಖ ರಂಗಕಲೆಗಳಲ್ಲಿ ಯಕ್ಷಗಾನ ಕೂಡ ಒಂದು. ನಮ್ಮೂರ ಜನರಿಗೆ ಯಕ್ಷಗಾನದ ಒಂದೊಂದು ಚಂಡೆಯ ತಾಳಗಳು ಮೈನವಿರೇಳಿಸುವಂತೆ ಮಾಡುತ್ತವೆ. ನನಗೋ ಬಿಸಿಲು ಅಂದರೆ ಆಜನ್ಮ ಶತ್ರು. ಅಂತೂ ಇಂತೂ ಪರೀಕ್ಷೆಗಳನ್ನು ಮುಗಿಸಿದ್ದಾಯಿತು. ಇನ್ನೇನು ಮಳೆಗಾಲ ಶುರುವಾಯಿತು. ಆದರೆ ಬಿಸಿಲುನಾಡಲ್ಲಿ ಮಳೆ ಎಲ್ಲಿ ಹೇಳಿ? ಆದರೆ ನನ್ನೂರಿಗೆ ಹೋಗುತ್ತೇನೆಂದು ಒಂದು ಕಡೆ ಖುಷಿ ಒಳಒಳೊಗೆ. ಆ ದಿನ ಬಂದಾಯ್ತು. ಹುಬ್ಬಳ್ಳಿ ಬರುವದರೊಳಗೆನೇ ಮಳೆರಾಯ ನನ್ನನ್ನು ಸ್ವಾಗತಿಸಿದ್ದ. ಮತ್ತೇ ಪುನಃ ಅಲ್ಲಿಂದ 3 ತಾಸು ನನ್ನ ಪ್ರಯಾಣ. ಪ್ರಯಾಣ ಮುಂದುವರೆಯಿತು. […]

ಕೊಡಗಿನ ಕೌಟುಂಬಿಕ ಹಾಕಿಹಬ್ಬ

ಕೆ.ವಿ.ಪರಮೇಶ್

ಕೊಡಗಿನ  ಕೌಟುಂಬಿಕ ಹಾಕಿಹಬ್ಬ
ಕೆ.ವಿ.ಪರಮೇಶ್

ಸಾವಿರಾರು ಕ್ರೀಡಾಭಿಮಾನಿಗಳು ಪಂದ್ಯಾಟ ವೀಕ್ಷಣೆಗೆ ಜಿಲ್ಲೆಯ ಮೂಲೆಮೂಲೆಯಿಂದ ಬರುವುದಿದೆ. ಅಷ್ಟೇ ಅಲ್ಲ ಜಿಲ್ಲೆಯ ಹೊರಗಿನ ಹಾಕಿಪ್ರೇಮಿಗಳ ಆಕರ್ಷಣೆಯೂ ಇಲ್ಲಿದೆ. ತಿಂಗಳ ಕಾಲ ಜರುಗುವ ಕ್ರೀಡೋತ್ಸವದ ಸ್ಥಳ ಕ್ರೀಡೆಯೊಂದಿಗೆ ಪರಂಪರೆ-ಸಂಸ್ಕೃತಿ ಮೇಳೈಸಿ ಹಬ್ಬದ ಸಂಭ್ರಮ ಸೃಷ್ಟಿಸುತ್ತದೆ. ಪ್ರಕೃತಿಯ ಮಡಿಲು, ಕರ್ನಾಟಕದ ಸ್ವಿಟ್ಜರ್ಲೆಂಡ್ ಎನಿಸಿಕೊಂಡಿರುವ ಪುಟ್ಟ ನಾಡು ಕೊಡಗು ದಿಟ್ಟೆದೆಯ ಜನರ ನೆಲವೂ ಹೌದು. ಮನೆಗೊಂದು ಬಂದೂಕು ಹೊಂದಿರುವಂತೆಯೇ ಇಲ್ಲಿ ಪುಟಾಣಿಗಳಿಂದ ವಯೋವೃದ್ಧರವರೆಗೂ ಎಲ್ಲರ ಕೈಯ್ಯಲ್ಲೂ ಕಾಣಸಿಗುವುದು ಹಾಕಿ ಸ್ಟಿಕ್. ಅಷ್ಟರಮಟ್ಟಿಗೆ ಹಾಕಿ ಕ್ರೀಡೆ ಇಲ್ಲಿ ಹಾಸುಹೊಕ್ಕಾಗಿದೆ. ಕ್ರೀಡೆ ಜತೆ […]

ಆರ್ಟಿಕಲ್ 15 ಅಸ್ಪಶ್ಯ ಭಾರತದ ಜ್ವಲಂತ ವಾಸ್ತವಗಳಿಗೆ ಕನ್ನಡಿ

ಹರ್ಷಕುಮಾರ್ ಕುಗ್ವೆ

ಆರ್ಟಿಕಲ್ 15 ಅಸ್ಪಶ್ಯ  ಭಾರತದ ಜ್ವಲಂತ ವಾಸ್ತವಗಳಿಗೆ ಕನ್ನಡಿ
ಹರ್ಷಕುಮಾರ್ ಕುಗ್ವೆ

ಈ ಕಾಲದ ಜಾತಿ ಸಂಕಥನವಾಗಿ, ಕಹಿ ಸತ್ಯಗಳನ್ನು ಮುಂದಿಡುತ್ತಾ, ಕೆಲವು ಪ್ರಶ್ನೆಗಳಿಗೆ ಉತ್ತರಿಸುತ್ತಲೇ, ಉತ್ತರವಿಲ್ಲದ ಪ್ರಶ್ನೆಗಳನ್ನು ಮತ್ತೆ ಮುನ್ನೆಲೆಗೆ ತರುವ ಈ ಸಿನಿಮಾ ಸಂವೇದನಾಶೀಲ ಮನಸ್ಸುಗಳನ್ನು ಗಾಢವಾಗಿ ತಟ್ಟುತ್ತದೆ. ಕಳೆದ ಒಂದು ದಶಕದಲ್ಲಿ ದೇಶದಲ್ಲಿ ದಲಿತರ ಮೇಲೆ ನಡೆದಿರುವ ಜಾತಿ ದೌರ್ಜನ್ಯಗಳು, ದಲಿತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಗಳು, ದಲಿತ ನಾಯಕರ ರಾಜೀ ಕಬೂಲಿಗಳು, ಎಚ್ಚೆತ್ತ ದಲಿತ ಯುವಜನರ ನಿರ್ಭೀತ ಸಂಘರ್ಷಮಯ ದಾರಿ, ಜಾತಿಗ್ರಸ್ತ ವ್ಯವಸ್ಥೆಯೊಳಗಿನ ಸಿಕ್ಕುಗಳು, ಇವೆಲ್ಲವನ್ನೂ ಒಂದು ಕಥೆಯಾಗಿ ಹೆಣೆದು ಇಡೀ ಭಾರತದ ಆತ್ಮವನ್ನು […]

ಸುದ್ದಿ ವಾಹಿನಿಯಲ್ಲಿ ಮೋಹಿನಿ!

ಬಾಲಚಂದ್ರ ಬಿ.ಎನ್.

ಸುದ್ದಿ ವಾಹಿನಿಯ ‘ಪವಿತ್ರ ರಾಜಕಾರಣ’ ಕಾರ್ಯಕ್ರಮದಲ್ಲಿ ಮೋಹಿನಿ ಬಿಚ್ಚಿಟ್ಟ ಸತ್ಯಗಳೇನು? ಆ್ಯಂಕರ್ ಕೊಟ್ಟ ಟಾಂಗ್ ಹೇಗಿತ್ತು? ಶಾಸಕರ ಚಿದಂಬರ ರಹಸ್ಯಗಳ ಮಹಾ ಸ್ಫೋಟ! ಕಾರ್ಯನಿರತ ವೇಶ್ಯೆಯರ ಸಂಘದ ಅಧ್ಯಕ್ಷೆ ಮೋಹಿನಿ ಅವರಿಗೆ ನಮ್ಮ ‘ಪವಿತ್ರ ರಾಜಕಾರಣ’ ಕಾರ್ಯಕ್ರಮಕ್ಕೆ ಸ್ವಾಗತ, ಸುಸ್ವಾಗತ. ಮೋಹಿನಿ: ನಮಸ್ಕಾರ. ನಿರೂಪಕ: ಮೋಹಿನಿಯವರೇ, ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿ ಅಂತ ಸಕ್ರಿಯವಾಗಿ ಹೋರಾಡುತ್ತಿರುವ ತಾವು, ಜನರಲ್ಲಿ ಮನೆಮಾತಾಗಿದ್ದೀರಿ. ಪಕ್ಷಾಂತರ ಮತ್ತು ಪವಿತ್ರ ರಾಜಕಾರಣದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಮೋಹಿನಿ: ನೀವು ಯಾವುದನ್ನು ಅಪರಾಧ ಎಂದು ಭಾವಿಸುತ್ತೀರೋ […]

ಊರ ನೆನಪು

-ಅಪೂರ್ವ ಡಿ'ಸಿಲ್ವ

ಊರ ನೆನಪು
-ಅಪೂರ್ವ ಡಿ'ಸಿಲ್ವ

ಊರ ನೆನಪು ಊರ ನೆನಪೆಂದರೆ ಹಾಗೆ ಒಡಲು ತುಂಬಿಸುತ್ತಿದ್ದ ಪಾತ್ರೆ ಅಂಗಡಿ ನೀರು ಕಾಯಿಸುವ ತಾಮ್ರದ ಕಡಾಯಿ ಬಡವರ ಸಿಲ್ವರದ ಬೋಸಿ ಅಜ್ಜಿಯ ಚೌಕಾಶಿ ಆ ಬಿಳಿಗಿರಿ ರಂಗ ಅವಳೆ ಪ್ರಿಯತಮೆ ಕುಸುಮಾಲೆ ರಂಗಭಾವನನ್ನು ನಂಬಿದ್ದ ಕಾಡು ಜನರು ಬೆಟ್ಟ ಇಳಿದಂತೆ ಅಮೃತಭೂಮಿ ಅಲ್ಲಿ ಸಮಾಧಿಯಾಗಿದ್ದ ರೈತನಾಯಕ ಅಂಗಡಿಯ ಎದುರು ಪಕ್ಕದಲ್ಲೇ ಲಿಂಬೆ ವ್ಯಾಪಾರಿ ಸಿದ್ಧರಾಜು ಸ್ವಲ್ಪ ಪಕ್ಕದಲ್ಲೇ ಮುಸ್ಲಿಂ ಅಪ್ಪ, ಮಗನ ಕುಂಕುಮ ಉಡುದಾರ, ಬುಡ್ಡಿದೀಪದಲ್ಲೇ ಕಟ್ಟಿಕೊಂಡ ಬದುಕು ಹಬ್ಬದಲ್ಲಿ ಸಿಗುವ ಬಿರಿಯಾನಿ ರಂಗದ […]