2017ನೇ ಇಸವಿ, ಡಿಸೆಂಬರ್ 25ನೇ ತಾರೀಖು ಬೆಂಗಳೂರಿನ ಗಾಂಧೀ ಭವನದಲ್ಲಿ ಒಂದು ಕಾರ್ಯಕ್ರಮ ಏರ್ಪಾಡಾಗಿತ್ತು. ಇನ್ಫೋಸಿಸ್ ಸಹಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಪ್ರಸಿದ್ಧ ಸಾಹಿತಿ ಅರವಿಂದ ಮಾಲಗತ್ತಿ ವೇದಿಕೆ ಮೇಲಿದ್ದರು. ಮೂರು ವಿಭಿನ್ನ ಕ್ಷೇತ್ರಗಳ ದಿಗ್ಗಜರ ಸಮಾಗಮ ಆಗಿದ್ದರೂ ಅಲ್ಲಿ ಆಡಂಬರಕ್ಕೆ ಆಸ್ಪದವಿರಲಿಲ್ಲ; ಅರ್ಥವಂತಿಕೆ ತುಂಬಿ ತುಳುಕುತ್ತಿತ್ತು, ಸಮಾರಂಭದ ಆಶಯಗಳಿಗೆ ಮಿಡಿಯುವ ನೂರಾರು ಮುಕ್ತ ಮನಸ್ಸುಗಳು ನೆರೆದಿದ್ದವು. ಅಂದು ಕ್ರಿಸ್ಮಸ್ ಹಬ್ಬ ಬೇರೆ. ಪ್ರೇಕ್ಷಕರ ಮಧ್ಯದಿಂದ ನಡೆದುಬಂದ ಪುಟ್ಟ ಸಾಂತಾ ಕ್ಲಾಸ್ ಅತಿಥಿಗಳ ಎದುರು ಒಂದು […]
ಕಳೆದುಕೊಳ್ಳುವ ಪ್ರಶ್ನೆ ಎಲ್ಲಿ? -ಪದ್ಮರಾಜ ದಂಡಾವತಿ, ಬೆಂಗಳೂರು. ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ‘ಕಾಂಗ್ರೆಸ್ ಮುಕ್ತ ಭಾರತ ಅನಿವಾರ್ಯವೇ…? ಸದ್ಯಕ್ಕೆ ಬೇಡವೇ…?’ ಕುರಿತ ಮುಖ್ಯ ಚರ್ಚೆಯಲ್ಲಿ ಪಾಲ್ಗೊಂಡು ಸುಧೀಂದ್ರ ಕುಲಕರ್ಣಿ ಅವರು ಬರೆದಿರುವ ಲೇಖನದಲ್ಲಿ ‘ವಿ.ಪಿ.ಸಿಂಗ್, ಬಿಜು ಪಟ್ನಾಯಕ ಮತ್ತು ರಾಮಕೃಷ್ಣ ಹೆಗಡೆಯವರಂಥ ಜನಪ್ರಿಯ ನಾಯಕರನ್ನು ಕಾಂಗ್ರೆಸ್ ಕಳೆದುಕೊಂಡಿತು’ ಎಂಬ ಮಾಹಿತಿ ಇದೆ. ಬಿಜು ಪಟ್ನಾಯಕ್ ಮತ್ತು ರಾಮಕೃಷ್ಣ ಹೆಗಡೆಯವರು 1969ರಲ್ಲಿ ಕಾಂಗ್ರೆಸ್ ವಿಭಜನೆಯಾದಾಗಲೇ (ಆಗ ಹುಟ್ಟಿಕೊಂಡ ಎರಡು ಪಕ್ಷಗಳನ್ನು ಇಂಡಿಕೇಟ್, ಸಿಂಡಿಕೇಟ್ ಎಂದು ಕರೆಯಲಾಗಿತ್ತು) ಇಂದಿರಾ ಗಾಂಧಿ […]
-ಡಾ.ಟಿ.ಆರ್.ಚಂದ್ರಶೇಖರ ಕಾಂಗ್ರೆಸ್ ಮುಕ್ತ ಭಾರತ ಎಂಬುದು ದುರಹಂಕಾರದ ಪರಾಕಾಷ್ಠೆಯ ಮತ್ತು ಜನತಂತ್ರ ವಿರೋಧಿ ನುಡಿಗÀಟ್ಟು. ಈ ನುಡಿಗಟ್ಟನ್ನು ಸುಮ್ಮನೆ ನೋಡಿದರೆ ಸಾಕು, ಅದರ ಮೂಲದಲ್ಲಿರುವ ಸರ್ವಾಧಿಕಾರಿ ಧೋರಣೆ ಅರ್ಥವಾದೀತು. ಈ ನುಡಿಗಟ್ಟಿನ ಮೂಲದಲ್ಲಿರುವ ದುಷ್ಟತನದ ಭಾವನೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಇತ್ತೀಚೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬಿಡನ್ ಅವರ ಗೆಲುವಿನ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ‘ಪ್ರಗತಿಯನ್ನು ಸಾಧಿಸಬೇಕಾದರೆ ನಾವು ನಮ್ಮ ವಿರೋಧಿಗಳನ್ನು ಶತ್ರುಗಳೆಂದು ಭಾವಿಸುವುದನ್ನು ನಿಲ್ಲಿಸಬೇಕು’ ಎಂಬ ಬಿಡನ್ ಮಾತು ಶಾಂತಿದೂತನೊಬ್ಬನ ಸಂದೇಶದಂತಿದೆ. ಡೊನಾನ್ಡ್ ಟ್ರಂಪ್ಗೆ ಮತ ನೀಡಿದ […]
-ಹುರುಕಡ್ಲಿ ಶಿವಕುಮಾರ “ಕಾಂಗ್ರೆಸ್ ಮುಕ್ತ ಭಾರತ” ಕುರಿತು ನಾವು ಮುಖ್ಯವಾಗಿ ಚರ್ಚಿಸಬೇಕಿರಲಿಲ್ಲ! ಆದರೂ ಈ ಕುರಿತು 11 ಜನರ ವಿಶ್ಲೇಷಣೆಗಳನ್ನು ಓದಿದೆ. ಈ ಎಲ್ಲಾ ವಿಶ್ಲೇಷಣೆಗಳ ಆಚೆಗೆ ಸಾಮಾನ್ಯ ಮತದಾರರ ಒಲವು ನಿಲುವುಗಳು ಬೇರೆಯೇ ಇವೆ. ಮೊದಲನೆಯದಾಗಿ “ಕಾಂಗ್ರೆಸ್ ಮುಕ್ತ ಭಾರತ” ಎಂಬ ಸೊಲ್ಲೇ ತುಂಬಾ ಠೇಂಕಾರದಿಂದ ಕೂಡಿದೆ. ಸಾಮಾನ್ಯ ಮತದಾರರಿಗೆ ಈ ಸಂಗತಿ ತುಂಬಾ ಚೆನ್ನಾಗಿ ಗೊತ್ತಿರುವುದರಿಂದ ಅವರು ಕಳೆದ ಆರು ವರ್ಷಗಳಲ್ಲಿ ಅನೇಕ ಮುಖ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ಸಿಗೆ ಮತ ನೀಡುತ್ತಲೇ ಬಂದಿದ್ದಾರೆ. ಬಿಜೆಪಿ ಗೆದ್ದಿರಬಹುದು; […]
-ಡಾ.ಟಿ.ಗೋವಿಂದರಾಜು ಮುಖ್ಯಚರ್ಚಾ ವಿಷಯದ ಶೀರ್ಷಿಕೆಯ ಉದ್ದೇಶವೇ ಪ್ರಶ್ನಾರ್ಹವಾಗಿದೆ. ಕಾಂಗ್ರೆಸ್ಮುಕ್ತ ಭಾರತ ಎಂಬುದು ಬಿಜೆಪಿಯ ಜನ್ಮಾಂತರದ ಕನಸು. ಕ್ಷತ್ರಿಯರ ನಿರ್ವಂಶಕ್ಕಾಗಿಯೇ ಪರಶುರಾಮ, ಜನಾನುರಾಗಿ ಬಲಿಯನ್ನು ದೇಶ ಬಿಟ್ಟು ಓಡಿಸುವುದಕ್ಕಾಗಿಯೆ ವಾಮನ, ಶಿವಭಕ್ತ ಅಸುರರ ನಿರ್ನಾಮ ಮಾಡಿ ತನ್ನ ಭಕ್ತರನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿಯೇ ಇತರ ಅವತಾರಗಳನ್ನು ವಿಷ್ಣು ತಾಳಿದಂತೆ ಕಾಂಗ್ರೆಸ್ ಅನ್ನು ನಿರ್ನಾಮ ಮಾಡುವುದಕ್ಕಾಗಿಯೇ ಬಿಜೆಪಿ ಹುಟ್ಟಿದಂತೆ ವರ್ತಿಸುತ್ತಿದೆ. ಕಾಂಗ್ರೆಸ್ ಇಲ್ಲವಾದರೆ ಕೇವಲ ಬಿಜೆಪಿಯ ನಿರಂಕುಶ ಆಡಳಿತಕ್ಕೆ ಅನುಕೂಲ ಆಗುವುದರ ಹೊರತಾಗಿ ಜನಸಾಮಾನ್ಯರಿಗೆ ಅಲ್ಲ ಎಂಬುದನ್ನು ಈಗಾಗಲೆ ಸರಕಾರ ತನ್ನ ವರ್ತನೆ, […]
-ರಮಾನಂದ ಶರ್ಮಾ ಪ್ರಜಾಪ್ರಭುತ್ವದ ಯಶಸ್ಸಿಗೆ, ನಿಯಮಿತವಾಗಿ ಚುನಾವಣೆಗಳು ನಡೆಯುವುದು ಹೇಗೆ ಮುಖ್ಯವೋ, ಅದೇರೀತಿ ಬಲಿಷ್ಠ ವಿರೋಧ ಪಕ್ಷವೂ ಮುಖ್ಯ. ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಪರಿಕಲ್ಪನೆ ಮತ್ತು ಚಿಂತನೆ ಅಕಸ್ಮಾತ್ ಕಾರ್ಯರೂಪಕ್ಕೆ ಬಂದರೆ, ಭಾರತದಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ವಿರೋಧ ಪಕ್ಷವೇ ಇರುವುದಿಲ್ಲ. ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಈ ಪಾತ್ರವನ್ನು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ನಿರ್ವಹಿಸುವ ಸ್ಥಿತಿಯಲ್ಲಿಲ್ಲ. ಸಂಕುಚಿತ ಪ್ರಾದೇಶಿಕ ಅಜೆಂಡಾದಲ್ಲಿ ಕಾರ್ಯನಿರ್ವಹಿಸುವ ಅವು ಅಖಿಲ ಭಾರತ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಸಮಸ್ಯೆಗಳ ನಿಟ್ಟಿನಲ್ಲಿ ವಿರೋಧಪಕ್ಷವಾಗಿ ರೂಪುಗೊಳ್ಳುವುದು […]
-ಜಯಾತನಯ ರಾಜ್ಯದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ಸಿನಲ್ಲಿ ಎರಡು ಶಕ್ತಿ ಕೇಂದ್ರಗಳಿದ್ದರೆ, ಆಡಳಿತಾರೂಢ ಬಿಜೆಪಿಯಲ್ಲಿರುವುದು ಒಂದೇ ಶಕ್ತಿ ಕೇಂದ್ರ. ಇನ್ನು ಅವಕಾಶವಾದವನ್ನೇ ರಾಜಕೀಯ ದಾಳವಾಗಿಸಿಕೊಂಡಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಗೆ ಸಾಥ್ ಕೊಡುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣದ ಚರ್ಚೆ ಆರಂಭವಾಗಿದೆ. ರಾಜಕೀಯ ಧ್ರುವೀಕರಣ… ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗಳು ಎದುರುಬಂದಾಗಲೆಲ್ಲಾ ಸಾಮಾನ್ಯವಾಗಿ ಕೇಳಿಬರುವ ಈ ಮಾತು ಸದ್ಯ ಯಾವುದೇ ಚುನಾವಣೆ ಇಲ್ಲದಿದ್ದರೂ ಕೇಳಿಬಂದಿದೆ. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಹೇಳಿರುವ ಈ ಮಾತು […]
-ಡಾ.ತ್ರಿಯಂಬಕ ತಾಪಸ ವಾಹಿನಿಗಳಲ್ಲಿ ವಾರ್ತೆಯಾಗಿ, ಸೋಂಕಿತರ-ಸತ್ತವರ ಸಂಖ್ಯೆಯಾಗಿ ಗೋಚರಿಸುತ್ತಿದ್ದ ಕೋವಿಡ್ ಒಂದು ದಿನ ನಮ್ಮ ಮನೆಯ ಬಾಗಿಲನ್ನೂ ತಟ್ಟಿ ಜೀವನ ಸಂಗಾತಿಯನ್ನು ಕರೆದೊಯ್ದಾಗ…! ನಾನು ನನ್ನ ಹೆಂಡತಿಯೊಡನೆ ಉತ್ತರ ಕರ್ನಾಟಕದ ಬಿಸಿಲು ಹವೆಯಿಂದ ತಂಪು ಹವೆಯ ಬೆಂಗಳೂರಿಗೆ ಸಾಂದರ್ಭಿಕ ಅನಿವಾರ್ಯತೆಯಿಂದ ಬಂದು ನೆಲೆಸಿ ಹತ್ತು ವರ್ಷಗಳಾದವು. ಅಲ್ಲಿನ ಸಿಡಿಲು-ಗುಡುಗುಗಳ ಮಳೆಯ ನೆನಪು ಇಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ವಿರಳ. ಆದರೆ ಈ ಜುಲೈ ತಿಂಗಳಿನಲ್ಲಿ ನಮ್ಮ ಮನೆಗೆ ಹೊಸ ರೂಪದ ಸಿಡಿಲೊಂದು ಬಡಿಯಿತು. ಸಿಡಿಲಿನ ಬಡಿತ ಎಷ್ಟು ಆಕಸ್ಮಿಕವೋ, […]
-ಅಖಿಲೇಶ್ ಚಿಪ್ಪಳಿ ಸಾಗರದ ಬಳಿ ಸದ್ದಿಲ್ಲದೇ ನಡೆಯುತ್ತಿರುವ ಖಾಸಗಿ ಕಾಡು ಬೆಳೆಸುವ ಕಾರ್ಯಕ್ಕೆ ಪ್ರಚಾರ ಬೇಡವೆಂಬುದು ಮಾಲೀಕರ ಅಭಿಪ್ರಾಯ; ಇದನ್ನು ಹೊರಜಗತ್ತಿಗೆ ತೋರ್ಪಡಿಸಿ ಈ ತರಹದ ಕಿರುಕಾಡು ಬೆಳೆಸುವವರಿಗೆ ಪ್ರೇರಣೆ ನೀಡಬೇಕೆಂಬುದು ಲೇಖಕರ ಸ್ವಾರ್ಥ! ಬೆಂಗಳೂರಿನ ಯಶಸ್ವೀ ಉದ್ಯಮಿ ಸುರೇಶ್ ಕುಮಾರ್ ಬಿ.ವಿ. ಅವರು ಸಾಗರದಿಂದ 7 ಕಿಮಿ ದೂರದಲ್ಲೊಂದು 21 ಎಕರೆ ಒಣಭೂಮಿ ಕೊಂಡರು. ಅವರು ಮೂಲತಃ ಕೃಷಿಕರೇ ಆಗಿದ್ದು, ಓದಿ ಬೆಂಗಳೂರು ಸೇರಿ ಉದ್ಯಮಿಯಾಗಿದ್ದರು. ಜಾಗವನ್ನೇನೋ ಕೊಂಡರು. ಆ ಜಾಗದಲ್ಲಿ ಏನು ಮಾಡುವುದು? ಅದು […]
-ಡಾ.ಜೆ.ಎಸ್.ಪಾಟೀಲ ಆರಂಭದಿಂದಲೂ ಮೋದಿಯವರ ಆದ್ಯತೆಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲಿಗೆ ಆಡಂಬರದ, ಭಾವನಾತ್ಮಕ ಸಂಗತಿಗಳ ಸುತ್ತ ಗಿರಕಿ ಹೊಡೆಯುತ್ತಿವೆ. ಸನಾತನ ವ್ಯವಸ್ಥೆಯ ಅನುಯಾಯಿ ಪ್ರಧಾನಿ ಮೋದಿಯವರು ಬಸವಣ್ಣ ಮತ್ತು ಅನುಭವ ಮಂಟಪದ ಹೆಸರನ್ನು ಬಳಸಿದ್ದು ಮತ್ತೊಂದು ಅಸಂಗತ ನಡೆ. ದೇಶ ಹಿಂದೆಂದೂ ಕಂಡರಿಯದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದೆ. ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಕೈಗೊಪ್ಪಿಸುವ ಕರಾಳ ಕೃಷಿ ಮಸೂದೆಯ ವಿರುದ್ಧ ಅನ್ನದಾತ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾನೆ. ನಿರುದ್ಯೋಗ ಐತಿಹಾಸಿಕ ಏರಿಕೆ ಕಂಡು ತಾಂಡವ ನೃತ್ಯವಾಡುತ್ತಿದೆ. ದೇಶದ ಜನಸಾಮಾನ್ಯರು […]
-ಡಾ.ಬಿ.ಆರ್.ಮಂಜುನಾಥ ರೈತರು ತಾವು ಈ ಬಾರಿ ಸೋತರೆ ಅಥವಾ ಸಡಿಲಬಿಟ್ಟರೆ ಸತ್ತಂತೆಯೇ ಎಂದು ಭಾವಿಸಿದ್ದಾರೆ. ಇದು ಯಾವುದೋ ರಾಜಕೀಯ ಪಕ್ಷದ ಅಥವಾ ಶಕ್ತಿಗಳ ಕಾರ್ಯಾಚರಣೆ ಎಂಬುದು ಅಸಂಬದ್ಧ ಅಪ್ರಲಾಪ. ನಿಜವಾದ ಆತಂಕ, ಜನಬೆಂಬಲವಿಲ್ಲದೆ ಲಕ್ಷೋಪಲಕ್ಷ ಜನ ತಿಂಗಳುಗಟ್ಟಲೆ ‘ಸಾಯಲು ಸಿದ್ಧ’ ಎಂದು ರಸ್ತೆಗಿಳಿಯುವುದು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ಕಾಪೋರೇಟ್ಗಳಿಗೆ ಮಾತುಕೊಟ್ಟು ಈಗ ಕಷ್ಟಕ್ಕೆ ಸಿಕ್ಕಿಹಾಕಿಕೊಂಡಂತಿದೆ. ಎಲೈ ರಾಜತಂತ್ರಜ್ಞರಿರ, ನೀವು ಎಂದೂ ಮರೆಯದಿರಿ ವೈಭವವೆ ಸುಖವಲ್ಲವೆಂದು ಸಿರಿಸುತರು ಕಾನೂನುಗಳ ರಚಿಸುತಿಹರು ಬಡವರದಕೊಳಗಾಗಿ ಗೋಳಾಡುತಿಹರು ಹಣಗಾರರಾನಂದ ಬಡಜನರ ಗೋಳು […]
-ಸಿ.ಯು.ಬೆಳ್ಳಕ್ಕಿ ನಮ್ಮ ದೇಶದಲ್ಲಿ ಬಾನುಲಿ ಪ್ರಸಾರ ಆರಂಭಗೊಂಡು ಎಂಟು ದಶಕಗಳು ಕಳೆದಿವೆ. ಸ್ಥಳೀಯ ಭಾಷೆ, ಕಲೆ, ಸಂಸ್ಕೃತಿ, ಪ್ರತಿಭೆಗಳನ್ನು ಪೆÇೀಷಿಸುವಲ್ಲಿ ಬಾನುಲಿ ಪಾತ್ರ ಅನನ್ಯ. ಇಂತಹ ಪ್ರಭಾವಶಾಲಿ ವಿಕೇಂದ್ರೀಕೃತ ಪ್ರಸಾರಕ್ಕೆ ಕಾರಣವಾದ ಆಕಾಶವಾಣಿ, ಇಂದು ಪ್ರಸಾರ ಭಾರತಿಯ ತಪ್ಪು ನಿರ್ಧಾರದಿಂದ ದೇಶೀ ದನಿ-ಬನಿ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದೆ. ಮರು ಬ್ರಾಂಡಿಂಗ್ ಹೆಸರಿನಲ್ಲಿ ಪ್ರಾದೇಶಿಕ ಕಾರ್ಯಕ್ರಮಗಳಿಗೆ ಕತ್ತರಿ ಹಾಕುವ, ಸಿಬ್ಬಂದಿ ಕಡಿತ ಮಾಡುವ ಕಾರ್ಯಸೂಚಿ ಇದರಲ್ಲಡಗಿದೆ. ನಮ್ಮ ದೇಶದ ಭೌಗೋಳಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಅಪಾರ ವ್ಯಾಪ್ತಿ, […]
2021 ಅಥವಾ ಮುಂದಿನ ಬೇರಾವುದೇ ವರುಷ 2020ರಷ್ಟು ಕೆಟ್ಟದಾಗಿರಲಾರದು. ಆದರೆ 2021ನೆಯ ಇಸವಿ ಕೆಲವು ಹೊಸತನ್ನೂ ಹೊತ್ತು ನಮಗೆ ಆಶಾದಾಯಕವಾಗಿ ಕಾಣುತ್ತಿದೆ. 2021ಕ್ಕೆ ಕಾಯುವ ನಮ್ಮ ಆತುರಕ್ಕೆ ಇಂಬು ಕೊಡುವಂತೆ ಇನ್ನೂ ಹಲವಾರು ಆಶಾದಾಯಕ ರಾಷ್ಟ್ರೀಯ-ಅಂತರರಾಷ್ಟ್ರಿಯ ಸಂಗತಿಗಳು ಮತ್ತು ಆರೋಗ್ಯ-ಆರ್ಥಿಕ ಬೆಳವಣಿಗೆಗಳು ನಮಗೆ ಗೋಚರವಾಗುತ್ತಿವೆ. ಫೈಝರ್, ಮಾಡೆರ್ನಾ ಹಾಗೂ ಆಕ್ಸ್ಫರ್ಡ್ ಲಸಿಕೆಗಳು ತಮ್ಮ ಪ್ರಾಯೋಗಿಕ ಪರೀಕ್ಷೆಗಳನ್ನು ಮುಗಿಸಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಾಯುತ್ತಿವೆ. ಲಸಿಕೆಗೆ ಮೊದಲೇ ದೇಶಾದ್ಯಂತ ಸಮೂಹ ರೋಗ […]
-ಡಾ.ಕಿರಣ್ ವಿ.ಎಸ್. ಹೊಸ ವರ್ಷದಲ್ಲಿ ಕೋವಿಡ್-19 ವಿರುದ್ಧ ಸಾಲು-ಸಾಲು ಲಸಿಕೆಗಳು ದೊರೆಯಲಿವೆ. ಜೊತೆಗೆ, ಕೊರೊನಾ ಸೋಂಕಿನ ವಿರುದ್ಧ ಪರಿಣಾಮಕಾರಿ ಔಷಧವೂ ಲಭ್ಯವಾಗಬಹುದು. ಆ ನಿಟ್ಟಿನಲ್ಲೂ ಸಾಕಷ್ಟು ಕೆಲಸಗಳು ನಡೆಯುತ್ತಿವೆ. ವೈದ್ಯ ಜಗತ್ತು ಈಗ ಕೋವಿಡ್-19 ಚಿಕಿತ್ಸೆಯ ಬಗ್ಗೆ ಗಣನೀಯ ಅನುಭವ ಗಳಿಸಿದೆ. ಇವು 2021ರ ಆಶಾದಾಯಕ ಸಂಗತಿಗಳು. ಮಾನವ ಇತಿಹಾಸದಲ್ಲಿ 2020ನೆಯ ವರ್ಷ `ಕೋವಿಡ್’ ವರ್ಷವೆಂದೇ ಹೆಸರಾಗಲಿದೆ. ಜಗತ್ತಿನ ಸಂಕೀರ್ಣ ರಚನೆಯನ್ನು ಅಲುಗಾಡಿಸಿದ, ಆರೋಗ್ಯ ವ್ಯವಸ್ಥೆಯ ಶೈಥಿಲ್ಯಗಳನ್ನು ಅನಾವರಣಗೊಳಿಸಿದ, ಮಾನವ ಸಂಬಂಧಗಳ ಸೂಕ್ಷ್ಮಗಳನ್ನು ಒರೆಗೆ ಹಚ್ಚಿದ ಕೀರ್ತಿ […]
-ಹೇಮಂತ್ ಎಲ್. ಚಿಕ್ಕಬೆಳವಂಗಲ ಕೋವಿಡ್ 19 ಸಾಂಕ್ರಾಮಿಕವು ವಿಶ್ವದ ಇತರೆ ದೇಶಗಳಲ್ಲಿ ಬಾಧಿಸಿದಂತೆ ಭಾರತದಲ್ಲಿ ತೊಂದರೆ ಕೊಟ್ಟಿಲ್ಲ. ಇದಕ್ಕೆ ಭಾರತೀಯರ ರೋಗನಿರೋಧಕ ಶಕ್ತಿ ಮತ್ತು ವಾತಾವರಣ ಎರಡೂ ಕಾರಣ. ಈ ನಡುವೆ ಲಸಿಕೆಗೆ ಮೊದಲೇ ದೇಶಾದ್ಯಂತ ಸಮೂಹ ರೋಗ ನಿರೋಧಕ ಶಕ್ತಿ ಪಸರಿಸಿದೆ ಎಂಬ ಹೊಸ ಚರ್ಚೆಯೊಂದು ಶುರುವಾಗಿದೆ. ಅನ್ಯಜೀವಿಯೊಂದು ನಮ್ಮ ದೇಹದ ಮೇಲೆ ದಾಳಿ ಮಾಡಿದರೆ ಅದನ್ನು ಪ್ರತಿರೋಧಿಸುವ ಜೈವಿಕ ಕ್ರಿಯೆ ನಡೆಯುತ್ತದೆ. ಇದನ್ನು ಪ್ರತಿರೋಧಕ ಶಕ್ತಿ ಎನ್ನುತ್ತಾರೆ. ಭಾರತೀಯರಲ್ಲಿ ಈ ಪ್ರತಿರೋಧಕ ಗುಣ ಅಧಿಕವಾಗಿರುವುದರಿಂದಲೇ […]
-ಡಾ.ಎಸ್.ಆರ್.ಕೇಶವ ಭಾರತವು 2021ರಲ್ಲಿ ಖಂಡಿತವಾಗಿಯೂ ಬೆಳವಣಿಗೆಯತ್ತ ಸಾಗುತ್ತದೆ. ಆದರೆ ಇದು ಕೋವಿಡ್-19ರ ಎರಡನೇ ಅಲೆ ಸಂಭವಿಸುವುದನ್ನು ತಡೆಯಲು ಮತ್ತು ಆತ್ಮನಿರ್ಭರ ಭಾರತ್ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸರ್ಕಾರದ ಸೂಕ್ತ ಕ್ರಮಗಳನ್ನು ಅವಲಂಬಿಸಿರುತ್ತದೆ. ಪ್ರಪಂಚದಾದ್ಯಂತ ಜನರು 2021 ಅನ್ನು ಸ್ವಾಗತಿಸಲು ಅತ್ಯಾಸಕ್ತಿರಾಗಿದ್ದಾರೆ. ಅವರು ತಮ್ಮ ಜೀವನೋಪಾಯ ಮತ್ತು ಆರ್ಥಿಕತೆಯನ್ನು ನಾಶಪಡಿಸಿದ ಕೋವಿಡ್-19 ಬಿಕ್ಕಟ್ಟಿನಿಂದ ಹೊರಬರಲು ಉತ್ಸಾಹಭರಿತರಾಗಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ಅಂತಿಮ ವೆಚ್ಚವು ಜಾಗತಿಕ ಆರ್ಥಿಕತೆಗೆ ಕಳೆದುಹೋದ ಉತ್ಪಾದನೆಯಲ್ಲಿ ಒಟ್ಟು 28 ಟ್ರಿಲಿಯನ್ ಯುಎಸ್ ಡಾಲರ್ ಎಂದು ಐಎಂಎಫ್ […]
-ನಾ ದಿವಾಕರ ಅಮೆರಿಕೆಯಲ್ಲಿ ಡೆಮಾಕ್ರಟ್ ಪಕ್ಷ ಅಧಿಕಾರಕ್ಕೆ ಬಂದಿರುವುದು ಮತ್ತು ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಅಲ್ಲಿನ ಜನರಲ್ಲಿ, ಜಾಗತಿಕ ಸಮುದಾಯದಲ್ಲಿ ಆಶಾಭಾವ ಮೂಡಿಸಿದೆ. ಅಮೆರಿಕದ ನಿರ್ಗಮಿಸುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಕಾರ್ಪೋರೇಟ್ ಪ್ರತಿನಿಧಿಯಂತೆಯೇ ತಮ್ಮ ಅಧ್ಯಕ್ಷಾವಧಿಯನ್ನು ಪೂರೈಸಿದ್ದಾರೆ. ಟ್ರಂಪ್ ಆಡಳಿತದ ಜನವಿರೋಧಿ ನೀತಿಗಳು, ಕೋವಿದ್ ನಿಯಂತ್ರಣದ ವೈಫಲ್ಯ, ಟ್ರಂಪ್ ಹುಚ್ಚಾಟದಿಂದ ಲಕ್ಷಾಂತರ ಜನರ ಸಾವು, ಸಾರ್ವಜನಿಕ ಆರೋಗ್ಯ ಕ್ಷೇತ್ರದ ನಿರ್ಲಕ್ಷ್ಯ ಇವೆಲ್ಲ ಕಾರಣಗಳಿಂದ ಕಳೆದ ಚುನಾವಣೆಗಳಲ್ಲಿ ಅಮೆರಿಕದ ಜನತೆ ಜೋ ಬೈಡನ್ ಮತ್ತು ಕಮಲಾ […]
-ರವಿ ಹಂಜ್ ಟ್ರಂಪ್ ಮಾಡಿದ ಅವಘಡಗಳನ್ನು ಸರಿಪಡಿಸಿ ಟ್ರಂಪ್ ಅಧಿಕಾರಕ್ಕೂ ಮುಂಚಿನ ಯಥಾಸ್ಥಿತಿಗೆ ಪರಿಸ್ಥಿತಿಯನ್ನು ತಂದರೆ ಸಾಕೆಂಬ ಕನಿಷ್ಠ ನಿರೀಕ್ಷೆ ಬೈಡನ್-ಹ್ಯಾರಿಸ್ ಮೇಲಿದೆ. ಅಗಾಧ ಅನಿಶ್ಚತತೆ, ಭೀತಿ, ರೋಚಕತೆ ತಂದಿಟ್ಟು 2020ನ್ನು ಶೂನ್ಯ ಸಂವತ್ಸರವಾಗಿಸಿದ ಕೋವಿಡ್ ಅನ್ನು ತಹಬದಿಗೆ ತರಬಲ್ಲ (?) ಲಸಿಕೆಯನ್ನು ಫೈಝರ್ ಬಿಡುಗಡೆ ಮಾಡಿದೆ. ಕತ್ತಲಿನ ಸುರಂಗದಾಚೆ ಕಾಣುವ ಕ್ಷಿತಿಜದ ಕಿರಣದಂತಹ ಈ ಲಸಿಕೆ ಸಹಜವಾಗಿ ಹೊಸ ವರ್ಷದಲ್ಲಿ ಅಗಾಧ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಆ ನಿರೀಕ್ಷೆಗಳಿಗೆ ಇಂಬಾಗುವಂತೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ […]
-ರಂಗಸ್ವಾಮಿ ಮೂಕನಹಳ್ಳಿ ಜಗತ್ತಿನಾದ್ಯಂತ ಒಂದು ರೀತಿಯ ಸೂತಕದ ಛಾಯೆ ಆವರಿಸಿದೆ. ಹಾಗಾದರೆ ಮನುಷ್ಯನ ಬದುಕಿಗೆ ಭರವಸೆ ಇಲ್ಲವೇ? ಖಂಡಿತಾ ಇದೆ; ಹಿಂದಿನ ದಿನಗಳಲ್ಲಿ ಊಹಿಸಿಕೊಳ್ಳಲೂ ಆಗದಿದ್ದ ತಂತ್ರಜ್ಞಾನ, ಆಶಾಭಾವ ಚಿಗುರಿಸುವ ಹಲವಾರು ವಿಷಯಗಳು ನಮ್ಮ ಮುಂದಿವೆ. ಕಳೆದ ಬಾರಿ ಹೊಸ ವರ್ಷವನ್ನು ಎಂದಿನಂತೆ ಬಹಳ ಖುಷಿಯಿಂದ ಸ್ವಾಗತಿಸಿದೆವು. ವಿಶ್ವಕ್ಕೆ ಕೊರೊನದಂತಹ ಘಟನೆ ಘಟಿಸಬಹುದು ಎನ್ನುವ ಕಿಂಚಿತ್ತೂ ಅರಿವು ನಮಗಿರಲಿಲ್ಲ. ವಿಶ್ವಕ್ಕೆ ಇದು ಒಂದು ರೀತಿಯ ಆಶ್ಚರ್ಯ ಎನ್ನುವುದು ಸುಳ್ಳಲ್ಲ. ಕಷ್ಟ ಕಾಲದಲ್ಲಿ ಮನುಷ್ಯನಲ್ಲಿರುವ ನಿಜವಾದ ಶಕ್ತಿಯ ಅನಾವರಣವಾಗುತ್ತದೆ […]
-ಡಾ.ಪ್ರಕಾಶ ಭಟ್ 2021ನೇ ಇಸವಿ ಸಾಂಕ್ರಾಮಿಕ ಪಿಡುಗಿನಿಂದ ಮುಕ್ತಿ ಕೊಡಬಲ್ಲುದೆ? ಊಹಿಸುವುದು ಸುಲಭವಲ್ಲ, ಅಸಾಧ್ಯವೂ ಅಲ್ಲ. ಈವರೆಗಿನ ಮಹಾಸಾಂಕ್ರಾಮಿಕಗಳನ್ನು ಪರಾಮರ್ಶಿಸಿದರೆ ಕಾಣುವುದು: ಶತಮಾನಗಳ ಕಾಲ ಕಾಡಿದ ರೋಗಗಳಿವೆ, ಕೆಲವೇ ವರ್ಷಗಳಲ್ಲಿ ಹತೋಟಿಗೆ ಬಂದವುಗಳಿವೆ, ಭೂಮಿಯ ಮೇಲಿಂದಲೇ ನಿರ್ನಾಮವಾದ ಮೈಲಿಬೇನೆಯಿದೆ. ಹಾಗಾಗಿ ಕೋವಿಡ್ ಎಷ್ಟು ಕಾಲ ನಮ್ಮನ್ನು ಸತಾಯಿಸಬಹುದೆಂಬುದು ಸುಲಭಗ್ರಾಹ್ಯವಲ್ಲ. ಇನ್ನೇನು ವ್ಯಾಕ್ಸಿನ್ ಬರಲಿದೆ. ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಹಾಗೂ ಸುರಕ್ಷಿತ ಎಂಬುದು ಇನ್ನಷ್ಟೇ ಗೊತ್ತಾಗಬೇಕಾದ್ದು. ಹಲವು ವಿಭಿನ್ನ ಸಾಧ್ಯತೆಗಳು ನಮ್ಮ ಮುಂದಿವೆ. ಲಸಿಕೆ ಸುರಕ್ಷಿತವೊ ಪರಿಣಾಮಕಾರಿಯೊ […]