ಸಹಸ್ರಮಾನದ ಬಾಲರು ಯಾವುದಕ್ಕೂ ಸೋಲರು!

-ಪಿ.ಬಿ.ಕೋಟೂರ

ಅವರಿಗೆ ಕೈಯಲ್ಲಿ ಮೊಬೈಲಿರದಿದ್ದರೆ ಬದುಕು ಬೇಸರವಾಗುತ್ತದೆ. ವೈಫೈ ಇಲ್ಲದಿದ್ದರಂತೂ ಜೀವನವೇ ಶೂನ್ಯ. ಇದಕ್ಕೆಲ್ಲ ಕಾರಣ ಅವರಿಗೆ ಮನೆಯಲ್ಲಿ ಸಿಗದ ಸೂಕ್ತ ವಾತಾವರಣ. ತಂತ್ರಜ್ಞಾನದ ನಿರಂತರ ಸಂಶೋಧನೆಯಿಂದ ‘ನಿನ್ನೆಯದು ನಿನ್ನೆಗೆ, ಇಂದಿನದು ಇಂದಿಗೆ’ ಬೇಕೆನ್ನುವ ಬಳಕೆದಾರ ಸುಸ್ಥಿತಿ ಮತ್ತು ಮನಸ್ಥಿತಿಯ ಪರಿಣಾಮವಾಗಿ, ಇಂದಿವ ಮನೆ-ಮನಗಳು ವಿದ್ಯುನ್ಮಾನ ಆಲಯಗಳಾಗಿ ಮಾರ್ಪಡುತ್ತಿವೆ. ಇಂಥ ವಾತಾವರಣದಲ್ಲಿ ಹುಟ್ಟಿ ಬೆಳೆಯುತ್ತಿರುವವರು ನಮ್ಮ ಸಹಸ್ರಮಾನದ ಮಕ್ಕಳು. ಈ ಮಕ್ಕಳ ತಂದೆ-ತಾಯಿಗಳು, ತಮ್ಮ ಯಾವುದೇ ಹಿರಿಯ ತಲೆಮಾರು ಕಂಡರಿಯದ ಅಪರಿಮಿತ ಸೌಲಭ್ಯ, ಸೌಕರ್ಯಗಳನ್ನು ಪಡೆದುಕೊಂಡಿದ್ದಾರೆ. ಬ್ಯಾಂಕಿನಲ್ಲಿ ಹಣ, […]

ಮಕ್ಕಳೊಂದಿಗಿನ ಸಂವಹನ ಭವಿಷ್ಯದ ಆಶಾಕಿರಣ

-ಡಾ.ವಸುಂಧರಾ ಭೂಪತಿ

ಮಕ್ಕಳನ್ನು ಅರ್ಥಮಾಡಿಕೊಳ್ಳಲು ಅಪ್ಪ, ಅಮ್ಮ ಮೊದಲಿಗೆ ಉತ್ತಮ ಕೇಳುಗರಾಗಬೇಕು. ಮಕ್ಕಳು ಹೇಳುವುದನ್ನು ನಿಧಾನವಾಗಿ ಕೇಳಿಸಿಕೊಂಡು ಅದಕ್ಕೆ ಸ್ಪಂದಿಸಬೇಕು. ಯಾವುದೇ ಉತ್ತಮ ಸಂಬಂಧದಲ್ಲಿ ಸಂವಹನ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲಿ ಅಪ್ಪ, ಅಮ್ಮ ಮತ್ತು ಮಕ್ಕಳ ನಡುವೆ ಅತ್ಯಂತ ಉತ್ತಮ ಸಂವಹನವಿರಬೇಕು. ಇದು ಹೇಳಿದಷ್ಟು ಸುಲಭವಿಲ್ಲ, ಒಂದು ಸಂಕೀರ್ಣ ವಿಷಯ. ಇದಕ್ಕೆ ಕಾರಣ ಅಪ್ಪ, ಅಮ್ಮ ತಾವು ಮಕ್ಕಳ ಮ್ಯಾನೇಜರ್‍ಗಳಂತೆ ಎಂದು ತಿಳಿಯುವುದು. ಅವರು ಮಕ್ಕಳಿಗೆ ನೀತಿನಿಯಮಗಳನ್ನು ಹೇರುತ್ತಾರೆ. ಅವರಿಗೆ ಅದು ಮಾಡಬೇಡ, ಇದು ಮಾಡು, ಹಾಗೆ ಆಡಬೇಡ, […]

ಅಪರಿಚಿತ ಅನುಭವದ ಜೊತೆಗೆ ಅಸ್ಪಷ್ಟ ಗುರಿಯೆಡೆಗೆ!

ಡಾ.ವಿನತೆ ಶರ್ಮ

ಅಂತರ್ಜಾಲದ ಗುರುವನ್ನು ಬಲವಂತವಾಗಿ ನಮ್ಮ ಮೇಲೆ ಹೇರಿಕೊಂಡು ಅಪರಿಚಿತ ಅನುಭವಕ್ಕೆ ಈಡಾದ ಸಂದಿಗ್ಧ ಕಾಲದಲ್ಲಿ ನಾವಿದ್ದೇವೆ. ಯಾವ ದಾರಿಯ ಕಡೆ ಹೊರಳಬೇಕು, ಹೊಸದಾರಿಗಳು ಎಲ್ಲಿಗೆ ಮುಟ್ಟಿಸುತ್ತವೆ ಎಂಬುದು ನಮಗಿನ್ನೂ ಸ್ಪಷ್ಟವಾಗಿಲ್ಲ. ನಮಗೇ ದಾರಿ ಅಸ್ಪಷ್ಟವಾಗಿರುವಾಗ ನಮ್ಮ ಮಕ್ಕಳಿಗೆ ಇಗೋ ಈ ದಾರಿಯಲ್ಲಿ ಹೋಗೋಣ, ನಮ್ಮ ಗಮ್ಯಸ್ಥಾನ ಅಲ್ಲಿದೆ ಎಂದು ಹೇಳಲು ಹೇಗೆ ಸಾಧ್ಯ? ಆಫ್ರಿಕಾ ಖಂಡದಲ್ಲೊಂದು ಆಡುಮಾತಿದೆ -ಮಗುವೊಂದನ್ನು ಬೆಳೆಸಲು ಇಡೀ ಹಳ್ಳಿಯೇ ಒಗ್ಗಟ್ಟಾಗಿ ಶ್ರಮಿಸುತ್ತದೆ. ಈ ಮಾತು ಅಕ್ಷರಶಃ ನಿಜವೇ ಅನ್ನುವ ಪ್ರಶ್ನೆ ನಮ್ಮಲ್ಲೇಳಬಹುದು. ಪೂರ್ತಿಯಾಗಿ […]

ಕನಿಷ್ಟ ಹತ್ತನೇ ಕ್ಲಾಸಿನ ತನಕ ನಮಗೆ ಸ್ವಂತ ಮೊಬೈಲು ಬೇಡ

-ಅಂತಃಕರಣ

ನಾನು ಗಮನಿಸಿದ ಹಾಗೆಯೇ ನನ್ನ ಕೆಲ ಸ್ನೇಹಿತರು ಅಪರಿಚಿತರೊಂದಿಗೆ ಜಾಲತಾಣಗಳ ಮೂಲಕ ಸ್ನೇಹಿತರಾಗಿದ್ದಾರೆ ಹಾಗೂ ಅವರ ಜೊತೆ ಸಂಪರ್ಕದಲ್ಲಿದ್ದಾರೆ. ನನ್ನ ಪ್ರಕಾರ ಇದು ಬಹಳ ಹಾನಿಕಾರಕ. ಮೊಬೈಲಿನಿಂದ, ಇದರ ಮೂಲಕ ಬಳಸುವ ಅಂತರ್ಜಾಲದಿಂದ ನನಗಾದ ಉಪಯೋಗಗಳು ಹಲವಾರಿವೆ. ನಾನು ಪ್ರಮುಖವಾಗಿ ಕ್ರೀಡಾ ಲೇಖನಗಳನ್ನು ಬರೆಯುವವ. ಅದಕ್ಕೆ ಬೇಕಾಗುವಂತಹ ಎಲ್ಲಾ ರೀತಿಯ ಮಾಹಿತಿಗಳನ್ನು, ಅಂಕಿಅಂಶಗಳನ್ನು ಹಾಗೂ ಪಂದ್ಯಗಳ ಹೈಲೈಟ್ಸ್‍ಗಳನ್ನು ಒದಗಿಸುವಲ್ಲಿ ಅಂತರ್ಜಾಲವು ಬಹಳ ಒಳ್ಳೆಯ ರೀತಿಯಲ್ಲಿಯೇ ಉಪಯೋಗಕ್ಕೆ ಬಂದಿದೆ. ಇದರೊಂದಿಗೆ ಹಲವಾರು ಹೊಸ ವಿಷಯಗಳನ್ನು ಸಹ ಅಂತರ್ಜಾಲವು ನನಗೆ […]

ಮಕ್ಕಳು ಬೆಳೆಯುವ ಪರಿ ತಂದೆಯೊಬ್ಬನ ಆತಂಕಗಳು

-ಆರ್.ವಿ.ಪ್ರಕಾಶ್

ಸಾಮಾಜಿಕ, ಆರ್ಥಿಕ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇತ್ತೀಚೆಗೆ ಆಗಿರುವ ಅಗಾಧ ಬದಲಾವಣೆಗಳ ಮಧ್ಯೆ ನಮ್ಮ ಮಕ್ಕಳ ಬೆಳವಣಿಗೆಯನ್ನು ಗ್ರಹಿಸುವುದು ಹೇಗೆ? ಸರಿ-ತಪ್ಪು ನಿರ್ಧರಿಸುವವರು ಯಾರು? ನಾವು ಬೆಳೆದ ಮಾನದಂಡಗಳಿಂದ ಅವರನ್ನು ಅಳೆಯುವುದು ಸರಿಯೇ? ಇದು ಪೋಷಕರೇ ವಿದ್ಯಾರ್ಥಿಗಳಾಗುವ ಕಾಲ! ಮಗುವೊಂದರ ಬೆಳವಣಿಗೆಯಲ್ಲಿ ವಂಶವಾಹಿ ಹಾಗೂ ಪರಿಸರ ಎರಡೂ ಪ್ರಭಾವಿಸುತ್ತವೆ/ನಿರ್ಧರಿಸುತ್ತವೆ ಎನ್ನಲಾಗುತ್ತದೆ. ವಂಶವಾಹಿಯಿಂದ ಬಂದ ಗುಣ ಅವಗುಣಗಳು ನಮ್ಮ ಹಿಡಿತದಲ್ಲಿಲ್ಲ. ಆದರೆ ವಂಶವಾಹಿಯಿಂದ ಬರುವ ಅವಗುಣಗಳನ್ನು ಸ್ವಪ್ರಯತ್ನದಿಂದ ಸಾಧ್ಯವಿದ್ದಷ್ಟು ಸರಿಪಡಿಸಬಹುದೆನ್ನುತ್ತಾರೆ ಪಂಡಿತರು. ಮಕ್ಕಳ ಬೆಳವಣಿಗೆಯ ಹಂತದಲ್ಲಿನ ಪರಿಸರ […]

ಫಿ ಎಂಬ ಅಂದದ ಅಳತೆಗೋಲು ಅರ್ಥಾತ್ ಸುವರ್ಣಾನುಪಾತ

- ಪೂರ್ಣಿಮಾ ಮಾಳಗಿಮನಿ

ಕ್ರಿಯಾಶೀಲತೆಗೆ, ಸೃಜನಶೀಲತೆಗೆ ಪ್ರಕೃತಿಯಿಂದ ಯಾವಾಗಲೂ ಪ್ರೇರಿತನಾಗುವ ಮಾನವನಿಗೆ ಫಿ ಅಥವಾ ಗೋಲ್ಡನ್ ರೇಶಿಯೋ ಒಂದು ವರದಾನವೇ ಸರಿ. ನಿಮ್ಮ ಸುತ್ತ ಇರುವ ವಸ್ತುಗಳಲ್ಲಿ ಫಿ ಹುಡುಕಲು ಇಲ್ಲಿದೆ ಮಾಹಿತಿ. ಇತ್ತೀಚೆಗೆ ನೋಡಿದ ಒಂದು ಸಿನಿಮಾದಲ್ಲಿ (ಸೂಪರ್ 30, ಹಿಂದಿ) ನಾಯಕಿ, ನಾಯಕನ ಕುರಿತು, ‘ನೀನೇಕೆ ನನ್ನನ್ನು ಅತಿಯಾಗಿ ಪ್ರೀತಿಸುತ್ತಿಲ್ಲ?’ ಎಂದು ಜಗಳ ಮಾಡುತ್ತಾಳೆ. ಉತ್ತರಿಸದೆ ಮುಗುಳುನಗುವ ಅವನನ್ನು ಮತ್ತಷ್ಟು ಕಾಡುತ್ತಾ, ‘ನಾನು ಸುಂದರವಾಗಿಲ್ಲವೇ?’ ಎಂದು ಕೇಳುತ್ತಾಳೆ. ಅದಕ್ಕವನು, ‘ಸುಂದರವಾಗೇನೋ ಇದ್ದೀಯ ಆದರೆ 75 ಪ್ರತಿಶತ ಮಾತ್ರ.’ ಎಂದು […]

ಅಲಾಸ್ಕಾದಲ್ಲಿ ಕರಗುತ್ತಿರುವ ಮಂಜು ಜಗತ್ತಿಗೆ ಎಚ್ಚರಿಕೆಯ ಗಂಟೆ

-ಎಂ.ಕೆ.ಆನಂದರಾಜೇ ಅರಸ್

ಉತ್ತರ ಅಮೆರಿಕಾದ ಗಡಿನಾಡಾಗಿರುವ ಅಲಾಸ್ಕಾ ವಿಷಮಸ್ಥಿತಿಯಲ್ಲಿರುವ ಜಾಗತಿಕ ತಾಪಮಾನದ ಅಸ್ಥಿರ ಚಿಹ್ನೆಗಳಿಗೆ ಸೂಚನೆಯಾಗಿದೆ. ಇತ್ತೀಚೆಗಿನ ಅಲಾಸ್ಕಾದ ಬೇಸಿಗೆಗಳು ಹಿಂದಿನ ಬೇಸಿಗೆಗಳ ಹಾಗಿಲ್ಲ. ಅಲ್ಲೀಗ ಬೇಸಿಗೆಯಲ್ಲಿ ಹೊಗೆಯಿಂದ ಮಸುಕಾದ ಆಕಾಶವನ್ನು ಹಾಗೂ ತೊಟ್ಟಿಕ್ಕುತ್ತಿರುವ ಹಿಮನದಿಗಳನ್ನು ನೋಡಬಹುದು. ಸತ್ತ ಸಲ್ಮನ್ ಮೀನುಗಳು ಹಾಗೂ ಹೊರತೆಗೆದ ವಾಲ್‍ರಸ್‍ಗಳನ್ನು ಕಾಣಬಹುದು. ವಿಜ್ಞಾನಿಗಳಿಗೆ ಈ ಬದಲಾವಣೆಗಳಿಗಿಂತ ಕಣ್ಣಿಗೆ ಕಾಣದ ಜಗತ್ತಿನ ಅಪಾಯ ಸ್ಥಿತಿಗೆ ಮುನ್ಸೂಚನೆ ನೀಡುವ ಇನ್ನೂ ಹಲವು ಬದಲಾವಣೆಗಳು ಅಲಾಸ್ಕಾದಲ್ಲಾಗುತ್ತಿರಬಹುದೆಂಬ ಚಿಂತೆಯಿದೆ. ವಿಷಪೂರಿತ ಪಾಚಿ ಹೂವುಗಳಿಂದ ಹಿಡಿದು ಉತ್ತರಕ್ಕೆ ಹೊಸ ರೋಗಗಳನ್ನು ತರುವ […]

ಸರ್ವಂ ಆಧಾರ್ ಮಯಂ

-ಡಾ.ವೆಂಕಟಯ್ಯ ಅಪ್ಪಗೆರೆ

 ಸರ್ವಂ ಆಧಾರ್ ಮಯಂ <p><sub> -ಡಾ.ವೆಂಕಟಯ್ಯ ಅಪ್ಪಗೆರೆ </sub></p>

ಆಧಾರ್ ಕಾರ್ಡು ಒಂದು ದೇಶಕ್ಕೆ ಸೀಮಿತವೇ? ಅಥವಾ ವಿಶ್ವವ್ಯಾಪಕವೇ? ಇಲ್ಲಿನ ತಾಂತ್ರಿಕತೆಯನ್ನು ಸದರಿ ಪ್ರಾಧಿಕಾರದವರಿಗೆ ಬಿಟ್ಟು (ಸುರಕ್ಷತೆ-ಗೌಪ್ಯತೆ ದೃಷ್ಟಿಯಿಂದ) ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಬಹುದೇ? ಬಳ್ಳಾರಿಯಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಪ್ರಯಾಣಿಸಬೇಕು. ನಿಮ್ಮ ಆಧಾರ ಕಾರ್ಡನ್ನು ಬಸ್ ಪ್ರವೇಶ ದ್ವಾರದಲ್ಲಿನ ಕಿಂಡಿಯಲ್ಲಿ ತೂರಿಸಿದರೆ ಸಾಕು. ತಕ್ಷಣ ಅದರಲ್ಲಿನ ಪರದೆಮೇಲೆ ಮುಂದಿನ ಊರುಗಳ ಹೆಸರು, ಊರಿನ ಪ್ರಮುಖ ಗುರುತಿನ ಚಿಹ್ನೆ ಬರುತ್ತದೆ. ಅಂದರೆ ಅಕ್ಷರಸ್ಥ-ಅನಕ್ಷರಸ್ಥರಿಬ್ಬರಿಗೂ ಅನುಕೂಲವಾಗುವಂತೆ ಅಕ್ಷರ ಮತ್ತು ಚಿಹ್ನೆ(ಚಿತ್ರ)ಗಳು ಇರುತ್ತವೆ. ಉದಾ: ಹಿರಿಯೂರಿಗೆ-ವಾಣಿವಿಲಾಸ, ತುಮಕೂರಿಗೆ-ಸಿದ್ಧಗಂಗಾಮಠ; ಬೆಂಗಳೂರಿಗೆ-ಕೆಂಪೇಗೌಡ ಗೋಪುರ ಇತ್ಯಾದಿ. ಜತೆಗೆ […]

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ಶ್ರೀಲಂಕಾದಲ್ಲಿ ಅಧಿಕಾರಕ್ಕೆ ಮರಳಿದ ರಾಜಪಕ್ಷ ಕುಟುಂಬ ಶ್ರೀಲಂಕಾದಲ್ಲಿ ಬಲಪಂಥೀಯ ಸಿಂಹಳವಾದಿ ರಾಜಕಾರಣಿ ಕುಟುಂಬ ಮತ್ತೆ ಅಧಿಕಾರಕ್ಕೆ ಏರಿದೆ. ಎಲ್‍ಟಿಟಿಇ ತಮಿಳು ಬಂಡುಕೋರರನ್ನು ಬಗ್ಗುಬಡಿಯುವ ಸಮಯದಲ್ಲಿ ಶ್ರೀಲಂಕಾದ ರಕ್ಷಣಾ ಮಂತ್ರಿಯಾಗಿದ್ದ ಗೊಟಬಯ ರಾಜಪಕ್ಷ ಈಗ ದೇಶದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಹಿಂದೆ ಅಧ್ಯಕ್ಷರಾಗಿದ್ದ ಮಹಿಂದ ರಾಜಪಕ್ಷ ಈಗ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ಇದುವರೆಗೆ ಅಧ್ಯಕ್ಷರಾಗಿದ್ದ ಮೈತ್ರಿಪಾಲ ಸಿರಿಸೇನ ಈ ಚುನಾವಣೆಯಲ್ಲಿ ಭಾಗವಹಿಸಿರಲಿಲ್ಲ. ಸ್ಪರ್ಧೆಯು ಎಸ್‍ಎಲ್‍ಪಿಪಿ ಪಕ್ಷದ ಗೊಟಬಯ ರಾಜಪಕ್ಷ ಮತ್ತು ಯುಎನ್‍ಪಿ ಪಕ್ಷದ ಸಜಿತ್ ಪ್ರೇಮದಾಸರವರೊಡನೆ ಏರ್ಪಟ್ಟಿತ್ತು. ಗೊಟಬಯ 52.25% ಮತ […]

ಜನಸಂಖ್ಯಾ ಸ್ಫೋಟ: ಬೇಕು ಸ್ಪಷ್ಟ ನೀತಿಯ ಮುನ್ನೋಟ

ಲೇಖಕರು: ಸಿ.ರಂಗರಾಜನ್, ಜೆ.ಕೆ.ಸಾತಿಯಾ

 ಜನಸಂಖ್ಯಾ ಸ್ಫೋಟ:  ಬೇಕು ಸ್ಪಷ್ಟ ನೀತಿಯ ಮುನ್ನೋಟ <p><sub> ಲೇಖಕರು: ಸಿ.ರಂಗರಾಜನ್, ಜೆ.ಕೆ.ಸಾತಿಯಾ </sub></p>

ಭಾರತದ ಜನಸಂಖ್ಯೆ 2061 ರ ವೇಳೆಗೆ 165 ಕೋಟಿ ತಲುಪಲಿದ್ದು ಅನಂತರ ಜನಸಂಖ್ಯಾ ಬೆಳವಣಿಗೆಯ ಪ್ರಮಾಣ ಇಳಿಮುಖವಾಗಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗವು ಅಂದಾಜು ಮಾಡಿದೆ. ಫಲವತ್ತತೆ ಸೂಚ್ಯಂಕವು ಇದಕ್ಕೆ ಕಾರಣ! ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಜನಸಂಖ್ಯಾ ಸ್ಫೋಟದ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಇದು ಜನಸಂಖ್ಯಾ ಬೆಳವಣಿಗೆ ಹಾಗೂ ಕುಟುಂಬ ಯೋಜನೆ ಕುರಿತ ಚರ್ಚೆಗೆ ಹೊಸ ದಿಕ್ಕು ಮತ್ತು ಹೊಳಹು ನೀಡಿದೆ. ಈ ಭಾಷಣಕ್ಕೆ ಬಂದಿರುವ ಪ್ರತಿಕ್ರಿಯೆ ಬೇರೆ ಬೇರೆ ತೆರನಾಗಿದೆ. […]

ಯಂತ್ರಯುಗದಲ್ಲಿ ಮನುಷ್ಯನೇ ಅಪ್ರಸ್ತುತ!

-ಡಾ.ಜ್ಯೋತಿ

ಇನ್ನು ಮುಂದೆ ಮನುಷ್ಯರಿಗಾಗಿ ಉದ್ಯೋಗ ಸೃಷ್ಟಿಯಾಗುವುದಿಲ್ಲ; ತದ್ವಿರುದ್ಧವಾಗಿ, ಯಂತ್ರಗಳಿಗಾಗಿ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಅಂದರೆ, ಯಂತ್ರಗಳನ್ನು ಸೃಷ್ಟಿಮಾಡಿ ನಾವು ನಿರುದ್ಯೋಗಿಗಳಾಗುತ್ತಿದ್ದೇವೆ! ಪಾರ್ಲೆ-ಜಿ ಕಂಪನಿ ಹತ್ತು ಸಾವಿರ ನೌಕರರನ್ನು ವಜಾಗೊಳಿಸಿದ ಬೆನ್ನಲ್ಲೇ, ಪ್ರವಾಹದ್ವಾರ ತೆರೆದಂತೆ, ಒಂದೊಂದೇ ಕಂಪನಿಗಳು ಆರ್ಥಿಕ ಹಿನ್ನಡೆಯ ನೆವದಲ್ಲಿ ನೌಕರರನ್ನು ವಜಾಗೊಳಿಸುತ್ತಿದ್ದಾರೆ. ಇದರೊಂದಿಗೆ, ದೇಶದ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿ ವಿವಿಧ ವೇದಿಕೆಗಳಲ್ಲಿ ಸದ್ಯದ ಚರ್ಚಾವಿಷಯವಾಗಿದೆ. ಆರಂಭದಲ್ಲಿ ಇದನ್ನು ಒಪ್ಪಿಕೊಳ್ಳದ ‘ಅಚ್ಛೇ ದಿನ್’ ಕನಸು ಕೊಟ್ಟ ನಮ್ಮ ಕೇಂದ್ರ ಸರಕಾರ ಕೊನೆಗೂ ಎಚ್ಚೆತ್ತು, ಶಸ್ತ್ರಚಿಕಿತ್ಸೆ ಅಗತ್ಯವಿರುವ ಕಾಯಿಲೆಗೆ ಬ್ಯಾಂಡೇಜ್ […]

ಇ-ಜ್ಞಾನ

ಟಿ.ಜಿ.ಶ್ರೀನಿಧಿ

ಟೆಕ್ ಸುದ್ದಿ ತಂತ್ರಾಂಶಗಳನ್ನು ನಮ್ಮ ಕಂಪ್ಯೂಟರಿನಲ್ಲಿ ಇನ್‍ಸ್ಟಾಲ್ ಮಾಡಿಕೊಳ್ಳುವ ಬದಲು ಅಂತರಜಾಲದ ಮೂಲಕವೇ ಬಳಸುವ ಕ್ಲೌಡ್ ಕಂಪ್ಯೂಟಿಂಗ್ ಪರಿಕಲ್ಪನೆ ಸಾಕಷ್ಟು ಹಳೆಯದು. ಇದನ್ನು ಮನರಂಜನೆಗೂ ಬಳಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಕಂಪ್ಯೂಟರ್ ಗೇಮ್‍ಗಳನ್ನು ಕ್ಲೌಡ್ ಮೂಲಕ ಲಭ್ಯವಾಗಿಸುವ, ಯಾವುದೇ ಕಂಪ್ಯೂಟರ್ ಅಥವಾ ಮೊಬೈಲ್ ಬಳಸಿ ಅವನ್ನು ಸುಲಲಿತವಾಗಿ ಬಳಸುವಂತೆ ಮಾಡುವ ಇಂತಹ ಪ್ರಯತ್ನಗಳ ಜೊತೆಗೆ ಗೂಗಲ್ ಕೂಡ ಕೈಜೋಡಿಸಿರುವುದು ವಿಶೇಷ. ‘ಸ್ಟೇಡಿಯಾ’ ಎಂಬ ಹೆಸರಿನ ಹೊಸ ಗೇಮ್ ಸ್ಟ್ರೀಮಿಂಗ್ ಸೇವೆಯನ್ನು ಅದು ಈಗಷ್ಟೇ ಪರಿಚಯಿಸಿದೆ. ಟೆಕ್ ಪದ ಸಾಫ್ಟ್‍ವೇರ್‍ನಿಂದ […]

ಅಂತರ್ಜಾಲದ ಅಪಾಯಗಳೂ ಆಪತ್ತುಗಳೂ

ವಂದಿತಾ ದುಬೆ

ವಂದಿತಾ ದುಬೆ ಮನಶ್ಶಾಸ್ತ್ರ ಚಿಕಿತ್ಸಕರಾಗಿದ್ದು 1995ರಲ್ಲಿ ಮುಂಬಯಿಯ ಟಾಟಾ ಸಮಾಜ ವಿಜ್ಞಾನ ಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಎಂಎ ಪದವಿ ಮಾಡಿದಾಗಿನಿಂದಲೂ ಮಕ್ಕಳು ಮತ್ತು ಕುಟುಂಬಗಳ ನಡುವೆ ತಮ್ಮ ಕಾರ್ಯ ಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದಾರೆ. 2006ರಲ್ಲಿ ಅಮೆರಿಕದಲ್ಲಿ ಮನಶ್ಶಾಸ್ತ್ರ ಚಿಕಿತ್ಸೆಯ ಡಾಕ್ಟರೇಟ್ ಪಡೆದಿದ್ದಾರೆ. ಮಕ್ಕಳು ಎದುರಿಸುವ ಲೈಂಗಿಕ ದೌರ್ಜನ್ಯದ ಬಗ್ಗೆ ಅನೇಕ ಸಂಶೋಧನೆಗಳನ್ನು ನಡೆಸಿರುವ ವಂದಿತಾ ದುಬೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆ. ಅಮೆರಿಕ ಮತ್ತು ಭಾರತದಲ್ಲಿ ಮಾನಸಿಕ ಚಿಕಿತ್ಸೆ ನೀಡುವಲ್ಲಿ ನಿರತರಾಗಿರುವ ವಂದಿತಾ ದುಬೆ ಅನೇಕ ಶಾಲೆಗಳಲ್ಲಿ ತಮ್ಮ […]

ಯಡೂರು ಮಹಾಬಲ ಅವರ ನಿಗೂಢ ಟಿಬೆಟ್

ಡಾ.ರಾಜೇಗೌಡ ಹೊಸಹಳ್ಳಿ

ಟಿಬೆಟ್ ಹಾಗೂ ಅದರ ಭಾಗದ ಇತಿಹಾಸವನ್ನು ಲೇಖಕರು ಅನೇಕ ಸಮರ್ಥರ ಬರವಣಿಗೆಗಳನ್ನು ಕ್ರೂಢೀಕರಿಸಿ ನಮ್ಮ ಮುಂದಿಡುತ್ತಾರೆ.ಅದೇ ರೀತಿ ಅರುಣಾಚಲ ಭಾರತಕ್ಕೆ ಸೇರಿದ ವಿಚಾರವನ್ನು ವಿವರಿಸುತ್ತಾರೆ. ಲೇಖಕರು ಈಶಾನ್ಯ ರಾಜ್ಯಗಳಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದವರು. ಲೋಹಿಯಾ, ಅರುಣಾಚಲ, ಕ್ವಿಟ್ ಇಂಡಿಯಾ, ದೋಕ್ಲಾ -ಇಂಥವು ಕುರಿತು ಸಾವಿರಾರು ಪುಟಗಳ ಒಳಚರಿತ್ರೆಗಳನ್ನು ಬಗೆದು ನಮ್ಮ ಮುಂದಿಟ್ಟಿದ್ದಾರೆ. ಇಂಥದೇ ಮತ್ತೊಂದು ಕೃತಿ 533 ಪುಟಗಳ `ನಿಗೂಢ ಟಿಬೆಟ್’. `ಟಿಬೆಟನ್ನು ಭೂಮಿಯ ನೆತ್ತಿಭಾಗ ಅಥವಾ ಮೇಲ್ಛಾವಣೆ’ ಎಂದು ವಿವರಿಸುತ್ತಾ ಅದೊಂದು ಕೇವಲ 20 ಅಂಗುಲ ಮಳೆ […]

ತಾಯಿ ಅಂತಃಕರಣದ ಕಾಡು ಕನಸಿನ ಬೀಡಿಗೆ

-ಈಶ್ವರ ಹತ್ತಿ

ಕಾದಂಬರಿಯ ಉದ್ದಕ್ಕೂ ಕರದಳ್ಳಿಯವರು ಎಲ್ಲಿಯೂ ತಮ್ಮ ಪ್ರೌಢಿಮೆಯನ್ನು ಪ್ರದರ್ಶಿಸುವುದಕ್ಕೆ ಹೋಗಿಲ್ಲ. ಅತ್ಯಂತ ಸರಳ, ಮುದ್ದಿನ ಭಾಷೆಯಲ್ಲೇ ಘಟನಾವಳಿಗಳನ್ನು ಕಟ್ಟಿಕೊಡುತ್ತಾರೆ. ಮಕ್ಕಳು ಮತ್ತು ಕಾಡು ತಾಯಿಯ ಸಂವಾದಗಳು, ತಾಯಿ-ಮಕ್ಕಳ ಮಾತುಕತೆಗಳಂತಿವೆ. ಲೇಖಕ ಓರ್ವ ತಾಯಿಯಾಗಿ, ಮಕ್ಕಳಿಗೆ ಹೇಳುವುದಿದೆಯಲ್ಲ, ಅದು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಬೇಕಾದ ಜವಾಬ್ದಾರಿ. ಕೃತಿಕಾರ ಸ್ವತಃ ‘ತಾಯಿ’ ಇಲ್ಲವೇ ‘ಆಯಿ’ ಆಗದ ಹೊರತು ಅದು ಸಿದ್ಧಿಸದು. ಶಹಪೂರದ ಗೆಳೆಯರು ಪ್ರೀತಿಯಿಂದ ಪುಸ್ತಕವೊಂದನ್ನು ಕಳಿಸಿದ್ದಾರೆ. ಪುಸ್ತಕದ ಜೊತೆಗೆ ಸಣ್ಣ ಕಾಗದವನ್ನು ಇಡಲು ಮರೆತಿರಲಿಲ್ಲ. ‘ಕೇವಲ ಎರಡು ತಾಸುಗಳಲ್ಲಿ ಓದಿ […]

ಓದಿನ ಹಾದಿಗೆ ಸ್ಫೂರ್ತಿ ಈ ‘ಅಬ್ಬೆ’

- ಗಣಪತಿ ಶಿವರಾಮ ಭಟ್ಟ

ಆ ಊರಿನ ಬಹುತೇಕರು ಅಬ್ಬೆ ಎಂದು ಕರೆಯುತ್ತಾರೆ. ಅವರ ಪಕ್ಕದ ಮನೆಯವನಾದ ನನಗೆ ತಿಳಿವಳಿಕೆ ಬಂದಾಗಿನಿಂದ ನಾನು ಕೂಡ ಅವರನ್ನು ಹಾಗೆಯೇ ಕರೆಯುತ್ತಾ ಬಂದಿದ್ದೇನೆ. 82ರ ಇಳಿವಯಸ್ಸಿನಲ್ಲಿಯೂ ಪುಸ್ತಕಪ್ರೀತಿ ಹೊಂದಿರುವ ಉತ್ತರಕನ್ನಡ ಜಿಲ್ಲೆಯ, ಯಲ್ಲಾಪುರ ತಾಲೂಕಿನ, ಗಿಡಗಾರಿ ಎಂಬ ಕುಗ್ರಾಮದ ಗಾಯತ್ರಿ ವಿಶ್ವನಾಥ ಭಟ್ಟ ಒಬ್ಬ ಅಕ್ಷರದಾಹಿ. ಓದುವಿಕೆಯ ಸುಖವನ್ನು ಅರಿತು ಪುಸ್ತಕದ ಜತೆ ನಂಟು ಬೆಳೆಸಿಕೊಂಡವರು. ಓದಿನ ಹಾದಿಯಲ್ಲಿ ಅಬ್ಬೆ ನಮಗೆಲ್ಲರಿಗೂ ಸ್ಫೂರ್ತಿ ಮತ್ತು ಮಾದರಿ. ಇದು ಅಬ್ಬೆ ಜತೆಗಿನ ಮಾತುಕತೆ. ಅಬ್ಬೆ ನಮಸ್ಕಾರ, ನೀವು […]

ಇತಿಹಾಸ ಸಂಶೋಧನೆಗೆ ಬೇಕಿದೆ ಹೊಸ ದೃಷ್ಟಿಕೋನ

- ಲಕ್ಷ್ಮೀಶ್ ಸೋಂದಾ

ಸಂಶೋಧನೆಯಲ್ಲಿ ವೈಜ್ಞಾನಿಕ ಸಂಶೋಧನೆ, ಕಲಾತ್ಮಕ ಸಂಶೋಧನೆ, ಮತ್ತು ಐತಿಹಾಸಿಕ ಸಂಶೋಧನೆಗಳೆಂಬ ಮೂರು ಪ್ರಮುಖ ವಿಭಾಗಗಳಿವೆ. ಪ್ರಸ್ತುತ ಲೇಖನ ಐತಿಹಾಸಿಕ ಸಂಶೋಧನೆಗೆ ಸಂಬಂಧಿಸಿದೆ. ಸಂಶೋಧನೆ ಎಂದರೆ ಹೊಸತೊಂದರ ಕ್ರಮಬದ್ಧ ಹುಡುಕಾಟ ಅಥವಾ ಮುಕ್ತ ಮನಸ್ಸಿನ ಶೋಧನೆ, ಹೊಸ ಸಿದ್ಧಾಂತದ ಅಭಿವೃದ್ಧಿ, ಹೀಗೆ ವಿಭಿನ್ನ ವ್ಯಾಖ್ಯಾನವನ್ನು ಸಂಶೋಧನೆಗೆ ಸಂಬಂಧಿಸಿದಂತೆ ನೀಡಬಹುದು. 19ನೇ ಶತಮಾನದ ದ್ವಿತೀಯಾರ್ಧದಿಂದ ಭಾರತದಲ್ಲಿ ಪ್ರಾರಂಭವಾದ ಈ ವೈಜ್ಞಾನಿಕ ಇತಿಹಾಸ ಸಂಶೋಧನೆ ಅಥವಾ ಅಧ್ಯಯನ ಕ್ರಮ, ಅಲ್ಲಿಂದ ಇಲ್ಲಿಯವರೆಗೂ ಒಂದೇ ದೃಷ್ಟಿಯಲ್ಲಿ ನಡೆದುಬರುತ್ತಿದೆ. ‘ಭಾರತದ ಇತಿಹಾಸ’ ಎಂಬ ಶೀರ್ಷಿಕೆಯಡಿ […]

ಹೊಸ ಪುಸ್ತಕ

ಸ್ಪ್ಯಾನಿಶ್ ಪ್ರೊವಬ್ರ್ಸ್ ಅನುವಾದಕರು: ರವಿ ಹಂಜ್ ಪುಟ: 80+4, ಬೆಲೆ: ರೂ.80 ಪ್ರಥಮ ಮುದ್ರಣ: 2019 ರೀಡ್‍ಫ್ರೆಶ್ #1163, 26ನೇ ‘ಎ’ 41ನೇ ಅಡ್ಡರಸ್ತೆ ಜಯನಗರ 9ನೇ ಬ್ಲಾಕ್ ಬೆಂಗಳೂರು. 560069 ಸ್ಪ್ಯಾನಿಶ್ ಗಾದೆಗಳ ಇಂಗ್ಲಿಷ್ ಅನುವಾದವಿದು. ರಂಗಸ್ವಾಮಿ ಮೂಕನಹಳ್ಳಿ ಕನ್ನಡಕ್ಕೆ ಅನುವಾದಿಸಿದ್ದ ಈ ಕೃತಿಯನ್ನು ರವಿ ಹಂಜ್ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಸ್ಪ್ಯಾನಿಶ್ ಭಾಷೆಯ ಪ್ರಸಿದ್ಧ ಗಾದೆಗಳನ್ನು ಸಂಗ್ರಹಿಸಿ ಅವುಗಳ ಒಳಾರ್ಥವನ್ನೂ ಇಲ್ಲಿ ನೀಡಲಾಗಿದೆ. ಅಲ್ಲದೆ ಸ್ಪ್ಯಾನಿಶ್ ಭಾಷೆಯಲ್ಲಿಯೇ ಗಾದೆಗ¼ನ್ನು ನೀಡಿ ಅವುಗಳ ಉಚ್ಛಾರದ ಕ್ರಮಗಳನ್ನೂ ಕೊಡಲಾಗಿದೆ. […]

ಕನಕದಾಸರ ‘ಮೋಹನ ತರಂಗಿಣಿ’

ಡಾ.ಕಾವೇರಿ ಪ್ರಕಾಶ್

 ಕನಕದಾಸರ  ‘ಮೋಹನ ತರಂಗಿಣಿ’ <p><sub> ಡಾ.ಕಾವೇರಿ ಪ್ರಕಾಶ್ </sub></p>

ಭೋಗದ ವರ್ಣನೆ, ಶೃಂಗಾರದ ವರ್ಣನೆ, ಪುರದ ವರ್ಣನೆ, ಊಟದ ವರ್ಣನೆ, ಮಾತೃವಾತ್ಸಲ್ಯದ ವರ್ಣನೆ, ವಿರಹದ ವರ್ಣನೆ, ಯುದ್ಧ ವರ್ಣನೆ ಹೀಗೆ ಎಲ್ಲವೂ ಕನಕದಾಸರ ಕಾವ್ಯದಲ್ಲಿ ವರ್ಣನಾ ವೈಭವವಾಗಿ ಮೆರೆದಿರುವುದನ್ನು ಕಾಣಬಹುದಾಗಿದೆ. ದಾಸಸಾಹಿತ್ಯದ ಅಪೂರ್ವ ರತ್ನ ಕನಕದಾಸರು ಕೇಶವನ ಆರಾಧಕನಾಗಿ, ಕವಿಯಾಗಿ, ಸಂತರಾಗಿ, ಧರ್ಮ ಸಮಾಜ ಸಂಸ್ಕೃತಿಯ ಹಿತಚಿಂತಕರಾಗಿ ಭಾರತೀಯ ಸಂಸ್ಕೃತಿಗೆ ನೀಡಿದ ಕಾಣಿಕೆ ಅತ್ಯಾದ್ಭುತವಾದದ್ದು. ನಡುಗನ್ನಡ ಕಾಲದ ಮಹತ್ವದ ಕವಿಯಾಗಿ ಅಪಾರ ಲೋಕಾನುಭವ ಹಾಗೂ ಅಸಾಧರಣ ಪ್ರತಿಭೆಯಿಂದ ಸಾಮಾಜಿಕ ಪರಿವರ್ತನೆಗೆ ಹಾಗೂ ಜಾತಿ ವರ್ಣಭೇದದ ತಲ್ಲಣಗಳಿಗೆ ತಕ್ಕ […]

ಹೊಸ ಅಲೆಗೆ ಕೊಚ್ಚಿ ಹೋದವರು

ಪ.ರಾಮಕೃಷ್ಣ ಶಾಸ್ತ್ರಿ

 ಹೊಸ ಅಲೆಗೆ ಕೊಚ್ಚಿ ಹೋದವರು <p><sub> ಪ.ರಾಮಕೃಷ್ಣ ಶಾಸ್ತ್ರಿ </sub></p>

ಅನಾಥರಿಗೆ, ಮಕ್ಕಳಿಂದ ಪರಿತ್ಯಕ್ತರಾದ ವೃದ್ಧರಿಗೆ, ವಿಧವೆಯರಿಗೆ ಕೊಡಲೇಬೇಕಾದ ಒಂದು ಸಾವಿರ ರೂಪಾಯಿ ಮಾಸಿಕ ವೇತನ ಈಗ ಸುಳ್ಳು ಘೋಷಣೆ ಮಾಡಿ ಕೈಯೊಡ್ಡುವವರಿಗೂ ಸಿಗುತ್ತದೆ. ಉಚಿತವಾಗಿ ಸಿಗುತ್ತದೆಂಬಾಗ ಜನರೂ ಕೂಡ ಪ್ರಾಮಾಣಿಕತೆಗೆ ಗುಡ್‍ಬೈ ಹೇಳುತ್ತಿದ್ದಾರೆ. ರಿಕ್ಷಾ ಚಾಲಕ ಅತ್ಯಂತ ತಿರಸ್ಕಾರದ ಮುಖಭಾವದಲ್ಲಿ ಹೇಳಿದ, “ಥತ್! ಹಿಂದಿನ ಸರಕಾರದವರು ಒಬ್ಬ ಸೂಳೆಗೆ ಐದು ಸಾವಿರ ಕೊಡುತ್ತಿದ್ರು, ಲೆಕ್ಕ ಕೇಳದೆ ಎದ್ದು ಹೋಗ್ತಿದ್ರು. ಆದ್ರೆ ಇಂದಿನವರು, ಐನೂರು ಕೊಡ್ತಾರೆ. ಮಲಗಿ ಏಳುವಾಗ ತೆರಿಗೆ ಹೆಸ್ರಿನಲ್ಲಿ ಎಲ್ಲವನ್ನೂ ಕೊತ್ಕೊಂಡು ಮಲಗಿದೋಳ ಸೀರೆ ಕೂಡ […]