ನಾವೇನು ಮಾಡುತ್ತಿದ್ದೇವೆ..?

ನಾವೇನು ಮಾಡುತ್ತಿದ್ದೇವೆ..?

ನಿಮ್ಮ ಸಮಾಜಮುಖಿ ಪತ್ರಿಕೆಯು ಬೇರೆಲ್ಲಾ ನಿಯತಕಾಲಿಕಗಳಿಗಿಂತ ಭಿನ್ನವಾಗಿದೆ ಎಂದು ನಿಮಗೆ ಈಗಾಗಲೇ ಮನವರಿಕೆಯಾಗಿದೆಯೆಂದು ಭಾವಿಸಿದ್ದೇವೆ. ಕನ್ನಡದಲ್ಲಿ ವೈಚಾರಿಕ ಚರ್ಚೆಗೆ ಹಾಗೂ ಸೃಜನೇತರ ಬರವಣಿಗೆಗಳಿಗೆ ಆಸ್ಪದ ನೀಡಲೆಂದು ಶುರುವಾದ ನಿಮ್ಮ ಈ ಪತ್ರಿಕೆ ಅಸಾಂಪ್ರದಾಯಿಕವಾಗಿ ಕನ್ನಡಿಗರ ಚಿಂತನಶೀಲತೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡುತ್ತಿದೆಯೆಂದು ಸಹಾ ನೀವು ಗಮನಿಸಿರುತ್ತೀರಿ. ಪ್ರತಿತಿಂಗಳ ಸಂಚಿಕೆಯಲ್ಲಿ ನಾವು ಮುಖ್ಯಚರ್ಚೆಯೊಂದನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ. ಕನ್ನಡದ ಬೇರಾವುದೇ ವೃತ್ತಪತ್ರಿಕೆ-ನಿಯತಕಾಲಿಕಎಲೆಕ್ಟ್ರಾನಿಕ್ಮಾ ಧ್ಯಮಗಳು ‘ಮುಟ್ಟದ’ ಸಂಕೀರ್ಣ ವಿವಾದಗಳನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ. ‘ನಮ್ಮ ಕಾಲವನ್ನು ಗುರುತಿಸುವುದು ಹೇಗೆ’ ಎಂಬಂತಹ ಅಸ್ಪಷ್ಟ ವಿಷಯಗಳಿಂದ ಹಿಡಿದು ಸಂಚಾರ ದಟ್ಟಣೆಯಂತಹ ದೈನಂದಿನ […]

ತೊಗಲುಬೊಂಬೆ ಪ್ರದರ್ಶನ ಪಂಚವಟಿ ಪ್ರಸಂಗ

ಹಾಸನ ಜಿಲ್ಲೆಯ ತೊಗಲುಬೊಂಬೆ ಕಲಾವಿದ ‘ಗುಂಡುರಾಜು’ ಅವರು ಕಳೆದ 55 ವರ್ಷಗಳಿಂದ ಈ ಅಪರೂಪದ ಜನಪದ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಶಸ್ತಿ ವಿಜೇತ ಹಿರಿಯ ಜನಪದ ಕಲಾವಿದರಾದ ಹನುಮಮ್ಮ ಮತ್ತು ಗೊಂಬೆ ರಾಮಯ್ಯರವರ ಪುತ್ರರಾದ ಗುಂಡುರಾಜು ಅವರ ಕುಟುಂಬ ಕಳೆದ ಎಂಟು ದಶಕಗಳಿಂದ ಈ ಕಲೆಯಲ್ಲಿ ನಿರತವಾಗಿದೆ. ದೇಶವಿದೇಶಗಳಲ್ಲಿ ತಮ್ಮ ತೊಗಲುಗೊಂಬೆ ಕಲೆಯನ್ನು ಪ್ರದರ್ಶಿಸಿರುವ ಗುಂಡುರಾಜು ಕರ್ನಾಟಕ ಜನಪದ ಯಕ್ಷಗಾನ ಅಕಾಡೆಮಿಯ ‘ಜ್ಞಾನವಿಜ್ಞಾನ’ ಪ್ರಶಸ್ತಿ, ಕರ್ನಾಟಕ ಜನಪದ ಪರಿಷತ್ತಿನ ಪ್ರಶಸ್ತಿ, ಕರ್ನಾಟಕ ರಂಗಸಂಗೀತ ಪರಿಷತ್ತಿನ ಪ್ರಶಸ್ತಿ ಹಾಗೂ […]

ಪರದೆ ಸಮಯ ಉಳಿಸುವ ಸವಾಲು!

- ಎಂ.ಕೆ.ಆನಂದರಾಜೇ ಅರಸ್

ನನ್ನ ಅನುಭವ ಹಾಗೂ ಅಭಿಪ್ರಾಯದಲ್ಲಿ ವಿದ್ಯುನ್ಮಾನ ಪರದೆಗಳಿಂದ ಮಕ್ಕಳನ್ನು ಈಗ ಸಂಪೂರ್ಣವಾಗಿ ಬೇರ್ಪಡಿಸಲು ಸಾಧ್ಯವಿಲ್ಲ. ಮಕ್ಕಳನ್ನು ಪರದೆಗಳಿಂದಲೇ ದೂರವಿಡಬೇಕು ಎಂಬುದು ಕಾರ್ಯಸಾಧುವಾದುದಲ್ಲ. ಮಕ್ಕಳ ಸ್ಕ್ರೀನ್ ಟೈಮ್ ಅನ್ನು (ಟಿ.ವಿ. ಹಾಗೂ ಕಂಪ್ಯೂಟರ್ ಅನ್ನು ಒಳಗೊಂಡಂತೆ) ಹೇಗೆ ಮಿತಿಗೊಳಿಸಬಹುದು ಎಂಬುದರ ಬಗ್ಗೆ ಯೋಚಿಸಬೇಕಿದೆ. – ಎಂ.ಕೆ.ಆನಂದರಾಜೇ ಅರಸ್ ಟಿವಿ ನಮ್ಮ ಮನೆಗಳಿಗೆ ಲಗ್ಗೆಯಿಟ್ಟು 3-4 ದಶಕಗಳಾಗಿವೆ. ಮೊಬೈಲ್ ಚಾಲ್ತಿಗೆ ಬಂದು ಎರಡೂವರೆ ದಶಕಗಳಾಗಿವೆ. ಸ್ಮಾರ್ಟ್ ಫೋನ್ ಕೈಗೆ ಬಂದು ದಶಕ ಕಳೆದಿದೆ. ಈ ಬೆಳವಣಿಗೆಗಳ ಪರಿಣಾಮವಾಗಿ ಈ ಸಹಸ್ರಮಾನದ ಬಹುತೇಕ […]

ರಾಷ್ಟ್ರೀಯತೆ ಮತ್ತು ಪೌರತ್ವದ ಹೊಸ ವ್ಯಾಖ್ಯೆಯ ಅಗತ್ಯವಿದೆಯೇ..?

ರಾಷ್ಟ್ರೀಯತೆ ಮತ್ತು ಪೌರತ್ವದ  ಹೊಸ ವ್ಯಾಖ್ಯೆಯ ಅಗತ್ಯವಿದೆಯೇ..?

ಸಮಾಜಮುಖಿ ಫೆಬ್ರವರಿ ಸಂಚಿಕೆಯ ಮುಖ್ಯಚರ್ಚೆ: ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿಪಟ್ಟಿಯ ವಿಷಯಗಳು ದೇಶಾದ್ಯಂತ ತೀಕ್ಷ್ಣ ಚರ್ಚೆಗೆ ಗ್ರಾಸವಾಗಿವೆ. 371ನೇ ಸಾಂವಿಧಾನಿಕ ವಿಧಿಯನ್ನು ಸಾರಾಸಗಟಾಗಿ ಹಿಂದೆಗೆದು ಕಾಶ್ಮೀರವನ್ನು ವಿಭಜನೆ ಮಾಡಿದ್ದು, ಅಸ್ಸಾಮಿನಲ್ಲಿ ಎನ್‍ಆರ್‍ಸಿ ಪ್ರಕ್ರಿಯೆ ಮುಂದುವರೆಸಿದ್ದು, ಸುಪ್ರೀಮ್ ಕೋರ್ಟಿನಲ್ಲಿ ಅಯೋಧ್ಯೆ ವಿವಾದದ ತೀರ್ಪು ಬಹುಸಂಖ್ಯಾತರ ಪರವಾಗಿದ್ದು ಹಾಗೂ ಇದೀಗ ಪೌರತ್ವ ತಿದ್ದುಪಡಿ ಕರಡನ್ನು ದೇಶದ ಸಂಸತ್ತು ಒಂದೇ ದಿನದ ಚರ್ಚೆಯ ನಂತರ ಅಂಗೀಕರಿಸಿದ್ದು ಮೊದಲಾದ ಘಟನೆಗಳು ಕಾವೇರಿದ ಆರೋಪ-ಪ್ರತ್ಯಾರೋಪಗಳಿಗೆ ಎಡೆಮಾಡಿಕೊಟ್ಟಿವೆ. ಈ ಎಲ್ಲ ಕಾನೂನು […]

ಆಡುವ ಮಕ್ಕಳ ಭವಿಷ್ಯ ಕಾಡುವ ಜಿಜ್ಞಾಸೆಗಳು

- ಡಾ.ಚಂದ್ರಕಲಾ ಹೆಚ್.ಆರ್.

ಈ ಸಹಸ್ರಮಾನದ ಮಕ್ಕಳ ಭವಿಷ್ಯವನ್ನು ರೂಪಿಸುವುದು ತಾಂತ್ರಿಕತೆಯ ನಾಗಾಲೋಟದ ಕಾಲಮಾನದಲ್ಲಿ ಸವಾಲಾಗಿದೆ. ಆಡುವ ಮಕ್ಕಳು ಕಾಡುವ ಮಕ್ಕಳಾಗಿದ್ದಾರೆ. – ಡಾ.ಚಂದ್ರಕಲಾ ಹೆಚ್.ಆರ್. ವರ್ಷದ 365 ದಿನಗಳು ಒಂದಿಲ್ಲೊಂದು ಆಚರಣೆಯ ಸರಮಾಲೆಯನ್ನು ಹೊದ್ದುಕೊಂಡ ಕ್ಯಾಲೆಂಡರನ್ನು ಗಮನಿಸಿದರೆ ಪ್ರಮುಖ ಆಚರಣೆಗಳು ಸ್ಮರಣಾರ್ಹವಾಗಿವೆ. ಜನೆವರಿ ಎಂದರೆ ಹೊಸವರ್ಷವೆಂದೂ, ಗಣರಾಜ್ಯದ ತಿಂಗಳೆಂದೂ, ಆಗಸ್ಟ್- ಸ್ವಾತಂತ್ರ್ಯ ದಿನವೆಂದೂ, ಸೆಪ್ಟೆಂಬರ್- ಶಿಕ್ಷಕರ ದಿನವೆಂದೂ, ಅಕ್ಟೋಬರ್- ಗಾಂಧೀ ಜಯಂತಿಯೆಂದೂ, ನವೆಂಬರ್ ಎಂದರೆ ನುಡಿಹಬ್ಬ, ಮಕ್ಕಳ ದಿನವೆಂದೂ ಆಚರಿಸುತ್ತಾ ಬಂದಿದ್ದೇವೆ. ವರ್ಷದಾದ್ಯಂತ ಆಚರಿಸುವ ಈ ಎಲ್ಲಾ ಆಚರಣೆಗಳಿಗಿಂತ ವರ್ತಮಾನದ […]

ಕಾಲ ಬದಲಾಗಿದೆ, ಆದರೆ ಪರಿಸ್ಥಿತಿ ಕೆಟ್ಟಿಲ್ಲ

-ಪಾ.ಚಂದ್ರಶೇಖರ ಚಡಗ

-ಪಾ.ಚಂದ್ರಶೇಖರ ಚಡಗ ನವೆಂಬರ್ ತಿಂಗಳ ಸಮಾಜಮುಖಿಯಲ್ಲಿ ಎತ್ತಿದ ‘ಈ ಸಹಸ್ರಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಎಡವುತ್ತಿದ್ದೇವೆಯೇ?’ ಎಂಬ ಮುಖ್ಯಚರ್ಚೆಯ ಪ್ರಶ್ನೆ ಸಮಯೋಚಿತವಾಗಿದೆ. ಇದಕ್ಕೆ ಉತ್ತರ ಮಾತ್ರ ಜಟಿಲ. ಪ್ರತಿಯೊಂದು ಪೀಳಿಗೆಯೂ ಹಿಂದಿನ ಪೀಳಿಗೆಯನ್ನು ಹೊಗಳಿ, ‘ಇಂದಿನ ಪೀಳಿಗೆ ಕವಲುದಾರಿಯಲ್ಲಿ ನಡೆಯುತ್ತಿದೆ’ ಎನ್ನುವುದು ಸಾಮಾನ್ಯ. ನಮ್ಮ ಮಕ್ಕಳು ಇಂದು ತಂದೆ ತಾಯಂದಿರ ಅಥವಾ ಗುರುಹಿರಿಯರಿಂದ ಪ್ರಭಾವಿತರಾಗದೆ ಅಂತರ್ಜಾಲದಲ್ಲಿ ದೊರೆಯುವ ಮಾಹಿತಿಗೆ ಮನಸೋಲುವುದರಿಂದ ಮಕ್ಕಳನ್ನು ರೂಪಿಸುವಲ್ಲಿ ನಾವು ಅಶಕ್ತರೂ ಹಾಗೂ ಅಸಫಲರೂ ಆಗುತ್ತಿದ್ದೇವೆ ಎಂಬ ಮಾತು ಅರ್ಧಸತ್ಯ. ಸುಮಾರು 60-70 […]

ಕರ್ನಾಟಕದಲ್ಲಿ ಉದ್ಯಮಶೀಲತೆಗೆ ಒದಗಿಬಂದಿರುವ ತೊಡಕುಗಳೇನು?

-ಸಂಜೀವ ಜಿ.ಗದಗ (ರಾಜು)

ಸಮಾಜಮುಖಿ ಅಕ್ಟೋಬರ್ ಸಂಚಿಕೆಯಲ್ಲಿನ ಮುಖ್ಯಚರ್ಚೆ, ನವೆಂಬರ್ ಸಂಚಿಕೆಯ ಮುಂದುವರೆದ ಚರ್ಚೆಗಳನ್ನು ಓದಿದ ಮೇಲೆ ಚರ್ಚೆಗೆ ನನ್ನ ಅಭಿಪ್ರಾಯ ಸೇರಿಸಲೇಬೇಕಿನ್ನಿಸಿದ್ದರಿಂದ ಈ ಲೇಖನ. – ಸಂಜೀವ ಜಿ.ಗದಗ (ರಾಜು) ಕರ್ನಾಟಕದಲ್ಲಿ ಉದ್ಯಮಶೀಲತೆಗೆ ಒದಗಿಬಂದಿರುವ ತೊಡಕುಗಳನ್ನು ಅರ್ಥಮಾಡಿಕೊಳ್ಳುವ ಮುನ್ನ ಈ ಜೋಕ್ ಓದಿ: ಒಬ್ಬಾತ ಡಾಕ್ಟರ ಬಳಿಗೆ ಹೋದ. ಅವನ ತೊಂದರೆಯೆಂದರೆ, ಮೈತುಂಬಾ ನೋವು. ತೋರುಬೆರಳಿಂದ ವೈದ್ಯರಿಗೆ ತೋರಿಸುತ್ತ ಹಣೆ ಒತ್ತಿಕೊಂಡು ಇಲ್ಲಿ ನೋಯುತ್ತೆ, ಕುತ್ತಿಗೆ ಒತ್ತಿಕೊಂಡು ಕುತ್ತಿಗೆ ನೋಯುತ್ತೆ, ಎದೆ ನೋಯುತ್ತೆ, ಹೊಟ್ಟೆ ನೋಯುತ್ತೆ, ಕಾಲು ನೋಯುತ್ತೆ ಕೊನೆಗೆ […]

ಹಳ್ಳಿಗಳ ಮೌಲ್ಯ ಬದುಕಿನ ಪಾಠವಾಗಲಿ

ಪರಮೇಶ್ವರಯ್ಯ ಸೊಪ್ಪಿಮಠ

ಯಾವ ಶಿಕ್ಷಣ ಕ್ರಮದಲ್ಲೂ ಸಿಗದ ಬದುಕಿನ ಪಾಠ ಮಕ್ಕಳಿಗೆ ಹಳ್ಳಿಯಲ್ಲಿ ಸಿಗುತ್ತದೆ. ಹಳ್ಳಿ, ಹಳ್ಳಿಯ ರೈತ ಮತ್ತು ಆತನ ಬದುಕು ಕಲಿಸಿಕೊಡುವ ಪಾಠವನ್ನು ಯಾವ ಪ್ರತಿಷ್ಠಿತ ವಿಶ್ವವಿದ್ಯಾಲಯವೂ ಕಲಿಸಲಾರದು. –  ಪರಮೇಶ್ವರಯ್ಯ ಸೊಪ್ಪಿಮಠ ಇರುವೆಗಳ ಗೂಡು, ಪ್ರಾಣಿ ಪಕ್ಷಿಗಳ ಬದುಕಿನ ಕೌತುಕ, ಮೊಳಕೆ ಒಡೆದ ಬೀಜ, ಆಗ ತಾನೆ ಚಿಗುರಿದ ಎರಡೆಲೆಗಳು, ಹಾರುವ ದುಂಬಿಗಳು, ಹಾಡುವ ಪಕ್ಷಿಗಳು, ಹರಿಯುವ ನದಿ, ತುಂಬಿದ ಕೆರೆ, ಬೆಳೆದು ನಿಂತ ಪೈರು, ಭೂದೇವಿಯ ಸೊಗಸು, ರೈತನ ಬಾಳು, ದನ ಕರುಗಳು ಮೇಯುವ […]

ಬಾಜು ಮನಿ ಕಾಕು ಸೋನು ವೇಣುಗೋಪಾಲ್

ಸಂದರ್ಶನ: ಹನುಮಂತರಾವ್ ಕೌಜಲಗಿ

ಬಾಜು ಮನಿ ಕಾಕು ಸೋನು ವೇಣುಗೋಪಾಲ್
ಸಂದರ್ಶನ: ಹನುಮಂತರಾವ್ ಕೌಜಲಗಿ

ಸೋನು ವೇಣುಗೋಪಾಲ್, ಉತ್ತರ ಕರ್ನಾಟಕದವರ ಅಚ್ಚುಮೆಚ್ಚಿನ ಸೋಶಿಯಲ್ ಮೀಡಿಯಾ ಕ್ವೀನ್ ಬಾಜು ಮನಿ ಕಾಕು ಸೃಷ್ಟಿಕರ್ತೆ. ಬೆಂಗಳೂರಿನ ಫೀವರ್ 104 ಎಫ್‍ಎಂನಲ್ಲಿ ಬಾಲಿವುಡ್ ಕಫೆ, ರೇಡಿಯೋ ಸಿಟಿ ಎಫ್‍ಎಂ 91ನಲ್ಲಿಯ “ಐತ್ತಲಕಡಿ ಮಾರ್ನಿಂಗ್” ಹಾಗೂ ಪ್ರಸ್ತುತ “ಸಿಟಿ ಮಾತು” ಕಾರ್ಯಕ್ರಮಗಳಲ್ಲಿ ಕನ್ನಡಿಗರ ಮನ ಮುಟ್ಟಿದ ರೇಡಿಯೋ ಜಾಕಿ. ಕನ್ನಡ ಕಟ್ಟುವ ಹೊಸ ಹೂರಣದ ಕುರಿತು ನಡೆಸಿದ ಸಂದರ್ಶನದಲ್ಲಿ ಮನಬಿಚ್ಚಿ ಚಚ್ಚಿದ್ದಾರೆ! ಕನ್ನಡ ಬಳಸುವ-ಬೆಳೆಸುವ ವಿಚಾರದಲ್ಲಿ ರೇಡಿಯೋ ಜಾಕಿ ಅವರ ಪಾತ್ರದ ಬಗ್ಗೆ ತಿಳಿಸಿ. ಯಾವುದೇ ಭಾಷೆ ಹೆಚ್ಚಾಗಿ ಬಳಸುವುದರಿಂದ […]

ಹೆಸರಾಯಿತು ಕರ್ನಾಟಕ ಉಸಿರಾಗಲಿಲ್ಲ ಕನ್ನಡ

-ಡಾ.ಎಂ.ಕೆಂಪಮ್ಮ ಕಾರ್ಕಹಳ್ಳಿ

ಕನಿಷ್ಠ 1-10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯ ಶಿಕ್ಷಣಕ್ಕೆ ಸೌಲಭ್ಯಗಳನ್ನೊದಗಿಸಿ ಆಕರ್ಷಕಗೊಳಿಸಿದರೆ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಸಮರ್ಥವಾಗಿ ಕಲಿಸುವಂತಾಗಿಸಿದರೆ ಖಾಸಗಿ ಶಿಕ್ಷಣಸಂಸ್ಥೆಗಳ ಆರ್ಭಟ ತಾನೇತಾನಾಗಿ ಕಡಿಮೆಯಾಗುತ್ತದೆ. -ಡಾ.ಎಂ.ಕೆಂಪಮ್ಮ ಕಾರ್ಕಹಳ್ಳಿ ಪ್ರತಿಯೊಂದು ಭಾಷೆಯೂ ಆಯಾ ಜನಸಮೂಹದ ಬದುಕಿನ ಕೈಗನ್ನಡಿ. ಅವರ ಸಂಸ್ಕೃತಿ ಪರಂಪರೆಯ ಸಂಕೇತ. ಭಾಷೆಯೊಂದನ್ನು ಕಡೆಗಣಿಸುವುದರಿಂದ ಸಂಸ್ಕೃತಿ ಪರಂಪರೆಯ ಮೂಲಸತ್ವವನ್ನು ಕಳೆದುಕೊಳ್ಳುತ್ತಿದ್ದೇವೆಂಬ ಅರಿವು ಜಾಗತೀಕರಣದ ಮಹಾಪ್ರವಾಹದಲ್ಲಿ ಕೊಚ್ಚಿಹೋಗುತ್ತಿದೆ. ಭಾಷೆ, ಸಂಸ್ಕೃತಿ ಎಲ್ಲಾಕಾಲಕ್ಕೂ ಅಸ್ತಿತ್ವದಲ್ಲಿರಬೇಕಾದರೆ ಅದನ್ನು ನುಡಿದು, ಅನುಭವಿಸಿ, ಅನುಸರಿಸಿ ಬದುಕುವ ಪ್ರತಿಯೊಬ್ಬ, […]

ಎಲ್ಲಿದ್ದಾರೆ ಸ್ವಾಮೀ ಕನ್ನಡ ಕಟ್ಟುವವರು?

-ಪ.ರಾಮಕೃಷ್ಣ ಶಾಸ್ತ್ರಿ

ಬರಹಗಾರರು ಹೆಚ್ಚುತ್ತಿದ್ದಾರೆ, ಶ್ರವಣ ಮಾಧ್ಯಮಗಳು, ದೃಶ್ಯ ಮಾಧ್ಯಮಗಳು ಹೆಚ್ಚುತ್ತಿವೆ, ಒಪ್ಪಿಕೊಳ್ಳೋಣ. ಆದರೆ ಇವು ಕನ್ನಡ ಭಾಷೆಯ ಅಭಿವೃದ್ಧಿಗೆ ಕೊಡುವ ಕಾಣಿಕೆಯಾದರೂ ಏನು? -ಪ.ರಾಮಕೃಷ್ಣ ಶಾಸ್ತ್ರಿ ಉತ್ತರ ಕರ್ನಾಟಕದ ಒಂದೂರಿನ ಊಟ ಮತ್ತು ಉಪಾಹಾರ ಗೃಹದ ಮುಂದೆ ನಿಲ್ಲಿಸಿದ ಫಲಕವೊಂದನ್ನು ನೋಡಿ. ‘ಫ್ಯಾಮಿಲಿ ರೋಮ’, ಅಂದರೆ ಏನರ್ಥ? ಇಲ್ಲಿ ಒಂದೇ ಒಂದು ಕನ್ನಡದ ಪದವಿಲ್ಲ. ಆ ಊರಿನಲ್ಲಿ ಕನ್ನಡ ಬಲ್ಲಂಥವರು ಇಲ್ಲವೆ, ಕನ್ನಡಾಭಿಮಾನಿಗಳಿಲ್ಲವೆ? ಕನ್ನಡ ಕಟ್ಟುವವರು ಎಂದಿರಾ? ಎಲ್ಲಿದ್ದಾರೆ ಸ್ವಾಮೀ ಅವರು? ನಿಜವಾಗಿಯೂ ಕನ್ನಡ ಭಾಷೆ ಬದುಕಿ ಬಾಳಲಿ […]

ಪ್ರತಿಬಿಂಬ ಮುಂದುವರಿದ ಚರ್ಚೆ

ಜ್ಞಾನ ಭಂಡಾರ ಸಮೃದ್ಧ ಚಿಂತನಾರ್ಹ ಸಂಪಾದಕೀಯ, ಪ್ರಸ್ತುತ ಸಮಸ್ಯೆಗಳ ಕುರಿತು ವಿಷಯತಜ್ಞರ ವಿಚಾರಪೂರ್ಣ ಲೇಖನಗಳು, ಸಮಕಾಲೀನ ಸಂಗತಿಗಳ ಹೂರಣ, ಜಗದರಿವು ಮೂಡಿಸುವ ಬರಹಗಳು, ವಿಸ್ತೃತ ಪುಸ್ತಕ ಪ್ರಪಂಚ, ಸಮೀಚೀನ ಸಂಸ್ಕೃತಿ ಸಂಪದ, ಹಾಗು ಪ್ರತಿಬಿಂಬ ಅಂಕಣಗಳ ಮೂಲಕ ಓದುಗರ ಜ್ಞಾನಭಂಡಾರವನ್ನು ಸಮೃದ್ಧಗೊಳಿಸಿ ಅವರನ್ನು ವಿಚಾರವಂತರನ್ನಾಗಿಸುವ ಸಾಮರ್ಥ್ಯವನ್ನು ಅನ್ನದ ಭಾಷೆಯ ಚಿನ್ನದ ಮಾಸಿಕ ಚಿಂತನಶೀಲ ಸಮಾಜಮುಖಿ ಪಡೆದಿದೆಯೆಂದರೆ ಅತಿಶಯೋಕ್ತಿಯಲ್ಲ. ಅರಂಭದಿಂದಲೂ ಸಮಾಜಮುಖಿ ಬಳಗದ ಸದಸ್ಯನಾಗಿರುವುದಕ್ಕೆ ಹೆಮ್ಮೆಯೆನಿಸುತ್ತಿದೆ. ಮುಂಬರುವ ವರ್ಷಗಳಲ್ಲಿ ನಮ್ಮೆಲ್ಲರ ನೆಚ್ಚಿನ ಈ ಪತ್ರಿಕೆ ಇನ್ನೂ ಹೆಚ್ಚಿನ ಓದುಗರನ್ನು […]

ಮಾಧ್ಯಮ ವಿವೇಕಕ್ಕೂ ಎನ್‍ಕೌಂಟರ್!

- ಪದ್ಮರಾಜ ದಂಡಾವತಿ

ತೆಲಂಗಾಣ ಪ್ರಕರಣ ಕನ್ನಡ ಪತ್ರಿಕೆಗಳು ಈ ಘಟನೆಯನ್ನು ನಿರ್ವಹಿಸಿದ ರೀತಿ ದಿಗ್ಭ್ರಮೆಗೆ ಈಡು ಮಾಡುವಂಥದು ಮತ್ತು ವೃತ್ತಿಪರವಲ್ಲದ್ದು. ದುರಂತ ಎಂದರೆ, ಎರಡು ಪತ್ರಿಕೆಗಳನ್ನು ಬಿಟ್ಟರೆ ಎಲ್ಲ ಪತ್ರಿಕೆಗಳೂ ಶಂಕಿತರ ಹತ್ಯೆಯನ್ನು ಸಂಭ್ರಮಿಸಿದುವು. ಆದರೆ ಯಾವ ಇಂಗ್ಲಿಷ್ ಪತ್ರಿಕೆಯೂ ಕನ್ನಡ ಪತ್ರಿಕೆಗಳ ಹಾಗೆ ನಡೆದುಕೊಳ್ಳಲಿಲ್ಲ. ಅವು ಅತ್ಯಂತ ವೃತ್ತಿಪರವಾಗಿ ಈ ವಿದ್ಯಮಾನವನ್ನು ನಿಭಾಯಿಸಿದುವು. – ಪದ್ಮರಾಜ ದಂಡಾವತಿ ಸಮೂಹ ಸನ್ನಿ ಎಂದರೆ ಇದೇ ಇರಬೇಕು. ಅಲ್ಲಿ ವಿವೇಕ ಕೈ ಕೊಟ್ಟಿರುತ್ತದೆ ಅಥವಾ ಸುಷುಪ್ತಿಗೆ ಜಾರಿರುತ್ತದೆ. ಅಲ್ಲಿ ಎಲ್ಲರೂ ಒಂದೇ […]

ಇನ್ನೊಂದು ತಬರನ ಪ್ರಸಂಗ

- ಪ್ರೇಮಕುಮಾರ್ ಹರಿಯಬ್ಬೆ

ಇನ್ನೊಂದು ತಬರನ ಪ್ರಸಂಗ
- ಪ್ರೇಮಕುಮಾರ್ ಹರಿಯಬ್ಬೆ

ಇದು ಹಿರಿಯ ಪತ್ರಕರ್ತರೊಬ್ಬರ ಸ್ವಾನುಭವದ ವರದಿ! ಕಳೆದ ಒಂದೂವರೆ ವರ್ಷದಿಂದ ಕಂದಾಯ ಇಲಾಖೆಯ ಕಚೇರಿಗಳಿಗೆ ಅಲೆಯುತ್ತಿರುವ ನಾನು ನನ್ನ ಅನುಭವಗಳನ್ನು ಈ ಲೇಖನದಲ್ಲಿ ಹಂಚಿಕೊಂಡಿದ್ದೇನೆ. ಇದು ನಿಮ್ಮೆಲ್ಲರ ಅನುಭವವೂ ಆಗಿರಲು ಸಾಧ್ಯ! – ಪ್ರೇಮಕುಮಾರ್ ಹರಿಯಬ್ಬೆ ಭೂ ದಾಖಲೆಗಳಲ್ಲಿನ ಲೋಪಗಳನ್ನು ಸರಿಪಡಿಸಿಕೊಡಲು ವಿಳಂಬ ಮಾಡಿದರೆಂದು ಕೋಪಗೊಂಡ ವ್ಯಕ್ತಿಯೊಬ್ಬ ತಹಸೀಲ್ದಾರರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ. ತಹಸೀಲ್ದಾರರನ್ನು ರಕ್ಷಿಸಲು ಹೋದ ಅವರ ಕಾರು ಚಾಲಕನೂ ಸುಟ್ಟ […]

ಪೌರತ್ವ ಕಾಯ್ದೆ ತಿದ್ದುಪಡಿ ವಿವಾದ ಅರ್ಧ ಸತ್ಯಗಳ ನರ್ತನ

-ಎ.ನಾರಾಯಣ

ಪೌರತ್ವ ಕಾಯ್ದೆ ತಿದ್ದುಪಡಿ ವಿವಾದ ಅರ್ಧ ಸತ್ಯಗಳ ನರ್ತನ
-ಎ.ನಾರಾಯಣ

ಈ ಸಮಸ್ಯೆಯನ್ನು ಜಾಣ್ಮೆಯಿಂದ ನಿರ್ವಹಿಸಬೇಕೇ ಹೊರತು ಮುಸ್ಲೀಮರನ್ನು ಪ್ರತ್ಯೇಕಿಸಿ ಬಂಧನ ಗೃಹದಲ್ಲಿ ಇರಿಸಿಬಿಡೋಣ ಎನ್ನುವ ದಿಢೀರ್ ಪರಿಹಾರ ಅಸಾಧುವೂ ಅಪಾಯಕಾರಿಯೂ ಆಗಿದೆ. – ಎ.ನಾರಾಯಣ ಎರಡೂ ಕಡೆಯಿಂದಲೂ ಅರ್ಧ ಸತ್ಯಗಳು ಕೇಳಿಸುತ್ತಿವೆ. ಮಾತ್ರವಲ್ಲ, ಎರಡೂ ಕಡೆಗಳಿಂದಲೂ ಅರ್ಧ ಸತ್ಯವೇ ಸತ್ಯ ಎಂದು ನಂಬಿಸುವ ಪ್ರಯತ್ನಗಳೂ ಜೋರಾಗಿಯೇ ನಡೆಯುತ್ತಿವೆ. ಯಾವುದೇ ಸಂದರ್ಭದಲ್ಲಾದರೂ ಸರಿ, ಸತ್ಯವನ್ನು ಸ್ವೀಕರಿಸುವಾಗ ದುರುದ್ದೇಶದಿಂದ ಹೇಳುವ ಅರ್ಧ ಸತ್ಯಗಳ ಬಗ್ಗೆ ನಾವು ಜಾಗರೂಕರಾಗಿರಬೇಕು. ಅದೇ ರೀತಿ ದೊಡ್ಡ ಅನಾಹುತವೊಂದರಿಂದ ಪಾರಾಗಲು ಬಳಸಲಾಗುವ ಸತ್ಯಗಳ ಅಪೂರ್ಣತೆಯ ಬಗ್ಗೆ […]

ದೈನಂದಿನ ಬದುಕಿನ ರಾಜಕೀಯ

- ರಾಜೀವ್ ಭಾರ್ಗವ

ದೈನಂದಿನ ಬದುಕಿನ ರಾಜಕೀಯ
- ರಾಜೀವ್ ಭಾರ್ಗವ

ಸಾಮೂಹಿಕ ಪ್ರತಿಭಟನೆಯನ್ನು ತೀವ್ರಗೊಳಿಸುವುದರಿಂದ ಮಾತ್ರ ವರ್ತಮಾನಕಾಲದ ಅಸಹನೀಯ ಪರಿಸ್ಥಿತಿಯನ್ನು ಸುಧಾರಿಸಬಹುದು. – ರಾಜೀವ್ ಭಾರ್ಗವ ದೈನಂದಿನ ಬದುಕಿನ ಮಹತ್ವವನ್ನು, ನಮ್ಮ ಹಿಂದಿನ ಸಮಾಜಗಳು ಬಹುಪಾಲು ಅಲ್ಲಗಳೆದಿವೆ. ಉದಾತ್ತ ಜೀವನದ ವ್ಯಾಖ್ಯಾನ ಕೊಟ್ಟಿರುವ ಅನೇಕ ದಾರ್ಶನಿಕರು, ಮನುಷ್ಯ ಜೀವನವನ್ನು ಎರಡು ರೀತಿಯಲ್ಲಿ ವಿಂಗಡಿಸುತ್ತಾರೆ; ಒಂದು, ಜೀವನದ ಉದಾತ್ತ ಮೌಲ್ಯವನ್ನು ಅನ್ವೇಷಿಸುವ ಬದುಕು. ಇನ್ನೊಂದು, ಮೌಲ್ಯರಹಿತ ಬದುಕು. ನಮ್ಮ ದೈನಂದಿನ ಬದುಕನ್ನು, ಈ ಎರಡನೆಯ ವರ್ಗಕ್ಕೆ ಸೇರಿಸಲಾಗಿದೆ. ಇಂತಹ ಬದುಕು ಸಾರ್ವತ್ರಿಕ, ಆದರೆ, ಅರ್ಥಹೀನವೆಂದೇ ತಿಳಿಯಲಾಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಚಿಂತನಪರ […]

ಮುಖ್ಯಚರ್ಚೆಗೆ-ಪ್ರವೇಶ

- ಮೋಹನದಾಸ್

ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಸಾಧ್ಯವೇ..? ಬೆಂಗಳೂರಿನ ಸಂಚಾರ ದಟ್ಟಣೆಯ ನಿವಾರಣೆಗೆ ಯಾವುದೇ ಬಾಹ್ಯಾಕಾಶ ತಂತ್ರಜ್ಞಾನದ ಅಗತ್ಯವಿಲ್ಲ. ಚಂದ್ರಯಾನದಲ್ಲಿಯೇ ಬಹುತೇಕ ಸಫಲತೆ ಕಂಡಿರುವ ನಮ್ಮ ಬೆಂಗಳೂರಿನ ತಂತ್ರಜ್ಞಾನಿಗಳು ಸಂಚಾರ ದಟ್ಟಣೆಗೆ ಪರಿಹಾರ ಕಂಡುಹಿಡಿಯಬಲ್ಲರು. ಸಂಚಾರ ದಟ್ಟಣೆಗೆ ಸಮಗ್ರ ಯೋಜನೆ ಸುಲಭಸಾಧ್ಯವಲ್ಲವಾದರೂ ಇದು ಅಸಾಧ್ಯವೇನಲ್ಲ. ಅದಕ್ಕೆ ಬೇಕಿರುವುದು ರಾಜ್ಯದ ಮುಖ್ಯಮಂತ್ರಿಯ ಬದ್ಧತೆ ಮತ್ತವರ ಆಡಳಿತ ಕ್ಷಮತೆ. ಜೊತೆಗೆ ಇದಕ್ಕೆ ಬೇಕಿರುವ ತಂಡದ ರಚನೆ. – ಮೋಹನದಾಸ್ ಮುಂದಿನ ಮೂರೂವರೆ ವರ್ಷಗಳಲ್ಲಿ ಯಡಿಯೂರಪ್ಪನವರು ಈ ಸಮಸ್ಯೆಯನ್ನು ಇತಿಹಾಸದ ಪುಟಗಳಿಗೆ […]

‘ನಮ್ಮ ಸರ್ಕಾರ ಸಂಚಾರ ದಟ್ಟಣೆ ಪರಿಹಾರಕ್ಕೆ ಬದ್ಧವಾಗಿದೆ’

- ಬಸವರಾಜ ಬೊಮ್ಮಾಯಿ

‘ನಮ್ಮ ಸರ್ಕಾರ ಸಂಚಾರ ದಟ್ಟಣೆ ಪರಿಹಾರಕ್ಕೆ ಬದ್ಧವಾಗಿದೆ’
- ಬಸವರಾಜ ಬೊಮ್ಮಾಯಿ

ಸಮಾಜಮುಖಿ ಕೈಗೆತ್ತಿಕೊಳ್ಳುವ ಮುಖ್ಯಚರ್ಚೆಯ ವಿಷಯ ಕೇವಲ ಓದುಗರ ಅಭಿಪ್ರಾಯ ಮತ್ತು ಅಕಾಡೆಮಿಕ್ ವಿಶ್ಲೇಷಣೆಯ ಪ್ರಕಟಣೆಗೆ ಸೀಮಿತಗೊಳ್ಳಬಾರದಲ್ಲವೇ? ಅಂತೆಯೇ ಸಂಚಾರ ದಟ್ಟಣೆ ಸಮಸ್ಯೆ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಮಾತಿಗೆಳೆದಾಗ… – ಬಸವರಾಜ ಬೊಮ್ಮಾಯಿ ನಮ್ಮ ಪೀಳಿಗೆ ಕರ್ನಾಟಕದಲ್ಲಿ ಎದುರಿಸುತ್ತಿರುವ ಅತ್ಯಂತ ಗಂಭೀರ ಸಮಸ್ಯೆಗಳಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಕೂಡಾ ಒಂದು. ಈ ಸಮಸ್ಯೆಯ ಗಂಭೀರತೆ ಬಗ್ಗೆ ನಿಮಗೇನು ಅನಿಸುತ್ತಿದೆ? ಖಂಡಿತವಾಗಿಯೂ ಬೆಂಗಳೂರು ಭಾರತ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಇಲ್ಲಿ ಸಂಚಾರ […]

ಬೆಂಗಳೂರಿನ ಸಂಚಾರ ತಾಪತ್ರಯ ಪರಿಹಾರ ಮರೀಚಿಕೆಯಲ್ಲ!

-ವಿ.ರವಿಚಂದರ್

ಬೆಂಗಳೂರಿನ ಸಂಚಾರ ತಾಪತ್ರಯ ಪರಿಹಾರ ಮರೀಚಿಕೆಯಲ್ಲ!
-ವಿ.ರವಿಚಂದರ್

ಸುಗಮ ಸಂಚಾರಕ್ಕಾಗಿ ನಿಗದಿಪಡಿಸಿಕೊಳ್ಳಬೇಕಾದ ಗುರಿಯನ್ನು ಸರಳವಾಗಿ ಮುಂದಿಡಬಹುದು. ಅದೆಂದರೆ ಶುಭ್ರವಾದ ಪರಿಸರದಲ್ಲಿ ವೇಗವಾದ ಮತ್ತು ಅಪಾಯರಹಿತವಾದ ಪ್ರಯಾಣ. ಆದರೆ ಈ ಗುರಿ ಸಾಧಿಸಲು ನಮ್ಮ ಆಡಳಿತವಾಗಲೀ, ಆಳ್ವಿಕೆಯಾಗಲೀ ರಚಿತವಾಗೇ ಇಲ್ಲ. ಬೆಂಗಳೂರಿನ ಸಂಚಾರದ ಸಮಸ್ಯೆಗಳನ್ನು ವಿವರಿಸಲು ಹೆಚ್ಚಿಗೆ ಪದಗಳನ್ನು ವೆಚ್ಚ ಮಾಡಬೇಕಾಗೇ ಇಲ್ಲ. ಪ್ರತಿದಿನ ಅದಕ್ಕೆ ಬಲಿಯಾಗುವ ಇಲ್ಲಿನ ಸ್ಥಳೀಯರಂತೆ ನೀವೂ ಸಹ ಅದನ್ನು ಒಂದಲ್ಲ ಒಂದು ಸಲಿ ಅನುಭವಿಸಿದ್ದರೆ ನಿಮಗೇ ಗೊತ್ತು ಅದೊಂದು ಮರೆಯಲಾಗದ ಅನುಭವ. ಇಂದಿನ ಆರ್ಥಿಕತೆಯ ಮಂದಗಮನವನ್ನು ಮೀರಿಸುವಷ್ಟು ನಿಧಾನವಾಗಿರುವ ಬೆಂಗಳೂರಿನ ರಸ್ತೆಗಳಲ್ಲಿನ […]

ಸ್ಮಾರ್ಟ್ ಸಾರ್ವಜನಿಕ ಸಾರಿಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳು

-ಪ್ರಥಮ್ ಅರಸ್

ಇತ್ತೀಚೆಗೆ ಸ್ಮಾರ್ಟ್ ಹಾಗೂ ಇಂಟೆಲಿಜೆನ್ಸ್ ಸಾರಿಗೆ ಇತ್ಯಾದಿ ಪದಗಳು ಬಳಕೆಗೆ ಬರುತ್ತಿವೆ. ಈ ವ್ಯವಸ್ಥೆಗಳು ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ, ಪರಿಸರವನ್ನು ಸಂರಕ್ಷಿಸುವ ಹಾಗೂ ಆರ್ಥಿಕ ಉಳಿತಾಯವನ್ನು ಸಾಧಿಸುವ ಉದ್ದೇಶ ಹೊಂದಿವೆ. ಸಾರ್ವಜನಿಕ ಸಾರಿಗೆಯ ಹೆಚ್ಚಿನ ಬಳಕೆ ಕೇವಲ ನಗರ ಪ್ರದೇಶಗಳಲ್ಲಿರುವ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಮಾತ್ರವಲ್ಲ, ಪರಿಸರ-ಸ್ನೇಹಿ ಸೂತ್ರ ಸಹ ಆಗಿದೆ. ಜಾಗತಿಕ ಮಟ್ಟದಲ್ಲಿ ಹೋರಾಡುತ್ತಿರುವ ಯು.ಐ.ಟಿ.ಪಿ (International Association of Public Transport) ‘ಒಂದು ಪ್ಲಾನೆಟ್-ಒಂದು ಪ್ಲಾನ್’ ಎಂಬ ಅಭಿಯಾನವನ್ನು ಆರಂಭಿಸಿದೆ. ಇದು 2019ರ ಡಿಸೆಂಬರ್ […]