ವೈರುಧ್ಯಗಳ ಜೊತೆಗೆ ಕುರುಡು ನಡಿಗೆ!

ವೈರುಧ್ಯಗಳ ಜೊತೆಗೆ ಕುರುಡು ನಡಿಗೆ!

ಮನುಷ್ಯನ ವೈಯಕ್ತಿಕ ಬದುಕು, ಸಾಮೂಹಿಕ ನಡವಳಿಕೆ, ಆಡಳಿತದ ನಿಲುವುನಿರ್ಧಾರಗಳು ಹೊರನೋಟಕ್ಕೆ ಎಷ್ಟೇ ಸೂತ್ರಬದ್ಧ, ಸುಸಂಬದ್ಧ ಎಂಬOತೆ ಕಾಣಿಸಿದರೂ ಅವುಗಳ ಆಳದಲ್ಲಿ ವೈರುಧ್ಯದ ಬೇರುಗಳು ಹಸಿಯಾಗಿಯೇ ಇರುತ್ತವೆ. ಎಲ್ಲಾ ದೇಶ-ಕಾಲದಲ್ಲೂ ಅಸ್ತಿತ್ವ ಉಳಿಸಿಕೊಂಡ ಕೆಲವು ಸಾರ್ವಕಾಲಿಕ ವೈರುಧ್ಯಗಳು ಒಂದೆಡೆಯಾದರೆ, ನಿರ್ದಿಷ್ಟ ಸಮಯ-ಸಂದರ್ಭದ ಕೂಸುಗಳಾಗಿ ಹುಟ್ಟಿಕೊಳ್ಳುವ ಸ್ಥಳಿಯ ವೈರುಧ್ಯಗಳನ್ನು ಇನ್ನೊಂದೆಡೆ ಗುರುತಿಸಬಹುದು. ಆದರೆ ವೈರುಧ್ಯಗಳೇ ದೇಶ, ವ್ಯಕ್ತಿ ಅಥವಾ ಸನ್ನಿವೇಶವನ್ನು ಸಂಪೂರ್ಣ ಸ್ವಾಧೀನ ತೆಗೆದುಕೊಂಡುಬಿಟ್ಟರೆ…? ಕೆಲವೊಮ್ಮೆ ಸ್ವತಂತ್ರ ಚಿಂತನೆ ಮತ್ತು ಬೌದ್ಧಿಕ ಪ್ರಾಮಾಣಿಕತೆಗೆ ಕನ್ನಡಿ ಆಗುವ ವೈರುಧ್ಯಗಳು ಕುರುಡು ಅನುಕರಣೆಗೂ […]

ದೆಹಲಿ ರೈತ ಚಳವಳಿಯ ಪ್ರತ್ಯಕ್ಷ ದರ್ಶನ

-ಎಚ್.ಆರ್.ನವೀನ್ ಕುಮಾರ್

ದೆಹಲಿ ರೈತ ಚಳವಳಿಯ  ಪ್ರತ್ಯಕ್ಷ ದರ್ಶನ
-ಎಚ್.ಆರ್.ನವೀನ್ ಕುಮಾರ್

-ಎಚ್.ಆರ್.ನವೀನ್ ಕುಮಾರ್ ಇಂದು ದೇಶದ ಗಮನ ಸೆಳೆಯುತ್ತಿರುವ ಸಂಗತಿಗಳಲ್ಲಿ ದೆಹಲಿಯ ಗಡಿಭಾಗಗಳಲ್ಲಿ ನಡೆಯುತ್ತಿರುವ ರೈತ ಚಳವಳಿಯೂ ಒಂದು. ಈ ಚಳವಳಿ ಮೂಡಿಸಿರುವ ಸಂಚಲನದ ಕುರಿತು ಪ್ರತ್ಯಕ್ಷ ದರ್ಶನ ಮಾಡುವ ಸಲುವಾಗಿ ಕರ್ನಾಟಕದಿಂದ ಸರಿಸುಮಾರು ಎರಡು ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ದೂವಿರುವ ದೆಹಲಿಗೆ ಹೋಗಿ 5 ಗಡಿಭಾಗಗಳಿಗೂ ಭೇಟಿ ನೀಡಿ ಅಲ್ಲಿನ ನೇರ ಅನುಭವವನ್ನು ಹಂಚಿಕೊAಡಿದ್ದಾರೆ ಲೇಖಕರು. ಚಳವಳಿ ನಿರತ ರೈತರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಮೂರು ಕೃಷಿ ಕಾಯ್ದೆಗಳು, ವಿದ್ಯುತ್ ಖಾಸಗೀಕರಣ ಮಸೂದೆ ರದ್ದು […]

ಗುರೂಜಿಯ ಗ್ರಹಗತಿ!

-ಮಣ್ಣೆ ರಾಜು

ಗುರೂಜಿಯ ಗ್ರಹಗತಿ!
-ಮಣ್ಣೆ ರಾಜು

-ಮಣ್ಣೆ ರಾಜು ಕಳೆದ ಸಂಚಿಕೆಯಲ್ಲಿ ಜ್ಯೋತಿಷಿಗಳು ತಮ್ಮ ರಹಸ್ಯಗಳನ್ನು ಬಿಚ್ಚಿಟ್ಟು ಟಿವಿ ವೀಕ್ಷಕರನ್ನು ಬೆಚ್ಚಿಬೀಳಿಸಿದ ವಿಡಂಬನೆ ಆಸ್ವಾದಿಸಿದ್ದೀರಿ. ಈ ಬಾರಿ ಖ್ಯಾತ ಹಾಸ್ಯ ಬರಹಗಾರ ಮಣ್ಣೆ ರಾಜು ಅವರು ‘ಗುರೂಜಿಯ ಗ್ರಹಗತಿ’ ಬಿಡಿಸಿದ್ದಾರೆ…! ತಪಸ್ಸು ಮಾಡಿದರೆ ದೇವರು ಪ್ರತ್ಯಕ್ಷ ಆಗುತ್ತಾನೊ ಇಲ್ಲವೊ, ದಿನಾ ಬೆಳಿಗ್ಗೆ ಟಿವಿ ಆನ್ ಮಾಡಿದರೆ ಸಾಕು ದೈವಸ್ವರೂಪಿ ಗುರೂಜಿ ಪ್ರತ್ಯಕ್ಷರಾಗುತ್ತಾರೆ. ಅಷ್ಟಲ್ಲದೆ, ಟಿವಿಯ ಲೈವ್ ಪ್ರೋಗ್ರಾಂನಲ್ಲಿ ಭಕ್ತರ ಫೋನ್ ಕರೆಗಳನ್ನು ಸ್ವೀಕರಿಸಿ ಅವರ ಕಷ್ಟ ನಿವಾರಿಸಿ, ಕೋರಿಕೆ ಈಡೇರಿಸುತ್ತಾರೆ. ಗುರೂಜಿಗೆ ಪ್ರಚಂಡ ದೂರದೃಷ್ಟಿ […]

ಸಾಹಿತ್ಯ ಮತ್ತು ಸಾಮಾನ್ಯ ಜ್ಞಾನ

-ಎನ್.ಬೋರಲಿಂಗಯ್ಯ

ಸಾಹಿತ್ಯ ಮತ್ತು ಸಾಮಾನ್ಯ ಜ್ಞಾನ
-ಎನ್.ಬೋರಲಿಂಗಯ್ಯ

-ಎನ್.ಬೋರಲಿಂಗಯ್ಯ ರಾಮಾಯಣ ಮಹಾಭಾರತಗಳು ಅವುಗಳ ಅನುಯಾಯಿಗಳಿಗೆ ಭಜನೆ ಮಾಡುವುದನ್ನು ಹೇಳಿಕೊಟ್ಟಿವೆ ಹೊರತು ಆ ಕೃತಿಗಳ ವೈಚಾರಿಕ ಆಕೃತಿಗಳು ಜನಸಮೂಹದಲ್ಲಿ ಹಾಸುಹೊಕ್ಕಾಗುವಂತೆ ನೋಡಿಕೊಳ್ಳಲಿಲ್ಲ. ಈ ಮಾತು ಕುವೆಂಪು ತೇಜಸ್ವಿ ಕಾರಂತರಾದಿ ಆಧುನಿಕ ಸೃಜನಶೀಲ ಲೇಖಕರಿಗೂ ಅನ್ವಯಿಸುತ್ತದೆ. ಸಮಾಜಮುಖಿ ಜನೆವರಿ ಸಂಚಿಕೆಯಲ್ಲಿ ಸಾಹಿತ್ಯ ವಿಮರ್ಶೆಯನ್ನೂ ಗಂಭೀರವಾಗಿ ಗಣಿಸಿ “ವಿಮರ್ಶೆಗೆ ತಕ್ಕ ವಾತಾವರಣ ಏಕಿಲ್ಲ?” ಎಂಬ ಒಂದು ಒಳ್ಳೆಯ ಪ್ರಶ್ನೆಯೊಂದಿಗೆ ಒಳ್ಳೆಯ ಲೇಖನವೊಂದನ್ನು ಪ್ರಕಟಿಸಲಾಗಿದೆ. ಚರ್ಚೆಯನ್ನು ಆರಂಭಿಸಿರುವ ಓ.ಎಲ್.ನಾಗಭೂಷಣಸ್ವಾಮಿ ನಮ್ಮ ನಡುವಿನ ಒಬ್ಬ ಸಹೃದಯ ವಿಮರ್ಶಕ ಎನ್ನುವುದರಲ್ಲಿ ಅನುಮಾನವಿಲ್ಲ. ಶತಮಾನಗಳಷ್ಟು ಹಳೆಯ […]

ನಿರಾಳವಾಗಿ ಉಸಿರಾಡುವ ಸಮಾಜದ ಕನಸನ್ನು ಕಾಣುತ್ತಾ…

-ಡಾ.ಸಂತೋಷ್ ನಾಯಕ್ ಆರ್.

ನಿರಾಳವಾಗಿ ಉಸಿರಾಡುವ  ಸಮಾಜದ ಕನಸನ್ನು ಕಾಣುತ್ತಾ…
-ಡಾ.ಸಂತೋಷ್ ನಾಯಕ್ ಆರ್.

-ಡಾ.ಸಂತೋಷ್ ನಾಯಕ್ ಆರ್. 2020, ಕೊರೊನಾ ವೈರಸ್‌ನಿಂದಾಗಿ ಜಗತ್ತಿನ ಬಹುತೇಕ ದೇಶಗಳ ಜನರು ಮುಖ ಮುಚ್ಚಿಕೊಂಡು, ಉಸಿರುಗಟ್ಟಿಸಿಕೊಂಡು ಓಡಾಡಿದ, ಒಬ್ಬರನ್ನೊಬ್ಬರು ಭೇಟಿ ಮಾಡಲು, ಮಾತಾಡಲು, ಹುಟ್ಟುಸಾವುಗಳಲ್ಲಿ, ಸುಖದುಃಖಗಳಲ್ಲಿ ಜೊತೆಯಾಗಲು ಆಗದಂತೆ ತಲ್ಲಣಗೊಂಡ ವರ್ಷ. ಇದೇ ಸಮಯದಲ್ಲಿ ಮತ್ತೊಂದು ವೈರಸ್ ಸಹ ಜಗತ್ತನ್ನು ತಲ್ಲಣಗೊಳಿಸಿತ್ತು. ಈ ವೈರಸ್ ಸಹ ಸಾವಿರಾರು ವರ್ಷಗಳಿಂದ ಎಲ್ಲೆಡೆ ಇದ್ದರೂ ಈ ವರ್ಷ ಜಗತ್ತಿನಾದ್ಯಂತ ಸಂಚಲನ ಮೂಡಿಸಿದ್ದು ಜಾರ್ಜ್ ಫ್ಲಾಯ್ಡ್ನ ಸಾವಿನೊಂದಿಗೆ. ಅವನನ್ನು ಉಸಿರುಗಟ್ಟಿಸಿ ಕೊಂದ ವೈರಸ್‌ನ ಹೆಸರು ಜನಾಂಗೀಯ ದ್ವೇಷÀ. ಮೊದಲಿಗೆ, ಕೊರೊನಾ […]

ಮುಂದಿನದು ಬೋನಸ್ ಜೀವನ!

-ಡಾ.ಎನ್.ಸತೀಶ್ ಗೌಡ

ಮುಂದಿನದು ಬೋನಸ್ ಜೀವನ!
-ಡಾ.ಎನ್.ಸತೀಶ್ ಗೌಡ

-ಡಾ.ಎನ್.ಸತೀಶ್ ಗೌಡ ಆತ್ಮತೃಪ್ತಿ, ಆತ್ಮಗೌರವ ಹಾಗೂ ಆತ್ಮಾವಲೋಕನ, ಈ ಮೂರು ಅಂಶಗಳನ್ನು ಪ್ರತಿ ವರ್ಷ ಮೆಲುಕು ಹಾಕಬೇಕಾಗುತ್ತದೆ. ಹಳೆಯ ವರ್ಷಗಳಲ್ಲಿ ನಾವು ನಡೆಸಿದ ಜೀವನ ಶೈಲಿ, ಸಾಧನೆಗಳ ಲೆಕ್ಕಾಚಾರ, ಬೇರೆಯವರಿಗೆ ಹಾಗೂ ಸಮಾಜಕ್ಕೆ ನೀಡಿದ ಸೇವೆ, ತಂದೆ-ತಾಯಿ ಹಾಗೂ ಸ್ನೇಹಿತರ ಜೊತೆ ನಡೆದುಕೊಂಡ ಪರಿ ಹಾಗೂ ನಮ್ಮ ಉತ್ತಮ ಗುಣಗಳ ಅವಲೋಕನ ಮಾಡಿಕೊಂಡಾಗ ಮುಂದಿನ ವರ್ಷದಲ್ಲಿ ನಾವು ನಮ್ಮ ಗುರಿಗಳನ್ನು ಹೇಗೆ ಈಡೇರಿಸಿಕೊಳ್ಳಬೇಕು ಮತ್ತು ಮುಂದಿನ ಭವಿಷ್ಯದಲ್ಲಿ ಯಾವ ರೀತಿ ಕೆಲಸ ನಿರ್ವಹಿಸಬೇಕು ಎಂದು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. […]

ಒಬ್ಬ ರೈತನಾಗಿ 2021ರ ಕನಸು ಕಾಣುತ್ತ…

-ಸುಬ್ರಾಯ ಮತ್ತೀಹಳ್ಳಿ

ಒಬ್ಬ ರೈತನಾಗಿ 2021ರ ಕನಸು ಕಾಣುತ್ತ…
-ಸುಬ್ರಾಯ ಮತ್ತೀಹಳ್ಳಿ

-ಸುಬ್ರಾಯ ಮತ್ತೀಹಳ್ಳಿ ಮಹಾರೋಗ, ಮಹಾಮಳೆ, ಮಹಾಯುದ್ಧಗಳ ಭಯಭೀತ ಕ್ಷಣಗಳೇ ಇಡಿಕಿರಿದು ತುಂಬಿದ 2020ನೇ ಇಸವಿ, ಜಗತ್ತಿನ ಮಾನವೇತಿಹಾಸದ ಅದ್ಭುತ ಅಧ್ಯಾಯವಾಗಿ ರೂಪುಗೊಂಡಿದ್ದು, ಅವಿಸ್ಮರಣೀಯ. ಆಧುನಿಕ ಬದುಕು, ವಿಜ್ಞಾನ ತಂತ್ರಜ್ಞಾನದ ದತ್ತುಮಗನಾಗಿ, ಹಣ ಅಧಿಕಾರ ವೈಭೋಗಗಳ ಆಡುಂಬೋಲವಾಗಿ, ಅಹಮಿಕೆಯ ತುತ್ತತುದಿಗೇರಿ ಕುಳಿತಿದ್ದಾಗ, ಒಮ್ಮೆಲೇ ಕೋವಿಡ್ ಎಂಬ ಮಹಾಶಿಕ್ಷಕ ಮನುಷ್ಯನನ್ನ ಮತ್ತೆ ಮುಟ್ಟಿನೋಡಿಕೊಳ್ಳುವ, ತನ್ನ ವಾಸ್ತವ, ತನ್ನ ಮಿತಿಗಳನ್ನು ಸೂಕ್ಷ÷್ಮವಾಗಿ ಅವಲೋಕಿಸಿಕೊಳ್ಳುವ ಸಂದರ್ಭಕ್ಕೆ ಈಡುಮಾಡಿದ್ದು, ನಿಜಕ್ಕೂ ಕುತೂಹಲಕಾರೀ ಬೆಳವಣಿಗೆ. ಅದೆಷ್ಟು ಆಪ್ತರಾಗಿರಲಿ, ಎದುರು ಬಂದರೆ ಸಾವೇ ಎದುರುಬಂದAತೇ ಭಾಸವಾಗುವ ಭಯಾನಕ […]

ಸಾಹಿತ್ಯ ಸಮ್ಮೇಳನದ ಠರಾವಿನಂತೆ…!

-ಶ್ರೀನಿವಾಸ ಜೋಕಟ್ಟೆ

ಸಾಹಿತ್ಯ ಸಮ್ಮೇಳನದ ಠರಾವಿನಂತೆ…!
-ಶ್ರೀನಿವಾಸ ಜೋಕಟ್ಟೆ

-ಶ್ರೀನಿವಾಸ ಜೋಕಟ್ಟೆ ಇದೀಗ ಮತ್ತೆ 2021ರ ನಿರೀಕ್ಷೆಗಳ ಸಂಕಲ್ಪ ಮಾಡುವ ಸಮಯ ಬಂದಿದೆ. ಈ ಸಲ ಹಿಂದಿನ ವರ್ಷದ ಸಿಂಹಾವಲೋಕನಕ್ಕೆ ಯಾವ ಅರ್ಥವೂ ಉಳಿದಿಲ್ಲ. ಹಾಗೆನೋಡಿದರೆ ಸಂಕಲ್ಪ ಮಾಡಲು ಯಾವುದೇ ಮುಹೂರ್ತ ಬೇಡ, ಅದಕ್ಕೊಂದು ಸ್ಟಾಟಿಂಗ್ ಪಾಯಿಂಟ್ ಎನ್ನುವುದಿದ್ದರೆ ಸಾಕು. 2021ರ ಪ್ರಮುಖ ನಿರೀಕ್ಷೆ ಏನು ಅಂದರೆ ಒಂದೇ ಒಂದು- ಅದು, ಕೊರೊನಾ ಮಹಾಮಾರಿ ಈ ವರ್ಷ ವಿಜೃಂಭಿಸದಿರಲಿ! ಕೊರೊನಾ ಮತ್ತೆ ತನ್ನ ಅಲೆ ಕಾಣಿಸಿದರೆ ಎಲ್ಲ ಲೆಕ್ಕಾಚಾರಗಳು ಉಲ್ಟಾ ಆದೀತು. ಈ ಎಚ್ಚರಿಕೆ ಇರಲೇಬೇಕು. ಟೆಕ್ನಾಲಜಿ […]

ನ್ಯಾಯಾಲಯ ಜನಪರ ತೀರ್ಪು ನೀಡಲಿ

-ಡಾ.ಮಹಾಬಲೇಶ್ವರ ರಾವ್

ನ್ಯಾಯಾಲಯ ಜನಪರ ತೀರ್ಪು ನೀಡಲಿ
-ಡಾ.ಮಹಾಬಲೇಶ್ವರ ರಾವ್

-ಡಾ.ಮಹಾಬಲೇಶ್ವರ ರಾವ್ ಹೊಸ ವರ್ಷಕ್ಕೆ ಹೊಸ ಠರಾವುಗಳನ್ನು ಘೋಷಿಸಿ ಒಂದೆರಡು ದಿನಗಳ ಮಟ್ಟಿಗೆ ಸಂಭ್ರಮಿಸಿ ಮರೆಯುವವರೇ ಹೆಚ್ಚು. ನಾನಂತೂ ಯಾವತ್ತೂ ಹೊಸ ವರ್ಷವನ್ನು ಹೊಸ ನಿರೀಕ್ಷೆಗಳೊಂದಿಗೆ ಸ್ವಾಗತಿಸಿದ್ದೇ ಇಲ್ಲ. ಆದರೆ ನೀವು ಕೇಳಿದಿರೆಂದು ಈ ಕೆಲವು ಮಾತುಗಳು. ಕೊರೊನಾ ದೆಸೆಯಿಂದ ಜಾಗತಿಕ ಶಿಕ್ಷಣ ವ್ಯವಸ್ಥೆ, ಅರ್ಥ ವ್ಯವಸ್ಥೆ, ರಾಜಕೀಯ, ಸಾಮಾಜಿಕ, ಸಾಂಸ್ಕöÈತಿಕ ವ್ಯವಸ್ಥೆ ಉಧ್ವಸ್ಥಗೊಂಡಿದೆ. ಜೀವ ಜೀವನ ಗಂಡಾOತರದಲ್ಲಿದೆ. ಹೊಸ ವರ್ಷದಲ್ಲಾದರೂ ಪರಿಸ್ಥಿತಿ ತಿಳಿಯಾಗಲಿ. ಜನರ ಮೊಗದಲ್ಲಿ ಮಂದಹಾಸ ಅರಳಲಿ. ಬೆಂದು ಬಸವಳಿದ ಕೂಲಿಕಾರ್ಮಿಕರಿಗೆ, ವಲಸೆಕಾರ್ಮಿಕರಿಗೆ ಮರಳಿ […]

ಪತ್ರಿಕೆಗಳು ಜೀವಜಲದಿಂದ ನಳನಳಿಸಲಿ

-ಪ.ರಾಮಕೃಷ್ಣಶಾಸ್ತಿç

ಪತ್ರಿಕೆಗಳು ಜೀವಜಲದಿಂದ ನಳನಳಿಸಲಿ
-ಪ.ರಾಮಕೃಷ್ಣಶಾಸ್ತಿç

-ಪ.ರಾಮಕೃಷ್ಣಶಾಸ್ತಿç ಇತಿಹಾಸದಲ್ಲಿ ದಾಖಲಾದ ಅತ್ಯಂತ ನಾಲ್ಕು ಕರಾಳ ವರ್ಷಗಳಲ್ಲಿ 2020 ಕೂಡ ಒಂದು ಎಂಬುದನ್ನು ಇತ್ತೀಚೆಗೆ ಓದಿದ್ದೆ. ಜ್ವಾಲಾಮುಖಿಯ ಸ್ಫೋಟದಿಂದ ಹಲವು ದಿನಗಳ ಕಾಲ ಕವಿದ ಕತ್ತಲು, ವಿಶ್ವವನ್ನು ಕಾಡಿದ ಪ್ಲೇಗ್ ಮಹಾಮಾರಿ, ನಾಜಿಗಳು ನಡೆಸಿದ ನರಮೇಧ ಬಿಟ್ಟರೆ ಗತ ವರ್ಷದ ಕೋವಿಡ್ ಹೆಸರಿನಲ್ಲಿ ಉಂಟಾದ ಸರಣಿ ಸಾವು… ಬೇಡವೆಂದರೂ ಕಣ್ಣಿಗೆ ಕಟ್ಟುತ್ತದೆ ಸ್ತಬ್ಧವಾದ ಗತ ವರ್ಷ. ಬದುಕೇ ಇಲ್ಲವೆಂಬ ಘೋರ ಅನುಭವ ತಂದುಕೊಟ್ಟದ್ದು ಕೋವಿಡ್ ಖಂಡಿತ ಅಲ್ಲ. ಲಾಕ್‌ಡೌನ್ ಎನ್ನುವ ಹಗ್ಗ ಶೃಂಖಲೆಗಳಿಲ್ಲದೆ ಮನೆಯೊಳಗೆ ಉಳಿದುಕೊಂಡ […]

ಕೊರೊನಾ ಗೆಲ್ಲಲು ಜನ ಸನ್ನದ್ಧ

-ಸವಿತಾ ಸುಬ್ರಹ್ಮಣ್ಯಂ

ಕೊರೊನಾ ಗೆಲ್ಲಲು ಜನ ಸನ್ನದ್ಧ
-ಸವಿತಾ ಸುಬ್ರಹ್ಮಣ್ಯಂ

-ಸವಿತಾ ಸುಬ್ರಹ್ಮಣ್ಯಂ 2021ನೇ ಇಸವಿಯಲ್ಲಿ ನಾವು ಬಯಸುವ ಆಶಾದಾಯಕ ಸಂಗತಿಗಳೆAದರೆ, ದೇಶವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಪ್ರಬಲವಾಗಬೇಕು. 2021ನೇ ಇಸವಿಯಲ್ಲಿ ದೇಶದ ಆರ್ಥಿಕ ಬಿಕ್ಕಟ್ಟು ಬಗೆಹರಿಯುವುದೆಂಬ ನಂಬಿಕೆ, ಕುಸಿದಿದ್ದ ಆರ್ಥಿಕ ವಲಯವು ಸುಧಾರಿಸಬಹುದೆಂಬ ಆಶಾಭಾವನೆ ಜನರಲ್ಲಿ ಮೂಡಿದೆ. ಇದಕ್ಕೆ ಕಾರಣ ‘ಕೊರೊನಾ’ ಆರ್ಭಟ ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ ಜನರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮೊದಲಿನ ಸ್ಥಿತಿಯನ್ನು ಕಂಡುಕೊಳ್ಳುತ್ತಿರುವ ಪ್ರಯತ್ನ. ಕೊರೊನಾ ಬಗ್ಗೆ ಆರಂಭದಲ್ಲಿ ಇದ್ದ ಭಯ ಈಗ ಜನರಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದೆ. ಎಷ್ಟೋ ಜನರಿಗೆ ಕೊರೊನಾ […]

ವೃದ್ಧರ ಪಿಂಚಣಿ ನಿರಾಯಾಸ ತಲುಪಲಿ

-ಸ್ಮಿತಾ ಅಮೃತರಾಜ್

ವೃದ್ಧರ ಪಿಂಚಣಿ ನಿರಾಯಾಸ ತಲುಪಲಿ
-ಸ್ಮಿತಾ ಅಮೃತರಾಜ್

-ಸ್ಮಿತಾ ಅಮೃತರಾಜ್ ನನ್ನೂರಾದ ಕೊಡಗಿನಲ್ಲಿ ಕಂಡು ಕೇಳರಿಯದಂತಹ ಭೀಕರ ಜಲಸ್ಫೋಟ, ಭೂಕುಸಿತದ ಜೊತೆಗೆ ನನ್ನೂರನ್ನೂ ಬಿಡದೇ ಕಾಡಿದ ಕೊರೋನಾ ವೈರಸ್ ಬಾಧೆ, ಕೃಷಿ ಕಾರ್ಮಿಕರಿಲ್ಲದೆ, ಉತ್ಪನ್ನಗಳ ಮಾರಾಟ ಮಾಡಲಾಗದೆ ಪಟ್ಟ ಪಡಿಪಾಟಲುಗಳು, ದೂರದಲ್ಲಿ ವ್ಯಾಸಂಗ ಮಾಡುತ್ತಿರುವ, ಉದ್ಯೋಗದಲ್ಲಿರುವವರ ಊರಿಗೆ ಬರಲಾಗದ ತೊಳಲಾಟಗಳು.. ಇಂತಹವು ಅದೆಷ್ಟೋ? ಇವೆಲ್ಲ ಸಂಕಟಗಳನ್ನ ಒಡಲೊಳಗೆ ಹುದುಗಿಸಿಕೊಂಡು ಮತ್ತೊಂದು ಹೊಸ ಬಿಸಿಲು, ಅದೇನೋ ನೆಮ್ಮದಿ ನಿರೀಕ್ಷೆಗಳನ್ನು ನನ್ನ ಕಣ್ಣ ತುದಿಗೆ ತಂದು ಪೋಣಿಸುತ್ತಿವೆ. ನಿರೀಕ್ಷೆಗಳಿಲ್ಲದೆ ಹೇಗೆ ತಾನೇ ಬದುಕಲು ಸಾಧ್ಯ? ಅದೇ ಊರು, ಅದೇ […]

ಮೊದಲು ನಾವು ಬದಲಾಗಬೇಕು

-ಡಾ.ಜ್ಯೋತಿ

ಮೊದಲು ನಾವು ಬದಲಾಗಬೇಕು
-ಡಾ.ಜ್ಯೋತಿ

-ಡಾ.ಜ್ಯೋತಿ ಬಹುಶಃ ವರ್ತಮಾನದ ಕಾಲಘಟ್ಟದಲ್ಲಿ ಕೊರೊನಾ ವೈರಾಣು ತಂದಿಟ್ಟ ಆಕಸ್ಮಿಕ ಮತ್ತು ಆಘಾತಕಾರಿ ಬದಲಾವಣೆಗಳು ಜನಸಾಮಾನ್ಯರ ದೈನಂದಿನ ಬದುಕಿನಲ್ಲಿ ಎಂದೂ ಮರೆಯಲಾಗದ ಸ್ಮöÈತಿಯಾಗಿ ಉಳಿಯಲಿವೆ. 2020ರಲ್ಲಿ, ವರ್ಷವಿಡೀ ನಮ್ಮ ಮನಸ್ಸನ್ನು ಆವರಿಸಿದ್ದ ಈ ಕೊರೊನಾ ಸಂಬAಧಿತ ಪರಿಕರಗಳು, ಸರಕಾರ ಜಾರಿಗೊಳಿಸಿದ ವಿನೂತನ ಮಾರ್ಗಸೂಚಿಗಳು, ಕೊರೊನಾ ಅಲೆಗಳು, ಆರ್ಥಿಕ ಸಂಕಷ್ಟಗಳು, ಭಯ ಉತ್ಪಾದಿಸಿದ ಸುದ್ದಿಮಾಧ್ಯಮಗಳು, ಎಲ್ಲಾ ಐಷಾರಾಮಗಳಿದ್ದೂ ಅನಾಥವಾದ ಹೆಣಗಳು, ಇತ್ಯಾದಿಗಳಿಂದ ಒಮ್ಮೆ ಹೊರಬಂದು ಸೂಕ್ಷ÷್ಮವಾಗಿ ಆಲೋಚಿಸಿದರೆ, ಜಗತ್ತನ್ನೆ ತಲ್ಲಣಗೊಳಿಸಿದ ಈ ಮಹಾನ್ ಪಲ್ಲಟದಿಂದ ಪ್ರಾಯಶಃ, ಮನುಷ್ಯ ಸಕಾರಾತ್ಮಕ […]

ಯಾರು ಹಿತವರು ಈ ಮೂವರೊಳಗೆ…?

-ಪದ್ಮರಾಜ ದಂಡಾವತಿ

ಯಾರು ಹಿತವರು ಈ ಮೂವರೊಳಗೆ…?
-ಪದ್ಮರಾಜ ದಂಡಾವತಿ

-ಪದ್ಮರಾಜ ದಂಡಾವತಿ ಪರ್ಯಾಯ ನಾಯಕತ್ವ ಕಾಣದ ಬಿಜೆಪಿ ಇಷ್ಟೆಲ್ಲ ಆಂತರಿಕ ತಿಕ್ಕಾಟ ಇರುವ, ಹಾದಿಬೀದಿಯಲ್ಲಿ ಮುಖ್ಯಮಂತ್ರಿ ವಿರುದ್ಧವೇ ಅವರ ಪಕ್ಷದ ನಾಯಕರೇ ಎಲ್ಲ ಬಗೆಯ ಆರೋಪ ಮಾಡುತ್ತಿರುವಾಗ ಜನರು ಮತ್ತೆ ಅದೇ ಪಕ್ಷಕ್ಕೆ, ನಾಯಕತ್ವಕ್ಕೆ ಜನಾದೇಶ ಕೊಡುತ್ತಾರೆಯೇ? ಮುಂದಿನ ಚುನಾವಣೆಯ ನಾಯಕತ್ವವನ್ನು ಲಿಂಗಾಯತರ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪ ವಹಿಸುವುದಿಲ್ಲ! ವರ್ತಮಾನದಲ್ಲಿ ಮತ್ತು ಇತಿಹಾಸದಲ್ಲಿ ಕರ್ನಾಟಕದ ಮೂರೂ ರಾಜಕೀಯ ಪಕ್ಷಗಳಿಗೆ ಅನೇಕ ಪಾಠಗಳು ಇವೆ. ವರ್ತಮಾನದಿಂದಲೇ ಪಾಠ ಕಲಿಯದವರು ಇತಿಹಾಸದಿಂದ ಕಲಿಯುತ್ತಾರೆಯೇ? ಒಬ್ಬ ನಾಯಕ ಒಂದು ಪಕ್ಷಕ್ಕೆ ಬೇಕಾಗಿರುವುದು […]

ಪ್ರಸನ್ನ ಅವರ ‘ದೇಸಿ’ ಆಟಗಳು!

-ಕೆ.ಪಿ.ಸುರೇಶ

ಪ್ರಸನ್ನ ಅವರ ‘ದೇಸಿ’ ಆಟಗಳು!
-ಕೆ.ಪಿ.ಸುರೇಶ

-ಕೆ.ಪಿ.ಸುರೇಶ ರಂಗಕರ್ಮಿ ಪ್ರಸನ್ನ, ಚಿಂತಕ ಪ್ರಸನ್ನ, ಆಕ್ಟಿವಿಸ್ಟ್ ಪ್ರಸನ್ನ ನಮಗೆಲ್ಲಾ ಗೊತ್ತು; ಈ ಮುಖವಾಡಗಳ ಹಿಂದೆ ಇರುವ ‘ದೇಸಿ’ಯ ನಿರ್ವಾಹಕ ಟ್ರಸ್ಟಿ ಪ್ರಸನ್ನ ಹೀಗಿದ್ದಾರೆ ನೋಡಿ! ಇದೆಲ್ಲಾ ಶುರುವಾಗಿದ್ದು ಕೆಲವು ತಿಂಗಳುಗಳ ಹಿಂದೆ ಪ್ರಸನ್ನ ಅವರು ಚರಕಾ ದಿವಾಳಿಯಾಗಿದೆ ಎಂಬ ಆಘಾತಕಾರಿ ಹೇಳಿಕೆ ನೀಡಿದ ಬಳಿಕ. ಕೆಲವು ವರ್ಷಗಳ ಹಿಂದೆ ಚರಕಾಕ್ಕೆ ಒಂದು ಪ್ರಸ್ತಾವನೆ ತಯಾರು ಮಾಡುವ ಸಂದರ್ಭದಲ್ಲಿ ಚರಕಾ ಏಕೆ ನಲುಗುತ್ತಿದೆ ಎಂಬ ಅಂಶಗಳನ್ನು ತಜ್ಞನಾಗಿ ಗುರುತು ಹಾಕಿಕೊಂಡಿದ್ದೆ. ಆ ಅಂಶಗಳನ್ನು ನೆನಪಿಸಿಕೊಂಡು ನಾನು ಕೆಲವು […]

ರೈತ ಪ್ರತಿಭಟನೆ ಹಿನ್ನೆಲೆಯಲ್ಲಿ ಕೃಷಿ ತಜ್ಞ ಹೇಳುವುದೇನು?

ಸಿರಾಜ್ ಹುಸೇನ್

ರೈತ ಪ್ರತಿಭಟನೆ ಹಿನ್ನೆಲೆಯಲ್ಲಿ ಕೃಷಿ ತಜ್ಞ ಹೇಳುವುದೇನು?
ಸಿರಾಜ್ ಹುಸೇನ್

ಸಿರಾಜ್ ಹುಸೇನ್ ದೆಹಲಿಯ ಗಡಿಯಲ್ಲಿ ಲಕ್ಷಾಂತರ ರೈತರು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿರೋಧದ ಹಿನ್ನೆಲೆಯಲ್ಲೇ ಭಾರತದ ಕೃಷಿ ಕ್ಷೇತ್ರದ ಹಲವು ಸಮಸ್ಯೆಗಳು ಮುನ್ನೆಲೆಗೆ ಬಂದಿವೆ. ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸಿರಾಜ್ ಹುಸೇನ್ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕೇಂದ್ರ ಕೃಷಿ ಸಚಿವಾಲಯದ ಆಹಾರ ಸಂಸ್ಕರಣಾ ಘಟಕದಲ್ಲಿ ಕಾರ್ಯದರ್ಶಿಯಾಗಿ, ಕೃಷಿ ಸಚಿವಾಲಯದ ಕಾರ್ಯದರ್ಶಿಯಾಗಿ, ಭಾರತೀಯ ಆಹಾರ ನಿಗಮದ ಎಂ.ಡಿ. ಆಗಿ ಕಾರ್ಯನಿರ್ವಹಿಸಿರುವ ಲೇಖಕರು ಇದೀಗ ಭಾರತೀಯ […]

ಕೃಷಿ ಕಾಯಿದೆಗಳಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

ಪ್ರತಾಪ್ ಭಾನು ಮೆಹ್ತಾ

ಕೃಷಿ ಕಾಯಿದೆಗಳಿಗೆ  ಸುಪ್ರೀಂ ಕೋರ್ಟ್ ತಡೆಯಾಜ್ಞೆ
ಪ್ರತಾಪ್ ಭಾನು ಮೆಹ್ತಾ

ಪ್ರತಾಪ್ ಭಾನು ಮೆಹ್ತಾ ಕೃಷಿ ಕಾಯಿದೆಗಳ ವಿವಾದವು ಜಟಿಲವಾದುದು. ಈ ವಿಷಯದಲ್ಲಿ ಯಾರು ಯಾರ ಪರವಾಗಿದ್ದಾರೆ ಎಂಬುದಕ್ಕಿAತ ಸರ್ವೋಚ್ಚ ನ್ಯಾಯಾಲಯವು ತನ್ನ ವ್ಯಾಖ್ಯಾನದ ಕರ್ತವ್ಯವನ್ನು ಹೇಗೆ ನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಹೆಚ್ಚು ಆತಂಕಿತರಾಗಬೇಕಾಗಿದೆ. ಸರ್ವೋಚ್ಚ ನ್ಯಾಯಾಲಯವು ಹೆಚ್ಚು ಹೆಚ್ಚಾಗಿ ಕಥಾನಕವೊಂದರ ರೂಪರಹಿತ ಆಕೃತಿಯಾಗಿ ಕಾಣುತ್ತಿದೆ. ಆದರೆ ಅದು ಹೇಗೆ ಕಾಣಬೇಕಾಗಿತ್ತೋ ಹಾಗೆ ಕಾಣುತ್ತಿಲ್ಲ. ಇದರ ರೂಪವು ರಹಸ್ಯಾತ್ಮಕವಾಗಿ ಬದಲಾಗುತ್ತಿದೆ. ಸಭ್ಯತನದ ಮುಖವಾಡ ತೊಟ್ಟು ಉದ್ದೇಶಪೂರ್ವಕವಾಗಿ ಇದು ತನ್ನ ಕೋರೆಹಲ್ಲುಗಳನ್ನು ಮರೆಮಾಚಿಕೊಂಡಿದೆ. ಅಗತ್ಯಕ್ಕೆ ತಕ್ಕಂತೆ ಇದು ತನ್ನ ರೂಪವನ್ನು […]

ಪರಿಸರ ಸಂರಕ್ಷಣೆಯ ಹೊಸ ಮಾದರಿ ಹಾಸನದ ಹಸಿರುಭೂಮಿ ಪ್ರತಿಷ್ಠಾನ

-ತಿರುಪತಿಹಳ್ಳಿ ಶಿವಶಂಕರಪ್ಪ

ಪರಿಸರ ಸಂರಕ್ಷಣೆಯ ಹೊಸ ಮಾದರಿ ಹಾಸನದ ಹಸಿರುಭೂಮಿ ಪ್ರತಿಷ್ಠಾನ
-ತಿರುಪತಿಹಳ್ಳಿ ಶಿವಶಂಕರಪ್ಪ

-ತಿರುಪತಿಹಳ್ಳಿ ಶಿವಶಂಕರಪ್ಪ ಬರಗಾಲದಿಂದ ಬಸವಳಿದ ನಿರಾಶದಾಯಕ ಪರಿಸ್ಥಿತಿಯಲ್ಲಿ ಹುಟ್ಟಿಕೊಂಡಿದೆ ಹಾಸನದ ಹಸಿರುಭೂಮಿ ಪ್ರತಿಷ್ಠಾನ. ಪ್ರಕೃತಿಯ ಸಾಧ್ಯತೆಗಳನ್ನೆಲ್ಲಾ ತಾವೇ ಆಗುಮಾಡುತ್ತೇವೆ ಎಂಬ ಹಮ್ಮು ಹಸಿರುಭೂಮಿ ರೂಪಿಸಿದವರಿಗಿಲ್ಲ. ಆದರೆ ಪ್ರಕೃತಿಯ ಮುನಿಸನ್ನು ಸಣ್ಣ ಪ್ರಮಾಣದಲ್ಲಾದರೂ ಮಣಿಸಬೇಕು ಎಂಬ ರಚನಾತ್ಮಕ ಪ್ರಯತ್ನದಲ್ಲಿ ಗಮನಾರ್ಹ ಸಾಧನೆ ಮಾಡಿದೆ ಈ ತಂಡ. ಹಾಸನದ ಈ ಪ್ರಯೋಗ ಬೇರೆಡೆಯ ಪರಿಸರಾಸಕ್ತರಿಗೂ ಪ್ರೇರಣೆ-ಪ್ರಚೋದನೆ ನೀಡಬಾರದೇಕೆ? ಆಗಾಗ್ಗೆ ಬರಗಾಲ ಬರುವುದು ನಿಸರ್ಗದ ಸಹಜ ಕ್ರಿಯೆಯಾದರೂ 2016ರ ಬರಗಾಲ ಕನ್ನಡ ನಾಡಿನ ಇತಿಹಾಸದಲ್ಲಿ ಹಿಂದೆAದೂ ಕಂಡರಿಯದ್ದು ಎನ್ನುವುದು ಅನುಭವಿಗಳ ಮಾತು. […]

ರಾಜಕೀಯ ಪಕ್ಷಗಳು ಜಾತಿಪ್ರಭಾವ ಹೆಚ್ಚಿಸುತ್ತಿವೆಯೇ..? ಜಾತಿಪ್ರಭಾವ ರಾಜಕೀಯ ಕುಲಗೆಡಿಸುತ್ತಿದೆಯೇ..?

ಇತ್ತೀಚಿನ ಘಟನೆಗಳು ಜಾತ್ಯತೀತ ಬಯಕೆಗೆ ವ್ಯತಿರಿಕ್ತವಾಗಿ ನಡೆಯುತ್ತಿವೆ. ಜಾತಿ-ಉಪಜಾತಿಗಳಿಗೊಂದು ಮಠ; ಆ ಮಠಕ್ಕೊಬ್ಬ ಮಠಾಧಿಪತಿ; ಆ ಮಠಾಧಿಪತಿಯ ಜೋರು, ದರ್ಬಾರು, ಎಚ್ಚರಿಕೆ ಹಾಗೂ ಬ್ಲಾಕ್‌ಮೇಲ್ ತಂತ್ರಗಾರಿಕೆಗಳು ಎಲ್ಲೆ ಮೀರಿ ನಿಂತಿವೆ. ಎಲ್ಲ ಜಾತಿ ಸಂಘಟನೆಗಳೂ ಹೆಚ್ಚಿನ ಮೀಸಲಾತಿ, ವರ್ಗ-ಪ್ರವರ್ಗ, ನಿಗಮ-ಮಂಡಳಿಗಳ ‘ಹಕ್ಕೊತ್ತಾಯ’ ಮಂಡಿಸುತ್ತಿವೆ. ಮೀಸಲಾತಿ ಬೆಂಕಿಗೆ ತುಪ್ಪ ಸುರಿಯುವಂತೆ ಸರ್ಕಾರಗಳು ಜಾತಿಗೊಂದು ನಿಗಮ-ಹಣ ವಿಂಗಡಣೆ-ಉತ್ಸವ ಘೋಷಿಸುತ್ತಿವೆ. ಹೀಗೇಕೆ ಆಗುತ್ತಿದೆ..? ಆಧುನಿಕತೆ ಮತ್ತು ಅಂತರ್ಜಾತಿ ವಿವಾಹಗಳು ಹೆಚ್ಚುತ್ತಿರುವ ಈ 21ನೇ ಶತಮಾನದಲ್ಲಿ ಜಾತಿಯಲ್ಲಿ ಗುರುತಿಸಿಕೊಳ್ಳುವಿಕೆ ಹಾಗೂ ಜಾತಿಪ್ರಭಾವ ಹೆಚ್ಚುತ್ತಿದೆಯೇ..? […]

ಪ್ರಜಾಪ್ರಭುತ್ವದ ಬುನಾದಿಗೆ ಪೆಟ್ಟು ಕೊಟ್ಟ ಕರ್ನಾಟಕದ ಜಾತಿ ರಾಜಕಾರಣ

-ರಾಜೇಂದ್ರ ಚೆನ್ನಿ

ಪ್ರಜಾಪ್ರಭುತ್ವದ ಬುನಾದಿಗೆ ಪೆಟ್ಟು ಕೊಟ್ಟ ಕರ್ನಾಟಕದ ಜಾತಿ ರಾಜಕಾರಣ
-ರಾಜೇಂದ್ರ ಚೆನ್ನಿ

-ರಾಜೇಂದ್ರ ಚೆನ್ನಿ ಅನೈತಿಕ ರಾಜಕೀಯವು ಧಾರ್ಮಿಕ ಸಂಸ್ಥೆಗಳನ್ನು ಪ್ರಭಾವಿಸಿದೆ. ಪರಿಣಾಮವೆಂದರೆ ಈ ಸಂಸ್ಥೆಗಳು ಹಾಗೂ ಅವುಗಳ ಧುರೀಣರು ಸದ್ಯದ ರಾಜಕೀಯದ ನುಡಿಗಟ್ಟನ್ನು ಮತ್ತು ಕಾರ್ಯವಿಧಾನಗಳನ್ನು ಸಂಪೂರ್ಣವಾಗಿ ಅನುಸರಿಸುತ್ತಿವೆ. ಈ ಪ್ರಕ್ರಿಯೆಯಲ್ಲಿ ತಮ್ಮ ಆಧ್ಯಾತ್ಮಿಕ ಅಧಿಕಾರವನ್ನು ಕಳೆದುಕೊಂಡಿರುವುದರಿOದ ಈಗ ರಾಜಕೀಯ ಅಧಿಕಾರದ ಅನುಕರಣೆಯ ಹೊರತಾಗಿ ಇನ್ನೇನೂ ಮಾಡಲಾಗದ ಸ್ಥಿತಿಯಲ್ಲಿವೆ. ಕರ್ನಾಟಕ ರಾಜ್ಯದಲ್ಲಿ ಮಠಗಳು ಮತ್ತು ರಾಜಕೀಯ ಪಕ್ಷಗಳ ಸಂಬAಧವನ್ನು ಗುರುತಿಸುವುದಕ್ಕಾಗಿ ಮುಖ್ಯವಾಗಿ ಮೂರು ವಿದ್ಯಮಾನಗಳನ್ನು ಗಮನಿಸಬೇಕಾಗುತ್ತದೆ. ಮೊದಲನೆಯದು, ಆಧುನಿಕ ಕಾಲದಲ್ಲಿ, ವಸಾಹತುಶಾಹಿ ಸಂದರ್ಭದಲ್ಲಿ ಜಾತಿ ಸಂಘಟನೆಗಳು ಅಸ್ತಿತ್ವಕ್ಕೆ ಬಂದು […]