‘ಸಂಚಾರ ದಟ್ಟಣೆಗೆ ಸಾರ್ವಜನಿಕ ಸಾರಿಗೆಯೇ ಪರಿಹಾರ’

-ಡಾ.ಎಂ.ಎ.ಸಲೀಂ

ಡಾ.ಎಂ.ಎ.ಸಲೀಂ ಅವರು ಸಂಚಾರ ನಿರ್ವಹಣೆ ಕುರಿತು ವಿಶೇಷ ಪರಿಶ್ರಮ, ಪರಿಣತಿ ಹೊಂದಿದ ವಿರಳ ಐಪಿಎಸ್ ಅಧಿಕಾರಿ. 19 ದೇಶಗಳನ್ನು ಸುತ್ತಿ ಅಲ್ಲಿನ ಸಂಚಾರ ದಟ್ಟಣೆಯ ಕಾರಣ, ನಿಯಂತ್ರಣ, ತಂತ್ರಜ್ಞಾನದ ಬಳಕೆ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಅನೇಕ ಲೇಖನ, ಪುಸ್ತಕ ಹೊರತಂದಿದ್ದಾರೆ. ಪ್ರಸ್ತುತ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಎಡಿಜಿಪಿ ಆಗಿರುವ ಸಲೀಂ ಅವರ ವಿಶೇಷ ಸಂದರ್ಶನ ಇಲ್ಲಿದೆ. ಸಂಚಾರ ದಟ್ಟಣೆಗೆ ಕಾರಣಗಳೇನು? ನಿಯಂತ್ರಿಸುವ ಪರ್ಯಾಯ ಮಾರ್ಗಗಳು ಯಾವುವು? ಸಂಚಾರ ದಟ್ಟಣೆಗೆ ಪ್ರಮುಖ ಕಾರಣ ಖಾಸಗಿ ವಾಹನಗಳ ಬಳಕೆ […]

ಬೆಂಗಳೂರು ಸಂಚಾರ ದಟ್ಟಣೆ ನಿರ್ವಹಣೆಗೆ ನಿರ್ದಿಷ್ಟ ಕ್ರಮಗಳು

-ಡಾ.ಎಂ.ಎ.ಸಲೀಂ

ಬೆಂಗಳೂರು ಸಂಚಾರ ದಟ್ಟಣೆ  ನಿರ್ವಹಣೆಗೆ ನಿರ್ದಿಷ್ಟ ಕ್ರಮಗಳು
-ಡಾ.ಎಂ.ಎ.ಸಲೀಂ

ಜನ-ವಾಹನಗಳ ಸಂಖ್ಯೆಯ ಹೆಚ್ಚಳ ಹಾಗೂ ವಿಸ್ತಾರವಾಗುತ್ತಿರುವ ನಗರದ ಗಾತ್ರ ಬೆಂಗಳೂರಿನ ಆರ್ಥಿಕ ಬೆಳವಣಿಗೆಯ ಸ್ಪಷ್ಟ ಸೂಚನೆಗಳಾಗಿವೆ. ಆದರೆ ಅದೇ ಹೊತ್ತಿನಲ್ಲಿ ರಸ್ತೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಸೃಷ್ಟಿಸುವಲ್ಲಿ ಉಂಟಾದ ನಿರಂತರ ವಿಳಂಬದ ಪರಿಣಾಮವನ್ನು ತೀವ್ರತರದ ಸಂಚಾರ ದಟ್ಟಣೆ ಹಾಗೂ ರಸ್ತೆ ಅಪಘಾತಗಳ ಹೆಚ್ಚಳವೇ ತೋರಿಸಿಕೊಟ್ಟಿವೆ. ಜಗತ್ತಿನಲ್ಲಿ ಕೆಲವೇ ಕೆಲವು ನಗರಗಳು ಅಲ್ಲಿಗೆ ಭೇಟಿ ನೀಡುವ ಜನಸಾಮಾನ್ಯರನ್ನು ಸೆಳೆಯುವ, ಅಲ್ಲಿಯೇ ಉಳಿದುಕೊಳ್ಳುವಂತೆ ಆಕರ್ಷಿಸುವ ಶಕ್ತಿ ಹೊಂದಿವೆ. ಅಂತಹ ನಗರಗಳಲ್ಲಿ ಬೆಂಗಳೂರು ಕೂಡಾ ಒಂದು. ಬೆಂಗಳೂರಿಗೆ ಬರುವ ಹೊಸಬರು ತಮ್ಮನ್ನು ತಾವು […]

ಸಂಚಾರ ಎಂಬ ಸಂಕಟಯಾತ್ರೆ

ನಾನು ಮೊದಲಬಾರಿಗೆ ಬೆಂಗಳೂರಿಗೆ ಭೇಟಿ ನೀಡಿದ್ದು 6 ದಶಕಗಳಿಗೂ ಹಿಂದೆ. ವೈದ್ಯಕೀಯ ಕಾಲೇಜಿನಲ್ಲಿ ಇಂಟವ್ರ್ಯೂಗೆ ಹಾಜರಾಗಬೇಕಿತ್ತು. ರೈಲು ನಿಲ್ದಾಣದಲ್ಲಿ ಇಳಿದು ಅಂದಿನ ಸುಭಾಷ್‍ನಗರ ಎಂಬ ಖಾಲಿ ಕೆರೆಯನ್ನು ಜಟಕಾದಲ್ಲಿ ದಾಟಿ, ಗಾಂಧಿನಗರದ ಲಾಡ್ಜ್‍ನಲ್ಲಿ ವಾಸ್ತವ್ಯ ಹೂಡಿದೆ. ಮಾರನೆಯ ದಿನ ಅಲ್ಲಲ್ಲಿ ವಿಚಾರಿಸುತ್ತಾ ಅವೆನ್ಯೂ ರಸ್ತೆಯಲ್ಲಿ ನಡೆಯುತ್ತಲೇ ನಗರದರ್ಶನ ಮಾಡುತ್ತಾ ವೈದ್ಯಕೀಯ ಕಾಲೇಜನ್ನು ತಲುಪಿ, ಕಾರ್ಯ ಮುಗಿದ ಬಳಿಕ ಹೋದ ರಸ್ತೆಯಲ್ಲೇ ವಾಪಸಾಗಿ ಮೈಸೂರು ಸೇರಿದೆ. ಆಗ ಆಟೋಗಳು ಇರಲಿಲ್ಲ. ಸಿಟಿಬಸ್ ಇದ್ದದ್ದು ಯಾರಿಗೂ ತಿಳಿಯುವಂತಿರಲಿಲ್ಲ. ಹನ್ನೊಂದು ವರ್ಷಗಳ […]

ಬಯೊ ಹ್ಯಾಕಿಂಗ್ ಮನುಷ್ಯ ಚಿರಾಯು ಆಗಬಹುದೇ?

-ಡಾ.ಬಿ.ಆರ್.ಮಂಜುನಾಥ್

ಕೆಲವರು ಬಯೋ ಹ್ಯಾಕಿಂಗ್ ಮೂಲಕ ಮನುಷ್ಯರ ಮಿದುಳು ಮತ್ತು ದೇಹವನ್ನು ಜೈವಿಕ ನಿಯಮಗಳಿಗೆ ವಿರುದ್ಧವಾಗಿ ಬದಲಿಸಲು ಹೊರಟಿದ್ದಾರೆ. ಬಯೊ ಹ್ಯಾಕಿಂಗ್ ಎಂದರೇನು, ಇದರಲ್ಲಿ ಯಾರೆಲ್ಲಾ ತೊಡಗಿಕೊಂಡಿದ್ದಾರೆ, ಇದಕ್ಕೆ ಕಾನೂನು ಸಮ್ಮತಿ ಇದೆಯೇ, ಇದರ ನಿಯಂತ್ರಣ ಸಾಧ್ಯವೇ, ಇದರ ಪರಿಣಾಮಗಳು ಏನು? ಈ ಬಗ್ಗೆ ನಾವೆಲ್ಲಾ ಇನ್ನಾದರೂ ಯೋಚಿಸಬೇಕಾದ ಅವಶ್ಯಕತೆ ಹೆಚ್ಚುತ್ತಿದೆ. ವೈಜ್ಞಾನಿಕ ಜಗತ್ತಿನಲ್ಲಿ ಮಾತ್ರವಲ್ಲ ದೈನಂದಿನ ಬದುಕಿನಲ್ಲೂ ಚಲಾವಣೆಗೆ ಬರುತ್ತಿರುವ ಒಂದು ಪದವೆಂದರೆ ಬಯೋ ಹ್ಯಾಕಿಂಗ್. ಇದರ ಹೆಸರನ್ನು ಕೇಳದಿದ್ದರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಇದನ್ನು […]

2020ರಲ್ಲಿ ಡಿಜಿಟಲ್ ಪ್ರಜಾತಂತ್ರಕ್ಕೆ ಕಾದಿದೆ ಗಂಭೀರ ಸವಾಲು

- ಸಿವ ವೈದ್ಯನಾಥನ್

ಒಂದು ದಶಕದ ಕಾಲ ತಮ್ಮ ಪ್ರಜಾತಾಂತ್ರಿಕ ಮೌಲ್ಯ ಮತ್ತು ನಿಲುಮೆಗಳ ಬಗ್ಗೆ ಬೆನ್ನುತಟ್ಟಿಕೊಳ್ಳುತ್ತಿದ್ದ ಸಾಮಾಜಿಕ ಮಾಧ್ಯಮಗಳಾದ ಫೇಸ್‍ಬುಕ್, ಟ್ವಿಟರ್ ಮತ್ತು ಗೂಗಲ್ ಪ್ರಜಾತಂತ್ರಕ್ಕೆ ಮಾರಕವಾಗಿ ಪರಿಣಮಿಸಲಿವೆ! ಬ್ರಿಟನ್ನಿನಲ್ಲಿ ಡಿಸೆಂಬರ್ 2019ರ ಚುನಾವಣೆಗಳ ನಂತರ ಅಮೆರಿಕದಲ್ಲಿ ನವಂಬರ್ 2020ರಲ್ಲಿ ನಡೆಯಲಿರುವ ಚುನಾವಣೆಗಳ ನಡುವೆ, ಈ ಪ್ರಮುಖ ಜಾಗತಿಕ ತಂತ್ರಜ್ಞಾನ ವೇದಿಕೆಗಳು ತಮ್ಮ ಮೇಲಿನ ವಿಧಿಸಲಾಗಬಹುದಾದ ನಿರ್ಬಂಧಗಳನ್ನು ಸಡಿಲಗೊಳಿಸುವಂತೆ ಮೊರೆ ಹೋಗಲು ಸಜ್ಜಾಗಿವೆ. ಸ್ವನಿಯಂತ್ರಣದ ನೆಪ ಹೂಡಿ ಫೇಸ್‍ಬುಕ್, ಟ್ವಿಟರ್ ಮತ್ತು ಗೂಗಲ್ ಸಂಸ್ಥೆಗಳು ಜವಾಬ್ದಾರಿಯುತವಾಗಿ ವರ್ತಿಸಲು ಬೇಕಾದ ಮಾರ್ಗಗಳಿಗಾಗಿ […]

ವಿಶ್ವ ವಿದ್ಯಮಾನ:

- ಪುರುಷೋತ್ತಮ ಆಲದಹಳ್ಳಿ

ಆಂಗ್‍ಸಾನ್ ಸೂಚಿಯ ಮೇಲೆ ಮಾನವಹಕ್ಕು ರಕ್ಷಕರ ಕಣ್ಣು ನೊಬೆಲ್ ಶಾಂತಿ ಪುರಸ್ಕಾರ ವಿಜೇತೆ ಮ್ಯಾನ್ಮಾರ್‍ನ ಆಂಗ್‍ಸಾನ್ ಸೂಚಿಯವರು ರೊಹಿಂಗ್ಯಾ ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆಂದು ವಿಶ್ವದೆಲ್ಲೆಡೆ ಪ್ರತಿಭಟನೆಗಳು ವ್ಯಕ್ತವಾಗಿವೆ. ಮ್ಯಾನ್ಮಾರ್ ಸರ್ಕಾರದ ಮೇಲೆ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಈಗಾಗಲೇ ಮೊಕದ್ದಮೆ ನಡೆಸುತ್ತಿದ್ದು ಈ ಪ್ರಕರಣ ವಿರುದ್ಧವಾದರೆ ಸೂಚಿ ಇನ್ನಷ್ಟು ಟೀಕೆಗೆ ಒಳಗಾಗಬೇಕಾಗುತ್ತದೆ. ಸೂಚಿಯವರು ಮ್ಯಾನ್ಮಾರ್ (ಅಂದಿನ ಬರ್ಮಾ) ದೇಶದ ಸ್ವಾತಂತ್ರ್ಯ ಸೇನಾನಿ ಆಂಗ್‍ಸಾನ್‍ರವರ ಪುತ್ರಿ. ತಾವು ಎರಡು ವರ್ಷದವರಿದ್ದಾಗಲೇ 1949ರಲ್ಲಿ ತಂದೆಯನ್ನು ಕಳೆದುಕೊಂಡ ಸೂಚಿ ದೆಹಲಿ […]

ಸಾಂಸ್ಕೃತಿಕ ಅಪೌಷ್ಟಿಕತೆಯ ಭಾರತೀಯ ಎಡಪಂಥ

ರಾಜಾರಾಮ ತೋಳ್ಪಾಡಿ, ನಿತ್ಯಾನಂದ ಬಿ ಶೆಟ್ಟಿ

ಭಾರತದ ಸಂದರ್ಭದಲ್ಲಿ ಎಡಪಂಥೀಯ ರಾಜಕಾರಣವನ್ನು ಕಟು ವಿಮರ್ಶೆಗೆ ಒಡ್ಡುವ ಮೂಲಕ ರಾಜಾರಾಮ ತೋಳ್ಪಾಡಿ ಮತ್ತು ನಿತ್ಯಾನಂದ ಶೆಟ್ಟಿ ಅವರು ಸೈದ್ಧಾಂತಿಕ ಸಂವಾದವನ್ನು ಹುಟ್ಟುಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಹಿರಿಯ ಎಡಪಂಥೀಯ ಸಿದ್ಧಾಂತಿ ಜಿ.ರಾಮಕೃಷ್ಣ ಅವರು ತಮ್ಮ ಸಶಕ್ತ ಸಮರ್ಥನೆಯನ್ನು ಮಂಡಿಸಿದ್ದಾರೆ. ಎಂದಿನಂತೆ ಆರೋಗ್ಯಪೂರ್ಣವಾದ ಮುಕ್ತ ಚರ್ಚೆಗೆ ಸಮಾಜಮುಖಿ ವೇದಿಕೆಯಾಗಿದೆ. ಯಾವುದೇ ವಾದ ಅಥವಾ ವಿಚಾರಪಂಥ ನಿರ್ವಿವಾದವಾಗಿ ಇರಲು ಸಾಧ್ಯವಿಲ್ಲ. ಆದುದರಿಂದಲೇ, ಅವುಗಳನ್ನು ನಾವು ವಾದಗಳು ಎಂದು ಕರೆಯುವುದು. ವಾದಕ್ಕೆ ಒಂದು ಪ್ರತಿವಾದ ಇದ್ದೇ ಇರುತ್ತದೆ. ಪ್ರತಿವಾದದ ಜೊತೆಗೆ ಸಂವಾದಿಸದೆ […]

ಅಪೌಷ್ಟಿಕತೆ – ಅಜೀರ್ಣ: ಎರಡೂ ವಜ್ರ್ಯ

ಡಾ.ಜಿ.ರಾಮಕೃಷ್ಣ

ಅಪೌಷ್ಟಿಕತೆ – ಅಜೀರ್ಣ: ಎರಡೂ ವಜ್ರ್ಯ
ಡಾ.ಜಿ.ರಾಮಕೃಷ್ಣ

ಪ್ರಾಧ್ಯಾಪಕರಾದ ರಾಜಾರಾಮ ತೋಳ್ಪಾಡಿ ಸೂಚಿಸಿರುವಂತೆ ಇಂದಿನ ಅಗತ್ಯವು ಸಿದ್ಧಾಂತದ ಪರಿಷ್ಕರಣೆಯಲ್ಲ, ಬದಲಾಗಿ ಪ್ರಸ್ತುತ ಸಂದರ್ಭದ ಕಾರ್ಯವಿಧಾನದಲ್ಲಿ ಅಳವಡಿಸಿಕೊಳ್ಳಬೇಕಾದ ಒಳಗೊಳ್ಳುವಿಕೆ. ಆ ದೃಷ್ಟಿಯಿಂದ ಪ್ರಜಾಪ್ರಭುತ್ವಾತ್ಮಕ ಚರ್ಚೆಗಳು ಸ್ವಾಗತಾರ್ಹ. ಯಾವುದೇ ಜೀವಂತ ವಾದದಂತೆ ಮಾಕ್ರ್ಸ್‍ವಾದವೂ ನಿರಂತರವಾಗಿ ವಿಕಾಸ ಹೊಂದುತ್ತಿರುತ್ತದೆ. ಹೊಸ ಸನ್ನಿವೇಶ, ಅನಿರೀಕ್ಷಿತ ಮುಗ್ಗಟ್ಟು, ಮಧ್ಯಪ್ರವೇಶದ ಸಾಧ್ಯತೆ ಅಥವಾ ಅದರ ಅಭಾವ, ಮುಂತಾದವು ವಿಕಾಸವನ್ನು ಮುನ್ನಡೆಸುತ್ತವೆ ಇಲ್ಲವೇ ಪ್ರತಿಬಂಧಿಸುತ್ತವೆ. ಅಂದಿನ ಆಂಟೋನಿಯೊ ಗ್ರಾಂಶಿಯಾಗಲಿ, ಇಂದಿನ ಇಸ್ತ್ವಾನ್ ಮೆಜೆರೋಸ್ ಆಗಲಿ, ಪ್ರಸ್ತುತವಾಗುವುದು ಆ ಹಿನ್ನೆಲೆಯಲ್ಲಿಯೇ. ಪರಂಪರೆಯನ್ನು ಮಾಕ್ರ್ಸ್‍ವಾದವು ಎಂದೂ ಪುರಸ್ಕರಿಸಿದೆಯೇ ಹೊರತು […]

ಇ-ಜ್ಞಾನ

ಟಿ.ಜಿ.ಶ್ರೀನಿಧಿ

ಇ-ಜ್ಞಾನ
ಟಿ.ಜಿ.ಶ್ರೀನಿಧಿ

ವಿಜ್ಞಾನ-ತಂತ್ರಜ್ಞಾನ ಜಗತ್ತಿನಲ್ಲಿ ಪ್ರತಿದಿನವೂ ಹೊಸತನದ ಹಬ್ಬ. ವರ್ಷದ ಹನ್ನೆರಡೂ ತಿಂಗಳು ಇಲ್ಲಿ ಏನಾದರೂ ನಡೆಯುತ್ತಲೇ ಇರುತ್ತದೆ. ಈ ತಿಂಗಳು ಇಲ್ಲೇನು ನಡೆಯುತ್ತಿದೆ, ಹಿಂದೆ ಇದೇ ಸಮಯದಲ್ಲಿ ಏನೆಲ್ಲ ನಡೆದಿತ್ತು? ಅದನ್ನೆಲ್ಲ ನಿಮಗೆ ಸಂಕ್ಷಿಪ್ತವಾಗಿ ಪರಿಚಯಿಸುವ ಪ್ರಯತ್ನ, ಈ ಅಂಕಣದಲ್ಲಿ ಈ ತಿಂಗಳಿನಿಂದ ಪ್ರಾರಂಭವಾಗುತ್ತಿದೆ. 20ನೇ ವರ್ಷಕ್ಕೆ ವಿಕಿಪೀಡಿಯ ಸರ್ಚ್ ಇಂಜಿನ್ನುಗಳಲ್ಲಿ ಯಾವ ವಿಷಯದ ಬಗ್ಗೆ ಮಾಹಿತಿ ಹುಡುಕಲು ಹೊರಟರೂ ವಿಕಿಪೀಡಿಯದ ಪುಟಗಳು ನಮ್ಮ ಕಣ್ಣಿಗೆ ಬೀಳುತ್ತವೆ. ತನ್ನನ್ನು ಒಂದು ಸ್ವತಂತ್ರ (‘ಫ್ರೀ’) ವಿಶ್ವಕೋಶವೆಂದು ಕರೆದುಕೊಳ್ಳುವ ಈ ತಾಣ […]

ಹೋರಾಟಗಾರ್ತಿ

ಕನ್ನಡಕ್ಕೆ: ಪ್ರಕಾಶ ಪರ್ವತೀಕರ

ಮರಾಠಿ ಮೂಲ: ಸರ್ವೋತ್ತಮ ಸಾತಾಳಕರ ಸರ್ವೋತ್ತಮ ಸಾತಾಳಕರ ಥರ್ಮಲ್ ಪಾವರ್ ವಿಭಾಗದಲ್ಲಿ ಎಂ.ಇ. ಮಾಡಿರುವ ಸರ್ವೋತ್ತಮ ಸಾತಾಳಕರ ಅವರು ಕಲಬುರ್ಗಿಯ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇವರ ಮೂರು ಕಥಾ ಸಂಗ್ರಹಗಳು, ಒಂದು ಕಾದಂಬರಿ ಹಾಗೂ ವಿವಿಧ ವಿಷಯಗಳ ಲೇಖನಗಳು ಮರಾಠಿಯಲ್ಲಿ ಪ್ರಕಟಗೊಂಡಿವೆ. ಅಲ್ಲದೆ, ಸೃಜನಾತ್ಮಕ ಸಾಹಿತ್ಯಕ್ಕೆ ಮೀಸಲಾದ ‘ಭಾವ ಅನುಬಂಧ’ ಎಂಬ ಮರಾಠಿ ತ್ರೈಮಾಸಿಕದ ಕಾರ್ಯಕಾರಿ ಸಂಪಾದಕರಾಗಿದ್ದಾರೆ. ಪ್ರಕಾಶ ಪರ್ವತೀಕರ ಅನುವಾದಕರು ಮೂಲತಃ ಕರ್ನಾಟಕದ ವಿಜಯಪುರದವರು; ವೃತ್ತಿಯಲ್ಲಿ ಸಿವಿಲ್ ಇಂಜನೀಯರ್. ತಮಿಳುನಾಡಿನ ತಿರುಪೂರಿನಲ್ಲಿ ತಮ್ಮದೇ ಆದ ಆರ್ಕಿಟೆಕ್ಟ್ […]

ದುರಂತನಾಯಕನಾದ ’ಮಹಾನಾಯಕ’ನ ಕಥೆ

- ಎನ್.ಸಂಧ್ಯಾರಾಣಿ

ದುರಂತನಾಯಕನಾದ ’ಮಹಾನಾಯಕ’ನ ಕಥೆ
- ಎನ್.ಸಂಧ್ಯಾರಾಣಿ

ಈ ಪುಸ್ತಕದ ಮಹತ್ವ ಇರುವುದು ಇದು ಕೇವಲ ಎನ್ಟಿಆರ್ ಕತೆಯನ್ನು ಮಾತ್ರ ಹೇಳುವುದಿಲ್ಲ ಎನ್ನುವುದರಲ್ಲಿ. ಇದು ಸರಿಸುಮಾರು 40-45 ವರ್ಷಗಳ ತೆಲುಗು ಚಿತ್ರರಂಗದ ಕತೆಯನ್ನು, ಕಾಂಗ್ರೆಸ್ಸೇತರ ಪಕ್ಷಗಳು ಒಂದಾದ ನ್ಯಾಶನಲ್ ಫ್ರಂಟ್ ಕಥೆಯನ್ನು, ಸಮರ್ಥವಾದ ಪ್ರಾಂತೀಯ ಪಕ್ಷವೊಂದು ಹೇಗೆ ತನ್ನ ಮತ್ತು ತನ್ನ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬಹುದು ಎನ್ನುವುದನ್ನೂ ಹೇಳುತ್ತದೆ. ’ನಮೋ ವೆಂಕಟೇಶ, ನಮೋ ತಿರುಮಲೇಶ…’ -ಊರಾಚೆಯ ಟೂರಿಂಗ್ ಟಾಕೀಸಿನಿಂದ ಕೇಳಿಬರುತ್ತಿದ್ದ ಈ ಹಾಡು ಮಾಯಾಬಜಾರ್ ತೆರೆಸರಿಸಲು ಹೊಡೆಯುತ್ತಿದ್ದ ಥರ್ಡ್ ಬೆಲ್! ಆ ಹಾಡಷ್ಟೇ ಅಲ್ಲ, ತೆಲುಗಿನ […]

ಸಂಚಾರದಟ್ಟಣೆ ನಿರ್ವಹಣೆ ಐಪಿಎಸ್ ಆಧಿಕಾರಿಯ ನಿರೂಪಣೆ

- ಶರೀಫ್ ಕಾಡುಮಠ

ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿ ಅಲ್ಪಾವಧಿಯಲ್ಲಿ ಹಾಗೂ ದೀರ್ಘಾವಧಿಯಲ್ಲಿ ಮಾಡಬಹುದಾದ ಯೋಜನೆಗಳ ಕುರಿತು ದೂರದೃಷ್ಟಿಯಿಂದ ಕೂಡಿದ ಸಲಹೆಗಳು ಡಾ.ಎಂ.ಎ.ಸಲೀಂ ಅವರ ಈ ಕೃತಿಯಲ್ಲಿವೆ. ಈ ಕ್ರಮಗಳನ್ನು ಒಂದಕ್ಕೊಂದು ಪೂರಕವಾಗಿ ಬಳಸಿಕೊಳ್ಳುವುದರಿಂದ ಉತ್ತಮ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಬಹುದಾಗಿದೆ. ಸಂಚಾರ ದಟ್ಟಣೆಯ ಕುರಿತಂತೆ ಸಮಗ್ರ ಮಾಹಿತಿಯ ಕೃತಿಗಳು ವಿರಳವಾಗಿರುವ ಹೊತ್ತಿನಲ್ಲಿ ಹೊಸದೊಂದು ಪುಸ್ತಕ ನಮ್ಮ ಮುಂದಿದೆ. ಹಲವು ವರ್ಷಗಳಿಂದ ಸಂಚಾರ ದಟ್ಟಣೆ ನಿರ್ವಹಣೆ ಕುರಿತು ಆಸಕ್ತಿಯಿಂದ ಅಧ್ಯಯನ ನಡೆಸುತ್ತಲೇ ಇರುವ ಐಪಿಎಸ್ ಅಧಿಕಾರಿ ಡಾ.ಎಂ.ಎ.ಸಲೀಂ ಅವರ ಹೊಸ ಕೃತಿ ‘ಟ್ರಾಫಿಕ್ […]

ಹೊಸ ಪುಸ್ತಕ

ನೈಮಿತ್ತಿಕ ಎನ್.ಬೋರಲಿಂಗಯ್ಯ ಪುಟ: 104, ಬೆಲೆ: ರೂ.90 ದಾರಿದೀಪ ಪ್ರಕಾಶನ #44, 8ನೇ ಮುಖ್ಯರಸ್ತೆ, 12ನೇ ಕ್ರಾಸ್, ಕಾಮಾಕ್ಷಿ ಆಸ್ಪತ್ರೆ ರಸ್ತೆ, ಸರಸ್ವತೀಪುರಂ, ಮೈಸೂರು 570009 ಪ್ರಥಮ ಮುದ್ರಣ: 2019 ನವೋದಯ ಕವಿ ಎಂ.ಗೋಪಾಲಕೃಷ್ಣ ಅಡಿಗರ ಕೆಲವು ಪ್ರಸಿದ್ಧ ಕವಿತೆಗಳ ಕುರಿತ ವಿಮರ್ಶಾ ಕೃತಿಯಿದು. ಪ್ರಾರ್ಥನೆ, ಕೂಪಮಂಡೂಕ, ಕೆಂದಾವರೆ ಮುಂತಾದ ಪ್ರಮುಖ ಕವಿತೆಗಳ ಕುರಿತು ಇಲ್ಲಿ ವಿಶ್ಲೇಷಿಸಲಾಗಿದೆ. ಅಡಿಗರ ಕಾವ್ಯವನ್ನು ಮತ್ತೆ ಮತ್ತೆ ವಿಮರ್ಶೆಗೊಡ್ಡುವ ಪ್ರಕ್ರಿಯೆಯ ಸಾಲಿನಲ್ಲಿ ಈ ಕೃತಿಯನ್ನು ಪರಿಗಣಿಸಬಹುದು. ಹೊನ್ನಿಹಳ್ಳಿ (ಮಣ್ಣಿನ ಮೂರು ನೀಳ್ಗತೆಗಳು) […]

ಪಂಪನ ಪದ್ಯವೊಂದರ ಪುನರ್ ವಿಮರ್ಶೆ: ಸತ್ಯವತಿಯೆಂಬ ಕುಶಲಮತಿ

-ಗೋವಿಂದರಾಜು ಎಂ. ಕಲ್ಲೂರು

ಪಂಪನ ಪದ್ಯವೊಂದರ ಪುನರ್ ವಿಮರ್ಶೆ: ಸತ್ಯವತಿಯೆಂಬ ಕುಶಲಮತಿ
-ಗೋವಿಂದರಾಜು ಎಂ. ಕಲ್ಲೂರು

ಓದುಗರು ಧರಿಸಿರುವ ಭಾವಗಳೇ ಪದ್ಯದ ಅರ್ಥವಾಗಿ ತೋರುವ ವಿಶಿಷ್ಟ ಪದ್ಯ ಇದು. ನೀವು ಕ್ರೋಧರಾಗಿ, ಈ ಪದ್ಯವನ್ನು ನೋಡಿರಿ. ಅದು ಸತ್ಯವತಿಯು ಶಂತನುವಿನ ಲಜ್ಜೆಗೇಡಿತನವನ್ನು, ಒಂಟಿ ಹೆಣ್ಣಿನ ಮೇಲಿನ ಗಂಡಿನ ದಾಷ್ಟ್ರ್ಯವನ್ನು ಕಂಡು ಅಸಹ್ಯವನ್ನೂ, ಕೋಪವನ್ನು ಪ್ರಕಟಿಸುವಂತೆ, ದಿಟ್ಟ ಹೆಣ್ಣೊಬ್ಬಳ ಪ್ರತಿಭಟನೆಯ ಸಾಂಕೇತಿಕ ಪದ್ಯವಾಗಿ ಕಾಣುತ್ತದೆ. ಸಾಹಿತ್ಯ ಪಠ್ಯವೊಂದು ತನ್ನ ಅರ್ಥವನ್ನು ದೇಶ-ಕಾಲಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳುತ್ತಲೇ ವರ್ತಮಾನಕ್ಕೆ ಮುಖಾಮುಖಿಯಾಗುತ್ತದೆ. ಪಂಪ ಹತ್ತನೇ ಶತಮಾನದಲ್ಲಿ ಆಗಿಹೋದ ಕವಿಯಾದರೂ ಆತನ ಅಭ್ಯಾಸದ ಅವಶ್ಯಕತೆ ಇಂದಿಗೂ ಇದೆ. ಈತನ ಎರಡನೇ ಕೃತಿಯಾದ […]

ಹಿತ್ತಲ ನೆನಪುಗಳು…!

-ನಂಜನಗೂಡು ಅನ್ನಪೂರ್ಣ

ಹಿತ್ತಲ ನೆನಪುಗಳು…!
-ನಂಜನಗೂಡು ಅನ್ನಪೂರ್ಣ

ಹೆಚ್ಚಿನ ಬೇಕುಗಳಿಲ್ಲದ, ಬೇಡದ್ದರ ಬಗೆಗೂ ಕುತೂಹಲಿಯಾಗಿ ಕಣ್ಣರಳಿಸಿ ನಿಲ್ಲುವ ಆ ವಯಸ್ಸು ಆ ಮನಸ್ಸು ಇಂದು ಎಲ್ಲೋ ಮರೆಯಾಯಿತಲ್ಲಾ… ಏಕೆ, ಹೇಗೆ ಎಂಬ ಮರುಕ ಮನೆಮಾಡುತ್ತದೆ. ಇದು ಏನು? ಇದು ಹೇಗೆ? ಯಾಕೆ ಹಾಗೆ? ಇದು ಇಲ್ಲೇ ಯಾಕೆ ಇದೆ? ಇವರು ಯಾರು? ಏನು ಸಂಬಂಧ? ಇತ್ಯಾದಿ ಪ್ರಶ್ನೆಗಳನ್ನು ಕೇಳುವುದು, ಮಕ್ಕಳ ಕುತೂಹಲದ ಅಭಿವ್ಯಕ್ತಿಯ ಒಂದು ಭಾಗ. ಅಂತೆಯೇ ದೊಡ್ಡವರನ್ನು ಅನುಕರಿಸುವುದು ಅವರ ಕಲಿಕೆಯ ಒಂದು ಭಾಗ. ಅಂತಹ ಅನುಕರಣೆ ಸಾಧ್ಯವಾದಷ್ಟು ಅವರ ಆಟ-ಪಾಠದಲ್ಲಿ ಬೆರೆತುಹೋಗಿರುತ್ತದೆ. ತಾವು […]

ಇನ್ನಾದರೂ ಪ್ರಗತಿಯತ್ತ ಹೆಜ್ಜೆ ಹಾಕೋಣ…

-ಮಾಲತಿ ಪಟ್ಟಣಶೆಟ್ಟಿ

ಇನ್ನಾದರೂ ಪ್ರಗತಿಯತ್ತ ಹೆಜ್ಜೆ ಹಾಕೋಣ…
-ಮಾಲತಿ ಪಟ್ಟಣಶೆಟ್ಟಿ

ಈ ಊರ ಜನ ಹೆಚ್ಚು ಮಾತನಾಡುವವರಲ್ಲ, ಮೌನಿಗಳು. ಸಹನೆ ಉಳ್ಳವರು. ಆದರೆ ಒಮ್ಮೆ ತುಟಿ ಬಿಚ್ಚಿದರೆ ಸಾಕು ಬೈಗುಳ ಸಮೇತ ಮುತ್ತಿನಂಥ ಮಾತಿನ ಮಳೆ ಸುರಿಸುತ್ತಾರೆ. ಇವರದು ಸ್ಪಷ್ಟ, ನೇರ, ದಿಟ್ಟ ಮಾತು. ಈ ಮಾತು ಎಷ್ಟು ಸ್ಪಷ್ಟ ಎಂದರೆ ಒಂದು ಹೊಡೆತ ಎರಡು ತುಂಡಿನಂತೆ ಖಡಾಖಂಡಿತ, ನಿರ್ಭೀತ! ನನ್ನೂರು ಧಾರವಾಡ… ನನ್ನದು ಎಂದರೆ ಭಾವನಾತ್ಮಕವಾಗಿ ನನಗೆ ಸಂಬಂಧಿಸಿದ ಊರು! ನಾನು ಕಂಡಂತೆ ಕಳೆದ ಏಳು ದಶಕಗಳಲ್ಲಿ ಇಲ್ಲಿ ಆಮೆಗತಿಯಲ್ಲಿ ಪರಿವರ್ತನೆಗಳಾಗಿವೆ. ಇವೆಲ್ಲವೂ ಕೇವಲ ಭೌತಿಕ ಪರಿವರ್ತನೆಗಳು […]

‘ಗಲ್ಲಿ ಪ್ರತಿಭೆಗಳು ದಿಲ್ಲಿ ಆಳಬೇಕು…’

-ಕೆ.ವಿ.ಪರಮೇಶ್

‘ಗಲ್ಲಿ ಪ್ರತಿಭೆಗಳು ದಿಲ್ಲಿ ಆಳಬೇಕು…’
-ಕೆ.ವಿ.ಪರಮೇಶ್

ಸೌರವ್ ಗಂಗೂಲಿ ‘ಬಂಗಾಳದ ಮಹಾರಾಜ’ ಎಂದು ಖ್ಯಾತರಾದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ನೂತನ ಆಧ್ಯಕ್ಷ. ಹೊಸ ವರ್ಷದ ಮೊದಲ ಸಂಚಿಕೆಯಲ್ಲಿ ಅವರ ಸಂದರ್ಶನ ಪ್ರಕಟಿಸಬೇಕೆಂಬ ನಿಟ್ಟಿನಲ್ಲಿ ನಡೆಸಿದ ಸತತ ಸಂಪರ್ಕ ಕೊನೆಗೂ ಕೈಗೂಡಿದೆ. ಸಮಾಜಮುಖಿ ಓದುಗರ ಪರವಾಗಿ ಕೇಳಿದ ಹತ್ತು ಪ್ರಶ್ನೆಗಳಿಗೆ ಅಷ್ಟೇ ಮುಕ್ತವಾಗಿ ಮುತ್ತಿನಂತಹ ಉತ್ತರ ಕೊಟ್ಟಿದ್ದಾರೆ ಗಂಗೂಲಿ. ಬಿಸಿಸಿಐ ಅಂದ್ರೆ ಹಣದ ಥೈಲಿ ಸುಖದ ಸುಪ್ಪತ್ತಿಗೆ ಅನ್ನೋ ಮಾತಿದೆ, ಹೌದಾ? ವಿಶ್ವದ ಸಿರಿವಂತ ಕ್ರಿಕೆಟ್ ಸಂಸ್ಥೆ ಅನ್ನೋದನ್ನು […]

ಪಾಪ… ಸಂಪಾದಕರ ಪಾಡು!

-ಬಾಲಚಂದ್ರ ಬಿ.ಎನ್.

ಪಾಪ… ಸಂಪಾದಕರ ಪಾಡು!
-ಬಾಲಚಂದ್ರ ಬಿ.ಎನ್.

ಪತ್ರಿಕೋದ್ಯಮದ ಗೊತ್ತು ಗುರಿಯಿಲ್ಲದೇ, ನೆತ್ತಿಯ ಮೇಲೆ ಕಣ್ಣಿಟ್ಟುಕೊಂಡು ಕಾಲಿಡುವ ಉಡಾಳರನ್ನು ತಿದ್ದುತ್ತಾ… ಸೋಮಾರಿ ಲೇಖಕರನ್ನೂ ಪ್ರೋತ್ಸಾಹಿಸುತ್ತಾ, ಮೂರ್ಖರನ್ನು ಸಹಿಸಿಕೊಳ್ಳುತ್ತಾ, ನಿಂದೆಪ್ರಶಂಸೆಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತಾ ಪ್ರತೀ ಪತ್ರಿಕಾ ಬಳಗದಲ್ಲೂ ಇರಬಹುದಾದ ಇಂಥಾ ಕರುಣಾಜನಕ ಸಂಪಾದಕರಿಗೆ ಶರಣು. ಸಂಪಾದಕರ ಸಂತತಿ ಸಾವಿರವಾಗಲಿ; ಆದರೆ ಈ ರೀತಿಯ ಉಪಸಂಪಾದಕರ, ಅಂಕಣಕಾರರ ಸಂತತಿ ಹೆಚ್ಚದಿರಲಿ! ಬಾಲು… ಬಾಲೂ… ಏ… ಬಾ…ಲೂ ಏನ್ಸಾರ್? ಟೀವಿ ನೋಡಿದ್ಯಾ? ಸಾರ್, ಎರಡು ವರ್ಷವಾಯ್ತು! ನೀನೆಂಥಾ ಪತ್ರಕರ್ತನೋ ಮಾರಾಯಾ? ಕಣ್ಮುಂದೆ 24 ಗಂಟೆ ನಾಲ್ಕು ಟೀವಿ ಓಡ್ತಾ ಇದ್ರೂ […]

ಗೋವಾ ಚಲನಚಿತ್ರೋತ್ಸವ

-ಪ್ರದೀಪಕುಮಾರ್ ಶೆಟ್ಟಿ

ಗೋವಾ ಚಲನಚಿತ್ರೋತ್ಸವ
-ಪ್ರದೀಪಕುಮಾರ್ ಶೆಟ್ಟಿ

ಕೊರತೆಗಳ ನಡುವೆಯೂ ಭರವಸೆಯ ಒರತೆ ಇತ್ತೀಚೆಗೆ ಗೋವಾದಲ್ಲಿ ನಡೆದ 50 ಕೋಟಿ ರೂಪಾಯಿ ವ್ಯಚ್ಚದ, 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಅನ್ಯಾನ್ಯ ಕಾರಣಗಳಿಂದ ಸುದ್ದಿಯಲ್ಲಿತ್ತು. ಫೆಸ್ಟಿವಲ್ ಡೈರಕ್ಟರ್ ಮತ್ತಾತನ ನೌಕರಶಾಹೀ ಕೂಟ ಕೆಲವೇ ವರ್ಷಗಳಲ್ಲಿ ಇಫ್ಫಿಯನ್ನು ಸಾಂಸ್ಕೃತಿಕವಾಗಿ ಆಪೋಶನ ತೆಗೆದುಕೊಂಡರೂ ಅಚ್ಚರಿಯಿಲ್ಲ. ಇದೆಲ್ಲದರ ನಡುವೆ ನಾನು ಸಾಕಷ್ಟು ಶ್ರಮವಹಿಸಿದ ಕಾರಣ ಕೆಲವು ಅಮೂಲ್ಯ ಸಿನಿಮಾಗಳನ್ನು ನೋಡಲು ಸಾಧ್ಯವಾಯ್ತು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಮೂಲಭೂತವಾಗಿ ಇರುವಂತದ್ದು ಬೇರೆಬೇರೆ ದೇಶ, ಭಾಷೆಯ ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರಗಳನ್ನು ನೋಡಿ ಅನುಭವಿಸಲು. ಆದರೆ ಚಿತ್ರೋತ್ಸವದ ಮೊದಲ […]

ಹುಡುಗಿ, ಹುಡುಗ, ಆಕಾಶಮಲ್ಲಿಗೆ

- ರಘುನಂದನ

ಹುಡುಗಿ, ಹುಡುಗ, ಆಕಾಶಮಲ್ಲಿಗೆ
- ರಘುನಂದನ

– ರಘುನಂದನ ಹುಡುಗಿ ಟ್ರಾಫಿಕ್ಕು. ಎಳಬೆಳಗು. ರೋಡ್ ಡಿವೈಡರ್ ಮೇಲೆ. ದೀಪ ಹತ್ತದ ಈ ಲೈಟು ಕಂಬದ ಪಕ್ಕ ತೆಂಗಿನ ಗರಿ ಪೊರಕೆ ಕಾಲಿಗಾನಿಸಿ ಈ ಸೀಮೆಹುಣಿಸೆಯ ಬಿಳಲು ಇಂ ಟರ್‍ನೆಟ್ ಕೇಬಲ್ ಜಪ್ಪಿ ಹಿಡಕೊಂಡು ಮೋಬೈಲಲ್ಲಿ ಕಿವಿಕರಗಿ ನಿಂತ ತಿಳಿಗಪ್ಪು ಹೊಳಪಿನ ಜಲಗಾರ ಹುಡುಗಿ – ನಿಂಬೆಹಳದಿ ಸಲ್ವಾರ್ ಮಿಡಿಮಾವುಹಸಿರು ಕೋಟು –   ಇವಳ ಕಣ್ಣು ಯಾಕಿಷ್ಟು ಮಂಕು ತುಟಿಯಲ್ಲಿ ತಗಿಬಿಗಿ ಹುಳಿಕಹೀ ನಗೆ ಮುಖ ಯಾಕೆ ವಿಷಣ್ಣ – ಎಳಬೆಳಗಿನಲ್ಲಿ   ಕಂಬದ ದೀಪ ಹತ್ತದೆಂದಲ್ಲ ಸೀಮೆಹುಣಿಸೆ ಒಗರು ದೋರೆಯಾದ್ದಕ್ಕಲ್ಲ ಹೂಬಂಡು ಹೀರುತ್ತ ಫರ್‌ರ್‌ […]