ದೀರ್ಘಾವಧಿಯಲ್ಲೂ ಖರೀದಿಗೆ ಪೂರಕ ಇ-ಕಾಮರ್ಸ್

-ಎಂ.ಕೆ.ಆನಂದರಾಜೇ ಅರಸ್

ದೀರ್ಘಾವಧಿಯಲ್ಲೂ ಖರೀದಿಗೆ ಪೂರಕ  ಇ-ಕಾಮರ್ಸ್
-ಎಂ.ಕೆ.ಆನಂದರಾಜೇ ಅರಸ್

ಇ-ಕಾಮರ್ಸ್ ಈಗಾಗಲೇ ನಮ್ಮ ಮೂಲ ಅಗತ್ಯವಾಗಿದೆ. ದಿನಗಳೆದಂತೆ ಇ-ಕಾಮರ್ಸ್ ಇಡೀ ಸಾಂಪ್ರಾದಾಯಿಕ ಮಾರಾಟ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತ, ನಮ್ಮ ಮುಂದೆ ಹೊಸ ಹೊಸ ಪ್ರಪಂಚಗಳನ್ನು ತೆರೆಯುತ್ತ ತನ್ನ ದಂಡಯಾತ್ರೆಯನ್ನು ಮುಂದುವರೆಸಲಿದೆ.     ಜ್ಯಾಕ್ ಮಾ ಹೇಳಿದ್ದು 1995ರಲ್ಲಿ ಅಮೆeಜಾನ್ ಪ್ರಾರಂಭವಾದಾಗ ಅದರ ಮೊದಲ ಮಾರಾಟ ಒಂದು ಪುಸ್ತಕವಾಗಿತ್ತು. ಕಳೆದ 25 ವರ್ಷಗಳಲ್ಲಿ ಇ-ಕಾಮರ್ಸ್ ಯಾವ ಪರಿ ಬೆಳೆದಿದೆಯೆಂದರೇ, ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರಗಳನ್ನು ಈಗ ಆನ್‌ಲೈನ್‌ನಲ್ಲಿ ಖರೀದಿಸಬಹುದು. ಆಲಿಬಾಬಾ ಇ-ಕಾಮರ್ಸ್ ಸಂಸ್ಥೆಯ ಸಹ ಸಂಸ್ಥಾಪಕ ಜ್ಯಾಕ್ […]

ಸ್ವಾವಲಂಬನೆ ಬೇಕೆ..? ಜಾಗತೀಕರಣ ಸಾಕೆ..?

ಆಗಸ್ಟ್ ಸಂಚಿಕೆಯ ಮುಖ್ಯ ಚರ್ಚೆ:    ಸಾಂಕ್ರಾಮಿಕ ರೋಗಗಳಿಂದ ಗ್ರಸ್ತವಾಗಿರುವ ಭಾರತದ ಆರ್ಥಿಕತೆಯ ಪುನಶ್ಚೇತನಕ್ಕೆ ರೂ.20 ಲಕ್ಷ ಕೋಟಿಗಳ ‘ಪ್ಯಾಕೇಜ್’ ಘೋಷಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವು ಆತ್ಮನಿರ್ಭರತೆಯ (ಸ್ವಾವಲಂಬನೆಯ) ಹಾದಿಯಲ್ಲಿ ಸಾಗಬೇಕೆಂದು ಕರೆಕೊಟ್ಟಿದ್ದಾರೆ. ಈ ಕರೆಯ ಬಗ್ಗೆ ದೇಶ-ವಿದೇಶಗಳಲ್ಲಿ ವ್ಯಾಪಕ ಚರ್ಚೆ ಹಾಗೂ ವಿವಾದಗಳು ಸೃಷ್ಟಿಯಾಗಿವೆ. 1950ರ ದಶಕದಿಂದಲೇ ಜವಾಹರಲಾಲ್ ನೆಹರೂ ಮುಂದಾಳತ್ವದಲ್ಲಿ ದೇಶವು ಸ್ವಾವಲಂಬನೆಯ ಹಾದಿ ಹಿಡಿದಿದೆ. ಇದರಲ್ಲಿ ಸಾಕಷ್ಟು ಯಶಸ್ಸನ್ನೂ ಕಂಡಿರುವುದರ ಜೊತೆಗೆ ಯಾವ ಉತ್ಪಾದನೆ ಹಾಗೂ ಯಾವ ಸೇವೆಗಳಲ್ಲಿ ನಾವು ಇನ್ನೂ […]

ಚೀನಾ ಗಡಿಯ ಗಾಲ್ವಾನ್ ದುರಂತ: ಭಾರತದ ಆಯ್ಕೆಗಳು…

-ನಿರುಪಮಾ ರಾವ್

ಚೀನಾ ಗಡಿಯ ಗಾಲ್ವಾನ್ ದುರಂತ: ಭಾರತದ ಆಯ್ಕೆಗಳು…
-ನಿರುಪಮಾ ರಾವ್

ಜೂನ್ 15ರಂದು, ಗಾಲ್ವಾನ್ ಕಣಿವೆಯಲ್ಲಿ ನಿಜವಾಗಿ ನಡೆದದ್ದೇನು? ಅದರ ಮಹತ್ವವೇನು? ಮುಂದಿನ ದಿನಗಳಲ್ಲಿ, ಚೀನಾದೊಂದಿಗೆ ವ್ಯವಹಾರ ಸಾಧ್ಯವೇ? ಭಾರತ, ತನ್ನ ಚೀನಾ ಗಡಿಯ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಕುರಿತು ಶೀಘ್ರದಲ್ಲಿ ಸ್ಪಷ್ಟೀಕರಣ ಹೊಂದುವುದರೊAದಿಗೆ, ದೇಶದ, ದಕ್ಷಿಣ ಏಷ್ಯಾ ನೀತಿಯ ಬಗ್ಗೆ ದೀರ್ಘಕಾಲಿಕ ದೃಷ್ಟಿಕೋನ ಅಳವಡಿಸಿಕೊಳ್ಳಬೇಕಿದೆ. ಪ್ರಾಸ್ತಾವಿಕವಾಗಿ, 2020ರ ಜೂನ್ 15ನ್ನು, ಭಾರತದ ಇತಿಹಾಸ ಪುಟಗಳಲ್ಲಿ ‘ದುರಂತ ರಾತ್ರಿ’ಯೆಂದು ಪರಿಗಣಿಸಬೇಕಾಗುತ್ತದೆ. ಅಂದು, ಲಡಾಖಿನ ಗಾಲ್ವಾನ್ ಕಣಿವೆಯಲ್ಲಿ 16ನೇ ಬಿಹಾರ ರೆಜಿಮೆಂಟ್‌ನ ಕಮಾಂಡಿAಗ್ ಆಫೀಸರ್ ಸೇರಿದಂತೆ, ಇಪ್ಪತ್ತು ಭಾರತೀಯ […]

ಚೀನಾದಿಂದ ಭಾರತ ಕಲಿಯಬೇಕಾದ ಪಾಠ ಯಾವುದು?

-ಉದಿತ್ ಮಿಶ್ರ

ಚೀನಾದಿಂದ ಭಾರತ ಕಲಿಯಬೇಕಾದ ಪಾಠ ಯಾವುದು?
-ಉದಿತ್ ಮಿಶ್ರ

ರಫ್ತು ವ್ಯಾಪಾರದ ಬೆಳವಣಿಗೆಯನ್ನು ತೀವ್ರಗೊಳಿಸಲು ಮತ್ತು ಕೋಟ್ಯಾಂತರ ಉದ್ಯೋಗಗಳನ್ನು ಸೃಷ್ಟಿಸಲು ಚೀನಾ ರಫ್ತು ಕ್ಷೇತ್ರದಲ್ಲಿ ಅನುಸರಿಸುತ್ತಿರುವ ಮಾದರಿಯನ್ನು ಅಳವಡಿಸಿಕೊಳ್ಳುವುದೊಂದೆ ಭಾರತಕ್ಕಿರುವ ಏಕೈಕ ಮಾರ್ಗ. ಹೀಗೆಂದು ಕಳೆದ ಜನವರಿ ಕೊನೆಯಲ್ಲಿ ಬಿಡುಗಡೆಗೊಳಿಸಿದ 2019-20ರ ಭಾರತ ಸರ್ಕಾರದ ಆರ್ಥಿಕ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಪ್ರಿಯ ಓದುಗರೆ, ಸಾವಿನ ಹಾಸಿಗೆಯಲ್ಲಿ ಮಲಗಿದ್ದ ವಾಲ್ಟೆರ್‌ನನ್ನು ಪುರೋಹಿತನೊಬ್ಬ ‘ನೀನು ಈಗ ಸೈತಾನನನ್ನು ತಿರಸ್ಕರಿಸುತ್ತೀಯಾ’ ಎಂದು ಕೇಳಿದಾಗ ಆತ ‘ಈಗ, ಇದೀಗ, ನನ್ನ ಹಿತೈಷಿಯೇ, ಇದು ಶತ್ರುಗಳನ್ನು ಮಾಡಿಕೊಳ್ಳುವ ಸಮಯವಲ್ಲ’ ಎಂದನAತೆ. ಭಾರತ ಮತ್ತು ಚೀನಾ ನಡುವಣ […]

ಉಂಡಿದ್ದನ್ನೇ ಉಗುಳುವ ಗೂಗಲ್!

-ಅವಿನಾಶ್ ಜಿ

ಉಂಡಿದ್ದನ್ನೇ ಉಗುಳುವ ಗೂಗಲ್!
-ಅವಿನಾಶ್ ಜಿ

ಗೂಗಲ್ ಗೆ ಪದಗಳ ಹಂಗಿಲ್ಲ; ನಮ್ಮ ಮೊದಲ ಪ್ರಧಾನಿ ಕಳ್ಳನೋ, ಈಗಿನ ಪ್ರಧಾನಿ ಸುಳ್ಳನೋ ಗೊತ್ತಾಗುವುದಿಲ್ಲ. ಆದರೆ ನೀವು `ನೆಹರು ಕಳ್ಳ’ ಎಂಬ ಜೋಡಿಪದವನ್ನೇ ಸಿಸ್ಟಮ್ ಗೆ ಹೆಚ್ಚು ಉಣಿಸುತ್ತಾ ಹೋದಷ್ಟೂ N-Gram Language Model ಗಳು ಅದನ್ನೇ ಸತ್ಯವೆಂದು ನಂಬಿ ನಮಗೆ ಅದೇ ಕತೆ ಹೇಳುತ್ತವೆ! ಟರ್ಕಿಯ ಹುಡುಗಿ ಸೆನೆ ಜಗಳಗಂಟಿಯಲ್ಲ. ಆದರೆ ಅವಳ ಹಠ ನೋಡಿದ್ದು ಒಂದು ವಿಚಿತ್ರ ಘಳಿಗೆಯಲ್ಲಿ. ಟ್ರೋಲಿಂಗ್ ಮತ್ತು ದ್ವೇಷಭಾಷೆಗಳ ಕುರಿತು ಯೂನಿವರ್ಸಿಟಿಯಲ್ಲಿ ಒಂದು ಪ್ರೆಸೆಂಟೇಷನ್ ಮಾಡಬೇಕಿತ್ತು. ಈ ವಿಷಯದ […]

ವಿಶ್ವ ವಿದ್ಯಮಾನ

ಪುರುಷೋತ್ತಮ ಆಲದಹಳ್ಳಿ

ವಿಶ್ವಸಂಸ್ಥೆಯ ಸುಧಾರಣೆಯೇಕೆ ತೆರೆಮರೆಗೆ ಸರಿದಿದೆ..? 2021-22ರ ಎರಡು ವರ್ಷದ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ. ಈ ಭದ್ರತಾ ಮಂಡಳಿಯಲ್ಲಿ ಐದು ಶಾಶ್ವತ ಸದಸ್ಯ ರಾಷ್ಟ್ರಗಳು ಹಾಗೂ ಹತ್ತು ತಾತ್ಕಾಲಿಕ ಸದಸ್ಯ ರಾಷ್ಟ್ರಗಳಿರುತ್ತವೆ. ಅಮೆರಿಕ, ಯುಕೆ, ಫ್ರಾನ್ಸ್, ಚೀನಾ ಹಾಗೂ ರಷ್ಯಾ ದೇಶಗಳು ಶಾಶ್ವತ ಸದಸ್ಯ ಸ್ಥಾನದೊಂದಿಗೆ ‘ವಿಟೋ’ ಅಧಿಕಾರವನ್ನು ಕೂಡಾ ಹೊಂದಿವೆ. 1945ರಲ್ಲಿ ಪ್ರಾರಂಭಗೊಂಡ ವಿಶ್ವಸಂಸ್ಥೆಯು 51 ಸದಸ್ಯ ರಾಷ್ಟ್ರಗಳ ಕಾಲದಿಂದ ಇದೀಗ 193 ಸದಸ್ಯ ರಾಷ್ಟ್ರಗಳವರೆಗೆ ಬೆಳೆದಿದೆ. ಈ […]

ಭಾರತದ ಸದ್ದಿಲ್ಲದ ಡಿಜಿಟಲ್ ಕ್ರಾಂತಿ

ವಿನಿಕಾ ಡಿ. ರಾವ್

ಭಾರತದ ಸದ್ದಿಲ್ಲದ ಡಿಜಿಟಲ್ ಕ್ರಾಂತಿ
ವಿನಿಕಾ ಡಿ. ರಾವ್

ಚೀನಾದ ಬಿರುಸಿನ ಡಿಜಿಟಲೀಕರಣವು ಜಗತ್ತನ್ನು ವ್ಯಾಪಿಸುತ್ತಿದ್ದಂತೆ, ಏಷ್ಯಾದ ಇನ್ನೊಂದು ದೈತ್ಯಶಕ್ತಿಯಾದ ಭಾರತ ತನ್ನ ಹೊಸ ಡಿಜಿಟಲ್ ಪರಿವರ್ತನೆಯನ್ನು ಪ್ರದರ್ಶಿಸುತ್ತಿದೆ. ನೀವು ಇಲ್ಲಿಯವರೆಗೆ ಕೇಳಿರದ ಬೃಹತ್ ಕ್ರಾಂತಿ ಇದಾಗಿರಬಹುದು. ಕಳೆದ ದಶಕದಲ್ಲಿ ಚೀನಾ ಕಂಡುಕೊಂಡ ಡಿಜಿಟಲ್ ಪ್ರಗತಿ, ಅಂತರ್ಜಾಲ ಪ್ರಾಬಲ್ಯ ಮತ್ತು ವಿನೂತನ ಆವಿಷ್ಕಾರಗಳಿಂದ ಜಗತ್ತು ರೂಪಾಂತರಗೊಳ್ಳುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ, ಅಂತರರಾಷ್ಟ್ರೀಯ ಮಾಧ್ಯಮಗಳ ಗಮನಕ್ಕಿನ್ನು ಬಾರದಂತೆ, ಭಾರತ ಕೂಡ ತನ್ನ ಅಂತರ್ಜಾಲ ಬಳಕೆ ವಿಸ್ತರಣೆಯ ಮೂಲಕ ಸದ್ದಿಲ್ಲದೇ ಡಿಜಿಟಲ್ ಕ್ರಾಂತಿ ಮಾಡುತ್ತಿದೆ. ಈ ದೆಸೆಯಲ್ಲಿ, ಕೆಳಗಿನ ಅಂಕಿಅಂಶಗಳು […]

ಇಂಡಿಕಾ ಎ. ಡೀಪ್ ನ್ಯಾಚರಲ್ ಹಿಸ್ಟರಿ ಆಫ್ ದಿ ಇಂಡಿಯನ್ ಸಬ್ ಕಾಂಟಿನೆಂಟ್

ಪ್ರಣಯ್ ಲಾಲ್

ಇಂಡಿಕಾ  ಎ. ಡೀಪ್ ನ್ಯಾಚರಲ್ ಹಿಸ್ಟರಿ ಆಫ್ ದಿ ಇಂಡಿಯನ್ ಸಬ್ ಕಾಂಟಿನೆಂಟ್
ಪ್ರಣಯ್ ಲಾಲ್

ಭೂಮಿಯ ಪ್ರಾಕೃತಿಕ ಇತಿಹಾಸ ಹೇಳುವಲ್ಲಿ ಪ್ರಣಯ್ ಲಾಲ್ ಕೇವಲ ಭಾರತ ಉಪಖಂಡದ ಉದಾಹರಣೆಗಳನ್ನು ಹೇಳುತ್ತಾ ಭಾರತೀಯ ಓದುಗರಿಗೆ ಹೆಚ್ಚು ಪ್ರಸ್ತುತರಾಗುತ್ತಾರೆ. ಈ ಪ್ರಾಕೃತಿಕ ಉದಾಹಣೆಗಳಲ್ಲಿ ಬಹಳಷ್ಟು ಕರ್ನಾಟಕದ ಕಲ್ಲು, ಮಣ್ಣು, ಖನಿಜ, ಬೆಟ್ಟ, ಜೀವ, ಜಂತುಗಳ ಪ್ರಸ್ತಾಪ ಬರುತ್ತದೆ. ಧಾರವಾಡದ ಕಲ್ಲು ಪದರ, ನಂದಿಬೆಟ್ಟ ಶ್ರೇಣಿ, ಲಾಲ್‌ಬಾಗ್‌ನ ಕಲ್ಲುಗುಡ್ಡ, ಚಿತ್ರದುರ್ಗದ ಕಲ್ಲುಗಳ ನಿಕ್ಷೇಪ, ಮೈಸೂರಿನ ಇಪ್ಪತ್ತು ಸೆಂಟಿಮೀಟರ್ ಉದ್ದದ ಎರೆಹುಳು ಸೇರಿದಂತೆ ಹಲವಾರು ಕನ್ನಡಿಗ ವಿಷಯವಸ್ತುಗಳ ಸಚಿತ್ರ ವಿವರಗಳಿವೆ. ಭಾರತದ ಹಲವೆಡೆ ಸರೀಸೃಪಗಳ ಪಳೆಯುಳಿಕೆ ಹಾಗೂ ಉಪಖಂಡದೆಲ್ಲೆಡೆಯ […]

ಕೆಳದಿ ನೃಪವಿಜಯಂ ಆಧಾರಿತ ಕೆಳದಿ ಅರಸರ ಯಶೋಗಾಥೆ

-ಡಾ.ಜಿ.ಕೃಷ್ಣಪ್ಪ

ರಾಣಿ ಚೆನ್ನಮ್ಮಳ ದತ್ತುಪುತ್ರ ಸೋಮಶೇಖರನ ವಂಶಸ್ಥರು ಸಾಧಾರಣ ವ್ಯಕ್ತಿಗಳಾಗಿ ಇಂದಿಗೂ ನರಗುಂದದಲ್ಲಿದ್ದಾರೆ. ಅವರ ವಂಶಸ್ಥರಾದ ಸೋಮಶೇಖರ ರಾಜ, ಶಿವರಾಜ ಅರಸರು 1927ರಲ್ಲಿ ತಮ್ಮ ಅಸಹಾಯಕ ಬದುಕು ತಿಳಿಸಿ ಮಹಿಶೂರ ಮಹಾರಾಜ ಕೃಷ್ಣರಾಜೇಂದ್ರ ಒಡೆಯರ್‌ಗೆ ಬರೆದ ಪತ್ರವನ್ನು ಮುದ್ರಿಸಿ ಲೇಖಕರು ಕೆಳದಿ ಇತಿಹಾಸದ ಕೊನೆಯ ವಂಶಸ್ಥರ ಬವಣೆ ದಾಖಲಿಸಿದ್ದಾರೆ. ಲೇಖಕ: ಜಯದೇವಪ್ಪ ಜೈನಕೇರಿ ಶಾಂತಲಾ ಪ್ರಕಾಶನ ಪುಟ:240, ಬೆಲೆ: ರೂ.200 ಪ್ರಥಮ ಮುದ್ರಣ: 2018 ಜಯದೇವಪ್ಪ ಜೈನಕೇರಿ ರಚಿಸಿರುವ ಕೆಳದಿ ಸಂಸ್ಥಾನದ ಐತಿಹಾಸಿಕ ಸಂಶೋಧನಾ ಕೃತಿ ಕೆಳದಿ ಅರಸರ […]

‘ಲಂಕೇಶ್ ಪ್ರೈವೇಟ್ ಲಿಮಿಟೆಡ್’

-ಮಹೇಶ ತಿಪ್ಪಶೆಟ್ಟಿ

‘ಲಂಕೇಶ್ ಪ್ರೈವೇಟ್ ಲಿಮಿಟೆಡ್’
-ಮಹೇಶ ತಿಪ್ಪಶೆಟ್ಟಿ

ಪುಸ್ತಕದ ಕೊನೆಗೆ ಮೋಹನರಾಂ, ‘ನಿರ್ಲಿಪ್ತವಾಗಿ ಬರೆದಿದ್ದೇನೆ. ಆದರೆ ಪೂರ್ವಗ್ರಹದಿಂದ ಮುಕ್ತ ಎಂದು ಪ್ರಮಾಣ ಮಾಡಿ ಹೇಳಲಾರೆ’ ಎನ್ನುತ್ತಾರೆ. ಈ ಪುಸ್ತಕದಲ್ಲಿ ಲಂಕೇಶರ ಸಾಹಿತ್ಯದ ಬಗ್ಗೆ ಚರ್ಚೆ ಕಡಿಮೆ. ಅವರ ವೈಯಕ್ತಿಕ ಬದುಕಿನ ಮೇಲೆ ಆಕ್ರಮಣವಾಗಿದೆ. ವರ್ತಮಾನಕ್ಕೆ ಸಮೀಪದ ವ್ಯಕ್ತಿ ಲಂಕೇಶ್. ಅವರನ್ನು ಪ್ರೀತಿಸಿದ, ದ್ವೇಷಿಸಿದ ವ್ಯಕ್ತಿಗಳು ಇನ್ನೂ ಇದ್ದಾರೆ. ಅವರು ಶ್ರೇಷ್ಠ ಗದ್ಯ ಬರಹಗಾರ, ಕೆಟ್ಟ ಪ್ರಾಧ್ಯಾಪಕ, ನಾಟಕ, ಸಿನೇಮಾ, ಪ್ರಕಾಶನ, ರೇಸ್, ಇಸ್ಪೇಟ್, ಕುಡಿತ, ರಾಜಕೀಯ, ಕೃಷಿ, ಮುಂತಾದವುಗಳಲ್ಲಿ ಕೈಯಾಡಿಸಿದ ವ್ಯವಹಾರಿಕ ಚತುರ. ಬೇಕಾದವರನ್ನು ಹೊಗಳುವ, […]

ಹೊಸಪುಸ್ತಕ

ಕೀರ್ತಿನಾಥ ಕುರ್ತಕೋಟಿ ಎಸ್.ಆರ್.ವಿಜಯಶಂಕರ ಪುಟ: 115, ಬೆಲೆ: ರೂ.50 ಪ್ರಥಮ ಮುದ್ರಣ: 2019 ಸಾಹಿತ್ಯ ಅಕಾಡೆಮಿ ಕನ್ನಡದ ಪ್ರಸಿದ್ಧ ವಿಮರ್ಶಕರಾಗಿದ್ದ ಕೀರ್ತಿನಾಥ ಕುರ್ತಕೋಟಿ ಅವರ ಸಾಹಿತ್ಯ ವಿಮರ್ಶೆಯ ಕುರಿತ ಕೃತಿಯಿದು. ಸ್ವತಃ ವಿಮರ್ಶಕರಾಗಿರುವ ಲೇಖಕ ಎಸ್.ಆರ್.ವಿಜಯಶಂಕರ, ಕುರ್ತಕೋಟಿ ಅವರು ಕನ್ನಡದ ಪ್ರಮುಖ ಸಾಹಿತಿಗಳಾದ ಬೇಂದ್ರೆ, ಕುವೆಂಪು ಮುಂತಾದವರ ಸಾಹಿತ್ಯದ ವಿಮರ್ಶೆಗಳನ್ನು ಮಾಡಿದ ಬಗೆಯನ್ನು, ಅವುಗಳ ಒಳನೋಟಗಳನ್ನು ಇಲ್ಲಿ ವಿವರಿಸಿದ್ದಾರೆ. ಅವರ ವಿಮರ್ಶೆಗಳು ಸೃಷ್ಟಿಸಿದ ವಿವಾದ, ಚರ್ಚೆಗಳ ಕುರಿತೂ ಇಲ್ಲಿ ಉಲ್ಲೇಖಗಳಿವೆ.   ಚುಚ್ಚದ ಜೇನು ಶಿವರಾಂ ಪೈಲೂರು […]

ಕೇಶಿರಾಜ ವಿರಚಿತ ಶಬ್ದಮಣಿದರ್ಪಣಂ

ಡಾ.ಅನ್ನಪೂರ್ಣ ಎನ್.ಎಸ್.

ಕೇಶಿರಾಜ ವಿರಚಿತ ಶಬ್ದಮಣಿದರ್ಪಣಂ
ಡಾ.ಅನ್ನಪೂರ್ಣ ಎನ್.ಎಸ್.

ಭಾಷೆಯ ನಿರಂತರ ಹರಿವನ್ನು ಅರಿತು ಅದಲ್ಲಿ ಮುಳುಗೆದ್ದು ಅದರ ಆಳ-ಅಂತರಾಳವನ್ನು ಬಿಚ್ಚಿಡುವುದು ವ್ಯಾಕರಣಕಾರನ ಕೆಲಸ. ಅದು ಅಷ್ಟು ಸುಲಭದ್ದಲ್ಲ. ಎಲ್ಲಾ ಭಾಷಿಕ ಜ್ಞಾನನ್ನು ಒಳಗೊಂಡಿರುವ ಕೇಶಿರಾಜನಿಂದ ರಚಿಸಲ್ಪಟ್ಟ ಶಬ್ದಮಣಿದರ್ಪಣವು ಅಂತಹ ಒಂದು ವಿದ್ವತ್ಪೂರ್ಣ ಕೃತಿ. ಬಾಷೆಯು ಬದುಕಿನ ಜೀವನಾಡಿ. ಅದು ಮಾನವನ ನಾಗರಿಕ ಬದುಕಿನ ಅವಿಭಾಜ್ಯ ಅಂಗ. ಅದರಲ್ಲಿ ನಾಡಿನ ಸಂಸ್ಕೃತಿ ಮತಿ ಎಲ್ಲವೂ ಅಡಗಿದೆ. ಹಾಗಾಗಿ ಭಾಷೆಯೊಂದರ ಹೊರತು ಭಾಷಿಕ ಸಮುದಾಯವನ್ನು ವಿವರಿಸುವುದು ಅಸಾಧ್ಯ. ಇಂತಹ ಭಾಷಿಕ ಘಟಕಗಳನ್ನು ಅದರ ಸ್ವರೂಪವನ್ನಾಧರಿಸಿ ನಿರ್ದಿಷ್ಟ ಕಾಲಘಟ್ಟದಲ್ಲಿ ಸೂತ್ರೀಕರಿಸುವ […]

ರಬ್ಬರ್ ಇಡ್ಲಿ!

-ನರೇಂದ್ರ ರೈ ದೇರ್ಲ

ರಬ್ಬರ್ ಇಡ್ಲಿ!
-ನರೇಂದ್ರ ರೈ ದೇರ್ಲ

ಇಡೀ ಕ್ಲಾಸುರೂಂಗೆ ಕಮಟು ವಾಸನೆ ಬೀರುತ್ತಿದ್ದ ಅಂಗೈ ತುಂಬುವ ರಬ್ಬರ್ ಇಡ್ಲಿಯನ್ನು ಎತ್ತಿ ಎತ್ತಿ ಶಾಂತಣ್ಣ ಕಾಗದದ ಮೇಲಿನ ಅಕ್ಷರಗಳನ್ನು ಉಜ್ಜುವಾಗ ಆನಂದ ಮೇಷ್ಟ್ರ ಕೈಗೆ ಸಿಕ್ಕಿ ಹಾಕಿಕೊಂಡ. ಸೋಂಪ ಎಷ್ಟೇ ಪ್ರಯತ್ನಿಸಿ ಹೇಳಿದ್ರು ಅಂಥ ಒಂದು ರಬ್ಬರ್ ಮರದಿಂದ ಸಿಗುತ್ತದೆ, ಅದು ಗಿಡಗಳಲ್ಲಿ ಸುರಿಯುತ್ತದೆ, ಆ ಇಡ್ಲಿ ಕರಗಿ ಮುಂದೆ ಏನೇನೋ ಆಗುತ್ತದೆ ಎಂಬುದು ಮೇಷ್ಟ್ರಿಗೂ ಅರ್ಥವಾಗಲಿಲ್ಲ! ನಮ್ಮದೇ ಮನೆ ಹಿಂದಿನ ಬೃಹತ್ ಕಾಡು ಸವರಿ ಬೋಳಾಗಿಸಿ ಅಲ್ಲೆಲ್ಲಾ ಲಕ್ಷಾಂತರ ರಬ್ಬರ್ ಗಿಡಗಳನ್ನು ಒಮ್ಮೆಲೇ ನೆಟ್ಟಾಗ […]

ನವಪೀಳಿಗೆಗೆ ನಗಣ್ಯವಾಯಿತೇ ತುಮಕೂರಿನ ಹೆಮ್ಮೆಯ ಕಲೆ?

ನಿವೇದಿತಾ ಬಿ.

ನವಪೀಳಿಗೆಗೆ ನಗಣ್ಯವಾಯಿತೇ ತುಮಕೂರಿನ ಹೆಮ್ಮೆಯ ಕಲೆ?
ನಿವೇದಿತಾ ಬಿ.

‘ಸ್ಮಾರ್ಟ್ ಸಿಟಿ’ ಆದರೆ ಸಾಲದು, ತುಮಕೂರಿನ ಯುವಜನ ಸ್ಮಾರ್ಟ್ ಆದ ಅಭಿರುಚಿ ಬೆಳೆಸಿಕೊಳ್ಳಬೇಕು! ನಾಟಕ ಆಡುವ ಸಾಮರ್ಥ್ಯ ಎಲ್ಲರಿಗೂ ಬರಲಿಕ್ಕಿಲ್ಲ, ಆದರೆ ನೋಡಲು ಅಡ್ಡಿಯೇನು? ಏನೋ ಬೇಸರ ಅಂತ ಆಗೊಮ್ಮೆ ಈಗೊಮ್ಮೆ ಸಿನೆಮಾ ಥಿಯೇಟರಿಗೆ ಹೋಗಿ ಕುಳಿತಾಗ ಆ ಜಾಹೀರಾತಿನಲ್ಲಿ ಬರುವ “ಏನಾಯಿತು ಈ ಪಟ್ಟಣಕ್ಕೆ?” ಎಂಬ ಪ್ರಶ್ನೆಯನ್ನು ನಮ್ಮ ಪಟ್ಟಣದ ಜನಕ್ಕೇ ಕೇಳುತ್ತಿದ್ದಾರೇನೋ ಎಂದೆನಿಸುತಿತ್ತು. ಆದರೆ ತಂಬಾಕಿನ ಕಾರಣಕಲ್ಲ ಎಂದಷ್ಟನ್ನೇ ಈ ಕ್ಷಣಕ್ಕೆ ಹೇಳಬಲ್ಲೆ. ಆಗೊಂದು ಕಾಲ ಇತ್ತು. ನನ್ನ ತಂದೆ ವೃತ್ತಪತ್ರಿಕೆಯನ್ನು ಓದಿ ಈ […]

ಎಮ್ಮೆಯ ನಾಡಿನ ಕೆಲವು (ಅಧಿಕ) ಪ್ರಸಂಗಗಳು

-ಪ್ರೊ.ಎಂ.ಕೃಷ್ಣೇಗೌಡ, ಮೈಸೂರು

ಎಮ್ಮೆಯ ನಾಡಿನ  ಕೆಲವು (ಅಧಿಕ) ಪ್ರಸಂಗಗಳು
-ಪ್ರೊ.ಎಂ.ಕೃಷ್ಣೇಗೌಡ, ಮೈಸೂರು

‘ಎಮ್ಮೆಗಳ ನಾಡು’ ಅಂತ ಕರೆಸಿಕೊಂಡ ನಾಡಿನಲ್ಲಿ ಎಮ್ಮೆಗಳ ಸಂಖ್ಯೆ ಕಡಿಮೆಯಾಗಿದ್ದನ್ನು ಮನಗಂಡ  ನಮ್ಮ ಮೈಸೂರಿನ ದೊರೆಗಳಾಗಿದ್ದ ಶ್ರೀ ಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸನ್ ಒಂದು ಸಾವಿರದ ಒಂಭೈನೂರ ಹದಿನೈದನೇ ಇಸವಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡಿದರು.  ಎತ್ತಣ ಮಾಮರ ಎತ್ತಣ ಕೋಗಿಲೆ? ಅಂತ ಕೇಳಬೇಡಿ! ಆದಾಗಿ ನಮ್ಮ ಮೈಸೂರು ಪ್ರಾಂತವನ್ನು ಹಿಂದಾನೊಂದು ಕಾಲದಲ್ಲಿ ‘ಮಹಿಷ ಮಂಡಲ’ ಅಂತ ಕರೆಯುತ್ತಿದ್ದರಂತೆ. ಮಹಿಷ ಮಂಡಲ ಅಂದರೆ ‘ಆಹಾ! ಎಂಥ ಚಂದವಾದ ಹೆಸರು!’ ಅಂತ ನಿಮಗನ್ನಿಸಬಹುದು. ಎಷ್ಟಾದರೂ ಅದು […]

ಪವನ್ ಕುಮಾರ್ ‘ಶಿಳ್ಳೆಗಾರ’ನ ಒಳ್ಳೆಯ ಕನಸುಗಳು

-ಶರೀಫ್ ಕಾಡುಮಠ

ಪವನ್ ಕುಮಾರ್ ‘ಶಿಳ್ಳೆಗಾರ’ನ ಒಳ್ಳೆಯ ಕನಸುಗಳು
-ಶರೀಫ್ ಕಾಡುಮಠ

ವಾಸ್ತವದಲ್ಲಿ ಫಿಲ್ಮ್ ಮೇಕರ್ಸ್ ಯುನೈಟೆಡ್ ಕ್ಲಬ್ ಮೂಲಕ ಪವನ್‌ಕುಮಾರ್ ಕೇವಲ ಕನ್ನಡ ಚಿತ್ರರಂಗವನ್ನು ಬದಲಾಯಿಸಲು ಹೊರಟಂತೆ ಕಾಣುತ್ತಿಲ್ಲ, ಹೊರತಾಗಿ ಇಡೀ ಭಾರತೀಯ ಚಿತ್ರರಂಗವನ್ನೇ ಇದು ಪ್ರಭಾವಿಸುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಕನ್ನಡ ಚಿತ್ರರಂಗ ಎನ್ನುವಾಗ ನಮ್ಮ ಮನಸ್ಸಿಗೆ ಹಲವು ನಿರ್ದೇಶಕರ ಹೆಸರು ಒಂದೇ ಉಸಿರಿನಲ್ಲಿ ಬಂದುಬಿಡಬಹುದು. ಆದರೆ ಏಕೋ ಏನೊ, ಥಟ್ಟೆಂದು ಹೇಳಲು ನೆನಪಾಗದೆ ಉಳಿಯುವ ಹೆಸರು ಪ್ರತಿಭಾವಂತ, ಸೃಜನಶೀಲ ನಿರ್ದೇಶಕ ಪವನ್‌ಕುಮಾರ್ ಅವರದು. ಪವನ್ ನಿರ್ದೇಶನದ ಚಿತ್ರಗಳು ಮೂರು ಅಷ್ಟೆ. ಆದರೆ ಆ ಮೂರು ಸಿನಿಮಾಗಳೂ […]

ಕವಿತೆ

ಮೂಡ್ನಾಕೂಡು ಚಿನ್ನಸ್ವಾಮಿ

ಕವಿತೆ
ಮೂಡ್ನಾಕೂಡು ಚಿನ್ನಸ್ವಾಮಿ

ಬುರ್ಖಾ ಧರಿಸಿ             ಬುರ್ಖಾ ಧರಿಸಿ ನಾನು ಒಂದು ಪದವಿ ಪಡೆದೆ ಕಂಪ್ಯೂಟರನ್ನೂ ಕಲಿತೆ ಇತರರನ್ನು ಸಲೀಸಾಗಿ ಮೀರಿದೆ   ಅಮ್ಮಿ ಖುಷಿಯಾದಳು ಅಬ್ಬಾನು ಬಹಳ ಖುಷಿಪಟ್ಟ ನಾನು ಏಕಾಂಗಿಯಾಗಿ ಸಿನಾಯ್ ಪರ್ವತವನ್ನು ಎತ್ತಲಿಲ್ಲವೆ?   ಜಗತ್ತನ್ನು ಪಾದದಡಿಯಲ್ಲಿ ಹೊಸಕಿಹಾಕಬೇಕೆಂಬುದು ನನ್ನ ಹೃದಯದ ಬಯಕೆಯಾಗಿತ್ತು ಪ್ರತಿ ಉಸಿರು ಹೇಳಿತು ವಿಜಯಶಾಲಿಯಾಗು ಬುರ್ಖಾದೊಳಗಿನ ಅಲೆಗ್ಸಾಂಡರ್‌ನಂತೆ   ಮನರಂಜನೆಗೆಂದು ಹೊರಹೊರಟೆ ಸಿನಿಮಾ ಮಂದಿರದ ಬಳಿ ನೈತಿಕ ದಳ ತಡೆಯಿತು ನನ್ನನ್ನು ಕಬ್ಬಿಣದ ಸರಳ […]