ತಲೆಮಾರುಗಳ ಅಂತರ

ತಲೆಮಾರುಗಳ ಅಂತರ

ತಲೆಮಾರುಗಳ ಅಂತರ ಹೊಸದೇನಲ್ಲ; ಕಾಲಾನುಸಾರ ಎಲ್ಲ ಪೀಳಿಗೆಗಳ ಅನುಭವಕ್ಕೂ ಬಂದಿರುತ್ತದೆ. ಈ ಅಂತರದ ದೆಸೆಯಿಂದ ಹೊಸ ಪೀಳಿಗೆಯಲ್ಲಿ ಒಂದು ಬಗೆಯ ಪುಳಕ ಉಂಟಾದರೆ, ಹಳೆಯ ತಲೆಮಾರು ಮತ್ತೊಂದು ರೀತಿಯ ಕಳವಳಕ್ಕೆ ಈಡಾಗುತ್ತದೆ. ಪ್ರತಿಯೊಂದು ತಲೆಮಾರು ಹೊಸ ಮತ್ತು ಹಳೆಯ ಪೀಳಿಗೆಯ -ಎರಡೂ ಬಗೆಯ ಅನುಕೂಲ, ಅನಾನುಕೂಲಗಳಿಗೆ ಒಡ್ಡಿಕೊಳ್ಳುವುದು ಅನಿವಾರ್ಯ; ಇಂದು ನಳನಳಿಸುವ ಕಿರಿಯ ಪೀಳಿಗೆಯೇ ನಾಳಿನ ಹಳಹಳಿಸುವ ಹಿರಿಯ ತಲೆಮಾರು! ಹಾಗಾದರೆ ಆಧುನಿಕ ತಂತ್ರಜ್ಞಾನದ ಪ್ರವಾಹದಲ್ಲಿ ತೇಲಾಡುತ್ತಿರುವ ಈ ಯುಗದ ವಿಶೇಷವೇನು? ವೇಗವೇ ಯುಗಧರ್ಮ, ಸ್ಥಿತ್ಯಂತರವೇ ಸ್ಥಿರ […]

ನಿಮ್ಮ ಪತ್ರಿಕೆಗೆ ಎರಡು ವರ್ಷ!

ಜನೆವರಿ 2020ರ ಸಂಚಿಕೆಯೊಂದಿಗೆ ‘ಸಮಾಜಮುಖಿ’ ಎರಡು ವರ್ಷಗಳನ್ನು ಪೂರೈಸಿ ಮೂರನೇ ವರ್ಷಕ್ಕೆ ಕಾಲಿರಿಸಲಿದೆ. ನಿಮ್ಮ ಪತ್ರಿಕೆಯ ಈ ಹೆಜ್ಜೆಗುರುತನ್ನು ಸಂಭ್ರಮದಿಂದ ಆಚರಿಸಲು 2020 ಜನೆವರಿ 4 ರಂದು ಸಡಗರದ ಸಮಾರಂಭ ಆಯೋಜಿಸಲಾಗಿದೆ. ಬೆಳಿಗ್ಗೆ 10 ಘಂಟೆಗೆ ಬೆಂಗಳೂರಿನ ಶಿವಾನಂದ ವೃತ್ತದ ಬಳಿಯ ಗಾಂಧೀ ಭವನದಲ್ಲಿ (ಕುಮಾರಪಾರ್ಕ್ ಪೂರ್ವ) ಪತ್ರಿಕೆಯ ಬಿಡುಗಡೆಯ ಜೊತೆಗೆ ದಿನಪೂರ್ತಿಯ ಚಟುವಟಿಕೆಗಳಿಗೆ ಆರಂಭ ನೀಡಲಾಗುವುದು. ಸಂಜೆ 5ಕ್ಕೆ ‘ಆಧುನಿಕ ಕರ್ನಾಟಕದ ಪರಿಕಲ್ಪನೆ’ ಕುರಿತ ವಿಚಾರ ಸಂಕಿರಣವೂ ಇದೆ. ನಾಡಿನ ಹೆಸರಾಂತ ಗಣ್ಯರು, ವಿಚಾರವಾದಿಗಳು ಮತ್ತು […]

ಆನೆಗೊಂದಿ ಪರಿಸರದಲ್ಲಿ ‘ಸಮಾಜಮುಖಿ ನಡಿಗೆ’

ರಮೇಶ್ ಗಬ್ಬೂರ

ಆನೆಗೊಂದಿ ಪರಿಸರದಲ್ಲಿ ‘ಸಮಾಜಮುಖಿ ನಡಿಗೆ’
ರಮೇಶ್ ಗಬ್ಬೂರ

ರಾಜ್ಯದ ಹಲವೆಡೆಯ ಸಾಹಿತಿಗಳು, ಕಲಾವಿದರು, ಪತ್ರಕರ್ತರು, ಪ್ರಾಧ್ಯಾಪಕರು, ವೈದ್ಯರು, ಅಧಿಕಾರಿಗಳು, ವಿದ್ಯಾರ್ಥಿಗಳನ್ನು ಒಳಗೊಂಡ ಐವತ್ತು ಜನರ ‘ಚಿಂತನಶೀಲ ಸಮಾಜಮುಖಿ’ ತಂಡ ನವೆಂಬರ್ 8 ರಿಂದ 10 ರವರೆಗೆ ಆನೆಗೊಂದಿ ಪರಿಸರದಲ್ಲಿ ಮೂರು ದಿನಗಳ ನಡಿಗೆಯನ್ನು ಯಶಸ್ವಿಯಾಗಿ ಪೂರೈಸಿತು. ಕರ್ನಾಟಕವನ್ನು ಪ್ರವಾಸಿಗರು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಸಮಾಜಮುಖಿ ಪತ್ರಿಕೆ ಬಳಗ ಈ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ. ಸಂಡೂರು, ಮೇಲುಕೋಟೆ, ಕೊಡಗು, ಬನವಾಸಿ, ಮಲೆಮಹದೇಶ್ವರ ಪರಿಸರದ ಯಶಸ್ವೀ ನಡಿಗೆಯ ನಂತರ 6ನೇ ನಡಿಗೆಯಾಗಿ ಕೊಪ್ಪಳ ಜಿಲ್ಲೆಯ ಆನೆಗೊಂದಿಯನ್ನು […]

ಕನ್ನಡ ಮತ್ತೆ ತಲೆ ಎತ್ತುವ ಬಗೆ

-ವೆಂಕಟೇಶ ಮಾಚಕನೂರ

ಕನ್ನಡ ಮತ್ತೆ ತಲೆ ಎತ್ತುವ ಬಗೆ
-ವೆಂಕಟೇಶ ಮಾಚಕನೂರ

ಈವರೆಗೂ ರಾಷ್ಟ್ರೀಯ ಭಾಷಾ ನೀತಿ ಅಥವಾ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸದೆ ಎಲ್ಲ ದೇಶಿ ಭಾಷೆಗಳು ಇಂಗ್ಲಿಷ್ ಭಾಷೆ ಅಡಿ ನಲುಗುವಂತಾಗಿದೆ. ಆಗಾಗ ಹಿಂದಿ ಗುಮ್ಮನ ಬೆದರಿಕೆ ಬೇರೆ. ಭಾರತದ ಸಂವಿಧಾನದಲ್ಲಿ ಒಳಗೊಂಡ ಎಲ್ಲ ಭಾಷೆಗಳೂ ಪ್ರಭುದ್ಧ ಭಾಷೆಗಳಾಗಿದ್ದು ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೇಂದ್ರ/ರಾಜ್ಯ ಸರಕಾರಗಳ ಮೇಲಿದೆ. ಕನ್ನಡ ತೇರನ್ನು ಎಳೆಯಲು ಹೊಸ ತಲೆಮಾರಿನ ಯುವಕರು ವಿಭಿನ್ನ ಬಗೆಯ ಆಲೋಚನೆಗಳಿಂದ ಕಾರ್ಯಪ್ರವರ್ತರಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ತಮ್ಮ ಕೆಲಸ ಕಾರ್ಯಗಳೊಂದಿಗೆ ಇವರು ತಾಯ್ನುಡಿಯ ಮೇಲಿನ ಪ್ರೀತಿ, ಕಳಕಳಿಯಿಂದಾಗಿ […]

ಕನ್ನಡಪರ ಹೋರಾಟಗಾರ ರಮಾನಂದ ಅಂಕೋಲ

ಕನ್ನಡಪರ ಹೋರಾಟಗಾರ  ರಮಾನಂದ ಅಂಕೋಲ

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ರಮಾನಂದ, ತಮ್ಮ ಇಂಜಿನಿಯರಂಗ್ ವೃತ್ತಿ ಬದುಕಿನ ಜೊತೆ ಕಳೆದ ಆರು ವಷರ್ದಿಂದ ಕನ್ನಡಪರ ಚಳವಳಿಯಲ್ಲಿ ಗುರುತಿಸಿಕೊಂಡವರು. ಕರ್ನಾಟಕ ರಣಧೀರ ಪಡೆ ಸಂಘಟನೆಯ ರಾಜ್ಯ ಸಮಿತಿ ಸದಸ್ಯರೂ ಆಗಿರುವ ರಮಾನಂದ, ಕನ್ನಡ ಚಳವಳಿಯ ಅನುಭವ, ನಂಟು, ಕನ್ನಡ ಬೆಳವಣಿಗೆಯ ಕುರಿತು ಇಲ್ಲಿ ಮಾತನಾಡಿದ್ದಾರೆ. ನಿಮ್ಮ ಭಾಷಾಭಿಮಾನದ ಅಭಿವ್ಯಕ್ತಿ ಹೇಗೆ? ನನ್ನ ಪ್ರಕಾರ ಭಾಷೆ ಅಂದರೆ ಅದು ಕುರುಡು ಅಭಿಮಾನದ ಸರಕಲ್ಲ. ಅದು ನಮ್ಮ ಬದುಕು. ಅದು ಪರಂಪರೆ. ನೆಲದ ಜನರ […]

ಪ್ರತಿಬಿಂಬ

ಮೇಯರ್ ಸೇಟಣ್ಣ! ಸಿ.ಎಸ್.ದ್ವಾರಕಾನಾಥ್ ಅವರ ‘ಆಗ ಮೇಯರ್ ಮುತ್ತಣ್ಣ ಈಗ ಮೇಯರ್ ಸೇಟಣ್ಣ’ ಲೇಖನ ಕುರಿತು ಎರಡು ಮಾತು. ಕನ್ನಡ ಸಾಂಸ್ಕøತಿಕ ಪರಂಪರೆಯ ಅರಿವು ಇಲ್ಲದ ವ್ಯಕ್ತಿಯೊಬ್ಬ ‘ಮಹಾಪೌರ’ ಆಗುವುದು ಎಷ್ಟು ಸರಿ? ಎಂಬುದನ್ನು ಲೇಖಕರು ತರ್ಕಬದ್ಧವಾಗಿ ಚರ್ಚಿಸಿದ್ದಾರೆ. ಬೆಂಗಳೂರಿನ ನಾಡಿಮಿಡಿತ ಸ್ಥಳೀಯರಿಗೆ ತಿಳಿದಿರುತ್ತದೆಯೇ ವಿನಾ, ಬೇರೆ ರಾಜ್ಯದಿಂದ ಬೆಂಗಳೂರಿಗೆ ವ್ಯಾಪಾರಕ್ಕಾಗಿ ಬಂದ ವ್ಯಕ್ತಿಗಳಿಗೆ ತಿಳಿದಿರಲು ಸಾಧ್ಯವಿಲ್ಲ. ಅಂಥ ವ್ಯಕ್ತಿಯನ್ನು ದೆಹಲಿಯ ಹೈಕಮಾಂಡ್ ಕನ್ನಡಿಗರ ಮೇಲೆ ಹೇರಿರುವುದು ಕನ್ನಡಿಗರ ದುರಾದೃಷ್ಟವೋ, ದೌರ್ಭಾಗ್ಯವೋ, ದೌರ್ಬಲ್ಯವೋ ಅರ್ಥವಾಗುತ್ತಿಲ್ಲ. -ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, […]

ಗೀತಸಾಹಿತಿ ಪ್ರಮೋದ್ ಮರವಂತೆ

ಮೌನೇಶ್

ಗೀತಸಾಹಿತಿ ಪ್ರಮೋದ್ ಮರವಂತೆ
ಮೌನೇಶ್

ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಮರವಂತೆಯ ಪ್ರಮೋದ್, ಕನ್ನಡ ಸಿನಿಮಾರಂಗದ ಈ ಹೊತ್ತಿನ ಪ್ರಸಿದ್ಧ ಯುವ ಗೀತಸಾಹಿತಿಗಳಲ್ಲಿ ಒಬ್ಬರು. ‘ಮೂಲೆ ಸೇರಿದ ಪದಗಳನ್ನು ತಂದು ಹಾಡಿನ ಸಾಲಿನಲ್ಲಿ ಕೂರಿಸುವ’ ಕೆಲಸವೇ ಅವರ ಗೀತಸಾಹಿತ್ಯದ ವಿಶೇಷತೆ. ನಿಮ್ಮ ಭಾಷೆಯ ಅಭಿಮಾನವನ್ನು ಸಾಮಾನ್ಯವಾಗಿ ಹೇಗೆ ಪ್ರದರ್ಶಿಸುತ್ತೀರಿ? ಕನ್ನಡ ನಮಗೆಲ್ಲಾ ಅನ್ನ ಕೊಡುತ್ತಿರುವ ಭಾಷೆ. ಕನ್ನಡದ ಅಳಿವಿನ ಭಯ ಕಾಡುತ್ತಿರುವ ರಾಜಧಾನಿಯಲ್ಲಿ ಕನ್ನಡವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಮುಂದಿರುವ ದೊಡ್ಡ ಸವಾಲು. ನಾನು ಸಾಮಾನ್ಯವಾಗಿ ಯಾವುದೇ ಮಾಲ್ ಅಥವಾ ಅಂಗಡಿ, ಎಲ್ಲೇ ಹೋದರೂ ಅಲ್ಲಿನ […]

ಕನ್ನಡಕ್ಕೆ ಬೇಕು ನುಡಿಹಮ್ಮುಗೆ

ಆನಂದ್ ಜಿ.

ಕನ್ನಡಕ್ಕೆ ಬೇಕು ನುಡಿಹಮ್ಮುಗೆ
ಆನಂದ್ ಜಿ.

ಅಳಿದೇ ಹೋಗಿದ್ದ ಹೀಬ್ರೂ ನುಡಿಯನ್ನು ನುಡಿಹಮ್ಮುಗೆಯ ಮೂಲಕ ಇಸ್ರೇಲಿಗಳು ಏಳಿಗೆ ಹೊಂದುವುದು ಸಾಧ್ಯವಾಗುವುದಾದರೆ… ಸಾವಿರಾರು ವರ್ಷಗಳ ಇತಿಹಾಸ ಇರುವ, ಆರು ಕೋಟಿ ಜನಸಂಖ್ಯೆಯಿರುವ, ಸಾಹಿತ್ಯ ಸಂಸ್ಕೃತಿಗಳ ಉಜ್ವಲ ಪರಂಪರೆಯಿರುವ ಕನ್ನಡಿಗರಿಗೆ ಏಕೆ ಸಾಧ್ಯವಿಲ್ಲ? ಯಾವುದೇ ಒಂದು ಜನಾಂಗದ ಏಳಿಗೆಯಲ್ಲಿ ಆ ಜನಾಂಗದ ಜನರಾಡುವ ನುಡಿಯ ಪಾತ್ರ ಬಹಳ ಮಹತ್ವದ್ದಾಗಿದೆ. ಒಂದು ಸಮಾಜದ ಒಗ್ಗಟ್ಟಿಗೆ, ಏಳಿಗೆಗೆ ಅತ್ಯಂತ ಮಹತ್ವದ ಸಾಧನವಾಗಿರುವುದು ಆ ಜನರಾಡುವ ನುಡಿಯೇ ಆಗಿದೆ. ನುಡಿಯೊಂದು ಬರಿಯ ಸಂಪರ್ಕ ಮಾಧ್ಯಮವಾಗಿರದೆ ಸಹಕಾರದ ಮಾಧ್ಯಮವಾಗಿದೆ ಮತ್ತು ಸಂಸ್ಕೃತಿ, ಪರಂಪರೆಗಳ […]

ಕನ್ನಡ ಕಟ್ಟುವ ಪರ್ಯಾಯ ಚಿಂತನೆಗಳು

ಡಾ.ಕೊಳ್ಚಪ್ಪೆ ಗೋವಿಂದ ಭಟ್

ಜಾಗತೀಕರಣದ ಬೀಸು ಭಾಷಾ ಕಲಿಕೆಯ ಮೇಲೆ ಪರಿಣಾಮ ಬೀರಿದಂತೆ ತಂತ್ರಜ್ಞಾನವನ್ನು ಸಾರ್ವಜನಿಕಗೊಳಿಸಿದೆ. ಈ ತಂತ್ರಜ್ಞಾನವನ್ನೇ ಸನ್ನೆಯಾಗಿಸಿ (ಲಿವೆರ್) ಕನ್ನಡವನ್ನು ಉಳಿಸಿ ಬೆಳೆಸುವ ಕೆಲ ಪರ್ಯಾಯ ಚಿಂತನೆಗಳು ಇಲ್ಲಿವೆ. ಕನ್ನಡ ಭಾರತದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದು; ಸುಮಾರು ಆರೂವರೆ ಕೋಟಿ ಜನರ ಭಾಷೆ ಇದಾಗಿದೆ. ಕರ್ನಾಟಕದ ಹೊರಗೂ ಕನ್ನಡಿಗರು ನೆಲೆಸಿದ್ದಾರೆ. ಮುಂಬಯಿ ಪ್ರದೇಶದಲ್ಲಿಯೇ ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮಂದಿ ಕನ್ನಡಿಗರು ನೆಲೆಸಿದ್ದಾರೆ. ಕನ್ನಡಿಗರಿಗೆ ಕನ್ನಡವನ್ನು ಆದ್ಯ ಭಾಷೆಯಾಗಿ ಉಳಿಸುವುದು ಇಂದಿನ ಪಂಥಾಹ್ವಾನವಾಗಿದೆ. ಜಾಗತೀಕರಣ ಕನ್ನಡ ಭಾಷೆಯ […]

ರಾಜಕಾರಣದಲ್ಲಿ ನೈತಿಕತೆ ಅಳವಡಿಸಿಕೊಳ್ಳಬೇಕಾದವರು ಯಾರು?

ರಾಜಕಾರಣದಲ್ಲಿ ನೈತಿಕತೆ ಅಳವಡಿಸಿಕೊಳ್ಳಬೇಕಾದವರು ಯಾರು?

ನಮ್ಮ ನಡುವಿನ ಅಪರೂಪದ ರಾಜಕಾರಣಿ ಬಿ.ಎಲ್.ಶಂಕರ್ ಅವರು ಇತ್ತೀಚೆಗಿನ ಅನರ್ಹ ಶಾಸಕರ ಪ್ರಕರಣದ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯ ಲೋಪಗಳನ್ನು ಪಕ್ಷಾತೀತ ದೃಷ್ಟಿಕೋನದಲ್ಲಿ ವಿದ್ವತ್ಪೂರ್ಣವಾಗಿ ವಿಶ್ಲೇಷಿಸಿದ್ದಾರೆ. ಕರ್ನಾಟಕದ 17 ಶಾಸಕರ ‘ಅನರ್ಹತೆ’ಯಂಥ ಅನೇಕ ಪ್ರಕರಣಗಳು ಈ ಹಿಂದಿನ ಹಲವಾರು ವರ್ಷಗಳಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರೂ ಈವರೆಗೂ ಪೂರ್ಣಪ್ರಮಾಣದ ತೀರ್ಪು ಬಂದಿರಲಿಲ್ಲ. ಈಗಲೂ ಇಷ್ಟೊಂದು ತರಾತುರಿಯಲ್ಲಿ ತೀರ್ಪುನೀಡಬೇಕಾದ ಸಂದರ್ಭವಿರಲಿಲ್ಲ. ಈ ಪ್ರಕರಣವನ್ನು ವಿಸ್ತøತ ಸಾಂವಿಧಾನಿಕ ಪೀಠದ ಪರಾಮರ್ಶೆಗೆ ಒಳಪಡಿಸಿ ಮುಂದೆ ಇಂತಹ ಪ್ರಕರಣಗಳು ಮರುಕಳಿಸಿದಲ್ಲಿ ನಿಭಾಯಿಸಲು ಸಾಧ್ಯವಾಗುವಂತಹ ಪೂರ್ಣಪ್ರಮಾಣದ ತೀರ್ಪು […]

ಅಯೋಧ್ಯೆ ತೀರ್ಪು: ಸಂವಿಧಾನ ಮೀರಿದ ನ್ಯಾಯಿಕ ಪರಿಕಲ್ಪನೆ

-ಮಾಧವ ಶೆಣೈ

ಅಯೋಧ್ಯೆ ತೀರ್ಪು:  ಸಂವಿಧಾನ ಮೀರಿದ ನ್ಯಾಯಿಕ ಪರಿಕಲ್ಪನೆ
-ಮಾಧವ ಶೆಣೈ

ಸುಪ್ರೀಮ್ ಕೋರ್ಟಿನ ಈ ನಿರ್ಣಯ ಸ್ಥೂಲವಾಗಿ ನಂಬಿಕೆ ಆಧಾರಿತ ಬಹುಮತಪರ ನಿರ್ಧಾರವೆಂದು ಹೇಳಬೇಕಾಗುತ್ತದೆ. ಪ್ರಚಲಿತ ಕಾನೂನು ಮತ್ತು ಪುರಾವೆಗಳನ್ನು ಬದಿಗಿಟ್ಟ ಈ ತೀರ್ಪು ಸಂವಿಧಾನ ಮೀರಿದ ನ್ಯಾಯಿಕ ಪರಿಕಲ್ಪನೆಯೊಂದಕ್ಕೆ ನಾಂದಿ ಹಾಡಿದೆ. ಅಯೋಧ್ಯೆ ಭೂವಿವಾದದಲ್ಲಿ ಸವೋಚ್ಚ ನ್ಯಾಯಾಲಯದ ಪಂಚಸದಸ್ಯರ ಸಾಂವಿಧಾನಿಕ ಪೀಠದ ಒಮ್ಮತದ ತೀರ್ಪು ಹಲವು ಕಾರಣಗಳಿಗೆ ‘ಮೊದಲೆಂಬ’ ಖ್ಯಾತಿ ಪಡೆದಿದೆ. ಈ ವಿವಾದಕ್ಕೆ ತುರ್ತು ಪರಿಹಾರ ನೀಡಲೇಬೇಕೆಂದು ದಿನವೂ ಎಡೆಬಿಡದೆ ಒಂದೂವರೆ ತಿಂಗಳುಗಳ ಕಾಲ ನಡೆದ ಈ ವಿಚಾರಣೆ ದೇಶದ ನ್ಯಾಯಿಕ ಇತಿಹಾಸದಲ್ಲಿಯೇ ಮೊದಲನೆಯದಾಗಿದೆ. ವಾದ-ಪ್ರತಿವಾದಗಳ […]

ಬಾಬಾಸಾಹೇಬರ ಎಚ್ಚರದ ನುಡಿ ರಾಜಕೀಯದಲ್ಲಿ ವ್ಯಕ್ತಿಪೂಜೆ ಎಂಬುದು ಅವನತಿಯ ಹಾದಿ

-ಸೋಲಿ ಜೆ. ಸೊರಾಬ್ಜಿ

ಭಾರತದ ವಿಷಯದಲ್ಲಿ ಈ ಎಚ್ಚರಿಕೆ ಹೆಚ್ಚು ಅಗತ್ಯ ಎಂದು ಅಂಬೇಡ್ಕರ್ ಒತ್ತಿ ಹೇಳಿದ್ದರು. ಭಾರತದ ರಾಜಕಾರಣದಲ್ಲಿ, ಭಕ್ತಿ, ಅಥವಾ ವ್ಯಕ್ತಿಪೂಜೆ ಎಂಬುದು ವಹಿಸುವ ಪಾತ್ರವನ್ನು ಗಮನಿಸಿದರೆ, ಜಗತ್ತಿನ ಇತರ ದೇಶದ ರಾಜಕಾರಣದಲ್ಲಿನ ಇಂತಹ ಬೆಳವಣಿಗೆಗಳ ಪ್ರಮಾಣ ನಮ್ಮ ದೇಶದ ಮುಂದೆ ಏನೂ ಅಲ್ಲ ಎನ್ನುವಷ್ಟು ಕಡಿಮೆ. ಬಾಬಾಸಾಹೇಬ್ ಅಂಬೇಡ್ಕರ್ ಎಂದೇ ಹೆಸರಾದ ಭೀಮರಾವ್ ರಾಮ್‍ಜೀ ಅಂಬೇಡ್ಕರ್ ನಮ್ಮ ಸಂವಿಧಾನ ರಚನೆಯ ಪ್ರಮುಖ ಶಿಲ್ಪಿ. ಸ್ವತಂತ್ರ ಭಾರತದ ಸಂವಿಧಾನವನ್ನು ರೂಪಿಸುವುದು ಒಂದು ಅಸಾಧಾರಣ ಕಾರ್ಯ. ಈ ಉದ್ದೇಶಕ್ಕಾಗಿ ಡಿಸೆಂಬರ್ […]

ಜೆ.ಎನ್.ಯು. ಪರಂಪರೆ ರಕ್ಷಣೆಗೆ ವಿದ್ಯಾರ್ಥಿ ಹೋರಾಟ

ಏಕತಾ ಮಲಿಕ್

ಜೆ.ಎನ್.ಯು. ಪರಂಪರೆ ರಕ್ಷಣೆಗೆ ವಿದ್ಯಾರ್ಥಿ ಹೋರಾಟ
ಏಕತಾ ಮಲಿಕ್

ಕೆಲವರು ಜನತೆಯನ್ನು ನಂಬಿಸಲಿಕ್ಕೆ ಯತ್ನಿಸುತ್ತಿರುವಂತೆ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‍ಯು) ಶಿಕ್ಷಕರು ಮತ್ತು ಪ್ರಾಧ್ಯಾಪಕರು ಹುಡುಗರ ತಲೆಯಲ್ಲಿ ಮಾಕ್ರ್ಸ್‍ವಾದಿ ವೈಚಾರಿಕತೆಯನ್ನಾಗಲೀ, ಎಡಪಂಥೀಯ ಸಿದ್ಧಾಂತವನ್ನಾಗಲೀ ತುರುಕಲುಯತ್ನಿಸುತ್ತಿಲ್ಲ. ಅವರು ತಮ್ಮ ಕರ್ತವ್ಯವನ್ನಷ್ಠೆ ನಿರ್ವಹಿಸುತ್ತಿದ್ದಾರೆ ಮತ್ತು ವಿಶ್ವವಿದ್ಯಾಲಯದ ಕೀರ್ತಿಗೆ ತಕ್ಕಂತೆ ಶೈಕ್ಷಣಿಕ ಉತ್ಕøಷ್ಟತೆಯ ಮಟ್ಟವನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ನಾನು ಹಾಜರಾದ ಮೊದಲ ತರಗತಿಯಲ್ಲೇ ನನ್ನ ಶಿಕ್ಷಕರಾದ ಪರ್ನಾಲ್ ಚಿರ್‍ಮುಲೆ ಅವರು ಕಪ್ಪು ಹಲಗೆಯ ಮೇಲೆ ಬರೆದ ಮೊದಲ ವಾಕ್ಯವೇ, ‘ನಮಗೆ ಯಾವ ಶಿಕ್ಷಣವೂ ಬೇಕಿಲ್ಲ’. ಅದು ಪಿಂಕ್ ಪ್ಲಾಯ್ಡ್ ಬ್ಯಾಂಡ್‍ನ ಹಾಡಿನ […]

ಮುಖ್ಯಚರ್ಚೆಗೆ-ಪ್ರವೇಶ

ಈ ಸಹಸ್ರಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಎಡವುತ್ತಿದ್ದೇವೆಯೇ..? ಈ ಸಹಸ್ರಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಅಶಕ್ತರೂ ಅಸಫಲರೂ ಆಗುತ್ತಿದ್ದೇವೆಂಬ ಹೆದರಿಕೆ ನಮ್ಮನ್ನು ಕಾಡುತ್ತಿದೆ. ಈ ಮಿಲೆನಿಯಮ್ ಮಕ್ಕಳು ತಂದೆ-ತಾಯಂದಿರ ಹಾಗೂ ಗುರು-ಹಿರಿಯರ ಮಾತಿಗಿಂತಲೂ ನಾವು ಕೇಳರಿಯದ ಯಾವುದೋ ಇಂಟರ್‍ನೆಟ್ ಸೆನ್ಸೇಶನ್ ಪ್ರಭಾವಕ್ಕೆ ಒಳಗಾಗಿರುವಂತೆ ತೋರುತ್ತಿದೆ. ಮನೆಯವರೊಡನೆ ಕಡಿಮೆ ಸಂಗಡ ಹಾಗು ಹಿರಿಯರ ಮಾತಿಗೆ ಇಲ್ಲದ ಮನ್ನಣೆಯ ಜೊತೆಗೆ ದಿನದ ಇಪ್ಪತ್ತುನಾಲ್ಕು ಗಂಟೆಯೂ ಮೊಬೈಲ್ ಫೋನಿನಲ್ಲಿ ಮಗ್ನರಾಗಿರುವಂತೆ ತೋರುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಅಗಾಧ ಮಾಹಿತಿ ಸ್ಫೋಟವಾಗಿದೆ. ಅಂತರ್ಜಾಲದ […]

ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಸಾಧ್ಯವೇ..?

ಜನೆವರಿ ಸಂಚಿಕೆಯ ಮುಖ್ಯ ಚರ್ಚೆ: ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆಯ ವಿವರಗಳನ್ನಾಗಲಿ ತೀವ್ರತೆಯನ್ನಾಗಲಿ ನಿಮ್ಮ ಮುಂದೆ ಬಿಚ್ಚಿಡುವ ಅಗತ್ಯವಿಲ್ಲ. ಬೆಂಗಳೂರಿನ ನಾಗರಿಕರು ಪ್ರತಿದಿನವೂ ಈ ನರಕಯಾತನೆಯನ್ನು ಅನುಭವಿಸುತ್ತಲೇ ಬಂದಿದ್ದಾರೆ. ಬೇರೆಡೆಯಿಂದ ಬೆಂಗಳೂರಿಗೆ ಬರುವ ಕನ್ನಡಿಗರು ದಟ್ಟಣೆಯ ತೀವ್ರತೆಗೆ ಕಕ್ಕಾಬಿಕ್ಕಿಯಾಗಿ ಯಾವಾಗ ತಮ್ಮ ಊರಿಗೆ ಮರುಳುವೆವೋ ಎಂದು ಪರಿತಪಿಸುತ್ತಾರೆ. ಈ ಸಂಚಾರ ದಟ್ಟಣೆಯಿಂದ ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಆಗುತ್ತಿರುವ ಹಾನಿಯನ್ನು ಇಲ್ಲಿ ಸಂಕ್ಷಿಪ್ತವಾಗಿ ಪಟ್ಟಿ ಮಾಡಿದೆ. ಬೆಂಗಳೂರಿನ ಟ್ರಾಫಿಕ್ ಕಂಜೆಶನ್‍ನಲ್ಲಿ ವೃತ್ತಿನಿರತ ಸಾಮಾನ್ಯ ನಾಗರಿಕನೊಬ್ಬ ದಿನಕ್ಕೆ ಸರಾಸರಿ ಮೂರು ಘಂಟೆ […]

ಈ ಸಹಸ್ರಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಎಡವುತ್ತಿದ್ದೇವೆಯೇ..?

-ಮೋಹನದಾಸ್

ಕಳೆದ ಒಂದು ದಶಕದಲ್ಲಿ ಬೆಳೆದು ನಿಂತಿರುವ ಈ ಮಾನಸಿಕತೆಯ ಬಗ್ಗೆ ಇದೀಗ ಸಂಶೋಧನೆಗಳು ನಡೆಯುತ್ತಿವೆಯಾದರೂ ಈ ಸಮೂಹಸನ್ನಿಯ ಅಪಾಯಗಳನ್ನು ಅಂಕಿಅಂಶ-ಪುರಾವೆಗಳೊಡನೆ ದಾಖಲಿಸಿದ ಪುಸ್ತಕಗಳ ಕೊರತೆಯಿದೆ. ದಿನೇದಿನೇ ಪೆಡಂಭೂತವಾಗಿ ನಮ್ಮ ಮಕ್ಕಳ ಮಾನಸಿಕತೆಯನ್ನು ಹಾಳುಗೆಡವುತ್ತಿರುವ ಈ ಸಮೂಹ ಮಾಧ್ಯಮ ಸನ್ನಿಯ ಬಗ್ಗೆ ಅಧಿಕಾರಯುತವಾಗಿ ಎಚ್ಚರ ನೀಡಬಲ್ಲ ವಕ್ತಾರರೂ ಬೇಕಾಗಿದ್ದಾರೆ. ಡಾನಲ್ಡ್ ಟ್ರಂಪ್ ವಿರುದ್ಧ ಅಮೆರಿಕೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಂತು ಸೋತ ಅಭ್ಯರ್ಥಿ ಹಿಲರಿ ಕ್ಲಿಂಟನ್‍ರವರು It takes a whole village to bring up a childಎಂದು […]

ಮಿಲೇನಿಯಂ ಮಕ್ಕಳನ್ನು ಬೆಳೆಸುವ ನೋವು-ನಲಿವು

-ಡಾ.ಕೆ.ಎಸ್.ಪವಿತ್ರ

ಮಕ್ಕಳನ್ನು ಬೆಳೆಸುವ ಬಗೆಗಿನ ಈ ಚರ್ಚೆಯಲ್ಲಿ ಪಾಲ್ಗೊಳ್ಳುವಾಗ ಒಬ್ಬ ಮನೋವೈದ್ಯೆಯಾಗಿ, ಒಬ್ಬ ಶಿಕ್ಷಕಿಯಾಗಿ, ಮತ್ತು ಎರಡು ಮಕ್ಕಳ ತಾಯಿಯಾಗಿ ನನಗೆ ಹಲವು ಅಂಶಗಳು ಕಾಣುತ್ತವೆ. ಮಕ್ಕಳ ಫೋಷಣೆ-ಪಾಲನೆ-ಬೆಳೆಸುವಿಕೆ ಇವು ಯಾವ ಕಾಲದಲ್ಲಿಯೂ `ಸುಲಭ’ ಎಂದು ಪರಿಗಣಿಸಲ್ಪಟ್ಟಿರಲಿಲ್ಲ! ಒಬ್ಬ ತಾಯಿ ಬಂದು ಕೇಳಿದರು, “ಡಾಕ್ಟ್ರೇ, ನನ್ನ ಮಕ್ಕಳನ್ನು ತುಂಬಾ ಪ್ರೀತಿಯಿಂದ ಬೆಳೆಸಿದೆ. ಈಗ ದೊಡ್ಡವರಾದ ಮೇಲೆ ಅವರು ನಮ್ಮೊಡನೆ ನಡೆದುಕೊಳ್ಳುವ ರೀತಿಯನ್ನು ನೋಡಿದ್ರೆ ಒಮ್ಮೊಮ್ಮೆ ಅನ್ನಿಸುತ್ತೆ… ಮಕ್ಕಳು ಮಕ್ಕಳು ಅಂತ ನಾವು ಯಾಕೆ ಇಷ್ಟು ಕಷ್ಟಪಡ್ತೀವಿ? ನಮ್ಮ ಬದುಕಿಗೆ […]

‘ಡಿಜಿಟಲ್‍ದಾಹ’ದ ಭ್ರಮಾಧೀನ ವಾಸ್ತವ

ಡಾ.ಮಹಾಬಲೇಶ್ವರ ರಾವ್

ವಾಸ್ತವದ ಬದುಕಿಗೆ ಪ್ರತಿಸ್ಪಂದಿಸಬೇಕಾದ ಹೊತ್ತಿನಲ್ಲಿ ಆಧುನಿಕ ತಂತ್ರಜ್ಞಾನವು ತರುಣ ತರುಣಿಯರಲ್ಲಿ ಅಪಕ್ವವೂ ಅಪ್ರಸ್ತುತವೂ ಆದ ಪ್ರತಿಸ್ಪಂದನಗಳನ್ನು ರೂಪಿಸುತ್ತಿದೆ. ಬೆಳೆಯುತ್ತಿರುವ ಮಿದುಳುಗಳು ಅವಾಸ್ತವಿಕ ಪ್ರಪಂಚದ ಮಾದರಿಗಳನ್ನು ಸ್ವೀಕರಿಸಿ ನಿಜಜೀವನದ ಸವಾಲುಗಳನ್ನು ಎದುರಿಸಲಾರದೆ ಸೋತು ಸುಣ್ಣವಾಗುತ್ತಿವೆ. ಮದುವೆ ಸಮಾರಂಭ. ಗಂಡ, ಹೆಂಡತಿ, ಹತ್ತು ವರ್ಷದ ಮಗಳು, ಎರಡು ವರ್ಷದ ಮಗ ಒಟ್ಟಿಗೆ ಬಾಳೆಲೆಯ ಮುಂದೆ ಕೂತಿದ್ದಾರೆ. ಪುಟ್ಟ ಹುಡುಗನ ಕೈಲಿ ದೊಡ್ಡ ಮೊಬೈಲ್, ಆಗಾಗ್ಗೆ ಚಿತ್ರಗಳನ್ನು, ಹಾಡುಗಳನ್ನು ಬದಲಿಸಿಕೊಡೆಂದು ತಾಯಿಗೆ ಕೈಸನ್ನೆಯಲ್ಲಿ ಸೂಚಿಸುತ್ತಾನೆ. “ಈಗ ಬೇಡ, ಊಟಮಾಡಿ ಆಮೇಲೆ ನೋಡುವಿಯಂತೆ” […]

ರಂಗುರಂಗಾದ ಗುಂಗುಗಳು

-ಯೋಗೇಶ್ ಮಾಸ್ಟರ್

ನಮ್ಮ ದೇಶದಲ್ಲಿ ಫೋಷಕರಿಗಾಗಲಿ, ಶಿಕ್ಷಕರಿಗಾಗಲಿ ಮನೋವೈಜ್ಞಾನಿಕವಾಗಿ ಮಕ್ಕಳನ್ನು ಅರಿಯುವ ತರಬೇತಿಯೇ ಅತಿ ವಿರಳವಾಗಿದೆ. ಅಸಹಾಯಕರೂ, ಪರಾವಲಂಬಿಗಳೂ ಮತ್ತು ಮುಗ್ಧರೂ ಆಗಿರುವ ಮಕ್ಕಳಿಗೆ ತಾವೇ ಎಲ್ಲವನ್ನೂ, ಜ್ಞಾನ, ದೃಷ್ಟಿ, ದಾರಿ, ಗುರಿಯನ್ನು ನೀಡುವವರಾಗಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ ಬಾಲ್ಯವೆಂಬುದು ಸಾಮಾಜಿಕ ರಚನೆಯ ಮೂಲ ತಂತು. ಸಮಾಜದ ಹಿರಿಯರು ಮತ್ತು ಕುಟುಂಬವು ಮಕ್ಕಳನ್ನು ಹೇಗೆ ನೋಡುತ್ತಾರೆ ಎಂಬುದರ ಮೇಲೆ ಮಕ್ಕಳು ಸಮಾಜದ ಹಿರಿಯರನ್ನು ಮತ್ತು ಕುಟುಂಬವನ್ನು ನೋಡುವ ಬಗೆ ನಿರ್ಧರಿತವಾಗುತ್ತದೆ. ಅದೇ ಸಮಾಜದ ರಚನೆಯಲ್ಲಿ ಮುಖ್ಯ ತಂತುವಾಗಿ ಪರಿಣಮಿಸುವುದು. ಮಕ್ಕಳಲ್ಲಿ ಸಮಾಜವು […]

ಮಕ್ಕಳ ಬಹುಮುಖ ಬೆಳವಣಿಗೆ ಯಾರ ಹೊಣೆ?

-ಮಾಲವಿಕಾ ಕಪೂರ

ತಂತ್ರಜ್ಞಾನ ಅಷ್ಟು ಉಪಯುಕ್ತವಾಗಿದ್ದರೆ ಕಂಪ್ಯೂಟರ್ ಕ್ರಾಂತಿಯ ರೂವಾರಿ ಸ್ಟೀವ್ ಜಾಬ್ ಮತ್ತು ಸಿಲಿಕಾನ್ ವ್ಯಾಲಿಯ ಪಾಲಕರು ತಮ್ಮ ಮಕ್ಕಳನ್ನು ‘ಟೆಕ್’ ಇಲ್ಲದ ಶಾಲೆಗೆ ಯಾಕೆ ಕಳುಹಿಸಿದರು? ಅವರ ಮನೆಯಲ್ಲೂ ಟೆಕ್ ಬಳಕೆಯೇ ಇರಲಿಲ್ಲ. ಈ ಮಹಾನೀಯರ ಮಕ್ಕಳಿಗೆ ಯಾವುದು ಕೆಟ್ಟದ್ದೋ ಅದು ನಮ್ಮ ಮಕ್ಕಳಿಗೆ ಒಳ್ಳೆಯದೇ? ನಮ್ಮ ಮಕ್ಕಳ ಬಹುಮುಖ ಬೆಳವಣಿಗೆಗೆ ಮತ್ತು ಮಾನಸಿಕ ಆರೋಗ್ಯಕ್ಕೆ ಹೊಣೆಗಾರರು ನಾವು ಹೌದೇ ಅಥವಾ ಅಲ್ಲವೇ ಎಂಬ ಪ್ರಶ್ನೆ ನಮ್ಮ ಮುಂದೆ ಒಂದು ಪೆಡಂಭೂತವಾಗಿ ನಿಂತಿದೆ. ಹಿಂದಿನ ಕಾಲದಿಂದಲೂ ಮಕ್ಕಳ […]

1 2 3