ಎಚ್ಚರಿಕೆ ಮತ್ತು ಭರವಸೆಯ ಬಿಂಬ!

ಎಚ್ಚರಿಕೆ ಮತ್ತು ಭರವಸೆಯ ಬಿಂಬ!

ಅವರು ಆ ಊರಿನ ಶ್ರೀಮಂತ ವೈದ್ಯ. ಸಾಕಷ್ಟು ಹೂಡಿಕೆ ಮಾಡಿ ಸುಸಜ್ಜಿತ ಆಸ್ಪತ್ರೆ ಕಟ್ಟಿದ್ದರು. ಹಣದೊಂದಿಗೆ ದುರಭ್ಯಾಸಗಳೂ ಅವರ ಜೊತೆಗೂಡಿದವು. ಕೊನೆಗೆ ಎಲ್ಲ ದಿವಾಳಿಯಾಗಿ ಪಾಪರ್ ಚೀಟಿ ಪಡೆಯಬೇಕಾದ ಹಂತ ತಲುಪಿದರು. ಆಗ ಅವರಿಗೆ ಕೋವಿಡ್ ವರವಾಗಿ ನೆರವಾಯಿತು. ಹತ್ತಿರದ ಸ್ಲಮ್ ಹುಡುಗರಿಗೆ ಪಿಪಿಇ ಕಿಟ್ ಹಾಕಿಸಿ ಚಿಕಿತ್ಸೆ ಹೆಸರಿನಲ್ಲಿ ದೋಚತೊಡಗಿದರು. ಕೋವಿಡ್ ಮೊದಲ ಅಲೆಯಲ್ಲಿ ಸಾಲಸೋಲ ತೀರಿಸಿ ಸಮೃದ್ಧಿ ಸಾಧಿಸಿದ್ದೇ ತಡ ಮತ್ತೆ ಅಂಟಿಕೊಂಡಿತು ಜೂಜಾಟದ ಚಟ. ಎರಡನೇ ಅಲೆಯ ದೆಶೆಯಿಂದ ಅವರ ಆಸ್ಪತ್ರೆ ಪುನಃ […]

ಸ್ವತಂತ್ರ ಪತ್ರಿಕೋದ್ಯಮ ಸಮಾಜದ ಹೊಣೆ

-ಮಾಲತಿ ಭಟ್

`ಸಮಾಜಮುಖಿ‘ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಹುಡುಕುವಾಗ ಭಾರತದಲ್ಲಿ ಮಾಧ್ಯಮದ ಹುಟ್ಟು, ಸ್ವಾತಂತ್ರ್ಯಪೂರ್ವದ ಮಾಧ್ಯಮಗಳು, ಸ್ವಾತಂತ್ರ್ಯಾನಂತರ ಇಲ್ಲಿ ಮಾಧ್ಯಮಗಳು ಬೆಳೆದ ಪರಿ, ನಮ್ಮ ಸಮಾಜ ಅದಕ್ಕೆ ಸ್ಪಂದಿಸಿದ ಬಗೆ ಎಲ್ಲವನ್ನೂ ಭೂತಗನ್ನಡಿ ಹಿಡಿದು ನೋಡಬೇಕಾಗುತ್ತದೆ. -ಮಾಲತಿ ಭಟ್ ಯಾವುದೇ ದೇಶ ತಾನು ಪ್ರಜಾಪ್ರಭುತ್ವವಾದಿ ಎಂದು ಹೇಳಿಕೊಳ್ಳಬೇಕಾದರೆ ಆ ದೇಶದ ರಾಜಕೀಯ ನಾಯಕರು ಪಾರದರ್ಶಕವಾಗಿ ಆಡಳಿತ ನಡೆಸಬೇಕು. ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಕಟ್ಟಕಡೆಯ ಮನುಷ್ಯನಿಗೂ ಸರ್ಕಾರದ ಸೌಲಭ್ಯಗಳು ಸಿಗಲು ಕೆಲಸಮಾಡಬೇಕು. ಅಂತಹ ಆರ್ಥಿಕ ವ್ಯವಸ್ಥೆ ರೂಪಿಸಬೇಕು. ಅದಕ್ಕಿಂತ ಮುಖ್ಯವಾಗಿ ಅಲ್ಲಿ ಸರ್ಕಾರದ […]

ಮಾಧ್ಯಮ ಸ್ವಾತಂತ್ರ್ಯ ಕಸಿದುಕೊಂಡವರಾರು?

-ಡಾ.ಜ್ಯೋತಿ

ವ್ಯವಸ್ಥೆಗೆ ಮತ್ತು ಮಾಧ್ಯಮಕ್ಕೆ ನಂಟು ಹೆಚ್ಚಾಗುತ್ತಿದ್ದು, ಮಾಧ್ಯಮದ ಪಾರದರ್ಶಕತೆ ಕಡಿಮೆಯಾಗುತ್ತಿದೆ. ಇದರ ಪರಿಣಾಮವಾಗಿ, ಸಾಹಿತಿ ಮಾರ್ಕ್ ಟ್ವೈನ್ ಹೇಳಿದಂತೆ, `ಇಂದು ಪತ್ರಿಕೆಗಳನ್ನು ಓದದವರು ಮಾಹಿತಿ ವಂಚಿತರಾದರೆ, ಓದುವವರು ತಪ್ಪು ಮಾಹಿತಿ ಮಾತ್ರ ಪಡೆಯುತ್ತಾರೆ.’ -ಡಾ.ಜ್ಯೋತಿ ಪ್ರಾಸ್ತಾವಿಕವಾಗಿ, ಅಮೆರಿಕಾದ ಮಾಜಿ ಅಧ್ಯಕ್ಷ ಮತ್ತು ತತ್ವಶಾಸ್ತ್ರಜ್ಞ ಥಾಮಸ್ ಜೆಫರ್ಸನ್ ಹಿಂದೊಮ್ಮೆ ಹೇಳಿದ ಮಾತು- `ನಾನು ಪತ್ರಿಕೆಗಳನ್ನು ಬಿಟ್ಟು ಪುಸ್ತಕಗಳನ್ನು ಓದುವುದನ್ನು ಆರಂಭಿಸಿದಂದಿನಿಂದ ಹೆಚ್ಚು ಸಂತೋಷವಾಗಿದ್ದೇನೆ’, ಬಹುಶಃ, ವರ್ತಮಾನದ ಮಾಧ್ಯಮಗಳಿಗೆ ಹೆಚ್ಚು ಅನ್ವಯಿಸಬಹುದೆಂದು ಕಾಣಿಸುತ್ತದೆ. ಯಾಕೆಂದರೆ, ಇಂದಿನ ಬಹುತೇಕ ಸುದ್ದಿ ಮಾಧ್ಯಮಗಳು […]

ಮಾಧ್ಯಮ ಎಂಬ ರಾಜನರ್ತಕಿ!

-ಎನ್.ಎಸ್.ಶಂಕರ್

ಮೋದಿ ಆಡಳಿತದ ಪ್ರಮುಖ ಲಕ್ಷಣವೆಂದರೆ ಜನತಾಂತ್ರಿಕ ಜೀವಕೋಶಗಳನ್ನು ಉಸಿರುಗಟ್ಟಿಸಿದ್ದು. ಇದಕ್ಕಿಂತಲೂ ಭಯಾನಕವಾದದ್ದೆಂದರೆ ಜನಸ್ತೋಮಕ್ಕೆ ಅದು ಆತಂಕದ ವಿಷಯವೇ ಅಲ್ಲ! ಅಂದರೆ ಜನ ಸ್ವತಃ ತಾವೇ ಪ್ರಜಾಪ್ರಭುತ್ವದ ಹೆಡೆಮುರಿ ಕಟ್ಟಿ ಮೋದಿಯ ಪದತಲಕ್ಕೆ ಸಮರ್ಪಣೆ ಮಾಡುತ್ತಿದ್ದಾರೆ! -ಎನ್.ಎಸ್.ಶಂಕರ್ ‘ದೇಶದಲ್ಲಿ ಆಕ್ಸಿಜನ್‍ಗಾಗಿ ಹಾಹಾಕಾರ ಎದ್ದಿದ್ದಾಗ ಪ್ರಧಾನಿ ಮೋದಿಯವರು ಬಂಗಾಳದಲ್ಲಿ ದೀದಿ ಓ ದೀದಿ ಅಂತ ಹಾಡುತ್ತ ಅಡ್ಡಾಡುತ್ತಿದ್ದರು. ಈಗ ಗಂಗಾ ನದಿಯಲ್ಲಿ ಹೆಣಗಳು ತೇಲಿ ಬರುತ್ತಿರುವಾಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ’ ಎಂದು ನಮ್ಮ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಹಾಕಿದ […]

ಬ್ಲ್ಯಾಕ್  ಪಂಗಸ್ ಜನ್ಮ ತಾಳಿದ್ದು ಹೇಗೆ?

ಕರೋನಾ ವೈರಸ್ ಪೀಡಿತರಿಗೆ ಬ್ಲ್ಯಾಕ್ ಪಂಗಸ್ ಬಾಧಿಸತೊಡಗಿತು. ಜೊತೆಗೆ ವೈಟ್, ಯಲ್ಲೊ ಪಂಗಸ್ ಹೆಸರುಗಳು ಸೇರಿಕೊಂಡವು. ಈ ಪಂಗಸ್ ಗಳಿಗೆ ಅತಿಯಾದ ಸ್ಟಿರೈಡ ಬಳಕೆ ಕಾರಣ ಎಂದು ವೈದ್ಯಲೋಕ ಹೇಳಿತು. ಆದರೆ ಪಂಗಸ್ ಗೆ ಇನ್ನೂ ಹಲವು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ: ಹಾಸ್ಪಿಟಲ್ ಇನ್ ಪೆಕ್ಷನ್, ಬೆಡ್‍ಗಳ ಅಶುಚಿತ್ವ, ಇಂಡಸ್ಟ್ರಿಯಲ್ ಆಕ್ಸಿಜನ್ ಸಿಲೆಂಡರ್ ಬಳಕೆ, ಆಕ್ಸಿಜನ್ ಮಾಸ್ಕ್‍ನ ಅಶುಚಿತ್ವ, ಯುಮಿಡಿಪಯರ್ ಗೆ ಡಿಸ್ಟಿಲ್ ವಾಟರ್ ಬದಲಿಗೆ ಸಾಧಾರಣ ನೀರಿನ ಬಳಕೆ, ವಾಟರ್ ಕೂಲರ ಬಳಕೆ, ಐ.ಸಿ.ಯು.ನ ಅಸ್ವಚ್ಛತೆ, […]

ಸಮಾಜದಲ್ಲಿ ಶೂನ್ಯ ಸೃಷ್ಟಿಸಿದ ಎಚ್.ಎಸ್.ದೊರೆಸ್ವಾಮಿ ಸಾವು!

-ಎ.ಟಿ.ರಾಮಸ್ವಾಮಿ

ಅವರ ಜ್ಞಾಪಕಶಕ್ತಿ, ದೀರ್ಘಾಯುಷ್ಯ ಮತ್ತು ಆರೋಗ್ಯದ ಬಗ್ಗೆ ನನಗೆ ಸದಾ ಕುತೂಹಲ ವಿತ್ತು. ಹಲವು ಬಾರಿ ಕೇಳಿದ್ದೂ ಇದೆ. ಅದಕ್ಕವರು ನಕ್ಕು ಸುಮ್ಮನಾಗು ತ್ತಿದ್ದರು. ಆದರೆ ನಾನು ಬಿಡದೆ ಒತ್ತಾಯಿಸಿದಾಗ, `ನನ್ನ ಆರೋಗ್ಯದ ಗುಟ್ಟು ಬಡತನ ಮತ್ತು ಹಸಿವು‘ ಎಂದಿದ್ದರು! -ಎ.ಟಿ.ರಾಮಸ್ವಾಮಿ ಅಪ್ಪಟ ದೇಶಪ್ರೇಮಿಯಾಗಿದ್ದ ಶತಾಯುಷಿ ಡಾ.ಹೆಚ್.ಎಸ್.ದೊರೆಸ್ವಾಮಿ ಅವರಂತಹವರು ನಾಡಿನಲ್ಲಿ ಮತ್ತೊಬ್ಬ ಹುಟ್ಟಿಬರುವುದು ಅನುಮಾನ. ಸ್ವಾರ್ಥರಹಿತ, ಸದಾ ಶೋಷಿತರ ಬಗ್ಗೆ ಮಿಡಿವಮನ, ಸಮಾಜದ ಸಮಸ್ಯೆಗಳತ್ತವೇ ಸದಾ ಚಿಂತನೆ. ಇಳಿವಯಸ್ಸಿನಲ್ಲಿಯೂ ಅಚ್ಚಳಿಯದ ಹೋರಾಟಕ್ಕೆ ಸ್ಫೂರ್ತಿ. ಸರ್ವರಿಗೂ ಅವರು ಮಾರ್ಗದರ್ಶಕರು. […]

ಗುಡುಗಿ ಹಾಡಿದ ಕವಿ ಸಿದ್ಧಲಿಂಗಯ್ಯ

-ಅಗ್ರಹಾರ ಕೃಷ್ಣಮೂರ್ತಿ

ಕೊಳೆಗೇರಿಯಲ್ಲಿ ಬೆಳೆದು ಪಕ್ಕದಲ್ಲೇ ಸ್ಮಶಾನದೊಳಗಿದ್ದ ಲೈಟ್ ಕಂಬದ ಬೆಳಕಿನಲ್ಲಿ ಯಾರದ್ದೋ ಗೋರಿಯ ಮೇಲೆ ಕುಳಿತು ತನ್ನ ಶಾಲೆಯ ಪಾಠಗಳನ್ನು ಓದಿಕೊಳ್ಳುತ್ತಿದ್ದ ಅಸ್ಪøಶ್ಯ ಜಾತಿಯ ಹುಡುಗನೊಬ್ಬ ತೀರಿಕೊಂಡು ನಗರದ ಅತ್ಯಂತ ಪ್ರತಿಷ್ಠಿತ ಸ್ಮಶಾನದೊಳಕ್ಕೆ ಪ್ರವೇಶ ಪಡೆದದ್ದು ಒಂದು ರೋಚಕ ಇತಿಹಾಸ. ಈ ಇತಿಹಾಸ ಪುರುಷ ಕವಿ ಸಿದ್ದಲಿಂಗಯ್ಯ. -ಅಗ್ರಹಾರ ಕೃಷ್ಣಮೂರ್ತಿ ಒಮ್ಮೆ ಕಾಳೇಗೌಡ ನಾಗವಾರರ ಜೊತೆ ನಾವಿಬ್ಬರು ರಿಪ್ಪನ್ ಪೇಟೆ ಬಳಿಯ ಹುಂಚದ ಜೈನ ಬಸದಿಯ ಒಳಕ್ಕೆ ಪ್ರವೇಶಿಸುವಾಗ ಸಿದ್ದಲಿಂಗಯ್ಯ ಇದ್ದಕ್ಕಿದ್ದಂತೆ ಅಲ್ಲಿದ್ದ ವ್ಯಕ್ತಿಯ ಬಳಿ, “ನೋಡಿ ನಮ್ಮಲ್ಲಿ […]

ಕೋವಿಡ್ ಮೂರನೇ ಅಲೆ ಅಪಾಯ ಎದುರಿಸಲು ಏಳು ಉಪಾಯ!

-ಡಾ.ದೇವಿಪ್ರಸಾದ್ ಶೆಟ್ಟಿ

ಲಸಿಕೆ ನೀಡುವ ಮೂಲಕ ಈ ಮಹಾಮಾರಿಯ ಭೀಕರತೆಯನ್ನು ಕೇವಲ ಸಾಮಾನ್ಯ ಶೀತವಾಗಿ ಪರಿವರ್ತಿಸುವ ಅವಕಾಶವೊಂದು ನಮ್ಮ ಬಳಿ ಇದೆ. ಇದು ಮುಂಬರುವ ಕೋವಿಡ್ ಮೂರನೇ ಅಲೆಯ ಅಪಾಯವನ್ನು ಎದುರಿಸುವ ಉಪಾಯ. -ಡಾ.ದೇವಿಪ್ರಸಾದ್ ಶೆಟ್ಟಿ ಕೋವಿಡ್ ಲಸಿಕೆ ಪಡೆದ ಕೊರೋನಾ ರೋಗಿಗಳಲ್ಲಿ ಸಾಮಾನ್ಯ ಶೀತಕ್ಕಿಂತಲೂ ತುಸು ಹೆಚ್ಚಿನ ರೋಗಲಕ್ಷಣಗಳು ಕಂಡುಬರುತ್ತವೆ ಹೊರತು ಅವರು ತೀವ್ರ ನಿಗಾ ಘಟಕ ಸೇರುವ ಪ್ರಮೇಯವಿರುವುದಿಲ್ಲ. ಹಾಗಾಗಿಯೇ ಈಗಾಗಲೇ ಕೆಲವು ರಾಷ್ಟ್ರಗಳಲ್ಲಿ ಮೂರನೆಯ ಅಲೆಯು ಎರಡನೆಯ ಅಲೆಗಿಂತಲೂ ಭೀಕರವಾಗಿದ್ದರೂ, ಲಸಿಕೆಯು ರಕ್ಷಣೆ ಒದಗಿಸುತ್ತದೆ ಎಂಬುದು […]

ಅಧಿಕಾರಿಗಳ ರಂಪಾಟ ಹಳ್ಳ ಹಿಡಿದ ಆಡಳಿತ!

-ಪದ್ಮರಾಜ ದಂಡಾವತಿ

ಸರ್ಕಾರದಲ್ಲಿ ಇದ್ದವರ ಮರ್ಜಿಯಂತೆ ನಡೆಯುವವರಿಗೆ ಎಲ್ಲಿಗೆ ಬೇಕೋ ಅಲ್ಲಿಗೆ ‘ಪೋಸ್ಟಿಂಗ್’ ಸಿಗುತ್ತದೆ. ಯಾರು ಕರ್ತವ್ಯ ನಿಷ್ಠರಾಗಿರುತ್ತಾರೋ ಅಂಥವರನ್ನು ಕೆಲಸಕ್ಕೆ ಬಾರದ ಹುದ್ದೆಗಳಲ್ಲಿ ‘ಪಾರ್ಕಿಂಗ್’ ಮಾಡಲಾಗುತ್ತದೆ! ಹೀಗಿರುವಾಗ ಉತ್ತಮ ಆಡಳಿತ ನಿರೀಕ್ಷಿಸುವುದು ಹೇಗೆ? ಯಾರಿಂದ? -ಪದ್ಮರಾಜ ದಂಡಾವತಿ ಇದು ಮೊದಲ ಸಲವಲ್ಲ. ಇವರು ಯಾವುದೋ ಕೆಳಹಂತದ ಅಧಿಕಾರಿಗಳೂ ಅಲ್ಲ. ಒಬ್ಬರು ಒಂದು ಜಿಲ್ಲೆಯ ಮುಖ್ಯಸ್ಥರು. ಇನ್ನೊಬ್ಬರು ಒಂದು ಸ್ಥಳೀಯ ಆಡಳಿತ ಸಂಸ್ಥೆಯ ಮುಖ್ಯಸ್ಥರು. ಇಬ್ಬರೂ ಭಾರತೀಯ ಆಡಳಿತ ಸೇವೆಗೆ ಸೇರಿದವರು, ಇಬ್ಬರೂ ಬೀದಿಗೆ ಬಂದು ಜಗಳವಾಡುತ್ತಾರೆ. ಪರಸ್ಪರರ ವಿರುದ್ಧ […]

ಕೋವಿದ್ ಸಂದರ್ಭದಲ್ಲಿ ಸಿಖ್ ಸಮುದಾಯದ ಸೇವಾ ಮನೋಭಾವ

ಸಿಖ್ ಧರ್ಮದಲ್ಲಿ ಜನಸೇವೆಯಲ್ಲಿ ತೊಡಗುವವರು ಸನ್ಯಾಸಿಗಳಲ್ಲ, ಮಹಾ ಸಂತರೂ ಅಲ್ಲ; ಆದರೆ ಜನಸಾಮಾನ್ಯರ ನಡುವೆ ಬದುಕುವ ಶ್ರೀಸಾಮಾನ್ಯರೇ ಈ ಸೇವೆಯಲ್ಲಿ ತೊಡಗಿರುತ್ತಾರೆ. ಗುರುವಿನ ಸೇವೆ ಸಲ್ಲಿಸುವುದಕ್ಕಾಗಿ ಸಿಖ್ ಧರ್ಮದಲ್ಲಿ ವಿಶೇಷ ಸ್ಥಾನಮಾನಗಳೇನೂ ಇರುವುದಿಲ್ಲ. ಸಾಮಾನ್ಯ ಜನರಿಗೆ, ಅನ್ಯ ಧರ್ಮದವರಿಗೂ ಸಹ ಸಲ್ಲಿಸುವ ಸೇವೆಯ ಉನ್ನತ ಹಂತವನ್ನು ಗುರುಸೇವೆಯಲ್ಲಿ ಕಾಣಲಾಗುತ್ತದೆ. -ದೀಪಂಕರ್ ಗುಪ್ತಾ ಅನುವಾದ: ನಾ.ದಿವಾಕರ ಸಿಖ್ಖರನ್ನು ನೆನೆದ ಕೂಡಲೇ ನಮಗೆ ನೆನಪಾಗುವುದು ಹಾಸ್ಯದ ಹೊನಲಿನ ಕ್ಷಣಗಳು, ಎದೆಯ ಮೇಲೆ ಮಿಂಚುವ ಶೌರ್ಯ ಪದಕಗಳು ಅಥವಾ ಒಂದು ಬಾರ್. […]

ಕೋವಿಡ್ ಎಂಬ ಕನ್ನಡಿ

ಕೋವಿಡ್ ಎಂಬ ಕ್ಷುದ್ರ ಜೀವಿ ನಮ್ಮ ನರನಾಡಿಗಳನ್ನು ಹಿಂಡಿಹಿಚುಕಿ ನಿತ್ರಾಣಗೊಳಿಸಿದೆ. ಅಂಕೆಗೆ ನಿಲುಕದ ಸಾವು ನೋವುಗಳ ಲೆಕ್ಕಾಚಾರದಲ್ಲಿ ನಮ್ಮ ಕೆಲವು ನಂಬಿಕೆ, ವಿಶ್ವಾಸ ಮತ್ತು ಇದೇ ಸತ್ಯ ಇದೇ ನಿತ್ಯ ಎಂಬ ಮಾನಸಿಕತೆಗಳನ್ನೂ ಬುಡಮೇಲಾಗಿಸಿದೆ. ಇದರ ಜೊತೆಗೆ ನಮ್ಮ ರಾಷ್ಟ್ರ, ಸರ್ಕಾರಗಳು, ಪಕ್ಷಗಳು ಮತ್ತು ಸಂಸ್ಥೆಗಳ ಹಲವು ಗಂಭೀರ ನ್ಯೂನತೆಗಳನ್ನು ಬಯಲಿಗೆಳೆದು ನಮ್ಮ ಸಮಾಜದ ಕುರೂಪಕ್ಕೆ ಕನ್ನಡಿ ಹಿಡಿದಿದೆ. ವಿಶ್ವದ ಅತ್ಯುತ್ತಮ ರಾಷ್ಟ್ರಗಳಲ್ಲಿ ನಮ್ಮದೂ ಒಂದೆಂದು ಬೀಗುತ್ತಿದ್ದ ನಮಗೆ ಇನ್ನೂ ಎಷ್ಟು ಹಿಂದುಳಿದಿದ್ದೇವೆ ಎಂದು ತೋರಿದೆ. 56 […]

ಕೋವಿಡ್ ತಂದ ಅವಕಾಶದಲ್ಲಿ ಕರ್ನಾಟಕದ ಆರೋಗ್ಯ ವ್ಯವಸ್ಥೆ ಹೇಗೆ ಸುಧಾರಿಸಬಹುದು..?

-ಮೋಹನದಾಸ್

ಕೋವಿಡ್ ಸಮಯದಲ್ಲಿ ನಮ್ಮ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಪ್ರಾಮುಖ್ಯ ಮತ್ತೊಮ್ಮೆ ನಮಗೆ ಗೋಚರವಾಗಿದೆ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಮಯದಲ್ಲಿ ನಾವು ಸರ್ಕಾರಿ ಸೌಲಭ್ಯಗಳ ಮೇಲೆಯೇ ಅವಲಂಬಿತವಾಗಬೇಕೆನ್ನುವುದು ನಮಗೆ ಮನದಟ್ಟಾಗಿದೆ. ಈ ಎರಡನೆಯ ಅಲೆಯ ಸಂದರ್ಭದಲ್ಲಿಯಂತೂ ಖಾಸಗಿ ಆಸ್ಪತ್ರೆಗಳು ಸುಲಿಗೆ ಕೇಂದ್ರಗಳಾದರೆ ಸರ್ಕಾರಿ ಆರೋಗ್ಯ ಸೇವಾ ಪದ್ಧತಿ ಬಡ ರೋಗಿಗಳಿಗೆ ಸಂಜೀವಿನಿಯಾಗಿದೆ. ಕೋವಿಡ್ ಈ ವಿಷಯದಲ್ಲಾದರೂ ನಮ್ಮ ಕಣ್ಣು ತೆರೆಸಿದೆ ಹಾಗೂ ನಮಗೆ ಕನ್ನಡಿ ಹಿಡಿದಿದೆ. –ಮೋಹನದಾಸ್ –ಪೃಥ್ವಿದತ್ತ ಚಂದ್ರಶೋಭಿ ಕೋವಿಡ್ ಎಂಬ […]

ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ ದಾರಿ ಸಾಗುವುದೆಂತೋ ನೋಡಬೇಕು!

-ರಾಜೇಂದ್ರ ಚೆನ್ನಿ

ಕೊರೋನಾ ಪಿಡುಗು ಮನುಷ್ಯ ಕುಲದ ಮೂಲಭೂತ ದ್ವಂದ್ವವನ್ನು ಮತ್ತೆ ಮುನ್ನೆಲೆಗೆ ತಂದಿದೆ. ನಾವು ಕಟ್ಟಿಕೊಳ್ಳುವ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆಗಳು ನಿಂತಿರುವುದು ಸ್ವಾರ್ಥ ಹಾಗೂ ಕ್ರೌರ್ಯದ ಮೇಲೆಯೇ ಆಗಿದ್ದರೆ ಮನುಷ್ಯರೊಳಗೆ ಇರುವ ಕರುಣೆ, ವಿಶ್ವಾಸ, ದಯೆ ನಮ್ಮ ಅಸ್ತಿತ್ವದ ಆಧಾರವಾಗುವುದು ಎಂದಿಗೂ ಸಾಧ್ಯವೇ ಇಲ್ಲವೆ? -ರಾಜೇಂದ್ರ ಚೆನ್ನಿ ಇತ್ತೀಚೆಗೆ ‘ದಿ ಪ್ರಿಂಟ್’ ಪತ್ರಿಕೆಯಲ್ಲಿ ಕೊರೋನಾ ಪಿಡುಗಿನಿಂದ ಭಾರತದಲ್ಲಿ ಸತ್ತವರ ಸಂಖ್ಯೆ ವಾಸ್ತವವಾಗಿ ಎಷ್ಟಿರಬಹುದು ಎನ್ನುವುದರ ಬಗ್ಗೆ ಯೋಗೇಂದ್ರ ಯಾದವ್ ಅವರ ಲೇಖನವನ್ನು ನೋಡಿದೆ. ವಿಷಯ ಹೊಸದೇನಲ್ಲದಿರಬಹುದು. ಕೊರೋನಾದ […]

ಬಟಾ ಬಯಲಾಯಿತು ‘ಉಕ್ಕಿನ ಮನುಷ್ಯ’ನ ನಿಜ ಬಣ್ಣ!

-ಡಿ.ಉಮಾಪತಿ

ಇತಿಹಾಸ ಕಂಡಿರುವ ಮಹಾನ್ ಆತ್ಮಪ್ರಶಂಸಕರ ಸಾಲಿಗೆ ಈಗಾಗಲೆ ಸೇರಿ ಹೋಗಿದ್ದಾರೆ ನಮ್ಮ ಪ್ರಚಂಡ ನಾಯಕಮಣಿ. ರೋಮ್ ನಗರ ಹೊತ್ತಿ ಉರಿಯುತ್ತಿದ್ದಾಗ ಪಿಟೀಲು ಬಾರಿಸುತ್ತಿದ್ದ ನೀರೋ ಕಾಲ ಕಾಲಕ್ಕೆ ಇತಿಹಾಸದ ಪುಟಗಳಿಂದ ಎದ್ದು ಬರುತ್ತಲೇ ಇರುತ್ತಾನೆ. ಇದೀಗ ಭಾರತವೇ ಅವನ ಕಾರ್ಯಕ್ಷೇತ್ರ. -ಡಿ.ಉಮಾಪತಿ ಕರೋನಾವನ್ನು ಮಣಿಸಲು ವೈಜ್ಞಾನಿಕ ಮನೋಭಾವ, ನಿರಂತರ ಎಚ್ಚರ, ಅಪಾರ ಪೂರ್ವಸಿದ್ಧತೆ ಅತ್ಯಗತ್ಯ. ಅಜ್ಞಾನ, ಅಂಧಶ್ರದ್ಧೆ, ಅಪ್ರಾಮಾಣಿಕತೆ, ನಿರ್ಲಕ್ಷ್ಯದ ಧೋರಣೆ ಅದರ ಮುಂದೆ ನಡೆಯುವುದಿಲ್ಲ. ಉಡಾಫೆಯ ಆಟ ನಡೆಯದು ಎಂಬುದು ರುಜುವಾತಾಗಿ ಹೋಗಿದೆ.  ಬಂಗಾಳದ ಅಧಿಕಾರ […]

ಪರಕ್ಕಳ ಪ್ರಭಾಕರ ಅವರ ಪ್ರಶ್ನೆಗಳು ಹುಟ್ಟುಹಾಕುವ ಕಠೋರ ಸತ್ಯಗಳು

-ಡಾ.ಪರಕ್ಕಳ ಪ್ರಭಾಕರ

“ನಾನೀಗ ಒಂದು ವರದಿಯನ್ನು ಓದುತ್ತೇನೆ” ಎಂದು ತೀರ ಸರಳವಾಗಿ ಪರಕ್ಕಳ ಪ್ರಭಾಕರ ತಮ್ಮ ವಾರದ ಪ್ರಸ್ತುತಿಯನ್ನು ಆರಂಭಿಸುತ್ತಾರೆ. ಡಾ.ಪರಕ್ಕಳ ಪ್ರಭಾಕರ ಅವರು ನಮ್ಮ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ನರ ಗಂಡ. ಮೋದಿ ಸರಕಾರದ ನಿಲುವುಗಳನ್ನು, ನಡೆಗಳನ್ನು ಹರಿತವಾಗಿ, ಖಂಡತುಂಡಾಗಿ ವಿಮರ್ಶಿಸುವ ಚಿಂತಕ. ಅವರ ಜೂನ್ ಎರಡರ ವಿಡಿಯೊ ಅಂಕಣವನ್ನು ನಾಗೇಶ ಹೆಗಡೆ ಇಲ್ಲಿ ಅನುವಾದಿಸಿ ಕೊಟ್ಟಿದ್ದಾರೆ. ಇದು ಪದಶಃ ಅನುವಾದ ಅಲ್ಲ. -ಡಾ.ಪರಕ್ಕಳ ಪ್ರಭಾಕರ “ಕೊರೊನಾ ವೈರಸ್ಸಿನಿಂದಾದ ಎಲ್ಲ ಭಾನಗಡಿಗಳನ್ನು ಪರಿಶೀಲಿಸುವ ಸ್ವತಂತ್ರ ತನಿಖಾ ಸಮಿತಿಯೊಂದು ಇನ್ನೇನು […]

ವೈದ್ಯರನ್ನು ಅಸಹಾಯಕರನ್ನಾಗಿಸಿದ ಸನ್ನಿವೇಶ

-ಡಾ.ವಿವೇಕ್ ಜಿ.

ಈ ಬಾರಿ ಸಾವಿನ ಪ್ರಮಾಣ ಮೊದಲನೆಯ ಅಲೆಗಿಂತ ಹೆಚ್ಚಾಗಿದ್ದಕ್ಕೆ ಸೋಂಕಿನ ಅಗಾಧತೆ, ಆಸ್ಪತ್ರೆಗೆ ಹೋಗಲು ತಡ ಮಾಡಿದ್ದು ಸೋಂಕಿತರು ವೈದ್ಯಕೀಯ ತಪಾಸಣೆಯನ್ನು ನಿಧಾನಿಸಿದ್ದು, ಆಸ್ಪತ್ರೆಯಲ್ಲಿ ಹಾಸಿಗೆ ದೊರೆಯದಿದ್ದುದು ಹೀಗೆ ಹಲವು ಕಾರಣಗಳಿವೆ. -ಡಾ.ವಿವೇಕ್ ಜಿ. ಭಾರತದಲ್ಲಿ 2020ರ ಪ್ರಾರಂಭದಲ್ಲಿ ಕೋವಿದ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗ ಬೇರೆ ದೇಶಗಳಲ್ಲಿ ಆಗಾಗಲೇ ಸಂಭವಿಸಿದ್ದ ಸಾವು ನೋವುಗಳನ್ನು ಕಂಡು ಎಲ್ಲರೂ ಹೆದರಿದ್ದರು. ಆರೋಗ್ಯ ಸೇವಾ ಸೌಕರ್ಯಗಳನ್ನು ಸಜ್ಜುಗೊಳಿಸಲು ಕಾರ್ಯತತ್ಪರವಾದ ಸರ್ಕಾರ ಸಾಧ್ಯವಾದಷ್ಟು ಬೇಗ ದೇಶದ ಚಟುವಟಿಕೆಗಳಿಗೆ ಬೀಗಮುದ್ರೆ ಘೋಷಿಸಿತ್ತು; ಆರೋಗ್ಯ ಸೌಕರ್ಯಗಳನ್ನು […]

ಅಭಿವೃದ್ಧಿಯ ‘ಭ್ರಮೆ’ ಬಿಡಿಸಿದ ಕೋವಿಡ್

-ಡಾ.ಕಿರಣ್ ಎಂ. ಗಾಜನೂರು

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಮ್ಮದೂ ಒಂದು ಎಂದು ಬೀಗುತ್ತಿದ್ದ ನಮಗೆ ಕೋವಿಡ್ ಕಾಯಿಲೆ ನಾವು ಒಂದು ರಾಜಕೀಯ ವ್ಯವಸ್ಥೆಯಾಗಿ ನಮ್ಮದೇ ಅಂತರಿಕ ಸಂಗತಿಗಳಾದ ಆಹಾರ/ಆರೋಗ್ಯ/ಶಿಕ್ಷಣದಂತಹ ಮೂಲ ಅಗತ್ಯಗಳ ವಿಷಯದಲ್ಲಿ ಎಷ್ಟು ಸಾವಾಲುಗಳನ್ನು ಹೊಂದಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದೆ. -ಡಾ.ಕಿರಣ್ ಎಂ. ಗಾಜನೂರು ನಾವು ‘ಅಭಿವೃದ್ಧಿ’ ಎನ್ನುವ ಪರಿಭಾಷೆಗೆ ಯಾವ ವ್ಯಾಖ್ಯಾನ ನೀಡುತ್ತೇವೆ ಎಂಬುದು ಬಹಳ ಮುಖ್ಯ. ಹಾಗೆ ನೋಡುವುದಾದರೆ ಅಭಿವೃದ್ಧಿ ಎಂದರೆ ಏನು? ಎಂಬ ಪ್ರಶ್ನೆಯನ್ನು ವ್ಯಾಖ್ಯಾನಿಸಿದ ನೂರಾರು ಚಿಂತಕರಿದ್ದಾರೆ. ಆದರೆ ಆ ಎಲ್ಲಾ ಚಿಂತಕರ ಸಾಲಿನಲ್ಲಿ ಭಾರತದವರೇ ಆದ […]

ಎಲ್ಲಾ ಕೊರೊನಾ ವೈರಸ್ಗಳಿಗೆ ಒಂದೇ ಸಾರ್ವತ್ರಿಕ ಲಸಿಕೆ…?

ನ್ಯೂಸ್‍ವೀಕ್ ನಿಯತಕಾಲಿಕ

ವಿವಿಧ ರೂಪಾಂತರಿ ವೈರಾಣುಗಳ ವಿರುದ್ಧ ಲಸಿಕೆಗಳ ಪ್ರಾಬಲ್ಯವನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ. ಆದರೆ, ದೀರ್ಘಾವಧಿಯಲ್ಲಿ ಹೊಸ ರೂಪಾಂತರಗಳಿಂದ ರಕ್ಷಣೆ ಪಡೆಯಲು ಸಾರ್ವತ್ರಿಕ ಲಸಿಕೆ ಉತ್ತಮ ಮಾರ್ಗವಾಗಲಿದೆ. ಮೂಲ: ನ್ಯೂಸ್‍ವೀಕ್ ನಿಯತಕಾಲಿಕ ಅನುವಾದ: ಎಂ.ಕೆ.ಆನಂದರಾಜೇ ಅರಸ್ ವಿವಿಧ ರೂಪಾಂತರಗಳಿಂದ ತಲೆನೋವಾಗಿ ಪರಿಣಮಿಸುತ್ತಿರುವ ನಾವೆಲ್ ಕೊರೋನಾ ವೈರಸ್‍ಗೆ ಹಾಗೂ ಕೊರೋನಾ ವೈರಸ್ ಕುಟುಂಬದ ವಿವಿಧ ವೈರಾಣುಗಳು ಹಾಗೂ ಅವುಗಳ ವಿವಿಧ ರೂಪಾಂತರಗಳೆಲ್ಲದರಿಂದ ರಕ್ಷಣೆಯನ್ನೊದಗಿಸುವ ಸಾರ್ವತ್ರಿಕ ಲಸಿಕೆ ಸಿದ್ಧಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಸಂಶೋಧಕರ ಪೈಕಿ ಯು.ಎಸ್.ಎ.ನ ನ್ಯಾಷನಲ್ […]

ಸೋಂಕು ಹರಡಿಸದ ಸಮಾಧಾನ!

ಸ್ವತಃ ಕೋವಿಡ್ ಸೊಂಕಿಗೆ ತುತ್ತಾದಾಗ ಆಗದ ಭಯ, ಆಪ್ತರ ಅಗಲಿಕೆಯ ಸುದ್ದಿ ಕೇಳಿದಾಗ ಎದೆ ನಡುಗಿಸಿತು. -ವಿದ್ಯಾಶ್ರೀ ಭಗವಂತಗೌಡ್ರ ಅಂದು ಏಪ್ರಿಲ್ 17, ಪತ್ರಿಕೋದ್ಯಮ ವಿಷಯದ ಪರೀಕ್ಷೆ ಮುಗಿಸಿಕೊಂಡು ಬಂದಿದ್ದೆ. ಇನ್ನು ಒಂದು ಪೇಪರ್ ಆದರೆ ಎಕ್ಸಾಮ್ ಮುಗಿಯಿತು ಎನ್ನುವ ಖುಷಿಯಲ್ಲಿ ಬೇಗನೆ ನಿದ್ರೆಗೆ ಜಾರಿದ್ದೆ. ಅಂದು ರಾತ್ರಿ ಪಿಜಿ ಯ ಡ್ರೈವರ್ ಅಣ್ಣನ ಕರೆ ಬಂದಾಗ ರಾತ್ರಿ 11 ಗಂಟೆ. ಕರೆ ಸ್ವೀಕರಿಸಿದಾಗ “ಕೋವಿಡ್ ಪಾಸಿಟಿವ್ ಬಂದಿದೆ ಪುಟ್ಟ, ಬೆಳಗ್ಗೆ ನಾ ಬರುವವರೆಗೂ ರೂಮಿನಿಂದ ಹೊರಬರಬೇಡ, […]

ಕೋವಿಡ್ ಸಂಕಷ್ಟದಲ್ಲಿ ಹೆಚ್ಚಾಗುತ್ತಿದೆ ಸೈಬರ್ ಭಯೋತ್ಪಾದನೆ

ಸೈಬರ್ ಸುರಕ್ಷತೆ ಮತ್ತು ಸೈಬರ್ ವಿಧಿವಿಜ್ಞಾನ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿವೆ. ಕೋವಿಡ್-19ರ ದುಸ್ತರ ಪರಿಸ್ಥಿತಿಯಲ್ಲಿ ಕೂಡಾ ವಿಶ್ವಾದಂತ್ಯ ಸುಮಾರು 50 ಲಕ್ಷ ಉದ್ಯೋಗಾವಕಾಶಗಳು, ಸೂಕ್ತ ಅಭ್ಯರ್ಥಿ ದೊರೆಯದ ಕಾರಣ ಖಾಲಿ ಉಳಿದಿವೆ. -ಡಾ.ಉದಯ ಶಂಕರ ಪುರಾಣಿಕ ಕೋವಿಡ್ ಲಸಿಕೆ ಪಡೆದಿರುವುದಾಗಿ ಹೇಳುವ ನಕಲಿ ಸರ್ಟಿಫಿಕೇಟ್‍ಗಳನ್ನು ಸೈಬರ್ ಭಯೋತ್ಪಾದಕರು ಸೃಷ್ಟಿಸಿ, ಮಾರಾಟ ಮಾಡುತ್ತಿದ್ದಾರೆ. ಉದಾಹರಣೆಗೆ, ಕೋವಿಡ್-19 ಲಸಿಕೆ ಪಡೆದಿರುವವರಿಗೆ ಜರ್ಮನಿಯಲ್ಲಿ ನೀಡಲಾಗುವ ಸರ್ಟಿಫಿಕೇಟ್‍ನಂತೆ ಇರುವ ನಕಲಿ ಸರ್ಟಿಫಿಕೇಟ್‍ಗೆ ತಲಾ 25 ಡಾಲರ್ ನಂತೆ ಮಾರಾಟ […]